dkshivkumar Archives - Good News 24x7 https://www.goodnews24x7.com/tag/dkshivkumar/ Kannada Sun, 27 Sep 2026 10:24:18 +0000 en-US hourly 1 https://wordpress.org/?v=7.1.2 ದಸರಾ ಮಾದರಿ ಅದ್ದೂರಿ ಹಾಸನಾಂಬೆ ಉತ್ಸವ ,ಅ 29ರಿಂದ ನ 11ರವರೆಗೆ ವೈಭವದ ದರ್ಶನೋತ್ಸವ! https://www.goodnews24x7.com/grand-hassanamba-festival-modeled-after-dasara-spectacular-darshan-celebrations-from-oct-29-to-nov-11/ Sun, 27 Sep 2026 10:24:18 +0000 https://www.goodnews24x7.com/?p=10131 ಇತಿಹಾಸ ಪ್ರಸಿದ್ಧ ಹಾಸನಾಂಬೆ ಹಾಗೂ ಸಿದ್ದೇಶ್ವರ ಜಾತ್ರಾ ಮಹೋತ್ಸವದ ವಿಶೇಷ ಪೋಸ್ಟರ್ ಹಾಗೂ ಕ್ಯೂಆರ್ ಕೋಡ್ ಒಳಗೊಂಡ ಅಧಿಕೃತ ವೆಬ್‌ಸೈಟ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ಲೋಕಾರ್ಪಣೆಗೊಳಿಸಿದರು. ಈ ಬಾರಿ ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ಮೈಸೂರು…

The post ದಸರಾ ಮಾದರಿ ಅದ್ದೂರಿ ಹಾಸನಾಂಬೆ ಉತ್ಸವ ,ಅ 29ರಿಂದ ನ 11ರವರೆಗೆ ವೈಭವದ ದರ್ಶನೋತ್ಸವ! appeared first on Good News 24x7.

]]>
ಇತಿಹಾಸ ಪ್ರಸಿದ್ಧ ಹಾಸನಾಂಬೆ ಹಾಗೂ ಸಿದ್ದೇಶ್ವರ ಜಾತ್ರಾ ಮಹೋತ್ಸವದ ವಿಶೇಷ ಪೋಸ್ಟರ್ ಹಾಗೂ ಕ್ಯೂಆರ್ ಕೋಡ್ ಒಳಗೊಂಡ ಅಧಿಕೃತ ವೆಬ್‌ಸೈಟ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ಲೋಕಾರ್ಪಣೆಗೊಳಿಸಿದರು. ಈ ಬಾರಿ ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ಮೈಸೂರು ದಸರಾ ಮಾದರಿಯಲ್ಲಿ ಉತ್ಸವವನ್ನು ಅತ್ಯಂತ ವೈಭವಯುತವಾಗಿ ಆಚರಿಸಲಾಗುವುದು ಎಂದು ಅವರು ಘೋಷಿಸಿದರು. ಜೊತೆಗೆ, ದರ್ಶನದ ಪಾಸ್‌ಗಳನ್ನು ಅನಗತ್ಯವಾಗಿ ಹಂಚದೆ, ಸಾಮಾನ್ಯ ಭಕ್ತರ ಸುಗಮ ದರ್ಶನಕ್ಕೆ ಮೊದಲ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.

ಸಾಮಾನ್ಯ ಭಕ್ತರ ದರ್ಶನಕ್ಕೆ ಮೊದಲ ಆದ್ಯತೆ ಹಾಗೂ ಮುಖ್ಯಮಂತ್ರಿಗಳಿಗೆ ಆಹ್ವಾನ

ನಗರದ ಹಿಮ್ಸ್ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಧಾರ್ಮಿಕ ದತ್ತಿ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ದೇಗುಲದ ಬಾಗಿಲು ತೆರೆಯುವ ಶುಭ ದಿನದಂದೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಅವರ ಕುಟುಂಬದವರನ್ನು ಆಹ್ವಾನಿಸಲಾಗುವುದು ಎಂದರು. ಕಳೆದ ಎರಡು ವರ್ಷಗಳಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರ ಮಾರ್ಗದರ್ಶನದಲ್ಲಿ ಉತ್ತಮ ವ್ಯವಸ್ಥೆಗಳಾಗಿದ್ದು, ಈ ಬಾರಿ ಯಾವುದೇ ಗೊಂದಲಗಳಿಲ್ಲದೆ ಮತ್ತಷ್ಟು ವಿಭಿನ್ನ ಹಾಗೂ ಅಚ್ಚುಕಟ್ಟಾಗಿ ಉತ್ಸವ ನಡೆಸಲು ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಿದೆ ಎಂದು ತಿಳಿಸಿದರು.

ಸಾಂಸ್ಕೃತಿಕ ವೈಭವ ಹಾಗೂ ಸಾಂಪ್ರದಾಯಿಕ ದನಗಳ ಜಾತ್ರೆಗೆ ಪ್ರೋತ್ಸಾಹ

ಉತ್ಸವದ ಭಾಗವಾಗಿ ಜಿಲ್ಲೆಯ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಸೋಬಾನೆ ಪದ, ರಂಗಗೀತೆ ಹಾಗೂ ನಾಡಿನ ವೈವಿಧ್ಯಮಯ ಕಲಾ ಪ್ರಕಾರಗಳಿಗೆ ವೇದಿಕೆ ಕಲ್ಪಿಸಲಾಗುವುದು. ಹಾಸನದ ಐತಿಹಾಸಿಕ ದನಗಳ ಜಾತ್ರೆಯ ಪರಂಪರೆಯನ್ನು ಮುಂದುವರಿಸಲು ಅತ್ಯುತ್ತಮ ರಾಸುಗಳ ಪ್ರದರ್ಶನ ಆಯೋಜಿಸಿ ಬಹುಮಾನ ನೀಡಲಾಗುವುದು. ಇದರೊಂದಿಗೆ, ಕ್ರೀಡಾ ಉತ್ಸಾಹಿಗಳಿಗಾಗಿ ಕ್ರಿಕೆಟ್ ಪಂದ್ಯಾವಳಿ ಹಾಗೂ ಸಾಂಪ್ರದಾಯಿಕ ರಂಗೋಲಿ ಸ್ಪರ್ಧೆಗಳನ್ನು ಸಹ ಏರ್ಪಡಿಸಲು ಸಚಿವರು ನಿರ್ದೇಶನ ನೀಡಿದ್ದಾರೆ.

The post ದಸರಾ ಮಾದರಿ ಅದ್ದೂರಿ ಹಾಸನಾಂಬೆ ಉತ್ಸವ ,ಅ 29ರಿಂದ ನ 11ರವರೆಗೆ ವೈಭವದ ದರ್ಶನೋತ್ಸವ! appeared first on Good News 24x7.

]]>