central government Archives - Good News 24x7 https://www.goodnews24x7.com/tag/central-government/ Kannada Thu, 19 Jun 2025 11:27:26 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg central government Archives - Good News 24x7 https://www.goodnews24x7.com/tag/central-government/ 32 32 ಆ.15 ರಿಂದ ಫಾಸ್ಟ್ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಆರಂಭ: ಸುಗಮ ಸಂಚಾರಕ್ಕೆ ಇದು ಸಹಕಾರಿ! https://www.goodnews24x7.com/fastag-based-annual-pass-to-start-from-august-15-this-will-help-in-smooth-traffic/ Thu, 19 Jun 2025 11:26:18 +0000 https://www.goodnews24x7.com/?p=4492 ನವದೆಹಲಿ: ಕೇಂದ್ರ ಸರ್ಕಾರವು ಆಗಸ್ಟ್ 15 ರಿಂದ ಸುಗಮ ಹಾಗೂ ಸರಾಗವಾದ ಹೆದ್ದಾರಿ ಪ್ರಯಾಣಕ್ಕೆ 3,000 ರೂ ಮೌಲ್ಯದ ಫಾಸ್ಟ್ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಪರಿಚಯಿಸಲು ಸಿದ್ಧವಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬುಧವಾರ…

The post ಆ.15 ರಿಂದ ಫಾಸ್ಟ್ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಆರಂಭ: ಸುಗಮ ಸಂಚಾರಕ್ಕೆ ಇದು ಸಹಕಾರಿ! appeared first on Good News 24x7.

]]>

ನವದೆಹಲಿ: ಕೇಂದ್ರ ಸರ್ಕಾರವು ಆಗಸ್ಟ್ 15 ರಿಂದ ಸುಗಮ ಹಾಗೂ ಸರಾಗವಾದ ಹೆದ್ದಾರಿ ಪ್ರಯಾಣಕ್ಕೆ 3,000 ರೂ ಮೌಲ್ಯದ ಫಾಸ್ಟ್ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಪರಿಚಯಿಸಲು ಸಿದ್ಧವಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬುಧವಾರ ತಿಳಿಸಿದ್ದಾರೆ.
X ಹ್ಯಾಂಡಲ್ ಪೋಸ್ಟ್ ವೊಂದನ್ನು ಮಾಡಿರುವ ಅವರು, ಪಾಸ್ ಸಕ್ರಿಯಗೊಳಿಸಿದ ದಿನಾಂಕದಿಂದ ಒಂದು ವರ್ಷ ಅಥವಾ 200 ಟ್ರಿಪ್ಗಳವರೆಗೆ ಯಾವುದು ಮೊದಲು ಬರುತ್ತದೆಯೋ ಅದು ಮಾನ್ಯವಾಗಿರುವಂತೆ ಪಾಸ್ ರೂಪಿಸಲಾಗಿದೆ ಎಂದು ಗಡ್ಕರಿ ಅವರು ಹೇಳಿದ್ದಾರೆ. ಕಾರುಗಳು, ಜೀಪ್ಗಳು ಮತ್ತು ವ್ಯಾನ್ಗಳಂತಹ ವಾಣಿಜ್ಯೇತರ ಖಾಸಗಿ ವಾಹನಗಳಿಗೆ ಮಾತ್ರ ಈ ಪಾಸ್ ವಿನ್ಯಾಸಗೊಳಿಸಲಾಗಿದೆ ಎಂದು ತಮ್ಮ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಈ ಹೊಸ ಆ್ಯಪ್ ಎಲ್ಲಿ ಲಭ್ಯ?

 

 

 

 

 

ಸಕ್ರಿಯಗೊಳಿಸುವಿಕೆ ಮತ್ತು ನವೀಕರಣಕ್ಕಾಗಿ ಮೀಸಲಾದ ಲಿಂಕ್ ಶೀಘ್ರದಲ್ಲೇ ರಾಜ್ಮಾರ್ಗ್ ಯಾತ್ರಾ ಅಪ್ಲಿಕೇಶನ್ನಲ್ಲಿ ಹಾಗೂ NHAI ಮತ್ತು MoRTH ನ ಅಧಿಕೃತ ವೆಬ್ಸೈಟ್ಗಳಲ್ಲಿ ಲಭ್ಯವಿರುತ್ತದೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.  60 ಕಿ.ಮೀ ವ್ಯಾಪ್ತಿಯೊಳಗೆ ಇರುವ ಟೋಲ್ ಪ್ಲಾಜಾಗಳಿಗೆ ಸಂಬಂಧಿಸಿದ ದೀರ್ಘಕಾಲದ ಕಳವಳಗಳನ್ನು ಈ ನೀತಿ ಪರಿಹರಿಸುತ್ತದೆ ಮತ್ತು ಒಂದೇ ಕೈಗೆಟುಕುವ ವಹಿವಾಟಿನ ಮೂಲಕ ಟೋಲ್ ಪಾವತಿಗಳನ್ನು ಸರಳಗೊಳಿಸುತ್ತದೆ ಎಂದು ಕೇಂದ್ರದ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವರು ಸ್ಪಷ್ಟಪಡಿಸಿದ್ದಾರೆ.
“ಕಾಯುವ ಸಮಯ ಹಾಗೂ ದಟ್ಟಣೆಯನ್ನು ಕಡಿಮೆ ಮಾಡುವುದು ಮತ್ತು ಟೋಲ್ ಪ್ಲಾಜಾಗಳಲ್ಲಿ ವಿವಾದಗಳನ್ನು ಕಡಿಮೆ ಮಾಡುವ ಮೂಲಕ, ವಾರ್ಷಿಕ ಪಾಸ್ ಲಕ್ಷಾಂತರ ಖಾಸಗಿ ವಾಹನ ಮಾಲೀಕರಿಗೆ ವೇಗವಾದ ಮತ್ತು ಸುಗಮ ಪ್ರಯಾಣದ ಅನುಭವವನ್ನು ನೀಡುವ ಗುರಿಯನ್ನು ಹೊಂದಿದೆ ಎಂದು ಸಚಿವರು ಹೇಳಿದ್ದಾರೆ.

ಈ ಪಾಸ್ ನಿಂದ ಆಗುವ ಲಾಭವೇನು?  ವಾರ್ಷಿಕ ಪಾಸ್ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಗಮ ಮತ್ತುಸರಾಗ ಹಾಗೂ ಕಡಿಮೆ ವೆಚ್ಚದ ಪರಿಣಾಮಕಾರಿ ಪ್ರಯಾಣವನ್ನು ಸಕ್ರಿಯಗೊಳಿಸುತ್ತದೆ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.

The post ಆ.15 ರಿಂದ ಫಾಸ್ಟ್ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಆರಂಭ: ಸುಗಮ ಸಂಚಾರಕ್ಕೆ ಇದು ಸಹಕಾರಿ! appeared first on Good News 24x7.

]]>
ಮೈಸೂರು ಮೂಲದ ಪಾಕಿಸ್ತಾನದ ಮಹಿಳೆ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್ನಲ್ಲಿ ವಜಾ. https://www.goodnews24x7.com/central-government-orders-pakistani-nationals-to-return-home-mysore-based-womans-petition-dismissed-in-high-court/ Sat, 10 May 2025 09:35:37 +0000 https://www.goodnews24x7.com/?p=3797 ಮೈಸೂರು : ಪಾಕಿಸ್ತಾನದ ವ್ಯಕ್ತಿಯನ್ನು ಮದುವೆಯಾಗಿರುವ ಮೈಸೂರು ಮೂಲದ ಮಹಿಳೆ ತನ್ನ ಮೂವರು ಮಕ್ಕಳೊಂದಿಗೆ ಪಾಕಿಸ್ತಾನಕ್ಕೆ ವಾಪಸಾಗಲು ಬಲವಂತದ ಕ್ರಮ ಕೈಗೊಳ್ಳದೆ, ಭಾರತದಲ್ಲೇ ವಾಸ್ತವ್ವ ಮುಂದುವರೆಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.…

The post ಮೈಸೂರು ಮೂಲದ ಪಾಕಿಸ್ತಾನದ ಮಹಿಳೆ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್ನಲ್ಲಿ ವಜಾ. appeared first on Good News 24x7.

]]>

ಮೈಸೂರು : ಪಾಕಿಸ್ತಾನದ ವ್ಯಕ್ತಿಯನ್ನು ಮದುವೆಯಾಗಿರುವ ಮೈಸೂರು ಮೂಲದ ಮಹಿಳೆ ತನ್ನ ಮೂವರು ಮಕ್ಕಳೊಂದಿಗೆ ಪಾಕಿಸ್ತಾನಕ್ಕೆ ವಾಪಸಾಗಲು ಬಲವಂತದ ಕ್ರಮ ಕೈಗೊಳ್ಳದೆ, ಭಾರತದಲ್ಲೇ ವಾಸ್ತವ್ವ ಮುಂದುವರೆಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಹೈಕೋರ್ಟ್ ನ್ಯಾಯಮೂರ್ತಿ ಎಂ.ಜಿ. ಉಮಾ ನೇತೃತ್ವದ ರಜಾ ಕಾಲದ ನ್ಯಾಯಪೀಠ ಅರ್ಜಿ ವಜಾಗೊಳಿಸಿ ಕಾರಣವನ್ನು ಸ್ಪಷ್ಟಪಡಿಸಿದೆ ಮೈಸೂರಿನ ರಾಜೀವ್ ನಗರದ ರಂಷಾ ಜಹಾನ್, ಪಾಕಿಸ್ತಾನದ ಬಲೂಚಿಸ್ತಾನ ಮೂಲದ ಮೊಹ ಮೃದ್ ಫಾರೂಕ್ ಎಂಬಾತ ನನ್ನು ಕಳೆದ 10 ವರ್ಷದ ಹಿಂದೆ ಮದುವೆಯಾಗಿದ್ದರು. ರಂಷಾ ದಂಪತಿಗೆ ಕುಮಾರಿ ಬಿಬಿ ಯಾಮಿನಾ (8), ರಂಷಾ ಮೊಹಮ್ಮದ್ ಮುದಾಸೀರ್ (4) ಹಾಗೂ ಮೊಹಮ್ಮದ್ ಯೂಸುಫ್ (3) ಮಕ್ಕಳಿದ್ದಾರೆ. ಮೂವರು ಮಕ್ಕಳಿಗೆ ಪಾಕಿಸ್ತಾನದ ಪೌರತ್ವ ನೀಡಿದ್ದ ಅಲ್ಲಿನ ಸರ್ಕಾರ ರಂಷಾ ಜಹಾನ್ಗೆ ಪೌರತ್ವ ನೀಡಲು ನಿರಾಕರಿಸಿತ್ತು.

ಆದರೆ, ಪತಿ ಜೊತೆಗಿನ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ರಂಷಾ ಮೂಮು ಮಕ್ಕಳೊಂದಿಗೆ ಜನಮ 24, 2025 ರಂದು ಭಾರತಕ್ಕೆ ಹಿಂತಿರುಗಿ ತವರು ಮನೆ ಸೇರಿದ್ದರು.
ಆದರೆ ಕಾಶ್ಮೀರದ ಪಹಲ್ಗಾಮ್ ನಲ್ಲಿ ಪಾಕಿಸ್ತಾನದ ಭಯೋ ಜಹಾನ್ ತ್ಪಾದಕರು 26 ಪ್ರವಾಸಿಗರ ಮಾರಣ ಹೋಮ ನಡೆಸಿದ ನಂತರ ಭಾರತ ದಲ್ಲಿರುವ ಎಲ್ಲಾ ಪಾಕಿಸ್ತಾನದ ಪ್ರಜೆಗಳು ತಮ್ಮ ದೇಶಕ್ಕೆ ವಾಪಾಸಾಗಬೇಕೆಂದು ಕೇಂದ್ರ ಸರ್ಕಾರ ಕಟ್ಟಾಜ್ಞೆ ವಿಧಿಸಿತ್ತು.

ಈ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಹೋಗದಂತೆ ತಮ್ಮ ವಿರುದ್ಧ ಬಲ ವಂತದ ಕ್ರಮ ಕೈಗೊಳ್ಳದೆ ಭಾರತದಲ್ಲೇ ವಾಸ್ತವ್ಯ ಮುಂದುವರೆಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ರಂಷಾ ಜಹಾನ್ ಮತ್ತು ಮಕ್ಕಳು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಆಕ್ಷೇಪಣೆ ಸಲ್ಲಿಸಿದ ಕೇಂದ್ರ ಸರ್ಕಾರದ ಪರ ವಕೀಲ ಡಿಎಸ್ ಜಿ ಶಾಂತಿ ಭೂಷಣ್, ರಂಷಾ ಅವರ ಅರ್ಜಿಗೆ ಮಾನ್ಯತೆ ನೀಡದಂತೆ ಮತ್ತು ಕೇಂದ್ರ ಸರ್ಕಾರದ ತೀರ್ಮಾನದ ಮಹತ್ವವನ್ನು ವಿವರಿಸಿದರು.

ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯ ಮೂರ್ತಿ ಎಂ.ಜಿ.ಉಮಾ, ರಂಷಾ ಮತ್ತು ಮೂವರು ಮಕ್ಕಳ ಅರ್ಜಿಯನ್ನು ವಜಾ ಗೊಳಿಸಿದರು. ಪಾಕಿಸ್ತಾನದ ಪ್ರಜೆಗಳ ವೀಸಾ ರದ್ದತಿ ಮಾಡಿ ಅವರ ದೇಶಕ್ಕೆ ಹೋಗುವಂತೆ ಏಪ್ರಿಲ್ 25 ರಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ ಭಾರತ ಒಕ್ಕೂಟವು ಭದ್ರತೆಯ ಕುರಿತಾದ ಸಂಪುಟ ಸಮಿತಿಯ ಮೂಲಕ ಭಾರತದ ಪ್ರಜೆಗಳ ಹಿತಾಸಕ್ತಿ ಕಾಪಾಡಲು ಪ್ರಜ್ಞಾಪೂರ್ವಕ ವಾದ ದಿಟ್ಟ ಕ್ರಮ ಕೈಗೊಂಡಿದೆ. ಈ ವಿಚಾರ ದಲ್ಲಿ ನ್ಯಾಯಾಲಯ ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಅಲ್ಲದೆ ಪಾಕಿಸ್ತಾನಕ್ಕೆ ಹೋಗದೆ ಭಾರತ ದಲ್ಲೇ ಇರಲು ನಿಮ್ಮ ಪರವಾಗಿ ಅನುಕೂಲ ಕರವಾದ ಆದೇಶ ನೀಡಲು ಯಾವುದೇ ಕಾರಣ ಸಿಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿ, ರಂಷಾ ಮತ್ತು ಮಕ್ಕಳ ಅರ್ಜಿಯನ್ನು ನ್ಯಾಯ ಮೂರ್ತಿ ಉಮಾ ವಜಾ ಮಾಡಿದ್ದಾರೆ.

The post ಮೈಸೂರು ಮೂಲದ ಪಾಕಿಸ್ತಾನದ ಮಹಿಳೆ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್ನಲ್ಲಿ ವಜಾ. appeared first on Good News 24x7.

]]>
ರಾಜ್ಯದಲ್ಲಿರುವ ಪಾಕಿಸ್ತಾನಿಗಳನ್ನು ಹುಡುಕಿ ಶೀಘ್ರದಲ್ಲೇ ಗೇಟ್ ಪಾಸ್ : CM ಸಿದ್ದು https://www.goodnews24x7.com/%e0%b2%95%e0%b2%b0%e0%b3%8d%e0%b2%a8%e0%b2%be%e0%b2%9f%e0%b2%95-%e0%b2%b0%e0%b2%be%e0%b2%9c%e0%b3%8d%e0%b2%af%e0%b2%a6%e0%b2%b2%e0%b3%8d%e0%b2%b2%e0%b2%bf%e0%b2%b0%e0%b3%81%e0%b2%b5-%e0%b2%aa%e0%b2%be/ Sat, 26 Apr 2025 11:23:43 +0000 https://www.goodnews24x7.com/?p=3423 ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ಸೂಚನೆಯಂತೆ, ಕರ್ನಾಟಕ ರಾಜ್ಯದಲ್ಲಿರಬಹುದಾದ ಪಾಕಿಸ್ತಾನಿ ಪ್ರಜೆಗಳ ಬಗ್ಗೆ ಮಾಹಿತಿ ಕಲೆಹಾಕಿ, ಅವರನ್ನು ವಾಪಸ್ಸು ಕಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ರಾಜ್ಯದ ವಿವಿಧ ನಗರಗಳಲ್ಲಿ ಪಾಕಿಸ್ತಾನಿಗಳ ಸಂಖ್ಯೆ ಬಗ್ಗೆ ಹಾಗೂ…

The post ರಾಜ್ಯದಲ್ಲಿರುವ ಪಾಕಿಸ್ತಾನಿಗಳನ್ನು ಹುಡುಕಿ ಶೀಘ್ರದಲ್ಲೇ ಗೇಟ್ ಪಾಸ್ : CM ಸಿದ್ದು appeared first on Good News 24x7.

]]>

ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ಸೂಚನೆಯಂತೆ, ಕರ್ನಾಟಕ ರಾಜ್ಯದಲ್ಲಿರಬಹುದಾದ ಪಾಕಿಸ್ತಾನಿ ಪ್ರಜೆಗಳ ಬಗ್ಗೆ ಮಾಹಿತಿ ಕಲೆಹಾಕಿ, ಅವರನ್ನು ವಾಪಸ್ಸು ಕಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ರಾಜ್ಯದ ವಿವಿಧ ನಗರಗಳಲ್ಲಿ ಪಾಕಿಸ್ತಾನಿಗಳ ಸಂಖ್ಯೆ ಬಗ್ಗೆ ಹಾಗೂ ಬೆಂಗಳೂರಿನಲ್ಲಿ ಪಾಕಿಸ್ತಾನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ಬಗ್ಗೆ ಮಾಹಿತಿ ಪಡೆಯಲಾಗವುದು ಎಂದರು.ಕಾಶ್ಮೀರದಲ್ಲಿ ಭದ್ರತೆ ಹೆಚ್ಚಿಸಬೇಕಿತ್ತು.ಕಾಶ್ಮೀರದ ಉಗ್ರರ ದಾಳಿ ಘಟನೆಯಲ್ಲಿ ಭದ್ರತಾ ವೈಫಲ್ಯವನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಸ್ಥಳಕ್ಕೆ ಹೆಚ್ಚಿನ ಭದ್ರತೆಯನ್ನು ಒದಗಿಸಬೇಕಿತ್ತು.ಹಿಂದೆ ಪುಲ್ವಾಮಾದಲ್ಲಿಯೂ 40 ಜನ ಯೋಧರು ಪ್ರಾಣ ಕಳೆದುಕೊಂಡಿದ್ದರು. ಈ ಘಟನೆಯಲ್ಲಿ ಭದ್ರತಾ ವೈಫಲ್ಯವಾಗಿದೆ. ಕೇಂದ್ರ ಸರ್ಕಾರದವರನ್ನು ನಂಬಿ ಪ್ರವಾಸಿಗರು ಹೋಗಿದ್ದರು ಹಾಗೂ ಈಗ ಯಾವುದೇ ಕ್ರಮಗಳನ್ನು ಕೇಂದ್ರ ಕೈಗೊಂಡರೂ, ಪ್ರಾಣ ಕಳೆದುಕೊಂಡ 26 ಜನ ಮತ್ತೆ ಬದುಕಿ ಬರಲು ಸಾಧ್ಯವೇ ? ಕಾಶ್ಮೀರದಲ್ಲಿ ಸಿಲುಕಿದ್ದ ಕನ್ನಡಿಗರ ರಕ್ಷಣೆಗೆ ಸಚಿವ ಸಂತೋಷ್ ಲಾಡ್ ಅವರನ್ನು ನಿಯೋಜಿಸಿದ್ದು, ಅವರು ಎಲ್ಲ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತಂದಿದ್ದಾರೆ ಎಂದರು.

ನಾವು ಯುದ್ಧದ ಪರ ಇಲ್ಲ….ಉಗ್ರರ ದಾಳಿಗೆ ಸಂಬಂಧಿಸಿದಂತೆ, ಪಾಕಿಸ್ತಾನದ ಮೇಲೆ ಯುದ್ಧ ಸಾರುವ ಅನಿವಾರ್ಯತೆ ಇದೆಯೇ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿ, ಪಾಕಿಸ್ತಾನದ ಮೇಲೆ ಯುದ್ಧ ಸಾರುವ ಅಗತ್ಯವಿಲ್ಲ.ಕಾಶ್ಮೀರದ ಪ್ರದೇಶದಲ್ಲಿ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಲು ಕ್ರಮ ಕೈಗೊಳ್ಳಬೇಕು. ನಾವು ಯುದ್ಧದ ಪರ ಇಲ್ಲ. ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಕೇಂದ್ರಸರ್ಕಾರ ಭದ್ರತೆಯನ್ನು ಹೆಚ್ಚಿಸಬೇಕು ಎಂದರು.

ಪ್ರಧಾನಿಯವರು ಜನರಿಗೆ ಟೋಪಿ ಹಾಕುವ ಕೆಲಸ ಮಾಡುತ್ತಿದ್ದಾರೆ….ಕಾಶ್ಮೀರದ ಉಗ್ರರ ದಾಳಿಗೆ ಸಂಭಂಧಿಸಿದಂತೆ ಕರೆಯಲಾಗಿದ್ದ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿಯವರು ಭಾಗವಹಿಸದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಇದು ಮಹತ್ವಯುತ ಸಭೆಯಾಗಿದ್ದು, ಪ್ರಧಾನಿಯವರು ಈ ಸಭೆಯಲ್ಲಿ ಹಾಜರಿರಬೇಕಿತ್ತು. ಆದರೆ ಅವರಿಗೆ ಈ ಸಭೆಗಿಂತ ಬಿಹಾರದ ಚುನಾವಣಾ ಪ್ರಚಾರವೇ ಮುಖ್ಯವೆಂದು ಕಾಣುತ್ತದೆ. ಪ್ರಧಾನಿಯವರು ಜನರಿಗೆ ಟೋಪಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದರು.

 

The post ರಾಜ್ಯದಲ್ಲಿರುವ ಪಾಕಿಸ್ತಾನಿಗಳನ್ನು ಹುಡುಕಿ ಶೀಘ್ರದಲ್ಲೇ ಗೇಟ್ ಪಾಸ್ : CM ಸಿದ್ದು appeared first on Good News 24x7.

]]>
ಚಾಮರಾಜನಗರ ಜಿಲ್ಲಾ ಕನಕ ಸಮುದಾಯ ಭವನಕ್ಕೆ 2 ಕೋಟಿ ರೂ ಅನುದಾನ: ಸಿ.ಎಂ ಸಿದ್ದರಾಮಯ್ಯ ಘೋಷಣೆ. https://www.goodnews24x7.com/2-crore-grant-for-chamarajanagar-district-kanaka-samudra-bhavan-cm-siddaramaiahs-announcement/ Fri, 25 Apr 2025 11:24:32 +0000 https://www.goodnews24x7.com/?p=3414 ಚಾಮರಾಜನಗರ : ಎಲ್ಲಾ ಜಾತಿ ಮತ್ತು ಎಲ್ಲಾ ಧರ್ಮದ ಬಡವರಿಗೆ ನೆರವಾಗುವ ರೀತಿಯಲ್ಲಿ ಹಾಸ್ಟೆಲ್ ಮತ್ತು ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿ. ಇದರಿಂದ ಅಂಬೇಡ್ಕರ್ ಅವರ ಸಮಾನತೆಯ ಅವಕಾಶ ಈಡೇರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು. ಜಿಲ್ಲಾ ಕುರುಬರ ಸಂಘ…

The post ಚಾಮರಾಜನಗರ ಜಿಲ್ಲಾ ಕನಕ ಸಮುದಾಯ ಭವನಕ್ಕೆ 2 ಕೋಟಿ ರೂ ಅನುದಾನ: ಸಿ.ಎಂ ಸಿದ್ದರಾಮಯ್ಯ ಘೋಷಣೆ. appeared first on Good News 24x7.

]]>

ಚಾಮರಾಜನಗರ : ಎಲ್ಲಾ ಜಾತಿ ಮತ್ತು ಎಲ್ಲಾ ಧರ್ಮದ ಬಡವರಿಗೆ ನೆರವಾಗುವ ರೀತಿಯಲ್ಲಿ ಹಾಸ್ಟೆಲ್ ಮತ್ತು ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿ. ಇದರಿಂದ ಅಂಬೇಡ್ಕರ್ ಅವರ ಸಮಾನತೆಯ ಅವಕಾಶ ಈಡೇರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.

ಜಿಲ್ಲಾ ಕುರುಬರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಕನಕ ಸಮುದಾಯ ಭವನಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಈಗಾಗಲೇ 2 ಕೋಟಿ ರೂಪಾಯಿಯಲ್ಲಿ 50 ಲಕ್ಷ ರೂಪಾಯಿ ಬಿಡುಗಡೆ ಆಗಿದೆ. ಹಲವರು ದೇಣಿಗೆ ಕೂಡ ಕೊಟ್ಟಿದ್ದಾರೆ. ಇವರೆಲ್ಲರಿಗೂ ಒಳ್ಳೆಯದಾಗಲಿ, ಸಮುದಾಯ ಭವನ ಕಟ್ಟಿ. ಆದರೆ, ಇದಕ್ಕಿಂತ ಹೆಚ್ಚಾಗಿ ಹಾಸ್ಟೆಲ್ ಮತ್ತು ಶಿಕ್ಷಣ ಸಂಸ್ಥೆ ನಿರ್ಮಿಸಿ, ಜಿಲ್ಲೆಯ ಎಲ್ಲಾ ಹಿಂದುಳಿದ ಸಮುದಾಯಗಳ ಬಡ ಮಕ್ಕಳಿಗೆ ಶೈಕ್ಷಣಿಕ ನೆರವು ದೊರಕುವಂತೆ ಮಾಡಿ ಎಂದು ಕರೆ ನೀಡಿದರು.

ಚಾಮರಾಜನಗರ ಜಿಲ್ಲೆ ಅತ್ಯಂತ ಹಿಂದುಳಿದಿರುವ ಜಿಲ್ಲೆ. ಇಲ್ಲಿ ಶಿಕ್ಷಣ ಹೆಚ್ಚೆಚ್ಚು ಸಿಗಬೇಕಿದೆ. ಶಿಕ್ಷಣ ಕಲಿಯಬೇಕಿದ್ದರೆ ಹಾಸ್ಟೆಲ್ ಗಳ ಅಗತ್ಯವೂ ಇದೆ. ನಮ್ಮ ಸರ್ಕಾರ ಎಲ್ಲಾ ಜಾತಿಯ ಬಡವರಿಗೂ ಅನುಕೂಲ ಆಗುವ ಯೋಜನೆಗಳನ್ನು ಜಾರಿಗೆ ತಂದಿದೆ. ಶಕ್ತಿ ಯೋಜನೆ ಸೇರಿ ನಮ್ಮ ಐದೂ ಗ್ಯಾರಂಟಿಗಳು ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡ ಮಹಿಳೆಯರಿಗೂ ಅನುಕೂಲ ಆಗುತ್ತಿದೆ. ಕೆಲಸಕ್ಕೆ ಹೋಗುವ ಬಡ ಮತ್ತು ಮಧ್ಯಮ ವರ್ಗದ ಹೆಣ್ಣು ಮಕ್ಕಳಿಗೆ ಇದರಿಂದ ಹೆಚ್ಚು ಸಮಾಧಾನ ಆಗಿದೆ. ವಿದ್ಯಾರ್ಥಿನಿಯರಿಗೂ ಸಮಾಧಾನ ಆಗಿದೆ. ಹೀಗೆ ಎಲ್ಲಾ ಜಾತಿಯ ಬಡವರು, ಮಧ್ಯಮ ವರ್ಗದವರಿಗೆ ನೆರವಾಗುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.

“ಸಾಮಾಜಿಕ ಸಮೀಕ್ಷೆ:
ಸಂವಿಧಾನ ಬಂದು 75 ವರ್ಷ ಆದರೂ ಸಾಮಾಜಿಕ ನ್ಯಾಯ ಈಡೇರಿಲ್ಲ. ಅವಕಾಶ ವಂಚಿತ ಸಮುದಾಯಗಳ ಆರ್ಥಿಕ, ಸಾಮಾಜಿಕ ಸ್ಥಿತಿ ಗತಿ ಅರಿಯಲು ಸಮೀಕ್ಷೆ ನಡೆಸಿದ್ದೇವೆ. 2015 ರಲ್ಲಿ ನಡೆಸಿದ ಸಮೀಕ್ಷೆ ಬಳಿಕ ಬಂದ ಸಿಎಂ ಗಳು ಸ್ವೀಕರಿಸಿಲ್ಲ. ನಾನು ಸ್ವೀಕರಿಸಿ ಕ್ಯಾಬಿನೆಟ್ ಮುಂದೆ ಇಟ್ಟಿದ್ದೀನಿ. ಇದು ಯಾರ ವಿರುದ್ಧವೂ ಇರುವ ಸಮೀಕ್ಷೆ ಅಲ್ಲ. ಎಲ್ಲರ ಸ್ಥಿತಿ ಗತಿ ತಿಳಿಯುವ ಸಮೀಕ್ಷೆ ಮಾತ್ರ ಆಗಿದೆ ಎಂದರು.

ಬಿಜೆಪಿಯ ರಾಮಾ ಜೋಯಿಸ್ ಅವರು ಮೀಸಲಾತಿ ವಿರೋಧಿಸಿ ಕೋರ್ಟ್ ಗೆ ಹೋಗಿದ್ದರು. ನಿಮಗೆ ಸೈದ್ಧಾಂತಿಕವಾಗಿ ಸ್ಪಷ್ಟ ತಿಳಿವಳಿಕೆ ಇರಬೇಕು.
ನೀವು ನನಗೂ ಚಪ್ಪಾಳೆ ತಟ್ಟೋದು, ಸಾಮಾಜಿಕ ನ್ಯಾಯದ ವಿರೋಧಿ ಆಗಿರುವ ಬಿಜೆಪಿಯವರ ಮಾತಿಗೂ ಚಪ್ಪಾಳೆ ತಟ್ಟೋದನ್ನು ನಿಲ್ಲಿಸಿ. ನಮ್ಮ ಪರವಾಗಿ ಇರುವವರು ಯಾರು ಎಂದು ತಿಳಿದು ಆಶೀರ್ವಾದ ಮಾಡಿ ಎಂದು ತಿಳಿಸಿದರು.

The post ಚಾಮರಾಜನಗರ ಜಿಲ್ಲಾ ಕನಕ ಸಮುದಾಯ ಭವನಕ್ಕೆ 2 ಕೋಟಿ ರೂ ಅನುದಾನ: ಸಿ.ಎಂ ಸಿದ್ದರಾಮಯ್ಯ ಘೋಷಣೆ. appeared first on Good News 24x7.

]]>
‘ಹಿಂದೂ ಹಬ್ಬಗಳಿಗೆ ಆಪ್ಷನಲ್ ರಜೆ, ಅಂಬೇಡ್ಕರ್ ಜಯಂತಿಗೆ ಮಾತ್ರ ಕಡ್ಡಾಯ ರಜೆ,ಯಾಕೆ?’- ಅನುರಾಧಾ ತಿವಾರಿ ಪ್ರಶ್ನೆ? https://www.goodnews24x7.com/%e0%b2%b9%e0%b2%bf%e0%b2%82%e0%b2%a6%e0%b3%82-%e0%b2%b9%e0%b2%ac%e0%b3%8d%e0%b2%ac%e0%b2%97%e0%b2%b3%e0%b2%bf%e0%b2%97%e0%b3%86-%e0%b2%86%e0%b2%aa%e0%b3%8d%e0%b2%b7%e0%b2%a8%e0%b2%b2%e0%b3%8d/ Mon, 14 Apr 2025 11:46:47 +0000 https://www.goodnews24x7.com/?p=3266 ಬೆಂಗಳೂರು: ಶಿಕ್ಷಣ ಹಾಗೂ ಉದ್ಯೋಗಗಳಲ್ಲಿ ನೀಡಲಾಗಿರುವ ಮೀಸಲಾತಿಗಳು, ದಲಿತರು ಹಾಗೂ ಹಿಂದುಳಿದ ಜಾತಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಿರುವ ಸೌಲಭ್ಯಗಳ ವಿರುದ್ಧ ಟ್ವಿಟರ್ ನಲ್ಲಿ ಆಗಾಗ್ಗೆ ಕಿಡಿಕಾರುವ ಬೆಂಗಳೂರಿನ ಖಾಸಗಿ ಕಂಪನಿಯ ಮಾಜಿ ಉದ್ಯೋಗಿ ಅನುರಾಧಾ ತಿವಾರಿಯವರು ಮತ್ತೊಂದು ವಿವಾದಾತ್ಮಕ…

The post ‘ಹಿಂದೂ ಹಬ್ಬಗಳಿಗೆ ಆಪ್ಷನಲ್ ರಜೆ, ಅಂಬೇಡ್ಕರ್ ಜಯಂತಿಗೆ ಮಾತ್ರ ಕಡ್ಡಾಯ ರಜೆ,ಯಾಕೆ?’- ಅನುರಾಧಾ ತಿವಾರಿ ಪ್ರಶ್ನೆ? appeared first on Good News 24x7.

]]>

ಬೆಂಗಳೂರು: ಶಿಕ್ಷಣ ಹಾಗೂ ಉದ್ಯೋಗಗಳಲ್ಲಿ ನೀಡಲಾಗಿರುವ ಮೀಸಲಾತಿಗಳು, ದಲಿತರು ಹಾಗೂ ಹಿಂದುಳಿದ ಜಾತಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಿರುವ ಸೌಲಭ್ಯಗಳ ವಿರುದ್ಧ ಟ್ವಿಟರ್ ನಲ್ಲಿ ಆಗಾಗ್ಗೆ ಕಿಡಿಕಾರುವ ಬೆಂಗಳೂರಿನ ಖಾಸಗಿ ಕಂಪನಿಯ ಮಾಜಿ ಉದ್ಯೋಗಿ ಅನುರಾಧಾ ತಿವಾರಿಯವರು ಮತ್ತೊಂದು ವಿವಾದಾತ್ಮಕ ಪೋಸ್ಟ್ ಹಾಕಿದ್ದಾರೆ.ಇತ್ತೀಚೆಗೆ ಕೇಂದ್ರ ಸರ್ಕಾರ ಅಂಬೇಡ್ಕರ್ ಜನ್ಮದಿನವನ್ನು ಕಡ್ಡಾಯ ಸಾರ್ವತ್ರಿಕ ರಜೆಯೆಂದು ಘೋಷಣೆ ಮಾಡಿರುವುದನ್ನು ಪ್ರಶ್ನೆ ಮಾಡಿರುವ ಅವರು, ಶ್ರೀರಾಮ, ಕೃಷ್ಣ, ಹನುಮ ಹುಟ್ಟಿದ ದಿನಗಳಿಗೆ ಕಡ್ಡಾಯ ರಜೆಯಿಲ್ಲ. ಆದರೆ, ವೋಟ್ ಬ್ಯಾಂಕ್ ಜನನಾಯಕನ ಹುಟ್ಟುಹಬ್ಬಕ್ಕೆ ಮಾತ್ರ ಸಾರ್ವತ್ರಿಕ ಹಾಗೂ ಕಡ್ಡಾಯ ರಜೆ ಘೋಷಿಸಲಾಗಿದೆ ಎಂದು ಆಕ್ಷೇಪಿಸಿದ್ದಾರೆ.


ಕೇಂದ್ರ ಸರ್ಕಾರದ ಆದೇಶವೇನು?
ಮಾ. 28ರಂದು ಆದೇಶ ಹೊರಡಿಸಿದ್ದ ಕೇಂದ್ರ ಸರ್ಕಾರ, ಪ್ರತಿ ವರ್ಷ ಏ. 14ರಂದು ಸ್ಮರಿಸುವ ಅಂಬೇಡ್ಕರ್ ಜನ್ಮದಿನವನ್ನು ಸಾರ್ವತ್ರಿಕ ರಜೆಯನ್ನಾಗಿ ಘೋಷಿಸಿತ್ತು. ಅಂದರೆ, ಅದುವರೆಗೆ ಅದು ಸಾರ್ವತ್ರಿಕ ರಜೆಯಾಗಿರಲಿಲ್ಲ. ಅಂದರೆ, ಸರ್ಕಾರಿ ಕಚೇರಿಗಳಷ್ಟೇ ರಜೆ ಮೀಸಲಾಗಿರುತ್ತಿತ್ತು. ಇದೀಗ ಕೇಂದ್ರ ಸರ್ಕಾರದ ಆದೇಶದ ತರುವಾಯ ಅಂಬೇಡ್ಕರ್ ಜಯಂತಿಯನ್ನು ಖಾಸಗಿ ಕಂಪನಿಗಳಲ್ಲೂ ಆಚರಿಸಿ ಅಂದು ಕಡ್ಡಾಯ ರಜೆ ಘೋಷಿಸಬೇಕಿದೆ. ಈ ಆದೇಶದ ವಿರುದ್ಧ ಅನುರಾಧಾ ತಿವಾರಿ ಕಿಡಿಕಾರಿದ್ದಾರೆ. “ರಾಮನವಮಿಯಂದು ಸಾರ್ವತ್ರಿಕ ರಜೆಯಿಲ್ಲ. ಹೋಳಿಗೆ ಸಾರ್ವತ್ರಿಕ ರಜೆಯಿಲ್ಲ. ಜನ್ಮಾಷ್ಟಮಿಯಂದು ಸಾರ್ವತ್ರಿಕ ರಜೆಯಿಲ್ಲ, ಮಹಾ ಶಿವರಾತ್ರಿಗೆ ಸಾರ್ವತ್ರಿಕ ರಜೆಯಿಲ್ಲ. ಆದರೆ, ಅಂಬೇಡ್ಕರ್ ಜಯಂತಿಗೆ ಮಾತ್ರ ಸಾರ್ವತ್ರಿಕ ರಜೆ ನೀಡಲಾಗಿದೆ. ನೀವು ಹಿಂದೂಗಳಾಗಿದ್ದರೆ ನಿಮ್ಮ ಬಹುತೇಕ ಹಬ್ಬಗಳಿಗೆ ಸಾರ್ವತ್ರಿಕ ರಜೆಯಿರುವುದಿಲ್ಲ. ಆದರೆ, ನೀವು ವೋಟ್ ಬ್ಯಾಂಕ್ ಆಗಿದ್ದರೆ ನಿಮ್ಮ ಜನನಾಯಕನ ಜನ್ಮದಿನವನ್ನು ಸಾರ್ವತ್ರಿಕ ಕಡ್ಡಾಯ ರಜೆ ಎಂದು ಘೋಷಿಸಲಾಗುತ್ತದೆ‘’ ಎಂದು ಹೇಳಿದ್ದಾರೆ. ಇದಕ್ಕೆ ಹಲವಾರು ಮಂದಿ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ತಿವಾರಿಯವರ ಪೋಸ್ಟ್ ಗೆ ಕೆಲವರು ಬೆಂಬಲ ಸೂಚಿಸಿದ್ದಾರೆ. ಭಾರತೀಯ್ ನಿವೇಶ್ ಎಂಬ ಟ್ವಿಟರ್ ಖಾತೆಯಿಂದ ಬಂದಿರುವ ಟ್ವೀಟ್ ನಲ್ಲಿ, “ಈ ಭೂಮಿಯಲ್ಲಿ ಇರುವ ಯಾರಿಗೂ ಅಂಬೇಡ್ಕರ್ ಜಯಂತಿ, ಗಾಂಧಿ ಜಯಂತಿ ಬೇಕಿಲ್ಲ. ನಮಗೆ ಬೇಕಿರುವುದು ನಮ್ಮ ಹಿಂದೂ ಹಬ್ಬಗಳಿಗೆ ರಜೆ. ಆದರೆ, ಸರ್ಕಾರದ ಮಟ್ಟದಲ್ಲಿರುವವರಿಗೆ ಅವರಿಗೆ ಯಾರನ್ನೋ ಮೆಚ್ಚಿಸುವದಷ್ಟೇ ಬೇಕು. ಹಾಗಾಗಿ, ಅವರ ಜನನಾಯಕನ ಹುಟ್ಟುಹಬ್ಬಕ್ಕೆ ರಜೆ ಘೋಷಿಸಿದ್ದಾರೆ’’ ಎಂದು ಹೇಳಿದ್ದಾರೆ. ಮತ್ತೊಬ್ಬರು, ಈ ದೇಶದ ಹೊಸ ದೇವರಾಗಿ ಅಂಬೇಡ್ಕರ್ ಉದಯಿಸಿದ್ದಾರೆ. ಅದಕ್ಕಾಗಿಯೇ ಅವರ ಜನ್ಮದಿನವನ್ನು ಸಾರ್ವತ್ರಿಕ ಕಡ್ಡಾಯ ರಜೆ ಎಂದು ಹೇಳಿದ್ದಾರೆ ಎಂದಿದ್ದಾರೆ. ಆದರೆ, ಇದಕ್ಕೆ ಹೆಚ್ಚಿನವರು ತಿರುಗೇಟು ನೀಡಿದ್ದಾರೆ. ದಿವಿಕಾಂತ್ ಎಂಬವರು, “ಹಿಂದೂ ಹಬ್ಬಗಳಿಗೆ ತಿಂಗಳಿಗೆ ಒಂದು, ಎರಡು ಇದ್ದೇ ಇರುತ್ತವೆ. ಹೀಗೆ, ಎಲ್ಲದಕ್ಕೂ ರಜೆ ಕೊಡುತ್ತಾ ಹೋದರೆ ದೇಶದ ಪ್ರೊಡಕ್ಟಿವಿಟಿ ಇಂಪ್ರೂವ್ ಆಗೋದಾದರೂ ಹೇಗೆ’’ ಎಂದು ಕೇಳಿದ್ದಾರೆ.ಮತ್ತೊಬ್ಬರು, ಅಂಬೇಡ್ಕರ್ ಅವರು ಈ ದೇಶದ ಎಲ್ಲರಿಗೂ ವಿದ್ಯಾಭ್ಯಾಸವನ್ನು ಸಮಾನವಾಗಿ ಹಂಚಿದರು. ನಿಮ್ಮ ಪೂರ್ವಿಕರು ಹಂಚಿಲ್ಲ. ಹಾಗಾಗಿ, ಅವರ ಜನ್ಮದಿನವನ್ನು ಸಾರ್ವತ್ರಿಕ ರಜೆಯನ್ನಾಗಿ ಮಾಡಿದರೆ ನಿಮಗೇನು ಕಷ್ಟ ಎಂದು ಕೇಳಿದ್ದಾರೆ.

ವಿವಾದಾತ್ಮಕ ಪೋಸ್ಟ್ ಹಾಕುವ ತಿವಾರಿ


ಅನುರಾಧಾ ತಿವಾರಿ ಅವರು ಕಳೆದ ವರ್ಷ ಮೀಸಲಾತಿಯನ್ನು ವಿರೋಧಿಸಿ ಹಾಕಿದ್ದ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದ್ದವು. ಕಳೆದ ವರ್ಷ ಆಗಸ್ಟ್ ನಲ್ಲಿ ಅವರು ಹಾಕಿದ್ದ ಬ್ರಾಹ್ಮಿನ್ ಜೀನ್ಸ್ ಎಂಬ ಪೋಸ್ಟ್ ಕೂಡ ವೈರಲ್ ಆಗಿತ್ತು. ಆದರೆ, ಅದಕ್ಕೆ ಅನೇಕ ವಿರೋಧಗಳೂ ವ್ಯಕ್ತವಾಗಿದ್ದವು. ಆದರೆ, ಅಂಥ ವಿರೋಧಗಳನ್ನೂ ವಿರೋಧಿಸಿದ್ದ ಅವರು, ಈ ಎಲ್ಲಾ ವಿರೋಧಗಳು ನೈಜ ಜಾತಿವಾದಿಗಳ ಬಣ್ಣವನ್ನು ಬಯಲು ಮಾಡಿದೆ. ಕಡೆಯವರೆಗೂ ಬ್ರಾಹ್ಮಣಳಾಗಿಯೇ ಉಳಿಯುತ್ತೇನೆ’’ ಎಂದಿದ್ದರು.

The post ‘ಹಿಂದೂ ಹಬ್ಬಗಳಿಗೆ ಆಪ್ಷನಲ್ ರಜೆ, ಅಂಬೇಡ್ಕರ್ ಜಯಂತಿಗೆ ಮಾತ್ರ ಕಡ್ಡಾಯ ರಜೆ,ಯಾಕೆ?’- ಅನುರಾಧಾ ತಿವಾರಿ ಪ್ರಶ್ನೆ? appeared first on Good News 24x7.

]]>
ರಾಜ್ಯಪಾಲರು ಕಾಯ್ದಿರಿಸಿದ ಮಸೂದೆಗಳ ಬಗ್ಗೆ ನಿರ್ಧರಿಸಲು ಸುಪ್ರೀಂ ಕೋರ್ಟ್ನಿಂದ ರಾಷ್ಟ್ರಪತಿಗೆ 3 ತಿಂಗಳ ಗಡುವು. https://www.goodnews24x7.com/%e0%b2%b0%e0%b2%be%e0%b2%9c%e0%b3%8d%e0%b2%af%e0%b2%aa%e0%b2%be%e0%b2%b2%e0%b2%b0%e0%b3%81-%e0%b2%95%e0%b2%be%e0%b2%af%e0%b3%8d%e0%b2%a6%e0%b2%bf%e0%b2%b0%e0%b2%bf%e0%b2%b8%e0%b2%bf%e0%b2%a6/ Sat, 12 Apr 2025 11:43:26 +0000 https://www.goodnews24x7.com/?p=3176 ನವದೆಹಲಿ : ಸುಪ್ರೀಂ ಕೋರ್ಟ್ನಿಂದ ಮಹತ್ವದ ತೀರ್ಪು ಹೊರಬಿದ್ದಿದ್ದು, ಸುಪ್ರೀಂ ಕೋರ್ಟ್ ಮೊದಲ ಬಾರಿಗೆ ರಾಜ್ಯಪಾಲರು ಉಲ್ಲೇಖಿಸಿದ ಮಸೂದೆಗಳ ಕುರಿತು ರಾಷ್ಟ್ರಪತಿಗಳು ನಿರ್ಧರಿಸಲು ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿದೆ. ಇಂದಿನಿಂದ 3 ತಿಂಗಳೊಳಗೆ ರಾಷ್ಟ್ರಪತಿ ನಿರ್ಧಾರವನ್ನು ತೆಗೆದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ತಮಿಳುನಾಡಿನ ರಾಜ್ಯಪಾಲ ಆರ್.…

The post ರಾಜ್ಯಪಾಲರು ಕಾಯ್ದಿರಿಸಿದ ಮಸೂದೆಗಳ ಬಗ್ಗೆ ನಿರ್ಧರಿಸಲು ಸುಪ್ರೀಂ ಕೋರ್ಟ್ನಿಂದ ರಾಷ್ಟ್ರಪತಿಗೆ 3 ತಿಂಗಳ ಗಡುವು. appeared first on Good News 24x7.

]]>

ನವದೆಹಲಿ : ಸುಪ್ರೀಂ ಕೋರ್ಟ್ನಿಂದ ಮಹತ್ವದ ತೀರ್ಪು ಹೊರಬಿದ್ದಿದ್ದು, ಸುಪ್ರೀಂ ಕೋರ್ಟ್ ಮೊದಲ ಬಾರಿಗೆ ರಾಜ್ಯಪಾಲರು ಉಲ್ಲೇಖಿಸಿದ ಮಸೂದೆಗಳ ಕುರಿತು ರಾಷ್ಟ್ರಪತಿಗಳು ನಿರ್ಧರಿಸಲು ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿದೆ. ಇಂದಿನಿಂದ 3 ತಿಂಗಳೊಳಗೆ ರಾಷ್ಟ್ರಪತಿ ನಿರ್ಧಾರವನ್ನು ತೆಗೆದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ತಮಿಳುನಾಡಿನ ರಾಜ್ಯಪಾಲ ಆರ್. ಎನ್ ರವಿ ಅವರು ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಾಯ್ದಿರಿಸಿದ್ದ ತಮಿಳುನಾಡಿನ 10 ಮಸೂದೆಗಳನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿದ 4 ದಿನಗಳ ನಂತರ ಈ ತೀರ್ಪು ಬಂದಿದೆ. 415 ಪುಟಗಳ ಪೂರ್ಣ ತೀರ್ಪನ್ನು ಶುಕ್ರವಾರ ರಾತ್ರಿ ತಡರಾತ್ರಿ 10:54 ಕ್ಕೆ ಸುಪ್ರೀಂ ಕೋರ್ಟ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದೆ.
“ಗೃಹ ಸಚಿವಾಲಯವು ನಿಗದಿಪಡಿಸಿದ ಕಾಲಮಿತಿಯನ್ನು ಅಳವಡಿಸಿಕೊಳ್ಳುವುದು ಸೂಕ್ತವೆಂದು ನಾವು ಪರಿಗಣಿಸುತ್ತೇವೆ. ಅಂತಹ ಉಲ್ಲೇಖವನ್ನು ಸ್ವೀಕರಿಸಿದ ದಿನಾಂಕದಿಂದ 3 ತಿಂಗಳ ಅವಧಿಯೊಳಗೆ ರಾಜ್ಯಪಾಲರು ತಮ್ಮ ಪರಿಗಣನೆಗೆ ಕಾಯ್ದಿರಿಸಿದ ಮಸೂದೆಗಳ ಬಗ್ಗೆ ರಾಷ್ಟ್ರಪತಿಗಳು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸೂಚಿಸುತ್ತೇವೆ. ಈ ಅವಧಿಯನ್ನು ಮೀರಿ ಯಾವುದೇ ವಿಳಂಬವಾದರೆ, ಸೂಕ್ತ ಕಾರಣಗಳನ್ನು ದಾಖಲಿಸಿ ಸಂಬಂಧಪಟ್ಟ ರಾಜ್ಯಕ್ಕೆ ತಿಳಿಸಬೇಕು. ರಾಜ್ಯಗಳು ಸಹಯೋಗದಿಂದಿರಬೇಕು ಮತ್ತು ಕೇಂದ್ರ ಸರ್ಕಾರವು ನೀಡಿದ ಸಲಹೆಗಳನ್ನು ತ್ವರಿತವಾಗಿ ಪರಿಗಣಿಸಬೇಕು” ಎಂದು ಸುಪ್ರೀಂ ಕೋರ್ಟ್ ಹೇಳಿದೆ.


ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರನ್ನೊಳಗೊಂಡ ಪೀಠವು ಏಪ್ರಿಲ್ 8ರಂದು ತೀರ್ಪು ನೀಡಿತ್ತು. “ರಾಜ್ಯಪಾಲರು ರಾಷ್ಟ್ರಪತಿಗಳ ಒಪ್ಪಿಗೆಗೆ ಮಸೂದೆಯನ್ನು ಕಾಯ್ದಿರಿಸಿದರೆ ಮತ್ತು ರಾಷ್ಟ್ರಪತಿಗಳು ಅದಕ್ಕೆ ಒಪ್ಪಿಗೆಯನ್ನು ತಡೆಹಿಡಿದರೆ, ಈ ನ್ಯಾಯಾಲಯದ ಮುಂದೆ ಅಂತಹ ಕ್ರಮವನ್ನು ಪ್ರಶ್ನಿಸಲು ರಾಜ್ಯ ಸರ್ಕಾರಕ್ಕೆ ಮುಕ್ತವಾಗಿರುತ್ತದೆ” ಎಂದು ನ್ಯಾಯಪೀಠ ಹೇಳಿದೆ.
ಸಂವಿಧಾನದ 200ನೇ ವಿಧಿಯ ಅಡಿಯಲ್ಲಿ ರಾಜ್ಯಪಾಲರು ಒಪ್ಪಿಗೆ ನೀಡುವ ಅಥವಾ ತಡೆಹಿಡಿಯುವ ಅಥವಾ ರಾಷ್ಟ್ರಪತಿಗಳ ಪರಿಗಣನೆಗೆ ಮಸೂದೆಯನ್ನು ಕಾಯ್ದಿರಿಸುವ ಅಧಿಕಾರವನ್ನು ಹೊಂದಿದ್ದಾರೆ. “ರಾಜ್ಯ ಸಚಿವ ಸಂಪುಟದ ಸಲಹೆಗೆ ವಿರುದ್ಧವಾಗಿ ಒಪ್ಪಿಗೆಯನ್ನು ತಡೆಹಿಡಿದ ಸಂದರ್ಭದಲ್ಲಿ, ರಾಜ್ಯಪಾಲರು ಗರಿಷ್ಠ 3 ತಿಂಗಳ ಅವಧಿಯೊಳಗೆ ಮಸೂದೆಯನ್ನು ಸಂದೇಶದೊಂದಿಗೆ ಹಿಂತಿರುಗಿಸಬೇಕು” ಎಂದು ಪೀಠ ಹೇಳಿದೆ.
ಸಾಂವಿಧಾನಿಕ ಆದೇಶವನ್ನು ಪುನರುಚ್ಚರಿಸುತ್ತಾ, ರಾಜ್ಯಪಾಲರು ಮಂತ್ರಿ ಮಂಡಳಿಯ ನೆರವು ಮತ್ತು ಸಲಹೆಗೆ ಬದ್ಧರಾಗಿದ್ದಾರೆ ಮತ್ತು ಸದನವು ಮಸೂದೆಯನ್ನು ಪುನಃ ಮಂಡಿಸಿದ ನಂತರ ಅದನ್ನು ಎರಡನೇ ಬಾರಿಗೆ ರಾಷ್ಟ್ರಪತಿಗಳ ಪರಿಗಣನೆಗೆ ಕಾಯ್ದಿರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿತ್ತು. ನಿಗದಿತ ಸಮಯದೊಳಗೆ ಕಾರ್ಯನಿರ್ವಹಿಸಲು ವಿಫಲವಾದರೆ ರಾಜ್ಯಪಾಲರ ನಿಷ್ಕ್ರಿಯತೆಯು ನ್ಯಾಯಾಂಗ ಪರಿಶೀಲನೆಗೆ ಒಳಪಡುತ್ತದೆ ಎಂದು ತೀರ್ಪು ಹೇಳಿದೆ.

The post ರಾಜ್ಯಪಾಲರು ಕಾಯ್ದಿರಿಸಿದ ಮಸೂದೆಗಳ ಬಗ್ಗೆ ನಿರ್ಧರಿಸಲು ಸುಪ್ರೀಂ ಕೋರ್ಟ್ನಿಂದ ರಾಷ್ಟ್ರಪತಿಗೆ 3 ತಿಂಗಳ ಗಡುವು. appeared first on Good News 24x7.

]]>
ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡಿಸಿದ ಕೇಂದ್ರ ಸರ್ಕಾರ. https://www.goodnews24x7.com/%e0%b2%b2%e0%b3%8b%e0%b2%95%e0%b2%b8%e0%b2%ad%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%b5%e0%b2%95%e0%b3%8d%e0%b2%ab%e0%b3%8d-%e0%b2%a4%e0%b2%bf%e0%b2%a6%e0%b3%8d%e0%b2%a6%e0%b3%81/ Wed, 02 Apr 2025 10:12:06 +0000 https://www.goodnews24x7.com/?p=2988 ನವದೆಹಲಿ :- ವಿರೋಧ ಪಕ್ಷಗಳ ವಿರೋಧದ ನಡುವೆ ಕೇಂದ್ರ ಸರ್ಕಾರ ಇಂದು ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಯನ್ನು ಮಂಡಿಸಿದೆ.. ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮತ್ತು ಸಮಾಜವಾದಿ ಪಾರ್ಟಿ (ಎಸ್ಪಿ) ಈಗಾಗಲೇ ಪಕ್ಷದ ಲೋಕಸಭಾ ಸದಸ್ಯರಿಗೆ ವಿಪ್ ಜಾರಿಗೊಳಿಸಿದ್ದವು. ವಿಪ್…

The post ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡಿಸಿದ ಕೇಂದ್ರ ಸರ್ಕಾರ. appeared first on Good News 24x7.

]]>

ನವದೆಹಲಿ :- ವಿರೋಧ ಪಕ್ಷಗಳ ವಿರೋಧದ ನಡುವೆ ಕೇಂದ್ರ ಸರ್ಕಾರ ಇಂದು ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಯನ್ನು ಮಂಡಿಸಿದೆ.. ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮತ್ತು ಸಮಾಜವಾದಿ ಪಾರ್ಟಿ (ಎಸ್ಪಿ) ಈಗಾಗಲೇ ಪಕ್ಷದ ಲೋಕಸಭಾ ಸದಸ್ಯರಿಗೆ ವಿಪ್ ಜಾರಿಗೊಳಿಸಿದ್ದವು. ವಿಪ್ ಎನ್ನುವುದು ರಾಜಕೀಯ ಪಕ್ಷಗಳು ತಮ್ಮ ಶಾಸನ ಪ್ರತಿನಿಧಿಗಳಿಗೆ ನೀಡುವ ಔಪಚಾರಿಕ ಲಿಖಿತ ನಿರ್ದೇಶನವಾಗಿದ್ದು, ಅವರು ಸಂಸತ್ತು ಅಥವಾ ರಾಜ್ಯ ಸಭೆಗಳಲ್ಲಿ ಪ್ರಮುಖ ಮತಗಳಿಗೆ ಹಾಜರಾಗಬೇಕು ಮತ್ತು ಪಕ್ಷದ ಅಧಿಕೃತ ನಿಲುವಿಗೆ ಅನುಗುಣವಾಗಿ ಮತ ಚಲಾಯಿಸುವಂತೆ ಆದೇಶಿಸುವಂಥದ್ದಾಗಿದೆ.
ಲೋಕಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ 2024 ರ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಯಿತು. ಕೇಂದ್ರ ಸಂಸದೀಯ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಿದ್ದಾರೆ. ಕಾಂಗ್ರೆಸ್ ಕೂಡ ಆರಂಭದಲ್ಲಿ ಮಸೂದೆಯನ್ನು ವಿರೋಧಿಸಿತು. 1995 ರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರುತ್ತಿರುವುದು ಇದೇ ಮೊದಲಲ್ಲ. ಈ ಕಾನೂನನ್ನು 2013 ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ತಿದ್ದುಪಡಿ ಮಾಡಲಾಗಿತ್ತು.
ಹೊಸ ವಕ್ಫ್ ಮಸೂದೆಯಲ್ಲಿ ಏನಿದೆ?

ತನ್ನ ಮಿತ್ರಪಕ್ಷಗಳ ಬೇಡಿಕೆಯನ್ನು ಒಪ್ಪಿಕೊಂಡಿರುವ ಪ್ರಸ್ತುತ ಸರ್ಕಾರ, ಹೊಸ ಮಸೂದೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ, ಉದಾಹರಣೆಗೆ ಐದು ವರ್ಷಗಳಿಂದ ಇಸ್ಲಾಂ ಧರ್ಮವನ್ನು ಅನುಸರಿಸುತ್ತಿರುವವರು ಮಾತ್ರ ತಮ್ಮ ಆಸ್ತಿಯನ್ನು ವಕ್ಫ್ಗೆ ದಾನ ಮಾಡಲು ಸಾಧ್ಯವಾಗುತ್ತದೆ. ದಾನ ಮಾಡಲಾಗುವ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ವಿವಾದವಿದ್ದರೆ, ತನಿಖೆಯ ನಂತರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.
ವಾಸ್ತವವಾಗಿ, ‘ವಕ್ಫ್’ ಎಂಬ ಪದವು ಅರೇಬಿಕ್ ಪದ ‘ವಕುಫಾ’ ದಿಂದ ಬಂದಿದೆ, ಇದರರ್ಥ ನಿಲ್ಲಿಸುವುದು ಅಥವಾ ತಡೆಹಿಡಿಯುವುದು ಎಂದರ್ಥ. ನಾವು ಅದನ್ನು ಕಾನೂನು ಪರಿಭಾಷೆಯಲ್ಲಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ ಅದನ್ನು ವಕ್ಫ್ ಎಂದು ಕರೆಯಲಾಗುತ್ತದೆ.
ಇಸ್ಲಾಂನಲ್ಲಿ, ಒಬ್ಬ ವ್ಯಕ್ತಿಯು ಧಾರ್ಮಿಕ ಕಾರಣಗಳಿಗಾಗಿ ಅಥವಾ ದೇವರ ಹೆಸರಿನಲ್ಲಿ ತನ್ನ ಆಸ್ತಿಯನ್ನು ದಾನ ಮಾಡಿದಾಗ, ಅದನ್ನು ಆಸ್ತಿಯನ್ನು ವಕ್ಫ್ ಮಾಡುವುದು ಎಂದು ಕರೆಯಲಾಗುತ್ತದೆ. ಅದು ಕೆಲವು ರೂಪಾಯಿಗಳಾಗಿರಬಹುದು, ಆಸ್ತಿಯಾಗಿರಬಹುದು, ಬೆಲೆಬಾಳುವ ಲೋಹವಾಗಿರಬಹುದು ಅಥವಾ ಮನೆ ಅಥವಾ ಭೂಮಿಯಾಗಿರಬಹುದು.ದಾನ ಮಾಡಿದ ಈ ಆಸ್ತಿಯನ್ನು ‘ಅಲ್ಲಾಹನ ಆಸ್ತಿ’ ಎಂದು ಕರೆಯಲಾಗುತ್ತದೆ ಮತ್ತು ತನ್ನ ಆಸ್ತಿಯನ್ನು ವಕ್ಫ್ಗೆ ನೀಡುವ ವ್ಯಕ್ತಿಯನ್ನು ‘ವಕೀಫಾ’ ಎಂದು ಕರೆಯಲಾಗುತ್ತದೆ.
ವಕೀಫಾ ದಾನ ಮಾಡಿದ ಅಥವಾ ವಕ್ಫ್ ಮಾಡಿದ ಈ ಆಸ್ತಿಗಳನ್ನು ಮಾರಾಟ ಮಾಡಲಾಗುವುದಿಲ್ಲ, ಅವುಗಳನ್ನು ಧರ್ಮವನ್ನು ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕಾಗಿ ಬಳಸಲಾಗುವುದಿಲ್ಲ. ಮುಸ್ಲಿಂ ಧಾರ್ಮಿಕ ನಾಯಕ ಪ್ರವಾದಿ ಮುಹಮ್ಮದ್ ಅವರ ಕಾಲದಲ್ಲಿ, 600 ಖರ್ಜೂರ ಮರಗಳ ತೋಟವನ್ನು ಮೊದಲು ವಕ್ಫ್ ಆಗಿ ಮಾಡಲಾಯಿತು ಮತ್ತು ಅದರಿಂದ ಬರುವ ಆದಾಯವನ್ನು ಮದೀನಾದ ಬಡವರಿಗೆ ಸಹಾಯ ಮಾಡಲು ಬಳಸಲಾಯಿತು ಎಂದು ಹೇಳಲಾಗುತ್ತದೆ. ಭಾರತದಲ್ಲಿ ವಕ್ಫ್ ಕಾಯ್ದೆ ಯಾವಾಗ ಜಾರಿಗೆ ಬಂತು
ಭಾರತದಲ್ಲಿ ಸ್ವಾತಂತ್ರ್ಯದ ನಂತರ, ವಕ್ಫ್ ಕಾಯ್ದೆಯನ್ನು ಮೊದಲ ಬಾರಿಗೆ 1954 ರಲ್ಲಿ ಮಾಡಲಾಯಿತು ಮತ್ತು ನಂತರ 1995 ರಲ್ಲಿ ಈ ಕಾಯ್ದೆಯಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡಲಾಯಿತು. ನಂತರ 2013 ರಲ್ಲಿ ಹೊಸ ವಕ್ಫ್ ಕಾಯ್ದೆಯನ್ನು ಜಾರಿಗೆ ತರಲಾಯಿತು ಮತ್ತು ಅದರಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಯಿತು.
2013 ರ ನಂತರ, ಆಗಸ್ಟ್ 8, 2024 ರಂದು, ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೂಲಕ ಲೋಕಸಭೆಯಲ್ಲಿ ಹೊಸ ವಕ್ಫ್ ಮಸೂದೆಯನ್ನು ಮಂಡಿಸಲಾಯಿತು, ಇದರ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆದವು. ಪ್ರತಿಭಟನೆಗಳ ನಂತರ, ಮಸೂದೆಯ ಕರಡನ್ನು ಸಿದ್ಧಪಡಿಸಿ ಸಂಸತ್ತಿನ ಜೆಪಿಸಿಗೆ ಕಳುಹಿಸಲಾಯಿತು, ಅದು ಅದನ್ನು ಚರ್ಚಿಸಿತು ಮತ್ತು ಜನವರಿ 27, 2025 ರಂದು, ಜೆಪಿಸಿ ಕರಡು ಮಸೂದೆಯನ್ನು ಅನುಮೋದಿಸಿತು ಮತ್ತು ಸೂಚಿಸಲಾದ 14 ತಿದ್ದುಪಡಿಗಳನ್ನು ಅಂಗೀಕರಿಸಿತು. ಜೆಪಿಸಿ ವರದಿಯನ್ನು ಫೆಬ್ರವರಿ 13, 2025 ರಂದು ಸಂಸತ್ತಿನಲ್ಲಿ ಮಂಡಿಸಲಾಯಿತು. ತಿದ್ದುಪಡಿ ಮಾಡಿದ ವಕ್ಫ್ ಮಸೂದೆಯನ್ನು ಫೆಬ್ರವರಿ 19, 2025 ರಂದು ನಡೆದ ಸಂಪುಟ ಸಭೆಯಲ್ಲಿ ಅನುಮೋದಿಸಲಾಯಿತು.

The post ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡಿಸಿದ ಕೇಂದ್ರ ಸರ್ಕಾರ. appeared first on Good News 24x7.

]]>
ಚನ್ನಪಟ್ಟಣ ಉಪಚುನಾವಣೆ ಅಖಾಡಕ್ಕೆ ಪ್ರತಾಪ್ ಸಿಂಹ ಎಂಟ್ರಿ ? https://www.goodnews24x7.com/%e0%b2%9a%e0%b2%a8%e0%b3%8d%e0%b2%a8%e0%b2%aa%e0%b2%9f%e0%b3%8d%e0%b2%9f%e0%b2%a3-%e0%b2%89%e0%b2%aa%e0%b2%9a%e0%b3%81%e0%b2%a8%e0%b2%be%e0%b2%b5%e0%b2%a3%e0%b3%86-%e0%b2%85%e0%b2%96%e0%b2%be%e0%b2%a1/ Thu, 19 Sep 2024 06:48:01 +0000 https://www.goodnews24x7.com/?p=606 ಇಡೀ ರಾಜ್ಯ ರಾಜಕಾಣದಲ್ಲೇ ಅತ್ಯಂತ ದೊಡ್ಡ ಬ್ರೇಕಿಂಗ್ ಸುದ್ದಿಯಾಗಿದೆ. ರಾಜ್ಯದಲ್ಲಿ ಖಾಲಿಯಾದ ಮೂರು ವಿಧಾನಸಭಾ ಕ್ಷೇತ್ರಗಳ ಪೈಕಿ ಅತ್ಯಂತ ಕುತೂಹಲ ಹಾಗೂ ಭಾರಿ ಪೈಪೋಟಿಗೆ ಸಜ್ಜಾಗಿ ನಿಂತಿರುವ ಚನ್ನಪಟ್ಟಣದ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವ, ಉಪ ಮುಖ್ಯಮಂತ್ರಿಗಳ ನಡುವೆ ಭಾರಿ ಪೈಪೋಟಿ…

The post ಚನ್ನಪಟ್ಟಣ ಉಪಚುನಾವಣೆ ಅಖಾಡಕ್ಕೆ ಪ್ರತಾಪ್ ಸಿಂಹ ಎಂಟ್ರಿ ? appeared first on Good News 24x7.

]]>

ಇಡೀ ರಾಜ್ಯ ರಾಜಕಾಣದಲ್ಲೇ ಅತ್ಯಂತ ದೊಡ್ಡ ಬ್ರೇಕಿಂಗ್ ಸುದ್ದಿಯಾಗಿದೆ. ರಾಜ್ಯದಲ್ಲಿ ಖಾಲಿಯಾದ ಮೂರು ವಿಧಾನಸಭಾ ಕ್ಷೇತ್ರಗಳ ಪೈಕಿ ಅತ್ಯಂತ ಕುತೂಹಲ ಹಾಗೂ ಭಾರಿ ಪೈಪೋಟಿಗೆ ಸಜ್ಜಾಗಿ ನಿಂತಿರುವ ಚನ್ನಪಟ್ಟಣದ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವ, ಉಪ ಮುಖ್ಯಮಂತ್ರಿಗಳ ನಡುವೆ ಭಾರಿ ಪೈಪೋಟಿ ಶುರುವಾಗಿದೆ. ಇಲ್ಲಿ ಸ್ಪರ್ಧೆ ಮಾಡಲಿರುವ ಅಭ್ಯರ್ಥಿ ಬಗ್ಗೆ ತೀವ್ರ ಕುತೂಹಲ ಕೆರಳಿದ್ದು, ನಿಖಿಲ್ ಕುಮಾರಸ್ವಾಮಿ, ಸಿ.ಪಿ. ಯೋಗೇಶ್ವರ್ ಹೆರು ಕೇಳಿಬಂದಿತ್ತು. ಅದರೆ, ಇದೀಗ ಇವರಿಬ್ಬರನ್ನೂ ಬದಿಗಿರಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮೈತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುಳಿವು ಲಭ್ಯವಾಗಿದೆ.

ಗೊಂಬೆ ನಾಡು ಚನ್ನಪಟ್ಟಣದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ 135 ಸ್ಥಾನ ಪಡೆದು ಬಹುಮತದಿಂದ ಅಧಿಕಾರಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಕೇವಲ ಶಾಸಕರಾಗಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆ ಆಗಿದ್ದಾರೆ. ಇದರ ಬೆನ್ನಲ್ಲಿಯೇ ಕೇಂದ್ರದಲ್ಲಿ ಭಾರಿ ಕೈಗಾರಿಕಾ ಇಲಾಖೆಯ ಸಂಪುಟ ದರ್ಜೆ ಸಚಿವರಾಗಿದ್ದಾರೆ. ಇದರ ಬೆನ್ನಲ್ಲಿಯೇ ಚನ್ನಪಟ್ಟಣ ವಿಧಾನಸಭಾ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು, ಇದೀಗ ಚನ್ನಪಟ್ಟಣ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಸಬೇಕಿದೆ.

 

ಉಪ ಚುನಾವಣೆಗೆ ಟಿಕೆಟ್‌ಗೆ ಭಾರಿ ಪೈಪೋಟಿ: ಚನ್ನಪಟ್ಟಣದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯ ನಾಯಕ ಸಿ.ಪಿ. ಯೋಗೇಶ್ವರ್ ಅವರು ಬಿಜೆಪಿಯಿಂದ ಸ್ಪರ್ಧಿಸಿದರೆ, ಅವರ ವಿರುದ್ಧ ಜೆಡಿಎಸ್‌ನಿಂದ ಮಾಜಿ ಸಿಎಂ ಕುಮಾರಸ್ವಾಮಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆದರೆ, ಇದೀಗ ಲೋಕಸಭೆಯಲ್ಲಿ ಬಿಜೆಪಿ – ಜೆಡಿಸ್ ಮೈತ್ರಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿ ಸಂಸತ್ತಿಗೆ ಹೋಗಿದ್ದರಿಂದ ಚನ್ನಪಟ್ಟಣದ ಮೈತ್ರಿ ಟಿಕೆಟ್ ಅನ್ನು ಯಾರಿಗೆ ನೀಡಬೇಕು ಎಂಬ ಕುತೂಹಲ ಉಂಟಾಗಿದೆ. ಜೆಡಿಎಸ್ ಪಕ್ಷದಿಂದ ಗೆದ್ದ ಕ್ಷೇತ್ರವನ್ನು ಮೈತ್ರಿ ಧರ್ಮ ಪಾಲಿಸುವುದಕ್ಕಾಗಿ ಬಿಜೆಪಿಗೆ ಬಿಟ್ಟು ಕೊಡಲು ಒಪ್ಪುತ್ತಿಲ್ಲ. ಆದರೆ, ಇಲ್ಲಿ ಬಿಜೆಪಿ ನಾಯಕ ಸಿ.ಪಿ. ಯೋಗೇಶ್ವರ ಮೈತ್ರಿ ಟಿಕೆಟ್ ತನಗೇ ಕೊಡಬೇಕು ಎಂದು ಪಟ್ಟು ಹಿಡಿದಿದ್ದರು.

ಮೂರ್ನಾಲ್ಕು ಬಾರಿಗೆ ದೆಹಲಿಗೆ ಹೋಗಿದ್ದ ಯೋಗೇಶ್ವರ: ಹಾಲಿ ವಿಧಾನ ಪರಿಷತ್ ಸದಸ್ಯರೂ ಆಗಿರುವ ಸಿ.ಪಿ. ಚನ್ನಪಟ್ಟಣ ಉಪ ಚುನಾವಣೆಗೆ ಮೈತ್ರಿ ಟಿಕೆಟ್ ತನಗೇ ಬೇಕೆಂದು ಪಟ್ಟು ಹಿಡಿದಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಭೇಟಿ ಮಾಡಲು ಮೂರ್ನಾಲ್ಕು ಬಾರಿ ದೆಹಲಿಗೂ ಹೋಗಿ ಬಂದಿದ್ದಾರೆ. ಅಲ್ಲಿ ಜೆ.ಪಿ. ನಡ್ಡಾ, ರಾಜನಾಥ ಸಿಂಗ್, ಅಮಿತ್ ಶಾ ಸೇರಿದಂತೆ ರಾಜ್ಯದ ಹಲವು ಹಿರಿಯ ನಾಯಕರನ್ನು ಭೇಟಿ ಮಾಡಿ ಚರ್ಚಿಸಿ ಟಿಕೆಟ್‌ಗಾಗಿ ಲಾಬಿ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಕೇಂದ್ರ ಬಿಜೆಪಿ ನಾಯಕರು ಒಂದೆರೆಡು ಸತ್ತಿನ ಮಾತುಕತೆಯನ್ನೂ ಮಾಡಿದ್ದಾರೆ. ಆದರೆ, ಈ ಸಭೆಯಲ್ಲಿ ಸಿ.ಪಿ. ಯೋಗೇಶ್ವರ್ ಅವರಿಗೆ ಮೈತ್ರಿ ಟಿಕೆಟ್ ಕೊಡುವುದಕ್ಕೆ ಹಿಂದೇಟು ಹಾಕಲಾಗಿದೆ. ಆದ್ದರಿಂದ ಇದೀಗ ಮಾಜಿ ಸಂಸದ ಪ್ರತಾಪ್ ಸಿಂಹಗೆ ಉಪ ಚುನಾವನೆ ಮೈತ್ರಿ ಟಿಕೆಟ್ ನೀಡಲು ನಿರ್ಧರಿಸಲಾಗಿದೆ ಎಂಬ ಸುಳಿವು ಸಿಕ್ಕಿದೆ.

ದೊಡ್ಡಗೌಡರಿಗೂ ಹತ್ತಿರವಾಗಿದ್ದ ಪ್ರತಾಪ್ ಸಿಂಹ:
ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ-ಜೆಡಿಸ್ ಮೈತ್ರಿ ಸುಳಿವು ಸಿಗುತ್ತಿದ್ದಂತೆಯೇ ಮೈಸೂರು-ಕೊಡಲು ಲೋಕಸಭಾ ಸಂಸದ ಪ್ರತಾಪ್ ಸಿಂಹ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಬಳಿ ಹೋಗಿ ಆಶೀರ್ವಾದ ಪಡೆದುಕೊಂಡು ಬಂದಿದ್ದರು. ಹೆಚ್.ಡಿ.ದೇವೇಗೌಡರು, ಕುಮಾರಸ್ವಾಮಿ, ಶಾಸಕ ಜಿ.ಟಿ. ದೇವೇಗೌಡ ಸೇರಿದಂತೆ ಹಲವು ಜೆಡಿಎಸ್ ನಾಯಕರೊಂದಿಗೆ ಪ್ರತಾಪ್‌ಸಿಂಹ ಉತ್ತಮ ಒಡನಾಟವನ್ನೂ ಹೊಂದಿದ್ದರು. ಆದರೆ, ಲೋಕಸಭಾ ಚುನಾವಣೆಗೆ ಪ್ರತಾಪ್ ಸಿಂಹ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿ ಮೈಸೂರು ಸಂಸ್ಥಾನದ ರಾಜ ಯದುವೀರ್ ಒಡೆಯರ್‌ಗೆ ಟಿಕೆಟ್ ನೀಡಿತ್ತು. ಆದರೂ ಜೆಡಿಎಸ್‌ನೊಂದಿಗೆ ಪ್ರತಾಪ್‌ಸಿಂಹ ಉತ್ತಮ ಒಡನಾಟವನ್ನೇ ಹೊಂದಿದ್ದಾರೆ. ಇದರ ಫಲವೇ ಇದೀಗ ಚನ್ನಪಟ್ಟಣದ ಮೈತ್ರಿ ಟಿಕೆಟ್ ಪ್ರತಾಪ್ ಸಿಂಹ ಪಾಲಾಗುತ್ತಿದೆ ಎಂಬ ಖಚಿತತೆಯನ್ನು ಹೆಚ್ಚು ಮಾಡುತ್ತಿದೆ.

The post ಚನ್ನಪಟ್ಟಣ ಉಪಚುನಾವಣೆ ಅಖಾಡಕ್ಕೆ ಪ್ರತಾಪ್ ಸಿಂಹ ಎಂಟ್ರಿ ? appeared first on Good News 24x7.

]]>
ಬಾಹ್ಯಾಕಾಶ ಪ್ರಬಂಧ ಸ್ಪರ್ಧೆಯಲ್ಲಿ ಹಿಮಾಗೆ ಮೊದಲ ಸ್ಥಾನ https://www.goodnews24x7.com/hima-wins-first-place-in-space-essay-competition/ Wed, 04 Sep 2024 13:01:21 +0000 https://www.goodnews24x7.com/?p=503 ಗ್ರಾಮೀಣ ಮಕ್ಕಳು ಯಾವೂದರಲ್ಲೂ ಕಡಿಮೆ ಇಲ್ಲಾ ಅನ್ನೋದನ್ನ ಮೈಸೂರು ತಾಲೂಕಿನ ಕಾಮನಕೆರೆಹುಂಡಿಯ ಗಿರೀಶ್ ಗೌಡ ಹಾಗೂ ಕವಿತಾ ದಂಪತಿಗಳ ಪುತ್ರಿ ಹಿಮಾ ಸಾಬೀತು ಮಾಡಿದ್ದಾಳೆ. ಇತ್ತೀಚೆಗೆ ನಡೆದ ಅಂತರಾಷ್ಟ್ರೀಯ ಬಾಹ್ಯಾಕಾಶ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಹಿಮಾಳಿಗೆ ಮೊದಲ…

The post ಬಾಹ್ಯಾಕಾಶ ಪ್ರಬಂಧ ಸ್ಪರ್ಧೆಯಲ್ಲಿ ಹಿಮಾಗೆ ಮೊದಲ ಸ್ಥಾನ appeared first on Good News 24x7.

]]>

ಗ್ರಾಮೀಣ ಮಕ್ಕಳು ಯಾವೂದರಲ್ಲೂ ಕಡಿಮೆ ಇಲ್ಲಾ ಅನ್ನೋದನ್ನ ಮೈಸೂರು ತಾಲೂಕಿನ ಕಾಮನಕೆರೆಹುಂಡಿಯ ಗಿರೀಶ್ ಗೌಡ ಹಾಗೂ ಕವಿತಾ ದಂಪತಿಗಳ ಪುತ್ರಿ ಹಿಮಾ ಸಾಬೀತು ಮಾಡಿದ್ದಾಳೆ. ಇತ್ತೀಚೆಗೆ ನಡೆದ ಅಂತರಾಷ್ಟ್ರೀಯ ಬಾಹ್ಯಾಕಾಶ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಹಿಮಾಳಿಗೆ ಮೊದಲ ಸ್ಥಾನ ಲಭಿಸಿದೆ.

ಸ್ಪರ್ಧೆಯಲ್ಲಿ ತಾಲೂಕಿನ ಪ್ರತಿಷ್ಠಿತ 30 ಕ್ಕೂ ಹೆಚ್ಚು ಶಾಲೆಗಳ ವಿಧ್ಯಾರ್ಥಿಗಳು ಬಾಗವಹಿಸಿದ್ದು ಈ ಶಾಲೆಗಳ ಪೈಕಿ ಗುಡ್ ಶೆಫರ್ಡ್ ಶಾಲೆಯಲ್ಲಿ 7 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಹಿಮಾ ತಾಲೂಕಿಗೆ ಮೊದಲ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾಳೆ

ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತೀಯರು ಮಾಡಿರುವ ಸಾಧನೆಯ ಬಗ್ಗೆ ಸವಿಸ್ತಾರವಾಗಿ ವಿಷಯ ಮಂಡನೆ ಮಾಡಲಾಗಿತ್ತು. ಪದ ಬಳಕೆ, ಬಾಷಾ ಪ್ರಯೋಗ ಹಾಗೂ ಅಂತರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನೆ ಬಗ್ಗೆ ಹಿಮಾ ಹೊಂದಿರುವ ಆಳವಾದ ಜ್ಞಾನಕ್ಕೆ ತೀರ್ಪುಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಈಕೆಗೆ ಮೊದಲ ಸ್ಥಾನ ಘೋಷಣೆ ಮಾಡಿದ್ದಾರೆ

The post ಬಾಹ್ಯಾಕಾಶ ಪ್ರಬಂಧ ಸ್ಪರ್ಧೆಯಲ್ಲಿ ಹಿಮಾಗೆ ಮೊದಲ ಸ್ಥಾನ appeared first on Good News 24x7.

]]>
ಕೇಂದ್ರ ಸರ್ಕಾರ ರೈತ ವಿರೋಧಿ ಧೋರಣೆಗಳಿಂದ, ರೈತರನ್ನು ನಾಶ ಮಾಡಲು ಹೊರಟಿದೆ : ಕುರುಬೂರ್ ಶಾಂತಕುಮಾರ್ https://www.goodnews24x7.com/kendra-sarkara-raita-virodhi-dhora%e1%b9%87ega%e1%b8%b7inda-raitarannu-nasa-ma%e1%b8%8dalu-hora%e1%b9%adide-kurubur-santakumar-kendra-sarkarakke-durbala-adhikara-sikkidaru-raita-virodhi-dhora/ Wed, 28 Aug 2024 09:51:58 +0000 https://www.goodnews24x7.com/?p=463 ಕೇಂದ್ರ ಸರ್ಕಾರ ರೈತ ವಿರೋಧಿ ಧೋರಣೆಗಳಿಂದ, ರೈತರನ್ನು ನಾಶ ಮಾಡಲು ಹೊರಟಿದೆ : ಕುರುಬೂರ್ ಶಾಂತಕುಮಾರ್ ಕೇಂದ್ರ ಸರ್ಕಾರಕ್ಕೆ ದುರ್ಬಲ ಅಧಿಕಾರ ಸಿಕ್ಕಿದರು ರೈತ ವಿರೋಧಿ ಧೋರಣೆಗಳನ್ನೇ ಮುಂದುವರಿಸುತ್ತಿದೆ. ಇದೇ ರೀತಿ ರೈತ ವಿರೋಧಿ ಧೋರಣೆ ಮುಂದುವರೆದರೆ ಅಧಿಕಾರದಿಂದಲೇ ದೂರ ಹಾಕುವ…

The post ಕೇಂದ್ರ ಸರ್ಕಾರ ರೈತ ವಿರೋಧಿ ಧೋರಣೆಗಳಿಂದ, ರೈತರನ್ನು ನಾಶ ಮಾಡಲು ಹೊರಟಿದೆ : ಕುರುಬೂರ್ ಶಾಂತಕುಮಾರ್ appeared first on Good News 24x7.

]]>

ಕೇಂದ್ರ ಸರ್ಕಾರ ರೈತ ವಿರೋಧಿ ಧೋರಣೆಗಳಿಂದ, ರೈತರನ್ನು ನಾಶ ಮಾಡಲು ಹೊರಟಿದೆ : ಕುರುಬೂರ್ ಶಾಂತಕುಮಾರ್

ಕೇಂದ್ರ ಸರ್ಕಾರಕ್ಕೆ ದುರ್ಬಲ ಅಧಿಕಾರ ಸಿಕ್ಕಿದರು ರೈತ ವಿರೋಧಿ ಧೋರಣೆಗಳನ್ನೇ ಮುಂದುವರಿಸುತ್ತಿದೆ. ಇದೇ ರೀತಿ ರೈತ ವಿರೋಧಿ ಧೋರಣೆ ಮುಂದುವರೆದರೆ ಅಧಿಕಾರದಿಂದಲೇ ದೂರ ಹಾಕುವ ಸನ್ನಿವೇಶ ನಿರ್ಮಾಣ ಮಾಡಬೇಕಾಗುತ್ತದೆ ಎಂಬುದನ್ನು ಅರಿಯಬೇಕು.
ರೈತರ ಕೃಷಿ ಭೂಮಿ, ಸಾಲ ವಸುಲಾತಿ ನೆಪದಲ್ಲಿ ಭೂಮಿ ಕಿತ್ತುಕೊಳ್ಳುವ ಸರ್ಪ್ರೈಸಿ ಕಾಯ್ದೆ ಜಾರಿಗೆ ತಂದು. ಸಾಲ ಕಟ್ಟದ ರೈತರ ಜಮೀನುಗಳನ್ನು ಬ್ಯಾಂಕುಗಳು ವಶ ಪಡಿಸಿಕೊಳ್ಳುತ್ತಿವೆ ಇಂತಹ ರೈತ ದ್ರೋಹಿ ಕಾನೂನುಗಳ ವಿರುದ್ಧ ಪ್ರಬಲ ಹೋರಾಟ ನಡೆಸಬೇಕಾಗಿದೆ. ಇಲ್ಲದಿದ್ದರೆ ರೈತ ಕುಲವೇ ನಾಶವಾಗುತ್ತದೆ. ಎಂದು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸಂಘಟನೆಯ ದಕ್ಷಿಣ ಭಾರತ ರಾಜ್ಯಗಳ ಸಂಚಾಲಕ ಕುರುಬೂರು ಶಾಂತಕುಮಾರ್ ಪಾಂಡಿಚೇರಿ ಕಾರಯ್ಕಲ್ ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡುತ್ತ ತಿಳಿಸಿದರು.

ಇಂದು ನಡೆದ ರಾಷ್ಟ್ರೀಯ ರೈತ ಸಮಾವೇಶದಲ್ಲಿ. ತಮಿಳುನಾಡು ಕರ್ನಾಟಕ ಆಂಧ್ರಪ್ರದೇಶ್. ತೆಲಂಗಾಣ. ಕೇರಳ. ರಾಜ್ಯಗಳ ರೈತ ಮುಖಂಡರು ಭಾಗವಹಿಸಿದ್ದರು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾತರಿ ಕಾನೂನು ಜಾರಿ. ರೈತರ ಸಂಪೂರ್ಣ ಸಾಲಮನ್ನಾ. ಡಾ. ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿ. ಬೆಳೆ ವಿಮೆ ಪದ್ಧತಿ ತಿದ್ದುಪಡಿ ಆಗಬೇಕು. 60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ ತರಬೇಕು ಎಂಬ ಇನ್ನಿತರ ಒತ್ತಾಯಗಳ ಬಗ್ಗೆ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ಮುಂದಿನ ದಿನಗಳಲ್ಲಿ ಬೆಂಬಲಿಸಿ ಪ್ರಬಲಗೊಳಿಸಲು ಪಾಂಡಿಚೇರಿಯಲ್ಲಿ ದಕ್ಷಿಣ ಭಾರತ ರಾಜ್ಯದ ರೈತ ಮುಖಂಡರು ತೀರ್ಮಾನಿಸಿದರು.

The post ಕೇಂದ್ರ ಸರ್ಕಾರ ರೈತ ವಿರೋಧಿ ಧೋರಣೆಗಳಿಂದ, ರೈತರನ್ನು ನಾಶ ಮಾಡಲು ಹೊರಟಿದೆ : ಕುರುಬೂರ್ ಶಾಂತಕುಮಾರ್ appeared first on Good News 24x7.

]]>