documents Archives - Good News 24x7 https://www.goodnews24x7.com/tag/documents/ Kannada Fri, 03 Jul 2026 06:13:04 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg documents Archives - Good News 24x7 https://www.goodnews24x7.com/tag/documents/ 32 32 16 ದಾಖಲೆಗಳ ನೀಡಿದ್ರೂ ಸಿಗದ ಭಾರತೀಯ ಪೌರತ್ವ https://www.goodnews24x7.com/indian-citizenship-not-granted-despite-submitting-16-documents/ Fri, 03 Jul 2026 06:13:04 +0000 https://www.goodnews24x7.com/?p=9744 ಗುವಾಹಟಿ ಹೈಕೋರ್ಟ್ ಇತ್ತೀಚೆಗೆ ವ್ಯಕ್ತಿಯೊಬ್ಬರ ಪೌರತ್ವ ಸಾಬೀತುಪಡಿಸಲು ಸಲ್ಲಿಸಿದ್ದ 16 ಪ್ರಮುಖ ದಾಖಲೆಗಳನ್ನು ತಿರಸ್ಕರಿಸಿದೆ. ಪ್ಯಾನ್, ವೋಟರ್ ಐಡಿ ಸೇರಿದಂತೆ ಹಲವು ದಾಖಲೆಗಳಲ್ಲಿನ ಲೋಪದೋಷಗಳಿಂದಾಗಿ ಅರ್ಜಿದಾರರನ್ನು ವಿದೇಶಿ ಎಂದು ಘೋಷಿಸಲಾಗಿದೆ. ಭಾರತೀಯ ಪೌರತ್ವ ಸಾಬೀತಿಗೆ ವ್ಯಕ್ತಿಯ ಮೇಲೆ ಇರುವ ಹೊಣೆಯ ಜೊತೆಗೆ,…

The post 16 ದಾಖಲೆಗಳ ನೀಡಿದ್ರೂ ಸಿಗದ ಭಾರತೀಯ ಪೌರತ್ವ appeared first on Good News 24x7.

]]>

ಗುವಾಹಟಿ ಹೈಕೋರ್ಟ್ ಇತ್ತೀಚೆಗೆ ವ್ಯಕ್ತಿಯೊಬ್ಬರ ಪೌರತ್ವ ಸಾಬೀತುಪಡಿಸಲು ಸಲ್ಲಿಸಿದ್ದ 16 ಪ್ರಮುಖ ದಾಖಲೆಗಳನ್ನು ತಿರಸ್ಕರಿಸಿದೆ. ಪ್ಯಾನ್, ವೋಟರ್ ಐಡಿ ಸೇರಿದಂತೆ ಹಲವು ದಾಖಲೆಗಳಲ್ಲಿನ ಲೋಪದೋಷಗಳಿಂದಾಗಿ ಅರ್ಜಿದಾರರನ್ನು ವಿದೇಶಿ ಎಂದು ಘೋಷಿಸಲಾಗಿದೆ. ಭಾರತೀಯ ಪೌರತ್ವ ಸಾಬೀತಿಗೆ ವ್ಯಕ್ತಿಯ ಮೇಲೆ ಇರುವ ಹೊಣೆಯ ಜೊತೆಗೆ, ದಾಖಲೆಗಳ ಲಿಂಕ್ ಕೊರತೆ ಮತ್ತು ಕಾಗುಣಿತ ವ್ಯತ್ಯಾಸಗಳು ತಿರಸ್ಕಾರಕ್ಕೆ ಪ್ರಮುಖ ಕಾರಣಗಳಾಗಿವೆ. ಈ ಪ್ರಕರಣವು ಅಸ್ಸಾಂನಲ್ಲಿ ಪೌರತ್ವ ಸಾಬೀತಿನ ಸವಾಲುಗಳನ್ನು ಎತ್ತಿ ತೋರಿಸುತ್ತದೆ

16 ದಾಖಲೆಗಳ ನೀಡಿದ್ರೂ ಸಿಗದ ಭಾರತೀಯ ಪೌರತ್ವ, ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್

ಗುವಾಹಟಿ, ಜುಲೈ 03: ಪೌರತ್ವ(Citizenship) ಸಾಬೀತುಪಡಿಸುವ ನಿಟ್ಟಿನಲ್ಲಿ ವ್ಯಕ್ತಿಯೊಬ್ಬರು ಸಲ್ಲಿಕೆ ಮಾಡಿದ್ದ ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ ಸೇರಿದಂತೆ ಬರೋಬ್ಬರಿ 16 ಪ್ರಮುಖ ದಾಖಲೆಗಳನ್ನು ಗುವಾಹಟಿ ಹೈಕೋರ್ಟ್ ತಿರಸ್ಕರಿಸಿದೆ. ಈ ಎಲ್ಲಾ ದಾಖಲೆಗಳಿದ್ದರೂ ಅರ್ಜಿದಾರ ತಾನು ಭಾರತೀಯ ಪ್ರಜೆ ಎಂಬುದನ್ನು ಕಾನೂನಾತ್ಮಕವಾಗಿ ಸಾಬೀತುಪಡಿಸಲು ವಿಫಲನಾಗಿದ್ದಾನೆ ಎಂದು ನ್ಯಾಯಾಲಯ ಹೇಳಿದೆ.

ಏನಿದು ಪ್ರಕರಣ? ಹೈಕೋರ್ಟ್ ಮೆಟ್ಟಿಲೇರಿದ್ದು ಯಾಕೆ? ಅಸ್ಸಾಂನ ಕಾಮರೂಪ್ ಜಿಲ್ಲೆಯ ವಿದೇಶಿಯರ ನ್ಯಾಯಮಂಡಳಿಯು 2019 ರ ಫೆಬ್ರವರಿಯಲ್ಲಿ ಅಮೀನುಲ್ ಹೋಕ್ ಎಂಬಾತನನ್ನು ವಿದೇಶಿ (ಅಕ್ರಮ ವಲಸಿಗ) ಎಂದು ಘೋಷಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಹೋಕ್ ಗುವಾಹಟಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.

ತಾನು ಭಾರತೀಯ ಎಂದು ಸಾಬೀತುಪಡಿಸಲು ಹೋಕ್ ಅವರು 1951 ರ ಎನ್‌ಆರ್‌ಸಿ (NRC) ಪ್ರತಿ, 1966 ರಿಂದ 2017 ರವರೆಗಿನ ಪೋಷಕರ ಮತದಾರರ ಪಟ್ಟಿ, 1973 ರ ಭೂ ಖರೀದಿ ಪತ್ರಗಳು, ಪ್ಯಾನ್ ಕಾರ್ಡ್ (PAN), ವೋಟರ್ ಐಡಿ ಮತ್ತು ಶಾಲಾ ಪ್ರಮಾಣಪತ್ರ ಸೇರಿದಂತೆ 16 ದಾಖಲೆಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದರು.

ದಾಖಲೆಗಳನ್ನು ಹೈಕೋರ್ಟ್ ತಿರಸ್ಕರಿಸಿದ್ದೇಕೆ? ನ್ಯಾಯಮೂರ್ತಿಗಳಾದ ಕಲ್ಯಾಣ್ ರೈ ಸುರಾನ ಮತ್ತು ಶಮೀಮಾ ಜಹಾನ್ ಅವರ ಪೀಠವು ಜೂನ್ 30 ರಂದು ಈ ಆದೇಶ ಪ್ರಕಟಿಸಿದೆ. ವಿದೇಶಿಯರ ಕಾಯ್ದೆ 1964ರ ಸೆಕ್ಷನ್ 9 ರ ಪ್ರಕಾರ, ಒಬ್ಬ ವ್ಯಕ್ತಿ ವಿದೇಶಿಯೇ ಅಥವಾ ಅಲ್ಲವೇ ಎಂಬ ಪ್ರಶ್ನೆ ಎದ್ದಾಗ, ತಾನು ಭಾರತೀಯ ಪ್ರಜೆ ಎಂದು ಸಾಬೀತುಪಡಿಸುವ ಸಂಪೂರ್ಣ ಜವಾಬ್ದಾರಿ ಆ ವ್ಯಕ್ತಿಯ ಮೇಲೆಯೇ ಇರುತ್ತದೆ. ಆದರೆ ಹೋಕ್ ಸಲ್ಲಿಸಿದ ದಾಖಲೆಗಳಲ್ಲಿ ಹಲವು ಗಂಭೀರ ಲೋಪದೋಷಗಳಿರುವುದನ್ನು ಕೋರ್ಟ್ ಪತ್ತೆಹಚ್ಚಿದೆ.

ಹೋಕ್ ಅವರ ತಂದೆ ಮತ್ತು ಅಜ್ಜನ ಹೆಸರುಗಳ ಕಾಗುಣಿತದಲ್ಲಿ ಮತದಾರರ ಪಟ್ಟಿಯಿಂದ ಪಟ್ಟಿಗೆ ಭಾರಿ ವ್ಯತ್ಯಾಸಗಳಿದ್ದವು. ಅಲ್ಲದೆ, ಅವರ ಕುಟುಂಬವು ದೋಬಕುರಾ, ಘುಗುಡೋಬಾ ಮತ್ತು ಹಶ್ಡೋಬಾ ಎಂಬ ಮೂರು ಹಳ್ಳಿಗಳಿಗೆ ವಲಸೆ ಹೋಗಿದೆ ಎಂದು ವಾದಿಸಲಾಗಿದ್ದರೂ, ಅದಕ್ಕೆ ಪೂರಕವಾದ ಯಾವುದೇ ಅಧಿಕೃತ ವಾಸಸ್ಥಳ ಬದಲಾವಣೆ ದಾಖಲೆ ಇರಲಿಲ್ಲ. ಮತದಾರರ ಪಟ್ಟಿಯ ಹೆಸರುಗಳನ್ನು ಹೊಂದಿಸಲು ಕಟ್ಟುಕಥೆ ಹೆಣೆಯಲಾಗಿದೆ ಎಂದು ಕೋರ್ಟ್ ಹೇಳಿದೆ.

ತನಿಖೆಯ ವೇಳೆ ಹೋಕ್ ಅವರ ತಂದೆ ನ್ಯಾಯಾಲಯಕ್ಕೆ ಬಂದು ಈತನೇ ನನ್ನ ಮಗ ಎಂದು ಮೌಖಿಕವಾಗಿ ಹೇಳಿಕೆ ನೀಡಿದ್ದರು. ಆದರೆ ಲಿಖಿತ ಲಿಂಕ್ ದಾಖಲೆಗಳಿಲ್ಲದೆ ಕೇವಲ ತಂದೆಯ ಮೌಖಿಕ ಸಾಕ್ಷ್ಯವನ್ನು ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ಹೋಕ್ ಸಲ್ಲಿಕೆ ಮಾಡಿದ್ದ ಹಶ್ಡೋಬಾ ಶಾಲೆಯ ಪ್ರಮಾಣಪತ್ರವನ್ನು ಬರೆದುಕೊಟ್ಟ ಮುಖ್ಯೋಪಾಧ್ಯಾಯರು ನ್ಯಾಯಾಲಯಕ್ಕೆ ಹಾಜರಾಗಿ ಅದನ್ನು ದೃಢಪಡಿಸಿರಲಿಲ್ಲ. ಹೀಗಾಗಿ ಆ ದಾಖಲೆಯನ್ನೂ ಕೋರ್ಟ್ ತಿರಸ್ಕರಿಸಿದೆ.

ಅಸ್ಸಾಂನಲ್ಲಿ 2019 ರಲ್ಲೇ ರಾಷ್ಟ್ರೀಯ ನಾಗರಿಕ ನೋಂದಣಿ (NRC) ಪ್ರಕ್ರಿಯೆ ಪೂರ್ಣಗೊಂಡಿದ್ದರೂ, ಅದು ಇನ್ನೂ ಅಧಿಕೃತವಾಗಿ ಜಾರಿಯಾಗಿಲ್ಲ. ಇಂತಹ ಸಂದರ್ಭದಲ್ಲಿ ಅಗತ್ಯ ಕಾನೂನು ಚೌಕಟ್ಟಿನ ಲಿಂಕ್ ದಾಖಲೆಗಳನ್ನು ಒದಗಿಸದ ಹಿನ್ನೆಲೆಯಲ್ಲಿ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ.

The post 16 ದಾಖಲೆಗಳ ನೀಡಿದ್ರೂ ಸಿಗದ ಭಾರತೀಯ ಪೌರತ್ವ appeared first on Good News 24x7.

]]>
ಪ್ರಚಾರಕ್ಕಾಗಿ ಹಿತಾಸಕ್ತಿ ಅರ್ಜಿ: SSLC ಹಿಂದಿ ಭಾಷೆ ವಿವಾದದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್! https://www.goodnews24x7.com/public-interest-litigation-high-court-imposes-rs-1-lakh-fine-on-petitioners-in-sslc-hindi-language-dispute/ Sat, 11 Apr 2026 09:21:27 +0000 https://www.goodnews24x7.com/?p=9197 ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗಳಿಗೆ ಅಂಕಗಳ ಬದಲಿಗೆ ಗ್ರೇಡ್ ನೀಡುವ ಸರ್ಕಾರದ ಪ್ರಸ್ತಾವನೆಯನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದ ಅರ್ಜಿದಾರರಿಗೆ ಕರ್ನಾಟಕ ಹೈಕೋರ್ಟ್ ಭಾರಿ ಮೊತ್ತದ ದಂಡ ವಿಧಿಸಿದೆ. ಕೇವಲ ಮಾಧ್ಯಮಗಳ ವರದಿಯನ್ನು ಆಧರಿಸಿ,…

The post ಪ್ರಚಾರಕ್ಕಾಗಿ ಹಿತಾಸಕ್ತಿ ಅರ್ಜಿ: SSLC ಹಿಂದಿ ಭಾಷೆ ವಿವಾದದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್! appeared first on Good News 24x7.

]]>

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗಳಿಗೆ ಅಂಕಗಳ ಬದಲಿಗೆ ಗ್ರೇಡ್ ನೀಡುವ ಸರ್ಕಾರದ ಪ್ರಸ್ತಾವನೆಯನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದ ಅರ್ಜಿದಾರರಿಗೆ ಕರ್ನಾಟಕ ಹೈಕೋರ್ಟ್ ಭಾರಿ ಮೊತ್ತದ ದಂಡ ವಿಧಿಸಿದೆ. ಕೇವಲ ಮಾಧ್ಯಮಗಳ ವರದಿಯನ್ನು ಆಧರಿಸಿ, ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ನ್ಯಾಯಾಲಯದ ಮೆಟ್ಟಿಲೇರಿದ ಬೆಂಗಳೂರಿನ ಎಚ್.ಎನ್. ಚಂದನಾ ಮತ್ತು ಎಸ್. ವೆಂಕಟೇಶ್ ಅವರಿಗೆ ನ್ಯಾಯಪೀಠವು ಒಟ್ಟು 1 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.

ನ್ಯಾಯಪೀಠದ ಕಠಿಣ ವಿನಾಶ ಮತ್ತು ಅಸಮಾಧಾನ:
ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. “ಕೇವಲ ಪತ್ರಿಕಾ ಹೇಳಿಕೆಗಳನ್ನು ಆಧರಿಸಿ ಅವುಗಳನ್ನು ರದ್ದುಗೊಳಿಸಲು ನ್ಯಾಯಾಲಯದ ಅಸಾಧಾರಣ ನ್ಯಾಯವ್ಯಾಪ್ತಿಯನ್ನು ಬಳಸಲು ಸಾಧ್ಯವಿಲ್ಲ. ಅರ್ಜಿದಾರರು ಸರ್ಕಾರದ ಯಾವುದೇ ಅಧಿಕೃತ ಆದೇಶದ ಪ್ರತಿಗಳನ್ನು ಒದಗಿಸಿಲ್ಲ. ಇದು ನ್ಯಾಯಾಲಯದ ಸಮಯ ವ್ಯರ್ಥ ಮಾಡುವ ಮತ್ತು ಪ್ರಚಾರಕ್ಕಾಗಿ ಸಲ್ಲಿಸಿರುವ ಅರ್ಜಿಯಾಗಿದೆ,” ಎಂದು ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ದಂಡದ ಮೊತ್ತ ಏರಿಕೆಗೆ ಕಾರಣವೇನು?:
ಆರಂಭದಲ್ಲಿ ನ್ಯಾಯಾಲಯವು ಅರ್ಜಿದಾರರಿಗೆ ತಲಾ 50 ಸಾವಿರ ರೂ. ದಂಡ ವಿಧಿಸಲು ನಿರ್ಧರಿಸಿತ್ತು. ಆದರೆ, ವಿಚಾರಣೆ ವೇಳೆ ಅರ್ಜಿದಾರರು ವಾದ ಮುಂದುವರಿಸಿ, “ಹಿಂದಿ ಭಾಷೆಯನ್ನೇ ತೆಗೆದುಹಾಕಲಾಗುತ್ತಿದೆ” ಎಂದು ಸುಳ್ಳು ಅಂಶವನ್ನು ಉಲ್ಲೇಖಿಸಿದರು. ಪತ್ರಿಕಾ ವರದಿಗಳಲ್ಲಿ ಅಂತಹ ಯಾವುದೇ ಅಂಶವಿಲ್ಲದಿದ್ದರೂ, ಅರ್ಜಿಯಲ್ಲಿ ತಪ್ಪು ಮಾಹಿತಿ ನೀಡಿದ್ದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠವು ದಂಡದ ಮೊತ್ತವನ್ನು 1 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಿತು.

ದಂಡ ಪಾವತಿಗೆ ಸೂಚನೆ:
ವಿಧಿಸಲಾದ ದಂಡದ ಮೊತ್ತವನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸಬೇಕು ಎಂದು ಕೋರ್ಟ್ ಸೂಚಿಸಿದೆ. ಒಂದು ವೇಳೆ ಅರ್ಜಿದಾರರು ನಿಗದಿತ ಅವಧಿಯಲ್ಲಿ ದಂಡ ಪಾವತಿಸದಿದ್ದರೆ, ಅದನ್ನು ಭೂ ಕಂದಾಯ ಬಾಕಿ ಎಂದು ಪರಿಗಣಿಸಿ ಅರ್ಜಿದಾರರ ಆಸ್ತಿಯಿಂದ ವಸೂಲಿ ಮಾಡಲು ಕಂದಾಯ ಅಧಿಕಾರಿಗಳಿಗೆ ಅವಕಾಶ ನೀಡಲಾಗುವುದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.

The post ಪ್ರಚಾರಕ್ಕಾಗಿ ಹಿತಾಸಕ್ತಿ ಅರ್ಜಿ: SSLC ಹಿಂದಿ ಭಾಷೆ ವಿವಾದದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್! appeared first on Good News 24x7.

]]>
ಸೌಜನ್ಯ ಹೆಸರಿನಲ್ಲಿ ಹೆಲ್ಪ್ ಲೈನ್ ತೆರೆದು ವಂಚಿಸಿದ ಬೆಂಗಳೂರಿನ ಮಹಿಳೆ. https://www.goodnews24x7.com/bengaluru-woman-opens-helpline-in-the-name-of-courtesy-and-cheats/ Sat, 21 Jun 2025 11:53:58 +0000 https://www.goodnews24x7.com/?p=4580 ಮಂಗಳೂರು : ಸೌಜನ್ಯ ಹೆಸರಿನಲ್ಲಿ ಹೆಲ್ಪ್ ಲೈನ್ ತೆರೆದು ಲಕ್ಷ ಲಕ್ಷ ರೂಪಾಯಿ ವಂಚನೆ ಮಾಡಿರುವ ಆರೋಪದ ಮೇಲೆ ಬೆಂಗಳೂರಿನ ಸಂಧ್ಯಾ ಪವಿತ್ರ ನಾಗರಾಜ್ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ತಾಲೂಕಿನ ಮಡಂತ್ಯಾರ್ನ…

The post ಸೌಜನ್ಯ ಹೆಸರಿನಲ್ಲಿ ಹೆಲ್ಪ್ ಲೈನ್ ತೆರೆದು ವಂಚಿಸಿದ ಬೆಂಗಳೂರಿನ ಮಹಿಳೆ. appeared first on Good News 24x7.

]]>

ಮಂಗಳೂರು : ಸೌಜನ್ಯ ಹೆಸರಿನಲ್ಲಿ ಹೆಲ್ಪ್ ಲೈನ್ ತೆರೆದು ಲಕ್ಷ ಲಕ್ಷ ರೂಪಾಯಿ ವಂಚನೆ ಮಾಡಿರುವ ಆರೋಪದ ಮೇಲೆ ಬೆಂಗಳೂರಿನ ಸಂಧ್ಯಾ ಪವಿತ್ರ ನಾಗರಾಜ್ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ತಾಲೂಕಿನ ಮಡಂತ್ಯಾರ್ನ ಮಾಲಾಡಿ ನಿವಾಸಿ ಕೆ.ರಾಜೇಶ್ ಎಂಬುವರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ.

ದೂರುದಾರ ರಾಜೇಶ್ ವೃತ್ತಿಯಲ್ಲಿ ಗಾಯಕರಾಗಿದ್ದು, ಅರವಿಂದ್ ವಿವೇಕ್ ಎಂಬ ಫೇಸ್ಬುಕ್ ಪೇಜ್ನಲ್ಲಿ ರಾಜೇಶ್ ಲೈವ್ ಸಂಗೀತ ಕಾರ್ಯಕ್ರಮ ನೀಡುತ್ತಿದ್ದರು. ರಾಜೇಶ್ ಅವರಿಗೆ ಸಂಧ್ಯಾ 2024ರಲ್ಲಿ ಫೇಸ್ಬುಕ್ ಮೂಲಕ ಪರಿಚಯವಾಗಿದ್ದಾಳೆ. ಸೌಜನ್ಯ ಹೆಲ್ಪ್ಲೈನ್ ಹೆಸರಿನಲ್ಲಿ ವಂಚನೆಗೊಳಗಾದವರಿಗೆ ನೆರವು ನೆರವಾಗುತ್ತಿದ್ದೇನೆ. ಅಮಾಯಕರ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ಬಗೆಹರಿಸಿದ್ದೇನೆ ಅಂತ ರಾಜೇಶ್ ಅವರಿಗೆ ನಂಬಿಸಿದ್ದಾಳೆ.

ಆಗ, ರಾಜೇಶ್ ಅವರು ಬಂಟ್ವಾಳ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಬಗ್ಗೆ ಸಂಧ್ಯಾ ಪವಿತ್ರ ನಾಗರಾಜ್ಗೆ ತಿಳಿಸಿದ್ದಾರೆ. ಆಗ, ಸಂಧ್ಯಾ ಹೈಕೋರ್ಟ್ನಲ್ಲಿ ಕೇಸ್ ಬಗೆಹರಿಸುತ್ತೇನೆ, ಆದರೆ, ಸ್ವಲ್ಪ ಖರ್ಚು ಇದೆ ಎಂದಿದ್ದಾಳೆ. ನಂತರ, ರಾಜೇಶ್ ಅವರಿಂದ ಸಂಧ್ಯಾ ಹಂತ ಹಂತವಾಗಿ 3.20 ಲಕ್ಷ ರೂ. ಪಡೆದಿದ್ದಾಳೆ. ಹಣ ನೀಡಿದ ನಂತರವೂ ಸಮಸ್ಯೆ ಬಗೆಹರಿಯದ ಕಾರಣ ರಾಜೇಶ್ ಅವರು ಸಂಧ್ಯಾಗೆ ಪ್ರಶ್ನಸಿದ್ದಾರೆ.

ಆಗ, ಸಂಧ್ಯಾ ಇನ್ನೂ ಹೆಚ್ಚಿನ ಹಣ ನೀಡುವಂತೆ ಸಂಧ್ಯಾ ಹೇಳಿದ್ದಾಳೆ. ಸಂಧ್ಯಾ ಮಾತು ಕೇಳಿ ಸಂಶಯಗೊಂಡ ರಾಜೇಶ್ ಅವರು ಕೋರ್ಟ್ಗೆ ಸಲ್ಲಿಸಿರುವ ದಾಖಲೆಗಳ ಬಗ್ಗೆ ಕೇಳಿದ್ದಾರೆ. ಸಂಧ್ಯಾ ಕೈಕಾಲು ಮುರಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಬಳಿಕ ರಾಜೇಶ್ ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ದೂರು ದಾಖಸಿದ್ದಾರೆ. ಬಿಎನ್ಎಸ್ ಕಾಯ್ದೆ 318(4) ಮತ್ತು 351(2) ಸೆಕ್ಷನ್ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

The post ಸೌಜನ್ಯ ಹೆಸರಿನಲ್ಲಿ ಹೆಲ್ಪ್ ಲೈನ್ ತೆರೆದು ವಂಚಿಸಿದ ಬೆಂಗಳೂರಿನ ಮಹಿಳೆ. appeared first on Good News 24x7.

]]>