farmers Archives - Good News 24x7 https://www.goodnews24x7.com/tag/farmers/ Kannada Wed, 01 Jul 2026 11:15:50 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg farmers Archives - Good News 24x7 https://www.goodnews24x7.com/tag/farmers/ 32 32 ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಡಾ. ಯತೀಂದ್ರ ಸಿದ್ದರಾಮಯ್ಯ https://www.goodnews24x7.com/dr-yathindra-siddaramaiah-visits-chamundi-hills/ Wed, 01 Jul 2026 11:15:50 +0000 https://www.goodnews24x7.com/?p=9726 ಮೈಸೂರು, ಜುಲೈ 1: ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಸಚಿವರಾದ ಬಳಿಕ ಮೊದಲ ಬಾರಿಗೆ ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ದೇವಿಯ ದಿವ್ಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.…

The post ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಡಾ. ಯತೀಂದ್ರ ಸಿದ್ದರಾಮಯ್ಯ appeared first on Good News 24x7.

]]>

ಮೈಸೂರು, ಜುಲೈ 1: ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಸಚಿವರಾದ ಬಳಿಕ ಮೊದಲ ಬಾರಿಗೆ ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ದೇವಿಯ ದಿವ್ಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಿ ಸಮೃದ್ಧ ಬೆಳೆ ಬೆಳೆಯುವಂತಾಗಲಿ, ರೈತರು ಸೇರಿದಂತೆ ಸಮಸ್ತ ಜನತೆಗೆ ಸುಭಿಕ್ಷೆ ಹಾಗೂ ನೆಮ್ಮದಿ ದೊರೆಯಲಿ ಎಂದು ತಾಯಿ ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಭೇಟಿಯ ವೇಳೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಯುವ ಮುಖಂಡ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರಾಕೇಶ್ ಪಾಪಣ್ಣ ಅವರು ಸಚಿವರೊಂದಿಗೆ ಉಪಸ್ಥಿತರಿದ್ದರು

The post ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಡಾ. ಯತೀಂದ್ರ ಸಿದ್ದರಾಮಯ್ಯ appeared first on Good News 24x7.

]]>
ರೈತರಿಗೆ ನೆಮ್ಮದಿ: ತೊಗರಿ ಮತ್ತು ಕಡಲೆ ಖರೀದಿ ಅವಧಿ ಒಂದು ತಿಂಗಳು ವಿಸ್ತರಣೆ! https://www.goodnews24x7.com/farmers-relief-chickpea-and-chickpea-procurement-period-extended-by-one-month/ Sat, 18 Apr 2026 11:30:21 +0000 https://www.goodnews24x7.com/?p=9310 ರಾಜ್ಯದ ರೈತರ ಹಿತದೃಷ್ಟಿಯಿಂದ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಕೇಂದ್ರ ಸಚಿವರೊಂದಿಗೆ ನಡೆಸಿದ ಮಾತುಕತೆ ಯಶಸ್ವಿಯಾಗಿದೆ. ಇದರ ಫಲವಾಗಿ, 2025-26ನೇ ಸಾಲಿನ ಬೆಲೆ ಬೆಂಬಲ ಯೋಜನೆ (MSP) ಅಡಿಯಲ್ಲಿ ತೊಗರಿ ಖರೀದಿ ಅವಧಿಯನ್ನು ಒಂದು ತಿಂಗಳ ಕಾಲ ವಿಸ್ತರಿಸಲಾಗಿದೆ. ಈಗಾಗಲೇ 98,610…

The post ರೈತರಿಗೆ ನೆಮ್ಮದಿ: ತೊಗರಿ ಮತ್ತು ಕಡಲೆ ಖರೀದಿ ಅವಧಿ ಒಂದು ತಿಂಗಳು ವಿಸ್ತರಣೆ! appeared first on Good News 24x7.

]]>

ರಾಜ್ಯದ ರೈತರ ಹಿತದೃಷ್ಟಿಯಿಂದ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಕೇಂದ್ರ ಸಚಿವರೊಂದಿಗೆ ನಡೆಸಿದ ಮಾತುಕತೆ ಯಶಸ್ವಿಯಾಗಿದೆ. ಇದರ ಫಲವಾಗಿ, 2025-26ನೇ ಸಾಲಿನ ಬೆಲೆ ಬೆಂಬಲ ಯೋಜನೆ (MSP) ಅಡಿಯಲ್ಲಿ ತೊಗರಿ ಖರೀದಿ ಅವಧಿಯನ್ನು ಒಂದು ತಿಂಗಳ ಕಾಲ ವಿಸ್ತರಿಸಲಾಗಿದೆ. ಈಗಾಗಲೇ 98,610 ರೈತರು ನೋಂದಾಯಿಸಿಕೊಂಡಿದ್ದರೂ, ಹೆಚ್ಚಿನ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಅಷ್ಟೇ ಅಲ್ಲದೆ, ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ಹೆಚ್ಚುವರಿಯಾಗಿ 58 ಸಾವಿರ ಕ್ವಿಂಟಾಲ್ ಕಡಲೆ ಖರೀದಿಸಲು ಮತ್ತು ಅದರ ಕಾಲಾವಧಿಯನ್ನು ಒಂದು ತಿಂಗಳು ವಿಸ್ತರಿಸಲು ಕೇಂದ್ರ ಸರ್ಕಾರ ಸಮ್ಮತಿಸಿದೆ. ಸೂರ್ಯಕಾಂತಿ ಬೆಳೆಗಾರರಿಗೂ ನೆರವಾಗಲು ಕ್ವಿಂಟಾಲ್‌ಗೆ 7,721 ರೂ. ದರದಂತೆ 11 ಸಾವಿರ ಮೆಟ್ರಿಕ್ ಟನ್ ಖರೀದಿಗಾಗಿ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ. ಈ ಕ್ರಮಗಳಿಂದಾಗಿ ರಾಜ್ಯದ ಸಾವಿರಾರು ರೈತರಿಗೆ ತಮ್ಮ ಬೆಳೆಗೆ ನ್ಯಾಯಯುತ ಬೆಲೆ ಸಿಗುವಂತಾಗಿದೆ.

The post ರೈತರಿಗೆ ನೆಮ್ಮದಿ: ತೊಗರಿ ಮತ್ತು ಕಡಲೆ ಖರೀದಿ ಅವಧಿ ಒಂದು ತಿಂಗಳು ವಿಸ್ತರಣೆ! appeared first on Good News 24x7.

]]>
ಸೊಸೈಟಿಗಳ ಮೂಲಕವೇ ಬೆಳೆ ಖರೀದಿ-ಮಾರಾಟ: ರೈತರ ಸ್ವಾವಲಂಬನೆಗೆ ಹೊಸ ಯೋಜನೆ. https://www.goodnews24x7.com/sosai%e1%b9%adiga%e1%b8%b7a-mulakave-be%e1%b8%b7e-kharidi-mara%e1%b9%ada-raitara-svavalambanege-hosa-yojane-societiesmlapressagriculturalcropsfarmerscooperativeprofit-be%e1%b8%b7ega/ Tue, 24 Mar 2026 12:50:41 +0000 https://www.goodnews24x7.com/?p=8970 ಪಾಂಡವಪುರ : ಬೆಳೆಗಳನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕವೇ ಖರೀದಿಸಿ ಮಾರಾಟ ಮಾಡಿ, ರೈತರ ಬೆಳೆಗೆ ಅಧಿಕ ಲಾಭ ನೀಡುವ ಹೊಸ ಕಾಠ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಸೊಸೈಟಿಗಳು ಇಷ್ಟು ದಿನ…

The post ಸೊಸೈಟಿಗಳ ಮೂಲಕವೇ ಬೆಳೆ ಖರೀದಿ-ಮಾರಾಟ: ರೈತರ ಸ್ವಾವಲಂಬನೆಗೆ ಹೊಸ ಯೋಜನೆ. appeared first on Good News 24x7.

]]>

ಪಾಂಡವಪುರ : ಬೆಳೆಗಳನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕವೇ ಖರೀದಿಸಿ ಮಾರಾಟ ಮಾಡಿ, ರೈತರ ಬೆಳೆಗೆ ಅಧಿಕ ಲಾಭ ನೀಡುವ ಹೊಸ ಕಾಠ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಸೊಸೈಟಿಗಳು ಇಷ್ಟು ದಿನ ರೈತರಿಗೆ ಬೇಕಾದ ರಸಗೊಬ್ಬರ, ಬ್ಯಾಂಕ್ ಸಾಲ ಸೌಲಭ್ಯ ಹಾಗೂ ಪಡಿತರ ವಿತರಣೆಯನ್ನು ಮಾತ್ರ ಮಾಡುತ್ತಿ ದ್ದರು. ಅದರ ಜತೆಗೆ ರೈತರು ಬೆಳೆಯುವ ಭತ್ತ, ರಾಗಿ, ಜೋಳ, ಕಾಳುಗಳನ್ನು ಸಹ ನೇರವಾಗಿ ರೈತರಿಂದ ಖರೀದಿಸಿ ಅಧಿಕ ಲಾಭನೀಡುವುದರೊಂದಿಗೆ ಸೊಸೈಟಿಗಳ ಮೂಲಕವೇ ಸಿದ್ದಪಡಿಸಿದ ಬೆಳೆಗಳನ್ನು ಮಾರಾಟ ಮಾಡಲು ಕ್ರಮ ವಹಿಸಲಾಗಿದೆ. ಇದರಿಂದ ದಲ್ಲಾಳಿಗಳ ಹಾವಳಿ ತಪ್ಪಿಸಿದಂತಾಗುತ್ತದೆ, ಜತೆಗೆ ರೈತರಿಗೂ ಅಧಿಕ

ಲಾಭವಾಗಿ ಸೊಸೈಟಿಗಳು ಲಾಭದಾಯಕ ವಾಗಲಿವೆ. ಇದಕ್ಕಾಗಿ ನಬಾರ್ಡ್ ಅಥವಾ ಡಿಸಿಸಿ ಬ್ಯಾಂಕ್‌ಗಳಿಂದ ಸೊಸೈಟಿಗಳಿಗೆ ಆರ್ಥಿಕ ನೆರವು ನೀಡಲು ಕ್ರಮ ವಹಿಸಲಾಗುತ್ತಿದೆ,” ಎಂದು ತಿಳಿಸಿದರು. ”ಈ ಸಂಬಂಧ ಈಗಾಗಲೇ ಸೊಸೈಟಿಗಳ ಸಿಇಒ, ಸಿಬ್ಬಂದಿಗಳೊಂದಿಗೆ ಹಲವು ಬಾರಿ ಸಭೆ ನಡೆಸಿ ಚರ್ಚಿಸಲಾಗಿದೆ. ಜತೆಗೆ ಹೊಸ ಸಾಫ್ಟ್‌ವೇರ್ ಅನ್ನು ಡೆವಲಪ್ ಮಾಡಲಾಗಿದೆ. ಮೊದಲ ಹಂತದಲ್ಲಿ ಭತ್ತ.
ರಾಗಿ, ಜೋಳ, ಕಾಳುಗಳು, ಮೆಣಸಿನ ಕಾಯಿಗಳನ್ನು ಖರೀದಿಸಲಾಗುವುದು, ಬಳಿಕ ಕೋಲ್ಡ್ ಸ್ಟೋರೇಜ್‌ಗಳನ್ನು ನಿರ್ಮಿಸಿ ತರಕಾರಿ ಖರೀದಿಸಲು ತೀರ್ಮಾನಿ ಸಲಾಗುತ್ತಿದೆ. ಈ ಕೆಲಸಕ್ಕೆ ಸಹಕಾರ ಸಂಘಗಳ ಸಹಕಾರ ಇಲ್ಲಿ ನೀಡಬೇಕು, ಯಾವುದೇ ರೀತಿಯ ರಾಜಕೀಯ ನಡೆಸುತ್ತಿಲ್ಲ, ಇದು ಕೇವಲ ರೈತರು ಆರ್ಥಿಕ ಸ್ವಾವಲಂಬಿ ನಡೆಸುವುದಕ್ಕಾಗಿ ಮಾತ್ರ ಈ ಕಾಠ್ಯಕ್ರಮ ಆಯೋಜಿಸಲಾಗಿದೆ,”ಎಂದರು.

‘ಈಗಾಗಲೇ ತಾಲೂಕಿನ ಅರಳಕುಪ್ಪೆ, ಕ್ಯಾತನಹಳ್ಳಿ ಸೊಸೈಟಿಗಳಲ್ಲಿ ರೈತರಿಂದ ನೇರವಾಗಿ ಭತ್ತ ಖರೀದಿಸಿ ಮಾರಾಟ ಮಾಡಿ ಲಾಭ ಗಳಿಸುವ ಕೆಲಸ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇಡೀ ಕ್ಷೇತ್ರದಾದ್ಯಂತ ಮಾಡಲಾಗುತ್ತಿದೆ. ಈ ವಿಚಾರವಾಗಿ ಚರ್ಚಿಸಲು ಏ.1ರಂದು ಪಟ್ಟಣದ ಟಿಎಪಿಸಿಎಂಎಸ್‌ ರೈತ ಸಭಾಂಗಣದಲ್ಲಿ ಎಲ್ಲಾ ತ ಸಹಕಾರ ಸಂಘಗಳ ಆಡಳಿತ ಮಂಡಳಿಯ ನಿರ್ದೇಶಕ ಸಭೆಯನ್ನು ಕರೆಯಲಾಗಿದೆ,” ಎಂದು ಮನವಿ ಮಾಡಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಎ,ಎಲ್. ಕೆಂಪೂಗೌಡ, ತಾಲೂಕು ಅಧ್ಯಕ್ಷ ಎಣ್ಣೆಹೊಳೆ ಕೊಪ್ಪಲು ಮಂಜುನಾಥ್, ಮಾಜಿ ಅಧ್ಯಕ್ಷ ಕೆನ್ನಾಳು ವಿಜಯ್‌ಕುಮಾರ್, ನಾಗರಾಜು, ಪ್ರಕಾಶ್, ಪ್ರಧಾನ ಕಾಠ್ಯದರ್ಶಿ ಡಾಮಡಹಳ್ಳಿ ಅಶೋಕ್, ಕೆ.ಟಿ.ಗೋವಿಂದೇಗೌಡ, ಬಿ.ಟಿ.ಶಿವಣ್ಣ, ಶಂಕರ, ರೂಪಾ, ಕಟ್ಟೇರಿ ಮಹದೇವು, ಮುಖಂಡ ಗೋವಿಂದರಾಜು, ರಾಘು, ಪ್ರಕಾಶ್ ಸೇರಿದಂತೆ ಇತರರು ಇದ್ದರು.

The post ಸೊಸೈಟಿಗಳ ಮೂಲಕವೇ ಬೆಳೆ ಖರೀದಿ-ಮಾರಾಟ: ರೈತರ ಸ್ವಾವಲಂಬನೆಗೆ ಹೊಸ ಯೋಜನೆ. appeared first on Good News 24x7.

]]>
ಸರ್ಕಾರದ ವಿರುದ್ಧ ಪಟ್ಟು ಬಿಡದೆ ರೈತರ ಹೋರಾಟ, ಕಬ್ಬಿಗೆ 3500 ರೂ. ಬೆಂಬಲ ಬೆಲೆ ಕೊಡಲೇಬೇಕು https://www.goodnews24x7.com/farmers-struggle-against-the-government-sugarcane-should-be-given-rs-3500-support-price/ Fri, 14 Nov 2025 05:09:41 +0000 https://www.goodnews24x7.com/?p=8141 ಬೆಳಗಾವಿಯ ಗುರ್ಲಪುರದ ಬಳಿಕ ಬಾಗಲಕೋಟೆಯಲ್ಲಿ ಶುರುವಾದ ರೈತಾಕ್ರೋಶ ಮೂರು ದಿನಗಳಾದ್ರೂ ತಣ್ಣಗಾಗಿಲ್ಲ. ಕಬ್ಬಿಗೆ 3,500 ರೂ. ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ನೂರಾರು ರೈತರು ಇವತ್ತು ಮುಧೋಳ ಅಖಾಡಕ್ಕಿಳಿದಿದ್ದರು. ಬೆಂಗಳೂರು: ರಾಜ್ಯದಲ್ಲಿ ಸಿಹಿ ಕಬ್ಬಿನ ಬೆಲೆಗಾಗಿ ಹೊತ್ತಿದ್ದ ಕಿಚ್ಚು ಇನ್ನೂ ಆರಿಲ್ಲ.…

The post ಸರ್ಕಾರದ ವಿರುದ್ಧ ಪಟ್ಟು ಬಿಡದೆ ರೈತರ ಹೋರಾಟ, ಕಬ್ಬಿಗೆ 3500 ರೂ. ಬೆಂಬಲ ಬೆಲೆ ಕೊಡಲೇಬೇಕು appeared first on Good News 24x7.

]]>

ಬೆಳಗಾವಿಯ ಗುರ್ಲಪುರದ ಬಳಿಕ ಬಾಗಲಕೋಟೆಯಲ್ಲಿ ಶುರುವಾದ ರೈತಾಕ್ರೋಶ ಮೂರು ದಿನಗಳಾದ್ರೂ ತಣ್ಣಗಾಗಿಲ್ಲ. ಕಬ್ಬಿಗೆ 3,500 ರೂ. ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ನೂರಾರು ರೈತರು ಇವತ್ತು ಮುಧೋಳ ಅಖಾಡಕ್ಕಿಳಿದಿದ್ದರು.

ಬೆಂಗಳೂರು: ರಾಜ್ಯದಲ್ಲಿ ಸಿಹಿ ಕಬ್ಬಿನ ಬೆಲೆಗಾಗಿ ಹೊತ್ತಿದ್ದ ಕಿಚ್ಚು ಇನ್ನೂ ಆರಿಲ್ಲ. ಈಗಾಗಲೇ ಸರ್ಕಾರ 3 ಸಾವಿರದ 300 ರೂ. ಘೋಷಣೆ ಮಾಡಿದೆ. ಇದನ್ನ ಕೆಲ ರೈತರು ಒಪ್ಪಿದ್ರೆ, ಇನ್ನೂ ಕೆಲ ಅನ್ನದಾತರು ನಮಗೆ 3 ಸಾವಿರದ 500 ರೂ. ಬೇಕೇ ಬೇಕು ಅಂತ ಪಟ್ಟು ಹಿಡಿದಿದ್ದಾರೆ. ವಿಜಯಪುರ, ಕಲಬುರ್ಗಿ ನಂತರ ಬಾಗಲಕೋಟೆ, ಬೀದರ್​ನಲ್ಲಿ ರೈತರ ಹೋರಾಟ ಮುಂದುವರೆದಿದ್ದು, ಪ್ರತಿಭಟನೆ ಮಾಡಿದ್ದಾರೆ.

ಕಬ್ಬಿಗೆ ₹3,500 ಬೆಂಬಲ ಬೆಲೆಗೆ ಆಗ್ರಹಿಸಿ ರೈತರ ಪ್ರತಿಭಟನೆ

ಬೆಳಗಾವಿಯ ಗುರ್ಲಪುರದ ಬಳಿಕ ಬಾಗಲಕೋಟೆಯಲ್ಲಿ ಶುರುವಾದ ರೈತಾಕ್ರೋಶ ಮೂರು ದಿನಗಳಾದ್ರೂ ತಣ್ಣಗಾಗಿಲ್ಲ. ಕಬ್ಬಿಗೆ 3,500 ರೂ. ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ನೂರಾರು ರೈತರು ಇವತ್ತು ಮುಧೋಳ ಅಖಾಡಕ್ಕಿಳಿದಿದ್ದರು. ಕಸಬಾ ಜಂಬಗಿ ಕ್ರಾಸ್​ನಲ್ಲಿ ಹೆದ್ದಾರಿ ತಡೆದು, ರಸ್ತೆ ಮೇಲೆ ಮುಳ್ಳು ಕಂಠಿ ಹಾಕಿ ಪ್ರತಿಭಟನೆ ನಡೆಸಿದ್ರು.

ಅಷ್ಟೇ ಅಲ್ಲ, ರಸ್ತೆ ಮಧ್ಯೆಯೇ ಅಡುಗೆ ಮಾಡಿ ರೈತರು ಧರಣಿ ಕುಳಿತಿದ್ರು. ಸರ್ಕಾರ ಸ್ಪಂದಿಸುವವರೆಗೂ ನಾವು ಹೋರಾಟ ನಿಲ್ಲಿಸಲ್ಲ ಅಂತ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟರು. ಅಲ್ಲದೇ, ಪ್ರತಿಭಟನೆ ಮಾಡ್ತಿದ್ದ ಕಬ್ಬು ಬೆಳೆಗಾರರಿಗೆ ಕಸಬಾ ರೈತರು ಕೂಡ ಸಾಥ್ ನೀಡಿದ್ರು. ಹೆದ್ದಾರಿ ತಡೆದಿದ್ದ ಪರಿಣಾಮ ಅನೇಕ ವಾಹನ ಸವಾರರಿಗೆ ಕಿರಿಕಿರಿ ಉಂಟಾಯ್ತು. ಸ್ಥಳಕ್ಕೆ ಪೊಲೀಸ್ ವಾಹನ ಬಂದ್ರೂ ಪಟ್ಟು ಬಿಡದ ಪ್ರತಿಭಟನೆ ಮುಂದುವೆರೆಸಿದ್ರು. ಬೀದರ್​ನಲ್ಲೂ ಕಬ್ಬು ಬೆಳೆಗಾರರ ಪ್ರತಿಭಟನೆ ತಾರಕಕ್ಕೇರಿತ್ತು. ಕೈಯಲ್ಲಿ ಕಬ್ಬು ಹಿಡಿದು ಬಂದಿದ್ದ ರೈತರು ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಕೂಗಿದ್ರು. ಕೈಯಲ್ಲಿ ಸಿದ್ದರಾಮಯ್ಯ ಹಾಗೂ ಶಿವಾನಂದ್ ಪಾಟೀಲ್​ ಅವ್ರ ಶ್ರದ್ಧಾಂಜಲಿ ಬ್ಯಾನರ್ ಹಿಡಿದು ಆಕ್ರೋಶ ಹೊರಹಾಕಿದ್ರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಬ್ಯಾನರ್​ ಇಳಿಸುವಂತೆ ಸೂಚನೆ ಕೊಟ್ರು. ಇಷ್ಟಾದ್ರೂ ರೈತರ ಆಕ್ರೋಶ ತಣ್ಣಗಾಗಲಿಲ್ಲ.

The post ಸರ್ಕಾರದ ವಿರುದ್ಧ ಪಟ್ಟು ಬಿಡದೆ ರೈತರ ಹೋರಾಟ, ಕಬ್ಬಿಗೆ 3500 ರೂ. ಬೆಂಬಲ ಬೆಲೆ ಕೊಡಲೇಬೇಕು appeared first on Good News 24x7.

]]>
ರೈತರ ಹೋರಾಟಕ್ಕೆ ಮಣಿದ ಸರ್ಕಾರ: 1 ಟನ್ ಕಬ್ಬಿಗೆ 3300 ರೂ. ನೀಡಲು ನಿರ್ಧಾರ. https://www.goodnews24x7.com/government-gives-in-to-farmers-struggle-decides-to-give-rs-3300/ Sat, 08 Nov 2025 04:32:52 +0000 https://www.goodnews24x7.com/?p=8066 ಕಬ್ಬಿಗೆ 3500 ರೂ ದರ ನಿಗದಿ ಮಾಡುವಂತೆ ಕಳೆದ 9 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದ ಕಬ್ಬುಬೆಳೆಗಾರರ ಹೋರಾಟಕ್ಕೆ ರಾಜ್ಯ ಸರ್ಕಾರ ಮಣಿದಿದ್ದು ಪ್ರತಿ ಟನ್ ಕಬ್ಬಿಗೆ 3,300 ರೂ ನೀಡಲು ನಿರ್ಧರಿಸಿದೆ. ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಇಂದು ರೈತರು ಮತ್ತು ಕಾರ್ಖಾನೆ…

The post ರೈತರ ಹೋರಾಟಕ್ಕೆ ಮಣಿದ ಸರ್ಕಾರ: 1 ಟನ್ ಕಬ್ಬಿಗೆ 3300 ರೂ. ನೀಡಲು ನಿರ್ಧಾರ. appeared first on Good News 24x7.

]]>

ಕಬ್ಬಿಗೆ 3500 ರೂ ದರ ನಿಗದಿ ಮಾಡುವಂತೆ ಕಳೆದ 9 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದ ಕಬ್ಬುಬೆಳೆಗಾರರ ಹೋರಾಟಕ್ಕೆ ರಾಜ್ಯ ಸರ್ಕಾರ ಮಣಿದಿದ್ದು ಪ್ರತಿ ಟನ್ ಕಬ್ಬಿಗೆ 3,300 ರೂ ನೀಡಲು ನಿರ್ಧರಿಸಿದೆ.

ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಇಂದು ರೈತರು ಮತ್ತು ಕಾರ್ಖಾನೆ ಮಾಲೀಕರ ಜೊತೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸರ್ಕಾರ ಪ್ರತಿ ಟನ್ ಕಬ್ಬಿಗೆ 3300 ರೂಪಾಯಿ ದರ ನಿಗದಿ ಮಾಡಲು ನಿರ್ಧರಿಸಿದೆ. ಸರ್ಕಾರದಿಂದ 50 ರೂಪಾಯಿ ಹಾಗೂ ಕಾರ್ಖಾನೆಯಿಂದ 50 ರೂಪಾಯಿ ನೀಡಲಾಗುವುದು. ಈ ಮೂಲಕ ಒಟ್ಟು 3300 ರೂಪಾಯಿ ನೀಡಲು ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಕಬ್ಬು ಬೆಳೆಗಾರರು ಪ್ರತಿ ಟನ್ ಕಬ್ಬಿಗೆ 3500 ರೂಪಾಯಿ ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಸುತ್ತಿದ್ದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಬೆಳಗಾವಿಯಲ್ಲಿ ನಡೆಯುತ್ತಿದ್ದ ರೈತರ ಹೋರಾಟ ಹಿಂಸಾಚಾರಕ್ಕೆ ತಿರುಗಿತ್ತು. ನಂತರ ಸಿಎಂ ಸಿದ್ದರಾಮಯ್ಯ ನಿರಂತರ ಸಭೆ ನಡೆಸಿದ್ದು ಇದೀಗ ಪ್ರತಿ ಟನ್ ಕಬ್ಬಿಗೆ 3300 ರೂ ನಿಗದಿಪಡಿಸಿದ್ದಾರೆ.

The post ರೈತರ ಹೋರಾಟಕ್ಕೆ ಮಣಿದ ಸರ್ಕಾರ: 1 ಟನ್ ಕಬ್ಬಿಗೆ 3300 ರೂ. ನೀಡಲು ನಿರ್ಧಾರ. appeared first on Good News 24x7.

]]>
ಪೊಲೀಸರ ಲಾಠಿ ಚಾರ್ಜ್​​ ಗೆ ಪ್ರತಿಯಾಗಿ ರೈತರಿಂದ ಪೊಲೀಸರ ವಾಹನಗಳ ಮೇಲೆ ಕಲ್ಲೇಟು. https://www.goodnews24x7.com/farmers-pelt-police-vehicles-with-stones-in-response-to-police-lathi-charge/ Fri, 07 Nov 2025 10:20:38 +0000 https://www.goodnews24x7.com/?p=8052 ಬೆಳಗಾವಿ : ಬೆಳಗಾವಿಯಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಹತ್ತರಗಿ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ಬಂದ ರೈತರ ಮೇಲೆ ಪೊಲೀಸರು ಲಾಠಿಚಾರ್ಜ್​ ಮಾಡಿದ್ದಾರೆ. ಇದರಿಂದ ರೈತರ ಸಹನೆ ಕಟ್ಟೆ ಹೊಡೆದಿದ್ದು, ಪೊಲೀಸರ ವಾಹನಗಳ ಮೇಲೆ…

The post ಪೊಲೀಸರ ಲಾಠಿ ಚಾರ್ಜ್​​ ಗೆ ಪ್ರತಿಯಾಗಿ ರೈತರಿಂದ ಪೊಲೀಸರ ವಾಹನಗಳ ಮೇಲೆ ಕಲ್ಲೇಟು. appeared first on Good News 24x7.

]]>

ಬೆಳಗಾವಿ : ಬೆಳಗಾವಿಯಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಹತ್ತರಗಿ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ಬಂದ ರೈತರ ಮೇಲೆ ಪೊಲೀಸರು ಲಾಠಿಚಾರ್ಜ್​ ಮಾಡಿದ್ದಾರೆ. ಇದರಿಂದ ರೈತರ ಸಹನೆ ಕಟ್ಟೆ ಹೊಡೆದಿದ್ದು, ಪೊಲೀಸರ ವಾಹನಗಳ ಮೇಲೆ ಕಲ್ಲು ತೂರಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರತಿ ಕ್ವಿಂಟಾಲ್​​ಗೆ 3500 ನೀಡುವಂತೆ ಪಟ್ಟು ಹಿಡಿದು ಹೆದ್ದಾರಿ ಬಂದ್​​ಗೆ ಮುಂದಾಗಿರುವ ರೈತರ ಮೇಲೆ ಪೊಲಿಸರು ಲಾಠಿಚಾರ್ಜ್ ನಡೆಸಿದ್ದಾರೆ. ಇದರಿಂದ ರೊಚ್ಚಿಗೆದ್ದ ರೈತರು ಲಾಠಿ ಚಾರ್ಜ್​ಗೆ ಪ್ರತಿಯಾಗಿ ಪೊಲೀಸರ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಹತ್ತರಗಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ.

ಅತ್ತ ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್​ನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ರೈತರ ಹೋರಾಟ 9ನೇ ದಿನಕ್ಕೆ ಕಾಲಿಟ್ಟಿದೆ. ಇತ್ತ ಹುಕ್ಕೇರಿ ತಾಲೂಕಿನ ಸಾವಿರಾರು ರೈತರು ಟ್ರ್ಯಾಕ್ಟರ್​ಗಳ ಸಮೇತ ಹತ್ತರಗಿ ಟೋಲ್ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದ್ದು. ಈ ವೇಳೆ ರಾಜ್ಯ ಸರ್ಕಾರ ಮತ್ತು ಕಾರ್ಖಾನೆ ಮಾಲೀಕರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ, ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಜಾರ್ಜ್​​ ನಡೆಸಿದ್ದಾರೆ. ಇದರಿಂದ ರೊಚ್ಚಿಗೆದ್ದ ರೈತರು ಪೊಲೀಸರ ವಿರುದ್ಧ ಸಿಡಿದೆದ್ದಿದ್ದು, ಕಲ್ಲು ತೂರಾಟ ನಡೆಸಿದ್ದಾರೆ.

ಒಂದೆಡೆ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯನವರು ಕಬ್ಬು ಕಾರ್ಖಾನೆ ಮಾಲೀಕರ ನಡೆ ನಡೆಸಿದ್ದರೆ ಇತ್ತ ಪ್ರತಿ ಟನ್ ಕಬ್ಬಿಗೆ 3500 ರೂ. ದರ ನಿಗದಿ ಪಡಿಸುವಂತೆ ಒತ್ತಾಯಿಸಿ ಬೆಳಗಾವಿ ಜಿಲ್ಲೆಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಇಂದು ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಗೇಟ್ ಬಳಿ ಹೋಗಿದ್ದು, ರೈತರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆಗೆ ಮುಂದಾಗಿದ್ದಾರೆ. ಆ ವೇಳೆ ಪೊಲೀಸರು ಲಾಠಿ ಚಾರ್ಜ್​ ಮೂಲಕ ರೈತರನ್ನು ಚದುರಿಸಲು ಮುಂದಾಗಿದ್ದಾರೆ. ಇದರಿಂದ ಆಕ್ರೋಶಗೊಂಡ ರೈತರು ಪೊಲಿಸ್ ವಾಹನಗಳ ಮೇಲೆ ಕಲ್ಲು ತೂರಿದ್ದಾರೆ. ಇದರಿಂದ ಸ್ಥಳದಲ್ಲಿ ಉದ್ವಿಗ್ನಿ ಪರಿಸ್ಥಿತಿ ನಿರ್ಮಾಣವಾಗಿದ್ದು, ಕ್ಷಣ ಕ್ಷಣಕ್ಕೂ ರೈತರ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.

The post ಪೊಲೀಸರ ಲಾಠಿ ಚಾರ್ಜ್​​ ಗೆ ಪ್ರತಿಯಾಗಿ ರೈತರಿಂದ ಪೊಲೀಸರ ವಾಹನಗಳ ಮೇಲೆ ಕಲ್ಲೇಟು. appeared first on Good News 24x7.

]]>
ರಾಜ್ಯದಲ್ಲಿ ದರ ಏರಿಕೆ ಸುಳಿವು ಕೊಟ್ಟ ಡಿ.ಕೆ.ಸುರೇಶ್ https://www.goodnews24x7.com/rajyadalli-dara-erike-su%e1%b8%b7ivu-ko%e1%b9%ad%e1%b9%ada-%e1%b8%8di-ke-sures-price-state-pricehike-money-dksuresh-governmentproducedcrore-bangalore-electricity-buttermilk-farmers-worke/ Thu, 06 Nov 2025 11:59:20 +0000 https://www.goodnews24x7.com/?p=8049 1 ಕೋಟಿ ಲೀಟರ್ ಹಾಲು ಉತ್ಪತ್ತಿಯಾಗು ತ್ತದೆ. ಆದರೆ 50 ಲಕ್ಷ ಲೀಟರ್ ಹಾಲು ಮಾತ್ರ ಮಾರಾಟ ವಾಗುತ್ತದೆ. ಸರ್ಕಾರ ಹಾಲಿನ ಮೇಲೆ ದರ ಹೆಚ್ಚಳ ಮಾಡಿರುವ 4 ರೂಪಾಯಿಯನ್ನು ರೈತರಿಗೆ ಕೊಡಲು ಸೂಚಿಸಿದ್ದೇವೆ ಎಂದರು. 50 ಲಕ್ಷ ಲೀಟರ್ ಮಾರಾಟ…

The post ರಾಜ್ಯದಲ್ಲಿ ದರ ಏರಿಕೆ ಸುಳಿವು ಕೊಟ್ಟ ಡಿ.ಕೆ.ಸುರೇಶ್ appeared first on Good News 24x7.

]]>

1 ಕೋಟಿ ಲೀಟರ್ ಹಾಲು ಉತ್ಪತ್ತಿಯಾಗು ತ್ತದೆ. ಆದರೆ 50 ಲಕ್ಷ ಲೀಟರ್ ಹಾಲು ಮಾತ್ರ ಮಾರಾಟ ವಾಗುತ್ತದೆ. ಸರ್ಕಾರ ಹಾಲಿನ ಮೇಲೆ ದರ ಹೆಚ್ಚಳ ಮಾಡಿರುವ 4 ರೂಪಾಯಿಯನ್ನು ರೈತರಿಗೆ ಕೊಡಲು ಸೂಚಿಸಿದ್ದೇವೆ ಎಂದರು.

50 ಲಕ್ಷ ಲೀಟರ್ ಮಾರಾಟ ಮಾಡುವುದಕ್ಕೆ ಮಾತ್ರ ನಮಗೆ ಹಣ ಬರುತ್ತಿದೆ. ಉಳಿದ 50 ಲಕ್ಷ ಲೀಟರ್ ಹಾಲಿಗೆ ನಮ್ಮ ಕೈಯಿಂದ ರೈತರಿಗೆಹಣ ಕೊಡುತ್ತಿದ್ದೇವೆ. ಸದ್ಯ ಬೆಣ್ಣೆ ಮತ್ತು ತುಪ್ಪಕ್ಕೆ ಬೇಡಿಕೆ ಇದ್ದು, ಈಗ ನಾವು ತುಪ್ಪಕ್ಕೆ ನಿಗದಿಮಾಡಿರುವ ದರ ಮಾರುಕಟ್ಟೆಗಿಂತ ಕಡಿಮೆಯಿದೆ. ಆದರೆ ಗುಣಮಟ್ಟದಲ್ಲಿ ನಾವೇ ಮುಂಚೂಣಿಯಲ್ಲಿದ್ದೇವೆ ಎಂದು ಡಿ.ಕೆ.ಸುರೇಶ್ ಹೇಳಿದರು.

ರಾಜ್ಯದಲ್ಲಿ ಬೆಲೆ ಏರಿಕೆಯ ಸರಮಾಲೆ

  • ಬಸ್ ದರ ಶೇ.15ರಷ್ಟು ಹೆಚ್ಚಳ
  • ಡೀಸೆಲ್ ದರ ಪ್ರತಿ ಲೀಗೆ 2 ರೂ. ಹೆಚ್ಚಳ
  • ವಿದ್ಯುತ್ ದರದೊಂದಿಗೆ ಸೆಸ್ ಹೆಚ್ಚಳ
  • ಆಸ್ತಿ ಮಾರ್ಗಸೂಚಿ ಮೌಲ್ಯ ಶೇ.15ರಿಂದ 30ರಷ್ಟರವರೆಗೆ ಹೆಚ್ಚಳ
  • ಕೈಗಾರಿಕಾ ಬಳಕೆಗಾಗಿ ವಿದ್ಯುತ್, ನೀರು, ಇಂಧನದ ದರಗಳು ಹೆಚ್ಚಳ.
  • ಖಾಸಗಿ ಪದವಿ ಕಾಲೇಜುಗಳಲ್ಲಿ ಶೇ.10ರಷ್ಟು ಶುಲ್ಕ ಏರಿಕೆ.
  • ರೂ. 25 ಲಕ್ಷ ಮೀರಿದ ವಿದ್ಯುತ್ ವಾಹನಗಳಿಗೆ ಶೇ.10ರಷ್ಟು ಲೈಫ್ರೆಮ್ ಟ್ಯಾಕ್ಸ್.
  • ಬೆಂಗಳೂರು ಮೆಟ್ರೋ ಪ್ರಯಾಣ ದರ ಶೇ.71ರಷ್ಟು ಏರಿಕೆ.
  • ಹಾಲು, ಮೊಸರು, ಮಜ್ಜಿಗೆ ವರಗಳಲ್ಲಿ ರೂ.4ರಷ್ಟು ಏರಿಕೆ.
  • ಒಟಿಟಿ ಸೇವೆಗಳು, ಚಿತ್ರಮಂದಿರ ಟಿಕೆಟ್‌ಗಳಿಗೆ ಶೇ.2ರಷ್ಟು ಸೆಸ್.
  • ವಾಸಸ್ಥಳ ಮತ್ತು ವ್ಯಾಪಾರಿಕ ಪ್ರದೇಶಗಳಲ್ಲಿ ಪಾರ್ಕಿಂಗ್ ಶುಲ್ಕ ಏರಿಕೆ.
  • ಕ್ವಾರಿ ಚಾರ್ಜ್ ಹೆಚ್ಚಳದಿಂದ ಕಟ್ಟಡ ನಿರ್ಮಾಣದ ವೆಚ್ಚ ಗಗನಕ್ಕೆ.
  • ಬಾಡಿಗೆ ದಾಖಲೆಗಳ ಸ್ಟಾಂಪ್ ಡ್ಯೂಟಿ ಶೇ.200ರಿಂದ 500ರಷ್ಟು ಹೆಚ್ಚಳ.
  • ಬೆಂಗಳೂರು ನಗರದಲ್ಲಿ ಆಸ್ತಿ ತೆರಿಗೆಯೊಂದಿಗೆ ತ್ಯಾಜ್ಯ ಶುಲ್ಕ ಸೇರ್ಪಡೆ.
  • ಹೊಸ ವಾಹನ ನೋಂದಣಿಗೆ ಹೆಚ್ಚುವರಿ ಶುಲ್ಕ
  • ಮದ್ಯದ ದರ ಹೆಚ್ಚಳ
  • ಆಹಾರ ಪದಾರ್ಥಗಳ ಬೆಲೆ ಏರಿಕೆ
  • ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ
  • ಆಸ್ಪತ್ರೆಗಳಲ್ಲಿ ಎಕ್ಸರೇ, ಔಟ್ ಪೇಸೆಂಟ್ ಶುಲ್ಕ ಶೇ.50ರಿಂದ 100ರಷ್ಟು ಹೆಚ್ಚಳ
  • ಗಿಗ್ ವರ್ಕರ್ಸ್ ನಿಧಿಗೆ ಕಂಪನಿಗಳಿಂದ ಶೇ.5ರಷ್ಟು ಸೆಸ್.

The post ರಾಜ್ಯದಲ್ಲಿ ದರ ಏರಿಕೆ ಸುಳಿವು ಕೊಟ್ಟ ಡಿ.ಕೆ.ಸುರೇಶ್ appeared first on Good News 24x7.

]]>
ನಂಜನಗೂಡಿನ ಹುಸ್ಕೂರು ಗ್ರಾಮದ ಸಮೀಪವಿರುವ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷ. https://www.goodnews24x7.com/crocodile-spotted-in-a-lake-near-huskuru-village-in-nanjangud/ Tue, 04 Nov 2025 13:32:27 +0000 https://www.goodnews24x7.com/?p=8032 ನಂಜನಗೂಡು ತಾಲೂಕಿನ ಹುಸ್ಕೂರು ಗ್ರಾಮದಲ್ಲಿ ಹುಲಿ ,ಚಿರತೆ, ಆನೆಗಳ, ಕಾಟದ ಸರದಿಯಲ್ಲಿ ಮೊಸಳೆ ಪ್ರತ್ಯಕ್ಷವಾಗಿರುವ ಘಟನೆ ನಡೆದಿದೆ.ಭಾರಿ ಗಾತ್ರದ ಮೊಸಳೆ ಕಂಡು ಕಳೆದ ಮೂರ್ನಾಲ್ಕು ದಿನಗಳಿಂದ ಹೊಲಗದ್ದೆ ನೀರಾವರಿ ಕೃಷಿ ಚಟುವಟಿಕೆಗಳಿಗೆ ರೈತರು ತೆರಳದೆ ಕಂಗಾಲಾಗಿದ್ದಾರೆ. ಹುಸ್ಕೂರು ಗ್ರಾಮದ ಸಮೀಪವಿರುವ ಕೆರೆಯಲ್ಲಿ…

The post ನಂಜನಗೂಡಿನ ಹುಸ್ಕೂರು ಗ್ರಾಮದ ಸಮೀಪವಿರುವ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷ. appeared first on Good News 24x7.

]]>

ನಂಜನಗೂಡು ತಾಲೂಕಿನ ಹುಸ್ಕೂರು ಗ್ರಾಮದಲ್ಲಿ ಹುಲಿ ,ಚಿರತೆ, ಆನೆಗಳ, ಕಾಟದ ಸರದಿಯಲ್ಲಿ ಮೊಸಳೆ ಪ್ರತ್ಯಕ್ಷವಾಗಿರುವ ಘಟನೆ ನಡೆದಿದೆ.ಭಾರಿ ಗಾತ್ರದ ಮೊಸಳೆ ಕಂಡು ಕಳೆದ ಮೂರ್ನಾಲ್ಕು ದಿನಗಳಿಂದ ಹೊಲಗದ್ದೆ ನೀರಾವರಿ ಕೃಷಿ ಚಟುವಟಿಕೆಗಳಿಗೆ ರೈತರು ತೆರಳದೆ ಕಂಗಾಲಾಗಿದ್ದಾರೆ.

ಹುಸ್ಕೂರು ಗ್ರಾಮದ ಸಮೀಪವಿರುವ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದೆ. ಭಯ ಸೃಷ್ಟಿಸುತ್ತಿರುವ ಮೊಸಳೆಯನ್ನು ಹಿಡಿದು ಗ್ರಾಮಸ್ಥರ ಆತಂಕ ದೂರ ಮಾಡಲು ಅರಣ್ಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದ ಹುಸ್ಕೂರು ಗ್ರಾಮಸ್ಥರು.ಹುಸ್ಕೂರು ಗ್ರಾಮಸ್ಥರ ಮನವಿಗೆ ಕ್ಯಾರೆ ಎನ್ನದ ಅರಣ್ಯ ಅಧಿಕಾರಿಗಳು. ನಂಜನಗೂಡು ಅರಣ್ಯ ಅಧಿಕಾರಿಗಳ ವಿರುದ್ಧ ಹುಸ್ಕೂರು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಭಯ ಸೃಷ್ಟಿಸಿರುವ ಮೊಸಳೆಯನ್ನು ಹಿಡಿದು ಬೇರೆಡೆ ಸ್ಥಳಾಂತರ ಮಾಡಲು ಆಗ್ರಹಿಸಿದ್ದಾರೆ.

The post ನಂಜನಗೂಡಿನ ಹುಸ್ಕೂರು ಗ್ರಾಮದ ಸಮೀಪವಿರುವ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷ. appeared first on Good News 24x7.

]]>
ಸಿಎಂ ತವರು ಜಿಲ್ಲೆಯಲ್ಲಿ ಮತ್ತೆ ಬಾಲ ಬಿಚ್ಚಿದ ಮೈಕ್ರೋ ಫೈನಾನ್ಸ್…! ಸಾಲ ಮರುಪಾವತಿಸದ ರೈತನ ಮನೆ ಜಪ್ತಿ…ಬೀದಿಗೆ ಬಂದ ಕುಟುಂಬ… https://www.goodnews24x7.com/microfinance-has-once-again-come-to-the-fore-in-cms-home-district-farmers-house-seized-for-not-repaying-loan-family-on-the-streets/ Fri, 31 Oct 2025 13:13:31 +0000 https://www.goodnews24x7.com/?p=7939 ನಂಜನಗೂಡು: ಸಿಎಂ ತವರಿನಲ್ಲಿ ಮೈಕ್ರೋ ಫೈನಾನ್ಸ್ ಮತ್ತೆ ಬಾಲ ಬಿಚ್ಚಿದೆ.ಸಾಲದ ಕಂತು ಕಟ್ಟಿಲ್ಲ ಎಂದು ಮನೆ ಜಪ್ತಿ ಮಾಡಿದೆ. ನಂಜನಗೂಡು ತಾಲ್ಲೂಕಿನ ಕಂದೇಗಾಲ‌ ಗ್ರಾಮದಲ್ಲಿ ಘಟನೆ ಬೆಳಕಿಗೆ ಬಂದಿದೆ.ಕಾಲವಕಾಶ ಕೋರಿದ್ದರೂ ಸ್ಪಂದಿಸದ ಫೈನಾನ್ಸ್ ನ್ಯಾಯಾಲಯದ ಆದೇಶ ತಂದು ಜಪ್ತಿ ಮಾಡಿದ್ದಾರೆ.ಇದೀಗ ಸಾಲ…

The post ಸಿಎಂ ತವರು ಜಿಲ್ಲೆಯಲ್ಲಿ ಮತ್ತೆ ಬಾಲ ಬಿಚ್ಚಿದ ಮೈಕ್ರೋ ಫೈನಾನ್ಸ್…! ಸಾಲ ಮರುಪಾವತಿಸದ ರೈತನ ಮನೆ ಜಪ್ತಿ…ಬೀದಿಗೆ ಬಂದ ಕುಟುಂಬ… appeared first on Good News 24x7.

]]>

ನಂಜನಗೂಡು: ಸಿಎಂ ತವರಿನಲ್ಲಿ ಮೈಕ್ರೋ ಫೈನಾನ್ಸ್ ಮತ್ತೆ ಬಾಲ ಬಿಚ್ಚಿದೆ.ಸಾಲದ ಕಂತು ಕಟ್ಟಿಲ್ಲ ಎಂದು ಮನೆ ಜಪ್ತಿ ಮಾಡಿದೆ.
ನಂಜನಗೂಡು ತಾಲ್ಲೂಕಿನ ಕಂದೇಗಾಲ‌ ಗ್ರಾಮದಲ್ಲಿ ಘಟನೆ ಬೆಳಕಿಗೆ ಬಂದಿದೆ.ಕಾಲವಕಾಶ ಕೋರಿದ್ದರೂ ಸ್ಪಂದಿಸದ ಫೈನಾನ್ಸ್ ನ್ಯಾಯಾಲಯದ ಆದೇಶ ತಂದು ಜಪ್ತಿ ಮಾಡಿದ್ದಾರೆ.ಇದೀಗ ಸಾಲ ಪಡೆದ ಕುಟುಂಬ ಬೀದಿಗೆ ಬಂದಿದೆ.

ಮನೆ ನಿರ್ಮಾಣ ಸಂಭಂದ ಇಕ್ವೀಟಾಸ್ ಸ್ಮಾಲ್ ಫೈನಾನ್ಸ್ ನಲ್ಲಿ ಚಿನ್ನಸ್ವಾಮಿ 2023 ರಲ್ಲಿ 2,70,000 ರೂ ಸಾಲ‌ಪಡೆದಿದ್ದರು. ಚಿನ್ನಸ್ವಾಮಿ.
ಈಗಾಗಲೆ 19 ಕಂತುಗಳ 189000 ಸಾಲ‌ ಮರುಪಾವತಿಸಿದ್ದಾರೆ. ಚಿನ್ನಸ್ವಾಮಿ ಪತ್ನಿ ಸಹ ಇಕ್ವೀಟಾಸ್ ಫೈನಾನ್ಸ್ ನಲ್ಲಿ ಗಂಪು ಸಾಲ ಪಡೆದಿದ್ದರು.ಮನೆ ಸಾಲ‌ಮರುಪಾವತಿ ಕಂತಿನ ಹಣವನ್ನು ಗುಂಪುಸಾಲಕ್ಕೆ ಜಮೆ ಮಾಡಿಕೊಂಡಿದೆ ಎಂದು ಚಿನ್ನಸ್ವಾಮಿ ಆರೋಪವಾಗಿದೆ.ತಮ್ಮ ಅನುಮತಿ ಪಡೆಯೆದೆ ಸುಮಾರು 60 ಸಾವಿರಕ್ಕೂ ಹೆಚ್ವು ಹಣ ಗುಂಪು ಸಾಲಕ್ಕೆ ಜಮೆ ಮಾಡಿಕೊಂಡಿದ್ದಾರೆ.ಇದೀಗ ಏಕಾಏಕಿ ಮನೆ ಸಾಲದ ಕಂತು ಕಟ್ಟಿಲ್ಲವೆಂದು ಮನೆ ಜಪ್ತಿ ಮಾಡಿದ್ದಾರೆ.

ಸಾಲ ಮರುಪಾವತಿಗಾಗಿ ಚಿನ್ನಸ್ವಾಮಿ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಕಾಲಾವಕಾಶ ಕೇಳಿದ್ದರು. ಮನೆ ಜಪ್ತಿ ತಡೆಯುವಂತೆ ಜಿಲ್ಲಾಧಿಕಾರಿ ಹಾಗೂ ತಹಶಿಲ್ದಾರ್ ಗೂ ಮನವಿ ಮಾಡಿದ್ದರು.
ಯಾವುದಕ್ಕು ತಲೆಕೆಡೆಸಿಕೊಳ್ಳದ ಫೈನಾನ್ಸ್ ಸಾಲ ಮರುಪಾವತಿ ಮಾಡುವಂತೆ ತಾಕೀತು ಮಾಡಿತ್ತು.ನೆನ್ನೆ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆ ಜಪ್ತಿ ಮಾಡಿ ನೋಟಿಸ್ ಅಂಟಿಸಿದ್ದಾರೆ.

ಇದೀಗ ಮನೆ ಜಪ್ತಿ ಕಾರಣ ಚಿನ್ನಸ್ವಾಮಿ ಮತ್ತು ಕುಟುಂಬ ಬೀದಿಗೆ ಬಿದ್ದಂತಾಗಿದೆ. ಮನೆ ಜಪ್ತಿ ತೆರವು ಗೊಳಿಸುವಂತೆ ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಸಿಎಂ ತವರು ಕ್ಷೇತ್ರದಲ್ಲೇ ಮತ್ತೆ ಮೈಕ್ರೋ ಫೈನಾನ್ಸ್ ಬಾಲ ಬಿಚ್ಚಿದೆ…

The post ಸಿಎಂ ತವರು ಜಿಲ್ಲೆಯಲ್ಲಿ ಮತ್ತೆ ಬಾಲ ಬಿಚ್ಚಿದ ಮೈಕ್ರೋ ಫೈನಾನ್ಸ್…! ಸಾಲ ಮರುಪಾವತಿಸದ ರೈತನ ಮನೆ ಜಪ್ತಿ…ಬೀದಿಗೆ ಬಂದ ಕುಟುಂಬ… appeared first on Good News 24x7.

]]>
ಕಾಡು ಹಂದಿ, ಕರಡಿಗಳ ಹಾವಳಿಯಿಂದ ಬೆಳೆ ನಾಶ, ಮುಗಿಲುಗೇರಿದ ರೈತರ ಅರಣ್ಯ ರೋಧನೆ, ಆಲಿಸದ ಅರಣ್ಯ ಇಲಾಖೆ https://www.goodnews24x7.com/crop-destruction-due-to-wild-boars-and-bears-farmers-protest-over-forest-loss-forest-department-not-listening/ Sat, 06 Sep 2025 05:34:47 +0000 https://www.goodnews24x7.com/?p=7397 ಹರವದಿ: ವಿಜಯನಗರ ಜಿಲ್ಲೆ ಕೂಡ್ಲಿಗಿ ರೈತ ದೇಶದ ಬೆನ್ನೆಲುಬು ನಿಜವಾದರೂ , ಕೆಲ ಇಲಾಖೆಗಳು ಮಾತ್ರ ರೈತರ ಹಿತ ಕಾಪಾಡುವಲ್ಲಿ. ಸಂಬಂಧಿಸಿದಂತೆ ಅರಣ್ಯ ಇಲಾಖೆ ಸೇರಿದಂತೆ ವಿವಿದ ಇಲಾಖೆಗಳು , ನಿರ್ಲಕ್ಷ್ಯ ಧೋರಣೆ ತಾಳಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ತಾಲೂಕಿನ…

The post ಕಾಡು ಹಂದಿ, ಕರಡಿಗಳ ಹಾವಳಿಯಿಂದ ಬೆಳೆ ನಾಶ, ಮುಗಿಲುಗೇರಿದ ರೈತರ ಅರಣ್ಯ ರೋಧನೆ, ಆಲಿಸದ ಅರಣ್ಯ ಇಲಾಖೆ appeared first on Good News 24x7.

]]>

ಹರವದಿ: ವಿಜಯನಗರ ಜಿಲ್ಲೆ ಕೂಡ್ಲಿಗಿ ರೈತ ದೇಶದ ಬೆನ್ನೆಲುಬು ನಿಜವಾದರೂ , ಕೆಲ ಇಲಾಖೆಗಳು ಮಾತ್ರ ರೈತರ ಹಿತ ಕಾಪಾಡುವಲ್ಲಿ. ಸಂಬಂಧಿಸಿದಂತೆ ಅರಣ್ಯ ಇಲಾಖೆ ಸೇರಿದಂತೆ ವಿವಿದ ಇಲಾಖೆಗಳು , ನಿರ್ಲಕ್ಷ್ಯ ಧೋರಣೆ ತಾಳಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ತಾಲೂಕಿನ ಹರವದಿ ಕಕ್ಕುಪ್ಪಿ ಜರ್ಮಲಿ ಗ್ರಾಮಗಳು , ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದ್ದು. ಹೊಲಗಳಿಗೆ ಕರಡಿ ಹಂದಿಗಳ ಹಾವಳಿ ಮಿತಿ ಮೀರಿದ್ದು , ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಗತ್ಯ ಕ್ರಮ ಜರುಗಿಸುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರಡಿಗಳು ಕಾಡು ಹಂದಿಗಳು ಹೊಲದಲ್ಲಿನ ಮೆಕ್ಕೇಜೋಳ , ಹಾಗೂ ಜೋಳದ ಫಸಲನ್ನು ತಿಂದು ಹಾಳು ಮಾಡಿದ್ದು. ಹತ್ತಾರು ವರ್ಷಗಳಿಂದಲೂ ಇದು ಪ್ರತಿಭಾರಿಯೂ ಜರುಗುತ್ತಿದೆ , ಕಾಡು ಪ್ರಾಣಿಗಳ ಹಾವಳಿ ನಿಯಂತ್ರಿಸುವಂತೆ. ಅಗತ್ಯ ಕ್ರಮಗಳನ್ನು ಜರುಗಿಸುವಂತೆ , ಅರಣ್ಯ ಇಲಾಖೆಗೆ ಮನವಿ ಮಾಡಲಾಗಿದೆ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ದೂರಿದ್ದಾರೆ. ಕಾಡು ಹಂದಿ ಕರಡಿಗಳಿಂದ ದಾಳಿಯಿಂದ ಅಪಾರ ಪ್ರಮಾಣಸ ಬೆಳೆ ನಾಶ: ಕಾಡು ಹಂದಿಗಳು ಕರಡಿಗಳು ರೈತರ ಹೊಲಗಳಿಗೆ ನುಗ್ಗಿ, ಕಟಾವು ಹಂತದಲ್ಲಿದ್ದ ಮೆಕ್ಕೆಜೋಳ, ಜೋಳ, ರಾಗಿ ಸೇರಿದಂತೆ ವಿವಿಧ ಬೆಳೆಗಳನ್ನು ನಾಶಪಡಿಸಿ ಅಪಾರ ಪ್ರಮಾಣದ ನಷ್ಟಕ್ಕೆ ಕಾರಣವಾಗುತ್ತಿವೆ. ಈ ಸಂಬಂಧಿಸಿದಂತೆ ಈಗಾಗಾಲೆ ಅರವದಿ ಗ್ರಾಮದ ರೈತರು , ಕೂಡ್ಲಿಗಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಮತ್ತು ತಮಗಾದ ಬೆಳೆ ನಷ್ಟ ತುಂಬಿ ಕಡಬೇಕು , ಅದಕ್ಕಾಗಿ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಕರಡಿಗಳು ಕೆಲವೊಮ್ಮೆ ಹಾಡು ಹಗಲುನಲ್ಲಿಯೇ ಹೊಲದಲ್ಲಿ ಕಾರ್ಯನಿರತ , ರೈತರ ಮೇಲೆ ದಾಳಿ ಮಾಡಿ ಮಾರಣಾಂತಿಕ ಗಾಯಗೋಳಿಸಿರುವ ಹಲವು ನಿದರ್ಶನಗಳಿವೆ. ರಾತ್ರಿ ಸಮಯದಲ್ಲಿ
ಕಾಡು ಹಂದಿಗಳ ಹಾಗೂ ಕರಡಿ ಅತಿಕ್ರಮಣ ಮಿತಿ ಮೀರಿದ್ದು , ಕರಡಿಗಳು ಕಾಡು ಹಂದಿಗಳು ಕಾಡು ಪ್ರದೇಶಗಳಿಂದ ಹೊರಬಂದು ರೈತರ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ನಾಶಪಡಿಸುತ್ತವೆ.
ಕಟಾವು ಸಮೀಪಿಸುತ್ತಿದ್ದಂತೆ ಕಾಡು ಹಂದಿಗಳು ದಾಳಿ ಮಾಡಿ, ಮೆಕ್ಕೆಜೋಳ, ಜೋಳ ಮತ್ತು ರಾಗಿ ಮುಂತಾದ ಬೆಳೆಗಳನ್ನು ತಿಂದು ಹಾಕಿ, ಬೆಳೆಯನ್ನು ಬೇಕ‍ಾ ಬಿಟ್ಟಿಯಾಗಿ ತುಳಿದು ನಾಶಪಡಿಸುತ್ತಿವೆ. ಮತ್ತು
ಕರಡಿ ಹಂದಿ ದಾಳಿಗಳಿಂದ ಪ್ರತಿ ರೈತರಿಗೆ ಸಾವಿರಾರು ರೂಪಾಯಿಗಳ ನಷ್ಟ ಸಂಭವಿಸುತ್ತಿದ್ದು , ನೊಂದ ರೈತರುಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಲಕ್ಷಾಂತರ ರೂ ಬೆಲೆಯ ಬೆಳೆ ನಾಶ- ತಾಲೂಕಿನ ಹರವದಿ ಗ್ರಾಮದಲ್ಲಿ ಸುಮಾರು ಐವತ್ತು ರೈತರ ಹೊಲಗಳಿಗೆ , ಕರಡಿ ಕಾಡು ಹಂದಿ ಲಗ್ಗೆ ಹಾಕಿ ನಾಶಪಡಿಸಿವೆ ಎಂದು ರೈತರು ಮಾಹಿತಿ ನೀಡಿದ್ದಾರೆ. ಓರ್ವ ರೈತನ ಹೊಲವು ಮೂರು ಎಕರೆ ಯಿಂದ ಐದು ಎಕರೆ ಹೊಲದಷ್ಟು , ಅಂದರೆ ಓರ್ವ ರೈತನ ಹೊಲದಲ್ಲಿನ ಐದು ಕ್ವಿಂಟಾಲ್ ನಿಂದ ಹತ್ತು ಕ್ವಿಂಟಾಲ್ ನಷ್ಟು ಫಲ ನಷ್ಟವಾಗಿದ್ದು. ಅರವದಿ ಗ್ರಾಮದ ಸಮಸ್ತ ರೈತರ ಒಟ್ಟು ಬೆಳೆ ನಷ್ಟ , ಹತ್ತಾರು ಲಕ್ಷ ರೂಗಳಷ್ಟು ಬೆಳೆ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ನಷ್ಟಕ್ಕೊಳಗಾಗಿರುವ ಗ್ರಾಮದ ರೈತರು ಅರಣ್ಯ ಇಲಾಖೆಗೆ ಅಗತ್ಯ ದ‍ಾಖಲುಗಳ ಸಮೇತ ಪರಿಹಾರಕ್ಕಾಗಿ ,ನಷ್ಟದ ಕುರಿತು ಮಾಹಿತಿ ನೀಡಿದ್ದಾರೆ , ಮತ್ತು ಸೂಕ್ತ ಪರಿಹಾರ ನೀಡುವಂತೆ ಇಲಾಖೆಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಹರವದಿ ಗ್ರಾಮ , ಜರ್ಮಲಿ ಗ್ರ‍‍ಾಮ , ಕಕುಪ್ಪಿ ಗ್ರ‍ಾಮಗಳು ಸೇರಿದಂತೆ , ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡು ಹಂದಿ ಕರಡಿಗಳು ಒಳಗೊಂಡಂತೆ ಇತರೆ ಕಾಡು ಪ್ರಾಣಿಗಳ ಹಾವಳಿ ಮಿತಿಮೀರಿದೆ ಎಂದು ಗ್ರಾಮಗಳ ಗ್ರ‍ಾಮಸ್ಥರು ದೂರಿದ್ದಾರೆ. ತಾವು ಕಷ್ಟಪಟ್ಟು ಬೆಳೆದ ಬೆಳೆಯನ್ನು ನಾಶಪಡಿಸುತ್ತಿವೆ , ಅವು ರ‍ಾತ್ರೊರಾತ್ರಿ ಹೊಲಕ್ಕೆ ನುಗ್ಗಿ ಬೇಳ ನಾಶ ಮಾಡುತ್ತಿದ್ದು , ಇದರಿಂದಾಗಿ ರೈತರು ಅಪಾರ ಪ್ರಮ‍ಾಣದಲ್ಲಿ ನಷ್ಟಕ್ಕೆ ಈಡಾಗುತ್ತಿರುವುದಾಗಿ ರೈತರು ಅಳಲು ತೋಡಿಕೊಂಡಿದ್ದಾರೆ. ಅರಣ್ಯ ಇಲಾಖೆಯ ವೈಫಲ್ಯ- ರೈತರ ಆಕ್ರೋಶ ಆರೋಪ- ಕಾಡು ಪ್ರಾಣಿಗಳ ಹಾವಳಿ ಪ್ರಕರಣಗಳು ಹತ್ತು ಹಲವಾರು ವರ್ಷಗಳಿಂದಲೂ , ಪ್ರತಿ ವರ್ಷವೂ ಜರುಗುತ್ತಿರುವ ದುರಂತವಾಗಿದ್ದು. ಪ್ರತಿ ಭಾರೀವೂ ಇಲಾಖೆಗೆ ಕ್ರಮ ಕೈಗೊಳ್ಳುವಂತೆ , ಹಾಗೂ ಸೂಕ್ತ ಪರಿಹಾರ ನೀಡುವಂತೆ ಮಾಡುತ್ತೇವೆ. ಆದರೆ ಏನೂ ಪ್ರಯೋಜನವಾಗುತ್ತಿಲ್ಲ ಮನವಿಯನ್ನು ಡಸ್ಟ್ ಬಿನ್ ಗೆ ಹಾಕಿ ಸಾಗಹಾಕಲಾಗುತ್ತಿದೆ , ಅಪಾರ ನಷ್ಟ ಅನುಭವಿಸಿದವರಿಗೆ. ಇಲಾಖೆಯಿಂದ ಅರೆಕಾಸಿನ ಬಿಡಿಗಾಸಿನ ಪರಿಹಾರ ನೀಡಲಾಗುತ್ತಿದ್ದು , ರಕ್ಷಣೆಗೆ ಯಾವುದೇ ಒಂದು ಕ್ರಮವನ್ನು ಜರುಗಿಸುತ್ತಿಲ್ಲ. ಸರ್ಕಾರದಿಂದ ಹಾಗೂ ಅರಣ್ಯ ಇಲಾಖೆಯಿಂದ ಕಾಡು ಪ್ರಾಣಿಗಳ ಹಾವಳಿ ನಿಂಯತ್ರಿಸಲು , ಹತ್ತು ಹಲವು ಯೋಜನೆಗಳಿದ್ದು ಅದಾವುದನ್ನು ಇಲ್ಲಿ ಜಾರಿ ತರಲಾಗುತ್ತಿಲ್ಲ. ಬದಲಿಗೆ ಭರವಸೆಗಳ ಮಹಾಪೂರ ಹರಿಸಿ ರೈತರ ಮೂಗಿಗೆ ತುಪ್ಪ ಸವರಿದಂತೆ , ಅಲ್ಪ ಪ್ರಮಾಣದ ಪರಿಹಾರ ನೀಡಿ , ಮೂಗಿಗೆ ತುಪ್ಪ ಸವರಿ ಕೈ ತೊಳೆದು ಕೊಳ್ಳೋ ಪರಿಪಾಟಲನ್ನು ಅರಣ್ಯ ಇಲಾಖೆ ರೂಡಿಸಿಕೊಳ್ಳಲಾಗಿದೆ. ಹೀಗಾಗಿ ತಮ್ಮ ರೋಧನ ಅಕ್ಷರಸಃ ಅರಣ್ಯ ರೋಧನವಾಗಿದ್ದು , ಸಂಬಂಧಿಸಿದಂತೆ ಇಾಲಾಖೆಯ ಉನ್ನತಾಧಿಕಾರಿಗಳು ಸ್ಥಳ ಪರಿಶೀಲಿಸಬೇಕು. ಜಿಲ್ಲಾಧಿಕಾರಿಗಳು ಸಚಿವರು ಶಾಸಕರು ಖುದ್ದು , ಪರಿಶೀಲಿಸಿ ನಂತರವಷ್ಟೇ ಸರ್ಕಾರದ ಮಟ್ಟದಲ್ಲಿ ಗಂಭೀರವಾಗಿ ಚರ್ಚೆ ನಡೆಸಿ ದಿಟ್ಟ ನಿರ್ಣಯಗಳನ್ನು ಕೈಗೊಳ್ಳಬೇಕಿದೆ. ಕಾಡು ಪ್ರಾಣಿಗಳು ಜಮೀನುಗಳಿಗೆ ಲಗ್ಗೆ ಇಡುವುದನ್ನು ತಪ್ಪಿಸಲು , ಅರಣ್ಯ ಇಲಾಖೆಯಿಂದ ಖಾಯಂ ಸೂಕ್ತ ಪರಿಹಾರ ಕ್ರಮಗಳನ್ನು ಶೀಘ್ರವೇ ಕೈಗೊಳ್ಳುವಂತೆ. ಹರವದಿ ಗ್ರಾಮ , ಕಕ್ಕುಪ್ಪಿ ಗ್ರಾಮ , ಜರ್ಮಲಿ ಗ್ರಾಮಗಳ ರೈತರು , ಹಾಗೂ ವನ್ಯ ಪ್ರಾಣಿಗಳ ಬಾಧಿತ ತಾಲೂಕಿನ ಎಲ್ಲಾ ಗ್ರಾಮಗಳ ರೈತರು ಗ್ರಾಮಸ್ಥರು ಈ ಮೂಲಕ ಒತ್ತಾಯಿಸಿದ್ದಾರೆ. ಪರಿಹಾರ : ದುಪ್ಪಟ್ಟು ಹೆಚ್ಚಿಸಿ , ಅರ್ಜಿ ಸಲ್ಲಿಸುವ ವಿಧ‍ಾನ ಸರಳ ಗೊಳಿಸಿ- ಪರಿಹಾರ ಧನವು ಅವೈಜ್ಞಾನಿಕ ಮಾನದಂಡದಿಂದ ಕೂಡಿದ್ದು , ಪರಿಹಾರದ ಮಾನದಂಡ ದ್ವಿಗುಣಗೊಲಕಿಸಿ ಪರಿಹಾರ ಹೆಚ್ಚಿಸಬೇಕು. ಮತ್ತು ಪರಿ ಹಾರ ಹಣಕ್ಕಾಗಿ ಸಲ್ಲಿಸಬೇಕ‍ಾಗಿರುವ ವಿಧ‍‍ಾನವು , ತುಂಬಾ ಜಠಿಲಾಗಿದ್ದು ಸರಳವಾಗಿಸಬೇಕಿದೆ. ಪರಿಹಾರ ಧನ ಶೀಘ್ರವಾಗಿ ನೇರವಾಗಿ ನಷ್ಟ ಹೊಂದಿರುವ ರೈತನ ಖಾತೆಗೆ , ಜಮಾ ಆಗುವಂತೆ ಅಗತ್ಯ ಕ್ರಮ ಜರುಗಿಸಬೇಕೆಂದು. ಕೂಡ್ಲಿಗಿ ತಾಲೂಕಿನ ಸಮಸ್ತ ರೈತರು , ರೈತ ಸಂಘಟನೆಗಳ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

The post ಕಾಡು ಹಂದಿ, ಕರಡಿಗಳ ಹಾವಳಿಯಿಂದ ಬೆಳೆ ನಾಶ, ಮುಗಿಲುಗೇರಿದ ರೈತರ ಅರಣ್ಯ ರೋಧನೆ, ಆಲಿಸದ ಅರಣ್ಯ ಇಲಾಖೆ appeared first on Good News 24x7.

]]>