famous Archives - Good News 24x7 https://www.goodnews24x7.com/tag/famous/ Kannada Sat, 31 Jan 2026 04:53:19 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg famous Archives - Good News 24x7 https://www.goodnews24x7.com/tag/famous/ 32 32 ಮೈಸೂರಿನ ಖ್ಯಾತ ಕುಸ್ತಿಪಟು ಟೈಗರ್ ಬಾಲಾಜಿ ನಿಧನ ! https://www.goodnews24x7.com/mysores-famous-wrestler-tiger-balaji-passes-away/ Sat, 31 Jan 2026 04:53:19 +0000 https://www.goodnews24x7.com/?p=8338 ಮೈಸೂರು : ಮೈಸೂರಿನ ಖ್ಯಾತ ಕುಸ್ತಿಪಟು ಟೈಗರ್ ಬಾಲಾಜಿ ಜ.30 ರಂದು ನಿಧನರಾಗಿದ್ದಾರೆ. ಅವರ ನಿಧನದಿಂದ ಮೈಸೂರಿನ ಅಖಾಡ ವಲಯ ಹಾಗೂ ಕುಸ್ತಿ ಪ್ರೇಮಿಗಳಲ್ಲಿ ತೀವ್ರ ಶೋಕ ಅಲೆ ಹರಡಿದೆ. ಪಾರಂಪರಿಕ ಮಣ್ಣಿನ ಕುಸ್ತಿಯಲ್ಲಿ ಆದ ಶೈಲಿ, ಬಲಿಷ್ಠ ದೇಹಮರ್ಥ್ಯ ಮತ್ತು…

The post ಮೈಸೂರಿನ ಖ್ಯಾತ ಕುಸ್ತಿಪಟು ಟೈಗರ್ ಬಾಲಾಜಿ ನಿಧನ ! appeared first on Good News 24x7.

]]>

ಮೈಸೂರು : ಮೈಸೂರಿನ ಖ್ಯಾತ ಕುಸ್ತಿಪಟು ಟೈಗರ್ ಬಾಲಾಜಿ ಜ.30 ರಂದು ನಿಧನರಾಗಿದ್ದಾರೆ. ಅವರ ನಿಧನದಿಂದ ಮೈಸೂರಿನ ಅಖಾಡ ವಲಯ ಹಾಗೂ ಕುಸ್ತಿ ಪ್ರೇಮಿಗಳಲ್ಲಿ ತೀವ್ರ ಶೋಕ ಅಲೆ ಹರಡಿದೆ.
ಪಾರಂಪರಿಕ ಮಣ್ಣಿನ ಕುಸ್ತಿಯಲ್ಲಿ ಆದ ಶೈಲಿ, ಬಲಿಷ್ಠ ದೇಹಮರ್ಥ್ಯ ಮತ್ತು ಆಕ್ರಮಣಕಾರಿ ಆಟ ಗುರುತಿಸಲ್ಪಟ್ಟ ಟೈಗರ್ ಬಾಲಾಜಿ, ಅನೇಕ ಗ್ರಾಮೀಣ ಹಾಗೂ ರಾಜ್ಯಮಟ್ಟದ ಕುಸ್ತಿ ವೇದಿಕೆಗಳಲ್ಲಿ ಮೈಸೂರಿನ ಹೆಸರನ್ನು ಎತ್ತಿ ಹಿಡಿದಿದ್ದರು. ಅಖಾಡದ ಶಿಸ್ತು, ಕ್ರೀಡಾಸ್ಫೂರ್ತಿ ಮತ್ತು ಮಾನವೀಯ ಮೌಲ್ಯಗಳನ್ನು ಅವರು ತಮ್ಮ ಬದುಕಿನ ಮೂಲಕ ಸಾರಿದ್ದರು.

ಯುವ ಕುಸ್ತಿಪಟುಗಳಿಗೆ ಪ್ರೇರಣೆಯಾಗಿ ನಿಂತಿದ್ದ ಅವರು, ಅಖಾಡ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅವರ ಅಗಲಿಕೆಗೆ ಕುಸ್ತಿ ಸಮುದಾಯ, ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರು ಕಂಬನಿ ಮಿಡಿದಿದ್ದಾರೆ.

ಟೈಗರ್ ಬಾಲಾಜಿ ಅವರ ಅಂತ್ಯಕ್ರಿಯೆಯ ವಿವರಗಳನ್ನು ಕುಟುಂಬಸ್ಥರು ನಂತರ ಪ್ರಕಟಿಸಲಾಗುವುದು. ಮೈಸೂರಿನ ಪ್ರಸಿದ್ಧ ಕುಸ್ತಿಪಟು ಟೈಗರ್ ಬಾಲಾಜಿ ಜ.30 ರಂದು ನಿಧನರಾದರು. ಅವರ ನಿಧನವು ಮೈಸೂರು ಕುಸ್ತಿ ಸಮುದಾಯ ಮತ್ತು ಕುಸ್ತಿ ಪ್ರಿಯರಲ್ಲಿ ದುಃಖದ ಅಲೆಯನ್ನು ಮೂಡಿಸಿದೆ.

ಸಾಂಪ್ರದಾಯಿಕ ಮಣ್ಣಿನ ಕುಸ್ತಿಯಲ್ಲಿ ವಿಶಿಷ್ಟ ಶೈಲಿ, ಬಲಿಷ್ಠ ಮೈಕಟ್ಟು ಮತ್ತು ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿಯಾಗಿದ್ದ ಟೈಗರ್ ಬಾಲಾಜಿ, ಅನೇಕ ಗ್ರಾಮೀಣ ಮತ್ತು ರಾಜ್ಯ ಮಟ್ಟದ ಕುಸ್ತಿ ವೇದಿಕೆಗಳಲ್ಲಿ ಮೈಸೂರಿನ ಹೆಸರನ್ನು ಎತ್ತಿಹಿಡಿದ್ದರು. ಅವರು ತಮ್ಮ ಜೀವನದುದ್ದಕ್ಕೂ ಕ್ರೀಡಾಂಗಣದ ಶಿಸ್ತು, ಕ್ರೀಡಾ ಮನೋಭಾವ ಮತ್ತು ಮಾನವೀಯ ಮೌಲ್ಯಗಳನ್ನು ಬೋಧಿಸಿದ್ದಾರೆ.

The post ಮೈಸೂರಿನ ಖ್ಯಾತ ಕುಸ್ತಿಪಟು ಟೈಗರ್ ಬಾಲಾಜಿ ನಿಧನ ! appeared first on Good News 24x7.

]]>
ವಿಶ್ವ ವಿಖ್ಯಾತಿ ಮೈಸೂರು ದಸರಾ ಕೇವಲ ಮೈಸೂರಿಗೆ ಮಾತ್ರ ಸೀಮಿತವಾಯ್ತಾ ,,,! https://www.goodnews24x7.com/is-the-world-famous-mysore-dasara-limited-to-mysore-only/ Sat, 30 Aug 2025 13:42:04 +0000 https://www.goodnews24x7.com/?p=7078 ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ದಸರಾ ಉನ್ನತಮಟ್ಟದ ಸಭೆ ನಡೆದು ತಿಂಗಳಾಗಿದೆ. ಉದ್ಘಾಟಕರಾಗಿ ಸಾಹಿತಿ, ಬೂಕರ್‌ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್‌ ಹೆಸರು ಘೋಷಣೆಯಾಗಿದೆ. ಈ ಸಂಗತಿಗಳನ್ನು ಹೊರತು ಪಡಿಸಿ ದಸರಾ-೨೦೨೫ ರ ಯಾವುದೇ ಕಾರ್ಯಕ್ರಮಗಳ ವಿವರ ಲಭ್ಯವಿಲ್ಲ. ಮೈಸೂರು ದಸರಾ ಮಹೋತ್ಸವದ…

The post ವಿಶ್ವ ವಿಖ್ಯಾತಿ ಮೈಸೂರು ದಸರಾ ಕೇವಲ ಮೈಸೂರಿಗೆ ಮಾತ್ರ ಸೀಮಿತವಾಯ್ತಾ ,,,! appeared first on Good News 24x7.

]]>

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ದಸರಾ ಉನ್ನತಮಟ್ಟದ ಸಭೆ ನಡೆದು ತಿಂಗಳಾಗಿದೆ. ಉದ್ಘಾಟಕರಾಗಿ ಸಾಹಿತಿ, ಬೂಕರ್‌ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್‌ ಹೆಸರು ಘೋಷಣೆಯಾಗಿದೆ. ಈ ಸಂಗತಿಗಳನ್ನು ಹೊರತು ಪಡಿಸಿ ದಸರಾ-೨೦೨೫ ರ ಯಾವುದೇ ಕಾರ್ಯಕ್ರಮಗಳ ವಿವರ ಲಭ್ಯವಿಲ್ಲ.

ಮೈಸೂರು ದಸರಾ ಮಹೋತ್ಸವದ ಇಂಚಿಂಚು ಮಾಹಿತಿಯನ್ನು ಒದಗಿಸಬೇಕಾಗಿದ್ದ ದಸರಾ ವೆಬ್‌ ಸೈಟ್‌ ಈತನಕ ಸಿದ್ಧಗೊಂಡಿಲ್ಲ. ಯಾರಾದರು ಕುತೂಹಲದಿಂದ ಈ ಸೈಟ್‌ ಗೆ ಭೇಟಿ ನೀಡಿದರೆ ನಿರಾಸೆ ಖಂಡಿತ.

ಕಾರಣ ಈ ವೆಬ್‌ ಸೈಟ್‌ ನಲ್ಲಿ ಯಾವುದೇ ಮಾಹಿತಿ ಇಲ್ಲ. ಅಸಲಿಗೆ ಈ ಸೈಟ್‌ ಒಪನ್‌ ಆಗೋದೇ ಇಲ್ಲ. ಅದು ಯೂಸರ್‌ ನೇಮ್‌ ,ಪಾಸವರ್ಡ್‌ ಕೇಳುತ್ತದೆ. ದಸರಾ ಮಹೋತ್ಸವ ವೀಕ್ಷಿಸಲು ಪ್ಲಾನ್‌ ಮಾಡುವ ಉದ್ದೇಶ ಹೊಂದಿರುವ ವಿದೇಶಿಗರಿಗೆ ಇದರಿಂದ ತೀವ್ರ ನಿರಾಸೆಯಾಗಿದೆ. ಟಿಕೆಟ್‌ ಅದರಲ್ಲೂ “ ಗೋಲ್ಡ್‌ ಕಾರ್ಡ್‌ “ ಪಡೆದು ಕಾರ್ಯಕ್ರಮ ವೀಕ್ಷಿಸುವ ಬಯಕೆ ಹೊಂದಿರುವವರು ವೆಬ್‌ ಸೈಟ್‌ ಸಿದ್ಧವಾಗದ್ದನ್ನು ಕಂಡು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ.

ಈ ಸಾಲಿನ ದಸರಾ ಮಹೋತ್ಸವದ ಕಾರ್ಯಕ್ರಮಗಳೇನು, ಯಾವಯಾವ ಕಲಾವಿದರು ಬರುತ್ತಾರೆ. ಕಾರ್ಯಕ್ರಮಗಳು ಎಲ್ಲಿ ನಡೆಯುತ್ತವೆ. ಅದರ ಸಮಯ ಏನು..? ಈ ಯಾವ ಮಾಹಿತಿಯು ಈ ತನಕ ಲಭ್ಯವಿಲ್ಲ.

ಯುವ ದಸರಾ ಎಲ್ಲಿ..?:

ದಸರಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ಕಳೆದ ವರ್ಷ ಮಹಾರಾಜ ಕಾಲೇಜು ಮೈದಾನದ ಬದಲಿಗೆ ಮೈಸೂರಿನ ಹೊರ ವಲಯದಲ್ಲಿ ಯುವ ದಸರಾ ನಡೆಸಲಾಗಿತ್ತು. ಇಳಯರಾಜ, ರೆಹಮಾನ್ ರಂಥ ಚಲನಚಿತ್ರರಂಗದ ಘಟಾನುಘಟಿ ಕಲಾವಿದರನ್ನು ಆಹ್ವಾನಿಸಿದ್ದರಿಂದ ನಗರ ಪ್ರದೇಶದಲ್ಲಿ ಜನದಟ್ಟನೆ ನಿಯಂತ್ರಿಸಲು ಈ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಈ ವರ್ಷ ಎಲ್ಲಿ ಯುವ ದಸರಾ ನಡೆಸುತ್ತಾರೆ ಎಂಬುದು ಇನ್ನು ತೀರ್ಮಾನವಾಗಿಲ್ಲ. ಕಲಾವಿದರ ಡೇಟ್ಸ್‌ ಪೈನಲ್‌ ಆದ ಬಳಿಕ ಕಾರ್ಯಕ್ರಮ ಸ್ಥಳ ನಿಗಧಿಪಡಿಸುವ ಉದ್ದೇಶ ಹೊಂದಲಾಗಿದೆ.

ದಸರಾ ಮಹೋತ್ಸವದ ಅಧಿಕೃತ ವೆಬ್‌ಸೈಟ್ ಸಿದ್ಧವಾಗದಿರುವುದರಿಂದ ಪ್ರವಾಸಿಗರಿಗೆ ಮಾಹಿತಿ ಪಡೆಯಲು ತೊಂದರೆಯಾಗಿದೆ. ಇದು ಸಂಘಟನೆ ಕೊರತೆ ಸೂಚಿಸುತ್ತದೆ.

ಮೈಸೂರು ದಸರಾದ ವಿಶ್ವವಿಖ್ಯಾತ ಸ್ಥಾನಕ್ಕೆ ಇದರ ಐತಿಹಾಸಿಕ, ಸಾಂಸ್ಕೃತಿಕ, ಮತ್ತು ದೃಶ್ಯಾತ್ಮಕ ವೈಭವವೇ ಕಾರಣ. ಆದ್ದರಿಂದ 2025ರ ಆಚರಣೆಯ ಸಿದ್ಧತೆಯ ಕೊರತೆಯನ್ನು ಸರಿಪಡಿಸಲು ರಾಜ್ಯ ಸರಕಾರ ಶೀಘ್ರ ಕ್ರಮ ಕೈಗೊಂಡು , ಈ ವರ್ಷದ ದಸರಾವೂ ಯಶಸ್ವಿಯಾಗಿ ಜಗತ್ತಿನ ಗಮನ ಸೆಳೆಯುವಂತಾಗಲಿ.

 

The post ವಿಶ್ವ ವಿಖ್ಯಾತಿ ಮೈಸೂರು ದಸರಾ ಕೇವಲ ಮೈಸೂರಿಗೆ ಮಾತ್ರ ಸೀಮಿತವಾಯ್ತಾ ,,,! appeared first on Good News 24x7.

]]>