doctors Archives - Good News 24x7 https://www.goodnews24x7.com/tag/doctors/ Kannada Mon, 27 Apr 2026 12:08:33 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg doctors Archives - Good News 24x7 https://www.goodnews24x7.com/tag/doctors/ 32 32 ಕೋಮಾಗೆ ಜಾರಿದ್ದ ಹಾಸನದ ಇಂಜಿನಿಯರ್ ಶ್ವೇತಾ ಸಾ* https://www.goodnews24x7.com/hassan-engineer-shweta-dies-after-slipping-into-coma/ Mon, 27 Apr 2026 11:52:24 +0000 https://www.goodnews24x7.com/?p=9428 ಹಾಸನದ 25ರ ಯುವ ಸಾಫ್ಟ್‌ವೇರ್ ಇಂಜಿನಿಯರ್ ಶ್ವೇತಾ ಮೆದುಳಿನಲ್ಲಿ ತೀವ್ರ ರಕ್ತಸ್ರಾವದಿಂದ ಹಠಾತ್ ನಿಧನರಾಗಿದ್ದಾರೆ. ಮನೆಯಲ್ಲಿ ಕುಸಿದುಬಿದ್ದ ನಂತರ ಕೋಮಾಕ್ಕೆ ಜಾರಿದ ಶ್ವೇತಾ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದರು. ಕುಟುಂಬದಲ್ಲಿ ಈ ಘಟನೆ ಆತಂಕ ಮೂಡಿಸಿದೆ. ಪೋಷಕರು ಅಂಗಾಂಗ ದಾನಕ್ಕೆ ಮುಂದಾದರೂ, ಆರೋಗ್ಯ…

The post ಕೋಮಾಗೆ ಜಾರಿದ್ದ ಹಾಸನದ ಇಂಜಿನಿಯರ್ ಶ್ವೇತಾ ಸಾ* appeared first on Good News 24x7.

]]>

ಹಾಸನದ 25ರ ಯುವ ಸಾಫ್ಟ್‌ವೇರ್ ಇಂಜಿನಿಯರ್ ಶ್ವೇತಾ ಮೆದುಳಿನಲ್ಲಿ ತೀವ್ರ ರಕ್ತಸ್ರಾವದಿಂದ ಹಠಾತ್ ನಿಧನರಾಗಿದ್ದಾರೆ. ಮನೆಯಲ್ಲಿ ಕುಸಿದುಬಿದ್ದ ನಂತರ ಕೋಮಾಕ್ಕೆ ಜಾರಿದ ಶ್ವೇತಾ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದರು. ಕುಟುಂಬದಲ್ಲಿ ಈ ಘಟನೆ ಆತಂಕ ಮೂಡಿಸಿದೆ. ಪೋಷಕರು ಅಂಗಾಂಗ ದಾನಕ್ಕೆ ಮುಂದಾದರೂ, ಆರೋಗ್ಯ ಸ್ಥಿತಿಯಿಂದ ಅದು ಸಾಧ್ಯವಾಗಲಿಲ್ಲ.

ಹಾಸನ, ಏ.27: ಸಾಫ್ಟ್‌ವೇರ್ ಇಂಜಿನಿಯರ್ ಹಠಾತ್ ಸಾ*ನ್ನಪ್ಪಿರುವ ಘಟನೆ ನಡೆದಿದೆ. ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾಗಿ ಕೋಮಾಗೆ ಜಾರಿದ್ದ 25 ವರ್ಷದ ಯುವತಿ ಶ್ವೇತಾ, ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. ಈ ಘಟನೆ ಇಡೀ ಗ್ರಾಮದಲ್ಲಿ ಹಾಗೂ ಕುಟುಂಬಸ್ಥರಲ್ಲಿ ಸೂತಕ ಛಾಯೆ ಆವರಿಸಿದೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬಂಡಿಲಕ್ಕನಕೊಪ್ಪಲು ಗ್ರಾಮದ ಗಂಗಾಧರ್ ಮತ್ತು ಸರೋಜ ದಂಪತಿಯ ಪುತ್ರಿಯಾದ ಶ್ವೇತಾ(25), ಹಾಸನದ ಮ್ಯಾಗ್ನಾ ಸಾಫ್ಟ್ ಕಂಪನಿಯಲ್ಲಿ ಕಳೆದ ಮೂರು ವರ್ಷಗಳಿಂದ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಏಪ್ರಿಲ್ 25ರ ಶುಕ್ರವಾರ ಸಂಜೆ ಮನೆಯಲ್ಲಿದ್ದಾಗ ಶ್ವೇತಾ ಹಠಾತ್ತಾಗಿ ಕುಸಿದು ಬಿದ್ದಿದ್ದರು.
ಕುಸಿದು ಬಿದ್ದ ತಕ್ಷಣವೇ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ. ಆದರೆ, ಆಸ್ಪತ್ರೆಗೆ ತಲುಪುವ ವೇಳೆಗೆ ಶ್ವೇತಾ ಕೋಮಾಗೆ ಜಾರಿದ್ದರು. ಆಕೆಯನ್ನು ಪರೀಕ್ಷಿಸಿದ ವೈದ್ಯರು ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾಗಿರುವ (Brain Hemorrhage) ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಚಿಕಿತ್ಸೆ ಮಾಡುತ್ತಿರುವಾಗಲೇ ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡ ಶ್ವೇತಾ ಸಾ*ನ್ನಪ್ಪಿದ್ದಾರೆ.
ಮಗಳ ಸಾವಿನ ನೋವಿನ ನಡುವೆಯೂ ಪೋಷಕರು ಶ್ವೇತಾ ಅವರ ಅಂಗಾಂಗ ದಾನ ಮಾಡಲು ನಿರ್ಧಾರ ಮಾಡಿದ್ದರು. ಆ ಮೂಲಕ ಮತ್ತೊಬ್ಬರ ಬಾಳಿಗೆ ಬೆಳಕಾಗಲು ಮುಂದಾಗಿದ್ದರು. ಆದರೆ ಆಕೆಯ ದೇಹದ ಆರೋಗ್ಯದ ಸ್ಥಿತಿಗತಿಯಿಂದಾಗಿ ಅಂಗಾಂಗ ದಾನ ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ. ಇಂದು ಬಂಡಿಲಕ್ಕನಕೊಪ್ಪಲು ಗ್ರಾಮದಲ್ಲಿ ಯುವತಿಯ ಅಂತ್ಯಕ್ರಿಯೆ ನಡೆಯಲಿದೆ. ತುಂಬು ವಯಸ್ಸಿನ ಮಗಳ ಹಠಾತ್ ಸಾ*ನಿಂದ ಗಂಗಾಧರ್ ಕುಟುಂಬ ಕಂಗಾಲಾಗಿದ್ದು, ಹಸನ್ಮುಖಿ ಯುವತಿಯ ಸಾವಿಗೆ ಮ್ಯಾಗ್ನಾ ಸಾಫ್ಟ್ ಕಂಪನಿಯ ಸಹೋದ್ಯೋಗಿಗಳು ಮತ್ತು ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.

The post ಕೋಮಾಗೆ ಜಾರಿದ್ದ ಹಾಸನದ ಇಂಜಿನಿಯರ್ ಶ್ವೇತಾ ಸಾ* appeared first on Good News 24x7.

]]>
11 ಮಕ್ಕಳು ಕೆಮ್ಮಿನ ಸಿರಪ್ ಸೇವಿಸಿ ಸಾ* https://www.goodnews24x7.com/11-children-die-after-consuming-cough-syrup/ Sat, 04 Oct 2025 08:49:47 +0000 https://www.goodnews24x7.com/?p=7661 ನವದೆಹಲಿ: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಇತ್ತೀಚೆಗೆ 11 ಮಕ್ಕಳು ಸಾವನ್ನಪ್ಪಿದ ಘಟನೆಗೆ ಕೆಮ್ಮಿನ ಔಷಧ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಔಷಧದ ಮಾದರಿಯನ್ನು ಪರೀಕ್ಷಿಸಿ ಕ್ಲೀನ್‌ ಚಿಟ್ ನೀಡಿವೆ. ಮಕ್ಕಳ ಸಾವಿಗೆ ಔಷಧ…

The post 11 ಮಕ್ಕಳು ಕೆಮ್ಮಿನ ಸಿರಪ್ ಸೇವಿಸಿ ಸಾ* appeared first on Good News 24x7.

]]>

ನವದೆಹಲಿ: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಇತ್ತೀಚೆಗೆ 11 ಮಕ್ಕಳು ಸಾವನ್ನಪ್ಪಿದ ಘಟನೆಗೆ ಕೆಮ್ಮಿನ ಔಷಧ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಔಷಧದ ಮಾದರಿಯನ್ನು ಪರೀಕ್ಷಿಸಿ ಕ್ಲೀನ್‌ ಚಿಟ್ ನೀಡಿವೆ. ಮಕ್ಕಳ ಸಾವಿಗೆ ಔಷಧ ಕಾರಣವಲ್ಲ ಎಂದು ಸಷ್ಟಪಡಿಸಿವೆ.

ಮಧ್ಯಪ್ರದೇಶದಲ್ಲಿ 9 ಮಕ್ಕಳು ಸಾವು: ಕಳೆದ 15 ದಿನದಲ್ಲಿ ಮಧ್ಯ ಪ್ರದೇಶದ ಛಿಂದ್ವಾರ ಜಿಲ್ಲೆಯಲ್ಲಿ 9 ಮಕ್ಕಳು ಮೃತಪಟ್ಟಿವೆ. ಈ ಮಕ್ಕಳ ಸಾವಿಗೆ ಕೋಲ್ಟಿಫ್ ಮತ್ತು ನೆಕ್‌ಸ್ಟೋ-ಡಿಎಸ್ ಕೆಮ್ಮಿನ ಔಷಧ ಸೇವನೆಯಿಂದ ಉಂಟಾದ ಕಿಡ್ನಿ ವೈಫಲ್ಯ ಕಾರಣ ಎಂದು ಪೋಷಕರು ಮತ್ತು ಸ್ಥಳೀಯರು ಆರೋಪಿಸಿದ್ದಾರೆ. ಆದರೆ ಮಧ್ಯ ಪ್ರದೇಶದ ಆರೋಗ್ಯ ಇಲಾಖೆಯು ಔಷಧದ ಪರೀಕ್ಷೆ ವೇಳೆ ಯಾವುದೇ ವಿಷಪೂರಿತ ಅಂಶ ಪತ್ತೆಯಾಗಿಲ್ಲ. ಔಷಧದ ನಿಷೇಧದ ಪ್ರಶ್ನೆಯೇ ಇಲ್ಲ. ಮಕ್ಕಳ ಸಾವಿಗೆ ಸಮಿತಿ ರಚಿಸಲಾಗಿದ್ದು, ತನಿಖೆ ಆರಂಭವಾಗಿದೆ ಎಂದು ಸ್ಪಷ್ಟಪಡಿಸಿದೆ.
ರಾಜಸ್ಥಾನದಲ್ಲಿ 2 ಮಕ್ಕಳ ಸಾವು: ರಾಜ ಸ್ಥಾನದ ಸಿಕಾರ್ ಮತ್ತು ಭರತ್‌ ಪುರ ಜಿಲ್ಲೆಗಳಲ್ಲಿ ತಲಾ ಒಂದೊಂದು ಸಾವಾಗಿದ್ದು, ಇಲ್ಲಿಯೂ ಸಹ ಔಷಧವೇ ಕಾರಣ ಎಂಬ ಆರೋಪವಿದೆ.

 

 

 

 

 

 

ತಮಿಳುನಾಡಿನಲ್ಲಿ ನಿಷೇಧ
ಮಕ್ಕಳ ಸಾವಿನ ಬೆನ್ನಲ್ಲೇ ತಮಿಳುನಾಡು ಸರ್ಕರ ಕೋಲ್ಟಿಫ್ ಸಿರಪ್ ಮೇಲೆ ನಿಷೇಧ ಹೇರಿದೆ. ತಮಿಳುನಾಡು ಔಷಧ ನಿಯಂತ್ರಣಾ ಮಂಡಳಿ ಈ ಕ್ರಮ ಕೈಗೊಂಡಿದೆ. ಘಟನೆ ಕುರಿತು ತನಿಖೆ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.

ಆರೋಪವಿದೆ. ಆದರೆ ಅಲ್ಲಿನ ಸರ್ಕಾರವು ವೈದ್ಯರಿಗೆ ಕ್ಲೀನ್‌ ಚಿಟ್ ನೀಡಿದೆ. ರಾಜಸ್ಥಾನ ಔಷಧ ನಿಯಂತ್ರಣ ಮಂಡಳಿಯು ಔಷಧಗಳ ಪೂರೈಕೆಗೆ ತಾತ್ಕಾಲಿಕ ತಡೆ ನೀಡಿದೆ. ಎರಡೂ ಪ್ರಕರಣಗಳಲ್ಲಿಯೂ ಪೋಷಕರು ವೈದ್ಯರ ಸೂಚನೆಯಿಲ್ಲದೆಯೇ ಔಷಧ ನೀಡಿದ್ದೇ ಕಾರಣ ಎಂದು ಆರೋಗ್ಯ ಇಲಾಖೆ ಹೇಳಿದೆ.

2 ವರ್ಷದ ಮಕ್ಕಳಿಗೆ ಕೆಮ್ಮಿನೌಷಧ ಬೇಡ: ಕೇಂದ್ರದ ಎಚ್ಚರಿಕೆ
ಅತ್ತ ಕೇಂದ್ರ ಸರ್ಕಾರ ಕಫ್‌ಸಿರಪ್‌ನಿಂದ ಮಕ್ಕಳ ಸಾವು ಸಂಭವಿಸಿದೆ ಎಂಬ ಆರೋಪವನ್ನು ತಿರಸ್ಕರಿಸಿದೆ. ವೈದ್ಯಕೀಯ ಮತ್ತು ವೈಜ್ಞಾನಿಕ ಪರೀಕ್ಷೆಯಲ್ಲಿ ಸಿರಪ್‌ನಲ್ಲಿ ಯಾವುದೇ ವಿಷಪೂರಿತ ಅಂಶಗಳು ಪತ್ತೆಯಾಗಿಲ್ಲ. ಈ ತನಿಖೆ ಆರಂಭವಾಗಿದೆ ಎಂದು ಸ್ಪಷ್ಟಪಡಿಸಿದೆ.

ಜತೆಗೆ 2 ವರ್ಷದ ಒಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್ ಕೊಡಬಾರದೆಂದು ಆದೇಶಿಸಿದೆ. ಜೊತೆಗೆ ಕೆಮ್ಮಿನ ಔಷಧದ ಪರಿಣಾಮ ಎಂಬ ಯಾವುದೇ ಪ್ರಕರಣ ಬಂದಲ್ಲಿ ಖಾಸಗಿ ವೈದ್ಯರು ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಬೇಕು ಎಂದು ಆದೇಶ ಹೊರಡಿಸಿದೆ.

The post 11 ಮಕ್ಕಳು ಕೆಮ್ಮಿನ ಸಿರಪ್ ಸೇವಿಸಿ ಸಾ* appeared first on Good News 24x7.

]]>
ವೈದ್ಯರ ಎಡವಟ್ಟಿಗೆ 6 ತಿಂಗಳ ಗಂಡು ಮಗು ಸಾ* ; ಚಾಮರಾಜನಗರದಲ್ಲಿ ಘಟನೆ. https://www.goodnews24x7.com/%e0%b2%b5%e0%b3%88%e0%b2%a6%e0%b3%8d%e0%b2%af%e0%b2%b0-%e0%b2%8e%e0%b2%a1%e0%b2%b5%e0%b2%9f%e0%b3%8d%e0%b2%9f%e0%b2%bf%e0%b2%97%e0%b3%86-6-%e0%b2%a4%e0%b2%bf%e0%b2%82%e0%b2%97%e0%b2%b3-%e0%b2%97/ Tue, 04 Feb 2025 05:55:07 +0000 https://www.goodnews24x7.com/?p=2215 ಚಾಮರಾಜನಗರ :- ‘ವೈದ್ಯೋ ನಾರಾಯಣೋ ಹರಿಃ’ ಎಂಬ ಉಕ್ತಿಯಂತೆ ವೈದ್ಯನಾದವನು ದೇವರಿಗೆ ಸಮಾನವಾದವನು. ಆದರೆ ಪ್ರಾಣ ಉಳಿಸಬೇಕಿರುವ ವೈದ್ಯನೇ ಬದುಕಿ ಬಾಳ ಬೇಕಾಗಿದ್ದ ಪುಟ್ಟ ಕಂದನ ಪ್ರಾಣ ತೆಗೆದಿರುವ ಆರೋಪ ಕೇಳಿಬಂದಿದೆ. ವೈದ್ಯ ಮಾಡಿದ ಎಡವಟ್ಟಿಗೆ 6 ತಿಂಗಳ ಗಂಡು ಮಗು…

The post ವೈದ್ಯರ ಎಡವಟ್ಟಿಗೆ 6 ತಿಂಗಳ ಗಂಡು ಮಗು ಸಾ* ; ಚಾಮರಾಜನಗರದಲ್ಲಿ ಘಟನೆ. appeared first on Good News 24x7.

]]>

ಚಾಮರಾಜನಗರ :- ‘ವೈದ್ಯೋ ನಾರಾಯಣೋ ಹರಿಃ’ ಎಂಬ ಉಕ್ತಿಯಂತೆ ವೈದ್ಯನಾದವನು ದೇವರಿಗೆ ಸಮಾನವಾದವನು. ಆದರೆ ಪ್ರಾಣ ಉಳಿಸಬೇಕಿರುವ ವೈದ್ಯನೇ ಬದುಕಿ ಬಾಳ ಬೇಕಾಗಿದ್ದ ಪುಟ್ಟ ಕಂದನ ಪ್ರಾಣ ತೆಗೆದಿರುವ ಆರೋಪ ಕೇಳಿಬಂದಿದೆ. ವೈದ್ಯ ಮಾಡಿದ ಎಡವಟ್ಟಿಗೆ 6 ತಿಂಗಳ ಗಂಡು ಮಗು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರದಲ್ಲಿ ನಡೆದಿದೆ. ಜಿಲ್ಲೆಯ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆ ವೈದ್ಯ 6 ತಿಂಗಳ ಮಗುವಿನ ಪ್ರಾಣವನ್ನು ತೆಗೆದಿದ್ದಾನೆ. ಡಾಕ್ಟರ್ ಮಾಡಿದ ಸಣ್ಣದೊಂದು ಎಡವಟ್ಟಿಗೆ ಬದುಕಿ ಬಾಳಬೇಕಾದ 6 ತಿಂಗಳ ಕಂದನ ಪ್ರಾಣ ಪಕ್ಷಿಯೇ ಹಾರಿ ಹೋಗಿದೆ. ತನ್ನ ಮಗುವಿನ ಸಾವಿಗೆ ಕಾರಣವಾದ ವೈದ್ಯನ ವಿರುದ್ದ ಕುಟುಂಬಸ್ಥರು ರೊಚ್ಚಿಗೆದ್ದಿದ್ದು ಸರ್ಕಾರಿ ಆಸ್ಪತ್ರೆಯೇ ರಣಾಂಗಣವಾಗಿ ಮಾರ್ಪಟ್ಟಿತ್ತು.

ಹಂಗಳ ಗ್ರಾಮದ ನಿವಾಸಿಗಳಾದ ಆನಂದ್ ಮತ್ತು ಶುಭಮಾನಸ ದಂಪತಿಯ ಆರು ತಿಂಗಳ ಮಗು ಪ್ರಖ್ಯಾತ್ಗೆ ಇಂದು ಕಿವಿ ಚುಚ್ಚಿಸೋಕೆ ಮುಂದಾಗಿದ್ದರು. ಆದರೆ ಚಿಕ್ಕ ಕಂದವಾದ ಕಾರಣ ಮಗುವಿಗೆ ನೋವು ಆಗ ಬಾರದು ಎಂಬ ಕಾರಣಕ್ಕೆ ಬೋಮ್ಮಲಾಪೂರ ಸರ್ಕಾರಿ ಆಸ್ಪತ್ರೆಗೆ ಮಗುವನ್ನ ಕರೆದುಕೊಂಡು ಹೋದ ಪೋಷಕರು ಕಿವಿಗೆ ಬೆಂಟ್ ಇಂಜೆಕ್ಷನ್(ಅನಸ್ತೀಷಿಯಾ) ಕೊಡಿಸಿದ್ದಾರೆ. ಈ ಇಂಜೆಕ್ಷನ್ ನೀಡಿದ 10 ನಿಮಿಷದೊಳಗೆ ಮಗುವಿಗೆ ರಿಯಾಕ್ಷನ್ ಆಗಿದೆ. ಇದ್ದಕ್ಕಿದ್ದಂತೆ ಪಿಡ್ಸ್ ಬಂದಿದೆ, ತಕ್ಷಣವೇ ಬೋಮ್ಮಲಾಪುರ ಸರ್ಕಾರಿ ಆಸ್ಪತ್ರೆಯಿಂದ ಗುಂಡ್ಲುಪೇಟೆ ತಾಲೂಕು ಆಸ್ಪತ್ರೆಗೆ ಮಗುವನ್ನ ಕರೆದೊಯ್ಯಲಾಗಿದೆ. ಆದರೆ ಆಸ್ಪತ್ರೆ ತಲುಪುವ ಮುನ್ನವೆ ಮಗು ಉಸಿರು ಚೆಲ್ಲಿದೆ. ಈ ವಿಚಾರ ತಿಳಿದು ಮೃತ ಮಗುವಿನ ಕುಟುಂಬಸ್ಥರು ರೊಚ್ಚಿಗೆದ್ದು ವೈದ್ಯರಿಗೆ ಕ್ಲಾಸ್ ತೆಗೆದು ಕೊಂಡಿದ್ದಾರೆ.
ನಾಗದೋಷ ಯಾವ ಕಾರಣಕ್ಕೆ ಬರುತ್ತೆ?
ವೈದ್ಯ ಓವರ್ ಡೋಸ್ ನೀಡಿದ ಪರಿಣಾಮವೇ ಮಗು ಸಾವನ್ನಪ್ಪಿರುವುದಾಗಿ ಕುಟುಂಬಸ್ಥರ ಆರೋಪವಾಗಿದೆ. ಪಿಹೆಚ್ಸಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಗುಂಡ್ಲುಪೇಟೆ ತಾಲೂಕು ವೈದ್ಯಾಧಿಕಾರಿ ಡಾ.ಅಲಂಪಾಷಾ ಹೇಳಿದ್ದಾರೆ.

ಕಿವಿಗೆ ನೋವಾಗಬಾರ್ದು ಅಂತ ವೈದ್ಯರ ಬಳಿ ಕರೆದುಕೊಂಡು ಹೋದರೆ, ಆ ವೈದ್ಯ ಮಗುವಿನ ಪ್ರಾಣವನ್ನು ತೆಗೆದಿದ್ದು ನಿಜಕ್ಕೂ ದುರಂತವೇ ಸರಿ. ಮರಣೋತ್ತರ ಪರೀಕ್ಷೆ ವರದಿಯ ಬಳಿಕ ಸತ್ಯಾ ಸತ್ಯತೆ ಬೆಳಕಿಗೆ ಬರಬೇಕಿದೆ. ಎಲ್ಲವನ್ನೂ ನೋಡಿ ರೊಚ್ಚಿಗೆದ್ದ ಬೊಮ್ಮಲಾಪುರ ಗ್ರಾಮದ ನಿವಾಸಿಗಳು ಮಾಧ್ಯಮ ಪ್ರತಿನಿಧಿಗಳನ್ನು ಒಳಬಿಡಿ ಎಂದು ಗಲಾಟೆ ಮಾಡಿದ್ದಾರೆ. ಗ್ರಾಮಸ್ಥರು ರೊಚ್ಚಿಗೇಳುತ್ತಿದ್ದಂತೆ ಮಾಧ್ಯಮದವರನ್ನು ಪೊಲೀಸರು ಒಳಬಿಟ್ಟಿದ್ದಾರೆ.

The post ವೈದ್ಯರ ಎಡವಟ್ಟಿಗೆ 6 ತಿಂಗಳ ಗಂಡು ಮಗು ಸಾ* ; ಚಾಮರಾಜನಗರದಲ್ಲಿ ಘಟನೆ. appeared first on Good News 24x7.

]]>
ಸಿಎಂ ಸಿದ್ದರಾಮಯ್ಯ ದಿಢೀರ್ ಅನಾರೋಗ್ಯ: ಆಸ್ಪತ್ರೆಗೆ ದಾಖಲು. https://www.goodnews24x7.com/%e0%b2%b8%e0%b2%bf%e0%b2%8e%e0%b2%82-%e0%b2%b8%e0%b2%bf%e0%b2%a6%e0%b3%8d%e0%b2%a6%e0%b2%b0%e0%b2%be%e0%b2%ae%e0%b2%af%e0%b3%8d%e0%b2%af-%e0%b2%a6%e0%b2%bf%e0%b2%a2%e0%b3%80%e0%b2%b0%e0%b3%8d/ Sun, 02 Feb 2025 07:02:51 +0000 https://www.goodnews24x7.com/?p=2104 ಸಿಎಂ ಸಿದ್ದರಾಮಯ್ಯ ಅವರ ಆರೋಗ್ಯ ಏಕಾಏಕಿ ಬಿಗಡಾಯಿಸಿದ ಕಾರಣ ಅವರು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗೌರಿಬಿದನೂರಿಗೆ ಇವತ್ತು ತೆರಳಬೇಕಿತ್ತು ಆ ಒಂದು ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಆಸ್ಪತ್ರೆಗೆ ದಾಖಲಾದ ಹಿನ್ನೆಲೆಯಲ್ಲಿ ಇಂದು ನಿಗದಿಯಾಗಿದ್ದ ಚಿಕ್ಕಬಳ್ಳಾಪುರ ಮತ್ತು ರಾಮನಗರ ಪ್ರವಾಸ ರದ್ದಾಗಿದೆ. ಚಿಕ್ಕಬಳ್ಳಾಪುರದ ಹೊಸೂರು…

The post ಸಿಎಂ ಸಿದ್ದರಾಮಯ್ಯ ದಿಢೀರ್ ಅನಾರೋಗ್ಯ: ಆಸ್ಪತ್ರೆಗೆ ದಾಖಲು. appeared first on Good News 24x7.

]]>

ಸಿಎಂ ಸಿದ್ದರಾಮಯ್ಯ ಅವರ ಆರೋಗ್ಯ ಏಕಾಏಕಿ ಬಿಗಡಾಯಿಸಿದ ಕಾರಣ ಅವರು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗೌರಿಬಿದನೂರಿಗೆ ಇವತ್ತು ತೆರಳಬೇಕಿತ್ತು ಆ ಒಂದು ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.
ಆಸ್ಪತ್ರೆಗೆ ದಾಖಲಾದ ಹಿನ್ನೆಲೆಯಲ್ಲಿ ಇಂದು ನಿಗದಿಯಾಗಿದ್ದ ಚಿಕ್ಕಬಳ್ಳಾಪುರ ಮತ್ತು ರಾಮನಗರ ಪ್ರವಾಸ ರದ್ದಾಗಿದೆ. ಚಿಕ್ಕಬಳ್ಳಾಪುರದ ಹೊಸೂರು ಗ್ರಾಮಕ್ಕೆ ಇಂದು ಸಿದ್ದರಾಮಯ್ಯ ಭೇಟಿ ನೀಡಬೇಕಿತ್ತು. ಆದರೆ ಇದೀಗ ದಿಢೀರ್ ಆಗಿ ಸಿದ್ದರಾಮಯ್ಯ ಭೇಟಿ ರದ್ದಾಗಿದೆ.
ಮುಂದಿನ ಎಲ್ಲಾ ಕಾರ್ಯಕ್ರಮಗಳು ಮುಂದೂಡುವ ಸಾಧ್ಯತೆಗಳು ಇವೆ. ಗೌರಿಬಿದನೂರಿಗೆ ತೆರಳುವ ವೇಳೆ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಸಿಎಂ ಸಿದ್ದರಾಮಯ್ಯ ಮಣಿಪಾಲ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವೈದ್ಯರ ಸಲಹೆಯ ಮೇರೆಗೆ ಮುಂದಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಾ ಬೇಡವಾ ಎಂಬ ನಿರ್ಧಾರಗಳಿಗೆ ಬರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

The post ಸಿಎಂ ಸಿದ್ದರಾಮಯ್ಯ ದಿಢೀರ್ ಅನಾರೋಗ್ಯ: ಆಸ್ಪತ್ರೆಗೆ ದಾಖಲು. appeared first on Good News 24x7.

]]>
ಗೃಹಬಂಧನದಲ್ಲಿಟ್ಟು ಪತ್ನಿಯನ್ನು ಚಿತ್ರಹಿಂಸೆ ನೀಡಿದ ವೈದ್ಯ ಪತಿ https://www.goodnews24x7.com/%e0%b2%97%e0%b3%83%e0%b2%b9%e0%b2%ac%e0%b2%82%e0%b2%a7%e0%b2%a8%e0%b2%a6%e0%b2%b2%e0%b3%8d%e0%b2%b2%e0%b2%bf%e0%b2%9f%e0%b3%8d%e0%b2%9f%e0%b3%81-%e0%b2%aa%e0%b2%a4%e0%b3%8d%e0%b2%a8%e0%b2%bf%e0%b2%af/ Thu, 12 Dec 2024 09:56:39 +0000 https://www.goodnews24x7.com/?p=1086 ಚಿಕ್ಕಮಗಳೂರು :- ಚಿಕ್ಕಮಂಗಳೂರಿನ ದೋಣಿಕಣ ಬಡಾವಣೆಯಲ್ಲಿ ವೈದ್ಯ ಪತಿ ತನ್ನ ಪತ್ನಿಯನ್ನು ಮನೆಯಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡಿರುವ ಘಟನೆ ನಡೆದಿದೆ. ಗಂಡ ವೃತ್ತಿಯಲ್ಲಿ ವೈದ್ಯನಾಗಿದ್ದರೂ ಮಾನವೀಯತೆಯನ್ನೇ ಮರೆತು ಮಹಿಳೆಗೆ ಚಿತ್ರಹಿಂಸೆ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಇದೀಗ ಮಹಿಳೆಯನ್ನು ಚಿಕ್ಕಮಗಳೂರು ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ…

The post ಗೃಹಬಂಧನದಲ್ಲಿಟ್ಟು ಪತ್ನಿಯನ್ನು ಚಿತ್ರಹಿಂಸೆ ನೀಡಿದ ವೈದ್ಯ ಪತಿ appeared first on Good News 24x7.

]]>

ಚಿಕ್ಕಮಗಳೂರು :- ಚಿಕ್ಕಮಂಗಳೂರಿನ ದೋಣಿಕಣ ಬಡಾವಣೆಯಲ್ಲಿ ವೈದ್ಯ ಪತಿ ತನ್ನ ಪತ್ನಿಯನ್ನು ಮನೆಯಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡಿರುವ ಘಟನೆ ನಡೆದಿದೆ. ಗಂಡ ವೃತ್ತಿಯಲ್ಲಿ ವೈದ್ಯನಾಗಿದ್ದರೂ ಮಾನವೀಯತೆಯನ್ನೇ ಮರೆತು ಮಹಿಳೆಗೆ ಚಿತ್ರಹಿಂಸೆ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಇದೀಗ ಮಹಿಳೆಯನ್ನು ಚಿಕ್ಕಮಗಳೂರು ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಆಕೆಯ ಪತಿ ಡಾ, ರವಿಕುಮಾರ್ ಅಲ್ಲಿಂದ ನಾಪತ್ತೆಯಾಗಿದ್ದಾನೆ. ಮಹಿಳೆಯ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಒಂದು ಅವಮಾನಿಯ ಘಟನೆಯೊಂದು ನಡೆದಿದೆ. ಪತ್ನಿಯನ್ನು ಗೃಹಬಂಧನದಲ್ಲಿಟ್ಟು ಪತಿ ಕಿರುಕುಳ ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದೀಗ ಗೃಹಬಂಧನದಲ್ಲಿದ್ದ ಮಹಿಳೆಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಚಿಕ್ಕಮಗಳೂರು ನಗರದ ದೋಣಿಕಣ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ವೈದ್ಯನೊಬ್ಬ ತನ್ನ ಪತ್ನಿಯನ್ನು ಮನೆಯಲ್ಲೇ ಬಂಧಿಸಿ ಚಿತ್ರಹಿಂಸೆ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಮಹಿಳೆ ಚಿಕ್ಕಮಗಳೂರು ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದು, ಇದೀಗ ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇನ್ನು ಪೊಲೀಸರಿಗೆ ಈ ಸುದ್ದಿ ತಿಳಿಯುತ್ತಿದ್ದಂತೆ ಮಹಿಳೆಯ ಪತಿ ರವಿಕುಮಾರ್ ನಾಪತ್ತೆಯಾಗಿದ್ದಾನೆ. ಮಹಿಳೆಯನ್ನು ಚಿಕ್ಕಮಗಳೂರು ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರವಿಕುಮಾರ್ ವೃತ್ತಿಯಲ್ಲಿ ವೈದ್ಯರಾಗಿದ್ದು, ಡಾ. ರವಿಕುಮಾರ್ ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ. 22 ವರ್ಷಗಳ ಹಿಂದೆ ಡಾ.ರವಿಕುಮಾರ್, ವಿನುತಾರಾಣಿ (48) ಅವರನ್ನು ವಿವಾಹವಾಗಿದ್ದ. ನಂತರ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಇಬ್ಬರು ಬೇರೆಯಾಗಿದ್ದಾರೆ. ಕಳೆದ 1 ವರ್ಷದ ಹಿಂದೆ ವಿನುತಾರಾಣಿ ಅವರಿಗೆ ಡಾ.ರವಿಕುಮಾರ್ ವಿಚ್ಛೇದನ ನೀಡಿದ್ದಾರೆ.
ವಿನುತಾ ರಾಣಿ ಮೂಲತಃ ಶಿವಮೊಗ್ಗದ ವಿನೋಬಾನಗರದವರು, ಆದರೆ ವಿಚ್ಛೇದನ ನೀಡಿ ಕೂಡಾ ಆಕೆಯನ್ನು ಮನೆಯಲ್ಲಿ ಕೂಡಿ ಹಾಕಿದ್ದಾನೆ ಎಂದು ವಿನುತಾ ರಾಣಿ ಅವರ ಮನೆಯವರು ಆರೋಪಿಸಿದ್ದಾರೆ. ಡಾ.ರವಿಕುಮಾರ್ ವಿನುತಾ ರಾಣಿಗೆ ಚಿತ್ರಹಿಂಸೆ ನೀಡಿರುವ ಬಗ್ಗೆಯೂ ದೂರಿನಲ್ಲಿ ತಿಳಿಸಲಾಗಿದೆ. ಆಕೆಯ ಗಂಡ ಊಟದಲ್ಲಿ ಮತ್ತಿನ ಔಷಧ ನೀಡುತ್ತಿದ್ದ, ಜತೆಗೆ ಮನೆಯಲ್ಲೇ ಬಂಧಿಸಿ ಚಿತ್ರಹಿಂಸೆ ನೀಡುತ್ತಿದ್ದ ಎಂದು ಆರೋಪಿಸಿದ್ದಾರೆ. ಇದೀಗ ಮಹಿಳೆಯ ಕುಟುಂಬದವರು ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದು, ಬಂಧಿಸುವಂತೆ ಒತ್ತಾಯಿಸಿದ್ದಾರೆ. ವಿನುತಾ ರಾಣಿ ತೀವ್ರ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಕುಟುಂಬ ಹಾಗೂ ಮಹಿಳೆಯ ಹೇಳಿಕೆ ಆಧಾರದ ಮೇಲೆ ದೂರು ದಾಖಲಿಸಿಕೊಂಡು ನಾಪತ್ತೆಯಾಗಿರುವ ಡಾ.ರವಿಕುಮಾರ್ನ ಪತ್ತೆಗಾಗಿ ಕಾರ್ಯಚರಣೆ ನಡೆಸುತ್ತಿದ್ದಾರೆ.

The post ಗೃಹಬಂಧನದಲ್ಲಿಟ್ಟು ಪತ್ನಿಯನ್ನು ಚಿತ್ರಹಿಂಸೆ ನೀಡಿದ ವೈದ್ಯ ಪತಿ appeared first on Good News 24x7.

]]>
9 ಸಾವಿರ‌ ಮಂದಿ ವೈದ್ಯ ಸಂಪತ್ತನ್ನು ಸೃಷ್ಟಿಸಿದ ಶತಮಾನದ ಕಾಲೇಜು : ಸಿಎಂ ಸಿದ್ದರಾಮಯ್ಯ ಪ್ರಶಂಸೆ https://www.goodnews24x7.com/century-college-where-9-thousand-doctors-created-wealth-cm-siddaramaiah-praised/ Sat, 28 Sep 2024 13:51:45 +0000 https://www.goodnews24x7.com/?p=675 9 ಸಾವಿರ‌ ಮಂದಿ ವೈದ್ಯ ಸಂಪತ್ತನ್ನು ಸೃಷ್ಟಿಸಿದ ಶತಮಾನದ ಕಾಲೇಜು : ಸಿಎಂ ಸಿದ್ದರಾಮಯ್ಯ ಪ್ರಶಂಸೆ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶತಮಾನೋತ್ಸವದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಶತಮಾನ ಕಂಡ…

The post 9 ಸಾವಿರ‌ ಮಂದಿ ವೈದ್ಯ ಸಂಪತ್ತನ್ನು ಸೃಷ್ಟಿಸಿದ ಶತಮಾನದ ಕಾಲೇಜು : ಸಿಎಂ ಸಿದ್ದರಾಮಯ್ಯ ಪ್ರಶಂಸೆ appeared first on Good News 24x7.

]]>

9 ಸಾವಿರ‌ ಮಂದಿ ವೈದ್ಯ ಸಂಪತ್ತನ್ನು ಸೃಷ್ಟಿಸಿದ ಶತಮಾನದ ಕಾಲೇಜು : ಸಿಎಂ ಸಿದ್ದರಾಮಯ್ಯ ಪ್ರಶಂಸೆ

ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶತಮಾನೋತ್ಸವದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಶತಮಾನ ಕಂಡ ಮೈಸೂರು ವೈದ್ಯಕೀಯ ಕಾಲೇಜು 9 ಸಾವಿರ‌ ಮಂದಿ ವೈದ್ಯ ಸಂಪತ್ತನ್ನು ಸೃಷ್ಟಿಸಿದ ಹೆಗ್ಗಳಿಕೆ ಹೊಂದಿದೆ. ಪ್ರಪಂಚದಾದ್ಯಂತ ಈ ಕಾಲೇಜಿನಲ್ಲಿ ಕಲಿತ ವೈದ್ಯರು ವಿಸ್ತರಿಸಿಕೊಂಡಿದ್ದಾರೆ ಎಂದರು.

ಖಾಸಗಿ ಆಸ್ಪತ್ರೆಗಳಿಗಿಂತ ಸರ್ಕಾರಿ ಆಸ್ಪತ್ರೆಗಳ ವೈದ್ಯರಿಗೆ ಹೆಚ್ಚು ಪರಿಣಿತಿ ಮತ್ತು ಅನುಭವ ಇರುತ್ತದೆ ಎನ್ನುವುದು ನನ್ನ ಭಾವನೆ. ಸರ್ಕಾರಿ ಆಸ್ಪತ್ರೆಗೆ ಬರುವವರು ಹೆಚ್ಚಿನವರು ಬಡವರು. ಇವರು ವೈದ್ಯರನ್ನು ದೇವರಂತೆ ಕಾಣುತ್ತಾರೆ ಎಂದರು.ವೈದ್ಯಕೀಯ ಕ್ಷೇತ್ರದ್ದು ಎರಡು ರೀತಿಯ ಜವಾಬ್ದಾರಿ ಇದೆ. ರೋಗ ಬಂದ ನಂತರ ಚಿಕಿತ್ಸೆ ಕೊಡುವುದು ಮತ್ತು ರೋಗ ಬರದಂತೆ ತಡೆಯುವುದೂ ಕೂಡ ವೈದ್ಯಕೀಯ ಕ್ಷೇತ್ರದ ಜವಾಬ್ದಾರಿ ಆಗಿದೆ ಎಂದರು.

ವೈದ್ಯರು ಸಮಾಜದ ಆಸ್ತಿ. ಇನ್ನೂ ಹೆಚ್ಚಿನ ವೈದ್ಯರು ಈ ಕಾಲೇಜಿನಿಂದ ಹೊರಗೆ ಬಂದು ಜನರ ಆಸ್ತಿ ಆಗಲಿ.‌ ಸೇವೆ, ಶುಚಿತ್ವ ಮತ್ತು ಗುಣಮಟ್ಟದಲ್ಲಿ ಯಾವುದಕ್ಕೂ ಕಡಿಮೆ ಇಲ್ಲದಂತೆ ಮೈಸೂರು ವೈದ್ಯಕೀಯ ಕಾಲೇಜು ಪ್ರಗತಿ ಕಾಣಲಿ ಎಂದು ಹಾರೈಸಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ.ಮಹದೇವಪ್ಪ, ವೈದ್ಯಕೀಯ ಶಿಕ್ಷಣ ಸಚಿವರರಾದ ಶರಣ ಪ್ರಕಾಶ್ ಪಾಟೀಲ್, ಶಾಸಕರುಗಳಾದ ತನ್ವೀರ್ ಸೇಠ್, ಹರೀಶ್ ಗೌಡ, ಡಾ.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ಡಾ.ತಿಮ್ಮಯ್ಯ, ಹಿರಿಯ ಐಪಿಎಸ್ ಅಧಿಕಾರಿ ಬೋರಲಿಂಗಯ್ಯ ಸೇರಿ‌ ಹಲವು ಪ್ರಮುಖರು ಉಪಸ್ಥಿತರಿದ್ದರು.

The post 9 ಸಾವಿರ‌ ಮಂದಿ ವೈದ್ಯ ಸಂಪತ್ತನ್ನು ಸೃಷ್ಟಿಸಿದ ಶತಮಾನದ ಕಾಲೇಜು : ಸಿಎಂ ಸಿದ್ದರಾಮಯ್ಯ ಪ್ರಶಂಸೆ appeared first on Good News 24x7.

]]>