crimecase Archives - Good News 24x7 https://www.goodnews24x7.com/tag/crimecase/ Kannada Sat, 23 Aug 2025 10:57:24 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg crimecase Archives - Good News 24x7 https://www.goodnews24x7.com/tag/crimecase/ 32 32 ಮಾಸ್ಕ್ ಮ್ಯಾನ್ ಬಂಧನದ ಬಳಿಕ ವೀರೇಂದ್ರ ಹೆಗ್ಡೆ ಏನ್ ಅಂದ್ರು ? https://www.goodnews24x7.com/what-did-veerendra-hegde-say-after-the-arrest-of-the-masked-man/ Sat, 23 Aug 2025 10:57:24 +0000 https://www.goodnews24x7.com/?p=6582 ಮಂಗಳೂರು: ಈಗ ಒಂದೊಂದೇ ಸತ್ಯಗಳು ಹೊರಗೆ ಬರುತ್ತಿದೆ. ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದಗಳು , ಒಂದೊಂದೇ ಸತ್ಯಗಳು ಹೊರಗೆ ಬರ್ತಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ಧರ್ಮಸ್ಥಳ ಪ್ರಕರಣದಲ್ಲಿ ಮಾಸ್ಕ್ ಮ್ಯಾನ್ ಬಂಧನದ ಬಳಿಕ ಮಾತನಾಡಿದ ಅವರು, ಎಸ್‌ಐಟಿ…

The post ಮಾಸ್ಕ್ ಮ್ಯಾನ್ ಬಂಧನದ ಬಳಿಕ ವೀರೇಂದ್ರ ಹೆಗ್ಡೆ ಏನ್ ಅಂದ್ರು ? appeared first on Good News 24x7.

]]>

ಮಂಗಳೂರು: ಈಗ ಒಂದೊಂದೇ ಸತ್ಯಗಳು ಹೊರಗೆ ಬರುತ್ತಿದೆ. ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದಗಳು , ಒಂದೊಂದೇ ಸತ್ಯಗಳು ಹೊರಗೆ ಬರ್ತಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ಧರ್ಮಸ್ಥಳ ಪ್ರಕರಣದಲ್ಲಿ ಮಾಸ್ಕ್ ಮ್ಯಾನ್ ಬಂಧನದ ಬಳಿಕ ಮಾತನಾಡಿದ ಅವರು, ಎಸ್‌ಐಟಿ (SIT) ತನಿಖೆ ಹಂತದಲ್ಲಿ ನಾನು ಹೆಚ್ಚು ಮಾತನಾಡಲ್ಲ. ಧರ್ಮಸ್ಥಳಕ್ಕೆ ಬಂದು ಬೆಂಬಲ ಸೂಚಿಸುವ ಎಲ್ಲರಿಗೂ ಧನ್ಯವಾದಗಳು ಎಂದರು.

ಸತ್ಯಗಳನ್ನು ತೊಳೆದು ಇಟ್ಟಂತಾಗಿದೆ. ಕ್ಷೇತ್ರದ ಮೇಲಿನ ಅಭಿಮಾನ ಹೀಗೇ ಇರಲಿ. ಎಲ್ಲರ ಪ್ರೀತಿ ವಿಶ್ವಾಸ ಹೀಗೆಯೇ ಇರಲಿ ಎಂದು ಆಶಿಸುತ್ತೇನೆ ಎಂದು ಭಕ್ತರ ಬಳಿ ತುಳುವಿನಲ್ಲಿ ಮಾತನಾಡಿದ್ದಾರೆ.

The post ಮಾಸ್ಕ್ ಮ್ಯಾನ್ ಬಂಧನದ ಬಳಿಕ ವೀರೇಂದ್ರ ಹೆಗ್ಡೆ ಏನ್ ಅಂದ್ರು ? appeared first on Good News 24x7.

]]>
ಮಾಸ್ಕ್ ಮ್ಯಾನ್ ಕಕ್ಕಿದ ಸತ್ಯ ಏನು ಗೊತ್ತಾ ? https://www.goodnews24x7.com/mask-myan-ksakkida-satya-enu-gotta-bengalurusitdharmastala-crimecase-be%e1%b9%85ga%e1%b8%b7uru-tami%e1%b8%b7una%e1%b8%8dinallidda-cennayyage-ha%e1%b9%87ada-ami%e1%b9%a3avo%e1%b8%8d%e1%b8%8di-dha/ Sat, 23 Aug 2025 09:22:10 +0000 https://www.goodnews24x7.com/?p=6556 ಬೆಂಗಳೂರು: ತಮಿಳುನಾಡಿನಲ್ಲಿದ್ದ ಚೆನ್ನಯ್ಯಗೆ ಹಣದ ಆಮಿಷವೊಡ್ಡಿ ಧರ್ಮಸ್ಥಳ ವಿರೋಧಿ ಗ್ಯಾಂಗ್‌ ಕರೆದುಕೊಂಡು ಬಂದ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಹೌದು. ವಿಶೇಷ ತನಿಖಾ ತಂಡ (SIT) ತಮ್ಮ ಎಂದಿನ ಪೊಲೀಸ್‌ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಚೆನ್ನಯ್ಯ ಸತ್ಯ ಕಕ್ಕಿ ತಪ್ಪೊಪ್ಪಿಕೊಂಡಿರುವ ವಿಚಾರ…

The post ಮಾಸ್ಕ್ ಮ್ಯಾನ್ ಕಕ್ಕಿದ ಸತ್ಯ ಏನು ಗೊತ್ತಾ ? appeared first on Good News 24x7.

]]>

ಬೆಂಗಳೂರು: ತಮಿಳುನಾಡಿನಲ್ಲಿದ್ದ ಚೆನ್ನಯ್ಯಗೆ ಹಣದ ಆಮಿಷವೊಡ್ಡಿ ಧರ್ಮಸ್ಥಳ ವಿರೋಧಿ ಗ್ಯಾಂಗ್‌ ಕರೆದುಕೊಂಡು ಬಂದ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.

ಹೌದು. ವಿಶೇಷ ತನಿಖಾ ತಂಡ (SIT) ತಮ್ಮ ಎಂದಿನ ಪೊಲೀಸ್‌ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಚೆನ್ನಯ್ಯ ಸತ್ಯ ಕಕ್ಕಿ ತಪ್ಪೊಪ್ಪಿಕೊಂಡಿರುವ ವಿಚಾರ ಎಸ್‌ಐಟಿ ಮೂಲಗಳಿಂದ ತಿಳಿದು ಬಂದಿತ್ತು. ಇದನ್ನೂ ಓದಿ:ಎಲ್ಲಿಂದಲೋ ಬುರುಡೆ ತಂದು ಬುರುಡೆ ಬಿಟ್ಟಿದ್ದ ಚೆನ್ನಯ್ಯ! ಮೂಲಗಳ ಪ್ರಕಾರ ಧರ್ಮಸ್ಥಳಕ್ಕೆ ಬರುವ ಮೊದಲೇ ಮೂರು ಬಾರಿ ಈತನನ್ನು ತಂಡ ಭೇಟಿ ಮಾಡಿತ್ತು.

ಚಿನ್ನಯ್ಯ ಹೇಳಿದ್ದೇನು?
ಡಿಸೆಂಬರ್ ಕೊನೆಯ ವಾರದಲ್ಲಿ ತಮಿಳುನಾಡಿನಲ್ಲಿದ್ದ ನನ್ನನ್ನು ಧರ್ಮಸ್ಥಳ ದೇವಸ್ಥಾನದ ವಿರೋಧಿ ಗ್ಯಾಂಗ್‌ ಸಂಪರ್ಕಿಸಿತ್ತು. ಮಾತುಕತೆ ನಡೆಸುವ ವೇಳೆ ಹಣದ ಆಮಿಷ ಒಡ್ಡಿದ್ದರು. ಈ ಪ್ರಕರಣದ ಮುಖ್ಯ ನಾಯಕ ನೀನು. ನಿನ್ನಿಂದಲೇ ಈ ಪ್ರಕರಣಕ್ಕೆ ರೋಚಕ ತಿರುವು ಸಿಗುತ್ತದೆ ಎಂದು ಹೇಳಿದ್ದರು.

ಯಾವುದೇ ಕಾರಣಕ್ಕೂ ನೀನು ಭಯ ಪಡುವ ಅಗತ್ಯವಿಲ್ಲ. ತನಿಖೆಯಾದ ನಂತರ ಹಲವು ಜನ ದೂರುದಾರರು ಬರುತ್ತಾರೆ. ಎಲ್ಲ ತನಿಖೆ ನಡೆಯುತ್ತದೆ ಎಂದು ಭರವಸೆ ನೀಡಿದ್ದರು.

ಆರಂಭದಲ್ಲಿ ಬೆಂಗಳೂರಿನಲ್ಲಿ ನನಗೆ ಸ್ವಲ್ಪ ತರಬೇತಿ ನೀಡಲಾಗಿತ್ತು. ಪೊಲೀಸರು ಕೇಳಿದಾಗ ಯಾವ ರೀತಿ ಉತ್ತರ ಹೇಳಬೇಕು ಎನ್ನುವುದನ್ನು ತಿಳಿಸಲಾಗಿತ್ತು. ನಂತರ ಸೂತ್ರಧಾರರು ಹೇಳಿದಂತೆ ನಾನು ಪಾತ್ರ ಮಾಡುತ್ತಿದ್ದೆ. ಅವರು ಹೇಳಿದಂತೆ ನಾನು ಮಾಹಿತಿ ನೀಡುತ್ತಿದ್ದೆ ಎಂದು ಚಿನ್ನಯ್ಯ ತಿಳಿಸಿದ್ದ.

The post ಮಾಸ್ಕ್ ಮ್ಯಾನ್ ಕಕ್ಕಿದ ಸತ್ಯ ಏನು ಗೊತ್ತಾ ? appeared first on Good News 24x7.

]]>