ChinnaswamyStadium Archives - Good News 24x7 https://www.goodnews24x7.com/tag/chinnaswamystadium/ Kannada Fri, 06 Jun 2025 07:38:59 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg ChinnaswamyStadium Archives - Good News 24x7 https://www.goodnews24x7.com/tag/chinnaswamystadium/ 32 32 ಗುಪ್ತಚಾರ ಇಲಾಖೆ ಮೇಲೆ ತೂಗುಗತ್ತಿ: ವಿಪಕ್ಷಗಳ ಒತ್ತಡಕ್ಕೆ ಮಣಿಯುತ್ತ ಸರಕಾರ? https://www.goodnews24x7.com/intelligence-department-hanging-over-is-the-government-bowing-to-opposition-pressure/ Fri, 06 Jun 2025 07:38:52 +0000 https://www.goodnews24x7.com/?p=4257 ಮೈಸೂರು : ಆರ್ ಸಿಬಿ ಸಂಭ್ರಮಾಚರಣೆಯ ದುರಂತ ಘಟನೆಗೆ ಇಂಟಲಿಜೆನ್ಸ್ ವೈಫಲ್ಯವೇ ಕಾರಣ ಎಂದು ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಗುಪ್ತಚರ ಇಲಾಖೆ ಮುಖ್ಯಸ್ಥರನ್ನು ಅಮಾನತುಗೊಳಿಸಿ ಎಂದು ವಿಪಕ್ಷಗಳು ಆಗ್ರಹಿಸಿವೆ. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ…

The post ಗುಪ್ತಚಾರ ಇಲಾಖೆ ಮೇಲೆ ತೂಗುಗತ್ತಿ: ವಿಪಕ್ಷಗಳ ಒತ್ತಡಕ್ಕೆ ಮಣಿಯುತ್ತ ಸರಕಾರ? appeared first on Good News 24x7.

]]>

ಮೈಸೂರು : ಆರ್ ಸಿಬಿ ಸಂಭ್ರಮಾಚರಣೆಯ ದುರಂತ ಘಟನೆಗೆ ಇಂಟಲಿಜೆನ್ಸ್ ವೈಫಲ್ಯವೇ ಕಾರಣ ಎಂದು ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಗುಪ್ತಚರ ಇಲಾಖೆ ಮುಖ್ಯಸ್ಥರನ್ನು ಅಮಾನತುಗೊಳಿಸಿ ಎಂದು ವಿಪಕ್ಷಗಳು ಆಗ್ರಹಿಸಿವೆ.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜೆಡಿಎಸ್ ಮುಖಂಡ ಸಾ.ರಾ.ಮಹೇಶ್ ಈ ಒತ್ತಾಯ ಮಾಡಿದ್ದಾರೆ.


ಇದು ಉದ್ದೇಶಪೂರ್ವಕವಾಗಿ ನಡೆದ ಘಟನೆಯಲ್ಲ, ಆದರೆ, ಬೇಜವಬ್ದಾರಿತನ ಎದ್ದು ಕಾಣುತ್ತಿದೆ. ಈ ಪರಿಸ್ಥಿತಿಯಲ್ಲಿ ರಾಜಕೀಯ ಕೆಸರೆರಚಾಟ ಸರಿಯಲ್ಲ. ಈ ಕಾರಣಕ್ಕೆ ನಾವು ಯಾರು ನೆನ್ನೆ ಚರ್ಚಸಿರಲಿಲ್ಲ. ಆದರೆ, ನೆನ್ನೆ ನಡೆದ ಬೆಳವಣಿಗೆಗಳ ಬಗ್ಗೆ ಬೇಸರವಿದೆ. ಕಪ್ ಗೆದ್ದ ಬಳಿಕ ರಾತ್ರಿಯಿಡೀ ವಿಜಯೋತ್ಸವ ನಡೆದಿದೆ. ಮರುದಿನ ಕೂಡ ವಿಜಯೋತ್ಸವ ನಡೆದು ದುರಂತ ನಡೆದಿದೆ. ಹಲವು ಅಮೂಲ್ಯ ಜೀವಗಳನ್ನ ಕಳೆದುಕೊಂಡಿದ್ದೇವೆ. ಆ ಘಟನೆ ಕುರಿತು ಚಿಂತನೆ ನಡೆಸುವ ಅಗತ್ಯವಿದೆ.

ನೆನ್ನೆ ಐದು ಮಂದಿ ಪೊಲೀಸರನ್ನ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದೀರಿ, ಇದು ನಿಮ್ಮ ಮನಃಸಾಕ್ಷಿ ಒಪ್ಪಿತ್ತದೆಯೆ? ಇದು ಉದ್ದೇಶ ಪೂರ್ವಕ ಘಟನೆಯಲ್ಲ, ಇದು ನೆಗ್ಲಿಜೆನ್ಸಿಯಿಂದ ನಡೆದಿದೆ . ರಾಜ್ಯದ ಜನರ ಕಣ್ಣೊರೆಸುವ ತಂತ್ರ ಇದು. ಮೊದಲು ಇಂಟೆಲಿಜೆನ್ಸ್ ಐಜಿ ಏನ್ ಮಾಡ್ತಿದ್ರು? ಅವರು ನಿಮಗೆ ರಿಪೋರ್ಟ್ ಕೊಡಲಿಲ್ಲವೇ? ಗೃಹ ಇಲಾಖೆ ಕಾರ್ಯದರ್ಶಿ‌ಏನ್ ಮಾಡುತ್ತಿದ್ದರು? ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಮಾಡುವ ತಂತ್ರ ಯಾಕೆ?

ಅಮಾನತ್ತು ಆದೇಶ ವಾಪಸ್ ಪಡೆಯಿರಿ, ಕಮಿಷನರ್ ದಯಾನಂದ್, ಡಿಸಿಪಿ ಶೇಖರ್ ಏನ್ ತಪ್ಪು ಮಾಡಿದ್ದಾರೆ? ನೀವು ಕ್ರಮ ತೆಗೆದುಕೊಳ್ಳುವುದಾದರೆ ಇಂಟೆಲಿಜೆನ್ಸ್ ಐಜಿ ವಿರುದ್ಧ ತೆಗೆದುಕೊಳ್ಳಿ. ಕಾಂಗ್ರೆಸ್ ಪಕ್ಷದ ಸೋತ ಅಭ್ಯರ್ಥಿ ಗಂಡ ಎಂಬ ಕಾರಣಕ್ಕೆ ಬಿಟ್ಟಿದ್ದೀರಾ? ಈ ಘಟನೆಗೆ ಅವರೇ ನೇರ ಹೊಣೆ ಎಂದು ದೂಷಿಸಿದರು.

ಬೆಂಗಳೂರಿನ್ಲಲಿ ಮಾತನಾಡಿದ ವಿಜಯೇಂದ್ರ :- ಕಾಲ್ತುಳಿತ ಪ್ರಕರಣದಲ್ಲಿ ೧೧ ಮಂದಿ ಅಮಾಯಕರು ಮೃತಪಟ್ಟಿದ್ದಾರೆ. ಈ ಘಟನೆಗೆ ರಾಜ್ಯ ಸರಕಾರ ಹೊಣೆ, ಆದರೆ ಕೋರ್ಟ್ ಚಾಟಿ ಬೀಸಿದ ಮೇಲೆ ಕೆಎಸ್ಸಿಎ , ಆರ್ಸಿಬಿ ಹಾಗೂ ಡಿಎನ್ ಎ ಸಂಸ್ಥೆಯವರ ವಿರುದ್ಧ ಎಫ್. ಐ. ಆರ್ ದಾಖಲಿಸಲಾಗಿದೆ. ಜತೆಗೆ ತುರ್ತು ಪತ್ರಿಕಾಗೋಷ್ಠಿ ಕರೆದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ್ ಸೇರಿದಂತೆ ಐವರನ್ನು ಅಮಾನತುಗೊಳಿಸಿದ್ದೀರಿ..? ಇದು ಸರಿನಾ..? ಈ ಪೊಲೀಸರನ್ನು ಯಾಕೆ ಹರಕೆಯ ಕುರಿಯನ್ನಾಗಿ ಮಾಡಿದ್ದೀರಿ ಎಂದು ಪ್ರಶ್ನಿಸಿದರು.
ಈ ದುರ್ಘಟನೆಗೆ ಪ್ರಮುಖ ಕಾರಣ ಗುಪ್ತಚರ ಇಲಾಖೆ ವೈಫಲ್ಯ . ಈ ಸತ್ಯ ತಿಳಿದಿದ್ದರು ಈ ತನಕ ಯಾಕೆ ಇಂಟಲಿಜೆನ್ಸ್ ವಿಂಗ್ ಮುಖ್ಯಸ್ಥರನ್ನು ಅಮಾನತುಗೊಳಿಸಿಲ್ಲ. ಯಾಕೆ ಅವರನ್ನು ಅಮಾನತು ಮಾಡಿದರೆ ತಮ್ಮ ಬುಡಕ್ಕೆ ಬರುತ್ತೆ ಅಂಥ ಭಯನಾ ಸಿಎಂ ಸಿದ್ದರಾಮಯ್ಯ ಅವರೇ ಎಂದು ವಿಜಯೇಂದ್ರ ವ್ಯಂಗ್ಯವಾಡಿದರು.

The post ಗುಪ್ತಚಾರ ಇಲಾಖೆ ಮೇಲೆ ತೂಗುಗತ್ತಿ: ವಿಪಕ್ಷಗಳ ಒತ್ತಡಕ್ಕೆ ಮಣಿಯುತ್ತ ಸರಕಾರ? appeared first on Good News 24x7.

]]>
ಕಾಲ್ತುಳಿತದ 11 ಜನರ ಸಾ*ವಿಗೆ ಸರ್ಕಾರವೇ ಕಾರಣ-ಆರ್.ಅಶೋಕ್ ವಾಗ್ದಾಳಿ. https://www.goodnews24x7.com/government-responsible-for-11-deaths-in-stampede-r-ashok-attacks/ Fri, 06 Jun 2025 07:17:05 +0000 https://www.goodnews24x7.com/?p=4251 ಬೆಂಗಳೂರು : ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿರುವುದಕ್ಕೆ ಸರ್ಕಾರವೇ ಕಾರಣ. ಅಂಧ ಸಿಎಂ, ಅಂಧ ದರ್ಬಾರ್ ಸರ್ಕಾರ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು. ಇಂದು ಜೆಡಿಎಸ್ ಬಿಜೆಪಿ ನಾಯಕರ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.…

The post ಕಾಲ್ತುಳಿತದ 11 ಜನರ ಸಾ*ವಿಗೆ ಸರ್ಕಾರವೇ ಕಾರಣ-ಆರ್.ಅಶೋಕ್ ವಾಗ್ದಾಳಿ. appeared first on Good News 24x7.

]]>

ಬೆಂಗಳೂರು : ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿರುವುದಕ್ಕೆ ಸರ್ಕಾರವೇ ಕಾರಣ. ಅಂಧ ಸಿಎಂ, ಅಂಧ ದರ್ಬಾರ್ ಸರ್ಕಾರ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.
ಇಂದು ಜೆಡಿಎಸ್ ಬಿಜೆಪಿ ನಾಯಕರ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಇದ್ದರು.


ಈ ವೇಳೆ ಮಾತನಾಡಿದ ಆರ್.ಅಶೋಕ್, ಐಪಿಎಲ್ ಕಪ್ ಗೆದ್ದಿದ್ದು ಆರ್ ಸಿಬಿ ತಂಡ. ಆದರೆ ಫೋಟೊಗೆ ಫೋಸ್ ನೀಡಿದ್ದು ಕೆಪಿಸಿಸಿ ತಂಡ . ಇವರು ಕುರುಡು ಮುಖ್ಯಮಂತ್ರಿ. ಇಲ್ಲಿ ಸರ್ಕಾರ ಅಪರಾಧಿ. ತಪ್ಪಿತಸ್ಥರು ಸರ್ಕಾರ. ಪೊಲೀಸರನನ್ನ ಹರಕೆಯ ಕುರಿಯನ್ನಾಗಿಸಿದಿರಿ. ಮೊಸರನ್ನು ನೀವು ತಿಂದು ಪೊಲೀಸರ ಮೂತಿಗೆ ಒರೆಸಿದ್ರಿ ಸಿಎಂ ರನ್ ಔಟ್ ಮಾಡಲು ಡಿಕೆಶಿ ಯತ್ನಿಸುತ್ತಿದ್ದು , ಸಾರ್ವಜನಿಕರು ಪೊಲೀಸರ ಪರ ಇದ್ದಾರೆ ಎಂದರು.

ಹೈಕೋರ್ಟ್ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಸರ್ಕಾರಕ್ಕೆ ನಾಚಿಕೆ ಬೇಡವಾ? ನಮ್ಮದೇನು ತಪ್ಪಿಲ್ಲ ಅಂತ ಸಿಎಂ ಪ್ರೆಸ್ ಮೀಟ್ ಮಾಡಿದ್ರಿ. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಪೊಲೀಸ್ ಕಮಿಷನರ್ ಸಸ್ಪೆಂಡ್ ಆಗಿದ್ದಾರೆ. ರಾಜ್ಯದ ಜನರು ಇಂದು ವಿ ಆರ್ ವಿತ್ ಪೊಲೀಸ್ ಎಂದು ಹೇಳುತ್ತಿದ್ದಾರೆ. ಅನಧಿಕೃತ ಕಾರ್ಯಕ್ರಮ ಎಂದು ನೀವೆ ಎಫ್ ಐಆರ್ ನಲ್ಲಿ ಹೇಳಿದ್ದೀರಾ? ಹಾಗಾದರೆ ಸಿಎಂ ಮನೆಗೆ ಪ್ರಾಂಚೈಸಿ ಅವರನ್ನ ಕರೆದುಕೊಂಡು ಹೋಗಿದ್ದು ಯಾರು. ಕಮಿಷನರ್ ಅನುಮತಿ ಕೊಟ್ಟಿಲ್ಲ ಅಂತಾ ಸಿಎಂಗೆ ಹೇಳಿದವರು ಯಾರು? ವಿಧಾನಸೌಧದಲ್ಲಿ ಏನು ಗಲಾಟೆ ಆಗಿಲ್ಲ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗಲಾಟೆ ಆಗಿದ್ದು ಎಂದು ಸಿಎಂ ಹೇಳಿದ್ದಾರೆ. ಆಗಾದರೆ ಸ್ಟೇಡಿಯಂ ಏನು ಕರ್ನಾಕಟದಲ್ಲಿ ಇಲ್ವಾ ಎಂದು ಅಶೋಕ್ ಪ್ರಶ್ನಿಸಿದರು.

 

 

The post ಕಾಲ್ತುಳಿತದ 11 ಜನರ ಸಾ*ವಿಗೆ ಸರ್ಕಾರವೇ ಕಾರಣ-ಆರ್.ಅಶೋಕ್ ವಾಗ್ದಾಳಿ. appeared first on Good News 24x7.

]]>
ಆರ್ ಸಿ ಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತದಿಂದ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆ https://www.goodnews24x7.com/stampede-death-toll-during-rcb-celebrations-rises-to-10/ Wed, 04 Jun 2025 12:12:25 +0000 https://www.goodnews24x7.com/?p=4216 ಬೆಂಗಳೂರು : 18ನೇ ಆವೃತ್ತಿಯ ಐಪಿಎಲ್ ಫೈನಲ್ ಗೆದ್ದು ಚಾಂಪಿಯನ್ ಆಗಿರುವ ಸಂಭ್ರಮದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಬೆಂಗಳೂರು ನಗರಕ್ಕೆ ಬಂದಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಚರಣೆ ನಡಿತಾ ಇದೆ. ಈ ಸಂಭ್ರಮಾಚರಣೆಯನ್ನು ನೋಡಲು ಕೋಟ್ಯಾಂತರ ಸಂಖ್ಯೆಯ ಅಭಿಮಾನಿಗಳು ಚಿನ್ನಸ್ವಾಮಿ…

The post ಆರ್ ಸಿ ಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತದಿಂದ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆ appeared first on Good News 24x7.

]]>

ಬೆಂಗಳೂರು : 18ನೇ ಆವೃತ್ತಿಯ ಐಪಿಎಲ್ ಫೈನಲ್ ಗೆದ್ದು ಚಾಂಪಿಯನ್ ಆಗಿರುವ ಸಂಭ್ರಮದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಬೆಂಗಳೂರು ನಗರಕ್ಕೆ ಬಂದಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಚರಣೆ ನಡಿತಾ ಇದೆ. ಈ ಸಂಭ್ರಮಾಚರಣೆಯನ್ನು ನೋಡಲು ಕೋಟ್ಯಾಂತರ ಸಂಖ್ಯೆಯ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸೇರಿದ್ದಾರೆ. ಈ ವೇಳೆ ಕಾಲ್ತುಳಿತ ಸಂಭವಿಸಿ 10 ಆರ್ಸಿಬಿ ಅಭಿಮಾನಿ ಮೃತಪಟ್ಟಿದ್ದಾರೆ.

ಐಪಿಎಲ್ ಚಾಂಪಿಯನ್ RCB ತಂಡದ ವಿಜಯೋತ್ಸವಕ್ಕೂ ಮುನ್ನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ದುರಂತವೇ ನಡೆದಿದೆ. RCB ಸೆಲೆಬ್ರೇಷನ್ ನೋಡಲು ಸ್ಟೇಡಿಯಂಗೆ ಲಕ್ಷಾಂತರ ಜನರು ಮುಗಿಬಿದ್ದಿದ್ದಾರೆ. ಕ್ರೀಡಾಂಗಣಕ್ಕೆ ಎಂಟ್ರಿ ಕೊಡುವ ವೇಳೆ ನೂಕುನುಗ್ಗಲು ಉಂಟಾಗಿದ್ದು, 10 ಆರ್‌ಸಿಬಿ ಅಭಿಮಾನಿಗಳು ಸಾವನ್ನಪ್ಪಿದ್ದಾರೆ. ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿದ್ದು, 7ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ

ಗೆಲುವಿನ ಸಂಭ್ರಮದ ನಡುವೆ ಪ್ರಾಣ ಕಳೆದುಕೊಂಡ ಅಭಿಮಾನಿಗಳ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಬೌರಿಂಗ್ ಆಸ್ಪತ್ರೆ ಬಳಿ ಸಂಭ್ರಮಾಚರಣೆಗೆ ಬಂದು ಸಾವಿನ ಮನಸೇರಿದ ಆರ್‌ಸಿಬಿ ಅಭಿಮಾನಿಗಳ ಸಂಬಂಧಿಕರ ಆಕ್ರಂದನ ಮೂಗಿಲೂ ಮುಟ್ಟುವಂತಿದೆ.

ಬೆಂಗಳೂರಿನ ವೈದೇಹಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಾಲ್ವರು ಅಭಿಮಾನಿಗಳು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ ಆರ್ಸಿಬಿ ತಂಡದ ಗೆಲುವಿನ ಸಂಭ್ರಮದ ಮೇಲೆ ಆರು ಜನರು ಕಲ್ತುಳಿತದಿಂದ ಮೃತಪಟ್ಟಿದ್ದಾರೆ.

The post ಆರ್ ಸಿ ಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತದಿಂದ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆ appeared first on Good News 24x7.

]]>
ವೈಟ್ ಜೆರ್ಸಿಯಲ್ಲಿ ಫ್ಯಾನ್ಸ್ಗಳಿಂದ ‘ಕಿಂಗ್ ಕೊಹ್ಲಿ’ಗೆ ಗೌರವ. https://www.goodnews24x7.com/fans-pay-tribute-to-king-kohli-in-white-jersey/ Sat, 17 May 2025 10:38:02 +0000 https://www.goodnews24x7.com/?p=3936 ಕೆಲ ದಿನಗಳ ಹಿಂದೆ ಟೆಸ್ಟ್ ಕ್ರಿಕೆಟ್ಗೆ ಬೈ ಹೇಳಿದ ಕಿಂಗ್ ಕೊಹ್ಲಿಗೆ ಶನಿವಾರ ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಮೈದಾನದಲ್ಲಿ ನಡೆಯುವ ಪಂದ್ಯದಲ್ಲಿ ಅಭಿಮಾನಿಗಳು ವೈಟ್ ಜೆರ್ಸಿ ಧರಿಸಿ ಗೌರವ ಕೊಡಲು ರೆಡಿಯಾಗಿದ್ದಾರೆ. ರನ್ ಮಿಷನ್ ಎಂದೇ ಖ್ಯಾತಿ ಪಡೆದಿದ್ದ ವಿರಾಟ್ ಕೊಹ್ಲಿ ರನ್…

The post ವೈಟ್ ಜೆರ್ಸಿಯಲ್ಲಿ ಫ್ಯಾನ್ಸ್ಗಳಿಂದ ‘ಕಿಂಗ್ ಕೊಹ್ಲಿ’ಗೆ ಗೌರವ. appeared first on Good News 24x7.

]]>

ಕೆಲ ದಿನಗಳ ಹಿಂದೆ ಟೆಸ್ಟ್ ಕ್ರಿಕೆಟ್ಗೆ ಬೈ ಹೇಳಿದ ಕಿಂಗ್ ಕೊಹ್ಲಿಗೆ ಶನಿವಾರ ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಮೈದಾನದಲ್ಲಿ ನಡೆಯುವ ಪಂದ್ಯದಲ್ಲಿ ಅಭಿಮಾನಿಗಳು ವೈಟ್ ಜೆರ್ಸಿ ಧರಿಸಿ ಗೌರವ ಕೊಡಲು ರೆಡಿಯಾಗಿದ್ದಾರೆ. ರನ್ ಮಿಷನ್ ಎಂದೇ ಖ್ಯಾತಿ ಪಡೆದಿದ್ದ ವಿರಾಟ್ ಕೊಹ್ಲಿ ರನ್ ಹಸಿವು ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ಅದಾಗಲೇ ವೈಟ್ ಜೆರ್ಸಿ ಕ್ರಿಕೆಟ್ಗೆ ವಿದಾಯ ಹೇಳಿಬಿಟ್ಟಿದ್ದ ಕೊಹ್ಲಿಗೆ ಕೊನೆ ಪಕ್ಷ ಬಿಸಿಸಿಐ ವಿದಾಯದ ಪಂದ್ಯವಾಡಿಸಿ ಬೀಳ್ಕೊಡುಗೆ ನೀಡಬಹುದಿತ್ತು. ಆದ್ರೆ ಅದೂ ಆಗಲಿಲ್ಲ. ಹೀಗಾಗಿ ಆರ್ಸಿಬಿ ಫ್ಯಾನ್ಸ್ ನಾಳೆ ನಡೆಯುವ ಮ್ಯಾಚ್ಗೆ ನಂಬರ್ 18ರ ವೈಟ್ ಜೆರ್ಸಿ ಧರಿಸಿ ಕೊಹ್ಲಿಗೆ ಗೌರವ ನೀಡಲು ಸಿದ್ಧರಾಗಿದ್ದಾರೆ.

ಇಂಡಿಯಾ ಪಾಕಿಸ್ತಾನದ ನಡುವಿನ ಉದ್ವಿಗ್ನ ಪರಿಸ್ಥಿತಿ ಮಧ್ಯೆ ಕಿಂಗ್ ಕೊಹ್ಲಿಯ ಟೆಸ್ಟ್ ಕ್ರಿಕೆಟ್ನ ವಿದಾಯದ ಸುದ್ದಿ ಕೋಟ್ಯಂತರ ಅಭಿಮಾನಿಗಳಿಗೆ ಬರಸಿಡಿಲು ಬಂದಂತೆ ಎರಗಿತ್ತು. ಇನ್ನೂ ನಾಲ್ಕೈದು ವರ್ಷಗಳ ಕಾಲ ಕ್ರಿಕೆಟ್ ಆಡುವಷ್ಟು ಸಾಮರ್ಥ್ಯವಿದ್ದರೂ ವಿರಾಟ್ ದೃಢ ನಿರ್ಧಾರ ಮಾಡಿ ನಿವೃತ್ತಿ ಘೋಷಿಸಿದ್ದಾರೆ. 124 ಟೆಸ್ಟ್ ಮ್ಯಾಚ್ಗಳಲ್ಲಿ 9,230 ರನ್ ಹೊಡೆದಿದ್ದ ಕೊಹ್ಲಿಗೆ 770 ರನ್ ಗಳಿಸಿದರೆ 10000 ರನ್ಗಳ ಸರದಾರನಾಗುತ್ತಿದ್ದರು. ಆದರೆ ದಾಖಲೆಗೆ ತಲೆಕೆಡಿಸಕೊಳ್ಳದ ಕೊಹ್ಲಿ ಈಗಾಗಲೇ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.ಬಿಸಿಸಿಐ ಆದರೂ ಒಂದು ಟೆಸ್ಟ್ ಮ್ಯಾಚ್ ಆಡುವಂತೆ ವಿನಂತಿ ಮಾಡಿ, ವಿದಾಯದ ಬೀಳ್ಕೊಡುಗೆ ಮಾಡಬಹುದಿತ್ತು ಅದನ್ನೂ ಮಾಡಲಿಲ್ಲ. ಇದೀಗ ಅಭಿಮಾನಿಗಳು, ಬಿಸಿಸಿಐ ಬೀಳ್ಕೊಡುಗೆ ಕೊಡಲಿಲ್ಲ ಅಂದರೆ ಏನಂತೆ ನಾವು ಕೊಡ್ತೀವಿ ಅಂತಾ ಸಜ್ಜಾಗಿದ್ದಾರೆ. ಭಾರತ ಪಾಕ್ ಸಂಘರ್ಷದಿಂದ ನಿಂತಿದ್ದ ಐಪಿಎಲ್ ಶನಿವಾರದಿಂದ ಮತ್ತೆ ಶುರುವಾಗಲಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೋಲ್ಕತ್ತಾ ಮತ್ತು ಆರ್ಸಿಬಿ ನಡುವೆ ಮ್ಯಾಚ್ ನಡೆಯಲಿದೆ. ಆರ್ಸಿಬಿಯ ಪಂದ್ಯಕ್ಕೆ ರೆಡ್ ಜೆರ್ಸಿ ಧರಿಸಿ ಎಂಟ್ರಿ ಕೊಡ್ತಿದ್ದ ಫ್ಯಾನ್ಸ್ ನಾಳೆ ಕೊಹ್ಲಿಗಾಗಿ ನಂ. 18ರ ವೈಟ್ ಜೆರ್ಸಿ ಧರಿಸಿ ಸ್ಟೇಡಿಯಂಗೆ ಎಂಟ್ರಿ ಕೊಡಲಿದ್ದಾರೆ.

ಆ ಮೂಲಕ ಇಡೀ ಚಿನ್ನಸ್ವಾಮಿ ಸ್ಟೇಡಿಯಂನ 40,000 ಪ್ರೇಕ್ಷಕರು ವೈಟ್ ಅಂಡ್ ವೈಟ್ನಲ್ಲಿ ಕೊಹ್ಲಿಗೆ ಟೆಸ್ಟ್ ಕ್ರಿಕೆಟ್ನ ವಿದಾಯದ ಬೀಳ್ಕೊಡುಗೆ ನೀಡಲಿದ್ದಾರೆ. ದೇಶಕ್ಕಾಗಿ ರನ್ ಮಳೆಯನ್ನೇ ಹರಿಸಿ, ತನ್ನ ಅಗ್ರೆಶನ್ನಿಂದ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದ ನಿಸ್ವಾರ್ಥ ಆಟಗಾರನಿಗೆ ಇದಕ್ಕಿಂತ ಇನ್ನೇನು ಬೇಕು ಹೇಳಿ. ಒಟ್ಟಿನಲ್ಲಿ ಇಡೀ ಸ್ಟೇಡಿಯಂನ ವೈಟ್ ಅಂಡ್ ವೈಟ್ನಲ್ಲಿ ನೋಡೋದು ನಿಜಕ್ಕೂ ಅಚ್ಚರಿಯೇ ಸರಿ. ಇದು ಕಿಂಗ್ ಕೊಹ್ಲಿ ಗಳಿಸಿದ ಆಗಾಧ ಸಂಪತ್ತು.

The post ವೈಟ್ ಜೆರ್ಸಿಯಲ್ಲಿ ಫ್ಯಾನ್ಸ್ಗಳಿಂದ ‘ಕಿಂಗ್ ಕೊಹ್ಲಿ’ಗೆ ಗೌರವ. appeared first on Good News 24x7.

]]>
ಇಂದು RCB ಹಾಗೂ KKR ಉಭಯ ತಂಡಗಳ ಭರ್ಜರಿ ಪೈಪೋಟಿ. https://www.goodnews24x7.com/today-rcb-and-kkr-will-have-a-fierce-competition/ Sat, 17 May 2025 08:31:07 +0000 https://www.goodnews24x7.com/?p=3923 IPL 2025 : ಇಂಡಿಯನ್ ಪ್ರೀಮಿಯರ್ ಲೀಗ್ನ 58ನೇ ಪಂದ್ಯದಲ್ಲಿ RCB ಹಾಗೂ KKR ತಂಡಗಳು ಮುಖಾಮುಖಿಯಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಆರ್ಸಿಬಿಗಿಂತ, ಕೆಕೆಆರ್ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಮ್ಯಾಚ್ನಲ್ಲಿ ಗೆದ್ದರೆ ಮಾತ್ರ KKR ತಂಡವು…

The post ಇಂದು RCB ಹಾಗೂ KKR ಉಭಯ ತಂಡಗಳ ಭರ್ಜರಿ ಪೈಪೋಟಿ. appeared first on Good News 24x7.

]]>

IPL 2025 : ಇಂಡಿಯನ್ ಪ್ರೀಮಿಯರ್ ಲೀಗ್ನ 58ನೇ ಪಂದ್ಯದಲ್ಲಿ RCB ಹಾಗೂ KKR ತಂಡಗಳು ಮುಖಾಮುಖಿಯಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಆರ್ಸಿಬಿಗಿಂತ, ಕೆಕೆಆರ್ ಪಾಲಿಗೆ ನಿರ್ಣಾಯಕ.

ಏಕೆಂದರೆ ಈ ಮ್ಯಾಚ್ನಲ್ಲಿ ಗೆದ್ದರೆ ಮಾತ್ರ KKR ತಂಡವು ಪ್ಲೇಆಫ್ ರೇಸ್ನಲ್ಲಿ ಉಳಿಯಲಿದೆ. ಅತ್ತ RCB ತಂಡ ಗೆಲುವು ದಾಖಲಿಸಿದರೆ ಪ್ಲೇಆಫ್ ಗೇರುವುದು ಖಚಿತವಾಗಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.
ಇನ್ನು ಈ ಪಂದ್ಯದಲ್ಲಿ RCB ತಂಡ ಗೆದ್ದರೆ 18 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಲಿದೆ. ಅಲ್ಲದೆ ಆರ್ಸಿಬಿ ಪಡೆ ಪ್ಲೇಆಫ್ ಆಡುವುದು ಬಹುತೇಕ ಖಚಿತವಾಗಲಿದೆ. ಅಷ್ಟೇ ಅಲ್ಲದೆ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಲ್ಲಿ ಕಾಣಿಸಿಕೊಳ್ಳಬೇಕಿದ್ದರೆ ಆರ್ಸಿಬಿ ತಂಡವು ಇಂದು ಗೆಲುವು ದಾಖಲಿಸಲೇಬೇಕು.


ಒಂದು ವೇಳೆ RCB ತಂಡವು KKR ವಿರುದ್ಧ ಸೋಲನುಭವಿಸಿದರೆ, ಅಂಕ ಪಟ್ಟಿಯಲ್ಲಿ ಬದಲಾವಣೆ ಏನೂ ಆಗುವುದಿಲ್ಲ. ಅಲ್ಲದೆ ಆರ್ಸಿಬಿ 16 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲೇ ಉಳಿಯಲಿದೆ. ಇದಾಗ್ಯೂ ಪ್ಲೇಆಫ್ನಲ್ಲಿ ಸ್ಥಾನ ಖಚಿತಪಡಿಸಿಕೊಳ್ಳಬೇಕಿದ್ದರೆ SRH ಅಥವಾ LSG ವಿರುದ್ಧ ಜಯ ಸಾಧಿಸಲೇಬೇಕಾದ ಅನಿವಾರ್ಯತೆ ಎದುರಾಗಲಿದೆ.

ಹೀಗಾಗಿ RCB ತಂಡವು ಪ್ಲೇಆಫ್ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಇಂದಿನ ಪಂದ್ಯದಲ್ಲಿ ಗೆಲುವು ದಾಖಲಿಸಲೇಬೇಕು. ಈ ಮೂಲಕ 18 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿ ಆರ್ಸಿಬಿ ಮೊದಲ ಕ್ವಾಲಿಫೈಯರ್ ಪಂದ್ಯವಾಡುವ ತನ್ನ ಹಾದಿಯನ್ನು ಮತ್ತಷ್ಟು ಸುಗಮಗೊಳಿಸಬಹುದು. ಹೀಗಾಗಿ ಇಂದಿನ ಪಂದ್ಯದಲ್ಲಿ ರಾಯಲ್ ಪಡೆಯಿಂದ ಭರ್ಜರಿ ಪ್ರದರ್ಶನವನ್ನು ನಿರೀಕ್ಷಿಸಬಹುದಾಗಿದೆ.

The post ಇಂದು RCB ಹಾಗೂ KKR ಉಭಯ ತಂಡಗಳ ಭರ್ಜರಿ ಪೈಪೋಟಿ. appeared first on Good News 24x7.

]]>