Engineer Archives - Good News 24x7 https://www.goodnews24x7.com/tag/engineer/ Kannada Mon, 27 Apr 2026 12:08:33 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Engineer Archives - Good News 24x7 https://www.goodnews24x7.com/tag/engineer/ 32 32 ಕೋಮಾಗೆ ಜಾರಿದ್ದ ಹಾಸನದ ಇಂಜಿನಿಯರ್ ಶ್ವೇತಾ ಸಾ* https://www.goodnews24x7.com/hassan-engineer-shweta-dies-after-slipping-into-coma/ Mon, 27 Apr 2026 11:52:24 +0000 https://www.goodnews24x7.com/?p=9428 ಹಾಸನದ 25ರ ಯುವ ಸಾಫ್ಟ್‌ವೇರ್ ಇಂಜಿನಿಯರ್ ಶ್ವೇತಾ ಮೆದುಳಿನಲ್ಲಿ ತೀವ್ರ ರಕ್ತಸ್ರಾವದಿಂದ ಹಠಾತ್ ನಿಧನರಾಗಿದ್ದಾರೆ. ಮನೆಯಲ್ಲಿ ಕುಸಿದುಬಿದ್ದ ನಂತರ ಕೋಮಾಕ್ಕೆ ಜಾರಿದ ಶ್ವೇತಾ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದರು. ಕುಟುಂಬದಲ್ಲಿ ಈ ಘಟನೆ ಆತಂಕ ಮೂಡಿಸಿದೆ. ಪೋಷಕರು ಅಂಗಾಂಗ ದಾನಕ್ಕೆ ಮುಂದಾದರೂ, ಆರೋಗ್ಯ…

The post ಕೋಮಾಗೆ ಜಾರಿದ್ದ ಹಾಸನದ ಇಂಜಿನಿಯರ್ ಶ್ವೇತಾ ಸಾ* appeared first on Good News 24x7.

]]>

ಹಾಸನದ 25ರ ಯುವ ಸಾಫ್ಟ್‌ವೇರ್ ಇಂಜಿನಿಯರ್ ಶ್ವೇತಾ ಮೆದುಳಿನಲ್ಲಿ ತೀವ್ರ ರಕ್ತಸ್ರಾವದಿಂದ ಹಠಾತ್ ನಿಧನರಾಗಿದ್ದಾರೆ. ಮನೆಯಲ್ಲಿ ಕುಸಿದುಬಿದ್ದ ನಂತರ ಕೋಮಾಕ್ಕೆ ಜಾರಿದ ಶ್ವೇತಾ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದರು. ಕುಟುಂಬದಲ್ಲಿ ಈ ಘಟನೆ ಆತಂಕ ಮೂಡಿಸಿದೆ. ಪೋಷಕರು ಅಂಗಾಂಗ ದಾನಕ್ಕೆ ಮುಂದಾದರೂ, ಆರೋಗ್ಯ ಸ್ಥಿತಿಯಿಂದ ಅದು ಸಾಧ್ಯವಾಗಲಿಲ್ಲ.

ಹಾಸನ, ಏ.27: ಸಾಫ್ಟ್‌ವೇರ್ ಇಂಜಿನಿಯರ್ ಹಠಾತ್ ಸಾ*ನ್ನಪ್ಪಿರುವ ಘಟನೆ ನಡೆದಿದೆ. ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾಗಿ ಕೋಮಾಗೆ ಜಾರಿದ್ದ 25 ವರ್ಷದ ಯುವತಿ ಶ್ವೇತಾ, ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. ಈ ಘಟನೆ ಇಡೀ ಗ್ರಾಮದಲ್ಲಿ ಹಾಗೂ ಕುಟುಂಬಸ್ಥರಲ್ಲಿ ಸೂತಕ ಛಾಯೆ ಆವರಿಸಿದೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬಂಡಿಲಕ್ಕನಕೊಪ್ಪಲು ಗ್ರಾಮದ ಗಂಗಾಧರ್ ಮತ್ತು ಸರೋಜ ದಂಪತಿಯ ಪುತ್ರಿಯಾದ ಶ್ವೇತಾ(25), ಹಾಸನದ ಮ್ಯಾಗ್ನಾ ಸಾಫ್ಟ್ ಕಂಪನಿಯಲ್ಲಿ ಕಳೆದ ಮೂರು ವರ್ಷಗಳಿಂದ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಏಪ್ರಿಲ್ 25ರ ಶುಕ್ರವಾರ ಸಂಜೆ ಮನೆಯಲ್ಲಿದ್ದಾಗ ಶ್ವೇತಾ ಹಠಾತ್ತಾಗಿ ಕುಸಿದು ಬಿದ್ದಿದ್ದರು.
ಕುಸಿದು ಬಿದ್ದ ತಕ್ಷಣವೇ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ. ಆದರೆ, ಆಸ್ಪತ್ರೆಗೆ ತಲುಪುವ ವೇಳೆಗೆ ಶ್ವೇತಾ ಕೋಮಾಗೆ ಜಾರಿದ್ದರು. ಆಕೆಯನ್ನು ಪರೀಕ್ಷಿಸಿದ ವೈದ್ಯರು ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾಗಿರುವ (Brain Hemorrhage) ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಚಿಕಿತ್ಸೆ ಮಾಡುತ್ತಿರುವಾಗಲೇ ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡ ಶ್ವೇತಾ ಸಾ*ನ್ನಪ್ಪಿದ್ದಾರೆ.
ಮಗಳ ಸಾವಿನ ನೋವಿನ ನಡುವೆಯೂ ಪೋಷಕರು ಶ್ವೇತಾ ಅವರ ಅಂಗಾಂಗ ದಾನ ಮಾಡಲು ನಿರ್ಧಾರ ಮಾಡಿದ್ದರು. ಆ ಮೂಲಕ ಮತ್ತೊಬ್ಬರ ಬಾಳಿಗೆ ಬೆಳಕಾಗಲು ಮುಂದಾಗಿದ್ದರು. ಆದರೆ ಆಕೆಯ ದೇಹದ ಆರೋಗ್ಯದ ಸ್ಥಿತಿಗತಿಯಿಂದಾಗಿ ಅಂಗಾಂಗ ದಾನ ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ. ಇಂದು ಬಂಡಿಲಕ್ಕನಕೊಪ್ಪಲು ಗ್ರಾಮದಲ್ಲಿ ಯುವತಿಯ ಅಂತ್ಯಕ್ರಿಯೆ ನಡೆಯಲಿದೆ. ತುಂಬು ವಯಸ್ಸಿನ ಮಗಳ ಹಠಾತ್ ಸಾ*ನಿಂದ ಗಂಗಾಧರ್ ಕುಟುಂಬ ಕಂಗಾಲಾಗಿದ್ದು, ಹಸನ್ಮುಖಿ ಯುವತಿಯ ಸಾವಿಗೆ ಮ್ಯಾಗ್ನಾ ಸಾಫ್ಟ್ ಕಂಪನಿಯ ಸಹೋದ್ಯೋಗಿಗಳು ಮತ್ತು ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.

The post ಕೋಮಾಗೆ ಜಾರಿದ್ದ ಹಾಸನದ ಇಂಜಿನಿಯರ್ ಶ್ವೇತಾ ಸಾ* appeared first on Good News 24x7.

]]>
ಎಂಜಿನಿಯರ್ ನ ಹೊಸ ಪ್ರಯತ್ನ; ದೋಸೆ ಮಾಡೋದಕ್ಕೂ ಬಂತು ರೋಬೋಟ್!!! https://www.goodnews24x7.com/%e0%b2%8e%e0%b2%82%e0%b2%9c%e0%b2%bf%e0%b2%a8%e0%b2%bf%e0%b2%af%e0%b2%b0%e0%b3%8d-%e0%b2%a8-%e0%b2%b9%e0%b3%8a%e0%b2%b8-%e0%b2%aa%e0%b3%8d%e0%b2%b0%e0%b2%af%e0%b2%a4%e0%b3%8d%e0%b2%a8-%e0%b2%a6/ Mon, 18 Aug 2025 08:07:09 +0000 https://www.goodnews24x7.com/?p=6343 ನಾವಿಂದು ತಂತ್ರಜ್ಞಾನದೊಂದಿಗೆ ಬೆಸೆದುಕೊಂಡಿದ್ದೇವೆ. ಹೀಗಾಗಿ ಪ್ರತಿಯೊಂದು ಕೆಲಸದಲ್ಲೂ ಮೆಷಿನ್‌ಗಳದ್ದೇ ಕಾರುಬಾರು. ಇದೀಗ ಬೆಂಗಳೂರಿನ ಇಂಜಿನಿಯರ್ ಒಬ್ಬರು ದೋಸೆ ಮಾಡುವ ರೋಬೋಟನ್ನು ಅಭಿವೃದ್ಧಿ ಪಡಿಸಿದ್ದಾರೆ. ಥಿಂಡಿ ಎಂಬ ಹೆಸರಿನ ದೋಸೆ ತಯಾರಿಸುವ ಈ ರೋಬೋಟ್ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿದೆ. ಸಮಯ…

The post ಎಂಜಿನಿಯರ್ ನ ಹೊಸ ಪ್ರಯತ್ನ; ದೋಸೆ ಮಾಡೋದಕ್ಕೂ ಬಂತು ರೋಬೋಟ್!!! appeared first on Good News 24x7.

]]>

ನಾವಿಂದು ತಂತ್ರಜ್ಞಾನದೊಂದಿಗೆ ಬೆಸೆದುಕೊಂಡಿದ್ದೇವೆ. ಹೀಗಾಗಿ ಪ್ರತಿಯೊಂದು ಕೆಲಸದಲ್ಲೂ ಮೆಷಿನ್‌ಗಳದ್ದೇ ಕಾರುಬಾರು. ಇದೀಗ ಬೆಂಗಳೂರಿನ ಇಂಜಿನಿಯರ್ ಒಬ್ಬರು ದೋಸೆ ಮಾಡುವ ರೋಬೋಟನ್ನು ಅಭಿವೃದ್ಧಿ ಪಡಿಸಿದ್ದಾರೆ. ಥಿಂಡಿ ಎಂಬ ಹೆಸರಿನ ದೋಸೆ ತಯಾರಿಸುವ ಈ ರೋಬೋಟ್ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿದೆ. ಸಮಯ ಉಳಿತಾಯದೊಂದಿಗೆ ಗರಿಗರಿ ದೋಸೆ ಮಾಡುವ ಈ ಮೆಷಿನ್‌ ಕಂಡು ಎಲ್ಲರೂ ಅಚ್ಚರಿಪಟ್ಟಿದ್ದಾರೆ.

 

ದೊಡ್ಡ ದೊಡ್ಡ ನಗರಗಳಲ್ಲಿ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಮನೆಕೆಲಸ ಹಾಗೂ ಆಫೀಸಿನ ಕೆಲಸ ನಿಭಾಯಿಸಿಕೊಂಡು ಹೋಗುವುದು ಕಷ್ಟ. ಹೀಗಾಗಿ. ಮಹಿಳೆಯರ ಅರ್ಧಕರ್ಧ ಕೆಲಸವನ್ನು ರೋಬೋಟ್‌ಗಳು ಮಾಡುತ್ತಿದೆ. ಬೆಂಗಳೂರಿನಂತಹ ನಗರಗಳಲ್ಲಿ ಹೆಚ್ಚಿನವರು ಮನೆಕೆಲಸಕ್ಕಾಗಿ ರೋಬೋಟ್‌ಗಳನ್ನು ಖರೀದಿಸುತ್ತಿರುವುದನ್ನು ನೋಡಿರಬಹುದು. ಇದೀಗ ದೋಸೆ ಮಾಡುವ ಸಮಯವನ್ನು ಉಳಿಸಲು ರೋಬೋಟ್ ಬಂದಿದೆ. ಬೆಂಗಳೂರಿನ ಇಂಜಿನಿಯರ್ ಒಬ್ಬರು ದೋಸೆ ಮಾಡುವ ರೋಬೋಟನ್ನು ಅಭಿವೃದ್ಧಿ ಪಡಿಸುವ ಮೂಲಕ ಸುದ್ದಿಯಾಗಿದ್ದಾರೆ. ಥಿಂಡಿ ಎಂಬ ಹೆಸರಿನ ಈ ರೋಬೋಟ್, ಸ್ವಯಂಚಾಲಿತವಾಗಿ ದೋಸೆಗಳನ್ನು ತಯಾರಿಸಿ, ಕೆಲಸವನ್ನು ಸುಲಭವಾಗಿಸಲಿದೆ.

r/ Bengaluru ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಬೆಂಗಳೂರಿನ ಇಂಜಿನಿಯರ್ ಒಬ್ಬರು ಈ ಬಗ್ಗೆ ಬರೆದುಕೊಂಡಿದ್ದಾರೆ. ಎಲ್ಲರಿಗೂ ನಮಸ್ಕಾರ, ನಾನು ಕಳೆದ ಕೆಲವು ತಿಂಗಳುಗಳಿಂದ ಬೆಂಗಳೂರಿನಲ್ಲಿ ಒಂದು ವೈಯಕ್ತಿಕ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ಥಿಂಡಿ ಎಂಬ ರೋಬೋಟ್ ಸ್ವಯಂಚಾಲಿತವಾಗಿ ದೋಸೆಗಳನ್ನು ತಯಾರಿಸಬಲ್ಲದು. ಇದು ಹಿಟ್ಟನ್ನು ಇದು ಹಿಟ್ಟನ್ನು ಸುರಿದು ಪ್ಯಾನ್ ಮೇಲೆ ಹರಡುತ್ತದೆ. ನನ್ನ ಕುಟುಂಬದ ಸದಸ್ಯರು ಅಡುಗೆ ಮಾಡುವುದನ್ನು ನೋಡಿದ ಬಳಿಕ ನಾನು ಈ ಬಗ್ಗೆ ಯೋಚಿಸಿದೆ. ಆ ಸಮಯದಲ್ಲಿ ನನಗೆ ಈ ಐಡಿಯಾ ಬಂದಿತು ಎಂದು ಹೇಳಿದ್ದಾರೆ.

 

The post ಎಂಜಿನಿಯರ್ ನ ಹೊಸ ಪ್ರಯತ್ನ; ದೋಸೆ ಮಾಡೋದಕ್ಕೂ ಬಂತು ರೋಬೋಟ್!!! appeared first on Good News 24x7.

]]>
ನಿರ್ಮಿತಿ ಕೇಂದ್ರದ ಇಂಜಿನಿಯರ್ ಲಾಡ್ಜ್ನಲ್ಲಿ ಆ*ಹತ್ಯೆ, ಸಾ*ನ ಬಗ್ಗೆ ಸಾಕಷ್ಟು ಅನುಮಾನ. https://www.goodnews24x7.com/%e0%b2%a8%e0%b2%bf%e0%b2%b0%e0%b3%8d%e0%b2%ae%e0%b2%bf%e0%b2%a4%e0%b2%bf-%e0%b2%95%e0%b3%87%e0%b2%82%e0%b2%a6%e0%b3%8d%e0%b2%b0%e0%b2%a6-%e0%b2%87%e0%b2%82%e0%b2%9c%e0%b2%bf%e0%b2%a8%e0%b2%bf%e0%b2%af/ Fri, 03 Jan 2025 11:57:05 +0000 https://www.goodnews24x7.com/?p=1493 ಗದಗ : ನಿರ್ಮಿತಿ ಕೇಂದ್ರದ ಇಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗನ ಪಲ್ಲವಿ ಲಾಡ್ಜ್ನಲ್ಲಿ ನಡೆದಿದೆ. ಗದಗ ನಗರದ ನಿವಾಸಿಯಾಗಿರುವ ಶಂಕರಗೌಡ ಪಾಟೀಲ್ (54) ಆತ್ಮಹತ್ಯೆ ಮಾಡಿಕೊಂಡಿರುವ ಇಂಜಿನಿಯರ್. ಇಂದು (ಡಿಸೆಂ 03) ಬೆಳಗ್ಗೆ 7.30ಕ್ಕೆ ಮನೆಯಿಂದ ಹೊರಬಂದಿದ್ದ ಶಂಕರಗೌಡ ಪಾಟೀಲ್…

The post ನಿರ್ಮಿತಿ ಕೇಂದ್ರದ ಇಂಜಿನಿಯರ್ ಲಾಡ್ಜ್ನಲ್ಲಿ ಆ*ಹತ್ಯೆ, ಸಾ*ನ ಬಗ್ಗೆ ಸಾಕಷ್ಟು ಅನುಮಾನ. appeared first on Good News 24x7.

]]>

ಗದಗ : ನಿರ್ಮಿತಿ ಕೇಂದ್ರದ ಇಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗನ ಪಲ್ಲವಿ ಲಾಡ್ಜ್ನಲ್ಲಿ ನಡೆದಿದೆ. ಗದಗ ನಗರದ ನಿವಾಸಿಯಾಗಿರುವ ಶಂಕರಗೌಡ ಪಾಟೀಲ್ (54) ಆತ್ಮಹತ್ಯೆ ಮಾಡಿಕೊಂಡಿರುವ ಇಂಜಿನಿಯರ್. ಇಂದು (ಡಿಸೆಂ 03) ಬೆಳಗ್ಗೆ 7.30ಕ್ಕೆ ಮನೆಯಿಂದ ಹೊರಬಂದಿದ್ದ ಶಂಕರಗೌಡ ಪಾಟೀಲ್ ನಗರದ ಪಲ್ಲವಿ ಲಾಡ್ಜ್ನ ರೂಮ್ ನಂಬರ್ 513ರಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕರ್ನಾಟಕದಲ್ಲಿ ದಿನೇ ದಿನೇ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅದರಲ್ಲೂ ಸರ್ಕಾರಿ ಅಧಿಕಾರಿಗಳು ಒಳಗೊಂಡಿದ್ದಾರೆ. ಅದರಂತೆ ಗದಗನಲ್ಲಿ ನಿರ್ಮಿತಿ ಕೇಂದ್ರದ ಇಂಜಿನಿಯರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಾಡ್ಜ್ನಲ್ಲೇ ನೇಣುಬಿಗಿದುಕೊಂಡು ಸಾವಿಗೆ ಶರಣಾಗಿದ್ದು, ಇದೊಂದು ಕೊಲೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ, ಈ ಸಾವು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಇನ್ನು ಈ ಸಂಬಂಧ ಮೃತ ಸಹೋದರ ಕೃಷ್ಣಗೌಡ ಪ್ರತಿಕ್ರಿಯಿಸಿದ್ದು, ನೇಣು ಹಾಕಿ ಕೊಲೆ ಮಾಡಿದ್ದಾರೆ. ಸಾಲ ಇಲ್ಲ. ಸಾಕಷ್ಟು ಆಸ್ತಿ ಇದೆ. ಸಾಲಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವನಲ್ಲ. ಸಾಲಕ್ಕೆ ಜಾಮೀನು ಆಗಿದ್ದ ಆ ವಿಷಯಕ್ಕಾದ್ರೂ ಆಗಿರಬಹುದು. ಜಿಲ್ಲಾಧಿಕಾರಿಗಳ ಅಡಿಯಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿ ಪ್ರಮೋಶನಕ್ಕೆನಾದ್ರೂ ವ್ಯತ್ಯಾಸ ಆಗಿದೆಯೋ ಗೊತ್ತಿಲ್ಲ. ಈ ಮೂರು ವಿಷಯಕ್ಕೆ ಸಾವು ಅಂತ ಅನುಮಾನ ಇದೆ ಎಂದಿದ್ದಾರೆ.
ಸಾಲಕ್ಕೆ ಹೆದರುವ ಮನುಷ್ಯ ಅವನಲ್ಲ. ನೇಣು ಹಾಕಿಕೊಂಡ ಹಗ್ಗ ಹೊಸದು ಇದೆ. ಹೀಗಾಗಿ ಯಾರಾದರೈ ಊರಲು ಹಾಕಿದ್ದಾರೆ ಎಂದು ಆರೋಪಿಸಿರುವ ಕೃಷ್ಣಗೌಡ, ನಿರ್ಮಿತಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ. ನನಗೆ ಆತ್ಮಹತ್ಯೆ ಮಾಡಿಕೊಂಡ ರೂಂಗೆ ಪೊಲೀಸರು ಬಿಡಲಿಲ್ಲ. ಹೀಗಾಗಿ ಸಾವಿನ ಬಗ್ಗೆ ಸಾಕಷ್ಟು ಅನುಮಾನ ಇದೆ ಎಂದು ತಿಳಿಸಿದ್ದಾರೆ.
ಬೀದರ್ನಲ್ಲಿ ಯುವ ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಸಚಿವ ಪ್ರಿಯಾಂಕ್ ಖರ್ಗೆ ಆಪ್ತನ ಹೆಸರು ಬರೆದಿಟ್ಟು ಗುತ್ತಿಗೆದಾರ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದು, ಇದೀಗ ವಿರೋಧ ಪಕ್ಷಗಳು ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡುವಂತೆ ಆಗ್ರಹಿಸುತ್ತಿವೆ. ಈ ಬಗ್ಗೆ ರಾಜಕೀಯವಾಗಿ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ.
ಇದೆಲ್ಲದರ ಮಧ್ಯ ಇದೀಗ ನಿರ್ಮಿತಿ ಕೇಂದ್ರದ ಇಂಜಿಯನರ್ ಆತ್ಮಹತ್ಯೆ ಪ್ರಕರಣ ಬೆಳಗೆ ಬಂದಿದ್ದು, ಈ ಪ್ರಕರಣ ಮುಂದೆ ಸ್ವರೂಪ ಪಡೆದುಕೊಳ್ಳಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

The post ನಿರ್ಮಿತಿ ಕೇಂದ್ರದ ಇಂಜಿನಿಯರ್ ಲಾಡ್ಜ್ನಲ್ಲಿ ಆ*ಹತ್ಯೆ, ಸಾ*ನ ಬಗ್ಗೆ ಸಾಕಷ್ಟು ಅನುಮಾನ. appeared first on Good News 24x7.

]]>