bridge Archives - Good News 24x7 https://www.goodnews24x7.com/tag/bridge/ Kannada Sat, 09 Aug 2025 10:23:00 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg bridge Archives - Good News 24x7 https://www.goodnews24x7.com/tag/bridge/ 32 32 ನಾದಿನಿ ಮನೆಗೆ ಕುಂಕುಮಕ್ಕೆ ಹೋಗ್ತಿದ್ದ ದಂಪತಿಗೆ ಅಪಘಾತ : ವರಮಹಾಲಕ್ಷ್ಮಿ ಹಬ್ಬದಂದೇ ಹೋಯ್ತು ಮುತ್ತೈದೆ ಪ್ರಾಣ ! https://www.goodnews24x7.com/accident-to-couple-going-to-nadinis-house-for-saffron-five-dead-on-varamahalakshmi-festival/ Sat, 09 Aug 2025 10:22:08 +0000 https://www.goodnews24x7.com/?p=5640 ವರಮಹಾಲಕ್ಷ್ಮಿ ಹಬ್ಬದಂದು ನಾದಿನಿ ಮನೆಗೆ ಕುಂಕುಮಕ್ಕೆ ಎಂದು ಬೈಕ್​ನಲ್ಲಿ ಹೋಗುತ್ತಿದ್ದ ದಂಪತಿಗೆ ಲಾರಿಯೊಂದು ಗುದ್ದಿದೆ. ಇದರ ಪರಿಣಾಮ ಮಹಿಳೆ ಜೀವ ಕಳೆದುಕೊಂಡಿದ್ದು ಪತಿಗೆ ಸಣ್ಣಪುಟ್ಟ ಗಾಯಗಳು ಆಗಿವೆ. ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದಂದು ನಾದಿನಿ ಮನೆಗೆ ಕುಂಕುಮಕ್ಕೆ ಎಂದು ಬೈಕ್​ನಲ್ಲಿ ಹೋಗುತ್ತಿದ್ದ ದಂಪತಿಗೆ…

The post ನಾದಿನಿ ಮನೆಗೆ ಕುಂಕುಮಕ್ಕೆ ಹೋಗ್ತಿದ್ದ ದಂಪತಿಗೆ ಅಪಘಾತ : ವರಮಹಾಲಕ್ಷ್ಮಿ ಹಬ್ಬದಂದೇ ಹೋಯ್ತು ಮುತ್ತೈದೆ ಪ್ರಾಣ ! appeared first on Good News 24x7.

]]>

ವರಮಹಾಲಕ್ಷ್ಮಿ ಹಬ್ಬದಂದು ನಾದಿನಿ ಮನೆಗೆ ಕುಂಕುಮಕ್ಕೆ ಎಂದು ಬೈಕ್​ನಲ್ಲಿ ಹೋಗುತ್ತಿದ್ದ ದಂಪತಿಗೆ ಲಾರಿಯೊಂದು ಗುದ್ದಿದೆ. ಇದರ ಪರಿಣಾಮ ಮಹಿಳೆ ಜೀವ ಕಳೆದುಕೊಂಡಿದ್ದು ಪತಿಗೆ ಸಣ್ಣಪುಟ್ಟ ಗಾಯಗಳು ಆಗಿವೆ.

ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದಂದು ನಾದಿನಿ ಮನೆಗೆ ಕುಂಕುಮಕ್ಕೆ ಎಂದು ಬೈಕ್​ನಲ್ಲಿ ಹೋಗುತ್ತಿದ್ದ ದಂಪತಿಗೆ ಲಾರಿಯೊಂದು ಗುದ್ದಿದೆ. ಇದರ ಪರಿಣಾಮ ಮಹಿಳೆ ಜೀವ ಕಳೆದುಕೊಂಡಿದ್ದು ಪತಿಗೆ ಸಣ್ಣಪುಟ್ಟ ಗಾಯಗಳು ಆಗಿವೆ. ಲಗ್ಗೆರೆ ಬ್ರಿಡ್ಜ್ ಬಳಿ ಈ ಘಟನೆ ನಡೆದಿದೆ.

ಲಗ್ಗೆರೆ ನಿವಾಸಿ ಗೀತಾ (23) ಜೀವ ಕಳೆದುಕೊಂಡ ಮಹಿಳೆ. ಈಕೆಯ ಗಂಡ ಸುನೀಲ್​ಗೆ ಗಾಯಗಳು ಆಗಿವೆ. ಈ ದಂಪತಿ ಕಳೆದ 3 ತಿಂಗಳ ಹಿಂದೆ ಮದುವೆಯಾಗಿದ್ದರು. ಲಗ್ಗೆರೆ ಬಳಿ 1 ವಾರದ‌ ಹಿಂದಷ್ಟೇ ಮನೆ ಮಾಡಿಕೊಂಡಿದ್ದರು. ಕಳೆದ ಭಾನುವಾರ ಹಾಲು ಉಕ್ಕಿಸಿದ್ದ ಪತಿ-ಪತ್ನಿ ಸಂಭ್ರಮಿಸಿದ್ದರು. ವರಮಹಾಲಕ್ಷ್ಮೀ ಹಬ್ಬಕ್ಕೆ ತವರು ಮನೆಗೆಂದು ಪತ್ನಿಯನ್ನ ಚಂದ್ರ ಲೇಔಟ್​ನಲ್ಲಿರುವ ಅವರ ಅಮ್ಮನ ಮನೆಗೆ ಪತಿ ಕರೆತಂದಿದ್ದರು.

ಹಬ್ಬದ ಹಿನ್ನೆಲೆಯಲ್ಲಿ ಮಲ್ಲೇಶ್ವರಂನಲ್ಲಿರುವ ನಾದಿನಿ (ಗಂಡನ ಅಕ್ಕ) ಮನೆಗೆ ಕುಂಕುಮಕ್ಕಾಗಿ ಹೋಗುತ್ತಿದ್ದರು. ಮಲ್ಲೇಶ್ವರಂನ ನಾದಿನಿ ಮನೆಗೆ ತೆರಳುವಾಗ ಲಗ್ಗೆರೆ ಬಳಿ ಅಪಘಾತ ಸಂಭವಿಸಿದೆ. ಲಗ್ಗೆರೆ ಬ್ರಿಡ್ಜ್ ಬಳಿ ಬೈಕ್ ಮತ್ತು 12 ವ್ಹೀಲ್ ಲಾರಿ ನಡುವೆ ಅಪಘಾತವಾಗಿದೆ. ತಲೆಗೆ ಗಂಭೀರ ಗಾಯವಾದ ಕಾರಣ ಪತ್ನಿ ಸ್ಥಳದಲ್ಲೇ ಜೀವ ಬಿಟ್ಟಿದ್ದಾರೆ. ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದ್ದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

The post ನಾದಿನಿ ಮನೆಗೆ ಕುಂಕುಮಕ್ಕೆ ಹೋಗ್ತಿದ್ದ ದಂಪತಿಗೆ ಅಪಘಾತ : ವರಮಹಾಲಕ್ಷ್ಮಿ ಹಬ್ಬದಂದೇ ಹೋಯ್ತು ಮುತ್ತೈದೆ ಪ್ರಾಣ ! appeared first on Good News 24x7.

]]>
ಲಾರಿ ಚಲಿಸುತ್ತಿದ್ದಾಗಲೇ ಹಠಾತ್ತನೆ ಕುಸಿದ ಸೇತುವೆ. https://www.goodnews24x7.com/bridge-collapses-while-lorry-is-moving/ Wed, 06 Aug 2025 08:41:50 +0000 https://www.goodnews24x7.com/?p=5453 ಲಾರಿ ಚಲಿಸುತ್ತಿದ್ದಾಗಲೇ ಹಠಾತ್ತನೆ ಕುಸಿದ ಸೇತುವೆ ಮೈಸೂರು: ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಲಾರಿ (Lorry) ಚಲಿಸುತ್ತಿದ್ದಾಗಲೇ ಸೇತುವೆ ಕುಸಿದುಬಿದ್ದ ಘಟನೆ ಮೈಸೂರು (Mysuru) ಜಿಲ್ಲೆ ಸರಗೂರು ತಾಲೂಕಿನ ಇಟ್ನಾ ಸಮೀಪದ ಕಬಿನಿ ಬಲದಂಡೆ ನಾಲೆ ಬಳಿ ನಡೆದಿದೆ. https://www.youtube.com/live/aRP0ojXcaz4?si=eTNzSBsaaULCGU8u ನ್ಯಾಷನಲ್…

The post ಲಾರಿ ಚಲಿಸುತ್ತಿದ್ದಾಗಲೇ ಹಠಾತ್ತನೆ ಕುಸಿದ ಸೇತುವೆ. appeared first on Good News 24x7.

]]>

ಲಾರಿ ಚಲಿಸುತ್ತಿದ್ದಾಗಲೇ ಹಠಾತ್ತನೆ ಕುಸಿದ ಸೇತುವೆ

ಮೈಸೂರು: ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಲಾರಿ (Lorry) ಚಲಿಸುತ್ತಿದ್ದಾಗಲೇ ಸೇತುವೆ ಕುಸಿದುಬಿದ್ದ ಘಟನೆ ಮೈಸೂರು (Mysuru) ಜಿಲ್ಲೆ ಸರಗೂರು ತಾಲೂಕಿನ ಇಟ್ನಾ ಸಮೀಪದ ಕಬಿನಿ ಬಲದಂಡೆ ನಾಲೆ ಬಳಿ ನಡೆದಿದೆ.

https://www.youtube.com/live/aRP0ojXcaz4?si=eTNzSBsaaULCGU8u ನ್ಯಾಷನಲ್ ಥ್ರೋ ಬಾಲ್ ಚಾಂಪಿಯನ್ ಷಿಪ್ ಆಯ್ಕೆಯಾದ ಪೃತ್ವಿ ಪಿ ಶೆಟ್ಟಿ…

ಪುರದಕಟ್ಟೆ ಮಾರ್ಗವಾಗಿ ನಂಜನಗೂಡಿಗೆ ಭತ್ತ (Paddy) ಹೊತ್ತೊಯ್ಯುತ್ತಿದ್ದ ಲಾರಿ ಸೇತುವೆ ಮೇಲೆ ಸಾಗುತ್ತಿದ್ದಾಗಲೇ ಹಠಾತ್ ಆಗಿ ಸೇತುವೆ ಕುಸಿದಿದೆ.

ಲಾರಿಯಲ್ಲಿದ್ದ ಲೋಡರ್ಸ್ ಹಾಗೂ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಬಿನಿ ಬಲದಂಡೆ ನಿರ್ಮಾಣವಾದಾಗ ಕಟ್ಟಿದ್ದ ಸೇತುವೆ ಇದ್ದಾಗಿದ್ದು ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ಶಿಥಿಲಗೊಂಡಿತ್ತು.

‌ಲಾರಿಯನ್ನು ಮೇಲೆತ್ತುವುದರ ಜೊತೆಗೆ ಮತ್ತೊಂದು ಲಾರಿ ಮೂಲಕ ಭತ್ತದ ಮೂಟೆಗಳನ್ನ ಕೊಂಡೊಯ್ಯಲು ಸ್ಥಳೀಯರು ನೆರವು ನೀಡಿದರು.

The post ಲಾರಿ ಚಲಿಸುತ್ತಿದ್ದಾಗಲೇ ಹಠಾತ್ತನೆ ಕುಸಿದ ಸೇತುವೆ. appeared first on Good News 24x7.

]]>