dies Archives - Good News 24x7 https://www.goodnews24x7.com/tag/dies/ Kannada Wed, 06 May 2026 10:05:46 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg dies Archives - Good News 24x7 https://www.goodnews24x7.com/tag/dies/ 32 32 ಉಪ್ಪಾರ ಸಮಾಜದ ವೈದ್ಯೆ ಅಪಘಾತದಲ್ಲಿ ನಿ*ಧನ! https://www.goodnews24x7.com/uppara-community-doctor-dies-in-accident/ Wed, 06 May 2026 10:05:46 +0000 https://www.goodnews24x7.com/?p=9497 ಉಪ್ಪಾರ‌ ಸಮುದಾಯದ ವಿದ್ಯಾರ್ಥಿಗಳಿಗೆ ಸ್ಪೂರ್ತಿಸೆಲೆಯಾಗಿದ್ದ, ಜನರ ನೆಚ್ಚಿನ ಪ್ರಸೂತಿ ವೈದ್ಯರಾಗಿ ಜನಮನ್ನಣೆ ಗಳಿಸಿದ್ದ ಡಾ. ಗೌತಮಿ ಅಪಘಾತದಲ್ಲಿ ನಿಧನರಾಗಿದ್ದು ಸಮುದಾಯಕ್ಕೆ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಭರಿಸಲಾಗದ ನಷ್ಠ, ದುಃಖ ಉಂಟಾಗಿದೆ.‌ ಮೈಸೂರು ಕೆ.ಆರ್.ಆಸ್ಪತ್ರೆ ಮತ್ತು ಮಂಡ್ಯ ಆಸ್ಪತ್ರೆಯಲ್ಲಿ ಪ್ರಸೂತಿ ವೈದ್ಯರಾಗಿ ಉತ್ತಮ…

The post ಉಪ್ಪಾರ ಸಮಾಜದ ವೈದ್ಯೆ ಅಪಘಾತದಲ್ಲಿ ನಿ*ಧನ! appeared first on Good News 24x7.

]]>

ಉಪ್ಪಾರ‌ ಸಮುದಾಯದ ವಿದ್ಯಾರ್ಥಿಗಳಿಗೆ ಸ್ಪೂರ್ತಿಸೆಲೆಯಾಗಿದ್ದ, ಜನರ ನೆಚ್ಚಿನ ಪ್ರಸೂತಿ ವೈದ್ಯರಾಗಿ ಜನಮನ್ನಣೆ ಗಳಿಸಿದ್ದ ಡಾ. ಗೌತಮಿ ಅಪಘಾತದಲ್ಲಿ ನಿಧನರಾಗಿದ್ದು ಸಮುದಾಯಕ್ಕೆ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಭರಿಸಲಾಗದ ನಷ್ಠ, ದುಃಖ ಉಂಟಾಗಿದೆ.‌

ಮೈಸೂರು ಕೆ.ಆರ್.ಆಸ್ಪತ್ರೆ ಮತ್ತು ಮಂಡ್ಯ ಆಸ್ಪತ್ರೆಯಲ್ಲಿ ಪ್ರಸೂತಿ ವೈದ್ಯರಾಗಿ ಉತ್ತಮ ಕಾರ್ಯ ನಿರ್ವಹಣೆಯಿಂದ ಜನಪ್ರಿಯರಾಗಿದ್ದ ಮೈಸೂರಿನ ಮೇಟಗಳ್ಳಿ ಶ್ರೀಮತಿ ಮಂಜುಳಾ ಮತ್ತು‌ ನಾಗರಾಜು ದಂಪತಿ ಪುತ್ರಿ ಡಾ.ಗೌತಮಿ ಅವರು 5 ವರ್ಷದ ವೈದ್ಯಕೀಯ ಸೇವೆ ಬಳಿಕ ಆಂದ್ರಪ್ರದೇಶದ ವಿಶಾಖಪಟ್ಟಣಂ ನಲ್ಲಿ ಎಂಎಸ್ ಮುಗಿಸಿ ಒಂದು ತಿಂಗಳ‌ ತರಬೇತಿ ಹಂತದಲ್ಲಿದ್ದರು.

ಕೆಲವೇ ದಿನಗಳಲ್ಲಿ ಎಂಡಿ ಮಾಡಲು ವಿದೇಶಕ್ಕೆ ತೆರಳುವವರಿದ್ದರು.‌ಆದರೆ, ದಿನಾಂಕ 5-5-2026 ಮಂಗಳವಾರ ರಾತ್ರಿ ಸ್ಕೂಟರ್ ನಿಂದ‌ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ನಿಧನರಾಗಿದ್ದಾರೆ. ಡಾ.ಗೌತಮಿ ಅವರ ನಿಧನ ಆರೋಗ್ಯ ಕ್ಷೇತ್ರಕ್ಕೆ, ಸಮುದಾಯಕ್ಕೆ‌ ತುಂಬಲಾರದ ನಷ್ಟವಾಗಿದೆ. ಭಗವಂತನು ಮೃತರ ಆತ್ಮಕ್ಕೆ ಶಾಂತಿ ಕರುಣಿಸಿ, ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತದೆ.

The post ಉಪ್ಪಾರ ಸಮಾಜದ ವೈದ್ಯೆ ಅಪಘಾತದಲ್ಲಿ ನಿ*ಧನ! appeared first on Good News 24x7.

]]>
ಗಣತಿ ಒತ್ತಡದಿಂದ ಶಿಕ್ಷಕಿ ಆ*ಹ* ! ಕೆರೆಯಲ್ಲಿ ಶ * ಪತ್ತೆ. https://www.goodnews24x7.com/teacher-dies-in-lake-due-to-census-pressure/ Thu, 16 Oct 2025 06:15:31 +0000 https://www.goodnews24x7.com/?p=7731 ಕೋಲಾರ :- ಬೇತಮಂಗಲ ರಾಜ್ಯ ಸರ್ಕಾರದ ಜಾತಿ ಗಣತಿಗೆ ತೆರಳಿದ್ದ ಕೋಲಾರ ಜಿಲ್ಲೆಯ ಶಿಕ್ಷಕಿ ಕೆರೆ ಯಲ್ಲಿ ಶವವಾಗಿ ಪತ್ತೆಯಾ ಗಿದ್ದು, ಗಣತಿಯಲ್ಲಿ ಹಿರಿಯ ಅಧಿಕಾರಿಗಳು ಕೊಟ್ಟ ಒತ್ತಡದಿಂ ದಾಗಿ ಆತ್ಮಹತ್ಯೆ ಮಾಡಿಕೊಂಡಿ ರಬಹುದು ಎನ್ನಲಾಗಿದೆ. ಅಕ್ತರ್ ಬೇಗಂ (50) ಶಿಕ್ಷಕಿ…

The post ಗಣತಿ ಒತ್ತಡದಿಂದ ಶಿಕ್ಷಕಿ ಆ*ಹ* ! ಕೆರೆಯಲ್ಲಿ ಶ * ಪತ್ತೆ. appeared first on Good News 24x7.

]]>

ಕೋಲಾರ :- ಬೇತಮಂಗಲ ರಾಜ್ಯ ಸರ್ಕಾರದ ಜಾತಿ ಗಣತಿಗೆ ತೆರಳಿದ್ದ ಕೋಲಾರ ಜಿಲ್ಲೆಯ ಶಿಕ್ಷಕಿ ಕೆರೆ ಯಲ್ಲಿ ಶವವಾಗಿ ಪತ್ತೆಯಾ ಗಿದ್ದು, ಗಣತಿಯಲ್ಲಿ ಹಿರಿಯ ಅಧಿಕಾರಿಗಳು ಕೊಟ್ಟ ಒತ್ತಡದಿಂ ದಾಗಿ ಆತ್ಮಹತ್ಯೆ ಮಾಡಿಕೊಂಡಿ ರಬಹುದು ಎನ್ನಲಾಗಿದೆ.

ಅಕ್ತರ್ ಬೇಗಂ (50) ಶಿಕ್ಷಕಿ ಯಾಗಿದ್ದರು, ಅವರು ಸೋಮವಾರ ಸಮೀ ಕೈಗೆ ತೆರಳಿದ್ದರು. ಇವರು ಕಾಣೆಯಾಗಿದ್ದಾರೆ ಎಂದು ಮನೆಯವರು ದೂರು ನೀಡಿದ್ದರು. ಬುಧವಾರ ಬೇತಮಂಗಲ ಹೋಬಳಿಯ ಅಮಾನಿಕೆರೆಯಲ್ಲಿ ಬ್ಯಾಗ್ ತೇಲುತ್ತಿದ್ದನ್ನು ಕಂಡ ಸಳೀಯರು, ಶವ ಕಂಡು ಪೊಲೀಸರ ಗಮನಕ್ಕೆ ತಂದಿದ್ದಾರೆ. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಶವ ಮೇಲೆತ್ತಿದ್ದಾರೆ.

ಅಕ್ತರ್ ಅವರು ಕಳೆದ 15 ದಿನಗಳಿಂದ ಜಾತಿ ಗಣತಿಯಲ್ಲಿದ್ದರು. ಸಮೀಕ್ಷೆಯಲ್ಲಿ ಜನರು ಸರಿ ಯಾಗಿ ಸ್ಪಂದಿಸದ ಕಾರಣ, ಗಣತಿ ಮುಂದೆ ಸಾಗದೆ ಮಾನ ಸಿಕ ಹಿಂಸೆಗೆ ಒಳಗಾಗಿದ್ದರು. ಇದಿಷ್ಟೇ ಅಲ್ಲದೇ ಹಿರಿಯ ಅಧಿ ಕಾರಿಗಳ ಒತ್ತಡವೂ ಸಹ ಶಿಕ್ಷಕಿ ಖಿನ್ನತೆಗೆ ಒಳಗಾಗುವಂತೆ ಮಾಡಿತ್ತು ಎನ್ನಲಾಗಿದೆ. ಸೋಮವಾರ ಸಮೀಕ್ಷೆ ಮುಗಿಸಿ ಮನೆಗೆ ಬರದ್ದನ್ನು ಕಂಡು ಬೇಗಂ ಅವರ ಪತಿ ಪೊಲೀಸರಿಗೆ ದೂರಿತ್ತಿ ದ್ದರು. ಬುಧವಾರ ಶವ ಪತ್ತೆಯಾಗಿದ್ದು, ಕೆಜಿಎಫ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸಾವಿಗೆ ಹಿರಿಯ ಅಧಿಕಾರಿಗಳ ಮಾನಸಿಕ ಹಿಂಸೆಯೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಕೋಲಾರದ ಮಹಾಲಕ್ಷ್ಮಿ ಬಡವಾಣೆಯ ನಿವಾಸಿಯಾಗಿದ್ದ ಅಖ್ತರ್ ಬೇಗಂ ಶವ ಕೆಜಿಎಫ್‌ನ ಬೇತಮಂಗಲ ಹೋಬಳಿ ಅಯ್ಯಪಲ್ಲಿ ಅಮಾನಿ ಕೆರೆಯಲ್ಲಿ ಪತ್ತೆಯಾಗಿದೆ. ಈ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮೂರು ದಿನದಿಂದ ನಾಪತ್ತೆಯಾಗಿದ್ದ ಅಖ್ತರ್ ಬೇಗಂ ಶವ ಪತ್ತೆಯಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಟೀ ಕೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಯ್ಯಪಲ್ಲಿ ಅಮಾನಿ ಕೆರೆಯ ದಡದಲ್ಲಿ ಅಖ್ತರ್ ಬೇಗಂಗೆ ಗಣತಿಗೆ ನೀಡಿದ್ದ ಕಿಟ್ ಪತ್ತೆಯಾಗಿದೆ. ಇದನ್ನು ನೋಡಿ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು, ಅಗ್ನಿಶಾಮಕ ದಳದ ಜೊತೆ ಹುಡುಕಾಟ ನಡೆಸಿ ಕೆರೆಯಲ್ಲಿ ಶವ ಪತ್ತೆ ಮಾಡಿ ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ ಮಗನ ಬೈಕ್‌ನಲ್ಲಿ ಡ್ರಾಪ್ ತೆಗೆದುಕೊಂಡು ಮೂರು ದಿನದ ಹಿಂದೆ ಗಣತಿಗೆ ತೆರಳಿದ್ದರು. ಅವರ ಮೊಬೈಲ್ ಮನೆಯಲ್ಲಿಯೇ ಬಿಟ್ಟು ಹೋಗಿದ್ದರು. ಅವರು ಹಲವು ದಿನದಿಂದ ಮಾನಸಿಕ ಒತ್ತಡದಿಂದ ಬಳಲುತ್ತಿದ್ದರು ಎಂಬ ಮಾಹಿತಿಯೂ ಇದೆ. ಸೋಮವಾರ ರಾತ್ರಿ ಅಖ್ತರ್ ಬೇಗಂ ಮನೆಗೆ ವಾಪಸ್ ಆಗದೇ ಇದ್ದಾಗ ಕೋಲಾರ ನಗರ ಠಾಣೆಗೆ ದೂರು ನೀಡಲಾಗಿತ್ತು.

ಅಖ್ತರ್ ಬೇಗಂ ಮಾನಸಿಕ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ? ಅಥವ ಅವರನ್ನು ಕೊಲೆ ಮಾಡಿ ಶವವನ್ನು ಕೆರೆಗೆ ಎಸೆಯಲಾಗಿದೆಯೇ? ಎಂಬ ಕುರಿತು ತನಿಖೆ ಬಳಿಕ ಮಾಹಿತಿ ತಿಳಿಯಬೇಕಿದೆ.

ಕೆಲವು ದಿನಗಳ ಹಿಂದೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿ ಕುರಿತ ವೀಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿದ್ದರು. ಶಿಕ್ಷಕರಿಗೆ ಗೌರವಧನದ ಬಗ್ಗೆ ಯಾವುದೇ ಅನುಮಾನ ಬೇಡ. ಈಗಾಗಲೇ ಗೌರವಧನವನ್ನು ಬಿಡುಗಡೆ ಮಾಡಿದ್ದೇವೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಗಣತಿ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದ್ದರು. ಈಗಾಗಲೇ ಗಣತಿಯಲ್ಲಿ ತೊಡಗಿದ್ದ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದರು ಅವರು ಅವಲಂಬಿತರಿಗೆ ತಲಾ 20 ಲಕ್ಷ ಪರಿಹಾರ ನೀಡಲು ಹಣವನ್ನು ಜಿಲ್ಲಾಧಿಕಾರಿಗಳ ಖಾತೆಗೆ ವರ್ಗಾವಣೆ ಮಾಡಲಾಗಿದೆ.

The post ಗಣತಿ ಒತ್ತಡದಿಂದ ಶಿಕ್ಷಕಿ ಆ*ಹ* ! ಕೆರೆಯಲ್ಲಿ ಶ * ಪತ್ತೆ. appeared first on Good News 24x7.

]]>
ಭಾರತದ ಖ್ಯಾತ ಗಾಯಕ ನಿಧನ. ಸಿಂಗಪುರದಲ್ಲಿ ಸ್ಕೂಬಾ ಡೈವಿಂಗ್ ವೇಳೆ ಅಪಘಾತ https://www.goodnews24x7.com/famous-indian-singer-dies-in-scuba-diving-accident-in-singapore/ Fri, 19 Sep 2025 10:59:22 +0000 https://www.goodnews24x7.com/?p=7586 Zubeen Garg death: ಕನ್ನಡ ಸೇರಿದಂತೆ 10ಕ್ಕೂ ಹೆಚ್ಚು ಭಾಷೆಗಳಲ್ಲಿ ಹಲವಾರು ಜನಪ್ರಿಯ ಹಾಡುಗಳನ್ನು ಹಾಡಿರುವ ಗಾಯಕ ಜುಬೀನ್ ಗರ್ಗ್ ಅವರು ಸಿಂಗಪುರದಲ್ಲಿ ನಡೆದ ಅವಘಡವೊಂದರಲ್ಲಿ ನಿಧನ ಹೊಂದಿದ್ದಾರೆ. ಜುಬೀನ್ ಅವರು ಸಿಂಗಪುರದಲ್ಲಿ ಸ್ಕೂಬಾ ಡೈವಿಂಗ್ ಮಾಡುವ ವೇಳೆ ಮರಣ ಹೊಂದಿದ್ದಾರೆ.…

The post ಭಾರತದ ಖ್ಯಾತ ಗಾಯಕ ನಿಧನ. ಸಿಂಗಪುರದಲ್ಲಿ ಸ್ಕೂಬಾ ಡೈವಿಂಗ್ ವೇಳೆ ಅಪಘಾತ appeared first on Good News 24x7.

]]>

Zubeen Garg death: ಕನ್ನಡ ಸೇರಿದಂತೆ 10ಕ್ಕೂ ಹೆಚ್ಚು ಭಾಷೆಗಳಲ್ಲಿ ಹಲವಾರು ಜನಪ್ರಿಯ ಹಾಡುಗಳನ್ನು ಹಾಡಿರುವ ಗಾಯಕ ಜುಬೀನ್ ಗರ್ಗ್ ಅವರು ಸಿಂಗಪುರದಲ್ಲಿ ನಡೆದ ಅವಘಡವೊಂದರಲ್ಲಿ ನಿಧನ ಹೊಂದಿದ್ದಾರೆ. ಜುಬೀನ್ ಅವರು ಸಿಂಗಪುರದಲ್ಲಿ ಸ್ಕೂಬಾ ಡೈವಿಂಗ್ ಮಾಡುವ ವೇಳೆ ಮರಣ ಹೊಂದಿದ್ದಾರೆ.

ಕನ್ನಡ ಸೇರಿದಂತೆ ಭಾರತದ ಹಲವು ಭಾಷೆಗಳಲ್ಲಿ ಹಲವು ಅತ್ಯುತ್ತಮ ಹಾಡುಗಳನ್ನು ಹಾಡಿರುವ ಗಾಯಕ ಜುಬೀನ್ ಗರ್ಗ್ ಸಿಂಗಪುರದಲ್ಲಿ ನಡೆದ ಅಪಘಾತದಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು. ಸಿಂಗಪುರದಲ್ಲಿ ಸ್ಕೂಬಾ ಡೈವಿಂಗ್ (ಆಳ ಸಮುದ್ರದಲ್ಲಿ ಈಜಾಟ) ಸಾಹಸ ಮಾಡುವಾಗ ಜುಬೀನ್ ಗರ್ಗ್ ನಿಧನ ಹೊಂದಿದ್ದಾರೆ ಎನ್ನಲಾಗಿದೆ. ಸಿಂಗಪುರದ ಸ್ಥಳೀಯ ಪೊಲೀಸರ ವರದಿಯಂತೆ ಜುಬೀನ್ ಗರ್ಗ್ ಅವರನ್ನು ನದಿಯೊಂದರಿಂದ ಹೊರಗೆ ತೆಗೆಯಲಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಂತೆ. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ ಜುಬೀನ್ ಅವರು ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದ್ದಾರೆ.

 

ಅಸ್ಸಾಂ ಮೂಲದವರಾದ ಜುಬೀನ್ ಗರ್ಗ್ ಅವರು ಅಸ್ಸಾಮಿ ಸಿನಿಮಾಗಳ ಖ್ಯಾತ ನಟ ಆಗಿದ್ದರು. ಮಾತ್ರವಲ್ಲದೆ ಹಲವಾರು ಹಿಂದಿ, ಬೆಂಗಾಲಿ, ಅಸ್ಸಾಮಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಪಂಜಾಬಿ, ಒಡಿಯಾ, ಬೋಡೊ, ಕರ್ಬಿ, ತಿವಾ, ನೇಪಾಳಿ, ಭೋಜ್​​ಪುರಿ, ಭಿಷ್ಣುಪ್​ರಿಯ ಮಣಿಪುರಿ ಇನ್ನೂ ಕೆಲವು ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದರು. ಎಆರ್ ರೆಹಮಾನ್ ಸೇರಿದಂತೆ ಇನ್ನೂ ಕೆಲವು ಅತ್ಯುತ್ತಮ ಸಂಗೀತ ನಿರ್ದೇಶಕರುಗಳ ಮೆಚ್ಚಿನ ಗಾಯಕರಾಗಿದ್ದರು ಜುಬೀನ್ ಗರ್ಗ್.

ಕನ್ನಡದಲ್ಲಿ ಗಣೇಶ್ ನಟಿಸಿರುವ ‘ಹುಡುಗಾಟ’ ಸಿನಿಮಾದ ‘ಒಮ್ಮೊಮ್ಮೆ ಹೀಗೂ’, ‘ಮಹಾರುದ್ರ’ ಸಿನಿಮಾದ ‘ಅಮ್ಮಾ ನೀನು’, ‘ಪರಿಚಯ’ ಸಿನಿಮಾದ ಹಾಡುಗಳನ್ನು ಜುಬೀನ್ ಗರ್ಗ್ ಹಾಡಿದ್ದಾರೆ. ಹಿಂದಿಯಲ್ಲಿ ‘ದಿಲ್ ಸೇ’ , ‘ಗ್ಯಾಂಗ್​​ಸ್ಟರ್’, ‘ಅಶೋಕಾ’, ‘ಕ್ರಿಶ್’,‘ಆನ್’, ಇನ್ನೂ ಹಲವಾರು ಜನಪ್ರಿಯ ಸಿನಿಮಾಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. ‘ಗ್ಯಾಂಗ್​​ಸ್ಟರ್’ ಸಿನಿಮಾದ ‘ಯಾ ಆಲಿ’ ಹಾಡು ಭಾರಿ ದೊಡ್ಡ ಹಿಟ್ ಆಗಿತ್ತು, ‘ದಿಲ್ ಸೇ’ ಸಿನಿಮಾದ ‘ಪಾಕಿ ಪಾಕಿ ಪರದೇಸಿ’ ‘ಕಾಂಟೆ’ ಸಿನಿಮಾದ ‘ಮಾಹಿ ವೇ’ ಇನ್ನೂ ಹಲವಾರು ಹಾಡುಗಳನ್ನು ಜುಬೀನ್ ಗರ್ಗ್ ಹಾಡಿದ್ದರು.

ಬಹುಮುಖ ಪ್ರತಿಭೆ ಹೊಂದಿದ್ದ ಜುಬೀನ್ ಗಾಯಕರಾಗಿ ಮಾತ್ರವೇ ಅಲ್ಲದೆ ಅಸ್ಸಾಮಿ ಭಾಷೆಯ ಹಲವಾರು ಸಿನಿಮಾಗಳಲ್ಲಿ ನಟನೆ ಸಹ ಮಾಡಿದ್ದಾರೆ. ಜೊತೆಗೆ ಸಂಗೀತ ನಿರ್ದೇಶನ, ಗೀತ ರಚನೆ, ಚಿತ್ರಕತೆ ರಚನೆ, ಸಿನಿಮಾ ನಿರ್ಮಾಣಗಳನ್ನು ಸಹ ಜುಬೀನ್ ಗರ್ಗ್ ಮಾಡಿದ್ದಾರೆ. ಇದೀಗ ಖ್ಯಾತ ಗಾಯಕನ ನಿಧನಕ್ಕೆ ಹಲವಾರು ಸಂಗೀತಗಾರರು, ಸಂಗೀತ ನಿರ್ದೇಶಕರುಗಳು ಕಂಬನಿ ಮಿಡಿದಿದ್ದಾರೆ. ಸಿನಿಮಾ ನಟರುಗಳು ಕಂಬನಿ ಮಿಡಿದಿದ್ದಾರೆ.

The post ಭಾರತದ ಖ್ಯಾತ ಗಾಯಕ ನಿಧನ. ಸಿಂಗಪುರದಲ್ಲಿ ಸ್ಕೂಬಾ ಡೈವಿಂಗ್ ವೇಳೆ ಅಪಘಾತ appeared first on Good News 24x7.

]]>
ಹುಟ್ಟು ಹಬ್ಬದ ದಿನವೇ ಮಸಣ ಸೇರಿದ ಚಿತ್ರದುರ್ಗದ ಯುವಕ: ಹಾಸನ ದುರಂತ https://www.goodnews24x7.com/chitradurga-youth-dies-on-birthday-hassan-tragedy/ Sat, 13 Sep 2025 12:13:00 +0000 https://www.goodnews24x7.com/?p=7515 ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಟ್ರಕ್‌ ಹರಿದು 9 ಮಂದಿ ಸಾವನ್ನಪ್ಪಿರುವ ಘನಘೋರ ದುರಂತ ಹಾಸನ ಜಿಲ್ಲೆಯ ಮೊಸಳೆಹೊಸಹಳ್ಳಿಯಲ್ಲಿ ಸಂಭವಿಸಿದೆ. ಈ ಅಪಘಾತದಲ್ಲಿ ಹುಟ್ಟುಹಬ್ಬದ ದಿನವೇ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಇಂಜಿನಿಯರಿಂಗ್‌ ವಿದ್ಯಾರ್ಥಿಯಾಗಿದ್ದ ಚಿತ್ರದುರ್ಗದ ಹೊಸದುರ್ಗ ತಾಲೂಕಿನ ಗವಿಗಂಗಾಪುರ ಗ್ರಾಮದ 22 ವರ್ಷ…

The post ಹುಟ್ಟು ಹಬ್ಬದ ದಿನವೇ ಮಸಣ ಸೇರಿದ ಚಿತ್ರದುರ್ಗದ ಯುವಕ: ಹಾಸನ ದುರಂತ appeared first on Good News 24x7.

]]>

ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಟ್ರಕ್‌ ಹರಿದು 9 ಮಂದಿ ಸಾವನ್ನಪ್ಪಿರುವ ಘನಘೋರ ದುರಂತ ಹಾಸನ ಜಿಲ್ಲೆಯ ಮೊಸಳೆಹೊಸಹಳ್ಳಿಯಲ್ಲಿ ಸಂಭವಿಸಿದೆ. ಈ ಅಪಘಾತದಲ್ಲಿ ಹುಟ್ಟುಹಬ್ಬದ ದಿನವೇ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಇಂಜಿನಿಯರಿಂಗ್‌ ವಿದ್ಯಾರ್ಥಿಯಾಗಿದ್ದ ಚಿತ್ರದುರ್ಗದ ಹೊಸದುರ್ಗ ತಾಲೂಕಿನ ಗವಿಗಂಗಾಪುರ ಗ್ರಾಮದ 22 ವರ್ಷ ವಯಸ್ಸಿನ ಮಿಥುನ್‌ ತನ್ನ ಬರ್ತ್‌ ಡೇ ದಿನವೇ ಸಾವನ್ನಪ್ಪಿದ್ದಾನೆ. ಈ ದುರಂತದಲ್ಲಿ ಈವರೆಗೆ 9 ಜನರು ಸಾವನ್ನಪ್ಪಿದ್ದು, ಮೃತರಲ್ಲಿ ಯುವಕರೇ ಹೆಚ್ಚಿದ್ದಾರೆ. 20 ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

The post ಹುಟ್ಟು ಹಬ್ಬದ ದಿನವೇ ಮಸಣ ಸೇರಿದ ಚಿತ್ರದುರ್ಗದ ಯುವಕ: ಹಾಸನ ದುರಂತ appeared first on Good News 24x7.

]]>
14 ತಿಂಗಳ ಮಗು ವಿಕ್ಸ್ ಡಬ್ಬದ ಮುಚ್ಚಳ ನುಂಗಿ ಸಾ* ; 18ವರ್ಷಗಳ ಬಳಿಕ ಜನಿಸಿದ ಮಗುವಿನ ದುರಂತ ಅಂತ್ಯ https://www.goodnews24x7.com/14-%e0%b2%a4%e0%b2%bf%e0%b2%82%e0%b2%97%e0%b2%b3-%e0%b2%ae%e0%b2%97%e0%b3%81-%e0%b2%b5%e0%b2%bf%e0%b2%95%e0%b3%8d%e0%b2%b8%e0%b3%8d-%e0%b2%a1%e0%b2%ac%e0%b3%8d%e0%b2%ac%e0%b2%a6-%e0%b2%ae%e0%b3%81/ Tue, 17 Dec 2024 13:12:21 +0000 https://www.goodnews24x7.com/?p=1191 ರಾಜಸ್ಥಾನ: ಆಟವಾಡುತ್ತಲೇ ವಿಕ್ಸ್ ಡಬ್ಬದ ಮುಚ್ಚಳ ನುಂಗಿ 14 ತಿಂಗಳ ಮಗು ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಬನ್ಸ್ವಾರಾದಲ್ಲಿ ನಡೆದಿದೆ. ಮದುವೆಯಾಗಿ 18 ವರ್ಷಗಳ ಬಳಿಕ ಹುಟ್ಟಿದ ಮಗು ಈಗ ದುರಂತ ಅಂತ್ಯ ಕಂಡಿದ್ದು, ಪೋಷಕರ ಆಕ್ರೋಶ ಮುಗಿಲು ಮುಟ್ಟಿದೆ. ಸರೆಡಿ ಗ್ರಾಮದ…

The post 14 ತಿಂಗಳ ಮಗು ವಿಕ್ಸ್ ಡಬ್ಬದ ಮುಚ್ಚಳ ನುಂಗಿ ಸಾ* ; 18ವರ್ಷಗಳ ಬಳಿಕ ಜನಿಸಿದ ಮಗುವಿನ ದುರಂತ ಅಂತ್ಯ appeared first on Good News 24x7.

]]>

ರಾಜಸ್ಥಾನ: ಆಟವಾಡುತ್ತಲೇ ವಿಕ್ಸ್ ಡಬ್ಬದ ಮುಚ್ಚಳ ನುಂಗಿ 14 ತಿಂಗಳ ಮಗು ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಬನ್ಸ್ವಾರಾದಲ್ಲಿ ನಡೆದಿದೆ. ಮದುವೆಯಾಗಿ 18 ವರ್ಷಗಳ ಬಳಿಕ ಹುಟ್ಟಿದ ಮಗು ಈಗ ದುರಂತ ಅಂತ್ಯ ಕಂಡಿದ್ದು, ಪೋಷಕರ ಆಕ್ರೋಶ ಮುಗಿಲು ಮುಟ್ಟಿದೆ.

ಸರೆಡಿ ಗ್ರಾಮದ ನಿವಾಸಿ ಹೀರೆನ್ ಜೋಶಿ ಅವರ ಮಗ ಮಾನ್ವಿಕ್(14 ತಿಂಗಳು) ಸೋಮವಾರ ರಾತ್ರಿ ಮನೆಯಲ್ಲಿದ್ದ ವಿಕ್ಸ್ ಡಬ್ಬಿಯ ಜೊತೆಗೆ ಆಟವಾಡುತ್ತಿದ್ದನು. ಮಗು ಆಟವಾಡುತ್ತಿರುವುದನ್ನು ಗಮನಿಸದ ಪೋಷಕರು ತಮ್ಮದೇ ಕೆಲಸದಲ್ಲಿ ತೊಡಗಿದ್ದಾರೆ. ಆದರೆ ಇದಕ್ಕಿದ್ದಂತೆ ಮಗು ಉಸಿರಾಡಲು ಸಾಧ್ಯವಾಗದೇ ನೆಲದಲ್ಲಿ ಬಿದ್ದು ಹೊರಲಾಡುತ್ತಿರುವುದು ಕಂಡುಬಂದಿದೆ. ಈ ವೇಳೆ ಮಗುವಿನ ಪೋಷಕರು ಪರಿಶೀಲಿಸಿದಾಗ ಗಂಟಲಲ್ಲಿ ವಿಕ್ಸ್ ಡಬ್ಬದ ಮುಚ್ಚಳ ಪತ್ತೆಯಾಗಿದೆ. ಪ್ರಾರಂಭದಲ್ಲಿ ಮಗುವಿನ ಪೋಷಕರು ಮುಚ್ಚಳ ತೆಗೆಯಲು ಪ್ರಯತ್ನಿಸಿದ್ದಾರೆ, ಆದರೆ ಸಾಧ್ಯವಾಗದೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಿದ್ದಾರೆ. ಆದರೆ ಅಲ್ಲಿ ವೈದ್ಯರು ಸಿಗದ ಕಾರಣ ಪೋಷಕರು ಮಗುವನ್ನು ಬಾಂಸ್ವಾಡ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗಲೇ ದಾರಿ ಮಧ್ಯೆ ಮಗು ಉಸಿರು ಚೆಲ್ಲಿದೆ.
ವೈದ್ಯರಿಲ್ಲದ ಕಾರಣ ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಮಗು ಪ್ರಾಣ ಕಳೆದುಕೊಂಡಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ತಡರಾತ್ರಿ ಕುಟುಂಬಸ್ಥರು ಹಾಗೂ ಸ್ಥಳೀಯರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದ್ದಾರೆ. ಮೃತ ಮಗುವಿನ ತಂದೆ ಹಿರೇನ್ ಜೋಶಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕ ರಾಗಿದ್ದು, ಇವರಿಗೆ ಈಗಾಗಲೇ ಎರಡು ಹೆಣ್ಣು ಮಕ್ಕಳಿದ್ದಾರೆ. ಆದರೆ ಗಂಡು ಮಗನಿಗಾಗಿ 18ವರ್ಷಗಳಿಂದ ಹಾತೊರೆಯುತ್ತಿದ್ದರು. ಅದರಂತೆ ಗಂಡು ಮಗು ಜನಿಸಿದ್ದು, ಇದೀಗ ಮಗುವಿನ ಅಕಾಲಿಕ ಸಾವು ತೀವ್ರ ಅಘಾತ ಉಂಟುಮಾಡಿದೆ.

The post 14 ತಿಂಗಳ ಮಗು ವಿಕ್ಸ್ ಡಬ್ಬದ ಮುಚ್ಚಳ ನುಂಗಿ ಸಾ* ; 18ವರ್ಷಗಳ ಬಳಿಕ ಜನಿಸಿದ ಮಗುವಿನ ದುರಂತ ಅಂತ್ಯ appeared first on Good News 24x7.

]]>