contestant Archives - Good News 24x7 https://www.goodnews24x7.com/tag/contestant/ Kannada Sun, 23 Nov 2025 06:43:44 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg contestant Archives - Good News 24x7 https://www.goodnews24x7.com/tag/contestant/ 32 32 ಅವರ ಮಾನ ಕಾಪಾಡಲು ನೀವ್ಯಾರು ಎಂದು ಅಶ್ವಿನಿಗೆ ಸುದೀಪ್ ನೇರ ಪ್ರಶ್ನೆ https://www.goodnews24x7.com/sudeep-asks-ashwini-directly-who-are-you-to-protect-her-honor/ Sun, 23 Nov 2025 06:43:44 +0000 https://www.goodnews24x7.com/?p=8250 Bigg Boss Kannada 12: ಬಿಗ್​​ಬಾಸ್ ಮನೆಯಲ್ಲಿರುವ ಅಶ್ವಿನಿ ಅವರು ಹೊರಗೆ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಆಗಾಗ್ಗೆ ಮನೆಯಲ್ಲೂ ಹೋರಾಟಗಾರ್ತಿ ಆಗುತ್ತಿರುತ್ತಾರೆ. ಆದರೆ ಕೆಲವೊಮ್ಮೆ ಅವಶ್ಯಕತೆ ಇಲ್ಲದಾಗಲೂ ಹೋರಾಟ ಮಾಡಲು ಮುಂದಾಗುತ್ತಾರೆ. ಅದರಲ್ಲೂ ಹೆಣ್ಣಿಗೆ ಹಾಗೆ ಮಾಡಬೇಡ, ಹಾಗೆ ಅನ್ನಬೇಡ ಎನ್ನುವುದು ಹೆಚ್ಚು.…

The post ಅವರ ಮಾನ ಕಾಪಾಡಲು ನೀವ್ಯಾರು ಎಂದು ಅಶ್ವಿನಿಗೆ ಸುದೀಪ್ ನೇರ ಪ್ರಶ್ನೆ appeared first on Good News 24x7.

]]>

Bigg Boss Kannada 12: ಬಿಗ್​​ಬಾಸ್ ಮನೆಯಲ್ಲಿರುವ ಅಶ್ವಿನಿ ಅವರು ಹೊರಗೆ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಆಗಾಗ್ಗೆ ಮನೆಯಲ್ಲೂ ಹೋರಾಟಗಾರ್ತಿ ಆಗುತ್ತಿರುತ್ತಾರೆ. ಆದರೆ ಕೆಲವೊಮ್ಮೆ ಅವಶ್ಯಕತೆ ಇಲ್ಲದಾಗಲೂ ಹೋರಾಟ ಮಾಡಲು ಮುಂದಾಗುತ್ತಾರೆ. ಅದರಲ್ಲೂ ಹೆಣ್ಣಿಗೆ ಹಾಗೆ ಮಾಡಬೇಡ, ಹಾಗೆ ಅನ್ನಬೇಡ ಎನ್ನುವುದು ಹೆಚ್ಚು. ಇದೇ ವಿಷಯದ ಬಗ್ಗೆ ಸುದೀಪ್, ಅಶ್ವಿನಿ ಅವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಬಿಗ್​​ಬಾಸ್ (Bigg Boss) ಸ್ಪರ್ಧಿ ಅಶ್ವಿನಿ ಅವರ ನಟಿ ಆಗಿರುವ ಜೊತೆಗೆ ಕನ್ನಡಪರ ಹೋರಾಟಗಾರ್ತಿಯೂ ಹೌದು. ಸಮಾಜ ಸೇವೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕನ್ನಡಪರ ಸಂಘಟನೆಗಳ ಸಕ್ರಿಯ ಸದಸ್ಯೆ ಆಗಿರುವ ಅಶ್ವಿನಿ ಅವರು ಸಾಕಷ್ಟು ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಧ್ವನಿ ಇಲ್ಲದವರಿಗೆ ಧ್ವನಿ ಆಗುವ ಕಾರ್ಯವನ್ನು ಮಾಡಿದ್ದಾರಂತೆ. ಬಿಗ್​​ಬಾಸ್ ಮನೆಯಲ್ಲಿಯೂ ಸಹ ತಮ್ಮ ಹೋರಾಟದ ಮುಖವನ್ನು ಆಗಾಗ್ಗೆ ತೋರಿಸುತ್ತಲೇ ಇರುತ್ತಾರೆ. ಅದರಲ್ಲೂ ಕೆಲವೊಮ್ಮೆ ಅವಶ್ಯಕತೆ ಇಲ್ಲದ ಸಂದರ್ಭದಲ್ಲಿಯೂ ಅವರು ಬೇರೆಯವರ ಪರವಾಗಿ ದನಿ ಎತ್ತುವುದುಂಟು. ಆದರೆ ಇದೇ ಅವರಿಗೆ ಮುಳುವಾಗಿದೆ.

ಅಶ್ವಿನಿ ಅವರು ಬಿಗ್​​ಬಾಸ್ ಮನೆಯಲ್ಲಿ ಮಹಿಳೆಯರ ಪರವಾಗಿ ಆಗಾಗ್ಗೆ ಮಾತನಾಡುತ್ತಿರುತ್ತಾರೆ. ಅದರಲ್ಲೂ ಗಿಲ್ಲಿ, ರಘು ಅವರೊಟ್ಟಿಗೆ ಜಗಳವಾದಾಗ ಮಹಿಳೆಗೆ ನೀನು ಹಾಗೆ ಮಾತನಾಡಬೇಡ, ಹೆಣ್ಣುಮಕ್ಕಳಿಗೆ ಎಂದಿಗೂ ಹಾಗೆ ಅನ್ನಬೇಡ, ಅವರ ಗೌರವಕ್ಕೆ ಧಕ್ಕೆ ತರಬೇಡ ಎಂದೆಲ್ಲ ಜಗಳದ ಮಧ್ಯೆ ವಾಕ್ಯಗಳನ್ನು ಬಳಸುತ್ತಿರುತ್ತಾರೆ. ಇಂದು ಸುದೀಪ್ ಅವರು ಈ ಬಗ್ಗೆ ಅಶ್ವಿನಿ ಅವರಿಗೆ ಸ್ಪಷ್ಟವಾಗಿ ಒಂದು ಕ್ಲಾಸ್ ತೆಗೆದುಕೊಂಡರು ಮತ್ತು ಬಿಗ್​​ಬಾಸ್ ಮನೆಯಲ್ಲಿ ಮಹಿಳಾ ಕಾರ್ಡ್ ಬಳಸುವಂತಿಲ್ಲ ಎಂದು ಸ್ಪಷ್ಟವಾಗಿ ಬಿಗ್​​ಬಾಸ್ ಮನೆಯ ಮಹಿಳೆಯರಿಗೆ ಎಚ್ಚರಿಕೆ ನೀಡಿದರು.

‘ಅಶ್ವಿನಿ ಅವರೇ ಬಿಗ್​​ಬಾಸ್ ಮನೆಯ ಮಹಿಳೆಯರ ಮಾನ, ಗೌರವ ಕಾಪಾಡುವ ನೀವು ಗುತ್ತಿಗೆ ನೀವು ಪಡೆದಿದ್ದೀರ? ಏಕೆ ಅವರ ಹಿತವನ್ನು ಅವರು ಕಾಪಾಡಿಕೊಳ್ಳುವಷ್ಟು ಧೈರ್ಯ, ಶಕ್ತಿ ಬಿಗ್​​ಬಾಸ್ ಮನೆಯಲ್ಲಿ ಬೇರೆ ಮಹಿಳೆಯರಿಗೆ ಇಲ್ಲವಾ? ಅಥವಾ ಅವರೇ ಅವರ ಗೌರವ, ಮರ್ಯಾದೆಗಳನ್ನು ಕಾಪಾಡುವಂತೆ ನಿಮ್ಮ ಬಳಿ ಕೇಳಿಕೊಂಡಿದ್ದಾರಾ?’ ಎಂದು ಪ್ರಶ್ನೆ ಮಾಡಿದರು. ಅದೇ ಪ್ರಶ್ನೆಯನ್ನು ಮನೆಯ ಇತರೆ ಮಹಿಳಾ ಸದಸ್ಯರಿಗೂ ಮಾಡಿದ ಸುದೀಪ್, ‘ನಿಮ್ಮ ಮರ್ಯಾದೆಗಳನ್ನು ನೀವುಗಳು ಕಾಪಾಡಿಕೊಳ್ಳದಷ್ಟು ದುರ್ಬಲರಾ ನೀವು? ಎಂದು ಕೇಳಿದರು.

ಮಾತೆತ್ತಿದರೆ ‘ಯಾವ ಹೆಣ್ಣಿಗೂ ಹೀಗೆ ಮಾಡಬೇಡಿ’, ‘ಹೆಣ್ಣಿಗೆ ಗೌರವ ಕೊಡಿ’ ಎನ್ನುತ್ತೀರಿ. ಹೆಣ್ಣಿಗೆ ಈ ಮನೆಯಲ್ಲಿ ಎಂದೂ ಗೌರವ ಕಡಿಮೆ ಆಗಿಲ್ಲ. ಹೆಣ್ಣುಮಕ್ಕಳಿಗೆ ಅವಮಾನ ಆಗದಂತೆ ನಾವು ಕಾವಲು ಕಾಯುತ್ತಿದ್ದೇವೆ. ಎಲ್ಲಿಯಾದರೂ ಸಣ್ಣ ತಪ್ಪು ನಡೆದರೂ ಸಹ ನಾವು ಅದಕ್ಕೆ ಶೀಘ್ರವೇ ಆಕ್ಷನ್ ತೆಗೆದುಕೊಳ್ಳುತ್ತೇವೆ. ಅಷ್ಟು ಮಾತ್ರವೇ ಅಲ್ಲ, ಯಾರಾದರೂ ಮಹಿಳೆಯರ ಬಗ್ಗೆ ಕೆಟ್ಟದಾಗಿ ವರ್ತಿಸಿದರೆ, ಕೆಟ್ಟ ಉದ್ದೇಶದಿಂದ ಮಾತನಾಡಿದರೆ, ಮುಟ್ಟಿದರೆ ಅದು ಮೊದಲಿಗೆ ಗೊತ್ತಾಗುವುದು ಆ ಮಹಿಳೆಗೆ. ಹಾಗೇನಾದರೂ ಆಗಿದ್ದರೆ ಕೂಡಲೇ ಹೇಳಿ, ಈಗಲೇ ಕ್ರಮ ಕೈಗೊಳ್ಳೋಣ. ನೀವುಗಳು ಹೀಗೆ ಮಾತನಾಡುವುದರಿಂದ ಮನೆಯಲ್ಲಿರುವ ಗಂಡಸರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತದೆ’ ಎಂದರು ಸುದೀಪ್.

‘ಈ ಮನೆಯಲ್ಲಿ ಯಾರೂ ವುಮೆನ್ ಕಾರ್ಡ್ ಪ್ಲೇ ಮಾಡಬೇಡಿ. ಅದು ಕೆಟ್ಟದಾಗಿ ಕಾಣುತ್ತದೆ. ಅಲ್ಲದೆ ನಿಮ್ಮ ಗೌರವ, ಮರ್ಯಾದೆಗಳನ್ನು ನೀವೇ ಕಾಪಾಡಿಕೊಳ್ಳಿ, ಅವುಗಳನ್ನು ಕಾಪಾಡುವ ಹೊಣೆಯನ್ನು ಬೇರೆ ಸ್ಪರ್ಧಿಗಳಿಗೆ ಕೊಡಬೇಡಿ. ಯಾಕೆ ನೀವು ಅಷ್ಟೋಂದು ವೀಕಾ? ನಿಮಗೆ ಶಕ್ತಿ, ಧೈರ್ಯ ಇಲ್ಲವಾ’ ಎಂದು ಸುದೀಪ್ ಮಹಿಳಾ ಸ್ಪರ್ಧಿಗಳನ್ನು ಪ್ರಶ್ನೆ ಮಾಡಿದರು.

The post ಅವರ ಮಾನ ಕಾಪಾಡಲು ನೀವ್ಯಾರು ಎಂದು ಅಶ್ವಿನಿಗೆ ಸುದೀಪ್ ನೇರ ಪ್ರಶ್ನೆ appeared first on Good News 24x7.

]]>
ರಿಷಾ ಬಟ್ಟೆ ಮುಟ್ಟಿದ್ದಕ್ಕೆ ಗಿಲ್ಲಿ ನಟ ವಿರುದ್ಧ ಮಹಿಳಾ ಆಯೋಗಕ್ಕೆ ದೂರು, ಗಿಲ್ಲಿ ಮಾಡಿದ ಒಂದು ತಮಾಷೆಯೇ ಈಗ ಮುಳುವಾಗಿದೆ https://www.goodnews24x7.com/gilli-actor-files-complaint-with-womens-commission-for-touching-rishas-clothes-gillis-joke-has-now-become-a-joke/ Tue, 18 Nov 2025 07:20:19 +0000 https://www.goodnews24x7.com/?p=8201 ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಗಿಲ್ಲಿ ನಟ ಮಾಡಿದ ಒಂದು ತಮಾಷೆಯೇ ಈಗ ಮುಳುವಾಗಿದೆ. ರಿಷಾ ಅವರ ಬಟ್ಟೆಗಳನ್ನು ಮುಟ್ಟಿದ್ದಕ್ಕೆ ಗಿಲ್ಲಿ ನಟ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿಲಾಗಿದೆ. ಸದ್ಯ ಈ ಪ್ರಕರಣವನ್ನು ಮಹಿಳಾ ಆಯೋಗದ ಲೀಗಲ್…

The post ರಿಷಾ ಬಟ್ಟೆ ಮುಟ್ಟಿದ್ದಕ್ಕೆ ಗಿಲ್ಲಿ ನಟ ವಿರುದ್ಧ ಮಹಿಳಾ ಆಯೋಗಕ್ಕೆ ದೂರು, ಗಿಲ್ಲಿ ಮಾಡಿದ ಒಂದು ತಮಾಷೆಯೇ ಈಗ ಮುಳುವಾಗಿದೆ appeared first on Good News 24x7.

]]>

‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಗಿಲ್ಲಿ ನಟ ಮಾಡಿದ ಒಂದು ತಮಾಷೆಯೇ ಈಗ ಮುಳುವಾಗಿದೆ. ರಿಷಾ ಅವರ ಬಟ್ಟೆಗಳನ್ನು ಮುಟ್ಟಿದ್ದಕ್ಕೆ ಗಿಲ್ಲಿ ನಟ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿಲಾಗಿದೆ. ಸದ್ಯ ಈ ಪ್ರಕರಣವನ್ನು ಮಹಿಳಾ ಆಯೋಗದ ಲೀಗಲ್ ಟೀಮ್ ಅಭಿಪ್ರಾಯಕ್ಕೆ ಕಳಿಸಲಾಗಿದೆ.

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ (Gilli Nata) ಅವರು ಎಲ್ಲರ ಜೊತೆ ತಮಾಷೆ ಮಾಡುತ್ತಾ ಕಾಲ ಕಳೆಯುತ್ತಾ ಇದ್ದಾರೆ. ಆದರೆ ಅವರು ಮಾಡುವ ಕೆಲವು ತಮಾಷೆಯಿಂದ ತೊಂದರೆ ಕೂಡ ಉಂಟಾಗುತ್ತದೆ. ಅಚ್ಚರಿ ಎಂದರೆ, ಈಗ ಬಿಗ್ ಬಾಸ್ ಮನೆ ಒಳಗಿನ ವಿಷಯ ಮಹಿಳಾ ಆಯೋಗದ (Women Commission) ತನಕ ತಲುಪಿದೆ! ಹೌದು, ಗಿಲ್ಲಿ ನಟ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ. ಅಷ್ಟಕ್ಕೂ ಗಿಲ್ಲಿ ಮಾಡಿದ ತಪ್ಪು ಏನು? ಸಹ ಸ್ಪರ್ಧಿ ರಿಷಾ (Risha) ಅವರ ಬಟ್ಟೆಗಳನ್ನು ಮುಟ್ಟಿದ್ದು. ಈ ವಿಚಾರವನ್ನು ಇಟ್ಟುಕೊಂಡು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಬಿಗ್ ಬಾಸ್ ಮನೆಯಲ್ಲಿ ಒಂದು ದಿನ ರಿಷಾ ಅವರು ಗಿಲ್ಲಿ ನಟನ ತಾಳ್ಮೆ ಕೆಡುವಂತೆ ನಡೆದುಕೊಂಡಿದ್ದರು. ಬಾತ್ ರೂಮ್ ಒಳಗೆ ಹೋಗಿದ್ದ ರಿಷಾ ಅವರು ದೀರ್ಘ ಸಮಯ ತೆಗೆದುಕೊಂಡರು. ತಮಗೆ ನೀರು ಬೇಕು ಎಂದು ಗಿಲ್ಲಿ ನಟ ಮನವಿ ಮಾಡಿದರೂ ಕೂಡ ರಿಷಾ ಅದಕ್ಕೆ ಸ್ಪಂದಿಸಲಿಲ್ಲ. ಅದರಿಂದಾಗಿ ಗಿಲ್ಲಿಗೆ ಕೋಪ ಬಂತು. ಆಗ ಗಿಲ್ಲಿ ನಡೆದುಕೊಂಡ ರೀತಿಯಿಂದ ಎಲ್ಲರಿಗೂ ಅಚ್ಚರಿ ಆಯಿತು.

ಗಿಲ್ಲಿ ಅವರು ರಿಷಾ ಅವರ ಬಟ್ಟೆಗಳನ್ನೆಲ್ಲ ತಂದು ಬಾತ್​ ರೂಮ್​ ಮುಂದೆ ಸುರಿದರು. ಆ ಬಳಿಕ ಗಿಲ್ಲಿ ಮತ್ತು ರಿಷಾ ನಡುವೆ ದೊಡ್ಡ ಜಗಳ ಆಯಿತು. ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಈಗ ಗಿಲ್ಲಿ ನಟ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಬಂದಿದೆ. ಅಲ್ಲದೇ, ಗಿಲ್ಲಿ ನಟ ಅವರು ಮಹಿಳೆಯರ ಬಗ್ಗೆ ಅವಮಾನಕರ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಕೂಡ ಆರೋಪಿಸಲಾಗಿದೆ. ಈ ದೂರಿನ ಅನ್ವಯ ಮಹಿಳಾ ಆಯೋಗವು ವಿಡಿಯೋ ಫೂಟೇಜ್ ಪರಿಶೀಲನೆ ಮಾಡುತ್ತಿದೆ. ಆದರೆ ಬಿಗ್ ಬಾಸ್ ಆಯೋಜಕರು ಯಾವುದೇ ವಿಡಿಯೋ ಫೂಟೇಜ್ ನೀಡಿಲ್ಲ ಎನ್ನಲಾಗಿದೆ. ಹೀಗಾಗಿ ಮೇಲ್ನೋಟಕ್ಕೆ ಗಿಲ್ಲಿ ನಟ ತಪ್ಪಾಗಿ ನಡೆದುಕೊಂಡ ಬಗ್ಗೆ ಯಾವುದೇ ಸಾಕ್ಷಿ ಸಿಗದ ಕಾರಣಕ್ಕೆ ಈ ಪ್ರಕರಣವನ್ನು ಆಯೋಗದ ಲೀಗಲ್ ಟೀಮ್ ಅಭಿಪ್ರಾಯಕ್ಕೆ ಕಳಿಸಲಾಗಿದೆ.

ಜಗಳ ನಡೆದಾಗ ಗಿಲ್ಲಿ ಮೇಲೆ ರಿಷಾ ಅವರು ಕೈ ಮಾಡಿದ್ದರು. ಅದು ಬಿಗ್ ಬಾಸ್ ಮನೆಯ ಮೂಲ ನಿಯಮದ ಉಲ್ಲಂಘನೆ. ಆದರೂ ಕೂಡ ಇನ್ನುಳಿದ ಸ್ಪರ್ಧಿಗಳು ಕೇವಲ ವಾರ್ನಿಂಗ್ ನೀಡಿ ರಿಷಾ ಅವರನ್ನು ಉಳಿಸಿಕೊಂಡರು. ವಾರಾಂತ್ಯದ ಸಂಚಿಕೆಯಲ್ಲಿ ಈ ವಿಚಾರದ ಬಗ್ಗೆ ಸುದೀಪ್ ಕೂಡ ಮಾತನಾಡಿದ್ದರು. ಹೆಣ್ಮಕ್ಕಳ ಬಟ್ಟೆ, ಬ್ಯಾಗ್​​ಗಳಿಗೆ ಅನುಮತಿ ಇಲ್ಲದೇ ಕೈ ಹಾಕಬಾರದು ಎಂದು ಗಿಲ್ಲಿಗೆ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡಿದ್ದರು.

The post ರಿಷಾ ಬಟ್ಟೆ ಮುಟ್ಟಿದ್ದಕ್ಕೆ ಗಿಲ್ಲಿ ನಟ ವಿರುದ್ಧ ಮಹಿಳಾ ಆಯೋಗಕ್ಕೆ ದೂರು, ಗಿಲ್ಲಿ ಮಾಡಿದ ಒಂದು ತಮಾಷೆಯೇ ಈಗ ಮುಳುವಾಗಿದೆ appeared first on Good News 24x7.

]]>
ಬಿಗ್​ಬಾಸ್ ಮನೆಯಿಂದ ಚಂದ್ರಪ್ರಭ ಔಟ್! https://www.goodnews24x7.com/chandraprabha-is-out-of-the-bigg-boss-house/ Mon, 10 Nov 2025 05:21:33 +0000 https://www.goodnews24x7.com/?p=8076 ಬಿಗ್​​ಬಾಸ್​ ಮನೆಯಿಂದ ಚಂದ್ರಪ್ರಭ ಹೊರಬಿದ್ದಿದ್ದಾರೆ. ಆರು ವಾರಗಳ ಕಾಲ ಬಿಗ್​ಬಾಸ್ ಮನೆಯಲ್ಲಿದ್ದ ಚಂದ್ರಪ್ರಭ, ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದರು, ಇದೀಗ ಬೇಸರದಿಂದ ಮನೆಯಿಂದ ಹೊರಬಂದಿದ್ದಾರೆ.ಬಿಗ್​​ಬಾಸ್​ ಮನೆಯಿಂದ ಚಂದ್ರಪ್ರಭ ಹೊರಬಿದ್ದಿದ್ದಾರೆ. ಆರು ವಾರಗಳ ಕಾಲ ಬಿಗ್​ಬಾಸ್ ಮನೆಯಲ್ಲಿದ್ದ ಚಂದ್ರಪ್ರಭ, ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದರು, ಇದೀಗ…

The post ಬಿಗ್​ಬಾಸ್ ಮನೆಯಿಂದ ಚಂದ್ರಪ್ರಭ ಔಟ್! appeared first on Good News 24x7.

]]>

ಬಿಗ್​​ಬಾಸ್​ ಮನೆಯಿಂದ ಚಂದ್ರಪ್ರಭ ಹೊರಬಿದ್ದಿದ್ದಾರೆ. ಆರು ವಾರಗಳ ಕಾಲ ಬಿಗ್​ಬಾಸ್ ಮನೆಯಲ್ಲಿದ್ದ ಚಂದ್ರಪ್ರಭ, ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದರು, ಇದೀಗ ಬೇಸರದಿಂದ ಮನೆಯಿಂದ ಹೊರಬಂದಿದ್ದಾರೆ.ಬಿಗ್​​ಬಾಸ್​ ಮನೆಯಿಂದ ಚಂದ್ರಪ್ರಭ ಹೊರಬಿದ್ದಿದ್ದಾರೆ. ಆರು ವಾರಗಳ ಕಾಲ ಬಿಗ್​ಬಾಸ್ ಮನೆಯಲ್ಲಿದ್ದ ಚಂದ್ರಪ್ರಭ, ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದರು, ಇದೀಗ ಬೇಸರದಿಂದ ಮನೆಯಿಂದ ಹೊರಬಂದಿದ್ದಾರೆ.

ಕಿಚ್ಚ ಸುದೀಪ್ ಅವರೇ ಎಲ್ಲಾ ಸ್ಪರ್ಧಿಗಳನ್ನು ನಾಮಿನೇಟ್ ಮಾಡಿದ್ದರು. ವಾರದ ಮಧ್ಯೆ ಮನೆಯಿಂದ ಬಂದಿದ್ದ ಲೆಟರ್​ ಪಡೆಯುವಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಕೆಲವರು ಎಲಿಮಿನೇಷನ್​ನಿಂದ ಪಾರಾಗಿದ್ದರು. ಕೊನೆಯಲ್ಲಿ ಈ ವಾರ ಬಿಗ್ ಬಾಸ್ ಮನೆಯಲ್ಲಿ 10 ಮಂದಿ ನಾಮಿನೇಟ್ ಆಗಿದ್ದರು.ಅವರಲ್ಲಿ ಚಂದ್ರಪ್ರಭ ಕೂಡ ಒಬ್ಬರಾಗಿದ್ದರು. ಕಾಕ್ರೋಚ್ ಸುಧಿ , ಧ್ರುವಂತ್, ಗಿಲ್ಲಿ ನಟ, ಸೂರಜ್ ಸಿಂಗ್, ಅಶ್ವಿನಿ ಗೌಡ, ಚಂದ್ರಪ್ರಭ, ರಾಶಿಕಾ ಶೆಟ್ಟಿ, ಧನುಷ್, ರಕ್ಷಿತಾ ಶೆಟ್ಟಿ, ಸ್ಪಂದನಾ ಸೋಮಣ್ಣ ಅವರು ನಾಮಿನೇಟ್ ಆಗಿದ್ದರು.ಕಿಚ್ಚ ಸುದೀಪ್ ಅವರು ವೋಟ್ ಪ್ರಕಾರ, ಒಬ್ಬೊಬ್ಬರನ್ನೇ ಸೇವ್ ಮಾಡುತ್ತ ಬಂದರು. ಕೊನೆಯಲ್ಲಿ ಕಾಕ್ರೋಚ್ ಸುಧೀ, ಚಂದ್ರಪ್ರಭ ಉಳಿದುಕೊಂಡಿದ್ದರು. ಈ ವೇಳೆ ಕಾಕ್ರೋಚ್ ಸುಧಿ ತಮಗೆ ಸಿಕ್ಕಿರುವ ಸ್ಪೆಷಲ್ ಪವರ್ ಬಳಸಿಕೊಂಡು ಸೇವ್ ಆದರು. ಆದರೆ ಕೊನೆಯಲ್ಲಿ ಚಂದ್ರಪ್ರಭ ಮನೆಯಿಂದ ಹೊರ ಬರಬೇಕಾಯಿತು.

The post ಬಿಗ್​ಬಾಸ್ ಮನೆಯಿಂದ ಚಂದ್ರಪ್ರಭ ಔಟ್! appeared first on Good News 24x7.

]]>
ಬಿಗ್​ಬಾಸ್ ಸ್ಪರ್ಧಿ ರಕ್ಷಿತಾಗೆ ಕಾನೂನು ಸಂಕಷ್ಟ ಎದುರಾಗಿದೆ . ಅಶ್ವಿನಿ ಗೌಡ ವಿರುದ್ಧ ಮಾತಾಡಿದ್ದೇ ರಕ್ಷಿತಾಗೆ ತಪ್ಪಾಯ್ತಾ? https://www.goodnews24x7.com/bigg-boss-contestant-rakshita-is-facing-legal-trouble-did-rakshita-do-wrong-by-speaking-against-ashwini-gowda/ Sun, 02 Nov 2025 11:54:42 +0000 https://www.goodnews24x7.com/?p=8009 ಬಿಗ್​ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿಗೆ (Rakshita Shetty) ಕಾನೂನು ಸಂಕಷ್ಟ ಎದುರಾಗಿದೆ. ಕಲಾವಿದರಿಗೆ ಅವಮಾನ ಮಾಡಿದ ಆರೋಪವನ್ನು ಅಶ್ವಿನಿ ಗೌಡ ಮಾಡಿದ್ದು, ಈ ಸಂಬಂಧ ನಗರ ಪೊಲೀಸ್ ಕಮಿಷನರ್​​ಗೆ ದೂರು ಕೊಡಲು ನಿರ್ಧಾರ ಮಾಡಲಾಗಿದೆ. ಬೆಂಗಳೂರು: ಬಿಗ್​ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿಗೆ…

The post ಬಿಗ್​ಬಾಸ್ ಸ್ಪರ್ಧಿ ರಕ್ಷಿತಾಗೆ ಕಾನೂನು ಸಂಕಷ್ಟ ಎದುರಾಗಿದೆ . ಅಶ್ವಿನಿ ಗೌಡ ವಿರುದ್ಧ ಮಾತಾಡಿದ್ದೇ ರಕ್ಷಿತಾಗೆ ತಪ್ಪಾಯ್ತಾ? appeared first on Good News 24x7.

]]>

ಬಿಗ್​ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿಗೆ (Rakshita Shetty) ಕಾನೂನು ಸಂಕಷ್ಟ ಎದುರಾಗಿದೆ. ಕಲಾವಿದರಿಗೆ ಅವಮಾನ ಮಾಡಿದ ಆರೋಪವನ್ನು ಅಶ್ವಿನಿ ಗೌಡ ಮಾಡಿದ್ದು, ಈ ಸಂಬಂಧ ನಗರ ಪೊಲೀಸ್ ಕಮಿಷನರ್​​ಗೆ ದೂರು ಕೊಡಲು ನಿರ್ಧಾರ ಮಾಡಲಾಗಿದೆ.

ಬೆಂಗಳೂರು: ಬಿಗ್​ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿಗೆ (Rakshita Shetty) ಕಾನೂನು ಸಂಕಷ್ಟ ಎದುರಾಗಿದೆ. ಕಲಾವಿದರಿಗೆ ಅವಮಾನ ಮಾಡಿದ ಆರೋಪವನ್ನು ಅಶ್ವಿನಿ ಗೌಡ ಮಾಡಿದ್ದು, ಈ ಸಂಬಂಧ ನಗರ ಪೊಲೀಸ್ ಕಮಿಷನರ್​​ಗೆ ದೂರು ಕೊಡಲು ನಿರ್ಧಾರ ಮಾಡಲಾಗಿದೆ. ಕುಶಲ ಕಲಾ ವೃಂದದಿಂದ ಕಂಪ್ಲೆಂಟ್ ಕೊಡಲು ನಿರ್ಧಾರ ಮಾಡಿದೆ. ಅಶ್ವಿನಿ ಗೌಡ ವಾರದ ಕಥೆಯಲ್ಲಿ ಸುದೀಪ್ ಎದುರು ಈ ವಿಚಾರವನ್ನು ಉಲ್ಲೇಖ ಮಾಡಿದ್ದಾರೆ. ನಿನ್ನೆ ನಡೆದ ಕಿಚ್ಚನ ಪಂಚಾಯ್ತಿಯಲ್ಲಿ ಈ ವಿಚಾರ ಚರ್ಚೆಗೆ ಬಂದಿತ್ತು.

ಅಶ್ವಿನಿ ಗೌಡ ಮತ್ತು ಕಾವ್ಯ ಶೈವ ಕಳೆದ ವಾರ ಬಿಗ್​ಬಾಸ್ ಮನೆಯಲ್ಲಿ ಜಗಳ ಆಡುತ್ತಿದ್ದರು. ಜೋರಾಗಿ ಕಿತ್ತಾಡುವಾಗ ಕಾವ್ಯ ಪರ ಬ್ಯಾಟ್ ಬೀಸಲು ರಕ್ಷಿತಾ ಶೆಟ್ಟಿ ಬಂದಿದ್ದಾರೆ. ಆಗ ರಕ್ಷಿತಾ ಶೆಟ್ಟಿ ನಿಮ್ಮ ಧಾರಾವಾಹಿಯನ್ನು ಹೊರಗೆ ಮಾಡಿ. ಬಿಗ್​ಬಾಸ್ ಮನೆಯಲ್ಲಿ ಅಲ್ಲ ಎಂದು ಕೂಗಿದ್ದಾರೆ. ಅದಕ್ಕೆ ಅಶ್ವಿನಿ ಗೌಡ, ಬೆಟ್ಟು ಮಾಡುತ್ತ ಕಲಾವಿದರಿಗೆ ಅವಮಾನ ಮಾಡಬೇಡ ಎಂದು ರಕ್ಷಿತಾ ಕಡೆ ತಿರುಗಿದ್ದಾರೆ. ನಿಂಗೆ ಅದ್ರಲ್ಲೇ ಹೊಡೀತಾರೆ ಹುಷಾರ್ ಎಂದಿದ್ದಾರೆ. ಅದಕ್ಕೆ ರಕ್ಷಿತಾ ಗೌಡ, ಮಾಡ್ತೀನಿ, ಮಾಡ್ತೀನಿ ಎಂದು ಜೋರಾಗಿ ಕೂಗಿದ್ದಾರೆ.

ಈ ವಿಚಾರದ ಬಗ್ಗೆ ಕಾವ್ಯ ಶೈವ ಸುದೀಪ್ ಎದುರು ಸ್ಪಷ್ಟನೆ ನೀಡಿದ್ದಾರೆ. ನಾನು ಜಗಳ ಆಡಬೇಕಾದರೆ ರಕ್ಷಿತಾ ಬಂದಿದ್ದು ನಿಜ. ಇದು ಸೀರಿಯಲ್ ಅಲ್ಲ, ನಾಟಕವಾಡಬೇಡಿ ಎಂಬ ಉದ್ದೇಶದಲ್ಲಿ ರಕ್ಷಿತಾ ಹೇಳಿದ್ದಾರೆ. ಆದರೆ ಅಶ್ವಿನಿ ಅವರು ಆ ಸ್ಟೇಟ್​ಮೆಂಟ್ ಅನ್ನು ತಿರುಚಿರೋದನ್ನು ಕಣ್ಣಾರೆ ನೋಡಿದೆ. ಕಲಾವಿದರ ಬಗ್ಗೆ ಕಮ್ಮಿ ಮಾತಾಡ್ತಾ ಇದ್ದೀಯಾ.. ಕಲಾವಿದರನ್ನ ಕೆಳಗೆ ಇಟ್ಟು ಮಾತಾಡ್ತೀಯಾ ಎಂದು ಹೇಳಿದರು. ಆದರೆ ರಕ್ಷಿತಾ ಮಾತಾಡಿದ್ದ ಉದ್ದೇಶವೇ ಬೇರೆ ಆಗಿತ್ತು ಎಂದು ಕಾವ್ಯ ಹೇಳಿದ್ದಾರೆ. ಇದೀಗ ಅಶ್ವಿನಿ ಗೌಡ ಮಾಡಿದ ಆರೋಪಕ್ಕೆ ಸಂಬಂಧಿಸಿ ಕುಶಲ ಕಲಾ ವೃಂದ ರಕ್ಷಿತಾ ಶೆಟ್ಟಿ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.

The post ಬಿಗ್​ಬಾಸ್ ಸ್ಪರ್ಧಿ ರಕ್ಷಿತಾಗೆ ಕಾನೂನು ಸಂಕಷ್ಟ ಎದುರಾಗಿದೆ . ಅಶ್ವಿನಿ ಗೌಡ ವಿರುದ್ಧ ಮಾತಾಡಿದ್ದೇ ರಕ್ಷಿತಾಗೆ ತಪ್ಪಾಯ್ತಾ? appeared first on Good News 24x7.

]]>