#elephant attack Archives - Good News 24x7 https://www.goodnews24x7.com/tag/elephant-attack/ Kannada Mon, 02 Mar 2026 13:19:22 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg #elephant attack Archives - Good News 24x7 https://www.goodnews24x7.com/tag/elephant-attack/ 32 32 ಕಾಡಾನೆ ದಾಳಿಗೆ ವಿದ್ಯಾರ್ಥಿನಿ ಬ* https://www.goodnews24x7.com/student-dies-in-wild-estudent-dies-in-wild-elephant-attacklephant-attack/ Mon, 02 Mar 2026 13:19:07 +0000 https://www.goodnews24x7.com/?p=8602 ಮಡಿಕೇರಿ ಸಮೀಪದ ಬೆಟ್ಟತ್ತೂರು ಗ್ರಾ ಮದಲ್ಲಿಈ ಘಟನೆ ನಡೆದಿದೆ. ವಿದ್ಯಾರ್ಥಿನಿ ಸಾವಿನ ಹಿನ್ನೆಲೆ ಗ್ರಾಮ ಸ್ಥರು ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸುವ ಮೂಲಕ ಅರಣ್ಯ ಇಲಾ ಖೆಯ ವಿರುದ್ದ ಆಕ್ರೋಶ ವ್ಯಕ್ತಪಡಿ ಸಿದ್ದಾರೆ. ಮಡಿಕೇರಿಯ ಸಂತ ಮೈಕಲರ ಪದವಿಪೂರ್ವ ಕಾಲೇಜಿನ…

The post ಕಾಡಾನೆ ದಾಳಿಗೆ ವಿದ್ಯಾರ್ಥಿನಿ ಬ* appeared first on Good News 24x7.

]]>

ಮಡಿಕೇರಿ ಸಮೀಪದ ಬೆಟ್ಟತ್ತೂರು ಗ್ರಾ ಮದಲ್ಲಿಈ ಘಟನೆ ನಡೆದಿದೆ. ವಿದ್ಯಾರ್ಥಿನಿ ಸಾವಿನ ಹಿನ್ನೆಲೆ ಗ್ರಾಮ ಸ್ಥರು ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸುವ ಮೂಲಕ ಅರಣ್ಯ ಇಲಾ ಖೆಯ ವಿರುದ್ದ ಆಕ್ರೋಶ ವ್ಯಕ್ತಪಡಿ ಸಿದ್ದಾರೆ.
ಮಡಿಕೇರಿಯ ಸಂತ ಮೈಕಲರ ಪದವಿಪೂರ್ವ ಕಾಲೇಜಿನ ಕುಡಿಯರ ಗಿರೀಶ್ ಎಂಬುವವರ ಪುತ್ರಿ ಪೂಜಾ (17) ಮೃ* ದುರ್ದೈವಿ. ಮನೆಗೆ ತೆರಳುತ್ತಿದ್ದ ಸಂದರ್ಭಏಕಾಏಕಿ ಕಾಡಾನೆ ದಾಳಿ ಮಾಡಿದ್ದು, ಪೂಜಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಕಾಡಾನೆ ದಾಳಿಗೆ ವಿದ್ಯಾರ್ಥಿನಿ ಬಲಿಯಾದ ಹಿನ್ನೆಲೆ ಜಿಲ್ಲೆ ಯಲ್ಲಿ ಕಾಡಾನೆ ಹಾವಳಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತಿ. ಮೃತ ವಿದ್ಯಾರ್ಥಿನಿಯ ಕುಟುಂಬದವರಿಗೆ ಸರಕಾರಿ ಕೆಲಸ ನೀಡಬೇಕು, ವಿದ್ಯಾರ್ಥಿನಿ ಸಾವಿಗೆ ಕಾರಣರಾದಅಧಿಕಾರಿಗಳನ್ನುಅಮಾನತುಗೊಳಿಸಬೇಕು. ಈ ಭಾಗ ದಲ್ಲಿ ಕಾಡಾನೆಗಳ ಸೆರೆಗೆ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ವಿದ್ಯಾರ್ಥಿನಿ ಸಾವಿನ ವಿಚಾರದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೇ ಶನಿವಾರ ರಾತ್ರಿಯೇ ತರಾತುರಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿ ಸುವಂತೆ ಮಾಡಿದ್ದ ಅರಣ್ಯ ಅಧಿಕಾರಿಗಳು ಆಗಲೇ ಪರಿಹಾರದ ಚೆಕ್ ನೀಡಿ ತೆರಳಿದ್ದರು. ಆದರೆ ಅವರು ನೀಡಿದ ಚೆಕ್‌ ನಲ್ಲಿ ಸಹಿಯೇ ಇರಲಿಲ್ಲ, ಈ ವಿಚಾರ ವಾಗಿಯೂ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ಭಾನುವಾರ ಸಹಿ ಹಾಕಿದ ಚೆಕ್ ನೀಡಲಾಯಿತೆಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಕಾಡಾನೆಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ಕೂಡಲೇ ಈ ಭಾಗದ ಕಾಡಾನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಯಾಗಬೇಕು. ಅನುಕಂಪದ ಆಧಾರದಲ್ಲಿ ಮೃತ ವಿದ್ಯಾರ್ಥಿನಿ ಕುಟುಂಬದಲ್ಲಿ ಒಬ್ಬ ರಿಗೆ ಸರಕಾರಿ ಕೆಲಸ ನೀಡಬೇಕು.
-ಕೆ.ಜಿ ಬೋಪಯ್ಯ, ಮಾಜಿ ಸ್ಪೀಕರ್ ಎಂದು ಪ್ರತಿಕ್ರಿಯಿಸಿದ್ದಾರೆ

ರಾಷ್ಟ್ರೀಯ ಹೆದ್ದಾರಿ 275ನ್ನು ಬಂದ್ ಮಾಡಿ ಪ್ರತಿಭಟಿಸಿದ ಹಿನ್ನೆಲೆ ಮಂಗಳೂರು – ಮೈಸೂರು ನಡು ವೆ ಸಂಚರಿಸುವ ವಾಹನಗಳು ಸುಮಾರು 2 ಗಂಟೆಗಳಿಗೂ ಹೆಚ್ಚುಕಾಲ ರಸ್ತೆಯಲ್ಲಿಯೇ ನಿಲ್ಲಬೇಕಾಯಿತು. ಪೊಲೀ ಸರ ಮಾತಿಗೂ ಜಗ್ಗದ ಪ್ರತಿಭಟನಾ ನಿರತರು ಅರಣ್ಯ ಸಂರಕ್ಷಣಾಧಿಕಾರಿ ಸ್ಥಳಕ್ಕೆ ಬರಲು ಪಟ್ಟುಹಿಡಿದರು. ಕೊನೆಗೆ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಸ್ಥಳ ಕ್ಯಾಗಮಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ ಮೆಹ ರೆಗೆ ಪ್ರತಿಭಟನೆ ಕೊನೆಗೊಂಡಿತು.

 

.

The post ಕಾಡಾನೆ ದಾಳಿಗೆ ವಿದ್ಯಾರ್ಥಿನಿ ಬ* appeared first on Good News 24x7.

]]>