#Chinnaswamy Archives - Good News 24x7 https://www.goodnews24x7.com/tag/chinnaswamy/ Kannada Sat, 21 Mar 2026 09:05:34 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg #Chinnaswamy Archives - Good News 24x7 https://www.goodnews24x7.com/tag/chinnaswamy/ 32 32 ಈ ಬಾರಿ ಸುಲಭವಿಲ್ಲ ಎಂದು ಬಿಗ್ ವಾರ್ನಿಂಗ್ ಕೊಟ್ಟ ಕಿಂಗ್ ಕೊಹ್ಲಿ! https://www.goodnews24x7.com/king-kohli-gave-a-big-warning-that-it-will-not-be-easy-this-time/ Sat, 21 Mar 2026 09:04:31 +0000 https://www.goodnews24x7.com/?p=8946 ಬೆಂಗಳೂರು, ಮಾರ್ಚ್ 21: ಐಪಿಎಲ್ 2026 ಸೀಸನ್ ಆರಂಭಕ್ಕೂ ಮುನ್ನವೇ ಆರ್‌ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಂಡದ ಆಟಗಾರರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ತಂಡದ ತರಬೇತಿ ಶಿಬಿರದಲ್ಲಿ ಮಾತನಾಡಿದ ಕೊಹ್ಲಿ, ಈ ಸೀಸನ್ ಇನ್ನಷ್ಟು ಕಠಿಣವಾಗಲಿದೆ ಎಂದು ತಿಳಿಸಿದ್ದಾರೆ.ಮಾರ್ಚ್ 28ರಂದು…

The post ಈ ಬಾರಿ ಸುಲಭವಿಲ್ಲ ಎಂದು ಬಿಗ್ ವಾರ್ನಿಂಗ್ ಕೊಟ್ಟ ಕಿಂಗ್ ಕೊಹ್ಲಿ! appeared first on Good News 24x7.

]]>

ಬೆಂಗಳೂರು, ಮಾರ್ಚ್ 21: ಐಪಿಎಲ್ 2026 ಸೀಸನ್ ಆರಂಭಕ್ಕೂ ಮುನ್ನವೇ ಆರ್‌ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಂಡದ ಆಟಗಾರರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ತಂಡದ ತರಬೇತಿ ಶಿಬಿರದಲ್ಲಿ ಮಾತನಾಡಿದ ಕೊಹ್ಲಿ, ಈ ಸೀಸನ್ ಇನ್ನಷ್ಟು ಕಠಿಣವಾಗಲಿದೆ ಎಂದು ತಿಳಿಸಿದ್ದಾರೆ.ಮಾರ್ಚ್ 28ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ 2026 ಆರಂಭವಾಗಲಿದ್ದು, ಆರ್‌ಸಿಬಿ ಮೊದಲ ಪಂದ್ಯವನ್ನು ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ. ಈ ಹಿನ್ನೆಲೆ ಈಗಾಗಲೇ ತಂಡ ತಯಾರಿ ಆರಂಭಿಸಿದ್ದು, ಕೊಹ್ಲಿಯ ಭರ್ಜರಿ ಬ್ಯಾಟಿಂಗ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಈ ಸೀಸನ್ ಇನ್ನಷ್ಟು ಕಠಿಣ: ತಂಡದ ಸಹ ಆಟಗಾರರೊಂದಿಗೆ ಮಾತನಾಡಿದ ಕೊಹ್ಲಿ, ಕಳೆದ 2-3 ಸೀಸನ್‌ಗಳಲ್ಲಿ ನಾವು ತುಂಬಾ ಕಷ್ಟಪಟ್ಟಿದ್ದೇವೆ. ಕಳೆದ ವರ್ಷ ಸಾಧನೆ ಮಾಡಿದ್ದೇವೆ. ಆದರೆ ಈಗ ಇನ್ನಷ್ಟು ಕಷ್ಟವಾಗಲಿದೆ. ಇತರ ತಂಡಗಳು ನಮ್ಮ ವಿರುದ್ಧ ಇನ್ನಷ್ಟು ಆಕ್ರಮಣಕಾರಿ ಆಟ ಆಡಲಿವೆ ಎಂದು ಹೇಳಿದ್ದಾರೆ.ಒಂದು ನಿಮಿಷವೂ ವ್ಯರ್ಥ ಮಾಡಬಾರದು. ಪ್ರತಿಯೊಂದು ಸೆಷನ್‌ಗೂ 120 ಪರ್ಸೆಂಟ್ ಕೊಡುಗೆ ನೀಡಬೇಕು. ಈ ಎರಡೂವರೆ ತಿಂಗಳು ನಮ್ಮ ಪಾಲಿಗೆ ಬಹಳ ಮುಖ್ಯ ಎಂದು ತಂಡವನ್ನು ಕೊಹ್ಲಿ ಹುರಿದುಂಬಿಸಿದ್ದಾರೆ.

ಚಾಂಪಿಯನ್ ಆಗಿ ಹೊಸ ಸವಾಲು: ಆರ್‌ಸಿಬಿ ಕಳೆದ ಸೀಸನ್‌ನಲ್ಲಿ ಮೊದಲ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಈಗ ಚಾಂಪಿಯನ್ ತಂಡವಾಗಿ ಕಣಕ್ಕಿಳಿಯುತ್ತಿರುವುದರಿಂದ ಒತ್ತಡ ಹೆಚ್ಚಾಗಲಿದೆ. ಈ ಕಾರಣಕ್ಕೇ ಸಹ ಆಟಗಾರರಿಗೆ ಕೊಹ್ಲಿ ಕಿವಿಮಾತು ಹೇಳಿದ್ದಾರೆ.ತಂಡದ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಕೂಡ ಹೊಸ ಆಟಗಾರರ ಸೇರ್ಪಡೆಯಿಂದ ತಂಡ ಮತ್ತಷ್ಟು ಬಲವಾಗಿದೆಯೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ, 2026 ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಲು ಆರ್​​ಸಿಬಿ ಅಣಿಯಾಗುತ್ತಿದೆ ಎಂದು ತಿಳಿಸಿದ್ದಾರೆ.

ಕೊಹ್ಲಿಗೆ ಮತ್ತೊಂದು ಮೈಲುಗಲ್ಲು: ಐಪಿಎಲ್ ಇತಿಹಾಸದಲ್ಲಿ ಈಗಾಗಲೇ 8,661 ರನ್ ಗಳಿಸಿರುವ ಕೊಹ್ಲಿ, ಈ ಸೀಸನ್‌ನಲ್ಲಿ 9,000 ರನ್ ಗಡಿ ದಾಟುವ ಮೊದಲ ಆಟಗಾರನಾಗುವ ಸಾಧ್ಯತೆಯೂ ಇದೆ. ಒಟ್ಟಿನಲ್ಲಿ, ಚಾಂಪಿಯನ್ ಆರ್‌ಸಿಬಿ ಈ ಬಾರಿ ಮತ್ತಷ್ಟು ಬಲಿಷ್ಠವಾಗಿ ಕಣಕ್ಕಿಳಿಯಲಿದ್ದು, ಕೊಹ್ಲಿಯ ಪ್ರೋತ್ಸಾಹದ ಹಾಗೂ ಎಚ್ಚರಿಕೆಯ ಮಾತುಗಳು ತಂಡಕ್ಕೆ ಹೊಸ ಉತ್ಸಾಹ ತುಂಬಿದೆ.

The post ಈ ಬಾರಿ ಸುಲಭವಿಲ್ಲ ಎಂದು ಬಿಗ್ ವಾರ್ನಿಂಗ್ ಕೊಟ್ಟ ಕಿಂಗ್ ಕೊಹ್ಲಿ! appeared first on Good News 24x7.

]]>