district Archives - Good News 24x7 https://www.goodnews24x7.com/tag/district/ Kannada Wed, 29 Apr 2026 08:42:21 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg district Archives - Good News 24x7 https://www.goodnews24x7.com/tag/district/ 32 32 ಕರಾವಳಿಯಲ್ಲಿ ಬಿಸಿಲಿನ ಅಬ್ಬರ: ಆರೋಗ್ಯ ಇಲಾಖೆ ಕಟ್ಟೆಚ್ಚರ https://www.goodnews24x7.com/heatwave-on-the-coast-health-department-on-high-alert9482-2/ Wed, 29 Apr 2026 08:42:21 +0000 https://www.goodnews24x7.com/?p=9482 ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹೆಚ್ಚುತ್ತಿರುವ ಬಿಸಿಲು ಮತ್ತು ಆರ್ದ್ರತೆಯಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಆರೋಗ್ಯ ಇಲಾಖೆಯು ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಾದ್ಯಂತ ಚಿಕಿತ್ಸಾ ಸೌಲಭ್ಯಗಳನ್ನು ಸಜ್ಜುಗೊಳಿಸಿದೆ.…

The post ಕರಾವಳಿಯಲ್ಲಿ ಬಿಸಿಲಿನ ಅಬ್ಬರ: ಆರೋಗ್ಯ ಇಲಾಖೆ ಕಟ್ಟೆಚ್ಚರ appeared first on Good News 24x7.

]]>

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹೆಚ್ಚುತ್ತಿರುವ ಬಿಸಿಲು ಮತ್ತು ಆರ್ದ್ರತೆಯಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಆರೋಗ್ಯ ಇಲಾಖೆಯು ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಾದ್ಯಂತ ಚಿಕಿತ್ಸಾ ಸೌಲಭ್ಯಗಳನ್ನು ಸಜ್ಜುಗೊಳಿಸಿದೆ.

ಆಸ್ಪತ್ರೆಗಳಲ್ಲಿ ವಿಶೇಷ ಸಿದ್ಧತೆ
ಬಿಸಿಲಿನ ತಾಪದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಿಗೆ ತಕ್ಷಣದ ಚಿಕಿತ್ಸೆ ನೀಡಲು ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಪ್ರತ್ಯೇಕ ಹಾಸಿಗೆಗಳನ್ನು ಮೀಸಲಿರಿಸಲಾಗಿದೆ:

ತಾಲೂಕು ಆಸ್ಪತ್ರೆಗಳು: ತಲಾ 5 ವಿಶೇಷ ಬೆಡ್‌ಗಳು.

ಸಮುದಾಯ ಆರೋಗ್ಯ ಕೇಂದ್ರಗಳು: ತಲಾ 2 ವಿಶೇಷ ಬೆಡ್‌ಗಳು.

ಚರ್ಮದ ಕಾಯಿಲೆಗಳ ಹೆಚ್ಚಳ
ಬಿಸಿಲಿನ ತೀವ್ರತೆಯಿಂದಾಗಿ ಜಿಲ್ಲೆಯಲ್ಲಿ ಚರ್ಮದ ಕಾಯಿಲೆಗಳು ಕಾಣಿಸಿಕೊಳ್ಳಲಾರಂಭಿಸಿವೆ. ವಿಶೇಷವಾಗಿ ಬೆವರು ಸಾಲೆ, ಚರ್ಮದ ತುರಿಕೆ ಮತ್ತು ಕಜ್ಜಿಯಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ದಿನವೊಂದಕ್ಕೆ ಸರಾಸರಿ 3 ರಿಂದ 5 ರೋಗಿಗಳು ಇಂತಹ ಲಕ್ಷಣಗಳೊಂದಿಗೆ ಚಿಕಿತ್ಸೆಗೆ ಬರುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಸೂಚನೆ
ಹೀಟ್ ಸ್ಟ್ರೋಕ್ ಸೇರಿದಂತೆ ಬಿಸಿಲಿನಿಂದ ಉಂಟಾಗುವ ಯಾವುದೇ ಪ್ರಕರಣಗಳು ದಾಖಲಾದಲ್ಲಿ, ತಕ್ಷಣವೇ ಮಾಹಿತಿಯನ್ನು ಆರೋಗ್ಯ ಇಲಾಖೆಯ ವೆಬ್ ಪೋರ್ಟಲ್‌ನಲ್ಲಿ ದಾಖಲಿಸುವಂತೆ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಓಆರ್‌ಎಸ್ (ORS) ಕಾರ್ನರ್ ಸೌಲಭ್ಯ
ನಿರ್ಜಲೀಕರಣ ತಡೆಗಟ್ಟಲು ಜಿಲ್ಲಾಸ್ಪತ್ರೆಯಿಂದ ಹಿಡಿದು ಪ್ರಾಥಮಿಕ ಆರೋಗ್ಯ ಕೇಂದ್ರಗಳವರೆಗೆ ‘ಓಆರ್‌ಎಸ್ ಕಾರ್ನರ್’ಗಳನ್ನು ಸ್ಥಾಪಿಸಲಾಗಿದೆ. ಔಷಧಗಳ ಕೊರತೆಯಾಗದಂತೆ ಸ್ಥಳೀಯವಾಗಿಯೇ ಖರೀದಿಸಲು ಅವಕಾಶ ನೀಡಲಾಗಿದ್ದು, ಕಳೆದ ಒಂದು ವಾರದಿಂದ ಓಆರ್‌ಎಸ್ ಪ್ಯಾಕೆಟ್‌ಗಳ ಬಳಕೆ ಗಣನೀಯವಾಗಿ ಹೆಚ್ಚಾಗಿದೆ.

ಗಮನಿಸಿ: ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಅವರ ನೇತೃತ್ವದಲ್ಲಿ ಮಂಗಳವಾರ ವಿಶೇಷ ಸಭೆ ನಡೆದಿದ್ದು, ಬಿಸಿಲಿನಿಂದ ಗಂಭೀರ ಸಮಸ್ಯೆ ಎದುರಾದ ರೋಗಿಗಳನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ರವಾನಿಸಲು ಸೂಚಿಸಲಾಗಿದೆ. ಸದ್ಯದ ಮಾಹಿತಿಯ ಪ್ರಕಾರ ಜಿಲ್ಲೆಯಲ್ಲಿ ಈವರೆಗೆ ಯಾವುದೇ ಅಧಿಕೃತ ಹೀಟ್ ಸ್ಟ್ರೋಕ್ ಪ್ರಕರಣಗಳು ವರದಿಯಾಗಿಲ್ಲ.

The post ಕರಾವಳಿಯಲ್ಲಿ ಬಿಸಿಲಿನ ಅಬ್ಬರ: ಆರೋಗ್ಯ ಇಲಾಖೆ ಕಟ್ಟೆಚ್ಚರ appeared first on Good News 24x7.

]]>
ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ! https://www.goodnews24x7.com/9383-2karnataka-sslc-result-2026-students-set-records-7-students-get-full-marks/ Thu, 23 Apr 2026 09:40:03 +0000 https://www.goodnews24x7.com/?p=9383 ಬೆಂಗಳೂರು, ಏಪ್ರಿಲ್ 23: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾತುರದಿಂದ ಕಾಯುತ್ತಿದ್ದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ (ಪರೀಕ್ಷೆ-1) ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ಪರೀಕ್ಷೆಯಲ್ಲಿ ಹಲವು ಹೊಸ ದಾಖಲೆಗಳು ನಿರ್ಮಾಣವಾಗಿದ್ದು, ಒಟ್ಟು ಏಳು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸುವ…

The post ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ! appeared first on Good News 24x7.

]]>

ಬೆಂಗಳೂರು, ಏಪ್ರಿಲ್ 23: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾತುರದಿಂದ ಕಾಯುತ್ತಿದ್ದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ (ಪರೀಕ್ಷೆ-1) ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ಪರೀಕ್ಷೆಯಲ್ಲಿ ಹಲವು ಹೊಸ ದಾಖಲೆಗಳು ನಿರ್ಮಾಣವಾಗಿದ್ದು, ಒಟ್ಟು ಏಳು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಟಾಪ್‌ 7 ಸಾಧಕರು:
ದಾವಣಗೆರೆಯ ಭರತ್‌, ರಾಯಚೂರಿನ ಸುಖದೇವ್, ಚಿಕ್ಕೋಡಿಯ ಪ್ರಾರ್ಥನಾ, ಚಿಕ್ಕಮಗಳೂರಿನ ಬೃಂದಾ, ಉಡುಪಿಯ ಪ್ರೀತಂ, ವಿಜಯಪುರದ ಸೌಜನ್ಯ ಹಾಗೂ ಬೆಂಗಳೂರು ಉತ್ತರದ ಧನುಷ್‌ ಅವರು ‘ಔಟ್ ಆಫ್ ಔಟ್’ ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.

ಜಿಲ್ಲಾವಾರು ಸಾಧನೆ (ಟಾಪ್ 5):
ಫಲಿತಾಂಶದಲ್ಲಿ ಕರಾವಳಿ ಜಿಲ್ಲೆಗಳ ಪ್ರಾಬಲ್ಯ ಮುಂದುವರಿದಿದ್ದು, ದಕ್ಷಿಣ ಕನ್ನಡ ಜಿಲ್ಲೆಯು ಮೊದಲ ಸ್ಥಾನ ಅಲಂಕರಿಸಿದೆ.

ದಕ್ಷಿಣ ಕನ್ನಡ: ಶೇ. 98.40

ಉಡುಪಿ: ಶೇ. 98.18

ಉತ್ತರ ಕನ್ನಡ: ಶೇ. 98.02

ಹಾಸನ: ಶೇ. 97.51

ಮಂಡ್ಯ: ಶೇ. 97.40

ಗ್ರಾಮೀಣ ಹಾಗೂ ಕಲ್ಯಾಣ ಕರ್ನಾಟಕದ ಪ್ರಗತಿ:
ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಭಾಗದ ಮಕ್ಕಳೇ ಈ ಬಾರಿ ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಶೇ. 92ರಷ್ಟು ಫಲಿತಾಂಶ ದಾಖಲಾಗಿದ್ದರೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೇ. 91ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಗಣನೀಯ ಪ್ರಗತಿ ಕಂಡುಬಂದಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಡಿಜಿಲಾಕರ್‌ನಲ್ಲಿ ಅಂಕಪಟ್ಟಿ ಲಭ್ಯ:
ಶಿಕ್ಷಣ ಮಂಡಳಿಯು ಈ ಬಾರಿ ವಿಶೇಷ ಕ್ರಮ ಕೈಗೊಂಡಿದ್ದು, ಫಲಿತಾಂಶ ಪ್ರಕಟವಾದ ತಕ್ಷಣವೇ ವಿದ್ಯಾರ್ಥಿಗಳ ಅಧಿಕೃತ ಅಂಕಪಟ್ಟಿಗಳನ್ನು ‘ಡಿಜಿಲಾಕರ್’ (DigiLocker) ನಲ್ಲಿ ಲಭ್ಯವಾಗುವಂತೆ ಮಾಡಿದೆ. ವಿದ್ಯಾರ್ಥಿಗಳು digilocker.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ದಾಖಲೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ತೃತೀಯ ಭಾಷೆ: ಗ್ರೇಡ್ ಬದಲಿಗೆ ಅಂಕ:
ಈ ವರ್ಷದಿಂದ ಹಿಂದಿ ಸೇರಿದಂತೆ ತೃತೀಯ ಭಾಷೆಗಳಿಗೆ ಗ್ರೇಡ್ ನೀಡಲು ಇಲಾಖೆ ನಿರ್ಧರಿಸಿತ್ತು. ಆದರೆ, ಹೈಕೋರ್ಟ್ ಆದೇಶದಂತೆ ಈ ನಿರ್ಧಾರವನ್ನು ಕೈಬಿಟ್ಟು, ಎಂದಿನಂತೆ ಅಂಕಗಳನ್ನೇ ನೀಡಲಾಗಿದೆ. ಹೀಗಾಗಿ ಒಟ್ಟು 625 ಅಂಕಗಳಿಗೆ ಫಲಿತಾಂಶ ಪ್ರಕಟವಾಗಿದ್ದು, ತೃತೀಯ ಭಾಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ.

The post ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ! appeared first on Good News 24x7.

]]>
ಲಾಕ್ ಅಪ್ ಡೆತ್ ಆದ ತಂದೆ-ಮಗ ತಮಿಳ್ಳಾಡಲ್ಲಿ 9 ಪೊಲೀಸರಿಗೆ ಮರಣದಂಡನೆ! https://www.goodnews24x7.com/father-son-duo-locked-up-to-death-9-cops-sentenced-to-death-in-tamil-nadu/ Tue, 07 Apr 2026 10:41:29 +0000 https://www.goodnews24x7.com/?p=9136 ಮಧುರೈ: ಲಾಕ್ ಅಪ್ ಡೆತ್ ಪ್ರಕರಣವೊಂದ ರಲ್ಲಿ 9 ಪೊಲೀಸರಿಗೆ ಮರಣದಂಡನೆ ವಿಧಿಸಿ ಮಧುರೈ ಜಿಲ್ಲೆಯ ನ್ಯಾಯಾಲಯ ಆದೇಶ ಪ್ರಕಟಿಸಿದೆ. 2020ರ ಜೂನ್ 19ರಂದು, ಲಾಕ್‌ಡೌನ್ ಸಮಯದಲ್ಲಿ ಅಂಗಡಿ ನಿಗದಿತ ಸಮಯದ ನಂತರವೂ ತೆರೆದಿದ್ದಾರೆ ಎಂಬ ಆರೋಪದ ಮೇಲೆ, ಮೊಬೈಲ್ ಅಂಗಡಿ…

The post ಲಾಕ್ ಅಪ್ ಡೆತ್ ಆದ ತಂದೆ-ಮಗ ತಮಿಳ್ಳಾಡಲ್ಲಿ 9 ಪೊಲೀಸರಿಗೆ ಮರಣದಂಡನೆ! appeared first on Good News 24x7.

]]>

ಮಧುರೈ: ಲಾಕ್ ಅಪ್ ಡೆತ್ ಪ್ರಕರಣವೊಂದ ರಲ್ಲಿ 9 ಪೊಲೀಸರಿಗೆ ಮರಣದಂಡನೆ ವಿಧಿಸಿ ಮಧುರೈ ಜಿಲ್ಲೆಯ ನ್ಯಾಯಾಲಯ ಆದೇಶ ಪ್ರಕಟಿಸಿದೆ.

2020ರ ಜೂನ್ 19ರಂದು, ಲಾಕ್‌ಡೌನ್ ಸಮಯದಲ್ಲಿ ಅಂಗಡಿ ನಿಗದಿತ ಸಮಯದ ನಂತರವೂ ತೆರೆದಿದ್ದಾರೆ ಎಂಬ ಆರೋಪದ ಮೇಲೆ, ಮೊಬೈಲ್ ಅಂಗಡಿ ನಡೆಸುತ್ತಿದ್ದ ಜಯ ರಾಜ್ ಮತ್ತು ಅವರ ಮಗ ಬೆನಿಕ್ಸ್ ಅವರನ್ನು ಬಂಧಿಸಲಾಗಿತ್ತು ನಂತರ ಈ ಆರೋಪ ಸುಳ್ಳು ಎಂದು ಹೇಳಲಾಗಿತ್ತು. ಆದರೆ, ತೂತುಕೂಡಿ ಜಿಲ್ಲೆಯ ವ್ಯಾಪಾರಿ ಪಿ. ಜಯರಾಜ್ ಮತ್ತು ಅವರ ಮಗ ಜೆ ಬೆನಿಕ್ಸ ಅವರು ಕಸ್ಟಡಿಯಲ್ಲಿ ಮೃತಪಟ್ಟಿದ್ದರು.

ಆರು ವರ್ಷಗಳ ಹಿಂದೆ ನಡೆದಿದ್ದ ಈ ಘಟನೆಗೆ ದೇಶ ವ್ಯಾಪಿ ಆಕ್ರೋಶ ವ್ಯಕ್ತವಾಗಿತ್ತು. ಈ ಪ್ರಕರಣವನ್ನು ನ್ಯಾಯಾಲಯ, ಅಧಿಕಾರದ ದುರುಪಯೋಗದ ಸ್ಪಷ್ಟ ಉದಾಹರಣೆ ಎಂದು ಹೇಳಿದೆ. ತಮಿಳುನಾಡಿನಲ್ಲಿ ಅನೇಕ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳು ಇದ್ದಾರೆ. ಈ ತೀರ್ಪು ಪೊಲೀಸರಲ್ಲಿ ಭಯ ಹುಟ್ಟಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ತಂದೆ ಮತ್ತು ಮಗನನ್ನು ಬಟ್ಟೆ ಬಿಚ್ಚಿಸಿ ಕ್ರೂರವಾಗಿ ಹಲ್ಲೆ ಮಾಡ ಲಾಗಿತ್ತು. ಅದನ್ನು ಓದಿದರೆ ಹೃದಯ ನಡುಗು ತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

2020ರ ಜೂನ್ 19ರಂದು ಜಯರಾಜ್ ಮತ್ತು ಬೆನಿಕ್ಸ್ ಅವರನ್ನು ಸತಂಕುಳಂ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ, ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಕೆಲವೇ ದಿನಗಳಲ್ಲಿ ಇಬ್ಬರೂ ಮೃತಪಟ್ಟರು. ಬಂಧಿತರ ಸಂಬಂಧಿಕರು, ಪೊಲೀಸ್ ಠಾಣೆಯಲ್ಲಿ ಇಡೀ ರಾತ್ರಿ ಹಲ್ಲೆ ನಡೆಸಲಾಗಿದೆ. ಎಂದು ಆರೋಪಿಸಿ, ಗುದದ್ವಾರದಿಂದ ರಕ್ತಸ್ರಾವ ಸಂಭವಿಸಿದ್ದೂ ಸೇರಿದಂತೆ ಗಂಭೀರ ದೈಹಿಕ ಹಿಂಸೆಯ ಗುರುತುಗಳನ್ನು ಉಲ್ಲೇಖಿಸಿದ್ದರು.

ಮದ್ರಾಸ್ ಹೈಕೋರ್ಟ್ ನಿರ್ದೇಶನದ ಮೇರೆಗೆ, ರಾಜ್ಯದ ಸಿಬಿ-ಸಿಐಡಿಯಿಂದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ವಶಕ್ಕೆ ಪಡೆದು, ಈ ಪ್ರಕರಣದಲ್ಲಿ 10 ಮಂದಿ ಪೊಲೀಸರನ್ನು ಬಂಧಿಸಿತು. ಬಂಧಿತರಲ್ಲಿ ಒಬ್ಬ ಇನ್ಸ್‌ಪೆಕ್ಟರ್, ಇಬ್ಬರು ಉಪನಿರೀಕ್ಷಕರು ಹಾಗೂ ಹಲ ವಾರು ಕಾನ್ಸ್‌ಟೇಬಲ್‌ಗಳು ಸೇರಿದ್ದರು. ಅದ ರಲ್ಲಿ ಒಬ್ಬರು ವಿಚಾರಣೆ ವೇಳೆ ಅಸುನೀಗಿದ್ದರು. ನಂತರ ಸಿಬಿಐ ಆರೋಪಿಗಳ ವಿರುದ್ಧ ಕೊಲೆ ಆರೋಪಗಳನ್ನು ದಾಖಲಿಸಿತು.

ತನಿಖೆಯ ವೇಳೆ ಮಹಿಳಾ ಕಾನ್ಸ್‌ಟೇಬಲ್
ಒಬ್ಬರ ಹೇಳಿಕೆ ಪ್ರಮುಖ ತಿರುವು ತಂದು ಕೊಟ್ಟಿತು. ಅವರು, ತಂದೆ-ಮಗನ ಮೇಲೆ ಇಡೀ ರಾತ್ರಿ ಹಲ್ಲೆ ನಡೆದಿದ್ದು, ಠಾಣೆಯ ಮೇಜುಗಳು ಮತ್ತು ಲಾಠಿಗಳ ಮೇಲೆ ರಕ್ತದ ಕಲೆಗಳು ಕಂಡುಬಂದಿದ್ದವು ಎಂದು ತನಿಖಾಧಿಕಾರಿಗಳಿಗೆ ಹೇಳಿದ ರೆಂದು ವರದಿಯಾಗಿದೆ. ಸತಂಕುಳಂ ಪೊಲೀಸ್‌ ಠಾಣೆಯ ಸಿಸಿಟಿವಿ ದೃಶ್ಯಗಳು ಪ್ರತಿದಿನ ಸ್ವಯಂ ಚಾಲಿತವಾಗಿ ಅಳಿಸಿ ಹೋಗುವಂತೆ ವ್ಯವಸ್ಥೆ ಮಾಡಲಾಗಿದ್ದ ರಿಂದ, ಅವುಗಳನ್ನು ಸಂರಕ್ಷಿ ಸದೇ ಇದ್ದದ್ದು ತನಿಖೆಗೆ ದೊಡ್ಡ ಸವಾಲಾ ಯಿತು. ಐದು ವರ್ಷಕ್ಕಿಂತ ಹೆಚ್ಚು ಕಾಲ ನಡೆದ ವಿಚಾರಣೆಯಲ್ಲಿ 100 ಕ್ಕೂ ಹೆಚ್ಚು ಸಾಕ್ಷಿದಾರರನ್ನು ಪರೀಕ್ಷಿಸಲಾಯಿತು.

The post ಲಾಕ್ ಅಪ್ ಡೆತ್ ಆದ ತಂದೆ-ಮಗ ತಮಿಳ್ಳಾಡಲ್ಲಿ 9 ಪೊಲೀಸರಿಗೆ ಮರಣದಂಡನೆ! appeared first on Good News 24x7.

]]>
” ಜಿಎಸ್‌ಟಿ ಅಪೀಲೇಟ್ ತ್ರಿಬುನಲ್ ” ಕರ್ನಾಟಕ ರಾಜ್ಯದ ತಾಂತ್ರಿಕ ಸದಸ್ಯರಾಗಿ ಡಿ ಜಗನಾಥ್ ಸಾಗರ್ ಅಧಿಕಾರ ಸ್ವೀಕಾರ. https://www.goodnews24x7.com/d-jagannath-sagar-took-oath-as-the-technical-member-of-gst-appellate-tribunal-karnataka-state/ Thu, 12 Feb 2026 12:11:31 +0000 https://www.goodnews24x7.com/?p=8364 ದಿನಾಂಕ 12.02.2026ರ ಗುರುವಾರದಂದು, ನವದೆಹಲಿಯಲ್ಲಿ, ” ಜಿಎಸ್‌ಟಿ ಅಪೀಲೇಟ್ ತ್ರಿಬುನಲ್ ” ( GST APPELLATE TRIBUNAL) ಕರ್ನಾಟಕ ರಾಜ್ಯದ ತಾಂತ್ರಿಕ ಸದಸ್ಯರಾಗಿ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ(Oath of Office and Secrecy) ಡಿ ಜಗನಾಥ್ ಸಾಗರ್ ಅಧಿಕಾರ ಸ್ವೀಕರಿಸಿದರು.…

The post ” ಜಿಎಸ್‌ಟಿ ಅಪೀಲೇಟ್ ತ್ರಿಬುನಲ್ ” ಕರ್ನಾಟಕ ರಾಜ್ಯದ ತಾಂತ್ರಿಕ ಸದಸ್ಯರಾಗಿ ಡಿ ಜಗನಾಥ್ ಸಾಗರ್ ಅಧಿಕಾರ ಸ್ವೀಕಾರ. appeared first on Good News 24x7.

]]>

ದಿನಾಂಕ 12.02.2026ರ ಗುರುವಾರದಂದು, ನವದೆಹಲಿಯಲ್ಲಿ, ” ಜಿಎಸ್‌ಟಿ ಅಪೀಲೇಟ್ ತ್ರಿಬುನಲ್ ” ( GST APPELLATE TRIBUNAL) ಕರ್ನಾಟಕ ರಾಜ್ಯದ ತಾಂತ್ರಿಕ ಸದಸ್ಯರಾಗಿ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ(Oath of Office and Secrecy) ಡಿ ಜಗನಾಥ್ ಸಾಗರ್ ಅಧಿಕಾರ ಸ್ವೀಕರಿಸಿದರು.

ಚಾಮರಾಜನಗರ ಜಿಲ್ಲಾ ಉಪ್ಪಾರ ಸಮಾಜದ ಹಿರಿಯ ಮುಖಂಡರು ಮತ್ತು ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಅಡಿಷನಲ್ ಕಮಿಷನರ್ ಮತ್ತು ಮೈಸೂರು ಉಪ್ಪಾರ ವಿದ್ಯಾರ್ಥಿನಿಲಯದ ರೂವಾರಿಗಳು, ಭಗೀರಥ ಉಪ್ಪಾರ ಸಮಾಜದ ಆಶಾಕಿರಣ ಭಗೀರಥ ಶೈಕ್ಷಣಿಕ ಮತ್ತು ಚಾರಿಟಬಲ್ ಟ್ರಸ್ಟ್ ನ ಕಾರ್ಯದರ್ಶಿಯಾಗಿರುವ ಡಿ ಜಗನಾಥ್ ಸಾಗರ್ ಅವರಿಗೆ ಖ್ಯಾತ ಉದ್ಯಮಿಗಳು, ಮುಡಾ ಮಾಜಿ ಅಧ್ಯಕ್ಷರು, ಪ್ರಭಾವಿ ಮುಖಂಡರಾದ ಹರದನಹಳ್ಳಿ ವಿಜಯ್ ಕುಮಾರ್, ಭಗೀರ ಶ್ರೀ ಗಳು ಸೇರಿದಂತೆ ಅನೇಕ ಗಣ್ಯರು ಉಪ್ಪಾರ ಸಮಾಜದ ಹಿರಿಯ ಮುಖಂಡರುಗಳು, ಅಭಿನಂದನೆ ಸಲ್ಲಿಸಿ ಶುಭಾಶಯಾ ತಿಳಿಸಿದರು

 

The post ” ಜಿಎಸ್‌ಟಿ ಅಪೀಲೇಟ್ ತ್ರಿಬುನಲ್ ” ಕರ್ನಾಟಕ ರಾಜ್ಯದ ತಾಂತ್ರಿಕ ಸದಸ್ಯರಾಗಿ ಡಿ ಜಗನಾಥ್ ಸಾಗರ್ ಅಧಿಕಾರ ಸ್ವೀಕಾರ. appeared first on Good News 24x7.

]]>
ಸಚಿವ ಎಂ.ಬಿ ಪಾಟೀಲ್ ಅಕ್ಟೋಬರ್ 29 ರಂದು ಮೈಸೂರು ಜಿಲ್ಲಾ ಪ್ರವಾಸ. https://www.goodnews24x7.com/minister-m-b-patil-to-visit-mysore-district-on-october-29/ Tue, 28 Oct 2025 11:56:21 +0000 https://www.goodnews24x7.com/?p=7919 ಮೈಸೂರು :- ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರಾದ ಎಂ.ಬಿ ಪಾಟೀಲ್ ಅವರು ಅಕ್ಟೋಬರ್ 29 ರಂದು ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಬೆಳಗ್ಗೆ 10 ಗಂಟೆಗೆ ಮೈಸೂರು ರೈಲ್ವೇ ನಿಲ್ದಾಣದ ಪಕ್ಕದಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಗೆ…

The post ಸಚಿವ ಎಂ.ಬಿ ಪಾಟೀಲ್ ಅಕ್ಟೋಬರ್ 29 ರಂದು ಮೈಸೂರು ಜಿಲ್ಲಾ ಪ್ರವಾಸ. appeared first on Good News 24x7.

]]>

ಮೈಸೂರು :- ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರಾದ ಎಂ.ಬಿ ಪಾಟೀಲ್ ಅವರು ಅಕ್ಟೋಬರ್ 29 ರಂದು ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.

ಬೆಳಗ್ಗೆ 10 ಗಂಟೆಗೆ ಮೈಸೂರು ರೈಲ್ವೇ ನಿಲ್ದಾಣದ ಪಕ್ಕದಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ಹಾಗೂ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಲಿದ್ದಾರೆ.

ಬೆಳಗ್ಗೆ 11 ಗಂಟೆಯಿoದ ಮಧ್ಯಾಹ್ನ 2 ಗಂಟೆಯ ವರೆಗೆ ಮೈಸೂರಿನ ವಿವಿಧ ಕೈಗಾರಿಕಾ ಘಟಗಳಿಗೆ ಭೇಟಿ ನೀಡಲಿದ್ದಾರೆ.

ಮಧ್ಯಾಹ್ನ 2.30 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮೈಸೂರು ವಿವಿಧ Industry Association ಗಳ ಪದಾಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ಮಧ್ಯಾಹ್ನ 03 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮೈಸೂರು ಜಿಲ್ಲೆ ವ್ಯಾಪ್ತಿಯ ಕೈಗಾರಿಕಾ ಇಲಾಖೆ ಹಾಗೂ KIADB ವಿಷಯಗಳ ಕುರಿತಂತೆ ಜಿಲ್ಲಾಧಿಕಾರಿ ಹಾಗೂ ಇತರೆ ಸಂಬoಧಪಟ್ಟ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ.

The post ಸಚಿವ ಎಂ.ಬಿ ಪಾಟೀಲ್ ಅಕ್ಟೋಬರ್ 29 ರಂದು ಮೈಸೂರು ಜಿಲ್ಲಾ ಪ್ರವಾಸ. appeared first on Good News 24x7.

]]>
ಗಣೇಶೋತ್ಸವಕ್ಕೆ ಸಕಲ ಸಿದ್ಧತೆ; ಅನುಮತಿಗೆ ಏಕಗವಾಕ್ಷಿ ವ್ಯವಸ್ಥೆ. https://www.goodnews24x7.com/all-set-for-ganesh-chaturthi-single-window-system-for-permission/ Sun, 24 Aug 2025 05:49:36 +0000 https://www.goodnews24x7.com/?p=6611 ಬೆಂಗಳೂರು ಗ್ರಾಮಾಂತರ : ಆ.27 ರಂದು ನಡೆಯುವ ಗಣೇಶ ಚತುರ್ಥಿ ಹಬ್ಬಕ್ಕಾಗಿ ಜಿಲ್ಲೆಯಲ್ಲಿ ಸಜ್ಜು ಸಿದ್ಧತೆಗಳು ನಡೆಯುತ್ತಿವೆ. ಹಬ್ಬದ ಸಂಭ್ರಮ ಗ್ರಾಮಾಂತರ ಭಾಗದತ್ತ ಹರಡಿದ್ದು, ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು ಸಂಘ-ಸಂಸ್ಥೆಗಳು ಸಜ್ಜಾಗಿವೆ. ಅನುಮತಿಗೆ ಸುಲಭ ವಿಧಾನ: ಸಾರ್ವಜನಿಕ ಗಣೇಶೋತ್ಸವಕ್ಕಾಗಿ…

The post ಗಣೇಶೋತ್ಸವಕ್ಕೆ ಸಕಲ ಸಿದ್ಧತೆ; ಅನುಮತಿಗೆ ಏಕಗವಾಕ್ಷಿ ವ್ಯವಸ್ಥೆ. appeared first on Good News 24x7.

]]>

ಬೆಂಗಳೂರು ಗ್ರಾಮಾಂತರ : ಆ.27 ರಂದು ನಡೆಯುವ ಗಣೇಶ ಚತುರ್ಥಿ ಹಬ್ಬಕ್ಕಾಗಿ ಜಿಲ್ಲೆಯಲ್ಲಿ ಸಜ್ಜು ಸಿದ್ಧತೆಗಳು ನಡೆಯುತ್ತಿವೆ. ಹಬ್ಬದ ಸಂಭ್ರಮ ಗ್ರಾಮಾಂತರ ಭಾಗದತ್ತ ಹರಡಿದ್ದು, ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು ಸಂಘ-ಸಂಸ್ಥೆಗಳು ಸಜ್ಜಾಗಿವೆ.

ಅನುಮತಿಗೆ ಸುಲಭ ವಿಧಾನ:
ಸಾರ್ವಜನಿಕ ಗಣೇಶೋತ್ಸವಕ್ಕಾಗಿ ಈ ಬಾರಿ ‘ಏಕಗವಾಕ್ಷಿ’ (Single Window) ವ್ಯವಸ್ಥೆ ರೂಪಿಸಲಾಗಿದೆ. ನಗರಸಭೆ, ಪೊಲೀಸರು ಮತ್ತು ಬೆಸ್ಕಾಂ ಅಧಿಕಾರಿಗಳೊಂದಿಗೆ ಒಂದೇ ಸ್ಥಳದಲ್ಲಿ ಎಲ್ಲಾ ಅನುಮತಿಗಳನ್ನು ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ನಾನಾ ಕಚೇರಿಗಳಿಗೆ ಅಲೆದಾಟ ಮಾಡುವ ಅಗತ್ಯವಿಲ್ಲ.

ಪಿಒಪಿ ಮೂರ್ತಿಗಳ ವಿರುದ್ಧ ಕಠಿಣ ಕ್ರಮ:
ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಬಳಸಿ ತಯಾರಿಸಿದ ಮೂರ್ತಿಗಳ ತಯಾರಿಕೆ, ಮಾರಾಟ ಹಾಗೂ ವಿಸರ್ಜನೆ ರಾಜ್ಯ ಸರ್ಕಾರದಿಂದ ನಿಷಿದ್ಧವಾಗಿದೆ. ಈ ಬಗ್ಗೆ ಸೆಪ್ಟೆಂಬರ್ 15, 2023ರಂದು ಆದೇಶ ಹೊರಡಿಸಲಾಗಿದೆ. ಹೈಕೋರ್ಟ್ ಕೂಡ ಈ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸೂಚನೆ ನೀಡಿದ್ದು, ಜಿಲ್ಲೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.

ಪಿಒಪಿ ಮೂರ್ತಿಗಳಲ್ಲಿ ಹಾನಿಕಾರಕ ರಾಸಾಯನಿಕಗಳು ಇರುವ ಕಾರಣ, ಅವುಗಳನ್ನು ನೀರಿನಲ್ಲಿ ವಿಸರ್ಜಿಸಿದರೆ ಪರಿಸರಕ್ಕೆ ತೀವ್ರ ಹಾನಿ ಉಂಟಾಗುತ್ತದೆ. ಇದು ಜಲಚರ ಜೀವಿಗಳ ಸಾವು ಹಾಗೂ ಮಾನವ ಮತ್ತು ಪಶುಪಕ್ಷಿಗಳ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.

ಪರಿಸರ ಸ್ನೇಹಿ ಪರ್ಯಾಯಗಳು:
ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಹಲವು ಸಂಘಟನೆಗಳು ಜಾಗೃತಿ ಮೂಡಿಸುತ್ತಿವೆ. ಘಾಟಿ ಗೋಶಾಲೆ, ಯುವಸಂಚಲನ, ದೊಡ್ಡಬಳ್ಳಾಪುರ ನಗರಸಭೆ ಜೀವವೈವಿಧ್ಯ ಸಮಿತಿ ಮೊದಲಾದವುಗಳು ಮಣ್ಣಿನ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿವೆ. ಮಹಿಳಾ ಸಂಘಟನೆಗಳೂ ಈ ಕಾರ್ಯದಲ್ಲಿ ಭಾಗವಹಿಸುತ್ತಿವೆ.

ಅನುಮತಿ ಕಡ್ಡಾಯ, ಹಬ್ಬಕ್ಕೆ ಮಾರ್ಗಸೂಚಿ ಪಾಲನೆ ಅಗತ್ಯ:
ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕಾಗಿದ್ದು, ಏಕಗವಾಕ್ಷಿ ವ್ಯವಸ್ಥೆಯ ಮೂಲಕ ಅನುಮತಿ ನೀಡಲಾಗುತ್ತದೆ. ಪರಿಸರ ಸ್ನೇಹಿ ಮೂರ್ತಿಗಳನ್ನು ಬಳಸಬೇಕು ಮತ್ತು ಸ್ಥಳೀಯ ಸಂಸ್ಥೆಗಳು ನಿಗದಿಪಡಿಸಿದ ಸ್ಥಳದಲ್ಲಿಯೇ ವಿಸರ್ಜನೆ ಮಾಡಬೇಕೆಂಬ ನಿಯಮವಿದೆ.

ಹೀಗೆ ಜಿಲ್ಲೆಯಾದ್ಯಂತ ಶಿಸ್ತಿನಿಂದ, ಪರಿಸರದ ರಕ್ಷಣೆಯೊಂದಿಗೆ, ಸಂಯಮದಿಂದ ಹಬ್ಬವನ್ನು ಆಚರಿಸಲು ಸಿದ್ಧತೆ ನಡೆಯುತ್ತಿದೆ.

The post ಗಣೇಶೋತ್ಸವಕ್ಕೆ ಸಕಲ ಸಿದ್ಧತೆ; ಅನುಮತಿಗೆ ಏಕಗವಾಕ್ಷಿ ವ್ಯವಸ್ಥೆ. appeared first on Good News 24x7.

]]>
ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್‌ಗೆ ಆಹ್ವಾನ https://www.goodnews24x7.com/author-banu-mushtaq-invited-to-inaugurate-mysore-dasara/ Fri, 22 Aug 2025 12:32:37 +0000 https://www.goodnews24x7.com/?p=6469   ಈ ಬಾರಿ ವಿಶ್ವ ವಿಖ್ಯಾತ ದಸರಾ ಮಹೋತ್ಸವವನ್ನು ಬುಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರು ಉದ್ಘಾಟಿಸಲಿದ್ದು, ಜಿಲ್ಲಾಡಳಿತದ ವತಿಯಿಂದ ಅವರನ್ನು ಗೌರವದಿಂದ ಆಹ್ವಾನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. . ರಕ್ಷಣಾ ಸಚಿವರಿಗೆ ಪತ್ರ ಮೈಸೂರು ದಸರಾ ಸಂದರ್ಭದಲ್ಲಿ…

The post ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್‌ಗೆ ಆಹ್ವಾನ appeared first on Good News 24x7.

]]>

 

ಈ ಬಾರಿ ವಿಶ್ವ ವಿಖ್ಯಾತ ದಸರಾ ಮಹೋತ್ಸವವನ್ನು ಬುಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರು ಉದ್ಘಾಟಿಸಲಿದ್ದು, ಜಿಲ್ಲಾಡಳಿತದ ವತಿಯಿಂದ ಅವರನ್ನು ಗೌರವದಿಂದ ಆಹ್ವಾನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
.
ರಕ್ಷಣಾ ಸಚಿವರಿಗೆ ಪತ್ರ
ಮೈಸೂರು ದಸರಾ ಸಂದರ್ಭದಲ್ಲಿ ವೈಮಾನಿಕ ಪ್ರದರ್ಶನಕ್ಕೆ ಅನುಮತಿ ದೊರೆತಿದ್ದು, ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರು ದಸರಾ ವೀಕ್ಷಣಗೆ ಆಗಮಿಸಬೇಕೆಂದು ಪತ್ರ ಬರೆದಿದ್ದೇನೆ ಎಂದರು.

 

 

The post ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್‌ಗೆ ಆಹ್ವಾನ appeared first on Good News 24x7.

]]>
ಐಇಡಿ ಸ್ಫೋಟ: ಡಿಆರ್‌ಜಿ ಜವಾನ ಹುತಾತ್ಮ, ಮೂವರಿಗೆ ಗಾಯ. https://www.goodnews24x7.com/ied-blast-drg-jawan-martyred-three-injured/ Mon, 18 Aug 2025 07:33:26 +0000 https://www.goodnews24x7.com/?p=6332 ಛತ್ತೀಸ್‌ಗಢ : ಇಂದು ಬೆಳಿಗ್ಗೆ ಬಿಜಾಪುರ ಜಿಲ್ಲೆಯ ಇಂದ್ರಾವತಿ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆಯುತ್ತಿದ್ದ ನಕ್ಸಲ್ ನಿಗ್ರಹ ಕಾರ್ಯಾಚರಣೆಯ ವೇಳೆ ಐಇಡಿ (ಸುಧಾರಿತ ಸ್ಫೋಟಕ ಸಾಧನ) ಸ್ಫೋಟ ಸಂಭವಿಸಿದೆ. ಈ ದುರಂತದಲ್ಲಿ ಜಿಲ್ಲಾ ಮೀಸಲು ಗಾರ್ಡ್ (ಡಿಆರ್‌ಜಿ) ಯೋಧ ದಿನೇಶ್ ನಾಗ್ ಹುತಾತ್ಮರಾಗಿದ್ದಾರೆ.…

The post ಐಇಡಿ ಸ್ಫೋಟ: ಡಿಆರ್‌ಜಿ ಜವಾನ ಹುತಾತ್ಮ, ಮೂವರಿಗೆ ಗಾಯ. appeared first on Good News 24x7.

]]>

ಛತ್ತೀಸ್‌ಗಢ : ಇಂದು ಬೆಳಿಗ್ಗೆ ಬಿಜಾಪುರ ಜಿಲ್ಲೆಯ ಇಂದ್ರಾವತಿ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆಯುತ್ತಿದ್ದ ನಕ್ಸಲ್ ನಿಗ್ರಹ ಕಾರ್ಯಾಚರಣೆಯ ವೇಳೆ ಐಇಡಿ (ಸುಧಾರಿತ ಸ್ಫೋಟಕ ಸಾಧನ) ಸ್ಫೋಟ ಸಂಭವಿಸಿದೆ. ಈ ದುರಂತದಲ್ಲಿ ಜಿಲ್ಲಾ ಮೀಸಲು ಗಾರ್ಡ್ (ಡಿಆರ್‌ಜಿ) ಯೋಧ ದಿನೇಶ್ ನಾಗ್ ಹುತಾತ್ಮರಾಗಿದ್ದಾರೆ.

ಅಧಿಕಾರಿಗಳ ಪ್ರಕಾರ, ದಿನೇಶ್ ನಾಗ್ ಆಕಸ್ಮಿಕವಾಗಿ ಐಇಡಿ ಮೇಲೆ ಕಾಲಿಟ್ಟಿದ್ದು ಸ್ಫೋಟಕ್ಕೆ ಕಾರಣವಾಗಿದೆ. ಘಟನೆಯಲ್ಲಿ ಮೂವರು ಯೋಧರು ಗಾಯಗೊಂಡಿದ್ದು, ಅವರನ್ನು ತಕ್ಷಣ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸ್ಥಿತಿ ಅಪಾಯದಿಂದ ಪಾರಾಗಿದೆ ಎಂದು ವರದಿಯಾಗಿದೆ.

ಇದೇ ಪ್ರದೇಶದಲ್ಲಿ ಹಿಂದಿನ ಎರಡು ವರ್ಷಗಳಲ್ಲಿ ಹಲವಾರು ಗುಂಡಿನ ಚಕಮಕಿ ಪ್ರಕರಣಗಳು ಸಂಭವಿಸಿವೆ. ನಕ್ಸಲರು ಈ ಭಾಗವನ್ನು ತಮ್ಮ ತರಬೇತಿ ಕೇಂದ್ರವನ್ನಾಗಿ ಬಳಸುತ್ತಿದ್ದು, ಇಲ್ಲಿಯ ಭದ್ರತಾ ಲೋಪಗಳು ತೀವ್ರ ಚಿಂತೆ ಮೂಡಿಸುತ್ತಿವೆ.

ಮಾವೋವಾದಿ ಅತಿವಾದದ ವಿರುದ್ಧ ನಿರಂತರ ಹೋರಾಟ

ಡಿಆರ್‌ಜಿ ಎನ್ನುವುದು ಮಾವೋವಾದಿಗಳ ವಿರುದ್ಧದ ವಿಶೇಷ ಪೊಲೀಸ್ ಪಡೆ. ಈ ಪಟಣದಲ್ಲಿ ಆಂತರಿಕ ಪ್ರದೇಶಗಳ ಬುಡಕಟ್ಟು ಜನರನ್ನು ಮತ್ತು ಶರಣಾದ ನಕ್ಸಲರನ್ನು ಕೂಡ ನೇಮಿಸಲಾಗುತ್ತದೆ. ಈ ಪಡೆ ನಕ್ಸಲ್ ನಿಗ್ರಹದಲ್ಲಿ ಪರಿಣಾಮಕಾರಿ ಪಾತ್ರ ವಹಿಸುತ್ತಿದೆ.

ಈ ವರ್ಷದ ಮೊದಲಿನಿಂದಲೂ ನಕ್ಸಲ್ ದಾಳಿಗಳಲ್ಲಿ 20 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಇದಕ್ಕೂ ಮುನ್ನ, 2024ರಲ್ಲಿ ಈ ಸಂಖ್ಯೆ 19 ಆಗಿತ್ತು. ಇತ್ತೀಚೆಗೆ ನಡೆದ ಕಾರ್ಯಾಚರಣೆಗಳಲ್ಲಿ 44 ನಕ್ಸಲರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದವು.

ಜುಲೈ ತಿಂಗಳಲ್ಲಿ ನಕ್ಸಲರು ಇಬ್ಬರು ಶಿಕ್ಷಾ ದೂತರನ್ನು ಕೊಂದಿರುವ ಘಟನೆ ನಡೆದಿತ್ತು. ಅಂದಿನಿಂದ ನಕ್ಸಲರು ಪ್ರೆಷರ್ ಐಇಡಿ ಗಳು ಹಾಕಿ ಭದ್ರತಾ ಪಡೆಗಳ ಮೇಲೆ ದಾಳಿ ಮಾಡುತ್ತಿದ್ದಾರೆ.

ಮಾವೋವಾದ ಮುಕ್ತ ಭಾರತಕ್ಕೆ ಸರ್ಕಾರದ ಬದ್ಧತೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, “ಮಾವೋವಾದವು ದೇಶದ ಅಭಿವೃದ್ಧಿಗೆ ತಡೆ ಆಗಿದೆ. 2026ರ ಮಾರ್ಚ್ 31ರೊಳಗೆ ಭಾರತವನ್ನು ಮಾವೋವಾದ ಮುಕ್ತಗೊಳಿಸುವ ಗುರಿಯೊಂದಿಗೆ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದೆ” ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ನಾರಾಯಣಪುರ, ಬಿಜಾಪುರ ಹಾಗೂ ಸುಕ್ಮಾ ಜಿಲ್ಲೆಗಳಲ್ಲಿ ನಡೆದ ಕಾರ್ಯಾಚರಣೆಗಳಲ್ಲಿ ಹಲವು ಪ್ರಭಾವಿ ಮಾವೋವಾದಿ ನಾಯಕರು ಹತರಾಗಿದ್ದಾರೆ ಅಥವಾ ಶರಣಾಗಿದ್ದಾರೆ. ಇದರಲ್ಲಿ 1.18 ಕೋಟಿ ರೂಪಾಯಿ ಬಹುಮಾನ ಹೊಂದಿದ್ದ 23 ಜನ ಮಾವೋವಾದಿಗಳು ಸುಕ್ಮಾದಲ್ಲಿ ಶರಣಾದರು.

The post ಐಇಡಿ ಸ್ಫೋಟ: ಡಿಆರ್‌ಜಿ ಜವಾನ ಹುತಾತ್ಮ, ಮೂವರಿಗೆ ಗಾಯ. appeared first on Good News 24x7.

]]>
ಅಮೃತ ಸರೋವರದಲ್ಲಿ ಮತ್ತೆ ಗಗನಕ್ಕೇರಲಿದೆ ತ್ರಿವರ್ಣ ! https://www.goodnews24x7.com/the-tricolor-will-rise-again-in-amrutha-sarovar/ Thu, 14 Aug 2025 11:38:08 +0000 https://www.goodnews24x7.com/?p=6140 ಮೈಸೂರು : ದೇಶವೇ ಸಂಭ್ರಮಿಸುವ ಸ್ವಾತಂತ್ರ್ಯ ಮಹೋತ್ಸವಕ್ಕೆ ನಾನಾ ರೀತಿಯ ತಯಾರಿಗಳು ನಡೆದಿರುವಂತೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲೆಯ 85 ಅಮೃತ ಸರೋವರ ಕೆರೆಗಳಲ್ಲಿ ಧ್ವಜಾರೋಹಣಕ್ಕೆ ಜಿಲ್ಲಾ ಪಂಚಾಯಿತಿ ಸಿದ್ದತೆ ನಡೆಸಿದೆ. ಆ.15ರ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಹಾತ್ಮ ಗಾಂಧಿ…

The post ಅಮೃತ ಸರೋವರದಲ್ಲಿ ಮತ್ತೆ ಗಗನಕ್ಕೇರಲಿದೆ ತ್ರಿವರ್ಣ ! appeared first on Good News 24x7.

]]>

ಮೈಸೂರು : ದೇಶವೇ ಸಂಭ್ರಮಿಸುವ ಸ್ವಾತಂತ್ರ್ಯ ಮಹೋತ್ಸವಕ್ಕೆ ನಾನಾ ರೀತಿಯ ತಯಾರಿಗಳು ನಡೆದಿರುವಂತೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲೆಯ 85 ಅಮೃತ ಸರೋವರ ಕೆರೆಗಳಲ್ಲಿ ಧ್ವಜಾರೋಹಣಕ್ಕೆ ಜಿಲ್ಲಾ ಪಂಚಾಯಿತಿ ಸಿದ್ದತೆ ನಡೆಸಿದೆ.

ಆ.15ರ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಿರುವ 85 ಅಮೃತ ಸರೋವರ ಸ್ಥಳಗಳಲ್ಲಿ ಧ್ವಜಾರೋಹಣ ಮಾಡುವ ಮೂಲಕ ಜಲಸಂರಕ್ಷಣೆಗಾಗಿ “ಒಂದು ಸರೋವರ, ಒಂದು ಸಂಕಲ್ಪʼ ಎಂಬ ಸಂದೇಶ ಸಾರಲು ಹೊರಟಿದೆ.
ಆ.15 ರಂದು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಅಂತರ್ಜಲ ಉಳಿಸುವ ಅಭಿಯಾನದಡಿಯಲ್ಲಿ 85 ಅಮೃತ ಸರೋವರ ಕೆರೆಗಳಲ್ಲಿ ತ್ರಿವರ್ಣ ದ್ವಜ ಹಾರಲಿದೆ. ಅಮೃತ ಸರೋವರದ ಅಂಗಳದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಅಥವಾ ಕುಟುಂಬ ಸದಸ್ಯರು, ಸ್ವಾತಂತ್ರ್ಯೋತ್ತರ ಹುತಾತ್ಮರ ಕುಟುಂಬ ಸದಸ್ಯರು ಅಥವಾ ಸ್ಥಳೀಯ ಪದ್ಮ ಪ್ರಶಸ್ತಿ ಪುರಸ್ಕೃತರು ಅಥವಾ ಸ್ಥಳೀಯ ಹಿರಿಯ ನಾಗರೀಕರಿಂದ ತಿರಂಗ ಧ್ವಜಾರೋಹಣ ನೆರವೇರಿಸಲಾಗುವುದು.

ವಿವಿಧ ಕಾರ್ಯಕ್ರಮಗಳು: ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಜಲಸಂರಕ್ಷಣೆ/ಹವಾಮಾನ ಬದಲಾವಣೆಯ ಕುರಿತು ಪ್ರಬಂಧ ಬರವಣಿಗೆ/ಕವನ ಸ್ಪರ್ಧೆ, ಪರಿಸರ ಸಂರಕ್ಷಣೆಯ ಕುರಿತ ನಾಟಕಗಳು ಮತ್ತು ಶಾಲಾ, ಕಾಲೇಜು ವಿದ್ಯಾರ್ಥಿಗಳಿಂದ ಸ್ವಚ್ಛತಾ ಅಭಿಯಾನಗಳು, ಸಸಿ ನೆಡುವುದು, ಚಿತ್ರಕಲೆ ಸ್ಪರ್ಧೆಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರು/ಪದ್ಮ ಪ್ರಶಸ್ತಿ ಪುರಸ್ಕೃತರೊಂದಿಗೆ ಕಥೆ ಹೇಳುವ ಚಟುವಟಿಕೆಗಳನ್ನು ಆಯೋಜಿಸುವುದು.

ಹೆಚ್.ಡಿ.ಕೋಟೆಯಲ್ಲಿ 16, ಹುಣಸೂರು 16, ಮೈಸೂರು 15, ನಂಜನಗೂಡು 5, ಪಿರಿಯಾಪಟ್ಟಣ 4, ಸಾಲಿಗ್ರಾಮ 6, ಸರಗೂರು 8 ಮತ್ತು ತಿ.ನರಸೀಪುರ 15 ಸೇರಿ ಒಟ್ಟು 85 ಅಮೃತ ಸರೋವರ ಕೆರೆಗಳ ದಂಡೆಯಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಲಿದೆ.

ಸರ್ಕಾರದ ನಿರ್ದೇಶನದ ಮೇರೆಗೆ ಮೈಸೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಮ-ನರೇಗಾದಡಿ ಅಭಿವೃದ್ಧಿಗೊಂಡಿರುವ ಕೆರೆಗಳ ಕುರಿತು ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಬಾರಿ ಸ್ವಾತಂತ್ರ್ಯೋತ್ಸವವನ್ನು ಜಿಲ್ಲೆಯ 85 ಕೆರೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸಲು ಸಿದ್ಧತೆ ನಡೆಸಲಾಗಿದೆ. ಈ ಕಾರ್ಯಕ್ರಮದ ಮೂಲಕ ಜಲಸಂರಕ್ಷಣೆಯ ಮಹತ್ವ ಸಾರಲಿದೆ.
– ಎಸ್.ಯುಕೇಶ್ ಕುಮಾರ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಪಂ, ಮೈಸೂರು

ಜಲಮೂಲಗಳ ರಕ್ಷಣೆಗೆ ನಾವು ಪಣ ತೊಡುವ ನಿಟ್ಟಿನಲ್ಲಿ ಮ-ನರೇಗಾ ಯೋಜನೆಯಡಿ ಜಿಲ್ಲೆಯ 85 ಕೆರೆಗಳಲ್ಲೂ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರು, ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸೇವಕರು ಹಾಗೂ ಗಣ್ಯರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

The post ಅಮೃತ ಸರೋವರದಲ್ಲಿ ಮತ್ತೆ ಗಗನಕ್ಕೇರಲಿದೆ ತ್ರಿವರ್ಣ ! appeared first on Good News 24x7.

]]>
MTS ಪರೀಕ್ಷೆಗೆ ಬೇರೊಬ್ಬನನ್ನು ಕಳಿಸಿದ ಯುವಕ, ಕರ್ತವ್ಯಕ್ಕೆ ಹಾಜರಾಗುವಾಗ ಸಿಕ್ಕಿಬಿದಿದ್ದಾನೆ. https://www.goodnews24x7.com/a-youth-who-sent-someone-else-for-mts-exam-was-caught-while-reporting-for-duty/ Thu, 14 Aug 2025 10:31:30 +0000 https://www.goodnews24x7.com/?p=6135 ಬೆಂಗಳೂರು : ‘ಮುನ್ನಾ ಭಾಯಿ ಎಂಬಿಬಿಎಸ್’ ಚಿತ್ರದಲ್ಲಿ ನಡೆದಂತೆ ಬಿಹಾರದ 24 ವರ್ಷದ ಯುವಕನೊಬ್ಬ ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ರಿ ರಿಸರ್ಚ್ ಅಂಡ್ ಎಜುಕೇಶನ್ – ಇನ್‌ಸ್ಟಿಟ್ಯೂಟ್ ಆಫ್ ವುಡ್ ಸೈನ್ಸ್ ಅಂಡ್ ಟೆಕ್ನಾಲಜಿಯ ಮಲ್ಟಿ-ಟಾಸ್ಕಿಂಗ್ ಸ್ಟಾಫ್  ಹುದ್ದೆಗೆ ನಡೆದ ಪರೀಕ್ಷೆಯನ್ನು…

The post MTS ಪರೀಕ್ಷೆಗೆ ಬೇರೊಬ್ಬನನ್ನು ಕಳಿಸಿದ ಯುವಕ, ಕರ್ತವ್ಯಕ್ಕೆ ಹಾಜರಾಗುವಾಗ ಸಿಕ್ಕಿಬಿದಿದ್ದಾನೆ. appeared first on Good News 24x7.

]]>

ಬೆಂಗಳೂರು : ‘ಮುನ್ನಾ ಭಾಯಿ ಎಂಬಿಬಿಎಸ್’ ಚಿತ್ರದಲ್ಲಿ ನಡೆದಂತೆ ಬಿಹಾರದ 24 ವರ್ಷದ ಯುವಕನೊಬ್ಬ ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ರಿ ರಿಸರ್ಚ್ ಅಂಡ್ ಎಜುಕೇಶನ್ – ಇನ್‌ಸ್ಟಿಟ್ಯೂಟ್ ಆಫ್ ವುಡ್ ಸೈನ್ಸ್ ಅಂಡ್ ಟೆಕ್ನಾಲಜಿಯ ಮಲ್ಟಿ-ಟಾಸ್ಕಿಂಗ್ ಸ್ಟಾಫ್  ಹುದ್ದೆಗೆ ನಡೆದ ಪರೀಕ್ಷೆಯನ್ನು ತನ್ನ ಸ್ನೇಹಿತನಿಂದ ಬರೆಸಿ, ಕರ್ತವ್ಯಕ್ಕೆ ಹಾಜರಾಗುವಾಗ ಸಿಕ್ಕಿಬಿದ್ದಿದ್ದಾನೆ.

ಬಿಹಾರದ ನಳಂದ ಜಿಲ್ಲೆಯ ನಿವಾಸಿ ಅಂಜ್ ರಾಜ್ ಪಿಯು ಪರೀಕ್ಷೆ ಮುಗಿಸಿ ಎಂಟಿಎಸ್ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದನು. ಸಂಸ್ಥೆ ಆತನಿಗೆ ಪ್ರವೇಶ ಪತ್ರ ನೀಡಿತ್ತು. ಆದರೆ, ಆತ ಮಾರ್ಚ್ 16 ರಂದು ಎಂಎಸ್ ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪರೀಕ್ಷೆ ಬರೆಯಲು ತಮ್ಮ ಸ್ನೇಹಿತನನ್ನು ಕಳುಹಿಸಿದ್ದನು. ಬಳಿಕ ಎಂಟಿಎಸ್ ಹುದ್ದೆಗೆ ಆತ ಆಯ್ಕೆಯಾಗಿದ್ದನು.

ಅದರಂತೆ ಜುಲೈ 14 ರಂದು ರಾಜ್ ಕರ್ತವ್ಯಕ್ಕೆ ಬಂದಾಗ ವಂಚನೆ ಬೆಳಕಿಗೆ ಬಂದಿದೆ. ರಾಜ್ ಅವರ ಸಹಿ, ಬೆರಳಚ್ಚು ಮತ್ತು ಛಾಯಾಚಿತ್ರ ಪರೀಕ್ಷೆಗೆ ಹಾಜರಾದ ವ್ಯಕ್ತಿಗೆ ಹೊಂದಿಕೆಯಾಗುತ್ತಿಲ್ಲ ಎಂಬುದನ್ನು ಸಿಬ್ಬಂದಿ ಗಮನಿಸಿದ್ದಾರೆ. ನಂತರ, ಮುಖದ ಲಕ್ಷಣಗಳು ಮತ್ತು ಚರ್ಮದ ಗುರುತುಗಳು ಸಹ ಭಿನ್ನವಾಗಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಐಡಬ್ಲ್ಯುಎಸ್‌ಟಿ ನಿರ್ದೇಶಕರ ಉಸ್ತುವಾರಿ ವಹಿಸಿಕೊಂಡಿರುವ ಐಎಫ್‌ಎಸ್ ಅಧಿಕಾರಿ ರಾಜೇಶ್ ಎಸ್ ಅವರು ಸದಾಶಿವನಗರ ಪೊಲೀಸರಿಗೆ ದೂರು ನೀಡಿದ್ದಾರೆ ಮತ್ತು ಬಿಎನ್‌ಎಸ್‌ನ ವಿವಿಧ ವಿಭಾಗಗಳು ಮತ್ತು ಸಾರ್ವಜನಿಕ ಪರೀಕ್ಷೆ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ಇತ್ತೀಚೆಗೆ ಬಂಧಿಸಲಾಗಿದ್ದು, ಪರೀಕ್ಷೆ ಬರೆದಿದ್ದ ಸ್ನೇಹಿತ ಸದ್ಯ ಪರಾರಿಯಾಗಿದ್ದಾನೆ. ಆತನ ಪತ್ತೆಗೆ ಬಿಹಾರಕ್ಕೆ ತಂಡವನ್ನು ಕಳುಹಿಸಲಾಗಿದೆ. ಆದರೆ, ಆತನ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ. ರಾಜ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

The post MTS ಪರೀಕ್ಷೆಗೆ ಬೇರೊಬ್ಬನನ್ನು ಕಳಿಸಿದ ಯುವಕ, ಕರ್ತವ್ಯಕ್ಕೆ ಹಾಜರಾಗುವಾಗ ಸಿಕ್ಕಿಬಿದಿದ್ದಾನೆ. appeared first on Good News 24x7.

]]>