Firefighters Archives - Good News 24x7 https://www.goodnews24x7.com/tag/firefighters/ Kannada Sun, 18 May 2025 10:23:44 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Firefighters Archives - Good News 24x7 https://www.goodnews24x7.com/tag/firefighters/ 32 32 ಸಿಡಿಲ ಬಡಿತಕ್ಕೆ ಹೊತ್ತಿ ಉರಿದ ಮನೆ, ಬೋರೆ ಆನಂದೂರಿನಲ್ಲಿ ನಡೆದ ಘಟನೆ ; ಸ್ಥಳಕ್ಕೆ ಶಾಸಕ ಜಿ.ಟಿ.ದೇವೇಗೌಡ ಭೇಟಿ https://www.goodnews24x7.com/house-burnt-down-due-to-lightning-strike-in-bore-anandur-mla-g-t-deve-gowda-visits-the-spot/ Sun, 18 May 2025 10:23:36 +0000 https://www.goodnews24x7.com/?p=3981 ಮೈಸೂರು : ಆಕಸ್ಮಿಕ ಅಗ್ನಿಅವಘಡ ಸಂಭವಿಸಿ ಮೂರು ಮನೆಗಳು ಸುಟ್ಟು ಕರಕಲಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರು ತಾಲೂಕಿನ ಬೋರೆ ಆನಂದೂರಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ಅದೃಷ್ಟವಶಾತ್ ,ಮನೆಯಲ್ಲಿ ಯಾರು ಇಲ್ಲದಿದ್ದ ರಿಂದ ಭಾರಿ ಅನಾಹುತ ಒಂದು ತಪ್ಪಿದೆ. ಬೋರೆ ಆನಂದೂರು…

The post ಸಿಡಿಲ ಬಡಿತಕ್ಕೆ ಹೊತ್ತಿ ಉರಿದ ಮನೆ, ಬೋರೆ ಆನಂದೂರಿನಲ್ಲಿ ನಡೆದ ಘಟನೆ ; ಸ್ಥಳಕ್ಕೆ ಶಾಸಕ ಜಿ.ಟಿ.ದೇವೇಗೌಡ ಭೇಟಿ appeared first on Good News 24x7.

]]>

ಮೈಸೂರು : ಆಕಸ್ಮಿಕ ಅಗ್ನಿಅವಘಡ ಸಂಭವಿಸಿ ಮೂರು ಮನೆಗಳು ಸುಟ್ಟು ಕರಕಲಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರು ತಾಲೂಕಿನ ಬೋರೆ ಆನಂದೂರಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ಅದೃಷ್ಟವಶಾತ್ ,ಮನೆಯಲ್ಲಿ ಯಾರು ಇಲ್ಲದಿದ್ದ ರಿಂದ ಭಾರಿ ಅನಾಹುತ ಒಂದು ತಪ್ಪಿದೆ.


ಬೋರೆ ಆನಂದೂರು ಗ್ರಾಮದ ಶನಿವಾರೆಗೌಡ, ವೆಂಕಟೇಶ್ ಗೌಡ ಹಾಗು ಶ್ರೀನಿವಾಸಗೌಡ ಎಂಬುವವರ ಮನೆಗಳು ಬೆಂಕಿಗೆ ಆಹುತಿಯಾಗಿವೆ. ಮೂರು ಮನೆಗಳಲ್ಲಿ ಇದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ. ವಿಷಯ ತಿಳದ ತಕ್ಷಣ ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಚಾಮುಂಡೇಶ್ವರಿ ಕ್ಷೇತ್ರದ ಮೈಸೂರು ತಾಲ್ಲೂಕು ಇಲವಾಲ ಹೋಬಳಿ ಆನಂದೂರು ಗ್ರಾಮದಲ್ಲಿ ಬೆಂಕಿ ಅನಾಹುತ 3 ಮನೆಗಳು ಬೆಂಕಿಗೆ ಆಹುತಿ ಬೆಂಕಿಯ ನಾಲಿಗೆಗೆ ಮನೆಯಲ್ಲಿರುವ ದವಸ ಧಾನ್ಯ, ಬಟ್ಟೆ, ಪಾತ್ರೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.  ಸ್ಥಳಕ್ಕೆ ಶಾಸಕ ಜಿ.ಟಿ.ದೇವೇಗೌಡ ಭೇಟಿ ನೀಡಿದ್ದಾರೆ

ಅಷ್ಟೇ ಅಲ್ಲದೆ ನೊಂದ ಕುಟುಂಬಗಳಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ ಪ್ರತಿ ಕುಟುಂಬಕ್ಕೆ ಒಂದೊಂದು ಲಕ್ಷ ಪರಿಹಾರ ನೀಡಿದ ಶಾಸಕ ಜಿಟಿಡಿ ಘೋಷಣೆ ಮಾಡಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಸೆಸ್ಕಾಂ ಎಂ.ಡಿ. ಮುನಿಗೋಪಾಲ್ ರಾಜ್, ಎಸ್.ಸಿ.ಸುನೀಲ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಗಳೊಡನೆ ಸ್ಥಳ ಪರಿಶೀಲನೆ ನಡೆಸಿದ್ದಾರೆ.

The post ಸಿಡಿಲ ಬಡಿತಕ್ಕೆ ಹೊತ್ತಿ ಉರಿದ ಮನೆ, ಬೋರೆ ಆನಂದೂರಿನಲ್ಲಿ ನಡೆದ ಘಟನೆ ; ಸ್ಥಳಕ್ಕೆ ಶಾಸಕ ಜಿ.ಟಿ.ದೇವೇಗೌಡ ಭೇಟಿ appeared first on Good News 24x7.

]]>
ವಿಮಾನ-ಹೆಲಿಕ್ಯಾಪ್ಟರ್ ನಡುವೆ ಮುಖಾಮುಖಿ ಡಿಕ್ಕಿ :ಎಲ್ಲ 67 ಪ್ರಯಾಣಿಕರು ಸಾ*, 28 ಶ* ಪತ್ತೆ. https://www.goodnews24x7.com/%e0%b2%b5%e0%b2%bf%e0%b2%ae%e0%b2%be%e0%b2%a8-%e0%b2%b9%e0%b3%86%e0%b2%b2%e0%b2%bf%e0%b2%95%e0%b3%8d%e0%b2%af%e0%b2%be%e0%b2%aa%e0%b3%8d%e0%b2%9f%e0%b2%b0%e0%b3%8d-%e0%b2%a8%e0%b2%a1%e0%b3%81%e0%b2%b5/ Fri, 31 Jan 2025 09:01:46 +0000 https://www.goodnews24x7.com/?p=2007 ಆರ್ಲಿಂಗ್ಟನ್: 60 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಅಮೆರಿಕನ್ ಏರ್‌ಲೈನ್ಸ್ ಜೆಟ್ ವಿಮಾನವು ಸೇನಾ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದಿದ್ದು, ಅತ್ಯಂತ ಭೀಕರ ಅಪಘಾತದಲ್ಲಿ ವಿಮಾನ ಮತ್ತು ಹೆಲಿಕಾಪ್ಟರ್ ನಲ್ಲಿ ಎಲ್ಲಾ ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಪೊಟೊಮ್ಯಾಕ್…

The post ವಿಮಾನ-ಹೆಲಿಕ್ಯಾಪ್ಟರ್ ನಡುವೆ ಮುಖಾಮುಖಿ ಡಿಕ್ಕಿ :ಎಲ್ಲ 67 ಪ್ರಯಾಣಿಕರು ಸಾ*, 28 ಶ* ಪತ್ತೆ. appeared first on Good News 24x7.

]]>

ಆರ್ಲಿಂಗ್ಟನ್: 60 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಅಮೆರಿಕನ್ ಏರ್‌ಲೈನ್ಸ್ ಜೆಟ್ ವಿಮಾನವು ಸೇನಾ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದಿದ್ದು, ಅತ್ಯಂತ ಭೀಕರ ಅಪಘಾತದಲ್ಲಿ ವಿಮಾನ ಮತ್ತು ಹೆಲಿಕಾಪ್ಟರ್ ನಲ್ಲಿ ಎಲ್ಲಾ ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಪೊಟೊಮ್ಯಾಕ್ ನದಿಯ ಹಿಮಾವೃತ ನೀರಿನಿಂದ ಇದುವರೆಗೆ ಕನಿಷ್ಠ 28 ಶವಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ ರಾತ್ರಿ ವಾಷಿಂಗ್ಟನ್ ಬಳಿಯ ರೊನಾಲ್ಡ್ ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಲು ಯತ್ನಿಸುತ್ತಿದ್ದಾಗ ಜೆಟ್ ವಿಮಾನ ಡಿಕ್ಕಿ ಹೊಡೆದಿದೆ.


ಡಿಕ್ಕಿಯ ನಂತರ ಹೆಲಿಕಾಪ್ಟರ್ ಮತ್ತು ವಿಮಾನ ಎರಡೂ ನದಿಯಲ್ಲಿ ಪತನವಾಗಿದ್ದು, ಪೊಟೊಮ್ಯಾಕ್ ನದಿಯ ಹಿಮಾವೃತ ನೀರಿನಿಂದ ಇದುವರೆಗೆ ಕನಿಷ್ಠ 28 ಶವಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಂತದಲ್ಲಿ ಯಾವುದೇ ಪ್ರಯಾಣಿಕರು ಬದುಕುಳಿದಿದ್ದಾರೆ ಎಂಬ ನಾವು ನಂಬುವುದಿಲ್ಲ. ಹೀಗಾಗಿ ನಾವು ಈಗ ರಕ್ಷಣಾ ಕಾರ್ಯಾಚರಣೆಯನ್ನು ಮೃತದೇಹಗಳ ಪತ್ತೆ ಕಾರ್ಯಾಚರಣೆಯಾಗಿ ಬದಲಾಯಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ವಾಷಿಂಗ್ಟನ್ ಅಗ್ನಿಶಾಮಕ ದಳದ ಮುಖ್ಯಸ್ಥ ಜಾನ್ ಡೊನ್ನೆಲ್ಲಿ ಅವರು ಹೇಳಿದ್ದಾರೆ.
ವಿಮಾನವು ಮೂರು ಭಾಗಗಳಾಗಿ ತಲೆಕೆಳಗಾಗಿ ನೀರಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಹೆಲಿಕಾಪ್ಟರ್ನ ಅವಶೇಷಗಳು ಸಹ ಕಂಡುಬಂದಿವೆ. ಇನ್ನೂ ಶವಗಳಿಗಾಗಿ ಹುಡುಕಾಟ ನಡೆದಿದೆ ಎಂದು ಡೊನ್ನೆಲ್ಲಿ ತಿಳಿಸಿದ್ದಾರೆ.
ಅಪಘಾತದ ಹಿಂದಿನ ಕಾರಣವನ್ನು ಅಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ. ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (ಎನ್‌ಟಿಎಸ್‌ಬಿ) ಮತ್ತು ಫೆಡರಲ್ ವಿಮಾನಯಾನ ಆಡಳಿತ (ಎಫ್ಎಎ)ದ ತನಿಖಾಧಿಕಾರಿಗಳು ಅಪಘಾತದ ಸ್ಥಳದಲ್ಲಿದ್ದಾರೆ.

The post ವಿಮಾನ-ಹೆಲಿಕ್ಯಾಪ್ಟರ್ ನಡುವೆ ಮುಖಾಮುಖಿ ಡಿಕ್ಕಿ :ಎಲ್ಲ 67 ಪ್ರಯಾಣಿಕರು ಸಾ*, 28 ಶ* ಪತ್ತೆ. appeared first on Good News 24x7.

]]>