Devotees Archives - Good News 24x7 https://www.goodnews24x7.com/tag/devotees/ Kannada Tue, 25 Aug 2026 06:37:49 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Devotees Archives - Good News 24x7 https://www.goodnews24x7.com/tag/devotees/ 32 32 ಸನಾತನ ಧರ್ಮದ ಶ್ರೇಷ್ಠತೆ ಮತ್ತು ಪಾರದರ್ಶಕತೆಗೆ ಮಂತ್ರಾಲಯ ಶ್ರೀಗಳ ಕರೆ https://www.goodnews24x7.com/mantralaya-sri-calls-for-the-excellence-and-transparency-of-sanatan-dharma/ Tue, 25 Aug 2026 06:37:49 +0000 https://www.goodnews24x7.com/?p=9914 ಮಂತ್ರಾಲಯ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರು ಮಠ-ಮಾನ್ಯಗಳು ಮತ್ತು ಸಂಸ್ಥೆಗಳ ಆಡಳಿತದಲ್ಲಿ ಆರ್ಥಿಕ ಪಾರದರ್ಶಕತೆ ಅತ್ಯಗತ್ಯವೆಂದು ಪ್ರತಿಪಾದಿಸಿದ್ದಾರೆ. ಆಯೋಧ್ಯೆಯ ರಾಮಮಂದಿರದ ಹುಂಡಿ ಕಳ್ಳತನದ ಕುರಿತು ಪ್ರತಿಕ್ರಿಯಿಸಿದ ಶ್ರೀಗಳು, ಈ ಪ್ರಕರಣದ ಬಗ್ಗೆ ಉತ್ತರ ಪ್ರದೇಶ ಸರ್ಕಾರ ಹಾಗೂ ನ್ಯಾಯಾಲಯದಲ್ಲಿ ತನಿಖೆ…

The post ಸನಾತನ ಧರ್ಮದ ಶ್ರೇಷ್ಠತೆ ಮತ್ತು ಪಾರದರ್ಶಕತೆಗೆ ಮಂತ್ರಾಲಯ ಶ್ರೀಗಳ ಕರೆ appeared first on Good News 24x7.

]]>

ಮಂತ್ರಾಲಯ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರು ಮಠ-ಮಾನ್ಯಗಳು ಮತ್ತು ಸಂಸ್ಥೆಗಳ ಆಡಳಿತದಲ್ಲಿ ಆರ್ಥಿಕ ಪಾರದರ್ಶಕತೆ ಅತ್ಯಗತ್ಯವೆಂದು ಪ್ರತಿಪಾದಿಸಿದ್ದಾರೆ. ಆಯೋಧ್ಯೆಯ ರಾಮಮಂದಿರದ ಹುಂಡಿ ಕಳ್ಳತನದ ಕುರಿತು ಪ್ರತಿಕ್ರಿಯಿಸಿದ ಶ್ರೀಗಳು, ಈ ಪ್ರಕರಣದ ಬಗ್ಗೆ ಉತ್ತರ ಪ್ರದೇಶ ಸರ್ಕಾರ ಹಾಗೂ ನ್ಯಾಯಾಲಯದಲ್ಲಿ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಸರ್ಕಾರ ಖಂಡಿತ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು.

ಸನಾತನ ಹಿಂದೂ ಧರ್ಮದ ಶ್ರೇಷ್ಠತೆಯನ್ನು ಎತ್ತಿಹಿಡಿದ ಶ್ರೀಗಳು, ಈ ಜಗತ್ತಿನಲ್ಲಿ ಸನಾತನ ಧರ್ಮಕ್ಕೆ ಸಮನಾದ ಮತ್ತೊಂದು ಧರ್ಮವಿಲ್ಲ ಎಂದು ಬಣ್ಣಿಸಿದರು. ಕರ್ನಾಟಕವು ಶಾಂತಿಯ ತೋಟವಿದ್ದಂತೆ ಹಾಗೂ ಭಾರತವು ಶಾಂತಿಪ್ರಿಯ ದೇಶವಾಗಿದ್ದು, ಇತರ ಧರ್ಮಗಳೊಂದಿಗೆ ದ್ವೇಷ ಸಾಧಿಸದೆ ಎಲ್ಲರೂ ಅಣ್ಣ-ತಮ್ಮಂದಿರಂತೆ ಸೌಹಾರ್ದತೆಯಿಂದ ಬಾಳಬೇಕು ಎಂದು ಕರೆ ನೀಡಿದರು. ಯಾವುದೇ ಧರ್ಮದ ಮೇಲೆ ದೌರ್ಜನ್ಯ ಅಥವಾ ಅಶಾಂತಿ ಸೃಷ್ಟಿಸುವ ಕೃತ್ಯಗಳು ನಡೆದರೆ ಅದನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದರು.

ಇದೇ ವೇಳೆ ದಲಿತ ಕಾಲೋನಿಗಳಿಗೆ ಭೇಟಿ ನೀಡುವ ವಿಚಾರವಾಗಿ ಮಾತನಾಡಿದ ಅವರು, ಮಂತ್ರಾಲಯ ಮಠವು ಸರ್ವ ಧರ್ಮ ಮತ್ತು ಸಮುದಾಯಗಳ ಭಕ್ತರನ್ನು ಒಳಗೊಂಡಿದ್ದು, ಶೋಷಿತರಿಗೆ ಸಾಂತ್ವನ ಹಾಗೂ ಧೈರ್ಯ ತುಂಬುವ ಕೆಲಸವನ್ನು ಮಠವು ನಿರಂತರವಾಗಿ ಮಾಡುತ್ತಾ ಬಂದಿದೆ. ದಲಿತರ ಕೇರಿಗಳಿಗೆ ಭೇಟಿ ನೀಡುವುದು ತಮಗೆ ಹೊಸದೇನಲ್ಲ; ಎಲ್ಲ ಸಮುದಾಯಗಳನ್ನು ಒಂದಾಗಿ ಒಯ್ಯುವುದು ಮಠದ ಸದಾಕಾಲದ ಉದ್ದೇಶವಾಗಿದೆ ಎಂದು ಶ್ರೀಗಳು ಸ್ಪಷ್ಟಪಡಿಸಿದರು.

The post ಸನಾತನ ಧರ್ಮದ ಶ್ರೇಷ್ಠತೆ ಮತ್ತು ಪಾರದರ್ಶಕತೆಗೆ ಮಂತ್ರಾಲಯ ಶ್ರೀಗಳ ಕರೆ appeared first on Good News 24x7.

]]>
ಮಲ್ಲಿಕಾರ್ಜುನ ಮುತ್ಯಾಗೆ ಬಿಗ್ ಶಾಕ್ ಕೊಟ್ಟ ಕೋರ್ಟ್! https://www.goodnews24x7.com/mallikarjun-mutya-gets-a-big-shock-from-the-courtmallikarjun-mutya-gets-a-big-shock-from-the-court/ Mon, 09 Mar 2026 12:11:28 +0000 https://www.goodnews24x7.com/?p=8814   ಕಲ್ಯಾಣ ಕರ್ನಾಟಕದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಅಪ್ರಾಪ್ತ ಬಾಲಕಿಯೊಂದಿಗೆಅನುಚಿತ ವರ್ತನೆ ಹಾಗೂ ಪೋಕ್ಸೋ ಪ್ರಕರಣದ ಪ್ರಮುಖ ಆರೋಪಿ ಮಲ್ಲಿಕಾರ್ಜುನ ಮುತ್ಯಾಗೆ ನ್ಯಾಯಾಲಯದಿಂದ ಭಾರಿ ಹಿನ್ನಡೆಯಾಗಿದೆ. ಜಾಮೀನು ಸಿಗುವ ಭರವಸೆಯಲ್ಲಿದ್ದ ಮುತ್ಯಾ ಮತ್ತು ಆತನ ಭಕ್ತರಿಗೆ ಯಾದಗಿರಿ ಜಿಲ್ಲಾ ಪ್ರಧಾನ ನ್ಯಾಯಾಲಯವು…

The post ಮಲ್ಲಿಕಾರ್ಜುನ ಮುತ್ಯಾಗೆ ಬಿಗ್ ಶಾಕ್ ಕೊಟ್ಟ ಕೋರ್ಟ್! appeared first on Good News 24x7.

]]>

 

ಕಲ್ಯಾಣ ಕರ್ನಾಟಕದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಅಪ್ರಾಪ್ತ ಬಾಲಕಿಯೊಂದಿಗೆಅನುಚಿತ ವರ್ತನೆ ಹಾಗೂ ಪೋಕ್ಸೋ ಪ್ರಕರಣದ ಪ್ರಮುಖ ಆರೋಪಿ ಮಲ್ಲಿಕಾರ್ಜುನ ಮುತ್ಯಾಗೆ ನ್ಯಾಯಾಲಯದಿಂದ ಭಾರಿ ಹಿನ್ನಡೆಯಾಗಿದೆ. ಜಾಮೀನು ಸಿಗುವ ಭರವಸೆಯಲ್ಲಿದ್ದ ಮುತ್ಯಾ ಮತ್ತು ಆತನ ಭಕ್ತರಿಗೆ ಯಾದಗಿರಿ ಜಿಲ್ಲಾ ಪ್ರಧಾನ ನ್ಯಾಯಾಲಯವು ಜಾಮೀನು ನಿರಾಕರಿಸುವ ಮೂಲಕ ಶಾಕ್ ನೀಡಿದೆ. ಹಾಗಾದ್ರೆ, ಮುತ್ಯಾ ಜೈಲುಪಾಲಾಗುತ್ತಾರಾ?.

ಅಪ್ರಾಪ್ತ ಬಾಲಕಿಯೊಂದಿಗೆಅನುಚಿತ ವರ್ತನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಲಿಕಾರ್ಜುನ ಮುತ್ಯಾನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದೆ. ತಮ್ಮ ವಿರುದ್ಧದ ಫೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಲ್ ರೋಜಾ ಮಠದ ಮಲ್ಲಿಕಾರ್ಜುನ ಮುತ್ಯಾ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಈ ಅರ್ಜಿ ವಿಚಾರಣೆ ನಡೆಸಿದ್ದ ಯಾದಗಿರಿ ಜಿಲ್ಲಾ ಪ್ರಧಾನ, ವಿಶೇಷ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮರಳುಸಿದ್ದರಾಧ್ಯ ಅವರು ಇಂದು ವಜಾ ಮಾಡಿ ಆದೇಶ ಹೊರಡಿಸಿದ್ದಾರೆ.

ಪೊಲೀಸ್ ವಿಚಾರಣೆಗೆ ಹಾಜರಾಗುವ ಮೊದಲೇ ಅಜ್ಞಾತ ಸ್ಥಳದಿಂದಲೇ ಮಲ್ಲಿಕಾರ್ಜುನ ಮುತ್ಯಾ, ತಮ್ಮ ವಿರುದ್ಧದ ಫೋಕ್ಸೋ ಪ್ರಕರಣ ರದ್ದು ಕೋರಿ ಕಲಬುರಗಿ ಹೈಕೋರ್ಟ್​​​​ಗೆ ಅರ್ಜಿ ಸಲ್ಲಿಸಿದ್ದರು. ಆದ್ರೆ, ಅದೇನಾಯ್ತೋ ಏನೋ ಏಕಾಏಕಿ ಕೋರ್ಟ್​​ನಿಂದ ಅರ್ಜಿ ವಾಪಸ್ ಪಡೆದುಕೊಂಡು ಬಳಿಕ ನಿರೀಕ್ಷಣಾ ಜಾಮೀನು ಕೋರಿ ಯಾದಗಿರಿ ಜಿಲ್ಲಾ ಕೋರ್ಟ್​​​​ಗೆ ಅರ್ಜಿ ಸಲ್ಲಿಸಿದ್ದರು. ಆದ್ರೆ, ಇದಕ್ಕೆ ಸರ್ಕಾರಿ ವಕೀಲರು ಇದಕ್ಕೆ ಆಕ್ಷೇಪ ಸಲ್ಲಿಸಿದ್ದರು. ಇದರಿಂದ ಶುಕ್ರವಾರ ಕೋರ್ಟ್​, ಎರಡು ಕಡೆ ವಾದ ಪ್ರತಿವಾದ ಆಲಿಸಿದ್ದು, ​ಜಾಮೀನು ಆದೇಶವನ್ನು ಇಂದಿಗೆಕಾಯ್ದಿರಿಸಿತ್ತು. ಇದೀಗ ಕೋರ್ಟ್ ಮುತ್ಯಾನಿಗೆ ಜಾಮೀನು ನೀಡಲು ನಿರಾಕರಿಸಿದೆ. ಇದರಿಂದ ಸ್ವಯಂ ಘೋಷಿತ ದೇವಮಾನವನಿಗೆ ಸಂಕಷ್ಟ ಎದುರಾಗಿದ್ದು, ಇದೀಗ ಜಾಮೀನಿಗಾಗಿ ಹೈಕೋರ್ಟ್​​ ಮೆಟ್ಟಿಲೇರಬೇಕಿದೆ.

ಫೋಕ್ಸೋ ಕೇಸ್: ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ಫೋಕ್ಸೋ ಪ್ರಕರಣ ದಾಖಲಾಗುತ್ತಿದ್ದಂತೆಯೇ ನಾಪತ್ತೆಯಾಗಿದ್ದ ಮಲ್ಲಿಕಾರ್ಜುನ ಮುತ್ಯಾ, ಮೂರ್ನಾಲ್ಕು ದಿನದ ಬಳಿಕ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದರು.ಈ ಪ್ರಕರಣದ ತನಿಖಾಧಿಕಾರಿಯಾಗಿರುವ ಶಹಪೂರ ಸಿಪಿಐ ಶರಣಗೌಡ ನಾಮಣ್ಣವರ ಅವರು ತನಿಖೆಯನ್ನು ಚುರುಕುಗೊಳಿಸಿದ್ದು, ಈಗಾಗಲೇ ಮಲ್ಲಿಕಾರ್ಜುನ ಮುತ್ಯಾನನ್ನು ಮೊದಲ ಹಂತದ ವಿಚಾರಣೆ ಅವರ ನಾಲ್ಕು ಮೊಬೈಲ್ ಫೋನ್ ಜಪ್ತಿ ಮಾಡಿದ್ದಾರೆ. ಈ ಮೊಬೈಲ್‌ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಡಿಜಿಟಲ್ ಸಾಕ್ಷ್ಯಗಳು ಸಿಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಮೊಬೈಲ್‌ನಲ್ಲಿರುವ ಸಂದೇಶಗಳು, ಕರೆ ದಾಖಲೆಗಳು ಅಥವಾ ವಿಡಿಯೋಗಳ ಬಗ್ಗೆ ತನಿಖಾ ತಂಡವು ತಾಂತ್ರಿಕ ಪರಿಶೀಲನೆ ನಡೆಸುತ್ತಿದೆ.

ಮಲ್ಲಿಕಾರ್ಜುನ ಮುತ್ಯಾ ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿರುವ ವಿಡಿಯೋ ರಾಜ್ಯಾದ್ಯಂತ ಭಾರೀ ವೈರಲ್ ಆಗಿತ್ತು. ಇದರ ಬೆನ್ನಲ್ಲಿಯೇ ರಾಜ್ಯ ಮಕ್ಕಳ ರಕ್ಷಣಾ ಆಯೋಗವು ಯಾದಗಿರಿ ಜಿಲ್ಲಾಧಿಕಾರಿ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಇದರ ಬೆನ್ನಲ್ಲೇ ಡಿಸಿ ಸೂಚನೆ ಮೇರೆಗೆ ಫೆಬ್ರವರಿ 25ರಂದು ಶಹಾಪುರ ತಾಲೂಕಿನ ಗೋಗಿ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ ಮುತ್ಯಾ ನಾಪತ್ತೆಯಾಗಿದ್ದ. ಇನ್ನೊಂದೆಡೆ ಅವರ ಭಕ್ತರು ಹಾಗೂ ಕೋಲಿ ಸಮಾಜ ಪ್ರತಿಭಟನೆ ನಡೆಸಿದ್ದು, ಮುತ್ಯಾ ವಿರುದ್ಧದ ಫೋಕ್ಸೋ ಪ್ರಕರಣ ರದ್ದುಗೊಳಿಸಬೇಕೆಂದು ಆಗ್ರಹಿಸಿದ್ದರು.

The post ಮಲ್ಲಿಕಾರ್ಜುನ ಮುತ್ಯಾಗೆ ಬಿಗ್ ಶಾಕ್ ಕೊಟ್ಟ ಕೋರ್ಟ್! appeared first on Good News 24x7.

]]>
ಯೂಟ್ಯೂಬರ್ ಸಮೀರ್ ಕೂಲಿಂಗ್ ಗ್ಲಾಸ್ ಧರಿಸಿ ವಿಚಾರಣೆಗೆ ಹಾಜರು – ವಿಚಾರಣೆ ಶುರು. https://www.goodnews24x7.com/youtuber-sameer-appears-at-hearing-wearing-cooling-glasses-hearing-begins/ Sun, 24 Aug 2025 08:27:50 +0000 https://www.goodnews24x7.com/?p=6651 ಮಂಗಳೂರು: ಧರ್ಮಸ್ಥಳ ದೇವಾಲಯದ ವಿರುದ್ಧ ಎಐ ತಂತ್ರಜ್ಞಾನ ಬಳಸಿದ ವಿವಾದಾಸ್ಪದ ವಿಡಿಯೋ ಬಿಡುಗಡೆ ಮಾಡಿಕೊಂಡಿದ್ದ ಯೂಟ್ಯೂಬರ್ ಸಮೀರ್ ಎಂ.ಡಿ, ಕೊನೆಗೂ ಬೆಳ್ತಂಗಡಿ ಪೊಲೀಸರಿಗೆ ವಿಚಾರಣೆಗೆ ಹಾಜರಾದರು. ಸಾಮಾಜಿಕ ಜಾಲತಾಣಗಳಲ್ಲಿ “ಬುರುಡೆ ಸಮೀರ್” ಎಂದು ಗುರುತಿಸಿಕೊಂಡಿರುವ ಅವರು, ತಮ್ಮ ವಿರುದ್ಧದ ಗಂಭೀರ ಆರೋಪಗಳ…

The post ಯೂಟ್ಯೂಬರ್ ಸಮೀರ್ ಕೂಲಿಂಗ್ ಗ್ಲಾಸ್ ಧರಿಸಿ ವಿಚಾರಣೆಗೆ ಹಾಜರು – ವಿಚಾರಣೆ ಶುರು. appeared first on Good News 24x7.

]]>

ಮಂಗಳೂರು: ಧರ್ಮಸ್ಥಳ ದೇವಾಲಯದ ವಿರುದ್ಧ ಎಐ ತಂತ್ರಜ್ಞಾನ ಬಳಸಿದ ವಿವಾದಾಸ್ಪದ ವಿಡಿಯೋ ಬಿಡುಗಡೆ ಮಾಡಿಕೊಂಡಿದ್ದ ಯೂಟ್ಯೂಬರ್ ಸಮೀರ್ ಎಂ.ಡಿ, ಕೊನೆಗೂ ಬೆಳ್ತಂಗಡಿ ಪೊಲೀಸರಿಗೆ ವಿಚಾರಣೆಗೆ ಹಾಜರಾದರು. ಸಾಮಾಜಿಕ ಜಾಲತಾಣಗಳಲ್ಲಿ “ಬುರುಡೆ ಸಮೀರ್” ಎಂದು ಗುರುತಿಸಿಕೊಂಡಿರುವ ಅವರು, ತಮ್ಮ ವಿರುದ್ಧದ ಗಂಭೀರ ಆರೋಪಗಳ ಸಂಬಂಧ ಪೊಲೀಸರಿಂದ ವಿಚಾರಣೆಗೆ ಒಳಗಾಗುತ್ತಿದ್ದಾರೆ.

ಬೆಳಿಗ್ಗೆ 10:30ಕ್ಕೆ ಹಾಜರಾಗುವುದಾಗಿ ಹೇಳಿದ್ದ ಸಮೀರ್, ಮಧ್ಯಾಹ್ನ 1 ಗಂಟೆ ಸುಮಾರಿಗೆ ತಮ್ಮ ವಕೀಲರೊಂದಿಗೆ ಠಾಣೆಗೆ ಆಗಮಿಸಿದರು. ಕುಳಿತುಕೊಂಡೇ ನಗುತ್ತಲೇ ಮಾತನಾಡಿದ ಅವರು, ಕೂಲಿಂಗ್ ಗ್ಲಾಸ್ ಧರಿಸಿದ್ದ ಹಾವಭಾವನೆಗಳಿಂದಲೇ ಸುದ್ದಿಯಾಗಿದ್ದಾರೆ. ವಿಶೇಷ ತನಿಖಾ ದಳ (SIT) ಈಗಾಗಲೇ ಸಮೀಕ್ಷಾ ಚಟುವಟಿಕೆ ಆರಂಭಿಸಿದೆ.

ಸಮೀರ್ ವಿರುದ್ಧ ಧರ್ಮಸ್ಥಳ ಕ್ಷೇತ್ರ ಹಾಗೂ ಅದರ ಭಕ್ತರ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಅಪಪ್ರಚಾರ ನಡೆಸಿದ ಆರೋಪಗಳು ಇದ್ದು, ಈ ಸಂಬಂಧ ದೂತ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾದ ವಿಡಿಯೋಗಳ ಕುರಿತು ಹಲವು ಗಂಭೀರ ಪ್ರಕರಣಗಳು ದಾಖಲೆಯಲ್ಲಿವೆ. ಇತ್ತೀಚೆಗೆ ನ್ಯಾಯಾಲಯದಿಂದ ಅವರಿಗೆ ನಿರೀಕ್ಷಣಾ ಜಾಮೀನು ದೊರಕಿದ್ದು, ಜಾಮೀನಿನ ಪ್ರಮಾಣದಲ್ಲಿಯೇ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು.

ಅಲ್ಲದೆ, ಸಮೀರ್ ತನಗೆ ಜೀವದ ಅಪಾಯವಿದೆ ಎಂದು ಹೇಳಿಕೊಂಡಿದ್ದ ಹಿನ್ನೆಲೆ, ಬೆಳ್ತಂಗಡಿ ಪೊಲೀಸ್ ಠಾಣೆ ಪರಿಧಿಯಲ್ಲಿ ವಿಚಾರಣೆ ನಡೆಯುತ್ತಿದೆ.

‘ದೂತ’ ಚಾನೆಲ್ ಹಿಂದೆ ಬಿದ್ದ ಬಂಡವಾಳ ಮತ್ತು ವಿಳಾಸಗಳು ತನಿಖೆಯ ಅಡಿ

ತಾನು ನೀಡಿರುವ ಮಾಹಿತಿಗಳೆಲ್ಲವೂ ಸತ್ಯ ಎಂದು ನಂಬಿಸುತ್ತಾ ಸಮೀರ್ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ವಿಡಿಯೋಗಳನ್ನು ಪ್ರಕಟಿಸಿದ್ದರು. ಈ ವಿಡಿಯೋಗಳಲ್ಲಿ ಎಐ ಮೂಲಕ ರೂಪಿಸಿದ ನಕಲಿ ಪಾತ್ರಗಳು, ತೀರಾ ಹೆಸರಿನ ಹಕ್ಕು ಇಲ್ಲದ ವ್ಯಕ್ತಿಗಳ ಆರೋಪಗಳು ಹಾಗೂ ಭಾವನಾತ್ಮಕ ವಿಷಯಗಳನ್ನು ಬಳಸಿದ ರೀತಿಯು ಸಮಾಜದಲ್ಲಿ ಆಕ್ರೋಶ ಹುಟ್ಟಿಸಿದದ್ದು ಸತ್ಯ.

ಅನನ್ಯಾ ಭಟ್ ಎಂಬ ಕೃತಕ ವ್ಯಕ್ತಿಯನ್ನು ರೂಪಿಸಿ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಭಿಪ್ರಾಯ ತಿರಸ್ಕಾರ ಮೂಡಿಸಿದ samir ಮೇಲೆ ಭಕ್ತರು ದೂರು ನೀಡಿದ್ದಾರೆ. ‘ಭೀಮ’ ಎಂಬ ಹೆಸರಿನಲ್ಲಿ ಪ್ರಸ್ತುತಗೊಂಡಿದ್ದ ಮತ್ತೊಂದು ಪಾತ್ರದ ಹಕ್ಕುತೆರೆಯಿಲ್ಲದ ಬಳಕೆ ಕೂಡಾ ದಾಖಲಾಗಿದೆಯೆಂದು ಮೂಲಗಳು ತಿಳಿಸುತ್ತವೆ.

ಇನ್ನೊಂದು ಮಹತ್ವದ ಆರೋಪವೆಂದರೆ, ಈ ವಿಡಿಯೋಗಳು ಯಾವ ಮೂಲದಿಂದ ಹಣಕಾಸು ಪಡೆದುಕೊಂಡಿದೆಯೆಂಬುದರ ಬಗ್ಗೆ ಈಗ ಎಸ್‌ಐಟಿ ತನಿಖೆ ನಡೆಸುತ್ತಿದೆ.

The post ಯೂಟ್ಯೂಬರ್ ಸಮೀರ್ ಕೂಲಿಂಗ್ ಗ್ಲಾಸ್ ಧರಿಸಿ ವಿಚಾರಣೆಗೆ ಹಾಜರು – ವಿಚಾರಣೆ ಶುರು. appeared first on Good News 24x7.

]]>