electrocution Archives - Good News 24x7 https://www.goodnews24x7.com/tag/electrocution/ Kannada Mon, 26 May 2025 06:08:31 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg electrocution Archives - Good News 24x7 https://www.goodnews24x7.com/tag/electrocution/ 32 32 ಜಮೀನಿನಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ರೈತ, 2 ಹಸುಗಳು ಸಾ*ವು. https://www.goodnews24x7.com/farmer-2-cows-die-after-falling-on-electric-wire-in-field/ Mon, 26 May 2025 06:08:22 +0000 https://www.goodnews24x7.com/?p=4077 ಮೈಸೂರು: ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ಓರ್ವ ವ್ಯಕ್ತಿ, ಎರಡು ಹಸು ಸಾವನ್ನಪ್ಪಿರುವ ದುರ್ಘಟನೆ ನಂಜನಗೂಡು ತಾಲೂಕಿನ ಏಚಗಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಗ್ರಾಮದ ಸಿದ್ದರಾಜು (52) ಮೃತರು. ಇವರ ಜತೆ ಸುಮಾರು ಒಂದೂವರೆ ಲಕ್ಷ ಬೆಲೆಬಾಳುವ ಎರಡು ಇಲಾತಿ ಹಸುಗಳು…

The post ಜಮೀನಿನಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ರೈತ, 2 ಹಸುಗಳು ಸಾ*ವು. appeared first on Good News 24x7.

]]>

ಮೈಸೂರು: ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ಓರ್ವ ವ್ಯಕ್ತಿ, ಎರಡು ಹಸು ಸಾವನ್ನಪ್ಪಿರುವ ದುರ್ಘಟನೆ ನಂಜನಗೂಡು ತಾಲೂಕಿನ ಏಚಗಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ಗ್ರಾಮದ ಸಿದ್ದರಾಜು (52) ಮೃತರು. ಇವರ ಜತೆ ಸುಮಾರು ಒಂದೂವರೆ ಲಕ್ಷ ಬೆಲೆಬಾಳುವ ಎರಡು ಇಲಾತಿ ಹಸುಗಳು ಸಹ ಮೃತಪಟ್ಟಿವೆ. ಮೃತರ ಕುಟುಂಬದವರ ದುಃಖ ಮುಗಿಲು ಮುಟ್ಟಿದೆ.


ಸಿದ್ದರಾಜುರವರು ಜಮೀನಿನಲ್ಲಿ ತಮ್ಮ ಹಸುಗಳನ್ನು ಮೇಯಿಸುತ್ತಿರುವಾಗ, ಹಸುಗಳು ವಿದ್ಯುತ್ ತಂತಿಯನ್ನು ಸ್ಪರ್ಶಿಸಿದೆ. ಈ ವೇಳೆ ಹಸುಗಳನ್ನು ಕಾಪಾಡಲು ಹೋದಾಗ ಹಸುವಿನ ಮಾಲಿಕ ಸಿದ್ದರಾಜುರವರು ಸಹ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ.
ತುಂತುರು ಮಳೆಯಾಗುತ್ತಿದ್ದು, ಸಂಜೆಯಾದರೂ ಸಿದ್ದರಾಜು ಅವರು ಮನೆಗೆ ಬಾರದ ಹಿನ್ನೆಲೆ ಆತನ ಕುಟುಂಬ ಸಂಜೆ ಸಮಯದಲ್ಲಿ ತಮ್ಮ ಜಮೀನಿಗೆ ಹೋಗಿ ನೋಡಿದಾಗ ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವುದು ಹಾಗೂ ಸಿದ್ದರಾಜು ಮತ್ತು ಆತನ ಎರಡು ಹಸುಗಳು ಸಹ ಮೃತಪಟ್ಟಿರುವುದು ಕಂಡುಬಂದಿದೆ.
ಸುದ್ದಿ ತಿಳಿದ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು, ಕೆಇಬಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

The post ಜಮೀನಿನಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ರೈತ, 2 ಹಸುಗಳು ಸಾ*ವು. appeared first on Good News 24x7.

]]>