community Archives - Good News 24x7 https://www.goodnews24x7.com/tag/community/ Kannada Wed, 06 May 2026 10:05:46 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg community Archives - Good News 24x7 https://www.goodnews24x7.com/tag/community/ 32 32 ಉಪ್ಪಾರ ಸಮಾಜದ ವೈದ್ಯೆ ಅಪಘಾತದಲ್ಲಿ ನಿ*ಧನ! https://www.goodnews24x7.com/uppara-community-doctor-dies-in-accident/ Wed, 06 May 2026 10:05:46 +0000 https://www.goodnews24x7.com/?p=9497 ಉಪ್ಪಾರ‌ ಸಮುದಾಯದ ವಿದ್ಯಾರ್ಥಿಗಳಿಗೆ ಸ್ಪೂರ್ತಿಸೆಲೆಯಾಗಿದ್ದ, ಜನರ ನೆಚ್ಚಿನ ಪ್ರಸೂತಿ ವೈದ್ಯರಾಗಿ ಜನಮನ್ನಣೆ ಗಳಿಸಿದ್ದ ಡಾ. ಗೌತಮಿ ಅಪಘಾತದಲ್ಲಿ ನಿಧನರಾಗಿದ್ದು ಸಮುದಾಯಕ್ಕೆ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಭರಿಸಲಾಗದ ನಷ್ಠ, ದುಃಖ ಉಂಟಾಗಿದೆ.‌ ಮೈಸೂರು ಕೆ.ಆರ್.ಆಸ್ಪತ್ರೆ ಮತ್ತು ಮಂಡ್ಯ ಆಸ್ಪತ್ರೆಯಲ್ಲಿ ಪ್ರಸೂತಿ ವೈದ್ಯರಾಗಿ ಉತ್ತಮ…

The post ಉಪ್ಪಾರ ಸಮಾಜದ ವೈದ್ಯೆ ಅಪಘಾತದಲ್ಲಿ ನಿ*ಧನ! appeared first on Good News 24x7.

]]>

ಉಪ್ಪಾರ‌ ಸಮುದಾಯದ ವಿದ್ಯಾರ್ಥಿಗಳಿಗೆ ಸ್ಪೂರ್ತಿಸೆಲೆಯಾಗಿದ್ದ, ಜನರ ನೆಚ್ಚಿನ ಪ್ರಸೂತಿ ವೈದ್ಯರಾಗಿ ಜನಮನ್ನಣೆ ಗಳಿಸಿದ್ದ ಡಾ. ಗೌತಮಿ ಅಪಘಾತದಲ್ಲಿ ನಿಧನರಾಗಿದ್ದು ಸಮುದಾಯಕ್ಕೆ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಭರಿಸಲಾಗದ ನಷ್ಠ, ದುಃಖ ಉಂಟಾಗಿದೆ.‌

ಮೈಸೂರು ಕೆ.ಆರ್.ಆಸ್ಪತ್ರೆ ಮತ್ತು ಮಂಡ್ಯ ಆಸ್ಪತ್ರೆಯಲ್ಲಿ ಪ್ರಸೂತಿ ವೈದ್ಯರಾಗಿ ಉತ್ತಮ ಕಾರ್ಯ ನಿರ್ವಹಣೆಯಿಂದ ಜನಪ್ರಿಯರಾಗಿದ್ದ ಮೈಸೂರಿನ ಮೇಟಗಳ್ಳಿ ಶ್ರೀಮತಿ ಮಂಜುಳಾ ಮತ್ತು‌ ನಾಗರಾಜು ದಂಪತಿ ಪುತ್ರಿ ಡಾ.ಗೌತಮಿ ಅವರು 5 ವರ್ಷದ ವೈದ್ಯಕೀಯ ಸೇವೆ ಬಳಿಕ ಆಂದ್ರಪ್ರದೇಶದ ವಿಶಾಖಪಟ್ಟಣಂ ನಲ್ಲಿ ಎಂಎಸ್ ಮುಗಿಸಿ ಒಂದು ತಿಂಗಳ‌ ತರಬೇತಿ ಹಂತದಲ್ಲಿದ್ದರು.

ಕೆಲವೇ ದಿನಗಳಲ್ಲಿ ಎಂಡಿ ಮಾಡಲು ವಿದೇಶಕ್ಕೆ ತೆರಳುವವರಿದ್ದರು.‌ಆದರೆ, ದಿನಾಂಕ 5-5-2026 ಮಂಗಳವಾರ ರಾತ್ರಿ ಸ್ಕೂಟರ್ ನಿಂದ‌ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ನಿಧನರಾಗಿದ್ದಾರೆ. ಡಾ.ಗೌತಮಿ ಅವರ ನಿಧನ ಆರೋಗ್ಯ ಕ್ಷೇತ್ರಕ್ಕೆ, ಸಮುದಾಯಕ್ಕೆ‌ ತುಂಬಲಾರದ ನಷ್ಟವಾಗಿದೆ. ಭಗವಂತನು ಮೃತರ ಆತ್ಮಕ್ಕೆ ಶಾಂತಿ ಕರುಣಿಸಿ, ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತದೆ.

The post ಉಪ್ಪಾರ ಸಮಾಜದ ವೈದ್ಯೆ ಅಪಘಾತದಲ್ಲಿ ನಿ*ಧನ! appeared first on Good News 24x7.

]]>
ಕರಾವಳಿಯಲ್ಲಿ ಬಿಸಿಲಿನ ಅಬ್ಬರ: ಆರೋಗ್ಯ ಇಲಾಖೆ ಕಟ್ಟೆಚ್ಚರ https://www.goodnews24x7.com/heatwave-on-the-coast-health-department-on-high-alert9482-2/ Wed, 29 Apr 2026 08:42:21 +0000 https://www.goodnews24x7.com/?p=9482 ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹೆಚ್ಚುತ್ತಿರುವ ಬಿಸಿಲು ಮತ್ತು ಆರ್ದ್ರತೆಯಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಆರೋಗ್ಯ ಇಲಾಖೆಯು ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಾದ್ಯಂತ ಚಿಕಿತ್ಸಾ ಸೌಲಭ್ಯಗಳನ್ನು ಸಜ್ಜುಗೊಳಿಸಿದೆ.…

The post ಕರಾವಳಿಯಲ್ಲಿ ಬಿಸಿಲಿನ ಅಬ್ಬರ: ಆರೋಗ್ಯ ಇಲಾಖೆ ಕಟ್ಟೆಚ್ಚರ appeared first on Good News 24x7.

]]>

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹೆಚ್ಚುತ್ತಿರುವ ಬಿಸಿಲು ಮತ್ತು ಆರ್ದ್ರತೆಯಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಆರೋಗ್ಯ ಇಲಾಖೆಯು ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಾದ್ಯಂತ ಚಿಕಿತ್ಸಾ ಸೌಲಭ್ಯಗಳನ್ನು ಸಜ್ಜುಗೊಳಿಸಿದೆ.

ಆಸ್ಪತ್ರೆಗಳಲ್ಲಿ ವಿಶೇಷ ಸಿದ್ಧತೆ
ಬಿಸಿಲಿನ ತಾಪದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಿಗೆ ತಕ್ಷಣದ ಚಿಕಿತ್ಸೆ ನೀಡಲು ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಪ್ರತ್ಯೇಕ ಹಾಸಿಗೆಗಳನ್ನು ಮೀಸಲಿರಿಸಲಾಗಿದೆ:

ತಾಲೂಕು ಆಸ್ಪತ್ರೆಗಳು: ತಲಾ 5 ವಿಶೇಷ ಬೆಡ್‌ಗಳು.

ಸಮುದಾಯ ಆರೋಗ್ಯ ಕೇಂದ್ರಗಳು: ತಲಾ 2 ವಿಶೇಷ ಬೆಡ್‌ಗಳು.

ಚರ್ಮದ ಕಾಯಿಲೆಗಳ ಹೆಚ್ಚಳ
ಬಿಸಿಲಿನ ತೀವ್ರತೆಯಿಂದಾಗಿ ಜಿಲ್ಲೆಯಲ್ಲಿ ಚರ್ಮದ ಕಾಯಿಲೆಗಳು ಕಾಣಿಸಿಕೊಳ್ಳಲಾರಂಭಿಸಿವೆ. ವಿಶೇಷವಾಗಿ ಬೆವರು ಸಾಲೆ, ಚರ್ಮದ ತುರಿಕೆ ಮತ್ತು ಕಜ್ಜಿಯಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ದಿನವೊಂದಕ್ಕೆ ಸರಾಸರಿ 3 ರಿಂದ 5 ರೋಗಿಗಳು ಇಂತಹ ಲಕ್ಷಣಗಳೊಂದಿಗೆ ಚಿಕಿತ್ಸೆಗೆ ಬರುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಸೂಚನೆ
ಹೀಟ್ ಸ್ಟ್ರೋಕ್ ಸೇರಿದಂತೆ ಬಿಸಿಲಿನಿಂದ ಉಂಟಾಗುವ ಯಾವುದೇ ಪ್ರಕರಣಗಳು ದಾಖಲಾದಲ್ಲಿ, ತಕ್ಷಣವೇ ಮಾಹಿತಿಯನ್ನು ಆರೋಗ್ಯ ಇಲಾಖೆಯ ವೆಬ್ ಪೋರ್ಟಲ್‌ನಲ್ಲಿ ದಾಖಲಿಸುವಂತೆ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಓಆರ್‌ಎಸ್ (ORS) ಕಾರ್ನರ್ ಸೌಲಭ್ಯ
ನಿರ್ಜಲೀಕರಣ ತಡೆಗಟ್ಟಲು ಜಿಲ್ಲಾಸ್ಪತ್ರೆಯಿಂದ ಹಿಡಿದು ಪ್ರಾಥಮಿಕ ಆರೋಗ್ಯ ಕೇಂದ್ರಗಳವರೆಗೆ ‘ಓಆರ್‌ಎಸ್ ಕಾರ್ನರ್’ಗಳನ್ನು ಸ್ಥಾಪಿಸಲಾಗಿದೆ. ಔಷಧಗಳ ಕೊರತೆಯಾಗದಂತೆ ಸ್ಥಳೀಯವಾಗಿಯೇ ಖರೀದಿಸಲು ಅವಕಾಶ ನೀಡಲಾಗಿದ್ದು, ಕಳೆದ ಒಂದು ವಾರದಿಂದ ಓಆರ್‌ಎಸ್ ಪ್ಯಾಕೆಟ್‌ಗಳ ಬಳಕೆ ಗಣನೀಯವಾಗಿ ಹೆಚ್ಚಾಗಿದೆ.

ಗಮನಿಸಿ: ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಅವರ ನೇತೃತ್ವದಲ್ಲಿ ಮಂಗಳವಾರ ವಿಶೇಷ ಸಭೆ ನಡೆದಿದ್ದು, ಬಿಸಿಲಿನಿಂದ ಗಂಭೀರ ಸಮಸ್ಯೆ ಎದುರಾದ ರೋಗಿಗಳನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ರವಾನಿಸಲು ಸೂಚಿಸಲಾಗಿದೆ. ಸದ್ಯದ ಮಾಹಿತಿಯ ಪ್ರಕಾರ ಜಿಲ್ಲೆಯಲ್ಲಿ ಈವರೆಗೆ ಯಾವುದೇ ಅಧಿಕೃತ ಹೀಟ್ ಸ್ಟ್ರೋಕ್ ಪ್ರಕರಣಗಳು ವರದಿಯಾಗಿಲ್ಲ.

The post ಕರಾವಳಿಯಲ್ಲಿ ಬಿಸಿಲಿನ ಅಬ್ಬರ: ಆರೋಗ್ಯ ಇಲಾಖೆ ಕಟ್ಟೆಚ್ಚರ appeared first on Good News 24x7.

]]>
ಜಮೀರ್–ಮಲ್ಲಿಕಾರ್ಜುನ ಸ್ನೇಹ ಗಟ್ಟಿ: ಪ್ರಚಾರಕ್ಕೆ ಬರುತ್ತಾರೆ ಎಂಬಿ ಪಾಟೀಲ್ ವಿಶ್ವಾಸ. https://www.goodnews24x7.com/jameer-mallikarjuna-friendship-mb-patil-confident-of-campaigning/ Sat, 28 Mar 2026 12:33:56 +0000 https://www.goodnews24x7.com/?p=9014 ಬೆಂಗಳೂರು: ದಾವಣಗೆರೆ ದಕ್ಷಿಣ ಉಪ ಚುನಾವಣೆಗೆ ಸ್ಟಾರ್ ಕ್ಯಾಂಪೇನರ್ ಪಟ್ಟಿಯ ಕೊನೆಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಹೆಸರು ಇರುವ ವಿಚಾರವಾಗಿ ಎಂಬಿ ಪಾಟೀಲ್ ಪ್ರತಿಕ್ರಿಯೆ ನೀಡಿ, ‘ಜಮೀರ್ ಬಂದೇ ಬರ್ತಾರೆ. ಅವರು ಕೇರಳದಲ್ಲಿದ್ದಾರೆ, ನಾನು ಅಲ್ಲೇ ಹೋಗಬೇಕಿತ್ತು ಎಂದರು.…

The post ಜಮೀರ್–ಮಲ್ಲಿಕಾರ್ಜುನ ಸ್ನೇಹ ಗಟ್ಟಿ: ಪ್ರಚಾರಕ್ಕೆ ಬರುತ್ತಾರೆ ಎಂಬಿ ಪಾಟೀಲ್ ವಿಶ್ವಾಸ. appeared first on Good News 24x7.

]]>

ಬೆಂಗಳೂರು: ದಾವಣಗೆರೆ ದಕ್ಷಿಣ ಉಪ ಚುನಾವಣೆಗೆ ಸ್ಟಾರ್ ಕ್ಯಾಂಪೇನರ್ ಪಟ್ಟಿಯ ಕೊನೆಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಹೆಸರು ಇರುವ ವಿಚಾರವಾಗಿ ಎಂಬಿ ಪಾಟೀಲ್ ಪ್ರತಿಕ್ರಿಯೆ ನೀಡಿ, ‘ಜಮೀರ್ ಬಂದೇ ಬರ್ತಾರೆ. ಅವರು ಕೇರಳದಲ್ಲಿದ್ದಾರೆ, ನಾನು ಅಲ್ಲೇ ಹೋಗಬೇಕಿತ್ತು ಎಂದರು. ದಾವಣಗೆರೆ ಟಿಕೆಟ್ ವಿಚಾರವಾಗಿ ಜಮೀರ್ ಅವರಿಗೆ ಸಿಟ್ಟು ಇರಬಹುದು. ಸಮುದಾಯಕ್ಕೆ ಟಿಕೆಟ್ ಸಿಗಲಿಲ್ಲ ಅಂತ ಬೇಸರ ಇರಬಹುದು. ಎಲ್ಲಾ ಸಮುದಾಯಗಳಲ್ಲೂ ಇರುತ್ತದೆ. ನಾವು ಲಿಂಗಾಯತ ಸಮುದಾಯಕ್ಕೆ ಸಿಗಬೇಕು ಅಂತೇವೆ, ದಲಿತ ನಾಯಕರು ಅವರ ಸಮುದಾಯಕ್ಕೆ ಕೇಳ್ತಾರೆ. ಇದರಲ್ಲಿ ತಪ್ಪೇನಿದೆ ಎಂದು ಸಮರ್ಥಿಸಿಕೊಂಡರು.

ಸಚಿವ ಜಮೀರ್ ಅವರು ಅವರ ಸಮುದಾಯನ್ನು ಪ್ರತಿನಿಧಿಸುತ್ತಾರೆ. ಹಾಗಾಗಿ ಅವರು ಮುಸ್ಲಿಮರಿಗೆ ಟಿಕೆಟ್ ಕೆಳೋದ್ರಲ್ಲಿ ತಪ್ಪೇನಿಲ್ಲ. ಜಮೀರ್ ಹಾಗೂ ಮಲ್ಲಿಕಾರ್ಜುನ್ ಆತ್ಮೀಯ‌ ಸ್ನೇಹಿತರು. ಅವರು ಯಾವಾಗ ಒಟ್ಟಿಗೆ ಕಾಣ್ತಾರೋ‌ ಗೊತ್ತಾಗಲ್ಲ. ನಮಗೆ ಅವರ ಬಗ್ಗೆ ಗೊತ್ತು.ಇಬ್ಬರು ಒಳ್ಳೆ ಸ್ನೇಹಿತರು ಎಂದರು. ಹರಿದ ಬಟ್ಟೆ ತೇಪೆ ಹಾಕಬಹುದಷ್ಟೇ
ದಾವಣಗೆರೆ ದಕ್ಷಿಣದ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅಭ್ಯರ್ಥಿತನ ವಾಪಸ್ ಪಡೆದಿರಬಹುದು; ಹರಿದ ಬಟ್ಟೆಯನ್ನು ತೇಪೆ ಹಾಕಬಹುದೇ ಹೊರತು ಅದು ಹೊಸ ಬಟ್ಟೆ ಆಗುವುದಿಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ವಿಶ್ಲೇಷಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡಿ ಪ್ರಶ್ನೆಗೆ ಉತ್ತರಿಸಿದರು. ತುಂಡಾದ ಹಗ್ಗಕ್ಕೆ ಗಂಟು ಹಾಕಬಹುದೇ ಹೊರತು ಅದು ಹೊಸ ಹಗ್ಗ ಆಗುವುದಿಲ್ಲ ಎಂದರು. ಮುಸಲ್ಮಾನ ಬಂಧುಗಳೆಲ್ಲ ನಮಗೆ ಮತ ಹಾಕುತ್ತಾರೆಂದು ನಾನು ಹೇಳಲಾರೆ. ಯಾಕೆಂದರೆ ಕಾಂಗ್ರೆಸ್ಸಿನವರು ಅವರ ತಲೆಗೆ ಬಿಟ್ಟ ಹುಳಗಳು ಸತ್ತಿಲ್ಲ; ಅವು ಬದುಕಿವೆ ಎಂದು ನುಡಿದರು. ಅವರನ್ನು ದಾರಿ ತಪ್ಪಿಸಿ ನಿಮ್ಮ ಮತಬ್ಯಾಂಕ್ ಮಾಡಿದ್ದೀರಿ. ಅವರೆಲ್ಲ ವಿರೋಧ ಮಾಡಿದರೂ ದೇಶ ಆಳುತ್ತಿದ್ದೇವೆ. ಮುಸಲ್ಮಾನರು ಭಾರತದಲ್ಲಿ ಸುಭದ್ರವಾಗಿ ಬದುಕುತ್ತಿದ್ದಾರೆ ಎಂದು ತಿಳಿಸಿದರು.

ಕೇವಲ ಮುಸಲ್ಮಾನರಿರುವ ಪಾಕಿಸ್ತಾನ, ಬಾಂಗ್ಲಾದೇಶ, ಅಪಘಾನಿಸ್ತಾನದಲ್ಲಿ ಎಷ್ಟು ಸಮಸ್ಯೆಗಳಿವೆ ನೋಡಿ ಎಂದು ಕೇಳಿದರು. ಬಾಬಾ ಸಾಹೇಬ ಅಂಬೇಡ್ಕರರ ಸಂವಿಧಾನ ಎಲ್ಲ ರೀತಿಯ ರಕ್ಷಣೆಯನ್ನು ಅವರಿಗೂ ಕೊಟ್ಟಿದೆ. ಆದ್ದರಿಂದ ಅವರು ಸುಭದ್ರತೆಯಿಂದ ಬದುಕುತ್ತಿದ್ದಾರೆ ಎಂದು ತಿಳಿಸಿದರು. ಮನುವಾದ ಬದುಕಿರುವುದು ಕಾಂಗ್ರೆಸ್ಸಿನ ತಲೆಯಲ್ಲಿ ಮಾತ್ರ ಎಂದು ಟೀಕಿಸಿದರು. ಸರ್ವರಿಗೂ ಸಮಪಾಲು, ಸಮಬಾಳು ಕೊಡುವುದು ಬಿಜೆಪಿಯ ಕರ್ತವ್ಯ. ಅದನ್ನು ಮಾಡುತ್ತಿದ್ದೇವೆ ಎಂದರು. ಕಾಂಗ್ರೆಸ್ಸಿಗರೇ, ಬಿಜೆಪಿ ಗುಮ್ಮ ತೋರಿಸಿ ಎಷ್ಟು ದಿನ ನೀವು ಮುಸಲ್ಮಾನರನ್ನು ಇಟ್ಟುಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದರು. ಅವರಲ್ಲೂ ಯುವಕರು, ತಿಳಿದವರು ಇದ್ದು ಯೋಚನೆ ಮಾಡುತ್ತಾರೆ. ಕಾಂಗ್ರೆಸ್ ನಮಗೇನು ಮಾಡಿದೆ? ಪ್ರಧಾನಮಂತ್ರಿ ಮೋದಿಯವರು ನಮಗೇನಾದರೂ ಅನ್ಯಾಯ, ವಂಚನೆ ಮಾಡಿದ್ದಾರಾ ಎಂದು ಯೋಚಿಸುತ್ತಾರೆ. ಆ ಜನಾಂಗಗಳು ಯೋಚನೆ ಮಾಡಿ ಸ್ವಾಭಿಮಾನವನ್ನು ಉಳಿಸಿಕೊಳ್ಳಲಿ ಎಂದು ಕಿವಿಮಾತು ಹೇಳಿದರು.

The post ಜಮೀರ್–ಮಲ್ಲಿಕಾರ್ಜುನ ಸ್ನೇಹ ಗಟ್ಟಿ: ಪ್ರಚಾರಕ್ಕೆ ಬರುತ್ತಾರೆ ಎಂಬಿ ಪಾಟೀಲ್ ವಿಶ್ವಾಸ. appeared first on Good News 24x7.

]]>