DrShivayogiShivanandaSwamiji Archives - Good News 24x7 https://www.goodnews24x7.com/tag/drshivayogishivanandaswamiji/ Kannada Sat, 24 May 2025 12:27:37 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg DrShivayogiShivanandaSwamiji Archives - Good News 24x7 https://www.goodnews24x7.com/tag/drshivayogishivanandaswamiji/ 32 32 ಕೋವಿಡ್ ಮೇಘಸ್ಫೋಟದ ಬಗ್ಗೆ ಕೋಡಿಮಠ ಸ್ವಾಮೀಜಿ ಸ್ಫೋಟಕ‌ ಭವಿಷ್ಯ! https://www.goodnews24x7.com/kodimath-swamijis-explosive-prediction-about-cloudburst/ Sat, 24 May 2025 11:30:21 +0000 https://www.goodnews24x7.com/?p=4063 ಬೆಳಗಾವಿ : ಮತ್ತೆ ವಾಯುರೂಪದಲ್ಲಿ ಬಾಧೆ ಅಪ್ಪಳಿಸಲಿದೆ. ಮೇಘಸ್ಫೋಟವೂ ಸಂಭವಿಸಿ, ಸಾವು-ನೋವು ಹೆಚ್ಚಾಗಲಿದೆ. ‘ಅರಸನ ಅರಮನೆಗೆ ಕಾರ್ಮೋಡ ಕವಿದಿದೆ’ ಎನ್ನುವ ಮೂಲಕ‌ ಅನೇಕ ರಾಜಕೀಯ ಮುಖಂಡರು ಸಾವನ್ನಪ್ಪುತ್ತಾರೆ ಎಂದು ಕೋಡಿಮಠದ ಡಾ. ಶಿವಯೋಗಿ ಶಿವಾನಂದ ಸ್ವಾಮೀಜಿ ಸ್ಫೋಟಕ‌ ಭವಿಷ್ಯ ನುಡಿದಿದ್ದಾರೆ. ನಗರದಲ್ಲಿಂದು…

The post ಕೋವಿಡ್ ಮೇಘಸ್ಫೋಟದ ಬಗ್ಗೆ ಕೋಡಿಮಠ ಸ್ವಾಮೀಜಿ ಸ್ಫೋಟಕ‌ ಭವಿಷ್ಯ! appeared first on Good News 24x7.

]]>

ಬೆಳಗಾವಿ : ಮತ್ತೆ ವಾಯುರೂಪದಲ್ಲಿ ಬಾಧೆ ಅಪ್ಪಳಿಸಲಿದೆ. ಮೇಘಸ್ಫೋಟವೂ ಸಂಭವಿಸಿ, ಸಾವು-ನೋವು ಹೆಚ್ಚಾಗಲಿದೆ. ‘ಅರಸನ ಅರಮನೆಗೆ ಕಾರ್ಮೋಡ ಕವಿದಿದೆ’ ಎನ್ನುವ ಮೂಲಕ‌ ಅನೇಕ ರಾಜಕೀಯ ಮುಖಂಡರು ಸಾವನ್ನಪ್ಪುತ್ತಾರೆ ಎಂದು ಕೋಡಿಮಠದ ಡಾ. ಶಿವಯೋಗಿ ಶಿವಾನಂದ ಸ್ವಾಮೀಜಿ ಸ್ಫೋಟಕ‌ ಭವಿಷ್ಯ ನುಡಿದಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಐದು ವರ್ಷ ಕೋವಿಡ್ ಮಹಾಮಾರಿ ಬೇರೆ ಬೇರೆ ರೂಪದಲ್ಲಿ ಇರಲಿದೆ. ಜನರು ಹುಷಾರಾಗಿ ಇರುವುದು ಒಳ್ಳೆಯದು. ಉಸಿರಾಟಕ್ಕೆ ತೊಂದರೆಯಾಗಿ ಸಾವು ಬರುವ ಸಾಧ್ಯತೆಗಳಿವೆ ಲೋಕಕ್ಕೆ ವಾಯು, ಜಲದಿಂದ ಐದು ವರ್ಷ ಗಂಡಾಂತರವಿದೆ. ಹಿಮಾಲಯ ಕರಗಿ ದೆಹಲಿವರೆಗೆ ತಲುಪಲಿದೆ. ಮೇಘಸ್ಫೋಟ ಆಗುವ ಸಾಧ್ಯತೆಗಳಿವೆ. ಭೂಕಂಪ ಸಂಭವಿಸುವ ಸಾಧ್ಯತೆ ಇದ್ದು, ಮತೀಯ ಗಲಭೆಗಳು ಹೆಚ್ಚಾಗಲಿವೆ ಎಂದು ಸ್ವಾಮೀಜಿ ಎಚ್ಚರಿಸಿದರು.

ಯುದ್ಧದ ಭೀತಿ ಮತ್ತೆ ಪ್ರಾರಂಭ ಆಗಲಿದೆ. ಜನರಲ್ಲಿ ಅಶಾಂತಿ ಇದೆ. ಕೆಲವು ದೇಶಗಳು ಅಳಿದು ಹೋಗಲಿವೆ. ಹೊಸ ಹೊಸ ದೇಶಗಳು ಉತ್ಪತ್ತಿಯಾಗುತ್ತವೆ.‌ ‘ಅರಸನ ಅರಮನೆಗೆ ಕಾರ್ಮೋಡ ಕವಿದಿದೆ’. ಅನೇಕ ರಾಜಕೀಯ ಮುಖಂಡರಿಗೆ ಸಾವು, ನೋವು ಹಾಗೂ ಜೀವ ಭಯವಿದೆ ಎಂದು ಸ್ವಾಮೀಜಿ ಸ್ಫೋಟಕ‌ ವಿಚಾರವನ್ನು ಹೊರ ಹಾಕಿದರು.

ರಾಜ್ಯ ರಾಜಕಾರಣದ ಬಗ್ಗೆ – ಸಂಕ್ರಾಂತಿಯವರೆಗೂ ರಾಜ್ಯ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ಸಂಕ್ರಾಂತಿಯ ಭವಿಷ್ಯ ನೋಡಿಕೊಂಡು ಮುಂದೆ ಏನಾಗುತ್ತೆ‌ ನೋಡಬೇಕು ಎಂದು ಕೋಡಿಮಠದ ಸ್ವಾಮೀಜಿ ಹೇಳಿದರು.

The post ಕೋವಿಡ್ ಮೇಘಸ್ಫೋಟದ ಬಗ್ಗೆ ಕೋಡಿಮಠ ಸ್ವಾಮೀಜಿ ಸ್ಫೋಟಕ‌ ಭವಿಷ್ಯ! appeared first on Good News 24x7.

]]>