FRIEND Archives - Good News 24x7 https://www.goodnews24x7.com/tag/friend/ Kannada Wed, 15 Oct 2025 11:23:17 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg FRIEND Archives - Good News 24x7 https://www.goodnews24x7.com/tag/friend/ 32 32 ಈ ರೀತಿಯ ಒಬ್ಬ ಸ್ನೇಹಿತ ಶತ್ರುಗಳಿಗಿಂತ ಹೆಚ್ಚು ಅಪಾಯಕಾರಿ! https://www.goodnews24x7.com/a-friend-like-this-is-more-dangerous-than-an-enemy/ Wed, 15 Oct 2025 11:23:17 +0000 https://www.goodnews24x7.com/?p=7727 ಸಜ್ಜನರ ಸಂಘ ಹೆಜ್ಜೇನು ಸವಿದಂತೆ ಎಂಬ ಮಾತಿನಂತೆ ಯಾವಾಗಲೂ ಒಳ್ಳೆಯ ವ್ಯಕ್ತಿಗಳ ಸ್ನೇಹವನ್ನೇ ಮಾಡಬೇಕು. ಆದರೆ ನಾವು ಜೀವನದಲ್ಲಿ ಒಳ್ಳೆಯವರು ಮತ್ತು ಕೆಟ್ಟವರು ಇಬ್ಬರನ್ನೂ ಭೇಟಿಯಾಗುತ್ತೇವೆ. ಇದರಲ್ಲಿ ತಪ್ಪು ವ್ಯಕ್ತಿಗಳ ಸ್ನೇಹವನ್ನು ಮಾಡಿದರೆ ನಿಮ್ಮ ಜೀವನವೇ ನಾಶವಾಗುತ್ತದೆ, ನೀವು ಎಂದಿಗೂ ಯಶಸ್ವಿಯಾಗಲು…

The post ಈ ರೀತಿಯ ಒಬ್ಬ ಸ್ನೇಹಿತ ಶತ್ರುಗಳಿಗಿಂತ ಹೆಚ್ಚು ಅಪಾಯಕಾರಿ! appeared first on Good News 24x7.

]]>

ಸಜ್ಜನರ ಸಂಘ ಹೆಜ್ಜೇನು ಸವಿದಂತೆ ಎಂಬ ಮಾತಿನಂತೆ ಯಾವಾಗಲೂ ಒಳ್ಳೆಯ ವ್ಯಕ್ತಿಗಳ ಸ್ನೇಹವನ್ನೇ ಮಾಡಬೇಕು. ಆದರೆ ನಾವು ಜೀವನದಲ್ಲಿ ಒಳ್ಳೆಯವರು ಮತ್ತು ಕೆಟ್ಟವರು ಇಬ್ಬರನ್ನೂ ಭೇಟಿಯಾಗುತ್ತೇವೆ. ಇದರಲ್ಲಿ ತಪ್ಪು ವ್ಯಕ್ತಿಗಳ ಸ್ನೇಹವನ್ನು ಮಾಡಿದರೆ ನಿಮ್ಮ ಜೀವನವೇ ನಾಶವಾಗುತ್ತದೆ, ನೀವು ಎಂದಿಗೂ ಯಶಸ್ವಿಯಾಗಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ಚಾಣಕ್ಯ. ಹಾಗಿದ್ರೆ ನಕಲಿ ಸ್ನೇಹಿತನನ್ನು ಗುರುತಿಸುವುದು ಹೇಗೆ? ಇಲ್ಲಿದೆ ಮಾಹಿತಿ.

ಸ್ನೇಹ ಎನ್ನುವುದು ಸುಂದರ ಬಂಧ ಮಾತ್ರವಲ್ಲ, ಭರವಸೆ, ನಂಬಿಕೆಯೂ ಹೌದು. ಆದರೆ ಸ್ನೇಹಿತರನ್ನು ಆಯ್ಕೆ ಮಾಡುವ ವಿಚಾರದಲ್ಲಿ ನಾವು ಬಹಳಷ್ಟು ಜಾಗರೂಕರಾಗಿರಬೇಕು. ಏಕೆಂದರೆ ಒಬ್ಬ ಉತ್ತಮ ಸ್ನೇಹಿತನಿಂದ ನಮ್ಮ ಜೀವನ ಬೆಳಗುವಂತೆ, ಒಬ್ಬ ನಕಲಿ, ದುಷ್ಟ ಸ್ನೇಹಿತನ ಕಾರಣದಿಂದ ನಮ್ಮ ಜೀವನವೇ ಹಾಳಾಗುವ ಸಾಧ್ಯತೆ ಇರುತ್ತದೆ. ಇಂತಹ ಒಬ್ಬ ನಕಲಿ ಸ್ನೇಹಿತ 100 ಶತ್ರುಗಳಿಗೆ ಸಮ.

ಇವರು ಸಮಯಕ್ಕೆ ತಕ್ಕಂತೆ ಬಣ್ಣ ಬದಲಾಯಿಸುವುದು ಮಾತ್ರವಲ್ಲದೆ, ನಿಮ್ಮ ನಂಬಿಕೆಗೆ, ಬೆನ್ನಿಗೆ ಚೂರಿ ಹಾಕುತ್ತಾರೆ. ಇಂತಹವರ ಬಗ್ಗೆ ಸಾಕಷ್ಟು ಜಾಗರೂಕರಾಗಿರಬೇಕು ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಹೀಗಿರುವಾಗ ನಕಲಿ ಸ್ನೇಹಿತನನ್ನು ಗುರುತಿಸುವುದು ಹೇಗೆ, ಒಬ್ಬ ಉತ್ತಮ ಸ್ನೇಹಿತ ಹೇಗಿರುತ್ತಾನೆ ಎಂಬುದನ್ನು ತಿಳಿಯುವುದು ಬಹಳ ಅವಶ್ಯಕ.

ಚಾಣಕ್ಯ ನೀತಿಯ ಪ್ರಕಾರ, ನಿಜವಾದ ಸ್ನೇಹಿತ ಯಾರು?
ನಿಮ್ಮಒಳ್ಳೆಯ ಸಮಯದಲ್ಲಿ ಮಾತ್ರ ನಿಮ್ಮನ್ನು ಬೆಂಬಲಿಸುವ ಮತ್ತು ನಿಮ್ಮ ಕೆಟ್ಟ ಸಮಯದಲ್ಲಿ ನಿಮ್ಮ ಜೊತೆಯಲ್ಲಿ ನಿಲ್ಲದವನು ಎಂದಿಗೂ ಉತ್ತಮ ಸ್ನೇಹಿತನಾಗಲು ಸಾಧ್ಯವಿಲ್ಲ ಎನ್ನುತ್ತಾರೆ ಚಾಣಕ್ಯ. ನಿಜವಾದ ಸ್ನೇಹಿತ ಎಂದರೆ ನಿಮ್ಮ ಸಂತೋಷ ಮಾತ್ರವಲ್ಲದೆ ದುಃಖದ ಸಮಯದಲ್ಲೂ ನಿಮ್ಮ ಹೆಗಲಾಗಿ ನಿಲ್ಲುವವನು. ನಿಮ್ಮ ತಪ್ಪುಗಳನ್ನು ಎತ್ತಿ ತೋರಿಸುವವನು, ಆದರೆ ನಿಮ್ಮ ಬೆನ್ನ ಹಿಂದೆ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡದವನು.

ನಕಲಿ ಸ್ನೇಹಿತರನ್ನು ಗುರುತಿಸುವುದು ಹೇಗೆ?
ಆಚಾರ್ಯ ಚಾಣಕ್ಯ ಹೇಳುತ್ತಾರೆ, “ಶತ್ರುಚ್ಛಾಯ ಮಿತ್ರತಾ ಭವತಿ ವಿನಾಶಾಯ.” ಅಂದರೆ, ಮೇಲ್ನೋಟಕ್ಕೆ ಒಳ್ಳೆಯವರಂತೆ ಕಾಣುವ ಆದರೆ ಆಳವಾಗಿ ಅಸೂಯೆ ಪಡುವ ಸ್ನೇಹಿತರು ನಿಮ್ಮ ವಿನಾಶಕ್ಕೆ ಕಾರಣ. ನಕಲಿ ಸ್ನೇಹಿತರು ನಿಮ್ಮ ಪ್ರಗತಿಯನ್ನು ನೋಡಿ ಅಸೂಯೆ ಪಡುತ್ತಾರೆ, ನಿಮ್ಮ ದೌರ್ಬಲ್ಯಗಳನ್ನು ದುರುಪಯೋಗಪಡಿಸಿಕೊಂಡು ಇತರರ ಮುಂದೆ ನಿಮ್ಮ ಘನತೆಯನ್ನು ಹಾಳು ಮಾಡುತ್ತಾರೆ. ಮುಖ್ಯವಾಗಿ ನಿಮಗೆ ಕಷ್ಟ ಅಂತ ಬಂದಾಗ, ನಿಮ್ಮ ಸಹಾಯಕ್ಕೆ ನಿಲ್ಲದೆ ಅಲ್ಲಿಂದ ಓಡಿ ಹೋಗುತ್ತಾರೆ. ಇಂತಹ ವ್ಯಕ್ತಿಗಳು ಭೂವಿಗೆ ಭಾರವಂತೆ.

ನಕಲಿ ಸ್ನೇಹಿತರು ಶತ್ರುಗಳಿಗಿಂತ ಹೆಚ್ಚು ಅಪಾಯಕಾರಿ:
ಇಂತಹ ನಕಲಿ ಸ್ನೇಹಿತರು ಶತ್ರುಗಳಿಗಿಂತ ಹೆಚ್ಚು ಅಪಾಯಕಾರಿ ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಶತ್ರುಗಳು ಎದುರು ನಿಂತು ದಾಳಿ ಮಾಡುತ್ತಾರೆ, ಆದರೆ ನಕಲಿ ಸ್ನೇಹಿತರು ಬೆನ್ನ ಹಿಂದೆ ಚೂರಿ ಹಾಕಿ, ಮನಸ್ಸಿಗೆ ಘಾಸಿ ಮಾಡುತ್ತಾರೆ. ಆಚಾರ್ಯ ಚಾಣಕ್ಯರ ಪ್ರಕಾರ ನಕಲಿ ಸ್ನೇಹಿತರು ಗುಪ್ತ ಶತ್ರು ಇದ್ದಂತೆ. ಇವರುಗಳು ಯಾವತ್ತಿಗೂ ಅಪಾಯಕಾರಿ. ಇವರಿಗೆ ದೌರ್ಬಲ್ಯಗಳೇನು ಎಂಬುದೆಲ್ಲಾ ತಿಳಿದುರುತ್ತದೆ. ಮತ್ತು ಇವರು ನಿಮ್ಮ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಇಂತಹ ನಕಲಿ ಸ್ನೇಹಿತನಿಗಿಂತ ಅಪಾಯಕಾರಿ ಯಾರೂ ಇಲ್ಲ ಎಂದು ಚಾಣಕ್ಯ ಹೇಳುತ್ತಾರೆ.

ನಕಲಿ ಸ್ನೇಹಿತರು ಹೇಗಿರುತ್ತಾರೆ?
ನಿಮ್ಮ ಯಶಸ್ಸಿನ ಬಗ್ಗೆ ಅಸೂಯೆ ಪಡುತ್ತಾರೆ.
ನಿಮ್ಮ ತಪ್ಪುಗಳನ್ನು ಸರಿಪಡಿಸುವ ಬದಲು ಅದನ್ನು ಎಲ್ಲರ ಮುಂದೆ ಆಡಿಕೊಳ್ಳುತ್ತಾರೆ. ನಿಮ್ಮ ರಹಸ್ಯಗಳನ್ನು, ನಿಮ್ಮ ದೌರ್ಬಲ್ಯಗಳನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾರೆ.
ಮುಖ್ಯವಾಗಿ ನಿಮಗೆ ಕಷ್ಟ ಅಂತ ಬಂದಾಗ ನಿಮ್ಮ ಜೊತೆ ಅವರು ನಿಲ್ಲುವುದಿಲ್ಲ, ಏನಾದರೊಂದು ಕಾರಣ ಕೊಟ್ಟು ಓಡಿ ಹೋಗುತ್ತಾರೆ. ನಿಮ್ಮ ಮುಂದೆ ಸಿಹಿ ಮಾತುಗಳನ್ನಾಡಿ, ನಿಮ್ಮ ಬೆನ್ನ ಹಿಂದೆ ನಿಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಾರೆ.

ಆದ್ದರಿಂದ ಯಾವಾಗಲೂ ಬುದ್ಧಿವಂತ ಮತ್ತು ನಿಮ್ಮ ಒಳ್ಳೆಯದನ್ನು ಬಯಸುವ ಸ್ನೇಹಿತರನ್ನು ಮಾತ್ರ ಆರಿಸಿ. ಎಂದಿಗೂ ಮೂರ್ಖರು ಅಥವಾ ಸ್ವಾರ್ಥಿಗಳ ಸ್ನೇಹವನ್ನು ಮಾಡದಿರಿ. ನಿಮ್ಮ ಮುಂದೆ ನಗುವ ಪ್ರತಿಯೊಂದು ಮುಖವೂ ವಿಶ್ವಾಸಾರ್ಹವಲ್ಲ, ಸ್ನೇಹಿತರನ್ನು ಮಾಡಿಕೊಳ್ಳುವಾಗ ಯಾವಾಗಲೂ ಎಚ್ಚರಿಕೆ ವಹಿಸಿ ಎಂದು ಚಾಣಕ್ಯರು ಸಲಹೆ ನೀಡುತ್ತಾರೆ.

The post ಈ ರೀತಿಯ ಒಬ್ಬ ಸ್ನೇಹಿತ ಶತ್ರುಗಳಿಗಿಂತ ಹೆಚ್ಚು ಅಪಾಯಕಾರಿ! appeared first on Good News 24x7.

]]>
15 ಲಕ್ಷಕ್ಕೆ ಸುಪಾರಿ ಕೊಟ್ಟು ಗರ್ಭಿಣಿ ಪತ್ನಿಯನ್ನೇ ಮುಗಿಸಿದ; ಸೀನಿಯರ್ ಮೇಲೆ ಮೋಹ.. ಪತ್ನಿಗೆ ಚಟ್ಟ! https://www.goodnews24x7.com/he-killed-his-pregnant-wife-by-giving-her-a-betel-nut-for-15-lakhs-infatuation-with-a-senior-wife-was-shocked/ Wed, 10 Sep 2025 06:31:10 +0000 https://www.goodnews24x7.com/?p=7449 ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿ ಆರು ತಿಂಗಳ ಗರ್ಭಿಣಿಯನ್ನಾಗಿ ಮಾಡಿ ಇದೀಗ ಇನ್ನೊಬ್ಬಳ ಮೇಲಿನ ವ್ಯಾಮೋಹಕ್ಕೆ ಬಿದ್ದು 15 ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟು ಹೆಂಡತಿಯನ್ನೇ ಮುಗಿಸಿದ ಘಟನೆ ಕಾಗವಾಡ ತಾಲೂಕಿನ ಬಿ.ಕೆ.ಉಗಾರದಲ್ಲಿ ನಡೆದಿದೆ. ಬೆಳಗಾವಿ: ಎರಡು ವರ್ಷಗಳ ಹಿಂದೆ…

The post 15 ಲಕ್ಷಕ್ಕೆ ಸುಪಾರಿ ಕೊಟ್ಟು ಗರ್ಭಿಣಿ ಪತ್ನಿಯನ್ನೇ ಮುಗಿಸಿದ; ಸೀನಿಯರ್ ಮೇಲೆ ಮೋಹ.. ಪತ್ನಿಗೆ ಚಟ್ಟ! appeared first on Good News 24x7.

]]>

ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿ ಆರು ತಿಂಗಳ ಗರ್ಭಿಣಿಯನ್ನಾಗಿ ಮಾಡಿ ಇದೀಗ ಇನ್ನೊಬ್ಬಳ ಮೇಲಿನ ವ್ಯಾಮೋಹಕ್ಕೆ ಬಿದ್ದು 15 ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟು ಹೆಂಡತಿಯನ್ನೇ ಮುಗಿಸಿದ ಘಟನೆ ಕಾಗವಾಡ ತಾಲೂಕಿನ ಬಿ.ಕೆ.ಉಗಾರದಲ್ಲಿ ನಡೆದಿದೆ.

ಬೆಳಗಾವಿ: ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿ ಆರು ತಿಂಗಳ ಗರ್ಭಿಣಿಯನ್ನಾಗಿ ಮಾಡಿ ಇದೀಗ ಇನ್ನೊಬ್ಬಳ ಮೇಲಿನ ವ್ಯಾಮೋಹಕ್ಕೆ ಬಿದ್ದು 15 ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟು ಹೆಂಡತಿಯನ್ನೇ ಮುಗಿಸಿದ ಘಟನೆ ಕಾಗವಾಡ ತಾಲೂಕಿನ ಬಿ.ಕೆ.ಉಗಾರದಲ್ಲಿ ನಡೆದಿದೆ. ಚೈತಾಲಿ ಗಂಡನ ಸುಪಾರಿಗೆ ಬಲಿಯಾದ ಮಹಿಳೆ. ಪ್ರದೀಪ್ ಪ್ರಮುಖ ಆರೋಪಿ. ಪ್ರಕರಣ ಸಂಬಂಧ ಪ್ರದೀಪ್ ಸೇರಿ, ಸಾಥ್ ನೀಡಿದ್ದ ಇನ್ನಿಬ್ಬರು ಆರೋಪಿಗಳನ್ನು ಕಾಗವಾಡ ಪೊಲೀಸರು ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ. ಪತಿ ಪ್ರದೀಪ್ ಹಾಗೂ ಮೃತ ಚೈತಾಲಿ ಉಗಾರ್ ಬಿ.ಕೆ.ಗ್ರಾಮದವರು. ಒಂದೇ ಗ್ರಾಮದವರಾದ ಇವರು ಪ್ರೀತಿಸಿ ಎರಡು ವರ್ಷಗಳ ಹಿಂದಷ್ಟೇ ಮದುವೆ ಆಗಿದ್ದರು. ಸಾಕ್ಷಿಯಾಗಿ ಆರು ತಿಂಗಳ ಗರ್ಭಿಣಿ ಕೂಡ ಆಗಿದ್ದಳು ಎಂದು ತಿಳಿದುಬಂದಿದೆ.

ಆಗಿದ್ದೇನು..? ಕಾನೂನು ಪದವಿ ಪಡೆದಿದ್ದ ಪ್ರದೀಪ್ ಕಿರಣಗಿ, ಕಾಗವಾಡ ಕೋರ್ಟ್‌ನಲ್ಲಿ ವಕೀಲ ವೃತ್ತಿಯಲ್ಲಿದ್ದ. ಪ್ರೇಮ-ವಿವಾಹದ ಬಳಿಕವೂ ಕಾಲೇಜಿನ ಸೀನಿಯರ್ ಜೊತೆಗೆ ಪ್ರದೀಪ್​​ಗೆ ಲವ್ ಶುರುವಾಗಿತ್ತಂತೆ. ಸೀನಿಯರ್ ಲೇಡಿಯನ್ನ ಬುಟ್ಟಿಗೆ ಹಾಕಿಕೊಳ್ಳಲು ತನಗೆ ಮದುವೆಯೇ ಆಗಿಲ್ಲ ಎಂದು ನಾಟಕವಾಡಿದ್ದಾನೆ ಎನ್ನಲಾಗಿದೆ. ಜೂನಿಯರ್ ಪ್ರದೀಪ್ ಮಾತು ನಂಬಿದ್ದ ಸೀನಿಯರ್​, ಪ್ರೀತಿಯ ಬಲೆಗೆ ಬಿದ್ದಿದ್ದಳು. ಯಾವಾಗ ಸೀನಿಯರ್ ಮೇಲೆ ಮೋಹ ಹೆಚ್ಚಾಯಿತೋ ಆಗಲೇ ಪತ್ನಿಯನ್ನು ಮುಗಿಸಲು ಪ್ಲಾನ್ ಮಾಡಿದ್ದಾನೆ ಅನ್ನೋದು ತನಿಖೆಯಿಂದ ತಿಳಿದುಬಂದಿದೆ.

ಮಾಡಿದ್ದೇನು..? ಪ್ರದೀಪ್ ತನ್ನ ಹೆಂಡತಿಯನ್ನ ಮುಗಿಸಲು ಸ್ನೇಹಿತನ ಸಹಾಯ ಪಡೆದಿದ್ದಾನೆ. ಸ್ನೇಹಿತ ರಾಜೇಂದ್ರ ಜೊತೆ ಮಾತುಕತೆ ನಡೆಸಿ 15 ಲಕ್ಷ ರೂಪಾಯಿಗೆ ಸೂಪಾರಿ ಕೊಟ್ಟಿದ್ದ ಎನ್ನಲಾಗಿದೆ. ಅಂತೆಯೇ ಚೈತಾಲಿಯನ್ನ ಮುಗಿಸಲು ಎರಡು ಬಾರಿ ಪ್ರಯತ್ನಿಸಿದ್ದಾರೆ. ಆದರೆ ಅದು ಫೇಲ್ ಆಗಿತ್ತು. ಮೂರನೇ ಬಾರಿಗೆ ಯಶಸ್ವಿಯಾಗಿದ್ದಾರೆ. ಭಾರವಾದ ವಸ್ತುವಿನಿಂದ ತಲೆಗೆ ಹೊಡೆದು ಆರು ತಿಂಗಳ ಗರ್ಭಿಣಿಯ ಜೀವ ತೆಗೆದಿದ್ದರು.

ಮುಂದೆ ಏನಾಯ್ತು..? ಆರೋಪಿಗಳಿಬ್ಬರು ಹಾಗೂ ಪ್ರದೀಪ್ ಸೇರಿ ಪ್ಲಾನ್ ಮಾಡಿದ್ದಾರೆ. ಪ್ಲಾನ್ ಪ್ರಕಾರವೇ ಆಕೆಯನ್ನು ಮುಗಿಸಿ, ಮೃತದೇಹವನ್ನು ಕೆಲ ಹೊತ್ತು ರಸ್ತೆಗೆ ತಂದು ಕಾಲ ಕಳೆದಿದ್ದಾರೆ. ಅದಾದ ನಂತರ ಆರೋಪಿ ಪ್ರದೀಪ್ ಪೊಲೀಸರಿಗೆ ಖುದ್ದು ಕರೆ ಮಾಡಿದ್ದಾನೆ. ಸೆಪ್ಟೆಂಬರ್ 7 ರಂದು ರಾತ್ರಿ 9.30ಕ್ಕೆ ಕರೆ ಮಾಡಿದ ಆತ, ಸರ್​ ರಸ್ತೆಯಲ್ಲಿ ಹೋಗುವಾಗ ಅಪಘಾತ ಆಗಿದೆ. ನನ್ನದೇ ಕಾರಿನಲ್ಲಿ ಹೋಗುವಾಗ ಅಪಘಾತ ಆಗಿದೆ. ಹೆಂಡತಿಗೆ ಗಂಭೀರ ಪೆಟ್ಟು ಬಿದ್ದಿದೆ. ನನಗೂ ಗಾಯವಾಗಿದೆ. ಪತ್ನಿ ಚೈತಾಲಿಯನ್ನು ಕಾಗವಾಡ ತಾಲೂಕು ಆಸ್ಪತ್ರೆಗೆ ದಾಖಲಿಸುತ್ತಿರೋದಾಗಿ ಹೇಳಿದ್ದಾನೆ. ವಿಷಯ ತಿಳಿದ ಪೊಲೀಸರು ತಕ್ಷಣವೇ ಕಾಗವಾಡ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಸಿಕ್ಕಿಬಿದ್ದಿದ್ದು ಹೇಗೆ..? ಪೊಲೀಸರು ಆಸ್ಪತ್ರೆಗೆ ಹೋದಾಗ ಚೈತ್ರಾಲಿ ಅನ್ನೋರು ಯಾರೂ ಇರಲಿಲ್ಲ. ಕೂಡಲೇ ಪೊಲೀಸರು ಪ್ರದೀಪ್​ಗೆ ಕರೆ ಮಾಡಿದ್ದಾರೆ. ಆಗ ಕಾಗವಾಡ ಬದಲು ಮಹಾರಾಷ್ಟ್ರದ ಮೀರಜ್‌‌ ಆಸ್ಪತ್ರೆಗೆ ಚೈತ್ರಾಣಿ ‌ಕರೆತಂದಿರುವುದಾಗಿ ಪೊಲೀಸರಿಗೆ ಪ್ರದೀಪ್ ಮಾಹಿತಿ ನೀಡಿದ್ದಾನೆ. ತಕ್ಷಣವೇ ‌ಪ್ರದೀಪ್ ನಿವಾಸಕ್ಕೆ ಕಾಗವಾಡ ಪೊಲೀಸರು ಭೇಟಿ ನೀಡಿದ್ದಾರೆ. ಆಗ ಪ್ರದೀಪ್ ನಿವಾಸದ ಎದುರು ಕಾರು ನಿಂತಿತ್ತು. ಇದರಿಂದ ಪ್ರದೀಪ್ ನಡೆ ಮೇಲೆ ಪೊಲೀಸರಿಗೆ ಅನುಮಾನ ಬಂದಿದೆ. ಇದರ ನಡುವೆ ಪ್ರದೀಪ್ ಮೀರಜ್ ಪೊಲೀಸರನ್ನ ಭೇಟಿಯಾಗಿ, ಪತ್ನಿ ಅಪಘಾತದಿಂದ ಮೃತರಾಗಿದ್ದು ದೂರು ದಾಖಲಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾನೆ. ಆಗ ಮೀರಜ್ ಪೊಲೀಸರು ‌ಕಾಗವಾಡ ಠಾಣೆಯ ‌ಪೊಲೀಸರನ್ನ ಸಂಪರ್ಕಿಸುತ್ತಾರೆ. ಆಗ ನಾವು ಮೀರಜ್‌ಗೆ ಬರ್ತಿದ್ದೇವೆ, ಯಾವುದೇ ‌ದೂರು ದಾಖಲಿಸಿಕೊಳ್ಳದಂತೆ ಮನವಿ ಮಾಡುತ್ತಾರೆ.

ಮೀರಜ್‌ಗೆ ಬರುತ್ತಿದ್ದಂತೆಯೇ ಪೊಲೀಸರು ಪ್ರದೀಪ್​ನ ವಿಚಾರಣೆಗೆ ಒಳಪಡಿಸುತ್ತಾರೆ. ಆಗ ಪ್ರದೀಪ್​​ಗೆ ಅಪಘಾತದಿಂದ ಯಾವುದೇ ಗಾಯ ಆಗದಿರೋದು ಗೊತ್ತಾಗಿದೆ. ಚೈತಾಲಿ ‌ಮೃತದೇಹ ನೋಡಿದ ಪೊಲೀಸರು ಇದು ಅಪಘಾತವಲ್ಲ, ಕೊ*ಲೆ ಎಂಬುದನ್ನ ಮೇಲ್ನೋಟಕ್ಕೆ ಪತ್ತೆಹಚ್ಚಿಕೊಳ್ತಾರೆ. ತಕ್ಷಣವೇ ಪ್ರದೀಪ್​ನನ್ನ ‌ತೀವ್ರ ವಿಚಾರಣೆ ಮಾಡಿದಾಗ ಕೊ*ಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಮಾತ್ರವಲ್ಲ, ಸ್ಥಳ ಮಹಜರು ವೇಳೆ ಪ್ರಕರಣಕ್ಕೆ ಸಾಥ್ ನೀಡಿದವರ ಹೆಸರನ್ನೂ ಹೇಳಿದ್ದಾನೆ. ಪ್ರಕರಣದಲ್ಲಿ ಐವರು ಆರೋಪಿಗಳು ಬಾಗಿಯಾಗಿರುವ ಶಂಕೆಯಿದ್ದ, ಮೂವರ ಬಂಧನವಾಗಿದೆ. ಮತ್ತಿಬ್ಬರ ಬಂಧನಕ್ಕೆ ಬಲೆ ಬೀಸಿದ್ದಾರೆ.

The post 15 ಲಕ್ಷಕ್ಕೆ ಸುಪಾರಿ ಕೊಟ್ಟು ಗರ್ಭಿಣಿ ಪತ್ನಿಯನ್ನೇ ಮುಗಿಸಿದ; ಸೀನಿಯರ್ ಮೇಲೆ ಮೋಹ.. ಪತ್ನಿಗೆ ಚಟ್ಟ! appeared first on Good News 24x7.

]]>
ಹಳೇ ಸ್ನೇಹಿತರಿಂದಲೇ ಸ್ನೇಹಿತನ ಹತ್ಯೆ. https://www.goodnews24x7.com/old-friends-kill-friend/ Mon, 11 Aug 2025 09:41:11 +0000 https://www.goodnews24x7.com/?p=5810 ಮಂಡ್ಯ: ಅವ್ರೆಲ್ಲ ಹಳೆ ಸ್ನೇಹಿತರು. ಎರಡು ಗುಂಪುಗಳಾಗಿ ಪ್ರತ್ಯೇಕವಾಗಿ ಒಂದೇ ಬಾರ್ಗೆ ಎಂಟ್ರಿ ಕೊಟ್ಟಿದ್ರು. ಆದ್ರೆ ಈ ವೇಳೆ ಎಣ್ಣೆ ಮತ್ತು ನೆತ್ತಿಗೇರ್ತಿದ್ದಂತೆ ಎರಡು ಗುಂಪಿನ ನಡುವೆ ಗಲಾಟೆಯಾಗಿದೆ. ಎಣ್ಣೆ ಮತ್ತಲ್ಲಿದ್ದ ಗುಂಪು ಹಳೆ ಸ್ನೇಹಿತನನ್ನೆ ಅಟ್ಟಾಡಿಸಿ ಹತ್ಯೆ ಮಾಡಿದ್ದಾರೆ. ಹಾಗಿದ್ರೆ…

The post ಹಳೇ ಸ್ನೇಹಿತರಿಂದಲೇ ಸ್ನೇಹಿತನ ಹತ್ಯೆ. appeared first on Good News 24x7.

]]>

ಮಂಡ್ಯ: ಅವ್ರೆಲ್ಲ ಹಳೆ ಸ್ನೇಹಿತರು. ಎರಡು ಗುಂಪುಗಳಾಗಿ ಪ್ರತ್ಯೇಕವಾಗಿ ಒಂದೇ ಬಾರ್ಗೆ ಎಂಟ್ರಿ ಕೊಟ್ಟಿದ್ರು. ಆದ್ರೆ ಈ ವೇಳೆ ಎಣ್ಣೆ ಮತ್ತು ನೆತ್ತಿಗೇರ್ತಿದ್ದಂತೆ ಎರಡು ಗುಂಪಿನ ನಡುವೆ ಗಲಾಟೆಯಾಗಿದೆ. ಎಣ್ಣೆ ಮತ್ತಲ್ಲಿದ್ದ ಗುಂಪು ಹಳೆ ಸ್ನೇಹಿತನನ್ನೆ ಅಟ್ಟಾಡಿಸಿ ಹತ್ಯೆ ಮಾಡಿದ್ದಾರೆ. ಹಾಗಿದ್ರೆ ಈ ಘಟನೆ ನಡೆದಿದ್ದು ಎಲ್ಲಿ.? ಸ್ನೇಹಿತರೆ ಸ್ನೇಹಿತನನ್ನ ಹತ್ಯೆ ಮಾಡಿದ್ದು ಹೇಕೆ ಅಂತೀರಾ? ಈ ಸ್ಟೋರಿ ನೋಡಿ.

 

ಇಂತಾದ್ದೊಂದು ಘಟನೆ ನಡೆದಿದ್ದು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲ. ಈ ದೃಶ್ಯದಲ್ಲಿ ಕಾಣ್ತಿರುವ ಈತನ ಹೆಸ್ರು ಅರುಣ್ ಅಂತ ಮದ್ದೂರಿ ವಡ್ಡರದೊಡ್ಡಿ ಗ್ರಾಮದವ್ನು. ಕೆಲ ವರ್ಷಗಳ ಹಿಂದೆ ಗ್ರಾಮ ಬಿಟ್ಟು ಬೆಂಗಳೂರು ಸೇರಿಕೊಂಡಿದ್ದ ಅರುಣ್ ಆಟೋ ಚಾಲಕನಾಗಿದ್ದ. ಆದ್ರೆ ಹಬ್ಬದ ಪ್ರಯುಕ್ತ ಮೊನ್ನೆಯಷ್ಟೆ ಗ್ರಾಮಕ್ಕೆ ಬಂದಿದ್ದ ಅರುಣ್, ಗೆಳೆಯನ ಜೊತೆ ಎಣ್ಣೆ ಹೊಡೆಯೋಕೆ ಅಂತ ಬಾರ್ಗೆ ಹೋಗಿದ್ದ. ಈ ವೇಳೆ ಬಾರ್ಗೆ ಅರುಣುನ ಹಳೆ ಸ್ನೇಹಿತರ ಗ್ಯಾಂಗ್ ಕೂಡ ಎಂಟ್ರಿ ಕೊಟ್ಟಿತ್ತು. ಈ ವೇಳೆ ಮಾತಿಗೆ ಮಾತು ಬೆಳೆದು ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡಿದ್ದಾರೆ.

ಇನ್ನು ಬಾರ್ನಲ್ಲಿ ಗಲಾಟೆ ಆಗ್ತಿದ್ದಂತೆ ಬಾರ್ ಓನರ್ ಎರಡು ಗ್ಯಾಂಗ್ನವರನ್ನ ಬಾರ್ನಿಂದ ಹೊರಕ್ಕೆ ಹಾಕಿದ್ದಾರೆ. ಇದಾದ ಬಳಿಕ ಗೆಳೆಯ ದೇವರಾಜ್ ಜೊತೆ ಅರುಣ್ ಮದ್ದೂರು ಕಡೆ ಹೊರಟಿದ್ದ. ಆದ್ರೆ ಇಷ್ಟಕ್ಕೆ ಸುಮ್ಮನಾಗದ ಮತ್ತೊಂದು ಗ್ಯಾಂಗ್ ಅರುಣನನ್ನ ಅಡ್ಡಗಟ್ಟಿ ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ್ದಾರೆ. ಈ ವೇಳೆ ತೀವ್ರ ಗಾಯಗೊಂಡಿದ್ದ ಅರುಣ್ ಸಾವನ್ನಪ್ಪಿದ್ದ. ಆದ್ರೆ ಅರುಣ್ ಜೊತೆ ಇದ್ದ ದೇವರಾಜು ಘಟನೆ ಬಗ್ಗೆ ವಿವರಿಸಿದ್ದು, ಸೂರಿ ಹಾಗೂ ವಿಕಾಸ್ ಎಂಬುವವರ ನಡುವೆ ಜಗಳವಾಗಿತ್ತು. ಸೂರಿ ಹಾಗೂ ಅರುಣ್ ಇಬ್ಬರು ಒಂದೆ ರೀತಿ ಬಿಳಿ ಬಟ್ಟೆ ಹಾಕಿದ್ದರು. ಅವರಿಗೆ ಸೂರಿ ಮೇಲೆ ಕೋಪ ಇತ್ತು ಹೀಗಾಗಿ ಕತ್ತಲೆಯಲ್ಲಿ ಬಳಿ ಬಣ್ಣದ ಶರ್ಟ್ ನೋಡಿ ಸೂರಿ ಅಂತ ಅರುಣನನ್ನ ಹೊಡೆದು ಕೊಂದಿದ್ದಾರೆ ಎಂದಿದ್ದಾನೆ.

ಇನ್ನು ಘಟನೆ ಬಳಿಕ ಅರುಣ್ ಜೊತೆ ಇದ್ದ ದೇವರಾಜ್ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದ. ನಂತ್ರ ಪೊಲೀಸರು ಸ್ಥಳಕ್ಕೆ ಹೋಗುವಷ್ಟರಲ್ಲಿ ಅರುಣ್ ಯಣವಾಗಿ ಬಿದ್ದಿದ್ದ. ಸದ್ಯ ಈ ಬಗ್ಗೆ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನ ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

The post ಹಳೇ ಸ್ನೇಹಿತರಿಂದಲೇ ಸ್ನೇಹಿತನ ಹತ್ಯೆ. appeared first on Good News 24x7.

]]>
ಬೆಂಗಳೂರಿನಲ್ಲಿ ಸ್ನೇಹಿತರನ್ನು ಮಾಡಿಕೊಳ್ಳುವುದು ತುಂಬಾ ಕಷ್ಟವಂತೆ…. https://www.goodnews24x7.com/%e0%b2%ac%e0%b3%86%e0%b2%82%e0%b2%97%e0%b2%b3%e0%b3%82%e0%b2%b0%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%b8%e0%b3%8d%e0%b2%a8%e0%b3%87%e0%b2%b9%e0%b2%bf%e0%b2%a4%e0%b2%b0%e0%b2%a8/ Fri, 16 May 2025 11:43:36 +0000 https://www.goodnews24x7.com/?p=3898 ಪ್ರವಾಸಕ್ಕೆಂದು ಬೆಂಗಳೂರಿಗೆ ಹೋದವರಿಗಿಂತ, ಕೆಲಸವನ್ನು ಅರಸಿ ಮನೆಯ ಕಷ್ಟವನ್ನು ನೀಗಲು ಹೊರಟವರೇ ಹೆಚ್ಚು. ಆದರೆ ಬೆಂಗಳೂರಿನಲ್ಲಿ ನಿವಾಸ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ ಎನ್ನುತ್ತಿದ್ದಾರೆ ಬೆಂಗಳೂರಿನಲ್ಲಿರುವ ನಿವಾಸಿಗಳು. ಉದ್ಯೋಗ ಅರಸಿಕೊಂಡು ಬೆಂಗಳೂರಿಗೆ ಬರುವ ಅದೆಷ್ಟೋ ಜನರಿಗೆ ಅಲ್ಲಿನ ವಾತಾವರಣ ಹೊಸತು, ಜನರು…

The post ಬೆಂಗಳೂರಿನಲ್ಲಿ ಸ್ನೇಹಿತರನ್ನು ಮಾಡಿಕೊಳ್ಳುವುದು ತುಂಬಾ ಕಷ್ಟವಂತೆ…. appeared first on Good News 24x7.

]]>

ಪ್ರವಾಸಕ್ಕೆಂದು ಬೆಂಗಳೂರಿಗೆ ಹೋದವರಿಗಿಂತ, ಕೆಲಸವನ್ನು ಅರಸಿ ಮನೆಯ ಕಷ್ಟವನ್ನು ನೀಗಲು ಹೊರಟವರೇ ಹೆಚ್ಚು. ಆದರೆ ಬೆಂಗಳೂರಿನಲ್ಲಿ ನಿವಾಸ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ ಎನ್ನುತ್ತಿದ್ದಾರೆ ಬೆಂಗಳೂರಿನಲ್ಲಿರುವ ನಿವಾಸಿಗಳು. ಉದ್ಯೋಗ ಅರಸಿಕೊಂಡು ಬೆಂಗಳೂರಿಗೆ ಬರುವ ಅದೆಷ್ಟೋ ಜನರಿಗೆ ಅಲ್ಲಿನ ವಾತಾವರಣ ಹೊಸತು, ಜನರು ಹೊಸಬರು. ಹೀಗಾಗಿ ಪ್ರಾರಂಭದ ದಿನಗಳಲ್ಲಿ ಹೊಸ ಜಾಗ ಹಾಗೂ ಜನರ ಜೊತೆಗೆ ಬೆರೆಯಲು ಕಷ್ಟ ಪಡುತ್ತಾರೆ. ಇದೀಗ ರೆಡ್ಡಿಟ್ ಬಳಕೆದಾರರೊಬ್ಬರು ತನ್ನ ಸ್ನೇಹಿತೆಯೂ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದು ಸ್ನೇಹಿತರಿಲ್ಲದೆ ಹೇಗೆ ಒಂಟಿತನವನ್ನು ಅನುಭವಿಸುತ್ತಿದ್ದಾಳೆ ಎಂದು ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ. ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ವಾಸ್ತವತೆಯನ್ನು ಒಪ್ಪಿಕೊಂಡಿದ್ದು ಕಾಮೆಂಟ್ ಗಳನ್ನು ಮಾಡಿದ್ದಾರೆ.

ಬದುಕು ನಿಂತ ನೀರಲ್ಲ, ಸದಾ ಹರಿಯುತ್ತಿರಬೇಕು ಎನ್ನುವ ಮಾತಿದೆ. ಹೀಗಾಗಿ ಅನಿವಾರ್ಯ ಕಾರಣಕ್ಕೆ ಬೆಂಗಳೂರಿನಂತಹ ಪಟ್ಟಣಕ್ಕೆ ಕೆಲಸ ಹುಡುಕಿಕೊಂಡು ಹೋಗುವವರೇ ಹೆಚ್ಚು. ಕೆಲವರಂತೂ ಈ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಒದ್ದಾಡುವುದಿದೆ. ಜಂಜಾಟದ ಬದುಕಿನಲ್ಲಿ ಸ್ನೇಹ, ಪ್ರೀತಿ ಹಾಗೂ ಭಾವನೆಗಳ ಬಗ್ಗೆ ಜನ ತಲೆಕೆಡಿಸಿಕೊಳ್ಳುವುದೇ ಕಡಿಮೆ. ಆದರೆ ಬಳಕೆದಾರರು, ಬೆಂಗಳೂರಿಗೆ ಸ್ಥಳಾಂತರ ಗೊಂಡಿರುವ ತನ್ನ ಸ್ನೇಹಿತೆಯೊಬ್ಬಳು, ಸ್ನೇಹಿತರನ್ನು ಮಾಡಿಕೊಳ್ಳಲು ಎಷ್ಟು ಕಷ್ಟ ಪಡುತ್ತಿದ್ದಾಳೆ. ವಯಸ್ಕರಾದಾಗ ಸ್ನೇಹಿತರನ್ನು ಮಾಡಿಕೊಳ್ಳುವುದು ಎಷ್ಟು ಕಷ್ಟವಿದೆ ಎನ್ನುವ ಬಗೆಗಿನ ಪೋಸ್ಟ್ ವೊಂದನ್ನು ಹಂಚಿ ಕೊಂಡಿದ್ದಾರೆ.

ಸದಾ ಕೆಲಸದಲ್ಲಿ ಬ್ಯುಸಿಯಾಗಿದ್ದು, ಅದ್ಭುತ ಹಾಸ್ಯ ಪ್ರಜ್ಞೆಯನ್ನು ಹೊಂದಿರುವ ಜನರಲ್ಲಿ ಅವಳು ಕೂಡ ಒಬ್ಬಳು. ಆದರೆ ತನ್ನ ಭಾವನೆಗಳನ್ನು ಹೊರ ಹಾಕಿಕೊಳ್ಳದೇ ಒಂಟಿತನ ಅನುಭವಿಸುತ್ತ ಬೇಸೆತ್ತು ಹೋಗಿದ್ದಾಳೆ. ಅವಳು ಈ ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ಒಂಟಿತನದಿಂದ ಮುಕ್ತವಾಗಲು ಮಹಿಳಾ ಸ್ನೇಹಿತರನ್ನು ಹೊಂದಲು ಹಾಗೂ ಸ್ನೇಹಿತರ ಗುಂಪಿನಲ್ಲಿ ತಾನು ಕೂಡ ಭಾಗಿಯಾಗಲು ಇಷ್ಟ ಪಡುತ್ತಾಳೆ. ಹಾಗಾಗಿ ನಾನು ನಿಮ್ಮ ಬಳಿ ಈ ಬಗ್ಗೆ ಕೇಳುತ್ತಿದ್ದು, ಬೆಂಗಳೂರಿನಲ್ಲಿ ನೀವು ಹೊಸ ಹೊಸ ಜನರನ್ನು ಮಹಿಳೆ ಯರು ಅಥವಾ ಪುರುಷರು ಹೇಗೆ ಭೇಟಿಯಾಗುತ್ತೀರಿ. ಸ್ನೇಹಿತರನ್ನು ಹೇಗೆ ಮಾಡಿಕೊಳ್ಳುತ್ತೀರಿ. ನಿಮ್ಮ ಬಳಿ ಯಾವುದೇ ಸಲಹೆಗಳಿದ್ದಲ್ಲಿ, ಸಮುದಾಯಗಳು, ಇವೆಂಟ್ ಗಳು, ಅಪ್ಲಿಕೇಶನ್ ಗಳು ಇದ್ದಲ್ಲಿ ಅದಲ್ಲೆವೂ ಸ್ವಾಗತಾರ್ಹವಾಗಿದೆ. ತನ್ನ ಸಮಯ ಹಾಗೂ ಭಾವನೆಗಳನ್ನು ಹಂಚಿಕೊಳ್ಳಲು ಯಾರು ಇಲ್ಲದೇ ಆಕೆ ಹೋರಾಡುವುದನ್ನು ನೋಡುವುದು ನಿಜಕ್ಕೂ ನನಗೆ ನೋವನ್ನುಂಟು ಮಾಡುತ್ತದೆ ಎಂದು ಪೋಸ್ಟ್ ನಲ್ಲಿ ಬರೆದಿದ್ದಾರೆ.

 

The post ಬೆಂಗಳೂರಿನಲ್ಲಿ ಸ್ನೇಹಿತರನ್ನು ಮಾಡಿಕೊಳ್ಳುವುದು ತುಂಬಾ ಕಷ್ಟವಂತೆ…. appeared first on Good News 24x7.

]]>
ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೆ ಶುಭಾಶಯ ಕೋರಲು ಇಲ್ಲಿವೆ ಸಂದೇಶಗಳು https://www.goodnews24x7.com/%e0%b2%85%e0%b2%82%e0%b2%a4%e0%b2%be%e0%b2%b0%e0%b2%be%e0%b2%b7%e0%b3%8d%e0%b2%9f%e0%b3%8d%e0%b2%b0%e0%b3%80%e0%b2%af-%e0%b2%ae%e0%b2%b9%e0%b2%bf%e0%b2%b3%e0%b2%be-%e0%b2%a6%e0%b2%bf%e0%b2%a8%e0%b2%95/ Sat, 08 Mar 2025 05:38:31 +0000 https://www.goodnews24x7.com/?p=2667 ಹೆಣ್ಣು ಇಲ್ಲದೇ ಹೋದರೆ ಸೃಷ್ಟಿಯೇ ಆಗದು. ಹಾಗಾಗಿ ಈ ಸೃಷ್ಟಿಯೇ ಹೆಣ್ಣು. ಹೆಣ್ಣೆಂಬ ಜೀವವೂ ತಾಯಿ, ಸ್ನೇಹಿತೆ, ಪತ್ನಿ, ಸಹೋದ್ಯೋಗಿ, ಮಗಳು ಹೀಗೆ ಹಲವು ಪಾತ್ರಗಳನ್ನು ನಿಭಾಯಿಸುತ್ತಾಳೆ. ಪ್ರತಿಯೊಬ್ಬರ ಜೀವನದಲ್ಲಿಯೂ ಹೆಣ್ಣಿನ ಪಾತ್ರವೂ ಅಗಾಧವಾದದ್ದು, ಹೀಗಾಗಿ ಆಕೆಗಾಗಿ ಒಂದು ದಿನವನ್ನು ಮೀಸಲಿಡಲಾಗಿದೆ.…

The post ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೆ ಶುಭಾಶಯ ಕೋರಲು ಇಲ್ಲಿವೆ ಸಂದೇಶಗಳು appeared first on Good News 24x7.

]]>

ಹೆಣ್ಣು ಇಲ್ಲದೇ ಹೋದರೆ ಸೃಷ್ಟಿಯೇ ಆಗದು. ಹಾಗಾಗಿ ಈ ಸೃಷ್ಟಿಯೇ ಹೆಣ್ಣು. ಹೆಣ್ಣೆಂಬ ಜೀವವೂ ತಾಯಿ, ಸ್ನೇಹಿತೆ, ಪತ್ನಿ, ಸಹೋದ್ಯೋಗಿ, ಮಗಳು ಹೀಗೆ ಹಲವು ಪಾತ್ರಗಳನ್ನು ನಿಭಾಯಿಸುತ್ತಾಳೆ. ಪ್ರತಿಯೊಬ್ಬರ ಜೀವನದಲ್ಲಿಯೂ ಹೆಣ್ಣಿನ ಪಾತ್ರವೂ ಅಗಾಧವಾದದ್ದು, ಹೀಗಾಗಿ ಆಕೆಗಾಗಿ ಒಂದು ದಿನವನ್ನು ಮೀಸಲಿಡಲಾಗಿದೆ. ಹೌದು, ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಯನ್ನು ಆಚರಿಸಲಾಗುತ್ತದೆ.


ಮಾರ್ಚ್ 8 ಮಹಿಳೆಯರಿಗೆ ಮೀಸಲಾಗಿರುವ ದಿನ. ಪ್ರತಿ ವರ್ಷ ಮಾರ್ಚ್ 8 ರಂದು ಭಾರತ ಮಾತ್ರವಲ್ಲದೇ, ವಿಶ್ವದಾದಂತ್ಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಮಹಿಳೆಯರ ಕೊಡುಗೆಗಳನ್ನು ಹಾಗೂ ಅವರು ಮಾಡಿದ ಸಾಧನೆಗಳನ್ನು ಗುರುತಿಸಿ ಗೌರವಿಸುವ ದಿನವಾಗಿದೆ. ಪ್ರತಿಯೊಬ್ಬ ಮಹಿಳೆಯೂ ತನ್ನ ಕುಟುಂಬಕ್ಕೆ ಸಾಕಷ್ಟು ತ್ಯಾಗಗಳನ್ನು ಮಾಡಿರುತ್ತಾಳೆ. ಅವರ ತ್ಯಾಗದ ಬಗ್ಗೆ ಯಾರು ಕೂಡ ಮಾತನಾಡುವುದೇ ಇಲ್ಲ. ತನ್ನ ಕುಟುಂಬ ಹಾಗೂ ಸಂಸಾರಕ್ಕಾಗಿ ಬದುಕನ್ನು ಸವೆಸುವ ಹೆಣ್ಣು ಮಕ್ಕಳಿಗೆ ಈ ರೀತಿ ಸಂದೇಶ ಕಳುಹಿಸುವ ಮೂಲಕ ಶುಭಾಶಯ ಕೋರಬಹುದು

ಮಹಿಳಾ ದಿನಕ್ಕೆ ಶುಭಾಶಯ ಕೋರಲು ಇಲ್ಲಿವೆ ಸಂದೇಶಗಳು
• ನಿನ್ನ ಬದುಕಿನಲ್ಲಿ ನೀನು ಬಯಸಿದ ಎಲ್ಲವೂ ಸಿಗುವಂತಾಗಲಿ, ಮಹಿಳಾ ದಿನಾಚರಣೆ ಶುಭಾಶಯಗಳು.
• ನನ್ನ ಬದುಕಿಗೆ ದಿಟ್ಟ ಮಹಿಳೆಯನ್ನು ಕೊಟ್ಟಿದ್ದಕ್ಕೆ ದೇವರಿಗೆ ಧನ್ಯವಾದಗಳು ಹೇಳಲು ಬಯಸುತ್ತೇನೆ. ಮಹಿಳಾ ದಿನಾಚರಣೆ ಶುಭಾಶಯಗಳು.
• ನೀನೊಂದು ಅದ್ಭುತವಾದ ವ್ಯಕ್ತಿ, ನಿನ್ನ ವ್ಯಕ್ತಿತ್ವವೇ ನಿನಗೆ ಆಭರಣ. ನನಗೆ ನೀನು ಸಿಕ್ಕಿರುವುದು ನನ್ನ ಅದೃಷ್ಟ, ನನ್ನ ಜೀವನದ ಪ್ರಮುಖ ವ್ಯಕ್ತಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು.
• ಹೆಣ್ಣಾಗಿ ಹುಟ್ಟಿರುವುದೇ ಒಂದು ಅದೃಷ್ಟ. ಅದನ್ನು ಸಂತಸದಿಂದ ಸಂಭ್ರಮಿಸಿ. ಮಹಿಳಾ ದಿನದ ಶುಭಾಶಯಗಳು.
• ತಾಯ್ತನದಿಂದ ಹಿಡಿದು ಹೆಂಡತಿಯ ತನಕ, ಸಹೋದರಿಯಿಂದ ಹಿಡಿದು ಮಗಳವರೆಗೆ ಜೀವನದ ಪ್ರತಿಯೊಂದು ಹಂತದಲ್ಲೂ ‘ಮಹಿಳೆ’ಯ ಪಾತ್ರ ಅಗಾಧ. ಆ ಜೀವವೇ ಇಲ್ಲದೇ ಹೋದರೆ ಈ ಜೀವಕ್ಕೆ ಅಸ್ತಿತ್ವವಿಲ್ಲ. ಮಹಿಳಾ ದಿನಾಚರಣೆಯ ಶುಭಾಶಯಗಳು.
• ವಿದ್ಯೆಗೆ ಸರಸ್ವತಿ, ಸಂಪತ್ತಿಗೆ ಲಕ್ಷ್ಮಿ, ಶಕ್ತಿಗೆ ಪಾರ್ವತಿ, ಎಲ್ಲಕ್ಕೂ ಮಿಗಿಲಾಗಿ ಜನ್ಮ ಕೊಟ್ಟವಳು ಈ ಹೆಣ್ಣು. ಕಣ್ಣಿಗೆ ಕಾಣುವ ತ್ಯಾಗ ಮೂರ್ತಿಯೇ ಹೆಣ್ಣು. ಜೀವನದ ಎಲ್ಲಾ ಹಂತದಲ್ಲಿಯೂ ಜೊತೆ ನಿಲ್ಲುವ ಹೆಣ್ಣಿಗೆ ಕೋಟಿ ಕೋಟಿ ನಮನಗಳು, ಮಹಿಳಾ ದಿನದ ಶುಭಾಶಯಗಳು.
• ತಾಯಿಯಾಗಿ, ಸಹೋದರಿಯಾಗಿ, ಮಡದಿಯಾಗಿ, ಮಗಳಾಗಿ ಹಾಗೂ ಸ್ನೇಹಿತೆಯಾಗಿ ನನ್ನ ಬದುಕಿನ ಪ್ರತಿ ಕ್ಷಣದಲ್ಲೂ ಬೆಂಬಲವಾಗಿ ನಿಂತಿದ್ದೀರಿ. ತಮ್ಮ ಈ ನಿಸ್ವಾರ್ಥ ಪ್ರೀತಿಗೆ ನಾನು ಸದಾ ಋಣಿ. ತಮಗೆಲ್ಲರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು.
• ತಂದೆಗೆ ಮಗಳಾಗಿ, ಗಂಡನಿಗೆ ಬೆಳವಣಿಗೆಯಾಗಿ, ಸಹೋದರನಿಗೆ ಆಸರೆಯಾಗಿ, ಮಗುವಿಗೆ ತಾಯಿಯಾಗಿ, ಸಾಧನೆಯಲ್ಲಿ ಸ್ಫೂರ್ತಿಯಾಗಿ, ಪ್ರೇಮಿಗೆ ಪ್ರೀತಿಯಾಗಿ, ಮನೆಗೆ ಬೆಳಗುವ ಬೆಳಕಾಗಿ ಜಗತ್ತಿನ ಎಲ್ಲಾ ಮನಸ್ಸಿನ ಹೆಣ್ಣು ಮಕ್ಕಳಿಗೆ ಮಹಿಳಾ ದಿನದ ಶುಭಾಶಯಗಳು.
• ಮತ್ತೊಂದು ಜೀವಕ್ಕೆ ಉಸಿರು ನೀಡುವ ಶಕ್ತಿ ಇರುವುದು ಮಹಿಳೆಗೆ ಮಾತ್ರವೇ. ಹೆಣ್ಣಾಗಿ ಹುಟ್ಟಿದ್ದಕ್ಕೆ ಖುಷಿ ಪಡಿ, ಪ್ರತಿಕ್ಷಣವನ್ನು ಹೆಮ್ಮೆಯಿಂದಲೇ ಸಂಭ್ರಮಿಸಿ, ಮಹಿಳಾ ದಿನದ ಶುಭಾಶಯಗಳು.
• ನನ್ನ ಬದುಕಿಗೆ ಹೊಸ ಅರ್ಥ ನೀಡಿದ ಸುಂದರವಾದ ಶಿಲ್ಪಿ ನೀನು, ಇಂದು ನಾನು ಏನು ಆಗಿದ್ದೇನೋ ಅದಕ್ಕೆಲ್ಲಾ ನೀನೇ ಕಾರಣ. ಮಹಿಳಾ ದಿನಾಚರಣೆಯ ಶುಭಾಶಯಗಳು.
• ನಾನು ಬಯಸಿದ ಎಲ್ಲಾ ಗುಣಗಳಿರುವ ಹೆಣ್ಣು ನೀನು. ಹೇಗೋ ಇದ್ದ ನನ್ನ ಬದುಕಿಗೆ ಒಂದು ಸುಂದರವಾದ ಅರ್ಥ ಕಲ್ಪಿಸಿಕೊಟ್ಟೆ, ನನ್ನ ಪ್ರತೀ ಹೆಜ್ಜೆಗೂ ಸ್ಪೂರ್ತಿ ನೀನು. ಜಗತ್ತು ಬೆಳಗುವ ಸೂರ್ಯನಂತೆ ನನ್ನ ಬಾಳು ಬೆಳಗುತ್ತಿರುವ ದೀಪ ನೀನು. ನನ್ನ ಮನದರಸಿಗೆ ಮಹಿಳಾ ದಿನಾಚರಣೆಯ ಹಾರ್ಥಿಕ ಶುಭಾಶಯಗಳು.

The post ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೆ ಶುಭಾಶಯ ಕೋರಲು ಇಲ್ಲಿವೆ ಸಂದೇಶಗಳು appeared first on Good News 24x7.

]]>