ChiefMinister Archives - Good News 24x7 https://www.goodnews24x7.com/tag/chiefminister/ Kannada Mon, 20 Apr 2026 09:43:06 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg ChiefMinister Archives - Good News 24x7 https://www.goodnews24x7.com/tag/chiefminister/ 32 32 ಪ್ರಧಾನಿ ಮೋದಿ ಸಾಮಾಜಿಕ ನ್ಯಾಯದ ಪರವಾಗಿಲ್ಲ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ. https://www.goodnews24x7.com/pm-modi-is-not-in-favor-of-social-justice-cm-siddaramaiah-attacks/ Mon, 20 Apr 2026 09:43:06 +0000 https://www.goodnews24x7.com/?p=9324 ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ನ್ಯಾಯದ ಪರವಾಗಿಲ್ಲ ಹಾಗೂ ಮಹಿಳಾ ಮೀಸಲಾತಿ ವಿಚಾರದಲ್ಲಿ ದ್ವಂದ್ವ ನಿಲುವು ಹೊಂದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ. ಸೋಮವಾರ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಿಳಾ…

The post ಪ್ರಧಾನಿ ಮೋದಿ ಸಾಮಾಜಿಕ ನ್ಯಾಯದ ಪರವಾಗಿಲ್ಲ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ. appeared first on Good News 24x7.

]]>

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ನ್ಯಾಯದ ಪರವಾಗಿಲ್ಲ ಹಾಗೂ ಮಹಿಳಾ ಮೀಸಲಾತಿ ವಿಚಾರದಲ್ಲಿ ದ್ವಂದ್ವ ನಿಲುವು ಹೊಂದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

ಸೋಮವಾರ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ಕುರಿತು ಪ್ರಧಾನಿಯವರ ನಡೆಯನ್ನು ಪ್ರಶ್ನಿಸಿದರು.

ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯ ಮುಖ್ಯಾಂಶಗಳು:
ಮಹಿಳಾ ಮೀಸಲಾತಿ ಜಾರಿಯಲ್ಲಿ ವಿಳಂಬ: ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದು 12 ವರ್ಷಗಳಾದರೂ ಮಹಿಳಾ ಮೀಸಲಾತಿಯನ್ನು ಜಾರಿಗೆ ತಂದಿಲ್ಲ. ಮಹಿಳೆಯರ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದರೆ 2023ರಲ್ಲೇ ಇದನ್ನು ಜಾರಿಗೊಳಿಸಬಹುದಿತ್ತು ಎಂದು ಕಿಡಿಕಾರಿದರು.

ಕಾಂಗ್ರೆಸ್ ನಿಲುವು ಸ್ಪಷ್ಟ: ಕಾಂಗ್ರೆಸ್ ಪಕ್ಷ ಎಂದಿಗೂ ಮಹಿಳಾ ಮೀಸಲಾತಿಗೆ ವಿರೋಧವಾಗಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ (ಗ್ರಾಮ ಪಂಚಾಯತ್‌ನಿಂದ ನಗರಸಭೆಯವರೆಗೆ) ಶೇ. 50ರಷ್ಟು ಮೀಸಲಾತಿ ನೀಡಿದ್ದು ಕಾಂಗ್ರೆಸ್. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ತಂದ 73 ಮತ್ತು 74ನೇ ಸಂವಿಧಾನ ತಿದ್ದುಪಡಿಗಳೇ ಇದಕ್ಕೆ ಅಡಿಪಾಯ ಎಂದು ನೆನಪಿಸಿದರು.

ಕ್ಷೇತ್ರ ಮರುವಿಂಗಡಣೆಗೆ ವಿರೋಧ: ಮೀಸಲಾತಿ ಹೆಸರಿನಲ್ಲಿ ತರಲು ಉದ್ದೇಶಿಸಿರುವ ಕ್ಷೇತ್ರ ಮರುವಿಂಗಡಣೆಯನ್ನು (Delimitation) ನಾವು ವಿರೋಧಿಸುತ್ತೇವೆ. ಇದರಿಂದ ಜನಸಂಖ್ಯೆ ನಿಯಂತ್ರಿಸಿದ ದಕ್ಷಿಣ ಭಾರತದ ರಾಜ್ಯಗಳಿಗೆ ಭಾರಿ ಅನ್ಯಾಯವಾಗಲಿದೆ.

ದಕ್ಷಿಣದ ರಾಜ್ಯಗಳಿಗೆ ಹಿನ್ನಡೆ: “ಕ್ಷೇತ್ರ ಮರುವಿಂಗಡಣೆಯಾದರೆ ಉತ್ತರ ಪ್ರದೇಶದ ಸಂಸದರ ಸಂಖ್ಯೆ 120ಕ್ಕೆ ಏರಬಹುದು, ಆದರೆ ಕರ್ನಾಟಕದ್ದು ಕೇವಲ 42ಕ್ಕೆ ಸೀಮಿತವಾಗಬಹುದು. ಇದು ಜನಸಂಖ್ಯೆ ನಿಯಂತ್ರಣ ಮಾಡಿದ ನಮಗೆ ಮಾಡುವ ದ್ರೋಹ” ಎಂದು ಸಿಎಂ ಆತಂಕ ವ್ಯಕ್ತಪಡಿಸಿದರು.

ಪ್ರಧಾನಿಯವರು ಬೆಂಗಳೂರಿಗೆ ಬಂದಿದ್ದಾಗ ಈ ಬಗ್ಗೆ ಅಭಿಪ್ರಾಯ ಕೇಳಿದ್ದರು. ನಾವು ಮೀಸಲಾತಿಗೆ ಬೆಂಬಲವಿದೆ ಎಂದು ಮಾತ್ರ ಹೇಳಿದ್ದೇವೆ ಹೊರತು, ದಕ್ಷಿಣದ ಹಿತಕ್ಕೆ ಧಕ್ಕೆಯಾಗುವ ಕ್ಷೇತ್ರ ಮರುವಿಂಗಡಣೆಯನ್ನಲ್ಲ ಎಂದು ಅವರು ಸ್ಪಷ್ಟಪಡಿಸಿದರು.

The post ಪ್ರಧಾನಿ ಮೋದಿ ಸಾಮಾಜಿಕ ನ್ಯಾಯದ ಪರವಾಗಿಲ್ಲ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ. appeared first on Good News 24x7.

]]>
‘ಜೈಲರ್ 2’ ಚಿತ್ರಕ್ಕೆ ಪವನ್ ಕಲ್ಯಾಣ್ ನೋ: ಅತಿಥಿ ಪಾತ್ರದ ಆಯ್ಕೆಯಲ್ಲೇ ಸಿನೆಮಾತಂಡಕ್ಕೆ ಎದುರಾಯ್ತು ದೊಡ್ಡ ವಿಘ್ನ! https://www.goodnews24x7.com/pawan-kalyan-not-in-jailer-2-the-film-crew-faced-a-big-hurdle-in-choosing-a-guest-role/ Sat, 11 Apr 2026 11:08:11 +0000 https://www.goodnews24x7.com/?p=9208 ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಸಿನೆಮಾ ‘ಜೈಲರ್ 2’ ಈಗ ಅತಿಥಿ ಪಾತ್ರವೊಂದರ ಆಯ್ಕೆಯಿಂದಾಗಿ ಸುದ್ದಿಯಲ್ಲಿದೆ. ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದರೂ, ಕೇವಲ ಐದು ದಿನಗಳ ಕಾಲ ಶೂಟಿಂಗ್ ಮಾಡಬೇಕಿರುವ ಒಂದು ಪ್ರಮುಖ ಅತಿಥಿ…

The post ‘ಜೈಲರ್ 2’ ಚಿತ್ರಕ್ಕೆ ಪವನ್ ಕಲ್ಯಾಣ್ ನೋ: ಅತಿಥಿ ಪಾತ್ರದ ಆಯ್ಕೆಯಲ್ಲೇ ಸಿನೆಮಾತಂಡಕ್ಕೆ ಎದುರಾಯ್ತು ದೊಡ್ಡ ವಿಘ್ನ! appeared first on Good News 24x7.

]]>

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಸಿನೆಮಾ ‘ಜೈಲರ್ 2’ ಈಗ ಅತಿಥಿ ಪಾತ್ರವೊಂದರ ಆಯ್ಕೆಯಿಂದಾಗಿ ಸುದ್ದಿಯಲ್ಲಿದೆ. ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದರೂ, ಕೇವಲ ಐದು ದಿನಗಳ ಕಾಲ ಶೂಟಿಂಗ್ ಮಾಡಬೇಕಿರುವ ಒಂದು ಪ್ರಮುಖ ಅತಿಥಿ ಪಾತ್ರಕ್ಕೆ ಸೂಕ್ತ ನಟ ಸಿಗದೆ ಚಿತ್ರತಂಡ ಕಂಗಾಲಾಗಿದೆ. ಈ ಮಹತ್ವದ ಪಾತ್ರಕ್ಕಾಗಿ ಮೊದಲು ನಂದಮೂರಿ ಬಾಲಕೃಷ್ಣ ಮತ್ತು ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರನ್ನು ಸಂಪರ್ಕಿಸಲಾಗಿತ್ತು. ಆದರೆ ಅವರಿಬ್ಬರೂ ನಯವಾಗಿ ತಿರಸ್ಕರಿಸಿದ ಬೆನ್ನಲ್ಲೇ, ಈಗ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಕೂಡ ಈ ಆಫರ್ ಅನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ.

ರಾಜಕೀಯ ಒತ್ತಡದ ಕಾರಣ ಹಿಂದೆ ಸರಿದ ಪವನ್ ಕಲ್ಯಾಣ್:
ಪವನ್ ಕಲ್ಯಾಣ್ ಪ್ರಸ್ತುತ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸಕ್ರಿಯ ರಾಜಕೀಯ ಜವಾಬ್ದಾರಿಗಳ ಕಾರಣದಿಂದ ಚಿತ್ರೀಕರಣಕ್ಕೆ ಸಮಯ ನೀಡಲು ಅಸಾಧ್ಯ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ತೆಲುಗಿನಲ್ಲಿಯೂ ಅವರು ಯಾವುದೇ ಹೊಸ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿಲ್ಲ. ರಜನಿಕಾಂತ್, ಶಿವರಾಜ್‌ಕುಮಾರ್ ಮತ್ತು ಮೋಹನ್‌ಲಾಲ್ ಅವರಂತಹ ದಿಗ್ಗಜರ ಜೊತೆ ಪವನ್ ಕಲ್ಯಾಣ್ ಅವರನ್ನು ಒಂದೇ ತೆರೆಯ ಮೇಲೆ ನೋಡಬೇಕೆಂಬ ಅಭಿಮಾನಿಗಳ ಆಸೆಗೆ ಈ ನಿರ್ಧಾರದಿಂದ ತಣ್ಣೀರೆರಚಿದಂತಾಗಿದೆ.

ಬಿಡುಗಡೆಯ ತಯಾರಿಯಲ್ಲಿ ‘ಜೈಲರ್ 2’:
ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಚಿತ್ರವನ್ನು ಸನ್ ಪಿಕ್ಚರ್ಸ್ ಅದ್ಧೂರಿಯಾಗಿ ನಿರ್ಮಿಸುತ್ತಿದ್ದು, ಅನಿರುದ್ಧ್ ರವಿಚಂದರ್ ಸಂಗೀತ ನೀಡುತ್ತಿದ್ದಾರೆ. ಈ ಬಾರಿ ಚಿತ್ರದಲ್ಲಿ ಎಸ್‌ಜೆ ಸೂರ್ಯ ಅವರು ಪ್ರಬಲ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್ ಎರಡನೇ ವಾರದಲ್ಲಿ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ. ಆದರೆ, ಪ್ರಮುಖ ಅತಿಥಿ ಪಾತ್ರದ ಗೊಂದಲ ಇನ್ನೂ ಬಗೆಹರಿಯದಿರುವುದು ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

The post ‘ಜೈಲರ್ 2’ ಚಿತ್ರಕ್ಕೆ ಪವನ್ ಕಲ್ಯಾಣ್ ನೋ: ಅತಿಥಿ ಪಾತ್ರದ ಆಯ್ಕೆಯಲ್ಲೇ ಸಿನೆಮಾತಂಡಕ್ಕೆ ಎದುರಾಯ್ತು ದೊಡ್ಡ ವಿಘ್ನ! appeared first on Good News 24x7.

]]>
ಬಿಜೆಪಿ ಸರ್ಕಾರ ಅಭಿವೃದ್ಧಿ ಮಾಡಲಿಲ್ಲ, ಲೂಟಿ ಮಾತ್ರ: ಸಿಎಂ ಸಿದ್ದರಾಮಯ್ಯ ಆರೋಪ. https://www.goodnews24x7.com/bjp-government-did-not-develop-only-looted-cm-siddaramaiah-alleges/ Tue, 31 Mar 2026 10:59:18 +0000 https://www.goodnews24x7.com/?p=9060 ಬಾಗಲಕೋಟೆ: ರಾಜ್ಯದಲ್ಲಿ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಗಳು ಅಭಿವೃದ್ಧಿ ಕೆಲಸಗಳಿಗಿಂತ ಲೂಟಿ ಮಾಡುವುದಲ್ಲದೇ ಏನೂ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಪರ ಪ್ರಚಾರ ನಡೆಸಿದ ಅವರು, ಬಿಜೆಪಿ…

The post ಬಿಜೆಪಿ ಸರ್ಕಾರ ಅಭಿವೃದ್ಧಿ ಮಾಡಲಿಲ್ಲ, ಲೂಟಿ ಮಾತ್ರ: ಸಿಎಂ ಸಿದ್ದರಾಮಯ್ಯ ಆರೋಪ. appeared first on Good News 24x7.

]]>

ಬಾಗಲಕೋಟೆ: ರಾಜ್ಯದಲ್ಲಿ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಗಳು ಅಭಿವೃದ್ಧಿ ಕೆಲಸಗಳಿಗಿಂತ ಲೂಟಿ ಮಾಡುವುದಲ್ಲದೇ ಏನೂ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಪರ ಪ್ರಚಾರ ನಡೆಸಿದ ಅವರು, ಬಿಜೆಪಿ ಸರ್ಕಾರ ರೈತರ ಪರ ಯಾವುದೇ ಕ್ರಮ ಕೈಗೊಂಡಿಲ್ಲ. ಒಂದು ರೂಪಾಯಿ ಸಾಲ ಮನ್ನಾ ಮಾಡದ ಬಿಜೆಪಿ ಈಗ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರದ ವಿರುದ್ಧವೂ ತೀವ್ರ ಟೀಕೆ ಮಾಡಿದ ಸಿದ್ದರಾಮಯ್ಯ, ಆಲಮಟ್ಟಿ ಯೋಜನೆ ವಿಚಾರದಲ್ಲಿ ಬಿಜೆಪಿ ಜನವಿರೋಧಿ ನಿಲುವು ತಾಳಿದೆ. ಕಳೆದ 13 ವರ್ಷಗಳಿಂದ ಗೆಜೆಟ್ ನೋಟಿಫಿಕೇಶನ್ ಮಾಡದೇ ರೈತರಿಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.

ಇದೇ ವೇಳೆ, ಹಿಂದಿನ ಬಿಜೆಪಿ ಸರ್ಕಾರ ಬಾಕಿ ಬಿಟ್ಟಿದ್ದ ಸುಮಾರು 30 ಸಾವಿರ ಕೋಟಿ ರೂಪಾಯಿಗಳಲ್ಲಿ 24 ಸಾವಿರ ಕೋಟಿ ರೂಪಾಯಿ ಸಾಲವನ್ನು ತಾವು ತೀರಿಸಿದ್ದೇವೆ ಎಂದರು. ಹಣವಿಲ್ಲದೇ ಗುತ್ತಿಗೆ ನೀಡಿ ರಾಜ್ಯವನ್ನು ಸಂಕಷ್ಟಕ್ಕೆ ತಳ್ಳಿದ್ದರು ಎಂದು ದೂರಿದರು.

ಎಚ್.ವೈ. ಮೇಟಿ ಅವರ ಸೇವೆಯನ್ನು ಸ್ಮರಿಸಿದ ಸಿಎಂ, ಅವರ ಪುತ್ರ ಉಮೇಶ್ ಮೇಟಿ ಅವರನ್ನು ಗೆಲ್ಲಿಸುವಂತೆ ಮತದಾರರಿಗೆ ಮನವಿ ಮಾಡಿದರು. ಮೇಟಿ ಅವರ ಕನಸುಗಳನ್ನು ಈಡೇರಿಸಲು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಬೇಕು ಎಂದರು.

The post ಬಿಜೆಪಿ ಸರ್ಕಾರ ಅಭಿವೃದ್ಧಿ ಮಾಡಲಿಲ್ಲ, ಲೂಟಿ ಮಾತ್ರ: ಸಿಎಂ ಸಿದ್ದರಾಮಯ್ಯ ಆರೋಪ. appeared first on Good News 24x7.

]]>
2026 ರ ಬಜೆಟ್​​ನಲ್ಲಿ ರಾಜ್ಯದ ಜನರಿಗೆ ಏನೆಲ್ಲಾ ಸಿಕ್ತು? https://www.goodnews24x7.com/what-did-the-people-of-the-state-get-in-the-2026-budget/ Fri, 06 Mar 2026 11:47:36 +0000 https://www.goodnews24x7.com/?p=8725 ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಈ ಮಹತ್ವದ ಆಯವ್ಯಯ ಮಂಡಿಸುತ್ತಿದ್ದಾರೆ. ಇದು ಕೇವಲ ಬಜೆಟ್ ಮಾತ್ರವಲ್ಲ, ರಾಜ್ಯದ ಇತಿಹಾಸದಲ್ಲೇ ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ 17ನೇ ಬಜೆಟ್ ಆಗಿದ್ದು, ಇದೊಂದು ಹೊಸ ಮೈಲುಗಲ್ಲಾಗಿದೆ.ಕರುನಾಡಿನ ರಾಜಕೀಯ ಮತ್ತು ಆರ್ಥಿಕ ವಲಯದಲ್ಲಿ ಈಗ ಎಲ್ಲರ ಕಣ್ಣು…

The post 2026 ರ ಬಜೆಟ್​​ನಲ್ಲಿ ರಾಜ್ಯದ ಜನರಿಗೆ ಏನೆಲ್ಲಾ ಸಿಕ್ತು? appeared first on Good News 24x7.

]]>

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಈ ಮಹತ್ವದ ಆಯವ್ಯಯ ಮಂಡಿಸುತ್ತಿದ್ದಾರೆ. ಇದು ಕೇವಲ ಬಜೆಟ್ ಮಾತ್ರವಲ್ಲ, ರಾಜ್ಯದ ಇತಿಹಾಸದಲ್ಲೇ ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ 17ನೇ ಬಜೆಟ್ ಆಗಿದ್ದು, ಇದೊಂದು ಹೊಸ ಮೈಲುಗಲ್ಲಾಗಿದೆ.ಕರುನಾಡಿನ ರಾಜಕೀಯ ಮತ್ತು ಆರ್ಥಿಕ ವಲಯದಲ್ಲಿ ಈಗ ಎಲ್ಲರ ಕಣ್ಣು ಇಂದು ಮಂಡನೆಯಾಗಲಿರುವ 2026-27ನೇ ಸಾಲಿನ ರಾಜ್ಯ ಬಜೆಟ್ ಮೇಲಿದೆ.

ರಾಜ್ಯದಲ್ಲಿ ಅತಿ ಹೆಚ್ಚು ಹಾಗೂ ದೇಶದಲ್ಲಿ ಎರಡನೇ ಅತಿ ಹೆಚ್ಚು ಆಯವ್ಯಯ ಮಂಡಿಸಿರುವ ಸಿದ್ದರಾಮಯ್ಯ ತಮ್ಮ ಆಯ-ವ್ಯಯ ಲೆಕ್ಕ ಬಿಚ್ಚಿಟ್ಟಿದ್ದಾರೆ .

ರಾಜ್ಯದ ಕೆಲ ದೇವಸ್ಥಾನಗಳಿಗೂ ಬಜೆಟ್ ನಲ್ಲಿ ಸಿಹಿ ಸುದ್ದಿ ಸಿಕ್ಕಿದೆ. ಕುಕ್ಕೆ ಶ್ರೀ ಸುಬ್ರಮಣ್ಯ ಹಾಗೂ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಪ್ರತ್ಯೇಕ ಪ್ರಾಧಿಕಾರ ಸ್ಥಾಪನೆ ಮಾಡಲಾಗಿದೆ. ಹೊರ ರಾಜ್ಯದ ಪುಣ್ಯ ಕ್ಷೇತ್ರಗಳಲ್ಲಿರುವ ಮುಜರಾಯಿ ಅಧೀನದ ಛತ್ರಗಳ ನವೀಕರಣ, ವಾರಣಾಸಿಯ ಛತ್ರ, ಮಂತ್ರಾಲಯ ಶ್ರೀ ರಾಘವೇಂದ್ರ ದೇವಸ್ಥಾನದ ಛತ್ರ, ಶ್ರೀಶೈಲಂ ಕ್ಷೇತ್ರದ ಛತ್ರ, ತುಳಜಾಪುರ ಕ್ಷೇತ್ರದ ಛತ್ರ ನವೀಕರಣಕ್ಕೆ ನಿರ್ಧಾರ ಮಾಡಿದ್ದಾರೆ. ಮುಜರಾಯಿ ವ್ಯಾಪ್ತಿಯ 259 ಕಲ್ಯಾಣಿಗಳನ್ನು ಪುಮಶ್ಚೇತನಕ್ಕೆ ಕ್ರಮ, ಕಾಶ್ಮೀರದ ಮಾತಾ ವೈಷ್ಣೋದೇವಿ ಯಾತ್ರಿಕರಿಗೆ 5 ಸಾವಿರ ಧನಸಹಾಯ, ಡಿಬಿಟಿ ಮೂಲಕ ಯಾತ್ರಿಕರಿಗೆ ಹಣ ಸಂದಾಯ ಮಾಡಲು ಒಪ್ಪಿಗೆ ನೀಡಲಾಗಿದೆ.

ಈ ವರ್ಷ 2026-27ನೇ ಸಾಲಿನ ರಾಜ್ಯ ಬಜೆಟ್​​ ಮಂಡನೆ ಮಾಡಲಾಗಿದೆ. ಈ ಬಾರಿ ಇಲಾಖೆಗಳಿಗೆ ರೆವಿನ್ಯೂ ಟಾರ್ಗೆಟ್ ನೀಡಲಾಗಿದೆ.

ಸಾರಿಗೆ ಇಲಾಖೆಗೆ: 15500 ಕೋಟಿ ಟಾರ್ಗೆಟ್
ನೊಂದಣಿ ಮುದ್ರಾಂಕ: 29000 ಕೋಟಿ ಟಾರ್ಗೆಟ್
ಅಬಕಾರಿ ಇಲಾಖೆಗೆ: 45000 ಕೋಟಿ ಟಾರ್ಗೆಟ್
ಗಣಿ ಇಲಾಖೆಗೆ: 11000 ಕೋಟಿ ಟಾರ್ಗೆಟ್
ವಾಣಿಜ್ಯ ಇಲಾಖೆಗೆ: 125000 ಕೋಟಿ ಟಾರ್ಗೆಟ್

 

ಬಜೆಟ್ ನಲ್ಲಿ ಕನ್ನಡ ಚಿತ್ರರಂಗಕ್ಕೆ ಕಿರು ಕಾಣಿಕೆ ಕೊಟ್ಟ ರಾಜ್ಯ ಸರ್ಕಾರ!

ಈ ವರ್ಷದ ಬಜೆಟ್​​ನಲ್ಲಿ ಕನ್ನಡ ಚಿತ್ರರಂಗಕ್ಕೆ ರಾಜ್ಯ ಸರ್ಕಾರ ಕಿರು ಕಾಣಿಕೆ ಕೊಟ್ಟಿದೆ. ಫಿಲ್ಮಿ ಸಿಟಿ ಯಲ್ಲಿ ಥೀಮ್ ಪಾರ್ಕ್, ಸ್ಟಾರ್ ಹೋಟೆಲ್ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಸಿದ್ದರಾಮಯ್ಯ ಚಿತ್ರರಂಗಕ್ಕೆ ಸಿನಿಮಿತ್ರನ ಕಾಣಿಕೆ ಕೊಟ್ಟಿದ್ದಾರೆ. ಚಿತ್ರರಂಗದ ನೆರವಿಗೆ “ಸಿನಿ ಮಿತ್ರ” ಡಿಜಿಟಲ್ ವ್ಯವಸ್ಥೆ ಜಾರಿಗೆ ಅಸ್ತು ಎನ್ನಲಾಗಿದೆ. ಉತ್ತಮ ಚಿತ್ರಗಳಿಗೆ ಸಬ್ಸಿಡಿಗಾಗಿ 20 ಕೋಟಿ ಅನುದಾನ ಘೋಷಣೆ ಮಾಡಲಾಗಿದೆ. ಆದರೆ ಮೈಸೂರಿನ ಫಿಲ್ಮಿ ಸಿಟಿ ಕೆಲಸ ಆರಂಭಿಸುವ ಬಗ್ಗೆ ಬಜೆಟ್ ನಲ್ಲಿ ಸುಳಿವು ಇಲ್ಲ, ಈ ಬಾರಿಯ ಬಜೆಟ್ ನಲ್ಲೂ ಜನತಾ ಟಾಕೀಸ್ ಬಗ್ಗೆ ಸರ್ಕಾರ ಗಮನ ಹರಿಸಿಲ್ಲ.

ರಾಜ್ಯ ಬಜೆಟ್​​ನಲ್ಲಿ ಈ ಬಾರಿ ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ಅನುದಾನ?

ಈ ಬಾರಿಯ 2026-27 ನೇ ಸಾಲಿನ ಬಜೆಟ್​​ನಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ಅನುದಾನ ಘೋಷಣೆ ಮಾಡಿದ್ದಾರೆ ನೋಡಿ.
ಪಶುಸಂಗೋಪನೆ – 4084 ಕೋಟಿ
ಕೃಷಿ ಮತ್ತು ತೋಟಗಾರಿಕೆ – 8373 ಕೋಟಿ
ಆಹಾರ, ನಾಗರೀಕ ಸರಬರಾಜು – 7942 ಕೋಟಿ
ಲೊಕೋಪಯೋಗಿ – 11424 ಕೋಟಿ
ಸಮಾಜ ಕಲ್ಯಾಣ ಇಲಾಖೆ- 18612 ಕೋಟಿ
ಕಂದಾಯ ಇಲಾಖೆ- 19845 ಕೋಟಿ
ಆರೋಗ್ಯ ಕುಟುಂಬ ಕಲ್ಯಾಣ – 17818 ಕೋಟಿ
ಶಿಕ್ಷಣ ಇಲಾಖೆ- 47224 ಕೋಟಿ
ಮಹಿಳಾ ಮಕ್ಕಳ ಕಲ್ಯಾಣ – 34929 ಕೋಟಿ
ಇಂಧನ ಇಲಾಖೆ- 29947 ಕೋಟಿ
ಗ್ರಾಮೀಣಾಭಿವೃದ್ಧಿ ಇಲಾಖೆ- 26559 ಕೋಟಿ
ನೀರಾವರಿ- 22436 ಕೋಟಿ
ನಗರಾಭಿವೃದ್ಧಿ,ವಸತಿ ಇಲಾಖೆ- 22203 ಕೋಟಿ

ಒಳಾಡಳಿತ ಬಂದರು- 23100 ಕೋಟಿ
ಇತರೆ ವೆಚ್ಚ- 172757 ಕೋಟಿ

ಗ್ಯಾರಂಟಿ ಯೋಜನೆಗಳಿಗೆ ಈ ಬಾರಿಯೂ ಹಣ ಮೀಸಲಿಟ್ಟ ಸರ್ಕಾರ

ಗ್ಯಾರಂಟಿ ಯೋಜನೆಗಳಿಗೆ ಈ ಬಾರಿಯೂ ಸರ್ಕಾರ ಹಣ ಮೀಸಲಿಟ್ಟಿದೆ. ಹಾಗಾದ್ರೆ ಯಾವೆಲ್ಲಾ ಯೋಜನೆ ಎಷ್ಟು ಅನುದಾನ ಮೀಸಲಿಟ್ಟಿದ್ದಾರೆ?
ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿ ಹಣ ಮೀಸಲು
ಅನ್ನ ಭಾಗ್ಯ ಯೋಜನೆಗೆ 6,200 ಕೋಟಿ ಮೀಸಲು
ಗೃಹ ಜ್ಯೋತಿ ಯೋಜನೆಗೆ ಈ ವರ್ಷ 10,578 ಕೋಟಿ ಮೀಸಲು
ಶಕ್ತಿ ಯೋಜನೆಗೆ 5,300 ಕೋಟಿ ಹಣ ಮೀಸಲು
ಯುವ ನಿಧಿಗೆ ಯಾವುದೇ ಅನುದಾನ ಮೀಸಲಿಡದ ಸರ್ಕಾರ

The post 2026 ರ ಬಜೆಟ್​​ನಲ್ಲಿ ರಾಜ್ಯದ ಜನರಿಗೆ ಏನೆಲ್ಲಾ ಸಿಕ್ತು? appeared first on Good News 24x7.

]]>
ಯಾವಾಗ ಬೇಕಾದರೂ ಡಿಕೆ ಶಿವಕುಮಾರ್ ಸಿಎಂ ಆಗಬಹುದು: ರವಿ ಗಣಿಗ ಸ್ಫೋಟಕ ಹೇಳಿಕೆ https://www.goodnews24x7.com/dk-shivakumar-can-become-cm-anytime-ravi-ganiga-explosive-statement/ Sat, 22 Nov 2025 10:46:33 +0000 https://www.goodnews24x7.com/?p=8237 ಬೆಂಗಳೂರು: ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಎಂಬುದು ತಮ್ಮ ಮನದ ಆಸೆ ಎಂದು ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಯಾವಾಗ ಬೇಕಾದರೂ ಸಿಎಂ ಆಗಬಹುದು ಎಂದಿದ್ದಾರೆ. ಆದರೆ, ಇದೊಂದು ಹೈಕಮಾಂಡ್…

The post ಯಾವಾಗ ಬೇಕಾದರೂ ಡಿಕೆ ಶಿವಕುಮಾರ್ ಸಿಎಂ ಆಗಬಹುದು: ರವಿ ಗಣಿಗ ಸ್ಫೋಟಕ ಹೇಳಿಕೆ appeared first on Good News 24x7.

]]>

ಬೆಂಗಳೂರು: ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಎಂಬುದು ತಮ್ಮ ಮನದ ಆಸೆ ಎಂದು ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಯಾವಾಗ ಬೇಕಾದರೂ ಸಿಎಂ ಆಗಬಹುದು ಎಂದಿದ್ದಾರೆ. ಆದರೆ, ಇದೊಂದು ಹೈಕಮಾಂಡ್ ನಿರ್ಧಾರವಾಗಿದ್ದು, ಸೂಕ್ತ ಸಮಯ ಬಂದಾಗ ಅದು ನಡೆಯಲಿದೆ ಎಂದು ತಿಳಿಸಿದ್ದಾರೆ. ಪಕ್ಷದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬಣಗಳಿಲ್ಲ. 140 ಶಾಸಕರು ಇಬ್ಬರೂ ನಾಯಕರ ಪರವಾಗಿಯೂ ಇದ್ದಾರೆ. ಸಿದ್ದರಾಮಯ್ಯ ಅವರು ಪ್ರಸ್ತುತ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಜನರಿಗೆ ನೀಡಿದ ಗ್ಯಾರಂಟಿಗಳನ್ನು ಈಡೇರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರೂ, ಅದಕ್ಕೆ ಪಕ್ಷದ ಎಲ್ಲರೂ ಬದ್ಧರಾಗಿರುತ್ತಾರೆ. ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರೂ ಪಕ್ಷಕ್ಕಾಗಿ ತ್ಯಾಗ ಮಾಡಿದ್ದಾರೆ ಮತ್ತು ಹೋರಾಟ ನಡೆಸಿದ್ದಾರೆ ಎಂದು ರವಿಕುಮಾರ್ ಗಣಿಗ ತಿಳಿಸಿದ್ದಾರೆ.

The post ಯಾವಾಗ ಬೇಕಾದರೂ ಡಿಕೆ ಶಿವಕುಮಾರ್ ಸಿಎಂ ಆಗಬಹುದು: ರವಿ ಗಣಿಗ ಸ್ಫೋಟಕ ಹೇಳಿಕೆ appeared first on Good News 24x7.

]]>
ಸಚಿವ ಸಂಪುಟ ಪುನಾರಚನೆ ಬಗ್ಗೆ ಮತ್ತೊಮ್ಮೆ ಸುಳಿವು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ https://www.goodnews24x7.com/chief-minister-siddaramaiah-again-hints-at-cabinet-reshuffle/ Wed, 05 Nov 2025 10:54:47 +0000 https://www.goodnews24x7.com/?p=8039 ಕೋಲಾರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಜಿಲ್ಲೆಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆ ಕುರಿತು ಮಾತನಾಡಿ, ಸಂಪುಟ ಪುನಾರಚನೆ ವೇಳೆ ನೋಡೋಣ ಎಂದು ಹೇಳಿದರು. ನಾಲ್ಕು ಮಂದಿ ಶಾಸಕರನ್ನು ಹೊಂದಿರುವ ಜಿಲ್ಲೆಗೆ ಸಚಿವ ಸ್ಥಾನದ ಬೇಡಿಕೆ ಕುರಿತು ಪರಿಶೀಲಿಸಲಾಗುವುದು ಎಂದರು. ಇದೇ…

The post ಸಚಿವ ಸಂಪುಟ ಪುನಾರಚನೆ ಬಗ್ಗೆ ಮತ್ತೊಮ್ಮೆ ಸುಳಿವು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ appeared first on Good News 24x7.

]]>

ಕೋಲಾರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಜಿಲ್ಲೆಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆ ಕುರಿತು ಮಾತನಾಡಿ, ಸಂಪುಟ ಪುನಾರಚನೆ ವೇಳೆ ನೋಡೋಣ ಎಂದು ಹೇಳಿದರು. ನಾಲ್ಕು ಮಂದಿ ಶಾಸಕರನ್ನು ಹೊಂದಿರುವ ಜಿಲ್ಲೆಗೆ ಸಚಿವ ಸ್ಥಾನದ ಬೇಡಿಕೆ ಕುರಿತು ಪರಿಶೀಲಿಸಲಾಗುವುದು ಎಂದರು. ಇದೇ ವೇಳೆ, ಯತ್ತಿನಹೊಳೆ ಯೋಜನೆ ಎರಡು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಅನುದಾನ ಬಿಡುಗಡೆ ಕುರಿತು ಜೆಡಿಎಸ್ ಶಾಸಕರೊಬ್ಬರು ನ್ಯಾಯಾಲಯದ ಮೊರೆ ಹೋಗಿರುವ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರ ಸಮ್ಮಿಶ್ರ ಸರ್ಕಾರದ ಆಡಳಿತಾವಧಿಯನ್ನು ನೆನಪಿಸಿದರು. ಜೆಡಿಎಸ್‌ನವರು ಎಷ್ಟು ಅನುದಾನ ನೀಡಿದ್ದರು? ಅವರು ಸಿಎಂ ಆಗಿದ್ದಾಗ ರಮೇಶ್ ಕುಮಾರ್ ಅವರ ಶ್ರೀನಿವಾಸಪುರ ಕ್ಷೇತ್ರಕ್ಕೆ ಎಷ್ಟು ಅನುದಾನ ಕೊಟ್ಟಿದ್ದರು? ಎಂದು ಪ್ರಶ್ನಿಸುವ ಮೂಲಕ ಜೆಡಿಎಸ್​ಗೆ ತಿರುಗೇಟು ನೀಡಿದರು.

The post ಸಚಿವ ಸಂಪುಟ ಪುನಾರಚನೆ ಬಗ್ಗೆ ಮತ್ತೊಮ್ಮೆ ಸುಳಿವು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ appeared first on Good News 24x7.

]]>
ಸಿದ್ದರಾಮಯ್ಯನವ್ರೆ ನೀವು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಬಾರದು; ವಾಟಳ್ ನಾಗರಾಜ್​ https://www.goodnews24x7.com/siddaramaiah-you-should-not-resign-for-any-reason-vatal-nagaraj/ Sun, 02 Nov 2025 05:32:41 +0000 https://www.goodnews24x7.com/?p=7974 ಸಿದ್ದರಾಮಯ್ಯ ಅವರ ಆರೋಗ್ಯ ಎಲ್ಲಿವರೆಗೆ ಚನ್ನಾಗಿ ಇರುತ್ತೋ ಅಲ್ಲಿವರೆಗೆ ನೀವು ಮುಖ್ಯಮಂತ್ರಿಯಾಗಿರಿ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರಿಂದ ಕನಿಷ್ಠ ಒಂದು ರೀತಿ ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ, ಪ್ರೀತಿ, ಅಭಿಮಾನ ಸೇರಿ ಎಲ್ಲವೂ ಇದೆ. ನಮಗೂ ಸಿದ್ದರಾಮಯ್ಯರಿಗೂ 50 ವರ್ಷಗಳ ಬಾಂಧವ್ಯ ಇದೆ. ರಾಜ್ಯದಲ್ಲಿ…

The post ಸಿದ್ದರಾಮಯ್ಯನವ್ರೆ ನೀವು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಬಾರದು; ವಾಟಳ್ ನಾಗರಾಜ್​ appeared first on Good News 24x7.

]]>

ಸಿದ್ದರಾಮಯ್ಯ ಅವರ ಆರೋಗ್ಯ ಎಲ್ಲಿವರೆಗೆ ಚನ್ನಾಗಿ ಇರುತ್ತೋ ಅಲ್ಲಿವರೆಗೆ ನೀವು ಮುಖ್ಯಮಂತ್ರಿಯಾಗಿರಿ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರಿಂದ ಕನಿಷ್ಠ ಒಂದು ರೀತಿ ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ, ಪ್ರೀತಿ, ಅಭಿಮಾನ ಸೇರಿ ಎಲ್ಲವೂ ಇದೆ.

ನಮಗೂ ಸಿದ್ದರಾಮಯ್ಯರಿಗೂ 50 ವರ್ಷಗಳ ಬಾಂಧವ್ಯ ಇದೆ. ರಾಜ್ಯದಲ್ಲಿ ಶಾಸಕರಾಗಿ, ಮಂತ್ರಿಗಳಾಗಿ, ಮುಖ್ಯಮಂತ್ರಿಗಳಾಗಿ ಮುಂದೆ ಬಂದಿದ್ದಾರೆ. ಸಿದ್ದರಾಮಯ್ಯ ಅವರ ಆರೋಗ್ಯ ಎಲ್ಲಿವರೆಗೆ ಚನ್ನಾಗಿ ಇರುತ್ತೋ ಅಲ್ಲಿವರೆಗೆ ನೀವು ಮುಖ್ಯಮಂತ್ರಿಯಾಗಿರಿ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರಿಂದ ಕನಿಷ್ಠ ಒಂದು ರೀತಿ ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ, ಪ್ರೀತಿ, ಅಭಿಮಾನ ಸೇರಿ ಎಲ್ಲವೂ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯರ ನಂತ್ರ ಮುಂದೇನು ಎನ್ನುವುದು ನನ್ನ ಯೋಚನೆ ಆಗಿದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಹೇಳಿದ್ದಾರೆ.ಸಂವಿಧಾನ ಪರವಾಗಿ ಯಾರು ಬೇಕಾದರೂ ಅಧಿಕಾರಕ್ಕೆ ಬರಬಹುದು. ಆದರೆ ಈ ರಾಜ್ಯವನ್ನು ನಡೆಸಿಕೊಂಡು ಬಂದವರ ಪೈಕಿ ನಿಜಕ್ಕೂ ಆದರ್ಶ, ಪ್ರೀತಿ, ಅಭಿಮಾನದಿಂದ ಜನರು ನೋಡಿದಂತ ಮುಖ್ಯಮಂತ್ರಿ ಎಂದರೆ ಅದು ಸಿದ್ದರಾಮಯ್ಯನವರು. ಯಾವುದೇ ಕಾರಣಕ್ಕೂ ನೀವು ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲ, ಒತ್ತಾಯಕ್ಕೆ ಮಣಿಬೇಕಾಗಿಲ್ಲ. ಅಂತಹ ಸಂದರ್ಭ ಬಂದರೆ ನೋಡೇ ಬಿಡೋಣ ಎಂದು ವಾಟಾಳ್ ನಾಗರಾಜ್ ಅವರು ಹೇಳಿದ್ದಾರೆ.

The post ಸಿದ್ದರಾಮಯ್ಯನವ್ರೆ ನೀವು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಬಾರದು; ವಾಟಳ್ ನಾಗರಾಜ್​ appeared first on Good News 24x7.

]]>
ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದೀರಾ ಹುಷಾರ್ : ನಿಮ್ಮ ಮನೆ ಮುಂದೆಯೇ ಬೀಳಲಿದೆ ರಾಶಿ ರಾಶಿ ತ್ಯಾಜ್ಯ! https://www.goodnews24x7.com/are-you-throwing-garbage-everywhere-beware-heaps-of-garbage-will-fall-in-front-of-your-house/ Sun, 26 Oct 2025 11:31:35 +0000 https://www.goodnews24x7.com/?p=7857 ಸಾಕಷ್ಟು ಜನ ಜಾಗೃತಿ ಬಳಿಕವೂ ಬೆಂಗಳೂರು ನಗರದಲ್ಲಿ ಖುಷಿ ಬಂದಂತೆ ಕಸ ಎಸೆದು ಹೋಗುವ ಪ್ರಕರಣಗಳು ನಿಂತಿಲ್ಲ. ಹೀಗಾಗಿ ಈ ವಿಚಾರದಲ್ಲಿ ಒಂದಿಷ್ಟು ಕಠಿಣ ಕ್ರಮಗಳನ್ನ ಕೈಗೊಳ್ಳಲು ಗ್ರೇಟರ್​ ಬೆಂಗಳೂರು ಪ್ರಾಧಿಕಾರ ನಿರ್ಧರಿಸಿದೆ. ಕಸ ಎಸೆಯುವವರ ಮನೆ ಬಾಗಿಲಲ್ಲೇ ಲೋಡ್​ಗಟ್ಟಲೆ ಕಸ…

The post ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದೀರಾ ಹುಷಾರ್ : ನಿಮ್ಮ ಮನೆ ಮುಂದೆಯೇ ಬೀಳಲಿದೆ ರಾಶಿ ರಾಶಿ ತ್ಯಾಜ್ಯ! appeared first on Good News 24x7.

]]>

ಸಾಕಷ್ಟು ಜನ ಜಾಗೃತಿ ಬಳಿಕವೂ ಬೆಂಗಳೂರು ನಗರದಲ್ಲಿ ಖುಷಿ ಬಂದಂತೆ ಕಸ ಎಸೆದು ಹೋಗುವ ಪ್ರಕರಣಗಳು ನಿಂತಿಲ್ಲ. ಹೀಗಾಗಿ ಈ ವಿಚಾರದಲ್ಲಿ ಒಂದಿಷ್ಟು ಕಠಿಣ ಕ್ರಮಗಳನ್ನ ಕೈಗೊಳ್ಳಲು ಗ್ರೇಟರ್​ ಬೆಂಗಳೂರು ಪ್ರಾಧಿಕಾರ ನಿರ್ಧರಿಸಿದೆ. ಕಸ ಎಸೆಯುವವರ ಮನೆ ಬಾಗಿಲಲ್ಲೇ ಲೋಡ್​ಗಟ್ಟಲೆ ಕಸ ಸುರಿಯಲು ತೀರ್ಮಾನಿಸಿದೆ. ಜೊತೆಗೆ ದಂಡವನ್ನೂ ವಿಧಿಸಲಿದೆ.

ಬೆಂಗಳೂರು: ಎಲ್ಲೆಂದರಲ್ಲಿ ಕಸ ಎಸೆಯೋ ಅಭ್ಯಾಸ ಬೆಳೆಸಿಕೊಂಡಿದ್ದೀರಾ? ಹಾಗಿದ್ದಾರೆ ನಿಮ್ಮ ಮನೆ ಮುಂದೆಯೇ ಇನ್ನು ಲೋಡ್​ಗಟ್ಟಲೆ ಕಸ ಬಂದು ಬೀಳಲಿದೆ. ಹೌದು, ಸಾಕಷ್ಟು ಜನಜಾಗೃತಿ ಬಳಿಕವೂ ಹಲವು ಮಂದಿ ತಮಗೆ ಖುಷಿ ಬಂದಲ್ಲಿ ಕಸ ಎಸೆದು ಹೋಗುವ ಅಭ್ಯಾಸ ಮುಂದುವರಿಸಿದ್ದಾರೆ. ಇಂತಹ ಪ್ರಕರಣಗಳ ಕಡಿವಾಣಕ್ಕೆ ಮುಂದಾಗಿರುವ ಗ್ರೇಟರ್​ ಬೆಂಗಳೂರು ಪ್ರಾಧಿಕಾರ (GBA) ಇಂತಹದ್ದೊಂದು ಕಠಿಣ ಕ್ರಮಕ್ಕೆ ಮುಂದಾಗಿದೆ. ಕಸ ಎಸೆಯುವವರ ಮನೆ ಮುಂದೆಯೇ ಕಸ ಸುರಿಯುವ ಜೊತೆಗೆ ದಂಡ ವಿಧಿಸಲು ತೀರ್ಮಾನಿಸಿದೆ.

 

ಕಸ ಎಸೆದು ಹೋಗುವುದನ್ನು ಮೊದಲು ಮಾರ್ಷಲ್​ಗಳು ವಿಡಿಯೋ ಮಾಡಿಕೊಳ್ಳಲಿದ್ದಾರೆ. ಆ ಬಳಿಕ ಅಂತವರ ಮನೆಗಳನ್ನು ಶೀಘ್ರ ಪತ್ತೆಮಾಡಿ ಅವರ ಮನೆ ಮುಂದೆಯೇ ಕಸ ಸುರಿಯಲಾಗುತ್ತೆ. ಇಷ್ಟೇ ಅಲ್ಲ, ಮನೆ ಮುಂದೆ ಸರಿಯಲಾದ ಕಸದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಲೂ ತೀರ್ಮಾನಿಸಲಾಗಿದ್ದು, ಆ ಮೂಲಕ ಕಸ ಎಸೆಯುವವರನ್ನು ಜಗಜ್ಜಾಹೀರಗೊಳಿಸಲು ಜಿಬಿಎ ಮುಂದಾಗಿದೆ. ವಿಂಗಡಣೆ ಮಾಡದ ತ್ಯಾಜ್ಯ, ಪ್ಲ್ಯಾಸ್ಟಿಕ್​ ಮತ್ತು ಬಾಕ್ಸ್​ಗಳನ್ನ ಎಸೆದು ಹೋಗುವವರ ವಿಡಿಯೋಗಳನ್ನ ದಾಖಲಿಸುವ ಕೆಲಸ ಈಗಾಗಲೇ ಆರಂಭವಾಗಿದ್ದು, ಕಳೆದ ಒಂದು ವಾರದಿಂದ ಈ ಬಗ್ಗೆ ಮಾರ್ಷಲ್​ಗಳು ಕಾರ್ಯನಿರತರಾಗಿದ್ದಾರೆ. ಕಸ ಎಸೆದು ಹೋಗುವವರ ಮನೆಗಳನ್ನ ಸ್ಥಳೀಯ ಪೊಲೀಸರ ಜೊತೆಗೆ ಮಾರ್ಷಲ್​ಗಳು ತಲುಪಲಿದ್ದು, ಅವರ ಮನೆ ಬಾಗಿಲಲ್ಲೇ ಕಸದ ಲೋಡ್​ ಅನ್ನು ಹಾಕಲಾಗುತ್ತೆ. ಇದರ ಜೊತೆಗೆ ದಂಡವನ್ನೂ ವಿಧಿಸಲು ತೀರ್ಮಾನಿಸಲಾಗಿದೆ.

2-10 ಸಾವಿರ ರೂ.ವರೆಗೆ ದಂಡ
ಮನೆಮುಂದೆ ಸುರಿಯಲಾದ ಕಸವನ್ನ ಕೆಲ ಗಂಟೆಗಳ ಬಳಿಕ ತೆರವು ಮಾಡಲಾಗುತ್ತದೆ. ಆದರೆ 2 ರಿಂದ 10 ಸಾವಿರ ರೂಪಾಯಿಗಳ ವರೆಗಿನ ದಂಡವನ್ನು ಎಲ್ಲೆಂದರಲ್ಲಿ ಕಸ ಹಾಕುವವರು ಪಾವತಿಸಬೇಕು. ಈ ಬಗ್ಗೆ ತಕರಾರು, ವಾದ ಮಾಡುವಂತೆಯೂ ಇಲ್ಲ. ನಾವು ಕಸ ಎಸೆದಿಲ್ಲ ಎಂದರೂ ಮಾರ್ಷಲ್​ ಗಳು ಅದಾಗಲೇ ಸೆರೆ ಹಿಡಿದ ನೀವು ಕಸ ಎಸೆಯುವ ವಿಡಿಯೋ ತೋರಿಸಲಿದ್ದಾರೆ. ಜನ ಜಾಗೃತಿ ಕೆಲಸಗಳ ಮೂಲಕ ನಗರದಲ್ಲಿದ್ದ 869 ಬ್ಲ್ಯಾಕ್​ ಸ್ಪಾಟ್​ಗಳನ್ನ 150ಕ್ಕೆ ಇಳಿಸುವಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ ನಿಯಮಿತ ಈಗಾಗಲೇ ಸಫಲವಾಗಿದೆ. ಈ ನಡುವೆ ನಗರವನ್ನು ಸ್ವಚ್ಛವಾಗಿ ಇರಿಸುವಂತೆ ಉಪ ಮುಖ್ಯಮಂತ್ರಿ ಮತ್ತು ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್​ ಕೂಡ ಸೂಚನೆ ನೀಡಿದ್ದಾರೆ. ಹೀಗಾಗಿ ಕಸ ಎಸೆಯುವವರ ವಿರುದ್ಧ ಮತ್ತಷ್ಟು ಕಠಿಣ ಕ್ರಮಕ್ಕೆ ಮುಂದಾಗಿದ್ದೇವೆ ಎಂದು BSWML ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕರೀಗೌಡ ತಿಳಿಸಿದ್ದಾರೆ.

The post ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದೀರಾ ಹುಷಾರ್ : ನಿಮ್ಮ ಮನೆ ಮುಂದೆಯೇ ಬೀಳಲಿದೆ ರಾಶಿ ರಾಶಿ ತ್ಯಾಜ್ಯ! appeared first on Good News 24x7.

]]>
ಕೆ.ಎಸ್.ಡಿ.ಎಲ್: ಸರಕಾರಕ್ಕೆ ₹135 ಕೋಟಿ ಡಿವಿಡೆಂಡ್ ಚೆಕ್ ಹಸ್ತಾಂತರ https://www.goodnews24x7.com/ksdl-%e2%82%b9135-crore-dividend-cheque-handed-over-to-government/ Fri, 24 Oct 2025 10:47:58 +0000 https://www.goodnews24x7.com/?p=7813 ಬೆಂಗಳೂರು: ಸಾರ್ವಜನಿಕ ವಲಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು (ಕೆಎಸ್ಡಿಎಲ್) 2024-25ನೇ ಸಾಲಿನ ಲಾಭದಲ್ಲಿ 135 ಕೋಟಿ ರೂಪಾಯಿಗಳ ಚೆಕ್ ಅನ್ನು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡುವ ಮೂಲಕ ಡೆವಿಡೆಂಟ್ ಅನ್ನು ಸರಕಾರಕ್ಕೆ ಹಸ್ತಾಂತರಿಸಿತು.     ಸಂಸ್ಥೆಯ…

The post ಕೆ.ಎಸ್.ಡಿ.ಎಲ್: ಸರಕಾರಕ್ಕೆ ₹135 ಕೋಟಿ ಡಿವಿಡೆಂಡ್ ಚೆಕ್ ಹಸ್ತಾಂತರ appeared first on Good News 24x7.

]]>

ಬೆಂಗಳೂರು: ಸಾರ್ವಜನಿಕ ವಲಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು (ಕೆಎಸ್ಡಿಎಲ್) 2024-25ನೇ ಸಾಲಿನ ಲಾಭದಲ್ಲಿ 135 ಕೋಟಿ ರೂಪಾಯಿಗಳ ಚೆಕ್ ಅನ್ನು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡುವ ಮೂಲಕ ಡೆವಿಡೆಂಟ್ ಅನ್ನು ಸರಕಾರಕ್ಕೆ ಹಸ್ತಾಂತರಿಸಿತು.

 

 

ಸಂಸ್ಥೆಯ ಪರವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮತ್ತು ಕೆಎಸ್ಡಿಎಲ್ ಅಧ್ಯಕ್ಷ ಅಪ್ಪಾಜಿ ನಾಡಗೌಡ ಅವರು ಈ ಮೊತ್ತದ ಚೆಕ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದರು.ಈ ಕಾರ್ಯಕ್ರಮವು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯಿತು.

ಸಚಿವ ಎಂ.ಬಿ.ಪಾಟೀಲ್ ಅವರು ಮಾತನಾಡಿ, ಕೆಎಸ್ಡಿಎಲ್ ಸಂಸ್ಥೆಯು ಕಳೆದ ಹಣಕಾಸು ವರ್ಷದಲ್ಲಿ 1,700 ಕೋಟಿ ರೂಪಾಯಿ ವಹಿವಾಟು ನಡೆಸಿ, 451 ಕೋಟಿ ರೂ. ಲಾಭವನ್ನು ಕಂಡಿದೆ. ಇದರ ಪೈಕಿ ನಿಯಮದಂತೆ ಶೇ.30ರಷ್ಟು ಲಾಭಾಂಶವನ್ನು ಸರಕಾರಕ್ಕೆ ಕೊಡಲಾಗಿದೆ. ವಹಿವಾಟು, ಲಾಭ ಮತ್ತು ಲಾಭಾಂಶ ಮೂರರಲ್ಲೂ ಇದು ಸಾರ್ವಕಾಲಿಕ ದಾಖಲೆ ಆಗಿದೆ ಎಂದಿದ್ದಾರೆ.

2022-23ರಲ್ಲಿ ಬಿಜೆಪಿ ಸರಕಾರವಿದ್ದಾಗ ಸಂಸ್ಥೆಯ ವತಿಯಿಂದ ಸರಕಾರಕ್ಕೆ 54 ಕೋಟಿ ರೂಪಾಯಿ ಡಿವಿಡೆಂಡ್ (ಲಾಭಾಂಶ) ಕೊಡಲಾಗಿತ್ತು. 2023-24ರಲ್ಲಿ 108 ಕೋಟಿ ರೂ. ಲಾಭಾಂಶ ಹಸ್ತಾಂತರಿಸಲಾಗಿತ್ತು. ಇದಕ್ಕೆ ಹೋಲಿಸಿದರೆ ಲಾಭಾಂಶದಲ್ಲಿ ಈಗ 27 ಕೋಟಿ ರೂ. ಹೆಚ್ಚಳವಾಗಿದೆ. ಮುಂಬರುವ ವರ್ಷಗಳಲ್ಲಿ ಇದು ಮತ್ತಷ್ಟು ಹೆಚ್ಚಲಿದೆ ಎಂದು ಅವರು ನುಡಿದಿದ್ದಾರೆ.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಕೆ.ಜೆ.ಜಾರ್ಜ್, ಪ್ರಿಯಾಂಕ್ ಖರ್ಗೆ, ಡಾ.ಎಂ.ಸಿ.ಸುಧಾಕರ, ಸಂತೋಷ ಲಾಡ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ಕೆ.ಪ್ರಶಾಂತ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

The post ಕೆ.ಎಸ್.ಡಿ.ಎಲ್: ಸರಕಾರಕ್ಕೆ ₹135 ಕೋಟಿ ಡಿವಿಡೆಂಡ್ ಚೆಕ್ ಹಸ್ತಾಂತರ appeared first on Good News 24x7.

]]>
45 ನಿಮಿಷಗಳ ಸಮೀಕ್ಷೆ: ಸಮಾಧಾನದಿಂದ ವಿವರ ನೀಡಿದ ಸಿಎಂ ಸಿದ್ದರಾಮಯ್ಯ https://www.goodnews24x7.com/45-minute-survey-cm-siddaramaiah-calmly-gave-details/ Thu, 16 Oct 2025 12:45:37 +0000 https://www.goodnews24x7.com/?p=7744 ಕಾವೇರಿ ನಿವಾಸದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಆಗಮಿಸಿದ್ದ ಗಣತಿದಾರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 45 ನಿಮಿಷಕ್ಕೂ ಹೆಚ್ಚು ಕಾಲ ಸಮಾಧಾನದಿಂದ ಉತ್ತರಿಸಿದರು.ಗಣತಿದಾರರು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಮುಖ್ಯಮಂತ್ರಿಗಳು ಉತ್ತರಿಸಿ ಸಂಪೂರ್ಣ ಮಾಹಿತಿ ನೀಡಿದರು. ನಮ್ಮ ಸರ್ಕಾರವು ಹಿಂದುಳಿದ ವರ್ಗಗಳ ಆಯೋಗದ ಮೂಲಕ…

The post 45 ನಿಮಿಷಗಳ ಸಮೀಕ್ಷೆ: ಸಮಾಧಾನದಿಂದ ವಿವರ ನೀಡಿದ ಸಿಎಂ ಸಿದ್ದರಾಮಯ್ಯ appeared first on Good News 24x7.

]]>

ಕಾವೇರಿ ನಿವಾಸದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಆಗಮಿಸಿದ್ದ ಗಣತಿದಾರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 45 ನಿಮಿಷಕ್ಕೂ ಹೆಚ್ಚು ಕಾಲ ಸಮಾಧಾನದಿಂದ ಉತ್ತರಿಸಿದರು.ಗಣತಿದಾರರು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಮುಖ್ಯಮಂತ್ರಿಗಳು ಉತ್ತರಿಸಿ ಸಂಪೂರ್ಣ ಮಾಹಿತಿ ನೀಡಿದರು.

ನಮ್ಮ ಸರ್ಕಾರವು ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಸುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗಾಗಿ ನನ್ನ ಮನೆಗೆ ಭೇಟಿನೀಡಿದ ಸಿಬ್ಬಂದಿಗಳಿಗೆ ಮಾಹಿತಿ ನೀಡಿ, ನನ್ನ ಕರ್ತವ್ಯವನ್ನು ಯಶಸ್ವಿಯಾಗಿ ಪೂರೈಸಿದೆ. ಅಸಮಾನತೆ, ಬಡತನವನ್ನು ನಿವಾರಣೆ ಮಾಡಿ ಸಮಸಮಾಜ ನಿರ್ಮಾಣ ಮಾಡುವ ಉದ್ದೇಶದೊಂದಿಗೆ ನಮ್ಮ ಸರ್ಕಾರವು ಈ ಸಮೀಕ್ಷೆಯನ್ನು ಕೈಗೊಂಡಿದೆ. ಪ್ರತಿಯೊಬ್ಬರೂ ಈ ಸಮೀಕ್ಷೆಯಲ್ಲಿ ತಪ್ಪದೇ ಪಾಲ್ಗೊಂಡು, ತಮ್ಮ ಮಾಹಿತಿಯನ್ನು ಪ್ರಾಮಾಣಿಕವಾಗಿ ನೀಡಬೇಕು. ಆಗ ಮಾತ್ರ ಸಮಾಜದ ವಾಸ್ತವ ಸ್ಥಿತಿಗತಿಯ ಬಗೆಗೆ ನಿಖರ ಮಾಹಿತಿ ದೊರೆತು, ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಜನರನ್ನು ಗುರುತಿಸಿ, ಅವರ ಪ್ರಗತಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯ.

ಇದು ಯಾವುದೇ ಒಂದು ಜಾತಿಗೆ ಸೀಮಿತವಾದ ಸಮೀಕ್ಷೆಯಲ್ಲ, ರಾಜ್ಯದ ಪ್ರತಿಯೊಬ್ಬರ ಜೀವನದ ಮೇಲೆ ಬೆಳಕು ಚೆಲ್ಲುವ ಒಂದು ವೈಜ್ಞಾನಿಕ ಪ್ರಯತ್ನ. ಸಮೀಕ್ಷೆಯಲ್ಲಿ ಮಾಹಿತಿ ನೀಡುವುದರಿಂದ ನಿಮ್ಮ ವೈಯಕ್ತಿಕ ಮಾಹಿತಿ ದುರ್ಬಳಕೆ ಖಂಡಿತಾ ಆಗದು. ಚಿಂತೆ ಬಿಟ್ಟು, ಧೈರ್ಯವಾಗಿ ಸಿಬ್ಬಂದಿಗಳ ಜೊತೆ ಮಾಹಿತಿ ಹಂಚಿಕೊಳ್ಳಿ.

The post 45 ನಿಮಿಷಗಳ ಸಮೀಕ್ಷೆ: ಸಮಾಧಾನದಿಂದ ವಿವರ ನೀಡಿದ ಸಿಎಂ ಸಿದ್ದರಾಮಯ್ಯ appeared first on Good News 24x7.

]]>