Darshan Archives - Good News 24x7 https://www.goodnews24x7.com/tag/darshan/ Kannada Sun, 14 Sep 2025 08:56:40 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Darshan Archives - Good News 24x7 https://www.goodnews24x7.com/tag/darshan/ 32 32 ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಸಭ್ಯ ಕಮೆಂಟ್ ಪ್ರಕರಣ: 2 ನೋಟಿಸ್​​ಗೂ ಉತ್ತರ ನೀಡದ ವಿಜಯಲಕ್ಷ್ಮಿ https://www.goodnews24x7.com/indecent-comment-case-against-darshans-wife-vijayalakshmi-vijayalakshmi-does-not-respond-to-2-notices/ Sun, 14 Sep 2025 08:56:40 +0000 https://www.goodnews24x7.com/?p=7522 ವಿಜಯಲಕ್ಷ್ಮಿ ದರ್ಶನ್ ಅವರಿಗೆ ಅಶ್ಲೀಲ, ಅಸಭ್ಯ ಕಮೆಂಟ್ ಬಂದಿದೆ ಎಂದು ದೂರು ನೀಡಲಾಗಿತ್ತು. ಆದರೆ ಅದಕ್ಕೆ ಸಂಬಂಧಿಸಿದ ನೋಟಿಸ್​​ಗಳಿಗೆ ವಿಜಯಲಕ್ಷ್ಮಿ ಅವರು ಯಾವುದೇ ಉತ್ತರ ನೀಡುತ್ತಿಲ್ಲ. ಈಗಾಗಲೇ ಎರಡು ನೋಟಿಸ್ ಕಳಿಸಿರುವ ಪೊಲೀಸರು ಮೂರನೇ ನೋಟಿಸ್ ಕಳಿಸಲು ಮುಂದಾಗಿದ್ದಾರೆ. ಆ ಬಗ್ಗೆ…

The post ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಸಭ್ಯ ಕಮೆಂಟ್ ಪ್ರಕರಣ: 2 ನೋಟಿಸ್​​ಗೂ ಉತ್ತರ ನೀಡದ ವಿಜಯಲಕ್ಷ್ಮಿ appeared first on Good News 24x7.

]]>

ವಿಜಯಲಕ್ಷ್ಮಿ ದರ್ಶನ್ ಅವರಿಗೆ ಅಶ್ಲೀಲ, ಅಸಭ್ಯ ಕಮೆಂಟ್ ಬಂದಿದೆ ಎಂದು ದೂರು ನೀಡಲಾಗಿತ್ತು. ಆದರೆ ಅದಕ್ಕೆ ಸಂಬಂಧಿಸಿದ ನೋಟಿಸ್​​ಗಳಿಗೆ ವಿಜಯಲಕ್ಷ್ಮಿ ಅವರು ಯಾವುದೇ ಉತ್ತರ ನೀಡುತ್ತಿಲ್ಲ. ಈಗಾಗಲೇ ಎರಡು ನೋಟಿಸ್ ಕಳಿಸಿರುವ ಪೊಲೀಸರು ಮೂರನೇ ನೋಟಿಸ್ ಕಳಿಸಲು ಮುಂದಾಗಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..

ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿಗೆ ಕೆಡಿಗೇಡಿಗಳು ಅಸಭ್ಯ ಕಮೆಂಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭ ಆಗಿತ್ತು. ಅಶ್ಲೀಲ ಕಮೆಂಟ್​​ಗಳಿಗೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ವಿಜಯಲಕ್ಷ್ಮಿ ಅವರಿಗೆ ಪೊಲೀಸರು ಎರಡು ಬಾರಿ ನೋಟಿಸ್ ಕಳಿಸಿದ್ದಾರೆ. ಆದರೆ ಈ ಎರಡೂ ನೋಟಿಸ್​​ಗಳಿಗೆ ಅವರು ಉತ್ತರ ನೀಡಿಲ್ಲ! ಘಟನೆ ಬಗ್ಗೆ ಹೇಳಿಕೆ ದಾಖಲಿಸಿಕೊಳ್ಳಲು ಚೆನ್ನಮ್ಮನಕರೆ ಅಚ್ಚುಕಟ್ಟು ಪೊಲೀಸರಿಂದ ನೋಟಿಸ್ ಕಳಿಸಲಾಗಿದೆ. ಪೊಲೀಸರ ನೋಟಿಸ್​​ಗಳಿಗೆ ವಿಜಯಲಕ್ಷ್ಮಿ ಅವರು ಕ್ಯಾರೇ ಎನ್ನುತ್ತಿಲ್ಲ.
ವಿಜಯಲಕ್ಷ್ಮಿ ದರ್ಶನ್ ಬಗ್ಗೆ ಕೆಟ್ಟ ಕಮೆಂಟ್​​ಗಳು ಬಂದಿವೆ ಎಂದು ಮಹಿಳಾ ಆಯೋಗಕ್ಕೆ ದೂರು ನೀಡಲಾಗಿತ್ತು. ಹಾಗಾಗಿ ಮಹಿಳಾ ಆಯೋಗದಿಂದ ಸುಮೋಟೊ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಲಾಗಿತ್ತು. ಎರಡು ನೋಟಿಸ್​​ಗಳಿಗೂ ವಿಜಯಲಕ್ಷ್ಮಿ ಅವರಿಂದ ಯಾವುದೇ ಉತ್ತರ ಬಾರದ ಹಿನ್ನೆಲೆಯಲ್ಲಿ ಈಗ ಮೂರನೇ ನೋಟಿಸ್ ನೀಡಲು ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರ ಸಿದ್ಧತೆ ಮಾಡಿಕೊಂಡಿದ್ದಾರೆ.

ಒಂದು ವೇಳೆ, ಮೂರನೇ ನೋಟಿಸ್​ಗೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎಂದಾದರೆ ಪೊಲೀಸರು ಈ ಪ್ರಕರಣವನ್ನು ಮುಕ್ತಾಯ ಮಾಡಲಿದ್ದಾರೆ. ನ್ಯಾಯಾಲಯಕ್ಕೆ ಸಿ ರಿಪೋರ್ಟ್ ಸಲ್ಲಿಕೆ ಮಾಡಲಿದ್ದಾರೆ. ಮುಂದಿನ ತನಿಖೆಗೆ ಯಾವುದೇ ಮಾಹಿತಿ ಅಥವಾ ಲೀಡ್ ಸಿಗುತ್ತಿಲ್ಲ ಎಂದು ಸಿ ರಿಪೋರ್ಟ್ ಸಲ್ಲಿಕೆ ಮಾಡಲಾಗುತ್ತದೆ. ಈಗಲಾದರೂ ವಿಜಯಲಕ್ಷ್ಮಿ ಅವರು ನೋಟಿಸ್​​ಗೆ ಪ್ರತಿಕ್ರಿಯಿಸುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕು.

ಕಳೆದ ಎರಡು ವರ್ಷಗಳ ಹಿಂದಿನ ಕಾಮೆಂಟ್​​ಗೆ ಇತ್ತೀಚೆಗೆ ದೂರು ನೀಡಲಾಯಿತು. 6 ಟ್ವಿಟರ್ ಖಾತೆಗಳು ಕೂಡ ಎರಡು ವರ್ಷಗಳ ಹಿಂದೆಯೇ ಡಿಲೀಟ್ ಆಗಿವೆ. ಕಳೆದ ಎರಡು ವರ್ಷಗಳಿಂದ ಆರು ಟ್ಟಿಟರ್ ಅಕೌಂಟ್​​ಗಳಿಂದ ಯಾವುದೇ ಮೆಸೇಜ್​​ಗಳು ವಿನಿಮಯ ಆಗಿಲ್ಲ. ಈ ಎಲ್ಲ ಮಾಹಿತಿಯನ್ನು ಕಲೆ ಹಾಕಿರುವ ಸಿಕೆ ಅಚ್ಚುಕಟ್ಟು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿದ್ದಾರೆ. ಅವರು ಅರೆಸ್ಟ್ ಆದಾಗಿನಿಂದ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಟ್ಟಿಗರು ಪರ-ವಿರೋಧ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಭರದಲ್ಲಿ ಕೆಲವರು ಅಸಭ್ಯ, ಅಶ್ಲೀಲ ಪದ ಬಳಕೆ ಮಾಡುತ್ತಿದ್ದಾರೆ.

The post ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಸಭ್ಯ ಕಮೆಂಟ್ ಪ್ರಕರಣ: 2 ನೋಟಿಸ್​​ಗೂ ಉತ್ತರ ನೀಡದ ವಿಜಯಲಕ್ಷ್ಮಿ appeared first on Good News 24x7.

]]>
ವಿಷ ಕೊಡಿ ಎಂದ ದರ್ಶನ್​ ಬಿಗ್ ರಿಲೀಫ್ ನೀಡಿದ ಕೋರ್ಟ್ https://www.goodnews24x7.com/court-gives-big-relief-to-darshan-who-asked-to-give-him-poison/ Tue, 09 Sep 2025 12:01:13 +0000 https://www.goodnews24x7.com/?p=7424 ನಟ ದರ್ಶನ್​​ಗೆ ಬೆಂಗಳೂರು ಸೆಷನ್ಸ್ ಕೋರ್ಟ ಬಿಗ್ ರಿಲೀಫ್ ನೀಡಿದೆ. ದರ್ಶನ್​ರನ್ನು ಬಳ್ಳಾರಿ ಜೈಲಿಗೆ ವರ್ಗಾವಣೆ ಮಾಡಬೇಕೆಂಬ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ. ಅಲ್ಲದೆ, ಅಲ್ಲದೆ, ದರ್ಶನ್​ಗೆ ಹೆಚ್ಚುವರಿ ಹಾಸಿಗೆ, ದಿಂಬು ನೀಡಲು ಅನುಮತಿ ನೀಡಿದೆ. ಇದರೊಂದಿಗೆ ದರ್ಶನ್​ಗೆ ಬಿಗ್ ರಿಲೀಫ್ ದೊರೆತಂತಾಗಿದೆ.…

The post ವಿಷ ಕೊಡಿ ಎಂದ ದರ್ಶನ್​ ಬಿಗ್ ರಿಲೀಫ್ ನೀಡಿದ ಕೋರ್ಟ್ appeared first on Good News 24x7.

]]>

ನಟ ದರ್ಶನ್​​ಗೆ ಬೆಂಗಳೂರು ಸೆಷನ್ಸ್ ಕೋರ್ಟ ಬಿಗ್ ರಿಲೀಫ್ ನೀಡಿದೆ. ದರ್ಶನ್​ರನ್ನು ಬಳ್ಳಾರಿ ಜೈಲಿಗೆ ವರ್ಗಾವಣೆ ಮಾಡಬೇಕೆಂಬ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ. ಅಲ್ಲದೆ, ಅಲ್ಲದೆ, ದರ್ಶನ್​ಗೆ ಹೆಚ್ಚುವರಿ ಹಾಸಿಗೆ, ದಿಂಬು ನೀಡಲು ಅನುಮತಿ ನೀಡಿದೆ. ಇದರೊಂದಿಗೆ ದರ್ಶನ್​ಗೆ ಬಿಗ್ ರಿಲೀಫ್ ದೊರೆತಂತಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್​ (Darshan) ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲು ಕೋರ್ಟ್ ನಿರಾಕರಿಸಿದೆ. ಅಲ್ಲದೆ, ಅವರ ಕೆಲವು ಬೇಡಿಕೆಗಳನ್ನು ಈಡೇರಿಸಲು ಸಮ್ಮತಿಸಿದ್ದು, ಬಿಗ್ ರಿಲೀಫ್ ದೊರೆತಂತಾಗಿದೆ. A2 ದರ್ಶನ್ ಅನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲು ಸಕಾರಣಗಳಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೆ, ಕೊಲೆ ಆರೋಪಿ ದರ್ಶನ್​ಗೆ ಜೈಲಿನ ಆವರಣದಲ್ಲಿ ಓಡಾಡಲು ಅನುಮತಿ ಕೊಟ್ಟಿದೆ.
ದರ್ಶನ್ ಮನವಿಗೆ ಸ್ಪಂದಿಸಿದ ಕೋರ್ಟ್ ಹೆಚ್ಚುವರಿ ದಿಂಬು ಹಾಗೂ ಬೇಡ್​​ಶೀಟ್​ಗಾಗಿ ದರ್ಶನ್ ಮಾಡಿದ್ದ ಮನವಿಯನ್ನು ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯ ಪುರಸ್ಕರಿಸಿದೆ. ದರ್ಶನ್​ಗೆ ಹೆಚ್ಚುವರಿ ಹಾಸಿಗೆ ಮತ್ತು ದಿಂಬು ನೀಡಲು ಅನುಮತಿ ನೀಡಿದೆ. ಆದರೆ, ಜೈಲಿನ ಕೈಪಿಡಿ ಅನುಸರಿಸಬೇಕು ಎಂದು ನ್ಯಾಯಾಲಯ ಸೂಚನೆ ನೀಡಿದೆ. ಜೈಲು ನಿಯಮ ಉಲ್ಲಂಘಿಸಿದರೆ ಜೈಲು ಐಜಿಯಿಂದ ಕ್ರಮ ಜರುಗಿಸಬೇಕು. ನಿಯಮ ಉಲ್ಲಂಘಿಸಿದ್ದೇ ಆದಲ್ಲಿ ಬೇರೆ ಜೈಲಿಗೆ ಸ್ಥಳಾಂತರಿಸಲು ಐಜಿ ಕ್ರಮ ಕೈಗೊಳ್ಳಬಹುದು ಎಂದೂ ಆದೇಶದಲ್ಲಿ ನ್ಯಾಯಾಲಯ ತಿಳಿಸಿದೆ.

ವಿಷ ಕೊಡಿ ಎಂದಿದ್ದ ದರ್ಶನ್: ತೀರ್ಪಿಗೂ ಮುನ್ನ ವಿಚಾರಣೆ ವೇಳೆ ಜಡ್ಜ್ ಬಳಿ ಮನವಿ ಮಾಡಿದ್ದ ದರ್ಶನ್, ‘ನಾನು ಬಿಸಿಲು ನೋಡಿ 30 ದಿನಗಳಾಗಿವೆ. ಕೈ ಎಲ್ಲಾ ಫಂಗಸ್ ಬಂದಿದೆ. ಬೇರೆ ಯಾರಿಗೂ ಬೇಡ, ನನಗೆ ಮಾತ್ರ ವಿಷ ನೀಡಲಿ. ಕೋರ್ಟ್​​ನಿಂದಲೇ ಈ ಆದೇಶ ನೀಡಬೇಕು’ ಎಂದು ಮನವಿ ಮಾಡಿದ್ದರು. ಆಗ ಜಡ್ಜ್ ‘ನೀವು ಹಾಗೆಲ್ಲಾ ಹೇಳುವಂತಿಲ್ಲ’ ಎಂದಿದ್ದರು.

ವಿಷ ಕೊಡಿ ಎಂದಿದ್ದೇಕೆ ದರ್ಶನ್? ಸುಪ್ರೀಂ ಕೋರ್ಟ್​ ಖಡಕ್ ಸೂಚನೆಯ ನಂತರ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊದಲಿನಂತೆ ವಿಐಪಿ ಸೌಲಭ್ಯ ಸಿಗುತ್ತಿರಲಿಲ್ಲ. ರಾಜಾತಿಥ್ಯ ಸಿಗುತ್ತಿರಲಿಲ್ಲ. ಜೈಲಿನಲ್ಲಿ ಓರ್ವ ಸಾಮಾನ್ಯ ಖೈದಿಯಂತೆ ಪರಿಗಣಿಸಲಾಗುತ್ತಿತ್ತು. ಜೈಲಿನ ಖೈದಿಗಳ ಕೊಠಡಿಯಿಂದಲೂ ಹೊರಗೆ ಬರಲಾಗುತ್ತಿರಲಿಲ್ಲ. ಇದರಿಂದ ನರಕಯಾತನೆ ಅನುಭವಿಸುತ್ತಿರುವ ದರ್ಶನ್ ವಿಷ ಕೊಡಿ ಎಂದು ಮನವಿ ಮಾಡಿದ್ದರು. ಇದೀಗ ಕೋರ್ಟ್ ಸಹ ದರ್ಶನ್ ಬಗ್ಗೆ ತುಸು ಕನಿಕರ ತೋರಿದ್ದು, ಹಾಸಿಗೆ ದಿಂಬು ಹಾಗೂ ಜೈಲಿನಲ್ಲಿ ಓಡಾಡಲು ಅನುಮತಿ ನೀಡಿ ಆದೇಶ ಹೊರಡಿಸಿದೆ. ಇದರಿಂದ ದರ್ಶನ್​ಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.

The post ವಿಷ ಕೊಡಿ ಎಂದ ದರ್ಶನ್​ ಬಿಗ್ ರಿಲೀಫ್ ನೀಡಿದ ಕೋರ್ಟ್ appeared first on Good News 24x7.

]]>
ದಾಸನಿಗಿಲ್ಲ ಜೈಲಿನಲ್ಲಿ ರಾಜಾತಿಥ್ಯ.. ದರ್ಶನ್​ಗೆ ಬೆಡ್​ಶೀಟ್, ಹಾಸಿಗೆ ನೀಡಲು ಹಿಂದೇಟು https://www.goodnews24x7.com/dasani-does-not-have-royal-hospitality-in-jail-darshan-is-hesitant-to-provide-bedsheets-and-bedding/ Sat, 06 Sep 2025 07:53:22 +0000 https://www.goodnews24x7.com/?p=7415 ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿಯಾಗಿರೋ ನಟ ದರ್ಶನ್​​​ ಬಳ್ಳಾರಿ ಜೈಲು ಭವಿಷ್ಯ ಸೆಪ್ಟೆಂಬರ್ 9ಕ್ಕೆ ನಿರ್ಧಾರ ಆಗಲಿದೆ. ಈ ಮಧ್ಯೆ ದಾಸನಿಗೆ ಜೈಲಿನ ಅಸಲಿ ದರ್ಶನ ಆಗ್ತಿದ್ದು ಹೆಚ್ಚುವರಿ ಸೌಲಭ್ಯ ಕೊಡಲು ಜೈಲಾಧಿಕಾರಿಗಳೇ ಹಿಂದೇಟು ಹಾಕ್ತಿದ್ದಾರೆ. ಯಾಕೆ ಗೊತ್ತಾ? ಚಿತ್ರದುರ್ಗದ ರೇಣುಕಾಸ್ವಾಮಿ…

The post ದಾಸನಿಗಿಲ್ಲ ಜೈಲಿನಲ್ಲಿ ರಾಜಾತಿಥ್ಯ.. ದರ್ಶನ್​ಗೆ ಬೆಡ್​ಶೀಟ್, ಹಾಸಿಗೆ ನೀಡಲು ಹಿಂದೇಟು appeared first on Good News 24x7.

]]>

ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿಯಾಗಿರೋ ನಟ ದರ್ಶನ್​​​ ಬಳ್ಳಾರಿ ಜೈಲು ಭವಿಷ್ಯ ಸೆಪ್ಟೆಂಬರ್ 9ಕ್ಕೆ ನಿರ್ಧಾರ ಆಗಲಿದೆ. ಈ ಮಧ್ಯೆ ದಾಸನಿಗೆ ಜೈಲಿನ ಅಸಲಿ ದರ್ಶನ ಆಗ್ತಿದ್ದು ಹೆಚ್ಚುವರಿ ಸೌಲಭ್ಯ ಕೊಡಲು ಜೈಲಾಧಿಕಾರಿಗಳೇ ಹಿಂದೇಟು ಹಾಕ್ತಿದ್ದಾರೆ. ಯಾಕೆ ಗೊತ್ತಾ? ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ನಟ ದರ್ಶನ್​​ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲುವಾಸ ಅನುಭವಿಸ್ತಿದ್ದಾರೆ.. ಕೆಲ ದಿನಗಳಲ್ಲೇ ಟ್ರಯಲ್ ಕೋರ್ಟ್​ನಲ್ಲಿ ವಿಚಾರಣೆ ಆರಂಭ ಆಗಲಿದ್ದು ಬಳ್ಳಾರಿಗೆ ಶಿಫ್ಟ್ ಆಗ್ತಾರಾ ಅಥವಾ ಇಲ್ವಾ

ನಟ ದರ್ಶನ್​ಗೆಗೆ ಪರಪ್ಪನ ಅಗ್ರಹಾರ ಜೈಲು ನರಕವಾಗಿ ಪರಿಣಮಿಸಿದೆ. ಹೀಗಾಗಿ ಹಾಸಿಗೆ, ದಿಂಬು ಹಾಗೂ ಮನೆ ಊಟಕ್ಕೆ ಅನುಮತಿ ಕೋರಿ ನ್ಯಾಯಾಲಯದಲ್ಲಿ ವಿಚಾರಣೆ ನಡೀತಿದ್ದು ಇನ್ನಷ್ಟೇ ತೀರ್ಮಾನ ಆಗ್ಬೇಕಿದೆ.. ಈ ನಡುವೆ ನಟ ದರ್ಶನ್​ಗೆ ರಾಜಾತಿಥ್ಯ ಸಿಗುತ್ತಾ, ಇಲ್ವಾ ಅನುಮಾನ ಮೂಡಿಸಿದೆ.. ಈ ಹಿಂದೆಯೂ ಜೈಲಿನ ನಿಯಮದ ಪ್ರಕಾರ ಸೌಕರ್ಯ ನೀಡಿದ್ರೂ ಕೈದಿಗಳು ಅದನ್ನು ದುರುಪಯೋಗ ಪಡಿಸಿಕೊಂಡಿದ್ದರು. ಮತ್ತೊಂದೆಡೆ ದರ್ಶನ್​ಗೆ ಸೌಲಭ್ಯ ನೀಡಿದ್ದಕ್ಕೆ ಗರಂ ಆಗಿದ್ದ ಸುಪ್ರೀಂಕೋರ್ಟ್ ಅಧಿಕಾರಿಗಳಿಗೆ ಅಮಾನತಿಗೆ ಎಚ್ಚರಿಕೆ ಕೂಡ ನೀಡಿತ್ತು.. ಹೀಗಾಗಿ ನಟ ದರ್ಶನ್​ಗೆ ಜೈಲಾಧಿಕಾರಿಗಳು ಸೌಕರ್ಯ ಕೊಡಲು ಹಿಂದೇಟು ಹಾಕ್ತಿದ್ದಾರೆ.

ದಾಸನಿಗಿಲ್ಲ ರಾಜಾತಿಥ್ಯ!

ದಪ್ಪನೆ ಹಾಸಿಗೆಗಳಲ್ಲಿ ಮೊಬೈಲ್, ಸಿಮ್ ಕಾರ್ಡ್ ಇಡುವ ಸಾಧ್ಯತೆ
ಈ ಹಿಂದೆ ಹಲವರ ಬಳಿ ಮೊಬೈಲ್ ಸಿಮ್ ಪತ್ತೆ ಹಚ್ಚಿ ಪೊಲೀಸರು
ಜೈಲಿನ ಮೇಲೆ ಸಿಸಿಬಿ ದಾಳಿಯ ವೇಳೆಯೂ ಮೊಬೈಲ್​ಗಳು ಪತ್ತೆ
ಹಾಸಿಗೆ, ದಿಂಬುಗಳಲ್ಲಿ ಮೊಬೈಲ್​ಗಳನ್ನು ಅಡಗಿಸಿಡುವ ಆತಂಕ
ಹಳೆಯ ಘಟನೆಗಳಿಂದ ಆರೋಪಿ ದರ್ಶನ್ ಮೇಲೂ ಪರಿಣಾಮ
ಅಲ್ಲದೇ ರಾಜಾತಿಥ್ಯ ವಿಚಾರವಾಗಿ ಸುಪ್ರೀಂಕೋರ್ಟ್ ತರಾಟೆ
ಸೆಲೆಬ್ರಿಟಿ ಅಂತಾ ವಿಶೇಷ ಫೆಸಿಲಿಟಿ ಕೊಡಬಾರದು ಅಂತ ಆದೇಶ
ಅಂತಹ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ
ಆದೇಶದ ಮಧ್ಯೆಯೂ ವ್ಯವಸ್ಥೆ ಮಾಡಿದ್ರೆ ಕುತ್ತು ಬರುವ ಆತಂಕ
ದರ್ಶನ್​ಗೆ ಸವಲತ್ತು ಕೊಟ್ರೆ ಉಳಿದ ಕೈದಿಗಳು ಕೇಳುವ ಸಾಧ್ಯತೆ
ಇದೇ ಕಾರಣ ದರ್ಶನ್​ಗೆ ಬೆಡ್​ಶೀಟ್, ಹಾಸಿಗೆ ನೀಡಲು ಹಿಂದೇಟು

ಒಂದ್ಕಡೆ ಸುಪ್ರೀಂ ಕೋರ್ಟ್ ಭಯ.. ಮತ್ತೊಂದೆಡೆ ಉಳಿದ ಕೈದಿಗಳು ಸೌಲಭ್ಯ ಕೇಳುವ ಪರಿಸ್ಥಿತಿ ಇದೆ, ಬೆನ್ನುನೋವು ಸೇರಿ ಇತರೆ ಆರೋಗ್ಯ ಸಮಸ್ಯೆಗಳಿದ್ದು ಹಾಸಿಗೆ, ತಲೆದಿಂಬು ಇಲ್ಲದೆ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ. ಜೈಲೂಟ ಕೂಡ ದೇಹಕ್ಕೆ ಒಗ್ಗದೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದೇನೆ. ಹೀಗಾಗಿ ಕನಿಷ್ಠ ಸೌಲಭ್ಯ ನೀಡ್ಬೇಕು ಅಂತ ದರ್ಶನ್ ಮನವಿ ಮಾಡಿದ್ದಾರೆ.. ಸದ್ಯ ಸೆಪ್ಟೆಂಬರ್ 9ಕ್ಕೆ ಬಳ್ಳಾರಿ ಜೈಲಿಗೆ ಶಿಫ್ಟ್ ಆಗ್ತಾರಾ ಅಥವಾ ಇಲ್ವಾ ಅನ್ನೋ ತೀರ್ಪು ಹೊರಬೀಳಲಿದೆ.. ಆವತ್ತೇ ಜೈಲಲ್ಲಿ ಸವಲತ್ತು ನೀಡುವ ಕುರಿತು ಕೋರ್ಟ್​ ತೀರ್ಪು ನೀಡುವ ಸಾಧ್ಯತೆ ಇದೆ, ಅದೇನೇ ಇರಲಿ, ಬಣ್ಣದ ಲೋಕದಲ್ಲಿ ಕೋಟ್ಯಂತರ ಅಭಿಮಾನಿಗಳ ದಾಸನ ಪರಿಸ್ಥಿತಿ ಮಾತ್ರ​​​ ಮಾಡಿದ್ದುಣ್ಣೋ ಮಹರಾಯ ಎನ್ನುವಂತಾಗಿದೆ.

The post ದಾಸನಿಗಿಲ್ಲ ಜೈಲಿನಲ್ಲಿ ರಾಜಾತಿಥ್ಯ.. ದರ್ಶನ್​ಗೆ ಬೆಡ್​ಶೀಟ್, ಹಾಸಿಗೆ ನೀಡಲು ಹಿಂದೇಟು appeared first on Good News 24x7.

]]>
ಶಿವರಾಜ್​ಕುಮಾರ್ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಮಡೆನೂರು ಮನು https://www.goodnews24x7.com/madenoor-manu-fell-at-shivaraj-kumars-feet-and-apologized/ Tue, 26 Aug 2025 06:42:16 +0000 https://www.goodnews24x7.com/?p=6740 ಮಡೆನೂರು ಮನು ಅವರು ಇತ್ತೀಚೆಗೆ ಸಾಕಷ್ಟು ಸುದ್ದಿ ಆಗಿದ್ದರು. ಇದಕ್ಕೆ ಕಾರಣ ಆಗಿದ್ದು ಅವರು ನಡೆದು ಕೊಂಡ ರೀತಿ. ಅವರು ಶಿವರಾಜ್​ಕುಮಾರ್, ದರ್ಶನ್, ಧ್ರುವ ಸೇರಿದಂತೆ ಅನೇಕ ಸೆಲೆಬ್ರಿಟಿಗಳ ಬಗ್ಗೆ ತುಚ್ಚವಾಗಿ ಮಾತನಾಡಿದ್ದರು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈ ಹೇಳಿಕೆ…

The post ಶಿವರಾಜ್​ಕುಮಾರ್ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಮಡೆನೂರು ಮನು appeared first on Good News 24x7.

]]>

ಮಡೆನೂರು ಮನು ಅವರು ಇತ್ತೀಚೆಗೆ ಸಾಕಷ್ಟು ಸುದ್ದಿ ಆಗಿದ್ದರು. ಇದಕ್ಕೆ ಕಾರಣ ಆಗಿದ್ದು ಅವರು ನಡೆದು ಕೊಂಡ ರೀತಿ. ಅವರು ಶಿವರಾಜ್​ಕುಮಾರ್, ದರ್ಶನ್, ಧ್ರುವ ಸೇರಿದಂತೆ ಅನೇಕ ಸೆಲೆಬ್ರಿಟಿಗಳ ಬಗ್ಗೆ ತುಚ್ಚವಾಗಿ ಮಾತನಾಡಿದ್ದರು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈ ಹೇಳಿಕೆ ಬೆನ್ನಲ್ಲೇ ಧ್ರುವ ಸರ್ಜಾ ಬಳಿ ತೆರಳಿ ಅವರು ಕ್ಷಮೆ ಕೇಳಿದ್ದರು. ಈಗ ಶಿವರಾಜ್​ಕುಮಾರ್ ಕಾಲಿಗೆ ಬಿದ್ದು ಮನು ಕ್ಷಮೆ ಕೇಳಿದ್ದಾರೆ.

The post ಶಿವರಾಜ್​ಕುಮಾರ್ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಮಡೆನೂರು ಮನು appeared first on Good News 24x7.

]]>
ಡಿಸೆಂಬರ್ 12ಕ್ಕೆ ‘ದಿ ಡೆವಿಲ್’ ಸಿನಿಮಾ ಬಿಡುಗಡೆ, ದರ್ಶನ್ ಅಭಿಮಾನಿಗಳಿಗೆ ಹಬ್ಬ https://www.goodnews24x7.com/the-devil-movie-to-release-on-december-12-a-feast-for-darshan-fans/ Sun, 24 Aug 2025 08:23:44 +0000 https://www.goodnews24x7.com/?p=6649 ದರ್ಶನ್ ಅಭಿಮಾನಿಗಳ ಪಾಲಿನ ಬಹುನಿರೀಕ್ಷಿತ ‘ದಿ ಡೆವಿಲ್’ ಸಿನಿಮಾ ಈ ವರ್ಷವೇ ತೆರೆಕಾಣಲಿದೆ. ಡಿಸೆಂಬರ್ 12ರಂದು ಸಿನಿಮಾ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ರಿಲೀಸ್ ಡೇಟ್ ಅನೌನ್ಸ್ ಆಗಿದೆ. ದರ್ಶನ್ ಅವರು ಜೈಲಿನಲ್ಲಿ ಇದ್ದರೂ ಕೂಡ ಸಿನಿಮಾದ ಬಿಡುಗಡೆಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ.…

The post ಡಿಸೆಂಬರ್ 12ಕ್ಕೆ ‘ದಿ ಡೆವಿಲ್’ ಸಿನಿಮಾ ಬಿಡುಗಡೆ, ದರ್ಶನ್ ಅಭಿಮಾನಿಗಳಿಗೆ ಹಬ್ಬ appeared first on Good News 24x7.

]]>

ದರ್ಶನ್ ಅಭಿಮಾನಿಗಳ ಪಾಲಿನ ಬಹುನಿರೀಕ್ಷಿತ ‘ದಿ ಡೆವಿಲ್’ ಸಿನಿಮಾ ಈ ವರ್ಷವೇ ತೆರೆಕಾಣಲಿದೆ. ಡಿಸೆಂಬರ್ 12ರಂದು ಸಿನಿಮಾ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ರಿಲೀಸ್ ಡೇಟ್ ಅನೌನ್ಸ್ ಆಗಿದೆ. ದರ್ಶನ್ ಅವರು ಜೈಲಿನಲ್ಲಿ ಇದ್ದರೂ ಕೂಡ ಸಿನಿಮಾದ ಬಿಡುಗಡೆಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ನಟ ದರ್ಶನ್ ಅವರು ‘ದಿ ಡೆವಿಲ್’ ಸಿನಿಮಾದ ತಮ್ಮ ಪಾಲಿನ ಎಲ್ಲ ಕೆಲಸಗಳನ್ನು ಮುಗಿಸಿಕೊಟ್ಟಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿ ಅವರು ಜೈಲು ಸೇರಿದ್ದಾರೆ. ಹಾಗಿದ್ದರೂ ಕೂಡ ಸಿನಿಮಾ ಬಿಡುಗಡೆಗೆ ತೊಂದರೆ ಆಗಬಾರದು ಎಂದು ಅವರು ನಿರ್ಧರಿಸಿದ್ದಾರೆ. ಆದ್ದರಿಂದ ದರ್ಶನ್ ಅನುಪಸ್ಥಿತಿಯಲ್ಲೇ ‘ದಿ ಡೆವಿಲ್’ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ತೀರ್ಮಾನಿಸಿದೆ. ಈಗ ಈ ಚಿತ್ರದ ರಿಲೀಸ್ ದಿನಾಂಕ ಪ್ರಕಟಿಸಲಾಗಿದೆ. ಇದೇ ವರ್ಷ ಈ ಸಿನಿಮಾ ಬಿಡುಗಡೆ ಆಗಲಿದೆ. ಡಿಸೆಂಬರ್ 12ರಂದು ‘ದಿ ಡೆವಿಲ್’ ಸಿನಿಮಾ ಅದ್ದೂರಿಯಾಗಿ ತೆರೆಕಾಣಲಿದೆ. ದರ್ಶನ್, ರಚನಾ ರೈ, ಶರ್ಮಿಳಾ ಮಾಂಡ್ರೆ ಮುಂತಾದವರು ‘ದಿ ಡೆವಿಲ್’ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರಕಾಶ್ ವೀರ್ ಅವರು ನಿರ್ದೇಶನ ಮಾಡಿದ್ದಾರೆ. ಅಭಿಮಾನಿಗಳಿಗೆ ಈ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. ಈಗಾಗಲೇ ಟೀಸರ್ ಗಮನ ಸೆಳೆದಿದೆ. ಅಲ್ಲದೇ, ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡು ಕೂಡ ಬಿಡುಗಡೆಯಾಗಿ ಧೂಳೆಬ್ಬಿಸುತ್ತಿದೆ.

ಆಗಸ್ಟ್ 24ರಂದು ದರ್ಶನ್ ಅಭಿಮಾನಿಗಳಿಗೆ ಡಬಲ್ ಧಮಾಕಾ ಎದುರಾಯಿತು. ಬೆಳಗ್ಗೆ 10 ಗಂಟೆ 3 ನಿಮಿಷಯಕ್ಕೆ ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ ಆಯಿತು. ಅದರ ಬೆನ್ನಲ್ಲೇ ಚಿತ್ರತಂಡದವರು ರಿಲೀಸ್ ದಿನಾಂಕವನ್ನು ಅನೌನ್ಸ್ ಮಾಡಿದರು. ಇದು ಅಭಿಮಾನಿಗಳಿಗೆ ಸರ್ಪ್ರೈಸ್ ಆಗಿತ್ತು. ಒಟ್ಟಿನಲ್ಲಿ ‘ದಿ ಡೆವಿಲ್’ ಸಿನಿಮಾದ ಪ್ರಚಾರ ಕಾರ್ಯಕ್ಕೆ ಚುರುಕು ಮುಟ್ಟಿಸಲಾಗಿದೆ. ದರ್ಶನ್ ಅವರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ‘ದಿ ಡೆವಿಲ್’ ಸಿನಿಮಾದ ರಿಲೀಸ್ ಡೇಟ್ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಜೈಲಿನಲ್ಲಿ ಇರುವ ಅವರ ಖಾತೆಯನ್ನು ಈಗ ಪತ್ನಿ ವಿಜಯಲಕ್ಷ್ಮಿ ಅವರು ನಿಭಾಯಿಸುತ್ತಿದ್ದಾರೆ. ‘ನಲ್ಮೆಯ ಸೆಲೆಬ್ರಿಟೀಸ್, ನಿಮ್ಮ ನಿರಂತರ ಪ್ರಾರ್ಥನೆ, ಪ್ರೀತಿ ಮತ್ತು ಬೆಂಬಲಕ್ಕೆ ಅನಂತ ಧನ್ಯವಾದಗಳು. ನೀವು ಕಾತುರದಿಂದ ಕಾಯುತ್ತಿದ್ದ ದಿ ಡೆವಿಲ್ ಡಿಸೆಂಬರ್ 12ರಂದು ಬಿಡುಗಡೆಯಾಗಲಿದೆ’ ಎಂದು ಪೋಸ್ಟ್ ಮಾಡಲಾಗಿದೆ. ‘ದಿ ಡೆವಿಲ್’ ಸಿನಿಮಾದ ಬಿಡುಗಡೆಗೆ ಇನ್ನೂ ಸಮಯ ಇದೆ. ಅಷ್ಟರೊಳಗೆ ದರ್ಶನ್ ಅವರು ಒಂದು ವೇಳೆ ಜಾಮೀನು ಪಡೆದು ಹೊರಗೆ ಬಂದರೆ ಖಂಡಿತವಾಗಿಯೂ ಅಭಿಮಾನಿಗಳಿಗೆ ಹಬ್ಬ ಆಗಲಿದೆ. ತಮ್ಮ ನೆಚ್ಚಿನ ನಟನ ಜೊತೆಯಲ್ಲೇ ‘ದಿ ಡೆವಿಲ್’ ಬಿಡುಗಡೆಯನ್ನು ಸಂಭ್ರಮಿಸಬಹುದು. ಜಾಮೀನು ಸಿಗದೇ ಇದ್ದರೆ ಆ ಕೊರಗಿನ ನಡುವೆಯೂ ಸಿನಿಮಾ ನೋಡುವುದು ಅಭಿಮಾನಿಗಳಿಗೆ ಅನಿವಾರ್ಯ ಆಗಲಿದೆ.

The post ಡಿಸೆಂಬರ್ 12ಕ್ಕೆ ‘ದಿ ಡೆವಿಲ್’ ಸಿನಿಮಾ ಬಿಡುಗಡೆ, ದರ್ಶನ್ ಅಭಿಮಾನಿಗಳಿಗೆ ಹಬ್ಬ appeared first on Good News 24x7.

]]>
ದರ್ಶನ್ ಬಂಧನದ ಬಳಿಕ ವಿಜಯಲಕ್ಷ್ಮೀ ಭಾವುಕ ಪೋಸ್ಟ್ .. https://www.goodnews24x7.com/vijayalakshmis-emotional-post-after-darshans-arrest/ Sat, 16 Aug 2025 09:30:14 +0000 https://www.goodnews24x7.com/?p=6216 ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್ ಅವರನ್ನು ಮತ್ತೆ ಬಂಧಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿ, ವಿಜಯಲಕ್ಷ್ಮೀ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಒಡೆದ ಹೃದಯದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ವೈರಲ್ ಆಗಿದ್ದು, ದರ್ಶನ್ ಅವರ ಬಂಧನದಿಂದಾಗಿ ಅವರು ಎಷ್ಟು ದುಃಖಿತರಾಗಿದ್ದಾರೆ…

The post ದರ್ಶನ್ ಬಂಧನದ ಬಳಿಕ ವಿಜಯಲಕ್ಷ್ಮೀ ಭಾವುಕ ಪೋಸ್ಟ್ .. appeared first on Good News 24x7.

]]>

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್ ಅವರನ್ನು ಮತ್ತೆ ಬಂಧಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿ, ವಿಜಯಲಕ್ಷ್ಮೀ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಒಡೆದ ಹೃದಯದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ವೈರಲ್ ಆಗಿದ್ದು, ದರ್ಶನ್ ಅವರ ಬಂಧನದಿಂದಾಗಿ ಅವರು ಎಷ್ಟು ದುಃಖಿತರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ.

ರೇಣುಕಾ ಸ್ವಾಮಿ ಕೊಲೆ ಆರೋಪಿ ದರ್ಶನ್ ಅವರು ಬಂಧನಕ್ಕೆ ಒಳಗಾಗಿದ್ದಾರೆ. ಇಷ್ಟು ದಿನ ಜಾಮೀನು ಪಡೆದು ಹೊರಗೆ ಇದ್ದ ಅವರು ಮತ್ತೆ ಜೈಲು ಸೇರಿದ್ದಾರೆ. ಇದರ ಬೆನ್ನಲ್ಲೇ ವಿಜಯಲಕ್ಷ್ಮೀ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅವರು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್​ನಲ್ಲಿ ಅವರು ಮನಸ್ಸು ಒಡೆದಿದೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದೆ.

ನಟ ದರ್ಶನ್ ಮೊದಲ ಬಾರಿ ಬಂಧನದ ಬಳಿಕವೂ ಸೈಲೆಂಟ್ ಆಗಿಯೇ ಇದ್ದರು ವಿಜಯಲಕ್ಷ್ಮೀ. ಆ ಬಳಿಕ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿ ಅಭಿಮಾನಿಗಳಿಗೆ ಧೈರ್ಯ ತುಂಬಿದರು. ದರ್ಶನ್ ಜಾಮೀನು ಪಡೆದು ಬಿಡುಗಡೆ ಆದ ಬಳಿಕ ಅವರಷ್ಟು ಖುಷಿಪಟ್ಟವರು ಮತ್ತೊಬ್ಬರು ಇರಲಿಲ್ಲ. ದರ್ಶನ್ ಈಗ ಮತ್ತೆ ಅರೆಸ್ಟ್ ಆಗಿರೋದು ಅವರಿಗೆ ಬೇಸರ ಮೂಡಿಸಿದೆ.

ದರ್ಶನ್ ಅವರು ಕೊನೆಯದಾಗಿ ಬಂಧನಕ್ಕೆ ಒಳಗಾಗಿದ್ದು ವಿಜಯಲಕ್ಷ್ಮೀ ಅವರ ನಿವಾಸದಿಂದಲೇ. ಅವರನ್ನು ಅಲ್ಲಿಂದಲೇ ಅರೆಸ್ಟ್ ಮಾಡಲಾಗಿತ್ತು. ಆ ಬಳಿಕ ವಿಜಯಲಕ್ಷ್ಮೀ ಅವರು ಸೈಲೆಂಟ್ ಆಗಿದ್ದರು. ಈಗ ಸೋಶಿಯಲ್ ಮೀಡಿಯಾದಲ್ಲಿ ಅವರು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್​ನಲ್ಲಿ ಅವರು ದರ್ಶನ್ ಬ್ಯಾಕ್ ಪೋಸ್​ನ ಫೋಟೋ ಹಾಕಿದ್ದಾರೆ. ದರ್ಶನ್ ಸರಳಿನ ಹಿಂದೆ ನಿಂತು ಏನನ್ನೋ ನೋಡುತ್ತಿದ್ದಾರೆ. ಈ ಪೋಸ್ಟ್​ಗೆ ಅವರು ಒಡೆದ ಹೃದಯದ ಎಮೋಜಿ ಹಾಕಿದ್ದಾರೆ. ಎಲ್ಲವನ್ನೂ ಅವರು ಸೂಕ್ಷ್ಮವಾಗಿ ಹೇಳಿದ್ದಾರೆ.

ದರ್ಶನ್ ಅವರ ಬಂಧನ ಈ ಬಾರಿ ಮತ್ತಷ್ಟು ಗಂಭೀರ ಸ್ವರೂಪ ಪಡೆದಿದೆ. ಕಳೆದ ಬಾರಿ ಬಂಧನ ಆದಾಗ ಅವರಿಗೆ ಕೆಳ ಹಂತದಲ್ಲಿ ಅಲ್ಲದೆ ಇದ್ದರೂ ಮೇಲಿನ ಕೋರ್ಟ್​ನಲ್ಲಿ ಜಾಮೀನು ಸಿಗಬಹುದು ಎಂಬ ನಂಬಿಕೆ ಇತ್ತು. ಆದರೆ, ಈ ಬಾರಿ ಸಾಕಷ್ಟು ಚಾಲೆಂಜ್​ಗಳು ಇವೆ. ದರ್ಶನ್ ಜಾಮೀನು ರದ್ದಾಗಿರುವುದು ಸುಪ್ರೀಂಕೋರ್ಟ್​ನಿಂದ. ಉಚ್ಚ ನ್ಯಾಯಲಯ ಜಾಮೀನು ರದ್ದು ಮಾಡಿರುವುದರಿಂದ ಕೆಳ ಹಂತದ ಕೋರ್ಟ್​ನಲ್ಲೂ ಬೇಲ್ ಸಿಗೋದು ಅನುಮಾನವಾಗಿದೆ.

The post ದರ್ಶನ್ ಬಂಧನದ ಬಳಿಕ ವಿಜಯಲಕ್ಷ್ಮೀ ಭಾವುಕ ಪೋಸ್ಟ್ .. appeared first on Good News 24x7.

]]>
ದರ್ಶನ್ ಸ್ಥಿತಿ ಕಂಡು ಹಳೆಯ ದಿನ ಮೆಲುಕು ಹಾಕಿ ರಮ್ಯಾ ಬೇಸರ. https://www.goodnews24x7.com/darsan-sthiti-ka%e1%b9%87%e1%b8%8du-ha%e1%b8%b7eya-dina-meluku-haki-ramya-besara-darshanparappanaagraharaactresssupremecourtramyapavithragowdaindustryrenukaswamycase-darsan-parappana-agrahara/ Sat, 16 Aug 2025 06:54:50 +0000 https://www.goodnews24x7.com/?p=6180 ದರ್ಶನ್ ಪರಪ್ಪನ ಅಗ್ರಹಾರದ ಅತಿಥಿಯಾಗಿದ್ದಾರೆ. ಕಂಬಿಯೇ ಕೈಲಾಸ, ನಾಲ್ಕು ಗೋಡೆ ನವರಸ, ಸೊಳ್ಳೆಗಳೇ ಸಹಪಾಠಿ ಅದ್ಕೊಂಡು ಮತ್ತೆ ಜೈಲಿನ ದಿನಚರಿ ಆರಂಭಿಸಿದ್ದಾರೆ. ಇತ್ತ ದರ್ಶನ್ ಫ್ಯಾನ್ಸ್​ ವಿರುದ್ಧ ಸಮರ ಸಾರಿದ್ದ ನಟಿ ರಮ್ಯಾ ಆಡಿರೋ ಮಾತು ಅಚ್ಚರಿ ಮೂಡಿಸಿದೆ. ಗುರುವಾರ ಅಂದ್ರೆ…

The post ದರ್ಶನ್ ಸ್ಥಿತಿ ಕಂಡು ಹಳೆಯ ದಿನ ಮೆಲುಕು ಹಾಕಿ ರಮ್ಯಾ ಬೇಸರ. appeared first on Good News 24x7.

]]>

ದರ್ಶನ್ ಪರಪ್ಪನ ಅಗ್ರಹಾರದ ಅತಿಥಿಯಾಗಿದ್ದಾರೆ. ಕಂಬಿಯೇ ಕೈಲಾಸ, ನಾಲ್ಕು ಗೋಡೆ ನವರಸ, ಸೊಳ್ಳೆಗಳೇ ಸಹಪಾಠಿ ಅದ್ಕೊಂಡು ಮತ್ತೆ ಜೈಲಿನ ದಿನಚರಿ ಆರಂಭಿಸಿದ್ದಾರೆ. ಇತ್ತ ದರ್ಶನ್ ಫ್ಯಾನ್ಸ್​ ವಿರುದ್ಧ ಸಮರ ಸಾರಿದ್ದ ನಟಿ ರಮ್ಯಾ ಆಡಿರೋ ಮಾತು ಅಚ್ಚರಿ ಮೂಡಿಸಿದೆ.

ಗುರುವಾರ ಅಂದ್ರೆ ಆಗಸ್ಟ್​​ 13.. ನಟ ದರ್ಶನ್​ ಬಾಳಲ್ಲಿ ಮತ್ತೊಂದು ಬಿರುಗಾಳಿ ಬೀಸಿದ ದಿನ. ಸುಪ್ರೀಂ ಕೋರ್ಟ್​ ದರ್ಶನ್​ ಬೇಲ್​ಗೆ ಬ್ರೇಕ್ ಹಾಕ್ತಿದ್ದಂತೆ ಕಾಮಾಕ್ಷಿಪಾಳ್ಯ ಪೊಲೀಸರು ದರ್ಶನ್​ಗೆ​ ಮತ್ತೆ ಪರಪ್ಪನ ಅಗ್ರಹಾರದ ದರ್ಶನ ಮಾಡಿಸಿದ್ರು. ಇಂದಿಗೆ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಭರ್ತಿ ಎರಡು ರಾತ್ರಿ ಕಳೆದಂತಾಗಿದೆ. ಮತ್ತದೇ ಮೌನಗಾನ, ಮನೆಯ ಧ್ಯಾನ ದರ್ಶನ್​ನ ಕಾಡಿದೆ.

ಅಂದು ಡಿ ಫ್ಯಾನ್ಸ್​ ವಿರುದ್ಧ ವಾರ್​.. ಇಂದು ದರ್ಶನ್ ಸ್ಥಿತಿಗೆ ಮರುಕ!  ನಟ ದರ್ಶನ್​ ಮತ್ತೆ ಪರಪ್ಪನ ಅಗ್ರಹಾರ ಪಾಲಾದ ಬಗ್ಗೆ ನಟಿ ರಮ್ಯಾ ಬೇಸರ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ದರ್ಶನ್​ ಫ್ಯಾನ್ಸ್​​ ವಿರುದ್ಧ ಸಮರ ಸಾರಿದ್ದ ಸ್ಯಾಂಡಲ್​ವುಡ್​ ಕ್ವೀನ್ ದರ್ಶನ್​ ಜೊತೆಗಿನ ಹಳೇ ನೆನಪುಗಳನ್ನ ಮೆಲುಕು ಹಾಕಿ ಅವರಿಗೆ ಈ ಸ್ಥಿತಿ ಬರ್ಬಾದಿತ್ತು ಎಂದಿದ್ದಾರೆ.

ದರ್ಶನ್ ಜೈಲು ಸೇರಿದ್ದು ಬೇಸರ! ಜಡ್ಜ್​ಮೆಂಟ್​ ಕೇಳಿದಾಗ ನನಗೆ ಮಿಕ್ಸ್​ ರಿಯಾಕ್ಷನ್​ ಇತ್ತು. ಒಂದು ಕಡೆ ನನಗೆ ಸ್ವಲ್ಪ ಬೇಜಾರು ಆಯ್ತು.. ದರ್ಶನ್ ಅವರ ಜೊತೆ ನಾನು ಕೆಲಸ ಮಾಡಿದೀನಿ, ಅವರು ಗೊತ್ತಿರೋರು. ಸೋ ಎಲ್ಲೋ ಒಂದು ಕಡೆ ನನಗೆ ಬೇಜಾರು ಏನಂದ್ರೆ ಅವರ ಜೀವನ ಹಾಳು ಮಾಡಿಕೊಂಡ್ರು. ಯಾಕಂದ್ರೆ ನಾವು ಶೂಟ್​ ಮಾಡುವಾಗ ಕೆಲವೊಂದು ವಿಚಾರವನ್ನು ಅವರು ಹಂಚಿಕೊಂಡಿದ್ರು. ತಾವು ಸಿನಿಮಾ ಇಂಡಸ್ಟ್ರಿಗೆ ಹೇಗೆ ಬಂದ್ರು ಅನ್ನೋದ್ರ ಬಗ್ಗೆ ಹೇಳಿದ್ದರು. ಏನು ಇಲ್ಲದವ್ರು ಕಷ್ಟಪಟ್ಟು ಇಂಡಸ್ಟ್ರಿಗೆ ಬಂದು.. ಲೈಟ್​ ಬಾಯ್ ಆಗಿ ಕೆಲಸ ಮಾಡಿ ಈ ಮಟ್ಟಕ್ಕೆ ಬೆಳೆದಿದ್ದಾರೆ ಅಂತ ಎಲ್ಲೋ ಒಂದು ಕಡೆ ಹೆಮ್ಮೆನೂ ಇತ್ತು.
ರಮ್ಯಾ, ನಟಿ ಪರಪ್ಪನ ಅಗ್ರಹಾರದ ಪವಿತ್ರಾ ಬಗ್ಗೆಯೂ ರಮ್ಯಾ ಬೇಸರ

ಮತ್ತೆ ಪರಪ್ಪನ ಅಗ್ರಹಾರದ ಪಾಲಾಗಿರೋ ದರ್ಶನ್​ ಗೆಳತಿ ಪವಿತ್ರಾ ಗೌಡ ಬಗ್ಗೆಯೂ ರಮ್ಯಾ ಬೇಸರ ಹೊರಹಾಕಿದ್ದಾರೆ. ಆಕೆಯೂ ಒಬ್ಬ ತಾಯಿ, ಹೀಗಾಗಬಾರದಿತ್ತು ಎಂದಿದ್ದಾರೆ.ಆ್ಯಕ್ಚುಲಿ ನನಗೆ ಪವಿತ್ರಾ ಗೌಡ ಅಂದ್ರೆ ಯಾರು ಅಂತನೇ ಗೊತ್ತಿರಲಿಲ್ಲ. ಈ ರೇಣುಕಾಸ್ವಾಮಿ ಕೇಸ್ ಆದಮೇಲೆಯೇ ನನಗೆ ಗೊತ್ತಾಗಿದ್ದು. ಒಂದು ಕಡೆ ಬೇಜಾರಾಗುತ್ತೆ ಯಾಕಂದ್ರೆ, ಆಕೆಯೂ ಒಬ್ಬಳು ತಾಯಿ.. ಒಬ್ಬಳು ಮಗಳಿದ್ದಾರೆ. ಈ ರೇಣುಕಾಸ್ವಾಮಿ ಅವರ ಫ್ಯಾಮಿಲಿ.. ಯಾಕಂದ್ರೆ ಅವರು ಬಡವರು.. ಆ ಈಗ ಅವರ ಈ ಅವರ ಪತ್ನಿ ಸಹ ಮಗುವನ್ನ ಹೊಂದಿದ್ದಾರೆ. ಸೋ ಅವರಿಗೆ ಎಲ್ಲೋ ಒಂದು ಕಡೆ ಜಸ್ಟೀಸ್​ ಸಿಕ್ಕಿದೆ ಅಂತ ನಾನು ಅನ್ಕೋತಿನಿ.

ಒಟ್ನಲ್ಲಿ ನೀರಿನ ಮೊರೆತಕ್ಕೆ ಬಂಡೆಯೂ ಕರಗುತ್ತೆ ಅನ್ನೋ ಹಾಗೆ ಬ್ಯಾಕ್​ ಟು ಬ್ಯಾಕ್​ ದರ್ಶನ್​ಗೆ ಸಂಕಷ್ಟ ಎದುರಾಗ್ತಿರೋದು ಸದ್ಯ ನಟಿ ರಮ್ಯಾರಿಗೂ ಬೇಸರ ಬರುವಂತೆ ಮಾಡಿದೆ. ದರ್ಶನ್ ಮತ್ತು ದರ್ಶನ್ ಫ್ಯಾನ್ಸ್​ ವಿರುದ್ಧ ರಣಚಂಡಿಯಾಗಿದ್ದ ರಮ್ಯಾ ಏಕಾಏಕಿ ಇಷ್ಟು ಸಾಫ್ಟ್​ ಆಗಿದ್ದು ಅಚ್ಚರಿಯನ್ನೂ ಮೂಡಿಸಿದೆ.

The post ದರ್ಶನ್ ಸ್ಥಿತಿ ಕಂಡು ಹಳೆಯ ದಿನ ಮೆಲುಕು ಹಾಕಿ ರಮ್ಯಾ ಬೇಸರ. appeared first on Good News 24x7.

]]>
ಸ್ವಾತಂತ್ರ್ಯ ದಿನಾಚರಣೆ ಸೆಲೆಬ್ರೇಷನ್​ಗೆ ಬಾರದೆ ಮಂಕಾಗಿ ಕುಳಿತ ದರ್ಶನ್. https://www.goodnews24x7.com/darshan-sits-sullenly-after-not-attending-independence-day-celebrations/ Sat, 16 Aug 2025 06:04:56 +0000 https://www.goodnews24x7.com/?p=6169 ಸ್ವಾತಂತ್ರ್ಯ ದಿನಾಚರಣೆ ಸೆಲೆಬ್ರೇಷನ್​ಗೆ ಬಾರದೆ ಮಂಕಾಗಿ ಕುಳಿತ ದರ್ಶನ್. ನಟ ದರ್ಶನ್ ಅವರ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಮಧ್ಯಂತರ ಜಾಮೀನು ಪಡೆದು ಹಲವು ಷರತ್ತುಗಳನ್ನು ಉಲ್ಲಂಘಿಸಿರೋದು ಇದಕ್ಕೆ ಕಾರಣ. ಬೆನ್ನು ನೋವು ಎಂದು ವಿಚಾರಣೆಗೆ ಗೈರು ಹಾಜರಾಗಿದ್ದರೂ, ಸಿನಿಮಾ ಪ್ರದರ್ಶನದಲ್ಲಿ…

The post ಸ್ವಾತಂತ್ರ್ಯ ದಿನಾಚರಣೆ ಸೆಲೆಬ್ರೇಷನ್​ಗೆ ಬಾರದೆ ಮಂಕಾಗಿ ಕುಳಿತ ದರ್ಶನ್. appeared first on Good News 24x7.

]]>

ಸ್ವಾತಂತ್ರ್ಯ ದಿನಾಚರಣೆ ಸೆಲೆಬ್ರೇಷನ್​ಗೆ ಬಾರದೆ ಮಂಕಾಗಿ ಕುಳಿತ ದರ್ಶನ್.

ನಟ ದರ್ಶನ್ ಅವರ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಮಧ್ಯಂತರ ಜಾಮೀನು ಪಡೆದು ಹಲವು ಷರತ್ತುಗಳನ್ನು ಉಲ್ಲಂಘಿಸಿರೋದು ಇದಕ್ಕೆ ಕಾರಣ. ಬೆನ್ನು ನೋವು ಎಂದು ವಿಚಾರಣೆಗೆ ಗೈರು ಹಾಜರಾಗಿದ್ದರೂ, ಸಿನಿಮಾ ಪ್ರದರ್ಶನದಲ್ಲಿ ಭಾಗಿ ಆಗಿದ್ದರು. ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಂಕಾಗಿ ಕುಳಿತಿದ್ದಾರೆ.

ನಟ ದರ್ಶನ್ ಅವರು ಸದ್ಯ ಜೈಲು ಹಕ್ಕಿ ಆಗಿದ್ದಾರೆ. ಇಷ್ಟು ದಿನ ಜಾಮೀನು ಪಡೆದು ಹಾಯಾಗಿ ಓಡಾಡಿಕೊಂಡಿದ್ದ ಅವರಿಗೆ ಈಗ ಮತ್ತೆ ಜೈಲಿನೂಟ ಮಾಡುವ ಪರಿಸ್ಥಿತಿ ಬಂದಿದೆ. ಅನಾರೋಗ್ಯದ ಕಾರಣ ನೀಡಿ ಮಧ್ಯಂತರ ಜಾಮೀನು ಪಡೆದಿದ್ದ ಅವರು, ನಂತರ ಪೂರ್ತಿ ಪ್ರಮಾಣದ ಜಾಮೀನು ಪಡೆದರು. ಶೂಟಿಂಗ್​ಗಾಗಿ ಹಾಯಾಗಿ ಸುತ್ತಾಡಿಕೊಂಡಿದ್ದರು. ವಿದೇಶಕ್ಕೂ ಕೂಡ ಹೋಗಿ ಬಂದರು. ಇದೆಲ್ಲವನ್ನೂ ಸುಪ್ರೀಂಕೋರ್ಟ್ ಪರಿಗಣಿಸಿದೆ. ಹೀಗಾಗಿ, ಅವರ ಜಾಮೀನು ರದ್ದಾಗಿದೆ. ಇದರಿಂದ ದರ್ಶನ್ ಜೈಲಿ​ನಲ್ಲಿ ಮಂಕಾಗಿ ಕುಳಿತಿದ್ದಾರೆ.

ದರ್ಶನ್ ಅವರು ಜಾಮೀನು ಪಡೆದ ಬಳಿಕ ಮಾಡಿದ ತಪ್ಪು ಒಂದೆರಡಲ್ಲ. ಅವರು ಬೇಕಾಬಿಟ್ಟಿ ನಡೆದುಕೊಂಡಿದ್ದೇ ಅವರಿಗೆ ಮುಳುವಾಯಿತು. ಪ್ರಕರಣದ ಸಾಕ್ಷಿ ಚಿಕ್ಕಣ್ಣ ಜೊತೆ ದರ್ಶನ್ ಸುತ್ತಾಟ ಮಾಡಿಕೊಂಡಿದ್ದರು. ಬೆನ್ನು ನೋವಿನ ಕಾರಣ ನೀಡಿ ವಿಚಾರಣೆಗೆ ಗೈರಾಗೋ ಅವರು, ಮರುದಿನವೇ ಸಿನಿಮಾ ಪ್ರದರ್ಶನದಲ್ಲಿ ಭಾಗಿ ಆಗಿದ್ದರು. ಇದೆಲ್ಲವೂ ಕೋರ್ಟ್ ಕಣ್ಣು ಕುಕ್ಕಿದೆ. ಹೀಗಾಗಿ, ಕೋರ್ಟ್ ಮತ್ತೆ ಅವರನ್ನು ಜೈಲಿಗೆ ಕಳುಹಿಸಿದೆ.

ಸದ್ಯ ದರ್ಶನ್ ಜೈಲಿನಲ್ಲಿ ಮಂಕಾಗಿ ಕುಳಿತಿದ್ದಾರೆ ಎನ್ನಲಾಗಿದೆ. ಆಗಸ್ಟ್ 15ರಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸ್ವತಂತ್ರ್ಯೋತ್ಸವದ ಸೆಲೆಬ್ರೇಷನ್ ನಡೆದಿದೆ. ಆದರೆ, ಇದರಲ್ಲಿ ಭಾಗಿ ಅವರು ನಿರಾಕರಿಸಿದ್ದಾರೆ. ಕರೆದಾಗ ‘ನಾನು ಬರಲ್ಲ’ ಎಂದಷ್ಟೇ ಹೇಳಿ ಮತ್ತೆ ಮೌನಕ್ಕೆ ಜಾರಿದ್ದಾರೆ ಎಂದು ವರದಿ ಆಗಿದೆ.

ದರ್ಶನ್​ ಅವರಿಗೆ ಜೈಲಿನಲ್ಲಿ ವಿಚಾರಣಾಧೀನ ಕೈದಿ ಸಂಖ್ಯೆ ನೀಡಲಾಗಿದೆ. ಅವರ ಕೈದಿ ಸಂಖ್ಯೆ 7314, ಪವಿತ್ರಾ ಗೌಡ ಕೈದಿ ಸಂಖ್ಯೆ 7313. ದರ್ಶನ್​ಗೆ ಜಾಮೀನು ರದ್ದು ಮಾಡಿರೋದು ಸುಪ್ರೀಂಕೋರ್ಟ್. ಹೀಗಾಗಿ, ಅವರು ಸುಪ್ರೀಂಕೋರ್ಟ್​ನ ವಿಸ್ತ್ರತ ಪೀಠಕ್ಕೆ ತೆರಳಿ ಜಾಮೀನು ಅರ್ಜಿ ಸಲ್ಲಿಕೆ ಮಾಡಬಹುದು. ಆದರೆ, ಆದೇಶದಲ್ಲಿ ತಪ್ಪಿದೆ ಎಂಬುದನ್ನು ತೋರಿಸಿದರೆ ಮಾತ್ರ ಕೋರ್ಟ್ ವಿಚಾರಣೆಗೆ ಒಪ್ಪುತ್ತದೆ. ಇದು ಸಾಧ್ಯವಾಗದ ಮಾತು. ಇನ್ನು, ಅವರು ಮತ್ತೊಮ್ಮೆ ಕೆಳ ಹಂತದ ಕೋರ್ಟ್​ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಆದರೆ, ಸುಪ್ರೀಂಕೋರ್ಟ್ ಜಾಮೀನು ರದ್ದು ಮಾಡಿರುವುದರಿಂದ ಇಲ್ಲಿಯೂ ಅಷ್ಟು ಸುಲಭದಲ್ಲಿ ಜಾಮೀನು ಸಿಗೋದಿಲ್ಲ. ಬೆನ್ನು ನೋವಿನ ಕಾರಣ ನೀಡಿದರೂ ಅದು ಈ ಬಾರಿ ಕೆಲಸ ಮಾಡೋದು ಅನುಮಾನ.

The post ಸ್ವಾತಂತ್ರ್ಯ ದಿನಾಚರಣೆ ಸೆಲೆಬ್ರೇಷನ್​ಗೆ ಬಾರದೆ ಮಂಕಾಗಿ ಕುಳಿತ ದರ್ಶನ್. appeared first on Good News 24x7.

]]>
ಕೊನೆಗೂ ಫಲಿಸಲಿಲ್ಲ ದಾಸನ ಪೂಜಾ ಫಲ! ವರ್ಕೌಟ್ ಆಗಲೇ ಇಲ್ಲ ದರ್ಶನ್ ಮಾಡಿದ ಟೆಂಪಲ್ ರನ್! https://www.goodnews24x7.com/finally-the-results-of-dasanas-puja-did-not-bear-fruit-darshans-temple-run-did-not-even-work-out/ Thu, 14 Aug 2025 09:37:19 +0000 https://www.goodnews24x7.com/?p=6122 ಕನ್ನಡದ ಖ್ಯಾತ ನಟ ದರ್ಶನ್ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದರು. ನಂತರ ಆರೋಗ್ಯ ಸಮಸ್ಯೆಯ ಕಾರಣ ಕೊಟ್ಟು ಮಧ್ಯಂತರ ಜಾಮೀನು ಸಹ ಪಡೆದು ಹೊರಬಂದಿದ್ರು. ದರ್ಶನ್ ಹೊರಬಂದವರೇ ಸಾಕಷ್ಟು ದೇವಾಲಯಗಳಿಗೆ ಭೇಟಿ ನೀಡಿ ಟೆಂಪಲ್ ರನ್ ಸಹ…

The post ಕೊನೆಗೂ ಫಲಿಸಲಿಲ್ಲ ದಾಸನ ಪೂಜಾ ಫಲ! ವರ್ಕೌಟ್ ಆಗಲೇ ಇಲ್ಲ ದರ್ಶನ್ ಮಾಡಿದ ಟೆಂಪಲ್ ರನ್! appeared first on Good News 24x7.

]]>

ಕನ್ನಡದ ಖ್ಯಾತ ನಟ ದರ್ಶನ್ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದರು. ನಂತರ ಆರೋಗ್ಯ ಸಮಸ್ಯೆಯ ಕಾರಣ ಕೊಟ್ಟು ಮಧ್ಯಂತರ ಜಾಮೀನು ಸಹ ಪಡೆದು ಹೊರಬಂದಿದ್ರು. ದರ್ಶನ್ ಹೊರಬಂದವರೇ ಸಾಕಷ್ಟು ದೇವಾಲಯಗಳಿಗೆ ಭೇಟಿ ನೀಡಿ ಟೆಂಪಲ್ ರನ್ ಸಹ ಮಾಡಿದ್ರು

ಚಾಮುಂಡಿ ಬೆಟ್ಟ, ಕೇರಳದ ಕೊಟ್ಟಿಯೂರು ಅಷ್ಟೇ ಅಲ್ಲದೆ ನಿನ್ನೆ ಸಹ ಬನ್ನಾರಿ ಅಮ್ಮನವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ . ಆದರೆ ಎಷ್ಟೇ ದೇವಸ್ಥಾನ ಸುತ್ತಿದ್ರು ಸಹ ಫಲಿಸಲಿಲ್ಲ ದರ್ಶನ್ ಪೂಜಾ ಫಲ, ಕೊನೆಗೂ ಜಾಮೀನು ಅರ್ಜಿ ರದ್ದು ಮಾಡೇ ಬಿಡ್ತು ಸುಪ್ರೀಂ ಕೋರ್ಟ್ .

ಹೌದು ದರ್ಶನ್ ಮಧ್ಯಂತರ ಜಾಮೀನು ಪಡೆದು ಹೊರಬಂದ ನಂತರ ಸಾಕಷ್ಟು ದೇವಾಲಯಗಳಿಗೆ ಭೇಟಿ ನೀಡಿ ಶತ್ರು ಸಂಹಾರ ಯಾಗ ಸಹ ಮಾಡ್ಸಿದ್ರು , ಆದ್ರೆ ಯಾವುದೇ ಶತ್ರು ಸಂಹಾರ ಯಾಗವಾಗಲಿ ವಿಶೇಷ ಪೂಜೆಯಾಗಲಿ ದರ್ಶನ್ ಕೈ ಹಿಡಿದಿಲ್ಲ. ಕೊಲೆ ಪ್ರಕರಣದಿಂದ ಪಾರಾಗಲು ದರ್ಶನ್ ಮಾಡಿದಂತಹ ಟೆಂಪಲ್ ರನ್ ವರ್ಕ್ ಔಟ್ ಆಗ್ಲೇ ಇಲ್ಲ.
ಯಾವುದೇ ಮುಲಾಜಿಲ್ಲದೆ ದರ್ಶನ್ ಅವರ ಜಾಮೀನು ಅರ್ಜಿಯನ್ನು ರದ್ದು ಮಾಡಿದೆ ಸುಪ್ರೀಂ ಕೋರ್ಟ್ . ಈ ಹಿನ್ನಲೆ ಮತ್ತೆ ಜೈಲು ಪಾಲಾಗಿದ್ದಾರೆ ದಾಸ. ದರ್ಶನ್ ಅವರ ದೈವಭಕ್ತಿ ಫಲ ನೀಡದೆ ಕಾನೂನು ಎಂಬ ದೇವರ ಮುಂದೆ ಕೊನೆಗೂ ತಲೆಬಾಗಲೇಬೇಕಿದೆ ಡಿ ಬಾಸ್…

The post ಕೊನೆಗೂ ಫಲಿಸಲಿಲ್ಲ ದಾಸನ ಪೂಜಾ ಫಲ! ವರ್ಕೌಟ್ ಆಗಲೇ ಇಲ್ಲ ದರ್ಶನ್ ಮಾಡಿದ ಟೆಂಪಲ್ ರನ್! appeared first on Good News 24x7.

]]>
ನಟ ದರ್ಶನ್ ಜಾಮೀನು ರದ್ದು ಹಿನ್ನೆಲೆ : ಅಪರಾಧಿಗಳಿಗೆ ಶಿಕ್ಷೆ ಆಗುವ ಭರವಸೆ ಇದೆ ಎಂದ ರೇಣುಕಾಸ್ವಾಮಿ ತಂದೆ.. https://www.goodnews24x7.com/background-to-actor-darshans-bail-cancellation-renukaswamys-father-says-he-is-confident-that-the-criminals-will-be-punished/ Thu, 14 Aug 2025 06:41:31 +0000 https://www.goodnews24x7.com/?p=6097 ಚಿತ್ರದುರ್ಗ: ಪುತ್ರ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ ಸೇರಿದಂತೆ ಎಲ್ಲಾ ಆರೋಪಿಗಳ ಜಾಮೀನು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್ ತೀರ್ಪಿಗೆ ತಂದೆ ಕಾಶಿನಾಥ್ ಶಿವನಗೌಡ ಸಂತೋಷ ವ್ಯಕ್ತಪಡಿಸಿದ್ದಾರೆ. ತೀರ್ಪಿನ ನಂತರ ಮಾತನಾಡಿದ ಕಾಶಿನಾಥ್‌ ಶಿವನಗೌಡ, “ಜಾಮೀನು ದೊರಕಬಹುದೆಂಬ ಆತಂಕ ಇತ್ತು. ಈಗ…

The post ನಟ ದರ್ಶನ್ ಜಾಮೀನು ರದ್ದು ಹಿನ್ನೆಲೆ : ಅಪರಾಧಿಗಳಿಗೆ ಶಿಕ್ಷೆ ಆಗುವ ಭರವಸೆ ಇದೆ ಎಂದ ರೇಣುಕಾಸ್ವಾಮಿ ತಂದೆ.. appeared first on Good News 24x7.

]]>

ಚಿತ್ರದುರ್ಗ: ಪುತ್ರ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ ಸೇರಿದಂತೆ ಎಲ್ಲಾ ಆರೋಪಿಗಳ ಜಾಮೀನು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್ ತೀರ್ಪಿಗೆ ತಂದೆ ಕಾಶಿನಾಥ್ ಶಿವನಗೌಡ ಸಂತೋಷ ವ್ಯಕ್ತಪಡಿಸಿದ್ದಾರೆ.

ತೀರ್ಪಿನ ನಂತರ ಮಾತನಾಡಿದ ಕಾಶಿನಾಥ್‌ ಶಿವನಗೌಡ, “ಜಾಮೀನು ದೊರಕಬಹುದೆಂಬ ಆತಂಕ ಇತ್ತು. ಈಗ ಜಾಮೀನು ರದ್ದಾದ ಕಾರಣ ನ್ಯಾಯದ ಮೇಲೆ ನಂಬಿಕೆ ಬಂದಿದೆ,” ಎಂದು ಹೇಳಿದರು. ಈ ವೇಳೆ ಅವರು ಪುತ್ರನನ್ನು ನೆನೆದು ಭಾವುಕರಾದರು.

“ಸರ್ಕಾರ ಮತ್ತು ಕಾನೂನಿನ ಮೇಲೆ ಈಗ ನಂಬಿಕೆ ಮೂಡಿದೆ. ಅಪರಾಧಿಗಳಿಗೆ ತಪ್ಪದೇ ಶಿಕ್ಷೆಯಾಗಲಿದೆ ಎಂಬ ಭರವಸೆ ಇದೆ,” ಎಂದರು. ತಮ್ಮ ಸೊಸೆಯ ಕೆಲಸದ ವಿಷಯದಲ್ಲೂ ನೋವು ವ್ಯಕ್ತಪಡಿಸಿ, ಸರ್ಕಾರದಿಂದ ತದನೂಕು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

“ಸುಪ್ರೀಂ ಕೋರ್ಟ್‌ನ ತೀರ್ಪು ನಮ್ಮಿಗೆ ನ್ಯಾಯ ದೊರಕಿಸಿದೆ. ಮಗನನ್ನು ಕಳೆದುಕೊಂಡ ನೋವಿನ ಮಧ್ಯೆ ನ್ಯಾಯಾಂಗ ಹಾಗೂ ಸರ್ಕಾರದ ಮೇಲೆ ವಿಶ್ವಾಸ ಬೆಳೆದಿದೆ. ನಾವು ಇವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ,” ಎಂದು ತಿಳಿಸಿದ್ದಾರೆ.

ಅವರು ಹೇಳುವ ಪ್ರಕಾರ, ಮೊಮ್ಮಗ ಮತ್ತು ಸೊಸೆಗೆ ಭರವಸೆ ಆಗಲೆಂದು ಪೂಜೆ ಸಲ್ಲಿಸಲಾಗಿತ್ತು. ತೀರ್ಪು ವಿಳಂಬವಾಗಬಹುದು ಎಂಬ ನಿರೀಕ್ಷೆ ಇತ್ತು, ಆದರೆ ತೀರ್ಪು ಬೇಗ ಬಂದಿದೆ. “ಇದು ಗುರುಗಳು ಹಾಗೂ ದೇವರ ಅನುಗ್ರಹದಿಂದ ಸಾಧ್ಯವಾಗಿದೆ,” ಎಂದು ಅವರು ಹೇಳಿದ್ದಾರೆ.

The post ನಟ ದರ್ಶನ್ ಜಾಮೀನು ರದ್ದು ಹಿನ್ನೆಲೆ : ಅಪರಾಧಿಗಳಿಗೆ ಶಿಕ್ಷೆ ಆಗುವ ಭರವಸೆ ಇದೆ ಎಂದ ರೇಣುಕಾಸ್ವಾಮಿ ತಂದೆ.. appeared first on Good News 24x7.

]]>