Final Archives - Good News 24x7 https://www.goodnews24x7.com/tag/final/ Kannada Tue, 26 May 2026 12:33:56 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Final Archives - Good News 24x7 https://www.goodnews24x7.com/tag/final/ 32 32 ಕ್ವಾಲಿಫೈಯರ್ ಆಡದೆಯೇ ಆರ್‌ಸಿಬಿ ಫೈನಲ್ ತಲುಪಬಹುದು..! https://www.goodnews24x7.com/rcb-can-reach-the-final-without-playing-the-qualifier/ Tue, 26 May 2026 12:28:44 +0000 https://www.goodnews24x7.com/?p=9547 ಐಪಿಎಲ್ 2026 ಕ್ವಾಲಿಫೈಯರ್ 1 ರಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಧರ್ಮಶಾಲಾದಲ್ಲಿ ಸೆಣಸಾಡಲಿವೆ. ಈ ಪಂದ್ಯ ಮಳೆಯಿಂದ ರದ್ದಾದರೆ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್‌ಸಿಬಿ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯುತ್ತದೆ. ಸೋತ ತಂಡಕ್ಕೆ ಕ್ವಾಲಿಫೈಯರ್ 2 ಆಡಲು ಮತ್ತೊಂದು ಅವಕಾಶವಿದ್ದರೂ,…

The post ಕ್ವಾಲಿಫೈಯರ್ ಆಡದೆಯೇ ಆರ್‌ಸಿಬಿ ಫೈನಲ್ ತಲುಪಬಹುದು..! appeared first on Good News 24x7.

]]>

ಐಪಿಎಲ್ 2026 ಕ್ವಾಲಿಫೈಯರ್ 1 ರಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಧರ್ಮಶಾಲಾದಲ್ಲಿ ಸೆಣಸಾಡಲಿವೆ. ಈ ಪಂದ್ಯ ಮಳೆಯಿಂದ ರದ್ದಾದರೆ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್‌ಸಿಬಿ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯುತ್ತದೆ. ಸೋತ ತಂಡಕ್ಕೆ ಕ್ವಾಲಿಫೈಯರ್ 2 ಆಡಲು ಮತ್ತೊಂದು ಅವಕಾಶವಿದ್ದರೂ, ಮಳೆ ನಿಯಮ ಆರ್‌ಸಿಬಿಗೆ ವರದಾನವಾಗಲಿದೆ.

ಐಪಿಎಲ್ ರ ಸೀಸನ್ ಅಂತಿಮ ಹಂತಕ್ಕೆ ತಲುಪಿದೆ. ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಆರ್​ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ಇಂದು ಧರ್ಮಶಾಲಾದಲ್ಲಿ ಮೊದಲ ಕ್ವಾಲಿಫೈಯರ್ ಆಡಲು ಸಿದ್ಧವಾಗಿವೆ. ಪಂದ್ಯ ಸಂಜೆ  7:30 ಕ್ಕೆ ಪ್ರಾರಂಭವಾಗಲಿದ್ದು, ಈ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯುತ್ತದೆ. ಇತ್ತ ಸೋತ ತಂಡಕ್ಕೆ ಮತ್ತೊಂದು ಅವಕಾಶವಿದ್ದರೂ (ಕ್ವಾಲಿಫೈಯರ್-2), ಎರಡೂ ತಂಡಗಳು ಈ ಪಂದ್ಯವನ್ನು ಗೆದ್ದು ಫೈನಲ್ ಸ್ಥಾನವನ್ನು ಖಚಿತಪಡಿಸಿಕೊಳ್ಳುವ ಇರಾದೆಯಲ್ಲಿವೆ. ಆದಾಗ್ಯೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್‌ಸಿಬಿ ಕ್ವಾಲಿಫೈಯರ್ ಆಡದೆಯೇ ಫೈನಲ್ ತಲುಪುವ ಅವಕಾಶವನ್ನು ಹೊಂದಿದೆ. ಅದು ಹೇಗೆ ಸಾಧ್ಯ?

ಪಂದ್ಯ ರದ್ದಾದರೆ ಆರ್​ಸಿಬಿ ಫೈನಲ್​ಗೆ

ವಾಸ್ತವವಾಗಿ ಫೈನಲ್ ಹೊರತುಪಡಿಸಿ ಯಾವುದೇ ಪ್ಲೇಆಫ್ ಪಂದ್ಯಕ್ಕೆ ಮೀಸಲು ದಿನವನ್ನು ನಿಗದಿಪಡಿಸಲಾಗಿಲ್ಲ. ಆದ್ದರಿಂದ, ಕ್ವಾಲಿಫೈಯರ್ 1, ಎಲಿಮಿನೇಟರ್ ಮತ್ತು ಕ್ವಾಲಿಫೈಯರ್ 2 ಪಂದ್ಯಗಳು ಮಳೆಯಿಂದಾಗಿ ರದ್ದಾದರೆ, ಮರುದಿನ ಪಂದ್ಯಗಳನ್ನು ಆಡಲಾಗುವುದಿಲ್ಲ. ಹೀಗಾಗಿ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯಗಳಲ್ಲಿ ಮಳೆ ಬಂದರೆ, ಅದೇ ದಿನ ಪಂದ್ಯವನ್ನು ಮುಗಿಸಲು ಪ್ರಯತ್ನಿಸಲಾಗುತ್ತದೆ. ಪಂದ್ಯದ ಆರಂಭ ವಿಳಂಬವಾದರೆ, ಕನಿಷ್ಠ ಐದು ಓವರ್‌ಗಳ ಪಂದ್ಯವನ್ನು ಆಡಿಸಲು ಪ್ರಯತ್ನಿಸಲಾಗುತ್ತದೆ. ಇದಕ್ಕಾಗಿ, 120 ನಿಮಿಷಗಳ ಹೆಚ್ಚುವರಿ ಸಮಯವನ್ನು ನೀಡಲಾಗಿದೆ. ಆದರೆ ಹೆಚ್ಚುವರಿ ಸಮಯದ 120 ನಿಮಿಷಗಳಲ್ಲೂ ಪಂದ್ಯ ಮುಗಿಯದಿದ್ದರೆ, ಆಗ ಪಾಯಿಂಟ್‌ ಪಟ್ಟಿ ಪ್ರಮುಖ ಪಾತ್ರವಹಿಸುತ್ತದೆ.

https://www.instagram.com/reel/DYzRfaoE5RV/?utm_source=ig_web_copy_link&igsh=MzRlODBiNWFlZA==ಚಾಮುಂಡಿ ತಾಯಿ ಮುಂದೆ ಕಡೆಗೂ ಕ್ಷಮೆ ಕೇಳಿದ ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್

ಅಂದರೆ ಪಾಯಿಂಟ್ ಪಟ್ಟಿಯಲ್ಲಿ ಯಾವ ತಂಡ ಮೇಲುಗೈ ಸಾಧಿಸಿರುತ್ತದೋ ಆ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತದೆ. ಇದರರ್ಥ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್​ಸಿಬಿ ಕ್ವಾಲಿಫೈಯರ್ 1 ಆಡದೆಯೇ ನೇರವಾಗಿ ಫೈನಲ್​ಗೆ ಅರ್ಹತೆ ಪಡೆಯುತ್ತದೆ. ಇತ್ತ ಗುಜರಾತ್ ತಂಡ ಕ್ವಾಲಿಫೈಯರ್ 2 ಆಡಬೇಕಾಗುತ್ತದೆ.

ಅಗ್ರಸ್ಥಾನದಲ್ಲಿ ಆರ್​ಸಿಬಿ


ಐಪಿಎಲ್ 2026 ರ ಗುಂಪು ಹಂತ ಮುಗಿದ ಬಳಿಕ ನಾವು ಪಾಯಿಂಟ್ ಪಟ್ಟಿಯನ್ನು ನೋಡುವುದಾದರೆ.. ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಹಾಲಿ ಚಾಂಪಿಯನ್ ಆರ್​ಸಿಬಿ ಲೀಗ್ ಹಂತದಲ್ಲಿ ಆಡಿದ 14 ಪಂದ್ಯಗಳಲ್ಲಿ 9 ಗೆಲುವು ಹಾಗೂ 5 ಸೋಲುಗಳೊಂದಿಗೆ 18 ಅಂಕಗಳನ್ನು ಕಲೆಹಾಕಿದ್ದು, +0.783 ನೆಟ್ ರನ್​ರೇಟ್ ಹೊಂದಿದೆ. ಇತ್ತ ಎರಡನೇ ಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ಕೂಡ ಆಡಿದ 14 ಪಂದ್ಯಗಳಲ್ಲಿ 9 ಗೆಲುವು ಹಾಗೂ 5 ಸೋಲುಗಳೊಂದಿಗೆ 18 ಅಂಕಗಳನ್ನು ಕಲೆಹಾಕಿದೆ. ಆದರೆ ಗುಜರಾತ್ ತಂಡದ ನೆಟ್ ರನ್​ರೇಟ್ ಆರ್​ಸಿಬಿಗಿಂತ ಕಡಿಮೆ ಅಂದರೆ +0.695 ಆಗಿರುವ ಕಾರಣ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

ಧರ್ಮಶಾಲಾದಲ್ಲಿ ಹವಾಮಾನ ಹೇಗಿರಲಿದೆ?


ಧರ್ಮಶಾಲಾ ಮೈದಾನವು ಪರ್ವತಗಳಿಂದ ಸುತ್ತುವರೆದಿದೆ. ಇದರಿಂದಾಗಿ, ಹವಾಮಾನ ಯಾವುದೇ ಸಮಯದಲ್ಲಿ ಬದಲಾಗಬಹುದು. ಆದಾಗ್ಯೂ, ಹವಾಮಾನ ಮುನ್ಸೂಚನೆಯ ಪ್ರಕಾರ, ಪಂದ್ಯದ ದಿನದಂದು ಮಳೆಯಾಗುವ ಸಾಧ್ಯತೆ ಶೇ. 25 ರಷ್ಟು ಇದೆ. ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್ ಇರಬಹುದೆಂದು ನಿರೀಕ್ಷಿಸಲಾಗಿದೆ. ಪ್ರಸ್ತುತ, ಪಂದ್ಯದ ಸಮಯದಲ್ಲಿ ಮಳೆಯಾಗುವ ಸಾಧ್ಯತೆಯಿಲ್ಲ. ಹೀಗಾಗಿ ಅಭಿಮಾನಿಗಳು ಯಾವುದೇ ಆತಂಕವಿಲ್ಲದೆ ಪೂರ್ಣ ಪಂದ್ಯವನ್ನು ವೀಕ್ಷಿಸಬಹುದಾಗಿದೆ. ಹಾಗೆಯೇ ಮಳೆ ಬರುವ ಸಾಧ್ಯತೆ ಇರದ ಕಾರಣ, ಆರ್​ಸಿಬಿ ಈ ಪಂದ್ಯವನ್ನು ಆಡಿ, ಜಯ ಸಾಧಿಸಿಯೇ ಫೈನಲ್​ಗೆ ಟಿಕೆಟ್ ಪಡೆಯಬೇಕಾಗಿದೆ.

The post ಕ್ವಾಲಿಫೈಯರ್ ಆಡದೆಯೇ ಆರ್‌ಸಿಬಿ ಫೈನಲ್ ತಲುಪಬಹುದು..! appeared first on Good News 24x7.

]]>
ಇಂದು ಆರ್‌ಸಿಬಿ – ಡೆಲ್ಲಿ ಫೈನಲ್‌ : ಎರಡನೇ ಕಪ್ ಮೇಲೆ ಆರ್‌ಸಿಬಿ ಕಣ್ಣು https://www.goodnews24x7.com/rcb-delhi-final-today-rcb-eyes-second-cup/ Thu, 05 Feb 2026 07:15:52 +0000 https://www.goodnews24x7.com/?p=8346 ಇಂದು ಆರ್‌ಸಿಬಿ – ಡೆಲ್ಲಿ ಫೈನಲ್‌ : ಎರಡನೇ ಕಪ್ ಮೇಲೆ ಆರ್‌ಸಿಬಿ ಕಣ್ಣು ಮಹಿಳಾ ಪ್ರೀಮಿಯರ್ ಲೀಗ್‌ನ 4ನೇ ಸೀಸನ್‌ನ ಫೈನಲ್‌ನಲ್ಲಿ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಫೈಟ್ ನಡೆಸಲಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲೀಗ್ ಹಂತದಲ್ಲಿ…

The post ಇಂದು ಆರ್‌ಸಿಬಿ – ಡೆಲ್ಲಿ ಫೈನಲ್‌ : ಎರಡನೇ ಕಪ್ ಮೇಲೆ ಆರ್‌ಸಿಬಿ ಕಣ್ಣು appeared first on Good News 24x7.

]]>

ಇಂದು ಆರ್‌ಸಿಬಿ – ಡೆಲ್ಲಿ ಫೈನಲ್‌ : ಎರಡನೇ ಕಪ್ ಮೇಲೆ ಆರ್‌ಸಿಬಿ ಕಣ್ಣು

ಮಹಿಳಾ ಪ್ರೀಮಿಯರ್ ಲೀಗ್‌ನ 4ನೇ ಸೀಸನ್‌ನ ಫೈನಲ್‌ನಲ್ಲಿ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಫೈಟ್ ನಡೆಸಲಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ನೇರವಾಗಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಇನ್ನೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಸೋಲಿಸಿ ಫೈನಲ್‌ ಪ್ರವೇಶಿಸಿದೆ.

ಎರಡನೇ ಸೀಸನ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಆರ್‌ಸಿಬಿ ತಂಡವು ಈ ಬಾರಿ ಕೂಡ ಭರ್ಜರಿ ಫಾರ್ಮ್‌ನಲ್ಲಿದೆ. ಸ್ಮೃತಿ ಮಂಧಾನ ಮತ್ತು ರಿಚಾ ಘೋಷ್ ಅವರಂತಹ ಆಟಗಾರ್ತಿಯರು ತಂಡದ ಬಲವಾಗಿದ್ದಾರೆ. ಮತ್ತೊಂದೆಡೆ ಮೂರು ಬಾರಿ ಫೈನಲ್ ತಲುಪಿರುವ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಬಾರಿಗೆ ಟ್ರೋಫಿ ಗೆಲ್ಲುವ ತವಕದಲ್ಲಿದೆ.

ಒಟ್ಟಿನಲ್ಲಿ ವಡೋದರಾದಲ್ಲಿ ನಡೆಯಲಿರುವ ಈ ಫೈನಲ್ ಪಂದ್ಯವು ಕೋಟಿಗಟ್ಟಲೆ ಕ್ರಿಕೆಟ್ ಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ‘ಈ ಸಲವೂ ಕಪ್ ನಮ್ದೇ’ ಎನ್ನುತ್ತಿರುವ ಆರ್‌ಸಿಬಿ ಅಭಿಮಾನಿಗಳು ತಮ್ಮ ನೆಚ್ಚಿನ ತಂಡದ ಗೆಲುವಿಗಾಗಿ ಕಾತರದಿಂದ ಕಾಯುತ್ತಿದ್ದಾರೆ.

The post ಇಂದು ಆರ್‌ಸಿಬಿ – ಡೆಲ್ಲಿ ಫೈನಲ್‌ : ಎರಡನೇ ಕಪ್ ಮೇಲೆ ಆರ್‌ಸಿಬಿ ಕಣ್ಣು appeared first on Good News 24x7.

]]>
World Cup 2025: ಇನ್ನೂ ಆರಂಭವಾಗದ ವಿಶ್ವಕಪ್ ಫೈನಲ್ ; ಮುಂಬೈನಲ್ಲಿ ಭಾರಿ ಮಳೆ https://www.goodnews24x7.com/world-cup-2025-world-cup-final-yet-to-start-heavy-rain-in-mumbai/ Sun, 02 Nov 2025 11:31:08 +0000 https://www.goodnews24x7.com/?p=8002 ICC Women’s World Cup 2025 Final: ಮುಂಬೈನಲ್ಲಿ ನಡೆಯಬೇಕಿದ್ದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025 ರ ಭಾರತ-ದಕ್ಷಿಣ ಆಫ್ರಿಕಾ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ಮಳೆಯಿಂದ ಪಂದ್ಯ ಇದುವರೆಗೂ ಆರಂಭವಾಗಿಲ್ಲ. ಒಂದು ವೇಳೆ ಇಂದು…

The post World Cup 2025: ಇನ್ನೂ ಆರಂಭವಾಗದ ವಿಶ್ವಕಪ್ ಫೈನಲ್ ; ಮುಂಬೈನಲ್ಲಿ ಭಾರಿ ಮಳೆ appeared first on Good News 24x7.

]]>

ICC Women’s World Cup 2025 Final: ಮುಂಬೈನಲ್ಲಿ ನಡೆಯಬೇಕಿದ್ದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025 ರ ಭಾರತ-ದಕ್ಷಿಣ ಆಫ್ರಿಕಾ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ಮಳೆಯಿಂದ ಪಂದ್ಯ ಇದುವರೆಗೂ ಆರಂಭವಾಗಿಲ್ಲ. ಒಂದು ವೇಳೆ ಇಂದು ಪಂದ್ಯ ನಡೆಯದಿದ್ದರೆ, ನವೆಂಬರ್ 2 ರಂದು ಮೀಸಲು ದಿನದಂದು ಪಂದ್ಯ ಪೂರ್ಣಗೊಳಿಸಲಾಗುತ್ತದೆ. ಮಳೆ ನಿಂತರೆ 20 ಓವರ್‌ಗಳ ಪಂದ್ಯ ನಡೆಸಲು ಪ್ರಯತ್ನಿಸಲಾಗುತ್ತದೆ.

ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025 ರ ಫೈನಲ್ (ICC Women’s World Cup 2025 Final) ಪಂದ್ಯ ಭಾರತ ಮತ್ತು ದಕ್ಷಿಣ ಆಫ್ರಿಕಾದಂತಹ (India vs South Africa) ಬಲಿಷ್ಠ ತಂಡಗಳ ನಡುವೆ ನಡೆಯಲಿದೆ. ಆದರೆ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಭಾರತೀಯ ಕಾಲಮಾನ ಮಧ್ಯಾಹ್ನ 3:00 ಗಂಟೆಗೆ ಆರಂಭವಾಗಬೇಕಿದ್ದ ಪಂದ್ಯ ಮಳೆಯಿಂದಾಗಿ ಇದುವರೆಗೂ ಆರಂಭವಾಗಿಲ್ಲ. ವಾಸ್ತವವಾಗಿ ಪಂದ್ಯದ ದಿನದಂದು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮೊದಲೇ ಮುನ್ಸೂಚನೆ ನೀಡಿತ್ತು. ಅದರಂತೆ ಮುಂಬೈನಲ್ಲಿ ಮಳೆ ಎಡಬಿಡದೆ ಸುರಿಯುತ್ತಿದೆ. ಇದರಿಂದಾಗಿ ಟಾಸ್ ಕೂಡ ನಡೆದಿಲ್ಲ.

ಶೇ. 63 ರಷ್ಟು ಮಳೆ
ಹವಾಮಾನ ಇಲಾಖೆಯ ವರದಿ ಪ್ರಕಾರ ನವಿ ಮುಂಬೈನಲ್ಲಿ ಪಂದ್ಯದ ದಿನದಂದು ಮಳೆಯಾಗುವ ಸಾಧ್ಯತೆ ಶೇ. 63 ರಷ್ಟು ಇರಲಿದೆ ಎಂದು ವರದಿಯಾಗಿತ್ತು. ಅದರಂತೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. ಒಂದೊಮ್ಮೆ ಮಳೆ ಕೊಂಚ ವಿರಾಮ ತೆಗೆದುಕೊಂಡ ಕಾರಣ 3 ಗಂಟೆಗೆ ಟಾಸ್ ನಡೆಸಲು ತೀರ್ಮಾನಿಸಲಾಗಿತ್ತು. ಹಾಗೆಯೇ 3:30 ಕ್ಕೆ ಪಂದ್ಯ ಆರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಟಾಸ್ ನಡೆಯುವುದಕ್ಕೂ ಮುನ್ನವೇ ಮತ್ತೆ ಮಳೆ ಸುರಿಯಲಾರಂಭಿಸಿದೆ.

ಮೀಸಲು ದಿನ ನಿಗದಿಪಡಿಸಲಾಗಿದೆ
ಮಳೆ ಧಾರಕಾರವಾಗಿ ಸುರಿಯುತ್ತಿರುವ ಕಾರಣ ಈ ಪಂದ್ಯ ನಡೆಯುತ್ತದೋ ಇಲ್ಲವೋ ಎಂಬ ಆತಂಕ ಅಭಿಮಾನಿಗಳಲ್ಲಿ ಮೂಡಿದೆ. ಆದರೆ ಅಭಿಮಾನಿಗಳು ಚಿಂತಿಸಬೇಕಿಲ್ಲ. ಏಕೆಂದರೆ ಮಳೆಯಿಂದಾಗಿ ಇಂದು ಪಂದ್ಯ ನಡೆಯದಿದ್ದರೆ, ಮೀಸಲು ದಿನದಂದು ಈ ಪಂದ್ಯವನ್ನು ಪೂರ್ಣಗೊಳಿಸಲಾಗುತ್ತದೆ. ಮಳೆಯ ಮುನ್ಸೂಚನೆಯನ್ನು ಗಮನದಲಿಟ್ಟುಕೊಂಡು ಆಯೋಜಕರು ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಿಗೆ ಮೀಸಲು ದಿನವನ್ನು ನಿಗದಿಪಡಿಸಿದ್ದರು. ಅದರಂತೆ ಫೈನಲ್ ಪಂದ್ಯಕ್ಕೆ ನವೆಂಬರ್ 2 ಅನ್ನು ಮೀಸಲು ದಿನವಾಗಿ ಕಾಯ್ದಿರಿಸಲಾಗಿದೆ.

 

The post World Cup 2025: ಇನ್ನೂ ಆರಂಭವಾಗದ ವಿಶ್ವಕಪ್ ಫೈನಲ್ ; ಮುಂಬೈನಲ್ಲಿ ಭಾರಿ ಮಳೆ appeared first on Good News 24x7.

]]>