DBoss Archives - Good News 24x7 https://www.goodnews24x7.com/tag/dboss/ Kannada Wed, 08 Jul 2026 08:02:47 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg DBoss Archives - Good News 24x7 https://www.goodnews24x7.com/tag/dboss/ 32 32 ಡೀಲ್​ ಕೊಟ್ಟವರಿಗಾಗಿ ಪೊಲೀಸರ ಹುಡುಕಾಟ https://www.goodnews24x7.com/renukaswamy-murder-case-police-search-for-deal-makers/ Wed, 08 Jul 2026 08:02:47 +0000 https://www.goodnews24x7.com/?p=9810 ದರ್ಶನ್ (Darshan) ಆರೋಪಿ ಆಗಿರುವ ರೇಣುಕಾ ಸ್ವಾಮಿ ಕೊ*ಲೆ ಪ್ರಕರಣದಲ್ಲಿ ಇತ್ತೀಚೆಗಷ್ಟೆ ದೊಡ್ಡ ಬೆಳವಣಿಗೆಯೊಂದು ನಡೆದಿದೆ. ಪ್ರಕರಣದಲ್ಲಿ ಸಾಕ್ಷಿ ಆಗಿದ್ದ ಒಬ್ಬರಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಪುನೀತ್, ಸುಹಾಸ್ ಮತ್ತು ವೇಣು ಎಂಬುವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಆದರೆ ಈ…

The post ಡೀಲ್​ ಕೊಟ್ಟವರಿಗಾಗಿ ಪೊಲೀಸರ ಹುಡುಕಾಟ appeared first on Good News 24x7.

]]>

ದರ್ಶನ್ (Darshan) ಆರೋಪಿ ಆಗಿರುವ ರೇಣುಕಾ ಸ್ವಾಮಿ ಕೊ*ಲೆ ಪ್ರಕರಣದಲ್ಲಿ ಇತ್ತೀಚೆಗಷ್ಟೆ ದೊಡ್ಡ ಬೆಳವಣಿಗೆಯೊಂದು ನಡೆದಿದೆ. ಪ್ರಕರಣದಲ್ಲಿ ಸಾಕ್ಷಿ ಆಗಿದ್ದ ಒಬ್ಬರಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಪುನೀತ್, ಸುಹಾಸ್ ಮತ್ತು ವೇಣು ಎಂಬುವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಆದರೆ ಈ ಪ್ರಕರಣದ ಹಿಂದೆ ಕೆಲ ‘ಪ್ರಭಾವಿ’ಗಳು ಇರುವ ಶಂಕೆ ತನಿಖೆ ವೇಳೆ ಪೊಲೀಸರಿಗೆ ಮೂಡಿದ್ದು, ಆ ‘ಪ್ರಭಾವಿ’ಗಳ ಪತ್ತೆ ಹಚ್ಚುವ ಪ್ರಯತ್ನದಲ್ಲಿ ಪೊಲೀಸರು ನಿರತರಾಗಿದ್ದಾರೆ.

ತನಿಖೆ ವೇಳೆ ಆರೋಪಿಗಳಿಂದ ಪೊಲೀಸರು ಹೇಳಿಕೆ, ಮರು ಹೇಳಿಕೆಗಳನ್ನು ಪಡೆಯುತ್ತಿದ್ದಾರೆ. ಆದರೆ ಆರೋಪಿಗಳು ಪೊಲೀಸರ ವಿಚಾರಣೆಗೆ ಸೂಕ್ತವಾಗಿ ಪ್ರತಿಕ್ರಿಯಿಸುತ್ತಿಲ್ಲ ಎನ್ನಲಾಗುತ್ತಿದೆ. ಮುಖ್ಯವಾಗಿ ಪುನೀತ್ ಎಂಬ ಆರೋಪಿ, ಸಾಕ್ಷ್ಯಗಳ ಹೇಳಿಕೆಗಳನ್ನು ಬದಲಾಯಿಸಿಕೊಡುವ ‘ಡೀಲ್’ ಪಡೆದಿದ್ದ ಎನ್ನಲಾಗುತ್ತಿದೆ. ಈತ ಪದೇ ಪದೇ ಹೇಳಿಕೆಗಳನ್ನು ಬದಲಾಯಿಸುತ್ತಿದ್ದು, ತನಿಖೆ ನಡೆಸುತ್ತಿರುವ ಪೊಲೀಸರಿಗೆ ತಲೆ ನೋವಾಗಿದೆ ಎನ್ನಲಾಗಿದೆ.

ಈಗಾಗಲೇ ಆರೋಪಿಗಳ ಮೊಬೈಲ್​​ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ಕೆಲವೇ ದಿನಗಳಲ್ಲಿ ವರದಿ ಬರಲಿದ್ದು, ಈ ವೇಳೆ ಆರೋಪಿಗಳು ಯಾರೊಟ್ಟಿಗೆ ಸಂಪರ್ಕದಲ್ಲಿದ್ದರು ಎಂಬುದು ತಿಳಿಯಲಿದೆ. ಆರೋಪಿಗಳ ಬಂಧನ ಆಗುವ ಮೊದಲೇ ಅವರುಗಳು ಮೊಬೈಲ್ ಕರೆ ದಾಖಲೆಗಳು, ವಾಟ್ಸ್ ಆಪ್ ಚಾಟ್ ಇನ್ನಿತರೆ ಮಾಹಿತಿಗಳನ್ನು ಡಿಲೀಟ್ ಮಾಡಿದ್ದರು. ಫಾರೆನ್ಸಿಕ್ ತನಿಖೆಯಿಂದ ಆ ವರದಿಗಳನ್ನೆಲ್ಲ ಮರಳಿ ಪಡೆಯುವ ಪ್ರಯತ್ನದಲ್ಲಿ ಪೊಲೀಸರು ಇದ್ದಾರೆ. ಸಾಕ್ಷಿಗೆ ಬೆದರಿಕೆ ಹಾಕುವ ಸಮಯದಲ್ಲಿ ಕೆಲವರು ಕಾನ್ಫರೆನ್ಸ್ ಕಾಲ್​​ನಲ್ಲಿ ಇದ್ದರು ಎನ್ನಲಾಗುತ್ತಿದ್ದು, ಆ ಕಾಲ್​​ನಲ್ಲಿ ಆರೋಪಿಗಳ ಹೊರತಾಗಿ ಇನ್ಯಾರ್ಯಾರು ಇದ್ದರು ಎಂಬುದು ವರದಿ ಮೂಲಕ ಬಹಿರಂಗವಾಗುವ ಸಾಧ್ಯತೆ ಇದೆ.

ರೇಣುಕಾ ಸ್ವಾಮಿ ಕೊ*ಲೆ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿದ್ದು, ಪ್ರಕರಣದ 49ನೇ ಸಾಕ್ಷಿ ಆಗಿರುವ ದುರ್ಗಾ ಬಾರ್​​​ನ ಸಂದೀಪ್ ಎಂಬುವರಿಗೆ ಆಕರ್ಷ್ ಎಂಬ ವ್ಯಕ್ತಿಯಿಂದ ಕರೆ ಮಾಡಿಸಿ, ತಾವು ಹೇಳಿಕೊಟ್ಟಂತೆ ನ್ಯಾಯಾಲಯದಲ್ಲಿ ಸಾಕ್ಷಿ ನುಡಿಯಬೇಕು ಎಂದು ಆರೋಪಿಗಳು ಹೇಳಿದ್ದರಂತೆ. ಆದರೆ ಸಂದೀಪ್, ನ್ಯಾಯಾಲಯದ ಮುಂದೆ ತಮಗೆ ಸುಳ್ಳು ಸಾಕ್ಷ್ಯ ನುಡಿಯುವ ಬೆದರಿಕೆಯನ್ನು ಕೆಲವರು ಹಾಕಿದ್ದಾರೆ ಎಂದು ಜವಾಬ್ದಾರಿ ಹೇಳಿಕೆಯನ್ನು ನೀಡಿದ್ದರು. ಅದರ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದು, ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

The post ಡೀಲ್​ ಕೊಟ್ಟವರಿಗಾಗಿ ಪೊಲೀಸರ ಹುಡುಕಾಟ appeared first on Good News 24x7.

]]>
ದರ್ಶನ್ ಬಂಧನದ ಬಳಿಕ ವಿಜಯಲಕ್ಷ್ಮೀ ಭಾವುಕ ಪೋಸ್ಟ್ .. https://www.goodnews24x7.com/vijayalakshmis-emotional-post-after-darshans-arrest/ Sat, 16 Aug 2025 09:30:14 +0000 https://www.goodnews24x7.com/?p=6216 ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್ ಅವರನ್ನು ಮತ್ತೆ ಬಂಧಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿ, ವಿಜಯಲಕ್ಷ್ಮೀ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಒಡೆದ ಹೃದಯದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ವೈರಲ್ ಆಗಿದ್ದು, ದರ್ಶನ್ ಅವರ ಬಂಧನದಿಂದಾಗಿ ಅವರು ಎಷ್ಟು ದುಃಖಿತರಾಗಿದ್ದಾರೆ…

The post ದರ್ಶನ್ ಬಂಧನದ ಬಳಿಕ ವಿಜಯಲಕ್ಷ್ಮೀ ಭಾವುಕ ಪೋಸ್ಟ್ .. appeared first on Good News 24x7.

]]>

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್ ಅವರನ್ನು ಮತ್ತೆ ಬಂಧಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿ, ವಿಜಯಲಕ್ಷ್ಮೀ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಒಡೆದ ಹೃದಯದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ವೈರಲ್ ಆಗಿದ್ದು, ದರ್ಶನ್ ಅವರ ಬಂಧನದಿಂದಾಗಿ ಅವರು ಎಷ್ಟು ದುಃಖಿತರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ.

ರೇಣುಕಾ ಸ್ವಾಮಿ ಕೊಲೆ ಆರೋಪಿ ದರ್ಶನ್ ಅವರು ಬಂಧನಕ್ಕೆ ಒಳಗಾಗಿದ್ದಾರೆ. ಇಷ್ಟು ದಿನ ಜಾಮೀನು ಪಡೆದು ಹೊರಗೆ ಇದ್ದ ಅವರು ಮತ್ತೆ ಜೈಲು ಸೇರಿದ್ದಾರೆ. ಇದರ ಬೆನ್ನಲ್ಲೇ ವಿಜಯಲಕ್ಷ್ಮೀ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅವರು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್​ನಲ್ಲಿ ಅವರು ಮನಸ್ಸು ಒಡೆದಿದೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದೆ.

ನಟ ದರ್ಶನ್ ಮೊದಲ ಬಾರಿ ಬಂಧನದ ಬಳಿಕವೂ ಸೈಲೆಂಟ್ ಆಗಿಯೇ ಇದ್ದರು ವಿಜಯಲಕ್ಷ್ಮೀ. ಆ ಬಳಿಕ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿ ಅಭಿಮಾನಿಗಳಿಗೆ ಧೈರ್ಯ ತುಂಬಿದರು. ದರ್ಶನ್ ಜಾಮೀನು ಪಡೆದು ಬಿಡುಗಡೆ ಆದ ಬಳಿಕ ಅವರಷ್ಟು ಖುಷಿಪಟ್ಟವರು ಮತ್ತೊಬ್ಬರು ಇರಲಿಲ್ಲ. ದರ್ಶನ್ ಈಗ ಮತ್ತೆ ಅರೆಸ್ಟ್ ಆಗಿರೋದು ಅವರಿಗೆ ಬೇಸರ ಮೂಡಿಸಿದೆ.

ದರ್ಶನ್ ಅವರು ಕೊನೆಯದಾಗಿ ಬಂಧನಕ್ಕೆ ಒಳಗಾಗಿದ್ದು ವಿಜಯಲಕ್ಷ್ಮೀ ಅವರ ನಿವಾಸದಿಂದಲೇ. ಅವರನ್ನು ಅಲ್ಲಿಂದಲೇ ಅರೆಸ್ಟ್ ಮಾಡಲಾಗಿತ್ತು. ಆ ಬಳಿಕ ವಿಜಯಲಕ್ಷ್ಮೀ ಅವರು ಸೈಲೆಂಟ್ ಆಗಿದ್ದರು. ಈಗ ಸೋಶಿಯಲ್ ಮೀಡಿಯಾದಲ್ಲಿ ಅವರು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್​ನಲ್ಲಿ ಅವರು ದರ್ಶನ್ ಬ್ಯಾಕ್ ಪೋಸ್​ನ ಫೋಟೋ ಹಾಕಿದ್ದಾರೆ. ದರ್ಶನ್ ಸರಳಿನ ಹಿಂದೆ ನಿಂತು ಏನನ್ನೋ ನೋಡುತ್ತಿದ್ದಾರೆ. ಈ ಪೋಸ್ಟ್​ಗೆ ಅವರು ಒಡೆದ ಹೃದಯದ ಎಮೋಜಿ ಹಾಕಿದ್ದಾರೆ. ಎಲ್ಲವನ್ನೂ ಅವರು ಸೂಕ್ಷ್ಮವಾಗಿ ಹೇಳಿದ್ದಾರೆ.

ದರ್ಶನ್ ಅವರ ಬಂಧನ ಈ ಬಾರಿ ಮತ್ತಷ್ಟು ಗಂಭೀರ ಸ್ವರೂಪ ಪಡೆದಿದೆ. ಕಳೆದ ಬಾರಿ ಬಂಧನ ಆದಾಗ ಅವರಿಗೆ ಕೆಳ ಹಂತದಲ್ಲಿ ಅಲ್ಲದೆ ಇದ್ದರೂ ಮೇಲಿನ ಕೋರ್ಟ್​ನಲ್ಲಿ ಜಾಮೀನು ಸಿಗಬಹುದು ಎಂಬ ನಂಬಿಕೆ ಇತ್ತು. ಆದರೆ, ಈ ಬಾರಿ ಸಾಕಷ್ಟು ಚಾಲೆಂಜ್​ಗಳು ಇವೆ. ದರ್ಶನ್ ಜಾಮೀನು ರದ್ದಾಗಿರುವುದು ಸುಪ್ರೀಂಕೋರ್ಟ್​ನಿಂದ. ಉಚ್ಚ ನ್ಯಾಯಲಯ ಜಾಮೀನು ರದ್ದು ಮಾಡಿರುವುದರಿಂದ ಕೆಳ ಹಂತದ ಕೋರ್ಟ್​ನಲ್ಲೂ ಬೇಲ್ ಸಿಗೋದು ಅನುಮಾನವಾಗಿದೆ.

The post ದರ್ಶನ್ ಬಂಧನದ ಬಳಿಕ ವಿಜಯಲಕ್ಷ್ಮೀ ಭಾವುಕ ಪೋಸ್ಟ್ .. appeared first on Good News 24x7.

]]>
ಕೊನೆಗೂ ಫಲಿಸಲಿಲ್ಲ ದಾಸನ ಪೂಜಾ ಫಲ! ವರ್ಕೌಟ್ ಆಗಲೇ ಇಲ್ಲ ದರ್ಶನ್ ಮಾಡಿದ ಟೆಂಪಲ್ ರನ್! https://www.goodnews24x7.com/finally-the-results-of-dasanas-puja-did-not-bear-fruit-darshans-temple-run-did-not-even-work-out/ Thu, 14 Aug 2025 09:37:19 +0000 https://www.goodnews24x7.com/?p=6122 ಕನ್ನಡದ ಖ್ಯಾತ ನಟ ದರ್ಶನ್ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದರು. ನಂತರ ಆರೋಗ್ಯ ಸಮಸ್ಯೆಯ ಕಾರಣ ಕೊಟ್ಟು ಮಧ್ಯಂತರ ಜಾಮೀನು ಸಹ ಪಡೆದು ಹೊರಬಂದಿದ್ರು. ದರ್ಶನ್ ಹೊರಬಂದವರೇ ಸಾಕಷ್ಟು ದೇವಾಲಯಗಳಿಗೆ ಭೇಟಿ ನೀಡಿ ಟೆಂಪಲ್ ರನ್ ಸಹ…

The post ಕೊನೆಗೂ ಫಲಿಸಲಿಲ್ಲ ದಾಸನ ಪೂಜಾ ಫಲ! ವರ್ಕೌಟ್ ಆಗಲೇ ಇಲ್ಲ ದರ್ಶನ್ ಮಾಡಿದ ಟೆಂಪಲ್ ರನ್! appeared first on Good News 24x7.

]]>

ಕನ್ನಡದ ಖ್ಯಾತ ನಟ ದರ್ಶನ್ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದರು. ನಂತರ ಆರೋಗ್ಯ ಸಮಸ್ಯೆಯ ಕಾರಣ ಕೊಟ್ಟು ಮಧ್ಯಂತರ ಜಾಮೀನು ಸಹ ಪಡೆದು ಹೊರಬಂದಿದ್ರು. ದರ್ಶನ್ ಹೊರಬಂದವರೇ ಸಾಕಷ್ಟು ದೇವಾಲಯಗಳಿಗೆ ಭೇಟಿ ನೀಡಿ ಟೆಂಪಲ್ ರನ್ ಸಹ ಮಾಡಿದ್ರು

ಚಾಮುಂಡಿ ಬೆಟ್ಟ, ಕೇರಳದ ಕೊಟ್ಟಿಯೂರು ಅಷ್ಟೇ ಅಲ್ಲದೆ ನಿನ್ನೆ ಸಹ ಬನ್ನಾರಿ ಅಮ್ಮನವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ . ಆದರೆ ಎಷ್ಟೇ ದೇವಸ್ಥಾನ ಸುತ್ತಿದ್ರು ಸಹ ಫಲಿಸಲಿಲ್ಲ ದರ್ಶನ್ ಪೂಜಾ ಫಲ, ಕೊನೆಗೂ ಜಾಮೀನು ಅರ್ಜಿ ರದ್ದು ಮಾಡೇ ಬಿಡ್ತು ಸುಪ್ರೀಂ ಕೋರ್ಟ್ .

ಹೌದು ದರ್ಶನ್ ಮಧ್ಯಂತರ ಜಾಮೀನು ಪಡೆದು ಹೊರಬಂದ ನಂತರ ಸಾಕಷ್ಟು ದೇವಾಲಯಗಳಿಗೆ ಭೇಟಿ ನೀಡಿ ಶತ್ರು ಸಂಹಾರ ಯಾಗ ಸಹ ಮಾಡ್ಸಿದ್ರು , ಆದ್ರೆ ಯಾವುದೇ ಶತ್ರು ಸಂಹಾರ ಯಾಗವಾಗಲಿ ವಿಶೇಷ ಪೂಜೆಯಾಗಲಿ ದರ್ಶನ್ ಕೈ ಹಿಡಿದಿಲ್ಲ. ಕೊಲೆ ಪ್ರಕರಣದಿಂದ ಪಾರಾಗಲು ದರ್ಶನ್ ಮಾಡಿದಂತಹ ಟೆಂಪಲ್ ರನ್ ವರ್ಕ್ ಔಟ್ ಆಗ್ಲೇ ಇಲ್ಲ.
ಯಾವುದೇ ಮುಲಾಜಿಲ್ಲದೆ ದರ್ಶನ್ ಅವರ ಜಾಮೀನು ಅರ್ಜಿಯನ್ನು ರದ್ದು ಮಾಡಿದೆ ಸುಪ್ರೀಂ ಕೋರ್ಟ್ . ಈ ಹಿನ್ನಲೆ ಮತ್ತೆ ಜೈಲು ಪಾಲಾಗಿದ್ದಾರೆ ದಾಸ. ದರ್ಶನ್ ಅವರ ದೈವಭಕ್ತಿ ಫಲ ನೀಡದೆ ಕಾನೂನು ಎಂಬ ದೇವರ ಮುಂದೆ ಕೊನೆಗೂ ತಲೆಬಾಗಲೇಬೇಕಿದೆ ಡಿ ಬಾಸ್…

The post ಕೊನೆಗೂ ಫಲಿಸಲಿಲ್ಲ ದಾಸನ ಪೂಜಾ ಫಲ! ವರ್ಕೌಟ್ ಆಗಲೇ ಇಲ್ಲ ದರ್ಶನ್ ಮಾಡಿದ ಟೆಂಪಲ್ ರನ್! appeared first on Good News 24x7.

]]>
ದರ್ಶನ್ ಜಾಮೀನಿನ ಜೊತೆಗೆ VIP ಟ್ರೀಟ್‌ಮೆಂಟ್ ಗೂ ಬಿತ್ತು ಬ್ರೇಕ್ ! ಸುಪ್ರೀಂ ಎಚ್ಚರಿಕೆ ! https://www.goodnews24x7.com/along-with-darshans-bail-vip-treatment-also-got-a-break-supreme-court-warns/ Thu, 14 Aug 2025 06:02:30 +0000 https://www.goodnews24x7.com/?p=6089 ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲಾ ಆರೋಪಿಗಳ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಈ ಹಿನ್ನೆಲೆ ಆರೋಪಿಗಳಿಗೆ ಜೈಲಿನಲ್ಲಿ ವಿಐಪಿ ಟ್ರೀಟ್‌ಮೆಂಟ್ ಕೊಟ್ಟರೆ ಹುಷಾರ್ ಎಂದು ಜೈಲಾಧಿಕಾರಿಗಳಿಗೆ ಸುಪ್ರೀಂ ಎಚ್ಚರಿಕೆ ಕೊಟ್ಟಿದೆ. ಆರೋಪಿಗಳಿಗೆ 5 ಸ್ಟಾರ್ ಟ್ರೀಟ್‌ಮೆಂಟ್ ನೀಡಲಾಗುತ್ತಿದೆ…

The post ದರ್ಶನ್ ಜಾಮೀನಿನ ಜೊತೆಗೆ VIP ಟ್ರೀಟ್‌ಮೆಂಟ್ ಗೂ ಬಿತ್ತು ಬ್ರೇಕ್ ! ಸುಪ್ರೀಂ ಎಚ್ಚರಿಕೆ ! appeared first on Good News 24x7.

]]>

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲಾ ಆರೋಪಿಗಳ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಈ ಹಿನ್ನೆಲೆ ಆರೋಪಿಗಳಿಗೆ ಜೈಲಿನಲ್ಲಿ ವಿಐಪಿ ಟ್ರೀಟ್‌ಮೆಂಟ್ ಕೊಟ್ಟರೆ ಹುಷಾರ್ ಎಂದು ಜೈಲಾಧಿಕಾರಿಗಳಿಗೆ ಸುಪ್ರೀಂ ಎಚ್ಚರಿಕೆ ಕೊಟ್ಟಿದೆ.

ಆರೋಪಿಗಳಿಗೆ 5 ಸ್ಟಾರ್ ಟ್ರೀಟ್‌ಮೆಂಟ್ ನೀಡಲಾಗುತ್ತಿದೆ ಎಂದು ನಮಗೆ ತಿಳಿದ ದಿನ, ಮೊದಲ ಹೆಜ್ಜೆಯೇ ಸೂಪರಿಂಟೆಂಡೆಂಟ್ ಮತ್ತು ಇತರ ಎಲ್ಲ ಅಧಿಕಾರಿಗಳನ್ನು ಅಮಾನತುಗೊಳಿಸುವುದು. ರಾಜ್ಯ ಸರ್ಕಾರ ಯಾರಿಗಾದರೂ ವಿಐಪಿ ಟ್ರೀಟ್‌ಮೆಂಟ್ ನೀಡುತ್ತಿರುವ ಛಾಯಾಚಿತ್ರಗಳು ಅಥವಾ ಯಾವುದೇ ವೀಡಿಯೊವನ್ನು ನಾವು ನೋಡಿದರೆ ಮೊದಲು ನಿಮ್ಮನ್ನು ಸಸ್ಪೆಂಡ್ ಮಾಡಲಾಗುತ್ತದೆ ಎಂದು ಕೋರ್ಟ್ ಖಡಕ್ ವಾರ್ನಿಂಗ್ ನೀಡಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾಗೌಡ ಸೇರಿದಂತೆ ಎಲ್ಲಾ ಆರೋಪಿಗಳ ಜಾಮೀನು ರದ್ದುಗೊಳಿಸಿ ಸುಪ್ರೀಂ ಆದೇಶಿಸಿದ್ದು, ಕೂಡಲೇ ಎಲ್ಲಾ ಆರೋಪಿಗಳು ಶರಣಾಗಬೇಕು ಎಂದು ಸೂಚಿಸಿದೆ. ಶರಣಾಗದಿದ್ದರೇ ಕೂಡಲೇ ವಶಕ್ಕೆ ಪಡೆಯುವಂತೆ ಪೊಲೀಸರಿಗೆ ಕೋರ್ಟ್ ಸೂಚಿಸಿದೆ. ಈ ತೀರ್ಪಿನ ಪ್ರತಿಯನ್ನು ಎಲ್ಲಾ ಹೈಕೋರ್ಟ್ಗಳು ಮತ್ತು ರಾಜ್ಯ ಸರ್ಕಾರಗಳಿಗೆ ನೀಡುವಂತೆ  ರಿಜಿಸ್ಟ್ರಿಗೆ ನಿರ್ದೇಶಿಸಲಾಗಿದೆ.

The post ದರ್ಶನ್ ಜಾಮೀನಿನ ಜೊತೆಗೆ VIP ಟ್ರೀಟ್‌ಮೆಂಟ್ ಗೂ ಬಿತ್ತು ಬ್ರೇಕ್ ! ಸುಪ್ರೀಂ ಎಚ್ಚರಿಕೆ ! appeared first on Good News 24x7.

]]>
ದಾಸನಿಗೆ ಜೈಲೂಟ ಫಿಕ್ಸ್ ! ದರ್ಶನ್​ ಜಾಮೀನು ರದ್ದು ಮಾಡಿದ ಸುಪ್ರೀಂಕೋರ್ಟ್.. https://www.goodnews24x7.com/jailbreak-fix-for-das-supreme-court-cancels-darshans-bail/ Thu, 14 Aug 2025 05:38:18 +0000 https://www.goodnews24x7.com/?p=6081 ಕಳೆದ ವರ್ಷ ಜೂನ್​ 11ರಂದು ದರ್ಶನ್ ಬಂಧನಕ್ಕೆ ಒಳಗಾದರು. ಆ ಬಳಿಕ ಅವರು ನಾಲ್ಕು ತಿಂಗಳಿಗೂ ಅಧಿಕ ಸಮಯ ಅವರು ಜೈಲಿನಲ್ಲಿ ಇರಬೇಕಾದ ಸ್ಥಿತಿ ಬಂದೊದಗಿತ್ತು. ಆ ಬಳಿಕ ಬೆನ್ನು ನೋವಿನ ಕಾರಣ ನೀಡಿ ಜೈಲಿನಿಂದ ಹೊರ ಬಂದರು. ಈಗ ಅವರು…

The post ದಾಸನಿಗೆ ಜೈಲೂಟ ಫಿಕ್ಸ್ ! ದರ್ಶನ್​ ಜಾಮೀನು ರದ್ದು ಮಾಡಿದ ಸುಪ್ರೀಂಕೋರ್ಟ್.. appeared first on Good News 24x7.

]]>

ಕಳೆದ ವರ್ಷ ಜೂನ್​ 11ರಂದು ದರ್ಶನ್ ಬಂಧನಕ್ಕೆ ಒಳಗಾದರು. ಆ ಬಳಿಕ ಅವರು ನಾಲ್ಕು ತಿಂಗಳಿಗೂ ಅಧಿಕ ಸಮಯ ಅವರು ಜೈಲಿನಲ್ಲಿ ಇರಬೇಕಾದ ಸ್ಥಿತಿ ಬಂದೊದಗಿತ್ತು. ಆ ಬಳಿಕ ಬೆನ್ನು ನೋವಿನ ಕಾರಣ ನೀಡಿ ಜೈಲಿನಿಂದ ಹೊರ ಬಂದರು. ಈಗ ಅವರು ಮತ್ತೆ ಜೈಲು ಸೇರಬೇಕಿದೆ.

ನಟ ದರ್ಶನ್​ಗೆ ಬಿಗ್ ಶಾಕ್ ಎದುರಾಗಿದೆ. ಕರ್ನಾಟಕ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದು ಮಾಡಿದೆ. ಸುಪ್ರೀಂಕೋರ್ಟ್​​ನ ನ್ಯಾ.ಜೆ.ಬಿ.ಪರ್ದಿವಾಲಾ,.ಆರ್.ಮಹಾದೇವನ್ ಅವರಿದ್ದ ದ್ವಿಸದಸ್ಯ ಪೀಠದಿಂದ ಈ ಆದೇಶ ಬಂದಿದೆ. ಇದರಿಂದ ದರ್ಶನ್ ಜೈಲು ಸೇರಬೇಕಾದ ಪರಿಸ್ಥಿತಿ ಬಂದಿದೆ. ದರ್ಶನ್ ವೃತ್ತಿ ಜೀವನದ ಮೇಲೆ ಈ ತೀರ್ಪು ತುಂಬಾನೇ ಪ್ರಭಾವ ಬೀರಲಿದೆ.

‘ಹೈಕೋರ್ಟ್ ಆದೇಶದಲ್ಲಿ ದೋಷವಿದೆ. ತಾಂತ್ರಿಕ ಕಾರಣಗಳಿಂದ ಜಾಮೀನು ನೀಡಿದ್ದಾರೆ’ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ‘ಆರೋಪಿ ಎಷ್ಟೇ ದೊಡ್ಡವರಿದ್ದರೂ ಅವರು ಕಾನೂನಿಗಿಂತ ದೊಡ್ಡವರಲ್ಲ. ಕಾನೂನು ಆಡಳಿತ ಎತ್ತಿ ಹಿಡಿಯಲಾಗಿದೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಆರೋಪಿಗಳಿಗೆ 5 ಸ್ಟಾರ್ ಟ್ರೀಟ್ ಮೆಂಟ್ ನೀಡಲಾಗಿದೆ. ಜೈಲು ಸೂಪರಿಂಟೆಂಡ್​ನನ್ನು ಸಸ್ಪೆಂಡ್ ಮಾಡಬೇಕಿತ್ತು’ ಎಂದು ಕೊರ್ಟ್ ಅಭಿಪ್ರಾಯಪಟ್ಟಿದೆ. ಈ ತೀರ್ಪು ಲ್ಯಾಂಡ್ ಮಾರ್ಕ್ ತೀರ್ಪೆಂದ ಸುಪ್ರೀಂಕೋರ್ಟ್ ಹೇಳಿದೆ.

ಡಿಸೆಂಬರ್​ನಲ್ಲಿ ಅವರಿಗೆ ಸಂಪೂರ್ಣ ಜಾಮೀನು ದೊರೆಯಿತು. ಇದನ್ನು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್​ ಬಳಿ ಪ್ರಶ್ನೆ ಮಾಡಿತ್ತು. ಹಲವು ದಿನಗಳ ಕಾಲ ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಿತ್ತು. ಅಲ್ಲದೆ, ಕರ್ನಾಟಕ ಹೈಕೋರ್ಟ್ ಜಾಮೀನು ಕೊಡಲು ನೀಡಿದ ಕಾರಣಗಳ ಬಗ್ಗೆ ಬೇಸರ ಹೊರಹಾಕಿತ್ತು. ಈಗ ಸುಪ್ರೀಂ ತೀರ್ಪು ನೀಡಿದೆ. ದರ್ಶನ್ ಅವರಿಗೆ ಜಾಮೀನು ನೀಡಿದ್ದರ ಬಗ್ಗೆ ಈ ಮೊದಲು ಸುಪ್ರೀಂ ಕೋರ್ಟ್ ಕರ್ನಾಟಕ ಹೈಕೋರ್ಟ್​ಗೆ ಛೀಮಾರಿ ಹಾಕಿತ್ತು. ದರ್ಶನ್ ಅವರು ಇಷ್ಟು ದಿನ ಹೊರಗೆ ಹಾಯಾಗಿ ಓಡಾಡಿಕೊಂಡಿದ್ದರು. ಆದರೆ, ಈಗ ಅವರಿಗೆ ತೊಂದರೆ ಎದುರಾಗಿದೆ. ಅವರು ಮತ್ತೆ ಜೈಲು ಸೇರು ಬೇಕಿದೆ. ಇದು ಫ್ಯಾನ್ಸ್ ಬೇಸರಕ್ಕೆ ಕಾರಣ ಆಗಿದೆ.

The post ದಾಸನಿಗೆ ಜೈಲೂಟ ಫಿಕ್ಸ್ ! ದರ್ಶನ್​ ಜಾಮೀನು ರದ್ದು ಮಾಡಿದ ಸುಪ್ರೀಂಕೋರ್ಟ್.. appeared first on Good News 24x7.

]]>
ರೇಣುಕಾಸ್ವಾಮಿ ಕೇಸ್; ಸೆ.9 ಕ್ಕೆ ವಿಚಾರಣೆ ಮುಂದೂಡಿ ಕೋರ್ಟ್! https://www.goodnews24x7.com/renukaswamy-case-court-adjourns-hearing-to-september-9/ Tue, 12 Aug 2025 07:50:52 +0000 https://www.goodnews24x7.com/?p=5909 ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಪವಿತ್ರಾ ಗೌಡ ಸೇರಿದಂತೆ ಉಳಿದ ಆರೋಪಿಗಳು ಮಂಗಳವಾರ ನ್ಯಾಯಾಲಯದ ಮುಂದೆ ಹಾಜರಾದರು. ಸಿಸಿಹೆಚ್ 63ರ ನ್ಯಾಯಾಧೀಶರ ಮುಂದೆ ಆರೋಪಿಗಳು ಹಾಜರಾದರು. ಚಾರ್ಜ್ ಫ್ರೇಮ್‌ಗೆ ನ್ಯಾಯಾಧೀಶರು ಸಮಯ ನಿಗದಿಪಡಿಸಿದರು. ಪ್ರಕರಣದ ವಿಚಾರಣೆಯನ್ನು…

The post ರೇಣುಕಾಸ್ವಾಮಿ ಕೇಸ್; ಸೆ.9 ಕ್ಕೆ ವಿಚಾರಣೆ ಮುಂದೂಡಿ ಕೋರ್ಟ್! appeared first on Good News 24x7.

]]>

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಪವಿತ್ರಾ ಗೌಡ ಸೇರಿದಂತೆ ಉಳಿದ ಆರೋಪಿಗಳು ಮಂಗಳವಾರ ನ್ಯಾಯಾಲಯದ ಮುಂದೆ ಹಾಜರಾದರು.

ಸಿಸಿಹೆಚ್ 63ರ ನ್ಯಾಯಾಧೀಶರ ಮುಂದೆ ಆರೋಪಿಗಳು ಹಾಜರಾದರು. ಚಾರ್ಜ್ ಫ್ರೇಮ್‌ಗೆ ನ್ಯಾಯಾಧೀಶರು ಸಮಯ ನಿಗದಿಪಡಿಸಿದರು. ಪ್ರಕರಣದ ವಿಚಾರಣೆಯನ್ನು ಸೆ.9ಕ್ಕೆ ಮುಂದೂಡಿ ಕೋರ್ಟ್ ಆದೇಶ ಹೊರಡಿಸಿದೆ.

ಆರೋಪಿಗಳಾದ ಪವಿತ್ರಾ ಗೌಡ, ದರ್ಶನ್, ಪುಟ್ಟಸ್ವಾಮಿ, ರಾಘವೇಂದ್ರ, ನಂದೀಶ್, ರವಿಶಂಕರ್, ನಾಗರಾಜು, ಲಕ್ಷ್ಮಣ್, ದೀಪಕ್ ಕುಮಾರ್ ನ್ಯಾಯಾಲಯದ ಮುಂದೆ ಹಾಜರಿದ್ದರು. ವಿನಯ್, ಕಾರ್ತಿಕ್, ಕೇಶವಮೂರ್ತಿ, ನಿಖಿಲ್ ಗೈರಾಗಿದ್ದರು.

ವಿಚಾರಣೆ ಬಳಿಕ ಪವಿತ್ರಾ ಗೌಡ ಕೋರ್ಟ್ ಆವರಣದಲ್ಲೇ ನಿಂತಿದ್ದರು. ದರ್ಶನ್ ಹೋಗುವುದನ್ನು ನೋಡಿಕೊಂಡು ನಿಂತಿದ್ದರು. ಆದರೆ, ಪವಿತ್ರಾ ಗೌಡ ಕಡೆ ತಿರುಗಿ ನೋಡದೇ ದರ್ಶನ್ ತೆರಳಿದರು. ವಿಚಾರಣೆಗೆ ಹಾಜರಾಗಿದ್ದ ದರ್ಶನ್‌ಗೆ ನಟ ಧನ್ವೀರ್ ಸಾಥ್ ಕೊಟ್ಟಿದ್ದರು.

The post ರೇಣುಕಾಸ್ವಾಮಿ ಕೇಸ್; ಸೆ.9 ಕ್ಕೆ ವಿಚಾರಣೆ ಮುಂದೂಡಿ ಕೋರ್ಟ್! appeared first on Good News 24x7.

]]>
ಸೋನುಗೆ ಡಿ ಬಾಸ್ ಫ್ಯಾನ್ಸ್ ಕಾಟ ‘ದರ್ಶನ್ ರೌಡಿ ಆಗಬೇಕಿತ್ತು’ ಎಂದ ಕಂಟೆಂಟ್ ಕ್ರಿಯೇಟರ್​.. https://www.goodnews24x7.com/sonu-gets-d-boss-fans-attack-says-content-creator-darshan-should-have-been-a-rowdy/ Wed, 06 Aug 2025 05:59:02 +0000 https://www.goodnews24x7.com/?p=5407 ದರ್ಶನ್ ಅಭಿಮಾನಿಗಳು ಸೋನು ಶೆಟ್ಟಿ ಅವರಿಗೆ ಅಶ್ಲೀಲ ಹಾಗೂ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಾರೆ. ಸೋನು ಶೆಟ್ಟಿ ಅಭಿಮಾನಿಗಳ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ. ರಮ್ಯಾ ಅವರು ಈ ಬಗ್ಗೆ ಪೊಲೀಸ್ ದೂರು ದಾಖಲಿಸಿದ್ದು, ಕೆಲವರನ್ನು ಬಂಧಿಸಲಾಗಿದೆ. ಇದಾದ ಬಳಿಕವೂ ಅವರು ಬುದ್ಧಿ ಕಲಿತಂತೆ…

The post ಸೋನುಗೆ ಡಿ ಬಾಸ್ ಫ್ಯಾನ್ಸ್ ಕಾಟ ‘ದರ್ಶನ್ ರೌಡಿ ಆಗಬೇಕಿತ್ತು’ ಎಂದ ಕಂಟೆಂಟ್ ಕ್ರಿಯೇಟರ್​.. appeared first on Good News 24x7.

]]>

ದರ್ಶನ್ ಅಭಿಮಾನಿಗಳು ಸೋನು ಶೆಟ್ಟಿ ಅವರಿಗೆ ಅಶ್ಲೀಲ ಹಾಗೂ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಾರೆ. ಸೋನು ಶೆಟ್ಟಿ ಅಭಿಮಾನಿಗಳ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ. ರಮ್ಯಾ ಅವರು ಈ ಬಗ್ಗೆ ಪೊಲೀಸ್ ದೂರು ದಾಖಲಿಸಿದ್ದು, ಕೆಲವರನ್ನು ಬಂಧಿಸಲಾಗಿದೆ. ಇದಾದ ಬಳಿಕವೂ ಅವರು ಬುದ್ಧಿ ಕಲಿತಂತೆ ಕಾಣಿಸುತ್ತಿಲ್ಲ. ‘ದರ್ಶನ್ ರೌಡಿ ಆಗಬೇಕಿತ್ತು’ ಎಂದ ಕಂಟೆಂಟ್ ಕ್ರಿಯೇಟರ್​ ಸೋನುಗೆ ಡಿ

ನಟ ದರ್ಶನ್ ಅಭಿಮಾನಿಗಳಿಗೆ ಇತ್ತೀಚೆಗೆ ರಮ್ಯಾ  ಬಿಸಿ ಮುಟ್ಟಿಸಿದ್ದಾರೆ. ತಮಗೆ ಅಶ್ಲೀಲ ಸಂದೇಶ ಕಳುಹಿಸಿದ ಅನೇಕರ ಹೆಸರನ್ನು ಅವರು ಸೈಬರ್ ಕ್ರೈಮ್​ಗೆ ನೀಡಿದ್ದು, ಈ ಪೈಕಿ ಕೆಲವರ ಬಂಧನ ಆಗಿದೆ. ಆದಾಗ್ಯೂ ಅವರ ಅಭಿಮಾನಿಗಳು ತಮ್ಮ ಕಾಯಕ ಮುಂದುವರಿಸಿದ್ದಾರೆ. ‘ದರ್ಶನ್ ರೌಡಿ ಆಗಬೇಕಿತ್ತು, ಅಪ್ಪಿ ತಪ್ಪಿ ಹೀರೋ ಆಗಿದ್ದಾರೆ’ ಎಂದಿದ್ದ ಕಂಟೆಂಟ್ ಕ್ರಿಯೇಟರ್ ಸೋನು ಶೆಟ್ಟಿಗೆ ಡಿ ಬಾಸ್ ಫ್ಯಾನ್ಸ್ ಅಶ್ಲೀಲ ಪದ ಬಳಕೆ ಮಾಡಿ ಬೈದಿದ್ದಾರೆ.

‘ಡಿ ಬಾಸ್ ಹಾಗೂ ಅವರ ಫ್ಯಾನ್ಸ್ ಇಷ್ಟ ಆಗಲ್ಲ. ಅವರು ರೌಡಿ ಆಗಬೇಕಿತ್ತು. ಅಪ್ಪಿ-ತಪ್ಪಿ ಹೀರೋ ಆಗಿದ್ದಾರೆ. ಅದುವೇ ಪ್ರಾಬ್ಲಂ. ಅವರ ಫ್ಯಾನ್ಸ್ ಕೂಡ ಹಾಗೆಯೇ ಇದ್ದಾರೆ. ಅವರ ಫ್ಯಾನ್ಸ್​ಗೆ ಬುದ್ಧಿ ಕಲಿಸಬೇಕು’ ಎಂದು ವಾರಗಳ ಹಿಂದೆ ಸೋನು ಶೆಟ್ಟಿ ಪೋಸ್ಟ್ ಮಾಡಿದ್ದರು. ಇದಾದ ಬಳಿಕ ಅವರ ಕಮೆಂಟ್ ಬಾಕ್ಸ್ ಹಾಗೂ ಇನ್​ಸ್ಟಾಗ್ರಾಮ್ ಇನ್​​ಬಾಕ್ಸ್​​ನಲ್ಲಿ ದರ್ಶನ್ ಅಭಿಮಾನಿಗಳು ಅಶ್ಲೀಲ ಸಂದೇಶ ಹಾಗೂ ಬೆದರಿಕೆ ಒಡ್ಡುವ ಸಂದೇಶ ಕಳುಹಿಸುತ್ತಿದ್ದಾರೆ.

https://www.goodnews24x7.com/a-man-booked-a-taxi-for-exactly-%e2%82%b912000/ ಬಸ್‌ ಮುಷ್ಕರದ ಹಿನ್ನೆಲೆ ಬರೋಬ್ಬರಿ ₹12 ಸಾವಿರಕ್ಕೆ ಟ್ಯಾಕ್ಸಿ ಬುಕ್​ ಮಾಡಿದ ವ್ಯಕ್ತಿ.!

‘ದರ್ಶನ್ ಹೆಸರು ಬಳಸಿಕೊಂಡು ನೀವು ಪಬ್ಲಿಸಿಟಿ ಮಾಡಿಕೊಳ್ಳುತ್ತಿದ್ದೀರಾ ಎಂದು ಅನೇಕರು ಹೇಳುತ್ತಿದ್ದಾರೆ. ಆದರೆ, ನನಗೆ ಅವರ ಹೆಸರನ್ನು ತೆಗೆದುಕೊಂಡು ಪಬ್ಲಿಸಿಟಿ ಪಡೆದುಕೊಳ್ಳೋ ಅಗತ್ಯ ನನಗೆ ಇಲ್ಲ’ ಎಂದು ಸೋನು ಶೆಟ್ಟಿ ಹೇಳಿದ್ದಾರೆ. ಇದಾದ ಬಳಿಕ ಸೋನು ಶೆಟ್ಟಿ ಅವರು ಮತ್ತೊಂದು ವಿಡಿಯೋ ಹಂಚಿಕೊಂಡಿದ್ದು, ಇದರಲ್ಲಿ ದರ್ಶನ್ ಅಭಿಮಾನಿಗಳು ಮಾಡಿದ ಕೆಟ್ಟ ಕಮೆಂಟ್​ಗಳನ್ನು ತೋರಿಸಿದ್ದಾರೆ. ಸದ್ಯ ಅವರು ಕಮೆಂಟ್ ಬಾಕ್ಸ್ ಆಫ್ ಮಾಡಿದ್ದಾರೆ.

ರಮ್ಯಾ ಕೇಸ್
ರಮ್ಯಾ ಅವರು ‘ರೇಣುಕಾ ಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ನಿರೀಕ್ಷೆ ಇದೆ’ ಎಂದು ಹೇಳಿದ್ದರು. ಈ ಹೇಳಿಕೆಯ ಬೆನ್ನಲ್ಲೇ ದರ್ಶನ್ ಅಭಿಮಾನಿಗಳು ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ್ದರು. ಕೆಲವರು ಬೆದರಿಕೆ ಹಾಕಿದ್ದರು. ಇದಕ್ಕೆ ರಮ್ಯಾ ಕೇಸ್ ಹಾಕಿದ್ದಾರೆ. ಈ ಪ್ರಕರಣದಲ್ಲಿ ಕೆಲವರ ಬಂಧನ ಆಗಿದೆ. ಇದಾದ ಬಳಿಕವೂ ಅವರು ಬುದ್ಧಿ ಕಲಿತಂತೆ ಕಾಣಿಸುತ್ತಿಲ್ಲ.

The post ಸೋನುಗೆ ಡಿ ಬಾಸ್ ಫ್ಯಾನ್ಸ್ ಕಾಟ ‘ದರ್ಶನ್ ರೌಡಿ ಆಗಬೇಕಿತ್ತು’ ಎಂದ ಕಂಟೆಂಟ್ ಕ್ರಿಯೇಟರ್​.. appeared first on Good News 24x7.

]]>
ನಟ ದರ್ಶನ್​ಗೆ​ ಮಧ್ಯಂತರ ಜಾಮೀನು ಮಂಜೂರು https://www.goodnews24x7.com/actor-darshan-granted-interim-bail/ Wed, 30 Oct 2024 06:06:05 +0000 https://www.goodnews24x7.com/?p=952 ರೇಣುಕಾಸ್ವಾಮಿ ಕೊ* ಕೇಸ್​ನಲ್ಲಿ ಜೈಲು ಪಾಲಾಗಿದ್ದ ದರ್ಶನ್​ಗೆ ಕೋರ್ಟ್​ ಮಧ್ಯಂತರ ಜಾಮೀನು ನೀಡಿದೆ. ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್​ ಆಗಿದ್ದ ದರ್ಶನ್​ಗೆ ಬೆನ್ನು ಹುರಿ ನೋಡುವ ಕಾಣಿಸಿಕೊಂಡಿತ್ತು. ಇದೇ ವಿಚಾರವಾಗಿ ಚಿಕಿತ್ಸೆಗೆಂದು ದರ್ಶನ್​ ಪರವಾದ ಲಾಯರ್​ ಬೇಲ್​ಗೆ ಅರ್ಜಿ…

The post ನಟ ದರ್ಶನ್​ಗೆ​ ಮಧ್ಯಂತರ ಜಾಮೀನು ಮಂಜೂರು appeared first on Good News 24x7.

]]>

ರೇಣುಕಾಸ್ವಾಮಿ ಕೊ* ಕೇಸ್​ನಲ್ಲಿ ಜೈಲು ಪಾಲಾಗಿದ್ದ ದರ್ಶನ್​ಗೆ ಕೋರ್ಟ್​ ಮಧ್ಯಂತರ ಜಾಮೀನು ನೀಡಿದೆ. ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್​ ಆಗಿದ್ದ ದರ್ಶನ್​ಗೆ ಬೆನ್ನು ಹುರಿ ನೋಡುವ ಕಾಣಿಸಿಕೊಂಡಿತ್ತು. ಇದೇ ವಿಚಾರವಾಗಿ ಚಿಕಿತ್ಸೆಗೆಂದು ದರ್ಶನ್​ ಪರವಾದ ಲಾಯರ್​ ಬೇಲ್​ಗೆ ಅರ್ಜಿ ಸಲ್ಲಿಸಿದ್ದರು. ದರ್ಶನ್​ ವೈದ್ಯಕೀಯ ವರದಿಯನ್ನು ಪರಿಶೀಲಿಸಿದ ಹೈಕೋರ್ಟ್​​ ಮಧ್ಯಂತರ ಜಾಮೀನು ನೀಡಿದೆ.

ಬಳ್ಳಾರಿ ಜೈಲಿಗೆ ಸೇರಿದ ದರ್ಶನ್​ ಅಲ್ಲಿ 63 ಕಳೆದಿದ್ದಾರೆ. ಇದರ ನಡುವೆ ಬೆನ್ನು ನೋವು ಕಾಣಿಸಿಕೊಂಡಿದೆ. ಇದೀಗ ಹೈಕೋರ್ಟ್​ ದರ್ಶನ್​​​​ ಬೆನ್ನು ನೋವಿನ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ನೀಡಿದೆ. ಮಧ್ಯಂತರವೆಂದರೆ ತಾತ್ಕಾಲಿಕ ಜಾಮೀನು ಆಗಿದ್ದು, ಕೋರ್ಟ್​ ಆದೇಶದಂತೆ ಆರೋಪಿಯು ನಿರ್ದಿಷ್ಟ ಅವಧಿಯವರೆಗೆ ಈ ಜಾಮೀನು ನೀಡಿದೆ. ಅದರಂತೆಯೇ ದರ್ಶನ್​ ವಿಚಾರದಲ್ಲಿ 6 ವಾರಗಳ ಕಾಲ ಮಧ್ಯಂತರ ಜಾಮೀನು ಸಿಕ್ಕಿದೆ.

The post ನಟ ದರ್ಶನ್​ಗೆ​ ಮಧ್ಯಂತರ ಜಾಮೀನು ಮಂಜೂರು appeared first on Good News 24x7.

]]>
ನಾಳೆ ನಿರ್ಧಾರ ಆಗಲಿದೆ ನಟ ದರ್ಶನ್ ಜೈಲು ಭವಿಷ್ಯ… https://www.goodnews24x7.com/actor-darshans-jail-fate-will-be-decided-tomorrow/ Sun, 08 Sep 2024 08:54:05 +0000 https://www.goodnews24x7.com/?p=535 ನಾಳೆ ನಿರ್ಧಾರ ಆಗಲಿದೆ ನಟ ದರ್ಶನ್ ಜೈಲು ಭವಿಷ್ಯ… ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್. ಸೆಪ್ಟೆಂಬರ್ 9 ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಬೆಂಗಳೂರು 24 ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿತ್ತು. ನಾಳೆಗೆ ನಟ…

The post ನಾಳೆ ನಿರ್ಧಾರ ಆಗಲಿದೆ ನಟ ದರ್ಶನ್ ಜೈಲು ಭವಿಷ್ಯ… appeared first on Good News 24x7.

]]>

ನಾಳೆ ನಿರ್ಧಾರ ಆಗಲಿದೆ ನಟ ದರ್ಶನ್ ಜೈಲು ಭವಿಷ್ಯ…

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್. ಸೆಪ್ಟೆಂಬರ್ 9 ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಬೆಂಗಳೂರು 24 ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿತ್ತು.

ನಾಳೆಗೆ ನಟ ದರ್ಶನ್ 13 ದಿನಗಳ ಕಸ್ಟಡಿ ಅಂತ್ಯ. ನಾಳೆ ನಿರ್ಧಾರ ಆಗಲಿದೆ ದರ್ಶನ್ ಜೈಲು ಭವಿಷ್ಯ. ಜೈಲಿಂದಲೇ ವಿಚಾರಣೆಗೆ ಹಾಜರಾಗಲಿರೋ ದರ್ಶನ್. ವಿಡಿಯೋ ಸಂವಾದದ ಮೂಲಕ ಕೋರ್ಟ್​ಗೆ ಹಾಜರು. ಬೆಂಗಳೂರು 24ನೇ ಎಸಿಎಂಎಂ ಕೋರ್ಟ್​ನಲ್ಲಿ ವಿಚಾರಣೆ. ನಾಳೆ ಮಧ್ಯಾಹ್ನ ನಡೆಯಲಿರೋ ದರ್ಶನ್ ವಿಚಾರಣೆ

The post ನಾಳೆ ನಿರ್ಧಾರ ಆಗಲಿದೆ ನಟ ದರ್ಶನ್ ಜೈಲು ಭವಿಷ್ಯ… appeared first on Good News 24x7.

]]>