doctor Archives - Good News 24x7 https://www.goodnews24x7.com/tag/doctor/ Kannada Wed, 06 May 2026 10:05:46 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg doctor Archives - Good News 24x7 https://www.goodnews24x7.com/tag/doctor/ 32 32 ಉಪ್ಪಾರ ಸಮಾಜದ ವೈದ್ಯೆ ಅಪಘಾತದಲ್ಲಿ ನಿ*ಧನ! https://www.goodnews24x7.com/uppara-community-doctor-dies-in-accident/ Wed, 06 May 2026 10:05:46 +0000 https://www.goodnews24x7.com/?p=9497 ಉಪ್ಪಾರ‌ ಸಮುದಾಯದ ವಿದ್ಯಾರ್ಥಿಗಳಿಗೆ ಸ್ಪೂರ್ತಿಸೆಲೆಯಾಗಿದ್ದ, ಜನರ ನೆಚ್ಚಿನ ಪ್ರಸೂತಿ ವೈದ್ಯರಾಗಿ ಜನಮನ್ನಣೆ ಗಳಿಸಿದ್ದ ಡಾ. ಗೌತಮಿ ಅಪಘಾತದಲ್ಲಿ ನಿಧನರಾಗಿದ್ದು ಸಮುದಾಯಕ್ಕೆ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಭರಿಸಲಾಗದ ನಷ್ಠ, ದುಃಖ ಉಂಟಾಗಿದೆ.‌ ಮೈಸೂರು ಕೆ.ಆರ್.ಆಸ್ಪತ್ರೆ ಮತ್ತು ಮಂಡ್ಯ ಆಸ್ಪತ್ರೆಯಲ್ಲಿ ಪ್ರಸೂತಿ ವೈದ್ಯರಾಗಿ ಉತ್ತಮ…

The post ಉಪ್ಪಾರ ಸಮಾಜದ ವೈದ್ಯೆ ಅಪಘಾತದಲ್ಲಿ ನಿ*ಧನ! appeared first on Good News 24x7.

]]>

ಉಪ್ಪಾರ‌ ಸಮುದಾಯದ ವಿದ್ಯಾರ್ಥಿಗಳಿಗೆ ಸ್ಪೂರ್ತಿಸೆಲೆಯಾಗಿದ್ದ, ಜನರ ನೆಚ್ಚಿನ ಪ್ರಸೂತಿ ವೈದ್ಯರಾಗಿ ಜನಮನ್ನಣೆ ಗಳಿಸಿದ್ದ ಡಾ. ಗೌತಮಿ ಅಪಘಾತದಲ್ಲಿ ನಿಧನರಾಗಿದ್ದು ಸಮುದಾಯಕ್ಕೆ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಭರಿಸಲಾಗದ ನಷ್ಠ, ದುಃಖ ಉಂಟಾಗಿದೆ.‌

ಮೈಸೂರು ಕೆ.ಆರ್.ಆಸ್ಪತ್ರೆ ಮತ್ತು ಮಂಡ್ಯ ಆಸ್ಪತ್ರೆಯಲ್ಲಿ ಪ್ರಸೂತಿ ವೈದ್ಯರಾಗಿ ಉತ್ತಮ ಕಾರ್ಯ ನಿರ್ವಹಣೆಯಿಂದ ಜನಪ್ರಿಯರಾಗಿದ್ದ ಮೈಸೂರಿನ ಮೇಟಗಳ್ಳಿ ಶ್ರೀಮತಿ ಮಂಜುಳಾ ಮತ್ತು‌ ನಾಗರಾಜು ದಂಪತಿ ಪುತ್ರಿ ಡಾ.ಗೌತಮಿ ಅವರು 5 ವರ್ಷದ ವೈದ್ಯಕೀಯ ಸೇವೆ ಬಳಿಕ ಆಂದ್ರಪ್ರದೇಶದ ವಿಶಾಖಪಟ್ಟಣಂ ನಲ್ಲಿ ಎಂಎಸ್ ಮುಗಿಸಿ ಒಂದು ತಿಂಗಳ‌ ತರಬೇತಿ ಹಂತದಲ್ಲಿದ್ದರು.

ಕೆಲವೇ ದಿನಗಳಲ್ಲಿ ಎಂಡಿ ಮಾಡಲು ವಿದೇಶಕ್ಕೆ ತೆರಳುವವರಿದ್ದರು.‌ಆದರೆ, ದಿನಾಂಕ 5-5-2026 ಮಂಗಳವಾರ ರಾತ್ರಿ ಸ್ಕೂಟರ್ ನಿಂದ‌ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ನಿಧನರಾಗಿದ್ದಾರೆ. ಡಾ.ಗೌತಮಿ ಅವರ ನಿಧನ ಆರೋಗ್ಯ ಕ್ಷೇತ್ರಕ್ಕೆ, ಸಮುದಾಯಕ್ಕೆ‌ ತುಂಬಲಾರದ ನಷ್ಟವಾಗಿದೆ. ಭಗವಂತನು ಮೃತರ ಆತ್ಮಕ್ಕೆ ಶಾಂತಿ ಕರುಣಿಸಿ, ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತದೆ.

The post ಉಪ್ಪಾರ ಸಮಾಜದ ವೈದ್ಯೆ ಅಪಘಾತದಲ್ಲಿ ನಿ*ಧನ! appeared first on Good News 24x7.

]]>
ಯುವ ಜನತೆ ಸಾಯುತ್ತಿರುವುದಕ್ಕೆ ಕಾರಣ ಕೋವಿಡ್ ಲಸಿಕೆ ಅಲ್ವವೇ ಅಲ್ಲ; ಅಸಲಿ ಸತ್ಯ ಬಿಚ್ಚಿಟ್ಟ ಡಾಕ್ಟರ್! https://www.goodnews24x7.com/the-reason-why-young-people-are-dying-is-not-the-covid-vaccine-at-all-doctor-reveals-the-real-truththe-reason-why-young-people-are-dying-is-not-the-covid-vaccine-at-all-doctor-reveals-the-real-truth/ Fri, 06 Mar 2026 11:35:34 +0000 https://www.goodnews24x7.com/?p=8713 ಯುವ ಜನತೆ ಸಾಯುತ್ತಿರುವುದಕ್ಕೆ ಕಾರಣ ಕೋವಿಡ್ ಲಸಿಕೆ ಅಲ್ವವೇ ಅಲ್ಲ; ಅಸಲಿ ಸತ್ಯ ಬಿಚ್ಚಿಟ್ಟ ಡಾಕ್ಟರ್! ಆಕಸ್ಮಿಕವಾಗಿ ಸಾವನ್ನಪ್ಪುವ ಯುವ ಜನರ ಸಂಖ್ಯೆ ಹೆಚ್ಚುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಈ ಮರಣಗಳಿಗೆ ಕೋವಿಡ್-19 ಲಸಿಕೆ ಕಾರಣವಾಗಿರಬಹುದೇ? ಎಂಬ ಊಹಾಪೋಹಗಳು ಸಾಮಾಜಿಕ ಮಾಧ್ಯಮಗಳಲ್ಲಿ…

The post ಯುವ ಜನತೆ ಸಾಯುತ್ತಿರುವುದಕ್ಕೆ ಕಾರಣ ಕೋವಿಡ್ ಲಸಿಕೆ ಅಲ್ವವೇ ಅಲ್ಲ; ಅಸಲಿ ಸತ್ಯ ಬಿಚ್ಚಿಟ್ಟ ಡಾಕ್ಟರ್! appeared first on Good News 24x7.

]]>

ಯುವ ಜನತೆ ಸಾಯುತ್ತಿರುವುದಕ್ಕೆ ಕಾರಣ ಕೋವಿಡ್ ಲಸಿಕೆ ಅಲ್ವವೇ ಅಲ್ಲ; ಅಸಲಿ ಸತ್ಯ ಬಿಚ್ಚಿಟ್ಟ ಡಾಕ್ಟರ್!

ಆಕಸ್ಮಿಕವಾಗಿ ಸಾವನ್ನಪ್ಪುವ ಯುವ ಜನರ ಸಂಖ್ಯೆ ಹೆಚ್ಚುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಈ ಮರಣಗಳಿಗೆ ಕೋವಿಡ್-19 ಲಸಿಕೆ ಕಾರಣವಾಗಿರಬಹುದೇ? ಎಂಬ ಊಹಾಪೋಹಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡಿವೆ. ವೈಜ್ಞಾನಿಕ ಅಧ್ಯಯನಗಳು ಈ ಊಹಾಪೋಹಗಳಿಗೆ ಸ್ಪಷ್ಟ ಉತ್ತರ ನೀಡಿದೆ. ಈ ಬಗ್ಗೆ ಹೆಚ್ಚಿನ ವಿವರವನ್ನು ಎಸ್.ಡಿ.ಎಂ ಕ್ಷೇಮವನದ ಮುಖ್ಯ ಸ್ವಾಸ್ಥ್ಯ ಅಧಿಕಾರಿ ಡಾ. ನರೇಂದ್ರ ಕೆ ಶೆಟ್ಟಿ ಅವರು ಹಂಚಿಕೊಂಡಿದ್ದಾರೆ. ಹಾಗಾದರೆ ಕೋವಿಡ್ ಲಸಿಕೆಗೂ ಯುವಜನರಲ್ಲಿ ಸಂಭವಿಸುತ್ತಿರುವ ಆಕಸ್ಮಿಕ ಸಾವಿಗೂ ಸಂಬಂಧವಿದೆಯೇ? ಸಣ್ಣ ವಯಸ್ಸಿನಲ್ಲಿಯೇ ಹೃದಯಾಘಾತವಾಗುವುದಕ್ಕೆ ಕಾರಣವೇನು? ಎಂಬುದನ್ನು ತಿಳಿದುಕೊಳ್ಳಿ.

ಇತ್ತೀಚಿಗೆ ಭಾರತದಲ್ಲಿ ಆಕಸ್ಮಿಕವಾಗಿ ಸಾವನ್ನಪ್ಪುವ ಯುವ ಜನರ ಸಂಖ್ಯೆ ಹೆಚ್ಚುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಈ ರೀತಿಯ ಮರಣಗಳಿಗೆ ಕೋವಿಡ್- 19 ಲಸಿಕೆ ಕಾರಣವಾಗಿರಬಹುದೇ ಎಂಬ ಪ್ರಶ್ನೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಏನೂ ಅರಿಯದ ಜನ ಇದನ್ನು ಸತ್ಯ ಎಂದು ನಂಬಿದ್ದಾರೆ. ಆದರೆ ವೈಜ್ಞಾನಿಕ ಅಧ್ಯಯನಗಳು ಈ ಊಹಾಪೋಹಗಳಿಗೆ ಸ್ಪಷ್ಟ ಉತ್ತರ ನೀಡಿದೆ. ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಸಂಯುಕ್ತವಾಗಿ ನಡೆಸಿದ ಅಧ್ಯಯನದ ಪ್ರಾಥಮಿಕ ಫಲಿತಾಂಶಗಳು ಇದಕ್ಕೆ ಸ್ಪಷ್ಟ ಉತ್ತರ ನೀಡಿದೆ. ಈ ಬಗ್ಗೆ ಹೆಚ್ಚಿನ ವಿವರವನ್ನು ಎಸ್.ಡಿ.ಎಂ ಕ್ಷೇಮವನದ ಮುಖ್ಯ ಸ್ವಾಸ್ಥ್ಯ ಅಧಿಕಾರಿ ಡಾ. ನರೇಂದ್ರ ಕೆ ಶೆಟ್ಟಿ ಅವರು ಹಂಚಿಕೊಂಡಿದ್ದಾರೆ.

ಕೋವಿಡ್ ಲಸಿಕೆಗೂ ಯುವಜನರಲ್ಲಿ ಸಂಭವಿಸುತ್ತಿರುವ ಆಕಸ್ಮಿಕ ಸಾವಿಗೂ ಸಂಬಂಧವಿದೆಯೇ?
ಡಾ. ನರೇಂದ್ರ ಕೆ ಶೆಟ್ಟಿ ಹೇಳುವ ಪ್ರಕಾರ, ಅಧ್ಯಯನದ ಪ್ರಾಥಮಿಕ ಫಲಿತಾಂಶಗಳು ಕೋವಿಡ್- 19 ಲಸಿಕೆ ಮತ್ತು ಯುವಜನರಲ್ಲಿ ಸಂಭವಿಸುತ್ತಿರುವ ಆಕಸ್ಮಿಕ ಮರಣಗಳ ನಡುವೆ ಯಾವುದೇ ನೇರ ಸಂಬಂಧವಿಲ್ಲ ಎಂಬುದನ್ನು ವಿಶ್ಲೇಷಿಸಿದೆ. ಬದಲಾಗಿ, ಯುವಜನರಲ್ಲಿ ಕಾಣಿಸಿಕೊಳ್ಳುವ ಆಕಸ್ಮಿಕ ಹೃದಯಾಘಾತ ಮತ್ತು ಹಠಾತ್ ಆಗಿ ಸಂಭವಿಸುವ ಸಾವು (Sudden Cardiac Death – SCD) ಅನೇಕ ಕಾರಣಗಳಿಂದ ಉಂಟಾಗುತ್ತಿರಬಹುದು ಎಂದು ವಿವರಿಸಿದೆ. ಪಾಶ್ಚಾತ್ಯ ದೇಶಗಳಲ್ಲಿ ನಡೆದ ಹಲವು ಅಧ್ಯಯನಗಳು ಹೃದಯ ಸ್ನಾಯುಕೋಶದ ರೋಗಗಳು (ಕಾರ್ಡಿಯೊಮಯೋಪಥಿಗಳು) ಮತ್ತು ಹೃದಯದ ವಿದ್ಯುದ್ವಿಚಲನ ವ್ಯತ್ಯಯಗಳು (ಅರಿದಮಿಯಾಸ್) ಯುವಜನತೆಯಲ್ಲಿ ಹೆಚ್ಚುತ್ತಿರುವ ಪ್ರಮುಖ ಕಾರಣಗಳೆಂದು ಗುರುತಿಸಿವೆ. ಆದರೆ ಭಾರತೀಯ ಪರಿಸ್ಥಿತಿಯಲ್ಲಿ ಇಂತಹ ಸಮಗ್ರ ಅಧ್ಯಯನಗಳ ಕೊರತೆ ಇತ್ತು. ಈ ಕೊರತೆಯನ್ನು ನೀಗಿಸುವ ಉದ್ದೇಶದಿಂದಲೇ AIIMS– ICMR ಅಧ್ಯಯನವನ್ನು ಕೈಗೆತ್ತಿಕೊಳ್ಳಲಾಯಿತು. ಅಧ್ಯಯನದಲ್ಲಿ ಪ್ರಾಥಮಿಕವಾಗಿ ಕಂಡುಬಂದ ಮಾಹಿತಿಗಳು, ಬದಲಾಯಿಸಲಾಗದ ಕಾರಣಗಳ ಜೊತೆಗೆ ಬದಲಾಯಿಸಬಹುದಾದ ಜೀವನಶೈಲಿ ಅಂಶಗಳು ಯುವಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ ಎಂಬುದನ್ನು ಸ್ಪಷ್ಟಪಡಿಸುತ್ತವೆ.

ಸಣ್ಣ ವಯಸ್ಸಿನಲ್ಲಿಯೇ ಹೃದಯಾಘಾತವಾಗುವುದಕ್ಕೆ ಕಾರಣವೇನು?
ಧೂಮಪಾನ, ಮದ್ಯಪಾನ, ದೈಹಿಕ ಚಟುವಟಿಕೆಯ ಕೊರತೆ, ಅಸಮರ್ಪಕ ನಿದ್ರೆ ಮತ್ತು ನಿರಂತರ ಮಾನಸಿಕ ಒತ್ತಡವು ಯುವಜನರಲ್ಲಿ ಹೃದಯ ಸಂಬಂಧಿತ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತವೆ. ಮದ್ಯಪಾನ ಮತ್ತು ಧೂಮಪಾನವು ಕೊರೊನರಿ ಆರ್ಟರಿ ರೋಗ, ಹೃದಯಾಘಾತ (ಮೈಕಾರ್ಡಿಯಲ್ ಇನ್ಫಾರ್ಕ್ಷನ್) ಮತ್ತು ಹೃದಯ ಬಡಿತದ ಅಸಮತೋಲನಗಳಿಗೆ ಕಾರಣವಾಗುತ್ತವೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ ದೀರ್ಘಕಾಲದ ಕೆಲಸ, ನಿರ್ದಿಷ್ಟ ಸಮಯವನ್ನು ಕೆಲಸಕ್ಕೆ ಇಡದಿರುವುದು ಮತ್ತು ಕೆಲಸದ ಒತ್ತಡವು ಹೃದಯ ರಕ್ತನಾಳ ಸಂಬಂಧಿತ ಸಂಕೀರ್ಣತೆಗಳನ್ನು ಉಂಟುಮಾಡುತ್ತವೆ. ಮಧ್ಯವಯಸ್ಕರಿಗೆ ಹೋಲಿಸಿದರೆ, ಹೃದಯಾಘಾತಕ್ಕೆ ಒಳಗಾಗುವ ಯುವ ವಯಸ್ಕರು ಹೆಚ್ಚು ಮಾನಸಿಕ ಒತ್ತಡವನ್ನು ಅನುಭವಿಸಿರುವುದು ವರದಿಯಲ್ಲಿ ಬಹಿರಂಗವಾಗಿದ್ದು, ಒತ್ತಡ ಸಣ್ಣ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ದಾರಿ ಮಾಡಿಕೊಡುವ ಪ್ರಮುಖ ಕಾರಣ ಎಂಬುದು ತಿಳಿದು ಬಂದಿದೆ.

ಲಸಿಕೆಗಳ ಕುರಿತು ಹರಡುತ್ತಿರುವ ತಪ್ಪು ಕಲ್ಪನೆಗಳನ್ನು ನಿವಾರಿಸುವುದು ಮಾತ್ರವಲ್ಲದೆ, ತಡೆಗಟ್ಟಬಹುದಾದ ಅಪಾಯಕಾರಕ ಅಂಶಗಳತ್ತ ಗಮನ ಹರಿಸಬೇಕಾಗಿದೆ. ಅದಕ್ಕಾಗಿಯೇ ಯುವಜನರಲ್ಲಿ ಮುಂಚಿತ ತಪಾಸಣೆ, ಆರೋಗ್ಯಕರ ಜೀವನಶೈಲಿಯ ಅಳವಡಿಕೆ, ಸಕಾರಾತ್ಮಕ ಕೆಲಸದ ವಾತಾವರಣ ನಿರ್ಮಾಣ ಮತ್ತು ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ಅಕಾಲಿಕ ಮರಣಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ ಭಾರತದಲ್ಲಿ ಯುವ ವಯಸ್ಕರ ಆಕಸ್ಮಿಕ ಮರಣಗಳ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಇನ್ನಷ್ಟು ಸಂಶೋಧನೆಗಳ ಅಗತ್ಯವಿದೆ. ಇಂತಹ ಅಧ್ಯಯನಗಳ ಆಧಾರದ ಮೇಲೆ ರೂಪುಗೊಳ್ಳುವ ಸ್ಪಷ್ಟ ಉತ್ತರ ಯುವಜನರ ಅಮೂಲ್ಯ ಜೀವಗಳನ್ನು ರಕ್ಷಿಸಲು ಸಹಾಯಕವಾಗಬಹುದು.

 

The post ಯುವ ಜನತೆ ಸಾಯುತ್ತಿರುವುದಕ್ಕೆ ಕಾರಣ ಕೋವಿಡ್ ಲಸಿಕೆ ಅಲ್ವವೇ ಅಲ್ಲ; ಅಸಲಿ ಸತ್ಯ ಬಿಚ್ಚಿಟ್ಟ ಡಾಕ್ಟರ್! appeared first on Good News 24x7.

]]>
ಬೆಂಗಳೂರು ನಗರದಲ್ಲಿ ಸತತ ಮಳೆಯ ಪರಿಣಾಮ ವೈರಲ್ ಜ್ವರ ಪ್ರಕರಣಗಳಲ್ಲಿ ಹೆಚ್ಚಳ. https://www.goodnews24x7.com/viral-fever-cases-increase-in-bengaluru-city-due-to-continuous-rains/ Tue, 19 Aug 2025 05:39:41 +0000 https://www.goodnews24x7.com/?p=6384 ಬೆಂಗಳೂರು : ನಗರದ ಹವಾಮಾನದಲ್ಲಿ ನಡೆಯುತ್ತಿರುವ ಅನಿಯಮಿತ ಬದಲಾವಣೆಯ ಹಿನ್ನೆಲೆ, ಕಳೆದ ಒಂದು ವಾರದಿಂದ ಸಂಭವಿಸುತ್ತಿರುವ ನಿರಂತರ ಮಳೆಯು ವೈರಲ್ ಜ್ವರ ಪ್ರಕರಣಗಳಲ್ಲಿ ಏರಿಕೆ ತರಿಸಿದೆ. ವೈದ್ಯಕೀಯ ವರದಿಗಳ ಪ್ರಕಾರ, ಮಕ್ಕಳಲ್ಲಿ ಶೇ.5 ರಿಂದ 10 ರಷ್ಟು ಮತ್ತು ಒಟ್ಟು ಒಪಿಡಿ…

The post ಬೆಂಗಳೂರು ನಗರದಲ್ಲಿ ಸತತ ಮಳೆಯ ಪರಿಣಾಮ ವೈರಲ್ ಜ್ವರ ಪ್ರಕರಣಗಳಲ್ಲಿ ಹೆಚ್ಚಳ. appeared first on Good News 24x7.

]]>

ಬೆಂಗಳೂರು : ನಗರದ ಹವಾಮಾನದಲ್ಲಿ ನಡೆಯುತ್ತಿರುವ ಅನಿಯಮಿತ ಬದಲಾವಣೆಯ ಹಿನ್ನೆಲೆ, ಕಳೆದ ಒಂದು ವಾರದಿಂದ ಸಂಭವಿಸುತ್ತಿರುವ ನಿರಂತರ ಮಳೆಯು ವೈರಲ್ ಜ್ವರ ಪ್ರಕರಣಗಳಲ್ಲಿ ಏರಿಕೆ ತರಿಸಿದೆ. ವೈದ್ಯಕೀಯ ವರದಿಗಳ ಪ್ರಕಾರ, ಮಕ್ಕಳಲ್ಲಿ ಶೇ.5 ರಿಂದ 10 ರಷ್ಟು ಮತ್ತು ಒಟ್ಟು ಒಪಿಡಿ ರೋಗಿಗಳಲ್ಲಿ ಶೇ.15-20 ರಷ್ಟು ವೈರಲ್‌ ಫೀವರ್‌ ಪ್ರಕರಣಗಳು ಹೆಚ್ಚಾಗಿವೆ.

ಹವಾಮಾನ ಬದಲಾವಣೆಯಿಂದಾಗಿ ಜ್ವರ, ಕೆಮ್ಮು, ಶೀತ, ಗಂಟಲು ನೋವು, ವಾಂತಿ, ಅತಿಸಾರ ಮುಂತಾದ ಲಕ್ಷಣಗಳೊಂದಿಗೆ ಬಾಲಕರು ಹಾಗೂ ದೊಡ್ಡವರು ಆಸ್ಪತ್ರೆಗಳ ಒಪಿಡಿಗೆ ಬರ್ತಿದ್ದಾರೆ. ಜೊತೆಗೆ ಡೆಂಗ್ಯೂ ಮತ್ತು ಟೈಫಾಯ್ಡ್ ಪ್ರಕರಣಗಳೂ ಸಹ ಕಾಣಿಸಿಕೊಂಡಿವೆ.

ವೈದ್ಯರ ಅಭಿಪ್ರಾಯ
ಕೆ.ಸಿ. ಜನರಲ್ ಆಸ್ಪತ್ರೆಯ ವೈದ್ಯ ಡಾ. ಸುರೇಶ್ ಹೇಳುವಂತೆ, “ಮಕ್ಕಳಲ್ಲಿಯಷ್ಟೇ ಅಲ್ಲದೆ, ದೊಡ್ಡವರಲ್ಲೂ ವೈರಲ್ ಜ್ವರ ಪ್ರಕರಣಗಳು ಹೆಚ್ಚಾಗಿವೆ. ಬಹುಪಾಲು ಪ್ರಕರಣಗಳು ಮೂರು ನಾಲ್ಕು ದಿನಗಳಲ್ಲಿ ಚೇತರಿಸಿಕೊಳ್ಳುತ್ತವೆ.”

ವಾಣಿವಿಲಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಸವಿತಾ ಸಿ. ಅವರು, “ಚಳಿಯ ವಾತಾವರಣದಿಂದಾಗಿ ಗರ್ಭಿಣಿಯರಲ್ಲಿಯೂ ಜ್ವರ, ನೆಗಡಿಯಂತಹ ಲಕ್ಷಣಗಳ ಪ್ರಮಾಣದಲ್ಲಿ ಏರಿಕೆ ಕಂಡುಬರುತ್ತಿದೆ. ಇದು ಸಾಮಾನ್ಯವಾಗಿ ರೆಸ್ಪಿರೇಟರಿ ವೈರಸ್‌ನಿಂದ ಉಂಟಾಗುವ ಅಸ್ವಸ್ಥತೆ” ಎಂದರು.

ಆರೋಗ್ಯ ಕಾಳಜಿ ಅಗತ್ಯ
ಕೆ.ಸಿ. ಜನರಲ್, ವಿಕ್ಟೋರಿಯಾ, ಸಿ.ವಿ. ರಾಮನ್ ನಗರ, ವಾಣಿವಿಲಾಸ್ ಸೇರಿ ಬಹುತೇಕ ಸರ್ಕಾರಿ ಆಸ್ಪತ್ರೆಗಳ ಒಪಿಡಿಯಲ್ಲಿ ಅರ್ಧಕ್ಕಿಂತ ಹೆಚ್ಚು ರೋಗಿಗಳು ವೈರಲ್ ಜ್ವರದಿಂದ ಬಳಲುತ್ತಿರುವುದಾಗಿ ವರದಿಯಾಗಿದೆ.

ವೈದ್ಯರ ಸಲಹೆ:

  • ಮಕ್ಕಳನ್ನು ಬೆಚ್ಚಗಿರಿಸಲು ಯತ್ನಿಸಿ
  • ಮಳೆ ಅಥವಾ ಚಳಿಯಲ್ಲಿ ಹೊರಗೆ ಹೋಗದಂತೆ ತಡೆಗಟ್ಟಿರಿ
  • ಜ್ವರ ಕಾಣಿಸಿಕೊಂಡರೆ ನಿರ್ಲಕ್ಷಿಸದೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ
  • ಆರೋಗ್ಯಕರ ಆಹಾರ ಮತ್ತು ನಿದ್ರೆ ಕಾಪಾಡಿಕೊಳ್ಳಿ

ಬೆಂಗಳೂರು ನಿವಾಸಿಗಳು ಹವಾಮಾನದ ಬದಲಾವಣೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ನಿಜವಾಗಿಯೂ ಅಗತ್ಯವಾಗಿದೆ ಎಂದು ವೈದ್ಯರು ಎಚ್ಚರಿಸುತ್ತಿದ್ದಾರೆ.

 

The post ಬೆಂಗಳೂರು ನಗರದಲ್ಲಿ ಸತತ ಮಳೆಯ ಪರಿಣಾಮ ವೈರಲ್ ಜ್ವರ ಪ್ರಕರಣಗಳಲ್ಲಿ ಹೆಚ್ಚಳ. appeared first on Good News 24x7.

]]>
ನಿಮಗೇನಾದ್ರೂ ನೆಲದ ಮೇಲೆ ಮಲಗುವ ಅಭ್ಯಾಸ ಇದ್ರೆ, ವೈದ್ಯರು ಏನ್ ಹೇಳ್ತಾರೆ ನೋಡಿ…. https://www.goodnews24x7.com/%e0%b2%a8%e0%b2%bf%e0%b2%ae%e0%b2%97%e0%b3%87%e0%b2%a8%e0%b2%be%e0%b2%a6%e0%b3%8d%e0%b2%b0%e0%b3%82-%e0%b2%a8%e0%b3%86%e0%b2%b2%e0%b2%a6-%e0%b2%ae%e0%b3%87%e0%b2%b2%e0%b3%86-%e0%b2%ae%e0%b2%b2/ Wed, 09 Apr 2025 11:21:25 +0000 https://www.goodnews24x7.com/?p=3130 ತುಂಬಾ ಜನರಿಗೆ ನೆಲದ ಮೇಲೆ ಮಲಗುವ ಅಭ್ಯಾಸ ಇರುತ್ತದೆ. ಅದೆಂತಹದ್ದೇ ಲಗ್ಶುರಿ ಹಾಸಿಗೆ ಇರಲಿ ನೆಲಕ್ಕಿಂತ ಒಳ್ಳೆಯದು ಇಲ್ಲ ಎನ್ನುವವರು ಈಗಿನ ಕಾಲದಲ್ಲಿಯೂ ಹೆಚ್ಚಾಗೆ ಇದ್ದಾರೆ. ಆದರೆ ಆ ರೀತಿಯ ಯಾವುದೇ ಹಾಸಿಗೆ ಇಲ್ಲದೆ ಮಲಗಿಕೊಳ್ಳುವುದು ಎಷ್ಟು ಉತ್ತಮ…. ಅದು ಯಾವ…

The post ನಿಮಗೇನಾದ್ರೂ ನೆಲದ ಮೇಲೆ ಮಲಗುವ ಅಭ್ಯಾಸ ಇದ್ರೆ, ವೈದ್ಯರು ಏನ್ ಹೇಳ್ತಾರೆ ನೋಡಿ…. appeared first on Good News 24x7.

]]>

ತುಂಬಾ ಜನರಿಗೆ ನೆಲದ ಮೇಲೆ ಮಲಗುವ ಅಭ್ಯಾಸ ಇರುತ್ತದೆ. ಅದೆಂತಹದ್ದೇ ಲಗ್ಶುರಿ ಹಾಸಿಗೆ ಇರಲಿ ನೆಲಕ್ಕಿಂತ ಒಳ್ಳೆಯದು ಇಲ್ಲ ಎನ್ನುವವರು ಈಗಿನ ಕಾಲದಲ್ಲಿಯೂ ಹೆಚ್ಚಾಗೆ ಇದ್ದಾರೆ. ಆದರೆ ಆ ರೀತಿಯ ಯಾವುದೇ ಹಾಸಿಗೆ ಇಲ್ಲದೆ ಮಲಗಿಕೊಳ್ಳುವುದು ಎಷ್ಟು ಉತ್ತಮ…. ಅದು ಯಾವ ರೀತಿಯ ಪ್ರಯೋಜನಗಳನ್ನು ನೀಡುತ್ತದೆ? ದೇಹಕ್ಕೆ ಒಳ್ಳೆಯದು ಅಲ್ಲವೇ ಎಂಬ ಗೊಂದಲ ಎಲ್ಲರನ್ನೂ ಕಾಡಿಯೇ ಇರುತ್ತದೆ. ಆದರೆ ವೈದ್ಯರು ಈ ಅಭ್ಯಾಸ ದೇಹಕ್ಕೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ. ಇದರಿಂದ ದೇಹಕ್ಕೆ ಅನೇಕ ರೀತಿಯ ಪ್ರಯೋಜನಗಳಿವೆ ಎನ್ನುತ್ತಾರೆ ವೈದ್ಯರು. ಹಾಗಿದ್ದರೆ ಇದರಿಂದ ಯಾವ ರೀತಿಯ ಪ್ರಯೋಜನಗಳು ಅಥವಾ ಲಾಭಗಳು ಇವೆ ಎಂಬುದನ್ನು ತಿಳಿದುಕೊಳ್ಳಿ.

ಕೆಲವರು ಎಷ್ಟೇ ದಪ್ಪನೆಯ ಹಾಸಿಗೆ ಇದ್ದರೂ ನೆಲದ ಮೇಲೆ ಮಲಗುವುದಕ್ಕೆ ಇಷ್ಟಪಡುತ್ತಾರೆ. ಮಧ್ಯಾಹ್ನವಾಗಲಿ, ರಾತ್ರಿಯಾಗಲಿ ಚೊಕ್ಕದಾದ ನೆಲದ ಮೇಲೆ ಹಾಯಾಗಿ ಮಲಗುವವರನ್ನು ನಾವು ನೋಡಿರುತ್ತೇವೆ. ಅದರಲ್ಲಿಯೂ ಈ ಬೇಸಿಗೆಯಲ್ಲಿ ಇಂತಹ ಅಭ್ಯಾಸಗಳನ್ನು ರೂಢಿಸಿಕೊಂಡಿರುವವರು ಪ್ರತಿಯೊಬ್ಬರ ಮನೆಯಲ್ಲಿಯೂ ಇರಬಹುದು. ಕೆಲವರಿಗಂತೂ ಹಾಸಿಗೆಯ ಮೇಲೆ ಮಲಗಿದರೆ ಮೈ- ಕೈ ನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಅವರು ನೆಲದ ಮೇಲೆ ಸುಖವಾಗಿ ನಿದ್ರೆ ಮಾಡಲು ಬಯಸುತ್ತಾರೆ. ಆದರೆ ಇದು ಒಳ್ಳೆಯ ಅಭ್ಯಾಸವೇ? ಅಲ್ಲವೇ ಎಂಬುದು ಎಲ್ಲರನ್ನೂ ಕಾಡುವ ಪ್ರಶ್ನೆ. ವೈದ್ಯರು ಈ ಅಭ್ಯಾಸ ಬಹಳ ಒಳ್ಳೆಯದು ಎಂದು ಹೇಳುತ್ತಾರೆ. ಏಕೆ ಗೊತ್ತಾ? ಇಲ್ಲಿದೆ ಮಾಹಿತಿ.

ಮಣ್ಣಿನ ಮೇಲ್ಮೈ ದೇಹಕ್ಕೆ ನೈಸರ್ಗಿಕ ಶಕ್ತಿಯನ್ನು ನೀಡುತ್ತದೆ. ಈ ರೀತಿಯ ಅಭ್ಯಾಸ ಬೆನ್ನುಮೂಳೆಯನ್ನು ಗಟ್ಟಿಗೊಳಿಸಲು ಮತ್ತು ಬೆನ್ನು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಇದು ದೇಹಕಕ್ಕೆ ವಿಶ್ರಾಂತಿ ನೀಡುವ ಮೂಲಕ ದಣಿವನ್ನು ಕಡಿಮೆ ಮಾಡುತ್ತದೆ. ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತದೆ ಮತ್ತು ನಿದ್ರಾಹೀನತೆಯಂತಹ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ನಾವು ನೆಲದ ಮೇಲೆ ಮಲಗಿದಾಗ ನಮ್ಮ ದೇಹ ನೇರವಾಗಿರುತ್ತದೆ ಇದರಿಂದ ದೇಹಕ್ಕೆ ವಿಶ್ರಾಂತಿ ಸಿಗುವುದಲ್ಲದೆ ಸ್ನಾಯುಗಳು ಸಡಿಲಗೊಳ್ಳುತ್ತದೆ. ನೋವುಗಳು ಕ್ರಮೇಣ ಕಡಿಮೆಯಾಗುತ್ತದೆ. ಹಾಗಾದರೆ ಇದರಿಂದ ಯಾವ ರೀತಿಯ ಪ್ರಯೋಜನಗಳಿವೆ? ಈ ಬಗ್ಗೆ ವೈದ್ಯರ ಅಭಿಪ್ರಾಯವೇನು ತಿಳಿದುಕೊಳ್ಳಿ.
ಒಟ್ಟಿನಲ್ಲಿ ಹೇಳುವುದಾದರೆ ಹಾಸಿಗೆಯ ಮೇಲೆ ಮಲಗುವುದಕ್ಕಿಂತ ನೆಲದ ಮೇಲೆ ಮಲಗುವುದು ಉತ್ತಮ ಎಂದು ವೈದ್ಯರು ಹೇಳುತ್ತಾರೆ.

The post ನಿಮಗೇನಾದ್ರೂ ನೆಲದ ಮೇಲೆ ಮಲಗುವ ಅಭ್ಯಾಸ ಇದ್ರೆ, ವೈದ್ಯರು ಏನ್ ಹೇಳ್ತಾರೆ ನೋಡಿ…. appeared first on Good News 24x7.

]]>
ಹೈದರಾಬಾದ್ ಮೆಟ್ರೋದಲ್ಲಿ ಹೃದಯ ರವಾನೆ, ಕನ್ನಡಿಗ ವೈದ್ಯನ ನೇತೃತ್ವ. https://www.goodnews24x7.com/%e0%b2%b9%e0%b3%88%e0%b2%a6%e0%b2%b0%e0%b2%be%e0%b2%ac%e0%b2%be%e0%b2%a6%e0%b3%8d-%e0%b2%ae%e0%b3%86%e0%b2%9f%e0%b3%8d%e0%b2%b0%e0%b3%8b%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%b9%e0%b3%83/ Sun, 19 Jan 2025 08:00:20 +0000 https://www.goodnews24x7.com/?p=1790 ಹೈದರಾಬಾದ್ :- ಹೃದಯವನ್ನು ಏರ್ಲಿಫ್ಟ್ ಮಾಡಿರುವುದು ಕೇಳಿದ್ದೇವೆ, ಆ್ಯಂಬ್ಯುಲೆನ್ಸ್ನಲ್ಲಿ ರವಾನೆ ಮಾಡಿದ್ದು ನೋಡಿದ್ದೇವೆ ಆದರೆ ಮೊದಲ ಬಾರಿಗೆ ಮೆಟ್ರೋದಲ್ಲಿ ಹೃದಯ ರವಾನೆ ಮಾಡಿ ರೋಗಿಯ ಜೀವವನ್ನು ಉಳಿಸಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಕರ್ನಾಟಕದ ಧಾರವಾಡ ಮೂಲದ ವೈದ್ಯರ ಅಜಯ್ ಎಂಬುವವರು ಇದರ…

The post ಹೈದರಾಬಾದ್ ಮೆಟ್ರೋದಲ್ಲಿ ಹೃದಯ ರವಾನೆ, ಕನ್ನಡಿಗ ವೈದ್ಯನ ನೇತೃತ್ವ. appeared first on Good News 24x7.

]]>

ಹೈದರಾಬಾದ್ :- ಹೃದಯವನ್ನು ಏರ್ಲಿಫ್ಟ್ ಮಾಡಿರುವುದು ಕೇಳಿದ್ದೇವೆ, ಆ್ಯಂಬ್ಯುಲೆನ್ಸ್ನಲ್ಲಿ ರವಾನೆ ಮಾಡಿದ್ದು ನೋಡಿದ್ದೇವೆ ಆದರೆ ಮೊದಲ ಬಾರಿಗೆ ಮೆಟ್ರೋದಲ್ಲಿ ಹೃದಯ ರವಾನೆ ಮಾಡಿ ರೋಗಿಯ ಜೀವವನ್ನು ಉಳಿಸಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಕರ್ನಾಟಕದ ಧಾರವಾಡ ಮೂಲದ ವೈದ್ಯರ ಅಜಯ್ ಎಂಬುವವರು ಇದರ ನೇತೃತ್ವವಹಿಸಿದ್ದರು. ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ರೋಗಿಯ ಹೃದಯವನ್ನು ಮತ್ತೊಬ್ಬರಿಗೆ ಕಸಿ ಮಾಡಲಾಗಿದೆ.
ಹೈದರಾಬಾದ್ ಮೆಟ್ರೋದಲ್ಲಿ ದಾನಿಯ ಹೃದಯ ರವಾನೆ ಮಾಡಲಾಗಿದೆ. ಕೇವಲ 13 ನಿಮಿಷಗಳಲ್ಲಿ 13 ಕಿ.ಮೀ ದೂರವನ್ನು ಕ್ರಮಿಸುವ ರೀತಿಯಲ್ಲಿ ಹಸಿರು ಕಾರಿಡಾರ್ ವ್ಯವಸ್ಥೆ ಮಾಡಲಾಗಿತ್ತು. ಈ ಸಂಪೂರ್ಣ ಜವಾಬ್ದಾರಿಯನ್ನು ಕನ್ನಡಿಗ ವೈದ್ಯರೊಬ್ಬರು ಹೊತ್ತುಕೊಂಡಿದ್ದರು.
ಜನವರಿ 17 ರಂದು ಸಂಜೆ ಕಾರಿಡಾರ್ ಅನ್ನು ರಚಿಸಲಾಗಿದ್ದು, ಎಲ್ಬಿ ನಗರದ ಕಾಮಿನೇನಿ ಆಸ್ಪತ್ರೆಯಿಂದ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಗೆ ದಾನಿಗಳ ಹೃದಯವನ್ನು ಸಾಗಿಸಲು ಅನುಕೂಲವಾಯಿತು, ಈ ಜೀವ ಉಳಿಸುವ ಕಾರ್ಯಾಚರಣೆಯಲ್ಲಿ ನಿರ್ಣಾಯಕ ಸಮಯವನ್ನು ಉಳಿಸಲಾಗಿದೆ ಎಂದು ಹೈದರಾಬಾದ್ ಮೆಟ್ರೋ ರೈಲಿನ ಪ್ರಕಟಣೆ ತಿಳಿಸಿದೆ.
ಧಾರವಾಡ ಮೂಲದ ವೈದ್ಯ ಅಜಯ್ ಎಂಬುವವರು ಹೃದಯ ಸಾಗಿಸುವ ಕಾರ್ಯಾಚರಣೆಯ ಪ್ರಮುಖ ಭಾಗವಾಗಿದ್ದರು. ಅಪಘಾತದಲ್ಲಿ ಗಾಯಗೊಂಡಿದ್ದ 35 ವರ್ಷದ ವ್ಯಕ್ತಿಯ ಮೆದುಳು ನಿಷ್ಕ್ರಿಯಗೊಂಡಿದ್ದ ಹಿನ್ನೆಲೆಯಲ್ಲಿ ಅಂಗಾಂಗ ದಾನಕ್ಕೆ ಕುಟುಂಬ ಮುಂದಾಗಿತ್ತು. ಈ ವೇಳೆ ಗ್ಲೆನ್ ಗೆಲ್ಸ್ ಗ್ಲೋಬಲ್ ಆಸ್ಪತ್ರೆಯ ರೋಗಿಯೊಬ್ಬರಿಗೆ ಹೃದಯ ಬೇಕಿತ್ತು. ಹೃದಯ ಮತ್ತು ಶ್ವಾಸಕೋಶ ಕಸಿ ತಜ್ಞರಾಗಿರೋ ಡಾ. ಅಜಯ ಜೋಶಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಅವರ ಪತ್ನಿ ಡಾ. ನಂದಿನಿ ಸಹ ಹೈದರಾಬಾದ್ ನಲ್ಲಿ ಸ್ತ್ರಿರೋಗ ತಜ್ಞೆ.
ಧಾರವಾಡ-ಹುಬ್ಬಳ್ಳಿಯಲ್ಲಿ ಶಿಕ್ಷಣ ಪೂರೈಸಿರುವ ಡಾ. ಅಜಯ್ ಬಳಿಕ ಯುಕೆಯಲ್ಲಿ ಶ್ವಾಸಕೋಶ ಮತ್ತು ಹೃದಯ ಕಸಿ ಚಿಕಿತ್ಸೆ ಕುರಿತು ಉನ್ನತ ಶಿಕ್ಷಣ ಪಡೆದಿದ್ದಾರೆ. ಹೈದರಾಬಾದ್ ನ ಗ್ಲೆನ್ ಗೆಲ್ಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಹುಬ್ಬಳ್ಳಿ ನವನಗರದಲ್ಲಿ ಅವರ ಪೋಷಕರು ವಾಸವಿದ್ದಾರೆ. ಹೈದರಾಬಾದ್ ಮೆಟ್ರೋ ರೈಲು, ವೈದ್ಯಕೀಯ ತಂಡಗಳು ಮತ್ತು ಆಸ್ಪತ್ರೆಯ ಅಧಿಕಾರಿಗಳ ನಡುವಿನ ನಿಖರವಾದ ಸಮನ್ವಯದ ಮೂಲಕ ಜೀವ ಉಳಿಸುವ ಪ್ರಯತ್ನವನ್ನು ಸಾಧಿಸಲಾಗಿದೆ.

The post ಹೈದರಾಬಾದ್ ಮೆಟ್ರೋದಲ್ಲಿ ಹೃದಯ ರವಾನೆ, ಕನ್ನಡಿಗ ವೈದ್ಯನ ನೇತೃತ್ವ. appeared first on Good News 24x7.

]]>
ಮೆಹೆಂದಿ ಗರ್ಭಿಣಿಯರಿಗೆ ಹಾನಿಕಾರಕವೇ? ಇಲ್ಲಿದೆ ವೈದ್ಯರು ನೀಡಿರುವ ಮಾಹಿತಿ. https://www.goodnews24x7.com/%e0%b2%ae%e0%b3%86%e0%b2%b9%e0%b3%86%e0%b2%82%e0%b2%a6%e0%b2%bf-%e0%b2%97%e0%b2%b0%e0%b3%8d%e0%b2%ad%e0%b2%bf%e0%b2%a3%e0%b2%bf%e0%b2%af%e0%b2%b0%e0%b2%bf%e0%b2%97%e0%b3%86-%e0%b2%b9%e0%b2%be%e0%b2%a8/ Sun, 19 Jan 2025 07:16:50 +0000 https://www.goodnews24x7.com/?p=1784 ಮಹಿಳೆಯರು ಹಬ್ಬ, ಮದುವೆ ಹೀಗೆ ಯಾವುದೇ ರೀತಿಯ ಆಚರಣೆ ಮೆಹೆಂದಿ ಹಚ್ಚಿಕೊಳ್ಳುತ್ತಾರೆ. ಇದೊಂದು ರೀತಿಯ ಹೆಣ್ಣು ಮಕ್ಕಳ ಅಂದ ಹೆಚ್ಚಿಸುವ ಅಲಂಕಾರಗಳಲ್ಲಿ ಒಂದು ಎಂದರೆ ತಪ್ಪಾಗಲಾರದು. ಆದರೆ ಇದು ಕೇವಲ ಕೈಗಳ ಸೌಂದರ್ಯವನ್ನು ಹೆಚ್ಚಿಸುವುದು ಮಾತ್ರವಲ್ಲ ಅದರ ಹೊರತಾಗಿ, ಇದು ಅನೇಕ…

The post ಮೆಹೆಂದಿ ಗರ್ಭಿಣಿಯರಿಗೆ ಹಾನಿಕಾರಕವೇ? ಇಲ್ಲಿದೆ ವೈದ್ಯರು ನೀಡಿರುವ ಮಾಹಿತಿ. appeared first on Good News 24x7.

]]>

ಮಹಿಳೆಯರು ಹಬ್ಬ, ಮದುವೆ ಹೀಗೆ ಯಾವುದೇ ರೀತಿಯ ಆಚರಣೆ ಮೆಹೆಂದಿ ಹಚ್ಚಿಕೊಳ್ಳುತ್ತಾರೆ. ಇದೊಂದು ರೀತಿಯ ಹೆಣ್ಣು ಮಕ್ಕಳ ಅಂದ ಹೆಚ್ಚಿಸುವ ಅಲಂಕಾರಗಳಲ್ಲಿ ಒಂದು ಎಂದರೆ ತಪ್ಪಾಗಲಾರದು. ಆದರೆ ಇದು ಕೇವಲ ಕೈಗಳ ಸೌಂದರ್ಯವನ್ನು ಹೆಚ್ಚಿಸುವುದು ಮಾತ್ರವಲ್ಲ ಅದರ ಹೊರತಾಗಿ, ಇದು ಅನೇಕ ರೀತಿಯ ಪ್ರಯೋಜನಗಳನ್ನು ನೀಡುತ್ತದೆ ಎಂಬ ನಂಬಿಕೆ ಇದೆ. ಆದರೆ ಕೆಲವು ಕಡೆಗಳಲ್ಲಿ ಗರ್ಭಿಣಿಯರು ಮೆಹಂದಿಯನ್ನು ಹಚ್ಚಿಕೊಳ್ಳಬಾರದು ಎನ್ನುತ್ತಾರೆ ಇದು ನಿಜವೇ? ಮೆಹೆಂದಿ ಗರ್ಭಿಣಿಯರಿಗೆ ಹಾನಿಕಾರಕವೇ? ಗರ್ಭಾವಸ್ಥೆಯಲ್ಲಿ ಕೆಲವು ಮಹಿಳೆಯರು ಗೋರಂಟಿ ಹಚ್ಚಲು ಹೆದರಲು ಕಾರಣವೇನು? ಇಲ್ಲಿದೆ ವೈದ್ಯರು ನೀಡಿರುವ ಮಾಹಿತಿ

ಸಾಮಾನ್ಯವಾಗಿ ನಮ್ಮಲ್ಲಿ ಎಲ್ಲಾ ರೀತಿಯ ಶುಭ ಕಾರ್ಯಕ್ರಮಗಳಲ್ಲಿಯೂ ಮೆಹೆಂದಿ ಅಥವಾ ಗೋರಂಟಿ ಹಾಕಿಕೊಳ್ಳುವುದು ವಾಡಿಕೆ. ಮಹಿಳೆಯರು ಹಬ್ಬ, ಮದುವೆ ಹೀಗೆ ಯಾವುದೇ ರೀತಿಯ ಆಚರಣೆ ಇರಲಿ ಇದನ್ನು ಹಚ್ಚಿಕೊಳ್ಳುತ್ತಾರೆ. ಇದೊಂದು ರೀತಿಯ ಹೆಣ್ಣು ಮಕ್ಕಳ ಅಂದ ಹೆಚ್ಚಿಸುವ ಅಲಂಕಾರಗಳಲ್ಲಿ ಒಂದು ಎಂದರೆ ತಪ್ಪಾಗಲಾರದು. ಆದರೆ ಇದು ಕೇವಲ ಕೈಗಳ ಸೌಂದರ್ಯವನ್ನು ಹೆಚ್ಚಿಸುವುದು ಮಾತ್ರವಲ್ಲ ಅದರ ಹೊರತಾಗಿ, ಇದು ಅನೇಕ ರೀತಿಯ ಪ್ರಯೋಜನಗಳನ್ನು ನೀಡುತ್ತದೆ ಎಂಬ ನಂಬಿಕೆ ಇದೆ.
ಇತ್ತೀಚೆಗೆ, ಇನ್ಸ್ಟಾ ಗಳಲ್ಲಿ ಬಹಳ ಕಳವಳಕಾರಿ ಹೇಳಿಕೆಗಳು ಬಿತ್ತರಿಸಲಾರಂಭಿಸಿದ್ದವು. ಅದೇನೆಂದರೆ, ಗರ್ಭಾವಸ್ಥೆಯಲ್ಲಿ ಮೆಹೆಂದಿ ಅಥವಾ ಗೋರಂಟಿ ಹಚ್ಚುವುದರಿಂದ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಯಿತು. ಕೆಲವರು ಫೋಟೋ ಗಳಿಗಾಗಿ ತಮ್ಮ ಹೊಟ್ಟೆಯ ಮೇಲೆ ಮೆಹೆಂದಿ ಹಾಕಿಕೊಳ್ಳುತ್ತಿದ್ದು ಇದು ಕೂಡ ಈ ರೀತಿಯ ಸುದ್ದಿ ಹಬ್ಬಲು ಕಾರಣವಾಗಿರಬಹುದು. ಆದರೆ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೂರಾರು ಪ್ರಶ್ನೆಗಳು ಹುಟ್ಟಿಕೊಂಡಿತ್ತು. ಇದನ್ನು ನಂಬಿದ ಹಲವು ಮಹಿಳೆಯರು ಗರ್ಭಾವಸ್ಥೆಯಲ್ಲಿ ಗೋರಂಟಿ ಹಚ್ಚುವುದು ನಿಜವಾಗಿಯೂ ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಎಂದು ನಂಬಿದರು. ಹಾಗಾದರೆ ಇದರಲ್ಲಿ ಎಷ್ಟು ಸತ್ಯವಿದೆ?

ಈ ಬಗ್ಗೆ ವೈದ್ಯರು ಹೇಳುವುದೇನು?
ಆರೋಗ್ಯ ತಜ್ಞರು ಮತ್ತು ಸ್ತ್ರೀರೋಗ ತಜ್ಞರು ನೀಡಿರುವ ಮಾಹಿತಿಯ ಪ್ರಕಾರ ಈ ವಿಷಯ ಸತ್ಯವಲ್ಲ. ಇದಕ್ಕೆ ಯಾವುದೇ ರೀತಿಯ ವೈಜ್ಞಾನಿಕ ಆಧಾರವಿಲ್ಲ. ಗೋರಂಟಿ ನೈಸರ್ಗಿಕ ಬಣ್ಣ. ಇದು ಚರ್ಮದ ಹೊರ ಪದರವನ್ನು ಮಾತ್ರ ರಂಗೆರಿಸುತ್ತವೆ ಇದು ದೇಹದ ಒಳಗೆ ಹೋಗುವುದಿಲ್ಲ ಆದ್ದರಿಂದ ಮಗುವಿನ ಚರ್ಮದ ಮೇಲೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ ಅಥವಾ ಬೆಳವಣಿಗೆಯ ಮೇಲೆ ಪರಿಣಾಮ ಬೀರುವುದಿಲ್ಲ. ಅದರಲ್ಲಿಯೂ ಮಗುವಿನ ಚರ್ಮದ ಬಣ್ಣವು ಆನುವಂಶಿಕ ಅಂಶ ಮತ್ತು ಮೆಲನಿನ್ ಉತ್ಪಾದನೆಯಿಂದ ನಿರ್ಧರಿಸಲ್ಪಡುತ್ತದೆಯೇ ಹೊರತು ತಾಯಿಯ ಚರ್ಮಕ್ಕೆ ಅನ್ವಯಿಸುವ ಯಾವುದರಿಂದಲೂ ಅಲ್ಲ ಎಂದಿದ್ದಾರೆ. ಆದರೆ ಗರ್ಭಾವಸ್ಥೆಯಲ್ಲಿ, ಮಹಿಳೆಯರು ಪ್ಯಾರಾ- ಫಿನೈಲೆನಾಡಿಯಮೈನ್ (ಪಿಪಿಡಿ) ನಂತಹ ರಾಸಾಯನಿಕ ಅಂಶವಿರುವ ಗೋರಂಟಿಯನ್ನು ಅನ್ವಯಿಸದಂತೆ ಎಚ್ಚರಿಕೆ ವಹಿಸಬೇಕು. ಕೃತಕ ಗೋರಂಟಿ ಹಚ್ಚುವುದನ್ನು ತಪ್ಪಿಸಿ. ಯಾವಾಗಲೂ ನೈಸರ್ಗಿಕ ಗೋರಂಟಿ ಬಳಸುವುದು ಬಹಳ ಒಳ್ಳೆಯದು.

The post ಮೆಹೆಂದಿ ಗರ್ಭಿಣಿಯರಿಗೆ ಹಾನಿಕಾರಕವೇ? ಇಲ್ಲಿದೆ ವೈದ್ಯರು ನೀಡಿರುವ ಮಾಹಿತಿ. appeared first on Good News 24x7.

]]>