CL Archives - Good News 24x7 https://www.goodnews24x7.com/tag/cl/ Kannada Sun, 12 Apr 2026 07:14:27 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg CL Archives - Good News 24x7 https://www.goodnews24x7.com/tag/cl/ 32 32 ಅಬಕಾರಿ ಇಲಾಖೆಯಲ್ಲಿ ಬೃಹತ್ ಹಗರಣ: ಬೋಗಸ್ ದಾಖಲೆ ಸೃಷ್ಟಿಸಿ ನೂರಾರು CL-7 ಪರವಾನಗಿ ಮಂಜೂರು! https://www.goodnews24x7.com/massive-scam-in-the-excise-department-hundreds-of-cl-7-licenses-were-granted-by-creating-bogus-documents/ Sun, 12 Apr 2026 07:13:12 +0000 https://www.goodnews24x7.com/?p=9222 ಬೆಂಗಳೂರು : ರಾಜ್ಯ ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರದ ಜೇನುಗೂಡು ಈಗ ಲೋಕಾಯುಕ್ತ ತನಿಖೆಯಿಂದ ಬಯಲಾಗಿದೆ. ಮಂಥ್ಲಿ ಮನಿ, ವರ್ಗಾವಣೆ ದಂಧೆ ಹಾಗೂ ಕಿಕ್‌ಬ್ಯಾಕ್ ಆರೋಪಗಳ ನಡುವೆಯೇ, ಅಧಿಕಾರಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ನೂರಾರು CL-7 (ಹೋಟೆಲ್ ಮತ್ತು ವಸತಿಗೃಹ) ಪರವಾನಗಿಗಳನ್ನು ಕಾನೂನುಬಾಹಿರವಾಗಿ…

The post ಅಬಕಾರಿ ಇಲಾಖೆಯಲ್ಲಿ ಬೃಹತ್ ಹಗರಣ: ಬೋಗಸ್ ದಾಖಲೆ ಸೃಷ್ಟಿಸಿ ನೂರಾರು CL-7 ಪರವಾನಗಿ ಮಂಜೂರು! appeared first on Good News 24x7.

]]>

ಬೆಂಗಳೂರು : ರಾಜ್ಯ ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರದ ಜೇನುಗೂಡು ಈಗ ಲೋಕಾಯುಕ್ತ ತನಿಖೆಯಿಂದ ಬಯಲಾಗಿದೆ. ಮಂಥ್ಲಿ ಮನಿ, ವರ್ಗಾವಣೆ ದಂಧೆ ಹಾಗೂ ಕಿಕ್‌ಬ್ಯಾಕ್ ಆರೋಪಗಳ ನಡುವೆಯೇ, ಅಧಿಕಾರಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ನೂರಾರು CL-7 (ಹೋಟೆಲ್ ಮತ್ತು ವಸತಿಗೃಹ) ಪರವಾನಗಿಗಳನ್ನು ಕಾನೂನುಬಾಹಿರವಾಗಿ ಮಂಜೂರು ಮಾಡಿರುವುದು ವರದಿಯಲ್ಲಿ ಸಾಬೀತಾಗಿದೆ.

ಅಕ್ರಮದ ಆಳ-ಅಗಲ:
ಬೆಂಗಳೂರು ನಗರ ಜಿಲ್ಲೆಯ ಅಬಕಾರಿ ವಲಯ ಬಿಯುಡಿ-2 ವ್ಯಾಪ್ತಿಯ ಕೆ.ಆರ್. ಪುರ, ಮೇದಹಳ್ಳಿ, ಕೌದೇನಹಳ್ಳಿ, ಬೀದರಹಳ್ಳಿ ಮತ್ತು ರಾಮಪುರ ಪ್ರದೇಶಗಳಲ್ಲಿ ಈ ಅಕ್ರಮ ಅವಿಶ್ರಾಂತವಾಗಿ ನಡೆದಿದೆ. ತನಿಖಾ ವರದಿಯ ಪ್ರಕಾರ, ಅಧಿಕಾರಿಗಳು ಲೈಸೆನ್ಸ್ ನೀಡಲು ಅನುಸರಿಸಿದ ದಾರಿಗಳು ದಿಗಿಲು ಹುಟ್ಟಿಸುವಂತಿವೆ:

ನಕಲಿ ನೀಲನಕಾಶೆ: ಈಗಾಗಲೇ ಇರುವ CL-9 (ಬಾರ್ ಆ್ಯಂಡ್ ರೆಸ್ಟೋರೆಂಟ್) ಕೊಠಡಿಗಳನ್ನೇ CL-7 ಕೊಠಡಿಗಳೆಂದು ಬಿಂಬಿಸಲಾಗಿದೆ.
ದಾಖಲೆಗಳ ಮರೆಯಲ್ಲಿ ವಂಚನೆ: ಬೇರೆ ಕಟ್ಟಡದ ಕಿಚನ್, ಡೈನಿಂಗ್ ಹಾಲ್ ಹಾಗೂ ಶೌಚಾಲಯಗಳ ಛಾಯಾಚಿತ್ರಗಳನ್ನು ನೀಡಿ ಪರವಾನಗಿ ಪಡೆಯಲಾಗಿದೆ.
ಕೆರೆ ಜಾಗದಲ್ಲಿ ಪಾರ್ಕಿಂಗ್: ಪಾರ್ಕಿಂಗ್ ವ್ಯವಸ್ಥೆ ತೋರಿಸಲು ಕೆರೆ ಅಂಗಳದ ಜಾಗವನ್ನು ಬಳಸಿಕೊಳ್ಳಲಾಗಿದ್ದು, ಸುಳ್ಳು ಟ್ರೇಡ್ ಲೈಸೆನ್ಸ್ ಸೃಷ್ಟಿಸಲಾಗಿದೆ.
ಅಸ್ತಿತ್ವವಿಲ್ಲದ ಕಟ್ಟಡ: ಹಲವೆಡೆ ಕಟ್ಟಡಗಳೇ ಇಲ್ಲದಿದ್ದರೂ ಕಾಗದದ ಮೇಲೆ ಸಕಲ ಸೌಲಭ್ಯಗಳಿವೆಯೆಂದು ತೋರಿಸಿ ಲೈಸೆನ್ಸ್ ಮಂಜೂರು ಮಾಡಲಾಗಿದೆ.

ಆರೋಪಿತ ಅಧಿಕಾರಿಗಳ ‘ಕರಾಮತ್ತು’:
ಈ ಬೃಹತ್ ಹಗರಣದಲ್ಲಿ ಅಬಕಾರಿ ಉಪ ಆಯುಕ್ತ ಅಜಿತ್‌ಕುಮಾರ್ ಉಪ ಅಧೀಕ್ಷಕ ತುಕಾರಂ ನಾಯಕ್ ಮತ್ತು ನಿರೀಕ್ಷಕ ಭರತ್ ಎಂಬುವವರ ಹೆಸರುಗಳು ಪ್ರಮುಖವಾಗಿ ಕೇಳಿಬಂದಿವೆ. ಇವರು ಜಿಲ್ಲಾಧಿಕಾರಿಗಳಿಗೆ ತಪ್ಪು ವರದಿ ನೀಡಿ ದಾರಿ ತಪ್ಪಿಸಿದ್ದಲ್ಲದೆ, ಮಧ್ಯವರ್ತಿಗಳ ಮೂಲಕ ಪ್ರತಿ ಲೈಸೆನ್ಸ್‌ಗೆ ಕೋಟ್ಯಂತರ ರೂಪಾಯಿ ಲಂಚ ಪಡೆದಿರುವ ಗಂಭೀರ ಆರೋಪ ಎದುರಿಸುತ್ತಿದ್ದಾರೆ. ವಕೀಲ ಡಾ. ಹರಿಪ್ರಸಾದ್ ಅವರು ನೀಡಿದ ದೂರಿನ ಆಧಾರದ ಮೇಲೆ ಲೋಕಾಯುಕ್ತರು ನಡೆಸಿದ ತನಿಖೆಯಲ್ಲಿ ಈ ಎಲ್ಲಾ ಸತ್ಯಾಂಶಗಳು ಸಾಬೀತಾಗಿವೆ.

ವರ್ಗಾವಣೆ ದಂಧೆ ಮತ್ತು ಸಾರ್ವಜನಿಕರ ಆಕ್ರೋಶ:
ಬೆಂಗಳೂರಿನಲ್ಲೇ ಸುಮಾರು 30 ವರ್ಷಗಳಿಂದ ಬೇರೂರಿರುವ ಕೆಲ ಅಧಿಕಾರಿಗಳು ಸಿಂಡಿಕೇಟ್ ಮಾಡಿಕೊಂಡು ಆಯಕಟ್ಟಿನ ಜಾಗಗಳಿಗಾಗಿ ಕೋಟ್ಯಂತರ ರೂ. ಲಂಚ ನೀಡುತ್ತಿದ್ದಾರೆ ಎಂಬ ಅಂಶವೂ ವರದಿಯಲ್ಲಿದೆ. ವರ್ಗಾವಣೆ ಪ್ರಕ್ರಿಯೆ ಆರಂಭವಾಗುತ್ತಿರುವ ಬೆನ್ನಲ್ಲೇ ಈ ಭ್ರಷ್ಟ ಅಧಿಕಾರಿಗಳನ್ನು ಕೂಡಲೇ ಅಮಾನತು (Suspend) ಮಾಡಬೇಕೆಂದು ಸಾರ್ವಜನಿಕ ವಲಯದಲ್ಲಿ ತೀವ್ರ ಒತ್ತಾಯ ಕೇಳಿಬಂದಿದೆ.

The post ಅಬಕಾರಿ ಇಲಾಖೆಯಲ್ಲಿ ಬೃಹತ್ ಹಗರಣ: ಬೋಗಸ್ ದಾಖಲೆ ಸೃಷ್ಟಿಸಿ ನೂರಾರು CL-7 ಪರವಾನಗಿ ಮಂಜೂರು! appeared first on Good News 24x7.

]]>