Delhi Archives - Good News 24x7 https://www.goodnews24x7.com/tag/delhi/ Kannada Tue, 21 Apr 2026 11:45:49 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Delhi Archives - Good News 24x7 https://www.goodnews24x7.com/tag/delhi/ 32 32 ಪಹಲ್ಗಾಮ್ ದಾಳಿಗೆ ಒಂದು ವರ್ಷ: “ಭಾರತ ಮರೆಯುವುದಿಲ್ಲ” ಎಂದು ಸೇನೆಯ ಖಡಕ್ ಸಂದೇಶ. https://www.goodnews24x7.com/pahalgam-attack-one-year-on-india-will-not-forget-armys-strong-message/ Tue, 21 Apr 2026 11:45:49 +0000 https://www.goodnews24x7.com/?p=9363 ನವದೆಹಲಿ: ಕಳೆದ ವರ್ಷ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಯ ಮೊದಲ ವಾರ್ಷಿಕೋತ್ಸವದ ಸಂದರ್ಭದಲ್ಲಿ ಭಾರತೀಯ ಸೇನೆಯು ದೇಶದ ದೃಢಸಂಕಲ್ಪವನ್ನು ಸಾರುವ ಪ್ರಬಲ ಸಂದೇಶ ರವಾನಿಸಿದೆ. “ನ್ಯಾಯ ಸಿಕ್ಕಿದೆ, ಭಾರತ ಒಗ್ಗಟ್ಟಿನಿಂದ ನಿಂತಿದೆ ಮತ್ತು ಈ ಘಟನೆಯನ್ನು ದೇಶ ಎಂದಿಗೂ ಮರೆಯುವುದಿಲ್ಲ”…

The post ಪಹಲ್ಗಾಮ್ ದಾಳಿಗೆ ಒಂದು ವರ್ಷ: “ಭಾರತ ಮರೆಯುವುದಿಲ್ಲ” ಎಂದು ಸೇನೆಯ ಖಡಕ್ ಸಂದೇಶ. appeared first on Good News 24x7.

]]>

ನವದೆಹಲಿ: ಕಳೆದ ವರ್ಷ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಯ ಮೊದಲ ವಾರ್ಷಿಕೋತ್ಸವದ ಸಂದರ್ಭದಲ್ಲಿ ಭಾರತೀಯ ಸೇನೆಯು ದೇಶದ ದೃಢಸಂಕಲ್ಪವನ್ನು ಸಾರುವ ಪ್ರಬಲ ಸಂದೇಶ ರವಾನಿಸಿದೆ. “ನ್ಯಾಯ ಸಿಕ್ಕಿದೆ, ಭಾರತ ಒಗ್ಗಟ್ಟಿನಿಂದ ನಿಂತಿದೆ ಮತ್ತು ಈ ಘಟನೆಯನ್ನು ದೇಶ ಎಂದಿಗೂ ಮರೆಯುವುದಿಲ್ಲ” ಎಂದು ಸೇನೆಯು ತಿಳಿಸಿದೆ. ಏಪ್ರಿಲ್ 22, 2025 ರಂದು ನಡೆದ ಈ ದಾಳಿಯಲ್ಲಿ 25 ಪ್ರವಾಸಿಗರು ಬಲಿಯಾಗಿದ್ದು, ಇಡೀ ರಾಷ್ಟ್ರವೇ ಈ ಘಟನೆಯಿಂದ ಬೆಚ್ಚಿಬಿದ್ದಿತ್ತು.

ದಾಳಿಯ ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಕಾಶ್ಮೀರದ ಸುಮಾರು 44 ಪ್ರವಾಸಿ ತಾಣಗಳನ್ನು ಮುಚ್ಚಲಾಗಿತ್ತು. ಪ್ರಸ್ತುತ ಹೆಚ್ಚಿನ ಸ್ಥಳಗಳು ಪ್ರವಾಸಿಗರಿಗೆ ಮುಕ್ತವಾಗಿದ್ದರೂ, ದಾಳಿ ನಡೆದ ಬೈಸರನ್ ಮತ್ತು ಚಂದನ್ವಾರಿ ತಾಣಗಳು ಇನ್ನೂ ಮುಚ್ಚಲ್ಪಟ್ಟಿವೆ. ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಕಾಶ್ಮೀರ ಕಣಿವೆಯಾದ್ಯಂತ ಬಿಗಿ ಭದ್ರತೆ ವಹಿಸಲಾಗಿದ್ದು, ಪುಲ್ವಾಮಾ, ಅವಂತಿಪೋರಾ ಮತ್ತು ಶ್ರೀನಗರದಲ್ಲಿ ಹಿರಿಯ ಅಧಿಕಾರಿಗಳು ಭದ್ರತಾ ವ್ಯವಸ್ಥೆಯ ಪರಿಶೀಲನೆ ನಡೆಸುತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತಾ ಪಡೆಗಳು ಹದ್ದಿನ ಕಣ್ಣಿಟ್ಟಿವೆ.

The post ಪಹಲ್ಗಾಮ್ ದಾಳಿಗೆ ಒಂದು ವರ್ಷ: “ಭಾರತ ಮರೆಯುವುದಿಲ್ಲ” ಎಂದು ಸೇನೆಯ ಖಡಕ್ ಸಂದೇಶ. appeared first on Good News 24x7.

]]>
ಭಾರತೀಯ ತನಿಖಾ ಸಂಸ್ಥೆಗಳ ಭರ್ಜರಿ ಬೇಟೆ: ಥೈಲ್ಯಾಂಡ್‌ನಿಂದ ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ಸಾಹಿಲ್ ಚೌಹಾಣ್ ಗಡೀಪಾರು! https://www.goodnews24x7.com/indian-investigation-agencies-big-hunt-most-wanted-gangster-sahil-chauhan-deported-from-thailand/ Sat, 11 Apr 2026 11:24:40 +0000 https://www.goodnews24x7.com/?p=9212 ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಾಚರಿಸುತ್ತಿದ್ದ ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ಸಾಹಿಲ್ ಚೌಹಾಣ್‌ನನ್ನು ಥೈಲ್ಯಾಂಡ್ ಸರ್ಕಾರ ಭಾರತಕ್ಕೆ ಗಡೀಪಾರು ಮಾಡಿದೆ. ಹರಿಯಾಣದ ಜೈಲಿನಲ್ಲಿರುವ ಕುಖ್ಯಾತ ಕೌಶಲ್ ಚೌಧರಿ ಗ್ಯಾಂಗ್‌ನ ಪ್ರಮುಖ ಸದಸ್ಯನಾಗಿರುವ ಈತನನ್ನು ಶನಿವಾರ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ…

The post ಭಾರತೀಯ ತನಿಖಾ ಸಂಸ್ಥೆಗಳ ಭರ್ಜರಿ ಬೇಟೆ: ಥೈಲ್ಯಾಂಡ್‌ನಿಂದ ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ಸಾಹಿಲ್ ಚೌಹಾಣ್ ಗಡೀಪಾರು! appeared first on Good News 24x7.

]]>

ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಾಚರಿಸುತ್ತಿದ್ದ ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ಸಾಹಿಲ್ ಚೌಹಾಣ್‌ನನ್ನು ಥೈಲ್ಯಾಂಡ್ ಸರ್ಕಾರ ಭಾರತಕ್ಕೆ ಗಡೀಪಾರು ಮಾಡಿದೆ. ಹರಿಯಾಣದ ಜೈಲಿನಲ್ಲಿರುವ ಕುಖ್ಯಾತ ಕೌಶಲ್ ಚೌಧರಿ ಗ್ಯಾಂಗ್‌ನ ಪ್ರಮುಖ ಸದಸ್ಯನಾಗಿರುವ ಈತನನ್ನು ಶನಿವಾರ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹರಿಯಾಣ ವಿಶೇಷ ಕಾರ್ಯಪಡೆ (STF) ತನ್ನ ವಶಕ್ಕೆ ಪಡೆದಿದೆ. ಸಂಘಟಿತ ಅಪರಾಧಗಳಲ್ಲಿ ದಶಕಗಳಿಂದ ಬೇಕಾಗಿದ್ದ ಈತನ ಬಂಧನವು ಭಾರತೀಯ ಭದ್ರತಾ ಸಂಸ್ಥೆಗಳಿಗೆ ಸಿಕ್ಕ ದೊಡ್ಡ ಯಶಸ್ಸಾಗಿದೆ.

ವಿದೇಶದಲ್ಲಿದ್ದುಕೊಂಡೇ ಸುಪಾರಿ ಸಂಚು:
ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸೇರಿದಂತೆ ಹಲವು ತನಿಖಾ ಸಂಸ್ಥೆಗಳಿಗೆ ಬೇಕಾಗಿದ್ದ ಸಾಹಿಲ್ ಚೌಹಾಣ್, ಥೈಲ್ಯಾಂಡ್‌ನಲ್ಲಿ ಅಡಗಿಕೊಂಡು ಭಾರತದಲ್ಲಿ ಹತ್ತಾರು ಸುಪಾರಿ ಕೊಲೆ ಮತ್ತು ಸುಲಿಗೆಗಳನ್ನು ಸಂಘಟಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಡ್ರಗ್ಸ್ ಸಾಗಣೆ ಮತ್ತು ಭಯೋತ್ಪಾದಕ ಜಾಲಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಈತ, ಕೇಂದ್ರೀಯ ಸಂಸ್ಥೆಗಳು ಮತ್ತು ಹರಿಯಾಣ ಪೊಲೀಸರ ಸಂಘಟಿತ ಪ್ರಯತ್ನದಿಂದಾಗಿ ಸಿಕ್ಕಿಬಿದ್ದಿದ್ದಾನೆ. ಸ್ಥಳೀಯ ಅಧಿಕಾರಿಗಳ ಸಹಕಾರದೊಂದಿಗೆ ಈತನನ್ನು ಬಂಧಿಸಿ ಭಾರತಕ್ಕೆ ಹಸ್ತಾಂತರಿಸಲಾಗಿದೆ.

ಭದ್ರತಾ ಕಣ್ಗಾವಲಿನಲ್ಲಿ ವಿಚಾರಣೆ:
ಆರೋಪಿಯ ಆಗಮನದ ಹಿನ್ನೆಲೆಯಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಕಸ್ಟಡಿಗೆ ಪಡೆದ ನಂತರ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಹರಿಯಾಣಕ್ಕೆ ಕರೆದೊಯ್ಯುವ ಸಾಧ್ಯತೆಯಿದೆ. ಈ ಹಸ್ತಾಂತರ ಪ್ರಕ್ರಿಯೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಾರಿಯಾಗಿರುವ ಅಪರಾಧಿಗಳನ್ನು ಪತ್ತೆಹಚ್ಚುವಲ್ಲಿ ಭಾರತದ ಹೆಚ್ಚುತ್ತಿರುವ ಪ್ರಭಾವವನ್ನು ಎತ್ತಿ ತೋರಿಸುತ್ತದೆ.

ಬೆಂಗಳೂರು ‘ಝಾಂಬಿ ಡ್ರ*’ ಹಾವಳಿ ಕುರಿತು ಸ್ಪಷ್ಟನೆ:
ಇದೇ ವೇಳೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ‘ಝಾಂಬಿ ಡ್ರ*’ ವದಂತಿಯನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ವಿಡಿಯೋದಲ್ಲಿ ವಿಚಿತ್ರವಾಗಿ ವರ್ತಿಸುತ್ತಿದ್ದ ಯುವಕ ಯಾವುದೇ ಮಾದಕ ದ್ರವ್ಯ ಸೇವಿಸಿಲ್ಲ, ಬದಲಾಗಿ ಆಲ್ಕೋಹಾಲ್ ಜೊತೆಗೆ ಆರ್ಥ್ರೈಟಿಸ್ ನೋವು ನಿವಾರಕ ಮಾತ್ರೆ ಸೇವಿಸಿದ್ದರಿಂದ ಸಮತೋಲನ ತಪ್ಪಿದ್ದಾನೆ ಎಂದು ವೈದ್ಯಕೀಯ ವರದಿಗಳಿಂದ ದೃಢಪಟ್ಟಿದೆ. ಇಂತಹ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಸಿದ್ದಾರೆ.

The post ಭಾರತೀಯ ತನಿಖಾ ಸಂಸ್ಥೆಗಳ ಭರ್ಜರಿ ಬೇಟೆ: ಥೈಲ್ಯಾಂಡ್‌ನಿಂದ ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ಸಾಹಿಲ್ ಚೌಹಾಣ್ ಗಡೀಪಾರು! appeared first on Good News 24x7.

]]>
ಬಜೆಟ್​​ ಅಧಿವೆಶನದ ನಡುವೆ ಮಹತ್ವದ ಬೆಳವಣಿಗೆ: ​​ ಸಿಎಂ ಭೇಟಿಯಾಗಿದ್ದೇಕೆ ಕಾಂಗ್ರೆಸ್​​ನ ಹಿರಿಯ ಶಾಸಕರ ತಂಡ? https://www.goodnews24x7.com/amidst-the-budget-session-a-significant-development-has-taken-place-in-state-politics-why-did-a-team-of-senior-congress-mlas-meet-the-cm8908-2/ Tue, 17 Mar 2026 12:08:38 +0000 https://www.goodnews24x7.com/?p=8908   ಬಜೆಟ್ ಅಧಿವೇಶನದ ನಡುವೆ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಹಿರಿಯ ಕಾಂಗ್ರೆಸ್ ಶಾಸಕರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಸಚಿವ ಸಂಪುಟ ಪುನಾರಚನೆ ವೇಳೆ ಕನಿಷ್ಠ 20 ಹಿರಿಯ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂಬ ಆಗ್ರಹ ವ್ಯಕ್ತಪಡಿಸಿದ್ದಾರೆ.…

The post ಬಜೆಟ್​​ ಅಧಿವೆಶನದ ನಡುವೆ ಮಹತ್ವದ ಬೆಳವಣಿಗೆ: ​​ ಸಿಎಂ ಭೇಟಿಯಾಗಿದ್ದೇಕೆ ಕಾಂಗ್ರೆಸ್​​ನ ಹಿರಿಯ ಶಾಸಕರ ತಂಡ? appeared first on Good News 24x7.

]]>

 

ಬಜೆಟ್ ಅಧಿವೇಶನದ ನಡುವೆ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಹಿರಿಯ ಕಾಂಗ್ರೆಸ್ ಶಾಸಕರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಸಚಿವ ಸಂಪುಟ ಪುನಾರಚನೆ ವೇಳೆ ಕನಿಷ್ಠ 20 ಹಿರಿಯ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂಬ ಆಗ್ರಹ ವ್ಯಕ್ತಪಡಿಸಿದ್ದಾರೆ. ಉಪಚುನಾವಣೆ ಬಳಿಕ ಹೈಕಮಾಂಡ್ ಜತೆ ಮಾತನಾಡುವುದಾಗಿ ಸಿಎಂ ಭರವಸೆ ನೀಡಿದ್ದು, ಇತ್ತ ಶಾಸಕರೂ ಏಪ್ರಿಲ್ 11 ರಂದು ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡಲು ಸಿದ್ಧತೆ ನಡೆಸಿರೋದಾಗಿ ತಿಳಿದುಬಂದಿದೆ.

ಬಜೆಟ್​​ ಅಧಿವೆಶನದ ನಡುವೆಯೇ ರಾಜ್ಯ ರಾಜಕಾರಣದಲ್ಲಿ ಮಹತ್ತರ ಬೆಳವಣಿಗೆ ನಡೆದಿದೆ. ಸಚಿವ ಸಂಪುಟ ಪುನಾರಚನೆ ವೇಳೆ ಕನಿಷ್ಠ 20 ಹಿರಿಯ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡುವಂತೆ ವಿಧಾನಸೌಧ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ಎಂಎಲ್​​ಎಗಳು ಮನವಿ ಮಾಡಿದ್ದಾರೆ. ಭೋಜನ ವಿರಾಮದ ಸಮಯದಲ್ಲಿ ಸಿಎಂ ಭೇಟಿಯಾಗಿರುವ ‘ಕೈ’ ಶಾಸಕರು 3ಕ್ಕೂ ಹೆಚ್ಚು ಬಾರಿ ನಾವು ಎಂಎಲ್​​ಎಗಳಾಗಿದ್ದೇವೆ. ಹೀಗಾಗಿ ನಮಗೂ ಅವಕಾಶ ನೀಡಿ ಎಂಬ ಆಗ್ರಹ ಮುಂದಿಟ್ಟಿದ್ದಾರೆ. ಶಾಸಕರಾದ ಎನ್​.ಎ.ಹ್ಯಾರಿಸ್​, ಹಂಪನಗೌಡ ಬಾದರ್ಲಿ, ಬಾಲಕೃಷ್ಣ, ನಾರಾಯಣಸ್ವಾಮಿ, ಅಶೋಕ ಪಟ್ಟಣ, ಯಶವಂತರಾಯಗೌಡ ಪಾಟೀಲ್, ತನ್ವೀರ್ ಸೇಠ್, ರಾಘವೇಂದ್ರ ಹಿಟ್ನಾಳ್ ಸೇರಿ 16 ಶಾಸಕರಿಂದ ಈ ಬಗ್ಗೆ ಮನವಿ ಮಾಡಲಾಗಿದೆ.

ಸಚಿವ ಸಂಪುಟ ವಿಚಾರವಾಗಿ ಸ್ವತಃ ನಾನೇ ದೆಹಲಿಗೆ ಹೋಗುತ್ತೇನೆ. ಉಪಚುನಾವಣೆ ಬಳಿಕ ಹೈಕಮಾಂಡ್​ ನಾಯಕರನ್ನು ಭೇಟಿ ಮಾಡಲಿದ್ದು, ಆ ವೇಳೆ ನಿಮ್ಮ ಆಗ್ರಹವನ್ನು ವರಿಷ್ಠರಿ ಗಮನಕ್ಕೆ ತರೋದಾಗಿ ಸಿಎಂ ಸಿದ್ದರಾಮಯ್ಯ ಈ ವೇಳೆ ಹಿರಿಯ ಶಾಸಕರಿಗೆ ತಿಳಿಸಿದ್ದಾರೆ. ಅಲ್ಲದೆ, ಉಪಚುನಾವಣೆ ಬಳಿಕ ಸಂಪುಟ ಪುನಾರಚನೆ ಮಾಡುವುದಾಗಿ ಭರವಸೆಯನ್ನೂ ನೀಡಿದ್ದಾರೆ ಎನ್ನಲಾಗಿದೆ.

ಏಪ್ರಿಲ್ 11ರಂದು ದೆಹಲಿಗೆ ಹೋಗಲು ಪ್ಲ್ಯಾನ್,ಇನ್ನು ಸಿಎಂ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿರುವ ಶಾಸಕ ಹೆಚ್​.ಸಿ. ಬಾಲಕೃಷ್ಣ, ಮೂಕ್ಕಿಂತ ಹೆಚ್ಚು ಬಾರಿ ಗೆದ್ದಿರುವ ಶಾಸಕರೆಲ್ಲರೂ ಈ ವೇಳೆ ಉಪಸ್ಥಿತರಿದ್ದರು. ಮಂತ್ರಿ ಮಂಡಲ ಪುನಾರಚನೆ ವೇಳೆ ನಮ್ಮನ್ನು ಪರಿಗಣಿಸುವಂತೆ ಕೇಳಿದ್ದೇವೆ. ಕನಿಷ್ಠ 20 ಹಿರಿಯ ಶಾಸಕರಿಗೆ ಅವಕಾಶ ಕೊಡುವಂತೆ ಆಗ್ರಹಿಸಲಾಗಿದೆ. ಈ ವೇಳೆ ಹೈಕಮಾಂಡ್​ ಜೊತೆ ನಾನು ಮಾತನಾಡ್ತೇನೆ, ನೀವೂ ಮಾತನಾಡಿ ಎಂದು ಸಿಎಂ ಹೇಳಿದ್ದಾರೆ. ಹೀಗಾಗಿ ನಾವು ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಮನವಿ ಸಲ್ಲಿಸುತ್ತೇವೆ. ಏಪ್ರಿಲ್ 11ರಂದು ದೆಹಲಿಗೆ ಹೋಗಲು ಪ್ಲ್ಯಾನ್ ಮಾಡಿದ್ದು, 40 ಶಾಸಕರು ಒಟ್ಟಾಗಿ ಹೈಕಮಾಂಡ್ ಗೆ ​ಮನವಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

The post ಬಜೆಟ್​​ ಅಧಿವೆಶನದ ನಡುವೆ ಮಹತ್ವದ ಬೆಳವಣಿಗೆ: ​​ ಸಿಎಂ ಭೇಟಿಯಾಗಿದ್ದೇಕೆ ಕಾಂಗ್ರೆಸ್​​ನ ಹಿರಿಯ ಶಾಸಕರ ತಂಡ? appeared first on Good News 24x7.

]]>
ಇಂದು ಆರ್‌ಸಿಬಿ – ಡೆಲ್ಲಿ ಫೈನಲ್‌ : ಎರಡನೇ ಕಪ್ ಮೇಲೆ ಆರ್‌ಸಿಬಿ ಕಣ್ಣು https://www.goodnews24x7.com/rcb-delhi-final-today-rcb-eyes-second-cup/ Thu, 05 Feb 2026 07:15:52 +0000 https://www.goodnews24x7.com/?p=8346 ಇಂದು ಆರ್‌ಸಿಬಿ – ಡೆಲ್ಲಿ ಫೈನಲ್‌ : ಎರಡನೇ ಕಪ್ ಮೇಲೆ ಆರ್‌ಸಿಬಿ ಕಣ್ಣು ಮಹಿಳಾ ಪ್ರೀಮಿಯರ್ ಲೀಗ್‌ನ 4ನೇ ಸೀಸನ್‌ನ ಫೈನಲ್‌ನಲ್ಲಿ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಫೈಟ್ ನಡೆಸಲಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲೀಗ್ ಹಂತದಲ್ಲಿ…

The post ಇಂದು ಆರ್‌ಸಿಬಿ – ಡೆಲ್ಲಿ ಫೈನಲ್‌ : ಎರಡನೇ ಕಪ್ ಮೇಲೆ ಆರ್‌ಸಿಬಿ ಕಣ್ಣು appeared first on Good News 24x7.

]]>

ಇಂದು ಆರ್‌ಸಿಬಿ – ಡೆಲ್ಲಿ ಫೈನಲ್‌ : ಎರಡನೇ ಕಪ್ ಮೇಲೆ ಆರ್‌ಸಿಬಿ ಕಣ್ಣು

ಮಹಿಳಾ ಪ್ರೀಮಿಯರ್ ಲೀಗ್‌ನ 4ನೇ ಸೀಸನ್‌ನ ಫೈನಲ್‌ನಲ್ಲಿ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಫೈಟ್ ನಡೆಸಲಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ನೇರವಾಗಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಇನ್ನೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಸೋಲಿಸಿ ಫೈನಲ್‌ ಪ್ರವೇಶಿಸಿದೆ.

ಎರಡನೇ ಸೀಸನ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಆರ್‌ಸಿಬಿ ತಂಡವು ಈ ಬಾರಿ ಕೂಡ ಭರ್ಜರಿ ಫಾರ್ಮ್‌ನಲ್ಲಿದೆ. ಸ್ಮೃತಿ ಮಂಧಾನ ಮತ್ತು ರಿಚಾ ಘೋಷ್ ಅವರಂತಹ ಆಟಗಾರ್ತಿಯರು ತಂಡದ ಬಲವಾಗಿದ್ದಾರೆ. ಮತ್ತೊಂದೆಡೆ ಮೂರು ಬಾರಿ ಫೈನಲ್ ತಲುಪಿರುವ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಬಾರಿಗೆ ಟ್ರೋಫಿ ಗೆಲ್ಲುವ ತವಕದಲ್ಲಿದೆ.

ಒಟ್ಟಿನಲ್ಲಿ ವಡೋದರಾದಲ್ಲಿ ನಡೆಯಲಿರುವ ಈ ಫೈನಲ್ ಪಂದ್ಯವು ಕೋಟಿಗಟ್ಟಲೆ ಕ್ರಿಕೆಟ್ ಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ‘ಈ ಸಲವೂ ಕಪ್ ನಮ್ದೇ’ ಎನ್ನುತ್ತಿರುವ ಆರ್‌ಸಿಬಿ ಅಭಿಮಾನಿಗಳು ತಮ್ಮ ನೆಚ್ಚಿನ ತಂಡದ ಗೆಲುವಿಗಾಗಿ ಕಾತರದಿಂದ ಕಾಯುತ್ತಿದ್ದಾರೆ.

The post ಇಂದು ಆರ್‌ಸಿಬಿ – ಡೆಲ್ಲಿ ಫೈನಲ್‌ : ಎರಡನೇ ಕಪ್ ಮೇಲೆ ಆರ್‌ಸಿಬಿ ಕಣ್ಣು appeared first on Good News 24x7.

]]>
ನಾಯಕತ್ವ ಬದಲಾವಣೆ ಬಗ್ಗೆ ನಂಗೇನೂ ಗೊತ್ತಿಲ್ಲ, ಸಿಎಂ ಹತ್ರನೇ ಕೇಳಿ ಎಂದ ಡಿಕೆ ಶಿವಕುಮಾರ್ https://www.goodnews24x7.com/i-dont-know-anything-about-the-leadership-change-ask-the-cm-himself-says-dk-shivakumar/ Sun, 16 Nov 2025 05:42:58 +0000 https://www.goodnews24x7.com/?p=8174 ನವದೆಹಲಿ: ಕರ್ನಾಟಕದಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ದೆಹಲಿಗೆ ದೌಡಾಯಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದಾರೆ. ಈ ಬಗ್ಗೆ…

The post ನಾಯಕತ್ವ ಬದಲಾವಣೆ ಬಗ್ಗೆ ನಂಗೇನೂ ಗೊತ್ತಿಲ್ಲ, ಸಿಎಂ ಹತ್ರನೇ ಕೇಳಿ ಎಂದ ಡಿಕೆ ಶಿವಕುಮಾರ್ appeared first on Good News 24x7.

]]>

ನವದೆಹಲಿ: ಕರ್ನಾಟಕದಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ದೆಹಲಿಗೆ ದೌಡಾಯಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದಾರೆ. ಈ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಪ್ರಶ್ನಿಸಿದಾಗ ಅವರು, “ರಾಹುಲ್‌ ಗಾಂಧಿ, ಸಿಎಂ ಸಿದ್ದರಾಮಯ್ಯನವರ ಭೇಟಿ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರು ಯಾವ ವಿಚಾರಕ್ಕೆ ಭೇಟಿಯಾಗಿದ್ದರು, ಏನು ಚರ್ಚೆ ಮಾಡಿದ್ದಾರೆಂದು ನನಗೆ ಗೊತ್ತಿಲ್ಲ ಎಂದಿದ್ದಾರೆ.

ಸಾಮಾನ್ಯವಾಗಿ ಸಿಎಂ ಬಂದಾಗ ಪಕ್ಷದ ವರಿಷ್ಠರನ್ನು ಭೇಟಿಯಾಗುವುದು ಸಹಜ. ನಾಯಕತ್ವ ಬದಲಾವಣೆ ಬಗ್ಗೆ ನನಗೆ ಏನೂ ಗೊತ್ತಿಲ್ಲ, ಏನಾದರೂ ಇದ್ದರೆ ಸಿಎಂ ಹತ್ತಿರ ಮಾತನಾಡಿ. ಪಕ್ಷ ಏನು ಹೇಳುತ್ತೋ ಹಾಗೆ ನಡೆದುಕೊಳ್ಳುವುದು ನನ್ನ ಕೆಲಸ. ಪಕ್ಷದ ಹೈಕಮಾಂಡ್‌ ನನ್ನ ಕೇಳ್ತಾರೆ, ಆಗ ನಾನು ಮಾತನಾಡುತ್ತೇನೆ. ಏನು ಮಾತಾಡಬೇಕೆಂದು ನನಗೆ ಗೊತ್ತು ಎಂದು ದೆಹಲಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

The post ನಾಯಕತ್ವ ಬದಲಾವಣೆ ಬಗ್ಗೆ ನಂಗೇನೂ ಗೊತ್ತಿಲ್ಲ, ಸಿಎಂ ಹತ್ರನೇ ಕೇಳಿ ಎಂದ ಡಿಕೆ ಶಿವಕುಮಾರ್ appeared first on Good News 24x7.

]]>
25 ವರ್ಷದ ಕಿರಿಯ ಶಾಸಕಿ ಮೈಥಿಲಿ ಠಾಕೂರ್! ಇವರ ಹಿನ್ನೆಲೆ ಏನು? https://www.goodnews24x7.com/25-year-old-maithili-thakur-the-youngest-mla-what-is-her-background/ Sat, 15 Nov 2025 12:00:56 +0000 https://www.goodnews24x7.com/?p=8165 ಬಿಹಾರ :- 25 ವರ್ಷದ ಮೈಥಿಲಿ ಠಾಕೂರ್ ಎಂಬ ಹುಡುಗಿ ಬಿಹಾರ ಚುನಾವಣಾ ಫಲಿತಾಂಶ ಬೆನ್ನಲ್ಲೇದೇಶದಲ್ಲಿ ಭಾರೀ ಚರ್ಚೆಯಲ್ಲಿದ್ದಾಳೆ. ಬಿಹಾರ ರಾಜ್ಯದ ಅಂತ್ಯಂತ ಕಿರಿಯ ವಯಸ್ಸಿನ ಶಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.           ಮೈಥಿಲಿ ಠಾಕೂರ್.…

The post 25 ವರ್ಷದ ಕಿರಿಯ ಶಾಸಕಿ ಮೈಥಿಲಿ ಠಾಕೂರ್! ಇವರ ಹಿನ್ನೆಲೆ ಏನು? appeared first on Good News 24x7.

]]>

ಬಿಹಾರ :- 25 ವರ್ಷದ ಮೈಥಿಲಿ ಠಾಕೂರ್ ಎಂಬ ಹುಡುಗಿ ಬಿಹಾರ ಚುನಾವಣಾ ಫಲಿತಾಂಶ ಬೆನ್ನಲ್ಲೇದೇಶದಲ್ಲಿ ಭಾರೀ ಚರ್ಚೆಯಲ್ಲಿದ್ದಾಳೆ. ಬಿಹಾರ ರಾಜ್ಯದ ಅಂತ್ಯಂತ ಕಿರಿಯ ವಯಸ್ಸಿನ ಶಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

 

 

 

 

 

ಮೈಥಿಲಿ ಠಾಕೂರ್. ವಯಸ್ಸು 25. ಜಾನಪದ ಗಾಯಕಿಯಾಗಿ ಜನಪ್ರಿಯತೆ ಪಡೆದಿದ್ದ, ಇವರು ಇಂದು ದೇಶದ ಅತ್ಯಂತ ಕಿರಿಯ ಶಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ! ಬಿಹಾರ ಚುನಾವಣೆಯ ಫಲಿತಾಂಶ ನಿನ್ನೆ ಪ್ರಕಟಗೊಂಡಿದೆ. ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದ್ದಂತೆಯೇ ಮೈಥಿಲಿ ಠಾಕೂರ್​​ ದೇಶದಾದ್ಯಂತ ಸಂಚಲನ ಸೃಷ್ಟಿಸಿದ್ದಾರೆ.
ಅಲಿನಗರ ವಿಧಾನಸಭಾ ಕ್ಷೆತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮೈಥಿಲಿ ಠಾಕೂರ್​, ಭರ್ಜರಿ ಜಯಭೇರಿ ಬಾರಿಸಿದ್ದಾರೆ. ಆರ್​ಜೆಡಿ ಪಕ್ಷದ ಬಿನೋದ್ ಮಿಶ್ರಾ ಅವರನ್ನು 12 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿ ಬಿಹಾರ್ ರಾಜ್ಯದ ಅಂತ್ಯರ ಕಿರಿಯ ವಯಸ್ಸಿನ ಶಾಸಕಿ ಹೊಗಳಿಕೆಗೆ ಕಾರಣರಾಗಿದ್ದಾರೆ.

ಮೈಥಿಲಿ ಠಾಕೂರ್ ಯಾರು..? 

 

 

 

 

 

 

ಮೈಥಿಲಿ ಜುಲೈ 25, 2000 ರಂದು ಬಿಹಾರದ ಮಧುಬನಿ ಜಿಲ್ಲೆಯ ಬೇಣಿಪಟ್ಟಿ ಎಂಬ ಸಣ್ಣ ಪಟ್ಟಣದಲ್ಲಿ ಜನಿಸಿದರು. ಅವರ ತಂದೆ ರಮೇಶ್ ಠಾಕೂರ್ ಆ ಪ್ರದೇಶದಲ್ಲಿ ಜನಪ್ರಿಯ ಸಂಗೀತಗಾರರು. ತಾಯಿ ಭಾರತಿ ಠಾಕೂರ್ ಗೃಹಿಣಿ. ಮೈಥಿಲಿಗೆ ಇಬ್ಬರು ಸಹೋದರರು. ಮೈಥಿಲಿಗೆ ಬಾಲ್ಯದಿಂದಲೂ ಸಂಗೀತದ ಕಡೆಗೆ ಹೆಚ್ಚು ಒಲವು ಹೊಂದಿರೋದ್ರಿಂದ ಸಂಗೀತವನ್ನೇ ಪ್ರಮುಖ ಆಯ್ಕೆಯನ್ನಾಗಿ ಮಾಡಿಕೊಂಡರು.
ತಂದೆಯಿಂದ ಸಂಗೀತ ಕಲಿತುಕೊಂಡ ಇವರು, ಅವಕಾಶ ಹುಡುಕುತ್ತ ಹೋಗುತ್ತಾರೆ. ಅಂತೆಯೇ, ಕುಟುಂಬದ ಜೊತೆಗೆ ದೆಹಲಿಯ ದ್ವಾರಕಕ್ಕೆ ಬಂದು ನೆಲೆಸುತ್ತಾರೆ. ಇಲ್ಲಿ ರಮೇಶ್ ಠಾಕೂರ್ ಅವರ ಮೂವರು ಮಕ್ಕಳು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಹಾರ್ಮೋನಿಯಂ ಮತ್ತು ತಬಲಾದಲ್ಲಿ ತರಬೇತಿ ಪಡೆದುಕೊಳ್ಳುತ್ತಾರೆ.

ಮೈಥಿಲಿ ಠಾಕೂರ್ ಅವರ ಸರಾಸರಿ ತಿಂಗಳ ಗಳಿಕೆ ಎಷ್ಟು..? 
ಮೈಥಿಲಿ ಠಾಕೂರ್ ದೇಶೀಯವಾಗಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಕೆಲವು ವರದಿಗಳ ಪ್ರಕಾರ, ತಿಂಗಳಿಗೆ 12 ರಿಂದ 15 ಲೈವ್ ಪ್ರದರ್ಶನ ನೀಡುತ್ತಾರೆ. ಒಂದು ಪ್ರದರ್ಶನಕ್ಕೆ  500,000 ರಿಂದ 700,000 ವರೆಗೆ ಚಾರ್ಜ್​ ಮಾಡುತ್ತಾರೆ. ಸರಾಸರಿ ಅವರು ತಿಂಗಳಿಗೆ 600,000 ರಿಂದ 800,000 ಗಳಿಸುತ್ತಾರೆ.

ಜೀ ವಾಹಿನಿ ಯಿಂದ ಬದುಕಿಗೆ ತಿರುವು

 

 

 

 

 

2011ರಲ್ಲಿ ಮೈಥಿಲಿ ಬದುಕಿಗೆ ಜೀ ವಾಹಿನಿ ಹೊಸ ತಿರುವು ನೀಡಿತು. ‘ಲಿಟಲ್ ಚಾಂಪ್ಸ್’ ಎಂಬ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡು ಜನಪ್ರಿಯತೆ ಪಡೆದುಕೊಂಡರು. ಅದೇ ರಿಯಾಲಿಟಿ ಶೋ ಮೂಲಕವೇ ಹೆಚ್ಚು ಜನ ಮನ್ನಣೆ ಪಡೆದುಕೊಂಡರು. 4 ವರ್ಷಗಳ ನಂತರ ಸೋನಿ ಟಿವಿಯಲ್ಲಿ ಪ್ರಸಾರವಾದ ರಿಯಾಲಿಟಿ ಶೋ ‘Indian Idol Junior season’ನಲ್ಲಿ ಕಾಣಿಸಿಕೊಂಡರು. ಅದಾದ ಬಳಿಕ ‘ರೈಸಿಂಗ್ ಸ್ಟಾರ್’ ಎಂಬ ರಿಯಾಲಿಟಿ ಶೋ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿದರು.  ಇದರಲ್ಲಿ ಅವರು ರನ್ನರ್-ಅಪ್ ಆಗಿ ಜರ್ನಿ ಮುಗಿಸಿದರು.

2017ರಲ್ಲಿ ರೈಸಿಂಗ್ ಸ್ಟಾರ್​ ಸೀಸನ್-1 ಮತ್ತಷ್ಟು ಹೆಚ್ಚು ಖ್ಯಾತಿ ತಂದುಕೊಟ್ಟಿತು. ಮೈಥಿಲಿ ಕಾರ್ಯಕ್ರಮದ ಮೊದಲ ಫೈನಲಿಸ್ಟ್ ಆಗಿ ಹೊರ ಹೊಮ್ಮಿದ್ದರು. ‘ಓಂ ನಮಃ ಶಿವಾಯ’ ಹಾಡುವ ಮೂಲಕ ಫೈನಲ್​ಗೆ ನೇರವಾಗಿ ಪ್ರವೇಶ ಪಡೆದರು. ಫೈನಲ್​​ನಲ್ಲಿ ಕೇವಲ 2 ವೋಟ್​ಗಳಿಂದ ಸೋತರು. ಈ ಕಾರ್ಯಕ್ರಮದ ನಂತರ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಜನಪ್ರಿಯತೆ ಪಡೆದರು. ಅವರ ಒಂದೊಂದು ವೀಡಿಯೊಗಳು ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲಿ 70 ಸಾವಿರದಿಂದ 7 ಮಿಲಿಯನ್​ ವರೆಗೆ ವೀಕ್ಷಣೆಗಳನ್ನು ಪಡೆಯುತ್ತವೆ.

ಮೈಥಿಲಿ ಠಾಕೂರ್ ಶಾಸಕಿಯಾದ ಮೇಲೆ ಎಷ್ಟು ಸಂಪಾದಿಸಬಹುದು..?
ಬಿಹಾರದಲ್ಲಿ ಶಾಸಕರ ಮೂಲ ವೇತನ 50,000 ರೂಪಾಯಿ. ಜೊತೆಗೆ 55,000 ರೂಪಾಯಿ ಪ್ರಾದೇಶಿಕ ಭತ್ಯೆ, 3,000 ದೈನಂದಿನ ಸಭೆ ಭತ್ಯೆ, 40,000 ವೈಯಕ್ತಿಕ ಸಹಾಯಕ ಭತ್ಯೆ ಮತ್ತು 15,000 ಲೇಖನ ಸಾಮಗ್ರಿ ಭತ್ಯೆ ಸೇರಿದಂತೆ ವಿವಿಧ ಭತ್ಯೆಗಳನ್ನು ಪಡೆಯುತ್ತಾರೆ. ಇವುಗಳನ್ನು ಸೇರಿಸಿದರೆ, ಶಾಸಕರ ಮಾಸಿಕ ಆದಾಯ ₹1.43,000 ಮೀರುತ್ತದೆ. ಆದರೆ ನಿಜವಾದ ಆದಾಯ ಇದರಿಂದ ಮಾತ್ರ ಬರುವುದಿಲ್ಲ, ಬದಲಿಗೆ ಶಾಸಕರ ಹುದ್ದೆಯೊಂದಿಗೆ ಬರುವ ಸವಲತ್ತುಗಳಿಂದ ಬರುತ್ತದೆ.

ಶಾಸಕರಿಗೆ ಇರುವ ಸೌಲಭ್ಯಗಳು
ಬಿಹಾರ ಶಾಸಕರು ಆರ್ಥಿಕ ನೆರವಿಗಿಂತ ಹೆಚ್ಚು ಪ್ರಭಾವಶಾಲಿಯಾದ ಅನೇಕ ಸವಲತ್ತುಗಳನ್ನು ಪಡೆಯುತ್ತಾರೆ. ವಾರ್ಷಿಕವಾಗಿ 4 ಲಕ್ಷದವರೆಗಿನ ರೈಲು/ವಿಮಾನ ಪ್ರಯಾಣ ಕೂಪನ್‌ಗಳು, 25 ಲಕ್ಷದವರೆಗಿನ ವಾಹನ ಸಾಲ, ಮಾಜಿ ಶಾಸಕರಿಗೆ 45,000 ರೂಪಾಯಿ ಮಾಸಿಕ ಪಿಂಚಣಿ, 29,000 ಆತಿಥ್ಯ ಭತ್ಯೆ, ಭದ್ರತೆ, ಸರ್ಕಾರಿ ವಸತಿ, ಸಬ್ಸಿಡಿ ವಿದ್ಯುತ್, ನೀರು ಮತ್ತು ಫೋನ್ ಬಿಲ್‌ಗಳು ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ವಿಶೇಷ ಚಿಕಿತ್ಸೆ ಕೂಡ ಸಿಗುತ್ತದೆ.

The post 25 ವರ್ಷದ ಕಿರಿಯ ಶಾಸಕಿ ಮೈಥಿಲಿ ಠಾಕೂರ್! ಇವರ ಹಿನ್ನೆಲೆ ಏನು? appeared first on Good News 24x7.

]]>
ಕಾರಿನಲ್ಲಿ ಇದ್ದಿದ್ದು ಉಮರ್ ಒಬ್ಬನೇ.. ಶಂಕಿತ ವ್ಯಕ್ತಿಯ ಅಮ್ಮ & ಸಹೋದರರನ್ನ ವಶಕ್ಕೆ ಪಡೆದಿದ್ದಾರೆ https://www.goodnews24x7.com/umar-was-the-only-one-in-the-car-suspects-mother-brothers-have-been-detained/ Tue, 11 Nov 2025 12:07:26 +0000 https://www.goodnews24x7.com/?p=8123 ದೆಹಲಿ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ವ್ಯಕ್ತಿ ಉಮರ್​ನ ತಾಯಿ ಸೇರಿದಂತೆ ಇಬ್ಬರು ಸಹೋದರರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೆಹಲಿಯ ಕೆಂಪು ಕೋಟೆಯ ಬಳಿ ನಡೆದ ಸ್ಫೋ* ಪ್ರಕರಣದಲ್ಲಿ ಉಮರ್ ಮೊಹಮ್ಮದ್​ ಆತ್ಮಾ*ತಿ ಬಾಂಬರ್ ಎಂದು ಶಂಕಿಸಲಾಗಿದೆ.ದೆಹಲಿ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ವ್ಯಕ್ತಿ…

The post ಕಾರಿನಲ್ಲಿ ಇದ್ದಿದ್ದು ಉಮರ್ ಒಬ್ಬನೇ.. ಶಂಕಿತ ವ್ಯಕ್ತಿಯ ಅಮ್ಮ & ಸಹೋದರರನ್ನ ವಶಕ್ಕೆ ಪಡೆದಿದ್ದಾರೆ appeared first on Good News 24x7.

]]>

ದೆಹಲಿ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ವ್ಯಕ್ತಿ ಉಮರ್​ನ ತಾಯಿ ಸೇರಿದಂತೆ ಇಬ್ಬರು ಸಹೋದರರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೆಹಲಿಯ ಕೆಂಪು ಕೋಟೆಯ ಬಳಿ ನಡೆದ ಸ್ಫೋ* ಪ್ರಕರಣದಲ್ಲಿ ಉಮರ್ ಮೊಹಮ್ಮದ್​ ಆತ್ಮಾ*ತಿ ಬಾಂಬರ್ ಎಂದು ಶಂಕಿಸಲಾಗಿದೆ.ದೆಹಲಿ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ವ್ಯಕ್ತಿ ಉಮರ್​ನ ತಾಯಿ ಸೇರಿದಂತೆ ಇಬ್ಬರು ಸಹೋದರರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದೆಹಲಿಯ ಕೆಂಪು ಕೋಟೆಯ ಬಳಿ ನಡೆದ ಸ್ಫೋ* ಪ್ರಕರಣದಲ್ಲಿ ಉಮರ್ ಮೊಹಮ್ಮದ್​ ಆತ್ಮಾ*ತಿ ಬಾಂಬರ್ ಎಂದು ಶಂಕಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಉಮರ್‌ ಮನೆಯ ಸದಸ್ಯರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಅಲ್ಲದೇ, ಉಮರ್​​​, ಹೆಚ್ಚಿನ ತನಿಖೆಗಾಗಿ ಡಿಎನ್​ಎ ಪರೀಕ್ಷೆಗೂ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಕೃತ್ಯಕ್ಕೆ ಬಳಸಲಾದ ಕಾರಿನಲ್ಲಿ ಡಾ.ಉಮರ್ ಮೊಹಮ್ಮದ್ ನಬಿ ಮಾತ್ರ ಇದ್ದ ಅನ್ನೋದು ದೃಢವಾಗಿದೆ. ರಸ್ತೆಯ ಸಿಸಿಟಿವಿಯಲ್ಲಿ ಒಬ್ಬನೇ ಕಾರ್ ಡ್ರೈವ್ ಮಾಡುತ್ತಿದ್ದಿದ್ದು ಕಾಣಿಸಿದೆ. ಪುಲ್ವಾಮಾ ಜಿಲ್ಲೆಯ ವೈದ್ಯರ ತಂಡವೇ ಈಗ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯಲ್ಲಿ ಸಕ್ರಿಯವಾಗಿತ್ತಾ ಎಂಬ ಅನುಮಾನ ಶುರುವಾಗಿದೆ. ಕಾರನ್ನು ಚಲಾಯಿಸುತ್ತಿದ್ದದ್ದು ಉಮರ್ ಮೊಹಮ್ಮದ್ ಎಂದು ಹೇಳಲಾಗುತ್ತಿದೆ. ವ್ಯಕ್ತಿಯ ಡಿಎನ್​ಎ ಪರೀಕ್ಷೆ ಮಾಡಲಾಗಿದೆ. ದೆಹಲಿಯ ಪೋಲಿಸರು ಘಟನಾ ಸ್ಥಳದಲ್ಲಿ ಸಿಕ್ಕ ದೇಹದ ಭಾಗಗಳನ್ನ ಸಂಗ್ರಹಿಸಿ ಪರೀಕ್ಷೆಗೆ ರವಾನಿಸಿದ್ದಾರೆ.

The post ಕಾರಿನಲ್ಲಿ ಇದ್ದಿದ್ದು ಉಮರ್ ಒಬ್ಬನೇ.. ಶಂಕಿತ ವ್ಯಕ್ತಿಯ ಅಮ್ಮ & ಸಹೋದರರನ್ನ ವಶಕ್ಕೆ ಪಡೆದಿದ್ದಾರೆ appeared first on Good News 24x7.

]]>
ಕೆಂಪು ಕೋಟೆ ಬಳಿ ಕಾರು ಸ್ಫೋ* 8 ಜನ ಸಾ*; ದೆಹಲಿಯಲ್ಲಿ ಹೈ ಅಲರ್ಟ್ https://www.goodnews24x7.com/car-explosion-near-red-fort-kills-8-delhi-on-high-alert/ Tue, 11 Nov 2025 04:42:49 +0000 https://www.goodnews24x7.com/?p=8102 ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಗೇಟ್ ಬಳಿ ಕಾರು ಸ್ಫೋಟವಾಗಿದೆ. ಈ ಘಟನೆಯಿಂದ ಹತ್ತಿರದ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಈ ದುರಂತದಲ್ಲಿ 8 ಜನರು ವ್ಯಕ್ತಿ ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅಗ್ನಿಶಾಮಕ ದಳದ…

The post ಕೆಂಪು ಕೋಟೆ ಬಳಿ ಕಾರು ಸ್ಫೋ* 8 ಜನ ಸಾ*; ದೆಹಲಿಯಲ್ಲಿ ಹೈ ಅಲರ್ಟ್ appeared first on Good News 24x7.

]]>

ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಗೇಟ್ ಬಳಿ ಕಾರು ಸ್ಫೋಟವಾಗಿದೆ. ಈ ಘಟನೆಯಿಂದ ಹತ್ತಿರದ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಈ ದುರಂತದಲ್ಲಿ 8 ಜನರು ವ್ಯಕ್ತಿ ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಬೆಂಕಿ ಆರಿಸುವ ಪ್ರಯತ್ನ ಮಾಡುತ್ತಿದ್ದಾರೆ.

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು ಸಂಜೆ ಭಾರೀ ಸ್ಫೋಟ ಉಂಟಾಗಿದೆ. ಕೆಂಪು ಕೋಟೆ (Red Fort) ಬಳಿಯ ಮೆಟ್ರೋ ನಿಲ್ದಾಣದ ಗೇಟ್ ಬಳಿ ನಿಲ್ಲಿಸಿದ್ದ ಕಾರು ಸ್ಫೋಟವಾಗಿದೆ. ಇದರಿಂದ 8 ಜನರು ಮೃತಪಟ್ಟಿದ್ದಾರೆ. ಸುತ್ತಲೂ ಬೆಂಕಿ ಆವರಿಸಿದ್ದರಿಂದ ಹಲವು ಜನರು ಗಾಯಗೊಂಡಿದ್ದಾರೆ. ಇದರಿಂದ ದೆಹಲಿಯಲ್ಲಿ (Delhi) ಆತಂಕದ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ.

ದೆಹಲಿಯ ಸಂಸತ್ ಭವನ, ಇಂಡಿಯಾ ಗೇಟ್ ಸುತ್ತ ಹೈ ಅಲರ್ಟ್ ಘೋಷಿಸಲಾಗಿದೆ. ಚಾಂದನಿಚೌಕ್ ಮಾರ್ಕೆಟ್, ಕೆಂಪು ಕೋಟೆ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳನ್ನು ದೆಹಲಿ ಪೊಲೀಸರು ಬಂದ್​ ಮಾಡಿದ್ದಾರೆ.
ಇಂದು ಸಂಜೆ 6.55ರ ಸುಮಾರಿಗೆ ಕಾರು ಸ್ಫೋಟವಾಗಿದೆ ಎಂಬ ಮಾಹಿತಿ ಲಭ್ಯವಾಯಿತು. ಇದಾದ ನಂತರ 7 ಅಗ್ನಿಶಾಮಕ ದಳದ ವಾಹನಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿಯನ್ನು ಶೀಘ್ರದಲ್ಲೇ ನಿಯಂತ್ರಣಕ್ಕೆ ತರಲಾಯಿತು.
ದೆಹಲಿ ಅಗ್ನಿಶಾಮಕ ಇಲಾಖೆಯ ಪ್ರಕಾರ, ನಿಲ್ಲಿಸಿದ್ದ ಕಾರಿನಲ್ಲಿ ಸ್ಫೋಟ ಸಂಭವಿಸಿದೆ ಎಂದು ಕರೆ ಬಂದಿದ್ದು, ನಂತರ ಹತ್ತಿರದ 3ರಿಂದ 4 ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿಯನ್ನು ನಿಯಂತ್ರಿಸಲು ತಕ್ಷಣವೇ ಹಲವಾರು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಅಗ್ನಿಶಾಮಕ ದಳದ ಅಧಿಕಾರಿಗಳು ಸಿಎನ್‌ಜಿ ಸಿಲಿಂಡರ್ ಸ್ಫೋಟದ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ಸ್ಫೋಟಕ್ಕೆ ನಿಖರವಾದ ಕಾರಣ ಇನ್ನೂ ದೃಢಪಟ್ಟಿಲ್ಲ.

The post ಕೆಂಪು ಕೋಟೆ ಬಳಿ ಕಾರು ಸ್ಫೋ* 8 ಜನ ಸಾ*; ದೆಹಲಿಯಲ್ಲಿ ಹೈ ಅಲರ್ಟ್ appeared first on Good News 24x7.

]]>
ವೆಸ್ಟ್​ ವಿಂಡೀಸ್​ ವಿಂಡೀಸ್​ ವಿರುದ್ಧದ ಟೆಸ್ಟ್ ಸರಣಿ ಕ್ಲೀನ್​ ಸ್ವೀಪ್.. ಮ್ಯಾಚ್​ ಗೆಲ್ಲಿಸಿ ಸಂಭ್ರಮಿಸಿದ ರಾಹುಲ್ https://www.goodnews24x7.com/west-indies-clean-sweeps-test-series-against-west-indies-rahul-celebrates-after-winning-the-match/ Tue, 14 Oct 2025 08:21:49 +0000 https://www.goodnews24x7.com/?p=7709 ವೆಸ್ಟ್​ ವಿಂಡೀಸ್​ ವಿರುದ್ಧದ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ಕ್ಲೀನ್​ ಸ್ವೀಪ್ ಮಾಡಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯವನ್ನೂ ಗೆಲ್ಲುವ ಮೂಲಕ ಶುಬ್ಮನ್ ಗಿಲ್ ಪಡೆ ಟೆಸ್ಟ್​ ಕ್ರಿಕೆಟ್​ನಲ್ಲಿ ಐತಿಹಾಸಿಕ ದಾಖಲೆ ಬರೆದಿದೆ. ವೆಸ್ಟ್​ ವಿಂಡೀಸ್​…

The post ವೆಸ್ಟ್​ ವಿಂಡೀಸ್​ ವಿಂಡೀಸ್​ ವಿರುದ್ಧದ ಟೆಸ್ಟ್ ಸರಣಿ ಕ್ಲೀನ್​ ಸ್ವೀಪ್.. ಮ್ಯಾಚ್​ ಗೆಲ್ಲಿಸಿ ಸಂಭ್ರಮಿಸಿದ ರಾಹುಲ್ appeared first on Good News 24x7.

]]>

ವೆಸ್ಟ್​ ವಿಂಡೀಸ್​ ವಿರುದ್ಧದ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ಕ್ಲೀನ್​ ಸ್ವೀಪ್ ಮಾಡಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯವನ್ನೂ ಗೆಲ್ಲುವ ಮೂಲಕ ಶುಬ್ಮನ್ ಗಿಲ್ ಪಡೆ ಟೆಸ್ಟ್​ ಕ್ರಿಕೆಟ್​ನಲ್ಲಿ ಐತಿಹಾಸಿಕ ದಾಖಲೆ ಬರೆದಿದೆ.
ವೆಸ್ಟ್​ ವಿಂಡೀಸ್​ ವಿರುದ್ಧದ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ಕ್ಲೀನ್​ ಸ್ವೀಪ್ ಮಾಡಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯವನ್ನೂ ಗೆಲ್ಲುವ ಮೂಲಕ ಶುಬ್ಮನ್ ಗಿಲ್ ಪಡೆ ಟೆಸ್ಟ್​ ಕ್ರಿಕೆಟ್​ನಲ್ಲಿ ಐತಿಹಾಸಿಕ ದಾಖಲೆ ಬರೆದಿದೆ.

ಮೊದಲ ದಿನ ಟಾಸ್​ ಗೆದ್ದು ಬ್ಯಾಟ್ ಮಾಡಿದ್ದ ಭಾರತ ತಂಡ, ಒಟ್ಟು 518 ರನ್​ಗಳಿಸಿ ಡಿಕ್ಲೇರ್​ ಮಾಡಿಕೊಂಡಿತ್ತು. ಪ್ರತಿಯಾಗಿ ಬ್ಯಾಟಿಂಗ್​​ಗೆ ಇಳಿದ್ದ ವಿಂಡೀಸ್​, ನಿನ್ನೆಯ ದಿನದಾಟದ ಅಂತ್ಯಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡು 140 ರನ್​ಗಳಿಸಿತ್ತು. ಅಂತೆಯೇ ಬ್ಯಾಟಿಂಗ್​ಗೆ ಇಳಿದ ವಿಂಡೀಸ್ 248 ರನ್​​ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಆಲೌಟ್ ಆಗಿ, ಫಾಲೋ ಆನ್ ಸುಳಿಗೆ ಸಿಲುಕಿತ್ತು.

270 ರನ್​ಗಳ ಹಿನ್ನಡೆ ಅನುಭವಿಸಿದ ವಿಂಡೀಸ್, ಫಾಲೋ ಆನ್ ಪ್ರಕಾರ ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಆರಂಭಿಸಿತು. ಎರಡನೇ ಅವಕಾಶದಲ್ಲಿ ಒಳ್ಳೆಯ ಪೈಪೋಟಿ ಕೊಟ್ಟ ವಿಂಡೀಸ್ ಪಡೆ, 390 ರನ್​ಗಳಿಸಿ ಆಲೌಟ್ ಆಯಿತು. ಆ ಮೂಲಕ ಭಾರತದ ಗೆಲುವಿಗೆ 121 ರನ್​ ಬೇಕಿತ್ತು.

ಈ ಗುರಿಯನ್ನು ನಿನ್ನೆ ಮಧ್ಯಾಹ್ನದಿಂದ ಬೆನ್ನು ಹತ್ತಿದ್ದ ಗಿಲ್ ಪಡೆ ಇಂದು ಬೆಳಗ್ಗೆ ಗೆದ್ದು ಬೀಗಿದೆ. ಜೈಸ್ವಾಲ್, ಸಾಯಿ ಸುದರ್ಶನ್, ಗಿಲ್ ಸೇರಿ ಮೂರು ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ಮುಟ್ಟಿದೆ. ತಾಳ್ಮೆಯ ಆಟವನ್ನಾಡಿದ ಕನ್ನಡಿಗ ಕೆಎಲ್ ರಾಹುಲ್ ತಂಡವನ್ನು ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾದರು. 108 ಬಾಲ್​ಗಳನ್ನು ಎದುರಿಸಿ ಎರಡು ಸಿಕ್ಸರ್, ಆರು ಬೌಂಡರಿಯೊಂದಿಗೆ 58 ರನ್​ಗಳಿಸಿ ಅಜಯರಾಗಿ ಉಳಿದರು. ಇನ್ನು ಮೊದಲ ಇನ್ನಿಂಗ್ಸ್​ನಲ್ಲಿ 38 ರನ್​ಗಳ ಕಾಣಿಕೆ ನೀಡಿದ್ದರು. ಈ ಗೆಲುವಿನೊಂದಿಗೆ ಶುಬ್ಮನ್ ಗಿಲ್ ನಾಯಕತ್ವಕ್ಕೆ ಮತ್ತೊಂದು ಸರಣಿ ಒಲಿದಿದೆ.

The post ವೆಸ್ಟ್​ ವಿಂಡೀಸ್​ ವಿಂಡೀಸ್​ ವಿರುದ್ಧದ ಟೆಸ್ಟ್ ಸರಣಿ ಕ್ಲೀನ್​ ಸ್ವೀಪ್.. ಮ್ಯಾಚ್​ ಗೆಲ್ಲಿಸಿ ಸಂಭ್ರಮಿಸಿದ ರಾಹುಲ್ appeared first on Good News 24x7.

]]>
ಏಷ್ಯಾ ಕಪ್ 2025: ಶ್ರೇಯಸ್ ಅಯ್ಯರ್‌ಗೆ ಭಾರತ ತಂಡದಲ್ಲಿ ಸ್ಥಾನವಿಲ್ಲ – ಕಾರಣವೇನು? ಮಾಂಟಿ ಪನೇಸರ್ ವಿಶ್ಲೇಷಣೆ. https://www.goodnews24x7.com/asia-cup-2025-shreyas-iyer-not-in-india-squad-what-is-the-reason-monty-panesar-analysis/ Sun, 31 Aug 2025 08:10:57 +0000 https://www.goodnews24x7.com/?p=7140 ದೆಹಲಿ: ಮುಂಬರುವ 2025ರ ಏಷ್ಯಾ ಕಪ್ ಭಾರತ ತಂಡದಲ್ಲಿ ಶ್ರೇಯಸ್ ಅಯ್ಯರ್ ಅವರ ಹೆಸರು ಕಾಣಿಸದಿದ್ದು ಹಲವರ ಗಮನಸೆಳೆದಿದೆ. ಈ ನಿರ್ಧಾನದ ಹಿಂದೆ ಇರುವ ಕಾರಣವನ್ನು ಇಂಗ್ಲೆಂಡ್‌ನ ಮಾಜಿ ಸ್ಪಿನ್ನರ್ ಮಾಂಟಿ ಪನೇಸರ್ ಬಹಿರಂಗಪಡಿಸಿದ್ದಾರೆ. ಮಾಂಟಿ ಪನೇಸರ್ ಅಭಿಪ್ರಾಯದಂತೆ, ಶ್ರೇಯಸ್ ಅಯ್ಯರ್‌ನಲ್ಲಿ…

The post ಏಷ್ಯಾ ಕಪ್ 2025: ಶ್ರೇಯಸ್ ಅಯ್ಯರ್‌ಗೆ ಭಾರತ ತಂಡದಲ್ಲಿ ಸ್ಥಾನವಿಲ್ಲ – ಕಾರಣವೇನು? ಮಾಂಟಿ ಪನೇಸರ್ ವಿಶ್ಲೇಷಣೆ. appeared first on Good News 24x7.

]]>

ದೆಹಲಿ: ಮುಂಬರುವ 2025ರ ಏಷ್ಯಾ ಕಪ್ ಭಾರತ ತಂಡದಲ್ಲಿ ಶ್ರೇಯಸ್ ಅಯ್ಯರ್ ಅವರ ಹೆಸರು ಕಾಣಿಸದಿದ್ದು ಹಲವರ ಗಮನಸೆಳೆದಿದೆ. ಈ ನಿರ್ಧಾನದ ಹಿಂದೆ ಇರುವ ಕಾರಣವನ್ನು ಇಂಗ್ಲೆಂಡ್‌ನ ಮಾಜಿ ಸ್ಪಿನ್ನರ್ ಮಾಂಟಿ ಪನೇಸರ್ ಬಹಿರಂಗಪಡಿಸಿದ್ದಾರೆ.

ಮಾಂಟಿ ಪನೇಸರ್ ಅಭಿಪ್ರಾಯದಂತೆ, ಶ್ರೇಯಸ್ ಅಯ್ಯರ್‌ನಲ್ಲಿ ಇರುವ ನೆತ್ತೃತ್ವ ಗುಣಗಳು ಅವರ ತಂಡದಲ್ಲಿ ಸ್ಥಾನಕ್ಕೆ ಅಡ್ಡಿಯಾಗಿರಬಹುದು. ಈಗಾಗಲೇ ತಂಡದಲ್ಲಿ ನಾಯಕನ ಸ್ಥಾನದಲ್ಲಿ ಒಬ್ಬ стабಿಲ್ ಆಟಗಾರ ಇದ್ದ ಹಿನ್ನೆಲೆಯಲ್ಲಿ, BCCI ಹೊಸ ಯುವ ಆಟಗಾರರಿಗೆ ಅವಕಾಶ ನೀಡಲು ಉತ್ಸುಕವಾಗಿದೆ ಎಂದಿದ್ದಾರೆ.

“ಅಯ್ಯರ್‍ನಲ್ಲಿ ನಾಯಕರ ಚಟುವಟಿಕೆ ಸ್ಪಷ್ಟವಾಗಿದ್ದು, ಕೋಚ್ ಗೌತಮ್ ಗಂಭೀರ್ ಅವರಿಗೆ ಯುವ ಆಟಗಾರರನ್ನು ನಡಿಸಲು ಇದು ಸುಲಭವಾಗುತ್ತದೆ. ತಂಡಕ್ಕೆ ಹೊಸ ಶಕ್ತಿ ತರಲು ಇದು ಒಳ್ಳೆಯ ಅವಕಾಶ,” ಎಂದು ಮಾಂಟಿ ಪನೇಸರ್ India Today ಜೊತೆಗಿನ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಅಚ್ಚರಿಯ ನಿರ್ಲಕ್ಷ್ಯ

2025ರ ಏಷ್ಯಾ ಕಪ್‌ಗೆ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಭಾರತ ತಂಡವನ್ನು ಘೋಷಿಸಿದಾಗ, ಶ್ರೇಯಸ್ ಅಯ್ಯರ್ ಸೇರಿಲ್ಲದಿರುವುದು ಅಚ್ಚರಿಯ ವಿಷಯವಾಯಿತು. IPL 2024ರಲ್ಲಿ ಅವರು ಕೋಲ್ಕತಾ ನೈಟ್ ರೈಡರ್ಸ್ (KKR) ಗೆಲ್ಲುವಲ್ಲಿ ನಾಯಕತ್ವ ನೀಡಿದ್ರು. ನಂತರದ ವರ್ಷ, ಪಂಜಾಬ್ ಕಿಂಗ್ಸ್ ತಂಡವನ್ನು ಫೈನಲ್‌ಗೆ ಕರೆದೊಯ್ಯುವಲ್ಲಿ ಮಹತ್ತರ ಪಾತ್ರವಹಿಸಿದ್ದರು.

ಅಯ್ಯರ್ ಅವರು 2025ರ ಐಪಿಎಲ್‌ನಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ್ದರು. ಅವರ ತಾತ್ಕಾಲಿಕ exclude ಮಾಡಿರುವುದಕ್ಕೆ ಈ ಬ್ಯಾಟಿಂಗ್ ಫಲಿತಾಂಶ ಮಾತ್ರವಲ್ಲ, ಅವರ ನಾಯಕತ್ವ ಸಾಧನೆಯು ಬಲವಾದ ಕಾರಣ ನೀಡುತ್ತಿದೆ.

ಸಾಧನೆಗಳ ತುಳಿತ

  • ಟೆಸ್ಟ್ ಪಂದ್ಯಗಳು: 14 ಪಂದ್ಯ, 811 ರನ್
  • ಏಕದಿನ ಪಂದ್ಯಗಳು: 70 ಪಂದ್ಯ, 2845 ರನ್
  • ಟಿ20ಐ ಪಂದ್ಯಗಳು: 51 ಪಂದ್ಯ, 1104 ರನ್

ಇಂತಹ ಧಾರಾಳ ಅನುಭವ ಮತ್ತು ಐಪಿಎಲ್ ಯಶಸ್ಸಿನ ನಡುವೆಯೂ, ಶ್ರೇಯಸ್ ಅಯ್ಯರ್ ಏಷ್ಯಾ ಕಪ್ ತಂಡದಿಂದ ಹೊರಗಿರಲು ಕಾರಣಗಳನ್ನು ಬಿಸಿಸಿಐ ಇನ್ನೂ ಅಧಿಕೃತವಾಗಿ ಸ್ಪಷ್ಟಪಡಿಸಿಲ್ಲ. ಆದರೆ ಮಾಂಟಿ ಪನೇಸರ್ ಹೇಳಿಕೆಯು ಈ ನಿರ್ಧಾನದ ಹಿಂದೆ ಯುಕ್ತಿಶಾಸ್ತ್ರವಿರುವಂತೆ ತೋರುತ್ತದೆ.

 

The post ಏಷ್ಯಾ ಕಪ್ 2025: ಶ್ರೇಯಸ್ ಅಯ್ಯರ್‌ಗೆ ಭಾರತ ತಂಡದಲ್ಲಿ ಸ್ಥಾನವಿಲ್ಲ – ಕಾರಣವೇನು? ಮಾಂಟಿ ಪನೇಸರ್ ವಿಶ್ಲೇಷಣೆ. appeared first on Good News 24x7.

]]>