engaged Archives - Good News 24x7 https://www.goodnews24x7.com/tag/engaged/ Kannada Mon, 13 Apr 2026 08:34:02 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg engaged Archives - Good News 24x7 https://www.goodnews24x7.com/tag/engaged/ 32 32 ನಿಶ್ಚಿತಾರ್ಥವಾದ ಯುವಕನ ಮನೆಯವರಿಗೆ ಫೋಟೋ ಕಳುಹಿಸಿದ ಪ್ರೇಮಿ ! https://www.goodnews24x7.com/a-lover-sent-a-photo-to-the-family-of-a-young-man-who-was-engageda-lover-sent-a-photo-to-the-family-of-a-young-man-who-was-engaged/ Mon, 13 Apr 2026 08:33:52 +0000 https://www.goodnews24x7.com/?p=9256 ವಿಜಯಪುರ ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆ ವರದಿಯಾಗಿದೆ. ನಿಶ್ಚಿತಾರ್ಥವಾದ ಯುವಕನ ಮನೆಯವರಿಗೆ ತನ್ನ ಜೊತೆಗಿನ ಫೋಟೋವನ್ನು ಪ್ರೇಮಿ ಕಳುಹಿಸಿದ ಕಾರಣ ಯುವತಿಯೋರ್ವಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಫೋಟೋ ನೋಡಿ ಮದುವೆ ಆಗಬೇಕಿದ್ದ ಯುವಕನ ಕಡೆಯವರು ವಿವಾಹ ರದ್ದುಗೊಳಿದ ಕಾರಣ ಅವಮಾನಗೊಂಡು ಯುವತಿ ಬಾವಿಗೆ ಹಾರಿ…

The post ನಿಶ್ಚಿತಾರ್ಥವಾದ ಯುವಕನ ಮನೆಯವರಿಗೆ ಫೋಟೋ ಕಳುಹಿಸಿದ ಪ್ರೇಮಿ ! appeared first on Good News 24x7.

]]>

ವಿಜಯಪುರ ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆ ವರದಿಯಾಗಿದೆ. ನಿಶ್ಚಿತಾರ್ಥವಾದ ಯುವಕನ ಮನೆಯವರಿಗೆ ತನ್ನ ಜೊತೆಗಿನ ಫೋಟೋವನ್ನು ಪ್ರೇಮಿ ಕಳುಹಿಸಿದ ಕಾರಣ ಯುವತಿಯೋರ್ವಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಫೋಟೋ ನೋಡಿ ಮದುವೆ ಆಗಬೇಕಿದ್ದ ಯುವಕನ ಕಡೆಯವರು ವಿವಾಹ ರದ್ದುಗೊಳಿದ ಕಾರಣ ಅವಮಾನಗೊಂಡು ಯುವತಿ ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾಳೆ. ಈ ಸಂಬಂಧ ಸಿಂದಗಿ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹದಿಹರೆಯದ ಪ್ರೇಮ ಪ್ರಕರಣಗಳು ಕೆಲವೊಮ್ಮೆ ಜೀವಕ್ಕೇ ಕಂಟಕವಾಗಿಬಿಡುತ್ತವೆ. ಪ್ರೀತಿಸಿದ ಹುಡುಗ ಅಥವಾ ಹುಡುಗಿ ಸಿಗದ ಕಾರಣಕ್ಕೆ ಮನನೊಂದು ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ತೆಗೆದುಕೊಂಡು ಬಲಿಯಾದವರ ಸಂಖ್ಯೆ ದೊಡ್ಡದ್ದೇ ಇದೆ. ಆದರೆ ವಿಜಯಪುರದಲ್ಲಿ ಇದಕ್ಕೆ ತುಸು ಭಿನ್ನವೆಂಬಂತಹ ಪ್ರಕರಣವೊಂದು ನಡೆದಿದೆ. ತಾನು ಪ್ರೀತಿಸಿದ್ದ ಯುವತಿಗೆ ಮತ್ತೊಬ್ಬನ ಜೊತೆ ವಿವಾಹ ನಿಶ್ಚಯವಾಗಿದ್ದಕ್ಕೆ ರೊಚ್ಚಿಗೆದ್ದ ಯುವಕ ಮಾಡಿದ ಕೆಲಸ, ಮದುವೆಯ ಕನಸು ಕಂಡಿದ್ದ ಯುವತಿಯ ಪ್ರಾಣವನ್ನೇ ತೆಗೆದಿದೆ.

ಹೌದು, ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಂದಾಳ ಗ್ರಾಮದ 22 ವರ್ಷದ ಯುವತಿ ಜಯಶ್ರೀ ಬಿರಾದಾರ್​​ಗೆ ಮದುವೆ ಮಾಡಲು ಮುಂದಾಗಿದ್ದ ಕುಟುಂಬಸ್ಥರು, ಈ ಸಂಬಂಧ ನಿಶ್ಚಿತಾರ್ಥವನ್ನೂ ನಡೆಸಿದ್ದರು. ಆದರೆ ಜಯಶ್ರೀ ಈ ಮೊದಲು ಶ್ರೀಶೈಲ್ ಬಡಾನೂರ್ ಎಂಬಾತನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದ್ದು, ಈಕೆಯ ವಿವಾಹದ ವಿಷಯ ತಿಳಿದ ಆತ ವ್ಯತಿರಿಕ್ತವಾಗಿ ವರ್ತಿಸಿದ್ದಾನೆ. ಜಯಶ್ರೀ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನ ಕುಟುಂಬಸ್ಥರಿಗೆ ಆಕೆ ತನ್ನ ಜೊತೆಗಿರುವ ಫೋಟೋಗಳನ್ನು ಶ್ರೀಶೈಲ್ ಕಳುಹಿಸಿದ್ದಾನೆ. ಅವನ್ನು ನೋಡಿರುವ ಯುವಕನ ಕಡೆಯವರು ಏಪ್ರಿಲ್​​ 27ರಂದು ನಿಗದಿಯಾಗಿದ್ದ ಮದುವೆಯನ್ನು ಕ್ಯಾನ್ಸಲ್​​ ಮಾಡಿದ್ದಾರೆ. ಘಟನೆಯಿಂದ ತೀವ್ರವಾಗಿ ನೊಂದ ಜಯಶ್ರೀ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಪ್ರೇಮ ಪ್ರಕರಣ ಹೊರ ಬಂದ ಕಾರಣ ಅವಮಾನವಾಗಿ ಬಂದಾಳ ಗ್ರಾಮದ ಮದಿನಾ ಮಸೀದಿ ಪಕ್ಕದ ಬಾವಿಗೆ ಜಯಶ್ರೀ ಹಾರಿದ್ದಾಳೆ. ನಿನ್ನೆ ಸಾಯಂಕಾಲ ಘಟನೆ ನಡೆದಿದ್ದು, ಶವವನ್ನು ಬಾವಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮನೆ ಮಗಳ ಸಾವು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಮಾಡಬಾರದ ಕೃತ್ಯ ಮಾಡಿರುವ ಪಾಗಲ್ ಪ್ರೇಮಿ ಶ್ರೀಶೈಲ್ ಬಡಾನೂರ್ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ. ಘಟನೆ ಸಂಬಂಧ ಸಿಂದಗಿ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

 

The post ನಿಶ್ಚಿತಾರ್ಥವಾದ ಯುವಕನ ಮನೆಯವರಿಗೆ ಫೋಟೋ ಕಳುಹಿಸಿದ ಪ್ರೇಮಿ ! appeared first on Good News 24x7.

]]>
ಬಿಗ್ ಬಾಸ್ ಮಾಜಿ ಸ್ಪರ್ಧಿ, ಉಗ್ರಂ ಮಂಜು ನಿಶ್ಚಿತಾರ್ಥ.. https://www.goodnews24x7.com/bigg-boss-former-contestant-ugram-manju-engaged/ Mon, 10 Nov 2025 05:37:12 +0000 https://www.goodnews24x7.com/?p=8082 ಬಿಗ್ ಬಾಸ್ ಮಾಜಿ ಸ್ಪರ್ಧಿ, ಮ್ಯಾಕ್ಸ್​ ಮಂಜು ನಿಶ್ಚಿತಾರ್ಥ.. ಹುಡುಗಿ ಯಾರು? ಫೋಟೋಗಳನ್ನು ಇಬ್ಬರೂ ತಮ್ಮ ತಮ್ಮ ಇನ್​ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೇ ಬದುಕಿನ ಹೊಸ ಅಧ್ಯಾಯ ಆರಂಭವಾಗಿದೆ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ. ದೇವರ ಕೃಪೆಯಿಂದ, ಕುಟುಂಬದ ಆಶೀರ್ವಾದದಿಂದ ನಾವು…

The post ಬಿಗ್ ಬಾಸ್ ಮಾಜಿ ಸ್ಪರ್ಧಿ, ಉಗ್ರಂ ಮಂಜು ನಿಶ್ಚಿತಾರ್ಥ.. appeared first on Good News 24x7.

]]>

ಬಿಗ್ ಬಾಸ್ ಮಾಜಿ ಸ್ಪರ್ಧಿ, ಮ್ಯಾಕ್ಸ್​ ಮಂಜು ನಿಶ್ಚಿತಾರ್ಥ.. ಹುಡುಗಿ ಯಾರು? ಫೋಟೋಗಳನ್ನು ಇಬ್ಬರೂ ತಮ್ಮ ತಮ್ಮ ಇನ್​ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೇ ಬದುಕಿನ ಹೊಸ ಅಧ್ಯಾಯ ಆರಂಭವಾಗಿದೆ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ. ದೇವರ ಕೃಪೆಯಿಂದ, ಕುಟುಂಬದ ಆಶೀರ್ವಾದದಿಂದ ನಾವು ಜೀವನದ ಹೊಸ ಹಾದಿಗೆ ಕಾಲಿಟ್ಟಿದ್ದೇವೆ. ಸ್ಯಾಂಡಲ್​ವುಡ್​ ನಟ ಹಾಗೂ ಬಿಗ್ ಬಾಸ್ ಸೀಸನ್​- 11ರ ಮಾಜಿ ಸ್ಪರ್ಧಿ ಮ್ಯಾಕ್ಸ್ ಮಂಜು ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅಪ್ಪ ಹೇಳಿದಂತೆ ಮ್ಯಾಕ್ಸ್​ ಮಂಜು ಮದುವೆಗೆ ರೆಡಿಯಾಗಿದ್ದು ಸದ್ಯದಲ್ಲೇ ಈ ಬಗ್ಗೆ ಮಾಹಿತಿ ತಿಳಿಸಬಹುದು.ಮ್ಯಾಕ್ಸ್ ಮಂಜು ಅವರು ಸಂಧ್ಯಾ ಖುಷಿ ಎನ್ನುವರ ಜೊತೆ ಎಂಗೇಜ್​ಮೆಂಟ್ ಮಾಡಿಕೊಂಡಿದ್ದಾರೆ. ಈ ಸಂಬಂಧದ ಫೋಟೋಗಳನ್ನು ಇಬ್ಬರೂ ತಮ್ಮ ತಮ್ಮ ಇನ್​ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೇ ಬದುಕಿನ ಹೊಸ ಅಧ್ಯಾಯ ಆರಂಭವಾಗಿದೆ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ. ದೇವರ ಕೃಪೆಯಿಂದ, ಕುಟುಂಬದ ಆಶೀರ್ವಾದದಿಂದ ನಾವು ಜೀವನದ ಹೊಸ ಹಾದಿಗೆ ಕಾಲಿಟ್ಟಿದ್ದೇವೆ. ಹೊಸ ಬಂಧದ ಆರಂಭ ನಿಶ್ಚಿತಾರ್ಥದ ಸುಂದರ ಕ್ಷಣ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಮ್ಯಾಕ್ಸ್​ ಮಂಜು ಅವರು ಬಿಗ್ ಬಾಸ್ ಸೀಸನ್​ 11ರಲ್ಲಿ ಸ್ಪರ್ಧಿಯಾಗಿದ್ದರು. ಕೊನೆವರೆಗೂ ಪೈಪೋಟಿ ಕೊಟ್ಟಿದ್ದರು. ಬಿಗ್ ಬಾಸ್​ನಲ್ಲಿ ಮಗ ಮದುವೆ ಬಗ್ಗೆ ತಂದೆ ಪ್ರಸ್ತಾಪ ಮಾಡಿದ್ದರು. ಅದರಂತೆ ಮ್ಯಾಕ್ಸ್ ಮಂಜು ಅವರ ನಿಶ್ಚಿತಾರ್ಥ ಆಗಿದ್ದು ಇನ್ನೇನು ವಿವಾಹ ಸಂಭ್ರಮವೊಂದು ಬಾಕಿ ಇದೆ. ಇದನ್ನೂ ಸದ್ಯದಲ್ಲೇ ಅಪ್​ಡೇಟ್ ಕೊಡಬಹುದು. ಅಲ್ಲಿವರೆಗೆ ಕಾಯಬೇಕು ಅಷ್ಟೇ.

ಮ್ಯಾಕ್ಸ್ ಮಂಜು ಹುಡುಗಿ ಯಾರು?
ಉಗ್ರಂ ಮಂಜು ಅವರು ಮದುವೆಯಾಗುತ್ತಿರುವ ಹುಡುಗಿ ಯಾರು ಎನ್ನುವ ಪ್ರಶ್ನೆ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಉಗ್ರಂ ಮಂಜು ಕೈ ಹಿಡಿಯುತ್ತಿರುವ ಹುಡುಗಿ ಸಂಧ್ಯಾ ಖುಷಿ. ಸ್ಪರ್ಶ್ ಆಸ್ಪತ್ರೆಯಲ್ಲಿ ಸಂಧ್ಯಾ ಅವರು ಅಡ್ಮಿನ್ ಡಿಪಾರ್ಟ್ಮೆಂಟ್‌ನಲ್ಲಿದ್ದಾರೆ. ಇನ್​ಸ್ಟಾದಲ್ಲಿ Transplant Coordinator ಎಂದು ಬರೆದುಕೊಂಡಿದ್ದಾರೆ.

 

 

The post ಬಿಗ್ ಬಾಸ್ ಮಾಜಿ ಸ್ಪರ್ಧಿ, ಉಗ್ರಂ ಮಂಜು ನಿಶ್ಚಿತಾರ್ಥ.. appeared first on Good News 24x7.

]]>
ಸಮಾಜಮುಖಿ ಕೆಲಸಗಳಲ್ಲಿ ಬ್ಯುಸಿಯಾದ ದರ್ಶನ್ ಪತ್ನಿ ವಿಜಯಲಕ್ಷ್ಮಿ…! https://www.goodnews24x7.com/darshans-wife-vijayalakshmi-is-busy-with-social-work/ Sat, 30 Aug 2025 04:23:18 +0000 https://www.goodnews24x7.com/?p=6981 ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ದಸರಾ ಆನೆಗಳ ಮಾವುತರ ಕುಟುಂಬಕ್ಕೆ ಕುಕ್ಕರ್ ನೀಡಿದ್ದಾರೆ. ಮೈಸೂರಿನಲ್ಲಿ ಮಾವುತರ ಕುಟುಂಬಕ್ಕೆ ಕುಕ್ಕರ್ ನೀಡಿ, ಭರ್ಜರಿ ಊಟ ಹಾಕಿಸಿದ್ದಾರೆ ಮೈಸೂರಿನಲ್ಲಿ ಮಾವುತರ ಕುಟುಂಬಕ್ಕೆ ಕುಕ್ಕರ್ ನೀಡಿ, ಭರ್ಜರಿ ಊಟ ಹಾಕಿಸಿದ್ದಾರೆ.…

The post ಸಮಾಜಮುಖಿ ಕೆಲಸಗಳಲ್ಲಿ ಬ್ಯುಸಿಯಾದ ದರ್ಶನ್ ಪತ್ನಿ ವಿಜಯಲಕ್ಷ್ಮಿ…! appeared first on Good News 24x7.

]]>

ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ದಸರಾ ಆನೆಗಳ ಮಾವುತರ ಕುಟುಂಬಕ್ಕೆ ಕುಕ್ಕರ್ ನೀಡಿದ್ದಾರೆ. ಮೈಸೂರಿನಲ್ಲಿ ಮಾವುತರ ಕುಟುಂಬಕ್ಕೆ ಕುಕ್ಕರ್ ನೀಡಿ, ಭರ್ಜರಿ ಊಟ ಹಾಕಿಸಿದ್ದಾರೆ

ಮೈಸೂರಿನಲ್ಲಿ ಮಾವುತರ ಕುಟುಂಬಕ್ಕೆ ಕುಕ್ಕರ್ ನೀಡಿ, ಭರ್ಜರಿ ಊಟ ಹಾಕಿಸಿದ್ದಾರೆ. ದಸರಾ ಆನೆಗಳನ್ನು ನೋಡಿ ವಿಜಯಲಕ್ಷ್ಮೀ ಅವರು ಸಂಭ್ರಮಿಸಿದ್ದಾರೆ. ಇನ್ನು, ವಿಜಯಲಕ್ಷ್ಮೀ ಅವರಿಗೆ ದರ್ಶನ್ ಆಪ್ತ ಧನ್ವೀರ್​ ಸಾಥ್ ನೀಡಿದ್ದಾರೆ. ರೇಣುಕಾಸ್ವಾಮಿ ಕೇಸ್​ನಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಈ ಮೊದಲು ದರ್ಶನ್​ ಅವರು ಇಂಥ ಸೇವೆಗಳನ್ನ ಮಾಡಿಕೊಂಡು ಬರುತ್ತಿದ್ದರು. ಇದೀಗ ಪತಿಯ ಅನುಪಸ್ಥಿತಿಯಲ್ಲಿ ವಿಜಯಲಕ್ಷ್ಮೀ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.

The post ಸಮಾಜಮುಖಿ ಕೆಲಸಗಳಲ್ಲಿ ಬ್ಯುಸಿಯಾದ ದರ್ಶನ್ ಪತ್ನಿ ವಿಜಯಲಕ್ಷ್ಮಿ…! appeared first on Good News 24x7.

]]>