children Archives - Good News 24x7 https://www.goodnews24x7.com/tag/children/ Kannada Tue, 21 Jul 2026 09:20:45 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg children Archives - Good News 24x7 https://www.goodnews24x7.com/tag/children/ 32 32 ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು ! https://www.goodnews24x7.com/wife-kills-children-husband-hangs-himself/ Tue, 21 Jul 2026 09:20:09 +0000 https://www.goodnews24x7.com/?p=9866   ಹೃದಯವೇದ್ರಾವಕ ಘಟನೆಯೊಂದು ಹುಣಸೂರಿನಲ್ಲಿ ನಡೆದಿದೆ ಪತ್ನಿ ಮಕ್ಕಳನ್ನು ಹತ್ಯೆಗೈದು ಪತಿ ನೇಣಿಗೆ ಶರಣಾಗಿರುವ ಪ್ರಕರಣ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಘಟನೆ ನ್ಯೂ ಮಾರುತಿ ಬಡಾವಣೆಯ ಹರೀಶ್ 49, ಪತ್ನಿ ನಿಶ್ಚಿತ 36 ಮಕ್ಕಳಾದ ನೆಕ್ಸಾ 13 ರಕ್ಷಾ…

The post ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು ! appeared first on Good News 24x7.

]]>

 

ಹೃದಯವೇದ್ರಾವಕ ಘಟನೆಯೊಂದು ಹುಣಸೂರಿನಲ್ಲಿ ನಡೆದಿದೆ

ಪತ್ನಿ ಮಕ್ಕಳನ್ನು ಹತ್ಯೆಗೈದು ಪತಿ ನೇಣಿಗೆ ಶರಣಾಗಿರುವ ಪ್ರಕರಣ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಘಟನೆ

ನ್ಯೂ ಮಾರುತಿ ಬಡಾವಣೆಯ ಹರೀಶ್ 49, ಪತ್ನಿ ನಿಶ್ಚಿತ 36 ಮಕ್ಕಳಾದ ನೆಕ್ಸಾ 13 ರಕ್ಷಾ 6 ಸಾವು

ಹೆಂಡತಿ ಮಕ್ಕಳ ಬಾಯಿಗೆ ಪ್ಲಾಸ್ಟರ್ ಅಂಟಿಸಿ ಉಸಿರು ಕಟ್ಟಿಸಿ ಕೊಲೆ
ನಂತರ ಮನೆ‌ ಮೊದಲ ಮಹಡಿಯ ಕೊಠಡಿಗೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ

The post ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು ! appeared first on Good News 24x7.

]]>
ರಾಮ–ಸೀತೆ ವೇಷದಲ್ಲಿ ಮಿಂಚಿದ ಮಕ್ಕಳು: ರಾಮನವಮಿಗೆ ಕಳೆ ತಂದ ಸಂಭ್ರಮ, ಶ್ರೀರಾಮ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆ. https://www.goodnews24x7.com/children-dressed-as-rama-and-sita-celebrations-that-brought-joy-to-ram-navami-call-to-adopt-the-ideals-of-sri-rama-in-life/ Sat, 28 Mar 2026 11:10:42 +0000 https://www.goodnews24x7.com/?p=9004 ಮೈಸೂರು: ಶ್ರೀ ರಾಮನು ಸತ್ಯಾ ತಾಳ್ಮೆ ಮತ್ತು ಧರ್ಮದ ಪ್ರತೀಕವಾಗಿದ್ದು ಆತನ ಜೀವನದ ಆದರ್ಶಗಳನ್ನು ಪಾಲಿಸುವುದು ರಾಮನವಮಿಯ ಮುಖ್ಯ ಉದ್ದೇಶವಾಗಿದೆ ಎಂದು ಶಾಸಕ ಟಿ ಎಸ್ ಶ್ರೀವತ್ಸ ಹೇಳಿದರು ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀರಾಮ ಮಂದಿರದಲ್ಲಿ ಕಲಾಉತ್ಸವ ಟ್ರಸ್ಟ್ ಮೈಸೂರು ಹಾಗೂ ಶ್ರೀ…

The post ರಾಮ–ಸೀತೆ ವೇಷದಲ್ಲಿ ಮಿಂಚಿದ ಮಕ್ಕಳು: ರಾಮನವಮಿಗೆ ಕಳೆ ತಂದ ಸಂಭ್ರಮ, ಶ್ರೀರಾಮ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆ. appeared first on Good News 24x7.

]]>

ಮೈಸೂರು: ಶ್ರೀ ರಾಮನು ಸತ್ಯಾ ತಾಳ್ಮೆ ಮತ್ತು ಧರ್ಮದ ಪ್ರತೀಕವಾಗಿದ್ದು ಆತನ ಜೀವನದ ಆದರ್ಶಗಳನ್ನು ಪಾಲಿಸುವುದು ರಾಮನವಮಿಯ ಮುಖ್ಯ ಉದ್ದೇಶವಾಗಿದೆ ಎಂದು ಶಾಸಕ ಟಿ ಎಸ್ ಶ್ರೀವತ್ಸ ಹೇಳಿದರು

ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀರಾಮ ಮಂದಿರದಲ್ಲಿ ಕಲಾಉತ್ಸವ ಟ್ರಸ್ಟ್ ಮೈಸೂರು ಹಾಗೂ ಶ್ರೀ ಮಹಾಜನ ಸಭಾ ಟ್ರಸ್ಟ್ ಶ್ರೀರಾಮ ಮಂದಿರ ವತಿಯಿಂದ ಶ್ರೀ ರಾಮನವಮಿ ಅಂಗವಾಗಿ ಆಯೋಜಿಸಿದ ಮಕ್ಕಳಿಗಾಗಿ ಶ್ರೀರಾಮ ಹಾಗೂ ಸೀತೆ ವೇಷಭೂಷಣ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು
ಪ್ರಸ್ತುತ ಸಮಾಜದಲ್ಲಿ ಶಾಂತಿ ಒಗ್ಗಟ್ಟು ಉಳಿಯಲು ರಾಮರಾಜ್ಯದ ಕಲ್ಪನೆ ಅಗತ್ಯವಿದೆ ರಾಮನವಮಿ ದಿನ ಮಾತ್ರವಲ್ಲದೆ ನಿತ್ಯ ರಾಮನ ಜಪಿಸುವುದರಿಂದ ಬದುಕು ಹಸನಾಗಲಿದೆ, ಇದು ರಾಮನ ಜನ್ಮದಿನ ಮಾತ್ರವಾಗಿರದೆ ವ್ಯಕ್ತಿಯ ಜೀವನಕ್ಕೆ ಅಗತ್ಯವಿರುವ ಸತ್ಯ ಧರ್ಮದ ದಾರಿದೀಪವಾಗಿದೆ ಎಂದರು, ರಾಮನು ಮರ್ಯಾದೆ ಪುರುಷೋತ್ತಮ ಎಂಬ ಪದವಿಯನ್ನು ಪಡೆದಿದ್ದು ಅವನ ಜೀವನದ ಪ್ರತಿಯೊಂದು ಕ್ಷಣವು ನಿಯಮ ಶಿಸ್ತು ಮತ್ತು ಧರ್ಮದ ಅನುಸರಣೆ ಎಂಬ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ ಅವನು ರಾಜಕುಮಾರನಾಗಿದ್ದರೂ ತಂದೆಯ ಮಾತಿಗೆ ಗೌರವ ನೀಡಿ ಅರಣ್ಯ ವಾಸವನ್ನು ಸ್ವೀಕರಿಸಿದಿದ್ದು ಪತ್ನಿ ಸೀತೆಯನ್ನು ರಕ್ಷಿಸಲು ಅನೇಕ ಕಷ್ಟಗಳನ್ನು ಎದುರಿಸುತ್ತಿದ್ದು ಮತ್ತು ಕೊನೆಗೆ ರಾವಣನನ್ನು ಸಂಹರಿಸಿ ಧರ್ಮವನ್ನು ಸ್ಥಾಪಿಸಿದ್ದು ಇವೆಲ್ಲವೂ ಅವನ ಆದರ್ಶ ವ್ಯಕ್ತಿತ್ವದ ಉದಾಹರಣೆಗಳಾಗಿವೆ ಎಂದರು

ಸ್ಪರ್ಧೆಯಲ್ಲಿ 50ಕ್ಕೂ ಹೆಚ್ಚು ಮಕ್ಕಳು ರಾಮ ಸೀತೆ ವೇಷಧರಿಸಿ ಗಮನ ಸೆಳೆದರು
ಸ್ಪರ್ಧಿಸಿದ ಎಲ್ಲ ಮಕ್ಕಳಿಗೂ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ವಿತರಿಸಿ ನಂತರ ಪ್ರಸಾದ ವಿತರಿಸಲಾಯಿತು

ಇದೇ ಸಂದರ್ಭದಲ್ಲಿ ಹಿರಿಯ ಸಮಾಜ ಸೇವಕರಾದ ರಘುರಾಮ್ ವಾಜಪಾಯಿ, ಕಾಂಗ್ರೆಸ್ ಮುಖಂಡರಾದ ಎನ್ ಎಂ ನವೀನ್ ಕುಮಾರ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ರಾಮ ಮಂದಿರದ ಮಾಧವ ರಾವ್, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಕಲ ಉತ್ಸವ ಟ್ರಸ್ಟ್ ಅಧ್ಯಕ್ಷ ಅಮಿತ್, ಜಿ ರಾಘವೇಂದ್ರ, ಜಗದೀಶ್, ಎಂ ಆರ್ ಬಾಲಕೃಷ್ಣ , ಟಿ ಎಸ್ ಅರುಣ್, ಚಕ್ರಪಾಣಿ, ನಿರೂಪಕ ಪುರುಷೋತ್ತಮ್, ವಿ ಎನ್ ಕೃಷ್ಣ, ಸುಚಿಂದ್ರ, ಎಸ್ ಎನ್ ರಾಜೇಶ್, ರಾಕೇಶ್, ದುರ್ಗಾ ಪ್ರಸಾದ್, ಶಿವು ಹಾಗೂ ಇನ್ನಿತರರು ಹಾಜರಿದ್ದರು

The post ರಾಮ–ಸೀತೆ ವೇಷದಲ್ಲಿ ಮಿಂಚಿದ ಮಕ್ಕಳು: ರಾಮನವಮಿಗೆ ಕಳೆ ತಂದ ಸಂಭ್ರಮ, ಶ್ರೀರಾಮ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆ. appeared first on Good News 24x7.

]]>
ಹೃದಯಾಘಾತದಿಂದ 9 ವರ್ಷದ ಬಾಲಕಿ ಸಾ*! https://www.goodnews24x7.com/9-year-old-girl-dies-of-heart-attack/ Thu, 26 Feb 2026 11:49:17 +0000 https://www.goodnews24x7.com/?p=8491 ರಾಜಸ್ಥಾನದ ಶಾಲೆಯಲ್ಲಿ ಆಟದ ಸಮಯದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು 9 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಆತಂಕ ಮೂಡಿಸಿದೆ. ಇದು ಮಕ್ಕಳಲ್ಲಿ ಹೆಚ್ಚುತ್ತಿರುವ ಹೃದಯಾಘಾತದ ಪ್ರಕರಣಗಳ ಬಗ್ಗೆ ಕಾಳಜಿ ಉಂಟುಮಾಡಿದೆ. ಸರ್ಕಾರಿ ಆಸ್ಪತ್ರೆಯ ವೈದ್ಯರು ದಿವ್ಯಾಳ ದೇಹದ ಮೇಲೆ ಯಾವುದೇ ಬಾಹ್ಯ…

The post ಹೃದಯಾಘಾತದಿಂದ 9 ವರ್ಷದ ಬಾಲಕಿ ಸಾ*! appeared first on Good News 24x7.

]]>

ರಾಜಸ್ಥಾನದ ಶಾಲೆಯಲ್ಲಿ ಆಟದ ಸಮಯದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು 9 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಆತಂಕ ಮೂಡಿಸಿದೆ. ಇದು ಮಕ್ಕಳಲ್ಲಿ ಹೆಚ್ಚುತ್ತಿರುವ ಹೃದಯಾಘಾತದ ಪ್ರಕರಣಗಳ ಬಗ್ಗೆ ಕಾಳಜಿ ಉಂಟುಮಾಡಿದೆ. ಸರ್ಕಾರಿ ಆಸ್ಪತ್ರೆಯ ವೈದ್ಯರು ದಿವ್ಯಾಳ ದೇಹದ ಮೇಲೆ ಯಾವುದೇ ಬಾಹ್ಯ ಗಾಯಗಳು ಕಂಡುಬಂದಿಲ್ಲ ಎಂದು ದೃಢಪಡಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಬಾಲಕಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ. ಆ ಹುಡುಗಿಯ ಕುಟುಂಬವು ಮರಣೋತ್ತರ ಪರೀಕ್ಷೆ ನಡೆಸಲು ನಿರಾಕರಿಸಿದ್ದು, ಶವವನ್ನು ಅವರಿಗೆ ಹಸ್ತಾಂತರಿಸಲಾಗಿದೆ. ಮರಣೋತ್ತರ ಪರೀಕ್ಷೆಯಿಲ್ಲದೆ ಆಕೆಯ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ರಾಜಸ್ಥಾನದ ಗೋಟನ್‌ನಲ್ಲಿರುವ ಖಾಸಗಿ ಶಾಲೆಯ ಆಟದ ಮೈದಾನದಲ್ಲಿ ಆಟವಾಡುತ್ತಿದ್ದಾಗ 9 ವರ್ಷದ ಬಾಲಕಿ ಹೃದಯಾಘಾತದಿಂದ ಕುಸಿದುಬಿದ್ದು ಸಾವನ್ನಪ್ಪಿದ ದುರಂತ ಘಟನೆ ನಡೆದಿದೆ. ಆಕೆ ಆಡುವಾಗ ಕುಸಿದುಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೃದಯಾಘಾತದಿಂದ ಮೃತಪಟ್ಟ ಮಗುವನ್ನು 5ನೇ ತರಗತಿಯ ವಿದ್ಯಾರ್ಥಿನಿ ದಿವ್ಯಾ ಎಂದು ಗುರುತಿಸಲಾಗಿದೆ.

ಫೆಬ್ರವರಿ 23ರಂದು ಬೆಳಿಗ್ಗೆ 7.48ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಬೆಳಗಿನ ಪ್ರಾರ್ಥನೆಗೆ ಇನ್ನೂ ಸಮಯವಿತ್ತು. ಹೀಗಾಗಿ ಹಲವಾರು ಮಕ್ಕಳು ಶಾಲಾ ಮೈದಾನದಲ್ಲಿ ಆಟವಾಡುತ್ತಿದ್ದರು. ದಿವ್ಯಾ ಬೇರೆ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಆಕೆ ಇದ್ದಕ್ಕಿದ್ದಂತೆ ಮೂರ್ಛೆ ತಪ್ಪಿ ಬಿದ್ದಿದ್ದಳು. ಶಾಲಾ ಸಿಬ್ಬಂದಿ ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದರು. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಆಕೆಯ ಕುಟುಂಬದ ಒಪ್ಪಿಗೆಯೊಂದಿಗೆ, ಮರಣೋತ್ತರ ಪರೀಕ್ಷೆಯಿಲ್ಲದೆ ಬಾಲಕಿಯ ಅಂತ್ಯಕ್ರಿಯೆ ನಡೆಸಲಾಯಿತು.

ವಿಚಿತ್ರವೆಂದರೆ, ದಿವ್ಯಾಳ ಅಣ್ಣ ಅಭಿಷೇಕ್ ಸುಮಾರು 4 ತಿಂಗಳ ಹಿಂದೆ ಇದೇ ರೀತಿ ಸಾವನ್ನಪ್ಪಿದ್ದ. ಸೆಪ್ಟೆಂಬರ್ 9, 2025ರಂದು ಮನೆಯಲ್ಲಿ ಆಟವಾಡುತ್ತಿದ್ದಾಗ ಅವನು ಮೂರ್ಛೆ ತಪ್ಪಿದ್ದ. ಅವನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಆತ ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದ್ದರು. ಇದೀಗ ಮತ್ತೊಬ್ಬಳು ಮಗಳು ಕೂಡ ಅದೇ ರೀತಿ ಮೃತಪಟ್ಟಿರುವುದು ಅವರ ಕುಟುಂಬಕ್ಕೆ ಆಘಾತ ಉಂಟುಮಾಡಿದೆ.

The post ಹೃದಯಾಘಾತದಿಂದ 9 ವರ್ಷದ ಬಾಲಕಿ ಸಾ*! appeared first on Good News 24x7.

]]>
11 ಮಕ್ಕಳು ಕೆಮ್ಮಿನ ಸಿರಪ್ ಸೇವಿಸಿ ಸಾ* https://www.goodnews24x7.com/11-children-die-after-consuming-cough-syrup/ Sat, 04 Oct 2025 08:49:47 +0000 https://www.goodnews24x7.com/?p=7661 ನವದೆಹಲಿ: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಇತ್ತೀಚೆಗೆ 11 ಮಕ್ಕಳು ಸಾವನ್ನಪ್ಪಿದ ಘಟನೆಗೆ ಕೆಮ್ಮಿನ ಔಷಧ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಔಷಧದ ಮಾದರಿಯನ್ನು ಪರೀಕ್ಷಿಸಿ ಕ್ಲೀನ್‌ ಚಿಟ್ ನೀಡಿವೆ. ಮಕ್ಕಳ ಸಾವಿಗೆ ಔಷಧ…

The post 11 ಮಕ್ಕಳು ಕೆಮ್ಮಿನ ಸಿರಪ್ ಸೇವಿಸಿ ಸಾ* appeared first on Good News 24x7.

]]>

ನವದೆಹಲಿ: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಇತ್ತೀಚೆಗೆ 11 ಮಕ್ಕಳು ಸಾವನ್ನಪ್ಪಿದ ಘಟನೆಗೆ ಕೆಮ್ಮಿನ ಔಷಧ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಔಷಧದ ಮಾದರಿಯನ್ನು ಪರೀಕ್ಷಿಸಿ ಕ್ಲೀನ್‌ ಚಿಟ್ ನೀಡಿವೆ. ಮಕ್ಕಳ ಸಾವಿಗೆ ಔಷಧ ಕಾರಣವಲ್ಲ ಎಂದು ಸಷ್ಟಪಡಿಸಿವೆ.

ಮಧ್ಯಪ್ರದೇಶದಲ್ಲಿ 9 ಮಕ್ಕಳು ಸಾವು: ಕಳೆದ 15 ದಿನದಲ್ಲಿ ಮಧ್ಯ ಪ್ರದೇಶದ ಛಿಂದ್ವಾರ ಜಿಲ್ಲೆಯಲ್ಲಿ 9 ಮಕ್ಕಳು ಮೃತಪಟ್ಟಿವೆ. ಈ ಮಕ್ಕಳ ಸಾವಿಗೆ ಕೋಲ್ಟಿಫ್ ಮತ್ತು ನೆಕ್‌ಸ್ಟೋ-ಡಿಎಸ್ ಕೆಮ್ಮಿನ ಔಷಧ ಸೇವನೆಯಿಂದ ಉಂಟಾದ ಕಿಡ್ನಿ ವೈಫಲ್ಯ ಕಾರಣ ಎಂದು ಪೋಷಕರು ಮತ್ತು ಸ್ಥಳೀಯರು ಆರೋಪಿಸಿದ್ದಾರೆ. ಆದರೆ ಮಧ್ಯ ಪ್ರದೇಶದ ಆರೋಗ್ಯ ಇಲಾಖೆಯು ಔಷಧದ ಪರೀಕ್ಷೆ ವೇಳೆ ಯಾವುದೇ ವಿಷಪೂರಿತ ಅಂಶ ಪತ್ತೆಯಾಗಿಲ್ಲ. ಔಷಧದ ನಿಷೇಧದ ಪ್ರಶ್ನೆಯೇ ಇಲ್ಲ. ಮಕ್ಕಳ ಸಾವಿಗೆ ಸಮಿತಿ ರಚಿಸಲಾಗಿದ್ದು, ತನಿಖೆ ಆರಂಭವಾಗಿದೆ ಎಂದು ಸ್ಪಷ್ಟಪಡಿಸಿದೆ.
ರಾಜಸ್ಥಾನದಲ್ಲಿ 2 ಮಕ್ಕಳ ಸಾವು: ರಾಜ ಸ್ಥಾನದ ಸಿಕಾರ್ ಮತ್ತು ಭರತ್‌ ಪುರ ಜಿಲ್ಲೆಗಳಲ್ಲಿ ತಲಾ ಒಂದೊಂದು ಸಾವಾಗಿದ್ದು, ಇಲ್ಲಿಯೂ ಸಹ ಔಷಧವೇ ಕಾರಣ ಎಂಬ ಆರೋಪವಿದೆ.

 

 

 

 

 

 

ತಮಿಳುನಾಡಿನಲ್ಲಿ ನಿಷೇಧ
ಮಕ್ಕಳ ಸಾವಿನ ಬೆನ್ನಲ್ಲೇ ತಮಿಳುನಾಡು ಸರ್ಕರ ಕೋಲ್ಟಿಫ್ ಸಿರಪ್ ಮೇಲೆ ನಿಷೇಧ ಹೇರಿದೆ. ತಮಿಳುನಾಡು ಔಷಧ ನಿಯಂತ್ರಣಾ ಮಂಡಳಿ ಈ ಕ್ರಮ ಕೈಗೊಂಡಿದೆ. ಘಟನೆ ಕುರಿತು ತನಿಖೆ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.

ಆರೋಪವಿದೆ. ಆದರೆ ಅಲ್ಲಿನ ಸರ್ಕಾರವು ವೈದ್ಯರಿಗೆ ಕ್ಲೀನ್‌ ಚಿಟ್ ನೀಡಿದೆ. ರಾಜಸ್ಥಾನ ಔಷಧ ನಿಯಂತ್ರಣ ಮಂಡಳಿಯು ಔಷಧಗಳ ಪೂರೈಕೆಗೆ ತಾತ್ಕಾಲಿಕ ತಡೆ ನೀಡಿದೆ. ಎರಡೂ ಪ್ರಕರಣಗಳಲ್ಲಿಯೂ ಪೋಷಕರು ವೈದ್ಯರ ಸೂಚನೆಯಿಲ್ಲದೆಯೇ ಔಷಧ ನೀಡಿದ್ದೇ ಕಾರಣ ಎಂದು ಆರೋಗ್ಯ ಇಲಾಖೆ ಹೇಳಿದೆ.

2 ವರ್ಷದ ಮಕ್ಕಳಿಗೆ ಕೆಮ್ಮಿನೌಷಧ ಬೇಡ: ಕೇಂದ್ರದ ಎಚ್ಚರಿಕೆ
ಅತ್ತ ಕೇಂದ್ರ ಸರ್ಕಾರ ಕಫ್‌ಸಿರಪ್‌ನಿಂದ ಮಕ್ಕಳ ಸಾವು ಸಂಭವಿಸಿದೆ ಎಂಬ ಆರೋಪವನ್ನು ತಿರಸ್ಕರಿಸಿದೆ. ವೈದ್ಯಕೀಯ ಮತ್ತು ವೈಜ್ಞಾನಿಕ ಪರೀಕ್ಷೆಯಲ್ಲಿ ಸಿರಪ್‌ನಲ್ಲಿ ಯಾವುದೇ ವಿಷಪೂರಿತ ಅಂಶಗಳು ಪತ್ತೆಯಾಗಿಲ್ಲ. ಈ ತನಿಖೆ ಆರಂಭವಾಗಿದೆ ಎಂದು ಸ್ಪಷ್ಟಪಡಿಸಿದೆ.

ಜತೆಗೆ 2 ವರ್ಷದ ಒಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್ ಕೊಡಬಾರದೆಂದು ಆದೇಶಿಸಿದೆ. ಜೊತೆಗೆ ಕೆಮ್ಮಿನ ಔಷಧದ ಪರಿಣಾಮ ಎಂಬ ಯಾವುದೇ ಪ್ರಕರಣ ಬಂದಲ್ಲಿ ಖಾಸಗಿ ವೈದ್ಯರು ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಬೇಕು ಎಂದು ಆದೇಶ ಹೊರಡಿಸಿದೆ.

The post 11 ಮಕ್ಕಳು ಕೆಮ್ಮಿನ ಸಿರಪ್ ಸೇವಿಸಿ ಸಾ* appeared first on Good News 24x7.

]]>
ಮೆದುಳನ್ನು ತಿನ್ನುವ ಸೋಂಕು; ಅಮೀಬಾದಿಂದ 19 ಜನ ಸಾವು, 120ಕ್ಕೂ ಹೆಚ್ಚು ಜನರಿಗೆ ಸೋಂಕು ಕೇರಳದಲ್ಲಿ ಹೈ ಅಲರ್ಟ್ https://www.goodnews24x7.com/brain-eating-amoeba-kills-19-infects-over-120-kerala-on-high-alert/ Fri, 19 Sep 2025 11:22:17 +0000 https://www.goodnews24x7.com/?p=7591 ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾದ ಪ್ರಕರಣಗಳು ಹೆಚ್ಚಾಗಿವೆ. ಕೇರಳದ ಬಹುತೇಕ ಕಡೆ ಮೆದುಳನ್ನು ತಿನ್ನುವ ಅಮೀಬಾ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ನೀರಿನ ಮೂಲಕ ಹರಡುವ ಈ ಅಮೀಬಾ ಅತ್ಯಂತ ಅಪಾಯಕಾರಿ ಮತ್ತು ಮೆದುಳನ್ನು ತಲುಪಿದರೆ ಸಾವಿಗೆ ಕಾರಣವಾಗಬಹುದು. ಕೇರಳದಲ್ಲಿಯೇ ಈ ಸೋಂಕಿನ…

The post ಮೆದುಳನ್ನು ತಿನ್ನುವ ಸೋಂಕು; ಅಮೀಬಾದಿಂದ 19 ಜನ ಸಾವು, 120ಕ್ಕೂ ಹೆಚ್ಚು ಜನರಿಗೆ ಸೋಂಕು ಕೇರಳದಲ್ಲಿ ಹೈ ಅಲರ್ಟ್ appeared first on Good News 24x7.

]]>

ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾದ ಪ್ರಕರಣಗಳು ಹೆಚ್ಚಾಗಿವೆ. ಕೇರಳದ ಬಹುತೇಕ ಕಡೆ ಮೆದುಳನ್ನು ತಿನ್ನುವ ಅಮೀಬಾ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ನೀರಿನ ಮೂಲಕ ಹರಡುವ ಈ ಅಮೀಬಾ ಅತ್ಯಂತ ಅಪಾಯಕಾರಿ ಮತ್ತು ಮೆದುಳನ್ನು ತಲುಪಿದರೆ ಸಾವಿಗೆ ಕಾರಣವಾಗಬಹುದು. ಕೇರಳದಲ್ಲಿಯೇ ಈ ಸೋಂಕಿನ ಪ್ರಕರಣಗಳು ಏಕೆ ಹೆಚ್ಚುತ್ತಿವೆ? ಈ ರೋಗವನ್ನು ಹೇಗೆ ತಡೆಗಟ್ಟುವುದು ಎಂಬುದರ ಮಾಹಿತಿ ಇಲ್ಲಿದೆ.

ತಿರುವನಂತಪುರಂ: ಕಳೆದ ವರ್ಷಕ್ಕೆ ಹೋಲಿಸಿದರೆ ಕೇರಳದಲ್ಲಿ ಮೆದುಳನ್ನು ತಿನ್ನುವ ಅಮೀಬಾದಿಂದ (brain-eating amoeba) 19 ಸಾವುಗಳು ಸಂಭವಿಸಿವೆ ಮತ್ತು 120ಕ್ಕೂ ಅಧಿಕ ಮಂದಿಗೆ ಸೋಂಕಿಗೆ ತುತ್ತಾಗಿದ್ದಾರೆ. ಕಳೆದ ವರ್ಷ 36 ಸೋಂಕುಗಳು ವರದಿಯಾಗಿತ್ತು. ಅವುಗಳಲ್ಲಿ 9 ಮಾರಕವಾಗಿತ್ತು. ಕೇರಳದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಅಪರೂಪದ ಹಾಗೂ ನೀರಿನಿಂದ ಹರಡುವ ‘ಮೆದುಳನ್ನು ತಿನ್ನುವ ಅಮೀಬಾ’ದಿಂದ ಉಂಟಾದ ಸೋಂಕುಗಳು ದ್ವಿಗುಣಗೊಂಡ ನಂತರ ಎಚ್ಚರಿಕೆ ವಹಿಸಲಾಗಿದೆ. ಸೆಪ್ಟೆಂಬರ್‌ನಲ್ಲಿಯೇ 9 ಸಾವುಗಳು ಸಂಭವಿಸಿದ್ದು, ಇಲ್ಲಿಯವರೆಗೆ 19 ಜನರು ಸಾವನ್ನಪ್ಪಿದ್ದಾರೆ.

ಕೇರಳದಲ್ಲಿ ಇತ್ತೀಚೆಗೆ ಮೆದುಳು ತಿನ್ನುವ ಅಮೀಬಾ ಸೋಂಕಿನಿಂದ 19 ಸಾವುಗಳು ದಾಖಲಾಗಿವೆ. ಈ ಅಂಕಿ ಅಂಶವು ಆಘಾತಕಾರಿಯಾಗಿದೆ. ಏಕೆಂದರೆ, ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಜಗತ್ತಿನಾದ್ಯಂತ ಈ ಅಪರೂಪದ ಕಾಯಿಲೆಯ ಪ್ರಕರಣಗಳು ಒಟ್ಟು ಸಂಖ್ಯೆ 500ಕ್ಕಿಂತ ಕಡಿಮೆ. ಇವುಗಳಲ್ಲಿ, ಕೇರಳವೊಂದರಲ್ಲೇ 120 ಪ್ರಕರಣಗಳು ವರದಿಯಾಗಿವೆ. ಕೇರಳ ರಾಜ್ಯದಲ್ಲಿ ಈ ಸೋಂಕಿನ ಆತಂಕ ನಿರಂತರವಾಗಿ ಹೆಚ್ಚುತ್ತಿದೆ. ಈ ಅಮೀಬಾದಿಂದ ಉಂಟಾಗುವ ಕಾಯಿಲೆಗೆ ನಿರ್ದಿಷ್ಟ ಚಿಕಿತ್ಸೆ ಅಥವಾ ಲಸಿಕೆ ಇಲ್ಲ ಎಂಬುದು ಇನ್ನಷ್ಟು ಆತಂಕ ಸೃಷ್ಟಿಸುವ ಸಂಗತಿ. ಈ ಸೋಂಕು ಮೆದುಳಿಗೆ ಹರಡಿದರೆ, ಅದು ಪ್ರಾಣವನ್ನೇ ಬಲಿ ಪಡೆಯಬಹುದು.

 

ಈ ಅಮೀಬಾ ಕೊಳಕು, ಬೆಚ್ಚಗಿನ ಸಿಹಿನೀರಿನಲ್ಲಿ ಬೆಳೆಯುತ್ತದೆ. ಸ್ನಾನ ಮಾಡುವಾಗ ಅಥವಾ ಈಜುವಾಗ ಮೂಗಿನ ಮೂಲಕ ದೇಹವನ್ನು ಪ್ರವೇಶಿಸಿ, ಮೆದುಳನ್ನು ತಲುಪುತ್ತದೆ. ಮಕ್ಕಳು ಮತ್ತು ಯುವಕರು ಹೆಚ್ಚಾಗಿ ಕೊಳಗಳು, ಸರೋವರಗಳು ಅಥವಾ ಈಜುಕೊಳಗಳಲ್ಲಿ ಈಜುವುದರಿಂದ ಅಪಾಯದಲ್ಲಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರು ಸ್ನಾನ ಅಥವಾ ಮನೆಕೆಲಸಕ್ಕಾಗಿ ತೆರೆದ ನೀರನ್ನು ಬಳಸುತ್ತಾರೆ, ಅವರು ಸಹ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ದುರ್ಬಲಗೊಂಡ ರೋಗನಿರೋಧಕ ಶಕ್ತಿ ಹೊಂದಿರುವವರು ಸೋಂಕಿಗೆ ಹೆಚ್ಚು ಒಳಗಾಗುತ್ತಾರೆ. ಅದಕ್ಕಾಗಿಯೇ ಈ ರೋಗದ ತಡೆಗಟ್ಟುವಿಕೆ ಮತ್ತು ಅರಿವು ನಿರ್ಣಾಯಕವಾಗಿದೆ.

ಅಮೀಬಾ ದೇಹದ ಮೇಲೆ ಹೇಗೆ ದಾಳಿ ಮಾಡುತ್ತದೆ?

ಸಫ್ದರ್ಜಂಗ್ ಆಸ್ಪತ್ರೆಯ ಸಮುದಾಯ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ. ಜುಗಲ್ ಕಿಶೋರ್, ಮೆದುಳನ್ನು ತಿನ್ನುವ ಅಮೀಬಾ ಕುಡಿಯುವ ನೀರಿನ ಮೂಲಕ ದೇಹವನ್ನು ಪ್ರವೇಶಿಸುವುದಿಲ್ಲ, ಅದರ ಬದಲಿಗೆ ಮೂಗಿನ ಮೂಲಕ ದೇಹವನ್ನು ಪ್ರವೇಶಿಸುತ್ತದೆ ಎಂದು ವಿವರಿಸುತ್ತಾರೆ . ಈಜುವಾಗ, ಸ್ನಾನ ಮಾಡುವಾಗ ಅಥವಾ ನೀರಿನಲ್ಲಿ ನಡೆಯುವಾಗ ನೀರು ಮೂಗಿಗೆ ಸೇರಿದಾಗ, ಈ ಅಮೀಬಾ ನೇರವಾಗಿ ಮೆದುಳಿಗೆ ಚಲಿಸುತ್ತದೆ. ಇದು ಸೋಂಕನ್ನು ಉಂಟುಮಾಡುತ್ತದೆ. ಇದರ ಪರಿಣಾಮವಾಗಿ ಉಂಟಾಗುವ ರೋಗವನ್ನು ಪ್ರಾಥಮಿಕ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ (PAM) ಎಂದು ಕರೆಯಲಾಗುತ್ತದೆ.

ಡಾ. ಕಿಶೋರ್ ಅವರ ಪ್ರಕಾರ, ಲಕ್ಷಣಗಳು ಆರಂಭದಲ್ಲಿ ಸಾಮಾನ್ಯ ವೈರಲ್ ಸೋಂಕನ್ನು ಹೋಲುತ್ತವೆ, ಆದರೆ ಕ್ರಮೇಣ ರೋಗಿಯು ಗೊಂದಲ, ಸೆಳೆತ ಮತ್ತು ಕೋಮಾವನ್ನು ಅನುಭವಿಸುತ್ತಾನೆ. ಈ ಸೋಂಕು ವೇಗವಾಗಿ ಹರಡುತ್ತದೆ ಮತ್ತು ಇದಕ್ಕೆ ನಿಖರವಾದ ಚಿಕಿತ್ಸೆ ಇಲ್ಲ. ಅದಕ್ಕಾಗಿಯೇ ಮೆದುಳನ್ನು ತಿನ್ನುವ ಅಮೀಬಾವನ್ನು ವೈದ್ಯಕೀಯ ವಿಜ್ಞಾನದಲ್ಲಿ ಅತ್ಯಂತ ಅಪಾಯಕಾರಿ ಸೋಂಕುಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಕೇರಳದಲ್ಲಿಯೇ ಈ ಸೋಂಕು ಏಕೆ ಹೆಚ್ಚುತ್ತಿದೆ?

ದೆಹಲಿಯ ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕ ಪ್ರೊಫೆಸರ್ ಡಾ. ಸುಭಾಷ್ ಗಿರಿ ವಿವರಿಸುವಂತೆ, ಕೇರಳದಲ್ಲಿ ಮೆದುಳನ್ನು ತಿನ್ನುವ ಅಮೀಬಾ ಪ್ರಕರಣಗಳು ಹೆಚ್ಚಾಗಲು ಅಲ್ಲಿನ ಬೆಚ್ಚಗಿನ ವಾತಾವರಣ ಒಂದು ಕಾರಣವಾಗಿರಬಹುದು. ಆಗಾಗ ಮಳೆ ಬೀಳುವುದು ಮತ್ತು ಅದರಿಂದ ಅಲ್ಲಲ್ಲಿ ನೀರು ನಿಲ್ಲುವುದು ಅಮೀಬಾಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತವೆ. ಅನೇಕ ಪ್ರದೇಶಗಳಲ್ಲಿ, ಜನರು ದೈನಂದಿನ ಅಗತ್ಯಗಳಿಗಾಗಿ ಕೊಳ ಮತ್ತು ಸರೋವರದ ನೀರನ್ನು ಬಳಸುತ್ತಾರೆ. ಇದು ಸೋಂಕಿನ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದಲ್ಲದೆ, ನಗರ ಪ್ರದೇಶಗಳಲ್ಲಿ ಈಜುಕೊಳಗಳ ಕಳಪೆ ನೈರ್ಮಲ್ಯವು ಸೋಂಕಿನ ಹರಡುವಿಕೆಗೆ ಕಾರಣವಾಗಬಹುದು.

The post ಮೆದುಳನ್ನು ತಿನ್ನುವ ಸೋಂಕು; ಅಮೀಬಾದಿಂದ 19 ಜನ ಸಾವು, 120ಕ್ಕೂ ಹೆಚ್ಚು ಜನರಿಗೆ ಸೋಂಕು ಕೇರಳದಲ್ಲಿ ಹೈ ಅಲರ್ಟ್ appeared first on Good News 24x7.

]]>
ಸ್ವಂತ ಮನೆಯನ್ನು ಮಕ್ಕಳ ಶಿಕ್ಷಣಕ್ಕಾಗಿ ಉಚಿತ ಶಾಲೆಯಾಗಿ ಬದಲಾಯಿಸಿದ ನಟ ರಾಘವ ಲಾರೆನ್ಸ್ https://www.goodnews24x7.com/actor-raghava-lawrence-converted-his-own-house-into-a-free-school-for-childrens-education-2/ Fri, 12 Sep 2025 11:59:13 +0000 https://www.goodnews24x7.com/?p=7494 ರಾಘವ ಲಾರೆನ್ಸ್ ತಮಿಳಿನ ಸ್ಟಾರ್ ನಟರುಗಳಲ್ಲಿ ಒಬ್ಬರು. ಅದ್ಭತವಾದ ಡ್ಯಾನ್ಸರ್ ಸಹ. ಆದರೆ ರಾಘವ್ ಲಾರೆನ್ಸ್ ಅವರು ತಮ್ಮ ಸಿನಿಮಾಗಳಷ್ಟೆ ತಮ್ಮ ಅದ್ಭುತ ಸಮಾಜ ಮುಖಿ ಕಾರ್ಯದಿಂದ ಹೆಚ್ಚು ಪರಿಚಿತರು. ರಾಘವ್ ಲಾರೆನ್ಸ್ ಅವರು ಹಲವಾರು ಅನಾಥ ಮಕ್ಕಳನ್ನು ದತ್ತು ಪಡೆದು…

The post ಸ್ವಂತ ಮನೆಯನ್ನು ಮಕ್ಕಳ ಶಿಕ್ಷಣಕ್ಕಾಗಿ ಉಚಿತ ಶಾಲೆಯಾಗಿ ಬದಲಾಯಿಸಿದ ನಟ ರಾಘವ ಲಾರೆನ್ಸ್ appeared first on Good News 24x7.

]]>

ರಾಘವ ಲಾರೆನ್ಸ್ ತಮಿಳಿನ ಸ್ಟಾರ್ ನಟರುಗಳಲ್ಲಿ ಒಬ್ಬರು. ಅದ್ಭತವಾದ ಡ್ಯಾನ್ಸರ್ ಸಹ. ಆದರೆ ರಾಘವ್ ಲಾರೆನ್ಸ್ ಅವರು ತಮ್ಮ ಸಿನಿಮಾಗಳಷ್ಟೆ ತಮ್ಮ ಅದ್ಭುತ ಸಮಾಜ ಮುಖಿ ಕಾರ್ಯದಿಂದ ಹೆಚ್ಚು ಪರಿಚಿತರು. ರಾಘವ್ ಲಾರೆನ್ಸ್ ಅವರು ಹಲವಾರು ಅನಾಥ ಮಕ್ಕಳನ್ನು ದತ್ತು ಪಡೆದು ಶಿಕ್ಷಣ ನೀಡಿದ್ದಾರೆ. ಇದೀಗ ತಮ್ಮ ಸ್ವಂತ ಮನೆಯನ್ನೇ ಉಚಿತ ಶಾಲೆಯನ್ನಾಗಿ ಪರಿವರ್ತನೆ ಮಾಡಿದ್ದಾರೆ ನಟ.

ಭಾರತದಲ್ಲಿ ಹಲವು ಸ್ಟಾರ್ ನಟರುಗಳಿದ್ದಾರೆ. ತೆರೆಯ ಮೇಲೆ ದುಷ್ಟರನ್ನು ಶಿಕ್ಷಿಸುವ, ಶಿಷ್ಟರನ್ನು ರಕ್ಷಿಸುವ, ಬಡವರಿಗೆ ಸಹಾಯ ಮಾಡುವ, ವಿಶಾಲ ಗುಣ ಹೊಂದಿರುವ ‘ಹೀರೋ’ ಆಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಇವರಲ್ಲಿ ಹಲವಾರು ಮಂದಿ ಕೇವಲ ತೆರೆಯ ಮೇಲಷ್ಟೆ ಹೀರೋಗಳು, ತೆರೆಯ ಹಿಂದೆ ಕಾಮ, ಕ್ರೋಧ, ಲೋಭ, ಮದ, ಮತ್ಸರ ತುಂಬಿರುವ ಸಾಮಾನ್ಯ ಮನುಷ್ಯರು. ತೆರೆಯ ಮೇಲೆ ಹಾಗೂ ತೆರೆಯ ಹೊರಗೆಯೂ ‘ಹೀರೋ’ ಆಗಿ ಬದುಕುತ್ತಿರುವವರು ಬೆರಳೆಣಿಕೆಯಷ್ಟು ನಟರು ಮಾತ್ರ. ಅವರಲ್ಲಿ ಒಬ್ಬರು ನಟ ರಾಘವ್ ಲಾರೆನ್ಸ್.
ಸಾಮಾನ್ಯ ಕಾರು ಕ್ಲೀನರ್ ಆಗಿದ್ದವರು ತಮ್ಮ ಸ್ವಂತ ಪ್ರತಿಭೆಯಿಂದಾಗಿ ಇಂದು ತಮಿಳಿನ ಸ್ಟಾರ್ ನಟರುಗಳ ಸಾಲಿನಲ್ಲಿ ನಿಂತಿದ್ದಾರೆ. ಅದ್ಭುತ ಡ್ಯಾನ್ಸರ್ ಅಗಿದ್ದ ರಾಘವ್ ಲಾರೆನ್ಸ್, ಸಿನಿಮಾ ಹಾಡುಗಳಲ್ಲಿ ಹಿಂದಿನ ಸಾಲಿನಲ್ಲಿ ಡ್ಯಾನ್ಸ್ ಮಾಡುವವರಾಗಿದ್ದವರು, ಬಳಿಕ ಸ್ವಂತ ಪರಿಶ್ರಮದಿಂದ ಲೀಡ್ ಡ್ಯಾನ್ಸರ್ ಆಗಿ ಬಳಿಕ ಕೊರಿಯಾಗ್ರಫರ್ ಆದರು. ಬಳಿಕ ನಟರಾಗಿಯೂ ಹೆಸರು ಮಾಡಿದರು. ಈಗ ತಮಿಳಿನ ಸ್ಟಾರ್ ನಟ ಮತ್ತು ನಿರ್ದೇಶಕರಾಗಿದ್ದಾರೆ. ಆದರೆ ರಾಘವ್ ಲಾರೆನ್ಸ್ ತಮ್ಮ ನಟನೆಯಷ್ಟೆ ತಾವು ಮಾಡುವ ಸಮಾಜ ಮುಖಿ ಕಾರ್ಯದಿಂದಲೂ ದೊಡ್ಡ ಮಟ್ಟದ ಹೆಸರು ಗಳಿಸಿದ್ದಾರೆ.

ಸ್ವತಃ ಕಿತ್ತು ತಿನ್ನುವ ಬಡತನ ಕಂಡು ಬಂದಿರುವ ರಾಘವ್ ಲಾರೆನ್ಸ್​ಗೆ ಬಡವರು, ಅಂಗವಿಕಲರು, ವೃದ್ಧರ ಮೇಲೆ ಅಪಾರ ಅಕ್ಕರೆ. ರಾಘವ್ ಲಾರೆನ್ಸ್ ಈಗಾಗಲೇ ನೂರಾರು ಮಂದಿ ಬಡ, ಅನಾಥ ಮಕ್ಕಳನ್ನು ದತ್ತು ಪಡೆದು ಅವರ ಜೀವನ ನಿರ್ವಹಣೆಗೆ ಸಹಾಯ ಮಾಡುತ್ತಿದ್ದಾರೆ. ಸಹಾಯ ಕೇಳಿ ಬರುವ ಹಲವರಿಗೆ ರಾಘವ್ ಸಹಾಯ ಮಾಡಿದ್ದಾರೆ. ಇದೀಗ ತಮ್ಮ ಸ್ವಂತ ಮನೆಯನ್ನೇ ಬಡ ಮಕ್ಕಳ ಶಿಕ್ಷಣಕ್ಕಾಗಿ ಶಾಲೆಯನ್ನಾಗಿ ಬದಲಾಯಿಸಿಬಿಟ್ಟಿದ್ದಾರೆ. ರಾಘವ್ ಅವರ ಈ ಕಾರ್ಯಕ್ಕೆ ನೆಟ್ಟಿಗರು ಭೇಷ್ ಎಂದಿದ್ದಾರೆ.
ಈ ಬಗ್ಗೆ ಮಾತನಾಡಿರುವ ರಾಘವ್, ‘ನಾನು ಡ್ಯಾನ್ಸ್ ಮಾಸ್ಟರ್ ಆಗಿದ್ದಾಗ ದುಡಿದ ಹಣದಿಂದ ಖರೀದಿ ಮಾಡಿದ ಮೊದಲ ಮನೆಯನ್ನು ನಾನು ಮಕ್ಕಳ ಶಿಕ್ಷಣಕ್ಕಾಗಿ ಉಚಿತ ಶಾಲೆಯನ್ನಾಗಿ ಪರಿವರ್ತನೆ ಮಾಡುತ್ತಿದ್ದೇನೆ. ಆ ಮನೆಯಲ್ಲಿ ಮೊದಲಿಗೆ ಅನಾಥ ಮಕ್ಕಳ ವಸತಿಗಾಗಿ ಮೀಸಲಿರಿಸಿದ್ದೆ. ಆದರೆ ಆ ಮಕ್ಕಳು ಬೆಳೆದು ದೊಡ್ಡವರಾಗಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಹಾಗಾಗಿ ಈಗ ಆ ಮನೆಯನ್ನು ಉಚಿತ ಶಾಲೆಯಾಗಿ ಬದಲಾಯಿಸುತ್ತಿದ್ದೇನೆ’ ಎಂದಿದ್ದಾರೆ.

ಈ ಘೋಷಣೆಗೆ ಒಂದು ದಿನ ಮುಂಚೆಯಷ್ಟೆ, ರೈಲಿನಲ್ಲಿ ಸಿಹಿ ಮಾರಾಟ ಮಾಡುತ್ತಿದ್ದ ವೃದ್ಧ ವ್ಯಕ್ತಿಯ ಚಿತ್ರವೊಂದನ್ನು ಟ್ವೀಟ್ ಮಾಡಿ ಈ ಶ್ರಮಜೀವಿ ದಂಪತಿಗೆ ಕೆಲ ಲಕ್ಷ ರೂಪಾಯಿ ಕೊಡುವುದಾಗಿ ಹೇಳಿದ್ದರು. ಅಲ್ಲದೆ ಇವರಿಂದ ಸಿಹಿ ಖರೀದಿ ಮಾಡಿ ಎಂದು ಮನವಿ ಸಹ ಮಾಡಿದ್ದರು. ಆ ಘಟನೆಯಾಗಿ 24 ಗಂಟೆಯೊಳಗೆ ಮತ್ತೊಂದು ಮಹತ್ ಕಾರ್ಯದ ಘೋಷಣೆಯನ್ನು ರಾಘವ್ ಮಾಡಿದ್ದಾರೆ. ಅಂದಹಾಗೆ ರಾಘವ್ ಲಾರೆನ್ಸ್ ತಮ್ಮ ‘ಕಾಂಚನಾ 4’ ಸಿನಿಮಾ ಘೋಷಣೆ ಮಾಡಿದ್ದಾರೆ. ಸಿನಿಮಾನಲ್ಲಿ ಪೂಜಾ ಹೆಗ್ಡೆ, ರಶ್ಮಿಕಾ ಮಂದಣ್ಣ ಮತ್ತು ನೋರಾ ಫತೇಹಿ ಸಹ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಶೀಘ್ರವೇ ಪ್ರಾರಂಭ ಆಗಲಿದೆ.

The post ಸ್ವಂತ ಮನೆಯನ್ನು ಮಕ್ಕಳ ಶಿಕ್ಷಣಕ್ಕಾಗಿ ಉಚಿತ ಶಾಲೆಯಾಗಿ ಬದಲಾಯಿಸಿದ ನಟ ರಾಘವ ಲಾರೆನ್ಸ್ appeared first on Good News 24x7.

]]>
“ಪಾರಂಪರಿಕತೆ” ಕುರಿತು ಶಾಲಾ ಮಕ್ಕಳಿಗೆ ಅರಿವು ಮೂಡಿಸಿದ ಸಂಸದ ಯದುವೀರ್. https://www.goodnews24x7.com/mp-yaduveer-creates-awareness-among-school-children-about-heritage/ Thu, 11 Sep 2025 10:38:47 +0000 https://www.goodnews24x7.com/?p=7465 ಮೈಸೂರು : ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಂದು ಸರ್ಕಾರಿ ಶಾಲಾ ಮಕ್ಕಳಿಗೆ ಪಾಠ ಮಾಡಿ ಪಾರಂಪರಿಕ‌ ಕಟ್ಟಡಗಳ ಕುರಿತು ಅರಿವು ಮೂಡಿಸಿದರು. ಮೈಸೂರಿನ ಕುಂಬಾರಕೊಪ್ಪಲಿನ ಸರ್ಕಾರಿ ಪಾಠಶಾಲೆಗೆ ಭೇಟಿ ನೀಡಿದ ಸಂಸದ ಯದುವೀರ್ ಅವರು, ಮಕ್ಕಳಿಗೆ…

The post “ಪಾರಂಪರಿಕತೆ” ಕುರಿತು ಶಾಲಾ ಮಕ್ಕಳಿಗೆ ಅರಿವು ಮೂಡಿಸಿದ ಸಂಸದ ಯದುವೀರ್. appeared first on Good News 24x7.

]]>

ಮೈಸೂರು : ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಂದು ಸರ್ಕಾರಿ ಶಾಲಾ ಮಕ್ಕಳಿಗೆ ಪಾಠ ಮಾಡಿ ಪಾರಂಪರಿಕ‌ ಕಟ್ಟಡಗಳ ಕುರಿತು ಅರಿವು ಮೂಡಿಸಿದರು. ಮೈಸೂರಿನ ಕುಂಬಾರಕೊಪ್ಪಲಿನ ಸರ್ಕಾರಿ ಪಾಠಶಾಲೆಗೆ ಭೇಟಿ ನೀಡಿದ ಸಂಸದ ಯದುವೀರ್ ಅವರು, ಮಕ್ಕಳಿಗೆ ಪಾಠ- ಪ್ರವಚನ ಮಾಡಿದರು. ನಾವು ಪಾರಂಪರಿಕವಾಗಿ ಭಾರತೀಯ, ದಕ್ಷಿಣ ಭಾರತ, ಕರ್ನಾಟಕದ ಶೈಲಿ ಕಾಣಬಹುದು. ಪ್ಲಾಸ್ಟಿಕ್, ಸಿಮೆಂಟ್ ಇನ್ನಿತರೇ ಇವು ಪಾಶ್ಚಿಮಾತ್ಯ ಶೈಲಿ. ನಮ್ಮದೇ ಆದಂತಹ ಅನನ್ಯ ಶೈಲಿ ಉಲ್ಲೇಖಿಸಬೇಕಾಗಿದೆ. ನಮ್ಮ ಕಟ್ಟಡಗಳನ್ನ ಬೇರೆ ದೇಶಗಳಲ್ಲಿ ನೋಡಲು ಸಾಧ್ಯವಿಲ್ಲ. ಜಗತ್ತಿನಾದ್ಯಂತ ಹವಮಾನ ವೈಪರೀತ್ಯ ಉಂಟಾಗುತ್ತಿದೆ ಎಂದು ತಿಳಿಸಿದರು.

ನಮಗೆ ಗಾಳಿ, ಬೆಳಕು ಬಳಕೆ ಅಧಿಕವಾಗಿ ಬೇಕಾಗುತ್ತದೆ. ಹೀಗಾಗಿ ಈ ವಾತಾವರಣ ನಮಗೆ ಹೆಚ್ಚು ಅವಶ್ಯಕ.ಅದ್ದರಿಂದ ಒಳ್ಳೆ ರೀತಿಯ ಕಟ್ಟಡಗಳನ್ನ ಉಳಿಸಿ‌ ಬೆಳೆಸಿ. ಪೂರ್ವಜರ ಆಸೆ, ಕನಸು ಹಳೆಯ ಕಟ್ಟಡಗಳಲ್ಲಿ ಹುದುಗಿದೆ. ಅವರ ನಡವಳಿಕೆಯನ್ನ ,ಆಚಾರ ವಿಚಾರಗಳನ್ನು ಉಳಿಸಿ‌ ಬೆಳೆಸಬೇಕಾಗಿದೆ. ಮೈಸೂರು ಅಂದರೆ ಕೇವಲ ಅರಮನೆ ಅಷ್ಟೆ ಅಲ್ಲ. ಮೈಸೂರಿನ ಭಾವನೆ ಉಳಿಸಿ, ಮುಂದಿನ ಪೀಳಿಗೆಗೆ ಉಣಬಡಿಸಬೇಕಿದೆ ಎಂದು ನುಡಿದರು.

 

 

 

 

 

ನಾವು ಸ್ವದೇಶಿ, ಭಾರತೀಯ ಉತ್ಫನ್ನ ಹೆಚ್ಚಾಗಿ ಬಳಸಬೇಕಿದೆ. ಪ್ರತಿಯೊಬ್ಬ ಮಗುವು ದೇಸಿ ಉತ್ಪನ್ನಗಳ ಕಡೆಗೆ ಒಲವು ತೋರಬೇಕಿದೆ. ಜೀವನದಲ್ಲೂ ಕೂಡ ಸ್ವದೇಶ ವಸ್ತು ಬಳಸುವುದು ಅನುಕೂಲಕರ. ಓಕಲ್ ಫಾರ್ ಲೋಕಲ್ ಘೋಷಣೆಯಂತೆ ಸ್ವದೇಶಿಗೆ ಹೆಚ್ಚು ಮಹತ್ವ ನೀಡಿ. ಭಾರತಕ್ಕೆ ಹೆಚ್ಚು ಅನುಕೂಲವಾಗುವ ಉತ್ಪನ್ನಗಳನ್ನ ಬಳಸಿ ಎಂದು ಸಂಸದ ಯದುವೀರ್ ಕಿವಿಮಾತು ಹೇಳಿದರು.

ಮುಂದಿನ ಪೀಳಿಗೆಗೆ ಸ್ಮರಣೆ ಮಾಡುವ ಕೆಲಸ ಮಾಡಿ. ಪರಿಸರ ಉಳಿಸಿ, ಕಾಡು ಬೆಳೆಸಿ. ಪ್ರಕೃತಿ ಹಾಳು ಮಾಡುವ ಕೆಲಸ ಮಾಡಬೇಡಿ. ಕಾರ್ಬನ್ ಉತ್ಫಾದಿಸುವ ವಸ್ತುಗಳನ್ನ ಕಡಿಮೆ ಮಾಡಿ. ಮರಗಳನ್ನ ಹೆಚ್ಚೆಚ್ಚು ಬೆಳೆಸುವ ಕೆಲಸ ಮಾಡಿ. ತ್ಯಾಜ್ಯವಸ್ತುಗಳನ್ನ ಬಳಸಿ ಕಟ್ಟಡ ನಿರ್ಮಾಣ ಮಾಡಬಹುದು. ಅಂತಹ ಕ್ರಮಗಳತ್ತ ಎಲ್ಲರೂ ಚಿತ್ತ ಹರಿಸಿ ಎಂದು ಯದುವೀರ್ ತಿಳಿಸಿದರು.

 

The post “ಪಾರಂಪರಿಕತೆ” ಕುರಿತು ಶಾಲಾ ಮಕ್ಕಳಿಗೆ ಅರಿವು ಮೂಡಿಸಿದ ಸಂಸದ ಯದುವೀರ್. appeared first on Good News 24x7.

]]>
ಶಾಲೆಗಳಲ್ಲಿ ‘ವಾಟರ್ ಬೆಲ್’ ಕಾರ್ಯಕ್ರಮ ಜಾರಿಗೆ ಮುಂದಾದ ಶಿಕ್ಷಣ ಇಲಾಖೆ . https://www.goodnews24x7.com/salega%e1%b8%b7alli-va%e1%b9%adar-bel-karyakrama-jarige-mundada-sik%e1%b9%a3a%e1%b9%87a-ilakhe-educationwaterbellchildrenwaterschoolskarnataka-sala-avadhiyalli-makka%e1%b8%b7i/ Fri, 05 Sep 2025 04:17:49 +0000 https://www.goodnews24x7.com/?p=7348 ಶಾಲಾ ಅವಧಿಯಲ್ಲಿ ಮಕ್ಕಳಿಗೆ ನೀರು ಕುಡಿಯೋಕೆ ಉತ್ತೇಜಿಸಲು ರಾಜ್ಯದ ಶಾಲೆಗಳಲ್ಲಿ ‘ವಾಟರ್ ಬೆಲ್’ ಕಾರ್ಯಕ್ರಮ ಜಾರಿಗೆ ಶಿಕ್ಷಣ ಇಲಾಖೆ ಮುಂದಾಗಿದೆ. ಈಗಾಗಲೇ ಕೇರಳದಲ್ಲಿ ವಾಟರ್ ಬೆಲ್ ಕಾರ್ಯಕ್ರಮ ಜಾರಿ ಕೇರಳ ಶಾಲೆಗಳಲ್ಲಿ ಈಗಾಗಲೇ ವಾಟರ್ ಬೆಲ್ ಕಾರ್ಯಕ್ರಮ ಅನುಷ್ಠಾನದಲ್ಲಿದೆ. ದಿನಕ್ಕೆ ಎರಡು…

The post ಶಾಲೆಗಳಲ್ಲಿ ‘ವಾಟರ್ ಬೆಲ್’ ಕಾರ್ಯಕ್ರಮ ಜಾರಿಗೆ ಮುಂದಾದ ಶಿಕ್ಷಣ ಇಲಾಖೆ . appeared first on Good News 24x7.

]]>

ಶಾಲಾ ಅವಧಿಯಲ್ಲಿ ಮಕ್ಕಳಿಗೆ ನೀರು ಕುಡಿಯೋಕೆ ಉತ್ತೇಜಿಸಲು ರಾಜ್ಯದ ಶಾಲೆಗಳಲ್ಲಿ ‘ವಾಟರ್ ಬೆಲ್’ ಕಾರ್ಯಕ್ರಮ ಜಾರಿಗೆ ಶಿಕ್ಷಣ ಇಲಾಖೆ ಮುಂದಾಗಿದೆ.

ಈಗಾಗಲೇ ಕೇರಳದಲ್ಲಿ ವಾಟರ್ ಬೆಲ್ ಕಾರ್ಯಕ್ರಮ ಜಾರಿ

ಕೇರಳ ಶಾಲೆಗಳಲ್ಲಿ ಈಗಾಗಲೇ ವಾಟರ್ ಬೆಲ್ ಕಾರ್ಯಕ್ರಮ ಅನುಷ್ಠಾನದಲ್ಲಿದೆ. ದಿನಕ್ಕೆ ಎರಡು ಬಾರಿ ಕೇರಳದಲ್ಲಿ ವಾಟಲ್ ಬೆಲ್ ಆಗಲಿದೆ. ಬೆಳಗ್ಗೆ 10:30 ಮತ್ತು ಮಧ್ಯಾಹ್ನ 2:30 ರ ಅವಧಿಯಲ್ಲಿ ವಾಟರ್ ಬೆಲ್ ಆಗುತ್ತದೆ. ಈ ಅವಧಿಯಲ್ಲಿ ಮಕ್ಕಳು ನೀರು ಕುಡಿಯುವುದು ಈ ಕಾರ್ಯಕ್ರಮದ ಉದ್ದೇಶ.‌ ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಅಥಾರಿಟಿ ಹೆಸರು ಬದಲಾವಣೆ?

ಕೇರಳದಲ್ಲಿ ಶುರು ಆಗಿರುವ ವಾಟರ್ ಬೆಲ್ ಕಾರ್ಯಕ್ರಮ ಕರ್ನಾಟಕದ ಶಾಲೆಗಳಲ್ಲೂ ಅನುಷ್ಠಾನಕ್ಕೆ ಚಿಂತನೆ ನಡೆದಿದೆ. ಈಗಾಗಲೇ ಶಿಕ್ಷಣ ಇಲಾಖೆ ಹಂತದಲ್ಲಿ ವಾಟರ್ ಬೆಲ್ ಜಾರಿ ಬಗ್ಗೆ ಚರ್ಚೆಗಳು ಇವೆ ಎನ್ನಲಾಗುತ್ತಿದೆ. ಶೀಘ್ರವೇ ರಾಜ್ಯದ ಶಾಲೆಗಳಲ್ಲೂ ಈ ಕಾರ್ಯಕ್ರಮ ಅನುಷ್ಠಾನ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ವಾಟರ್ ಬೆಲ್ ಕಾರ್ಯಕ್ರಮ ಉದ್ದೇಶವೇನು?
* ಶಾಲೆಗಳಲ್ಲಿ ಮಕ್ಕಳು ಹೆಚ್ಚು ನೀರು ಕುಡಿಯಲು ಉತ್ತೇಜಿಸುವ ಕಾರ್ಯಕ್ರಮ ಇದು.
* ಮಕ್ಕಳು ಹೆಚ್ಚು ನೀರು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು. ಹೀಗಾಗಿ, ಶಾಲೆಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವುದು.
* ಕೇರಳದಲ್ಲಿ ದಿನಕ್ಕೆ ಎರಡು ಬಾರಿ ವಾಟರ್ ಬೆಲ್ ಮಾಡೋ ಮೂಲಕ ಮಕ್ಕಳು ನೀರು ಕುಡಿಯಲು ಉತ್ತೇಜಿಸಲಾಗುತ್ತಿದೆ.
* ದಿನಕ್ಕೆ 2-3 ಬಾರಿ ವಾಟರ್ ಬೆಲ್ ಹೊಡೆದು ಮಕ್ಕಳಿಗೆ ಆರೋಗ್ಯದ ಕಾಳಜಿ ಜತೆ ನೀರಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

The post ಶಾಲೆಗಳಲ್ಲಿ ‘ವಾಟರ್ ಬೆಲ್’ ಕಾರ್ಯಕ್ರಮ ಜಾರಿಗೆ ಮುಂದಾದ ಶಿಕ್ಷಣ ಇಲಾಖೆ . appeared first on Good News 24x7.

]]>
ಮಕ್ಕಳನ್ನ ಒಂಟಿಯಾಗಿ ಮನೆಯಲ್ಲಿ ಬಿಟ್ಟು ಹೋಗೊ ಪೋಷಕರೇ ಎಚ್ಚರ !… https://www.goodnews24x7.com/parents-beware-of-leaving-children-alone-at-home/ Thu, 28 Aug 2025 04:41:15 +0000 https://www.goodnews24x7.com/?p=6846 ಇತ್ತೀಚಿನ ದಿನಗಳಲ್ಲಿ ಪೋಷಕರಿಗೆ ಕೆಲಸದ ಒತ್ತಡ ಮತ್ತು ಸಮಯದ ಕೊರತೆಯಿಂದಾಗಿ ಮಕ್ಕಳನ್ನು ಕೆಲವೊಮ್ಮೆ ಮನೆಯಲ್ಲಿ ಒಂಟಿಯಾಗಿ ಬಿಡುವುದು ಅನಿವಾರ್ಯವಾಗಿದೆ. ಆದರೆ, ಇಂತಹ ಸಂದರ್ಭಗಳಲ್ಲಿ ಮಕ್ಕಳಿಗೆ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ದಾಳಿಗಳು, ಲೈಂಗಿಕ ಕಿರುಕುಳಗಳು, ಅಪಘಾತಗಳು ಮತ್ತು ಬೆಂಕಿ ಅನಾಹುತಗಳು ಪೋಷಕರಲ್ಲಿ…

The post ಮಕ್ಕಳನ್ನ ಒಂಟಿಯಾಗಿ ಮನೆಯಲ್ಲಿ ಬಿಟ್ಟು ಹೋಗೊ ಪೋಷಕರೇ ಎಚ್ಚರ !… appeared first on Good News 24x7.

]]>

ಇತ್ತೀಚಿನ ದಿನಗಳಲ್ಲಿ ಪೋಷಕರಿಗೆ ಕೆಲಸದ ಒತ್ತಡ ಮತ್ತು ಸಮಯದ ಕೊರತೆಯಿಂದಾಗಿ ಮಕ್ಕಳನ್ನು ಕೆಲವೊಮ್ಮೆ ಮನೆಯಲ್ಲಿ ಒಂಟಿಯಾಗಿ ಬಿಡುವುದು ಅನಿವಾರ್ಯವಾಗಿದೆ. ಆದರೆ, ಇಂತಹ ಸಂದರ್ಭಗಳಲ್ಲಿ ಮಕ್ಕಳಿಗೆ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ದಾಳಿಗಳು, ಲೈಂಗಿಕ ಕಿರುಕುಳಗಳು, ಅಪಘಾತಗಳು ಮತ್ತು ಬೆಂಕಿ ಅನಾಹುತಗಳು ಪೋಷಕರಲ್ಲಿ ಭಯ ಹುಟ್ಟಿಸುತ್ತಿವೆ.

ಅಪರಿಚಿತರ ಸುಲಭ ಪ್ರವೇಶ, ವಿದ್ಯುತ್ ಉಪಕರಣಗಳ ಅಜಾಗರೂಕ ಬಳಕೆ, ಮತ್ತು ಕೆಲವೊಮ್ಮೆ ಮಕ್ಕಳ ಅಜ್ಞಾನದಿಂದ ಉಂಟಾಗುವ ಅಪಾಯಗಳನ್ನು ತಪ್ಪಿಸಲು ಪೋಷಕರು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅಗತ್ಯ.

ಮಕ್ಕಳನ್ನು ಮನೆಯಲ್ಲಿ ಒಂಟಿಯಾಗಿ ಬಿಡುವ ಮುನ್ನ ಪೋಷಕರು ಪಾಲಿಸಬೇಕಾದ 5 ಮುಖ್ಯ ಎಚ್ಚರಿಕೆಗಳು:

1. ಸುರಕ್ಷತಾ ನಿಯಮಗಳನ್ನು ಕಲಿಸಿ

ಮಕ್ಕಳಿಗೆ ದಿನನಿತ್ಯದ ಸುರಕ್ಷತಾ ನಿಯಮಗಳನ್ನು ತಿಳಿಸಿ. ಗ್ಯಾಸ್ ಸ್ಟೌವ್, ವಿದ್ಯುತ್ ಉಪಕರಣಗಳ ಬಳಕೆಯಿಂದ ದೂರ ಇರಲು ಹೇಳಿ. ಅಪರಿಚಿತರಿಗೆ ಬಾಗಿಲು ತೆಗೆಯಬಾರದೆಂದು ಖಚಿತಪಡಿಸಿ. ಫೋನ್, ಇಂಟರ್ನೆಟ್‌ ಬಳಸುವ ವೇಳೆ ಎಚ್ಚರಿಕೆಯಿಂದ ಇರಬೇಕೆಂದು ತಿಳಿಸಿ.

2. ತುರ್ತು ಸಂಪರ್ಕ ಸಂಖ್ಯೆಗಳನ್ನು ಲಭ್ಯವಿಡಿ

ಪೊಲೀಸ್ (100), ಅಗ್ನಿಶಾಮಕ (101), ಆಂಬ್ಯುಲೆನ್ಸ್ (108) ಸೇರಿದಂತೆ ಸಂಬಂಧಿಕರ ಹಾಗೂ ನೆರೆಹೊರೆಯವರ ಸಂಖ್ಯೆಗಳನ್ನು ಮಕ್ಕಳಿಗೆ ತಿಳಿಸಿ. ಈ ಸಂಖ್ಯೆಗಳ ಪಟ್ಟಿಯನ್ನು ಮನೆಯಲ್ಲಿಯೇ ಸ್ಪಷ್ಟವಾಗಿ ಲಭ್ಯವಾಗುವ ಸ್ಥಳದಲ್ಲಿ ಅಂಟಿಸಿ.

3. ಮನೆಯನ್ನು ಸುರಕ್ಷಿತವಾಗಿಡಿ

ಹೊರ ಹೋಗುವ ಮೊದಲು ಮನೆಯೊಳಗಿನ ಅಪಾಯಕಾರಿ ವಸ್ತುಗಳನ್ನು ತೆರವುಗೊಳಿಸಿ. ಚೂರಿಗಳು, ಕತ್ತಿಗಳು, ಔಷಧಿಗಳು ಮುಂತಾದವುಗಳನ್ನು ಮಕ್ಕಳ ತಲುಪದ ಸ್ಥಳದಲ್ಲಿ ಇಡಬೇಕು.

4. ಹೆಚ್ಚಿನ ಹಸಿವಿಗೆ ಸಾದ್ಯವಾದ ಆಹಾರ

ಮಕ್ಕಳಿಗೆ ಹಸಿವಾದಾಗ ಅಡುಗೆ ಮಾಡಲು ಹೋಗದಂತೆ, ಫ್ರಿಡ್ಜ್‌ ಅಥವಾ ಟೇಬಲ್‌ ಮೇಲೆ ತಿನ್ನಲು ಸುಲಭವಾಗುವ ಆಹಾರವನ್ನು ತಯಾರಿಸಿ ಇಡಿ.

5. ನಿರಂತರ ಸಂಪರ್ಕದಲ್ಲಿ ಇರಲಿ

ಮಕ್ಕಳಿಗೆ ಕಾಲ್‌ ಮಾಡಿ, ವೀಡಿಯೋ ಕರೆ ಮೂಲಕ ಮಾತನಾಡಿ. ಇದು ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸು್ತದೆ ಹಾಗೂ ಒಂಟಿತನದಿಂದ ದೂರ ಇರಿಸಲು ಸಹಕಾರಿಯಾಗುತ್ತದೆ.


ಕಳೆದ ಕಾಲದಲ್ಲಿ ಪೋಷಕರ ಹತ್ತಿರ ಸಮಯದ ಲಭ್ಯತೆ ಹೆಚ್ಚು ಇತ್ತು, ಆದರೆ ಇಂದಿನ ವ್ಯಸ್ತ ಜೀವನಶೈಲಿಯಲ್ಲಿ ಕೆಲವು ವೇಳೆ ಮಕ್ಕಳನ್ನು ಒಂಟಿಯಾಗಿ ಬಿಡಬೇಕಾಗಬಹುದು. ಆದರೂ, ಈ ಮುನ್ನೆಚ್ಚರಿಕೆಗಳನ್ನು ಅನುಸರಿಸುವ ಮೂಲಕ ಅವರ ಸುರಕ್ಷತೆಗೆ ಪೋಷಕರು ಶ್ರೇಷ್ಠ ಗುರಕ್ಷೆ ನೀಡಬಹುದು

 

The post ಮಕ್ಕಳನ್ನ ಒಂಟಿಯಾಗಿ ಮನೆಯಲ್ಲಿ ಬಿಟ್ಟು ಹೋಗೊ ಪೋಷಕರೇ ಎಚ್ಚರ !… appeared first on Good News 24x7.

]]>
ಬೆಂಗಳೂರು ನಗರದಲ್ಲಿ ಸತತ ಮಳೆಯ ಪರಿಣಾಮ ವೈರಲ್ ಜ್ವರ ಪ್ರಕರಣಗಳಲ್ಲಿ ಹೆಚ್ಚಳ. https://www.goodnews24x7.com/viral-fever-cases-increase-in-bengaluru-city-due-to-continuous-rains/ Tue, 19 Aug 2025 05:39:41 +0000 https://www.goodnews24x7.com/?p=6384 ಬೆಂಗಳೂರು : ನಗರದ ಹವಾಮಾನದಲ್ಲಿ ನಡೆಯುತ್ತಿರುವ ಅನಿಯಮಿತ ಬದಲಾವಣೆಯ ಹಿನ್ನೆಲೆ, ಕಳೆದ ಒಂದು ವಾರದಿಂದ ಸಂಭವಿಸುತ್ತಿರುವ ನಿರಂತರ ಮಳೆಯು ವೈರಲ್ ಜ್ವರ ಪ್ರಕರಣಗಳಲ್ಲಿ ಏರಿಕೆ ತರಿಸಿದೆ. ವೈದ್ಯಕೀಯ ವರದಿಗಳ ಪ್ರಕಾರ, ಮಕ್ಕಳಲ್ಲಿ ಶೇ.5 ರಿಂದ 10 ರಷ್ಟು ಮತ್ತು ಒಟ್ಟು ಒಪಿಡಿ…

The post ಬೆಂಗಳೂರು ನಗರದಲ್ಲಿ ಸತತ ಮಳೆಯ ಪರಿಣಾಮ ವೈರಲ್ ಜ್ವರ ಪ್ರಕರಣಗಳಲ್ಲಿ ಹೆಚ್ಚಳ. appeared first on Good News 24x7.

]]>

ಬೆಂಗಳೂರು : ನಗರದ ಹವಾಮಾನದಲ್ಲಿ ನಡೆಯುತ್ತಿರುವ ಅನಿಯಮಿತ ಬದಲಾವಣೆಯ ಹಿನ್ನೆಲೆ, ಕಳೆದ ಒಂದು ವಾರದಿಂದ ಸಂಭವಿಸುತ್ತಿರುವ ನಿರಂತರ ಮಳೆಯು ವೈರಲ್ ಜ್ವರ ಪ್ರಕರಣಗಳಲ್ಲಿ ಏರಿಕೆ ತರಿಸಿದೆ. ವೈದ್ಯಕೀಯ ವರದಿಗಳ ಪ್ರಕಾರ, ಮಕ್ಕಳಲ್ಲಿ ಶೇ.5 ರಿಂದ 10 ರಷ್ಟು ಮತ್ತು ಒಟ್ಟು ಒಪಿಡಿ ರೋಗಿಗಳಲ್ಲಿ ಶೇ.15-20 ರಷ್ಟು ವೈರಲ್‌ ಫೀವರ್‌ ಪ್ರಕರಣಗಳು ಹೆಚ್ಚಾಗಿವೆ.

ಹವಾಮಾನ ಬದಲಾವಣೆಯಿಂದಾಗಿ ಜ್ವರ, ಕೆಮ್ಮು, ಶೀತ, ಗಂಟಲು ನೋವು, ವಾಂತಿ, ಅತಿಸಾರ ಮುಂತಾದ ಲಕ್ಷಣಗಳೊಂದಿಗೆ ಬಾಲಕರು ಹಾಗೂ ದೊಡ್ಡವರು ಆಸ್ಪತ್ರೆಗಳ ಒಪಿಡಿಗೆ ಬರ್ತಿದ್ದಾರೆ. ಜೊತೆಗೆ ಡೆಂಗ್ಯೂ ಮತ್ತು ಟೈಫಾಯ್ಡ್ ಪ್ರಕರಣಗಳೂ ಸಹ ಕಾಣಿಸಿಕೊಂಡಿವೆ.

ವೈದ್ಯರ ಅಭಿಪ್ರಾಯ
ಕೆ.ಸಿ. ಜನರಲ್ ಆಸ್ಪತ್ರೆಯ ವೈದ್ಯ ಡಾ. ಸುರೇಶ್ ಹೇಳುವಂತೆ, “ಮಕ್ಕಳಲ್ಲಿಯಷ್ಟೇ ಅಲ್ಲದೆ, ದೊಡ್ಡವರಲ್ಲೂ ವೈರಲ್ ಜ್ವರ ಪ್ರಕರಣಗಳು ಹೆಚ್ಚಾಗಿವೆ. ಬಹುಪಾಲು ಪ್ರಕರಣಗಳು ಮೂರು ನಾಲ್ಕು ದಿನಗಳಲ್ಲಿ ಚೇತರಿಸಿಕೊಳ್ಳುತ್ತವೆ.”

ವಾಣಿವಿಲಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಸವಿತಾ ಸಿ. ಅವರು, “ಚಳಿಯ ವಾತಾವರಣದಿಂದಾಗಿ ಗರ್ಭಿಣಿಯರಲ್ಲಿಯೂ ಜ್ವರ, ನೆಗಡಿಯಂತಹ ಲಕ್ಷಣಗಳ ಪ್ರಮಾಣದಲ್ಲಿ ಏರಿಕೆ ಕಂಡುಬರುತ್ತಿದೆ. ಇದು ಸಾಮಾನ್ಯವಾಗಿ ರೆಸ್ಪಿರೇಟರಿ ವೈರಸ್‌ನಿಂದ ಉಂಟಾಗುವ ಅಸ್ವಸ್ಥತೆ” ಎಂದರು.

ಆರೋಗ್ಯ ಕಾಳಜಿ ಅಗತ್ಯ
ಕೆ.ಸಿ. ಜನರಲ್, ವಿಕ್ಟೋರಿಯಾ, ಸಿ.ವಿ. ರಾಮನ್ ನಗರ, ವಾಣಿವಿಲಾಸ್ ಸೇರಿ ಬಹುತೇಕ ಸರ್ಕಾರಿ ಆಸ್ಪತ್ರೆಗಳ ಒಪಿಡಿಯಲ್ಲಿ ಅರ್ಧಕ್ಕಿಂತ ಹೆಚ್ಚು ರೋಗಿಗಳು ವೈರಲ್ ಜ್ವರದಿಂದ ಬಳಲುತ್ತಿರುವುದಾಗಿ ವರದಿಯಾಗಿದೆ.

ವೈದ್ಯರ ಸಲಹೆ:

  • ಮಕ್ಕಳನ್ನು ಬೆಚ್ಚಗಿರಿಸಲು ಯತ್ನಿಸಿ
  • ಮಳೆ ಅಥವಾ ಚಳಿಯಲ್ಲಿ ಹೊರಗೆ ಹೋಗದಂತೆ ತಡೆಗಟ್ಟಿರಿ
  • ಜ್ವರ ಕಾಣಿಸಿಕೊಂಡರೆ ನಿರ್ಲಕ್ಷಿಸದೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ
  • ಆರೋಗ್ಯಕರ ಆಹಾರ ಮತ್ತು ನಿದ್ರೆ ಕಾಪಾಡಿಕೊಳ್ಳಿ

ಬೆಂಗಳೂರು ನಿವಾಸಿಗಳು ಹವಾಮಾನದ ಬದಲಾವಣೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ನಿಜವಾಗಿಯೂ ಅಗತ್ಯವಾಗಿದೆ ಎಂದು ವೈದ್ಯರು ಎಚ್ಚರಿಸುತ್ತಿದ್ದಾರೆ.

 

The post ಬೆಂಗಳೂರು ನಗರದಲ್ಲಿ ಸತತ ಮಳೆಯ ಪರಿಣಾಮ ವೈರಲ್ ಜ್ವರ ಪ್ರಕರಣಗಳಲ್ಲಿ ಹೆಚ್ಚಳ. appeared first on Good News 24x7.

]]>