dog squad Archives - Good News 24x7 https://www.goodnews24x7.com/tag/dog-squad/ Kannada Wed, 05 Mar 2025 07:16:28 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg dog squad Archives - Good News 24x7 https://www.goodnews24x7.com/tag/dog-squad/ 32 32 ಹಾಡುಹಗಲೇ ವೃದ್ದ ದಂಪತಿ ಭೀಕರ ಕೊ*, ಹುಣಸೂರು ತೋಟದ ಮನೆಯಲ್ಲಿ ಘಟನೆ. https://www.goodnews24x7.com/%e0%b2%b9%e0%b2%be%e0%b2%a1%e0%b3%81%e0%b2%b9%e0%b2%97%e0%b2%b2%e0%b3%87-%e0%b2%b5%e0%b3%83%e0%b2%a6%e0%b3%8d%e0%b2%a6-%e0%b2%a6%e0%b2%82%e0%b2%aa%e0%b2%a4%e0%b2%bf-%e0%b2%ad%e0%b3%80%e0%b2%95/ Wed, 05 Mar 2025 07:16:28 +0000 https://www.goodnews24x7.com/?p=2600 ಹುಣಸೂರು :- ಹಾಡುಹಗಲೇ ತೋಟದ ಮನೆಯಲ್ಲಿ ವೃದ್ದ ದಂಪತಿಯನ್ನ ಭೀಕರವಾಗಿ ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ನಾಡಪ್ಪನ ಹಳ್ಳಿಯಲ್ಲಿ ನಡೆದಿದೆ. ಖಾರ ಆಡಿಸುವ ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದೆ.ಬಿಳಿಕೆರೆ ಹೋಬಳಿಯ ನಾಡಪ್ಪನಹಳ್ಳಿ ಗ್ರಾಮದ ರಂಗಸ್ವಾಮಿಗೌಡ(65) ಇವರ ಪತ್ನಿ…

The post ಹಾಡುಹಗಲೇ ವೃದ್ದ ದಂಪತಿ ಭೀಕರ ಕೊ*, ಹುಣಸೂರು ತೋಟದ ಮನೆಯಲ್ಲಿ ಘಟನೆ. appeared first on Good News 24x7.

]]>

ಹುಣಸೂರು :- ಹಾಡುಹಗಲೇ ತೋಟದ ಮನೆಯಲ್ಲಿ ವೃದ್ದ ದಂಪತಿಯನ್ನ ಭೀಕರವಾಗಿ ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ನಾಡಪ್ಪನ ಹಳ್ಳಿಯಲ್ಲಿ ನಡೆದಿದೆ. ಖಾರ ಆಡಿಸುವ ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದೆ.ಬಿಳಿಕೆರೆ ಹೋಬಳಿಯ ನಾಡಪ್ಪನಹಳ್ಳಿ ಗ್ರಾಮದ ರಂಗಸ್ವಾಮಿಗೌಡ(65) ಇವರ ಪತ್ನಿ ಶಾಂತಮ್ಮ (52)ಮೃತಪಟ್ಟವರು.
ಇವರಿಗೆ ಗ್ರಾಮ‌ ಪಂಚಾಯ್ತಿ ಸದಸ್ಯ ದೇವರಾಜ್ ಸೇರಿದಂತೆ ಇಬ್ಬರು ಗಂಡು ಓರ್ವ ಮಗಳಿದ್ದಾರೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ.
ಇಂದು ಸಂಜೆ ಶುಂಠಿ ತುಂಬಿಕೊಳ್ಳಲು ಕುಕ್ಕೆ ತರಲು ಕಾರ್ಮಿಕ ಗಣೇಶ್ ತೋಟದ ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ.ರಕ್ತದ ಮಡುವಿನಲ್ಲಿ ಮೃತದೇಹಗಳನ್ನ ಕಂಡ ಗಣೇಶ್ ಕೂಡಲೇ ಪುತ್ರ ದೇವರಾಜ್ ಗೆ ತಿಳಿಸಿದ್ದಾರೆ.

ದೇವರಾಜ್ಮ ನೆಗೆ ಬಂದ ವೇಳೆಗೆ ಇಬ್ಬರೂ ಸಾವನ್ನಪ್ಪಿದ್ದರೆಂದು ಹೇಳಲಾಗಿದೆ. ಕೂಡಲೇ ಬಿಳಿಕೆರೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ದಕ್ಷಿಣ ವಲಯ ಐಜಿಪಿ ಡಾ.ಬೋರಲಿಂಗಯ್ಯ,ಎಸ್ಪಿ ವಿಷ್ಣುವರ್ಧನ್ ,ಡಿವೈಎಸ್ಪಿ ಗೋಪಾಲಕೃಷ್ಣ,ಸಬ್ ಇನ್ಸ್ಪೆಕ್ಟರ್ ಲೋಲಾಕ್ಷಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮೈಸೂರಿನಿಂದ ಶ್ವಾನದಳ. ಬೆರಳಚ್ಚು ತಜ್ಞರು ಭೇಟಿ ನೀಡಿದ್ದಾರೆ…

The post ಹಾಡುಹಗಲೇ ವೃದ್ದ ದಂಪತಿ ಭೀಕರ ಕೊ*, ಹುಣಸೂರು ತೋಟದ ಮನೆಯಲ್ಲಿ ಘಟನೆ. appeared first on Good News 24x7.

]]>
ಬೈಕ್ ಅಡ್ಡಗಟ್ಟಿ ಜೆಡಿಎಸ್ ಮುಖಂಡನ ಕೊ*; ಚಿಕ್ಕಬಳ್ಳಾಪುರದಲ್ಲಿ ಘಟನೆ. https://www.goodnews24x7.com/%e0%b2%ac%e0%b3%88%e0%b2%95%e0%b3%8d-%e0%b2%85%e0%b2%a1%e0%b3%8d%e0%b2%a1%e0%b2%97%e0%b2%9f%e0%b3%8d%e0%b2%9f%e0%b2%bf-%e0%b2%9c%e0%b3%86%e0%b2%a1%e0%b2%bf%e0%b2%8e%e0%b2%b8%e0%b3%8d-%e0%b2%ae/ Sat, 04 Jan 2025 05:31:39 +0000 https://www.goodnews24x7.com/?p=1499 ಚಿಕ್ಕಬಳ್ಳಾಪುರ: ನಡು ರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಜೆಡಿಎಸ್ ಮುಖಂಡನೋರ್ವನನ್ನು ಕೊಲೆ ಮಾಡಿರುವ ಘಟನೆ ತಾಲೂಕಿನ ತಮ್ಮನಾಯಕಹಳ್ಳಿಯ ಗೇಟ್ ಬಳಿ ನಡೆದಿದೆ. ವೆಂಕಟೇಶ್ (52) ಮೃತ ಜೆಡಿಎಸ್ ಪಕ್ಷದ ಮುಖಂಡ. ತಮ್ಮನಾಯಕನಹಳ್ಳಿ ಗೇಟ್ನಿಂದ ವೆಂಕಟೇಶ್ ತನ್ನ ಸ್ವಗ್ರಾಮ ತಮ್ಮನಾಯಕನಹಳ್ಳಿ ಮನೆಗೆ ಬೈಕ್ನಲ್ಲಿ…

The post ಬೈಕ್ ಅಡ್ಡಗಟ್ಟಿ ಜೆಡಿಎಸ್ ಮುಖಂಡನ ಕೊ*; ಚಿಕ್ಕಬಳ್ಳಾಪುರದಲ್ಲಿ ಘಟನೆ. appeared first on Good News 24x7.

]]>

ಚಿಕ್ಕಬಳ್ಳಾಪುರ: ನಡು ರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಜೆಡಿಎಸ್ ಮುಖಂಡನೋರ್ವನನ್ನು ಕೊಲೆ ಮಾಡಿರುವ ಘಟನೆ ತಾಲೂಕಿನ ತಮ್ಮನಾಯಕಹಳ್ಳಿಯ ಗೇಟ್ ಬಳಿ ನಡೆದಿದೆ. ವೆಂಕಟೇಶ್ (52) ಮೃತ ಜೆಡಿಎಸ್ ಪಕ್ಷದ ಮುಖಂಡ.
ತಮ್ಮನಾಯಕನಹಳ್ಳಿ ಗೇಟ್ನಿಂದ ವೆಂಕಟೇಶ್ ತನ್ನ ಸ್ವಗ್ರಾಮ ತಮ್ಮನಾಯಕನಹಳ್ಳಿ ಮನೆಗೆ ಬೈಕ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿಗಳು ಅಡ್ಡಗಟ್ಟಿ ಮಚ್ಚು ಲಾಂಗುಗಳಿಂದ ಮನಸೋಇಚ್ಛೆ ದಾಳಿ ಮಾಡಿದ್ದಾರೆ. ಅಲ್ಲದೇ ಕೈಗೆ ಲಾಂಗ್ಗಳಿಂದ ಹೊಡೆದಿದ್ದರಿಂದ ಕೈ ಸಹ ಕಟ್ ಆಗಿದೆ. ಮಾರಣಾಂತಿಕ ದಾಳಿ ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಒದ್ದಾಡುತ್ತಾ ವೆಂಕಟೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ವೆಂಕಟೇಶ್ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
Lavc60.20.101

ದಾಳಿ ಮಾಡಿದವರು ಯಾರು ಎಂಬ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಶ್ವಾನದಳದ ಸಿಬ್ಬಂದಿ ಹಾಗೂ ಬೆರಳಚ್ಚು ತಜ್ಞರು ಆಗಮಿಸಿದ್ದು, ಸ್ಥಳದಲ್ಲಿ ಎಲ್ಲ ಮಾಹಿತಿಯನ್ನು ಕಲೆ ಹಾಕುತ್ತಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ.
”ವೆಂಕಟೇಶ್ ಬಿಳಿ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ದುಷ್ಕರ್ಮಿಗಳು ಅವರನ್ನು ಅಡ್ಡಗಟ್ಟಿ ಹರಿತವಾದ ಮಾರಕಾಸ್ತ್ರಗಳಿಂದ ದಾಳಿ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಮೃತ ವೆಂಕಟೇಶ್ ಅವರ ತಲೆ, ಮುಖ, ಕೈ ಮೇಲೆ ಮಾರಣಾಂತಿಕ ಹಲ್ಲೆ ಆಗಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಹಲ್ಲೆ ಮಾಡಿದವರಾರು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ತಿಳಿಸಿದ್ದಾರೆ.

The post ಬೈಕ್ ಅಡ್ಡಗಟ್ಟಿ ಜೆಡಿಎಸ್ ಮುಖಂಡನ ಕೊ*; ಚಿಕ್ಕಬಳ್ಳಾಪುರದಲ್ಲಿ ಘಟನೆ. appeared first on Good News 24x7.

]]>