cyber crime Archives - Good News 24x7 https://www.goodnews24x7.com/tag/cyber-crime/ Kannada Wed, 16 Apr 2025 12:32:33 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg cyber crime Archives - Good News 24x7 https://www.goodnews24x7.com/tag/cyber-crime/ 32 32 ಸೈಬರ್ ವಂಚಕನನ್ನು ಯಾಮಾರಿಸಿದ ಯುವತಿ, ವೈರಲ್ ಆಯ್ತು ವಿಡಿಯೋ…. https://www.goodnews24x7.com/%e0%b2%b8%e0%b3%88%e0%b2%ac%e0%b2%b0%e0%b3%8d-%e0%b2%b5%e0%b2%82%e0%b2%9a%e0%b2%95%e0%b2%a8%e0%b2%a8%e0%b3%8d%e0%b2%a8%e0%b3%81-%e0%b2%af%e0%b2%be%e0%b2%ae%e0%b2%be%e0%b2%b0%e0%b2%bf%e0%b2%b8%e0%b2%bf/ Wed, 16 Apr 2025 12:31:58 +0000 https://www.goodnews24x7.com/?p=3310 ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಏನಾದರೂ ಹೇಳಿದರೆ ಸಾಕು ಅದನ್ನು ಕಣ್ಣು ಮುಚ್ಚಿ ನಂಬುವ ಅದೆಷ್ಟೋ ಜನರಿದ್ದಾರೆ. ಈ ಸೈಬರ್ ವಂಚಕರು ಸುಳ್ಳು ಹೇಳಿ ಹಣ ಪಡೆಯುವ ಮೂಲಕ ಈಗಾಗಲೇ ಜನರನ್ನು…

The post ಸೈಬರ್ ವಂಚಕನನ್ನು ಯಾಮಾರಿಸಿದ ಯುವತಿ, ವೈರಲ್ ಆಯ್ತು ವಿಡಿಯೋ…. appeared first on Good News 24x7.

]]>

ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಏನಾದರೂ ಹೇಳಿದರೆ ಸಾಕು ಅದನ್ನು ಕಣ್ಣು ಮುಚ್ಚಿ ನಂಬುವ ಅದೆಷ್ಟೋ ಜನರಿದ್ದಾರೆ. ಈ ಸೈಬರ್ ವಂಚಕರು ಸುಳ್ಳು ಹೇಳಿ ಹಣ ಪಡೆಯುವ ಮೂಲಕ ಈಗಾಗಲೇ ಜನರನ್ನು ಮೋಸದ ಜಾಲಕ್ಕೆ ಬೀಳಿಸುತ್ತಿದ್ದಾರೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿಯೊಬ್ಬಳು ಸೈಬರ್ ವಂಚಕರನ್ನೇ ಯಾಮಾರಿಸಿದ್ದಾಳೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈಕೆಯ ಬುದ್ಧಿವಂತಿಕೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಕಾಲಮಾನ ಬದಲಾದಂತೆ ಎಲ್ಲವೂ ಬದಲಾಗುತ್ತಲೇ ಇದೆ. ಅದರಲ್ಲಿ ಸೈಬರ್ ವಂಚನೆಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಹೌದು, ಕೆಲಸ ಕೊಡಿಸುವುದಾಗಿ, ಆಧಾರ್ ಕಾರ್ಡ್ಅಪ್‌ಡೇಟ್ ಮಾಡಿಕೊಡುವುದಾಗಿ ಹಾಗೂ ಬ್ಯಾಂಕ್ ನಿಂದ ಕರೆ ಮಾಡಿರುವುದಾಗಿ ಹೀಗೆ ನಾನಾ ರೀತಿಯ ನೆಪ ಹೇಳಿಕೊಂಡು ಕರೆ ಮಾಡುವ ಸೈಬರ್ ವಂಚಕರ ಜಾಲಕ್ಕೆ ಕೆಲವರು ಅರಿವಿಲ್ಲದೇನೆ ಬಿದ್ದು ಹಣ ಕಳೆದುಕೊಳ್ಳುತ್ತಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿಯೊಬ್ಬಳಿಗೆ ತಂದೆಯ ಸ್ನೇಹಿತ ಎಂದು ಹೇಳಿಕೊಂಡು ಬಂದ ಸೈಬರ್ ವಂಚಕನನ್ನು ಹೇಗೆ ಯಾಮಾರಿಸಿದ್ದಾಳೆ ಎಂದು ನೋಡಬಹುದು.

ವಿಡಿಯೋದಲ್ಲಿ ಯುವತಿಗೆ ಕರೆಯೊಂದು ಬಂದಿದೆ. ಅದರಲ್ಲಿ, ಸೈಬರ್ ವಂಚಕನು ಯುವತಿಗೆ, ನಾನು ನಿನ್ನ ತಂದೆಯ ಸ್ನೇಹಿತ, ನಿನ್ನ ತಂದೆ ನನಗೆ ಹಣ ಬೇಕೆಂದು ಕೇಳಿದ್ದರು, ನಿನ್ನ ಮೊಬೈಲ್ ಗೆ ಹಣ ಹಾಕುತ್ತೇನೆ ಎಂದು ಹೇಳುವುದನ್ನು ನೋಡಬಹುದು. ಆ ವೇಳೆಯಲ್ಲಿ ಈತನು ಸೈಬರ್ ವಂಚಕ ಎಂದು ಅರಿವಿಗೆ ಬರುತ್ತಿದ್ದಂತೆ ಯುವತಿ ಕೂಡ ತನ್ನ ತಲೆ ಉಪಯೋಗಿಸಿದ್ದಾಳೆ. ಹೌದು, ಈ ಯುವತಿಯೂ ಆತನಿಗೆ ಹಣ ಹಾಕಿ ಎಂದು ಹೇಳಿದ್ದಾಳೆ. ಆ ವ್ಯಕ್ತಿಯೂ ಯುವತಿ ಖಾತೆಗೆ ಹತ್ತು ರೂಪಾಯಿ ಹಾಕಿದ್ದು,ಹಣ ಬಂದಿದೆಯೇ ಎಂದು ನೋಡಲು ಹೇಳಿದ್ದಾನೆ. ಯುವತಿ ಕೂಡ ಈ ಸ್ಕ್ಯಾಮರ್ ಹೇಳಿದ್ದಂತೆ ಹಣ ಬಂದಿದೆ ಎಂದು ಹೇಳುತ್ತಿದ್ದಂತೆ ಆಕೆಯ ಖಾತೆಗೆ ಹತ್ತು ಸಾವಿರ ರೂಪಾಯಿ ಹಣವನ್ನು ವರ್ಗಾಯಿಸಿದ್ದಾನೆ.

ಹಣ ಬಂದಿದ್ಯಾ ಎಂದು ಕೇಳಿದ್ದು ಯುವತಿಯೂ ಕೂಡ ಹೌದು ಎಂದಿದ್ದಾಳೆ. ಆ ಬಳಿಕ ಪುನಃ 2 ಸಾವಿರ ಹಾಕುವುದಾಗಿ ಸೈಬರ್ ವಂಚಕ ಹೇಳುವುದನ್ನು ನೋಡಬಹುದು. ಯುವತಿಯೂ ಓಕೆ ಎನ್ನುತ್ತಿದ್ದಂತೆ ಎರಡು ರೂಪಾಯಿ ಬದಲು ಇಪ್ಪತ್ತು ಸಾವಿರ ರೂಪಾಯಿ ಖಾತೆಗೆ ವರ್ಗಾಯಿಸಿದ್ದಾನೆ. ಈ ವಂಚಕನು ಪ್ಲ್ಯಾನ್ ಮಾಡಿ, ತಾನು ಮಿಸ್ ಆಗಿ ಇಪ್ಪತ್ತು ಸಾವಿರ ಹಣ ಹಾಕುವುದಾಗಿ ಹೇಳಿದ್ದಾನೆ. ಹೆಚ್ಚುವರಿ ಹಣವನ್ನು ಫೋನ್ ಪೇ ಮೂಲಕ ವಾಪಾಸ್ ಹಾಕುವುದಾಗಿ ಈ ವಂಚಕನು ಯುವತಿಗೆ ಹೇಳಿದ್ದಾನೆ. ಈ ವೇಳೆ ಚಾಲಾಕಿ ಯುವತಿಯೂ ತಾನು ಫೋನ್ ಪೇ ಓಪನ್ ಮಾಡಿರುವಂತೆ ನಾಟಕ ಮಾಡಿದ್ದು, ಕೊನೆಗೆ ಆತ ಈ ಹಿಂದೆ ಕಳುಹಿಸಿದ್ದ ನಕಲಿ ಸಂದೇಶವನ್ನೇ ಆತನಿಗೆ ಕಳುಹಿಸಿದ್ದಾಳೆ. ಆತನು ಹಣ ಬಂದಿಲ್ಲ ಎನ್ನುತ್ತಿದ್ದಂತೆ ಯುವತಿ ಕ್ಲಾಸ್ ತೆಗೆದುಕೊಂಡಿದ್ದಾಳೆ. ಕೊನೆಗೆ ತಾನು ಸೈಬರ್ ವಂಚಕನು ಎಂದು ಹೇಳಿ ಕೊನೆಗೆ ಕರೆ ಕಟ್ ಮಾಡಿದ್ದಾನೆ.ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ,ಬಳಕೆದಾರರು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ. ಇನ್ನೂ ಕೆಲವರು ‘ಈ ಯುವತಿ ಬಳಸಿದ ಟ್ರಿಕ್ಸ್ ನೋಡಿ ನಿಜಕ್ಕೂ ಖುಷಿಯಾಯಿತು’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಈ ರೀತಿಯಾಗಿ ಸೈಬರ್ ಕ್ರೈಂ ಆಗದಂತೆ ನೋಡಿಕೊಳ್ಳಿ. ಮುಂಜಾಗ್ರತೆಯಿಂದ ನಿಮ್ಮ ಜೀವನವನ್ನು ನಡೆಸಿ.

The post ಸೈಬರ್ ವಂಚಕನನ್ನು ಯಾಮಾರಿಸಿದ ಯುವತಿ, ವೈರಲ್ ಆಯ್ತು ವಿಡಿಯೋ…. appeared first on Good News 24x7.

]]>