CM Archives - Good News 24x7 https://www.goodnews24x7.com/tag/cm/ Kannada Sun, 16 Nov 2025 05:42:58 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg CM Archives - Good News 24x7 https://www.goodnews24x7.com/tag/cm/ 32 32 ನಾಯಕತ್ವ ಬದಲಾವಣೆ ಬಗ್ಗೆ ನಂಗೇನೂ ಗೊತ್ತಿಲ್ಲ, ಸಿಎಂ ಹತ್ರನೇ ಕೇಳಿ ಎಂದ ಡಿಕೆ ಶಿವಕುಮಾರ್ https://www.goodnews24x7.com/i-dont-know-anything-about-the-leadership-change-ask-the-cm-himself-says-dk-shivakumar/ Sun, 16 Nov 2025 05:42:58 +0000 https://www.goodnews24x7.com/?p=8174 ನವದೆಹಲಿ: ಕರ್ನಾಟಕದಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ದೆಹಲಿಗೆ ದೌಡಾಯಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದಾರೆ. ಈ ಬಗ್ಗೆ…

The post ನಾಯಕತ್ವ ಬದಲಾವಣೆ ಬಗ್ಗೆ ನಂಗೇನೂ ಗೊತ್ತಿಲ್ಲ, ಸಿಎಂ ಹತ್ರನೇ ಕೇಳಿ ಎಂದ ಡಿಕೆ ಶಿವಕುಮಾರ್ appeared first on Good News 24x7.

]]>

ನವದೆಹಲಿ: ಕರ್ನಾಟಕದಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ದೆಹಲಿಗೆ ದೌಡಾಯಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದಾರೆ. ಈ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಪ್ರಶ್ನಿಸಿದಾಗ ಅವರು, “ರಾಹುಲ್‌ ಗಾಂಧಿ, ಸಿಎಂ ಸಿದ್ದರಾಮಯ್ಯನವರ ಭೇಟಿ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರು ಯಾವ ವಿಚಾರಕ್ಕೆ ಭೇಟಿಯಾಗಿದ್ದರು, ಏನು ಚರ್ಚೆ ಮಾಡಿದ್ದಾರೆಂದು ನನಗೆ ಗೊತ್ತಿಲ್ಲ ಎಂದಿದ್ದಾರೆ.

ಸಾಮಾನ್ಯವಾಗಿ ಸಿಎಂ ಬಂದಾಗ ಪಕ್ಷದ ವರಿಷ್ಠರನ್ನು ಭೇಟಿಯಾಗುವುದು ಸಹಜ. ನಾಯಕತ್ವ ಬದಲಾವಣೆ ಬಗ್ಗೆ ನನಗೆ ಏನೂ ಗೊತ್ತಿಲ್ಲ, ಏನಾದರೂ ಇದ್ದರೆ ಸಿಎಂ ಹತ್ತಿರ ಮಾತನಾಡಿ. ಪಕ್ಷ ಏನು ಹೇಳುತ್ತೋ ಹಾಗೆ ನಡೆದುಕೊಳ್ಳುವುದು ನನ್ನ ಕೆಲಸ. ಪಕ್ಷದ ಹೈಕಮಾಂಡ್‌ ನನ್ನ ಕೇಳ್ತಾರೆ, ಆಗ ನಾನು ಮಾತನಾಡುತ್ತೇನೆ. ಏನು ಮಾತಾಡಬೇಕೆಂದು ನನಗೆ ಗೊತ್ತು ಎಂದು ದೆಹಲಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

The post ನಾಯಕತ್ವ ಬದಲಾವಣೆ ಬಗ್ಗೆ ನಂಗೇನೂ ಗೊತ್ತಿಲ್ಲ, ಸಿಎಂ ಹತ್ರನೇ ಕೇಳಿ ಎಂದ ಡಿಕೆ ಶಿವಕುಮಾರ್ appeared first on Good News 24x7.

]]>
ಸಾಲು ಮರದ ತಿಮ್ಮಕ್ಕ ನವರ ನಿ*ನಕ್ಕೆ ಸಿಎಂ ಸಂತಾಪ; ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ. https://www.goodnews24x7.com/cm-condoles-death-of-saalu-marad-thimmakka-funeral-with-state-honours-cm-condoles-death-of-saalu-marad-thimmakka-funeral-with-state-honours/ Fri, 14 Nov 2025 12:05:34 +0000 https://www.goodnews24x7.com/?p=8159 ನವೆಂಬರ್ 14: ಪದ್ಮಶ್ರೀ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.             ಇಂದು ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಅವರ ಅಂತಿಮ…

The post ಸಾಲು ಮರದ ತಿಮ್ಮಕ್ಕ ನವರ ನಿ*ನಕ್ಕೆ ಸಿಎಂ ಸಂತಾಪ; ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ. appeared first on Good News 24x7.

]]>

ನವೆಂಬರ್ 14: ಪದ್ಮಶ್ರೀ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

 

 

 

 

 

 

ಇಂದು ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಅವರ ಅಂತಿಮ ದರ್ಶನ ಪಡೆದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. 114 ವರ್ಷಗಳ ಕಾಲ ಬದುಕಿದ ಸಾಲು ಮರದ ತಿಮ್ಮಕ್ಕನವರು ಇಂದು ದೈವಾಧೀನರಾಗಿದ್ದಾರೆ. ಅವರು ಹುಟ್ಟೂರು ಮಾಗಡಿ ತಾಲ್ಲೂಕು ಹುಲಿಕಲ್ ಗ್ರಾಮ ಜನಿಸಿದರು. ಮಕ್ಕಳಿಲ್ಲದ ತಿಮ್ಮಕ್ಕನವರು ಮರಗಿಡಗಳನ್ನೇ ತಮ್ಮ ಮಕ್ಕಳಂತೆ ಸಾಕುತ್ತಿದ್ದರು. ಅವರು ನೆಟ್ಟಿರುವ ಮರಗಳು ಇವತ್ತು ಹೆಮ್ಮರವಾಗಿ ಬೆಳೆದು ನಿಂತಿದೆ. ಪರಿಸರವಾದಿಯಾಗಿದ್ದ ತಿಮ್ಮಕ್ಕನವರ ಸೇವೆಯನ್ನು ಪರಿಗಣಿಸಿ , ಕೇಂದ್ರಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು ಎಂದರು.

ತಿಮ್ಮಕ್ಕ ಅವರ ಕೊನೆ ಆಸೆ: ಪರಿಶೀಲಿಸಿ ಕ್ರಮ

 

 

 

 

 

ತಿಮ್ಮಕ್ಕ ಅವರ ಕೊನೆ ಆಸೆಯ ಪತ್ರ ಕೊಟ್ಟಿದ್ದಾರೆ. ಬೇಲೂರಿನಲ್ಲಿ ತಿಮ್ಮಕ್ಕ ವಸ್ತು ಸಂಗ್ರಹಾಲಯವನ್ನು ಮಾಡಬೇಕು ಎಂದು ಹೇಳಿದ್ದು, ಈ ಬಗ್ಗೆ ಸರ್ಕಾರ ಪರಿಶೀಲಿಸಿ ಪರಿಗಣಿಸಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ತಿಮ್ಮಕ್ಕ ಅವರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಸಾವಿನಿಂದ ಉಂಟಾದ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಕೊಡಲಿ ಎಂದು ಪ್ರಾರ್ಥನೆ ಮಾಡುವುದಾಗಿ ಹೇಳಿದರು. ತಿಮ್ಮಕ್ಕ ಅವರ ಅಂತ್ಯಕ್ರಿಯೆಯ ಬಗ್ಗೆ ಕುಟುಂಬದವರು ಎರಡು ಮೂರು ಸ್ಥಳಗಳನ್ನು ಗೊತ್ತು ಮಾಡಿದ್ದು, ಅಂತ್ಯಕ್ರಿಯೆ ಎಲ್ಲಿ ಮಾಡಬೇಕೆಂದು ಸದ್ಯದಲ್ಲಿಯೇ ನಿರ್ಧರಿಸಲಾಗುವುದು ಎಂದರು.

The post ಸಾಲು ಮರದ ತಿಮ್ಮಕ್ಕ ನವರ ನಿ*ನಕ್ಕೆ ಸಿಎಂ ಸಂತಾಪ; ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ. appeared first on Good News 24x7.

]]>
ಗ್ರೇಟರ್ ಮೈಸೂರು ಆಗಬೇಕು: ಆದರೆ ಈಗಿನ ಮೈಸೂರಿನ ಘನತೆ, ಸಂಸ್ಕೃತಿಗೆ ಧಕ್ಕೆ ಆಗಬಾರದು: ಸಿಎಂ.ಸಿದ್ದರಾಮಯ್ಯ https://www.goodnews24x7.com/greater-mysore-should-be-created-but-the-dignity-culture-of-present-mysore-should-not-be-affected-cm-siddaramaiah/ Mon, 03 Nov 2025 11:20:59 +0000 https://www.goodnews24x7.com/?p=8024 ಗ್ರೇಟರ್ ಮೈಸೂರು ಆಗಬೇಕು: ಆದರೆ ಈಗಿನ ಮೈಸೂರಿನ ಘನತೆ, ಸಂಸ್ಕೃತಿಗೆ ಧಕ್ಕೆ ಆಗಬಾರದು: ಸಿಎಂ.ಸಿದ್ದರಾಮಯ್ಯ ಗ್ರೇಟರ್ ಮೈಸೂರು ಆಗಬೇಕು. ಆದರೆ ಈಗಿನ ಮೈಸೂರಿನ ಘನತೆ, ಸಂಸ್ಕೃತಿಗೆ, ವಿಶಾಲತೆಗೆ ಧಕ್ಕೆ ಆಗಬಾರದು‌ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.…

The post ಗ್ರೇಟರ್ ಮೈಸೂರು ಆಗಬೇಕು: ಆದರೆ ಈಗಿನ ಮೈಸೂರಿನ ಘನತೆ, ಸಂಸ್ಕೃತಿಗೆ ಧಕ್ಕೆ ಆಗಬಾರದು: ಸಿಎಂ.ಸಿದ್ದರಾಮಯ್ಯ appeared first on Good News 24x7.

]]>

ಗ್ರೇಟರ್ ಮೈಸೂರು ಆಗಬೇಕು: ಆದರೆ ಈಗಿನ ಮೈಸೂರಿನ ಘನತೆ, ಸಂಸ್ಕೃತಿಗೆ ಧಕ್ಕೆ ಆಗಬಾರದು: ಸಿಎಂ.ಸಿದ್ದರಾಮಯ್ಯ

ಗ್ರೇಟರ್ ಮೈಸೂರು ಆಗಬೇಕು. ಆದರೆ ಈಗಿನ ಮೈಸೂರಿನ ಘನತೆ, ಸಂಸ್ಕೃತಿಗೆ, ವಿಶಾಲತೆಗೆ ಧಕ್ಕೆ ಆಗಬಾರದು‌ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು. ಪಾಲಿಕೆ ಕಚೇರಿಯಲ್ಲಿ ತಮ್ಮದೇ ಅಧ್ಯಕ್ಷತೆಯಲ್ಲಿ ನಡೆದ ಮೊದಲ “ಗ್ರೇಟರ್ ಮೈಸೂರು” ಸಭೆಯಲ್ಲಿ ಅಧಿಕಾರಿಗಳಿಗೆ ತಮ್ಮ ಸ್ಪಷ್ಟ ಪರಿಕಲ್ಪನೆಗಳನ್ನು ವಿವರಿಸಿ ಸೂಚನೆಗಳನ್ನು ನೀಡಿದರು. ಬೆಂಗಳೂರಿನ‌ ರೀತಿ ಟ್ರಾಫಿಕ್ ಸಮಸ್ಯೆ, ಒಳಚರಂಡಿ, ಫುಟ್ ಪಾತ್, ಕುಡಿಯುವ ನೀರು, STP ಯಾವುದರ ಸಮಸ್ಯೆಯೂ ಇರದಂತೆ ಸ್ಪಷ್ಟ ವೈಜ್ಞಾನಿಕ ಬ್ಲೂ ಪ್ರಿಂಟ್ ಸಿದ್ದಪಡಿಸಿ: ಜಿಲ್ಲಾಡಳಿತಕ್ಕೆ ಸಿ.ಎಂ ಸೂಚನೆ ನೀಡಿದರು.

ಸಭೆಯಲ್ಲಿ ಸಿಎಂ ನೀಡಿದ ಇತರೆ ಸೂಚನೆಗಳು…

*ಗ್ರೇಟರ್ ಮೈಸೂರು ಸುಸಜ್ಜಿತವಾಗಿರಬೇಕು ಮತ್ತು ವ್ಯವಸ್ಥಿತವಾಗಿರಬೇಕು.

*ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಹೀಗೆ ಒದಗಿಸುವಾಗ ಈಗಿನ ಜನಸಂಖ್ಯೆಗೆ ಮಾತ್ರ ಯೋಜನೆ ರೂಪಿಸದೆ ಮುಂದಿನ 15-20 ವರ್ಷಗಳ ಮುಂದಾಲೋಚನೆಯಿಂದ ವೈಜ್ಞಾನಿಕ ಯೋಜನೆ ರೂಪಿಸಿ.

*ಟ್ರಾಫಿಕ್ ಸಮಸ್ಯೆ ಯಾವುದೇ ಕಾರಣಕ್ಕೂ ಇರಬಾರದು.

*ಉದ್ಯೋಗ ಸೃಷ್ಟಿಯಿಂದ ಘನ ತ್ಯಾಜ್ಯ ನಿರ್ವಹಣೆವರೆಗೂ ಆಧನಿಕ‌ ತಂತ್ರಜ್ಞಾನ ಬಳಕೆ ಬಗ್ಗೆ ಯೋಜನೆ ಸಿದ್ಧಪಡಿಸಿ.

*ತ್ಯಾಜ್ಯ ವಿಲೇವಾರಿ, ಕೈಗಾರಿಕಾ ತ್ಯಾಜ್ಯ ವಿಲೇವಾರಿ ಎಲ್ಲವೂ ವೈಜ್ಞಾನಿಕವಾಗಿರಬೇಕು. ಆಧುನಿಕ‌ ತಂತ್ರಜ್ಞಾನದ ನೆರವು ಪಡೆಯಬೇಕು.

*ಬಡಾವಣೆಗಳ ನಿರ್ಮಾಣದಲ್ಲಿ ಆಗುವಾಗ ಚರಂಡಿ, ರಸ್ಯೆಗಳು, ಒಳಚರಂಡಿ, ನೀರು, ವಿದ್ಯುತ್ ಜೊತೆಗೆ ಪಾರ್ಕ್ ಗಳು ವ್ಯವಸ್ಥಿತವಾಗಿರಬೇಕು.

*ಮೈಸೂರಿಗೆ ಮತ್ತೊಂದು ಹೊರ ವರ್ತುಲ ರಸ್ತೆ ಅಗತ್ಯ ಬೀಳುತ್ತದೆ. ಇದಕ್ಕೆ ಈಗಲೇ plan ಮಾಡಿಕೊಳ್ಳಿ.

*ಆದಾಯವೂ ಹೆಚ್ಚಾಗಬೇಕು. ಇದಕ್ಕೆ ಸ್ಪಷ್ಟ ಅಂದಾಜು, ಯೋಜನೆ ರೂಪಿಸಿಕೊಳ್ಳಿ.

*ವಿಶಾಲವಾದ ರಸ್ತೆಗಳು ಮೈಸೂರಿನ ಹೆಗ್ಗಳಿಕೆ, ಗ್ರೇಟರ್ ಮೈಸೂರು ಇನ್ನಷ್ಟು ಯೋಜನಾಬದ್ಧವಾಗಿರಬೇಕು.

*ಜನಸಂಖ್ಯೆಗೆ ಅನುಗುಣವಾಗಿ ಪೌರ ಕಾರ್ಮಿಕರ ಸಂಖ್ಯೆ ಹೆಚ್ಚಾಗಬೇಕು.

The post ಗ್ರೇಟರ್ ಮೈಸೂರು ಆಗಬೇಕು: ಆದರೆ ಈಗಿನ ಮೈಸೂರಿನ ಘನತೆ, ಸಂಸ್ಕೃತಿಗೆ ಧಕ್ಕೆ ಆಗಬಾರದು: ಸಿಎಂ.ಸಿದ್ದರಾಮಯ್ಯ appeared first on Good News 24x7.

]]>
ಹಿಂದಿ ಹೇರಿಕೆ ವಿರುದ್ಧ ಸಿಡಿದೆದ್ದ ಸಿಎಂ; ಕನ್ನಡ ರಾಜ್ಯೋತ್ಸವದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ https://www.goodnews24x7.com/cm-blasts-hindi-imposition-attacks-central-government-at-kannada-rajyotsava/ Sat, 01 Nov 2025 09:54:49 +0000 https://www.goodnews24x7.com/?p=7957 ನಾಡಿನಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆಮಾಡಿದೆ. ಈ ರಾಜ್ಯೋತ್ಸವ ಸಮಾರಂಭವನ್ನುದ್ದೇಶಿಸಿ ಸಿಎಂ ಭಾಷಣ ಮಾಡಿದ್ದು, ಹಿಂದಿ ಹೇರಿಕೆ ವಿರುದ್ಧ ಸಿಡಿದೆದ್ದಿದ್ದಾರೆ. ರಾಜ್ಯದಲ್ಲಿ ಕನ್ನಡ ರಾಜ್ಯೋತ್ಸವದ (Kannada Rajyotsava) ಸಂಭ್ರಮ ಮನೆ ಮಾಡಿದೆ. ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah)…

The post ಹಿಂದಿ ಹೇರಿಕೆ ವಿರುದ್ಧ ಸಿಡಿದೆದ್ದ ಸಿಎಂ; ಕನ್ನಡ ರಾಜ್ಯೋತ್ಸವದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ appeared first on Good News 24x7.

]]>

ನಾಡಿನಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆಮಾಡಿದೆ. ಈ ರಾಜ್ಯೋತ್ಸವ ಸಮಾರಂಭವನ್ನುದ್ದೇಶಿಸಿ ಸಿಎಂ ಭಾಷಣ ಮಾಡಿದ್ದು, ಹಿಂದಿ ಹೇರಿಕೆ ವಿರುದ್ಧ ಸಿಡಿದೆದ್ದಿದ್ದಾರೆ. ರಾಜ್ಯದಲ್ಲಿ ಕನ್ನಡ ರಾಜ್ಯೋತ್ಸವದ (Kannada Rajyotsava) ಸಂಭ್ರಮ ಮನೆ ಮಾಡಿದೆ. ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹಿಂದೆ ಹೇರಿಕೆ ವಿರುದ್ಧ ಸಿಡಿದೆದ್ದಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯ ಮಾಡಿದ ಭಾಷಣವು ಕನ್ನಡ ನಾಡು-ನುಡಿಯ ಗೌರವ, ಏಕೀಕರಣ ಹೋರಾಟ ಮತ್ತು ಭಾಷಾ ಸಮಸ್ಯೆಗಳ ಬಗ್ಗೆ ಆಳವಾದ ಚಿಂತನೆಯನ್ನು ಒಳಗೊಂಡಿತ್ತು. ಸಿಎಂ ಸಿದ್ದರಾಮಯ್ಯ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾಡಿದ ಈ ಭಾಷಣವು ರಾಜ್ಯದ ಜನತೆಗೆ ಸ್ಫೂರ್ತಿ ನೀಡುವಂತಿದ್ದರೆ, ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ತೀಕ್ಷ್ಣ ಟೀಕೆಯನ್ನೂ ಒಳಗೊಂಡಿತ್ತು.

ಕನ್ನಡ ಏಕೀಕರಣಕ್ಕಾಗಿ ಹೋರಾಟ ನಡೆಸಿದ ಮಹನೀಯರನ್ನು ನೆನೆದ ಸಿಎಂ!
ಕನ್ನಡ ರಾಜ್ಯ 69 ವರ್ಷಗಳನ್ನು ಪೂರೈಸಿ, 70ನೇ ವರ್ಷಕ್ಕೆ ಕಾಲಿಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಈ ಸಂದರ್ಭದಲ್ಲಿ ಕನ್ನಡ ಏಕೀಕರಣಕ್ಕಾಗಿ ಹೋರಾಟ ನಡೆಸಿದ ಮಹನೀಯರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯ ಎಂದು ಒತ್ತಿ ಹೇಳಿದರು. ಕನ್ನಡ ನಾಡು-ನುಡಿಗೆ ಕೊಡುಗೆ ನೀಡಿದವರನ್ನು ಸ್ಮರಿಸುವ ಮೂಲಕ ರಾಜ್ಯದ ಇತಿಹಾಸವನ್ನು ಗೌರವಿಸಬೇಕು ಎಂಬುದು ಅವರ ಸಂದೇಶವಾಗಿತ್ತು. ಸಾವಿರಾರು ವರ್ಷಗಳ ಇತಿಹಾಸವುಳ್ಳ ಕನ್ನಡ ಭಾಷೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ಆಗ್ರಹಿಸಿದರು.

ಹಿಂದಿ ಹೇರಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಕಿಡಿ!
ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಭಾಷಾ ಸಮಸ್ಯೆಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು. ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳು ನಮ್ಮ ಮಕ್ಕಳ ಪ್ರತಿಭೆಯನ್ನು ದುರ್ಬಲಗೊಳಿಸುತ್ತಿವೆ ಎಂದು ಆರೋಪಿಸಿದರು. ಹೀಗಾಗಿ ಮಾತೃಭಾಷೆಯಲ್ಲಿ ಶಿಕ್ಷಣವನ್ನು ಕಡ್ಡಾಯವಾಗಿ ಜಾರಿಗೆ ತರಬೇಕು ಎಂಬ ಬೇಡಿಕೆ ಇಟ್ಟರು. ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು. ಹಿಂದಿ ಭಾಷೆಯನ್ನು ಹೇರಲು ನಿರಂತರ ಪ್ರಯತ್ನ ನಡೆಯುತ್ತಿದೆ ಎಂದು ಟೀಕಿಸಿ, ಹಿಂದಿ ಅಭಿವೃದ್ಧಿಗೆ ಮಾತ್ರ ಅನುದಾನ ನೀಡಲಾಗುತ್ತಿದೆ ಎಂಬುದನ್ನು ಎತ್ತಿ ತೋರಿಸಿದರು. ಇದು ಕರ್ನಾಟಕ ವಿರೋಧಿ ನೀತಿ ಎಂದು ಕರೆಯಬೇಕಾದ್ದು, ಎಲ್ಲರೂ ಇದನ್ನು ಖಂಡಿಸಬೇಕು ಎಂದು ಕರೆ ನೀಡಿದರು.

ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ತೀವ್ರ ವಾಗ್ದಾಳಿ!
ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದರು. ರಾಜ್ಯದ ಅಭಿವೃದ್ಧಿಗೆ ಬೇಕಾದ ಯೋಜನೆಗಳು ಕೇಂದ್ರದಿಂದ ಸಿಗುತ್ತಿಲ್ಲ ಎಂದು ದೂರಿದರು. ಆದರೆ ನಮ್ಮ ಸರ್ಕಾರ ಜನರಲ್ಲಿ ಕನ್ನಡ ಪ್ರೀತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿಕೊಂಡರು. ಉದಾಹರಣೆಗೆ, ವಿಧಾನಸೌಧದಲ್ಲಿ ಭುವನೇಶ್ವರಿ ದೇವಿಯ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಕರ್ನಾಟಕದ ವಾಣಿಜ್ಯ ಮಳಿಗೆಗಳಲ್ಲಿ ನಾಮಫಲಕಗಳಲ್ಲಿ 60 ಪ್ರತಿಶತ ಕನ್ನಡವನ್ನು ಕಡ್ಡಾಯಗೊಳಿಸಲಾಗಿದೆ ಎಂದರು.

ಸಿಎಂ ಸಿದ್ದರಾಮಯ್ಯ ಭಾಷಣದಲ್ಲಿ ಬೂಕರ್ ಪ್ರಶಸ್ತಿ ವಿಜೇತೆ ಭಾನು ಮುಷ್ತಾಕ್ ಅವರನ್ನು ನೆನೆದು ಅವರಿಗೆ ಅಭಿನಂದನೆ ಸಲ್ಲಿಸಿದರು. ಕನ್ನಡ ಸಾಹಿತ್ಯದ ಹೆಮ್ಮೆಯಾಗಿರುವ ಭಾನು ಅವರ ಸಾಧನೆಯು ರಾಜ್ಯಕ್ಕೆ ಗರ್ವ ತಂದಿದೆ ಎಂದು ಹೇಳಿದರು. ಒಟ್ಟಾರೆ, ಸಿಎಂ ಸಿದ್ದರಾಮಯ್ಯ ಅವರ ಭಾಷಣವು ಕನ್ನಡದ ಗೌರವವನ್ನು ಕಾಪಾಡುವ, ಭಾಷಾ ನೀತಿಯಲ್ಲಿ ಸಮಾನತೆ ಬೇಡುವ ಮತ್ತು ರಾಜ್ಯದ ಅಭಿವೃದ್ಧಿಗಾಗಿ ಹೋರಾಡುವ ಸಂದೇಶವನ್ನು ಒಳಗೊಂಡಿತ್ತು. ಈ ರಾಜ್ಯೋತ್ಸವವು ಕನ್ನಡಿಗರಲ್ಲಿ ಒಗ್ಗಟ್ಟನ್ನು ಬೆಳೆಸಲಿ ಎಂಬುದು ಅವರ ಆಶಯವಾಗಿತ್ತು.

The post ಹಿಂದಿ ಹೇರಿಕೆ ವಿರುದ್ಧ ಸಿಡಿದೆದ್ದ ಸಿಎಂ; ಕನ್ನಡ ರಾಜ್ಯೋತ್ಸವದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ appeared first on Good News 24x7.

]]>
ಸಿಎಂ ತವರು ಜಿಲ್ಲೆಯಲ್ಲಿ ಮತ್ತೆ ಬಾಲ ಬಿಚ್ಚಿದ ಮೈಕ್ರೋ ಫೈನಾನ್ಸ್…! ಸಾಲ ಮರುಪಾವತಿಸದ ರೈತನ ಮನೆ ಜಪ್ತಿ…ಬೀದಿಗೆ ಬಂದ ಕುಟುಂಬ… https://www.goodnews24x7.com/microfinance-has-once-again-come-to-the-fore-in-cms-home-district-farmers-house-seized-for-not-repaying-loan-family-on-the-streets/ Fri, 31 Oct 2025 13:13:31 +0000 https://www.goodnews24x7.com/?p=7939 ನಂಜನಗೂಡು: ಸಿಎಂ ತವರಿನಲ್ಲಿ ಮೈಕ್ರೋ ಫೈನಾನ್ಸ್ ಮತ್ತೆ ಬಾಲ ಬಿಚ್ಚಿದೆ.ಸಾಲದ ಕಂತು ಕಟ್ಟಿಲ್ಲ ಎಂದು ಮನೆ ಜಪ್ತಿ ಮಾಡಿದೆ. ನಂಜನಗೂಡು ತಾಲ್ಲೂಕಿನ ಕಂದೇಗಾಲ‌ ಗ್ರಾಮದಲ್ಲಿ ಘಟನೆ ಬೆಳಕಿಗೆ ಬಂದಿದೆ.ಕಾಲವಕಾಶ ಕೋರಿದ್ದರೂ ಸ್ಪಂದಿಸದ ಫೈನಾನ್ಸ್ ನ್ಯಾಯಾಲಯದ ಆದೇಶ ತಂದು ಜಪ್ತಿ ಮಾಡಿದ್ದಾರೆ.ಇದೀಗ ಸಾಲ…

The post ಸಿಎಂ ತವರು ಜಿಲ್ಲೆಯಲ್ಲಿ ಮತ್ತೆ ಬಾಲ ಬಿಚ್ಚಿದ ಮೈಕ್ರೋ ಫೈನಾನ್ಸ್…! ಸಾಲ ಮರುಪಾವತಿಸದ ರೈತನ ಮನೆ ಜಪ್ತಿ…ಬೀದಿಗೆ ಬಂದ ಕುಟುಂಬ… appeared first on Good News 24x7.

]]>

ನಂಜನಗೂಡು: ಸಿಎಂ ತವರಿನಲ್ಲಿ ಮೈಕ್ರೋ ಫೈನಾನ್ಸ್ ಮತ್ತೆ ಬಾಲ ಬಿಚ್ಚಿದೆ.ಸಾಲದ ಕಂತು ಕಟ್ಟಿಲ್ಲ ಎಂದು ಮನೆ ಜಪ್ತಿ ಮಾಡಿದೆ.
ನಂಜನಗೂಡು ತಾಲ್ಲೂಕಿನ ಕಂದೇಗಾಲ‌ ಗ್ರಾಮದಲ್ಲಿ ಘಟನೆ ಬೆಳಕಿಗೆ ಬಂದಿದೆ.ಕಾಲವಕಾಶ ಕೋರಿದ್ದರೂ ಸ್ಪಂದಿಸದ ಫೈನಾನ್ಸ್ ನ್ಯಾಯಾಲಯದ ಆದೇಶ ತಂದು ಜಪ್ತಿ ಮಾಡಿದ್ದಾರೆ.ಇದೀಗ ಸಾಲ ಪಡೆದ ಕುಟುಂಬ ಬೀದಿಗೆ ಬಂದಿದೆ.

ಮನೆ ನಿರ್ಮಾಣ ಸಂಭಂದ ಇಕ್ವೀಟಾಸ್ ಸ್ಮಾಲ್ ಫೈನಾನ್ಸ್ ನಲ್ಲಿ ಚಿನ್ನಸ್ವಾಮಿ 2023 ರಲ್ಲಿ 2,70,000 ರೂ ಸಾಲ‌ಪಡೆದಿದ್ದರು. ಚಿನ್ನಸ್ವಾಮಿ.
ಈಗಾಗಲೆ 19 ಕಂತುಗಳ 189000 ಸಾಲ‌ ಮರುಪಾವತಿಸಿದ್ದಾರೆ. ಚಿನ್ನಸ್ವಾಮಿ ಪತ್ನಿ ಸಹ ಇಕ್ವೀಟಾಸ್ ಫೈನಾನ್ಸ್ ನಲ್ಲಿ ಗಂಪು ಸಾಲ ಪಡೆದಿದ್ದರು.ಮನೆ ಸಾಲ‌ಮರುಪಾವತಿ ಕಂತಿನ ಹಣವನ್ನು ಗುಂಪುಸಾಲಕ್ಕೆ ಜಮೆ ಮಾಡಿಕೊಂಡಿದೆ ಎಂದು ಚಿನ್ನಸ್ವಾಮಿ ಆರೋಪವಾಗಿದೆ.ತಮ್ಮ ಅನುಮತಿ ಪಡೆಯೆದೆ ಸುಮಾರು 60 ಸಾವಿರಕ್ಕೂ ಹೆಚ್ವು ಹಣ ಗುಂಪು ಸಾಲಕ್ಕೆ ಜಮೆ ಮಾಡಿಕೊಂಡಿದ್ದಾರೆ.ಇದೀಗ ಏಕಾಏಕಿ ಮನೆ ಸಾಲದ ಕಂತು ಕಟ್ಟಿಲ್ಲವೆಂದು ಮನೆ ಜಪ್ತಿ ಮಾಡಿದ್ದಾರೆ.

ಸಾಲ ಮರುಪಾವತಿಗಾಗಿ ಚಿನ್ನಸ್ವಾಮಿ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಕಾಲಾವಕಾಶ ಕೇಳಿದ್ದರು. ಮನೆ ಜಪ್ತಿ ತಡೆಯುವಂತೆ ಜಿಲ್ಲಾಧಿಕಾರಿ ಹಾಗೂ ತಹಶಿಲ್ದಾರ್ ಗೂ ಮನವಿ ಮಾಡಿದ್ದರು.
ಯಾವುದಕ್ಕು ತಲೆಕೆಡೆಸಿಕೊಳ್ಳದ ಫೈನಾನ್ಸ್ ಸಾಲ ಮರುಪಾವತಿ ಮಾಡುವಂತೆ ತಾಕೀತು ಮಾಡಿತ್ತು.ನೆನ್ನೆ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆ ಜಪ್ತಿ ಮಾಡಿ ನೋಟಿಸ್ ಅಂಟಿಸಿದ್ದಾರೆ.

ಇದೀಗ ಮನೆ ಜಪ್ತಿ ಕಾರಣ ಚಿನ್ನಸ್ವಾಮಿ ಮತ್ತು ಕುಟುಂಬ ಬೀದಿಗೆ ಬಿದ್ದಂತಾಗಿದೆ. ಮನೆ ಜಪ್ತಿ ತೆರವು ಗೊಳಿಸುವಂತೆ ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಸಿಎಂ ತವರು ಕ್ಷೇತ್ರದಲ್ಲೇ ಮತ್ತೆ ಮೈಕ್ರೋ ಫೈನಾನ್ಸ್ ಬಾಲ ಬಿಚ್ಚಿದೆ…

The post ಸಿಎಂ ತವರು ಜಿಲ್ಲೆಯಲ್ಲಿ ಮತ್ತೆ ಬಾಲ ಬಿಚ್ಚಿದ ಮೈಕ್ರೋ ಫೈನಾನ್ಸ್…! ಸಾಲ ಮರುಪಾವತಿಸದ ರೈತನ ಮನೆ ಜಪ್ತಿ…ಬೀದಿಗೆ ಬಂದ ಕುಟುಂಬ… appeared first on Good News 24x7.

]]>
ಸಭೆಯ ನಿರ್ಣಯಗಳನ್ನು ಸಕಾಲದಲ್ಲಿ ಜಾರಿ ಮಾಡದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ: ಸಿ.ಎಂ ಎಚ್ಚರಿಕೆ! https://www.goodnews24x7.com/strict-action-against-officials-who-do-not-implement-the-resolutions-of-the-meeting-in-time-cm-warns/ Fri, 24 Oct 2025 10:59:20 +0000 https://www.goodnews24x7.com/?p=7822 ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ವಿಧಾನಸೌಧ ಸಭಾಂಗಣದಲ್ಲಿ ನಡೆದ ಬಂಡವಾಳ ಹೂಡಿಕೆ ಆಕರ್ಷಣೆ ಸಭೆಯ ಮುಖ್ಯಾಂಶಗಳು • ಕರ್ನಾಟಕ ದೇಶದಲ್ಲೇ ಪ್ರಗತಿಪರ ರಾಜ್ಯವಾಗಿದ್ದು, ಬಂಡವಾಳ ಹೂಡಿಕೆಗೆ ಪೂರಕವಾದ ವಾತಾವರಣವನ್ನು ಇನ್ನಷ್ಟು ಉತ್ತಮಪಡಿಸಬೇಕು. ಯಾವುದೇ ಕಾರಣಕ್ಕೂ ಅನುಮೋದನೆಗಳ ನೀಡಿಕೆಯಲ್ಲಿ ವಿಳಂಬಕ್ಕೆ ಅವಕಾಶ…

The post ಸಭೆಯ ನಿರ್ಣಯಗಳನ್ನು ಸಕಾಲದಲ್ಲಿ ಜಾರಿ ಮಾಡದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ: ಸಿ.ಎಂ ಎಚ್ಚರಿಕೆ! appeared first on Good News 24x7.

]]>

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ವಿಧಾನಸೌಧ ಸಭಾಂಗಣದಲ್ಲಿ ನಡೆದ ಬಂಡವಾಳ ಹೂಡಿಕೆ ಆಕರ್ಷಣೆ ಸಭೆಯ ಮುಖ್ಯಾಂಶಗಳು

• ಕರ್ನಾಟಕ ದೇಶದಲ್ಲೇ ಪ್ರಗತಿಪರ ರಾಜ್ಯವಾಗಿದ್ದು, ಬಂಡವಾಳ ಹೂಡಿಕೆಗೆ ಪೂರಕವಾದ ವಾತಾವರಣವನ್ನು ಇನ್ನಷ್ಟು ಉತ್ತಮಪಡಿಸಬೇಕು. ಯಾವುದೇ ಕಾರಣಕ್ಕೂ ಅನುಮೋದನೆಗಳ ನೀಡಿಕೆಯಲ್ಲಿ ವಿಳಂಬಕ್ಕೆ ಅವಕಾಶ ನೀಡಬಾರದು. ಈ ಕುರಿತು ಮುಖ್ಯ ಕಾರ್ಯದರ್ಶಿಯವರು ಎಲ್ಲಾ ಇಲಾಖೆಗಳಿಗೆ ಸೂಕ್ತ ನಿರ್ದೇಶನಗಳನ್ನು ಜಾರಿಗೊಳಿಸಬೇಕು ಎಂದು ಮುಖ್ಯಮಂತ್ರಿ ಅವರು ಸೂಚನೆ ನೀಡಿದರು.

• ಕೈಗಾರಿಕಾ ಸ್ನೇಹಿ ವ್ಯವಸ್ಥೆಯನ್ನು ಉತ್ತಮಪಡಿಸಲು ಕಾನೂನು ಮತ್ತು ನಿಯಮಾವಳಿಗಳಿಗೆ ಅಗತ್ಯ ತಿದ್ದುಪಡಿಗಳನ್ನು ತರುವ ನಿಟ್ಟಿನಲ್ಲಿ ಸಚಿವ ಸಂಪುಟದಲ್ಲಿ ತೀರ್ಮಾನಗಳನ್ನು ಕೈಗೊಳ್ಳಲಾಗುವುದು ಎಂದರು.

• ಕೈಗಾರಿಕೆಗಳ ಆರಂಭಕ್ಕೆ ಅಗತ್ಯವಾದ ಭೂ ಬಳಕೆ ಬದಲಾವಣೆ ಪ್ರಕ್ರಿಯೆ ಸೇರಿದಂತೆ ವಿವಿಧ ಎನ್‌ಒಸಿಗಳ ನೀಡಿಕೆಯ ಕಾಲಮಿತಿಯನ್ನು ಕಡಿಮೆ ಮಾಡಬೇಕು. ಕಾಲಮಿತಿಯನ್ನು ಕಡಿಮೆ ಮಾಡುವ ಬಗ್ಗೆ ವಿವರವಾದ ಪ್ರಸ್ತಾವನೆಯನ್ನು ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ವಿಳಂಬಕ್ಕೆ ಅವಕಾಶ ನೀಡಬಾರದು.

• ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಅಗ್ನಿಶಾಮಕ ಇಲಾಖೆ ಅನುಮೋದನೆ ವಿಳಂಬವಾಗುತ್ತಿದ್ದು, ಇದನ್ನು ತ್ವರಿತಗೊಳಿಸಬೇಕು. ಇದಕ್ಕಾಗಿ ಮಂಡಳಿಯ ನಿಯಮಾವಳಿಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಬೇಕು. ಎಲ್ಲಾ ಸಂಬಂಧಪಟ್ಟ ಇಲಾಖೆಗಳು ಅನುಮೋದನೆ ನೀಡುವ ಕಾಲಮಿತಿಯನ್ನು ಮರು ನಿಗದಿಪಡಿಸಬೇಕು. ಕಾಲಮಿತಿಯಲ್ಲಿ ಅನುಮೋದನೆಗಳನ್ನು ನೀಡಲು ವಿಫಲರಾಗುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.

• ಕೈಗಾರಿಕೆಗಳಿಗೆ ರಸ್ತೆ, ನೀರು, ವಿದ್ಯುತ್‌ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸುವ ಕುರಿತಾಗಿ ಸಂಬಂಧಪಟ್ಟ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಅವರು ಸೂಚಿಸಿದರು.

• ಹಸಿರು ಇಂಧನ ಮೂಲಗಳಿಂದ ಕೈಗಾರಿಕೆಗಳಿಗೆ ವಿದ್ಯುತ್ ಸರಬರಾಜು ಮಾಡುವ ನಿಟ್ಟಿನಲ್ಲಿ ಅಸಾಂಪ್ರದಾಯಿಕ ಇಂಧನ ಮೂಲಗಳಿಗೆ ಆದ್ಯತೆ ನೀಡಬೇಕು. ಇದಕ್ಕಾಗಿ ವ್ಯವಸ್ಥಿತ ಯೋಜನೆ ರೂಪಿಸಬೇಕು.

• ಕೇಂದ್ರ ಸರ್ಕಾರ 2ಪ್ರಮುಖ ಕಾರ್ಮಿಕ ಸುಧಾರಣೆಗಳ ಅನುಷ್ಠಾನವನ್ನು ಪ್ರಸ್ತಾಪಿಸಿದೆ. ಕಾರ್ಮಿಕರ ಕೆಲಸದ ಅವಧಿಯನ್ನು ಮರು ನಿಗದಿಪಡಿಸುವ ಸಂದರ್ಭದಲ್ಲಿ ಕಾರ್ಮಿಕರ ಹಿತವನ್ನು ಗಮನದಲ್ಲಿಡಲಾಗುವುದು.

• ಏಕಗವಾಕ್ಷಿ ವ್ಯವಸ್ಥೆಯಡಿ ಅರ್ಜಿಗಳ ವಿಲೇವಾರಿ ಆಗುತ್ತಿಲ್ಲ ಎಂದು ದೂರುಗಳಿವೆ. ಎಲ್ಲಾ ಸೇವೆಗಳನ್ನು ನೀಡಲು ಕ್ರಮ ಕೈಗೊಳ್ಳಬೇಕು. ಪ್ರಸ್ತುತ 29 ಸೇವೆಗಳು ಏಕಗವಾಕ್ಷಿ ವ್ಯವಸ್ಥೆಯಿಂದ ಹೊರಗಿದ್ದು, ಅವುಗಳನ್ನು ಸಹ ಇದರಡಿ ತರಬೇಕು. ಎಲ್ಲಾ ಅರ್ಜಿಗಳನ್ನು ಏಕಗವಾಕ್ಷಿ ವ್ಯವಸ್ಥೆಯಡಿ ಏಕೀಕೃತ ವಿಲೇವಾರಿಗೆ ಕ್ರಮ.

• ರಾಜ್ಯದಲ್ಲಿ ಈ ವರ್ಷದ ಆರಂಭದಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ರೂ.10.27 ಲಕ್ಷ ಕೋಟಿ ಹೂಡಿಕೆ ಆಕರ್ಷಿಸಲಾಗಿದ್ದು, ಈಗಾಗಲೇ ಶೇ.60ರಷ್ಟು ಹೂಡಿಕೆಗಳು ಅನುಷ್ಠಾನ ಹಂತದಲ್ಲಿವೆ.

• ಸುಮಾರು ರೂ.1.5ಲಕ್ಷ ಕೋಟಿಗೂ ಹೆಚ್ಚಿನ ಬಂಡವಾಳ ಹೂಡಿಕೆ ಪ್ರಸ್ತಾವನೆಗಳು ವಿವಿಧ ಹಂತದಲ್ಲಿವೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

The post ಸಭೆಯ ನಿರ್ಣಯಗಳನ್ನು ಸಕಾಲದಲ್ಲಿ ಜಾರಿ ಮಾಡದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ: ಸಿ.ಎಂ ಎಚ್ಚರಿಕೆ! appeared first on Good News 24x7.

]]>
2,500 ರೂಪಾಯಿ ದಂಡ ಪಾವತಿಸಿದ ಸಿಎಂ ಸಿದ್ದರಾಮಯ್ಯ https://www.goodnews24x7.com/cm-siddaramaiah-pays-rs-2500-fine/ Sat, 06 Sep 2025 07:22:41 +0000 https://www.goodnews24x7.com/?p=7407 ಸಿಎಂ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿರುವ ಪ್ರಕರಣ ದಾಖಲಾಗಿದ್ದವು. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ ಬೆನ್ನಲೇ ಸಿಎಂ ಸಿದ್ದರಾಮಯ್ಯ ಅವರು ದಂಡ ಪಾವತಿಸಿದ್ದಾರೆ. ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಟ್ರಾಫಿಕ್…

The post 2,500 ರೂಪಾಯಿ ದಂಡ ಪಾವತಿಸಿದ ಸಿಎಂ ಸಿದ್ದರಾಮಯ್ಯ appeared first on Good News 24x7.

]]>

ಸಿಎಂ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿರುವ ಪ್ರಕರಣ ದಾಖಲಾಗಿದ್ದವು. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ ಬೆನ್ನಲೇ ಸಿಎಂ ಸಿದ್ದರಾಮಯ್ಯ ಅವರು ದಂಡ ಪಾವತಿಸಿದ್ದಾರೆ.

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿರುವ 7 ಪ್ರಕರಣ ದಾಖಲಾಗಿದ್ದವು. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ ಬೆನ್ನಲೇ ಸಿಎಂ ಸಿದ್ದರಾಮಯ್ಯ ಅವರು ದಂಡ ಪಾವತಿ ಮಾಡಿದ್ದಾರೆ.ಸಿಎಂ ಸಿದ್ದರಾಮಯ್ಯ ಅವರು ನಿತ್ಯ ಸಂಚಾರ ಮಾಡುವ ಫಾರ್ಚೂನರ್ ಕಾರು 2024ರಿಂದ ಈವರೆಗೂ 7 ಬಾರಿ ಸಂಚಾರ ನಿಯಮಗಳ ಉಲ್ಲಂಘನೆ ಮಾಡಿರುವುದು ಇದೆ. ಈ ಪೈಕಿ 6 ಪ್ರಕರಣಗಳು ಸೀಟು ಬೆಲ್ಟ್ ಧರಿಸದೇ ನಿಯಮ ಉಲ್ಲಂಘಿಸಿದ ಕೇಸ್ ಆಗಿವೆ. ಇವು ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್​ಮೆಂಟ್ ಸಿಸ್ಟಂನಲ್ಲಿ (ಐಟಿಎಂಎಸ್) ಸಂಚಾರ ನಿಯಮ ಉಲ್ಲಂಘಿಸಿರುವುದು ಸೆರೆಯಾಗಿತ್ತು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆ ಬೆನ್ನಲೇ ದಂಡ ಪಾವತಿ ಆಗಿದೆ. ಸದ್ಯ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ರಾಜ್ಯ ಸರ್ಕಾರ ಶೇ.50ರಷ್ಟು ದಂಡ ಪಾವತಿಯ ಆಫರ್ ನೀಡಿದ ಹಿನ್ನೆಲೆಯಲ್ಲಿ ಸವಾರರು ದಂಡ ಕಟ್ಟುತ್ತಿದ್ದಾರೆ. ಇದೇ ಆಫರ್​ನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಅಧಿಕಾರಿಗಳು 2,500 ರೂಪಾಯಿ ದಂಡ ಪಾವತಿ ಮಾಡಿದ್ದಾರೆ. ಇದರಿಂದ ಟ್ರಾಫಿಕ್ ನಿಯಮ ಉಲ್ಲಂಘನೆ ಕೇಸ್​ಗಳು ಕ್ಲೀಯರ್ ಆಗಿವೆ.

ಈ ವರ್ಷ ಜುಲೈ 9ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ಏರ್​ಪೋರ್ಟ್ ಎಕ್ಸ್​ಪ್ರೆಸ್ ಕಾರಿಡಾರ್​ನಲ್ಲಿ ಸಿಎಂ ಅವರಿದ್ದ ಕಾರು ಓವರ್ ಸ್ಟೀಡಾಗಿ ಚಲಾಯಿಸಿ ನಿಯಮ ಉಲ್ಲಂಘಿಸಿತ್ತು.2024ರ ಜನವರಿ 24ರಂದು ಮಧ್ಯಾಹ್ನ 12.19ರಂದು ಒಲ್ಡ್ ಏರ್​ಪೋರ್ಟ್ ರಸ್ತೆಯ ಲೀಲಾ ಪ್ಯಾಲೇಸ್ ಜಂಕ್ಷನ್ ಬಳಿ ಹೋಗುವಾಗ ಸಿದ್ದರಾಮಯ್ಯ ಅವರು ಸೀಟು ಬೆಲ್ಟ್ ಧರಿಸಿಲ್ಲ. ಅದೇ ಜಂಕ್ಷನ್​ನಲ್ಲಿ ಫೆಬ್ರುವರಿ ಹಾಗೂ ಆಗಸ್ಟ್​ನಲ್ಲಿ ಮತ್ತೆರಡು ಪ್ರಕರಣಗಳು ದಾಖಲಾಗಿದ್ದವು. ಮಾರ್ಚ್​​ನಲ್ಲಿ ಚಂದ್ರಿಕಾ ಹೋಟೆಲ್​ ಜಂಕ್ಷನ್ ಹಾಗೂ ಆಗಸ್ಟ್​ನಲ್ಲಿ ಶಿವಾನಂದ ಸರ್ಕಲ್ ಹಾಗೂ ಡಾ.ರಾಜ್​ಕುಮಾರ್ ಪ್ರತಿಮೆ ಜಂಕ್ಷನ್​ಗಳ ಬಳಿ ಸೀಟು ಬೆಲ್ಟ್ ಧರಿಸಿದೇ ನಿಯಮ ಉಲ್ಲಂಘಿಸಿದ ಪ್ರಕರಣಗಳು ದಾಖಲಾಗಿದ್ದವು.

The post 2,500 ರೂಪಾಯಿ ದಂಡ ಪಾವತಿಸಿದ ಸಿಎಂ ಸಿದ್ದರಾಮಯ್ಯ appeared first on Good News 24x7.

]]>
30 ದಿನ ಜೈಲಿನಲ್ಲಿದ್ದರೆ ಸಚಿವ ಸ್ಥಾನ ವಜಾ : ಪಿಎಂ, ಸಿಎಂ ಗೂ ಇದೆ ಕಾನೂನು! ಮಸೂದೆಯಲ್ಲಿ ಪ್ರಧಾನಿ ಹುದ್ದೆ ಸೇರಿಸಿದ್ದೇ ಮೋದಿ … https://www.goodnews24x7.com/30-dina-jailinalliddare-saciva-sthana-vaja-pie%e1%b9%81-sie%e1%b9%81-gu-ide-kanunu-masudeyalli-pradhani-hudde-serisidde-modi-modipmcm-governmentindia-jailige-hodare-adhikaradinda-vajago/ Mon, 25 Aug 2025 06:46:10 +0000 https://www.goodnews24x7.com/?p=6710 ಜೈಲಿಗೆ ಹೋದರೆ ಅಧಿಕಾರದಿಂದ ವಜಾಗೊಳಿಸುವ ಈ ನೂತನ ಮಸೂದೆಯಲ್ಲಿ ಮುಖ್ಯಮಂತ್ರಿಗಳು, ಸಚಿವರ ಜತೆ ಪ್ರಧಾನಿ ಹುದ್ದೆಯನ್ನು ಸೇರಿಸಿದ್ದೇ ಪ್ರಧಾನಿ ಮೋದಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಅಮಿತ್ ಶಾ ಈ ಮಾಹಿತಿ ನೀಡಿದ್ದಾರೆ. ಕಳೆದ ವಾರವಷ್ಟೇ…

The post 30 ದಿನ ಜೈಲಿನಲ್ಲಿದ್ದರೆ ಸಚಿವ ಸ್ಥಾನ ವಜಾ : ಪಿಎಂ, ಸಿಎಂ ಗೂ ಇದೆ ಕಾನೂನು! ಮಸೂದೆಯಲ್ಲಿ ಪ್ರಧಾನಿ ಹುದ್ದೆ ಸೇರಿಸಿದ್ದೇ ಮೋದಿ … appeared first on Good News 24x7.

]]>

ಜೈಲಿಗೆ ಹೋದರೆ ಅಧಿಕಾರದಿಂದ ವಜಾಗೊಳಿಸುವ ಈ ನೂತನ ಮಸೂದೆಯಲ್ಲಿ ಮುಖ್ಯಮಂತ್ರಿಗಳು, ಸಚಿವರ ಜತೆ ಪ್ರಧಾನಿ ಹುದ್ದೆಯನ್ನು ಸೇರಿಸಿದ್ದೇ ಪ್ರಧಾನಿ ಮೋದಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಅಮಿತ್ ಶಾ ಈ ಮಾಹಿತಿ ನೀಡಿದ್ದಾರೆ. ಕಳೆದ ವಾರವಷ್ಟೇ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಮಸೂದೆಯೊಂದನ್ನು ಮಂಡಿಸಿತು.

ಅದರ ಪ್ರಕಾರ 30 ದಿನ ಜೈಲಿನಲ್ಲಿದ್ದರೆ ಪಿಎಂ, ಸಿಎಂ ಹಾಗೂ ಸಚಿವರನ್ನು ವಜಾಗೊಳಿಸುವ ಮಸೂದೆಯನ್ನು ಕೇಂದ್ರ ಸಚಿವ ಅಮಿತ್ ಶಾ ಮಂಡಿಸಿದ್ದರು. ಈ ಮಸೂದೆಯಲ್ಲಿ ಪ್ರಧಾನಿ ಹುದ್ದೆಯನ್ನು ಅಡಕ ಮಾಡಿದವರೇ ಪ್ರಧಾನಿ ಮೋದಿ ಎಂದು ಅಮಿತ್ ಶಾ ತಿಳಿಸಿದ್ದಾರೆ.

ಈ ಮಸೂದೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಬಿಜೆಪಿಯೇತರ ಸರ್ಕಾರಗಳನ್ನು ಅಸ್ಥಿರಗೊಳಿಸಲು ರಾಜಕೀಯ ಉದ್ದೇಶಗಳಿವೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ವಿರೋಧ ಪಕ್ಷದ ತೀವ್ರ ಟೀಕೆಗಳ ಹೊರತಾಗಿಯೂ, ಸಂವಿಧಾನ (130ನೇ ತಿದ್ದುಪಡಿ) ಮಸೂದೆ, 2025 ಅಂಗೀಕಾರವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು.

ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆ ವಿಧಿಸಬಹುದಾದ ಆರೋಪಗಳ ಮೇಲೆ ಪ್ರಧಾನಿ, ಮುಖ್ಯಮಂತ್ರಿಗಳು ಮತ್ತು ಸಚಿವರನ್ನು ಬಂಧಿಸಿ ಸತತ 30 ದಿನಗಳ ಕಾಲ ಬಂಧನದಲ್ಲಿಟ್ಟರೆ ಅವರನ್ನು ಸ್ವಯಂಚಾಲಿತವಾಗಿ ಅಧಿಕಾರದಿಂದ ತೆಗೆದುಹಾಕುವ ಪ್ರಸ್ತಾಪವನ್ನು ಮಸೂದೆ ಹೊಂದಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಸರ್ಕಾರದ ಪ್ರಸ್ತಾವಿತ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಸಮರ್ಥಿಸಿಕೊಂಡರು ಮತ್ತು ಮಾಜಿ ಉಪರಾಷ್ಟ್ರಪತಿ ಜಗದೀಪ್ ಧಂಖರ್ ಅವರ ರಾಜೀನಾಮೆಯ ಸುತ್ತಲಿನ ಊಹಾಪೋಹಗಳನ್ನು ತಳ್ಳಿಹಾಕಿದರು.

ಜಗದೀಪ್ ದನ್ಖರ್ ರಾಜೀನಾಮೆ ಬಗ್ಗೆ ಅಮಿತ್ ಶಾ ಹೇಳಿದ್ದೇನು? ಜಗದೀಪ್ ಧನ್ಖರ್ ಅವರು ಸಾಂವಿಧಾನಿಕ ಹುದ್ದೆಯಲ್ಲಿದ್ದರು ಮತ್ತು ಅವರ ಅಧಿಕಾರಾವಧಿಯಲ್ಲಿ ಸಂವಿಧಾನದ ಪ್ರಕಾರ ಉತ್ತಮ ಕೆಲಸ ಮಾಡಿದ್ದಾರೆ. ಅವರ ವೈಯಕ್ತಿಕ ಆರೋಗ್ಯ ಸಮಸ್ಯೆಯಿಂದಾಗಿ ಅವರು ರಾಜೀನಾಮೆ ನೀಡಿದ್ದಾರೆ. ಆದರೆ ಅದರಲ್ಲೂ ನಿಮಗೆ ಬೇಕಾಗಿದ್ದನ್ನು ಹುಡುಕುವ ಪ್ರಯತ್ನ ಮಾಡಬಾರದು ಎಂದು ಹೇಳಿದ್ದಾರೆ. ಜುಲೈ 21ರಂದು ಧನ್ಖರ್ ಉಪ ರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಸಂವಿಧಾನ ತಿದ್ದುಪಡಿ ಮಸೂದೆ ಬಗ್ಗೆ ಅಮಿತ್ ಶಾ ಮಾತು ಗಂಭೀರ ಅಪರಾಧಗಳಿಗಾಗಿ ಜೈಲಿಗೆ ಹೋದ ಪ್ರಧಾನಿ, ಮುಖ್ಯಮಂತ್ರಿ ಮತ್ತು ಇತರ ಸಚಿವರನ್ನು ಪದಚ್ಯುತಗೊಳಿಸಲು ಅವಕಾಶ ನೀಡುವ ಸಂವಿಧಾನ (ನೂರ ಮೂವತ್ತನೇ ತಿದ್ದುಪಡಿ) ಮಸೂದೆಯ ಕುರಿತು ಮಾತನಾಡಿದ ಶಾ, ಸಂಸತ್ತು ಈ ಕ್ರಮವನ್ನು ಬೆಂಬಲಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಇದು ಅಂಗೀಕಾರವಾಗುತ್ತದೆ ಎಂದು ನನಗೆ ಖಚಿತವಾಗಿದೆ. ಕಾಂಗ್ರೆಸ್ ಪಕ್ಷ ಮತ್ತು ವಿರೋಧ ಪಕ್ಷದಲ್ಲಿ ನೈತಿಕತೆಯನ್ನು ಬೆಂಬಲಿಸುವ ಮತ್ತು ನೈತಿಕ ನೆಲೆಯನ್ನು ಕಾಯ್ದುಕೊಳ್ಳುವ ಅನೇಕ ಜನರು ಇರುತ್ತಾರೆ ಎಂದರು.

ವಿರೋಧ ಪಕ್ಷಗಳು ತಮ್ಮ ನಾಯಕರನ್ನು ರಕ್ಷಿಸಿಕೊಳ್ಳಲು ಮಾತ್ರ ಸುಧಾರಣೆಗಳನ್ನು ವಿರೋಧಿಸುತ್ತಿವೆ ಎಂದು ಶಾ ಆರೋಪಿಸಿದರು.ಇಂದಿಗೂ ಅವರು ಜೈಲಿಗೆ ಹೋದರೆ ಜೈಲಿನಿಂದ ಸುಲಭವಾಗಿ ಅಲ್ಲಿಂದಲೇ ಕಾರ್ಯ ನಿರ್ವಹಿಸಲು ಬಯಸುತ್ತಾರೆ.

ರಾಹುಲ್ ಗಾಂಧಿ ವಿರುದ್ಧ ಟೀಕೆ ಬಿಹಾರದಲ್ಲಿ ರಾಹುಲ್ ಗಾಂಧಿ ಆಯೋಜಿಸಿರುವ ಮತದಾರರ ಹಕ್ಕುಗಳ ಯಾತ್ರೆ ವಿರುದ್ಧ ಮಾತನಾಡಿ, ಒಂದು ಕಾರ್ಯಕ್ರಮವನ್ನು ನಿರ್ವಹಿಸುವುದಕ್ಕೂ ಮತ್ತು ಸಾರ್ವಜನಿಕರೊಂದಿಗೆ ಸಂವಹನ ನಡೆಸುವುದಕ್ಕೂ ದೊಡ್ಡ ವ್ಯತ್ಯಾಸವಿದೆ ಎಂದರು.

ಮಸೂದೆಯನ್ನು ವಿವರವಾದ ಪರಿಶೀಲನೆಗಾಗಿ ಸಂಸತ್ತಿನ ಎರಡೂ ಸದನಗಳ 31 ಸದಸ್ಯರನ್ನು ಒಳಗೊಂಡ ಜೆಪಿಸಿಗೆ ಉಲ್ಲೇಖಿಸಲಾಗಿದೆ. ಸಮಿತಿಯು ಮಸೂದೆಯನ್ನು ಪರಿಶೀಲಿಸಿ ಮತಕ್ಕೆ ಹಾಕುವ ಮೊದಲು ಶಿಫಾರಸುಗಳನ್ನು ನೀಡುತ್ತದೆ.ಈ ಮಸೂದೆಯು ಆಡಳಿತ ಪಕ್ಷದ ನಾಯಕರು ಸೇರಿದಂತೆ ಎಲ್ಲಾ ನಾಯಕರಿಗೆ ಸಮಾನವಾಗಿ ಅನ್ವಯಿಸುತ್ತದೆ ಎಂದು ಒತ್ತಿ ಹೇಳಿದರು.

ಇದಕ್ಕೂ ಮೊದಲು, ಇಂದಿರಾ ಗಾಂಧಿ 39 ನೇ ತಿದ್ದುಪಡಿಯನ್ನು ತಂದಿದ್ದರು (ರಾಷ್ಟ್ರಪತಿ, ಉಪಾಧ್ಯಕ್ಷ, ಪ್ರಧಾನಿ ಮತ್ತು ಸ್ಪೀಕರ್ ಅವರನ್ನು ಭಾರತೀಯ ನ್ಯಾಯಾಲಯಗಳ ನ್ಯಾಯಾಂಗ ಪರಿಶೀಲನೆಯಿಂದ ರಕ್ಷಿಸುವ). ಆದರೆ ನರೇಂದ್ರ ಮೋದಿ ಅವರು ತಮ್ಮ ವಿರುದ್ಧ ಸಾಂವಿಧಾನಿಕ ತಿದ್ದುಪಡಿಯನ್ನು ತಂದಿದ್ದಾರೆ, ಅದು ಪ್ರಧಾನಿ ಜೈಲಿಗೆ ಹೋದರೆ ಅವರು ರಾಜೀನಾಮೆ ನೀಡಬೇಕಾಗುತ್ತದೆ ಎಂದು 130 ನೇ ತಿದ್ದುಪಡಿ ಮಸೂದೆಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

130ನೇ ತಿದ್ದುಪಡಿ ಮಸೂದೆಯಡಿಯಲ್ಲಿ ಜಾಮೀನು ವಿಳಂಬ ಮಾಡುವಂತೆ ಸರ್ಕಾರ ನ್ಯಾಯಾಲಯಗಳ ಮೇಲೆ ಒತ್ತಡ ಹೇರಬಹುದು ಎಂಬ ವಿರೋಧ ಪಕ್ಷದ ಹೇಳಿಕೆಯನ್ನು ಅಮಿತ್ ಶಾ ತಳ್ಳಿಹಾಕಿದರು. ಸರ್ಕಾರದ ಸಚಿವರ ವಿರುದ್ಧ ಯಾವುದೇ ಆರೋಪ ಬಂದಾಗ, ವಿರೋಧ ಪಕ್ಷವು ಮೊದಲು ಅವರ ರಾಜೀನಾಮೆಯನ್ನು ಒತ್ತಾಯಿಸುತ್ತದೆ. ಈಗ, ಈ ಮಸೂದೆಯನ್ನು ಪರಿಚಯಿಸಿದ ನಂತರ, ವಿರೋಧ ಪಕ್ಷದ ಈ ಕೆಲಸವೂ ಬಹುತೇಕ ಕೊನೆಗೊಳ್ಳುತ್ತದೆ.

ಅಂದರೆ, ಒಬ್ಬ ನಾಯಕ ಅಪರಾಧ ಮಾಡಿದ್ದರೆ ಮತ್ತು ಪೊಲೀಸರು ಅವರನ್ನು ಬಂಧಿಸಿದರೆ, ಅವರ ಸ್ಥಾನಮಾನವನ್ನು ತಕ್ಷಣವೇ ರದ್ದುಗೊಳಿಸಲಾಗುತ್ತದೆ. ಈ ನಿಯಮವು ಪ್ರಧಾನಿ, ಕೇಂದ್ರ ಸಚಿವರು ಮತ್ತು ಮುಖ್ಯಮಂತ್ರಿ ಅಥವಾ ರಾಜ್ಯಗಳ ಸಚಿವರಿಗೆ ಅನ್ವಯಿಸುತ್ತದೆ.

ಯಾವಾಗ ರಾಜೀನಾಮೆ ನೀಡಬೇಕಾಗುತ್ತದೆ? -ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆ ವಿಧಿಸಲಾದ ಪ್ರಕರಣಗಳಲ್ಲಿ ಹುದ್ದೆಯಿಂದ ತೆಗೆದುಹಾಕುವ ನಿಯಮ ಅನ್ವಯವಾಗುತ್ತದೆ. ಸಚಿವರು ಅಥವಾ ಸಿಎಂಗೆ 30 ದಿನಗಳ ಒಳಗೆ ಜಾಮೀನು ಸಿಗದಿದ್ದರೆ, ಅವರು ತಕ್ಷಣವೇ ರಾಜೀನಾಮೆ ನೀಡಬೇಕಾಗುತ್ತದೆ. -ಬಂಧನವಾದ 30 ದಿನಗಳ ನಂತರವೂ ಅವರು ರಾಜೀನಾಮೆ ನೀಡದಿದ್ದರೆ, 31 ನೇ ದಿನದಂದು ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ ಎಂದು ಪರಿಗಣಿಸಲಾಗುತ್ತದೆ.

ಈ ನಾಯಕರು ರಾಜೀನಾಮೆ ನೀಡಿರಲಿಲ್ಲ ಪ್ರಧಾನಿಯಾಗಿರಲಿ, ಸಚಿವರು ಅಥವಾ ಮುಖ್ಯಮಂತ್ರಿ ಬಂಧನಕ್ಕೊಳಗಾದ ನಂತರವೂ ರಾಜೀನಾಮೆ ನೀಡದ ಅನೇಕ ಪ್ರಕರಣಗಳು ನಮ್ಮ ಕಣ್ಣಮುಂದಿವೆ. ದೆಹಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಸಚಿವ ಸತ್ಯೇಂದ್ರ ಜೈನ್ ಬಂಧನಕ್ಕೊಳಗಾದ ನಂತರವೂ ರಾಜೀನಾಮೆ ನೀಡಿರಲಿಲ್ಲ. ಈಗ ಈ ಮಸೂದೆ ಅಂಗೀಕಾರವಾದರೆ, ಪ್ರಧಾನಿ, ಸಚಿವರು ಅಥವಾ ಮುಖ್ಯಮಂತ್ರಿ ಬಂಧನದ ನಂತರ ತಮ್ಮ ಹುದ್ದೆಯಲ್ಲಿ ಉಳಿಯಲು ಸಾಧ್ಯವಿಲ್ಲ.

The post 30 ದಿನ ಜೈಲಿನಲ್ಲಿದ್ದರೆ ಸಚಿವ ಸ್ಥಾನ ವಜಾ : ಪಿಎಂ, ಸಿಎಂ ಗೂ ಇದೆ ಕಾನೂನು! ಮಸೂದೆಯಲ್ಲಿ ಪ್ರಧಾನಿ ಹುದ್ದೆ ಸೇರಿಸಿದ್ದೇ ಮೋದಿ … appeared first on Good News 24x7.

]]>
2 ಲಡ್ಡುಗಾಗಿ ಸಿಎಂ ಹೆಲ್ಪ್ ಲೇನ್‌ ಗೆ ವ್ಯಕ್ತಿ ದೂರು! https://www.goodnews24x7.com/man-complains-to-cm-helpline-for-2-laddus/ Sun, 24 Aug 2025 06:10:52 +0000 https://www.goodnews24x7.com/?p=6622 ಸಾಮಾನ್ಯವಾಗಿ ಮೂಲಸೌಕರ್ಯದ ಬಗ್ಗೆ ದೂರು ನೀಡಲು ಸಿಎಂ ಹೆಲ್ಪ್ ಲೇನ್ ಗೆ ಜನರು ಕಾಲ್ ಮಾಡ್ತಾರೆ. ಆದರೇ, ಮಧ್ಯಪ್ರದೇಶದ ಭೀಂಡ್ ಜಿಲ್ಲೆಯಲ್ಲಿ ಕಮಲೇಶ್ ಕುಶ್ವಾಹ ತನಗೆ ಗ್ರಾಮ ಪಂಚಾಯತಿನಿಂದ ಒಂದೇ ಲಡ್ಡು ಕೊಟ್ಟರು. ನನಗೆ ಇನ್ನೊಂದು ಲಡ್ಡು ಕೊಡಬೇಕೆಂದು ದೂರು ನೀಡಿದ್ದಾನೆ.ಸಾಮಾನ್ಯವಾಗಿ…

The post 2 ಲಡ್ಡುಗಾಗಿ ಸಿಎಂ ಹೆಲ್ಪ್ ಲೇನ್‌ ಗೆ ವ್ಯಕ್ತಿ ದೂರು! appeared first on Good News 24x7.

]]>

ಸಾಮಾನ್ಯವಾಗಿ ಮೂಲಸೌಕರ್ಯದ ಬಗ್ಗೆ ದೂರು ನೀಡಲು ಸಿಎಂ ಹೆಲ್ಪ್ ಲೇನ್ ಗೆ ಜನರು ಕಾಲ್ ಮಾಡ್ತಾರೆ. ಆದರೇ, ಮಧ್ಯಪ್ರದೇಶದ ಭೀಂಡ್ ಜಿಲ್ಲೆಯಲ್ಲಿ ಕಮಲೇಶ್ ಕುಶ್ವಾಹ ತನಗೆ ಗ್ರಾಮ ಪಂಚಾಯತಿನಿಂದ ಒಂದೇ ಲಡ್ಡು ಕೊಟ್ಟರು. ನನಗೆ ಇನ್ನೊಂದು ಲಡ್ಡು ಕೊಡಬೇಕೆಂದು ದೂರು ನೀಡಿದ್ದಾನೆ.ಸಾಮಾನ್ಯವಾಗಿ ಜನರು ತಮ್ಮ ದೂರುಗಳ ಬಗ್ಗೆ ಪೊಲೀಸ್ ಕಂಟ್ರೋಲ್ ರೂಮುಗೆ ಪೋನ್ ಮಾಡ್ತಾರೆ. ಸಿಎಂ ಹೆಲ್ಪ್ ಲೇನ್ ಗೂ ಪೋನ್ ಮಾಡಿ ದೂರುಗಳನ್ನು ಹೇಳಿಕೊಳ್ಳುತ್ತಾರೆ. ತಮ್ಮ ಮನೆಯ ರೋಡ್ ಸರಿ ಇಲ್ಲ. ಕರೆಂಟ್ ಇಲ್ಲ. ಊರಿಗೆ ಹೋಗಲು ರಸ್ತೆ ಇಲ್ಲ. ಜಮೀನಿನ ಸಮಸ್ಯೆ ಬಗ್ಗೆ ಹೇಳಿಕೊಳ್ಳೋದು ಸಾಮಾನ್ಯ.ಆದರೇ, ಮಧ್ಯಪ್ರದೇಶದ ಭೀಂಡ್ ಜಿಲ್ಲೆಯಲ್ಲಿ ಕಮಲೇಶ್ ಕುಶ್ವಾಹಾ ಎಂಬ ವ್ಯಕ್ತಿ ಸ್ವಾತಂತ್ರ್ಯ ದಿನಾಚರಣೆಯಂದು ಸಿಎಂ ಹೆಲ್ಪ್ ಲೇನ್ ಗೆ ಪೋನ್ ಮಾಡಿ ವಿಚಿತ್ರ ದೂರು ನೀಡಿದ್ದಾನೆ. ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಎಲ್ಲರಿಗೂ ಎರಡೆರಡು ಲಡ್ಡು ನೀಡಿದ್ದರು.

 

ಶಬರಿಮಲೆ: ದಟ್ಟಣೆ ನಿಯಂತ್ರಣಕ್ಕೆ ಎಐ ಕ್ಯಾಮೆರಾ, ಡ್ರೋನ್ ಬಳಕೆಗೆ ಕೆಎಸ್‌ಆರ್‌ಟಿಸಿ ಚಿಂತನೆ.

ನನಗೆ ಮಾತ್ರವೇ ಒಂದೇ ಒಂದು ಲಡ್ಡು ನೀಡಿದ್ದಾರೆ. ನನಗೂ ಎರಡು ಲಡ್ಡು ನೀಡಬೇಕಾಗಿತ್ತು ಎಂದು ಸಿಎಂ ಹೆಲ್ಪ್ ಲೇನ್ ಗೆ ದೂರು ನೀಡಿದ್ದಾನೆ. ಗ್ರಾಮ ಪಂಚಾಯತ್ ಭವನದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಲಡ್ಡು ವಿತರಣೆ ವೇಳೆ ತನಗೆ 2 ಲಡ್ಡು ನೀಡಬೇಕಾಗಿತ್ತು. ನಾನು 2 ಲಡ್ಡು ನೀಡುವಂತೆ ಕೇಳಿದರೂ ಕೊಟ್ಟಿಲ್ಲ ಎಂದು ಸಿಎಂ ಹೆಲ್ಪ್ ಲೇನ್ ಗೆ ಪೋನ್ ಮಾಡಿ ದೂರು ಅನ್ನು ಕಮಲೇಶ್ ಕುಶ್ವಾಹ ರಿಜಿಸ್ಟರ್ ಮಾಡಿದ್ದಾನೆ.ದ್ವಜಾರೋಹಣದ ಬಳಿಕ ಗ್ರಾಮ ಪಂಚಾಯತ್ ಸರಿಯಾಗಿ ಎಲ್ಲರಿಗೂ ಸಿಹಿ ಹಂಚುವಲ್ಲಿ ವಿಫಲವಾಗಿದೆ. ಈ ಸಮಸ್ಯೆಯನ್ನು ಬಗೆಹರಿಸಿ ಎಂದು ದೂರು ನೀಡಿದ್ದಾನೆ.ಈ ಸಮಸ್ಯೆ ಬಗ್ಗೆ ಪಂಚಾಯತ್ ಕಾರ್ಯದರ್ಶಿ ರವೀಂದ್ರ ಶ್ರೀವಾಸ್ತವ್ ಇದು ನಿಜವಾಗಿ ನಡೆದ ಘಟನೆ ಎನ್ನುವುದನ್ನು ಖಚಿತಪಡಿಸಿದ್ದಾರೆ. ಜೊತೆಗೆ ಘಟನೆ ಹೇಗಾಯ್ತು ಎನ್ನುವುದನ್ನು ವಿವರಿಸಿದ್ದಾರೆ. ಗ್ರಾಮಸ್ಥರು ರಸ್ತೆಯ ಪಕ್ಕದಲ್ಲಿ ನಿಂತಿದ್ದರು. ಪಂಚಾಯತ್ ಪಿವನ್, ಕಮಲೇಶ್ ಕುಶ್ವಾಹಾಗೆ ಒಂದು ಲಡ್ಡು ನೀಡಿದ್ದಾರೆ. ಆದರೇ, ಕಮಲೇಶ್ ಕುಶ್ವಾಹ ತನಗೆ ಎರಡು ಲಡ್ಡು ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಎರಡು ಲಡ್ಡು ಕೊಡಲು ಪಿವನ್ ನಿರಾಕರಿಸಿದ್ದಾನೆ. ಆಗ ಕಮಲೇಶ್ ಕುಶ್ವಾಹ ಸಿಎಂ ಹೆಲ್ಪ್ ಲೇನ್ ಗೆ ಕರೆ ಮಾಡಿದ್ದಾನೆ ಎಂದು ಪಂಚಾಯತ್ ಸೆಕ್ರೆಟರಿ ರವೀಂದ್ರ ಶ್ರೀವಾಸ್ತವ್ ಹೇಳಿದ್ದಾರೆ. ಈಗ ಡ್ಯಾಮೇಜ್ ಕಂಟ್ರೋಲ್ ಮಾಡಲು ಗ್ರಾಮ ಪಂಚಾಯತ್ ಒಂದು ಕೆಜಿ ಸ್ವೀಟ್ ಖರೀದಿಸಿ, ಕಮಲೇಶ್ ಕುಶ್ವಾಹಗೆ ನೀಡಿ ಕ್ಷಮೆ ಕೇಳಲು ನಿರ್ಧರಿಸಿದೆ. ಈ ಮೂಲಕ ಕಮಲೇಶ್ ಕುಶ್ವಾಹನನ್ನು ಸಮಾಧಾನಪಡಿಸಲು ಗ್ರಾಮ ಪಂಚಾಯತ್ ನಿರ್ಧರಿಸಿದೆ.

The post 2 ಲಡ್ಡುಗಾಗಿ ಸಿಎಂ ಹೆಲ್ಪ್ ಲೇನ್‌ ಗೆ ವ್ಯಕ್ತಿ ದೂರು! appeared first on Good News 24x7.

]]>
ಬೂಕರ್ ಪ್ರಶಸ್ತಿ ವಿಜೇತೆಯಿಂದ ದಸರಾ ಉದ್ಘಾಟನೆ ! ಸೋನಿಯಾ ಗಾಂಧಿ ಪ್ರಸ್ತಾಪ ಇಲ್ಲ: https://www.goodnews24x7.com/bukar-prasasti-vijeteyinda-dasara-udgha%e1%b9%adane-soniya-gandhi-prastapa-illa-dasarabanumushtaqchiefministercm-se-22-randu-camu%e1%b9%87%e1%b8%8dibe%e1%b9%ad%e1%b9%adadalli-agrapujeyondige-das/ Sat, 23 Aug 2025 10:00:27 +0000 https://www.goodnews24x7.com/?p=6570 ಸೆ.22 ರಂದು ಚಾಮುಂಡಿಬೆಟ್ಟದಲ್ಲಿ ಅಗ್ರಪೂಜೆಯೊಂದಿಗೆ ದಸರಾ ಉದ್ಘಾಟನೆ; ಅ.2ಕ್ಕೆ ಜಂಬೂ ಸವಾರಿ ಬೆಂಗಳೂರು – ಈ ಬಾರಿಯ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತರಾದ ಸಾಹಿತಿ, ಹಾಸನ ಮೂಲದ ಬಾನು ಮುಷ್ತಾಕ್ ನೆರವೇರಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.…

The post ಬೂಕರ್ ಪ್ರಶಸ್ತಿ ವಿಜೇತೆಯಿಂದ ದಸರಾ ಉದ್ಘಾಟನೆ ! ಸೋನಿಯಾ ಗಾಂಧಿ ಪ್ರಸ್ತಾಪ ಇಲ್ಲ: appeared first on Good News 24x7.

]]>

ಸೆ.22 ರಂದು ಚಾಮುಂಡಿಬೆಟ್ಟದಲ್ಲಿ ಅಗ್ರಪೂಜೆಯೊಂದಿಗೆ ದಸರಾ ಉದ್ಘಾಟನೆ; ಅ.2ಕ್ಕೆ ಜಂಬೂ ಸವಾರಿ

ಬೆಂಗಳೂರು – ಈ ಬಾರಿಯ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತರಾದ ಸಾಹಿತಿ, ಹಾಸನ ಮೂಲದ ಬಾನು ಮುಷ್ತಾಕ್ ನೆರವೇರಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಅವರ ‘ಎದೆಯ ಹಣತೆ’ (ಹಾರ್ಟ್ ಲ್ಯಾಂಪ್) ಕೃತಿಗೆ ಬೂಕರ್ ಪ್ರಶಸ್ತಿ ಲಭಿಸಿದೆ. ಕನ್ನಡಿಗರೊಬ್ಬರಿಗೆ ಈ ಪ್ರಶಸ್ತಿ ಬಂದಿರು ವುದು ಸಂತಸದ ಸಂಗತಿ ಯಾಗಿದೆ ಎಂದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾನು ಮುಸ್ತಾಕ್ ಅವರೊಂದಿಗೆ ಈ ಕುರಿತು ಚರ್ಚಿಸಿದ್ದು, ಅವರಿಗೆ ಸಂಪ್ರದಾಯದಂತೆ ಜಿಲ್ಲಾಡಳಿತ ಆಹ್ವಾನ ನೀಡಲಿದೆ ಎಂದರು.
ಕರ್ನಾಟಕದ ಮಹಿಳೆಯೊಬ್ಬರಿಗೆ ಬೂಕರ್ ಪ್ರಶಸ್ತಿ ದೊರೆತಿರುವುದು ಹೆಮ್ಮೆ ವಿಷಯ. ಬಾನು ಮುಸ್ತಾಕ್ ರೈತ ಸಂಘ, ಕನ್ನಡ ಪರ ಚಳವಳಿಗಳಲ್ಲಿ ಭಾಗವಹಿಸಿದ್ದು, ಪ್ರಗತಿ ಪರ ಚಿಂತನೆ ಉಳ್ಳವರು. ಇಂತಹ ಮಹಿಳೆಯಿಂದ ನಾವು ಈ ಬಾರಿಯ ದಸರಾ ಉದ್ಘಾಟನೆ ಮಾಡಿಸುತ್ತಿದ್ದೇವೆ.

ಸೆಪ್ಟೆಂಬರ್ 22 ರಂದು ಚಾಮುಂಡಿ ಬೆಟ್ಟದಲ್ಲಿ ಅಗ್ರ ಪೂಜೆ ಸಲ್ಲಿಸುವ ಮೂಲಕ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಈ ಬಾರಿ ದಸರಾ ಮಹೋತ್ಸವ 10 ದಿನಗಳಿಗೆ ಬದಲಾಗಿ ಪಂಚಾಂಗ ಪ್ರಕಾರ 11 ದಿನ ಜರುಗಲಿದೆ, ಅಕ್ಟೋಬರ್ 2ರಂದು ವಿಜಯ ದಶಮಿ ಆಚರಣೆ ಮೂಲಕ ದಸರಾ ಮಹೋತ್ಸವ ಮುಕ್ತಾಯಗೊಳ್ಳಲಿದೆ.

ಸೋನಿಯಾ ಗಾಂಧಿ ಪ್ರಸ್ತಾಪ ಇಲ್ಲ:
ಕಾಂಗ್ರೆಸ್ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ ಈ ಬಾರಿಯ ದಸರಾ ಮಹೋತ್ಸವವನ್ನು ಉದ್ಘಾಟಿಸುವ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಕಾರ್ಯಾಲಯ ಪತ್ರಿಕಾ ಹೇಳಿಕೆ ನೀಡಿ, ಸೋನಿಯಾ ಗಾಂಧಿ ಅವರಿಂದ ದಸರಾ ಉದ್ಘಾಟನೆಗೆ ಮನವಿ ಮಾಡಲಾಗಿದೆ ಎಂಬುದು ಸರಿಯಲ್ಲ. ಕೆಲವು ಮಾಧ್ಯಮಗಳಲ್ಲಿ ಬಂದಿರುವ ವರದಿ ಸತ್ಯಕ್ಕೆ ದೂರವಾದುದು, ಆ ರೀತಿಯ ಉದ್ದೇಶವಾಗಲೀ, ಪ್ರಸ್ತಾವನೆಯಾಗಲೀ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಬಾರಿಯ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಉದ್ಘಾಟಿಸುತ್ತಿರುವ ಕರುನಾಡಿನ ಹಿರಿಯ ಲೇಖಕಿ ಎಸ್.ಕೆ.ಬಾನು ಮುಷ್ತಾಕ್ ಸಣ್ಣ ಕಥಾ ಸಂಕಲನ “ಹಾರ್ಟ್ ಲ್ಯಾಂಪ್” (ಎದೆಯ ಹಣತೆ) ಕೃತಿಗೆ 2025ನೇ ಸಾಲಿನ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ದೀಪಾ ಭಕ್ತಿ ಅವರು ಎದೆಯ ಹಣತೆ ಕನ್ನಡ ಪುಸ್ತಕವನ್ನು ಇಂಗ್ಲಿಷ್‌ ಗೆ ಅನುವಾದಿಸಿ ಅದಕ್ಕೆ ‘ಹಾರ್ಟ್ ಲ್ಯಾಂಪ್’ ಹೆಸರಿಟ್ಟಿದ್ದರು. ಇತ್ತೀಚಿಗೆ ಲಂಡನ್‌ನಲ್ಲಿ ನಡೆದ ಸಮಾರಂಭದಲ್ಲಿ ಬಾನು ಮುಷ್ತಾಕ್ ಅವರಿಗೆ ಬೂಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮೂಲತಃ ಹಾಸನದವರಾದ ಬಾನು ಮುಷ್ಕಾಕ್ ಅವರು 1948, ಏಪ್ರಿಲ್ 3 ರಂದು ಮುಸ್ಲಿಂ ಸಮುದಾಯದಲ್ಲಿ ಜನಿಸಿದರು. 8 ವರ್ಷವಿದ್ದಾಗ ಶಿವಮೊಗ್ಗದ ಕನ್ನಡ ಭಾಷೆಯ ಮಿಷನರಿ ಶಾಲೆಗೆ ದಾಖಲಾದರು. ಮಾತೃ ಭಾಷೆ ಉರ್ದುವಾದರೂ ಬಾನು ಮುಷ್ಕಾಕ್ ಅವರಿಗೆ ಕನ್ನಡ ಭಾಷೆಯ ಮೇಲೆ ಹಿಡಿತವಿದೆ. ಈ ಹಿನ್ನೆಲೆ ಬಹಳಷ್ಟು ಲೇಖನಗಳನ್ನು ಬರೆದಿದ್ದು, ಹಿಂದಿ, ಉರ್ದು, ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗೆ ಅನುವಾದವಾಗಿದೆ.

ಬಾನು ಮುಷ್ತಾಕ್ ಅವರು ಮೂಲಭೂತವಾದ ಹಾಗೂ ಸಾಮಾಜಿಕ ಅನ್ಯಾಯದ ವಿರುದ್ಧ 1980 ರಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ. ಮುಸ್ಲಿಂ ಮಹಿಳೆಯರ ಮಸೀದಿಗಳ ಪ್ರವೇಶ ಹಕ್ಕಿನ ಪ್ರತಿಪಾದನೆಗಾಗಿ 2000ನೇ ಇಸವಿಯಲ್ಲಿ ಬಾನು ಮುಸ್ತಾಕ್ ಅವರಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಯಿತು. ಪ್ರಾಣ ಬೆದರಿಕೆಗಳು ಬಂದವು. ಆದರೆ ಬಾನು ಮುಷ್ಕಾಕ್ ಇದಕ್ಕೆಲ್ಲಾ ಹೆದರದೆ, ಮೂಲಭೂತವಾದದ ವಿರುದ್ಧ ಈ ತನಕ ಹೋರಾಟ ನಡೆಸುತ್ತಾ ಬಂದಿದ್ದಾರೆ. ಸಾಹಿತಿ, ಹೋರಾಟ ಗಾರ್ತಿಯೂ ಆಗಿರುವ ಬಾನು ಮುಷ್ಕಾಕ್ ಅವರು ಈ ಬಾರಿಯ ದಸರಾ ಉದ್ಘಾಟನೆ ಮಾಡಲಿದ್ದು, ಆ ವೇಳೆ ಅವರ ಸಂದೇಶ ಬಹಳ ನಿರೀಕ್ಷೆ ಮೂಡಿಸಿದೆ.

The post ಬೂಕರ್ ಪ್ರಶಸ್ತಿ ವಿಜೇತೆಯಿಂದ ದಸರಾ ಉದ್ಘಾಟನೆ ! ಸೋನಿಯಾ ಗಾಂಧಿ ಪ್ರಸ್ತಾಪ ಇಲ್ಲ: appeared first on Good News 24x7.

]]>