families Archives - Good News 24x7 https://www.goodnews24x7.com/tag/families/ Kannada Tue, 23 Jun 2026 07:32:51 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg families Archives - Good News 24x7 https://www.goodnews24x7.com/tag/families/ 32 32 ‘ಅಪ್ಪಾ, ಹೇಗಾದರೂ ಕಾಪಾಡು…’ ಕೊನೆಯ ಕರೆ https://www.goodnews24x7.com/dad-save-me-somehow-students-life-ends-with-last-call/ Tue, 23 Jun 2026 07:32:51 +0000 https://www.goodnews24x7.com/?p=9636 ಲಕ್ನೋದಲ್ಲಿನ ಕೋಚಿಂಗ್ ಸೆಂಟರ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮೃ*ತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಪ್ರಾ*ಣ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದ ವಿದ್ಯಾರ್ಥಿಗಳಿಗೂ ತೀವ್ರ ಗಾಯಗಳಾಗಿವೆ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ…

The post ‘ಅಪ್ಪಾ, ಹೇಗಾದರೂ ಕಾಪಾಡು…’ ಕೊನೆಯ ಕರೆ appeared first on Good News 24x7.

]]>

ಲಕ್ನೋದಲ್ಲಿನ ಕೋಚಿಂಗ್ ಸೆಂಟರ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮೃ*ತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಪ್ರಾ*ಣ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದ ವಿದ್ಯಾರ್ಥಿಗಳಿಗೂ ತೀವ್ರ ಗಾಯಗಳಾಗಿವೆ

ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಂತಾಪ ವ್ಯಕ್ತಪಡಿಸಿದ್ದು, ಮೃ*ತರ ಕುಟುಂಬಗಳಿಗೆ ಪರಿಹಾರ ಘೋಷಿಸಿದ್ದಾರೆ.

ಇದೇ ವೇಳೆ ಅಗ್ನಿ ದುರಂತದಲ್ಲಿ ಮೃ*ತಪಟ್ಟ ವಿದ್ಯಾರ್ಥಿಗಳ ಕರುಣಾಜನಕ ಕಥೆಗಳು ಬೆಳಕಿಗೆ ಬರುತ್ತಿವೆ.

23 ವರ್ಷದ ವಿದ್ಯಾರ್ಥಿ ಸುಖಮಣಿ ಸಿಂಗ್, ಬೆಂಕಿಯ ಕೆನ್ನಾಲಿಗೆಯಲ್ಲಿ ಸಿಲುಕಿದ್ದ ವೇಳೆ ತನ್ನ ತಂದೆ ಪ್ರಭಜೋತ್ ಸಿಂಗ್ ಅವರಿಗೆ ಕರೆ ಮಾಡಿ, “ಅಪ್ಪಾ, ಹೇಗಾದರೂ ಮಾಡಿ ನನ್ನನ್ನು ಕಾಪಾಡಿ. ಸುತ್ತಲೂ ಬೆಂಕಿಯೇ ಕಾಣುತ್ತಿದೆ. ಹೊರಗೆ ಬರಲು ದಾರಿಯೇ ಇಲ್ಲ” ಎಂದು ಅಳುತ್ತಾ ಸಹಾಯ ಕೋರಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ತಂದೆ ಮಗನಿಗೆ ಧೈರ್ಯ ತುಂಬಲು ಪ್ರಯತ್ನಿಸುತ್ತಿದ್ದಂತೆಯೇ ಸಂಪರ್ಕ ಕಡಿತಗೊಂಡಿದೆ

The post ‘ಅಪ್ಪಾ, ಹೇಗಾದರೂ ಕಾಪಾಡು…’ ಕೊನೆಯ ಕರೆ appeared first on Good News 24x7.

]]>
ಫ್ಲೈ ೯೧ ವಿಮಾನದಲ್ಲಿ ಆತಂಕದ ಕ್ಷಣ: ಪ್ರಯಾಣಿಕರ ಕಣ್ಣೀರು, ಸಿಬ್ಬಂದಿಯ ಉದ್ಧಟತನ! https://www.goodnews24x7.com/phlai-91-vimanadalli-ata%e1%b9%85kada-k%e1%b9%a3a%e1%b9%87a-praya%e1%b9%87ikara-ka%e1%b9%87%e1%b9%87iru-sibbandiya-uddha%e1%b9%adatana-crewbengalurupassengershyderabadairportfamilieshubbal/ Mon, 20 Apr 2026 09:16:24 +0000 https://www.goodnews24x7.com/?p=9314 ಬೆಂಗಳೂರು: ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಹೊರಟಿದ್ದ ಫ್ಲೈ ೯೧ (Fly91) ವಿಮಾನವೊಂದು ಭೀಕರ ಟರ್ಬುಲೆನ್ಸ್‌ಗೆ (ಗಾಳಿಯ ಒತ್ತಡದ ಏರುಪೇರು) ಸಿಲುಕಿ ಪ್ರಯಾಣಿಕರು ಸಾವು-ಬದುಕಿನ ನಡುವೆ ಹೋರಾಟ ನಡೆಸಿದ ಘಟನೆ ನಿನ್ನೆ ನಡೆದಿದೆ. ಸಂಕಷ್ಟದ ಸಮಯದಲ್ಲಿ ಪೈಲಟ್ ಸಮಯಪ್ರಜ್ಞೆ ಮೆರೆದರೆ, ವಿಮಾನ ನಿಲ್ದಾಣದ ಸಿಬ್ಬಂದಿಯ…

The post ಫ್ಲೈ ೯೧ ವಿಮಾನದಲ್ಲಿ ಆತಂಕದ ಕ್ಷಣ: ಪ್ರಯಾಣಿಕರ ಕಣ್ಣೀರು, ಸಿಬ್ಬಂದಿಯ ಉದ್ಧಟತನ! appeared first on Good News 24x7.

]]>

ಬೆಂಗಳೂರು: ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಹೊರಟಿದ್ದ ಫ್ಲೈ ೯೧ (Fly91) ವಿಮಾನವೊಂದು ಭೀಕರ ಟರ್ಬುಲೆನ್ಸ್‌ಗೆ (ಗಾಳಿಯ ಒತ್ತಡದ ಏರುಪೇರು) ಸಿಲುಕಿ ಪ್ರಯಾಣಿಕರು ಸಾವು-ಬದುಕಿನ ನಡುವೆ ಹೋರಾಟ ನಡೆಸಿದ ಘಟನೆ ನಿನ್ನೆ ನಡೆದಿದೆ. ಸಂಕಷ್ಟದ ಸಮಯದಲ್ಲಿ ಪೈಲಟ್ ಸಮಯಪ್ರಜ್ಞೆ ಮೆರೆದರೆ, ವಿಮಾನ ನಿಲ್ದಾಣದ ಸಿಬ್ಬಂದಿಯ ಅಮಾನವೀಯ ವರ್ತನೆ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಆ ೧೫ ನಿಮಿಷಗಳ ಕಾಲ ಮೃತ್ಯು ಕಣ್ಣೆದುರಿಗಿತ್ತು:
ನಿನ್ನೆ ಮಧ್ಯಾಹ್ನ ೩ ಗಂಟೆಗೆ ಹೊರಟ ವಿಮಾನವು ಹುಬ್ಬಳ್ಳಿ ಸಮೀಪಿಸುತ್ತಿದ್ದಂತೆ ಸುಮಾರು ೧೫ ನಿಮಿಷಗಳ ಕಾಲ ತೀವ್ರವಾಗಿ ಅಲುಗಾಡತೊಡಗಿತು. ಟರ್ಬುಲೆನ್ಸ್ ಎಷ್ಟಿತ್ತೆಂದರೆ, ಪ್ರಯಾಣಿಕರು ಬದುಕುವ ಭರವಸೆಯನ್ನೇ ಕೈಬಿಟ್ಟಿದ್ದರು. ಕೆಲವರು ತಮ್ಮ ಕುಟುಂಬದವರಿಗೆ ‘ಕೊನೆಯ ಸಂದೇಶ’ ಕಳುಹಿಸಲು ವಿಡಿಯೋ ರೆಕಾರ್ಡ್ ಮಾಡತೊಡಗಿದರೆ, ಇನ್ನು ಕೆಲವರು ಕಿರುಚಾಡುತ್ತಿದ್ದರು. ಅಲುಗಾಟದ ತೀವ್ರತೆಗೆ ಮಗುವೊಂದು ಕೈಯಿಂದ ಕೆಳಗೆ ಬಿದ್ದ ಘಟನೆಯೂ ನಡೆಯಿತು. ಈ ವೇಳೆ ಗಗನಸಖಿಯರೂ ಕೂಡ ಭಯದಿಂದ ಕಣ್ಣೀರಿಟ್ಟಿದ್ದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯಾಗಿತ್ತು.

೪ ಗಂಟೆಗಳ ಕಾಲ ಆಕಾಶದಲ್ಲೇ ಅಲೆದಾಟ:
ಹುಬ್ಬಳ್ಳಿಯಲ್ಲಿ ಇಳಿಯಲು ಸಾಧ್ಯವಾಗದ ಕಾರಣ ಪೈಲಟ್ ವಿಮಾನವನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ತಿರುಗಿಸಿದರು. ಸುಮಾರು ನಾಲ್ಕು ಗಂಟೆಗಳ ಕಾಲ ಆಕಾಶದಲ್ಲೇ ಸುತ್ತಾಡಿದ ವಿಮಾನವು ಕೊನೆಗೆ ರಾತ್ರಿ ೭ ಗಂಟೆಯ ಸುಮಾರಿಗೆ ಬೆಂಗಳೂರಿನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ಜೀವ ಉಳಿಸಿದ ಪೈಲಟ್‌ಗೆ ಪ್ರಯಾಣಿಕರು ಚಪ್ಪಾಳೆ ತಟ್ಟಿ ಕೃತಜ್ಞತೆ ಸಲ್ಲಿಸಿದರು.

ಫ್ಲೈ ೯೧ ಸಿಬ್ಬಂದಿಯ ಅಸಭ್ಯ ವರ್ತನೆ:
ವಿಮಾನ ಸುರಕ್ಷಿತವಾಗಿ ಇಳಿದ ನಂತರ ಪ್ರಯಾಣಿಕರಿಗೆ ಸಮಾಧಾನ ಹೇಳಬೇಕಿದ್ದ ಫ್ಲೈ ೯೧ ಏರ್‌ಲೈನ್ಸ್‌ನ ನೆಲದ ಸಿಬ್ಬಂದಿ (Ground Staff) ಅತ್ಯಂತ ಉದ್ಧಟತನದಿಂದ ವರ್ತಿಸಿದ್ದಾರೆ. “ಇದೇ ವಿಮಾನ ಮತ್ತೆ ಹುಬ್ಬಳ್ಳಿಗೆ ಹೋಗುತ್ತದೆ, ಹತ್ತುವವರು ಹತ್ತಿ ಇಲ್ಲದಿದ್ದರೆ ಇಳಿದು ಹೋಗಿ” ಎಂದು ಅಹಂಕಾರದ ಧಾಟಿಯಲ್ಲಿ ಮಾತನಾಡಿದ್ದಾರೆ. ಸಾವಿನ ದವಡೆಯಿಂದ ಬಂದಿದ್ದ ಪ್ರಯಾಣಿಕರಿಗೆ ಕನಿಷ್ಠ ಸೌಜನ್ಯವನ್ನೂ ತೋರಿಸದ ಸಿಬ್ಬಂದಿಯ ನಡೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. “ಮಾನವೀಯತೆ ಇಲ್ಲದ ಇಂತಹ ಏರ್‌ಲೈನ್ಸ್‌ನಲ್ಲಿ ನಾವು ಮತ್ತೆ ಹೇಗೆ ಧೈರ್ಯವಾಗಿ ಪ್ರಯಾಣಿಸಲಿ?” ಎಂದು ಪ್ರಯಾಣಿಕರು ಪ್ರಶ್ನಿಸಿದ್ದಾರೆ.

The post ಫ್ಲೈ ೯೧ ವಿಮಾನದಲ್ಲಿ ಆತಂಕದ ಕ್ಷಣ: ಪ್ರಯಾಣಿಕರ ಕಣ್ಣೀರು, ಸಿಬ್ಬಂದಿಯ ಉದ್ಧಟತನ! appeared first on Good News 24x7.

]]>
ಹೆರಿಗೆ ನೋವಿನ ಬಳಿಕ ಬಾಲಕಿ ಮೇಲಿನ ಅ***ರ ಬೆಳಕಿಗೆ ಬಂದಿದೆ https://www.goodnews24x7.com/rape-of-girl-comes-to-light-after-labor-pains/ Sat, 18 Oct 2025 12:16:00 +0000 https://www.goodnews24x7.com/?p=7767  ನೇಪಾಳ: 15ರ ಬಾಲಕಿಯ ಗರ್ಭಿಣಿ ಮಾಡಿದ 17ರ ಬಾಲಕ ಅರೆಸ್ಟ್ ತನ್ನ ನೆರೆಮನೆಯ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ 17 ವರ್ಷದ ಕಾನೂನು ಸಂಘರ್ಷಕ್ಕೊಳಗಾಗದ ಬಾಲಕನೊಬ್ಬನನ್ನು ಶಂಕರಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ನೇಪಾಳ…

The post ಹೆರಿಗೆ ನೋವಿನ ಬಳಿಕ ಬಾಲಕಿ ಮೇಲಿನ ಅ***ರ ಬೆಳಕಿಗೆ ಬಂದಿದೆ appeared first on Good News 24x7.

]]>

 ನೇಪಾಳ: 15ರ ಬಾಲಕಿಯ ಗರ್ಭಿಣಿ ಮಾಡಿದ 17ರ ಬಾಲಕ ಅರೆಸ್ಟ್ ತನ್ನ ನೆರೆಮನೆಯ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ 17 ವರ್ಷದ ಕಾನೂನು ಸಂಘರ್ಷಕ್ಕೊಳಗಾಗದ ಬಾಲಕನೊಬ್ಬನನ್ನು ಶಂಕರಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಖಾಸಗಿ ಆಸ್ಪತ್ರೆಯಲ್ಲಿ ನೇಪಾಳ ಮೂಲದ ಸಂತ್ರಸ್ತ ಬಾಲಕಿಗೆ ಗರ್ಭಪಾತವಾದ ಬಳಿಕ ಈ ಲೈಂಗಿಕ ಶೋಷಣೆ ಕೃತ್ಯ ಬೆಳಕಿಗೆ ಬಂದಿದೆ. ಬಳಿಕ ಸಂತ್ರಸ್ತೆಯ ಪೋಷಕರು ನೀಡಿದ ದೂರಿನ ಮೇರೆಗೆ ಅಪ್ರಾಪ್ತ ಬಾಲಕನನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಲವು ದಿನದ ಹಿಂದೆ ಉದ್ಯೋಗ ಅರಸಿ ನಗರಕ್ಕೆ ನೇಪಾಳದಿಂದ ಸಂತ್ರಸ್ತ ಕುಟುಂಬದ ಹಾಗೂ ರಾಜಸ್ಥಾನದಿಂದ ಆರೋಪಿತ ಬಾಲಕ ಪರಿವಾರ ಬಂದಿದ್ದರು. ಶಂಕರಪುರವ್ಯಾಪ್ತಿಯಲ್ಲಿ ಎರಡು ಕುಟುಂಬಗಳು ನೆರೆಹೊರೆಯಲ್ಲಿ ನೆಲೆಸಿದ್ದವು. ಮನೆ ಸಮೀಪದ ಶಾಲೆಯಲ್ಲಿ 9ನೇ ತರಗತಿಯಲ್ಲಿ ಸಂತ್ರಸ್ತೆ ಹಾಗೂ ಬಾಲಕ ಪಿಯುಸಿ ಓದುತ್ತಿದ್ದ. ಇನ್ನು ಖಾಸಗಿ ಕಂಪನಿ ಯಲ್ಲಿ ಬಾಲಕಿ ತಂದೆ ಸೆಕ್ಯೂರಿಟಿ ಗಾರ್ಡ್ ಆಗಿದ್ದಾರೆ. ಆರೋಪಿ ಬಾಲಕನ ಪೋಷಕರು ಕೂಲಿ ಕೆಲಸ ಮಾಡುತ್ತಾರೆ. ಎರಡು ಕುಟುಂಬಗಳ ನಡುವೆ ಸ್ನೇಹ ಬಾಂಧವ್ಯ ಇತ್ತು.

ಈ ಗೆಳೆತನದಲ್ಲೇ ಬಾಲಕಿ ಮನೆಗೆ ಬಂದು ಹೋಗುವುದನ್ನು ಬಾಲಕ ಮಾಡುತ್ತಿದ್ದ. ಆಗ ಆಕೆಯ ಮೇಲೆ ಲೈಂಗಿಕ ಶೋಷಣೆ ಮಾಡಿದ್ದಾನೆ. ಅತ್ಯಾಚಾರದಿಂದ ಗರ್ಭಧರಿಸಿದ್ದಳು. 2 ದಿನದಹಿಂದೆ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡು ಪರಿಸ್ಥಿತಿ ಗಂಭೀರವಾಗಿದೆ. ಕೂಡಲೇ ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ಪೋಷಕರು ಕರೆದೊಯ್ದಿದ್ದರು. ಅಷ್ಟರಲ್ಲಿ ಗರ್ಭಪಾತವಾಗಿತ್ತು ಎಂದು ತಿಳಿದು ಬಂದಿದೆ.

The post ಹೆರಿಗೆ ನೋವಿನ ಬಳಿಕ ಬಾಲಕಿ ಮೇಲಿನ ಅ***ರ ಬೆಳಕಿಗೆ ಬಂದಿದೆ appeared first on Good News 24x7.

]]>
ಹೊಸ ಬದುಕಿನ ಮೊದಲ ಹೆಜ್ಜೆಯಲ್ಲೇ ಮಾನವೀಯತೆಯ ಬೆಳಕು ಚೆಲ್ಲಿದ ನವಜೋಡಿ https://www.goodnews24x7.com/newlyweds-shed-light-on-humanity-in-their-first-step-of-new-life/ Fri, 05 Sep 2025 11:39:56 +0000 https://www.goodnews24x7.com/?p=7376 ಮೈಸೂರು: ಮೈಸೂರಿನಲ್ಲಿ ನವ ಜೋಡಿಗಳಿಂದ ನೇತ್ರದಾನ ಮೈಸೂರಿನ ನಿವಾಸಿ ಚಂದನ್ ಮತ್ತು ಲಾವಣ್ಯ ಇಂದು ಸರಳ ಮದುವೆ ಮೂಲಕ ಹೊಸ ಬದುಕಿನ ಹೆಜ್ಜೆ ಇಟ್ಟಿದ್ದಾರೆ. ಸುಮಾರು ಹತ್ತು ವರ್ಷಗಳಿಂದ ಪ್ರೀತಿಯಲ್ಲಿ ಒಂದಾಗಿದ್ದ ಈ ಜೋಡಿ, ಇಂದಿನ ದಿನ ಮನೆಯವರ ಸಮ್ಮುಖದಲ್ಲಿ ದೇವಸ್ಥಾನದಲ್ಲಿ…

The post ಹೊಸ ಬದುಕಿನ ಮೊದಲ ಹೆಜ್ಜೆಯಲ್ಲೇ ಮಾನವೀಯತೆಯ ಬೆಳಕು ಚೆಲ್ಲಿದ ನವಜೋಡಿ appeared first on Good News 24x7.

]]>

ಮೈಸೂರು: ಮೈಸೂರಿನಲ್ಲಿ ನವ ಜೋಡಿಗಳಿಂದ ನೇತ್ರದಾನ ಮೈಸೂರಿನ ನಿವಾಸಿ ಚಂದನ್ ಮತ್ತು ಲಾವಣ್ಯ ಇಂದು ಸರಳ ಮದುವೆ ಮೂಲಕ ಹೊಸ ಬದುಕಿನ ಹೆಜ್ಜೆ ಇಟ್ಟಿದ್ದಾರೆ. ಸುಮಾರು ಹತ್ತು ವರ್ಷಗಳಿಂದ ಪ್ರೀತಿಯಲ್ಲಿ ಒಂದಾಗಿದ್ದ ಈ ಜೋಡಿ, ಇಂದಿನ ದಿನ ಮನೆಯವರ ಸಮ್ಮುಖದಲ್ಲಿ ದೇವಸ್ಥಾನದಲ್ಲಿ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಚಾಲನೆ ನೀಡಿದರು.
ಮದುವೆ ಎಂದರೆ ಕೇವಲ ಸಂಬಂಧಿಕ–ಸ್ನೇಹಿತರಿಗೆ ಔತಣಕೂಟ, ಆನಂದ–ಆಡಂಬರವೆಂದುಕೊಳ್ಳುವ ಅನೇಕ ಯುವ ದಂಪತಿಗಳಿಗೆ, ಈ ಜೋಡಿ ನಿಜಕ್ಕೂ ಮಾದರಿಯಾಗಿದ್ದಾರೆ. ಮಾಂಗಲ್ಯ ಧಾರಣೆ ಬಳಿಕ ನವ ದಂಪತಿ ಇಬ್ಬರೂ ಸ್ವಇಚ್ಛೆಯಿಂದಲೇ ಮೈಸೂರಿನ ಅಗ್ರವಾಲ್ ಕಣ್ಣಿನ ಆಸ್ಪತ್ರೆಯ ವೈದ್ಯರ ಸಮ್ಮುಖದಲ್ಲಿ ದೇವಸ್ಥಾನದಲ್ಲೇ ನೇತ್ರದಾನ ಪ್ರಕ್ರಿಯೆಗೆ ಸಹಿ ಹಾಕಿದರು.ಮುಂದಿನ ಪೀಳಿಗೆಯ ನಾಲ್ಕು ಮಂದಿಗೆ, ನಾಲ್ಕು ಕುಟುಂಬಗಳಿಗೆ ಬೆಳಕಾಗುವ ಹಾದಿಯನ್ನು ಬರೆದು ಇವರು ಸಮಾಜದ ಮುಂದೆ ವಿಶಿಷ್ಟ ಮಾದರಿಯಾಗಿದ್ದಾರೆ.

ನವವರ ಚಂದನ್ ಅವರು:“ಇಂದಿನ ಯುವಕರಿಗೆ ಮದುವೆ ಎಂದರೆ ಹಳದಿ, ಸಂಗೀತ್, ಪ್ರೀ–ವೆಡಿಂಗ್ ಫೋಟೋ ಶೂಟ್ ಅಷ್ಟೆ. ನಾವು ಸಹ ಹಾಗೆ ಅಂದುಕೊಂಡಿದ್ದೆವು. ಆದರೆ ಮದುವೆಯ ಕ್ಷಣ ಸಮಾಜಕ್ಕೆ ಕೊಡುಗೆಯಾಗಿ ನೆನಪಾಗಲಿ ಎಂದುಕೊಂಡಾಗ ಡಾ. ರಾಜ್ ಕುಮಾರ್ ಅವರ ದಾರಿಯನ್ನು ಅನುಸರಿಸಿ, ‘ನೇತ್ರದಾನ ಮಹಾದಾನ’ ಎಂಬ ಮಾತಿನಂತೆ ನಾವು ಈ ಕಾರ್ಯಕ್ಕೆ ಮುಂದಾದೆವು. ಇದರಿಂದ ಮನಸ್ಸಿಗೆ ನಿಜವಾದ ಆತ್ಮತೃಪ್ತಿ ದೊರಕಿದೆ.”
ನಂತರ ಮಾತನಾಡಿದ ವಧು ಲಾವಣ್ಯ ಅವರು: “ಹತ್ತು ವರ್ಷಗಳ ಪ್ರೀತಿಯನ್ನು ಕುಟುಂಬದವರ ಒಪ್ಪಿಗೆಯೊಂದಿಗೆ ಇಂದು ಮದುವೆಯಾಗಿ ಸಾರ್ಥಕತೆ ಕಂಡಿದ್ದೇವೆ. ಈ ಕ್ಷಣವನ್ನು ಇನ್ನಷ್ಟು ಅರ್ಥಪೂರ್ಣವಾಗಿಸಲು ನೇತ್ರದಾನಕ್ಕೆ ಸಹಿ ಹಾಕಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಮಂದಿ ಇಂತಹ ಕಾರ್ಯಕ್ಕೆ ಮುಂದೆ ಬರಲಿ ಎಂದು ಹಾರೈಸುತ್ತೇನೆ.”ತಮ್ಮ ಭಾವನೆ ಹಂಚಿಕೊಂಡುರು.

ಒಟ್ಟಾರೆಯಾಗಿ ಮದುವೆಯ ಸಂಭ್ರಮವನ್ನು ಸಮಾಜಮುಖಿ ಕಾರ್ಯದ ಮೂಲಕ ಅರ್ಥಪೂರ್ಣಗೊಳಿಸಿದ ನವ ದಂಪತಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ

The post ಹೊಸ ಬದುಕಿನ ಮೊದಲ ಹೆಜ್ಜೆಯಲ್ಲೇ ಮಾನವೀಯತೆಯ ಬೆಳಕು ಚೆಲ್ಲಿದ ನವಜೋಡಿ appeared first on Good News 24x7.

]]>