chief minister Archives - Good News 24x7 https://www.goodnews24x7.com/tag/chief-minister/ Kannada Tue, 07 Apr 2026 13:19:31 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg chief minister Archives - Good News 24x7 https://www.goodnews24x7.com/tag/chief-minister/ 32 32 ಸಿದ್ದರಾಮಯ್ಯ ವಿರುದ್ಧದ ಆರೋಪ ಸಾಬೀತಿಗೆ ಮತ್ತೊಂದು ಅವಕಾಶ ಸಿಕ್ತು ಎಂದ ಸ್ನೇಹಮಯಿ ಕೃಷ್ಣ! https://www.goodnews24x7.com/9156-2snehamayi-krishna-says-he-has-got-another-chance-to-prove-the-charges-against-siddaramaiah/ Tue, 07 Apr 2026 13:17:30 +0000 https://www.goodnews24x7.com/?p=9156   ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬ ಅಕ್ರಮವಾಗಿ ನಿವೇಶನ ಪಡೆದಿದೆ ಎಂಬ ಆರೋಪದ ಪ್ರಕರಣದಲ್ಲಿ, ಲೋಕಾಯುಕ್ತ ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಇದೀಗ ಮೇಲ್ಮನವಿ ಸಲ್ಲಿಸಿದೆ. ಈ ಬೆಳವಣಿಗೆಯ ಕುರಿತು ದೂರುದಾರ…

The post ಸಿದ್ದರಾಮಯ್ಯ ವಿರುದ್ಧದ ಆರೋಪ ಸಾಬೀತಿಗೆ ಮತ್ತೊಂದು ಅವಕಾಶ ಸಿಕ್ತು ಎಂದ ಸ್ನೇಹಮಯಿ ಕೃಷ್ಣ! appeared first on Good News 24x7.

]]>

 

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬ ಅಕ್ರಮವಾಗಿ ನಿವೇಶನ ಪಡೆದಿದೆ ಎಂಬ ಆರೋಪದ ಪ್ರಕರಣದಲ್ಲಿ, ಲೋಕಾಯುಕ್ತ ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಇದೀಗ ಮೇಲ್ಮನವಿ ಸಲ್ಲಿಸಿದೆ. ಈ ಬೆಳವಣಿಗೆಯ ಕುರಿತು ದೂರುದಾರ ಹಾಗೂ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು . ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಲೋಕಾಯುಕ್ತದ ಬಿ ರಿಪೋರ್ಟ್​ ಅಂಗೀಕರಿಸಿದ ಆದೇಶವನ್ನು ಪ್ರಶ್ನಿಸಿ ಸ್ನೇಹಮಯಿ ಕೃಷ್ಣ ಈಗಾಗಲೇ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ.

ಇದೀಗ ಇಡಿ ಕೂಡ ಮೇಲ್ಮನವಿ ಸಲ್ಲಿಸಿರುವುದು ತಮ್ಮ ಹೋರಾಟಕ್ಕೆ ಪರೋಕ್ಷ ಬೆಂಬಲ ನೀಡಿದಂತಾಗಿದೆ ಎಂದು ಕೃಷ್ಣ ತಿಳಿಸಿದ್ದಾರೆ. ಒಂದು ತನಿಖಾ ಸಂಸ್ಥೆ ಸಾಕ್ಷಿಗಳಿಲ್ಲ ಎಂದು ಬಿ ರಿಪೋರ್ಟ್ ಸಲ್ಲಿಸಿದರೆ, ಮತ್ತೊಂದು ತನಿಖಾ ಸಂಸ್ಥೆ ಸಾಕ್ಷಿಗಳಿವೆ ಎಂದು ಹೇಳಿದಾಗ ನ್ಯಾಯಾಲಯವು ಅರ್ಜಿಯನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂದು ಅವರು ಹೇಳಿದ್ದಾರೆ.

ಇಡಿ ಮತ್ತು ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಎರಡೂ ಮೇಲ್ಮನವಿಗಳನ್ನು ಮಾನ್ಯ ಉಚ್ಚ ನ್ಯಾಯಾಲಯ ಒಟ್ಟಿಗೆ ವಿಚಾರಣೆ ನಡೆಸಿ, ಜನಪದ ವಿಶೇಷ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿ, ಸಿದ್ದರಾಮಯ್ಯ ಅವರ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಅವಕಾಶ ನೀಡುವ ವಿಶ್ವಾಸವಿದೆ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ. ಮೇಲ್ಮನವಿ ಸಲ್ಲಿಸಿದ ನಂತರ, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆ ದಿನಾಂಕ ನಿಗದಿಪಡಿಸಲಾಗುತ್ತದೆ. ನಂತರ ಸಾಕ್ಷಾಧಾರಗಳೊಂದಿಗೆ ವಾದ ವಿವಾದಗಳು ನಡೆಯಲಿವೆ.

 

The post ಸಿದ್ದರಾಮಯ್ಯ ವಿರುದ್ಧದ ಆರೋಪ ಸಾಬೀತಿಗೆ ಮತ್ತೊಂದು ಅವಕಾಶ ಸಿಕ್ತು ಎಂದ ಸ್ನೇಹಮಯಿ ಕೃಷ್ಣ! appeared first on Good News 24x7.

]]>
ನೇಮಕಾತಿಯಲ್ಲಿ ಎಸ್ಸಿಗೆ ಶೇ.17, ಎಸ್ಪಿಗೆ ಶೇ.7 ಮೀಸಲು ಕಲ್ಪಿಸಿ :ಉಗ್ರಪ್ಪ https://www.goodnews24x7.com/provide-17-reservation-for-sc-7-for-st-in-recruitment-ugrappa/ Sun, 01 Mar 2026 10:02:34 +0000 https://www.goodnews24x7.com/?p=8576 ಸರಕಾರಿ ಹುದ್ದೆಗಳಿಗೆ ನೇಮಕಾತಿ ಅಧಿ ಸೂಚನೆಯಲ್ಲಿ ಪರಿಶಿಷ್ಟ ಜಾತಿಗೆ ಶೇ.17 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ.7ರಷ್ಟು ಮೀಸಲು ಕಲ್ಪಿಸಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದರು. “ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗ ಳಾದರೂ ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸಾಮಾಜಿಕ…

The post ನೇಮಕಾತಿಯಲ್ಲಿ ಎಸ್ಸಿಗೆ ಶೇ.17, ಎಸ್ಪಿಗೆ ಶೇ.7 ಮೀಸಲು ಕಲ್ಪಿಸಿ :ಉಗ್ರಪ್ಪ appeared first on Good News 24x7.

]]>

ಸರಕಾರಿ ಹುದ್ದೆಗಳಿಗೆ ನೇಮಕಾತಿ ಅಧಿ ಸೂಚನೆಯಲ್ಲಿ ಪರಿಶಿಷ್ಟ ಜಾತಿಗೆ ಶೇ.17 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ.7ರಷ್ಟು ಮೀಸಲು ಕಲ್ಪಿಸಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದರು.
“ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗ ಳಾದರೂ ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸಾಮಾಜಿಕ ನ್ಯಾಯ ಸಿಕ್ಕಿಲ್ಲ. ಅಧಿಕಾರಕ್ಕೆ ಬಂದ ರಾಜಕೀಯ ಪಕ್ಷಗಳು ಅನ್ಯಾಯ ಮಾಡುತ್ತಲೇ ಬಂದಿವೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲು ನೀಡಬೇಕು ಎಂದು ಅಂಬೇಡ್ಕರ್ ಹೇಳಿದ್ದರೂ, ರಾಜಕೀಯ ಪಕ್ಷಗಳು ಈ ಎರಡೂ ಸಮುದಾಯಗಳನ್ನು ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿವೆ” ಎಂದು ಶನಿವಾರ ಸುದ್ದಿ ಗೋಷ್ಠಿಯಲ್ಲಿ ಕಿಡಿಕಾರಿದರು.
“ರಾಜ್ಯದಲ್ಲಿ 2.74 ಲಕ್ಷ ಹುದ್ದೆಗಳು ಖಾಲಿ ಇವೆ. ಆದರೀಗ ರಾಜ್ಯ ಸರಕಾರ 52 ಸಾವಿರ ಹುದ್ದೆಗಳನ್ನು ಹಳೇ ಮೀಸಲು ಅನ್ವ ಯ ಭರ್ತಿ ಮಾಡುವುದಾಗಿ ತಿಳಿಸಿದೆ. ಇದರಿಂದ 1600 ಪರಿಶಿಷ್ಟ ಪಂಗಡ ಮತ್ತು 2 ಸಾವಿರ ಪರಿಶಿಷ್ಟ ಜಾತಿಯ ಹುದ್ದೆಗಳು ವಂಚಿತವಾಗಲಿವೆ” ಎಂದು ಹೇಳಿದರು.

“ಬಸವರಾಜ ಬೊಮ್ಮಾಯಿ ಮುಖ್ಯ ಮಂತ್ರಿಗಳಾಗಿದ್ದಾಗ 2022ರಲ್ಲಿ ಪರಿಶಿಷ್ಟ ಜಾತಿಗೆ ಶೇ.2 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ.4 ಮೀಸಲು ಹೆಚ್ಚಿಸಿ ಶೇ.50ರಷ್ಟಿದ್ದ ಮೀಸಲನ್ನು ಒಟ್ಟಾರೆ ಶೇ.56ಕ್ಕೆ ಹೆಚ್ಚಳ ಮಾಡಿದರು. ಆದರೆ ಸಾಂವಿಧಾನಿಕ ಸಿಂಧುತ್ವ ಕೊಡಿಸುವ ಯಾವ ಮಾರ್ಗಗಳನ್ನು ಅನು ಸರಿಸಲಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.2023ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ರಾಜ್ಯದ ಸಂಸದರು ಪ್ರಧಾನ ಮಂತ್ರಿಗಳಿಗೆ ಮೀಸಲು ಹೆಚ್ಚಳದ ಬಗ್ಗೆ ಒತ್ತಡ ಹಾಕಬೇಕು. ಮೈಸೂರು ಸಂಸದ ಯದುವೀರ್, ಚಾಮರಾಜನಗರ ಹೆಚ್ಚು ಕಾಳಜಿ ವಹಿಸಬೇಕು. ಇಲ್ಲದಿದ್ದರೆ ಸಂಸದ ಸುನೀಲ್ ಬೋಸ್ ಈ ಬಗ್ಗೆ ಸಮುದಾಯ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದೆ.ವಿ.ಎಸ್.ಉಗ್ರಪ್ಪ, ಮಾಜಿ ಸಂಸದ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

9ನೇ ಶಡ್ಯೂಲ್ ಗೆ ಸೇರಿಸುವ ಸರಕಾರ ಕೂಡ ಇದರ ಬಗ್ಗೆ ಮುತುವರ್ಜಿ ಎಸ್‌ಟಿ ಸಮುದಾಯಗಳು ಅನ್ಯಾಯಕ್ಕೆ ಪ್ರಯತ್ನ ಮಾಡಲಿಲ್ಲ. ಇದರಿಂದ ಎಸ್‌ಸಿ, ಸಮುದಾಯಗಳ ಸಚಿವರು, ಶಾಸಕರು ಒಳಗಾಗಿವೆ. ಇದರ ಬಗ್ಗೆ ಧ್ವನಿ ಎತ್ತಬೇಕಿದ್ದ ಮೌನ ವಹಿಸಿರುವುದು ಅತ್ಯಂತ ದುರದೃಷ್ಟ ಕರ” ಎಂದು ಬೇಸರ ವ್ಯಕ್ತಪಡಿಸಿದರು.ಅಧಿಕಾರ ಬೇಕಾದರೆ ದಲಿತರು ಎನ್ನುವ ಎಸ್‌ಸಿ, ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು, ಅನ್ಯಾಯದ ವಿರುದ್ಧ ಯಾಕೆ ಧ್ವನಿ ಎತ್ತುತ್ತಿಲ್ಲ? ಎಂದು ಪ್ರಶ್ನಿಸಿದರು. ಎಸ್‌ಟಿಗಳಿಗೆ ಆಗುತ್ತಿರುವ
ಸುದ್ದಿಗೋಷ್ಠಿಯಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ರಾಜ್ಯಾಧ್ಯಕ್ಷ ನರಸಿಂಹಯ್ಯ, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ರಾಮಚಂದ್ರು, ಹಿನಕಲ್ ಕೆಂಪನಾಯಕ, ಕೆ.ಸಣ್ಣಯ್ಯ ನಾಯಕ, ನಾಯಕ ಮತ್ತಿತರರು ಇದ್ದರು.

The post ನೇಮಕಾತಿಯಲ್ಲಿ ಎಸ್ಸಿಗೆ ಶೇ.17, ಎಸ್ಪಿಗೆ ಶೇ.7 ಮೀಸಲು ಕಲ್ಪಿಸಿ :ಉಗ್ರಪ್ಪ appeared first on Good News 24x7.

]]>
ಸಿದ್ದರಾಮಯ್ಯ 17ನೇ ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ! https://www.goodnews24x7.com/siddasiddaramaiahs-17th-budget-is-a-mountain-of-expectationssiddaramaiahs-17th-budget-is-a-mountain-of-expectationssiddaramaiahs-17th-budget-is-a-mountain-of-expectationsramaiahs-17th-budget/ Sun, 01 Mar 2026 05:47:00 +0000 https://www.goodnews24x7.com/?p=8533   ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 6ರಂದು ಕರ್ನಾಟಕದ ರಾಜ್ಯ ಬಜೆಟ್ ಮಂಡಿಸಲಿದ್ದಾರೆ. ಇದು ಸಿದ್ದರಾಮಯ್ಯ ಮಂಡಿಸುತ್ತಿರುವ ದಾಖಲೆಯ 17ನೇ ದಾಖಲೆಯ ಬಜೆಟ್ ಆಗಿದೆ. ರಾಜ್ಯ ಬಜೆಟ್ ಅಧಿವೇಶನವು ಮಾರ್ಚ್ 6ರಿಂದ ಮಾರ್ಚ್ 27ರವರೆಗೆ ಒಟ್ಟು 14 ದಿನಗಳ ಕಾಲ ನಡೆಯಲಿದೆ. ಸಿದ್ದರಾಮಯ್ಯ…

The post ಸಿದ್ದರಾಮಯ್ಯ 17ನೇ ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ! appeared first on Good News 24x7.

]]>

 

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 6ರಂದು ಕರ್ನಾಟಕದ ರಾಜ್ಯ ಬಜೆಟ್ ಮಂಡಿಸಲಿದ್ದಾರೆ. ಇದು ಸಿದ್ದರಾಮಯ್ಯ ಮಂಡಿಸುತ್ತಿರುವ ದಾಖಲೆಯ 17ನೇ ದಾಖಲೆಯ ಬಜೆಟ್ ಆಗಿದೆ. ರಾಜ್ಯ ಬಜೆಟ್ ಅಧಿವೇಶನವು ಮಾರ್ಚ್ 6ರಿಂದ ಮಾರ್ಚ್ 27ರವರೆಗೆ ಒಟ್ಟು 14 ದಿನಗಳ ಕಾಲ ನಡೆಯಲಿದೆ. ಸಿದ್ದರಾಮಯ್ಯ ದಾಖಲೆಯ ಬಜೆಟ್​​ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದು, ಮುಖ್ಯವಾದವುಗಳ ಮಾಹಿತಿ ಇಲ್ಲಿದೆ .ಮುಖ್ಯಮಂತ್ರಿ ಸಿದ್ದರಾಮಯ್ಯ 2026-27ನೇ ಸಾಲಿನ ಬಜೆಟ್‌ನಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗೆ ಆದ್ಯತೆ ನೀಡಲಿದ್ದು, ಜೊತೆಗೆ ಆರ್ಥಿಕ ಹೊರೆ ತಗ್ಗಿಸಲು ಯೋಜನೆಗಳಲ್ಲಿ ಬದಲಾವಣೆ ಮಾಡುವ ಸಾಧ್ಯತೆಗಳಿವೆ. ಮೂಲಸೌಕರ್ಯ ಅಭಿವೃದ್ಧಿ, ಕೃಷಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಹಾಗೂ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಒತ್ತು ನೀಡುವ ಸಾಧ್ಯತೆಯಿದೆ. ಇದು ಅವರ 17ನೇ ದಾಖಲೆಯ ಬಜೆಟ್ ಆಗಿರಲಿದೆ.

ಗ್ಯಾರಂಟಿ ಯೋಜನೆಗಳಿಗೆ ಮಣೆ: ಪಂಚ ಗ್ಯಾರಂಟಿ ಯೋಜನೆಗಳಿಗೆ (ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಯುವನಿಧಿ) ಹೆಚ್ಚಿನ ಅನುದಾನ ಮೀಸಲಿಡುವ ಸಾಧ್ಯತೆ ಇದೆ.
ಬಜೆಟ್ ಗಾತ್ರ ಮತ್ತು ಅಭಿವೃದ್ಧಿ: ಅಭಿವೃದ್ಧಿ ಕಾರ್ಯಗಳಿಗೆ ಉತ್ತೇಜನ ನೀಡಲು ಬಜೆಟ್ ಗಾತ್ರ ಹೆಚ್ಚಳವಾಗಬಹುದು.
ಕಳೆದ ವರ್ಷದ 55,877 ಕೋಟಿ ರೂ. ಬಂಡವಾಳ ವೆಚ್ಚವನ್ನು ಹೆಚ್ಚಿಸುವ ಯೋಜನೆ.ಆರ್ಥಿಕ ಶಿಸ್ತು: ಗ್ಯಾರಂಟಿ ಯೋಜನೆಗಳ ಭಾರವನ್ನು ನಿರ್ವಹಿಸಲು ಅಭಿವೃದ್ಧಿ ಯೋಜನೆಗಳಿಗೆ ಆದ್ಯತೆ ನೀಡುವ ಮೂಲಕ ಆರ್ಥಿಕ ಸಮತೋಲನ ಸಾಧಿಸುವ ಸವಾಲು.
ಕೃಷಿ ಮತ್ತು ನೀರಾವರಿ: ನೀರಾವರಿ ಯೋಜನೆಗಳು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಒತ್ತು.ಪ್ರಾದೇಶಿಕ ಸಮತೋಲನ: ಕಲ್ಯಾಣ ಕರ್ನಾಟಕ ಸೇರಿದಂತೆ ಹಿಂದುಳಿದ ಪ್ರದೇಶಗಳಿಗೆ ವಿಶೇಷ ಅನುದಾನ ನೀಡುವ ಸಾಧ್ಯತೆ.
ಕೃಷಿ, ಕೈಗಾರಿಕೆ, ಪ್ರವಾಸೋದ್ಯಮ, ಶಿಕ್ಷಣ, ಹೈನುಗಾರಿಕೆ, ಆರೋಗ್ಯ, ಸಾರಿಗೆ ಸೇರಿದಂತೆ ಹಲ ವಲಯಗಳಿಗೆ ಆದ್ಯತೆ.ನೀರಾವರಿ ಯೋಜನೆಗಳಿಗೆ ಯಾವ ಪ್ರಮಾಣದಲ್ಲಿ ಹಣ ಮೀಸಲಿಡಬಹುದೆಂಬ ನಿರೀಕ್ಷೆ.
ಅದರಲ್ಲೂ ಬೆಂಗಳೂರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಹೆಚ್ಚು ಆದ್ಯತೆಯ ನಿರೀಕ್ಷೆ.ಬೆಂಗಳೂರಿನ ಮೆಟ್ರೋ, ಡಬಲ್ ಡೆಕ್ಕರ್‌ಗೆ ಗಮನ.ವೈದ್ಯಕೀಯ ಕಾಲೇಜು ಇಲ್ಲದ ಜಿಲ್ಲೆಗೆ ಹೊಸ ಕಾಲೇಜ್ ಗಳ ಘೋಷಣೆ.
ಹಿಂದುಳಿದ ವರ್ಗದ ಮಕ್ಕಳಿಗೆ ಯುಪಿಎಸ್ಸಿ ತಯಾರಿಗೆ ಆಶ್ರಯ.

ಮತ್ತಷ್ಟು ಕರ್ನಾಟಕ ಪಬ್ಲಿಕ್ ಶಾಲೆ ಘೋಷಣೆ ಮೂಲಕ ಬಲವರ್ಧನೆ.ಪ್ರಗತಿಯಲ್ಲಿರುವ ನೀರಾವರಿ ಯೋಜನೆಗಳಿಗೆ ವಿಶೇಷ ಅನುದಾನ.
ಪ್ರವಾಸೋದ್ಯಮಕ್ಕೆ ಪಿಪಿಪಿ ಮಾದರಿಯಲ್ಲಿ ಮೂಲಸೌಕರ್ಯಕ್ಕೆ ಒತ್ತು.ಕೆಐಎಡಿಬಿ ಮತ್ತು ಕೆಎಸ್‌ಎಸ್‌ಐಡಿಸಿ ಕೈಗಾರಿಕಾ ಪ್ರದೇಶಗಳು/ವಸಾಹತುಗಳ ಮೂಲಭೂತ ಸೌಕರ್ಯಗಳ ಉನ್ನತೀಕರಣ, ಕೈಗಾರಿಕಾ ಪಟ್ಟಣ ಪ್ರಾಧಿಕಾರ ರಚನೆ ನಿರೀಕ್ಷೆ.
ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗಾಗಿ ನೂತನ ಕೈಗಾರಿಕಾ ವಸಾಹತುಗಳ ಸ್ಥಾಪನೆ ನಿರೀಕ್ಷೆ.ವಿದ್ಯುತ್ ಮೇಲಿನ‌ತೆರಿಗೆಯನ್ನು ಇಳಿಸುವ ಸಾಧ್ಯತೆ.100 ಶೇಕಡಾ ನವೀಕರಿಸಬಹುದಾದ ಇಂಧನ ಬಳಸುವ ಕೈಗಾರಿಕೋದ್ಯಮಿಗಳಿಗೆ ಸಬ್ಸಿಡಿ.
ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳಿಂದ ಅನುದಾನಕ್ಕೆ ಬೇಡಿಕೆ ಇಡಲಾಗಿದೆ. ಅದರ ಅಂಕಿ ಅಂಶಗಳನ್ನು ಗಮನಿಸುವುದಾದರೆ;

ನಗರ ಪಾಲಿಕೆ (ಕೋಟಿ ರೂ.ಗಳಲ್ಲಿ)
ಪೂರ್ವ 1,685
ಪಶ್ಚಿಮ 1,725
ಉತ್ತರ 1,205
ದಕ್ಷಿಣ 1,675
ಕೇಂದ್ರ 2,047
ರಾಜಧಾನಿ ಬೆಂಗಳೂರಿನ ಆಡಳಿತವನ್ನು ನಾಗರಿಕರ ಬಾಗಿಲಿಗೆ ಕೊಂಡೊಯ್ದು, ಸ್ಥಳೀಯ ಅಭಿವೃದ್ಧಿಗೆ ಒತ್ತು ನೀಡಲೆಂದೇ ರಚನೆಯಾಗಿರುವ ‘ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ನಗರ ಪಾಲಿಕೆಗಳಿಂದ ರಾಜ್ಯ ಬಜೆಟ್‌ ಮೇಲೆ ಭಾರೀ ನಿರೀಕ್ಷೆ ಇದೆ. ಐದು ನಗರ ಪಾಲಿಕೆಗಳು ರಚನೆಯಾಗಿ ಐದು ತಿಂಗಳಾಗಿದ್ದು, ರಾಜ್ಯದ ಬಜೆಟ್‌ ಮಂಡನೆ ನಂತರ ಮಾರ್ಚ್‌ ಎರಡನೇ ವಾರದಲ್ಲಿ ಮೊದಲ ಆಯವ್ಯಯ ಮಂಡಿಸಲು ಈಗಾಗಲೇ ಸಿದ್ಧತೆ ನಡೆಸಿವೆ. ಬೃಹತ್‌ ಯೋಜನೆಗಳಿಗೆ ನಗರ ಪಾಲಿಕೆಯೊಳಗೆ ಹೆಚ್ಚಿನ ಅವಕಾಶವಿಲ್ಲ. ಹೀಗಾಗಿ, ರಸ್ತೆ, ಪಾದಚಾರಿ ಮಾರ್ಗ, ಉದ್ಯಾನ, ಶೌಚಾಲಯ, ಕೆರೆ, ತೋಟಗಾರಿಕೆ, ಸೌಂದರ್ಯೀಕರಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ನಗರ ಪಾಲಿಕೆಗಳು ಸಂಪನ್ಮೂಲ ಕ್ರೋಡೀಕರಣದಲ್ಲಿ ಇನ್ನೂ ನಿರೀಕ್ಷಿತ ಮಟ್ಟವನ್ನು ತಲುಪಿಲ್ಲ. ಪ್ರತಿಯೊಂದು ವಿಭಾಗದ ಹಣವೂ ಜಿಬಿಎ ಖಾತೆಗೇ ಹೋಗುತ್ತಿದ್ದು, ಅಲ್ಲಿಂದ ಹಣ ವರ್ಗಾವಣೆಯಾಗಬೇಕಿದೆ. ಹೀಗಾಗಿ, ಆರ್ಥಿಕ ಸ್ವಾವಲಂಬನೆ ದೂರದ ಮಾತಾಗಿದೆ.ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಮುಖ್ಯಮಂತ್ರಿಗಳು ಆರೋಪಿಸಿರುವುದರಿಂದ ರಾಜ್ಯ ಬಜೆಟ್‌ನಲ್ಲಿ ಹೆಚ್ಚಿನ ಸ್ವಂತ ಸಂಪನ್ಮೂಲಗಳ ಕ್ರೋಢೀಕರಣದ ಮೇಲೆ ಗಮನ ಹರಿಸಬಹುದು. ಕಳೆದ ಬಾರಿಯ ಬಜೆಟ್ ಗಾತ್ರ 4,09,549 ರೂ. ಆಗಿದ್ದೂ, 17ನೇ ಬಜೆಟ್ ಗಾತ್ರವೂ ಸಾಮಾನ್ಯವಾಗಿ ಮತ್ತಷ್ಟು ಹಿಗ್ಗುವ ಸಾಧ್ಯತೆ ಇದೆ.

The post ಸಿದ್ದರಾಮಯ್ಯ 17ನೇ ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ! appeared first on Good News 24x7.

]]>
ಬಿ. ಸರೋಜಾದೇವಿ ಒಬ್ಬ ಮೇರು ನಟಿ ; ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ : ಮುಖ್ಯಮಂತ್ರಿ ಸಿದ್ದರಾಮಯ್ಯ https://www.goodnews24x7.com/b-sarojadevi-is-a-great-actress-funeral-with-full-state-honours-chief-minister-siddaramaiah/ Tue, 15 Jul 2025 06:20:44 +0000 https://www.goodnews24x7.com/?p=5106 ಬಿ. ಸರೋಜಾದೇವಿ ಒಬ್ಬ ಮೇರು ನಟಿ ; ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಬಹುಭಾಷಾ ತಾರೆ ಹಿರಿಯ ನಟಿ ದಿವಂಗತ ಪದ್ಮಭೂಷಣ ಶ್ರೀ ಮತಿ ಬಿ. ಸರೋಜ ದೇವಿ ಇವರ ಪ್ರಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ…

The post ಬಿ. ಸರೋಜಾದೇವಿ ಒಬ್ಬ ಮೇರು ನಟಿ ; ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ : ಮುಖ್ಯಮಂತ್ರಿ ಸಿದ್ದರಾಮಯ್ಯ appeared first on Good News 24x7.

]]>

ಬಿ. ಸರೋಜಾದೇವಿ ಒಬ್ಬ ಮೇರು ನಟಿ ; ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ : ಮುಖ್ಯಮಂತ್ರಿ ಸಿದ್ದರಾಮಯ್ಯ

ಬಹುಭಾಷಾ ತಾರೆ ಹಿರಿಯ ನಟಿ ದಿವಂಗತ ಪದ್ಮಭೂಷಣ ಶ್ರೀ ಮತಿ ಬಿ. ಸರೋಜ ದೇವಿ ಇವರ ಪ್ರಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ನಂತರ ಮಾಧ್ಯಮ ದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ. ಬಹುಭಾಷಾ ನಟಿ ಬಿ. ಸರೋಜಾದೇವಿ ಅವರ ನಿಧನ ಇಡೀ ಚಿತ್ರರಂಗಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ. ಚಿಕ್ಕವಯಸ್ಸಿನಲ್ಲಿಯೇ ಸಿನಿಮಾರಂಗವನ್ನು ಪ್ರವೇಶಿ ಏಳು ದಶಕಗಳ ಕಾಲ ಕಲಾವಿದೆಯಾಗಿದ್ದವರು. ಅಭಿನವ ಸರಸ್ವತಿ ಎಂಬ ಬಿರುದು ಚಿಕ್ಕವಯಸ್ಸಿಗೆ ದೊರೆತಿತ್ತು. ಎಲ್ಲಾ ಭಾಷೆಯ ಹೆಸರಾಂತ ನಟರೊಂದಿಗೆ ನಟಿಸಿದ್ದರು.ದಿಲೀಪ್ ಕುಮಾರ್, ರಾಜೇಂದ್ರ ಕುಮಾರ್, ದೇವ್ ಆನಂದ್, ಎಂ.ಜಿ.ಆರ್, ಎನ್.ಟಿ.ಆರ್, ಶಿವಾಜಿ ಗಣೇಶನ್, ರಾಜ್ ಕುಮಾರ್ ಅವರೊಂದಿಗೂ ಅನೇಕ ಚಿತ್ರಗಳಲ್ಲಿ ನಟಿಸಿದ್ದರು ಎಂದರು.

ಯಾವುದೇ ಪಾತ್ರಕ್ಕೂ ಜೀವ ತುಂಬುತ್ತಿದ್ದರು. ಖಾಸಗಿ ಜೀವನದಲ್ಲಿಯೂ ಶಿಸ್ತುಬದ್ಧ ಜೀವನವನ್ನು ನಡೆಸಿದವರು. ಕನ್ನಡ ಚಿತ್ರರಂಗ ಬೆಳೆಯಲು ಅಪಾರ ಕೊಡುಗೆಯನ್ನು ಕೊಟ್ಟಿದ್ದಾರೆ. ಅವರ ಸಾವಿನಿಂದ ಚಿತ್ರರಂಗಕ್ಕೆ ಅಪಾರವಾದ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಹಾಗೂ ಅವರ ಕುಟುಂಬ ವರ್ಗದವರಿಗೆ ಅವರ ಸಾವಿನಿಂದಾದ ದುಃಖವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು. ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ಬಿ. ಸರೋಜ ದೇವಿ ಅವರ ಅಂತ್ಯ ಸಂಸ್ಕಾರವನ್ನು ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಗುವುದು. ಅವರ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದರು.

The post ಬಿ. ಸರೋಜಾದೇವಿ ಒಬ್ಬ ಮೇರು ನಟಿ ; ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ : ಮುಖ್ಯಮಂತ್ರಿ ಸಿದ್ದರಾಮಯ್ಯ appeared first on Good News 24x7.

]]>
ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ ಬಗ್ಗೆ ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯ. https://www.goodnews24x7.com/minister-zameer-ahmed-khans-statement-union-minister-prahlad-joshis-sarcasm/ Sat, 03 May 2025 10:45:24 +0000 https://www.goodnews24x7.com/?p=3576 ವಿಜಯಪುರ : ಮೋದಿ ಅವಕಾಶ ಕೊಟ್ರೆ ನಾನು ಪಾಕ್ ಮೇಲೆ ಯುದ್ದ ಮಾಡೋಕೆ ಸಿದ್ಧ ಪ್ರಧಾನಿ ಮೋದಿ ಪಾಕಿಸ್ತಾನದ ಮೇಲೆ ಯುದ್ಧ ಘೋಷಿಸಲಿ ಎಂಬ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ.…

The post ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ ಬಗ್ಗೆ ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯ. appeared first on Good News 24x7.

]]>

ವಿಜಯಪುರ : ಮೋದಿ ಅವಕಾಶ ಕೊಟ್ರೆ ನಾನು ಪಾಕ್ ಮೇಲೆ ಯುದ್ದ ಮಾಡೋಕೆ ಸಿದ್ಧ ಪ್ರಧಾನಿ ಮೋದಿ ಪಾಕಿಸ್ತಾನದ ಮೇಲೆ ಯುದ್ಧ ಘೋಷಿಸಲಿ ಎಂಬ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ.

 

 

 

 

 

ಈ ಕುರಿತು ಮಾತನಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಜಮೀರ್ ರಂತಹ ದೊಡ್ಡ ತ್ಯಾಗಮಯಿ ಯಾರಿಲ್ಲ. ಜಮೀರ್ ಅಹ್ಮದ್ ಖಾನ್ ಶಾಂತವಾಗಿದ್ದರೇ ಸಾಕು. ನೀವೇನು ಮಾಡೋದು ಬೇಡ ಮಿಲಿಟರಿಯನ್ನ ನಂಬಿ ಸುಮ್ಮನಿರಿ ಸಾಕು ನಿಮ್ಮ ಭಾಷಣ ಬೇಡ. ನೀವು ಗಡಿಗೆ ಹೋಗೋದು ಬೇಡ ಎಂದರು.

ಜಮೀರ್ ರಂತಹ ದೊಡ್ಡ ತ್ಯಾಗಮಯಿ ಯಾರಿಲ್ಲ ಎಂದು ಲೇವಡಿ ಮಾಡಿದ ಪ್ರಹ್ಲಾದ್ ಜೋಶಿ, ಸೈನಿಕರು ಇಂಟೆಲಿಜೆನ್ಸ್ ಬಗ್ಗೆ ವಿಶ್ವಾಸವಿಡಿ. ಜಮೀರ್ ಶಾಂತವಾಗಿರುವುದೇ ದೇಶಕ್ಕೆ ದೊಡ್ಡ ಸೇವೆ. ಭಾರತೀಯ ಸೈನಿಕರನ್ನ ನಂಬಿ ಸುಮ್ಮನಿರಿ ಸಾಕು. ಜಮೀರ್, ಸಂತೋಷ್ ಲಾಡ್, ಮಲ್ಲಿಕಾರ್ಜುನ ಖರ್ಗೆ ಸಿದ್ದರಾಮಯ್ಯ ಸುಮ್ಮನಿದ್ದರೇ ಸಾಕು ಎಂದರು.

The post ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ ಬಗ್ಗೆ ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯ. appeared first on Good News 24x7.

]]>
ಉದ್ಯೋಗ ಮೇಳಗಳ ಮೂಲಕ ಯುವಜನತೆಗೆ ಉದ್ಯೋಗ ನೀಡುವುದು ನಮ್ಮ ಸರ್ಕಾರದ ಬದ್ಧತೆ- ಸಿಎಂ ಸಿದ್ದರಾಮಯ್ಯ. https://www.goodnews24x7.com/our-governments-commitment-to-provide-employment-to-the-youth-through-job-fairs-cm-siddaramaiah/ Wed, 16 Apr 2025 11:38:39 +0000 https://www.goodnews24x7.com/?p=3292 ಕಲಬುರ್ಗಿ : ಉದ್ಯೋಗ ಮೇಳಗಳನ್ನು ಏರ್ಪಡಿಸುವ ಮೂಲಕ ಯುವಜನತೆಗೆ ಉದ್ಯೋಗ ನೀಡುವುದು ನಮ್ಮ ಸರ್ಕಾರದ ಬದ್ಧತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಇಂದು ಕಲ್ಬುರ್ಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ವಿಭಾಗೀಯ ಮಟ್ಟದ ಉದ್ಯೋಗ ಮೇಳವನ್ನು ಕಲಬುರ್ಗಿಯಲ್ಲಿ…

The post ಉದ್ಯೋಗ ಮೇಳಗಳ ಮೂಲಕ ಯುವಜನತೆಗೆ ಉದ್ಯೋಗ ನೀಡುವುದು ನಮ್ಮ ಸರ್ಕಾರದ ಬದ್ಧತೆ- ಸಿಎಂ ಸಿದ್ದರಾಮಯ್ಯ. appeared first on Good News 24x7.

]]>

ಕಲಬುರ್ಗಿ : ಉದ್ಯೋಗ ಮೇಳಗಳನ್ನು ಏರ್ಪಡಿಸುವ ಮೂಲಕ ಯುವಜನತೆಗೆ ಉದ್ಯೋಗ ನೀಡುವುದು ನಮ್ಮ ಸರ್ಕಾರದ ಬದ್ಧತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು ಕಲ್ಬುರ್ಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ವಿಭಾಗೀಯ ಮಟ್ಟದ ಉದ್ಯೋಗ ಮೇಳವನ್ನು ಕಲಬುರ್ಗಿಯಲ್ಲಿ ಇಂದು ಏರ್ಪಡಿಸಲಾಗಿದೆ. ಮೈಸೂರು ಹಾಗು ಹುಬ್ಬಳ್ಳಿ, ಧಾರವಾಡದಲ್ಲಿಯೂ ಉದ್ಯೋಗ ಮೇಳವನ್ನು ಏರ್ಪಡಿಸಲಾಗುತ್ತಿದೆ. ಯುವನಿಧಿ ಯೋಜನೆಯನ್ನು ಜಾರಿ ಮಾಡಿದ್ದು, ನಿರುದ್ಯೋಗದ ಸಮಸ್ಯೆ ನಿವಾರಣೆಯ ಉದ್ದೇಶವಿದೆ. ಉದ್ಯೋಗವನ್ನು ಕೊಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದರು.


ಜಾತಿ ಸಾಮಾಜಿಕ ಸಮೀಕ್ಷೆ : ಯಾವ ಸಮುದಾಯದವರಿಗೂ ಅನ್ಯಾಯವಾಗಲು ನಾವು ಬಿಡುವುದಿಲ್ಲ
ಚನ್ನಗಿರಿ ಶಾಸಕರು ಜಾತಿ ಗಣತಿ ಬಗ್ಗೆ ಲಿಂಗಾಯತ ಶಾಸಕರು ರಾಜಿನಾಮೆ ನೀಡುವಂತೆ ಹೇಳಿಕೆ ನೀಡಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ನಾಳೆ ಸಾಮಾಜಿಕ, ಆರ್ಥಿಕ ಸಮೀಕ್ಷೆಯ ಕುರಿತು ಪ್ರತ್ಯೇಕವಾಗಿ ಸಚಿವ ಸಂಪುಟ ಸಭೆಯನ್ನು ಕರೆಯಲಾಗಿದ್ದು, ಈ ಬಗ್ಗೆ ಚರ್ಚೆ ಮಾಡಲಾಗುವುದು ಎಂದರು. ಶಾಸಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾಳೆ ಅಂತಿಮವಾಗಿ ತೀರ್ಮಾನ ಮಾಡಲಾಗುವುದು. ಸಾಮಾಜಿಕ, ಆರ್ಥಿಕ ಸಮೀಕ್ಷೆ ಇದಾಗಿದ್ದು, ಯಾವ ಸಮುದಾಯದವರಿಗೂ ಅನ್ಯಾಯವಾಗಲು ನಾವು ಬಿಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟವಾಗಿ ತಿಳಿಸಿದರು.

ದಾವಣಗೆರೆ ಮಹಿಳೆಗೆ ಥಳಿತ ಪ್ರಕರಣ: ಕಾನೂನು ಉಲ್ಲಂಘಿಸಿದರೆ ಬಲಿ ಹಾಕುತ್ತೇವೆ
ದಾವಣಗೆರೆಯಲ್ಲಿ ಅನೈತಿಕ ಸಂಬಂಧ ಆರೋಪಿಸಿ ನಡುರಸ್ತೆಯಲ್ಲಿ ಮಹಿಳೆಯ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಯಾರೇ ತಪ್ಪು ಮಾಡಿದರೂ ಕೂಡ, ಕಾನೂನು ಉಲ್ಲಂಘಿಸಿದರೆ ಯಾರು ಎಷ್ಟೇ ಪ್ರಬಲವಾಗಿದ್ದರೂ, ಬಲಿ ಹಾಕುತ್ತೇವೆ ಎಂದು ಎಚ್ಚರಿಸಿದರು.

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಬಿಜೆಪಿಯದ್ದು ದ್ವೇಷದ ರಾಜಕಾರಣ
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಚಾರ್ಜ್ ಶೀಟ್ ಹಾಕಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರು ರಾಜಕೀಯ ಉದ್ದೇಶದಿಂದ ಇದನ್ನು ಮಾಡುತ್ತಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆ ನಿನ್ನೆ ಮೊನ್ನೆ ಪ್ರಾರಂಭವಾಗಿಲ್ಲ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ಆಸ್ತಿ ಮುಟ್ಟುಗೋಲು ಹಾಕುವುದು, ಚಾರ್ಚ್ ಶೀಟ್ ಹಾಕುವುದು ರಾಜಕೀಯ ದ್ವೇಷದಿಂದ ಮಾಡುತ್ತಿದ್ದಾರೆ ಎಂದರು.

The post ಉದ್ಯೋಗ ಮೇಳಗಳ ಮೂಲಕ ಯುವಜನತೆಗೆ ಉದ್ಯೋಗ ನೀಡುವುದು ನಮ್ಮ ಸರ್ಕಾರದ ಬದ್ಧತೆ- ಸಿಎಂ ಸಿದ್ದರಾಮಯ್ಯ. appeared first on Good News 24x7.

]]>
ಬಿ ರಿಪೋರ್ಟ್ ಮುಡಾ ಹಗರಣ ಸಂಬಂಧ ತೀರ್ಪು ಕಾಯ್ದಿರಿಸಿದ ಕೋರ್ಟ್. https://www.goodnews24x7.com/%e0%b2%ac%e0%b2%bf-%e0%b2%b0%e0%b2%bf%e0%b2%aa%e0%b3%8b%e0%b2%b0%e0%b3%8d%e0%b2%9f%e0%b3%8d-%e0%b2%ae%e0%b3%81%e0%b2%a1%e0%b2%be-%e0%b2%b9%e0%b2%97%e0%b2%b0%e0%b2%a3-%e0%b2%b8%e0%b2%82%e0%b2%ac/ Wed, 09 Apr 2025 11:55:37 +0000 https://www.goodnews24x7.com/?p=3140 ಬೆಂಗಳೂರು : ಸಿಎಂ ಸಿದ್ದರಾಮಯ್ಯ ವಿರುದ್ದದ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಸಲ್ಲಿಸಿದ್ದ ಬಿ ರಿಪೋರ್ಟ್ ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪನ್ನು ಏಪ್ರಿಲ್ 15ಕ್ಕೆ ಕಾಯ್ದಿರಿಸಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧದ ಮುಡಾ…

The post ಬಿ ರಿಪೋರ್ಟ್ ಮುಡಾ ಹಗರಣ ಸಂಬಂಧ ತೀರ್ಪು ಕಾಯ್ದಿರಿಸಿದ ಕೋರ್ಟ್. appeared first on Good News 24x7.

]]>

ಬೆಂಗಳೂರು : ಸಿಎಂ ಸಿದ್ದರಾಮಯ್ಯ ವಿರುದ್ದದ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಸಲ್ಲಿಸಿದ್ದ ಬಿ ರಿಪೋರ್ಟ್ ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪನ್ನು ಏಪ್ರಿಲ್ 15ಕ್ಕೆ ಕಾಯ್ದಿರಿಸಿದೆ.


ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧದ ಮುಡಾ ಹಗರಣ ಸಂಬಂಧ ಕೋರ್ಟ್ ಗೆ ಲೋಕಾಯುಕ್ತದಿಂದ ಬಿ ರಿಪೋರ್ಟ್ ಸಲ್ಲಿಸಲಾಗಿತ್ತು. ಇದನ್ನು ಪ್ರಶ್ನಿಸಿ ಇಡಿ ಅರ್ಜಿ ಸಲ್ಲಿಕೆ ಮಾಡಿತ್ತು. ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಡೆಸಿತು.
ಈ ವೇಳೆ ಇಡಿ ಹಾಗೂ ಸಿಎಂ ಪರ ವಕೀಲರ ವಾದ ಪ್ರತಿವಾದವನ್ನು ಆಲಿಸಿದ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವು, ಆದೇಶವನ್ನು ಏಪ್ರಿಲ್ 15ಕ್ಕೆ ಕಾಯ್ದಿರಿಸಿದೆ.
ನ್ಯಾಯಾಲಯಕ್ಕೆ ಜಾರಿ ನಿರ್ದೇಶನಾಲಯವು ಮುಚ್ಚಿದ ಲಕೋಟೆಯಲ್ಲಿ 27 ದಾಖಲೆಯನ್ನು ಸಲ್ಲಿಕೆ ಮಾಡಿದೆ. ಇಡಿ ಪರ ವಕೀಲ ಮಧುಕರ್ ದೇಶಪಾಂಡೆ ವಾದ ಮಂಡಿಸಿದ್ದರು.

The post ಬಿ ರಿಪೋರ್ಟ್ ಮುಡಾ ಹಗರಣ ಸಂಬಂಧ ತೀರ್ಪು ಕಾಯ್ದಿರಿಸಿದ ಕೋರ್ಟ್. appeared first on Good News 24x7.

]]>
ಆಡಳಿತ, ವಿಪಕ್ಷ, ರಾಷ್ಟ್ರ ಮಟ್ಟದ ರಾಜಕಾರಣದ 48 ಮಂದಿಯ ಹನಿಟ್ರ್ಯಾಪ್ ಆಗಿದೆ-ರಾಜಣ್ಣ ಆಕ್ರೋಶ. https://www.goodnews24x7.com/%e0%b2%86%e0%b2%a1%e0%b2%b3%e0%b2%bf%e0%b2%a4-%e0%b2%b5%e0%b2%bf%e0%b2%aa%e0%b2%95%e0%b3%8d%e0%b2%b7-%e0%b2%b0%e0%b2%be%e0%b2%b7%e0%b3%8d%e0%b2%9f%e0%b3%8d%e0%b2%b0-%e0%b2%ae%e0%b2%9f%e0%b3%8d/ Fri, 21 Mar 2025 09:51:06 +0000 https://www.goodnews24x7.com/?p=2853 ಬೆಂಗಳೂರು :- ರಾಜಕಾರಣಿಗಳ ಹನಿಟ್ರ್ಯಾಪ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನಸಭೆಯಲ್ಲಿಂದು ಘೋಷಿಸಿದರು. ಹನಿಟ್ರ್ಯಾಪ್ ಪ್ರಕರಣಗಳು ಸಾರ್ವ ಜನಿಕ ಜೀವನದಲ್ಲಿರುವ ರಾಜಕಾರಣಿಗಳ ಬದುಕಿಗೆ ಹಾನಿ ಉಂಟು ಮಾಡುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪ್ರಕರಣಕ್ಕೆ…

The post ಆಡಳಿತ, ವಿಪಕ್ಷ, ರಾಷ್ಟ್ರ ಮಟ್ಟದ ರಾಜಕಾರಣದ 48 ಮಂದಿಯ ಹನಿಟ್ರ್ಯಾಪ್ ಆಗಿದೆ-ರಾಜಣ್ಣ ಆಕ್ರೋಶ. appeared first on Good News 24x7.

]]>

ಬೆಂಗಳೂರು :- ರಾಜಕಾರಣಿಗಳ ಹನಿಟ್ರ್ಯಾಪ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನಸಭೆಯಲ್ಲಿಂದು ಘೋಷಿಸಿದರು.
ಹನಿಟ್ರ್ಯಾಪ್ ಪ್ರಕರಣಗಳು ಸಾರ್ವ ಜನಿಕ ಜೀವನದಲ್ಲಿರುವ ರಾಜಕಾರಣಿಗಳ ಬದುಕಿಗೆ ಹಾನಿ ಉಂಟು ಮಾಡುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಕಾರ ಸಚಿವ ಕೆ.ಎನ್.ರಾಜಣ್ಣ, ಬಸನಗೌಡ ಪಾಟೀಲ್ ಯತ್ನಾಳ್, ಸುನೀಲ್ ಕುಮಾರ್ ಹಾಗೂ ಮುನಿರತ್ನ ಅವರು ಸದನದಲ್ಲಿ ಮಾಡಿರುವ ಪ್ರಸ್ತಾಪವನ್ನು ಸರ್ಕಾರ ಗಂಭೀರ ವಾಗಿ ತೆಗೆದುಕೊಂಡಿದೆ. ಸಚಿವ ರಾಜಣ್ಣ ತಮಗೆ ಲಿಖಿತ ದೂರು ನೀಡುವುದಾಗಿ ಹೇಳಿದ್ದಾರೆ. ಅವರ ದೂರನ್ನು ಆಧರಿಸಿ ಉನ್ನತ ಮಟ್ಟದ ತನಿಖೆ ನಡೆಸಿ, ಸತ್ಯಾ ಸತ್ಯತೆ ಬಯಲು ಮಾಡುತ್ತೇನೆ.
ಸದನದ ಪ್ರತಿಯೊಬ್ಬ ಸದಸ್ಯರ ಹಕ್ಕು ಕಾಪಾಡುವುದು ನಮ್ಮ ಕರ್ತವ್ಯ ಹನಿಟ್ರಾಪ್ ಮೂಲಕ ಜನಪ್ರತಿನಿಧಿಗಳ ಗೌರವಕ್ಕೆ ಚ್ಯುತಿ ತರುವುದನ್ನು ಕೊನೆಗಾಣಿಸುತ್ತೇನೆ. ರಾಜ್ಯ ವಿಧಾನಮಂಡಲಕ್ಕೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಗೌರವ ಇದೆ. ಅದಕ್ಕೆ ಚ್ಯುತಿ ತರಲು ಬಿಡುವುದಿಲ್ಲ. ಈ ಸದನದಲ್ಲಿ ದೊಡ್ಡ ಮಹನೀಯರು ತಮ್ಮ ಆದರ್ಶ ಮತ್ತು ಛಾಪು ಮೂಡಿಸಿದ್ದಾರೆ. ಹನಿ ಟ್ರ್ಯಾಪ್ ಮೂಲಕ ಸದಸ್ಯರ ಗೌರವಕ್ಕೆ ಚ್ಯುತಿ ತಂದು ಅವರುಗಳ ಕುಟುಂಬದ ಮಾನ ತೆಗೆಯುತ್ತಿರುವವರ ವಿರುದ್ಧ ಕಠಿಣ ಕ್ರಮ ತಗೆದುಕೊಳ್ಳುವುದಾಗಿ ತಿಳಿಸಿದರು.

ಚರ್ಚೆ ವೇಳೆ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಸಚಿವರು. ಶಾಸಕರನ್ನು ಹನಿಟ್ರಾಪ್ ಮಾಡಲಾಗಿದೆ. ಸಹಕಾರ ಸಚಿವ ರಾಜಣ್ಣ ಅವರ ಮೇಲೆಯೇ ಹನಿಟ್ರ್ಯಾಪ್ ಆಗಿದೆ. ಇದನ್ನು ಸರ್ಕಾರ ಮಾಡಿಸುತ್ತಿದೆಯೇ ಅಥವಾ ಸರ್ಕಾರದಲ್ಲಿರುವವರು ಮಾಡುತ್ತಿದ್ದಾ ರೆಯೇ ಎಂದು ಖಾರವಾಗಿ ಪ್ರಶ್ನಿಸಿದರು.
ಗೃಹ ಸಚಿವರೂ ಸದನದಲ್ಲಿದ್ದಾರೆ. ಅವರು ಉತ್ತರ ನೀಡಬೇಕು ಮತ್ತು ಹನಿಟ್ರ್ಯಾಪ್ ಮಾಡುವವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು. ಇದಕ್ಕೆ ಉನ್ನತ ಮಟ್ಟದ ತನಿಖೆ ನಡೆಸಿ ಎಂದು ಆಗ್ರಹಿಸಿದರು. ಸದನದಲ್ಲೇ ಇದ್ದ ರಾಜಣ್ಣ, ನನ್ನ ಹೆಸರನ್ನು ಪ್ರಸ್ತಾಪಿಸಿರುವುದರಿಂದ ನಾನು ವಾಸ್ತವಾಂಶ ತಿಳಿಸಲೇಬೇಕು. ಕರ್ನಾಟಕ ಎಂದರೆ, ಪೆನ್ಡ್ರೈವ್ ಮತ್ತು ಸಿ.ಡಿ. ಫ್ಯಾಕ್ಟರಿ ಎಂಬ ಕುಖ್ಯಾತಿ ಆಗಿದೆ, ಸದನದಲ್ಲಿರುವ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರಲ್ಲದೆ, ರಾಷ್ಟ್ರಮಟ್ಟದ ರಾಜಕಾರಣದ 48 ಮಂದಿಯ ಹನಿಟ್ರ್ಯಾಪ್ ನಡೆದಿದೆ.
ಇದರ ಹಿಂದಿರುವವರು ಬಹಿರಂಗ ಗೊಳ್ಳಬೇಕು. ಇದಕ್ಕೆ ಸಂಬಂಧಿಸಿದಂತೆ ನಾನು, ಗೃಹ ಸಚಿವರಿಗೆ ಲಿಖಿತ ದೂರು ನೀಡುತ್ತೇನೆ. ಈ ಸಿ.ಡಿ. ಮತ್ತು ಪೆನ್ ಡ್ರೈವ್ಗಳ ನಿರ್ಮಾಪಕರು, ನಿರ್ದೇಶಕರು, ನಟರು ಸೇರಿದಂತೆ ಯಾರೆಲ್ಲಾ ಭಾಗಿಯಾಗಿ ದ್ದಾರೆ ಅವರನ್ನು ಹೊರಗೆಳೆಯಬೇಕು. ನನ್ನ ಬಳಿ ಕೆಲವು ಮಹತ್ವದ ದಾಖಲೆ ಗಳಿವೆ. ಅವುಗಳನ್ನು ಗೃಹ ಸಚಿವರಿಗೆ ದೂರು ಪ್ರತಿಯ ಜೊತೆ ನೀಡುತ್ತೇನೆ. ಹಾಸನದಲ್ಲಿ
ನಡೆದ ಸಿಡಿ ಮತ್ತು ಪೆನ್ಡ್ರೈವ್ ಪ್ರಕರಣ ಬಯಲಾಗಿ ನೂರಾರು ಹೆಣ್ಣುಮಕ್ಕಳ ಬಾಳು ಹಾಳಾಗಿದೆ. ಇನ್ನು ಮುಂದೆ ಇಂತಹ ಕೃತ್ಯಗಳು ರಾಜ್ಯದಲ್ಲಿ ನಡೆಯಬಾರದು. ಈ ಪಿತೂರಿ ಹಿಂದೆ ಯಾರೆಲ್ಲಾ ಇದ್ದಾರೋ ಅವರ ಮುಖವಾಡ ಕಳಚಬೇಕು, ಗೃಹ ಸಚಿವರು ಇದರತ್ತ ತಕ್ಷಣ ಕಾರ್ಯಮಗ್ನ ರಾಗಬೇಕು ಎಂದು ಮನವಿ ಮಾಡಿದರು.

ನನ್ನ ಮನೆ ಹಾಳು ಮಾಡಿದರು:
ರಾಜಣ್ಣ ಮಾತು ಮುಗಿಸುತ್ತಿದ್ದಂತೆ ಹನಿಟ್ರ್ಯಾಪ್ಗೆ ಒಳಗಾಗಿ ಜೈಲು ಸೇರಿದ್ದ ಬಿಜೆಪಿ ಶಾಸಕ ಮುನಿರತ್ನ ಮಾತನಾಡಿ, ರಾಜಕೀಯ ದ್ವೇಷ ದಿಂದ ಸಿ.ಡಿ. ಮಾಡಿ ನನ್ನ ಮನೆ ಹಾಳು ಮಾಡಿದರು. ನಾನೊಬ್ಬನೇ ಅಲ್ಲ, ರಮೇಶ್ ಜಾರಕಿಹೊಳಿ, ಎಚ್.ಡಿ.ರೇವಣ್ಣ ಕುಟುಂಬ ವನ್ನು ಸಿ.ಡಿ. ಮತ್ತು ಪೆನ್ಡ್ರೈವ್ ಫ್ಯಾಕ್ಟರಿ ಮಾಲೀಕ ನಾಶ ಮಾಡಿದ. ನನ್ನ ಮೇಲೆ ಸುಳ್ಳು ರೇಪ್ ಕೇಸ್ ಹಾಕಿಸಿ ಜೈಲಿಗೆ ಹೋಗುವಂತೆ ಮಾಡಿದ.
ಉನ್ನತ ಮಟ್ಟದ ತನಿಖೆಗೆ ನಿರ್ಧಾರ
ನಾನು ರೇಪ್ ಮಾಡಿಲ್ಲ ಬೇಕಿದ್ದರೆ, ಆತ ನಂಬುವ ದೇವರುಗಳ ಮೇಲೆ ಆಣೆ ಮಾಡಲಿ. ನಾನೂ ಮಾಡುತ್ತೇನೆ ಎಂದು ಸದನದಲ್ಲಿ ದೇವರುಗಳ ಚಿತ್ರಗಳನ್ನು ಪ್ರದರ್ಶಿಸಿದರು. ನನ್ನ ಮೇಲೆ ರೇಪ್ ಆರೋಪ ಮಾಡಿದಾಕೆ ಇರುವುದು ಎಲ್ಲೋ, ನನ್ನ ವಿರುದ್ಧ ರಾಮನಗರದಲ್ಲಿ ಪ್ರಕರಣ ದಾಖಲಿಸಿ, ನಮ್ಮ ಕುಟುಂಬದ ಮಾನ ಹರಾಜು ಮಾಡಿದ. ಈಗಲೂ ನಮ್ಮ ಮೊಮ್ಮಕ್ಕಳು ಬೀದಿಯಲ್ಲಿ ತಲೆ ಎತ್ತಿ ಓಡಾಡದಂತೆ ಆಗಿದೆ.
ನನ್ನ ಮೇಲಿನ ರೇಪ್ ಪ್ರಕರಣವನ್ನು ಸಿಬಿಐಗೆ ವಹಿಸಿ, ಸತ್ಯಾಸತ್ಯತೆ ಹೊರ ಬರಲಿ, ನೀವು ಇದನ್ನು ಹೀಗೇ ಬಿಟ್ಟರೆ ಅವನು ಉನ್ನತ ಅಧಿಕಾರ ಪಡೆಯಲು ತನ್ನ ವಿರೋಧಿಗಳೆಲ್ಲರನ್ನೂ ಹನಿಟ್ರ್ಯಾಪ್ ಮಾಡುತ್ತಾನೆ ಎಂದು ಗುಡುಗಿದರು.
ಮುನಿರತ್ನ ಮಾತಿಗೆ ಬೆಂಬಲ ವ್ಯಕ್ತಪಡಿಸಿದ ಸುನೀಲ್ ಕುಮಾರ್, ಸಿ.ಡಿ. ಮತ್ತು ಪೆನ್ಡ್ರೈವ್ ಫ್ಯಾಕ್ಟರಿ ಹಿಂದಿರುವ ಕೈಗಳನ್ನು ಬಹಿರಂಗಪಡಿಸಿ, ನಾವು ಸಾರ್ವ ಜೆನಿಕ ಜೀವನದಲ್ಲಿ ಇರುವವರು ಕೆಲವು ವಿಷಯಗಳನ್ನು ವಿರೋಧಿಸುತ್ತೇವೆ. ಹಾಗಂತ, ನಮ್ಮಗಳ ವಿರುದ್ಧ ಹನಿಟ್ರ್ಯಾಪ್ ಮಾಡಿಸಿದರೆ, 224 ಸದಸ್ಯರ ಗತಿ ಏನು,
ಉನ್ನತ ಹುದ್ದೆ ಪಡೆಯಲೋ ಅಥವಾ ಬೇರೆ ಉದ್ದೇಶಕ್ಕೋ ಅವರನ್ನು ವಿರೋ ಧಿಸುವವರನ್ನೆಲ್ಲಾ ಹನಿಟ್ರ್ಯಾಪ್ ಮಾಡುತ್ತಾ ಹೋದರೆ, ಇದು ಎಲ್ಲಿಗೆ ತಲುಪುತ್ತೆ. ರಾಜ್ಯ ವಿಧಾನಮಂಡಲದ ಗೌರವ ಕಾಪಾಡಲು ಗೃಹ ಸಚಿವರು ಸಿ.ಡಿ., ಪೆನ್ಡ್ರೈವ್ ಪ್ರಕರಣಗಳಿಗೆ ಇತಿಶ್ರೀ ಹಾಡಬೇಕು ಎಂದು ಆಗ್ರಹಿಸಿದರು. ಸಚಿವರಿಂದ ಸಿಎಂ ಭೇಟಿ: ಹನಿಟ್ರಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಸಚಿವರುಗಳು ಇಂದು ಸಂಜೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಮತ್ತು ವಿಧಾನಪರಿಷತ್ ಸದಸ್ಯರೂ ಆದ ಅವರ ಪುತ್ರ ರಾಜೇಂದ್ರ ಅವರನ್ನು ಹನಿಟ್ರಾಪ್ ಮಾಡಲು ಯತ್ನಿಸಿರುವ ಬಗ್ಗೆ ಇಂದು ವಿಧಾನಸಭೆಯಲ್ಲಿ ಭಾರೀ ಚರ್ಚೆ ನಡೆದಿತ್ತು. ಮಂಡಿ ನೋವಿ ನಿಂದಾಗಿ ಮುಖ್ಯಮಂತ್ರಿಗಳು ಸದನದಲ್ಲಿ ಹಾಜರಿರಲಿಲ್ಲ. ಇಂದು ಸದನ ಆರಂಭವಾಗುವ ಮುನ್ನವೇ ಸಚಿವ ಸತೀಶ್ ಜಾರಕಿಹೊಳಿ ಅವರು ಹನಿಟ್ರಾಪ್ ಬಗ್ಗೆ ಮಾದ್ಯಮಗಳಿಗೆ ಹೇಳಿಕೆ ನೀಡಿ, ನಂತರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದರು.

The post ಆಡಳಿತ, ವಿಪಕ್ಷ, ರಾಷ್ಟ್ರ ಮಟ್ಟದ ರಾಜಕಾರಣದ 48 ಮಂದಿಯ ಹನಿಟ್ರ್ಯಾಪ್ ಆಗಿದೆ-ರಾಜಣ್ಣ ಆಕ್ರೋಶ. appeared first on Good News 24x7.

]]>
ಸಾ.ರಾ.ಮಹೇಶ್ ಕುಟುಂಬದ ಒಡೆತನದ “ಸಾರಾ ಕನ್‌ವೆನ್ನನ್ ಹಾಲ್” ಸಂಬಂಧ ತನಿಖೆಗೆ ಸರ್ಕಾರ ಆದೇಶ. https://www.goodnews24x7.com/%e0%b2%b8%e0%b2%be-%e0%b2%b0%e0%b2%be-%e0%b2%ae%e0%b2%b9%e0%b3%87%e0%b2%b6%e0%b3%8d-%e0%b2%95%e0%b3%81%e0%b2%9f%e0%b3%81%e0%b2%82%e0%b2%ac%e0%b2%a6-%e0%b2%92%e0%b2%a1%e0%b3%86%e0%b2%a4%e0%b2%a8/ Tue, 18 Mar 2025 07:16:40 +0000 https://www.goodnews24x7.com/?p=2801 ಮೈಸೂರು : ಇಲ್ಲಿನ ದಟ್ಟಗಳ್ಳಿಯಲ್ಲಿರುವ ಜೆಡಿಎಸ್ ರಾಜ್ಯ ಘಟಕದ ಕಾರ್ಯಾಧ್ಯಕ್ಷ, ಮಾಜಿ ಸಚಿವ ಸಾ.ರಾ.ಮಹೇಶ್ ಕುಟುಂಬದ ಒಡೆತನದ ‘ಸಾರಾ ಕನ್‌ವೆನ್ಸನ್ ಹಾಲ್’ ನಿರ್ಮಾಣದ ಕುರಿತು ತನಿಖೆಗೆ ಸರ್ಕಾರವು ಆದೇಶಿಸಿದೆ. ಈ ಬಗ್ಗೆ ನಗರಾಭಿ ವೃದ್ಧಿ ಇಲಾಖೆಯ ಅಧೀನ ಕಾರ್ಯ ದರ್ಶಿ ಕೆ.…

The post ಸಾ.ರಾ.ಮಹೇಶ್ ಕುಟುಂಬದ ಒಡೆತನದ “ಸಾರಾ ಕನ್‌ವೆನ್ನನ್ ಹಾಲ್” ಸಂಬಂಧ ತನಿಖೆಗೆ ಸರ್ಕಾರ ಆದೇಶ. appeared first on Good News 24x7.

]]>

ಮೈಸೂರು : ಇಲ್ಲಿನ ದಟ್ಟಗಳ್ಳಿಯಲ್ಲಿರುವ ಜೆಡಿಎಸ್ ರಾಜ್ಯ ಘಟಕದ ಕಾರ್ಯಾಧ್ಯಕ್ಷ, ಮಾಜಿ ಸಚಿವ ಸಾ.ರಾ.ಮಹೇಶ್ ಕುಟುಂಬದ ಒಡೆತನದ ‘ಸಾರಾ ಕನ್‌ವೆನ್ಸನ್ ಹಾಲ್’ ನಿರ್ಮಾಣದ ಕುರಿತು ತನಿಖೆಗೆ ಸರ್ಕಾರವು ಆದೇಶಿಸಿದೆ. ಈ ಬಗ್ಗೆ ನಗರಾಭಿ ವೃದ್ಧಿ ಇಲಾಖೆಯ ಅಧೀನ ಕಾರ್ಯ ದರ್ಶಿ ಕೆ. ಲತಾ, ಅಭಿವೃದ್ಧಿ ಪ್ರಾಧಿ ಕಾರಗಳು ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಆಯು ಕಾಲಯದ ಆಯುಕ್ತರಿಗೆ ಮಾರ್ಚ್ 10ರಂದು ಪತ್ರ ಬರೆದಿದ್ದಾರೆ.
ದಟ್ಟಗಳ್ಳಿಯ ಸರ್ವೆ ಸಂಖ್ಯೆ 130/3ರಲ್ಲಿ 2 ಎಕರೆ 15 ಗುಂಟೆ ಜಾಗದಲ್ಲಿ ಮಾಲೀಕರು ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಿಸಿದ್ದು, ಇದಕ್ಕೆ ಅಧಿಕಾರಿಗಳು ಸಹಕರಿಸಿದ್ದಾರೆ ಎಂದು ಗಂಗರಾಜು ಎಂಬುವರು ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಿದ್ದಾರೆ. ಈ ದೂರಿನ ಕುರಿತು ಆಯುಕ್ತರ ಮಟ್ಟದಲ್ಲಿ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಪತ್ರದಲ್ಲಿ ಸೂಚಿಸಿದ್ದಾರೆ.
ದೂರು: ಸಾ.ರಾ. ಮಹೇಶ್ ಪತ್ನಿ ಅನಿತಾ ಮಹೇಶ್ ಅವರು ಕಾನೂನುಬಾಹಿರ ವಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸರ್ಕಾರ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನಷ್ಟ ಉಂಟು ಮಾಡಿ, ದಟ್ಟಗಳ್ಳಿಯಲ್ಲಿ ಅಕ್ರಮವಾಗಿ ವಾಣಿಜ್ಯ ಕಟ್ಟಡವನ್ನು ನಿರ್ಮಿಸಿದ್ದಾರೆ. ನಿರ್ಮಾಣದ ವೇಳೆ ನಿಯಮಗಳನ್ನು ಉಲ್ಲಂಘಿಸಿದ್ದು, ಮುಡಾ ಆಸ್ತಿ ಅತಿಕ್ರಮಿಸಲಾಗಿದೆ. ಇದಕ್ಕೆ ಜಿಲ್ಲಾಡಳಿತ ಹಾಗೂ ಮುಡಾದ ಹಿರಿಯ ಅಧಿಕಾರಿ ಗಳು ಸಹಕರಿಸಿದ್ದಾರೆ. ಒತ್ತುವರಿ ಕುರಿತು ತನಿಖೆ ನಡೆಸಬೇಕು. ಅಕ್ರಮಕ್ಕೆ ಸಹಕರಿಸಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಎನ್. ಗಂಗರಾಜು ಕಳೆದ ಫೆ.9ರಂದು ಮುಖ್ಯಮಂತ್ರಿ ಕಚೇರಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದರು.

The post ಸಾ.ರಾ.ಮಹೇಶ್ ಕುಟುಂಬದ ಒಡೆತನದ “ಸಾರಾ ಕನ್‌ವೆನ್ನನ್ ಹಾಲ್” ಸಂಬಂಧ ತನಿಖೆಗೆ ಸರ್ಕಾರ ಆದೇಶ. appeared first on Good News 24x7.

]]>
ದೆಹಲಿ ವಿಧಾನಸಭೆ ಚುನಾವಣೆ 2025ರಲ್ಲಿ ಯಾವ ಪಕ್ಷ ಅಧಿಕಾರ ಹಿಡಿಯಲಿದೆ? https://www.goodnews24x7.com/4%e0%b2%a8%e0%b3%87-%e0%b2%ac%e0%b2%be%e0%b2%b0%e0%b2%bf%e0%b2%97%e0%b3%86-%e0%b2%ae%e0%b3%81%e0%b2%96%e0%b3%8d%e0%b2%af%e0%b2%ae%e0%b2%82%e0%b2%a4%e0%b3%8d%e0%b2%b0%e0%b2%bf%e0%b2%af%e0%b2%be/ Sat, 08 Feb 2025 09:23:20 +0000 https://www.goodnews24x7.com/?p=2271 ನವದೆಹಲಿ :- ದೆಹಲಿ ವಿಧಾನಸಭೆ ಚುನಾವಣೆ 2025ರ ಮತ ಎಣಿಕೆ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. 70 ಸದಸ್ಯ ಬಲದ ವಿಧಾನಸಭೆಗೆ ಫೆಬ್ರವರಿ 5ರ ಬುಧವಾರ ಒಂದೇ ಹಂತದಲ್ಲಿ ಮತದಾನ ನಡೆದಿತ್ತು. 699 ಅಭ್ಯರ್ಥಿಗಳು ಕಣದಲ್ಲಿದ್ದು, 8.30ಕ್ಕೆ ಮತ ಎಣಿಕೆ ಆರಂಭವಾಗಲಿದೆ. ರಾಜ್ಯದಲ್ಲಿ…

The post ದೆಹಲಿ ವಿಧಾನಸಭೆ ಚುನಾವಣೆ 2025ರಲ್ಲಿ ಯಾವ ಪಕ್ಷ ಅಧಿಕಾರ ಹಿಡಿಯಲಿದೆ? appeared first on Good News 24x7.

]]>

ನವದೆಹಲಿ :- ದೆಹಲಿ ವಿಧಾನಸಭೆ ಚುನಾವಣೆ 2025ರ ಮತ ಎಣಿಕೆ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. 70 ಸದಸ್ಯ ಬಲದ ವಿಧಾನಸಭೆಗೆ ಫೆಬ್ರವರಿ 5ರ ಬುಧವಾರ ಒಂದೇ ಹಂತದಲ್ಲಿ ಮತದಾನ ನಡೆದಿತ್ತು. 699 ಅಭ್ಯರ್ಥಿಗಳು ಕಣದಲ್ಲಿದ್ದು, 8.30ಕ್ಕೆ ಮತ ಎಣಿಕೆ ಆರಂಭವಾಗಲಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 36. ರಾಜ್ಯದ ಆಡಳಿತ ಪಕ್ಷ ಎಎಪಿ. ದೆಹಲಿ ವಿಧಾನಸಭೆ ಚುನಾವಣೆ ಮತ ಎಣಿಕೆ ಆರಂಭಕ್ಕೂ ಮೊದಲು ಮುಖ್ಯಮಂತ್ರಿ ಅತಿಶಿ ಮರ್ಲೆನಾ ಮಾತನಾಡಿದ್ದು, “ಎಎಪಿ ರಾಜ್ಯದಲ್ಲಿಅಧಿಕಾರ ಉಳಿಸಿಕೊಳ್ಳಲಿದೆ. ಅರವಿಂದ ಕೇಜ್ರಿವಾಲ್ 4ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶನಿವಾರ ಬೆಳಗ್ಗೆ 19 ಎಣಿಕಾ ಕೇಂದ್ರದಲ್ಲಿ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಮೊದಲು ಅಂಚೆ ಮತಗಳ ಎಣಿಕೆ ನಡೆಯಲಿದ್ದು, ಬಳಿಕ 8.30ರಿಂದ ಇವಿಎಂ ಮತಗಳ ಎಣಿಕಾ ಕಾರ್ಯ ಆರಂಭವಾಗಲಿದೆ. 11 ಗಂಟೆಯ ವೇಳೆಗೆ ಯಾವ ಪಕ್ಷ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರ ಹಿಡಿಯಲಿದೆ? ಎಂಬ ಸ್ಪಷ್ಟ ಚಿತ್ರಣ ಲಭ್ಯವಾಗುವ ನಿರೀಕ್ಷೆ ಇದೆ.
“ಇದು ಸಾಮಾನ್ಯವಾದ ಚುನಾವಣೆಯಲ್ಲ. ಈ ಬಾರಿ ಒಳ್ಳೆಯದು ಮತ್ತು ಕೆಟ್ಟದರ ನಡುವೆ ಹೋರಾಟ ನಡೆದಿದೆ. ನನಗೆ ಭರವಸೆ ಇದೆ ದೆಹಲಿಯ ಜನರು ಒಳ್ಳೆಯದಕ್ಕೆ ಬೆಂಬಲ ನೀಡಲಿದ್ದಾರೆ” ಎಂದು ಅತಿಶಿ ಮರ್ಲೆನಾ ಭರವಸೆ ವ್ಯಕ್ತಪಡಿಸಿದ್ದಾರೆ.
ನನ್ನ ಸೊಸೆ ಹೆಗಲ ಮೇಲೆ ಗನ್ ಇಟ್ಟು ನನಗೆ ಶೂಟ್ ಮಾಡ್ತಿದ್ದಾರೆ… ಆ ನಾಲ್ಕು ಜನ ಸೇರಿಕೊಂಡು ನನ್ನ ಮನೆ ಮುರಿದ್ರು!
“ಎಎಪಿ ಮತ್ತು ಆಮ್ ಆದ್ಮಿ ಪಕ್ಷಕ್ಕೆ ಜನರು ಬೆಂಬಲ ನೀಡಲಿದ್ದಾರೆ. ಅರವಿಂದ ಕೇಜ್ರಿವಾಲ್ 4ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ” ಎಂದು ಅತಿಶಿ ಮರ್ಲೆನಾ ಹೇಳಿದರು. 2020ರಲ್ಲಿ ಪಕ್ಷ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ ಅರವಿಂದ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿದ್ದರು. ಆದರೆ ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಅವರನ್ನು ಸಿಬಿಐ ಬಂಧಿಸಿತ್ತು. ಜೈಲಿಗೆ ಹೋದರೂ ಸಹ ಅವರು ಮುಖ್ಯಮಂತ್ರಿಯಾಗಿಯೇ ಮುಂದುವರೆದಿದ್ದರು. ಸುಪ್ರೀಂಕೋರ್ಟ್ ಜಾಮೀನು ನೀಡಿ ಜೈಲಿನಿಂದ ಬಿಡುಗಡೆಗೊಂಡ ಬಳಿಕ ಕೇಜ್ರಿವಾಲ್ ರಾಜೀನಾಮೆ ನೀಡಿದ್ದರು. ಅತಿಶಿ ಮರ್ಲೆನಾ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು.

ಮತ ಎಣಿಕೆ ಆರಂಭವಾಗಿದ್ದು ಬಿಜೆಪಿ 16, ಎಎಪಿ 14 ಮತ್ತು ಕಾಂಗ್ರೆಸ್ 1 ಕ್ಷೇತ್ರದಲ್ಲಿ ಮುನ್ನಡೆಯನ್ನು ಪಡೆದುಕೊಂಡಿದೆ. ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ರಾಜ್ಯದಲ್ಲಿ ಅಧಿಕಾರವನ್ನು ಪಡೆಯಲಿದೆ ಎಂದು ಅಂದಾಜಿಸಿವೆ. ಆದ್ದರಿಂದ ಚುನಾವಣಾ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ.
ಚುನಾವಣೆಯಲ್ಲಿ ಬಿಜೆಪಿ ಮತ್ತು ಎಎಪಿ ನಡುವೆ ಪ್ರಬಲ ಪೈಪೋಟಿ ನಿರೀಕ್ಷೆ ಮಾಡಲಾಗಿದೆ. ಕಾಂಗ್ರೆಸ್ ಚುನಾವಣೆಯ ಪ್ರಚಾರದಲ್ಲಿಯೇ ಮಂಕಾಗಿತ್ತು. ಆದ್ದರಿಂದ ಈ ಬಾರಿ 0-1 ಸೀಟು ಗೆಲ್ಲಲಿದೆ ಎಂದು ಸಮೀಕ್ಷೆಗಳು ಅಂದಾಜಿಸಿದ್ದವು. 2013, 2015 ಮತ್ತು 2020ರ ಚುನಾವಣೆಯಲ್ಲಿ ಎಎಪಿ ರಾಜ್ಯದಲ್ಲಿ ಜಯಗಳಿಸಿ ಸರ್ಕಾರ ರಚನೆ ಮಾಡಿತ್ತು. ಈ ಬಾರಿಯೂ ಎಎಪಿ ಸರ್ಕಾರ ರಚನೆ ಮಾಡಲಿದೆ ಎಂಬ ನಿರೀಕ್ಷೆಯಲ್ಲಿ ಪಕ್ಷದ ನಾಯಕರು ಇದ್ದಾರೆ. ಆದರೆ ಆಡಳಿತ ವಿರೋಧಿ ಅಲೆ ಇದ್ದು, ಎಎಪಿ ಅಧಿಕಾರ ಕಳೆದುಕೊಳ್ಳಲಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ.

The post ದೆಹಲಿ ವಿಧಾನಸಭೆ ಚುನಾವಣೆ 2025ರಲ್ಲಿ ಯಾವ ಪಕ್ಷ ಅಧಿಕಾರ ಹಿಡಿಯಲಿದೆ? appeared first on Good News 24x7.

]]>