festival Archives - Good News 24x7 https://www.goodnews24x7.com/tag/festival/ Kannada Thu, 27 Aug 2026 08:45:48 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg festival Archives - Good News 24x7 https://www.goodnews24x7.com/tag/festival/ 32 32 ಈರುಳ್ಳಿ ಅಭಾವ ಮತ್ತು ಬೆಲೆ ಏರಿಕೆ ಭೀತಿ https://www.goodnews24x7.com/onion-shortage-and-fear-of-price-hike/ Thu, 27 Aug 2026 08:45:48 +0000 https://www.goodnews24x7.com/?p=9931 ಹಬ್ಬಗಳ ಆರಂಭವಾಗುತ್ತಿರುವ ಬೆನ್ನಲ್ಲೇ ಅಗತ್ಯ ವಸ್ತುವಾದ ಈರುಳ್ಳಿಯ ಬೆಲೆ ಗಗನಕ್ಕೇರುತ್ತಿದ್ದು, ಸಾರ್ವಜನಿಕರಿಗೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಕೇಂದ್ರ ಸರ್ಕಾರವು ಬೆಲೆ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಂಡಿದ್ದರೂ, ಮಾರುಕಟ್ಟೆಯಲ್ಲಿ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ. ಸದ್ಯ ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 25ರಿಂದ 50…

The post ಈರುಳ್ಳಿ ಅಭಾವ ಮತ್ತು ಬೆಲೆ ಏರಿಕೆ ಭೀತಿ appeared first on Good News 24x7.

]]>

ಹಬ್ಬಗಳ ಆರಂಭವಾಗುತ್ತಿರುವ ಬೆನ್ನಲ್ಲೇ ಅಗತ್ಯ ವಸ್ತುವಾದ ಈರುಳ್ಳಿಯ ಬೆಲೆ ಗಗನಕ್ಕೇರುತ್ತಿದ್ದು, ಸಾರ್ವಜನಿಕರಿಗೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಕೇಂದ್ರ ಸರ್ಕಾರವು ಬೆಲೆ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಂಡಿದ್ದರೂ, ಮಾರುಕಟ್ಟೆಯಲ್ಲಿ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ. ಸದ್ಯ ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 25ರಿಂದ 50 ರೂಪಾಯಿ ಇದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಈಗಾಗಲೇ 65 ರೂಪಾಯಿಗೆ ಮಾರಾಟವಾಗುತ್ತಿದೆ. ಮುಂಬರುವ ಗೌರಿ-ಗಣೇಶ ಹಬ್ಬದ ವೇಳೆಗೆ ಈರುಳ್ಳಿ ಬೆಲೆ ಪ್ರತಿ ಕೆಜಿಗೆ 100 ರೂಪಾಯಿಗೆ ತಲುಪುವ ಭೀತಿ ಎದುರಾಗಿದೆ. ಕರ್ನಾಟಕದ ಗದಗ, ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ ಹಾಗೂ ಚಿಕ್ಕಮಗಳೂರಿನಲ್ಲಿ ಮುಂಗಾರು ಮಳೆಯ ಅಭಾವದಿಂದ ಬೆಳೆ ಕುಸಿದಿದ್ದರೆ, ಇನ್ನೊಂದೆಡೆ ಮಹಾರಾಷ್ಟ್ರದ ನಾಸಿಕ್ ಮತ್ತು ವಿದರ್ಭ ಭಾಗಗಳಲ್ಲಿ ತೀವ್ರ ಮಳೆಯಿಂದಾಗಿ ಬೆಳೆ ಸಂಪೂರ್ಣ ಹಾನಿಯಾಗಿದೆ. ಅಕ್ಟೋಬರ್ ಮಧ್ಯಭಾಗದವರೆಗೆ ಹೊಸ ಈರುಳ್ಳಿ ಮಾರುಕಟ್ಟೆಗೆ ಬರುವ ಸಾಧ್ಯತೆಯಿಲ್ಲದಿರುವುದರಿಂದ ಪೂರೈಕೆಯಲ್ಲಿ ತೀವ್ರ ಅಭಾವ ಸೃಷ್ಟಿಯಾಗಿದೆ. ಜೊತೆಗೆ, ಕೇಂದ್ರ ಸರ್ಕಾರ ಸಂಗ್ರಹಿಸಿರುವ ಬಫರ್ ಸ್ಟಾಕ್ ಕೂಡ ಮಾರುಕಟ್ಟೆಯ ಬೃಹತ್ ಬೇಡಿಕೆಯನ್ನು ಪೂರೈಸಲು ಸಾಕಾಗುತ್ತಿಲ್ಲ. ಇದಲ್ಲದೆ ಡೀಸೆಲ್ ದರ ಏರಿಕೆಯಿಂದಾಗಿ ಅಕ್ಕಿ, ಬೇಳೆ, ಎಣ್ಣೆ ಮತ್ತು ಸಕ್ಕರೆಯಂತಹ ಅಗತ್ಯ ವಸ್ತುಗಳ ಸಾಗಣೆ ವೆಚ್ಚ ಹೆಚ್ಚಾಗಿದ್ದು, ಇದರ ನೇರ ಪರಿಣಾಮವಾಗಿ ಮುಂಬರುವ ದಿನಗಳಲ್ಲಿ ಹೋಟೆಲ್‌ಗಳಲ್ಲಿ ಈರುಳ್ಳಿ ದೋಸೆ, ಪಾನಿಪುರಿ ಹಾಗೂ ಮಸಾಲೆಪುರಿ ಮುಂತಾದ ಖಾದ್ಯಗಳ ದರ ಏರಿಕೆಯಾಗುವುದು ನಿಶ್ಚಿತವಾಗಿದೆ.

The post ಈರುಳ್ಳಿ ಅಭಾವ ಮತ್ತು ಬೆಲೆ ಏರಿಕೆ ಭೀತಿ appeared first on Good News 24x7.

]]>
ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ ! https://www.goodnews24x7.com/grand-jagannath-rath-yatra-begins-in-puri-odisha-from-today/ Thu, 16 Jul 2026 05:54:21 +0000 https://www.goodnews24x7.com/?p=9845   ಒಡಿಶಾದ ಪುರಿಯಲ್ಲಿ ಭವ್ಯ ಜಗನ್ನಾಥ ರಥಯಾತ್ರೆ ಇಂದಿನಿಂದ ಆರಂಭಗೊಂಡಿದೆ. ಲಕ್ಷಾಂತರ ಭಕ್ತರು ‘ಜಯ ಜಗನ್ನಾಥ’ ಘೋಷಗಳೊಂದಿಗೆ ಈ ಮಹಾ ಉತ್ಸವದಲ್ಲಿ ಭಾಗವಹಿಸುತ್ತಿದ್ದಾರೆ. ಜಗನ್ನಾಥ ಸ್ವಾಮಿ, ಬಲಭದ್ರ ಮತ್ತು ಸುಭದ್ರಾ ದೇವಿ ದೇವಾಲಯದಿಂದ ಹೊರಬಂದು ಭಕ್ತರಿಗೆ ದರ್ಶನ ನೀಡುತ್ತಾರೆ. ಹೊಸ ರಥಗಳ…

The post ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ ! appeared first on Good News 24x7.

]]>

 

ಒಡಿಶಾದ ಪುರಿಯಲ್ಲಿ ಭವ್ಯ ಜಗನ್ನಾಥ ರಥಯಾತ್ರೆ ಇಂದಿನಿಂದ ಆರಂಭಗೊಂಡಿದೆ. ಲಕ್ಷಾಂತರ ಭಕ್ತರು ‘ಜಯ ಜಗನ್ನಾಥ’ ಘೋಷಗಳೊಂದಿಗೆ ಈ ಮಹಾ ಉತ್ಸವದಲ್ಲಿ ಭಾಗವಹಿಸುತ್ತಿದ್ದಾರೆ. ಜಗನ್ನಾಥ ಸ್ವಾಮಿ, ಬಲಭದ್ರ ಮತ್ತು ಸುಭದ್ರಾ ದೇವಿ ದೇವಾಲಯದಿಂದ ಹೊರಬಂದು ಭಕ್ತರಿಗೆ ದರ್ಶನ ನೀಡುತ್ತಾರೆ. ಹೊಸ ರಥಗಳ ನಿರ್ಮಾಣ, ಗುಂಡಿಚಾ ಮಂದಿರಕ್ಕೆ ಪ್ರಯಾಣ ಮತ್ತು ‘ಛೇರಾ ಪಹರಾ’ ಸಮಾನತೆಯ ಸಂದೇಶ ಸಾರುವ ಪ್ರಮುಖ ಆಚರಣೆಗಳಾಗಿವೆ.

ಭಾರತದ ಅತ್ಯಂತ ಪವಿತ್ರ ಹಾಗೂ ಜಗತ್ತಿನ ಅತಿ ದೊಡ್ಡ ಧಾರ್ಮಿಕ ಉತ್ಸವಗಳಲ್ಲಿ ಒಂದಾದ ಇತಿಹಾಸ ಪ್ರಸಿದ್ಧ ‘ಪುರಿ ಜಗನ್ನಾಥ ರಥಯಾತ್ರೆ’ಯು ಇಂದುಅತ್ಯಂತ ವೈಭವದಿಂದ ಆರಂಭವಾಗಿದೆ. ದೇಶ-ವಿದೇಶಗಳ ಲಕ್ಷಾಂತರ ಭಕ್ತರು ಪುರಿ ನಗರಕ್ಕೆ ಹರಿದು ಬಂದಿದ್ದು, ಇಡೀ ನಗರವು ‘ಜಯ ಜಗನ್ನಾಥ’ ಎಂಬ ಜೈಕಾರದೊಂದಿಗೆ ಭಕ್ತಿಯ ಸಾಗರದಲ್ಲಿ ಮುಳುಗಿದೆ. ಶ್ರೀ ಜಗನ್ನಾಥ ದೇವಾಲಯ ಆಡಳಿತವು ಈ ಮಹಾ ಉತ್ಸವದ ಅಧಿಕೃತ ಧಾರ್ಮಿಕ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಬಿಗಿ ಭದ್ರತೆಯ ನಡುವೆ ರಥೋತ್ಸವಕ್ಕೆ ಚಾಲನೆ ನೀಡಲಾಗಿದೆ.

ಸಾಮಾನ್ಯವಾಗಿ ಹಿಂದೂ ಧರ್ಮದ ಬಹುತೇಕ ಹಬ್ಬಗಳಲ್ಲಿ ಭಕ್ತರು ದೇವರ ದರ್ಶನ ಪಡೆಯಲು ದೇವಾಲಯಗಳ ಒಳಗೆ ಹೋಗಬೇಕಾಗುತ್ತದೆ. ಆದರೆ, ಪುರಿ ರಥಯಾತ್ರೆಯ ವೈಶಿಷ್ಟ್ಯವೇ ಬೇರೆ. ಇಲ್ಲಿ ಜಗನ್ನಾಥ ಸ್ವಾಮಿ, ಅಣ್ಣ ಬಲಭದ್ರ ಮತ್ತು ತಂಗಿ ಸುಭದ್ರಾ ದೇವಿಯೊಂದಿಗೆ ಸ್ವತಃ ತಾನೇ ದೇವಾಲಯದಿಂದ ಹೊರಬಂದು, ಜಾತಿ, ಮತ, ಧರ್ಮ ಅಥವಾ ಬಡವ-ಬಲ್ಲಿದ ಎಂಬ ಭೇದವಿಲ್ಲದೆ ರಸ್ತೆಯಲ್ಲಿ ನಿಂತಿರುವ ಪ್ರತಿಯೊಬ್ಬ ಭಕ್ತನಿಗೂ ದರ್ಶನ ನೀಡಿ ಆಶೀರ್ವದಿಸುತ್ತಾನೆ.

ಸನಾತನ ಸಂಪ್ರದಾಯದ ಪ್ರಕಾರ, ಜಗನ್ನಾಥ ಸ್ವಾಮಿಯು ತನ್ನ ಒಡಹುಟ್ಟಿದವರೊಂದಿಗೆ ಜಗನ್ನಾಥ ದೇವಸ್ಥಾನದಿಂದ ಹೊರಟು, ಸುಮಾರು 3 ಕಿಲೋಮೀಟರ್ ದೂರದಲ್ಲಿರುವ ತನ್ನ ಸೋದರತ್ತೆಯ ಮನೆ ಎಂದು ನಂಬಲಾದ ‘ಗುಂಡಿಚಾ ದೇವಸ್ಥಾನ’ಕ್ಕೆ ವಾರ್ಷಿಕ ಪ್ರಯಾಣ ಬೆಳೆಸುತ್ತಾನೆ. ಈ ಒಂಬತ್ತು ದಿನಗಳ ಕಾಲ ದೇವತೆಗಳು ಗುಂಡಿಚಾ ಮಂದಿರದಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ಜಗತ್ತಿನ ಸೃಷ್ಟಿಕರ್ತನಾದ ಜಗನ್ನಾಥನ ಮುಂದೆ ರಾಜನಾಗಲಿ ಅಥವಾ ಸಾಮಾನ್ಯ ಪ್ರಜೆಯಾಗಲಿ ಎಲ್ಲರೂ ಸಮಾನರು, ಭಗವಂತನಿಗೆ ಎಲ್ಲರೂ ಸೇವಕರು ಎಂಬ ಪರಮೋಚ್ಚ ಸಮಾನತೆಯ ಸಂದೇಶವನ್ನು ಈ ಆಚರಣೆ ಸಾರುತ್ತದೆ. ಒಡಿಶಾ ಸರ್ಕಾರ ಹಾಗೂ ಸ್ಥಳೀಯ ಪೊಲೀಸರು ಲಕ್ಷಾಂತರ ಭಕ್ತರ ಸೌಕರ್ಯಕ್ಕಾಗಿ ಇಡೀ ಪುರಿ ನಗರದಾದ್ಯಂತ ವಾಹನ ಸಂಚಾರ ವ್ಯವಸ್ಥೆ ಮತ್ತು ಪ್ರವಾಸೋದ್ಯಮ ಸೌಲಭ್ಯಗಳನ್ನು

The post ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ ! appeared first on Good News 24x7.

]]>
ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು: ದೀಪಾವಳಿ ಹಬ್ಬದ ಮಹತ್ವ https://www.goodnews24x7.com/happy-diwali-the-festival-of-lights-importance-of-diwali/ Mon, 20 Oct 2025 08:34:42 +0000 https://www.goodnews24x7.com/?p=7784 ದೀಪಾವಳಿ ಮತ್ತು ಲಕ್ಷ್ಮಿ ಪೂಜೆ ದೀಪಾವಳಿ ಸನಾತನ ಧರ್ಮದ ಎರಡು ಮಹಾನ್ ಹಬ್ಬಗಳಲ್ಲಿ ಒಂದಾಗಿದೆ ಮತ್ತು ಈ ಹಬ್ಬವು ವಿಶೇಷ ಮಹತ್ವವನ್ನು ಹೊಂದಿದೆ. ಇದು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯನ್ನು ಮಾತ್ರವಲ್ಲದೆ, ಅಕಾಲಿಕ ಮರಣವನ್ನು ದೂರವಿಡಲು ಆರೋಗ್ಯದ ದೇವರು ಕುಬೇರ ಮತ್ತು…

The post ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು: ದೀಪಾವಳಿ ಹಬ್ಬದ ಮಹತ್ವ appeared first on Good News 24x7.

]]>

ದೀಪಾವಳಿ ಮತ್ತು ಲಕ್ಷ್ಮಿ ಪೂಜೆ
ದೀಪಾವಳಿ ಸನಾತನ ಧರ್ಮದ ಎರಡು ಮಹಾನ್ ಹಬ್ಬಗಳಲ್ಲಿ ಒಂದಾಗಿದೆ ಮತ್ತು ಈ ಹಬ್ಬವು ವಿಶೇಷ ಮಹತ್ವವನ್ನು ಹೊಂದಿದೆ. ಇದು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯನ್ನು ಮಾತ್ರವಲ್ಲದೆ, ಅಕಾಲಿಕ ಮರಣವನ್ನು ದೂರವಿಡಲು ಆರೋಗ್ಯದ ದೇವರು ಕುಬೇರ ಮತ್ತು ಧನ್ವಂತರಿಯನ್ನು ಸಹ ಪೂಜಿಸುವ ಹಬ್ಬವಾಗಿದೆ. ದೀಪಾವಳಿಯನ್ನು ಮೊದಲು ಯಾವಾಗ ಮತ್ತು ಏಕೆ ಆಚರಿಸಲಾಯಿತು, ಮತ್ತು ಅದಕ್ಕೆ ಧರ್ಮಗ್ರಂಥದ ಪುರಾವೆಗಳು ಯಾವುವು ಎಂಬುದು ನಿಮ್ಮ ಮನಸ್ಸಿನಲ್ಲಿ ಉದ್ಭವಿಸಬಹುದಾದ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಯಾವುದೇ ನಿರ್ದಿಷ್ಟ ಉತ್ತರವಿಲ್ಲದಿದ್ದರೂ, ಸ್ಕಂದ ಪುರಾಣ ಮತ್ತು ಪದ್ಮ ಪುರಾಣದಲ್ಲಿ ದೀಪಾವಳಿ ಹಬ್ಬದ ಬಗ್ಗೆ ಸಾಕಷ್ಟು ಮಾಹಿತಿಗಳಿವೆ. ಶ್ರೀಮದ್ ಭಾಗವತ ಮತ್ತು ಮನು ಸ್ಮೃತಿಯಲ್ಲಿಯೂ ಕೆಲವು ಪುರಾವೆಗಳನ್ನು ಕಾಣಬಹುದು. ಆದಾಗ್ಯೂ, ಈ ಪುಟಗಳಲ್ಲಿ ದೀಪಾವಳಿಯ ಮಹತ್ವ, ಅದನ್ನು ಆಚರಿಸುವ ವಿಧಾನಗಳು ಮತ್ತು ಅದರ ಪ್ರಯೋಜನಗಳನ್ನು ಮಾತ್ರ ಉಲ್ಲೇಖಿಸುತ್ತವೆ.

ಈ ಹಬ್ಬದ ಇತಿಹಾಸದ ಬಗ್ಗೆ ಹೇಳುವುದಾದರೆ, ದೀಪಾವಳಿಯನ್ನು ಆಚರಿಸುವ ಬಗ್ಗೆ ಮೊದಲ ಉಲ್ಲೇಖವು ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣದಲ್ಲಿ ಕಂಡುಬರುತ್ತದೆ. ಅದರಲ್ಲಿ, ಮಹರ್ಷಿ ವಾಲ್ಮೀಕಿ , ಭಗವಾನ್ ಶ್ರೀರಾಮನು ಲಂಕೆಯನ್ನು ವಶಪಡಿಸಿಕೊಂಡ ನಂತರ, ಕಾರ್ತಿಕ ಮಾಸದ ಅಮಾವಾಸ್ಯೆಯಂದು ಅಯೋಧ್ಯೆಗೆ ಹಿಂತಿರುಗುತ್ತಿದ್ದಾನೆ ಎಂದು ಬರೆದಿದ್ದಾರೆ. ಅಯೋಧ್ಯೆಗೆ ಬರುವ ಮೊದಲು, ಅವನು ಹನುಮಂತನ ಮೂಲಕ ಅಯೋಧ್ಯೆಯಲ್ಲಿರುವ ತನ್ನ ಕಿರಿಯ ಸಹೋದರ ಭರತನಿಗೆ ಸಂದೇಶವನ್ನು ಕಳುಹಿಸಿದನು. ಭರತನು ಈ ಮಾಹಿತಿಯನ್ನು ಪಡೆದ ತಕ್ಷಣ, ಅವನು ತಕ್ಷಣವೇ ಇಡೀ ಅಯೋಧ್ಯಾ ನಗರವನ್ನು ವಧುವಿನಂತೆ ಅಲಂಕರಿಸಲು, ಕಮಾನುಗಳನ್ನು ಅಲಂಕರಿಸಲು ಮತ್ತು ಇಡೀ ರಾಜ್ಯವನ್ನು ದೀಪಗಳಿಂದ ಬೆಳಗಿಸಲು ಆದೇಶಿಸಿದನು. ಭಗವಾನ್ ರಾಮನ ಆಗಮನದಿಂದ ಅಯೋಧ್ಯೆಯ ಜನರು ತುಂಬಾ ಸಂತೋಷಪಟ್ಟರು, ಅವರು ಭರತನು ಕೇಳಿದ್ದಕ್ಕಿಂತ ಹೆಚ್ಚಿನದನ್ನು ಮಾಡಿದರು.

ದೀಪಾವಳಿಯ ದಿನದಂದು ಧನ್ವಂತರಿ ಮತ್ತು ಲಕ್ಷ್ಮಿ ದೇವಿಯು ಸಮುದ್ರದಿಂದ ಉದ್ಭವಿಸಿದರು ಎಂಬ ಪ್ರತೀತಿ
ವಾಲ್ಮೀಕಿ ರಾಮಾಯಣದ ಪ್ರಕಾರ, ಜನರು ತಮ್ಮ ಅಂಗಳಗಳನ್ನು ಸಹ ಸ್ವಚ್ಛಗೊಳಿಸುತ್ತಿದ್ದರು. ಅದೇ ರೀತಿ, ಸ್ಕಂದ ಪುರಾಣ ಮತ್ತು ಶಿವ ಪುರಾಣವು ಸಮುದ್ರ ಮಂಥನದ ಬಗ್ಗೆ ಉಲ್ಲೇಖಿಸುತ್ತದೆ. ಎರಡೂ ಗ್ರಂಥಗಳು ಸಮುದ್ರ ಮಂಥನದ ಪರಿಣಾಮವಾಗಿ ರತ್ನಗಳು ಹೊರಹೊಮ್ಮಿದವು ಎಂದು ವಿವರಿಸುತ್ತವೆ. ಭಗವಾನ್ ಧನ್ವಂತರಿ ಕೊನೆಯದಾಗಿ ಅಮೃತದ ಪಾತ್ರೆಯನ್ನು ಕೈಯಲ್ಲಿ ಹಿಡಿದುಕೊಂಡು ಹೊರಹೊಮ್ಮಿದರು. ಅವರನ್ನು ಆರೋಗ್ಯದ ದೇವರು ಎಂದು ಪರಿಗಣಿಸಲಾಗುತ್ತದೆ. ಈ ಸಾಗರ ಮಂಥನದಿಂದ ಲಕ್ಷ್ಮಿ ದೇವಿಯೂ ಹೊರಹೊಮ್ಮಿದಳು. ಆದಾಗ್ಯೂ, ದೇವತೆಗಳು ಮತ್ತು ರಾಕ್ಷಸರು ಇಬ್ಬರೂ ಅವಳನ್ನು ಪಡೆಯಲು ಹೋರಾಡಲು ಪ್ರಾರಂಭಿಸಿದಾಗ, ಲಕ್ಷ್ಮಿ ದೇವಿಯು ಭಗವಾನ್ ನಾರಾಯಣನನ್ನು ಆರಿಸಿಕೊಂಡಳು. ಅದಕ್ಕಾಗಿಯೇ ದೀಪಾವಳಿಗೆ ಒಂದು ದಿನ ಮೊದಲು ಧನ್ವಂತರಿಯನ್ನು ಪೂಜಿಸಲಾಗುತ್ತದೆ, ನಂತರ ಲಕ್ಷ್ಮಿ ದೇವಿಯ ಪೂಜೆ ಮಾಡಲಾಗುತ್ತದೆ.

ದೀಪಾವಳಿಯ ದಿನದಂದು ಬಲಿ ಚಕ್ರವರ್ತಿಯು ಭೂಗತ ಲೋಕವನ್ನು ತಲುಪಿದನು.
ಪುರಾಣದಲ್ಲಿ ಒಂದು ಕಥೆಯಿದೆ, ಬಲಿ ಚಕ್ರವರ್ತಿಯುಯ ಭಕ್ತಿ ಮತ್ತು ನಂಬಿಕೆಯಿಂದ ಪ್ರಭಾವಿತನಾದ ಭಗವಾನ್ ನಾರಾಯಣನು ಅವನಿಗೆ ಸುತಳ ಲೋಕದ ರಾಜ್ಯವನ್ನು ನೀಡಿದನು. ಭಗವಂತನ ಆದೇಶದ ಮೇರೆಗೆ, ಬಲಿ ಚಕ್ರವರ್ತಿಯು , ದೀಪಾವಳಿಯ ದಿನದಂದು ಸುತಳ ಲೋಕಕ್ಕೆ ಹೋಗಿ ಅಲ್ಲಿ ದೀಪೋತ್ಸವವನ್ನು ಆಚರಿಸಿದನು. ಸ್ಕಂದ ಪುರಾಣ, ಪದ್ಮ ಪುರಾಣ ಮತ್ತು ಭವಿಷ್ಯ ಪುರಾಣಗಳಲ್ಲಿ, ದೀಪೋತ್ಸವದ ಭಾಗವಾಗಿ ದೀಪಗಳನ್ನು ಬೆಳಗಿಸುವ ಮತ್ತು ವಿವಿಧ ರೀತಿಯ ದೀಪವೃಕ್ಷಗಳನ್ನು ಸಿದ್ಧಪಡಿಸುವ ಉಲ್ಲೇಖಗಳಿವೆ. ದೀಪೋತ್ಸವದ ಸಂದರ್ಭವು ಕಾರ್ತಿಕ ಮಾಸದ ಶ್ರೇಷ್ಠತೆಯ ಅಡಿಯಲ್ಲಿ ಸ್ಕಂದ ಪುರಾಣದ ವೈಷ್ಣವ ವಿಭಾಗದಲ್ಲಿ ಕಂಡುಬರುತ್ತದೆ. ಅದೇ ರೀತಿ, ಭವಿಷ್ಯ ಪುರಾಣದ ಉತ್ತರಪರ್ವದ 140 ನೇ ಅಧ್ಯಾಯ ಮತ್ತು ಪದ್ಮ ಪುರಾಣದ ಉತ್ತರಖಂಡದ 122 ನೇ ಅಧ್ಯಾಯವು ದೀಪೋತ್ಸವವನ್ನು ಆಧರಿಸಿದೆ. ಇದು ಎಲ್ಲರ ಕಲ್ಯಾಣಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ.

ದೀಪಾವಳಿ ಹಬ್ಬದ ಉದ್ದೇಶ
ಹಬ್ಬಗಳ ನಾಡು ಭಾರತ, ಯಾವಾಗಲೂ ಕೃಷಿ ಪ್ರಧಾನ ರಾಷ್ಟ್ರವಾಗಿದೆ. ಇಲ್ಲಿನ ಪ್ರತಿಯೊಂದು ಹಬ್ಬವೂ ಕೃಷಿ ಮತ್ತು ಕೃಷಿಗೆ ಸಂಬಂಧಿಸಿದೆ. ದೀಪಾವಳಿಯ ವಿಷಯದಲ್ಲಿ, ಖಾರಿಫ್ ಬೆಳೆ ಸಾಮಾನ್ಯವಾಗಿ ಆ ಸಮಯಕ್ಕೆ ಕೊಯ್ಲು ಮಾಡಿ ರೈತರ ಮನೆಗಳಿಗೆ ತಲುಪುತ್ತದೆ. ಇದು ರೈತ ಕುಟುಂಬಗಳಿಗೆ ಸಂತೋಷವನ್ನು ತರುತ್ತದೆ. ಈ ಸಮಯದಲ್ಲಿ ಹೊಸ ಸುಗ್ಗಿಯ ಸಿದ್ಧತೆಗಳು ಸಹ ನಡೆಯುತ್ತಿವೆ. ಸನಾತನ ಧರ್ಮದಲ್ಲಿ, ಆಚರಣೆ ಮತ್ತು ಪೂಜೆ ಇಲ್ಲದೆ ಯಾವುದೇ ಹೊಸ ಕೆಲಸವನ್ನು ಕೈಗೊಳ್ಳುವುದಿಲ್ಲವಾದ್ದರಿಂದ, ಜನರು ಆ ಸಮಯದಲ್ಲಿ ದೀಪಾವಳಿಯನ್ನು ಆಚರಿಸುತ್ತಾರೆ. ದೀಪಾವಳಿ ಹಬ್ಬದ ಮತ್ತೊಂದು ಪ್ರಾಯೋಗಿಕ ಅಂಶವೆಂದರೆ ಮಳೆ ಮುಗಿದ ನಂತರ ಸೊಳ್ಳೆಗಳು ಮತ್ತು ಇತರ ಕೀಟಗಳು ಹೆಚ್ಚಾಗುತ್ತವೆ. ಜನರು ತಮ್ಮ ಮನೆಗಳನ್ನು ದೀಪಗಳಿಂದ ಅಲಂಕರಿಸಿದಾಗ, ಈ ಕೀಟಗಳು ಅವುಗಳತ್ತ ಆಕರ್ಷಿತವಾಗುತ್ತವೆ ಮತ್ತು ಸುಟ್ಟು ಸಾಯುತ್ತವೆ.

The post ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು: ದೀಪಾವಳಿ ಹಬ್ಬದ ಮಹತ್ವ appeared first on Good News 24x7.

]]>
ಗಣೇಶನ ಕೆಲವು ಪ್ರಮುಖ ಭಂಗಿಗಳ ಅರ್ಥ ಗೊತ್ತಾ..? https://www.goodnews24x7.com/do-you-know-the-meaning-of-some-important-poses-of-ganesha/ Wed, 27 Aug 2025 09:25:24 +0000 https://www.goodnews24x7.com/?p=6798   ಪ್ರತಿ ವರ್ಷ ದೇಶದಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು ಬಹಳ ಉತ್ಸಾಹ ಮತ್ತು ಭಕ್ತಿಯಿಂದ ಆಚರಿಸಲಾಗುತ್ತದೆ. ಈ ಬಾರಿ ಗಣೇಶ ಚತುರ್ಥಿ ಬುಧವಾರ, ಆಗಸ್ಟ್ 27 ಅಂದರೆ ಇಂದಿನಿಂದ ಪ್ರಾರಂಭವಾಗುತ್ತಿದೆ. ಕೆಲವೊಂದು ಜಾಗದಲ್ಲಿ ಒಂದುದಿನ, ಮೂರು ದಿನ ಅಥವಾ 10 ದಿನಗಳ…

The post ಗಣೇಶನ ಕೆಲವು ಪ್ರಮುಖ ಭಂಗಿಗಳ ಅರ್ಥ ಗೊತ್ತಾ..? appeared first on Good News 24x7.

]]>

 

ಪ್ರತಿ ವರ್ಷ ದೇಶದಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು ಬಹಳ ಉತ್ಸಾಹ ಮತ್ತು ಭಕ್ತಿಯಿಂದ ಆಚರಿಸಲಾಗುತ್ತದೆ. ಈ ಬಾರಿ ಗಣೇಶ ಚತುರ್ಥಿ ಬುಧವಾರ, ಆಗಸ್ಟ್ 27 ಅಂದರೆ ಇಂದಿನಿಂದ ಪ್ರಾರಂಭವಾಗುತ್ತಿದೆ. ಕೆಲವೊಂದು ಜಾಗದಲ್ಲಿ ಒಂದುದಿನ, ಮೂರು ದಿನ ಅಥವಾ 10 ದಿನಗಳ ಕಾಲ ಅದ್ಧೂರಿಯಾಗಿ ನಡೆಯುತ್ತದೆ. ಗಣೇಶನನ್ನು ವಿಘ್ನಹರ್ತ ಮತ್ತು ಮಂಗಳಕರ್ತ ಎಂದು ಕರೆಯಲಾಗುತ್ತದೆ. ಗಣೇಶನ ವಿಗ್ರಹಗಳಲ್ಲಿ ಕಂಡುಬರುವ ಪ್ರತಿಯೊಂದು ಭಂಗಿಯು ವಿಭಿನ್ನ ಅರ್ಥವನ್ನು ಹೊಂದಿದೆ, ಜೀವನದ ಆಳವಾದ ಸಂದೇಶಗಳನ್ನು ನೀಡುತ್ತದೆ.

ಕುಳಿತ ಗಣೇಶ (ಧ್ಯಾನ ಮತ್ತು ನಿಶ್ಚಲತೆ):
ಕುಳಿತಿರುವ ಗಣೇಶ ಎಂದರೆ ಮನಸ್ಸು ಮತ್ತು ಜೀವನದಲ್ಲಿ ಸ್ಥಿರತೆ ಎಂದರ್ಥ. ಕುಳಿತಿರುವ ಗಣಪತಿಯು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುವುದರಿಂದ ಇದನ್ನು “ಲಕ್ಷ್ಮಿ ಗಣೇಶ” ಎಂದೂ ಕರೆಯುತ್ತಾರೆ. ಗಣೇಶನ ಈ ಭಂಗಿಯು ಮನೆಯಲ್ಲಿ ಇಡಲು ಅತ್ಯಂತ ಮಂಗಳಕರವಾಗಿದೆ.

ನಿಂತ ಗಣೇಶ (ಪ್ರಗತಿ ಮತ್ತು ಸಾಧನೆ):
ನಿಂತಿರುವ ಗಣೇಶನು ಉತ್ಸಾಹ ಮತ್ತು ಪ್ರಗತಿಯ ಸಂಕೇತ. ಗಣೇಶನ ಈ ಭಂಗಿಯು ವ್ಯವಹಾರ ಮತ್ತು ಹೊಸ ಕೆಲಸವನ್ನು ಪ್ರಾರಂಭಿಸಲು ಶುಭವೆಂದು ಪರಿಗಣಿಸಲಾಗಿದೆ. ಈ ಭಂಗಿಯಲ್ಲಿರುವ ಗಣೇಶನ ಚಿತ್ರವನ್ನು ಕಚೇರಿಯಲ್ಲಿ ಇಡಬೇಕು.

ಮಲಗಿರುವ ಗಣೇಶ (ವಿಶ್ರಾಂತಿ ಮತ್ತು ತೃಪ್ತಿ):
ಗಣೇಶನ ಮಲಗಿರುವ ಭಂಗಿಯು ಜೀವನದಲ್ಲಿ ತೃಪ್ತಿ ಮತ್ತು ಮಾನಸಿಕ ಶಾಂತಿಯ ಸಂದೇಶವನ್ನು ನೀಡುತ್ತದೆ. ಕಠಿಣ ಪರಿಶ್ರಮದ ನಂತರ ವಿಶ್ರಾಂತಿಯೂ ಅಷ್ಟೇ ಮುಖ್ಯ ಎಂದು ಈ ಭಂಗಿಯು ಕಲಿಸುತ್ತದೆ.

ನೃತ್ಯ ಗಣೇಶ (ಸಂತೋಷ ಮತ್ತು ಶಕ್ತಿ):
ನಟರಾಜ ರೂಪದಲ್ಲಿ ನೃತ್ಯ ಮಾಡುವ ಗಣೇಶನು ಸಂತೋಷ ಮತ್ತು ಸಕಾರಾತ್ಮಕ ಶಕ್ತಿಯ ಸಂಕೇತವಾಗಿದೆ. ಈ ರೂಪವು ಜೀವನದಲ್ಲಿ ಸಂತೋಷ ಮತ್ತು ಆಚರಣೆಯ ಮಹತ್ವವನ್ನು ಸೂಚಿಸುತ್ತದೆ. ನಿಮ್ಮ ಮನೆ ಅಥವಾ ಕಚೇರಿಯಲ್ಲಿ ಈ ಭಂಗಿಯಲ್ಲಿ ಗಣೇಶನ ಚಿತ್ರವನ್ನು ಹಾಕಬಹುದು.

ಬಾಲ ಗಣೇಶ (ಶುದ್ಧತೆ ಮತ್ತು ಮುಗ್ಧತೆ):
ಬಾಲರೂಪದಲ್ಲಿರುವ ಗಣಪತಿಯು ಮುಗ್ಧತೆ, ಸರಳತೆ ಮತ್ತು ಶುದ್ಧ ಭಕ್ತಿಯ ಸಂಕೇತ. ಮಕ್ಕಳು ಈ ರೂಪದೊಂದಿಗೆ ಹೆಚ್ಚು ಸಂಪರ್ಕ ಹೊಂದಿದ್ದಾರೆಂದು ಭಾವಿಸುತ್ತಾರೆ. ಈ ಭಂಗಿಯಲ್ಲಿರುವ ಗಣೇಶನ ಚಿತ್ರವನ್ನು ಮನೆಯಲ್ಲಿ ಮಕ್ಕಳ ಕೋಣೆಯಲ್ಲಿ ಇಡಬೇಕು.

ಇಲಿಯ ಮೇಲೆ ಕುಳಿತ ಗಣೇಶ (ವಿನಮ್ರತೆ ಮತ್ತು ನಿಯಂತ್ರಣ):
ಗಣಪತಿಯ ವಾಹನ ಇಲಿ. ಗಣೇಶ ಇಲಿಯ ಮೇಲೆ ಸವಾರಿ ಮಾಡುವ ಭಂಗಿಯು ದೊಡ್ಡವರು ಅಥವಾ ಸಣ್ಣವರು ಎಲ್ಲರೂ ಮುಖ್ಯ ಎಂಬುದನ್ನು ಸೂಚಿಸುತ್ತದೆ. ಅಲ್ಲದೆ, ಈ ಭಂಗಿಯು ಆಸೆಗಳ ಮೇಲಿನ ನಿಯಂತ್ರಣದ ಸಂಕೇತವಾಗಿದೆ.

ಬಲಭಾಗದಲ್ಲಿ ಸೊಂಡಿಲು ಹೊಂದಿರುವ ಗಣೇಶ:
ಬಲ ಸೊಂಡಿಲು ಹೊಂದಿರುವ ಗಣೇಶನನ್ನು “ಸಿದ್ಧಿ ವಿನಾಯಕ” ಎಂದು ಕರೆಯಲಾಗುತ್ತದೆ. ಈ ರೂಪವನ್ನು ಬಹಳ ಜಾಗೃತ ಎಂದು ಪರಿಗಣಿಸಲಾಗುತ್ತದೆ ಮತ್ತು ಕಟ್ಟುನಿಟ್ಟಾದ ನಿಯಮಗಳೊಂದಿಗೆ ಪೂಜಿಸಬೇಕು. ಇದು ಯಶಸ್ಸು ಮತ್ತು ಕೆಲಸದ ಸಾಧನೆಯ ಸಂಕೇತವಾಗಿದೆ.

ಎಡಭಾಗದಲ್ಲಿ ಸೊಂಡಿಲು ಹೊಂದಿರುವ ಗಣೇಶ:
ಮನೆಯಲ್ಲಿ ಪ್ರತಿಷ್ಠಾಪಿಸಲು ಎಡಮುರಿ ಗಣೇಶ ಅತ್ಯಂತ ಸಾಮಾನ್ಯ ಮತ್ತು ಸೂಕ್ತವಾದ ರೂಪವಾಗಿದೆ. ಎಡಗಡೆಗೆ ಸೊಂಡಿಲು ಇರುವ ಗಣೇಶನ ಸೌಮ್ಯತೆ, ಶಾಂತಿ, ಸಂತೋಷ ಮತ್ತು ಸಮೃದ್ಧಿಯನ್ನು ಆಶೀರ್ವದಿಸುತ್ತಾನೆ ಎಂಬ ನಂಬಿಕೆಯಿದೆ.

ಜ್ಞಾನ ಮುದ್ರೆ (ಬುದ್ಧಿವಂತಿಕೆ ಮತ್ತು ವಿವೇಚನೆ):
ಗಣೇಶನ ಹೆಬ್ಬೆರಳು ಮತ್ತು ತೋರುಬೆರಳನ್ನು ಸೇರಿಸಿ ಮಾಡಿದ ಮುದ್ರೆಯನ್ನು ಧ್ಯಾನ, ಸಮತೋಲನ ಮತ್ತು ವಿವೇಚನೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ.

The post ಗಣೇಶನ ಕೆಲವು ಪ್ರಮುಖ ಭಂಗಿಗಳ ಅರ್ಥ ಗೊತ್ತಾ..? appeared first on Good News 24x7.

]]>
ಸುಮುಖನ ವಿಸರ್ಜನೆಗೆ ಬೆಂಗಳೂರಲ್ಲಿ ಖಡಕ್ ರೂಲ್ಸ್.. ! https://www.goodnews24x7.com/strict-rules-in-bengaluru-for-sumukha-immersion/ Wed, 27 Aug 2025 06:10:15 +0000 https://www.goodnews24x7.com/?p=6781 ಇವತ್ತು ವಿಘ್ನವಿನಾಶಕ, ಮೂಷಿಕ ವಾಹನ, ಮೋದಕ ಪ್ರಿಯ, ವಿನಾಯಕನ ಹಬ್ಬ. ಗಣೇಶನ ಕೂರಿಸಿ ಸಂಭ್ರಮಿಸುವವರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಖಡಕ್​ ನಿಯಮಗಳನ್ನ ಕೂಡ ಜಾರಿ ಮಾಡಿದೆ. ಅದ್ರಲ್ಲೂ ಪರಿಸರ ಸ್ನೇಹಿ ಗಣಪನ ಆಚರಣೆಗೆ ಕರೆ ಕೊಟ್ಟಿರುವ ಬಿಬಿಎಂಪಿ ನೀವು ಕೂರಿಸುವ…

The post ಸುಮುಖನ ವಿಸರ್ಜನೆಗೆ ಬೆಂಗಳೂರಲ್ಲಿ ಖಡಕ್ ರೂಲ್ಸ್.. ! appeared first on Good News 24x7.

]]>

ಇವತ್ತು ವಿಘ್ನವಿನಾಶಕ, ಮೂಷಿಕ ವಾಹನ, ಮೋದಕ ಪ್ರಿಯ, ವಿನಾಯಕನ ಹಬ್ಬ. ಗಣೇಶನ ಕೂರಿಸಿ ಸಂಭ್ರಮಿಸುವವರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಖಡಕ್​ ನಿಯಮಗಳನ್ನ ಕೂಡ ಜಾರಿ ಮಾಡಿದೆ. ಅದ್ರಲ್ಲೂ ಪರಿಸರ ಸ್ನೇಹಿ ಗಣಪನ ಆಚರಣೆಗೆ ಕರೆ ಕೊಟ್ಟಿರುವ ಬಿಬಿಎಂಪಿ ನೀವು ಕೂರಿಸುವ ಗಣೇಶನನ್ನ ವಿಸರ್ಜನೆ ಮಾಡಿಸೋಕೆ ತಯಾರಾಗಿದೆ.
41 ಕೆರೆ-ಕಲ್ಯಾಣಿ ಹಾಗೂ 489 ಸಂಚಾರಿ ವಾಹನಗಳ ಸಿದ್ಧತೆ
ಗಣೇಶ ಮೂರ್ತಿ ವಿಸರ್ಜನೆಗಾಗಿ ಈಗಾಗಲೇ ಬಿಬಿಎಂಪಿ ಸಕಲ ತಯಾರಿ ಮಾಡಿಕೊಂಡಿದೆ. ಹೀಗಾಗಿ ಕೆರೆ, ಕಲ್ಯಾಣಿ, ಸಂಚಾರಿ ವಾಹನಗಳ ವ್ಯವಸ್ಥೆಯನ್ನ ಮಾಡಿಕೊಳ್ಳುತ್ತಿದೆ. ಯಡಿಯೂರು ಕೆರೆ ಅಂತೂ ಮದುವಣಗಿತ್ತಿ ಹಾಗೇ ಜಗಮಗಿಸುವ ಲೈಟ್ಸ್​ಗಳಿಂದ ಅಲಂಕೃತಗೊಂಡಿದೆ. ಇನ್ನ ಸ್ಯಾಂಕಿ ಟ್ಯಾಂಕ್, ಹಲಸೂರು ಕೆರೆ ಸೇರಿದಂತೆ ಒಟ್ಟು 41 ಕೆರೆಗಳು ಹಾಗೂ ತಾತ್ಕಾಲಿಕ ಕಲ್ಯಾಣಿಗಳನ್ನ ಗಣೇಶನ ವಿಸರ್ಜನೆಗೆ ವ್ಯವಸ್ಥೆಯನ್ನ ಮಾಡಿಕೊಳ್ಳಲಾಗಿದೆ.

ಸುಮುಖನ ವಿಸರ್ಜನೆಗೆ ತಯಾರಿ
ಒಟ್ಟು 489 ಸಂಚಾರಿ ವಾಹನ ಅಂದ್ರೆ ಮೊಬೈಲ್ ಟ್ಯಾಂಕ್‌ಗಳ ವ್ಯವಸ್ಥೆ
ಪ್ರತಿಷ್ಠಾಪನೆಗೆ ಅನುಮತಿ ಪಡೆಯಲು 75 ಏಕಗವಾಕ್ಷಿ ಕೇಂದ್ರಗಳ ವ್ಯವಸ್ಥೆ
ಹೇರೋಹಳ್ಳಿ ಕೆರೆಯ ಕಲ್ಯಾಣಿಯಲ್ಲಿಲ್ಲ ವಿನಾಯಕನ ವಿಸರ್ಜನೆಗೆ ಅವಕಾಶ
ಮೇಲ್ವಿಚಾರಣೆಗಾಗಿ ಬಿಬಿಎಂಪಿಯಿಂದ ನೋಡಲ್ ಅಧಿಕಾರಿಗಳ ನೇಮಕ
ನಾಗರಿಕರ ಮಾಹಿತಿಗಾಗಿ ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಹೆಚ್ಚಿನ ವಿವರ ಲಭ್ಯ
ಕ್ಯೂಆರ್ ಕೋಡ್ ಸ್ಕ್ಯಾನ್ ಮೂಲಕವೂ ಮಾಹಿತಿ ಪಡೆಯಲು ಅವಕಾಶ
2025ರ ಆಗಸ್ಟ್ 27 ಅಂದ್ರೆ ಇವತ್ತಿನಿಂದ ಸೆಪ್ಟೆಂಬರ್ 17ರವರೆಗೆ, ಸಾರ್ವಜನಿಕರು ಪರಿಸರ ಸ್ನೇಹಿ ಹಾಗೂ ಮಣ್ಣಿನಿಂದ ತಯಾರಿಸಲಾದ ಗಣೇಶ ಮೂರ್ತಿಗಳನ್ನು ಇಲ್ಲಿ ವಿಸರ್ಜನೆ ಮಾಡಿಕೊಳ್ಳಬಹುದು. ಒಟ್ನಲ್ಲಿ ಗಣೇಶ ಹಬ್ಬಕ್ಕೆ ಬೇಕಾದ ಎಲ್ಲಾ ತಯಾರಿಗಳು ಬಿರುಸಿನಿಂದ ಸಾಗುತಿದ್ದು. ಇನ್ನೇನೇ ಇದ್ರೂ ಗಣೇಶನನ್ನ ಕೂರಿಸಿ ಹಬ್ಬ ಆಚರಿಸೋದೊಂದೇ ಬಾಕಿ.

The post ಸುಮುಖನ ವಿಸರ್ಜನೆಗೆ ಬೆಂಗಳೂರಲ್ಲಿ ಖಡಕ್ ರೂಲ್ಸ್.. ! appeared first on Good News 24x7.

]]>
ನಾಡಿನೆಲ್ಲೆಡೆ ಗೌರಿ ಗಣೇಶ ಹಬ್ಬದ ಸಂಭ್ರಮ.. ! https://www.goodnews24x7.com/gauri-ganesh-festival-is-celebrated-all-over-the-country/ Wed, 27 Aug 2025 04:38:44 +0000 https://www.goodnews24x7.com/?p=6774 ಇಂದು ನಾಡಿನೆಲ್ಲೆಡೆ ಗೌರಿಗಣೇಶ ಹಬ್ಬವನ್ನು ಭಕ್ತಿಯಿಂದ ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದೆ. ಎಲ್ಲರ ಮನೆಮನೆಗಳಲ್ಲಿ ವಿನಾಯಕನ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಗಣಪತಿಯ ಆರಾಧನೆ ಶ್ರೆದ್ಧೆ, ಭಕ್ತಿಯಿಂದ ನಡೆಯುತ್ತಿದೆ. ಗಣೇಶನ ಮೂರ್ತಿ ನೋಡಿ ಫುಲ್ ಖುಷಿಯಲ್ಲಿರುವ ಮಕ್ಕಳು ಹೊಸ ಉಡುಪುಗಳಲ್ಲಿ ಕಂಗೊಳಿಸುತ್ತಿದ್ದಾರೆ. ಉದ್ಯಾನ ನಗರಿಯಲ್ಲೂ…

The post ನಾಡಿನೆಲ್ಲೆಡೆ ಗೌರಿ ಗಣೇಶ ಹಬ್ಬದ ಸಂಭ್ರಮ.. ! appeared first on Good News 24x7.

]]>

ಇಂದು ನಾಡಿನೆಲ್ಲೆಡೆ ಗೌರಿಗಣೇಶ ಹಬ್ಬವನ್ನು ಭಕ್ತಿಯಿಂದ ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದೆ. ಎಲ್ಲರ ಮನೆಮನೆಗಳಲ್ಲಿ ವಿನಾಯಕನ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಗಣಪತಿಯ ಆರಾಧನೆ ಶ್ರೆದ್ಧೆ, ಭಕ್ತಿಯಿಂದ ನಡೆಯುತ್ತಿದೆ. ಗಣೇಶನ ಮೂರ್ತಿ ನೋಡಿ ಫುಲ್ ಖುಷಿಯಲ್ಲಿರುವ ಮಕ್ಕಳು ಹೊಸ ಉಡುಪುಗಳಲ್ಲಿ ಕಂಗೊಳಿಸುತ್ತಿದ್ದಾರೆ.

ಉದ್ಯಾನ ನಗರಿಯಲ್ಲೂ ಯಾವುದಕ್ಕೂ ಏನು ಕಡಿಮೆ ಇಲ್ಲದಂತೆ ಬೀದಿ ಬೀದಿಗಳಲ್ಲೂ ವಿಘ್ನ ನಿವಾರಕ, ವಿಘ್ನವಿನಾಶಕ, ಮೂಷಿಕ ವಾಹನ, ಮೋದಕ ಪ್ರಿಯ, ವಿನಾಯಕ, ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಇಂದೇ ಹಬ್ಬವಾಗಿದ್ದರಿಂದ ಬಹುತೇಕ ಕಡೆ ಹೆಚ್ಚು ಗಣಪತಿ ಮೂರ್ತಿಗಳನ್ನ ಯುವಕರು ಪ್ರತಿಷ್ಠಾಪನೆ ಮಾಡುತ್ತಾರೆ. ಬೆಂಗಳೂರಿನ ದೊಡ್ಡ ಗಣೇಶ ದೇಗುಲದಲ್ಲಿ ಹಬ್ಬರ ಸಡಗರ ಕಳೆಗಟ್ಟಿದೆ.

ದೊಡ್ಡ ಗಣೇಶ ದೇವಾಲಯದಲ್ಲಿ ಮುಂಜಾನೆಯಿಂದಲೇ ವಿವಿಧ ಪೂಜೆ ಪುನಸ್ಕಾರ, ಹೋಮ ನಡೆಯುತ್ತಿದ್ದು, ಗಣೇಶನ ದರ್ಶನಕ್ಕೆ ಭಕ್ತರು ಬೆಳಗ್ಗೆಯಿಂದಲೇ ಕ್ಯೂನಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ. ಭಕ್ತರಿಗೆ ಪ್ರಸಾದ ನೀಡಲಾಗುತ್ತಿದೆ. ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ರಾತ್ರಿಯಿಂದಲೇ ದೇವಾಲಯದಲ್ಲಿ ಪೂಜೆ ಸಂಬಂಧ ಕೆಲಸಗಳು, ದೇಗುಲದ ಅಲಂಕಾರ ಸೇರಿ ಎಲ್ಲವನ್ನು ಮಾಡಲಾಗಿತ್ತು.

ಇನ್ನು ಮಾರುಕಟ್ಟೆಗಳಲ್ಲಿ ಗಣೇಶನ ಮೂರ್ತಿ, ಹೂವು, ಹಣ್ಣುಗಳು ಮತ್ತು ಪೂಜಾ ಸಾಮಗ್ರಿಗಳನ್ನು ಖರೀದಿಸಲು ಜನಸಂದಣಿ ಹೆಚ್ಚಿದೆ, ನಗರಗಳಲ್ಲಿ ಸಂಚಾರ ದಟ್ಟಣೆಯೂ ಏರ್ಪಟ್ಟಿದೆ. ಕೆಲವೆಡೆ ಬೆಳಗಿನ ಜಾವಾ ತುಂತುರು ಮಳೆಯಾಗಿದ್ದು ಚಳಿ ಕೂಡ ಮೈಕೊರೆಯುತ್ತಿತ್ತು. ಹಬ್ಬವಾಗಿದ್ದರಿಂದ ಜನರು ಯಾವುದನ್ನೂ ಲೆಕ್ಕಿಸದೇ ವಿನಾಯಕನ ಪೂಜೆಗಳಲ್ಲಿ ತೊಡಗಿಕೊಳ್ಳುತ್ತಾರೆ.

The post ನಾಡಿನೆಲ್ಲೆಡೆ ಗೌರಿ ಗಣೇಶ ಹಬ್ಬದ ಸಂಭ್ರಮ.. ! appeared first on Good News 24x7.

]]>
ಆಗಸ್ಟ್ 28 ಮತ್ತು ಸೆಪ್ಟೆಂಬರ್ 6 ರಂದು ಮಾಂಸ ಹಾಗೂ ಮೊಟ್ಟೆ ಮಾರಾಟಕ್ಕೆ ನಿಷೇಧ: ರಾಜಸ್ಥಾನ ಸರ್ಕಾರದ ಆದೇಶ. https://www.goodnews24x7.com/ban-on-sale-of-meat-and-eggs-on-august-28-and-september-6-rajasthan-government-orders/ Tue, 26 Aug 2025 09:32:18 +0000 https://www.goodnews24x7.com/?p=6751 ನವದೆಹಲಿ: ಪರ್ಯುಷಣ ಹಬ್ಬ (ಆಗಸ್ಟ್ 28) ಮತ್ತು ಅನಂತ ಚತುರ್ದಶಿ (ಸೆಪ್ಟೆಂಬರ್ 6) ಹಿನ್ನೆಲೆಯಲ್ಲಿ, ರಾಜಸ್ಥಾನ ಸರ್ಕಾರವು ರಾಜ್ಯದಾದ್ಯಂತ ಮಾಂಸ ಹಾಗೂ ಮೊಟ್ಟೆ ಮಾರಾಟಕ್ಕೆ ಎರಡು ದಿನಗಳ ನಿಷೇಧವನ್ನು ಜಾರಿಗೆ ತಂದಿದೆ. ಸರ್ಕಾರ ಸೋಮವಾರ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದು,…

The post ಆಗಸ್ಟ್ 28 ಮತ್ತು ಸೆಪ್ಟೆಂಬರ್ 6 ರಂದು ಮಾಂಸ ಹಾಗೂ ಮೊಟ್ಟೆ ಮಾರಾಟಕ್ಕೆ ನಿಷೇಧ: ರಾಜಸ್ಥಾನ ಸರ್ಕಾರದ ಆದೇಶ. appeared first on Good News 24x7.

]]>

ನವದೆಹಲಿ: ಪರ್ಯುಷಣ ಹಬ್ಬ (ಆಗಸ್ಟ್ 28) ಮತ್ತು ಅನಂತ ಚತುರ್ದಶಿ (ಸೆಪ್ಟೆಂಬರ್ 6) ಹಿನ್ನೆಲೆಯಲ್ಲಿ, ರಾಜಸ್ಥಾನ ಸರ್ಕಾರವು ರಾಜ್ಯದಾದ್ಯಂತ ಮಾಂಸ ಹಾಗೂ ಮೊಟ್ಟೆ ಮಾರಾಟಕ್ಕೆ ಎರಡು ದಿನಗಳ ನಿಷೇಧವನ್ನು ಜಾರಿಗೆ ತಂದಿದೆ.

ಸರ್ಕಾರ ಸೋಮವಾರ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದು, ಮಟನ್ ಹಾಗೂ ಚಿಕನ್ ಅಂಗಡಿಗಳು ಕೂಡ ಈ ದಿನಗಳಲ್ಲಿ ಮುಚ್ಚಿರಲಿವೆ. ಈ ಬಾರಿ ಮೊದಲ ಬಾರಿಗೆ, ಈ ಎರಡು ದಿನಗಳಲ್ಲಿ ಮೊಟ್ಟೆಗಳ ಮಾರಾಟಕ್ಕೂ ನಿರ್ಬಂಧ ವಿಧಿಸಲಾಗಿದೆ. ಧಾರ್ಮಿಕ ಸಂಘಟನೆಗಳ ವಿನಂತಿಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರ ಈ ನಿರ್ಧಾರವು ಸಂಪೂರ್ಣ ರಾಜ್ಯಕ್ಕೆ ಅನ್ವಯವಾಗುವುದಾಗಿ ಸ್ಪಷ್ಟಪಡಿಸಿದೆ.

ಇದಕ್ಕೂ ಮುಂಚೆ, ಬೆಂಗಳೂರು ನಗರದಲ್ಲಿ ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಆಗಸ್ಟ್ 16ರಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾಂಸ ಮಾರಾಟ ಹಾಗೂ ಪಶು ವಧೆಗೆ ನಿಷೇಧ ಹೊರಡಿಸಿದ್ದಲ್ಲದೆ, ಮಹಾರಾಷ್ಟ್ರದ ಕೆಲವು ಪುರಸಭೆಗಳು ಆಗಸ್ಟ್ 15 (ಸ್ವಾತಂತ್ರ್ಯ ದಿನ) ಮತ್ತು ಆಗಸ್ಟ್ 20 ರಂದು ಹಬ್ಬದ ಹಿನ್ನೆಲೆಯಲ್ಲಿ ಮಾಂಸ ಮಾರಾಟ ನಿರ್ಬಂಧಿಸಿದವು.

ಆದೇಶದ ವಿರುದ್ಧ ರಾಜಕೀಯ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ. ಎನ್‌ಸಿಪಿ (ಎಸ್‌ಪಿ) ಮತ್ತು ಶಿವಸೇನಾ (ಯುಬಿಟಿ) ನಾಯಕರು ಈ ನಿರ್ಧಾರವನ್ನು ಸಾರ್ವಜನಿಕರ ಆಹಾರ ಆಯ್ಕೆಯ ಮೇಲಿನ ಅತಿಕ್ರಮಣವೆಂದು ಟೀಕಿಸಿದ್ದಾರೆ. ನಿಷೇಧವು ಧಾರ್ಮಿಕ ಭಾವನೆಗಳನ್ನು ಗೌರವಿಸುವ ಉದ್ದೇಶದಿಂದ ಜಾರಿಗೆ ತರಲಾದರೂ, ಇದು ವ್ಯಕ್ತಿಗತ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂಬ ಚರ್ಚೆ ಕೂಡ ನಡೆಯುತ್ತಿದೆ.

The post ಆಗಸ್ಟ್ 28 ಮತ್ತು ಸೆಪ್ಟೆಂಬರ್ 6 ರಂದು ಮಾಂಸ ಹಾಗೂ ಮೊಟ್ಟೆ ಮಾರಾಟಕ್ಕೆ ನಿಷೇಧ: ರಾಜಸ್ಥಾನ ಸರ್ಕಾರದ ಆದೇಶ. appeared first on Good News 24x7.

]]>
ಕನ್ನಡವನ್ನು ಭುವನೇಶ್ವರಿಯಾಗಿ ಒಪ್ಪದ ಈಕೆ, ತಾಯಿ ಚಾಮುಂಡೇಶ್ವರಿಯನ್ನು ಒಪ್ಪಿ ಪುಷ್ಪಾರ್ಚನೆ ಮಾಡಿಯಾರೇ: ಪ್ರತಾಪ್ ಸಿಂಹ ಆಕ್ಷೇಪ https://www.goodnews24x7.com/she-who-did-not-accept-kannada-as-bhuvaneshwari-accepted-and-offered-flowers-to-her-mother-chamundeshwari-pratap-simha-objection/ Mon, 25 Aug 2025 08:58:35 +0000 https://www.goodnews24x7.com/?p=6723 ವಿಶ್ವವಿಖ್ಯಾತ ಮೈಸೂರು ದಸರಾಗೆ ಸಿದ್ಧತೆಗಳು ಭರ್ಜರಿಯಾಗಿ ನಡೆದಿವೆ. ಕಾಡಿನಿಂದ ನಾಡಿಗೆ ಬಂದ ಗಜಪಡೆಗಳು ತಾಲೀಮು ಆರಂಭಿಸಿವೆ. ದಸರಾ ಉದ್ಘಾಟಕರ ಹೆಸರು ಸಹ ಅಂತಿಮವಾಗಿದೆ. ಸರ್ಕಾರ ಅದ್ದೂರಿಯಾಗಿ ದಸರಾ ನಡೆಸಲು ತೀರ್ಮಾನಿಸಿದೆ. ಈ ನಡುವೆ ದಸರಾ ಉದ್ಘಾಟಕರ ವಿಚಾರ ಈಗ ಚರ್ಚೆಗೆ ಕಾರಣವಾಗಿದೆ.…

The post ಕನ್ನಡವನ್ನು ಭುವನೇಶ್ವರಿಯಾಗಿ ಒಪ್ಪದ ಈಕೆ, ತಾಯಿ ಚಾಮುಂಡೇಶ್ವರಿಯನ್ನು ಒಪ್ಪಿ ಪುಷ್ಪಾರ್ಚನೆ ಮಾಡಿಯಾರೇ: ಪ್ರತಾಪ್ ಸಿಂಹ ಆಕ್ಷೇಪ appeared first on Good News 24x7.

]]>

ವಿಶ್ವವಿಖ್ಯಾತ ಮೈಸೂರು ದಸರಾಗೆ ಸಿದ್ಧತೆಗಳು ಭರ್ಜರಿಯಾಗಿ ನಡೆದಿವೆ. ಕಾಡಿನಿಂದ ನಾಡಿಗೆ ಬಂದ ಗಜಪಡೆಗಳು ತಾಲೀಮು ಆರಂಭಿಸಿವೆ. ದಸರಾ ಉದ್ಘಾಟಕರ ಹೆಸರು ಸಹ ಅಂತಿಮವಾಗಿದೆ. ಸರ್ಕಾರ ಅದ್ದೂರಿಯಾಗಿ ದಸರಾ ನಡೆಸಲು ತೀರ್ಮಾನಿಸಿದೆ. ಈ ನಡುವೆ ದಸರಾ ಉದ್ಘಾಟಕರ ವಿಚಾರ ಈಗ ಚರ್ಚೆಗೆ ಕಾರಣವಾಗಿದೆ. ಯಾಕೆ? ವಿವರಗಳು ಇಲ್ಲಿವೆ.
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಎಂದರೆ ರಾಜ ಪರಂಪರೆ, ಗತಕಾಲದ ವೈಭವ. ಅಷ್ಟೇ ಅಲ್ಲ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ಉತ್ಸವ. ಈ ಬಾರಿ ಸೆಪ್ಟೆಂಬರ್ 22ರಂದು ವಿಶ್ವವಿಖ್ಯಾತ ಮೈಸೂರು ದಸರಾಗೆ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಚಾಲನೆ ಸಿಗುತ್ತಿದೆ. ಅಂದಿನಿಂದ ಅಕ್ಟೋಬರ್ 2ರ ವರೆಗೆ, ಅಂದರೆ 11 ದಿನಗಳ ಕಾಲ ದಸರಾ ಕಲರವ ಜೋರಾಗಿರಲಿದೆ. ಸರ್ಕಾರ ಈ ಬಾರಿ ದಸರಾ ಉದ್ಘಾಟನೆಗೆ ಅಂತರರಾಷ್ಟ್ರೀಯ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ವಿಜೇತೆ ಕನ್ನಡತಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದೆ. ಇದು ಈಗ ಚರ್ಚೆಗೆ ಕಾರಣವಾಗಿದೆ.

ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ನಾಡಹಬ್ಬಕ್ಕೆ ಪ್ರತಿ ವರ್ಷ ಚಾಲನೆ ನೀಡಲಾಗುತ್ತದೆ. ಇದು ಧಾರ್ಮಿಕ ಹಬ್ಬ, ಹಿಂದುಗಳ ಹಬ್ಬ. ತಾಯಿ ಚಾಮುಂಡೇಶ್ವರಿ ಬಗ್ಗೆ ನಂಬಿಕೆ ಇಟ್ಟವರು ಆಕೆಗೆ ಪೂಜೆ ಸಲ್ಲಿಸಿ ದಸರಾ ಉದ್ಘಾಟಿಸುವುದು ಪರಂಪರೆ. ಆದರೆ ಸಿಎಂ ಸಿದ್ದರಾಮಯ್ಯ ಉದ್ದೇಶಪೂರ್ವಕವಾಗಿ ಮುಸ್ಲಿಂ ಒಬ್ಬರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದ್ದಾರೆ ಎಂಬುದು ಮಾಜಿ ಸಂಸ್ ಪ್ರತಾಪ್ ಸಿಂಹ ಆರೋಪ. ಬೂಕರ್ ಪ್ರಶಸ್ತಿಯನ್ನು ಪಡೆದಿರುವ ಬಾನು ಮುಷ್ತಾಕ್ ಅವರನ್ನು ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಮಾಡಿ, ಆದರೆ ಧಾರ್ಮಿಕ ನಂಬಿಕೆ ಮತ್ತು ಆಚರಣೆಯ ಪ್ರತೀಕವಾಗಿರುವ ದಸರಾ ಉದ್ಘಾಟನೆಗೆ ಕರೆಯುವುದು ಸೂಕ್ತವೇ ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ. 2023ರ ಜನ ಸಾಹಿತ್ಯ ಸಮ್ಮೇಳನದಲ್ಲಿ ಬಾನು ಮುಷ್ತಾಕ್ ರವರು ಮಾಡಿದ ಭಾಷಣದ ವಿಡಿಯೋ ತುಣುಕನ್ನು ಎಕ್ಸ್​​ ತಾಣದಲ್ಲಿ ಪೋಸ್ಟ್ ಮಾಡಿರುವ ಪ್ರತಾಪ್ ಸಿಂಹ, ಕನ್ನಡವನ್ನು ಭುವನೇಶ್ವರಿಯಾಗಿ ಒಪ್ಪದ ಈಕೆ, ತಾಯಿ ಚಾಮುಂಡೇಶ್ವರಿಯನ್ನು ನಾಡದೇವತೆಯಾಗಿ ಒಪ್ಪಿಕೊಂಡು ಪುಷ್ಪಾರ್ಚನೆ ಮಾಡಿಯಾರೆ ಮುಷ್ತಾಕ್ ಬಾನು ಎಂದು ಪ್ರಶ್ನಿಸಿದ್ದಾರೆ.

ಈ ಹಿಂದೆ 2017ರಲ್ಲಿ ನಿಸಾರ್ ಅಹಮದ್ ಸಹ ದಸರಾ ಉದ್ಘಾಟನೆ ಮಾಡಿದ್ದರು. ಅವರು ತಾಯಿ ಚಾಮುಂಡೇಶ್ವರಿಯ ದೇಗುಲದ ಒಳಗೆ ಹೋಗದೆ ನೇರವಾಗಿ ವೇದಿಕೆ ಕಾರ್ಯಕ್ರಮಕ್ಕೆ ಬಂದು ದಸರಾ ಉದ್ಘಾಟನೆ ಮಾಡಿದ್ದರು. ಅಷ್ಟೇ ಅಲ್ಲ, ಮೊದಲ ಅವಧಿಯಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನಾಸ್ತಿಕರಾಗಿದ್ದ ಗಿರೀಶ್ ಕಾರ್ನಾಡ್ ಅವರಿಗೆ ದಸರಾ ಉದ್ಘಾಟಿಸಲು ಆಯ್ಕೆ ಮಾಡಿದ್ದರು. ಎರಡು ವರ್ಷಗಳ ಹಿಂದೆ ಹಂಸಲೇಖ ಅವರಿಗೂ ಅವಕಾಶ ನೀಡಿದರು. ಆಗಲೂ ಸಹ ಉದ್ಘಾಟಕರ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಸದ್ಯ, ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟಕರನ್ನಾಗಿ‌ ಮುಸ್ಲಿಂ ಸಮುದಾಯದ ಮಹಿಳೆಯ ಆಯ್ಕೆ ವಿಚಾರವಾಗಿ ಮಾಜಿ ಸಂಸದ ಪ್ರತಾಪ ಸಿಂಹ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೇ ಕಿಡಿ ಹಚ್ಚಿದ್ದಾರೆ. ಇದು ಮುಂದೆ ರಾಜ್ಯಾದ್ಯಂತ ಯಾವ ರೀತಿಯಾದ ಚರ್ಚೆಗೆ ಕಾರಣವಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.

The post ಕನ್ನಡವನ್ನು ಭುವನೇಶ್ವರಿಯಾಗಿ ಒಪ್ಪದ ಈಕೆ, ತಾಯಿ ಚಾಮುಂಡೇಶ್ವರಿಯನ್ನು ಒಪ್ಪಿ ಪುಷ್ಪಾರ್ಚನೆ ಮಾಡಿಯಾರೇ: ಪ್ರತಾಪ್ ಸಿಂಹ ಆಕ್ಷೇಪ appeared first on Good News 24x7.

]]>
ಚನ್ನಪಟ್ಟಣದಲ್ಲಿ ಗಣೇಶ ಪಾಲಿಟಿಕ್ಸ್: ರಾಜಕಾರಣಿಗಳ ಉಚಿತ ವಿತರಣೆಯಿಂದ ವ್ಯಾಪಾರಸ್ಥರಿಗೆ ಸಂಕಷ್ಟ. https://www.goodnews24x7.com/ganesh-politics-in-channapatna-traders-suffer-due-to-politicians-free-distribution/ Sun, 24 Aug 2025 06:30:34 +0000 https://www.goodnews24x7.com/?p=6627 ರಾಮನಗರ : ಗಣೇಶ ಚತುರ್ಥಿಯ ದಿನಗಳು ಹತ್ತಿರವಾಗುತ್ತಿದ್ದಂತೆ ಜನರು ಶ್ರದ್ಧೆಯಿಂದ ಗಣಪನ ಮೂರ್ತಿಗಳನ್ನು ಮನೆಗೆ ತರುವ ತಯಾರಿನಲ್ಲಿ ತೊಡಗಿದ್ದಾರೆ. ಆದರೆ ಬೊಂಬೆನಗರಿ ಎಂದೇ ಹೆಸರಾಗಿರುವ ಚನ್ನಪಟ್ಟಣದಲ್ಲಿ ಈ ಬಾರಿ ಹಬ್ಬದ ಜತೆಗೆ ರಾಜಕೀಯ ತೀವ್ರತೆಯೂ ಹೆಚ್ಚಾಗಿದೆ. ಕೆಲ ರಾಜಕೀಯ ನಾಯಕರು ಉಚಿತವಾಗಿ…

The post ಚನ್ನಪಟ್ಟಣದಲ್ಲಿ ಗಣೇಶ ಪಾಲಿಟಿಕ್ಸ್: ರಾಜಕಾರಣಿಗಳ ಉಚಿತ ವಿತರಣೆಯಿಂದ ವ್ಯಾಪಾರಸ್ಥರಿಗೆ ಸಂಕಷ್ಟ. appeared first on Good News 24x7.

]]>

ರಾಮನಗರ : ಗಣೇಶ ಚತುರ್ಥಿಯ ದಿನಗಳು ಹತ್ತಿರವಾಗುತ್ತಿದ್ದಂತೆ ಜನರು ಶ್ರದ್ಧೆಯಿಂದ ಗಣಪನ ಮೂರ್ತಿಗಳನ್ನು ಮನೆಗೆ ತರುವ ತಯಾರಿನಲ್ಲಿ ತೊಡಗಿದ್ದಾರೆ. ಆದರೆ ಬೊಂಬೆನಗರಿ ಎಂದೇ ಹೆಸರಾಗಿರುವ ಚನ್ನಪಟ್ಟಣದಲ್ಲಿ ಈ ಬಾರಿ ಹಬ್ಬದ ಜತೆಗೆ ರಾಜಕೀಯ ತೀವ್ರತೆಯೂ ಹೆಚ್ಚಾಗಿದೆ. ಕೆಲ ರಾಜಕೀಯ ನಾಯಕರು ಉಚಿತವಾಗಿ ಗಣೇಶ ಮೂರ್ತಿಗಳನ್ನು ವಿತರಿಸುತ್ತಿರುವ ಕಾರಣ, ಈ ವಹಿವಾಟಿನಲ್ಲಿ ನಿರೀಕ್ಷಿಸಿದ್ದ ಲಾಭವನ್ನು ತಲಪಿಸಿಕೊಳ್ಳಲು ನಿರೀಕ್ಷಿಸಿದ್ದ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಉಚಿತ ಮೂರ್ತಿಗಳ politics!

ಸಾಮಾನ್ಯವಾಗಿ ಗಣೇಶ ಹಬ್ಬದಂದು ಪ್ರತಿ ಮನೆ, ಗಲ್ಲಿ, ಹಳ್ಳಿಯಲ್ಲಿ ಪೂಜಾ ಸಂಭ್ರಮ ಮನೆಮಾಡಿರುತ್ತದೆ. ಆದರೆ ಈ ಬಾರಿ ಚನ್ನಪಟ್ಟಣದಲ್ಲಿ ಪಬ್ಲಿಸಿಟಿ ಪಡೆಯುವ ಉದ್ದೇಶದಿಂದ ಕೆಲ ರಾಜಕಾರಣಿಗಳು ಉಚಿತ ಗಣೇಶ ಮೂರ್ತಿಗಳ ವಿತರಣೆಗೆ ಮುಂದಾಗಿದ್ದಾರೆ.

ಬಡಾವಣೆಗಳಲ್ಲೂ, ಹಳ್ಳಿಗಳಲ್ಲೂ ಜನರನ್ನು ಸೆಳೆಯಲು, ತಮ್ಮ ಪರವಾಗಿ ಮತದಾನ ಮಾಡಿಸಲು ಉಚಿತ ಮೂರ್ತಿಗಳ ಪ್ರದಾನ ನಡೆಯುತ್ತಿದೆ. ಈ ಮೂಲಕ ಹಬ್ಬದ ನಿಜವಾದ ಸಾರ್ಥಕತೆಗಿಂತ ಮತರಾಜಕೀಯವೇ ಮುಖ್ಯವಾಗುತ್ತಿದೆ ಎಂಬ ಅನಿಸಿಕೆ ವ್ಯಕ್ತವಾಗಿದೆ.

ಯಾರೆಲ್ಲ ಮೂರ್ತಿಗಳನ್ನ ವಿತರಿಸುತ್ತಿದ್ದಾರೆ?

ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಶಾಸಕ ಸಿ.ಪಿ. ಯೋಗೇಶ್ವರ್ ಹಾಗೂ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಹೆಚ್.ಸಿ. ಜಯಮುತ್ತು ನೇತೃತ್ವದಲ್ಲಿ ಈ ಉಚಿತ ಮೂರ್ತಿ ವಿತರಣಾ ಕಾರ್ಯಕ್ರಮಗಳು ನಡೆಯುತ್ತಿವೆ. ಯುವಕರು ಹೆಸರು ನೋಂದಾಯಿಸಿಕೊಂಡರೆ, ಯಾವುದೇ ಗ್ರಾಮದಿಂದ ಅಥವಾ ಪಟ್ಟಣದಿಂದ ಬಂದವರಿಗು ಮೂರ್ತಿ ಉಚಿತವಾಗಿ ನೀಡಲಾಗುತ್ತಿದೆ.

ವ್ಯಾಪಾರಿಗಳಿಗೆ ಹೊಟ್ಟೆನೋವು

ಈ ಉಚಿತ ವಿತರಣೆಯಿಂದಾಗಿ ಗಣೇಶ ಮೂರ್ತಿ ವ್ಯಾಪಾರಸ್ಥರು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ಹಲವರು ಮೂರ್ತಿ ಬುಕ್ ಮಾಡಿದ್ದರೂ ಈಗ ಹಣ ವಾಪಸ್ ಕೇಳುತ್ತಿದ್ದಾರೆ. ಬೇರೆಡೆಗಳಿಂದ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಮೂರ್ತಿಗಳನ್ನು ತಯಾರಿಸಿ ತಂದ ವ್ಯಾಪಾರಿಗಳು ಈಗ ಮಾರಾಟವಾಗದ ಸ್ಥಿತಿಯಲ್ಲಿದ್ದಾರೆ.

ವ್ಯಾಪಾರಸ್ಥ ವಿನಯ್ ತಮ್ಮ ಅಸಮಾಧಾನ ಹೀಗೆ ವ್ಯಕ್ತಪಡಿಸಿದರು:

“ಎರಡು ಮೂರು ತಿಂಗಳ ಮುಂಚೆಯೇ ಉಚಿತ ಮೂರ್ತಿ ವಿತರಣೆಯ ಮಾಹಿತಿ ಇದ್ದರೆ, ನಾವು ಇಷ್ಟು ಹೂಡಿಕೆ ಮಾಡುತ್ತಿರಲಿಲ್ಲ. ರಾಜಕಾರಣಿಗಳು literally ನಮ್ಮ ಹೊಟ್ಟೆ ಮೇಲೆ ಲಾತಿ ಹೊಡೆದಂತಾಗಿದೆ.”

ಗಣೇಶ ಹಬ್ಬದ ಹಿನ್ನಲೆಯಲ್ಲಿ ಮತದಾರರ ಮನಗೆಲ್ಲುವ ರಾಜಕೀಯ ನಾಟಕ ಇದಾಗಿದ್ದು, ಇದರಿಂದಾಗಿ ಶ್ರಮಪಟ್ಟು ಮೂರ್ತಿ ತಯಾರಿಸಿದ ಹಾಗೂ ವ್ಯಾಪಾರಮಾಡುತ್ತಿರುವವರಿಗೆ ಹೊಡೆತವಾಗಿದೆ. ಉಚಿತ ವಿತರಣೆಯ ಮೂಲಕ ಜನಪ್ರತಿನಿಧಿಗಳು ಪ್ರಚಾರ ಸಾಧಿಸುತ್ತಿರುವ ಈ ನಡೆ ವ್ಯಾಪಾರಸ್ಥರಲ್ಲಿ ತೀವ್ರ ಅಸಮಾಧಾನ ಹುಟ್ಟಿಸಿದೆ.

The post ಚನ್ನಪಟ್ಟಣದಲ್ಲಿ ಗಣೇಶ ಪಾಲಿಟಿಕ್ಸ್: ರಾಜಕಾರಣಿಗಳ ಉಚಿತ ವಿತರಣೆಯಿಂದ ವ್ಯಾಪಾರಸ್ಥರಿಗೆ ಸಂಕಷ್ಟ. appeared first on Good News 24x7.

]]>
ವೈಟ್‌ ಶರ್ಟ್‌ ತಂದ ಆಪತ್ತು. ಅದಲುಬದಲಾಯ್ತು ಟಾರ್ಗೆಟ್ ! https://www.goodnews24x7.com/the-white-shirt-brought-disaster-the-target-changed/ Sat, 09 Aug 2025 11:29:25 +0000 https://www.goodnews24x7.com/?p=5658 ಆತ ಬೆಂಗಳೂರಿನಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ವರಮಹಾಲಕ್ಷ್ಮೀ ಹಬ್ಬಕ್ಕಾಗಿ ಊರಿಗೆ ತೆರಳಿದ್ದ. ಆದ್ರೆ, ಊರಲ್ಲೇ ಬರ್ಬರವಾಗಿ ಕೊಲೆಯಾಗಿದ್ದಾನೆ. ಹಬ್ಬದ ದಿನ ಆತ ಹಾಕಿದ್ದ ಬಿಳಿ ಬಣ್ಣದ ಶರ್ಟ್ ಅವನ ಸಾವಿಗೆ ಕಾರಣವಾಗಿದೆ. ಹೌದು.. ಟಾರ್ಗೆಟ್‌ ಮಾಡಿದ್ದವನನ್ನು ಬಿಟ್ಟು ಮತ್ತೊಬ್ಬನನ್ನು ಹತ್ಯೆ…

The post ವೈಟ್‌ ಶರ್ಟ್‌ ತಂದ ಆಪತ್ತು. ಅದಲುಬದಲಾಯ್ತು ಟಾರ್ಗೆಟ್ ! appeared first on Good News 24x7.

]]>

ಆತ ಬೆಂಗಳೂರಿನಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ವರಮಹಾಲಕ್ಷ್ಮೀ ಹಬ್ಬಕ್ಕಾಗಿ ಊರಿಗೆ ತೆರಳಿದ್ದ. ಆದ್ರೆ, ಊರಲ್ಲೇ ಬರ್ಬರವಾಗಿ ಕೊಲೆಯಾಗಿದ್ದಾನೆ. ಹಬ್ಬದ ದಿನ ಆತ ಹಾಕಿದ್ದ ಬಿಳಿ ಬಣ್ಣದ ಶರ್ಟ್ ಅವನ ಸಾವಿಗೆ ಕಾರಣವಾಗಿದೆ. ಹೌದು.. ಟಾರ್ಗೆಟ್‌ ಮಾಡಿದ್ದವನನ್ನು ಬಿಟ್ಟು ಮತ್ತೊಬ್ಬನನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ. ಇದಕ್ಕೆ ಕಾರಣವಾಗಿದ್ದು ವೈಟ್‌ ಶರ್ಟ್‌. ಈ ಆಘಾತಕಾರಿ ಘಟನೆ ಮಂಡ್ಯದಲ್ಲಿ ನಡೆದಿದೆ. ಟಾರ್ಗೆಟ್ ಮಾಡಿದ್ದವನ ಬಿಟ್ಟು ಮತ್ತೊಬ್ಬನ ಹತ್ಯೆ: ವ್ಯಕ್ತಿಯ ಪ್ರಾಣಕ್ಕೆ ಕುತ್ತು ತಂದ ವೈಟ್‌ ಶರ್ಟ್‌

ಮಂಡ್ಯ, (ಆಗಸ್ಟ್ 09): ಟಾರ್ಗೆಟ್ ಮಾಡಿದ್ದವನನ್ನ ಬಿಟ್ಟು ಮತ್ತೊಬ್ಬನನ್ನ ಹತ್ಯೆಗೈದಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಮದ್ದೂರು ತಾಲೂಕಿನ ಹೆಮ್ಮನಹಳ್ಳಿ ರಸ್ತೆಯ ನಿರ್ಜನ ಪ್ರದೇಶದಲ್ಲಿ ಯುವಕನನ್ನ ಬರ್ಬರವಾಗಿ ಕೊಲೆ ಮಾಡಲಾಗಿದೆ. ವೈಟ್ ಶರ್ಟ್ ಸುಳಿವು ಹಿಡಿದು ಫಾಲೋ ಮಾಡಿದ್ದ ಹಂತಕರು ಟಾರ್ಗೆಟ್ ಮಾಡಿದ್ದವನ ಬದಲಿಗೆ ಮತ್ತೊಬ್ಬನನ್ನ ಕೊಚ್ಚಿ ಕೊಲೆ ಮಾಡಿದ್ದಾರೆ. ವಡ್ಡರಹಳ್ಳಿ ಗ್ರಾಮದ ಅರುಣ್ (34) ಕೊಲೆಯಾದ ಯುವಕ. ಬೆಂಗಳೂರಿನಲ್ಲಿ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಅರುಣ್ ನಿನ್ನೆ (ಆಗಸ್ಟ್ 08) ವರಮಹಾಲಕ್ಷ್ಮೀ ಹಬ್ಬ ಹಿನ್ನೆಲೆ ಊರಿಗೆ ಬಂದಿದ್ದ. ಈ ವೇಳೆ ಟಾರ್ಗೆಟ್ ಮಾಡಿದ್ದವನನ್ನ ಬಿಟ್ಟು ಅರುಣ್ ನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ.

ಘಟನೆ ನಡೆದಿದ್ದು ಹೀಗೆ?
ನಿನ್ನೆ (ಆಗಸ್ಟ್ 08) ರಾತ್ರಿ ಹತ್ಯೆಯಾದ ಅರುಣ್ ತನ್ನ ಸ್ನೇಹಿತ ಸೂರ್ಯ, ಸಹೋದರ ಉಮೇಶ್ ಮತ್ತು ಸಂಬಂಧಿ ದೇವರಾಜ್ ಜೊತೆ ಪಾರ್ಟಿ ಮಾಡುತ್ತಿದ್ದ. ಇದೇ ವೇಳೆ ಬಾರ್‌ ಮುಂಭಾಗದಲ್ಲಿ ಸಿಕ್ಕ ವಿಕ್ರಮ್ ಎಂಬಾತನ ಜೊತೆ ಸೂರ್ಯ ಹಳೇ ದ್ವೇಷದ ವಿಚಾರಕ್ಕೆ ಜಗಳ ತೆಗೆದಿದ್ದಾನೆ. ಎರಡು ವರ್ಷದ ಹಿಂದಿನ ಜಗಳದ ವಿಚಾರವನ್ನು ಮುಂದಿಟ್ಟುಕೊಂಡು ಸೂರ್ಯ, ವಿಕ್ರಮ್ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ, ಅರುಣ್ ಮಧ್ಯ ಪ್ರವೇಶಿಸಿ ಜಗಳ ಬಿಡಿಸಿ ಪಾರ್ಟಿ ಮುಂದುವರೆಸಿದ್ದಾನೆ.

ಸೂರ್ಯನ ಮೇಲೆ ಅಟ್ಯಾಕ್‌ ಮಾಡಲು ಕಾಯುತ್ತಿದ್ದ ದುಷ್ಕರ್ಮಿಗಳಿಗೆ ವಿಕ್ರಮ್ ಸುಳಿವು ನೀಡಿದ್ದಾನೆ. ‘ಸೂರ್ಯ ಬಿಳಿ ಶರ್ಟ್ ಹಾಕಿದ್ದಾನೆ’ ಎಂದು ಮಾಹಿತಿ ನೀಡಿದ್ದ. ಈ ಮಾತನ್ನು ಕೇಳಿದ ಹಂತಕರು ಸೂರ್ಯನ ಮೇಲೆ ದಾಳಿ ಮಾಡಲು ಮುಂದಾಗಿದ್ದಾರೆ. ಆದರೆ, ದುಷ್ಕರ್ಮಿಗಳು ಬರುತ್ತಿದ್ದಂತೆ ಪಾರ್ಟಿ ಮಾಡುತಿದ್ದ ಸೂರ್ಯ ಮತ್ತು ತಂಡದವರು ತಪ್ಪಿಸಿಕೊಂಡು ಓಡಿದ್ದಾರೆ.

ಹಂತಕರು, ಬಿಳಿ ಶರ್ಟ್ ಧರಿಸಿದ್ದ ಅರುಣ್‌ನನ್ನೇ ಸೂರ್ಯ ಎಂದು ತಪ್ಪಾಗಿ ತಿಳಿದು ಹಿಂಬಾಲಿಸಿದ್ದಾರೆ. ಹೆಮ್ಮನಹಳ್ಳಿ ರಸ್ತೆಯ ನಿರ್ಜನ ಪ್ರದೇಶದಲ್ಲಿ ಅರುಣ್‌ನ ಮೇಲೆ ಮನಬಂದಂತೆ ಲಾಂಗು, ಮಚ್ಚು, ಮತ್ತು ಡ್ರ್ಯಾಗರ್‌ನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾರೆ. ದಾಳಿಯಾಗುತ್ತಿದ್ದಂತೆ ಅರುಣ್‌ನೊಂದಿಗೆ ಇದ್ದ ಸಂಬಂಧಿ ದೇವರಾಜು ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಈ ಘಟನೆ ಮದ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

The post ವೈಟ್‌ ಶರ್ಟ್‌ ತಂದ ಆಪತ್ತು. ಅದಲುಬದಲಾಯ್ತು ಟಾರ್ಗೆಟ್ ! appeared first on Good News 24x7.

]]>