DhruvaSarja Archives - Good News 24x7 https://www.goodnews24x7.com/tag/dhruvasarja/ Kannada Tue, 26 Aug 2025 13:12:08 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg DhruvaSarja Archives - Good News 24x7 https://www.goodnews24x7.com/tag/dhruvasarja/ 32 32 ಸ್ಟಾರ್ ಹೀರೋ ಜೊತೆ ಸುಕ್ಕಾ ಸೂರಿ ಹೊಸ ಸಿನಿಮಾ, ಶೀಘ್ರವೇ ಪ್ರಾರಂಭ…..! https://www.goodnews24x7.com/sukka-suris-new-movie-with-star-hero-starting-soon/ Tue, 26 Aug 2025 13:12:08 +0000 https://www.goodnews24x7.com/?p=6769 ಸುಕ್ಕಾ ಸೂರಿ ಕನ್ನಡ ಚಿತ್ರರಂಗದ ಭಿನ್ನ ದನಿಯ ನಿರ್ದೇಶಕ. ಅವರ ಸಿನಿಮಾ ಕಟ್ಟುವ ರೀತಿಗೆ, ಕತೆ ಹೇಳುವ ಪರಿಗೆ ದೊಡ್ಡ ಅಭಿಮಾನಿ ವರ್ಗವಿದೆ. ಆದರೆ ಯಾಕೋ ಇತ್ತೀಚೆಗೆ ಯಶಸ್ಸು ಸುಕ್ಕಾ ಸೂರಿಯ ಕೈ ಹಿಡಿದಿಲ್ಲ. ಸೂರಿ ನಿರ್ದೇಶಿಸಿದ್ದ ಈ ಹಿಂದಿನ ಸಿನಿಮಾ…

The post ಸ್ಟಾರ್ ಹೀರೋ ಜೊತೆ ಸುಕ್ಕಾ ಸೂರಿ ಹೊಸ ಸಿನಿಮಾ, ಶೀಘ್ರವೇ ಪ್ರಾರಂಭ…..! appeared first on Good News 24x7.

]]>

ಸುಕ್ಕಾ ಸೂರಿ ಕನ್ನಡ ಚಿತ್ರರಂಗದ ಭಿನ್ನ ದನಿಯ ನಿರ್ದೇಶಕ. ಅವರ ಸಿನಿಮಾ ಕಟ್ಟುವ ರೀತಿಗೆ, ಕತೆ ಹೇಳುವ ಪರಿಗೆ ದೊಡ್ಡ ಅಭಿಮಾನಿ ವರ್ಗವಿದೆ. ಆದರೆ ಯಾಕೋ ಇತ್ತೀಚೆಗೆ ಯಶಸ್ಸು ಸುಕ್ಕಾ ಸೂರಿಯ ಕೈ ಹಿಡಿದಿಲ್ಲ. ಸೂರಿ ನಿರ್ದೇಶಿಸಿದ್ದ ಈ ಹಿಂದಿನ ಸಿನಿಮಾ ‘ಬ್ಯಾಡ್ ಮ್ಯಾನರ್ಸ್’ ಫ್ಲಾಪ್ ಆಯ್ತು. ಭಾರಿ ನಿರೀಕ್ಷೆಯನ್ನು ಅಭಿಮಾನಿಗಳು ಈ ಸಿನಿಮಾ ಮೇಲಿರಿಸಿದ್ದರು. ಆದರೆ ಸಿನಿಮಾ ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ. ಇದೀಗ ಸೂರಿ ಹೊಸ ಸಿನಿಮಾಕ್ಕೆ ಕೈ ಹಾಕಿದ್ದು, ಕನ್ನಡದ ಸ್ಟಾರ್ ನಟರೊಬ್ಬರೊಟ್ಟಿಗೆ ಮಾತುಕತೆ ಚಾಲ್ತಿಯಲ್ಲಿದೆ.

ಪ್ಯಾನ್ ಇಂಡಿಯಾ ನಟನಾಗಿ ಗುರುತಿಸಿಕೊಳ್ಳುತ್ತಿರುವ ಧ್ರುವ ಸರ್ಜಾ ಅವರೊಟ್ಟಿಗೆ ಸಿನಿಮಾ ಮಾಡಲು ಸೂರಿ ಮುಂದಾಗಿದ್ದಾರೆ. ಕೆಲ ಮೂಲಗಳ ಪ್ರಕಾರ ಇಬ್ಬರ ನಡುವೆ ಒಂದು ಹಂತದ ಮಾತುಕತೆ ಪೂರ್ಣವಾಗಿದೆಯಂತೆ. ಧ್ರುವ ಅವರ ಇಮೇಜಿಗೆ ತಕ್ಕಂತೆ ಆಕ್ಷನ್ ಸಿನಿಮಾ ನಿರ್ದೇಶಿಸಲು ಸೂರಿ ಮುಂದಾಗಿದ್ದಾರೆ. ಸೂರಿಯ ಭಿನ್ನ ಸಿನಿಮಾ ಮೇಕಿಂಗ್ ಮತ್ತು ಧ್ರುವ ಅವರ ಪವರ್ ಹೌಸ್ ಆಕ್ಷನ್ ಇಮೇಜು ಎರಡಕ್ಕೂ ಹೊಂದಿಕೆ ಆಗುವ ಕತೆ ತೆರೆಯ ಮೇಲೆ ಬರಲಿದೆ ಎನ್ನಲಾಗುತ್ತಿದೆ.

ಸೂರಿ ಅವರು ಯುವ ರಾಜ್​ಕುಮಾರ್ ಅವರಿಗಾಗಿ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ‘ಎಕ್ಕ’ ಸಿನಿಮಾದ ಬಿಡುಗಡೆ ಬಳಿಯ ಸೂರಿ ಮತ್ತು ಯುವರಾಜ್ ಕುಮಾರ್ ಅವರ ಸಿನಿಮಾ ಸೆಟ್ಟೇರಲಿದೆ ಎನ್ನಲಾಗಿತ್ತು. ಆದರೆ ಆ ಸಿನಿಮಾ ಕಾರಣಾಂತರಗಳಿಂದಾಗಿ ಮುಂದೆ ಹೋಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಯುವ ರಾಜ್​ಕುಮಾರ್ ಅವರ ಬೇರೆ ಸಿನಿಮಾದ ಕಮಿಟ್​ಮೆಂಟ್​ ನಿಂದಾಗಿ ಸೂರಿ ಜೊತೆಗಿನ ಸಿನಿಮಾ ಮುಂದೂಡಲ್ಪಟ್ಟಿದೆ ಎಂಬ ಸುದ್ದಿ ಇದೆ.

ಇನ್ನು ಧ್ರುವ ಸರ್ಜಾ ಪ್ರಸ್ತುತ ‘ಕೆಡಿ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಪ್ರೇಮ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್​​ನಲ್ಲಿ ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ಸಂಜಯ್ ದತ್, ರಮೇಶ್ ಅರವಿಂದ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರೀಷ್ಮಾ ನಾಣಯ್ಯ, ಅಭಿಜಿತ್ ಇನ್ನೂ ಕೆಲವು ಪ್ರಮುಖ ನಟರುಗಳು ನಟಿಸಿದ್ದಾರೆ. ಸಿನಿಮಾ ಕೆಲವೇ ತಿಂಗಳಲ್ಲಿ ಬಿಡುಗಡೆ ಆಗಲಿದೆ.

‘ದುನಿಯಾ’, ‘ಟಗರು’, ‘ಅಣ್ಣಾ ಬಾಂಡ್’, ‘ಜಾಕಿ’, ‘ಕಡ್ಡಿಪುಡಿ’, ‘ಜಂಗ್ಲಿ’, ‘ಕೆಂಡಸಂಪಿಗೆ’, ‘ಪಾಪ್ ಕಾರ್ನ್ ಮಂಕಿ ಟೈಗರ್’ ಅಂಥಹಾ ಸಿನಿಮಾಗಳನ್ನು ನೀಡಿರುವ ಸೂರಿಗೆ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದ ಸೋಲಿನಿಂದ ಸಣ್ಣ ಹಿನ್ನಡೆ ಆಗಿದ್ದು, ಈಗ ಮತ್ತೊಂದು ಹಿಟ್ ಮೂಲಕ ರೀಎಂಟ್ರಿಗೆ ಸಜ್ಜಾಗುತ್ತಿದ್ದಾರೆ.

 

The post ಸ್ಟಾರ್ ಹೀರೋ ಜೊತೆ ಸುಕ್ಕಾ ಸೂರಿ ಹೊಸ ಸಿನಿಮಾ, ಶೀಘ್ರವೇ ಪ್ರಾರಂಭ…..! appeared first on Good News 24x7.

]]>
ನಟ ಧ್ರುವ ಸರ್ಜಾ ವಿರುದ್ಧ ವಂಚನೆ ಆರೋಪ ಪ್ರಕರಣ ದಾಖಲು https://www.goodnews24x7.com/actor-dhruva-sarja-booked-for-fraud/ Sat, 09 Aug 2025 08:13:38 +0000 https://www.goodnews24x7.com/?p=5623 ನಟ ಧ್ರುವ ಸರ್ಜಾ ಅವರು ಹಣ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಡೈರೆಕ್ಟರ್ ರಾಘವೇಂದ್ರ ಹೆಗಡೆಯಿಂದ ಕೋಟಿ ಕೋಟಿ ಹಣ ಪಡೆದಿರುವ ಆರೋಪ ಮಾಡಲಾಗಿದೆ. ಧ್ರುವಾ ಸರ್ಜಾ ವಿರುದ್ಧ ನಿರ್ದೇಶಕ ರಾಘವೇಂದ್ರ…

The post ನಟ ಧ್ರುವ ಸರ್ಜಾ ವಿರುದ್ಧ ವಂಚನೆ ಆರೋಪ ಪ್ರಕರಣ ದಾಖಲು appeared first on Good News 24x7.

]]>

ನಟ ಧ್ರುವ ಸರ್ಜಾ ಅವರು ಹಣ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಡೈರೆಕ್ಟರ್ ರಾಘವೇಂದ್ರ ಹೆಗಡೆಯಿಂದ ಕೋಟಿ ಕೋಟಿ ಹಣ ಪಡೆದಿರುವ ಆರೋಪ ಮಾಡಲಾಗಿದೆ.

ಧ್ರುವಾ ಸರ್ಜಾ ವಿರುದ್ಧ ನಿರ್ದೇಶಕ ರಾಘವೇಂದ್ರ ಹೆಗಡೆ ಅವರು ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದಾಖಲೆ ಸಮೇತ ಪ್ರಕರಣ ದಾಖಲು ಮಾಡಿದ್ದಾರೆ. ಭಾರತೀಯ ನ್ಯಾಯ ಸಂಹಿತಾ (ಬಿಎನ್​ಎಸ್​) ಸೆಕ್ಷನ್​ 316 (2) (ಕ್ರಿಮಿನಲ್ ನಂಬಿಕೆ ಉಲ್ಲಂಘನೆ), 318 (4) (ವಂಚನೆ) ಅಡಿ ಎಫ್​ಐಆರ್ ದಾಖಲಾಗಿದೆ.

3.5 ಕೋಟಿ ರೂಪಾಯಿಗಳನ್ನು 2018ರಲ್ಲೇ ಧ್ರುವ ಸರ್ಜಾಗೆ ನೀಡಲಾಗಿದ್ದು ಇದಕ್ಕೆ ಈವರೆಗೆ ಬಡ್ಡಿಯೊಂದಿಗೆ ನಷ್ಟವನ್ನು ಲೆಕ್ಕ ಹಾಕಿದ್ರೆ 9.58 ಕೋಟಿ ರೂಪಾಯಿಗೂ ಅಧಿಕವಾಗುತ್ತದೆ. ಇನ್ನು ನಟ ಧ್ರುವ ಸರ್ಜಾ ಅವರಿಗೆ ಹಣ ನೀಡಿರುವ ಕುರಿತು ಒಪ್ಪಂದ, ಹಣಕಾಸಿನ ದಾಖಲೆಗಳು, ಅಗ್ರಿಮೆಂಟ್ ಹಾಗೂ ಬ್ಯಾಂಕ್​ನಲ್ಲಿ ಹಣದ ವ್ಯವಹಾರ ಮಾಡಿರುವ ದಾಖಲೆಗಳನ್ನು ಹೆಗಡೆ, ಪೊಲೀಸರಿಗೆ ಸಾಕ್ಷಿಯಾಗಿ ನೀಡಿದ್ದಾರೆ. ಸದ್ಯ ತನಿಖಾಧಿಕಾರಿಗಳು ಇವುಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

V Care ಕ್ಲಿನಿಕ್‌ ನಲ್ಲಿ ನಡೀತಿದೆ ಮಹಾಮೋಸ! V Care ನಲ್ಲಿ ಇದ್ದಾರಾ ನಕಲಿ ವೈದ್ಯರು?

ಧ್ರುವ ಸರ್ಜಾ ವಿರುದ್ಧ ಕೋಟಿ ಕೋಟಿ ಹಣ ವಂಚನೆ ಆರೋಪ.. FIR ದಾಖಲು. ಮುಂಬೈನ ಅಂಬೋಲಿ ಪೊಲೀಸರಿಂದ ಎಫ್​ಐಆರ್ ದಾಖಲು.ನಿರ್ದೇಶಕನೊಂದಿಗೆ ವಂಚನೆ ಮಾಡಿದ ಆರೋಪದಲ್ಲಿ ದೂರು ದಾಖಲು. ರಾಘವೇಂದ್ರ ಹೆಗಡೆಯಿಂದ 3.15 ಕೋಟಿ ರೂಪಾಯಿ ಪಡೆದ ಆರೋಪ. ಹೆಗಡೆಯವರು 2018 ಮತ್ತು 2021ರ ನಡುವೆ ನಟನಿಗೆ ಹಣ ನೀಡಿದ್ದರು. ಹಣ ಪಡೆದ ನಂತರ ತನ್ನ ನಟನೆಯ ಬದ್ಧತೆ ಪೂರೈಸುವಲ್ಲಿ ವಿಳಂಬ. Bಯಾವುದೇ ಶೂಟಿಂಗ್​​ಗೆ ಹಾಜರಾಗಲಿಲ್ಲ ಈ ಹಿನ್ನೆಲೆ ಕೇಸ್ ಹಾಕಲಾಗಿದೆ.

The post ನಟ ಧ್ರುವ ಸರ್ಜಾ ವಿರುದ್ಧ ವಂಚನೆ ಆರೋಪ ಪ್ರಕರಣ ದಾಖಲು appeared first on Good News 24x7.

]]>