Domestic Archives - Good News 24x7 https://www.goodnews24x7.com/tag/domestic/ Kannada Fri, 03 Apr 2026 08:37:15 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Domestic Archives - Good News 24x7 https://www.goodnews24x7.com/tag/domestic/ 32 32 ಅಮೆರಿಕದಲ್ಲಿ ಬ್ರಾಂಡೆಡ್ ಔಷಧಗಳಿಗೆ ಟ್ರಂಪ್‌ ಬಿಗಿ ಬಲೆ – 100% ಸುಂಕ ಘೋಷಣೆ, ಫಾರ್ಮಾ ಕಂಪನಿಗಳಿಗೆ ಗಟ್ಟಿ ಸಂದೇಶ. https://www.goodnews24x7.com/trumps-tight-net-for-branded-drugs-in-america-100-tariff-announcement-a-strong-message-to-pharma-companies/ Fri, 03 Apr 2026 08:37:15 +0000 https://www.goodnews24x7.com/?p=9117 ವಾಷಿಂಗ್ಟನ್‌: ಅಮೆರಿಕದ ಮಾಜಿ ಅಧ್ಯಕ್ಷ Donald Trump ಫಾರ್ಮಾ ಕ್ಷೇತ್ರದ ಮೇಲೆ ಮತ್ತೊಂದು ದೊಡ್ಡ ಆರ್ಥಿಕ ಕ್ರಮ ಕೈಗೊಂಡಿದ್ದು, ಬ್ರಾಂಡೆಡ್ ಔಷಧಗಳ ಮೇಲೆ 100% ಸುಂಕ ವಿಧಿಸುವ ಎಚ್ಚರಿಕೆ ನೀಡಿದ್ದಾರೆ. ಪೇಟೆಂಟ್ ಹೊಂದಿರುವ ಮತ್ತು ಬ್ರಾಂಡೆಡ್ ಔಷಧಗಳನ್ನು ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ…

The post ಅಮೆರಿಕದಲ್ಲಿ ಬ್ರಾಂಡೆಡ್ ಔಷಧಗಳಿಗೆ ಟ್ರಂಪ್‌ ಬಿಗಿ ಬಲೆ – 100% ಸುಂಕ ಘೋಷಣೆ, ಫಾರ್ಮಾ ಕಂಪನಿಗಳಿಗೆ ಗಟ್ಟಿ ಸಂದೇಶ. appeared first on Good News 24x7.

]]>

ವಾಷಿಂಗ್ಟನ್‌: ಅಮೆರಿಕದ ಮಾಜಿ ಅಧ್ಯಕ್ಷ Donald Trump ಫಾರ್ಮಾ ಕ್ಷೇತ್ರದ ಮೇಲೆ ಮತ್ತೊಂದು ದೊಡ್ಡ ಆರ್ಥಿಕ ಕ್ರಮ ಕೈಗೊಂಡಿದ್ದು, ಬ್ರಾಂಡೆಡ್ ಔಷಧಗಳ ಮೇಲೆ 100% ಸುಂಕ ವಿಧಿಸುವ ಎಚ್ಚರಿಕೆ ನೀಡಿದ್ದಾರೆ.

ಪೇಟೆಂಟ್ ಹೊಂದಿರುವ ಮತ್ತು ಬ್ರಾಂಡೆಡ್ ಔಷಧಗಳನ್ನು ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಕಂಪನಿಗಳ ವಿರುದ್ಧ ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಸಂಬಂಧ ಕಾರ್ಯಾದೇಶಕ್ಕೆ ಸಹಿ ಹಾಕಲಾಗಿದೆ.

ಈ ನೀತಿಯ ಮುಖ್ಯ ಉದ್ದೇಶವು ಔಷಧ ತಯಾರಿಕಾ ಕಂಪನಿಗಳು ತಮ್ಮ ಉತ್ಪಾದನಾ ಘಟಕಗಳನ್ನು ಅಮೆರಿಕದಲ್ಲೇ ಸ್ಥಾಪಿಸಲು ಒತ್ತಾಯಿಸುವುದು, ಚೀನಾ ಸೇರಿದಂತೆ ಇತರ ದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಹಾಗೂ ದೇಶೀಯ ಉತ್ಪಾದನೆ ಮತ್ತು ಉದ್ಯೋಗವನ್ನು ಹೆಚ್ಚಿಸುವುದಾಗಿದೆ.

ಕಾರ್ಯಾದೇಶದ ಪ್ರಕಾರ, ಮುಂದಿನ ನಾಲ್ಕು ವರ್ಷಗಳಲ್ಲಿ ಅಮೆರಿಕದಲ್ಲಿ ಕಾರ್ಖಾನೆ ತೆರೆಯಲು ಒಪ್ಪಿಕೊಳ್ಳುವ ಕಂಪನಿಗಳಿಗೆ ಸುಂಕವನ್ನು 20% ಕ್ಕೆ ಇಳಿಸುವ ಅವಕಾಶ ನೀಡಲಾಗಿದೆ. ಆದರೆ 2030ರೊಳಗೆ ಉತ್ಪಾದನೆ ಪೂರ್ಣಗೊಳ್ಳದಿದ್ದರೆ, ಮತ್ತೆ 100% ಸುಂಕ ಅನ್ವಯವಾಗುತ್ತದೆ.

ಇನ್ನೂ, ಕಂಪನಿಗಳು ಅಮೆರಿಕದಲ್ಲೇ ಉತ್ಪಾದನೆ ನಡೆಸುವುದರ ಜೊತೆಗೆ “Most Favored Nation (MFN)” ದರದಲ್ಲಿ ಔಷಧಗಳನ್ನು ಪೂರೈಸಲು ಒಪ್ಪಿದರೆ, ಅವರಿಗೆ ಸಂಪೂರ್ಣ ಸುಂಕ ವಿನಾಯಿತಿ ಸಿಗಲಿದೆ.

ದೊಡ್ಡ ಕಂಪನಿಗಳಿಗೆ ತಮ್ಮ ಯೋಜನೆ ಸಲ್ಲಿಸಲು 120 ದಿನಗಳ ಗಡುವು ನೀಡಲಾಗಿದ್ದು, ಸಣ್ಣ ಕಂಪನಿಗಳಿಗೆ 180 ದಿನಗಳ ಸಮಯ ನೀಡಲಾಗಿದೆ. ಯುರೋಪಿಯನ್ ಯೂನಿಯನ್, ಜಪಾನ್, ದಕ್ಷಿಣ ಕೊರಿಯಾ ಮತ್ತು ಸ್ವಿಟ್ಜರ್ಲೆಂಡ್ ದೇಶಗಳಿಗೆ ಒಪ್ಪಂದದ ಪ್ರಕಾರ 15% ಸುಂಕ ಮಾತ್ರ ಅನ್ವಯವಾಗಲಿದೆ. ಬ್ರಿಟನ್‌ಗೆ ಇನ್ನೂ ಕಡಿಮೆ ದರ ಅಥವಾ ಸಂಪೂರ್ಣ ವಿನಾಯಿತಿ ದೊರಕುವ ಸಾಧ್ಯತೆಯಿದೆ.

ಸದ್ಯಕ್ಕೆ ಈ ನಿಯಮ ಸಾಮಾನ್ಯ ಜನರಿಕ್ ಔಷಧಗಳಿಗೆ ಅನ್ವಯಿಸುವುದಿಲ್ಲ. ಅಮೆರಿಕದಲ್ಲಿ ಬಳಸುವ ಔಷಧಗಳಲ್ಲಿ ಸುಮಾರು 90% ಜನರಿಕ್ ಆಗಿರುವುದರಿಂದ, ರೋಗಿಗಳ ಮೇಲೆ ತಕ್ಷಣದ ಬೆಲೆ ಏರಿಕೆಯ ಪರಿಣಾಮ ಬೀರದಂತೆ ಈ ಕ್ರಮ ಕೈಗೊಳ್ಳಲಾಗಿದೆ.

ಇದರ ಪರಿಣಾಮವಾಗಿ ಭಾರತ ಸೇರಿದಂತೆ ಜನರಿಕ್ ಔಷಧ ರಫ್ತು ಮಾಡುವ ದೇಶಗಳಿಗೆ ತಕ್ಷಣದ ಆರ್ಥಿಕ ಹೊಡೆತ ಎದುರಾಗುವ ಸಾಧ್ಯತೆ ಕಡಿಮೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

The post ಅಮೆರಿಕದಲ್ಲಿ ಬ್ರಾಂಡೆಡ್ ಔಷಧಗಳಿಗೆ ಟ್ರಂಪ್‌ ಬಿಗಿ ಬಲೆ – 100% ಸುಂಕ ಘೋಷಣೆ, ಫಾರ್ಮಾ ಕಂಪನಿಗಳಿಗೆ ಗಟ್ಟಿ ಸಂದೇಶ. appeared first on Good News 24x7.

]]>
ಅಜಯ್ ರಾವ್ ವಿರುದ್ಧ ಕುಟುಂಬ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ನೀಡಿದ ಪತ್ನಿ ! https://www.goodnews24x7.com/wife-files-complaint-against-ajay-rao-under-the-prevention-of-domestic-violence-act/ Sat, 16 Aug 2025 10:32:21 +0000 https://www.goodnews24x7.com/?p=6239 ಜನಪ್ರಿಯ ಕನ್ನಡ ನಟ ಅಜಯ್ ರಾವ್ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದು, ಅವರು ತಮ್ಮ ಪತ್ನಿ ಸಪ್ನಾ ಜೊತೆಗೆ ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಈ ದಂಪತಿ 2014 ರ ಡಿಸೆಂಬರ್ 18 ರಂದು ಹೊಸಪೇಟೆಯಲ್ಲಿ ಪ್ರೀತಿಸಿ ಸರಳವಾಗಿ ವಿವಾಹವಾದರು. ಇವರಿಗೆ ಚರಿಷ್ಮಾ…

The post ಅಜಯ್ ರಾವ್ ವಿರುದ್ಧ ಕುಟುಂಬ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ನೀಡಿದ ಪತ್ನಿ ! appeared first on Good News 24x7.

]]>

ಜನಪ್ರಿಯ ಕನ್ನಡ ನಟ ಅಜಯ್ ರಾವ್ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದು, ಅವರು ತಮ್ಮ ಪತ್ನಿ ಸಪ್ನಾ ಜೊತೆಗೆ ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಈ ದಂಪತಿ 2014 ರ ಡಿಸೆಂಬರ್ 18 ರಂದು ಹೊಸಪೇಟೆಯಲ್ಲಿ ಪ್ರೀತಿಸಿ ಸರಳವಾಗಿ ವಿವಾಹವಾದರು. ಇವರಿಗೆ ಚರಿಷ್ಮಾ ಎಂಬ ಮಗಳಿದ್ದಾಳೆ, ಅವಳು 2019 ರಲ್ಲಿ ಜನಿಸಿದ್ದಾಳೆ. ಮದುವೆಯಾದ 11 ವರ್ಷಗಳ ನಂತರ, ಅಜಯ್ ಮತ್ತು ಸಪ್ನಾ ಬೇರ್ಪಟ್ಟಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ. ಈ ಮಧ್ಯೆ, ಸಪ್ನಾ ಅವರು ಅಜಯ್ ರಾವ್ ವಿರುದ್ಧ ಕುಟುಂಬ ದೌರ್ಜನ್ಯ ತಡೆ ಕಾಯ್ದೆಯ ಅಡಿಯಲ್ಲಿ (ಸೆಕ್ಷನ್ 12) ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ಅವರ ಮಗಳು ಚರಿಷ್ಮಾ ಕೂಡ ಅಜಯ್ ವಿರುದ್ಧ ದೂರು ನೀಡಿರುವ ಬಗ್ಗೆ ವರದಿಯಾಗಿದೆ, ಆದರೆ ಈ ಪ್ರಕರಣದ ಕುರಿತು ಇನ್ನಷ್ಟು ಮಾಹಿತಿಗಳು ಬಹಿರಂಗವಾಗಬೇಕಿದೆ.

ಅಜಯ್ ರಾವ್ 2003ರಲ್ಲಿ ಬಿಡುಗಡೆಯಾದ ‘ಎಕ್ಸ್ಕ್ಯೂಸ್ ಮೀ’ ಚಿತ್ರದಿಂದ ನಾಯಕ ನಟನಾಗಿ ಸಿನಿ ಕ್ಷೇತ್ರಕ್ಕೆ ಪ್ರವೇಶಿಸಿದರು. ಇದರ ಮೊದಲು ಅವರು ‘ಕಿಚ್ಚ’ ಚಿತ್ರದ ಮೂಲಕ ಸುದೀಪ್ ಗೆಳೆಯನ ಪಾತ್ರದಲ್ಲಿ ಅಭಿನಯಿಸಿದ್ದರು. ನಂತರ ‘ತಾಜ್ ಮಹಲ್’, ‘ಪ್ರೇಮ್ ಕಹಾನಿ’, ‘ಕೃಷ್ಣನ್ ಲವ್ ಸ್ಟೋರಿ’, ‘ಕೃಷ್ಣನ್ ಮ್ಯಾರೇಜ್ ಸ್ಟೋರಿ’, ‘ಕೃಷ್ಣ-ಲೀಲಾ’ ಮುಂತಾದ ಹಲವಾರು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ‘ಯುದ್ಧಕಾಂಡ 2’ ಚಿತ್ರದಲ್ಲಿ ಅವರು ನಟನೆಯ ಜೊತೆಗೆ ನಿರ್ಮಾಣ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದರು.

The post ಅಜಯ್ ರಾವ್ ವಿರುದ್ಧ ಕುಟುಂಬ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ನೀಡಿದ ಪತ್ನಿ ! appeared first on Good News 24x7.

]]>