consumer Archives - Good News 24x7 https://www.goodnews24x7.com/tag/consumer/ Kannada Sun, 30 Aug 2026 11:42:41 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg consumer Archives - Good News 24x7 https://www.goodnews24x7.com/tag/consumer/ 32 32 FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ! https://www.goodnews24x7.com/fssai-displeased-everest-and-lg-asafoetida-powder-banned/ Sun, 30 Aug 2026 11:42:41 +0000 https://www.goodnews24x7.com/?p=9942 ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಪ್ರಸಿದ್ಧ ‘ಎವರೆಸ್ಟ್ ಫುಡ್ ಪ್ರಾಡಕ್ಟ್ಸ್’ ಹಾಗೂ ‘ಲಾಲ್ಜಿ ಗೋಧು (LG)’ ಕಂಪನಿಗಳ ಇಂಗಿನ ಪುಡಿ (Asafoetida) ಮಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿದೆ. ಇತ್ತೀಚೆಗೆ ನಡೆದ ಪ್ರಯೋಗಾಲಯ ಪರೀಕ್ಷೆಗಳಲ್ಲಿ ಈ ಎರಡೂ…

The post FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ! appeared first on Good News 24x7.

]]>

ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಪ್ರಸಿದ್ಧ ‘ಎವರೆಸ್ಟ್ ಫುಡ್ ಪ್ರಾಡಕ್ಟ್ಸ್’ ಹಾಗೂ ‘ಲಾಲ್ಜಿ ಗೋಧು (LG)’ ಕಂಪನಿಗಳ ಇಂಗಿನ ಪುಡಿ (Asafoetida) ಮಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿದೆ. ಇತ್ತೀಚೆಗೆ ನಡೆದ ಪ್ರಯೋಗಾಲಯ ಪರೀಕ್ಷೆಗಳಲ್ಲಿ ಈ ಎರಡೂ ಬ್ರ್ಯಾಂಡ್‌ಗಳ ಇಂಗಿನ ಮಾದರಿಗಳು ನಿಗದಿತ ಆಹಾರ ಸುರಕ್ಷತಾ ಮಾನದಂಡಗಳನ್ನು ಪೂರೈಸುವಲ್ಲಿ ವಿಫಲವಾಗಿದ್ದು, ಕಳಪೆ ಗುಣಮಟ್ಟದಿಂದ ಕೂಡಿವೆ ಎಂಬುದು ದೃಢಪಟ್ಟಿದೆ.

ಸಾಮಾಜಿಕ ಜಾಲತಾಣದ ಅಧಿಕೃತ ಪೋಸ್ಟ್ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿರುವ FSSAI, ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಈ ಕಠಿಣ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ. ಜೊತೆಗೆ, ನಿಯಮಾವಳಿಗಳಿಗೆ ಅನುಗುಣವಾಗಿ ಉತ್ಪನ್ನದ ಗುಣಮಟ್ಟವನ್ನು ತಕ್ಷಣವೇ ಸುಧಾರಿಸಲು ಎರಡೂ ಸಂಸ್ಥೆಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ.

The post FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ! appeared first on Good News 24x7.

]]>
ವಾಹನ ಸವಾರರಿಗೆ ಇಂಧನ ಬೆಲೆ ಏರಿಕೆ ಬರೆ: ಪೆಟ್ರೋಲ್, ಡೀಸೆಲ್ ಬೆನ್ನಲ್ಲೇ ಈಗ ಸಿಎನ್‌ಜಿ ದರವೂ ದುಬಾರಿ! https://www.goodnews24x7.com/fuel-price-hike-for-motorists-after-petrol-and-diesel-now-cng-price-is-also-expensive%e0%b2%b5%e0%b2%be%e0%b2%b9%e0%b2%a8-%e0%b2%b8%e0%b2%b5%e0%b2%be%e0%b2%b0%e0%b2%b0%e0%b2%bf%e0%b2%97%e0%b3%86/ Tue, 26 May 2026 05:57:52 +0000 https://www.goodnews24x7.com/?p=9531 ಪೆಟ್ರೋಲ್ ಮತ್ತು ಡೀಸೆಲ್ ದರಗಳು ಸತತ ನಾಲ್ಕು ಬಾರಿ ಏರಿಕೆಯಾದ ಬೆನ್ನಲ್ಲೇ, ವಾಹನ ಸವಾರರಿಗೆ ಈಗ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ಬೆಲೆಗಳು ನಿರಂತರವಾಗಿ ಹೆಚ್ಚುತ್ತಿರುವುದರಿಂದ, ಕೇವಲ ಎರಡು ವಾರಗಳ ಅವಧಿಯಲ್ಲಿ ನಾಲ್ಕನೇ ಬಾರಿಗೆ ಸಿಎನ್‌ಜಿ (CNG)…

The post ವಾಹನ ಸವಾರರಿಗೆ ಇಂಧನ ಬೆಲೆ ಏರಿಕೆ ಬರೆ: ಪೆಟ್ರೋಲ್, ಡೀಸೆಲ್ ಬೆನ್ನಲ್ಲೇ ಈಗ ಸಿಎನ್‌ಜಿ ದರವೂ ದುಬಾರಿ! appeared first on Good News 24x7.

]]>

ಪೆಟ್ರೋಲ್ ಮತ್ತು ಡೀಸೆಲ್ ದರಗಳು ಸತತ ನಾಲ್ಕು ಬಾರಿ ಏರಿಕೆಯಾದ ಬೆನ್ನಲ್ಲೇ, ವಾಹನ ಸವಾರರಿಗೆ ಈಗ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ಬೆಲೆಗಳು ನಿರಂತರವಾಗಿ ಹೆಚ್ಚುತ್ತಿರುವುದರಿಂದ, ಕೇವಲ ಎರಡು ವಾರಗಳ ಅವಧಿಯಲ್ಲಿ ನಾಲ್ಕನೇ ಬಾರಿಗೆ ಸಿಎನ್‌ಜಿ (CNG) ದರವನ್ನು ಹೆಚ್ಚಿಸಲಾಗಿದೆ. ಪರಿಷ್ಕೃತ ದರಗಳ ಪ್ರಕಾರ, ದೇಶದ ರಾಜಧಾನಿ ದೆಹಲಿಯಲ್ಲಿ ಸಿಎನ್‌ಜಿ ಬೆಲೆ ಪ್ರತಿ ಕೆಜಿಗೆ 83 ರೂಪಾಯಿ 09 ಪೈಸೆಗೆ ತಲುಪಿದ್ದು, ಈ ಹೊಸ ದರವು ಮೇ 26 ರ ಬೆಳಿಗ್ಗೆ 6 ಗಂಟೆಯಿಂದಲೇ ಜಾರಿಗೆ ಬಂದಿದೆ. ಸೋಮವಾರವಷ್ಟೇ ಇಂಧನ ದರ ಲೀಟರ್‌ಗೆ 2 ರೂಪಾಯಿ 83 ಪೈಸೆ ಹೆಚ್ಚಳವಾಗಿದ್ದರಿಂದ ಕಂಗಾಲಾಗಿದ್ದ ಜನಸಾಮಾನ್ಯರಿಗೆ, ಈಗ ಸಿಎನ್‌ಜಿ ಬೆಲೆ ಏರಿಕೆಯೂ ಗಾಯದ ಮೇಲೆ ಉಪ್ಪನ್ನು ಸವರಿದಂತಾಗಿದೆ. ಆದರೆ ಸದ್ಯಕ್ಕಂತೂ ಗೃಹಬಳಕೆಯ ಪೈಪ್ಡ್ ನೈಸರ್ಗಿಕ ಅನಿಲದ (PNG) ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲದಿರುವುದು ಗ್ರಾಹಕರಿಗೆ ಸಣ್ಣ ಸಮಾಧಾನ ತಂದಿದೆ.

ಕೈಗಾರಿಕಾ ಮೂಲಗಳ ಪ್ರಕಾರ, ಅಮೆರಿಕ ಹಾಗೂ ಇರಾನ್ ನಡುವಿನ ರಾಜತಾಂತ್ರಿಕ ಸಂಘರ್ಷ ಮತ್ತು ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ‘ಹಾರ್ಮೊಜ್ ಜಲಸಂಧಿ’ಯಲ್ಲಿ ಉಂಟಾಗಿರುವ ಅಡಚಣೆಯ ಭೀತಿಯೇ ಈ ಬೆಲೆ ಏರಿಕೆಗೆ ಮುಖ್ಯ ಕಾರಣ ಎನ್ನಲಾಗಿದೆ. ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಗಳು ತೀವ್ರ ಏರಿಳಿತ ಕಾಣುತ್ತಿದ್ದು, ತೈಲ ಕಂಪನಿಗಳ ಮೇಲಿನ ಒತ್ತಡ ಹೆಚ್ಚಾಗಿದೆ. ಆದಾಗ್ಯೂ, ಸಾರ್ವಜನಿಕರನ್ನು ಈ ಬೆಲೆ ಏರಿಕೆಯ ಬಿಸಿಯಿಂದ ರಕ್ಷಿಸಲು ಕೇಂದ್ರ ಸರ್ಕಾರವು ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 10 ರೂಪಾಯಿಗಳಷ್ಟು ಕಡಿತಗೊಳಿಸಿದೆ. ಈ ಮೂಲಕ ಸರ್ಕಾರವು ಸುಮಾರು 14,000 ಕೋಟಿ ರೂಪಾಯಿಗಳಷ್ಟು ತೆರಿಗೆ ಆದಾಯವನ್ನು ಬಿಟ್ಟುಕೊಟ್ಟಿದೆ ಎಂದು ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಮಾಹಿತಿ ನೀಡಿದ್ದಾರೆ.

The post ವಾಹನ ಸವಾರರಿಗೆ ಇಂಧನ ಬೆಲೆ ಏರಿಕೆ ಬರೆ: ಪೆಟ್ರೋಲ್, ಡೀಸೆಲ್ ಬೆನ್ನಲ್ಲೇ ಈಗ ಸಿಎನ್‌ಜಿ ದರವೂ ದುಬಾರಿ! appeared first on Good News 24x7.

]]>
ಜಿಎಸ್‌ಟಿ ಕಡಿತದಿಂದ ರಾಜ್ಯಕ್ಕೆ ₹70,000 ಕೋಟಿ ನಷ್ಟ ಸಾಧ್ಯ: ಗೃಹ ಸಚಿವ ಜಿ. ಪರಮೇಶ್ವರ್. https://www.goodnews24x7.com/gst-cut-may-cost-state-rs-70000-crore-home-minister-g-parameshwara/ Fri, 05 Sep 2025 05:34:51 +0000 https://www.goodnews24x7.com/?p=7368 ಬೆಂಗಳೂರು : ಜಿಎಸ್‌ಟಿ ದರಗಳಲ್ಲಿ ಕೇಂದ್ರ ಸರ್ಕಾರ ಮಾಡಿರುವ ಕಡಿತದಿಂದ ಕರ್ನಾಟಕ ರಾಜ್ಯಕ್ಕೆ ಅಂದಾಜು ₹70,000 ಕೋಟಿ ಹಣಕಾಸು ನಷ್ಟ ಸಂಭವಿಸಬಹುದೆಂದು ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಜಿಎಸ್‌ಟಿ ಕಡಿತದ ನಿರ್ಧಾರವು ಸ್ವಾಗತಾರ್ಹವಾದುದು.…

The post ಜಿಎಸ್‌ಟಿ ಕಡಿತದಿಂದ ರಾಜ್ಯಕ್ಕೆ ₹70,000 ಕೋಟಿ ನಷ್ಟ ಸಾಧ್ಯ: ಗೃಹ ಸಚಿವ ಜಿ. ಪರಮೇಶ್ವರ್. appeared first on Good News 24x7.

]]>

ಬೆಂಗಳೂರು : ಜಿಎಸ್‌ಟಿ ದರಗಳಲ್ಲಿ ಕೇಂದ್ರ ಸರ್ಕಾರ ಮಾಡಿರುವ ಕಡಿತದಿಂದ ಕರ್ನಾಟಕ ರಾಜ್ಯಕ್ಕೆ ಅಂದಾಜು ₹70,000 ಕೋಟಿ ಹಣಕಾಸು ನಷ್ಟ ಸಂಭವಿಸಬಹುದೆಂದು ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಜಿಎಸ್‌ಟಿ ಕಡಿತದ ನಿರ್ಧಾರವು ಸ್ವಾಗತಾರ್ಹವಾದುದು. ಕೆಲ ಅಗತ್ಯ ವಸ್ತುಗಳಿಗೆ ಶೂನ್ಯ ಅಥವಾ ಶೇಕಡಾ 5ರಷ್ಟು ತೆರಿಗೆ ವಿಧಿಸಿರುವುದು ಸಮರ್ಥನೀಯ. ಆದರೆ ಇನ್ನೂ ಹಲವಾರು ಅಗತ್ಯ ದಿನಸಿ ಮತ್ತು ಬಳಕೆಯ ವಸ್ತುಗಳ ಮೇಲೆ ಹೆಚ್ಚಿದ ಜಿಎಸ್‌ಟಿ ದರಗಳು ಇದ್ದು, ಇದು ಸಾಮಾನ್ಯ ಜನರ ಮೇಲೆ ಆರ್ಥಿಕ ಬರುಡನ್ನುಂಟುಮಾಡುತ್ತದೆ,” ಎಂದು ತಿಳಿಸಿದರು.

“ಸಾಮಾನ್ಯ ಜನರಿಗೆ ನಿತ್ಯ ಬಳಕೆಯ ವಸ್ತುಗಳು ಕಡಿಮೆ ದರದಲ್ಲಿ ಸಿಗಬೇಕು ಎಂಬುದು ಕಾಂಗ್ರೆಸ್ ಪಕ್ಷದ ನಿರಂತರ ಒತ್ತಾಯವಾಗಿದೆ. ನಾವು ಕಳೆದ ಕೆಲವು ವರ್ಷಗಳಿಂದ ಜಿಎಸ್‌ಟಿ ಸರಳೀಕರಣದ ಬಗ್ಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದೆವು. ಈಗ ಅದರಲ್ಲಿ ಕೆಲವೊಂದು ಬದಲಾವಣೆಗಳು ಆಗಿರುವುದು ಸಕಾರಾತ್ಮಕ ಬೆಳವಣಿಗೆ,” ಎಂದರು.

ಆದರೆ, ತೆರಿಗೆ ಕಡಿತವಾದಾಗ ರಾಜ್ಯ ಸರ್ಕಾರಕ್ಕೂ ಆದಾಯದ ಕೊರತೆ ಎದುರಾಗುವುದು ಸಹಜ. ಈ ನಷ್ಟವನ್ನು ಸರಿಪಡಿಸಲು ಪರ್ಯಾಯ ಮಾರ್ಗಗಳನ್ನು ಅನ್ವೇಷಿಸಬೇಕಿದೆ. ಜೊತೆಗೆ, ಕೇಂದ್ರ ಸರ್ಕಾರವು ರಾಜ್ಯಗಳಿಗೆ ನೀಡುವ ಅನುದಾನ, ಹಾಗೂ ಅನಗತ್ಯ ಖರ್ಚುಗಳ ನಿಯಂತ್ರಣದ ಮೇಲೂ ಗಮನ ಹರಿಸಬೇಕಿದೆ ಎಂದು ಪರಮೇಶ್ವರ್ ಒತ್ತಾಯಿಸಿದರು.

ಮಂಗಳೂರು ಭೇಟಿ – ಪೊಲೀಸ್ ಅಧಿಕಾರಿಗಳೊಂದಿಗೆ ಸಮಾಲೋಚನೆ

ಮಂಗಳೂರು ನಗರಕ್ಕೆ ಭೇಟಿ ನೀಡಿದ ಗೃಹ ಸಚಿವರು, ನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಮಂಗಳೂರು ಕಮಿಷನರೇಟ್‌ನ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಜಿಲ್ಲೆಯ ಶಾಂತಿ-ಸುವ್ಯವಸ್ಥೆ ಹಾಗೂ ಇತ್ತೀಚೆಗೆ ಸಂಭವಿಸಿದ ಘಟನೆಗಳ ಕುರಿತು ಸಮಗ್ರ ಚರ್ಚೆ ನಡೆಯಿತು.

ಸಭೆಯಲ್ಲಿ ಚರ್ಚಿಸಲಾದ ಪ್ರಮುಖ ವಿಷಯಗಳು:

  • ಧರ್ಮಸ್ಥಳ ಪ್ರಕರಣ
  • ಹಬ್ಬಗಳ ಸಂದರ್ಭದಲ್ಲಿ ವಿಧಿಸಲಾಗಿರುವ ಸಮಯ ನಿರ್ಬಂಧಗಳು
  • ಡ್ರಗ್ಸ್ ಜಾಲ ವಿರುದ್ಧದ ಕ್ರಮಗಳು
  • ಕೆಂಪುಕಲ್ಲು ಮತ್ತು ಮರಳುಗಾರಿಕೆ ನಿಯಂತ್ರಣ
  • ವಿಶೇಷ ಕಾರ್ಯಪಡೆಯ ಕಾರ್ಯಾಚರಣೆಗಳು

ಈ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಡಾ. ಅರುಣ್ ಕೆ., ಉಡುಪಿ ಎಸ್‌ಪಿ ಹರಿರಾಮ್ ಶಂಕರ್, ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಡಿಸಿಪಿಗಳು ಮಿಥುನ್ ಎಚ್.ಎನ್. ಮತ್ತು ರವಿಶಂಕರ್ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಸಮಾಲೋಚನೆಯ ವೇಳೆ, ಗೃಹ ಸಚಿವರು ಶಾಂತಿ-ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದ್ದು, ರಾಜ್ಯ ಸರ್ಕಾರದಿಂದ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಭರವಸೆ ನೀಡಿದರು.

The post ಜಿಎಸ್‌ಟಿ ಕಡಿತದಿಂದ ರಾಜ್ಯಕ್ಕೆ ₹70,000 ಕೋಟಿ ನಷ್ಟ ಸಾಧ್ಯ: ಗೃಹ ಸಚಿವ ಜಿ. ಪರಮೇಶ್ವರ್. appeared first on Good News 24x7.

]]>