Dhruv Sarja Archives - Good News 24x7 https://www.goodnews24x7.com/tag/dhruv-sarja/ Kannada Thu, 02 Jan 2025 09:38:16 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Dhruv Sarja Archives - Good News 24x7 https://www.goodnews24x7.com/tag/dhruv-sarja/ 32 32 ಮೈಸೂರು ಹುಡುಗರ Reels ಗೆ ಫಿದಾ ಆದ ಧ್ರುವ, ಪ್ರೇಮ್ https://www.goodnews24x7.com/%e0%b2%ae%e0%b3%88%e0%b2%b8%e0%b3%82%e0%b2%b0%e0%b3%81-%e0%b2%b9%e0%b3%81%e0%b2%a1%e0%b3%81%e0%b2%97%e0%b2%b0-reels-%e0%b2%97%e0%b3%86-%e0%b2%ab%e0%b2%bf%e0%b2%a6%e0%b2%be-%e0%b2%86%e0%b2%a6-%e0%b2%a7/ Thu, 02 Jan 2025 09:38:16 +0000 https://www.goodnews24x7.com/?p=1462 ಧ್ರುವ ಸರ್ಜಾ ಹಾಗೂ ಪ್ರೇಮ್ ಕಾಂಬಿನೇಷನ್ನಲ್ಲಿ ‘ಕೆಡಿ’ ಸಿನಿಮಾ ಮೂಡಿಬರುತ್ತಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಪ್ರೇಮ್ ಸಿನಿಮಾಗಳಲ್ಲಿ ಹೆಚ್ಚು ಹೈಲೈಟ್ ಆಗೋದು ಹಾಡುಗಳು. 2024ರ ಅಂತ್ಯದಲ್ಲಿ ‘ಕೆಡಿ’ ಚಿತ್ರದ ‘ಶಿವ ಶಿವ..’ ಹಾಡನ್ನು ರಿಲೀಸ್ ಮಾಡಲಾಯಿತು.…

The post ಮೈಸೂರು ಹುಡುಗರ Reels ಗೆ ಫಿದಾ ಆದ ಧ್ರುವ, ಪ್ರೇಮ್ appeared first on Good News 24x7.

]]>

ಧ್ರುವ ಸರ್ಜಾ ಹಾಗೂ ಪ್ರೇಮ್ ಕಾಂಬಿನೇಷನ್ನಲ್ಲಿ ‘ಕೆಡಿ’ ಸಿನಿಮಾ ಮೂಡಿಬರುತ್ತಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಪ್ರೇಮ್ ಸಿನಿಮಾಗಳಲ್ಲಿ ಹೆಚ್ಚು ಹೈಲೈಟ್ ಆಗೋದು ಹಾಡುಗಳು. 2024ರ ಅಂತ್ಯದಲ್ಲಿ ‘ಕೆಡಿ’ ಚಿತ್ರದ ‘ಶಿವ ಶಿವ..’ ಹಾಡನ್ನು ರಿಲೀಸ್ ಮಾಡಲಾಯಿತು. ಈ ಹಾಡು ಕೇಳುಗರಿಗೆ ಇಷ್ಟ ಆಗಿದೆ. ಈ ಹಾಡಿಗೆ ಸಾಕಷ್ಟು ಮಂದಿ ರೀಲ್ಸ್ ಮಾಡುತ್ತಿದ್ದಾರೆ. ಈಗ ಮೈಸೂರಿನ ಹುಡುಗರು ಮಾಡಿದ ರೀಲ್ಸ್ ನಿರ್ದೇಶಕ ಪ್ರೇಮ್ ಹಾಗೂ ನಟ ಧ್ರುವ ಅವರಿಗೆ ಸಖತ್ ಇಷ್ಟ ಆಗಿದೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.

ಮೈಸೂರಿನವರಾದ ಸಿದ್ದಾರ್ಥ್, ಅಭಿರಥ, ಹರ್ಷ, ಮಂಜು, ಸಂಜಯ್ ‘ಶಿವ ಶಿವ..’ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಈ ವಿಡಿಯೋನ ಹಂಚಿಕೊಳ್ಳಲಾಗಿದ್ದು, ಅದು ಸಖತ್ ವೈರಲ್ ಆಗಿದೆ. ಈ ಹಾಡು 45 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಈ ರೀಲ್ಸ್ನ ಧ್ರುವ ಹಾಗೂ ಪ್ರೇಮ್ ಮೆಚ್ಚಿಕೊಂಡು ಹೊಗಳಿದ್ದಾರೆ.
ಈ ರೀಲ್ಸ್ಗೆ ಕಮೆಂಟ್ ಮಾಡಿರೋ ಧ್ರುವ ಸರ್ಜಾ, ‘ಫೆಂಟಾಸ್ಟಿಕ್, ಧನ್ಯವಾದಗಳು, ಜೈ ಹನುಮಾನ್’ ಎಂದಿದ್ದಾರೆ. ರೀಷ್ಮಾ ನಾಣಯ್ಯ ಅವರು ‘ಬೆಂಕಿ’ ಎಂದು ಕಮೆಂಟ್ ಮಾಡಿದ್ದಾರೆ. ಈ ರೀಲ್ಸ್ಗೆ ಈ ರೀತಿಯ ಹಲವು ಕಮೆಂಟ್ಗಳು ಬಂದಿವೆ. ಇನ್ನು ಪ್ರೇಮ್ ಅವರು ಇವರಿಗೆ ದೂರವಾಣಿ ಕರೆ ಮಾಡಿ ಭೇಟಿ ಮಾಡುವ ಆಶಯ ಹೊರಹಾಕಿದ್ದಾರೆ.

‘ನಿಮ್ಮ ವಿಡಿಯೋ ನೋಡಿದೆ. ಸಖತ್ ಆಗಿ ಮಾಡಿದ್ದೀರಾ. ಇನ್ನು ಕೆಲವೇ ದಿನಗಳಲ್ಲಿ ಕಾಲ್ ಮಾಡ್ತೀನಿ. ಭೇಟಿ ಮಾಡೋಣ. ವಿಡಿಯೋ ಉತ್ತಮವಾಗಿದೆ, ಧನ್ಯವಾದಗಳು’ ಎಂದು ಪ್ರೇಮ್ ಅವರು ರೀಲ್ಸ್ ಮಾಡಿದವರ ಜೊತೆ ಮಾತನಾಡಿದ್ದಾರೆ. ಅವರ ಮಾತನ್ನು ಕೇಳಿ ಸಖತ್ ಖುಷಿ ಆಗಿದೆ. ಆ ವಿಡಿಯೋನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಪ್ರೇಮ್ ಅವರ ನಿರ್ದೇಶನದಲ್ಲಿ ‘ಕೆಡಿ’ ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರದಲ್ಲಿ ಸಂಜಯ್ ದತ್, ಶಿಲ್ಪಾ ಶೆಟ್ಟಿ ಕೂಡ ನಟಿಸಿದ್ದಾರೆ. ‘ಶಿವ ಶಿವ..’ ಹಾಡಿಗೆ ಪ್ರೇಮ್ ಹಾಗೂ ಖೈಲಾಶ್ ಖೇರ್ ಧ್ವನಿ ಆಗಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಈ ವರ್ಷ ಸಿನಿಮಾ ರಿಲೀಸ್ ಆಗಲಿದೆ.

The post ಮೈಸೂರು ಹುಡುಗರ Reels ಗೆ ಫಿದಾ ಆದ ಧ್ರುವ, ಪ್ರೇಮ್ appeared first on Good News 24x7.

]]>