DonaldTrump Archives - Good News 24x7 https://www.goodnews24x7.com/tag/donaldtrump/ Kannada Tue, 24 Mar 2026 10:42:23 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg DonaldTrump Archives - Good News 24x7 https://www.goodnews24x7.com/tag/donaldtrump/ 32 32 ಮೊಜ್ತಬಾ ಖಮೇನಿ ಅಮೆರಿಕದ ಜೊತೆ ಶಾಂತಿ ಮಾತುಕತೆ! https://www.goodnews24x7.com/mojtaba-khamenei-to-hold-peace-talks-with-us/ Tue, 24 Mar 2026 10:42:16 +0000 https://www.goodnews24x7.com/?p=8958 ವಾಷಿಂಗ್ಟನ್‌: ಅಮೆರಿಕದ ಜೊತೆ ಮಾತುಕತೆ ನಡೆಸಲು ಇರಾನಿನ ಹೊಸ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.ಮೊಜ್ತಬಾ ಖಮೇನಿ ಅಮೆರಿಕದ ಜೊತೆ ಶಾಂತಿ ಮಾತುಕತೆ ನಡೆಸಲು ಒಪ್ಪಿಕೊಂಡಿದ್ದಾರೆ ಎಂದು ಸೌದಿ ಸರ್ಕಾರದ ಅಲ್ ಅರೇಬಿಯಾ ಮಾಧ್ಯಮ ವರದಿ ಮಾಡಿದೆ. ಈ…

The post ಮೊಜ್ತಬಾ ಖಮೇನಿ ಅಮೆರಿಕದ ಜೊತೆ ಶಾಂತಿ ಮಾತುಕತೆ! appeared first on Good News 24x7.

]]>

ವಾಷಿಂಗ್ಟನ್‌: ಅಮೆರಿಕದ ಜೊತೆ ಮಾತುಕತೆ ನಡೆಸಲು ಇರಾನಿನ ಹೊಸ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.ಮೊಜ್ತಬಾ ಖಮೇನಿ ಅಮೆರಿಕದ ಜೊತೆ ಶಾಂತಿ ಮಾತುಕತೆ ನಡೆಸಲು ಒಪ್ಪಿಕೊಂಡಿದ್ದಾರೆ ಎಂದು ಸೌದಿ ಸರ್ಕಾರದ ಅಲ್ ಅರೇಬಿಯಾ ಮಾಧ್ಯಮ ವರದಿ ಮಾಡಿದೆ. ಈ ವರದಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಇರಾನ್‌ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಸೋಮವಾರ ಟ್ರೂಥ್‌ ಸಾಮಾಜಿಕ ಜಾಲತಾಣದಲ್ಲಿ ಟ್ರಂಪ್‌ ಇರಾನ್ ದೇಶದ ಜೊತೆ ಕಳೆದ ಎರಡು ದಿನಗಳಲ್ಲಿ ಉತ್ತಮ ಮಾತುಕತೆ ನಡೆದಿದೆ. ಫಲಪ್ರದವಾದ ಮಾತುಕತೆ ನಡೆದ ಹಿನ್ನೆಲೆಯಲ್ಲಿ ಇರಾನಿನ ವಿದ್ಯುತ್ ಸ್ಥಾವರಗಳು ಮತ್ತು ಇಂಧನ ಮೂಲಸೌಕರ್ಯಗಳ ಮೇಲಿನ ಎಲ್ಲಾ ಮಿಲಿಟರಿ ದಾಳಿಗಳನ್ನು ಐದು ದಿನಗಳ ಅವಧಿಗೆ ಮುಂದೂಡಲು ಸೂಚನೆ ನೀಡಿದ್ದೇನೆ ಎಂದು ಪೋಸ್ಟ್‌ ಮಾಡಿದ್ದರು.

ಈ ಪೋಸ್ಟ್‌ಗೆ ಮೊದಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ 48 ಗಂಟೆಗಳಲ್ಲಿ ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ನಿಮ್ಮ ವಿದ್ಯುತ್‌ ಸ್ಥಾವರ ನಾಶ ಮಾಡುವುದಾಗಿ ಇರಾನಿಗೆ ಬೆದರಿಕೆ ಹಾಕಿದ್ದರು. ಈ ಡೆಡ್‌ಲೈನ್‌ ಒಳಗಡೆ ಇರಾನ್‌ ತೆರೆಯದೇ ಇದ್ದರೆ ದೊಡ್ಡ ಪ್ರಮಾಣದ ಯುದ್ಧ ನಡೆಯುವ ಸಾಧ್ಯತೆ ಇತ್ತು.

ಅಮೆರಿಕದ ಬೆದರಿಕೆಗೆ ಜಗ್ಗದ ಇರಾನ್‌, ಒಂದು ವೇಳೆ ನಮ್ಮ ಇಂಧನ, ವಿದ್ಯುತ್‌ ಮೂಲಸೌಕರ್ಯಗಳನ್ನು ನಾಶ ಮಾಡಿದರೆ ಮಧ್ಯಪ್ರಾಚ್ಯದಲ್ಲಿರುವ ಇತರ ದೇಶಗಳ ಇಂಧನ, ವಿದ್ಯುತ್‌ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುತ್ತೇವೆ ಎಂದು ತಿರುಗೇಟು ನೀಡಿತ್ತು.

The post ಮೊಜ್ತಬಾ ಖಮೇನಿ ಅಮೆರಿಕದ ಜೊತೆ ಶಾಂತಿ ಮಾತುಕತೆ! appeared first on Good News 24x7.

]]>
ಹಾರ್ಮುಜ್ ಜಲಸಂಧಿಯಲ್ಲಿ ನೇವಲ್‌ ಮೈನ್ಸ್‌– ಇರಾನಿನ 16 ಹಡಗುಗಳನ್ನು ನಾಶ ಮಾಡಿರುವುದಾಗಿ ಅಮೆರಿಕದ ತಿಳಿಸಿದೆ. https://www.goodnews24x7.com/naval-mines-in-the-strait-of-hormuz-the-us-has-said-that-it-has-destroyed-16-iranian-ships/ Wed, 11 Mar 2026 10:44:31 +0000 https://www.goodnews24x7.com/?p=8850 ವಾಷಿಂಗ್ಟನ್‌: ತನ್ನ ಮೇಲೆ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಇರಾನ್‌ ಈಗ ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳು ಸಂಚರಿಸದಂತೆ ಸಮುದ್ರದ ಒಳಗಡೆ ಸ್ಫೋಟಕವನ್ನು ಇರಿಸಿದ ವಿಚಾರ ಬೆಳಕಿಗೆ ಬಂದಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರತಿಕ್ರಿಯಿಸಿ, ಇರಾನ್ ಹಾರ್ಮುಜ್ ಜಲಸಂಧಿಯಲ್ಲಿ ಯಾವುದೇ ನೇವಲ್‌ ಮೈನ್ಸ್‌…

The post ಹಾರ್ಮುಜ್ ಜಲಸಂಧಿಯಲ್ಲಿ ನೇವಲ್‌ ಮೈನ್ಸ್‌– ಇರಾನಿನ 16 ಹಡಗುಗಳನ್ನು ನಾಶ ಮಾಡಿರುವುದಾಗಿ ಅಮೆರಿಕದ ತಿಳಿಸಿದೆ. appeared first on Good News 24x7.

]]>

ವಾಷಿಂಗ್ಟನ್‌: ತನ್ನ ಮೇಲೆ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಇರಾನ್‌ ಈಗ ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳು ಸಂಚರಿಸದಂತೆ ಸಮುದ್ರದ ಒಳಗಡೆ ಸ್ಫೋಟಕವನ್ನು ಇರಿಸಿದ ವಿಚಾರ ಬೆಳಕಿಗೆ ಬಂದಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರತಿಕ್ರಿಯಿಸಿ, ಇರಾನ್ ಹಾರ್ಮುಜ್ ಜಲಸಂಧಿಯಲ್ಲಿ ಯಾವುದೇ ನೇವಲ್‌ ಮೈನ್ಸ್‌ ಹಾಕಿದ್ದರೆ ತಕ್ಷಣವೇ ತೆಗೆದು ಹಾಕಬೇಕು. ಒಂದು ವೇಳೆ ತೆಗೆಯದೇ ಇದ್ದರೆ ಹಿಂದೆಂದು ಕಾಣದ ರೀತಿಯಲ್ಲಿ ಇರಾನ್‌ ಮೇಲೆ ಮಿಲಿಟರಿ ದಾಳಿ ನಡೆಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.ಹಾರ್ಮುಜ್ ಜಲಸಂಧಿಯಲ್ಲಿ ನೇವಲ್‌ ಮೈನ್ಸ್‌ ಹಾಕುತ್ತಿದ್ದ ಇರಾನಿನ 16 ಹಡಗುಗಳನ್ನು ತಾನು ನಾಶ ಮಾಡಿರುವುದಾಗಿ ಅಮೆರಿಕದ ತಿಳಿಸಿದೆ

ಏನಿದು ನೇವಲ್‌ ಮೈನ್ಸ್‌?
ನಕ್ಸಲೈಟ್‌ಗಳು, ಉಗ್ರಗಾಮಿಗಳು ಭೂಮಿ ಒಳಗಡೆ ಬಾಂಬ್‌ ಇಡುವುದನ್ನು ನೀವು ಓದಿರಬಹುದು. ಈ ನೆಲಬಾಂಬ್‌ ಹುದುಗಿಸಿದ ಜಾಗದ ಮೇಲೆ ಕಾಲು ಇಟ್ಟಾಗ ಅಥವಾ ವಾಹನಗಳು ಸಂಚರಿಸಿದಾಗ ಒತ್ತಡದಿಂದ ಅದು ಸ್ಫೋಟಗೊಳ್ಳುತ್ತದೆ. ಅದೇ ರೀತಿಯಾಗಿ ನೀರಿನ ಒಳಗಡೆಯೂ ಸ್ಫೋಟಕಗಳನ್ನು ಇರಿಸಿ ಹಡಗುಗಳು, ಜಲಾಂತರ್ಗಾಮಿಗಳನ್ನು ನಾಶ ಮಾಡಲು ನೇವಲ್‌ ಮೈನ್ಸ್‌ ಬಳಕೆ ಮಾಡಲಾಗುತ್ತದೆ. ಹಡಗುಗಳು ಅವುಗಳ ಸಂಪರ್ಕಕ್ಕೆ ಬಂದಾಗ ಅಥವಾ ಅವುಗಳ ಹತ್ತಿರ ಸುಳಿದಾಗ ಸ್ಫೋಟಗೊಳ್ಳುವಂತೆ ವಿನ್ಯಾಸ ಮಾಡಲಾಗಿರುತ್ತದೆ.ಈ ಮೈನ್‌ಗಳನ್ನು ರಕ್ಷಣಾತ್ಮಕವಾಗಿ (ತನ್ನದೇ ಆದ ಹಡಗುಗಳನ್ನು ರಕ್ಷಿಸಲು) ಅಥವಾ ಆಕ್ರಮಣಕಾರಿಯಾಗಿ (ಶತ್ರುಗಳ ಹಡಗುಗಳ ಸಂಚಾರವನ್ನು ತಡೆಯಲು) ಬಳಸಲಾಗುತ್ತದೆ.

ಯಾವ ರೀತಿ ಇರುತ್ತೆ?
ಕೆಲವು ಮೈನ್‌ಗಳನ್ನು ಸಮುದ್ರದ ತಳಕ್ಕೆ ಹಾಕಿದ್ದರೆ, ಇನ್ನು ಕೆಲವು ನೀರಿನಲ್ಲಿ ತೇಲುತ್ತಿರುತ್ತವೆ. ಈ ಸ್ಫೋಟಕಗಳನ್ನು ತಾಗಿದಾಗ ಸ್ಫೋಟಗೊಳ್ಳುತ್ತದೆ. ಹಡಗು ಸಂಚರಿಸುತ್ತಿದ್ದಾಗ ಕಾಂತೀಯ ಕ್ಷೇತ್ರ, ಪ್ರೊಪೆಲ್ಲರ್‌ ಶಬ್ಧ ನೀರಿನ ಒತ್ತಡದಲ್ಲಿನ ಬದಲಾವಣೆಗಳನ್ನು ಪತ್ತೆಹಚ್ಚಿ ಸ್ಫೋಟಗೊಳ್ಳುವಂತೆ ರೂಪಿಸಲಾಗಿರುತ್ತದೆ.

ಇವುಗಳನ್ನು ವಿಶೇಷ ಹಡಗುಗಳು, ಜಲಾಂತರ್ಗಾಮಿಗಳು ಅಥವಾ ವಿಮಾನಗಳ ಮೂಲಕ ಸಮುದ್ರಕ್ಕೆ ಹಾಕಲಾಗುತ್ತದೆ. ಇವುಗಳು ಕ್ಷಿಪಣಿಗಳಿಗಿಂತ ಕಡಿಮೆ ವೆಚ್ಚದಾಯಕವಾಗಿದೆ ಮಾತ್ರವಲ್ಲ ಶತ್ರು ಹಡಗುಗಳಿಗೆ ಭಾರಿ ಹಾನಿ ಉಂಟುಮಾಡುತ್ತದೆ.

ಇರಾನ್‌ ದೇಶೀಯವಾಗಿ ನೇವಲ್‌ ಮೈನ್ಸ್‌ ತಯಾರಿಸುವ ಸಾಮರ್ಥ್ಯ ಹೊಂದಿದೆ. ಕೆಲವು ಸುಧಾರಿತ ವಿನ್ಯಾಸಗಳನ್ನು ರಷ್ಯಾ, ಚೀನಾ ಅಥವಾ ಉತ್ತರ ಕೊರಿಯಾದಲ್ಲಿ ಅಭಿವೃದ್ಧಿಪಡಿಸಿದ ವ್ಯವಸ್ಥೆಗಳಿಂದ ಪಡೆದಿದೆ ಎನ್ನಲಾಗುತ್ತಿದೆ.
ಅಮೆರಿಕ ಸೆಂಟರ್ ಫಾರ್ ಇಂಟರ್ನ್ಯಾಷನಲ್ ಮ್ಯಾರಿಟೈಮ್ ಸೆಕ್ಯುರಿಟಿಯ ಪ್ರಕಾರ ಇರಾನ್ ಸುಮಾರು 2,000 ರಿಂದ 5,000 ನೇವಲ್‌ ಮೈನ್ಸ್‌ ಹೊಂದಿರುವ ಸಾಧ್ಯತೆಯಿದೆ.

The post ಹಾರ್ಮುಜ್ ಜಲಸಂಧಿಯಲ್ಲಿ ನೇವಲ್‌ ಮೈನ್ಸ್‌– ಇರಾನಿನ 16 ಹಡಗುಗಳನ್ನು ನಾಶ ಮಾಡಿರುವುದಾಗಿ ಅಮೆರಿಕದ ತಿಳಿಸಿದೆ. appeared first on Good News 24x7.

]]>
ಪ್ರಧಾನಿ ಮೋದಿ ಮತ್ತು ಟ್ರಂಪ್‌ ನಡುವಿನ ಬಾಂಧವ್ಯ ಈಗ ಮೊದಲಿನಂತಿಲ್ಲ : ಅಮೆರಿಕ ಮಾಜಿ ಅಧಿಕಾರಿ ಅಭಿಪ್ರಾಯ https://www.goodnews24x7.com/pm-modi-trump-relationship-not-what-it-used-to-be-former-us-official/ Fri, 05 Sep 2025 04:32:53 +0000 https://www.goodnews24x7.com/?p=7353 ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ವೈಯಕ್ತಿಕವಾಗಿ ಉತ್ತಮ ಸಂಬಂಧ ಹೊಂದಿದ್ದರು. ಆದರೆ, ಈಗ ಅದು ಇಲ್ಲವಾಗಿದೆ ಎಂದು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಅಭಿಪ್ರಾಯಪಟ್ಟಿದ್ದಾರೆ. ಎರಡು ದಶಕಗಳಲ್ಲಿ ಭಾರತ-ಅಮೆರಿಕ ಸಂಬಂಧಗಳಲ್ಲಿ ಬಹುಶಃ ಅತ್ಯಂತ…

The post ಪ್ರಧಾನಿ ಮೋದಿ ಮತ್ತು ಟ್ರಂಪ್‌ ನಡುವಿನ ಬಾಂಧವ್ಯ ಈಗ ಮೊದಲಿನಂತಿಲ್ಲ : ಅಮೆರಿಕ ಮಾಜಿ ಅಧಿಕಾರಿ ಅಭಿಪ್ರಾಯ appeared first on Good News 24x7.

]]>

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ವೈಯಕ್ತಿಕವಾಗಿ ಉತ್ತಮ ಸಂಬಂಧ ಹೊಂದಿದ್ದರು. ಆದರೆ, ಈಗ ಅದು ಇಲ್ಲವಾಗಿದೆ ಎಂದು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಅಭಿಪ್ರಾಯಪಟ್ಟಿದ್ದಾರೆ.

ಎರಡು ದಶಕಗಳಲ್ಲಿ ಭಾರತ-ಅಮೆರಿಕ ಸಂಬಂಧಗಳಲ್ಲಿ ಬಹುಶಃ ಅತ್ಯಂತ ಕೆಟ್ಟ ಹಂತದ ಹಿನ್ನೆಲೆಯಲ್ಲಿ ಬೋಲ್ಟನ್ ಈ ಹೇಳಿಕೆ ನೀಡಿದ್ದಾರೆ. ಟ್ರಂಪ್ ಅವರ ಸುಂಕ ನೀತಿ ಮತ್ತು ಭಾರತದ ಮೇಲಿನ ನಿರಂತರ ಟೀಕೆಗಳಿಂದ ಈ ಬಿಕ್ಕಟ್ಟು ಎದುರಾಗಿದೆ.

ಅಮೆರಿಕದ ನಡೆ ಮೋದಿಯನ್ನು ರಷ್ಯಾ & ಚೀನಾಗೆ ಹತ್ತಿರವಾಗಿಸಿದೆ: ಬೋಲ್ಟನ್‌ ಬೇಸರ

ಟ್ರಂಪ್‌ ಅಂತರರಾಷ್ಟ್ರೀಯ ಸಂಬಂಧಗಳನ್ನು ನಾಯಕರೊಂದಿಗಿನ ತಮ್ಮ ವೈಯಕ್ತಿಕ ಬಾಂಧವ್ಯದ ಮೂಲಕವೇ ನೋಡುತ್ತಾರೆ. ಪುಟಿನ್‌ ಜೊತೆ ಟ್ರಂಪ್‌ ಉತ್ತಮ ಸಂಬಂಧ ಹೊಂದಿದ್ದರೆ, ಅಮೆರಿಕದೊಂದಿಗೆ ರಷ್ಯಾ ಉತ್ತಮ ಬಾಂಧವ್ಯದಲ್ಲಿದೆ ಎಂದರ್ಥ. ಆದರೆ, ಈಗ ಅಂತಹ ಪರಿಸ್ಥಿತಿ ಇಲ್ಲ ಎಂದು ತಿಳಿಸಿದ್ದಾರೆ.

ಈ ಮೊದಲ ಟ್ರಂಪ್ ಆಡಳಿತದಲ್ಲಿ NSA ಆಗಿ ಬೋಲ್ಟನ್ ಸೇವೆ ಸಲ್ಲಿಸಿದ್ದರು. ಈಗ ಟ್ರಂಪ್‌ ಅವರನ್ನೇ ನೇರವಾಗಿ ಟೀಕಿಸುತ್ತಿದ್ದಾರೆ. ಟ್ರಂಪ್ ಅವರು ಮೋದಿ ಅವರೊಂದಿಗೆ ವೈಯಕ್ತಿಕವಾಗಿ ಉತ್ತಮ ಸಂಬಂಧ ಹೊಂದಿದ್ದರು. ಅದು ಈಗ ಇಲ್ಲವಾಗಿದೆ. ಇದು ಎಲ್ಲರಿಗೂ ಒಂದು ಪಾಠವಾಗಿದೆ. ಉದಾಹರಣೆಗೆ (ಯುಕೆ ಪ್ರಧಾನಿ) ಕೀರ್ ಸ್ಟಾರ್ಮರ್, ಒಳ್ಳೆಯ ವೈಯಕ್ತಿಕ ಸಂಬಂಧವು ಕೆಲವೊಮ್ಮೆ ಸಹಾಯ ಮಾಡಬಹುದು. ಆದರೆ ಅದು ನಿಮ್ಮನ್ನು ಕೆಟ್ಟದ್ದರಿಂದ ರಕ್ಷಿಸುವುದಿಲ್ಲ ಎಂದು ಟ್ರಂಪ್‌ಗೆ ಎಚ್ಚರಿಕೆ ಕೂಡ ನೀಡಿದ್ದಾರೆ.

ಟ್ರಂಪ್ ಸೆಪ್ಟೆಂಬರ್ 17 ರಿಂದ 19 ರವರೆಗೆ ಯುಕೆಗೆ ಭೇಟಿ ನೀಡಲಿದ್ದಾರೆ. ಭಾರತದ ಸಂಬಂಧವನ್ನು ಯುಎಸ್‌ ದಶಕಗಳ ಹಿಂದಕ್ಕೆ ತಳ್ಳಿದೆ. ಈ ನಡೆ ಮೋದಿಯನ್ನು ರಷ್ಯಾ ಮತ್ತು ಚೀನಾಕ್ಕೆ ಹತ್ತಿರವಾಗಿಸಿದೆ. ಯುಎಸ್ ಮತ್ತು ಡೊನಾಲ್ಡ್ ಟ್ರಂಪ್‌ಗೆ ಪರ್ಯಾಯವಾಗಿ ತನ್ನನ್ನು ತಾನು ಚೀನಾ ಬಿಂಬಿಸಿಕೊಂಡಿದೆ ಎಂದು ವಿಶ್ಲೇಷಿಸಿದ್ದಾರೆ.

The post ಪ್ರಧಾನಿ ಮೋದಿ ಮತ್ತು ಟ್ರಂಪ್‌ ನಡುವಿನ ಬಾಂಧವ್ಯ ಈಗ ಮೊದಲಿನಂತಿಲ್ಲ : ಅಮೆರಿಕ ಮಾಜಿ ಅಧಿಕಾರಿ ಅಭಿಪ್ರಾಯ appeared first on Good News 24x7.

]]>
ಸೆಪ್ಟೆಂಬರ್​​ನಲ್ಲಿ ಪ್ರಧಾನಿ ಮೋದಿ ಅಮೆರಿಕ ಭೇಟಿ : ಸುಂಕ ಸಮರಕ್ಕೆ ಹಾಕ್ತಾರಾ ಬ್ರೇಕ್ ? https://www.goodnews24x7.com/pm-modi-to-visit-us-in-september-will-he-put-a-stop-to-the-tariff-war/ Wed, 13 Aug 2025 05:46:53 +0000 https://www.goodnews24x7.com/?p=5971 ವಾಷಿಂಗ್ಟನ್, ಆಗಸ್ಟ್​ 13 : ಸುಂಕದ ಬಗ್ಗೆ ಭಾರತ ಮತ್ತು ಅಮೆರಿಕ ನಡುವೆ ವಿವಾದವಿದೆ. ವ್ಯಾಪಾರ ಒಪ್ಪಂದದ ಬಗ್ಗೆಯೂ ಮಾತುಕತೆ ನಡೆಯುತ್ತಿದೆ. ಈ ಮಧ್ಯೆ, ಪ್ರಧಾನಿ ಮೋದಿ ಅವರ ಅಮೆರಿಕ ಭೇಟಿ ಬಗ್ಗೆ ಪ್ರಮುಖ ಮಾಹಿತಿ ಹೊರಬಿದ್ದಿದೆ. ಪ್ರಧಾನಿ ನರೇಂದ್ರ ಮೋದಿ…

The post ಸೆಪ್ಟೆಂಬರ್​​ನಲ್ಲಿ ಪ್ರಧಾನಿ ಮೋದಿ ಅಮೆರಿಕ ಭೇಟಿ : ಸುಂಕ ಸಮರಕ್ಕೆ ಹಾಕ್ತಾರಾ ಬ್ರೇಕ್ ? appeared first on Good News 24x7.

]]>

ವಾಷಿಂಗ್ಟನ್, ಆಗಸ್ಟ್​ 13 : ಸುಂಕದ ಬಗ್ಗೆ ಭಾರತ ಮತ್ತು ಅಮೆರಿಕ ನಡುವೆ ವಿವಾದವಿದೆ. ವ್ಯಾಪಾರ ಒಪ್ಪಂದದ ಬಗ್ಗೆಯೂ ಮಾತುಕತೆ ನಡೆಯುತ್ತಿದೆ. ಈ ಮಧ್ಯೆ, ಪ್ರಧಾನಿ ಮೋದಿ ಅವರ ಅಮೆರಿಕ ಭೇಟಿ ಬಗ್ಗೆ ಪ್ರಮುಖ ಮಾಹಿತಿ ಹೊರಬಿದ್ದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ತಿಂಗಳು ಅಂದರೆ ಸೆಪ್ಟೆಂಬರ್‌ನಲ್ಲಿ ಅಮೆರಿಕಕ್ಕೆ ಭೇಟಿ ನೀಡಬಹುದು ಎನ್ನುವ ಮಾಹಿತಿ ಲಭ್ಯವಾಗಿದೆ . ಡೊನಾಲ್ಡ್ ಟ್ರಂಪ್ ಪ್ರಧಾನಿ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಯೂ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ, ಪ್ರಧಾನಿ ಮೋದಿಯವರ ಮುಂಬರುವ ಅಮೆರಿಕ ಭೇಟಿಗೆ ಸಿದ್ಧತೆಗಳು ನಡೆಯುತ್ತಿವೆ. ಸೆಪ್ಟೆಂಬರ್ ಕೊನೆಯ ವಾರದಲ್ಲಿ ನಡೆಯಲಿರುವ ವಿಶ್ವಸಂಸ್ಥೆ ಸಾಮಾನ್ಯ ಸಭೆಗಾಗಿ ಪ್ರಧಾನಿ ಮೋದಿ ಅಮೆರಿಕದಲ್ಲಿ ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಹೊರತಾಗಿ, ಪ್ರಧಾನಿ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ಸಭೆ ನಡೆಯಲಿದೆ. ಈ ಸಮಯದಲ್ಲಿ, ಎರಡೂ ದೇಶಗಳ ನಡುವಿನ ವ್ಯಾಪಾರ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಸುಂಕದ ಕುರಿತು ಸಾಮಾನ್ಯ ಒಪ್ಪಂದಕ್ಕೆ ಬರಲು ಪ್ರಯತ್ನ ನಡೆಯಲಿದೆ. ಪ್ರಧಾನಿ ಮೋದಿಯವರ ಭೇಟಿಯ ಸಮಯದಲ್ಲಿ ವ್ಯಾಪಾರ ಒಪ್ಪಂದ ಮಾಡಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ.

ಭಾರತದ ಮೇಲೆ ಅಮೆರಿಕ ಶೇ. 50 ರಷ್ಟು ಸುಂಕ ವಿಧಿಸಿರುವ ಸಮಯದಲ್ಲಿ ಪ್ರಧಾನಿ ಮೋದಿ ಅವರ ಅಮೆರಿಕ ಭೇಟಿಯ ಮಹತ್ವದ್ದಾಗಿದೆ. ಪ್ರಸ್ತುತ ಶೇ. 25 ರಷ್ಟು ಸುಂಕ ಜಾರಿಯಲ್ಲಿದ್ದು, ಕೆಲವೇ ದಿನಗಳಲ್ಲಿ ಹೆಚ್ಚುವರಿಯಾಗಿ ಶೇ. 25 ರಷ್ಟು ಸುಂಕ ಜಾರಿಗೆ ಬರಲಿದೆ. ಭಾರತ ಅಮೆರಿಕದ ಸುಂಕವನ್ನು ವಿರೋಧಿಸಿದೆ. ಪ್ರಧಾನಿ ಮೋದಿ ಅವರು ವೈಯಕ್ತಿಕವಾಗಿ ಯಾವುದೇ ಬೆಲೆ ತೆರಲು ಸಿದ್ಧನಿದ್ದೇನೆ, ಆದರೆ ರೈತರ ಹಿತಾಸಕ್ತಿಗಳ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಈ ವರ್ಷದ ಫೆಬ್ರವರಿ ಆರಂಭದಲ್ಲಿ ಪ್ರಧಾನಿ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ್ದರು. ಪ್ರಧಾನಿ ಮೋದಿ ಅವರ ಭಾಷಣಕ್ಕಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅವಕಾಶ ನೀಡುವಂತೆ ಭಾರತವು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯನ್ನು ಸಂಪರ್ಕಿಸಿದೆ ಎಂದು ಮೂಲಗಳು ತಿಳಿಸಿವೆ.

ಸೆಪ್ಟೆಂಬರ್ 26 ರ ಬೆಳಗ್ಗೆ ಭಾಷಣ ಮಾಡಲು ನಿರ್ಧರಿಸಲಾಗಿದೆ. ಡೊನಾಲ್ಡ್ ಟ್ರಂಪ್ ಸೆಪ್ಟೆಂಬರ್ 23 ರಂದು ಮಾತನಾಡಲಿದ್ದಾರೆ. ಪ್ರಸ್ತುತ, ಪ್ರಧಾನಿ ಮೋದಿ ಅವರ ಕಾರ್ಯಕ್ರಮದ ಕುರಿತು ಅಧಿಕೃತ ಹೇಳಿಕೆಗಾಗಿ ಕಾಯಲಾಗುತ್ತಿದೆ.

The post ಸೆಪ್ಟೆಂಬರ್​​ನಲ್ಲಿ ಪ್ರಧಾನಿ ಮೋದಿ ಅಮೆರಿಕ ಭೇಟಿ : ಸುಂಕ ಸಮರಕ್ಕೆ ಹಾಕ್ತಾರಾ ಬ್ರೇಕ್ ? appeared first on Good News 24x7.

]]>
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ https://www.goodnews24x7.com/former-us-president-donald-trump-was-shot/ Sun, 14 Jul 2024 05:29:27 +0000 https://www.goodnews24x7.com/?p=289 ಪೆನ್ಸಿಲ್ವೇನಿಯಾದಲ್ಲಿ ನಡೆಸುತ್ತಿದ್ದ ಚುನಾವಣಾ ರ‍್ಯಾಲಿ ವೇಳೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಗುಂಡಿನ ದಾಳಿ ಮಾಡಲಾಗಿದೆ. ಘಟನೆಯಲ್ಲಿ ಟ್ರಂಪ್ ಅವರ ಬಲ ಕಿವಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ರಂಪ್‌ ಅವರು ಬೆಂಬಲಿಗರ ದೊಡ್ಡ ಗುಂಪಿನ ನಡುವೆ…

The post ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ appeared first on Good News 24x7.

]]>

ಪೆನ್ಸಿಲ್ವೇನಿಯಾದಲ್ಲಿ ನಡೆಸುತ್ತಿದ್ದ ಚುನಾವಣಾ ರ‍್ಯಾಲಿ ವೇಳೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಗುಂಡಿನ ದಾಳಿ ಮಾಡಲಾಗಿದೆ. ಘಟನೆಯಲ್ಲಿ ಟ್ರಂಪ್ ಅವರ ಬಲ ಕಿವಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಟ್ರಂಪ್‌ ಅವರು ಬೆಂಬಲಿಗರ ದೊಡ್ಡ ಗುಂಪಿನ ನಡುವೆ ಭಾಷಣ ಮಾಡುತ್ತಿದ್ದಾಗ ಗುಂಡೇಟಿನ ಶಬ್ದ ಕೇಳಿಬಂದಿದೆ. ತಕ್ಷಣ ಅವರನ್ನು ಭದ್ರತಾ ಸಿಬ್ಬಂದಿ ಸುತ್ತುವರಿದು ರಕ್ಷಿಸಿ ವೇದಿಕೆಯಿಂದ ಹೊರಕರೆತಂದರು. ಈ ವೇಳೆ ಟ್ರಂಪ್‌ ಕಿವಿಯಲ್ಲಿ ರಕ್ತಸ್ರಾವವಾಗಿತ್ತು. ಭದ್ರತಾ ಸಿಬ್ಬಂದಿ ರಕ್ಷಿಸಿ ತಕ್ಷಣವೇ ವೇದಿಕೆಯಿಂದ ಹೊರಗಡೆ ಕರೆದೊಯ್ದರು. ಭಯಾನಕ ಘಟನೆ ಸಂಭವಿಸಿದ ಕ್ಷಣದ ದೃಶ್ಯಗಳು ವೀಡಿಯೊದಲ್ಲಿ ಸೆರೆಯಾಗಿದೆ.

The post ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ appeared first on Good News 24x7.

]]>