filmindustry Archives - Good News 24x7 https://www.goodnews24x7.com/tag/filmindustry/ Kannada Sun, 05 Jul 2026 06:57:40 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg filmindustry Archives - Good News 24x7 https://www.goodnews24x7.com/tag/filmindustry/ 32 32 ಚಿತ್ರರಂಗದ ತಾರತಮ್ಯ ಬಿಚ್ಚಿಟ್ಟ ಕೃತಿ ಸನೋನ್ https://www.goodnews24x7.com/kriti-sanon-exposes-discrimination-in-the-film-industry/ Sun, 05 Jul 2026 06:57:40 +0000 https://www.goodnews24x7.com/?p=9759 ಸಿನಿಮಾದ ಚಿತ್ರೀಕರಣದ ವೇಳೆ ನಟಿಯರನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ ಎಂಬುದರ ಬಗ್ಗೆ ಕೃತಿ ಸನನ್ ಅವರು ಮಾತನಾಡಿದ್ದಾರೆ. ಹೀರೋ ಮತ್ತು ಹೀರೋಯಿನ್ ನಡುವೆ ಬಹಳ ತಾರತಮ್ಯ ಮಾಡಲಾಗುತ್ತದೆ ಎಂದು ಅವರು ಓಪನ್ ಆಗಿ ಹೇಳಿದ್ದಾರೆ. ಸೆಟ್‌ಗಳಲ್ಲಿನ ಈ ತಾರತಮ್ಯಗಳು ಸಂಪೂರ್ಣವಾಗಿ ತೊಲಗಬೇಕಿದೆ ಎಂದು…

The post ಚಿತ್ರರಂಗದ ತಾರತಮ್ಯ ಬಿಚ್ಚಿಟ್ಟ ಕೃತಿ ಸನೋನ್ appeared first on Good News 24x7.

]]>

ಸಿನಿಮಾದ ಚಿತ್ರೀಕರಣದ ವೇಳೆ ನಟಿಯರನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ ಎಂಬುದರ ಬಗ್ಗೆ ಕೃತಿ ಸನನ್ ಅವರು ಮಾತನಾಡಿದ್ದಾರೆ. ಹೀರೋ ಮತ್ತು ಹೀರೋಯಿನ್ ನಡುವೆ ಬಹಳ ತಾರತಮ್ಯ ಮಾಡಲಾಗುತ್ತದೆ ಎಂದು ಅವರು ಓಪನ್ ಆಗಿ ಹೇಳಿದ್ದಾರೆ. ಸೆಟ್‌ಗಳಲ್ಲಿನ ಈ ತಾರತಮ್ಯಗಳು ಸಂಪೂರ್ಣವಾಗಿ ತೊಲಗಬೇಕಿದೆ ಎಂದು ಕೃತಿ ಸನೋನ್ ಅಭಿಪ್ರಾಯಪಟ್ಟಿದ್ದಾರೆ.

ಶೂಟಿಂಗ್ ವೇಳೆ ನಟಿಯರನ್ನು ಕೀಳಾಗಿ ಕಾಣಲಾಗುತ್ತದೆ: ಚಿತ್ರರಂಗದ ತಾರತಮ್ಯ ಬಿಚ್ಚಿಟ್ಟ ಕೃತಿ ಸನೋನ್

ನಟ-ನಟಿಯರ ನಡುವೆ ವ್ಯತ್ಯಾಸ ಇರುತ್ತದೆ ಎಂದು ಕೃತಿ ಸನೋನ್ ಆರೋಪ.

ಸಹಾಯಕ ನಿರ್ದೇಶಕರ ವರ್ತನೆ ಬಗ್ಗೆಯೂ ಕೃತಿ ಸನೋನ್ ಅಸಮಾಧಾನ.
ಚಿತ್ರರಂಗದಲ್ಲಿ ಪುರುಷ ಮತ್ತು ಮಹಿಳಾ ಕಲಾವಿದರ ನಡುವೆ ನಡೆಯುವ ಲಿಂಗ ತಾರತಮ್ಯದ (Gender Bias) ಕುರಿತು ಖ್ಯಾತ ನಟಿ ಕೃತಿ ಸನನ್ (Kriti Sanon) ಮುಕ್ತವಾಗಿ ಧ್ವನಿ ಎತ್ತಿದ್ದಾರೆ. ಚಿತ್ರೀಕರಣದ ಸೆಟ್‌ಗಳಲ್ಲಿ ಮಹಿಳಾ ಕಲಾವಿದರನ್ನು ಹೇಗೆ ಕೀಳಾಗಿ ಕಾಣಲಾಗುತ್ತದೆ ಮತ್ತು ಪುರುಷರಿಗೆ ಹೋಲಿಸಿದರೆ ನಟಿಯರನ್ನು ಹೇಗೆ ತಾರತಮ್ಯದಿಂದ ನಡೆಸಿಕೊಳ್ಳಲಾಗುತ್ತದೆ ಎಂಬುದನ್ನು ಅವರು ಬಿಚ್ಚಿಟ್ಟಿದ್ದಾರೆ. ಪ್ರಸಿದ್ಧ ಯೂಟ್ಯೂಬರ್ ಲಿಲ್ಲಿ ಸಿಂಗ್ ಅವರ ಟಾಕ್ ಶೋನಲ್ಲಿ ಭಾಗವಹಿಸಿದ್ದ ಕೃತಿ, ತಾವು ಮಾಡೆಲಿಂಗ್, ಇಂಜಿನಿಯರಿಂಗ್ ಕಾಲೇಜು ಮತ್ತು ಚಿತ್ರರಂಗ ಸೇರಿದಂತೆ ವಿವಿಧ ಕ್ಷೇತ್ರಗಳ ಭಾಗವಾಗಿದ್ದರೂ, ಬಾಲಿವುಡ್‌ನಲ್ಲೇ ಅತ್ಯಂತ ಹೆಚ್ಚು ಸವಾಲುಗಳನ್ನು ಎದುರಿಸಬೇಕಾಗಿ ಬಂತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಶ್ನೆ ಕೇಳಿದರೆ ಕಿರಿಕಿರಿ ಅಂತಾರೆ!’

ಚಿತ್ರೀಕರಣದ ಸಮಯದಲ್ಲಿ ಪುರುಷ ಮತ್ತು ಮಹಿಳಾ ಕಲಾವಿದರನ್ನು ನೋಡುವ ದೃಷ್ಟಿಕೋನವೇ ಬೇರೆಯಾಗಿರುತ್ತದೆ ಎಂದು ಕೃತಿ ವಿವರಿಸಿದ್ದಾರೆ. ತಮಗೆ ಚಿತ್ರಕಥೆ ಹಾಗೂ ಪಾತ್ರಗಳ ಬಗ್ಗೆ ನಿರ್ದೇಶಕರನ್ನು ಪ್ರಶ್ನಿಸುವ ಅಭ್ಯಾಸ ಮೊದಲಿನಿಂದಲೂ ಇದೆ ಎಂದ ಅವರು, ‘ಒಬ್ಬ ನಟಿ ಪ್ರಶ್ನೆ ಕೇಳಿದರೆ ಸೆಟ್‌ನಲ್ಲಿರುವವರು ‘ಇವಳು ಎಷ್ಟು ಪ್ರಶ್ನೆ ಕೇಳುತ್ತಾಳೆ, ಇನ್ನು ಇವಳ 50 ಪ್ರಶ್ನೆಗಳು ಶುರುವಾಗುತ್ತವೆ’ ಎಂದು ಆಡಿಕೊಳ್ಳುತ್ತಾರೆ. ಇದೇ ಪ್ರಶ್ನೆಯನ್ನು ಒಬ್ಬ ನಟ ಕೇಳಿದರೆ, ಅವನು ಸಿನಿಮಾದಲ್ಲಿ ತುಂಬಾ ಆಸಕ್ತಿ ಹೊಂದಿದ್ದಾನೆ ಎಂದು ಹೊಗಳುತ್ತಾರೆ’ ಎಂದು ಹೇಳಿದ್ದಾರೆ.

‘ಹೆಚ್ಚು ತಲೆ ಕೆಡಿಸಿಕೊಳ್ಳಬೇಡ, ಸುಮ್ಮನೆ ನಟಿಸು’:
‘ನನಗೂ ಇಂತಹ ಅನುಭವವಾಗಿದೆ. ನಾನು ಪ್ರಶ್ನೆ ಕೇಳಿದಾಗ ‘ಹೆಚ್ಚು ತಲೆ ಕೆಡಿಸಿಕೊಳ್ಳಬೇಡ, ಸುಮ್ಮನೆ ನಟಿಸು’ ಎಂದು ಹೇಳುತ್ತಿದ್ದರು. ಆದರೆ ಅದೇ ಪ್ರಶ್ನೆಯನ್ನು ಸಹನಟ ಕೇಳಿದಾಗ ‘ಓಕೆ, ಹಾಗೇ ಮಾಡೋಣ’ ಎಂದು ಒಪ್ಪಿಕೊಳ್ಳುತ್ತಿದ್ದರು’ ಎಂದು ಕೃತಿ ಬೇಸರ ಹಂಚಿಕೊಂಡಿದ್ದಾರೆ. ಚಿತ್ರೀಕರಣದ ವೇಳೆ ಸಿಗುವ ಸೌಲಭ್ಯಗಳಲ್ಲೂ ನಟ-ನಟಿಯರ ನಡುವೆ ವ್ಯತ್ಯಾಸ ಇರುತ್ತದೆ ಎಂದು ಕೃತಿ ಸನೋನ್ ಗಂಭೀರ ಆರೋಪ ಮಾಡಿದ್ದಾರೆ.

‘ಸಣ್ಣ ಕಾರು ಕೊಟ್ಟರೂ ಪರವಾಗಿಲ್ಲ, ಆದರೆ’:
‘ಹಲವು ಬಾರಿ ನಟರಿಗೆ ನೀಡಲಾಗುವ ಕಾರು ಅಥವಾ ಕ್ಯಾರವಾನ್ ರೂಮ್‌ಗಳು ತುಂಬಾ ಐಷಾರಾಮಿಯಾಗಿರುತ್ತವೆ. ಆದರೆ ನಟಿಯರಿಗೆ ಸಾಮಾನ್ಯವಾದ ರೂಮ್ ನೀಡಲಾಗುತ್ತದೆ. ನನಗೆ ಸಣ್ಣ ರೂಮ್ ಅಥವಾ ಸಣ್ಣ ಕಾರು ಕೊಟ್ಟರೂ ಪರವಾಗಿಲ್ಲ, ಆದರೆ ಆ ಮೂಲಕ ನಾನು ಅವರಿಗಿಂತ ಕಮ್ಮಿ ಎನ್ನುವಂತೆ ನನ್ನನ್ನು ಭಾವಿಸಬೇಡಿ ಎನ್ನುವುದಷ್ಟೇ ನನ್ನ ವಾದ’ ಎಂದು ಕೃತಿ ಹೇಳಿದ್ದಾರೆ.

ಇದರೊಂದಿಗೆ ಸಹಾಯಕ ನಿರ್ದೇಶಕರ ವರ್ತನೆಯ ಬಗ್ಗೆಯೂ ಮಾತನಾಡಿರುವ ಅವರು, ‘ಶೂಟಿಂಗ್ ಸೆಟ್‌ಗೆ ಬರುವಂತೆ ಸಹಾಯಕ ನಿರ್ದೇಶಕರು ಮೊದಲು ಹುಡುಗಿಯರನ್ನೇ ಕರೆಯುತ್ತಾರೆ. ಅವರಿಗೆ ಪುರುಷ ನಟರನ್ನು ಕಂಡರೆ ಕೊಂಚ ಭಯವಿರುತ್ತದೆ. ಹೀಗಾಗಿ ಮಹಿಳಾ ನಟಿಯರನ್ನು ಅವರು ತುಂಬಾ ಸಲೀಲಾಗಿ ತೆಗೆದುಕೊಳ್ಳುತ್ತಾರೆ’ ಎಂದಿದ್ದಾರೆ.

ತಮ್ಮ ವೃತ್ತಿಜೀವನದ ಆರಂಭದ ದಿನಗಳನ್ನು ನೆನಪಿಸಿಕೊಂಡ ಕೃತಿ, ಹಿಂದೆ ಬಾಲಿವುಡ್‌ನಲ್ಲಿ ಮಹಿಳೆಯರಿಗೆ ಸಿಗುತ್ತಿದ್ದ ಪಾತ್ರಗಳು ಕೇವಲ ಗ್ಲಾಮರ್ ಅಥವಾ ನಾಯಕನ ಪ್ರೇಯಸಿಯ ಪಾತ್ರಕ್ಕೆ ಮಾತ್ರ ಸೀಮಿತವಾಗಿದ್ದವು. ಆದರೆ ಈಗ ಕಾಲ ಬದಲಾಗುತ್ತಿದೆ, ಮಹಿಳಾ ಪ್ರಧಾನ ಚಿತ್ರಗಳು ಬರುತ್ತಿವೆ ಮತ್ತು ನಟಿಯರಿಗಾಗಿ ಉತ್ತಮ ಪಾತ್ರಗಳನ್ನು ಬರೆಯಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

The post ಚಿತ್ರರಂಗದ ತಾರತಮ್ಯ ಬಿಚ್ಚಿಟ್ಟ ಕೃತಿ ಸನೋನ್ appeared first on Good News 24x7.

]]>
ರೊನಾಲ್ಡೊವನ್ನು ದಾಖಲೆ ಮುರಿದು, ಹೊಸ ವಿಶ್ವ ದಾಖಲೆ ಬರೆದ ದೀಪಿಕಾ ಪಡುಕೋಣೆ. https://www.goodnews24x7.com/deepika-padukone-breaks-ronaldos-record-and-sets-a-new-world-record/ Wed, 06 Aug 2025 08:12:46 +0000 https://www.goodnews24x7.com/?p=5440 ದೀಪಿಕಾ ಪಡುಕೋಣೆ ಹೊಸ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ. ಆ ಮೂಲಕ ತಾವು ಭಾರತ ಮಾತ್ರವಲ್ಲ ವಿಶ್ವದ ಸ್ಟಾರ್ ನಟಿಯರಲ್ಲಿ ಒಬ್ಬರು ಎಂದು ಸಾಬೀತು ಮಾಡಿದ್ದಾರೆ. ಅಂದಹಾಗೆ ದೀಪಿಕಾ ಪಡುಕೋಣೆ ಮಾಡಿರುವ ವಿಶ್ವ ದಾಖಲೆ ಏನು? ರೊನಾಲ್ಡೊ ಅನ್ನೂ ಸಹ ನಟಿ ದೀಪಿಕಾ…

The post ರೊನಾಲ್ಡೊವನ್ನು ದಾಖಲೆ ಮುರಿದು, ಹೊಸ ವಿಶ್ವ ದಾಖಲೆ ಬರೆದ ದೀಪಿಕಾ ಪಡುಕೋಣೆ. appeared first on Good News 24x7.

]]>

ದೀಪಿಕಾ ಪಡುಕೋಣೆ ಹೊಸ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ. ಆ ಮೂಲಕ ತಾವು ಭಾರತ ಮಾತ್ರವಲ್ಲ ವಿಶ್ವದ ಸ್ಟಾರ್ ನಟಿಯರಲ್ಲಿ ಒಬ್ಬರು ಎಂದು ಸಾಬೀತು ಮಾಡಿದ್ದಾರೆ. ಅಂದಹಾಗೆ ದೀಪಿಕಾ ಪಡುಕೋಣೆ ಮಾಡಿರುವ ವಿಶ್ವ ದಾಖಲೆ ಏನು? ರೊನಾಲ್ಡೊ ಅನ್ನೂ ಸಹ ನಟಿ ದೀಪಿಕಾ ಹಿಂದಿಕ್ಕಿದ್ದು ಹೇಗೆ?

ದೀಪಿಕಾ ಪಡುಕೋಣೆ ಭಾರತದ ಸ್ಟಾರ್ ನಟಿ. ತಾಯ್ತನಕ್ಕಾಗಿ ಕೆಲ ಸಮಯ ಚಿತ್ರರಂಗದಿಂದ ಬಿಡುವು ಪಡೆದಿದ್ದ ಈ ನಟಿ ಇದೀಗ ಮತ್ತೆ ಚಿತ್ರರಂಗಕ್ಕೆ ರೀ ಎಂಟ್ರಿ ನೀಡುತ್ತಿದ್ದಾರೆ. ಪ್ರಸ್ತುತ ಅವರು ಶಾರುಖ್ ಖಾನ್ ಜೊತೆಗೆ ‘ಕಿಂಗ್’ ಸಿನಿಮಾನಲ್ಲಿ ಹಾಗು ಅದರ ಜೊತೆಗೆ ಅಟ್ಲಿ ನಿರ್ದೇಶಿಸಿ ಅಲ್ಲು ಅರ್ಜುನ್ ನಾಯಕನಾಗಿ ನಟಿಸುತ್ತಿರುವ ಹೊಸ ಸಿನಿಮಾನದಲ್ಲಿಯೂ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೆಲ್ಲದರ ಜೊತೆಗೆ ದೀಪಿಕಾ ಪಡುಕೋಣೆ ಹೊಸ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ. ಆ ಮೂಲಕ ತಾವು ಭಾರತ ಮಾತ್ರವಲ್ಲ ವಿಶ್ವದ ಸ್ಟಾರ್ ನಟಿಯರಲ್ಲಿ ಒಬ್ಬರು ಎಂದು ಸಾಬೀತು ಮಾಡಿದ್ದಾರೆ.

https://youtu.be/S-u-vqsfrpQ?si=AoR6HzTymv1aU1Zuನಾನು ದರ್ಶನ್ ಸರ್ ಗೆ ಸಪೋರ್ಟ್ ಮಾಡೋದು!

ದೀಪಿಕಾ ಪಡುಕೋಣೆ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದರೆ. ಇನ್​ಸ್ಟಾಗ್ರಾಂನಲ್ಲಿ ಸುಮಾರು ಎಂಟು ಕೋಟಿ ಫಾಲೋವರ್​ಗಳನ್ನು ದೀಪಿಕಾ ಪಡುಕೋಣೆ ಹೊಂದಿದ್ದಾರೆ. ತಮ್ಮ ಚಿತ್ರಗಳು, ಫೋಟೊಶೂಟ್, ಸಿನಿಮಾ ಮಾಹಿತಿ ಮತ್ತು ಜಾಹೀರಾತುಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ನಟಿ ದೀಪಿಕಾ ಪಡುಕೋಣೆ ಹಂಚಿಕೊಂಡಿದ್ದ ರೀಲ್ ಒಂದು ಈಗ ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಣೆಗೆ ಒಳಪಟ್ಟ ರೀಲ್ಸ್​ ಎನಿಸಿಕೊಂಡಿದೆ.

ಹಿಲ್ಟನ್ ಹೋಟೆಲಿನ ರಾಯಭಾರಿ ಆಗಿರುವ ದೀಪಿಕಾ ಪಡುಕೋಣೆ ಇತ್ತೀಚೆಗಷ್ಟೆ ‘ಹಿಲ್ಟನ್’ನ ಜಾಹೀರಾತಿನ ವಿಡಿಯೋ ಒಂದನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಜೂನ್ 9 ರಂದು ಜಾಹೀರಾತನ್ನು ದೀಪಿಕಾ ಪಡುಕೋಣೆ ಶೇರ್ ಮಾಡಿದ್ದರು. ಆ ವಿಡಿಯೋ ಇದೀಗ 1.9 ಬಿಲಿಯನ್ ವೀವ್ಸ್ ಕಂಡಿದೆ. ಅಂದರೆ ಬರೋಬ್ಬರಿ 190 ಕೋಟಿ. ಇನ್​ಸ್ಟಾಗ್ರಾಂನಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ವೀಕ್ಷಣೆಗೆ ಒಳಪಟ್ಟ ವಿಡಿಯೋ ಇನ್ನೊಂದು ಇಲ್ಲ.

ಈ ಹಿಂದೆ ಹಾರ್ದಿಕ್ ಪಾಂಡ್ಯಾರ ರೀಲ್ ಒಂದು 1.6 ಬಿಲಿಯನ್ ವೀಕ್ಷಣೆ ಕಂಡಿತ್ತು.ಹಾಗೆ ವಿಶ್ವ ವಿಖ್ಯಾತ ಫುಟ್​ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ರೀಲ್ಸ್​ ಒಂದು 1.5 ಬಿಲಿಯನ್​ ವೀಕ್ಷಣೆ ಕಂಡಿತ್ತು. ಆದರೆ ದೀಪಿಕಾ ಪಡುಕೋಣೆಯ ರೀಲ್ಸ್ ಎಲ್ಲ ದಾಖಲೆಗಳನ್ನು ಮುರಿದಿದೆ. ಆಗಸ್ಟ್ 4ಕ್ಕೆ ದೀಪಿಕಾ ಪಡುಕೋಣೆಯ ರೀಲ್ಸ್ 190 ಕೋಟಿ ವೀವ್ಸ್ ಪಡೆದುಕೊಂಡಿತ್ತು. ಸುಮಾರು 11 ಲಕ್ಷ ಲೈಕ್ಸ್​ಗಳನ್ನು ಸಹ ಈ ವಿಡಿಯೋ ಪಡೆದುಕೊಂಡಿದೆ.

The post ರೊನಾಲ್ಡೊವನ್ನು ದಾಖಲೆ ಮುರಿದು, ಹೊಸ ವಿಶ್ವ ದಾಖಲೆ ಬರೆದ ದೀಪಿಕಾ ಪಡುಕೋಣೆ. appeared first on Good News 24x7.

]]>
ಕನ್ನಡ ಹಿರಿಯ ನಟ ಹೊನ್ನವಳ್ಳಿ ಕೃಷ್ಣಗೂ ತಟ್ಟಿದೆ ಸಾರಿಗೆ ನೌಕರರ ಮುಷ್ಕರದ ಬಸ್​ ಬಂದ್​ ಬಿಸಿ! https://www.goodnews24x7.com/kannada-veteran-actor-honnavalli-krishna-also-affected-by-the-transport-workers-strike-bus-bandh-is-hot/ Tue, 05 Aug 2025 10:27:32 +0000 https://www.goodnews24x7.com/?p=5371 ಸಾರಿಗೆ ನೌಕರರ ಬಂದ್ ಎಪೆಕ್ಟ್ ಬರೀ ಜನ ಸಾಮಾನ್ಯರಿಗಷ್ಟೇ ಅಲ್ಲದೇ ಸ್ಟಾರ್​ ನಟನಿಗೂ ತಟ್ಟಿದೆ. ವೈಟ್ ಪಿಲ್ಡ್​​ನಿಂದ ಮೆಟ್ರೋ ಮೂಲಕ ಮೆಜೆಸ್ಟಿಕ್​ಗೆ ಕನ್ನಡ ಹಿರಿಯ ನಟ ಹೊನ್ನವಳ್ಳಿ ಕೃಷ್ಣ ದಂಪತಿ ಬಂದಿದ್ದರು. ಆದ್ರೆ, ಮೆಜೆಸ್ಟಿಕ್‌ನಿಂದ ಮಾದನಾಯಕಹಳ್ಳಿ ಹೋಗಲು ಬಸ್​ಗಾಗಿ ಕಾಯುತ್ತಿದ್ದರು. ಸಾರಿಗೆ…

The post ಕನ್ನಡ ಹಿರಿಯ ನಟ ಹೊನ್ನವಳ್ಳಿ ಕೃಷ್ಣಗೂ ತಟ್ಟಿದೆ ಸಾರಿಗೆ ನೌಕರರ ಮುಷ್ಕರದ ಬಸ್​ ಬಂದ್​ ಬಿಸಿ! appeared first on Good News 24x7.

]]>

ಸಾರಿಗೆ ನೌಕರರ ಬಂದ್ ಎಪೆಕ್ಟ್ ಬರೀ ಜನ ಸಾಮಾನ್ಯರಿಗಷ್ಟೇ ಅಲ್ಲದೇ ಸ್ಟಾರ್​ ನಟನಿಗೂ ತಟ್ಟಿದೆ. ವೈಟ್ ಪಿಲ್ಡ್​​ನಿಂದ ಮೆಟ್ರೋ ಮೂಲಕ ಮೆಜೆಸ್ಟಿಕ್​ಗೆ ಕನ್ನಡ ಹಿರಿಯ ನಟ ಹೊನ್ನವಳ್ಳಿ ಕೃಷ್ಣ ದಂಪತಿ ಬಂದಿದ್ದರು. ಆದ್ರೆ, ಮೆಜೆಸ್ಟಿಕ್‌ನಿಂದ ಮಾದನಾಯಕಹಳ್ಳಿ ಹೋಗಲು ಬಸ್​ಗಾಗಿ ಕಾಯುತ್ತಿದ್ದರು.

ಸಾರಿಗೆ ನೌಕರರ ಮುಷ್ಕರ ಮಾಡಿದ್ದರಿಂದ ಇತ್ತೀಚಿಗೆ ನೇಮಕವಾದ ಚಾಲಕರು ಇಂದು ಬಸ್ ಚಲಾಯಿಸುತ್ತಿದ್ದರು. ಆದ್ರೆ ಬಹುತೇಕ ಬಸ್​ಗಳು ರಸ್ತೆಗೆ ಇಳಿದಿಲ್ಲ. ಹೀಗಾಗಿ ತಮ್ಮ ತಮ್ಮ ಊರಿಗೆ ಹೋಗಲು ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿತ್ತು.

ಆದ್ರೆ, ಸಾರಿಗೆ ನೌಕರರ ಬಂದ್ ಎಪೆಕ್ಟ್ ಬರೀ ಜನ ಸಾಮಾನ್ಯರಿಗಷ್ಟೇ ಅಲ್ಲದೇ ಸ್ಟಾರ್​ ನಟನಿಗೂ ತಟ್ಟಿದೆ. ವೈಟ್ ಪಿಲ್ಡ್​​ನಿಂದ ಮೆಟ್ರೋ ಮೂಲಕ ಮೆಜೆಸ್ಟಿಕ್​ಗೆ ಕನ್ನಡ ಹಿರಿಯ ನಟ ಹೊನ್ನವಳ್ಳಿ ಕೃಷ್ಣ ದಂಪತಿ ಬಂದಿದ್ದರು. ಆದ್ರೆ, ಮೆಜೆಸ್ಟಿಕ್‌ನಿಂದ ಮಾದನಾಯಕನಹಳ್ಳಿಗೆ ಹೋಗಲು ಬಸ್​ಗಾಗಿ ಕಾಯುತ್ತಿದ್ದರು. ಆದರೆ ಬಸ್​ಗಳು ರಸ್ತೆಗಿಳಿಯದ ಕಾರಣ ಕ್ಯಾಬ್ ಮೂಲಕ ತೆರಳಿದ್ದಾರೆ.

ಈ ಬಗ್ಗೆ ಮಾತಾಡಿದ ನಟ ಹೊನ್ನವಳ್ಳಿ ಕೃಷ್ಣ, ಈ ತರ ಬಂದ್​ ಆಗಬಾರದಾಗಿತ್ತು. ಈಗ ತಾನೇ ಊರಿಗೆ ಹೋಗಿ ಬರ್ತಾ ಇದ್ವಿ. ಹೀಗೆ ಆಗಿದಕ್ಕೆ ಜನರಿಗೆ ತುಂಬಾ ತೊಂದರೆ ಆಗಿದೆ. ನಿಲ್ದಾಣದಲ್ಲಿ ಬಸ್​ಗಾಗಿ ಕಾದು ಕುಳಿತಿದ್ದಾರೆ. ಇನ್ನೊಂದು ಸಾರಿ ಹೀಗೆ ಆಗದಿರೋ ಹಾಗೇ ನೋಡಿಕೊಳ್ಳಬೇಕು ಎಂದರು.

The post ಕನ್ನಡ ಹಿರಿಯ ನಟ ಹೊನ್ನವಳ್ಳಿ ಕೃಷ್ಣಗೂ ತಟ್ಟಿದೆ ಸಾರಿಗೆ ನೌಕರರ ಮುಷ್ಕರದ ಬಸ್​ ಬಂದ್​ ಬಿಸಿ! appeared first on Good News 24x7.

]]>
‘ಕರಿಯ 2’ ಚಿತ್ರದ ನಾಯಕ ನಟ ಅನಾರೋಗ್ಯದಿಂದ ನಿಧನ. https://www.goodnews24x7.com/the-lead-actor-of-the-film-kariya-2-passed-away-due-to-illness/ Tue, 05 Aug 2025 06:17:08 +0000 https://www.goodnews24x7.com/?p=5339 ‘ಕರಿಯ 2’, ‘ಗಣಪ’, ‘ಕೆಂಪ’ ಇನ್ನೂ ಕೆಲ ಸಿನಿಮಾಗಳಲ್ಲಿ ನಟಿಸಿರುವ ನಟ ಸಂತೋಷ್ ಬಾಲರಾಜ್ ನಿಧನ ಹೊಂದಿದ್ದಾರೆ. ಕಳೆದ ಕೆಲ ದಿನಗಳಿಂದಲೂ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಜಾಂಡೀಸ್ ಆಗಿತ್ತು. ಬನಶಂಕರಿಯ ಸಾಗರ್ ಅಪೊಲೊ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ…

The post ‘ಕರಿಯ 2’ ಚಿತ್ರದ ನಾಯಕ ನಟ ಅನಾರೋಗ್ಯದಿಂದ ನಿಧನ. appeared first on Good News 24x7.

]]>

‘ಕರಿಯ 2’, ‘ಗಣಪ’, ‘ಕೆಂಪ’ ಇನ್ನೂ ಕೆಲ ಸಿನಿಮಾಗಳಲ್ಲಿ ನಟಿಸಿರುವ ನಟ ಸಂತೋಷ್ ಬಾಲರಾಜ್ ನಿಧನ ಹೊಂದಿದ್ದಾರೆ. ಕಳೆದ ಕೆಲ ದಿನಗಳಿಂದಲೂ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಜಾಂಡೀಸ್ ಆಗಿತ್ತು. ಬನಶಂಕರಿಯ ಸಾಗರ್ ಅಪೊಲೊ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು.

ಅವರಿಗೆ 38 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಕೆಲ ದಿನಗಳ ಹಿಂದಷ್ಟೆ ಬನಶಂಕರಿಯ ಸಾಗರ್ ಅಪೋಲೊ ಆಸ್ಪತ್ರೆಗೆ ಅವರು ಚಿಕಿತ್ಸೆಗಾಗಿ ದಾಖಲಾಗಿದ್ದರು. ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದ ಕಾರಣ, ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸಂತೋಷ್ ಬಾಲರಾಜ್ ನಿಧನ ಹೊಂದಿದ್ದಾರೆ.

https://youtu.be/CX6-oIcxgPQ?si=zZtsHbWQ_ujIhHD3ಅನಿಲ್ ಚಿಕ್ಕಮಾದು ನಾನ್ ಕಾಂಟ್ರವರ್ಸಿಯಲ್ ಲೀಡರ್… ಅವರ ಹೆಸರಿಗೆ ಮಸಿ ಬಳಿಯುವ ಹುನ್ನಾರ ನಡೆಯುತ್ತಿದೆ

ಸಂತೋಷ್ ಬಾಲರಾಜ್ ಅವರಿಗೆ ಜಾಂಡೀಸ್ ಆಗಿತ್ತು. ಜಾಂಡೀಸ್ ಖಾಯಿಲೆ ಬಾಲರಾಜ್ ಅವರ ದೇಹವನ್ನೆಲ್ಲ ಆವರಿಸಿತ್ತು. ಕಳೆದ ಎರಡು ದಿನದಿಂದಲೂ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು. ಯಕೃತ್ತು ಮತ್ತು ಕಿಡ್ನಿಯ ಸಮಸ್ಯೆಯಿಂದಾಗಿ ಅವರಿಗೆ ಜಾಂಡೀಸ್ ತಗುಲಿತ್ತು. ಈ ಮೊದಲೂ ಸಹ ಸಂತೋಷ್ ಬಾಲರಾಜ್ ಅವರು ಜಾಂಡೀಸ್​ನಿಂದ ಬಳಲಿದ್ದರು. ಆಗ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ ಈ ಬಾರಿ ಪರಿಸ್ಥಿತಿ ಕೈ ಮೀರಿ ಹೋಗಿತ್ತು. ಸಂತೋಷ್ ಅವರಿಗೆ ಮದುವೆ ಆಗಿರಲಿಲ್ಲ. ತಾಯಿ ಮತ್ತು ಸಹೋದರಿ ಇದ್ದರು.

‘ಕೆಂಪ’ ಸಿನಿಮಾ ಮೂಲಕ ಸಂತೋಷ್ ಬಾಲರಾಜ್ ಚಿತ್ರರಂಗ ಪ್ರವೇಶಿಸಿದ್ದರು. ಆ ಬಳಿಕ ಅವರು ‘ಕರಿಯ 2’, ‘ಜನ್ಮ’ ಮತ್ತು ‘ಗಣಪ’ ಸಿನಿಮಾಗಳಲ್ಲಿ ನಟಿಸಿದರು. ದರ್ಶನ್ ನಟನೆಯ ‘ಕರಿಯ’ ಸಿನಿಮಾದ ನಿರ್ಮಾಪಕ ಅನೆಕಲ್ ಬಾಲರಾಜ್ ಅವರ ಪುತ್ರ ಸಂತೋಷ್ ಬಾಲರಾಜ್, ಆನೆಕಲ್ ಬಾಲರಾಜ್ ಅವರು ಕಳೆದ ವರ್ಷವಷ್ಟೆ ನಿಧನ ಹೊಂದಿದರು. ಈಗ ಸಂತೋಷ್ ಸಹ ಇಹಲೋಕ ತ್ಯಜಿಸಿದ್ದಾರೆ. ಸಂತೋಷ್ ನಟನೆಯ ‘ಬರ್ಕ್ಲಿ’ ಮತ್ತು ‘ಸತ್ಯಂ’ ಸಿನಿಮಾಗಳು ಬಿಡುಗಡೆ ಆಗಬೇಕಿವೆ.

The post ‘ಕರಿಯ 2’ ಚಿತ್ರದ ನಾಯಕ ನಟ ಅನಾರೋಗ್ಯದಿಂದ ನಿಧನ. appeared first on Good News 24x7.

]]>
ಕನ್ನಡದ ಖ್ಯಾತ ನಟನಿಂದ ‘TEDDY BEAR’ ಅವತಾರದಲ್ಲಿ ಸಿನಿಮಾ ಪ್ರಚಾರ! https://www.goodnews24x7.com/a-famous-kannada-actor-promotes-a-movie-in-the-avatar-of-teddy-bear/ Sat, 17 May 2025 10:15:08 +0000 https://www.goodnews24x7.com/?p=3929 ಸಿನಿಮಾ ಯಶಸ್ಸಿಗೆ ಪ್ರಚಾರ ಅತ್ಯಗತ್ಯ. ಅದರಂತೆ, ಚಿತ್ರತಂಡಗಳು ವಿಭಿನ್ನವಾಗಿ ಪ್ರಮೋಶನ್ ಈವೆಂಟ್ಗಳನ್ನು ಆಯೋಜಿಸಿ ಪ್ರೇಕ್ಷಕರನ್ನು ತಲುಪುವ ಪ್ರಯತ್ನ ನಡೆಸುತ್ತವೆ. ಅದರಂತೆ, ಇದೀಗ ಕನ್ನಡದ ಖ್ಯಾತ ನಟರೋರ್ವರು ಟೆಡ್ಡಿಬೇರ್ ವೇಷ ಧರಿಸಿ ತಮ್ಮ ಸಿನಿಮಾವನ್ನು ವಿಭಿನ್ನವಾಗಿ ಪ್ರಚಾರ ಮಾಡಿ ಜನಮನ ಸೆಳೆದಿದ್ದಾರೆ. ಶೀರ್ಷಿಕೆಯಿಂದಲೇ…

The post ಕನ್ನಡದ ಖ್ಯಾತ ನಟನಿಂದ ‘TEDDY BEAR’ ಅವತಾರದಲ್ಲಿ ಸಿನಿಮಾ ಪ್ರಚಾರ! appeared first on Good News 24x7.

]]>

ಸಿನಿಮಾ ಯಶಸ್ಸಿಗೆ ಪ್ರಚಾರ ಅತ್ಯಗತ್ಯ. ಅದರಂತೆ, ಚಿತ್ರತಂಡಗಳು ವಿಭಿನ್ನವಾಗಿ ಪ್ರಮೋಶನ್ ಈವೆಂಟ್ಗಳನ್ನು ಆಯೋಜಿಸಿ ಪ್ರೇಕ್ಷಕರನ್ನು ತಲುಪುವ ಪ್ರಯತ್ನ ನಡೆಸುತ್ತವೆ. ಅದರಂತೆ, ಇದೀಗ ಕನ್ನಡದ ಖ್ಯಾತ ನಟರೋರ್ವರು ಟೆಡ್ಡಿಬೇರ್ ವೇಷ ಧರಿಸಿ ತಮ್ಮ ಸಿನಿಮಾವನ್ನು ವಿಭಿನ್ನವಾಗಿ ಪ್ರಚಾರ ಮಾಡಿ ಜನಮನ ಸೆಳೆದಿದ್ದಾರೆ. ಶೀರ್ಷಿಕೆಯಿಂದಲೇ ಕನ್ನಡ ಚಿತ್ರರಂಗದಲ್ಲಿ ಟಾಕ್ ಆಗುತ್ತಿರುವ ಸಿನಿಮಾ ”ಎಡಗೈಯೇ ಅಪಘಾತಕ್ಕೆ ಕಾರಣ”. ಸ್ಯಾಂಡಲ್ವುಡ್ನ ದೂದ್ ಪೇಡಾ ಖ್ಯಾತಿಯ ದಿಗಂತ್ ಮಂಚಾಲೆ ಮುಖ್ಯಭೂಮಿಕೆಯಲ್ಲಿರೋ ಈ ಬಹುನಿರೀಕ್ಷಿತ ಚಿತ್ರ ವಿಭಿನ್ನ ಕಾನ್ಸೆಪ್ಟ್ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿದೆ.


”ಎಡಗೈಯೇ ಅಪಘಾತಕ್ಕೆ ಕಾರಣ” ಚಿತ್ರತಂಡವು ಮೊದಲಿನಿಂದಲೂ ಬಹಳ ಡಿಫ್ರೆಂಟ್ ಆಗಿ ಪ್ರಮೋಶನ್ ಮಾಡುತ್ತಾ ಬಂದಿದೆ. ಈ ಹಿಂದೆ ಎಡಗೈ ಬಳಸುವವರಿಗೆ ಹೆಲ್ಮೆಟ್ ನೀಡಲಾಗಿತ್ತು. ನಂತರ ಮಾಡಿಸಲಾದ ಫೋಟೋಶೂಟ್ ಆನ್ಲೈನ್ನಲ್ಲಿ ಸದ್ದು ಮಾಡಿತ್ತು. ಇದೀಗ ಮತ್ತೊಂದು ಯೂನಿಕ್ ಕಾನ್ಸೆಪ್ಟ್ನೊಂದಿಗೆ ಚಿತ್ರತಂಡ ಸಾರ್ವಜನಿಕರೆದುರು ಬಂದಿದೆ.

ಹೌದು, ಬೆಂಗಳೂರಿನ ಮಾಲ್ ಒಂದರಲ್ಲಿ, ಟೆಡ್ಡಿಬೇರ್ ವೇಷ ಧರಿಸಿ, ಶೇಕ್ ಹ್ಯಾಂಡ್ ವಿತ್ ಲೆಫ್ಟ್ ಹ್ಯಾಂಡ್ ಆ್ಯಂಡ್ ಗೆಟ್ ಸರ್ಪೈಸ್ ಎಂಬ ನಾಮಫಲಕವನ್ನಿಡಿದು ವ್ಯಕ್ತಿಯೋರ್ವರು ಓಡಾಡುತ್ತಿದ್ದರು. ಪ್ರೇಕ್ಷಕರು ಥಿಯೇಟರ್ಗೆ ಬರುತ್ತಿಲ್ಲವೆಂಬ ಮಾತುಗಳು ಕೇಳಿಬರುತ್ತಿರೋ ಹೊತ್ತಲ್ಲಿ, ತಮ್ಮ ಸಿನಿಮಾ ಗೆಲ್ಲಿಸಲು ತಂಡ ಎಷ್ಟು ಶ್ರಮ ವಹಿಸುತ್ತದೆ ಎಂಬುದಕ್ಕಿದು ಬೆಸ್ಟ್ ಉದಾಹರಣೆಯಾಗಿದೆ.


ಅಷ್ಟಕ್ಕೂ ಹೀಗೆ ಟೆಡ್ಡಿ ಬೇರ್ ವೇಷ ಹಾಕಿ ಬೋರ್ಡ್ ಹಿಡಿದು ಆ ಕಡೆ ಈ ಕಡೆ ಓಡಾಡುತ್ತಿದ್ದ ವ್ಯಕ್ತಿ ಬೇರೆ ಯಾರೂ ಅಲ್ಲ. ನಟ ದಿಗಂತ್. ಯೆಸ್, ತಮ್ಮ ಸಿನಿಮಾವನ್ನು ಸಖತ್ ಯೂನಿಕ್ ಆಗಿ ಪ್ರಚಾರ ಮಾಡುತ್ತಿರೋ ದಿಗಂತ್ ಅವರನ್ನು ಕಣ್ತುಂಬಿಕೊಂಡ ಜನರಿಗಿದು ಸರ್ಪೈಸ್ ಅಂತಲೇ ಹೇಳಬಹುದು. ಸಮರ್ಥ್ ಬಿ.ಕಡಕೊಳ್ ಆ್ಯಕ್ಷನ್ ಕಟ್ ಹೇಳಿರುವ ಚಿತ್ರದಲ್ಲಿ ದಿಗಂತ್ ಮಂಚಾಲೆ ಜೋಡಿಯಾಗಿ ನಟಿ ಧನು ಹರ್ಷ ಅಭಿನಯಿಸಿದ್ದಾರೆ. ಇನ್ನುಳಿದಂತೆ, ಖ್ಯಾತ ನಟಿಯರಾದ ರಾಧಿಕಾ ನಾರಾಯಣ್ ಮತ್ತು ನಿಧಿ ಸುಬ್ಬಯ್ಯ ಕೂಡಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಪಾತ್ರದಲ್ಲಿ ನಿರೂಪ್ ಭಂಡಾರಿ ಅಭಿನಯಿಸಿದ್ದಾರೆ. ಸಮರ್ಥ್ ಅವರಿಗಿದು ಮೊದಲ ನಿರ್ದೇಶನದ ಚಿತ್ರ ಅಂತಲೇ ಹೇಳಬಹುದು.

The post ಕನ್ನಡದ ಖ್ಯಾತ ನಟನಿಂದ ‘TEDDY BEAR’ ಅವತಾರದಲ್ಲಿ ಸಿನಿಮಾ ಪ್ರಚಾರ! appeared first on Good News 24x7.

]]>