Delhi CM Archives - Good News 24x7 https://www.goodnews24x7.com/tag/delhi-cm/ Kannada Thu, 20 Feb 2025 03:18:44 +0000 en-US hourly 1 https://wordpress.org/?v=6.9.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Delhi CM Archives - Good News 24x7 https://www.goodnews24x7.com/tag/delhi-cm/ 32 32 ದೆಹಲಿ ನೂತನ ಸಿಎಂ ಆಗಿ ರೇಖಾ ಗುಪ್ತಾ ಇಂದು ಪ್ರಮಾಣ ವಚನ ಸ್ವೀಕಾರ https://www.goodnews24x7.com/rekha-gupta-to-take-oath-as-delhis-new-cm-today/ Thu, 20 Feb 2025 03:18:44 +0000 https://www.goodnews24x7.com/?p=2338 ಭಾರತೀಯ ಜನತಾ ಪಕ್ಷದ ಹಿರಿಯ ನಾಯಕಿ ಹಾಗೂ ಶಾಲಿಮಾರ್ ಬಾಗ್ (ವಾಯುವ್ಯ) ಕ್ಷೇತ್ರದ ಶಾಸಕರಾದ ರೇಖಾ ಗುಪ್ತಾ ಅವರನ್ನು ಭಾರತೀಯ ಜನತಾ ಪಕ್ಷವು ಕೇಂದ್ರಾಡಳಿತ ಪ್ರದೇಶವಾದ ದೆಹಲಿಯ ಮುಖ್ಯಮಂತ್ರಿಯಾಗಿ ನಿನ್ನೆ ಘೊಷಿಸಿದೆ. ಇದರೊಂದಿಗೆ ನಾಲ್ಕನೇ ಬಾರಿಗೆ ರಾಷ್ಟ್ರ ರಾಜಧಾನಿಗೆ ಮಹಿಳಾ ಮುಖ್ಯಮಂತ್ರಿ…

The post ದೆಹಲಿ ನೂತನ ಸಿಎಂ ಆಗಿ ರೇಖಾ ಗುಪ್ತಾ ಇಂದು ಪ್ರಮಾಣ ವಚನ ಸ್ವೀಕಾರ appeared first on Good News 24x7.

]]>

ಭಾರತೀಯ ಜನತಾ ಪಕ್ಷದ ಹಿರಿಯ ನಾಯಕಿ ಹಾಗೂ ಶಾಲಿಮಾರ್ ಬಾಗ್ (ವಾಯುವ್ಯ) ಕ್ಷೇತ್ರದ ಶಾಸಕರಾದ ರೇಖಾ ಗುಪ್ತಾ ಅವರನ್ನು ಭಾರತೀಯ ಜನತಾ ಪಕ್ಷವು ಕೇಂದ್ರಾಡಳಿತ ಪ್ರದೇಶವಾದ ದೆಹಲಿಯ ಮುಖ್ಯಮಂತ್ರಿಯಾಗಿ ನಿನ್ನೆ ಘೊಷಿಸಿದೆ. ಇದರೊಂದಿಗೆ ನಾಲ್ಕನೇ ಬಾರಿಗೆ ರಾಷ್ಟ್ರ ರಾಜಧಾನಿಗೆ ಮಹಿಳಾ ಮುಖ್ಯಮಂತ್ರಿ ಸಿಕ್ಕಾಂತಾಗಿದೆ. ರೇಖಾ ಗುಪ್ತಾ ಅವರಿಗೆ ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಅವರು ಇಂದು (ಫೆ20) ಮಧ್ಯಾಹ್ನ 12:35ರ ಸುಮಾರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯ 70 ವಿಧಾನಸಭಾ ಸ್ಥಾನಗಳ ಪೈಕಿ ಬರೋಬ್ಬರಿ 48 ಸ್ಥಾನಗಳಲ್ಲಿ ವಿಜಯ ಸಾಧಿಸಿರುವ ಬಿಜೆಪಿಯ ಮುಖ್ಯಮಂತ್ರಿಯ ಪ್ರಮಾಣವಚನ ಕಾರ್ಯಕ್ರಮವು ಇಂದು ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ನಡೆಯಲಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ನಿತಿನ್ ಗಡ್ಕರಿ, ರಾಜನಾಥ್ ಸಿಂಗ್, ಎನ್‌ಡಿಎ ನಾಯಕರಾದ ಚಂದ್ರ ಬಾಬು ನಾಯ್ಡು, ಏಕನಾಥ್ ಶಿಂಧೆ, ನಿತಿಶ್ ಕುಮಾರ್ ಹಾಗೂ ಇತರೆ ಬಿಜೆಪಿ ಸರ್ಕಾರಗಳ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

The post ದೆಹಲಿ ನೂತನ ಸಿಎಂ ಆಗಿ ರೇಖಾ ಗುಪ್ತಾ ಇಂದು ಪ್ರಮಾಣ ವಚನ ಸ್ವೀಕಾರ appeared first on Good News 24x7.

]]>