centralgovernment Archives - Good News 24x7 https://www.goodnews24x7.com/tag/centralgovernment/ Kannada Sat, 01 Nov 2025 09:54:49 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg centralgovernment Archives - Good News 24x7 https://www.goodnews24x7.com/tag/centralgovernment/ 32 32 ಹಿಂದಿ ಹೇರಿಕೆ ವಿರುದ್ಧ ಸಿಡಿದೆದ್ದ ಸಿಎಂ; ಕನ್ನಡ ರಾಜ್ಯೋತ್ಸವದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ https://www.goodnews24x7.com/cm-blasts-hindi-imposition-attacks-central-government-at-kannada-rajyotsava/ Sat, 01 Nov 2025 09:54:49 +0000 https://www.goodnews24x7.com/?p=7957 ನಾಡಿನಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆಮಾಡಿದೆ. ಈ ರಾಜ್ಯೋತ್ಸವ ಸಮಾರಂಭವನ್ನುದ್ದೇಶಿಸಿ ಸಿಎಂ ಭಾಷಣ ಮಾಡಿದ್ದು, ಹಿಂದಿ ಹೇರಿಕೆ ವಿರುದ್ಧ ಸಿಡಿದೆದ್ದಿದ್ದಾರೆ. ರಾಜ್ಯದಲ್ಲಿ ಕನ್ನಡ ರಾಜ್ಯೋತ್ಸವದ (Kannada Rajyotsava) ಸಂಭ್ರಮ ಮನೆ ಮಾಡಿದೆ. ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah)…

The post ಹಿಂದಿ ಹೇರಿಕೆ ವಿರುದ್ಧ ಸಿಡಿದೆದ್ದ ಸಿಎಂ; ಕನ್ನಡ ರಾಜ್ಯೋತ್ಸವದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ appeared first on Good News 24x7.

]]>

ನಾಡಿನಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆಮಾಡಿದೆ. ಈ ರಾಜ್ಯೋತ್ಸವ ಸಮಾರಂಭವನ್ನುದ್ದೇಶಿಸಿ ಸಿಎಂ ಭಾಷಣ ಮಾಡಿದ್ದು, ಹಿಂದಿ ಹೇರಿಕೆ ವಿರುದ್ಧ ಸಿಡಿದೆದ್ದಿದ್ದಾರೆ. ರಾಜ್ಯದಲ್ಲಿ ಕನ್ನಡ ರಾಜ್ಯೋತ್ಸವದ (Kannada Rajyotsava) ಸಂಭ್ರಮ ಮನೆ ಮಾಡಿದೆ. ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹಿಂದೆ ಹೇರಿಕೆ ವಿರುದ್ಧ ಸಿಡಿದೆದ್ದಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯ ಮಾಡಿದ ಭಾಷಣವು ಕನ್ನಡ ನಾಡು-ನುಡಿಯ ಗೌರವ, ಏಕೀಕರಣ ಹೋರಾಟ ಮತ್ತು ಭಾಷಾ ಸಮಸ್ಯೆಗಳ ಬಗ್ಗೆ ಆಳವಾದ ಚಿಂತನೆಯನ್ನು ಒಳಗೊಂಡಿತ್ತು. ಸಿಎಂ ಸಿದ್ದರಾಮಯ್ಯ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾಡಿದ ಈ ಭಾಷಣವು ರಾಜ್ಯದ ಜನತೆಗೆ ಸ್ಫೂರ್ತಿ ನೀಡುವಂತಿದ್ದರೆ, ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ತೀಕ್ಷ್ಣ ಟೀಕೆಯನ್ನೂ ಒಳಗೊಂಡಿತ್ತು.

ಕನ್ನಡ ಏಕೀಕರಣಕ್ಕಾಗಿ ಹೋರಾಟ ನಡೆಸಿದ ಮಹನೀಯರನ್ನು ನೆನೆದ ಸಿಎಂ!
ಕನ್ನಡ ರಾಜ್ಯ 69 ವರ್ಷಗಳನ್ನು ಪೂರೈಸಿ, 70ನೇ ವರ್ಷಕ್ಕೆ ಕಾಲಿಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಈ ಸಂದರ್ಭದಲ್ಲಿ ಕನ್ನಡ ಏಕೀಕರಣಕ್ಕಾಗಿ ಹೋರಾಟ ನಡೆಸಿದ ಮಹನೀಯರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯ ಎಂದು ಒತ್ತಿ ಹೇಳಿದರು. ಕನ್ನಡ ನಾಡು-ನುಡಿಗೆ ಕೊಡುಗೆ ನೀಡಿದವರನ್ನು ಸ್ಮರಿಸುವ ಮೂಲಕ ರಾಜ್ಯದ ಇತಿಹಾಸವನ್ನು ಗೌರವಿಸಬೇಕು ಎಂಬುದು ಅವರ ಸಂದೇಶವಾಗಿತ್ತು. ಸಾವಿರಾರು ವರ್ಷಗಳ ಇತಿಹಾಸವುಳ್ಳ ಕನ್ನಡ ಭಾಷೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ಆಗ್ರಹಿಸಿದರು.

ಹಿಂದಿ ಹೇರಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಕಿಡಿ!
ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಭಾಷಾ ಸಮಸ್ಯೆಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು. ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳು ನಮ್ಮ ಮಕ್ಕಳ ಪ್ರತಿಭೆಯನ್ನು ದುರ್ಬಲಗೊಳಿಸುತ್ತಿವೆ ಎಂದು ಆರೋಪಿಸಿದರು. ಹೀಗಾಗಿ ಮಾತೃಭಾಷೆಯಲ್ಲಿ ಶಿಕ್ಷಣವನ್ನು ಕಡ್ಡಾಯವಾಗಿ ಜಾರಿಗೆ ತರಬೇಕು ಎಂಬ ಬೇಡಿಕೆ ಇಟ್ಟರು. ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು. ಹಿಂದಿ ಭಾಷೆಯನ್ನು ಹೇರಲು ನಿರಂತರ ಪ್ರಯತ್ನ ನಡೆಯುತ್ತಿದೆ ಎಂದು ಟೀಕಿಸಿ, ಹಿಂದಿ ಅಭಿವೃದ್ಧಿಗೆ ಮಾತ್ರ ಅನುದಾನ ನೀಡಲಾಗುತ್ತಿದೆ ಎಂಬುದನ್ನು ಎತ್ತಿ ತೋರಿಸಿದರು. ಇದು ಕರ್ನಾಟಕ ವಿರೋಧಿ ನೀತಿ ಎಂದು ಕರೆಯಬೇಕಾದ್ದು, ಎಲ್ಲರೂ ಇದನ್ನು ಖಂಡಿಸಬೇಕು ಎಂದು ಕರೆ ನೀಡಿದರು.

ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ತೀವ್ರ ವಾಗ್ದಾಳಿ!
ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದರು. ರಾಜ್ಯದ ಅಭಿವೃದ್ಧಿಗೆ ಬೇಕಾದ ಯೋಜನೆಗಳು ಕೇಂದ್ರದಿಂದ ಸಿಗುತ್ತಿಲ್ಲ ಎಂದು ದೂರಿದರು. ಆದರೆ ನಮ್ಮ ಸರ್ಕಾರ ಜನರಲ್ಲಿ ಕನ್ನಡ ಪ್ರೀತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿಕೊಂಡರು. ಉದಾಹರಣೆಗೆ, ವಿಧಾನಸೌಧದಲ್ಲಿ ಭುವನೇಶ್ವರಿ ದೇವಿಯ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಕರ್ನಾಟಕದ ವಾಣಿಜ್ಯ ಮಳಿಗೆಗಳಲ್ಲಿ ನಾಮಫಲಕಗಳಲ್ಲಿ 60 ಪ್ರತಿಶತ ಕನ್ನಡವನ್ನು ಕಡ್ಡಾಯಗೊಳಿಸಲಾಗಿದೆ ಎಂದರು.

ಸಿಎಂ ಸಿದ್ದರಾಮಯ್ಯ ಭಾಷಣದಲ್ಲಿ ಬೂಕರ್ ಪ್ರಶಸ್ತಿ ವಿಜೇತೆ ಭಾನು ಮುಷ್ತಾಕ್ ಅವರನ್ನು ನೆನೆದು ಅವರಿಗೆ ಅಭಿನಂದನೆ ಸಲ್ಲಿಸಿದರು. ಕನ್ನಡ ಸಾಹಿತ್ಯದ ಹೆಮ್ಮೆಯಾಗಿರುವ ಭಾನು ಅವರ ಸಾಧನೆಯು ರಾಜ್ಯಕ್ಕೆ ಗರ್ವ ತಂದಿದೆ ಎಂದು ಹೇಳಿದರು. ಒಟ್ಟಾರೆ, ಸಿಎಂ ಸಿದ್ದರಾಮಯ್ಯ ಅವರ ಭಾಷಣವು ಕನ್ನಡದ ಗೌರವವನ್ನು ಕಾಪಾಡುವ, ಭಾಷಾ ನೀತಿಯಲ್ಲಿ ಸಮಾನತೆ ಬೇಡುವ ಮತ್ತು ರಾಜ್ಯದ ಅಭಿವೃದ್ಧಿಗಾಗಿ ಹೋರಾಡುವ ಸಂದೇಶವನ್ನು ಒಳಗೊಂಡಿತ್ತು. ಈ ರಾಜ್ಯೋತ್ಸವವು ಕನ್ನಡಿಗರಲ್ಲಿ ಒಗ್ಗಟ್ಟನ್ನು ಬೆಳೆಸಲಿ ಎಂಬುದು ಅವರ ಆಶಯವಾಗಿತ್ತು.

The post ಹಿಂದಿ ಹೇರಿಕೆ ವಿರುದ್ಧ ಸಿಡಿದೆದ್ದ ಸಿಎಂ; ಕನ್ನಡ ರಾಜ್ಯೋತ್ಸವದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ appeared first on Good News 24x7.

]]>
ಭಾರತ-ಪಾಕ್ ಮ್ಯಾಚ್ ನೋಡಲ್ಲ ಎಂದ ಪ್ರದೀಪ್ ಈಶ್ವರ್, ಕೇಂದ್ರ ಸರ್ಕಾರ ವಿರುದ್ಧ ಕಿಡಿ ಕಾರಿದ MLA ಪ್ರದೀಪ್ ಈಶ್ವರ್ https://www.goodnews24x7.com/bharata-pak-myac-no%e1%b8%8dalla-enda-pradip-isvar-kendra-sarkara-viruddha-ki%e1%b8%8di-karida-mla-pradip-isvar-asiacupindiapakistanbengalurumlapradeepeshwarcentralgovernmentteamagainstma/ Sun, 14 Sep 2025 13:01:19 +0000 https://www.goodnews24x7.com/?p=7544 ಬದ್ಧ ವೈರಿಯಾಗಿರುವ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಇವತ್ತು ಏಷ್ಯಾಕಪ್​ ಟಿ20 ಪಂದ್ಯವಾಡಲಿದೆ. ಈಗಾಗಲೇ ಎರಡು ತಂಡಗಳು ಭಾರೀ ಸಿದ್ಧತೆ ನಡೆಸಿದ್ದು ಇನ್ನೇನು ಕೆಲವೇ ಗಂಟೆಗಳಲ್ಲಿ ಪಂದ್ಯ ಆರಂಭವಾಗಲಿದೆ. ಬೆಂಗಳೂರು: ಬದ್ಧ ವೈರಿಯಾಗಿರುವ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಇವತ್ತು ಏಷ್ಯಾಕಪ್​…

The post ಭಾರತ-ಪಾಕ್ ಮ್ಯಾಚ್ ನೋಡಲ್ಲ ಎಂದ ಪ್ರದೀಪ್ ಈಶ್ವರ್, ಕೇಂದ್ರ ಸರ್ಕಾರ ವಿರುದ್ಧ ಕಿಡಿ ಕಾರಿದ MLA ಪ್ರದೀಪ್ ಈಶ್ವರ್ appeared first on Good News 24x7.

]]>

ಬದ್ಧ ವೈರಿಯಾಗಿರುವ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಇವತ್ತು ಏಷ್ಯಾಕಪ್​ ಟಿ20 ಪಂದ್ಯವಾಡಲಿದೆ. ಈಗಾಗಲೇ ಎರಡು ತಂಡಗಳು ಭಾರೀ ಸಿದ್ಧತೆ ನಡೆಸಿದ್ದು ಇನ್ನೇನು ಕೆಲವೇ ಗಂಟೆಗಳಲ್ಲಿ ಪಂದ್ಯ ಆರಂಭವಾಗಲಿದೆ.

ಬೆಂಗಳೂರು: ಬದ್ಧ ವೈರಿಯಾಗಿರುವ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಇವತ್ತು ಏಷ್ಯಾಕಪ್​ ಟಿ20 ಪಂದ್ಯವಾಡಲಿದೆ. ಈಗಾಗಲೇ ಎರಡು ತಂಡಗಳು ಭಾರೀ ಸಿದ್ಧತೆ ನಡೆಸಿದ್ದು ಇನ್ನೇನು ಕೆಲವೇ ಗಂಟೆಗಳಲ್ಲಿ ಪಂದ್ಯ ಆರಂಭವಾಗಲಿದೆ. ಪಾಕ್ ವಿರುದ್ಧ ಭಾರತ ಅಖಾಡಕ್ಕೆ ಇಳಿಯಬಾರದು ಎಂದು ಹಲವೆಡೆ ವಿರೋಧ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಈ ಸಂಬಂಧ ಶಾಸಕ ಪ್ರದೀಪ್ ಈಶ್ವರ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಭಾರತ ಹಾಗೂ ಪಾಕಿಸ್ತಾನದ ನಡುವಿನ ಪಂದ್ಯವನ್ನು ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ನಿಲ್ಲಿಸಬಹುದಿತ್ತು. ಇವರು ಯಾವ ಮುಖ ಇಟ್ಟುಕೊಂಡು ಮ್ಯಾಚ್ ಆಡಿಸುತ್ತಿದ್ದಾರೆ. ಈ ಪಂದ್ಯವನ್ನು ರದ್ದು ಮಾಡಬೇಕಿತ್ತು. ಪಹಲ್ಗಾಮ್ ಘಟನೆಯ ನೋವು ನಮ್ಮಲ್ಲಿ ಇನ್ನು ಹಾಗೇ ಇದೆ ಎಂದು ಹೇಳಿದ್ದಾರೆ.
ಕೇಂದ್ರದ ಗೃಹ ಮಂತ್ರಿ ಅಮಿತ್ ಶಾ ಮಗ ಜೈಶಾಗೆ ಬ್ಯುಸಿನೆಸ್​ ಮುಖ್ಯ. ಇಲ್ಲಿ ವಿಪಕ್ಷ ನಾಯಕ ಆರ್. ಅಶೋಕ್, ಬಿ.ವೈ ವಿಜಯೇಂದ್ರ, ಶಾಸಕ ಬಸನಗೌಡ ಯತ್ನಾಳ್ ಅವರು ಪಾಕಿಸ್ತಾನ ಅಂತ ಬೊಬ್ಬೆ ಹಾಕುತ್ತಾರೆ. ಇವರಿಗೆ ಅದೇ ಧಮ್ಮು, ತಾಕತ್ ಇದ್ದರೇ ಕೇಂದ್ರ ಸರ್ಕಾರಕ್ಕೆ ಹೇಳಿ ಮ್ಯಾಚ್ ರದ್ದು ಮಾಡಿಸಲಿ. ಒಂದು ವೇಳೆ ಕೇಂದ್ರದಲ್ಲಿ ನಮ್ಮ ಸರ್ಕಾರ ಇದ್ದಿದ್ರೆ ಪಂದ್ಯ ರದ್ದು ಮಾಡಿಸುತ್ತಿದ್ದೇವು. ಪಹಲ್ಗಾಮ್ ಘಟನೆ ಇನ್ನೂ ಮರೆತಿಲ್ಲ, ನೋವಿದೆ. ಅದಕ್ಕಾಗಿ ಇಂದಿನ ಮ್ಯಾಚ್ ನೋಡಲ್ಲ ಎಂದು ಎಂಎಲ್​ಎ ಪ್ರದೀಪ್ ಈಶ್ವರ್​ ಅವರು ಹೇಳಿದ್ದಾರೆ.

ಕಳೆದ ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಮೃತಪಟ್ಟಿದ್ದರು. ಇದರಲ್ಲಿ ಕರ್ನಾಟಕದವರು ಸೇರಿದ್ದಾರೆ. ಪಹಲ್ಗಾಮ್ ದಾಳಿಗೆ ಪಾಕಿಸ್ತಾನವೇ ಕಾರಣ. ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷ ಕೂಡ ನಡೆದಿತ್ತು. ಈ ಎಲ್ಲಾ ಬೆಳವಣಿಗಳ ನಡುವೆ ಪಾಕ್ ವಿರುದ್ಧ ಭಾರತ ಪಂದ್ಯವಾಡುತ್ತಿರುವುದಕ್ಕೆ ವಿರೋಧ ಕೇಳಿ ಬರುತ್ತಿದೆ.

The post ಭಾರತ-ಪಾಕ್ ಮ್ಯಾಚ್ ನೋಡಲ್ಲ ಎಂದ ಪ್ರದೀಪ್ ಈಶ್ವರ್, ಕೇಂದ್ರ ಸರ್ಕಾರ ವಿರುದ್ಧ ಕಿಡಿ ಕಾರಿದ MLA ಪ್ರದೀಪ್ ಈಶ್ವರ್ appeared first on Good News 24x7.

]]>
ಮೈಸೂರು-ಕುಶಾಲನಗರ ರಸ್ತೆ ಯೋಜನೆ ಕೇಂದ್ರ ಸಚಿವರಿಗೆ ಸಂಸದ ಯದುವೀರ್‌ ಮನವಿ. https://www.goodnews24x7.com/mp-yaduveer-appeals-to-union-minister-for-mysore-kushalnagar-road-project/ Fri, 01 Aug 2025 05:58:06 +0000 https://www.goodnews24x7.com/?p=5211 ಮೈಸೂರು :  ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಹೆಚ್ಚುವರಿ ಸಂಪರ್ಕ ಸೇವೆ ಕಲ್ಪಿಸಲು ಬದ್ಧವಾಗಿರುವ ಕೇಂದ್ರ ಸರ್ಕಾರ, ಅತಿ ಕೂಡಲೇ ಮೈಸೂರು-ಕುಶಾಲನಗರ ಹೆದ್ದಾರಿಯ ಎರಡನೇ ಹಂತದ ಯೋಜನೆ ಚಾಲನೆಗೆ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ದಟ್ಟವಾಗಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ…

The post ಮೈಸೂರು-ಕುಶಾಲನಗರ ರಸ್ತೆ ಯೋಜನೆ ಕೇಂದ್ರ ಸಚಿವರಿಗೆ ಸಂಸದ ಯದುವೀರ್‌ ಮನವಿ. appeared first on Good News 24x7.

]]>

ಮೈಸೂರು :  ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಹೆಚ್ಚುವರಿ ಸಂಪರ್ಕ ಸೇವೆ ಕಲ್ಪಿಸಲು ಬದ್ಧವಾಗಿರುವ ಕೇಂದ್ರ ಸರ್ಕಾರ, ಅತಿ ಕೂಡಲೇ ಮೈಸೂರು-ಕುಶಾಲನಗರ ಹೆದ್ದಾರಿಯ ಎರಡನೇ ಹಂತದ ಯೋಜನೆ ಚಾಲನೆಗೆ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ದಟ್ಟವಾಗಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.

ನವದೆಹಲಿಯಲ್ಲಿ ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ನಂತರ ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಸಂಸದ ಯದುವೀರ್, 2023ರ ಜುಲೈ 19ರಂದು ಯೋಜನೆ ಆರಂಭಿಸಲು ಕ್ರಮ ಕೈಗೊಳ್ಳಲಾಗಿತ್ತು. ಎರಡನೇ ಪ್ಯಾಕೇಜ್‌ನಲ್ಲಿ 22.70 ಕಿಲೋಮೀಟರ್‌  ನಿರ್ಮಿಸುವ ಯೋಜನೆ ರೂಪಿಸಲಾಗಿತ್ತು. ಇದಕ್ಕಾಗಿ ಈಗಾಗಲೇ 14.522 ಕಿಲೋ ಮೀಟರ್‌ ಭೂ ಸ್ವಾಧೀನಪಡಿಸಿಕೊಳ್ಳಲಾಗಿದೆ. ಬಾಕಿ ಉಳಿದಿರುವ 8.178 ಕಿಲೋಮೀಟರ್‌ ಅರಣ್ಯ ಭೂಮಿ ಸ್ವಾಧೀನಕ್ಕೆ ಅರಣ್ಯ ಇಲಾಖೆಯ ಅನುಮೋದನೆ ಅಗತ್ಯವಿದೆ ಎಂದು ವಿವರಿಸಿದ್ದಾರೆ.

ಈ ಸಂದರ್ಭದಲ್ಲಿ ಯೋಜನೆಯ ಘೋಷಣೆಗೆ ಸಚಿವಾಲಯ ಮುಂದಾಗಬೇಕು. ಕಾಲಮಿತಿಯಲ್ಲಿ ಅರಣ್ಯ ಇಲಾಖೆಯ ಅನುಮೋದನೆಯನ್ನು ಪಡೆದುಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಕೇಂದ್ರ ಸಚಿವರು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕೆಂದು ಮನವಿ ಸಲ್ಲಿಸಲಾಗಿದೆ ಎಂದು ಯದುವೀರ್ ಒಡೆಯರ್‌ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಕೂಡಲೇ ಯೋಜನೆಯ ಆರಂಭದ ದಿನಾಂಕ ಘೋಷಣೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ನಿತಿನ್‌ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದ್ದೇವೆ . ಮನವಿ ಪತ್ರ ಸ್ವೀಕರಿಸಿದ ನಂತರ ನಿತಿನ್‌ ಗಡ್ಕರಿ ಅವರು ಸೂಕ್ತ ಕ್ರಮ ಕೈಗೊಳುವ ಭರವಸೆ ನೀಡಿದ್ದಾರೆ ಎಂದು ಸಂಸದ ಯದುವೀರ್‌ ಒಡೆಯರ್‌ ಮಾಹಿತಿ ನೀಡಿದ್ದಾರೆ.

ಹುಲಿ ಕಾರಿಡಾರ್‌ ರಕ್ಷಣೆಗೆ ತನಿಖೆಗಾಗಿ ಮಾರ್ಗಸೂಚಿ

ಕರ್ನಾಟಕದಲ್ಲಿ ದೀರ್ಘಕಾಲಿನ ಹುಲಿ ಆವಾಸಸ್ಥಾನ ಬಲಪಡಿಸಲು ವಿಶೇಷ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ ಎಂದು ಸಂಸದ ಯದುವೀರ್‌ ತಿಳಿಸಿದ್ದಾರೆ.

ಸಂಸತ್‌ ಅಧಿವೇಶನದಲ್ಲಿ ಸಂಸದ ಯದುವೀರ್‌ ಈ ಕುರಿತು ಕೇಂದ್ರ ಅರಣ್ಯ ಸಚಿವರಿಗೆ ಪ್ರಶ್ನೆ ಕೇಳಿದ ಸಂದರ್ಭದಲ್ಲಿ ಈ ಉತ್ತರ ನೀಡಲಾಗಿದೆ.

ಮಹದೇಶ್ವರ ಬೆಟ್ಟಗಳ ಅಭಯಾರಣ್ಯದಲ್ಲಿ ಕಾಡು ಪ್ರಾಣಿಗಳ ಸಾವು, ವನ್ಯಜೀವಿ, ವಿಧಿ ವಿಜ್ಞಾನ, ವಿಷಶಾಸ್ತ್ರದ ಬಗ್ಗೆ ಮಾರ್ಗಸೂಚಿಗಳನ್ನು ಹೊಂದಿರುವ ಬಗ್ಗೆ  ಮಾಹಿತಿ ಕೋರಲಾಗಿತ್ತು ಎಂದು ಸಂಸದ ಯದುವೀರ್ ವಿವರಿಸಿದ್ದಾರೆ.

ಪ್ರಾಜೆಕ್ಟ್‌ ಟೈಗರ್‌ ಯೋಜನೆಯಡಿಯಲ್ಲಿ ಹುಲಿ ಮೀಸಲು ಪ್ರದೇಶಗಳಲ್ಲಿ ಆವಾಸಸ್ಥಾನ ರಕ್ಷಣೆ, ಜಾಗೃತಿ, ಸಮುದಾಯ ಜಾಗರೂಕತೆಗೆ ಹೆಚ್ಚಿನ ಹಣ ಒದಗಿಸಲಾಗುತ್ತಿದೆ ಎಂದು ಸಂಸದ ಯದುವೀರ್‌ ತಿಳಿಸಿದ್ದಾರೆ ಎಂದರು.

The post ಮೈಸೂರು-ಕುಶಾಲನಗರ ರಸ್ತೆ ಯೋಜನೆ ಕೇಂದ್ರ ಸಚಿವರಿಗೆ ಸಂಸದ ಯದುವೀರ್‌ ಮನವಿ. appeared first on Good News 24x7.

]]>
ಸಿಗಂದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ : ಸಿಎಂ ಸಿದ್ದರಾಮಯ್ಯ ಆಕ್ರೋಶ. https://www.goodnews24x7.com/%e0%b2%b8%e0%b2%bf%e0%b2%97%e0%b2%82%e0%b2%a6%e0%b3%82%e0%b2%b0%e0%b3%81-%e0%b2%b8%e0%b3%87%e0%b2%a4%e0%b3%81%e0%b2%b5%e0%b3%86-%e0%b2%89%e0%b2%a6%e0%b3%8d%e0%b2%98%e0%b2%be%e0%b2%9f%e0%b2%a8%e0%b3%86/ Mon, 14 Jul 2025 09:58:28 +0000 https://www.goodnews24x7.com/?p=5102 ಬೆಂಗಳೂರು: ಸಿಗಂದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಸೇತುವೆ ಉದ್ಘಾಟನೆಗೆ ಬೇರೆ ಸಮಯ ನಿಗದ ಮಾಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ…

The post ಸಿಗಂದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ : ಸಿಎಂ ಸಿದ್ದರಾಮಯ್ಯ ಆಕ್ರೋಶ. appeared first on Good News 24x7.

]]>

ಬೆಂಗಳೂರು: ಸಿಗಂದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಸೇತುವೆ ಉದ್ಘಾಟನೆಗೆ ಬೇರೆ ಸಮಯ ನಿಗದ ಮಾಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇಂದು ಆ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರದಿಂದ ಯಾರು ಕೂಡಾ ಭಾಗಿಯಾಗುತ್ತಿಲ್ಲ. ನಾನೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಫೋನ್ ಮಾಡಿ ಬೇರೆ ದಿನ ನಿಗದಿ ಮಾಡುವಂತೆ ಕೇಳಿಕೊಂಡಿದ್ದೆ. ಬಳಿಕ ಪತ್ರವನ್ನು ಬರೆದಿದ್ದೆ. ಅದಕ್ಕೆ ಗಡ್ಕರಿ ಅವರು ಕಾರ್ಯಕ್ರಮ ಮುಂದಕ್ಕೆ ಹಾಕೋದಾಗಿ ಹೇಳಿದರು. ಆದರೆ ಇಲ್ಲಿನ ಬಿಜೆಪಿ ನಾಯಕರು ಅವರಿಗೆ ಒತ್ತಡ ಹಾಕಿರಬಹುದು ಅನ್ನಿಸುತ್ತೆ. ಅವರು ನನಗೆ ಏನು ಹೇಳದೇ ಮಾಡುತ್ತಿದೆ ಎಂದು ಕಿಡಿಕಾರಿದರು.

ನಾನು ಮೊದಲೇ ನಿಗದಿಯಾಗಿರುವ ಇಂಡಿ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ. ಪ್ರತಿಭಟನಾರ್ಥವಾಗಿ ಸಿಗಂದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮಕ್ಕೆ ಯಾರು ಹೋಗುತ್ತಿಲ್ಲ. ಲೋಕೋಪಯೋಗಿ ಸಚಿವರು, ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಸಾಗರ ಶಾಸಕರು ಹೋಗ್ತಿಲ್ಲ.ಕೇಂದ್ರ ಸರ್ಕಾರದವರು ಕರೆಯಬೇಕಿತ್ತು. ಸರ್ಕಾರಗಳ ನಡುವೆ ಹೀಗೆ ತಿಕ್ಕಾಟವನ್ನು ಪ್ರಾರಂಭಿಸಿರುವುದು ಕೇಂದ್ರ ಸರ್ಕಾರವೇ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಶಿಷ್ಟಾಚಾರ ಪಾಲನೆ ಮಾಡದೇ ಉಲ್ಲಂಘನೆ ಮಾಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.

ಈ ಕಾರ್ಯಕ್ರಮ ನಮ್ಮ ರಾಜ್ಯದಲ್ಲಿ ನಡೆಯುತ್ತಿದ್ದು ಒಕ್ಕೂಟ ವ್ಯವಸ್ಥೆಯಲ್ಲಿ ನಾವು ಇದ್ದೇವೆ. ಅನೇಕ ಕಾರ್ಯಕ್ರಮಗಳಿಗೆ ರಾಜ್ಯ ಸರ್ಕಾರ 75% ಹಣ ಕೊಟ್ಟರೂ ಎಲ್ಲಾ ಕಾರ್ಯಕ್ರಮಕ್ಕೆ ಕೇಂದ್ರದವರನ್ನ ಕರೆಯುತ್ತೇವೆ. ರೈಲ್ವೇಯಲ್ಲಿ ಜಾಗ, 50% ಹಣ ನಾವೇ ಕೊಡುತ್ತೇವೆ. ಕೇಂದ್ರ ಸರ್ಕಾರದವರು ಶಿಷ್ಟಾಚಾರದ ಪ್ರಕಾರ ನನ್ನನ್ನ, ಇಲಾಖೆ ಮಂತ್ರಿ, ಉಸ್ತುವಾರಿ ಮಂತ್ರಿ, ಶಾಸಕರನ್ನ ಕರೆಯಬೇಕಿತ್ತು. ಆದರೆ ಯಾರನ್ನು ಕರೆದಿಲ್ಲ ಎಂದು ಸಿಟ್ಟು ಹೊರಹಾಕಿದರು.

The post ಸಿಗಂದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ : ಸಿಎಂ ಸಿದ್ದರಾಮಯ್ಯ ಆಕ್ರೋಶ. appeared first on Good News 24x7.

]]>
ಆ.15 ರಿಂದ ಫಾಸ್ಟ್ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಆರಂಭ: ಸುಗಮ ಸಂಚಾರಕ್ಕೆ ಇದು ಸಹಕಾರಿ! https://www.goodnews24x7.com/fastag-based-annual-pass-to-start-from-august-15-this-will-help-in-smooth-traffic/ Thu, 19 Jun 2025 11:26:18 +0000 https://www.goodnews24x7.com/?p=4492 ನವದೆಹಲಿ: ಕೇಂದ್ರ ಸರ್ಕಾರವು ಆಗಸ್ಟ್ 15 ರಿಂದ ಸುಗಮ ಹಾಗೂ ಸರಾಗವಾದ ಹೆದ್ದಾರಿ ಪ್ರಯಾಣಕ್ಕೆ 3,000 ರೂ ಮೌಲ್ಯದ ಫಾಸ್ಟ್ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಪರಿಚಯಿಸಲು ಸಿದ್ಧವಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬುಧವಾರ…

The post ಆ.15 ರಿಂದ ಫಾಸ್ಟ್ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಆರಂಭ: ಸುಗಮ ಸಂಚಾರಕ್ಕೆ ಇದು ಸಹಕಾರಿ! appeared first on Good News 24x7.

]]>

ನವದೆಹಲಿ: ಕೇಂದ್ರ ಸರ್ಕಾರವು ಆಗಸ್ಟ್ 15 ರಿಂದ ಸುಗಮ ಹಾಗೂ ಸರಾಗವಾದ ಹೆದ್ದಾರಿ ಪ್ರಯಾಣಕ್ಕೆ 3,000 ರೂ ಮೌಲ್ಯದ ಫಾಸ್ಟ್ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಪರಿಚಯಿಸಲು ಸಿದ್ಧವಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬುಧವಾರ ತಿಳಿಸಿದ್ದಾರೆ.
X ಹ್ಯಾಂಡಲ್ ಪೋಸ್ಟ್ ವೊಂದನ್ನು ಮಾಡಿರುವ ಅವರು, ಪಾಸ್ ಸಕ್ರಿಯಗೊಳಿಸಿದ ದಿನಾಂಕದಿಂದ ಒಂದು ವರ್ಷ ಅಥವಾ 200 ಟ್ರಿಪ್ಗಳವರೆಗೆ ಯಾವುದು ಮೊದಲು ಬರುತ್ತದೆಯೋ ಅದು ಮಾನ್ಯವಾಗಿರುವಂತೆ ಪಾಸ್ ರೂಪಿಸಲಾಗಿದೆ ಎಂದು ಗಡ್ಕರಿ ಅವರು ಹೇಳಿದ್ದಾರೆ. ಕಾರುಗಳು, ಜೀಪ್ಗಳು ಮತ್ತು ವ್ಯಾನ್ಗಳಂತಹ ವಾಣಿಜ್ಯೇತರ ಖಾಸಗಿ ವಾಹನಗಳಿಗೆ ಮಾತ್ರ ಈ ಪಾಸ್ ವಿನ್ಯಾಸಗೊಳಿಸಲಾಗಿದೆ ಎಂದು ತಮ್ಮ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಈ ಹೊಸ ಆ್ಯಪ್ ಎಲ್ಲಿ ಲಭ್ಯ?

 

 

 

 

 

ಸಕ್ರಿಯಗೊಳಿಸುವಿಕೆ ಮತ್ತು ನವೀಕರಣಕ್ಕಾಗಿ ಮೀಸಲಾದ ಲಿಂಕ್ ಶೀಘ್ರದಲ್ಲೇ ರಾಜ್ಮಾರ್ಗ್ ಯಾತ್ರಾ ಅಪ್ಲಿಕೇಶನ್ನಲ್ಲಿ ಹಾಗೂ NHAI ಮತ್ತು MoRTH ನ ಅಧಿಕೃತ ವೆಬ್ಸೈಟ್ಗಳಲ್ಲಿ ಲಭ್ಯವಿರುತ್ತದೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.  60 ಕಿ.ಮೀ ವ್ಯಾಪ್ತಿಯೊಳಗೆ ಇರುವ ಟೋಲ್ ಪ್ಲಾಜಾಗಳಿಗೆ ಸಂಬಂಧಿಸಿದ ದೀರ್ಘಕಾಲದ ಕಳವಳಗಳನ್ನು ಈ ನೀತಿ ಪರಿಹರಿಸುತ್ತದೆ ಮತ್ತು ಒಂದೇ ಕೈಗೆಟುಕುವ ವಹಿವಾಟಿನ ಮೂಲಕ ಟೋಲ್ ಪಾವತಿಗಳನ್ನು ಸರಳಗೊಳಿಸುತ್ತದೆ ಎಂದು ಕೇಂದ್ರದ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವರು ಸ್ಪಷ್ಟಪಡಿಸಿದ್ದಾರೆ.
“ಕಾಯುವ ಸಮಯ ಹಾಗೂ ದಟ್ಟಣೆಯನ್ನು ಕಡಿಮೆ ಮಾಡುವುದು ಮತ್ತು ಟೋಲ್ ಪ್ಲಾಜಾಗಳಲ್ಲಿ ವಿವಾದಗಳನ್ನು ಕಡಿಮೆ ಮಾಡುವ ಮೂಲಕ, ವಾರ್ಷಿಕ ಪಾಸ್ ಲಕ್ಷಾಂತರ ಖಾಸಗಿ ವಾಹನ ಮಾಲೀಕರಿಗೆ ವೇಗವಾದ ಮತ್ತು ಸುಗಮ ಪ್ರಯಾಣದ ಅನುಭವವನ್ನು ನೀಡುವ ಗುರಿಯನ್ನು ಹೊಂದಿದೆ ಎಂದು ಸಚಿವರು ಹೇಳಿದ್ದಾರೆ.

ಈ ಪಾಸ್ ನಿಂದ ಆಗುವ ಲಾಭವೇನು?  ವಾರ್ಷಿಕ ಪಾಸ್ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಗಮ ಮತ್ತುಸರಾಗ ಹಾಗೂ ಕಡಿಮೆ ವೆಚ್ಚದ ಪರಿಣಾಮಕಾರಿ ಪ್ರಯಾಣವನ್ನು ಸಕ್ರಿಯಗೊಳಿಸುತ್ತದೆ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.

The post ಆ.15 ರಿಂದ ಫಾಸ್ಟ್ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಆರಂಭ: ಸುಗಮ ಸಂಚಾರಕ್ಕೆ ಇದು ಸಹಕಾರಿ! appeared first on Good News 24x7.

]]>
HAL ಯಾವುದೇ ಕಾರಣಕ್ಕೂ ಇದರ ಸ್ಥಳಾಂತರಕ್ಕೆ ಅವಕಾಶ ಕೊಡಬಾರದು ; ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್. https://www.goodnews24x7.com/hal-should-not-be-allowed-to-move-under-any-circumstances-mp-yaduveer-krishnadatta-chamaraja-wodeyar/ Thu, 29 May 2025 11:50:49 +0000 https://www.goodnews24x7.com/?p=4124 ಮೈಸೂರು :- ಹೆಚ್ ಎಎಲ್ ನಮ್ಮ ರಾಜ್ಯದ ಹೆಮ್ಮೆಯಾಗಿದೆ ಇದನ್ನು ನಿರ್ಮಾಣ ಮಾಡಿರು ವುದೇ ಕನ್ನಡಿಗರು ಜವಾಹರಲಾಲ್ ನೆಹರೂ ಅವರಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ…

The post HAL ಯಾವುದೇ ಕಾರಣಕ್ಕೂ ಇದರ ಸ್ಥಳಾಂತರಕ್ಕೆ ಅವಕಾಶ ಕೊಡಬಾರದು ; ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್. appeared first on Good News 24x7.

]]>

ಮೈಸೂರು :- ಹೆಚ್ ಎಎಲ್ ನಮ್ಮ ರಾಜ್ಯದ ಹೆಮ್ಮೆಯಾಗಿದೆ ಇದನ್ನು ನಿರ್ಮಾಣ ಮಾಡಿರು ವುದೇ ಕನ್ನಡಿಗರು ಜವಾಹರಲಾಲ್ ನೆಹರೂ ಅವರಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹೆಚ್ ಎಚ್ ಎಲ್ ಅನ್ನು ಕೊಂಡೊಯ್ಯಬೇಕು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೇರಿದಂತೆ ಹಲವಾರು ರಾಜ್ಯಗಳು ಮನವಿ ಸಲ್ಲಿಸಿವೆ. ಆದರೆ, ಇದನ್ನು ಯಾವುದೇ ಕಾರಣಕ್ಕೂ ಕರ್ನಾಟಕ ದಿಂದ ಹೊರಹೋಗುವುದಕ್ಕೆ ಬಿಡುವುದಿಲ್ಲ ಎಂದರು. ಇಂಥ ಸಂಸ್ಥೆಯು ಇಲ್ಲಿಯೇ ಇರಬೇಕು. ಇದರ ಅಭಿವೃದ್ಧಿಗೆ ಎಲ್ಲಾ ಸೌಕರ್ಯಗಳನ್ನು ಒದಗಿಸಲು ನಾವು ಸಜ್ಜಾಗಿದ್ದೇವೆ ಎಂದು ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವವರು ಕೇಂದ್ರದ ಮೇಲೆ ಒತ್ತಡ ಹೇರಬೇಕು. ಕೇಂದ್ರ ಸರ್ಕಾರಕ್ಕೆ ನಾವು ಕೂಡ ಮನವರಿಕೆ ಮಾಡಿಕೊಡುತ್ತೇವೆ ಎಂದರು.

ನೀತಿ ಆಯೋಗದ ಸಭೆಗೆ ಮುಖ್ಯಮಂತ್ರಿಗಳು ಗೈರು ಹಾಜರಾಗಿದ್ದರು. ಈ ಸಭೆಯಲ್ಲಿ ಭಾಗ ವಹಿಸಿ ಕರ್ನಾಟಕದ ಪರವಾಗಿ ಮಾತನಾಡ ಬೇಕಿತ್ತು. ಆದರೆ ಈಗ ಕೇಂದ್ರದ ಮೇಲೆ ಆರೋಪ ಮಾಡುವುದು ಸರಿಯಲ್ಲ. ಈಗಾ ಗಲೇ ಗೈರು ಹಾಜರಿ ಬಗ್ಗೆ ಎಲ್ಲಾ ಕಡೆ ಪ್ರಶ್ನಿಸ ಲಾಗಿದೆ ಎಂದು ಯದುವೀರ್ ವಿವರಿಸಿ ದರು. ಕನ್ನಡಿಗರಿಂದ, ಕನ್ನಡಿಗರ ನಾಯಕತ್ವ | ದಲ್ಲಿ ಬೆಳೆದಿರುವ ಈ ಸಂಸ್ಥೆಯನ್ನು ಸಂರಕ್ಷಣೆ ಮಾಡ ಬೇಕು. ಹೆಚ್ ಎಎಲ್ ಕಾರ್ಯಾನೆಯಲ್ಲಿ ನಡೆಯು ತ್ತಿರುವ ಚಟುವಟಿಕೆಗಳು ಮುಂದುವರಿಯಲೇಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಸಂಸದರು ತಿಳಿಸಿದರು.

The post HAL ಯಾವುದೇ ಕಾರಣಕ್ಕೂ ಇದರ ಸ್ಥಳಾಂತರಕ್ಕೆ ಅವಕಾಶ ಕೊಡಬಾರದು ; ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್. appeared first on Good News 24x7.

]]>
ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ ನಾಯಕರ ಅಸಮಾಧಾನ. https://www.goodnews24x7.com/congress-leaders-express-displeasure-over-central-governments-ceasefire-agreement/ Tue, 13 May 2025 12:21:48 +0000 https://www.goodnews24x7.com/?p=3861 ಬೆಂಗಳೂರು: ಭಾರತೀಯ ಸೇನೆಯಿಂದ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆಯೇ ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮಾತನಾಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಭಾರತ-…

The post ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ ನಾಯಕರ ಅಸಮಾಧಾನ. appeared first on Good News 24x7.

]]>

ಬೆಂಗಳೂರು: ಭಾರತೀಯ ಸೇನೆಯಿಂದ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆಯೇ ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮಾತನಾಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಭಾರತ- ಪಾಕ್ ನಡುವಿನ ಯಾವ ಆಧಾರದ ಮೇಲೆ ಕದನ ವಿರಾಮ ಒಪ್ಪಿಕೊಂಡಿರಿ ಎಂಬುದನ್ನ ಪ್ರಧಾನಿ ಮೋದಿ ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದ್ದಾರೆ.
ಉಗ್ರರನ್ನು ನಾಶ ಮಾಡುತ್ತೇವೆ ಎಂದು ಮೋದಿ ಅವರು ಹೇಳಿದ್ದರು. ಹೀಗಾಗಿ ದೊಡ್ಡ ತೀರ್ಮಾನ ತೆಗದುಕೊಳ್ಳುವ ನಿರೀಕ್ಷೆ ಇತ್ತು , ಆದರೆ ಕದನ ವಿರಾಮ ಒಪ್ಪಿಕೊಂಡಿದ್ದಾರೆ. ಪ್ರಧಾನಿ ಮೋದಿ ರಾಜಕೀಯವಾಗಿ ಮಾತನಾಡುತ್ತಾರೆ, ಪಾಕಿಸ್ತಾನ ನಮ್ಮ ಮೇಲೂ ದಾಳಿ ಮಾಡಿದೆ. ಯಾವ ಆಧಾರದ ಮೇಲೆ ಕದನ ವಿರಾಮ ಒಪ್ಪಿಕೊಂಡರು ಎಂದು ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.

The post ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ ನಾಯಕರ ಅಸಮಾಧಾನ. appeared first on Good News 24x7.

]]>