DCM Archives - Good News 24x7 https://www.goodnews24x7.com/tag/dcm/ Kannada Tue, 28 Apr 2026 13:40:38 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg DCM Archives - Good News 24x7 https://www.goodnews24x7.com/tag/dcm/ 32 32 ಸಿಎಂ ಸ್ಥಾನದ ಚರ್ಚೆ ಮಧ್ಯೆ ಒಂದೇ ಕಾರಿನಲ್ಲಿ ಬಂದ ಸಿದ್ದರಾಮಯ್ಯ-ಡಿಕೆಶಿ: ಕುತೂಹಲ ಮೂಡಿಸಿದ ‘ಜೋಡಿ’ ಪಯಣ! https://www.goodnews24x7.com/siddaramaiah-dk-shivkumar-arrive-in-the-same-car-amid-discussions-over-the-cm-post-an-interesting-couple-journey/ Tue, 28 Apr 2026 13:40:38 +0000 https://www.goodnews24x7.com/?p=9479 ಒಂದೇ ಕಾರಿನಲ್ಲಿ ಆಗಮನ: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಮತ್ತು ಮುಖ್ಯಮಂತ್ರಿ ಗಾದಿಯ ಕುರಿತು ಭಾರಿ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಇಂದು ವಿಧಾನಸೌಧಕ್ಕೆ ಒಂದೇ ಕಾರಿನಲ್ಲಿ ಆಗಮಿಸಿ ಎಲ್ಲರ ಗಮನ ಸೆಳೆದರು. ಲೋಕಭವನದಲ್ಲಿ…

The post ಸಿಎಂ ಸ್ಥಾನದ ಚರ್ಚೆ ಮಧ್ಯೆ ಒಂದೇ ಕಾರಿನಲ್ಲಿ ಬಂದ ಸಿದ್ದರಾಮಯ್ಯ-ಡಿಕೆಶಿ: ಕುತೂಹಲ ಮೂಡಿಸಿದ ‘ಜೋಡಿ’ ಪಯಣ! appeared first on Good News 24x7.

]]>

ಒಂದೇ ಕಾರಿನಲ್ಲಿ ಆಗಮನ:
ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಮತ್ತು ಮುಖ್ಯಮಂತ್ರಿ ಗಾದಿಯ ಕುರಿತು ಭಾರಿ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಇಂದು ವಿಧಾನಸೌಧಕ್ಕೆ ಒಂದೇ ಕಾರಿನಲ್ಲಿ ಆಗಮಿಸಿ ಎಲ್ಲರ ಗಮನ ಸೆಳೆದರು. ಲೋಕಭವನದಲ್ಲಿ ನವೀಕೃತ ಸ್ವಾಗತ ಕೇಂದ್ರ ಮತ್ತು ಗೋಶಾಲೆ ಉದ್ಘಾಟನಾ ಕಾರ್ಯಕ್ರಮ ಮುಗಿಸಿ, ಅಲ್ಲಿಂದ ಇಬ್ಬರೂ ನಾಯಕರು ಜೊತೆಯಾಗಿಯೇ ಒಂದೇ ವಾಹನದಲ್ಲಿ ವಿಧಾನಸೌಧಕ್ಕೆ ಬಂದಿಳಿದರು.

ಗೌಪ್ಯ ಸಮಾಲೋಚನೆ:
ವಿಧಾನಸೌಧಕ್ಕೆ ಬಂದ ನಂತರ ಮುಖ್ಯಮಂತ್ರಿಯವರ ಕೊಠಡಿಯಲ್ಲಿ ಈ ಇಬ್ಬರೂ ಪ್ರಮುಖ ನಾಯಕರು ಕೆಲಕಾಲ ಒಂಟಿಯಾಗಿ ಸಮಾಲೋಚನೆ ನಡೆಸಿದರು. ಬಳಿಕ ಮುಖ್ಯ ಮಾಹಿತಿ ಆಯುಕ್ತರ ನೇಮಕಾತಿಗೆ ಸಂಬಂಧಿಸಿದ ಆಯ್ಕೆ ಸಮಿತಿ ಸಭೆಯಲ್ಲೂ ಭಾಗವಹಿಸಿದರು. ನಾಯಕತ್ವ ಬದಲಾವಣೆಯ ವದಂತಿಗಳು ಜೋರಾಗಿರುವ ಈ ಸಮಯದಲ್ಲಿ, ಇಬ್ಬರು ನಾಯಕರು ಒಟ್ಟಿಗೆ ಕಾಣಿಸಿಕೊಂಡಿರುವುದು ಮತ್ತು ನಡೆಸಿದ ಸುದೀರ್ಘ ಚರ್ಚೆಯು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ರಾಜಕೀಯ ಮಹತ್ವ:
ಸಿಎಂ ಮತ್ತು ಡಿಸಿಎಂ ಆಪ್ತ ವಲಯಗಳು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿರುವ ಈ ಸಂದರ್ಭದಲ್ಲಿ, ಇಬ್ಬರೂ ನಾಯಕರು ಒಗ್ಗಟ್ಟು ಪ್ರದರ್ಶಿಸುವ ಉದ್ದೇಶದಿಂದ ಈ ರೀತಿ ಮಾಡಿದ್ದಾರೆಯೇ ಎಂಬ ಮಾತುಗಳು ಕೇಳಿಬರುತ್ತಿವೆ. ಸಂಪುಟ ಪುನಾರಚನೆ ಮತ್ತು ಸಿಎಂ ಬದಲಾವಣೆ ಕುರಿತು ಹೈಕಮಾಂಡ್‌ನಿಂದ ಇನ್ನೂ ಸ್ಪಷ್ಟ ಸಂದೇಶ ಬಾರದಿರುವ ಹಿನ್ನೆಲೆಯಲ್ಲಿ, ಈ ಇಬ್ಬರು ನಾಯಕರ ಮುಂದಿನ ನಡೆ ಏನು ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

The post ಸಿಎಂ ಸ್ಥಾನದ ಚರ್ಚೆ ಮಧ್ಯೆ ಒಂದೇ ಕಾರಿನಲ್ಲಿ ಬಂದ ಸಿದ್ದರಾಮಯ್ಯ-ಡಿಕೆಶಿ: ಕುತೂಹಲ ಮೂಡಿಸಿದ ‘ಜೋಡಿ’ ಪಯಣ! appeared first on Good News 24x7.

]]>
ಡಿಕೆಶಿಗೆ ಸಿಎಂ ಪಟ್ಟ? ಮೇ 15ರೊಳಗೆ ಸಿಗಲಿದೆ ‘ಬರ್ತ್‌ಡೇ ಗಿಫ್ಟ್’ ಎಂದ ಶಾಸಕ ರಂಗನಾಥ್ https://www.goodnews24x7.com/dk-shivakumar-to-be-cm-mla-ranganath-says-he-will-get-birthday-gift-by-may-15/ Mon, 27 Apr 2026 10:28:03 +0000 https://www.goodnews24x7.com/?p=9415 ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನ ಬದಲಾವಣೆಯ ಕುರಿತು ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ಈ ಕುರಿತು ಮಾತನಾಡಿರುವ ಕುಣಿಗಲ್ ಶಾಸಕ ಡಾ. ರಂಗನಾಥ್, ಡಿ.ಕೆ.ಶಿವಕುಮಾರ್ ಅವರು ಕಳೆದ 40 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ನಿಷ್ಠೆಯಿಂದ ಶ್ರಮಿಸಿದ್ದಾರೆ. ಅವರ ಈ ಪರಿಶ್ರಮಕ್ಕೆ ಹೈಕಮಾಂಡ್‌ನಿಂದ…

The post ಡಿಕೆಶಿಗೆ ಸಿಎಂ ಪಟ್ಟ? ಮೇ 15ರೊಳಗೆ ಸಿಗಲಿದೆ ‘ಬರ್ತ್‌ಡೇ ಗಿಫ್ಟ್’ ಎಂದ ಶಾಸಕ ರಂಗನಾಥ್ appeared first on Good News 24x7.

]]>

ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನ ಬದಲಾವಣೆಯ ಕುರಿತು ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ಈ ಕುರಿತು ಮಾತನಾಡಿರುವ ಕುಣಿಗಲ್ ಶಾಸಕ ಡಾ. ರಂಗನಾಥ್, ಡಿ.ಕೆ.ಶಿವಕುಮಾರ್ ಅವರು ಕಳೆದ 40 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ನಿಷ್ಠೆಯಿಂದ ಶ್ರಮಿಸಿದ್ದಾರೆ. ಅವರ ಈ ಪರಿಶ್ರಮಕ್ಕೆ ಹೈಕಮಾಂಡ್‌ನಿಂದ ಸೂಕ್ತ ಪ್ರತಿಫಲ ಸಿಗಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ. ಮೇ 15ರಂದು ಡಿ.ಕೆ.ಶಿವಕುಮಾರ್ ಅವರ ಹುಟ್ಟುಹಬ್ಬವಿದ್ದು, ಅಷ್ಟರೊಳಗೆ ಅವರಿಗೆ ಸಿಹಿ ಸುದ್ದಿ ಸಿಗುವ ಸಾಧ್ಯತೆಯಿದೆ ಎಂದು ಹೇಳುವ ಮೂಲಕ ಸಿಎಂ ಬದಲಾವಣೆ ವದಂತಿಗಳಿಗೆ ಪರೋಕ್ಷವಾಗಿ ಪುಷ್ಟಿ ನೀಡಿದ್ದಾರೆ.

ಅಧಿಕಾರ ಹಂಚಿಕೆ ಒಪ್ಪಂದದ ಗೊಂದಲ:
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆ ಒಪ್ಪಂದದ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು, ಇಂತಹದೊಂದು ಒಪ್ಪಂದದ ಬಗ್ಗೆ ಎಲ್ಲರಲ್ಲೂ ಕುತೂಹಲವಿದೆ ಎಂದು ತಿಳಿಸಿದರು. ಒಪ್ಪಂದದ ಸ್ವರೂಪ ಮತ್ತು ಸಮಯದ ಬಗ್ಗೆ ಹೈಕಮಾಂಡ್ ಸ್ಪಷ್ಟನೆ ನೀಡುವ ಮೂಲಕ ಸದ್ಯ ಚಾಲ್ತಿಯಲ್ಲಿರುವ ಗೊಂದಲಗಳಿಗೆ ತೆರೆ ಎಳೆಯಬೇಕು. ಇದು ಕೇವಲ ನನ್ನೊಬ್ಬನ ಅಭಿಪ್ರಾಯವಲ್ಲ, ಪಕ್ಷದ ಎಲ್ಲರೂ ಇದನ್ನು ಬಯಸುತ್ತಿದ್ದಾರೆ ಎಂದು ಅವರು ಹೈಕಮಾಂಡ್ ಗಮನ ಸೆಳೆದಿದ್ದಾರೆ.

ಹೈಕಮಾಂಡ್ ನಿರ್ಧಾರಕ್ಕೆ ಬದ್ಧ:
ಸದ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತಮ ಆಡಳಿತ ನೀಡುತ್ತಿದ್ದಾರೆ. ಆದರೆ, ಮುಂದಿನ ದಿನಗಳಲ್ಲಿ ಡಿ.ಕೆ. ಶಿವಕುಮಾರ್ ಅವರು ಕೂಡ ಮುಖ್ಯಮಂತ್ರಿ ಸ್ಥಾನ ಅಲಂಕರಿಸಬೇಕು ಎಂಬುದು ನಮ್ಮ ನಿರೀಕ್ಷೆಯಾಗಿದೆ. ನಾವು ಪ್ರಾಮಾಣಿಕವಾಗಿ ಕೆಲಸ ಮಾಡಿ ಫಲಿತಾಂಶವನ್ನು ದೇವರಿಗೆ ಬಿಡಬೇಕು. ಅದೇ ರೀತಿ ಡಿ.ಕೆ.ಶಿವಕುಮಾರ್ ಅವರು ಪಕ್ಷದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಅಂತಿಮವಾಗಿ ವರಿಷ್ಠರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಶಾಸಕ ರಂಗನಾಥ್ ಸ್ಪಷ್ಟಪಡಿಸಿದ್ದಾರೆ.

The post ಡಿಕೆಶಿಗೆ ಸಿಎಂ ಪಟ್ಟ? ಮೇ 15ರೊಳಗೆ ಸಿಗಲಿದೆ ‘ಬರ್ತ್‌ಡೇ ಗಿಫ್ಟ್’ ಎಂದ ಶಾಸಕ ರಂಗನಾಥ್ appeared first on Good News 24x7.

]]>
ನಾಯಕತ್ವ ಬದಲಾವಣೆ ಬಗ್ಗೆ ನಂಗೇನೂ ಗೊತ್ತಿಲ್ಲ, ಸಿಎಂ ಹತ್ರನೇ ಕೇಳಿ ಎಂದ ಡಿಕೆ ಶಿವಕುಮಾರ್ https://www.goodnews24x7.com/i-dont-know-anything-about-the-leadership-change-ask-the-cm-himself-says-dk-shivakumar/ Sun, 16 Nov 2025 05:42:58 +0000 https://www.goodnews24x7.com/?p=8174 ನವದೆಹಲಿ: ಕರ್ನಾಟಕದಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ದೆಹಲಿಗೆ ದೌಡಾಯಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದಾರೆ. ಈ ಬಗ್ಗೆ…

The post ನಾಯಕತ್ವ ಬದಲಾವಣೆ ಬಗ್ಗೆ ನಂಗೇನೂ ಗೊತ್ತಿಲ್ಲ, ಸಿಎಂ ಹತ್ರನೇ ಕೇಳಿ ಎಂದ ಡಿಕೆ ಶಿವಕುಮಾರ್ appeared first on Good News 24x7.

]]>

ನವದೆಹಲಿ: ಕರ್ನಾಟಕದಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ದೆಹಲಿಗೆ ದೌಡಾಯಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದಾರೆ. ಈ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಪ್ರಶ್ನಿಸಿದಾಗ ಅವರು, “ರಾಹುಲ್‌ ಗಾಂಧಿ, ಸಿಎಂ ಸಿದ್ದರಾಮಯ್ಯನವರ ಭೇಟಿ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರು ಯಾವ ವಿಚಾರಕ್ಕೆ ಭೇಟಿಯಾಗಿದ್ದರು, ಏನು ಚರ್ಚೆ ಮಾಡಿದ್ದಾರೆಂದು ನನಗೆ ಗೊತ್ತಿಲ್ಲ ಎಂದಿದ್ದಾರೆ.

ಸಾಮಾನ್ಯವಾಗಿ ಸಿಎಂ ಬಂದಾಗ ಪಕ್ಷದ ವರಿಷ್ಠರನ್ನು ಭೇಟಿಯಾಗುವುದು ಸಹಜ. ನಾಯಕತ್ವ ಬದಲಾವಣೆ ಬಗ್ಗೆ ನನಗೆ ಏನೂ ಗೊತ್ತಿಲ್ಲ, ಏನಾದರೂ ಇದ್ದರೆ ಸಿಎಂ ಹತ್ತಿರ ಮಾತನಾಡಿ. ಪಕ್ಷ ಏನು ಹೇಳುತ್ತೋ ಹಾಗೆ ನಡೆದುಕೊಳ್ಳುವುದು ನನ್ನ ಕೆಲಸ. ಪಕ್ಷದ ಹೈಕಮಾಂಡ್‌ ನನ್ನ ಕೇಳ್ತಾರೆ, ಆಗ ನಾನು ಮಾತನಾಡುತ್ತೇನೆ. ಏನು ಮಾತಾಡಬೇಕೆಂದು ನನಗೆ ಗೊತ್ತು ಎಂದು ದೆಹಲಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

The post ನಾಯಕತ್ವ ಬದಲಾವಣೆ ಬಗ್ಗೆ ನಂಗೇನೂ ಗೊತ್ತಿಲ್ಲ, ಸಿಎಂ ಹತ್ರನೇ ಕೇಳಿ ಎಂದ ಡಿಕೆ ಶಿವಕುಮಾರ್ appeared first on Good News 24x7.

]]>
ಕುಮಾರಸ್ವಾಮಿ ಖಾಲಿ ಟ್ರಂಕ್​ ಎಂದಿದ್ಯಾಕೆ ಡಿಕೆ ಶಿವಕುಮಾರ್;​ ಕಬ್ಬನ್ ಪಾರ್ಕ್​​ನಲ್ಲಿ ಡಿಸಿಎಂ ನಡಿಗೆ​​ https://www.goodnews24x7.com/why-dk-shivakumar-called-kumaraswamy-an-empty-trunk-dcm-walks-in-cubbon-park/ Sun, 26 Oct 2025 12:15:11 +0000 https://www.goodnews24x7.com/?p=7870 ಕಬ್ಬನ್ ಪಾರ್ಕ್ ನಲ್ಲಿರೋ ಶೇಷಾದ್ರಿ ಅಯ್ಯರ್ ಪ್ರತಿಮೆಗೆ ಡಿಸಿಎಂ ಡಿಕೆ ಶಿವಕುಮಾರ್​ ಪುಷ್ಪಾರ್ಚನೆ ಮಾಡಿದ್ರು. ಮೈಸೂರು ದಿವಾನ್ ಆಗಿದ್ದ ಶೇಷಾದ್ರಿ ಅಯ್ಯರ್, ವಾಕ್ ಮುಗಿಸಿ ವೇದಿಕೆಗೆ ಬಂದ ಡಿಸಿಎಂ ಜನರ ಜೊತೆ ಸಂವಾದ ನಡೆಸಿದ್ರು. ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ (DCM…

The post ಕುಮಾರಸ್ವಾಮಿ ಖಾಲಿ ಟ್ರಂಕ್​ ಎಂದಿದ್ಯಾಕೆ ಡಿಕೆ ಶಿವಕುಮಾರ್;​ ಕಬ್ಬನ್ ಪಾರ್ಕ್​​ನಲ್ಲಿ ಡಿಸಿಎಂ ನಡಿಗೆ​​ appeared first on Good News 24x7.

]]>

ಕಬ್ಬನ್ ಪಾರ್ಕ್ ನಲ್ಲಿರೋ ಶೇಷಾದ್ರಿ ಅಯ್ಯರ್ ಪ್ರತಿಮೆಗೆ ಡಿಸಿಎಂ ಡಿಕೆ ಶಿವಕುಮಾರ್​ ಪುಷ್ಪಾರ್ಚನೆ ಮಾಡಿದ್ರು. ಮೈಸೂರು ದಿವಾನ್ ಆಗಿದ್ದ ಶೇಷಾದ್ರಿ ಅಯ್ಯರ್, ವಾಕ್ ಮುಗಿಸಿ ವೇದಿಕೆಗೆ ಬಂದ ಡಿಸಿಎಂ ಜನರ ಜೊತೆ ಸಂವಾದ ನಡೆಸಿದ್ರು.

ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಇಂದು ಕಬ್ಬನ್​ ಪಾರ್ಕ್​​ನಲ್ಲಿ ನಡಿಗೆ ​ಕಾರ್ಯಕ್ರಮ ಹಮ್ಮಿಕೊಂಡಿದ್ರು. ಕೆಲ ಕಾಲ ಪಾರ್ಕ್​​ನಲ್ಲಿ ವಾಕಿಂಗ್ (Walking) ನಡೆಸಿದ್ರು. ಇದೇ ವೇಳೆ ಸಾರ್ವಜನಿಕರ ಜೊತೆ ಕೂಡ ಚರ್ಚೆ ನಡೆಸಿದ್ರು. ಬಿ ಖಾತೆಯಿಂದ ಎ ಖಾತೆ ಪರಿವರ್ತನೆ ಬಗ್ಗೆ ಮಾತಾಡ್ತಾ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ರು.

ಕಬ್ಬನ್ ಪಾರ್ಕ್​​ನಲ್ಲಿ ಡಿಸಿಎಂ ವಾಕ್​
ಬೆಂಗಳೂರು ನಡಿಗೆ ಮೂಲಕ ಜನರ ಜೊತೆ ಹೆಜ್ಜೆ ಹಾಕಲು ಡಿಸಿಎಂ ಕಬ್ಬನ್ ಪಾರ್ಕಿಗೆ ಆಗಮಿಸಿದ್ರು. ಇಂದು ಎಲ್ಲ ಪಾಲಿಕೆ ವ್ಯಾಪ್ತಿಯ ಜನರಿಗೂ ದೂರು ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಬೆಳಗ್ಗೆ 7 ಗಂಟೆಗೆ ಬೆಂಗಳೂರು ನಡಿಗೆ ಆರಂಭವಾಯ್ತು, ಡಿಸಿಎಂಗೆ ಶಾಸಕ ರಿಜ್ವಾನಾ ಹರ್ಷದ್, ಹ್ಯಾರಿಸ್ ಸಾಥ್ ನೀಡಿದ್ರು.

ಕುಮಾರಸ್ವಾಮಿ ಖಾಲಿ ಟ್ರಂಕ್
ಸಾರ್ವಜನಿಕರ ಜೊತೆಗೆ ಖಾತಾ ಬಗ್ಗೆ ಡಿಸಿಎಂ ಮಾತುಕತೆ ನಡೆಸಿದ್ದಾರೆ. ಮಾತುಕತೆ ಸಮಯದಲ್ಲಿ ಕುಮಾರಸ್ವಾಮಿಯನ್ನ ಖಾಲಿ ಟ್ರಂಕ್ ಎಂದು ಕರೆದಿದ್ದಾರೆ. ಇದೇ ವೇಳೆ ಸಾರ್ವಜನಿಕರು ಒಳ್ಳೆಯ ಕೆಲಸ ಮಾಡ್ತಾ ಇದ್ದೀರಾ ಡಿಕೆಶಿಗೆ ಹೇಳಿದ್ದಾರೆ. ಇದಕ್ಕೆ ಥ್ಯಾಂಕ್ ಯೂ ಎಂದ ಡಿಸಿಎಂ ನಿಮ್ಮಂತಹ ಎಜ್ಯುಕೇಟೆಡ್ ಬಿ‌ ಖಾತಾದಿಂದ ಎ ಖಾತಾ ಮಾಡುವಂತದನ್ನು ಒಪ್ಪುತ್ತಿದ್ದೀರಾ ಎಂದಿದ್ದಾರೆ.

ಜನರ ಜೊತೆ ಡಿಸಿಎಂ ಸಂವಾದ
ಕಬ್ಬನ್ ಪಾರ್ಕ್ ನಲ್ಲಿರೋ ಶೇಷಾದ್ರಿ ಅಯ್ಯರ್ ಪ್ರತಿಮೆಗೆ ಡಿಸಿಎಂ ಡಿಕೆ ಶಿವಕುಮಾರ್​ ಪುಷ್ಪಾರ್ಚನೆ ಮಾಡಿದ್ರು. ಮೈಸೂರು ದಿವಾನ್ ಆಗಿದ್ದ ಶೇಷಾದ್ರಿ ಅಯ್ಯರ್, ವಾಕ್ ಮುಗಿಸಿ ವೇದಿಕೆಗೆ ಬಂದ ಡಿಸಿಎಂ ಜನರ ಜೊತೆ ಸಂವಾದ ನಡೆಸಿದ್ರು.ಸಿಗ್ನಲ್​​ನಲ್ಲಿ ಸಮಸ್ಯೆ ಹೆಚ್ಚಾಗಿದೆ. ಟನಲ್‌ ರಸ್ತೆ ವಿರೋಧಿಸುತ್ತಿದ್ದು, ಮುಂಬೈನಲ್ಲಿ ಅವರೇ ಟನಲ್‌ ರಸ್ತೆ ಮಾಡ್ತಿದ್ದಾರೆ. ಯಾವುದೇ ಕಾರಣಕ್ಕೂ ಟನಲ್‌ ರಸ್ತೆ ಕಾರ್ಯ ನಿಲ್ಲಿಸಬೇಡಿ ಎಂದು ಕಬ್ಬನ್ ಪಾರ್ಕ್ ನಡಿಗೆದಾರರ ಸಂಘ ಮನವಿ ಮಾಡಿದೆ. ಲಾಲ್ ಬಾಗ್ ರೀತಿ ಕಬ್ಬನ್ ಪಾರ್ಕ್ ಅಭಿವೃದ್ಧಿಗೆ ಜನರು ಮನವಿ ಮಾಡಿದ್ದಾರೆ. ಕಬ್ಬನ್ ಪಾರ್ಕ್ ಒಳಗಿರೋ ಲೀಸ್ ಬಿಲ್ಡಿಂಗ್​​ಗಳ ತೆರವಿಗೆ ಆಗ್ರಹಿಸಿದ್ದಾರೆ.

ಲಾಲ್ ಬಾಗ್ ಮಾದರಿಯಲ್ಲೇ ಕಬ್ಬನ್ ಪಾರ್ಕ್ ನಲ್ಲಿ ಟಿಕೆಟ್ ಮಾಡಿ, ಯಾವುದೇ ದಿನ ಕಬ್ಬನ್ ಪಾರ್ಕ್ ನಲ್ಲಿ ವಾಹನಗಳು ಓಡಾಡದಂತೆ ಮನವಿ ಮಾಡಿದ್ರು. ಯಾವುದೇ ಕಮರ್ಷಿಯಲ್ ಚಟುವಟಿಕೆ ನಡೆಯದಂತೆ ಡಿಸಿಎಂಗೆ ಮನವಿ ಸಲ್ಲಿಸಿದ ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ಅಧ್ಯಕ್ಷ ಉಮೇಶ್ ಆಗ್ರಹಿಸಿದ್ರು.

The post ಕುಮಾರಸ್ವಾಮಿ ಖಾಲಿ ಟ್ರಂಕ್​ ಎಂದಿದ್ಯಾಕೆ ಡಿಕೆ ಶಿವಕುಮಾರ್;​ ಕಬ್ಬನ್ ಪಾರ್ಕ್​​ನಲ್ಲಿ ಡಿಸಿಎಂ ನಡಿಗೆ​​ appeared first on Good News 24x7.

]]>
ದೆಹಲಿಗೆ ಜು.25 ರಂದು ಪ್ರವಾಸ ಕೈಗೊಂಡು ಸಿಎಂ ಮತ್ತು ಡಿಸಿಎಂ. https://www.goodnews24x7.com/cm-and-dcm-to-visit-delhi-on-july-25/ Mon, 21 Jul 2025 09:21:15 +0000 https://www.goodnews24x7.com/?p=5168 ಬೆಂಗಳೂರು : ಇತ್ತೀಚೆಗೆ ದೆಹಲಿಗೆ ಪ್ರವಾಸ ಕೈಗೊಂಡು ಕೇಂದ್ರ ಸಚಿವರ ಭೇಟಿಯಾಗಿ ರಾಜ್ಯದ ಯೋಜನೆಗಳ ಬಗ್ಗೆ ಚರ್ಚಿಸಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಇದೀಗ ಜುಲೈ 25ಕ್ಕೆ ಮತ್ತೆ ದೆಹಲಿಗೆ ತೆರಳುತ್ತಿದ್ದಾರೆ. ಜುಲೈ 25ರಂದು ದೆಹಲಿಗೆ ತೆರಳಲಿರುವ ಸಿಎಂ…

The post ದೆಹಲಿಗೆ ಜು.25 ರಂದು ಪ್ರವಾಸ ಕೈಗೊಂಡು ಸಿಎಂ ಮತ್ತು ಡಿಸಿಎಂ. appeared first on Good News 24x7.

]]>

ಬೆಂಗಳೂರು : ಇತ್ತೀಚೆಗೆ ದೆಹಲಿಗೆ ಪ್ರವಾಸ ಕೈಗೊಂಡು ಕೇಂದ್ರ ಸಚಿವರ ಭೇಟಿಯಾಗಿ ರಾಜ್ಯದ ಯೋಜನೆಗಳ ಬಗ್ಗೆ ಚರ್ಚಿಸಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಇದೀಗ ಜುಲೈ 25ಕ್ಕೆ ಮತ್ತೆ ದೆಹಲಿಗೆ ತೆರಳುತ್ತಿದ್ದಾರೆ.

ಜುಲೈ 25ರಂದು ದೆಹಲಿಗೆ ತೆರಳಲಿರುವ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿದ್ದಾರೆ ಎಂದು ಹೇಳಿಲಾಗುತ್ತದೆ.
ಈ ಕುರಿತು ಪ್ರತಿಕ್ರಿಯೆ ನೀಢಿರುವ ಡಿಸಿಎಂ ಡಿಕೆ ಶಿವಕುಮಾರ್, ಜುಲೈ 25ರಂದು ನಾನು ಮತ್ತು ಸಿಎಂ ಸಿದ್ದರಾಮಯ್ಯ ದೆಹಲಿಗೆ ಹೋಗುತ್ತಿದ್ದೇವೆ ಅಷ್ಟು ಮಾತ್ರ ನನಗೆ ಗೊತ್ತು ಮಿಕ್ಕಿದ್ದು ಅಧಿವೇಶನ ನಡೆಯುತ್ತಿದೆ ಎಂದರು.

ಬಿಬಿಎಂಪಿ ವಿಭಜನೆ ವಿರೋಧಿಸಿ ಪಿಐಎಲ್ ಸಲ್ಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಅವರ ಹಕ್ಕನ್ನು ನಾನು ಮೊಟಕುಗೊಳಿಸಲು ಆಗುತ್ತಾ? ಕೋರ್ಟ್ ನಲ್ಲಿ ಅವರು ಪ್ರಶ್ನಿಸಬಹುದು . ಕೋರ್ಟಿಗೆ ಹೋಗಬಹುದು ಅದು ತಪ್ಪಲ್ಲ ಅವರು ಪಿಐಎಲ್ ಹಾಕುವುದನ್ನು ಬೇಡ ಅನ್ನೋಕಾಗುತ್ತಾ? ಎಂದು ಪ್ರಶ್ನಿಸಿದರು.

The post ದೆಹಲಿಗೆ ಜು.25 ರಂದು ಪ್ರವಾಸ ಕೈಗೊಂಡು ಸಿಎಂ ಮತ್ತು ಡಿಸಿಎಂ. appeared first on Good News 24x7.

]]>
ಡಿಸಿಎಂ ಡಿಕೆ ಶಿವಕುಮಾರ್ ಜತೆ ಬಹಿರಂಗ ಚರ್ಚೆಗೆ ಸಿದ್ಧ:ತೇಜಸ್ವಿ ಸೂರ್ಯ https://www.goodnews24x7.com/%e0%b2%a1%e0%b2%bf%e0%b2%b8%e0%b2%bf%e0%b2%8e%e0%b2%82-%e0%b2%a1%e0%b2%bf%e0%b2%95%e0%b3%86-%e0%b2%b6%e0%b2%bf%e0%b2%b5%e0%b2%95%e0%b3%81%e0%b2%ae%e0%b2%be%e0%b2%b0%e0%b3%8d-%e0%b2%9c%e0%b2%a4/ Thu, 17 Jul 2025 10:23:35 +0000 https://www.goodnews24x7.com/?p=5156 ಬೆಂಗಳೂರಿನ ಸುರಂಗ ಮಾರ್ಗ ಯೋಜನೆ ಕುರಿತು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ಕಾಂಗ್ರೆಸ್ ನಡುವೆ ವಾಗ್ವಾದ ತೀವ್ರಗೊಂಡಿದೆ. ಯೋಜನೆ ಭ್ರಷ್ಟಾಚಾರದಿಂದ ಕೂಡಿದ್ದು, ಬೆಂಗಳೂರಿಗೆ ಅದರ ಅಗತ್ಯವೇ ಇಲ್ಲ ಎಂದು ಸೂರ್ಯ ಪ್ರತಿಪಾದಿಸಿದರೆ, ಕಾಂಗ್ರೆಸ್ ಯೋಜನೆಯ ಪ್ರಯೋಜನಗಳನ್ನು ಪ್ರತಿಪಾದಿಸುತ್ತಿದೆ. ಈ ಮಧ್ಯೆ,…

The post ಡಿಸಿಎಂ ಡಿಕೆ ಶಿವಕುಮಾರ್ ಜತೆ ಬಹಿರಂಗ ಚರ್ಚೆಗೆ ಸಿದ್ಧ:ತೇಜಸ್ವಿ ಸೂರ್ಯ appeared first on Good News 24x7.

]]>

ಬೆಂಗಳೂರಿನ ಸುರಂಗ ಮಾರ್ಗ ಯೋಜನೆ ಕುರಿತು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ಕಾಂಗ್ರೆಸ್ ನಡುವೆ ವಾಗ್ವಾದ ತೀವ್ರಗೊಂಡಿದೆ. ಯೋಜನೆ ಭ್ರಷ್ಟಾಚಾರದಿಂದ ಕೂಡಿದ್ದು, ಬೆಂಗಳೂರಿಗೆ ಅದರ ಅಗತ್ಯವೇ ಇಲ್ಲ ಎಂದು ಸೂರ್ಯ ಪ್ರತಿಪಾದಿಸಿದರೆ, ಕಾಂಗ್ರೆಸ್ ಯೋಜನೆಯ ಪ್ರಯೋಜನಗಳನ್ನು ಪ್ರತಿಪಾದಿಸುತ್ತಿದೆ. ಈ ಮಧ್ಯೆ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೊತೆ ಬಹಿರಂಗ ಚರ್ಚೆಗೆ ಸೂರ್ಯ ಸವಾಲು ಹಾಕಿದ್ದಾರೆ.

ಬೆಂಗಳೂರು, ಜುಲೈ 17: ಬೆಂಗಳೂರಿನಲ್ಲಿ ಉದ್ದೇಶಿತ ಸುರಂಗ ಮಾರ್ಗ ರಸ್ತೆ ವಿಚಾರವಾಗಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ಆಡಳಿತರೂಢ ಕಾಂಗ್ರೆಸ್ನಡುವಣ ವಾಕ್ಸಮರ ತೀವ್ರಗೊಂಡಿದೆ. ಯೋಜನೆಯಿಂದ ಬೆಂಗಳೂರಿಗೆ ಏನೂ ಉಪಯೋಗವಿಲ್ಲ, ಬ್ರಹ್ಮಾಂಡ ಭ್ರಷ್ಟಾಚಾರದಿಂದ ಕೂಡಿದೆ ಎಂದು ತೇಜಸ್ವಿ ಸೂರ್ಯ ಎರಡು ದಿನಗಳ ಹಿಂದೆ ಆರೋಪಿಸಿದ್ದರು. ಅಲ್ಲದೆ, ಯೋಜನೆ ಹೇಗೆ ಸಾಧಕವಲ್ಲ ಎಂಬುದನ್ನು ವಿವರವಾಗಿ ಪತ್ರಿಕಾಗೋಷ್ಠಿ ಮೂಲಕ ಬಹಿರಂಗಪಡಿಸಿದ್ದರು.

ಅದಕ್ಕೆ ತಿರುಗೇಟು ನೀಡಿದ್ದ ಕಾಂಗ್ರೆಸ್, ಯೋಜನೆ ಸಂಬಂಧಿತ ಪ್ರಮುಖ ಸಲಹೆ ಸೂಚನೆಗಳಿಗೆ ಸದಾ ಸ್ವಾಗತವಿದೆ. ಆದರೆ, ಬ್ರಾಂಡ್ ಬೆಂಗಳೂರಿನ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಕೇವಲ ರಾಜಕೀಯ ದೃಷ್ಟಿಯಿಂದ ನೋಡಬಾರದು ಎಂದು ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಸರಣಿ ಸಂದೇಶ ಪ್ರಕಟಿಸುವ ಮೂಲಕ ತಿರುಗೇಟು ನೀಡಿತ್ತು. ಅದಕ್ಕೆ ಪ್ರತಿಕ್ರಿಯಿಸಿರುವ ತೇಜಸ್ವಿ ಸೂರ್ಯ, ಸುರಂಗ ರಸ್ತೆ ಯೋಜನೆಯ ನೇತೃತ್ವ ವಹಿಸಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೊತೆ ಬಹಿರಂಗ ಚರ್ಚೆಗೆ ಸಿದ್ಧವಿದ್ದೇನೆ ಎಂದಿದ್ದಾರೆ.

ಸುರಂಗ ರಸ್ತೆಗೆ ಸಂಬಂಧಿಸಿದ ತಾಂತ್ರಿಕ ಸಲಹೆ ಮತ್ತು ಸಾರ್ವಜನಿಕ ಚರ್ಚೆಗೆ ನೀವು (ಕಾಂಗ್ರೆಸ್ ಸರ್ಕಾರ) ನಿಜಕ್ಕೂ ಮುಕ್ತರಾಗಿದ್ದರೆ, ಡಿಕೆ ಶಿವಕುಮಾರ್ ಜೊತೆ ಬಹಿರಂಗ ಚರ್ಚೆಗೆ ಪ್ರಸ್ತಾಪಿಸುತ್ತಿದ್ದೇನೆ. ಸಮಯ ಮತ್ತು ಸ್ಥಳವನ್ನು ನೀವೇ ನಿಗದಿ ಮಾಡಿ. ಒಳಿತು ಕೆಡುಕುಗಳನ್ನು ಆರೋಗ್ಯಕರ ರೀತಿಯಲ್ಲಿ ಚರ್ಚಿಸುವುದು ಖಂಡಿತವಾಗಿಯೂ ಪ್ರಯೋಜನಕಾರಿಯಾಗಿದೆ. ನಿಮ್ಮಿಂದ ಪ್ರತಿಕ್ರಿಯೆ ನಿರೀಕ್ಷಿಸುತ್ತಿದ್ದೇನೆ ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ.

The post ಡಿಸಿಎಂ ಡಿಕೆ ಶಿವಕುಮಾರ್ ಜತೆ ಬಹಿರಂಗ ಚರ್ಚೆಗೆ ಸಿದ್ಧ:ತೇಜಸ್ವಿ ಸೂರ್ಯ appeared first on Good News 24x7.

]]>
ಡಿಸಿಎಂ ಡಿ.ಕೆ.ಶಿವಕುಮಾರ್ ಕಾಲ ಕುಡಿ ಬಂದಾಗ CM ಆಗೇ ಆಗ್ತಾರೆ :ಶಾಸಕ ರವಿ ಗಾಣಿಗ. https://www.goodnews24x7.com/dcm-d-k-shivakumar-will-become-cm-when-the-time-comes-mla-ravi-ganiga/ Mon, 14 Jul 2025 08:21:52 +0000 https://www.goodnews24x7.com/?p=5094 ಮಂಡ್ಯ,ಜುಲೈ,14, 2025 ಸಿಎಂ ಬದಲಾವಣೆ ವಿಚಾರಕ್ಕೆ ಈಗಾಗಲೇ ಅಂತಿಮ ತೆರೆ ಎಳೆಯಲಾಗಿದ್ದು ಸಿಎಂ ಸಿದ್ದರಾಮಯ್ಯ ತಾನೇ ಐದು ವರ್ಷ ಸಿಎಂ ಎಂದು ಘೋಷಿಸಿಕೊಂಡಿದ್ದಾರೆ. ಈ ಮೂಲಕ ಅಧಿಕಾರ ಹಂಚಿಕೆಯ ಚರ್ಚೆಗೆ ಫುಲ್ ಸ್ಟಾಪ್ ಬಿದ್ದಿದೆ. ಇನ್ನು ಡಿಕೆ ಶಿವಕುಮಾರ್ ಸಿಎಂ ಆಗೇ…

The post ಡಿಸಿಎಂ ಡಿ.ಕೆ.ಶಿವಕುಮಾರ್ ಕಾಲ ಕುಡಿ ಬಂದಾಗ CM ಆಗೇ ಆಗ್ತಾರೆ :ಶಾಸಕ ರವಿ ಗಾಣಿಗ. appeared first on Good News 24x7.

]]>

ಮಂಡ್ಯ,ಜುಲೈ,14, 2025 ಸಿಎಂ ಬದಲಾವಣೆ ವಿಚಾರಕ್ಕೆ ಈಗಾಗಲೇ ಅಂತಿಮ ತೆರೆ ಎಳೆಯಲಾಗಿದ್ದು ಸಿಎಂ ಸಿದ್ದರಾಮಯ್ಯ ತಾನೇ ಐದು ವರ್ಷ ಸಿಎಂ ಎಂದು ಘೋಷಿಸಿಕೊಂಡಿದ್ದಾರೆ. ಈ ಮೂಲಕ ಅಧಿಕಾರ ಹಂಚಿಕೆಯ ಚರ್ಚೆಗೆ ಫುಲ್ ಸ್ಟಾಪ್ ಬಿದ್ದಿದೆ. ಇನ್ನು ಡಿಕೆ ಶಿವಕುಮಾರ್ ಸಿಎಂ ಆಗೇ ಆಗುತ್ತಾರೆ ಎಂದು ಕಾಂಗ್ರೆಸ್ ಶಾಸಕ ರವಿಗಣಿಗ ಭವಿಷ್ಯ ನುಡಿದಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ರವಿ ಗಣಿಗ, ಕಾಲ ಕೂಡಿ ಬಂದಾಗ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ. ಡಿಕೆ ಶಿವಕುಮಾರ್ ಸಿಎಂ ಆಗಲೇಬೇಕು. ಆಗೇ ಆಗುತ್ತಾರೆ. ಎಲ್ಲಾ ಶಾಸಕರು ಡಿಕೆ ಶಿವಕುಮಾರ್ ಪರ ಇದ್ದಾರೆ ಎಂದರು.

ಬಿಜೆಪಿ ಜೆಡಿಎಸ್ ಅನುದಾನ ತಾರತಮ್ಯ ಕುರಿತು ಪ್ರತಿಕ್ರಿಯಿಸಿದ ಶಾಸಕ ರವಿಗಣಿಗ, ಗ್ಯಾರಂಟಿಯಿಂದ ಅನುದಾನಕ್ಕೆ ಯಾವುದೇ ಸಮಸ್ಯೆ ಇಲ್ಲ. ನೂರಾರು ಕೋಟಿ ಅನುದಾನ ನಮಗೆ ನೀಡಲಾಗಿದೆ. ಕೆಆರ್ ಪೇಟೆಗೆ ಅನುದಾನ ತಾರತಮ್ಯ. ಕೆಆರ್ ಪೇಟೆ ಶಾಸಕರು ನಮ್ಮ ಪಕ್ಷದವರಾ..? ಎಂದು ಪ್ರಶ್ನಿಸಿದರು.

The post ಡಿಸಿಎಂ ಡಿ.ಕೆ.ಶಿವಕುಮಾರ್ ಕಾಲ ಕುಡಿ ಬಂದಾಗ CM ಆಗೇ ಆಗ್ತಾರೆ :ಶಾಸಕ ರವಿ ಗಾಣಿಗ. appeared first on Good News 24x7.

]]>
ಶಕ್ತಿ ಯೋಜನೆಯಲ್ಲಿ ದೊಡ್ಡ ಮೈಲಿಗಲ್ಲು – ಡಾ. ಪುಷ್ಪಾ ಅಮರನಾಥ್ https://www.goodnews24x7.com/big-milestone-in-shakti-yojana-dr-pushpa-amarnath/ Sat, 12 Jul 2025 12:55:21 +0000 https://www.goodnews24x7.com/?p=5047 ಮೈಸೂರು : ಈವರೆಗೆ ಶಕ್ತಿ ಯೋಜನೆಯಲ್ಲಿ 500 ಕೋಟಿ ಮಹಿಳೆಯರು ಓಡಾಡಿದ್ದಾರೆ. ಇದೊಂದು ದೊಡ್ಡ ಮೈಲಿಗಲ್ಲಾಗಿದ್ದು ಈ ಮೂಲಕ ನಮ್ಮ ಸರ್ಕಾರ ಇಡೀ ದೇಶದಲ್ಲೇ ದೊಡ್ಡ ದಾಖಲೆ ಬರೆದಿದೆ ಎಂದು ಗ್ಯಾರೆಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ನುಡಿದರು.…

The post ಶಕ್ತಿ ಯೋಜನೆಯಲ್ಲಿ ದೊಡ್ಡ ಮೈಲಿಗಲ್ಲು – ಡಾ. ಪುಷ್ಪಾ ಅಮರನಾಥ್ appeared first on Good News 24x7.

]]>

ಮೈಸೂರು : ಈವರೆಗೆ ಶಕ್ತಿ ಯೋಜನೆಯಲ್ಲಿ 500 ಕೋಟಿ ಮಹಿಳೆಯರು ಓಡಾಡಿದ್ದಾರೆ. ಇದೊಂದು ದೊಡ್ಡ ಮೈಲಿಗಲ್ಲಾಗಿದ್ದು ಈ ಮೂಲಕ ನಮ್ಮ ಸರ್ಕಾರ ಇಡೀ ದೇಶದಲ್ಲೇ ದೊಡ್ಡ ದಾಖಲೆ ಬರೆದಿದೆ ಎಂದು ಗ್ಯಾರೆಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ನುಡಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಪುಷ್ಪಾ ಅಮರನಾಥ್, ಈವರೆಗೆ ನಮ್ಮ ಶಕ್ತಿ ಯೋಜನೆಯಲ್ಲಿ 500 ಕೋಟಿ ಮಹಿಳೆಯರು ಓಡಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯ ಸರ್ಕಾರ ಜಿಲ್ಲಾ ತಾಲೂಕು ಮಟ್ಟದಲ್ಲಿ 5 ಶತಕ ಮಹಿಳಾ ಸಂಭ್ರಮ ಆಚರಿಸುತ್ತಿದೆ. ನಮ್ಮದು ಮೊದಲೇ ಬಡವರ ಪರ ಮಹಿಳೆಯರ ಪರವಾದ ಸರ್ಕಾರ. ಮಹಿಳೆಯರಿಗೆ ಶಕ್ತಿ ತುಂಬುವ ಮೂಲಕ ನಮ್ಮ ಸರ್ಕಾರ ಇಡೀ ದೇಶದಲ್ಲೇ ದೊಡ್ಡ ದಾಖಲೆ ಬರೆದಿದೆ. ನಮ್ಮ ರಾಜ್ಯದಲ್ಲಿ ಮಹಿಳೆಯರು ಸಾರಿಗೆ ಸ್ವಾತಂತ್ರ್ಯ ಅನುಭವಿಸುವ ಅವಕಾಶವನ್ನ ನಮ್ಮ ಸರ್ಕಾರ ಮಾಡಿಕೊಟ್ಟಿದೆ.. ಇದೇ 14 ನೇ ತಾರೀಕು ಈ ಯಶಸ್ಸನ್ನ ಸಿಹಿ ಹಂಚಿ ಮಹಿಳೆಯರೊಂದಿಗೆ ಪ್ರಯಾಣಿಸಿ ಸಂಭ್ರಮಿಸಲು ತೀರ್ಮಾನಿಸಿದ್ದೇವೆ ಎಂದರು.

ಈವರೆಗೆ ಮೈಸೂರಲ್ಲಿ ಶಕ್ತಿ ಯೋಜನೆಗೆ 776.8 ಕೋಟಿ ಹಣ ವ್ಯವವಾಗಿದೆ. ರಾಜ್ಯದಲ್ಲಿ 12000,733.80 ಕೋಟಿ ಹಣ ವ್ಯಯವಾಗಿದೆ. ಇಷ್ಟು ದೊಡ್ಡ ಮೊತ್ತವನ್ನ ಇಡೀ ದೇಶದಲ್ಲೇ ಯಾವ ಸರ್ಕಾರವೂ ಕೊಟ್ಟಿಲ್ಲ. ಈ ಸಂಭ್ರಮದ ಹಿನ್ನೆಲೆಯಲ್ಲಿ ಜುಲೈ 14 ರಂದು ದೃಷ್ಟಿ ಹೀನರಿಗಾಗಿ ವಿಶೇಷ ಉಪಕರಣ ಅಳವಡಿಸಿರುವ ನೂತನ ಸಾರಿಗೆ ಬಸ್ ಗಳನ್ನ ಸಚಿವ ರಾಮಲಿಂಗ ರೆಡ್ಡಿ ಅವರು ಮೈಸೂರಿನಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ. ನಗರ ಬಸ್ ನಿಲ್ದಾಣದಲ್ಲಿ ಮೊದಲ ಹಂತದಲ್ಲಿ 200 ಬಸ್ ಲೋಕಾರ್ಪಣೆ ಆಗಲಿದೆ. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಜನ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ ಎಂದು ಡಾ. ಪುಷ್ಪಾ ಅಮರನಾಥ್ ತಿಳಿಸಿದರು.

The post ಶಕ್ತಿ ಯೋಜನೆಯಲ್ಲಿ ದೊಡ್ಡ ಮೈಲಿಗಲ್ಲು – ಡಾ. ಪುಷ್ಪಾ ಅಮರನಾಥ್ appeared first on Good News 24x7.

]]>
ಕಾಂಗ್ರೆಸ್ ಸರ್ಕಾರದಲ್ಲಿ ಮೋಡ ಕವಿದ ವಾತಾವರಣ -ಬಿವೈ ವಿಜಯೇಂದ್ರ. https://www.goodnews24x7.com/cloudy-atmosphere-in-congress-government-by-vijayendra/ Sat, 12 Jul 2025 11:43:25 +0000 https://www.goodnews24x7.com/?p=5044 ಬೆಂಗಳೂರು: ಸರ್ಕಾರದಲ್ಲಿ ಒಂದು ರೀತಿಯ ಮೋಡ ಕವಿದ ವಾತಾವರಣವಿದೆ . ಯಾವಾಗ ಗುಡುಗು ಸಿಡಿಲಿನ ಮಳೆ ಬರುತ್ತೋ ಗೊತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಲೇವಡಿ ಮಾಡಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಸಿಎಂ ಸಿದ್ದರಾಮಯ್ಯ, ಡಿಸಿಎಂ…

The post ಕಾಂಗ್ರೆಸ್ ಸರ್ಕಾರದಲ್ಲಿ ಮೋಡ ಕವಿದ ವಾತಾವರಣ -ಬಿವೈ ವಿಜಯೇಂದ್ರ. appeared first on Good News 24x7.

]]>

ಬೆಂಗಳೂರು: ಸರ್ಕಾರದಲ್ಲಿ ಒಂದು ರೀತಿಯ ಮೋಡ ಕವಿದ ವಾತಾವರಣವಿದೆ . ಯಾವಾಗ ಗುಡುಗು ಸಿಡಿಲಿನ ಮಳೆ ಬರುತ್ತೋ ಗೊತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಲೇವಡಿ ಮಾಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಇಬ್ಬರೂ ದೆಹಲಿಯಲ್ಲಿದ್ದರು. ರಾಹುಲ್ ಗಾಂಧಿ ಅವರ 10 ನಿಮಿಷ ಭೇಟಿ ಸಹ ಸಿಗದೆ ವಾಪಸ್ ಆಗಿದ್ದಾರೆ. ಇದರ ಅರ್ಥ ಸಿಎಂ ಹೈಕಮಾಂಡ್ ಮಧ್ಯೆ ಸಂಬಂಧ ಅಳಸಿದೆ ಅಂತ. ರಾಹುಲ್ ಗಾಂಧಿ ಭೇಟಿಯಾಗದೆ ಸಿಎಂ ಡಿಸಿಎಂ ವಾಪಸ್ ಆಗಿದ್ದು ದೊಡ್ಡ ಬೆಳವಣಿಗೆ ಎಂದರು.

ಕಾಂಗ್ರೆಸ್ ಪಕ್ಷ ಸರ್ಕಾರದ ಮಧ್ಯೆ ಎಲ್ಲವೂ ಸರಿ ಇಲ್ಲ ಅನ್ನೋದು ಸತ್ಯ. ಇಬ್ಬರ ನಡುವಿನ ಹಗ್ಗ ಜಗ್ಗಾಟದಲ್ಲಿ ಕುರ್ಚಿ ಫೈಟ್ ನಡೆಯುತ್ತಿದೆ . ಇದರಿಂದ ರಾಜ್ಯದ ಜನರಿಗೆ ಒಳ್ಳಯದು ಆಗಲ್ಲ ಎಂದು ಬಿವೈ ವಿಜಯೇಂದ್ರ ಹೇಳಿದರು.

 

The post ಕಾಂಗ್ರೆಸ್ ಸರ್ಕಾರದಲ್ಲಿ ಮೋಡ ಕವಿದ ವಾತಾವರಣ -ಬಿವೈ ವಿಜಯೇಂದ್ರ. appeared first on Good News 24x7.

]]>
ಆಷಾಢ ಮಾಸದ 2ನೇ ಶುಕ್ರವಾರ ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತ ಸಾಗರ. ಡಿಸಿಎಂ, ನಟ ದರ್ಶನ್ ಕುಟುಂಬ ಸಮೇತರಾಗಿ ಭೇಟಿ. https://www.goodnews24x7.com/a-sea-of-devotees-visit-chamundeshwari-on-the-2nd-friday-of-the-month-of-ashada-dcm-actor-darshan-visit-with-family/ Fri, 04 Jul 2025 09:15:05 +0000 https://www.goodnews24x7.com/?p=4896 ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾರೆ. ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತ ಸಾಗರವೇ ಹರಿದುಬರುತ್ತಿದ್ದು, ಬೆಳಗ್ಗೆಯಿಂದಲೇ ವಿಶೇಷ ಪೂಜೆ ನೆರವೇರುತ್ತಿದೆ. ಇಂದು ಮುಂಜಾನೇ 5 ಗಂಟೆಯಿಂದಲೇ ತಾಯಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕಳೆದ ಶುಕ್ರವಾರ ತಡರಾತ್ರಿಯಿಂದಲೇ ಮೆಟ್ಟಿಲುಗಳ ಮೂಲಕ ದರ್ಶನಕ್ಕೆ…

The post ಆಷಾಢ ಮಾಸದ 2ನೇ ಶುಕ್ರವಾರ ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತ ಸಾಗರ. ಡಿಸಿಎಂ, ನಟ ದರ್ಶನ್ ಕುಟುಂಬ ಸಮೇತರಾಗಿ ಭೇಟಿ. appeared first on Good News 24x7.

]]>

ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾರೆ. ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತ ಸಾಗರವೇ ಹರಿದುಬರುತ್ತಿದ್ದು, ಬೆಳಗ್ಗೆಯಿಂದಲೇ ವಿಶೇಷ ಪೂಜೆ ನೆರವೇರುತ್ತಿದೆ. ಇಂದು ಮುಂಜಾನೇ 5 ಗಂಟೆಯಿಂದಲೇ ತಾಯಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.


ಕಳೆದ ಶುಕ್ರವಾರ ತಡರಾತ್ರಿಯಿಂದಲೇ ಮೆಟ್ಟಿಲುಗಳ ಮೂಲಕ ದರ್ಶನಕ್ಕೆ ಭಕ್ತರು ಬಂದ ಕಾರಣ ಸಾಕಷ್ಟು ಗೊಂದಲಗಳಾಗಿದ್ದವು. ಹೀಗಾಗಿ ಈ ಬಾರಿ ಬೆಳಿಗ್ಗೆ 5 ರಿಂದ ಸಂಜೆ 6 ಗಂಟೆವರೆಗೆ ಮಾತ್ರ ಮೆಟ್ಟಿಲುಗಳನ್ನೇರಿ ಬಂದವರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಚಾಮುಂಡಿ ಬೆಟ್ಟಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಕುಟುಂಬ ಸಮೇತರಾಗಿ ಭೇಟಿ   


ಆಷಾಢ ಮಾಸದ 2ನೇ ಶುಕ್ರವಾರ ಹಿನ್ನೆಲೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು.
ಪತ್ನಿ ಉಷಾ, ಪುತ್ರಿ ಐಶ್ವರ್ಯ ಅವರ ಜೊತೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಡಿಸಿಎಂ ಡಿಕೆ ಶಿವಕುಮಾರ್ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು. ಬಳಿಕ 11 ಇಡುಗಾಯಿ ಒಡೆದು ಪ್ರಾರ್ಥನೆ ಸಲ್ಲಿಸಿದರು.
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಪ್ರಯತ್ನ ವಿಫಲ ಆದ್ರೂ ಪ್ರಾರ್ಥನೆ ವಿಫಲ ಆಗಲ್ಲ. ನನಗೆ ಏನು ಬೇಕೋ ಅದನ್ನೇ ಪ್ರಾರ್ಥನೆ ಮಾಡಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಅವರು ಬುದ್ದಿ ಹೇಳಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ಮಾತಿನಂತೆ ನಡೆದುಕೊಂಡು ಹೋಗೋಣ ನಾವೆಲ್ಲರೂ ಸೇರಿ ಒಟ್ಟಾಗಿ ಕೆಲಸ ಮಾಡೋಣ ಎಂದರು.

ನಟ ದರ್ಶನ್ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ


ನಟ ದರ್ಶನ್ ಆಷಾಡಮಾಸದ ಎರಡನೇ ಶುಕ್ರವಾರದಂದು ಪತ್ನಿ ವಿಜಯಲಕ್ಷ್ಮಿ ಮತ್ತು ಸಹೋದರ ದಿನಕರ್ ಜೊತೆಗೂಡಿ ಮೈಸೂರಿನ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಮಾಡಿದ್ದಾರೆ. ಇಂದು ಚಾಮುಂಡೇಶ್ವರಿ ತಾಯಿಗೆ ಲಕ್ಷ್ಮೀ ಅಲಂಕಾರ, ಹೂವು, ಬಳೆ, ತೋತಾಪುರಿ ಮಾವಿನ ಕಾಯಿಯಿಂದ ಅಲಂಕಾರ ಮಾಡಲಾಗಿತ್ತು. ದರ್ಶನ್ ಆಗಮಿಸಿದ ವೇಳೆ ಸಾಕಷ್ಟು ಮಂದಿ ಅಭಿಮಾನಿಗಳು ಅವರನ್ನು ಕಾಣಲು ಬಂದ ಕಾರಣ, ದೇವಾಲಯದಲ್ಲಿ ನೂಕು-ನುಗ್ಗಲು ಉಂಟಾಯ್ತು.

The post ಆಷಾಢ ಮಾಸದ 2ನೇ ಶುಕ್ರವಾರ ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತ ಸಾಗರ. ಡಿಸಿಎಂ, ನಟ ದರ್ಶನ್ ಕುಟುಂಬ ಸಮೇತರಾಗಿ ಭೇಟಿ. appeared first on Good News 24x7.

]]>