Davanagerecity Archives - Good News 24x7 https://www.goodnews24x7.com/tag/davanagerecity/ Kannada Mon, 16 Jun 2025 11:56:36 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Davanagerecity Archives - Good News 24x7 https://www.goodnews24x7.com/tag/davanagerecity/ 32 32 ಕೋಪಗೊಂಡ ರೈತರು ಸಿಎಂ ಕಾರು ತಡೆದು ಆಕ್ರೋಶ! https://www.goodnews24x7.com/angry-farmers-block-cms-car-and-protest/ Mon, 16 Jun 2025 11:56:36 +0000 https://www.goodnews24x7.com/?p=4447 ದಾವಣಗೆರೆ : ಸಿಎಂ ಸಿದ್ದರಾಮಯ್ಯ ಇಂದು ದಾವಣಗೆರೆಗೆ ಪ್ರವಾಸ ಕೈಗೊಂಡಿದ್ದರು. ಈ ವೇಳೆ ರೈತರು ಸಿಎಂ ಸಿದ್ದರಾಮಯ್ಯ ಅವರ ಕಾರನ್ನ ತಡೆದು ಅಡ್ಡ ಮಲಗಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಹೌದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲು ಪೊಲೀಸರು ಅವಕಾಶ…

The post ಕೋಪಗೊಂಡ ರೈತರು ಸಿಎಂ ಕಾರು ತಡೆದು ಆಕ್ರೋಶ! appeared first on Good News 24x7.

]]>

ದಾವಣಗೆರೆ : ಸಿಎಂ ಸಿದ್ದರಾಮಯ್ಯ ಇಂದು ದಾವಣಗೆರೆಗೆ ಪ್ರವಾಸ ಕೈಗೊಂಡಿದ್ದರು. ಈ ವೇಳೆ ರೈತರು ಸಿಎಂ ಸಿದ್ದರಾಮಯ್ಯ ಅವರ ಕಾರನ್ನ ತಡೆದು ಅಡ್ಡ ಮಲಗಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಹೌದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲು ಪೊಲೀಸರು ಅವಕಾಶ ನೀಡದೇ ಇರುವುದರಿಂದ ಕೋಪಗೊಂಡ ರೈತರು, ಸಿಎಂ ಸಿದ್ದರಾಮಯ್ಯ ಕಾರು ತಡೆದು ಅಡ್ಡ ಮಲಗಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ದಾವಣಗೆರೆ ನಗರದ ಹೊರವಲಯದ ಸರ್ಕ್ಯೂಟ್ ಹೌಸ್ ಆವರಣದಲ್ಲಿ ನಡೆಯಿತು.

ವಿವಿಧ ಬೇಡಿಕೆಗಳನ್ನು ಮುಖ್ಯ ಮಂತ್ರಿಯವರ ಬಳಿ ಹೇಳಿಕೊಳ್ಳಲು ಆಗಮಿಸಿದ್ದ ರೈತರಿಗೆ ಪೋಲೀಸರು ಅವಕಾಶ ಮಾಡಿಕೊಡಲಿಲ್ಲ. ಪೊಲೀಸರ ವರ್ತನೆಯಿಂದ ಅಸಮಾಧಾನಗೊಂಡ ರೈತರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರು ತಡೆದು, ಕಾರಿನ‌ ಮುಂದೆ ಮಲಗಿದರು.

ಮುಖ್ಯಮಂತ್ರಿಯ ಕಾರು ಚಾಲನೆ ಮಾಡುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌, ರೈತರ ಮನವೊಲಿಸಲು ಪ್ರಯತ್ನಿಸಿದರು. ಬಳಿಕ ಮುಖ್ಯಮಂತ್ರಿಯವರು ಕಾರಿನಲ್ಲಿ ಕುಳಿತೇ ರೈತರ ಬೇಡಿಕೆ ಆಲಿಸಿ, ಮನವಿ ಸ್ವೀಕರಿಸಿದರು.

The post ಕೋಪಗೊಂಡ ರೈತರು ಸಿಎಂ ಕಾರು ತಡೆದು ಆಕ್ರೋಶ! appeared first on Good News 24x7.

]]>