conference Archives - Good News 24x7 https://www.goodnews24x7.com/tag/conference/ Kannada Mon, 18 Aug 2025 08:15:38 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg conference Archives - Good News 24x7 https://www.goodnews24x7.com/tag/conference/ 32 32 ಮುಧೋಳ್ ಚಿತ್ರದ ಅಪ್‌ಡೇಟ್ ನೀಡಿದ ವಿಕ್ರಂ ರವಿಚಂದ್ರನ್! https://www.goodnews24x7.com/vikram-ravichandran-gives-an-update-on-the-film-mudhol/ Mon, 18 Aug 2025 08:15:38 +0000 https://www.goodnews24x7.com/?p=6351 ಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ, ನಟ ವಿಕ್ರಂ ರವಿಚಂದ್ರನ್ ತಮ್ಮ ಹುಟ್ಟುಹಬ್ಬದಂದೇ ವಿಶೇಷವಾದ ಘೋಷಣೆಯೊಂದನ್ನು ಮಾಡಿ ಚಿತ್ರೋದ್ಯಮದ ಗಮನ ಸೆಳೆದಿದ್ದಾರೆ. ಅವರ ಡ್ರೀಮ್ ಪ್ರಾಜೆಕ್ಟ್ ಆಗಿರುವ ‘ಮುಧೋಳ್’ ಚಿತ್ರಕ್ಕೆ now ಹೊಸ ಶಕ್ತಿ ಸಿಕ್ಕಿದ್ದು ಖ್ಯಾತ ಉದ್ಯಮಿ ಹಾಗೂ ನಿರ್ಮಾಪಕ…

The post ಮುಧೋಳ್ ಚಿತ್ರದ ಅಪ್‌ಡೇಟ್ ನೀಡಿದ ವಿಕ್ರಂ ರವಿಚಂದ್ರನ್! appeared first on Good News 24x7.

]]>

ಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ, ನಟ ವಿಕ್ರಂ ರವಿಚಂದ್ರನ್ ತಮ್ಮ ಹುಟ್ಟುಹಬ್ಬದಂದೇ ವಿಶೇಷವಾದ ಘೋಷಣೆಯೊಂದನ್ನು ಮಾಡಿ ಚಿತ್ರೋದ್ಯಮದ ಗಮನ ಸೆಳೆದಿದ್ದಾರೆ.

ಅವರ ಡ್ರೀಮ್ ಪ್ರಾಜೆಕ್ಟ್ ಆಗಿರುವ ‘ಮುಧೋಳ್’ ಚಿತ್ರಕ್ಕೆ now ಹೊಸ ಶಕ್ತಿ ಸಿಕ್ಕಿದ್ದು ಖ್ಯಾತ ಉದ್ಯಮಿ ಹಾಗೂ ನಿರ್ಮಾಪಕ ವಿಜಯ್ ಟಾಟಾ ಅವರ *ಅಮೃತ ಸಿನಿ ಕ್ರಾಫ್ಟ್* ಕಂಪನಿಯ ಮೂಲಕ. ಈ ಪ್ರೊಡಕ್ಷನ್ ಹೌಸ್ ಚಿತ್ರ ನಿರ್ಮಾಣದ ಜೊತೆಗೆ ವಿತರಣೆ, ಮಾರ್ಕೆಟಿಂಗ್ ಹಾಗೂ ಇತರ ಚಿತ್ರಗಳ ಜೊತೆಗೆ ಸಹಕಾರಿಯೂ ಮುಂದಾಗುತ್ತಿದೆ ಎಂಬುದು ಒಂದು ದೊಡ್ಡ ಬೆಳವಣಿಗೆ.

ಪತ್ರಿಕಾಗೋಷ್ಠಿಯಲ್ಲಿ ವಿಶೇಷ ಘೋಷಣೆ : ಈ ವಿಷಯ ತಿಳಿಸಲು ವಿಶೇಷವಾಗಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ನಟ ವಿಕ್ರಂ ರವಿಚಂದ್ರನ್, ನಿರ್ಮಾಪಕಿ ರಕ್ಷಾ ಹಾಗೂ ವಿಜಯ್ ಟಾಟಾ ಉಪಸ್ಥಿತರಿದ್ದರು. ಈ ಸಂದರ್ಭ ಮಾತನಾಡಿದ ವಿಕ್ರಂ,“ನನ್ನ ಹುಟ್ಟುಹಬ್ಬವನ್ನು ಸಾಮಾನ್ಯವಾಗಿ ನಾನು ಆಚರಿಸೋಲ್ಲ. ಆದರೆ ಈ ಬಾರಿ ವಿಜಯ್ ಸರ್ ವಿಶಿಷ್ಟವಾದ ಘೋಷಣೆ ಮಾಡೋಣ ಎಂದು ಸಲಹೆ ನೀಡಿದರು. ನಾನು ರವಿಚಂದ್ರನ್ ಸರ್ ಮಗ ಎಂಬುದು ಎಲ್ಲರಿಗೂ ಗೊತ್ತು. ನನ್ನ ಎರಡನೇ ಸಿನಿಮಾದಾಗಿನಿಂದಲೇ ನಿರ್ಮಾಪಕಿ ರಕ್ಷಾ ಮೇಡಂ ಬೆಂಬಲ ನೀಡುತ್ತಿದ್ದಾರೆ.”

“ನನ್ನ ಡ್ರೀಮ್ ಪ್ರಾಜೆಕ್ಟ್‌ಗೆ ಸಪೋರ್ಟ್ ಬೇಕಿತ್ತು. ಆ ಸಮಯದಲ್ಲಿ ಟ್ಯಾಲೆಂಟ್‌ಡ್ ಡೈರೆಕ್ಟರ್ ಕಾರ್ತಿಕ್ ರಾಜು ಸಿಕ್ಕರು. ನಾನು, ಕಾರ್ತಿಕ್ ಮತ್ತು ನಿರ್ಮಾಪಕರು ಸೇರಿ ಚರ್ಚೆ ನಡೆಸಿದಾಗ ‘ಮುಧೋಳ್’ ಮೂಡಿಬಂತು. ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತು. ನಂತರ ನಿರ್ಮಾಪಕಿ ರಕ್ಷಾ ಮೇಡಂ ಈ ಯೋಜನೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು.”

ವಿಜಯ್ ಟಾಟಾ ಜೊತೆ ಕೊಲಾಬ್ರೇಶನ್ ಹೇಗೆ ಶುರುವಾಯ್ತು?
ವಿಕ್ರಂ ಅವರಲ್ಲಿ ಉತ್ತಮ ಗೆಳೆಯನಾಗಿರುವ ದಿಲ್ ಸೆ ದಿಲೀಪ್ ಅವರು ಡೈರೆಕ್ಟರ್ ಋಷಿ ಅವರ ಕಥೆಯನ್ನು ಪರಿಚಯಿಸಿದರು. ಆ ಕಥೆ ಇಷ್ಟವಾದ ವಿಕ್ರಂ, ಚಿತ್ರ ನಿರ್ಮಾಪಕರಾದ ವಿಜಯ್ ಟಾಟಾ ಅವರ ಜೊತೆಗೆ ಕೆಲಸ ಮಾಡಬೇಕು ಎಂದು ನಿರ್ಧರಿಸಿದರು.

“ಒಮ್ಮೆ ಭೇಟಿಯಾದ ನಂತರ, ‘ಮುಧೋಳ್’ ಚಿತ್ರವನ್ನೂ ವಿಜಯ್ ಸರ್‌ಗೆ ತೋರಿಸಿದ್ದೆವು. ಅವರಿಗೆ ಇಷ್ಟವಾಯಿತು. ನಂತರ ನಿರ್ಮಾಪಕಿ ರಕ್ಷಾ ಮೇಡಂ ಹಾಗೂ ವಿಜಯ್ ಸರ್ ನಡುವೆ ಚರ್ಚೆ ನಡೆಯಿತು. ಅಂತಿಮವಾಗಿ ‘ಅಮೃತ ಸಿನಿ ಕ್ರಾಫ್ಟ್’ ಈ ಚಿತ್ರದ ಸಹ ನಿರ್ಮಾಪಕರಾಗಿ ಸೇರಿದ್ದು, ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ತಲುಪಿಸಲು ಕೈಜೋಡಿಸಿದ್ದಾರೆ.”

ಹೊಸ ಶಕ್ತಿಯ ಜೊತೆ ಮುಂದೆ ಸಾಗುತ್ತಿರುವ ‘ಮುಧೋಳ್’ ಟೀಮ್ : ಈ ಕೊಲಾಬ್ರೇಶನ್ ಮೂಲಕ ‘ಮುಧೋಳ್’ ಚಿತ್ರ ತಂಡ ಈಗ ಲಿಷ್ಠವಾಗಿದ್ದು, ಸಿನಿಮಾಗೆ ತಕ್ಕ ಮಟ್ಟದ ಪ್ಲಾಟ್‌ಫಾರ್ಮ್ ಸಿಗಲಿದೆ ಎನ್ನುವ ವಿಶ್ವಾಸವಿದೆ. ಚಿತ್ರದ ಬಹುತೇಕ ವಿಭಾಗಗಳಲ್ಲಿ ಹೊಸ ಪ್ರತಿಭೆಗಳಿದ್ದು, ಈ ಚಿತ್ರ ಎಲ್ಲರಿಗೂ ಸ್ಫೂರ್ತಿದಾಯಕವಾಗಬೇಕು ಎಂಬ ಆಶಯವನ್ನು ವಿಕ್ರಂ ವ್ಯಕ್ತಪಡಿಸಿದ್ದಾರೆ.

The post ಮುಧೋಳ್ ಚಿತ್ರದ ಅಪ್‌ಡೇಟ್ ನೀಡಿದ ವಿಕ್ರಂ ರವಿಚಂದ್ರನ್! appeared first on Good News 24x7.

]]>
ಬಳ್ಳಾರಿಯಲ್ಲಿ ನಡೆಯುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬಾನು ಮುಷ್ತಾಕ್ ಆಯ್ಕೆ. https://www.goodnews24x7.com/banu-mushtaq-elected-as-president-of-the-88th-all-india-kannada-sahitya-sammelana-to-be-held-in-bellary/ Mon, 30 Jun 2025 05:32:55 +0000 https://www.goodnews24x7.com/?p=4832 ಬಳ್ಳಾರಿ: ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದ ಕನ್ನಡದ ಹಿರಿಯ ಮಹಿಳಾ ಸಾಹಿತಿ ಬಾನು ಮುಷ್ತಾಕ್ ಅವರನ್ನು 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಬಳ್ಳಾರಿಯ ಖಾಸಗಿ ಹೋಟೆಲ್ನಲ್ಲಿ ಕಸಾಪ ಅಧ್ಯಕ್ಷ ನಾಡೋಜ ಮಹೇಶ್ ಜೋಶಿ…

The post ಬಳ್ಳಾರಿಯಲ್ಲಿ ನಡೆಯುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬಾನು ಮುಷ್ತಾಕ್ ಆಯ್ಕೆ. appeared first on Good News 24x7.

]]>

ಬಳ್ಳಾರಿ: ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದ ಕನ್ನಡದ ಹಿರಿಯ ಮಹಿಳಾ ಸಾಹಿತಿ ಬಾನು ಮುಷ್ತಾಕ್ ಅವರನ್ನು 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.

ಬಳ್ಳಾರಿಯ ಖಾಸಗಿ ಹೋಟೆಲ್ನಲ್ಲಿ ಕಸಾಪ ಅಧ್ಯಕ್ಷ ನಾಡೋಜ ಮಹೇಶ್ ಜೋಶಿ ನೇತೃತ್ವದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ಎಲ್ಲ ಪದಾಧಿಕಾರಿಗಳು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಲಾಗಿದೆ.

ಇನ್ನು ಈ ಸಭೆ ಬಳಿಕ ಮಾತನಾಡಿದ ಕಸಾಪ ಅಧ್ಯಕ್ಷ ಮಹೇಶ ಜೋಷಿ ಅವರು, ಇದೇ ಡಿಸೆಂಬರ್ನಲ್ಲಿ ಬಳ್ಳಾರಿಯಲ್ಲಿ ನಡೆಯಲಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಲೇಖಕಿ ಹಾಗೂ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಇದರ ಜೊತೆಗೆ ದೀಪ ಬಾಸ್ತಿ ಅವರನ್ನು ಸಮ್ಮೇಳನದಲ್ಲಿ ಗೌರವಿಸಲಾಗುತ್ತದೆ ಎಂದು ಹೇಳಿದ್ದಾರೆ.

 

ಕನ್ನಡದ ಪ್ರಸಿದ್ಧ ಮಹಿಳಾ ಸಾಹಿತಿ ಹಾಸನ ಜಿಲ್ಲೆಯ ಬಾನು ಮುಷ್ತಾಕ್ ಅವರು ಬರೆದ ಸಣ್ಣ ಕಥಾಸಂಕಲನ ಹಾರ್ಟ್ ಲ್ಯಾಂಪ್ (ಎದೆಯ ಹಣತೆ) ಕೃತಿಯನ್ನು ಇಂಗ್ಲೀಷ್ಗೆ ಟ್ರಾನ್ಸ್ಲೇಟ್ ಮಾಡಿದವರೇ ಮಡಿಕೇರಿ ಮೂಲದ ಅನುವಾದಕಿ ದೀಪಾ ಬಸ್ತಿ ಅವರು. ಲಂಡನ್ನಲ್ಲಿ ಪ್ರಶಸ್ತಿ ಪಡೆಯುವಾಗ ದೀಪಾ ಬಸ್ತಿ ಕೂಡ ಬಾನು ಮುಷ್ತಾಕ್ ಅವರ ಜೊತೆಯಲ್ಲಿದ್ದರು. 2025ರ ಮೇ 21ರಂದು ನಡೆದ ಸಮಾರಂಭದಲ್ಲಿ ಈ ಇಬ್ಬರು ಬೂಕರ್ ಪ್ರಶಸ್ತಿ ಸ್ವೀಕರಿಸಿದ್ದರು.

 

The post ಬಳ್ಳಾರಿಯಲ್ಲಿ ನಡೆಯುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬಾನು ಮುಷ್ತಾಕ್ ಆಯ್ಕೆ. appeared first on Good News 24x7.

]]>