crashed Archives - Good News 24x7 https://www.goodnews24x7.com/tag/crashed/ Kannada Sat, 28 Feb 2026 05:43:40 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg crashed Archives - Good News 24x7 https://www.goodnews24x7.com/tag/crashed/ 32 32 ರಸ್ತೆಯಲ್ಲೆಲ್ಲಾ ಹಾರಾಡಿದ ನೋಟುಗಳು! ಹಣ ಬಾಚಲು ಮುಗಿಬಿದ್ದ ಜನ, 15 ಮಂದಿ ಸಾ* https://www.goodnews24x7.com/notes-flying-all-over-the-road-15-people-died-after-people-ran-out-to-collect-money/ Sat, 28 Feb 2026 05:33:58 +0000 https://www.goodnews24x7.com/?p=8529 ನೋಟುಗಳನ್ನು ತುಂಬಿಕೊಂಡು ಹೋಗುತ್ತಿದ್ದ ಕಾರ್ಗೋ ವಿಮಾನವೊಂದು ಪತನಗೊಂಡು ಹೆದ್ದಾರಿಗೆ ಅಪ್ಪಳಿಸಿದ ಪರಿಣಾಮ ಕನಿಷ್ಠ 15 ಜನರು ಮೃತಪಟ್ಟಿರುವ ಭೀಕರ ಘಟನೆ ಬೊಲಿವಿಯಾದಲ್ಲಿ ನಡೆದಿದೆ. ನೋಟುಗಳನ್ನು ತುಂಬಿಕೊಂಡು ಹೋಗುತ್ತಿದ್ದ ಕಾರ್ಗೋ ವಿಮಾನವೊಂದು ಪತನಗೊಂಡು ಹೆದ್ದಾರಿಗೆ ಅಪ್ಪಳಿಸಿದ ಪರಿಣಾಮ ಕನಿಷ್ಠ 15 ಜನರು ಮೃತಪಟ್ಟಿರುವ…

The post ರಸ್ತೆಯಲ್ಲೆಲ್ಲಾ ಹಾರಾಡಿದ ನೋಟುಗಳು! ಹಣ ಬಾಚಲು ಮುಗಿಬಿದ್ದ ಜನ, 15 ಮಂದಿ ಸಾ* appeared first on Good News 24x7.

]]>

ನೋಟುಗಳನ್ನು ತುಂಬಿಕೊಂಡು ಹೋಗುತ್ತಿದ್ದ ಕಾರ್ಗೋ ವಿಮಾನವೊಂದು ಪತನಗೊಂಡು ಹೆದ್ದಾರಿಗೆ ಅಪ್ಪಳಿಸಿದ ಪರಿಣಾಮ ಕನಿಷ್ಠ 15 ಜನರು ಮೃತಪಟ್ಟಿರುವ ಭೀಕರ ಘಟನೆ ಬೊಲಿವಿಯಾದಲ್ಲಿ ನಡೆದಿದೆ.

ನೋಟುಗಳನ್ನು ತುಂಬಿಕೊಂಡು ಹೋಗುತ್ತಿದ್ದ ಕಾರ್ಗೋ ವಿಮಾನವೊಂದು ಪತನಗೊಂಡು ಹೆದ್ದಾರಿಗೆ ಅಪ್ಪಳಿಸಿದ ಪರಿಣಾಮ ಕನಿಷ್ಠ 15 ಜನರು ಮೃತಪಟ್ಟಿರುವ ಭೀಕರ ಘಟನೆ ಬೊಲಿವಿಯಾದಲ್ಲಿ ನಡೆದಿದೆ. ವಿಮಾನ ಬಿದ್ದ ರಭಸಕ್ಕೆ ಅದರಲ್ಲಿದ್ದ ಕಂತೆ ಕಂತೆ ನೋಟುಗಳು ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಇದನ್ನು ಕಂಡ ಜನ ಹಣವನ್ನು ಬಾಚಿಕೊಳ್ಳಲು ಮುಗಿಬಿದ್ದ ಪ್ರಸಂಗವೂ ನಡೆದಿದೆ.

ಬೊಲಿವಿಯಾದ ರಾಜಧಾನಿ ಲಾ ಪಾಜ್ ಪಕ್ಕದಲ್ಲಿರುವ ಎಲ್ ಆಲ್ಟೊ (El Alto) ವಿಮಾನ ನಿಲ್ದಾಣದಲ್ಲಿ ಈ ದುರಂತ ಸಂಭವಿಸಿದೆ. ಬೊಲಿವಿಯಾ ವಾಯುಪಡೆಗೆ ಸೇರಿದ ಹರ್ಕ್ಯುಲಸ್ ಸಿ-130 (Hercules C-130) ವಿಮಾನವು ಹೊಸದಾಗಿ ಮುದ್ರಿಸಲಾದ ಕರೆನ್ಸಿ ನೋಟುಗಳನ್ನು ಸಾಗಿಸುತ್ತಿತ್ತು.

ವಿಮಾನವು ಲ್ಯಾಂಡಿಂಗ್ ಆಗುವಾಗ ನಿಯಂತ್ರಣ ತಪ್ಪಿ ರನ್‌ವೇಯಿಂದ ಜಾರಿ, ಪಕ್ಕದ ರಸ್ತೆಗೆ ನುಗ್ಗಿದೆ. ಅಲ್ಲಿ ಸಂಚರಿಸುತ್ತಿದ್ದ ಸುಮಾರು 15ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಸ್ಥಳದಲ್ಲೇ ಭೀಕರ ವಾತಾವರಣ ನಿರ್ಮಾಣವಾಗಿತ್ತು.

15 ಸಾವು, ಹಲವರಿಗೆ ಗಾಯ
ಅಗ್ನಿಶಾಮಕ ದಳದ ಮುಖ್ಯಸ್ಥ ಪಾವೆಲ್ ಟೋವರ್ ನೀಡಿದ ಮಾಹಿತಿ ಪ್ರಕಾರ, ಈ ದುರಂತದಲ್ಲಿ ಕನಿಷ್ಠ 15 ಜನ ಮೃತಪಟ್ಟಿದ್ದಾರೆ. ಆದರೆ ಮೃತಪಟ್ಟವರು ವಿಮಾನದಲ್ಲಿದ್ದವರಾ ಅಥವಾ ಹೆದ್ದಾರಿಯಲ್ಲಿದ್ದ ಕಾರಿನಲ್ಲಿದ್ದವರಾ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ವಿಮಾನದಲ್ಲಿದ್ದ ಆರು ಸಿಬ್ಬಂದಿ ಪೈಕಿ ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ವಾಯುಪಡೆ ಅಧಿಕಾರಿಗಳು ತಿಳಿಸಿದ್ದಾರೆ.

ಹಣ ಬಾಚಲು ಮುಗಿಬಿದ್ದ ಜನ!
ವಿಮಾನ ಪತನವಾಗುತ್ತಿದ್ದಂತೆಯೇ ಅದರಲ್ಲಿದ್ದ ಹಣದ ಬಂಡಲ್‌ಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಇದನ್ನು ನೋಡಿದ ಸ್ಥಳೀಯರು ಮತ್ತು ದಾರಿಹೋಕರು, ಅಪಘಾತದ ಭಯವನ್ನೂ ಲೆಕ್ಕಿಸದೆ ಹಣವನ್ನು ಎತ್ತಿಕೊಳ್ಳಲು ಮುಗಿಬಿದ್ದಿದ್ದಾರೆ. ಪೊಲೀಸರು ಲಾಟೀ ಚಾರ್ಜ್ ಮಾಡುವ ಮೂಲಕ ಜನರನ್ನು ಚದುರಿಸಬೇಕಾಯಿತು.

ಇಲ್ಲಿ ಒಂದು ಟ್ವಿಸ್ಟ್ ಇದೆ. ಜನ ಮುಗಿಬಿದ್ದು ತೆಗೆದುಕೊಂಡ ಹಣಕ್ಕೆ ಸದ್ಯ ಯಾವುದೇ ಮೌಲ್ಯವಿಲ್ಲ (Legal Tender Status) ಎಂದು ಬೊಲಿವಿಯಾ ಸೆಂಟ್ರಲ್ ಬ್ಯಾಂಕ್ ಸ್ಪಷ್ಟಪಡಿಸಿದೆ. ಈ ನೋಟುಗಳು ಹೊಸದಾಗಿ ಮುದ್ರಣಗೊಂಡು ಚಲಾವಣೆಗೆ ಬರಬೇಕಿದ್ದವು. ಇವುಗಳಲ್ಲಿ ಇನ್ನೂ ಸೀರಿಯಲ್ ನಂಬರ್ (Serial Numbers) ಇಲ್ಲದ ಕಾರಣ, ಇವು ಕೇವಲ ಕಾಗದಕ್ಕೆ ಸಮಾನ ಎಂದು ಬ್ಯಾಂಕ್ ಅಧ್ಯಕ್ಷ ಡೇವಿಡ್ ಎಸ್ಪಿನೋಜಾ ತಿಳಿಸಿದ್ದಾರೆ.

ರಕ್ಷಣಾ ಸಚಿವ ಮಾರ್ಸೆಲೊ ಸಲಿನಾಸ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಸಾಂಟಾ ಕ್ರೂಜ್ ನಗರದಿಂದ ಈ ವಿಮಾನ ಹಣವನ್ನು ಹೊತ್ತು ತರುತ್ತಿತ್ತು ಎನ್ನಲಾಗಿದೆ.

The post ರಸ್ತೆಯಲ್ಲೆಲ್ಲಾ ಹಾರಾಡಿದ ನೋಟುಗಳು! ಹಣ ಬಾಚಲು ಮುಗಿಬಿದ್ದ ಜನ, 15 ಮಂದಿ ಸಾ* appeared first on Good News 24x7.

]]>
ಚೀನಾ ನಿರ್ಮಿತ ಯುದ್ಧ ವಿಮಾನ ಢಾಕಾ ಕಾಲೇಜಿನ ಆವರಣದಲ್ಲಿ ಪತನ, ಹಲವು ಮಂದಿ ಸಾ*ವು https://www.goodnews24x7.com/chinese-made-fighter-jet-crashes-into-dhaka-college-campus-several-dead/ Mon, 21 Jul 2025 09:33:53 +0000 https://www.goodnews24x7.com/?p=5172 ಢಾಕಾ : ಬಾಂಗ್ಲಾದೇಶ ವಾಯುಪಡೆಯ ತರಬೇತಿ ನಿರತ ವಿಮಾನವು ಢಾಕಾದ ಉತ್ತರ ಪ್ರದೇಶದ ಮೈಲ್ಸ್ಟೋನ್ ಕಾಲೇಜು ಆವರಣಕ್ಕೆ ಅಪ್ಪಳಿಸಿದ ಪರಿಣಾಮ ಒಬ್ಬರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದು ಚೀನಾ ನಿರ್ಮಿತ ವಿಮಾನವಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಂತೆ ಸಾವಿನ ಸಂಖ್ಯೆ ಹೆಚ್ಚಾಗಬಹುದು…

The post ಚೀನಾ ನಿರ್ಮಿತ ಯುದ್ಧ ವಿಮಾನ ಢಾಕಾ ಕಾಲೇಜಿನ ಆವರಣದಲ್ಲಿ ಪತನ, ಹಲವು ಮಂದಿ ಸಾ*ವು appeared first on Good News 24x7.

]]>

ಢಾಕಾ : ಬಾಂಗ್ಲಾದೇಶ ವಾಯುಪಡೆಯ ತರಬೇತಿ ನಿರತ ವಿಮಾನವು ಢಾಕಾದ ಉತ್ತರ ಪ್ರದೇಶದ ಮೈಲ್ಸ್ಟೋನ್ ಕಾಲೇಜು ಆವರಣಕ್ಕೆ ಅಪ್ಪಳಿಸಿದ ಪರಿಣಾಮ ಒಬ್ಬರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದು ಚೀನಾ ನಿರ್ಮಿತ ವಿಮಾನವಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಂತೆ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ.

F-7 BGI ತರಬೇತಿ ಜೆಟ್ ಎಂದು ಗುರುತಿಸಲಾದ ವಿಮಾನವು, ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಸುಮಾರು ಮಧ್ಯಾಹ್ನ 1.06 ಕ್ಕೆ ಡಯಾಬರಿ ಪ್ರದೇಶದ ಕಾಲೇಜು ಆವರಣಕ್ಕೆ ಅಪ್ಪಳಿಸಿತು. ಅಪಘಾತದ ಸ್ಥಳದಿಂದ ದಟ್ಟವಾದ ಹೊಗೆ ಏರುತ್ತಿರುವುದು ಕಂಡುಬಂದಿದೆ. ಅಗ್ನಿಶಾಮಕ ಮತ್ತು ರಕ್ಷಣಾ ತಂಡಗಳು ಪ್ರಸ್ತುತ ಸ್ಥಳದಲ್ಲಿದೆ ಹುಡುಕಾಟ ನಡೆಸುತ್ತಿವೆ. ಘಟನೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

 

The post ಚೀನಾ ನಿರ್ಮಿತ ಯುದ್ಧ ವಿಮಾನ ಢಾಕಾ ಕಾಲೇಜಿನ ಆವರಣದಲ್ಲಿ ಪತನ, ಹಲವು ಮಂದಿ ಸಾ*ವು appeared first on Good News 24x7.

]]>