GADAGA Archives - Good News 24x7 https://www.goodnews24x7.com/tag/gadaga/ Kannada Mon, 07 Apr 2025 12:04:46 +0000 en-US hourly 1 https://wordpress.org/?v=6.9.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg GADAGA Archives - Good News 24x7 https://www.goodnews24x7.com/tag/gadaga/ 32 32 ಟೊಮೆಟೊ ದರ ಏಕಾಏಕಿ ಕುಸಿತ ; ಗದಗ ರೈತರು ಕಂಗಾಲು…. https://www.goodnews24x7.com/%e0%b2%9f%e0%b3%8a%e0%b2%ae%e0%b3%86%e0%b2%9f%e0%b3%8a-%e0%b2%a6%e0%b2%b0-%e0%b2%8f%e0%b2%95%e0%b2%be%e0%b2%8f%e0%b2%95%e0%b2%bf-%e0%b2%95%e0%b3%81%e0%b2%b8%e0%b2%bf%e0%b2%a4-%e0%b2%97%e0%b2%a6/ Mon, 07 Apr 2025 12:04:46 +0000 https://www.goodnews24x7.com/?p=3077 ರೈತರ ಗೋಳು ಕೇಳುವವರು ಯಾರು ಎಂಬ ಪರಿಸ್ಥಿತಿಗೆ ತಲುಪಿದೆ ಕರ್ನಾಟಕದ ರೈತರ ಪರಿಸ್ಥಿತಿ. ಅದಕ್ಕೆ ನಿದರ್ಶನದಂತೆ ಕರ್ನಾಟಕದಲ್ಲಿ ಟಮೋಟ ದರವು ಏಕಾಏಕಿ ಕುಸಿತವಾಗಿದೆ. : ಗದಗದ ಎಪಿಎಂಸಿಯಲ್ಲಿ ಟೊಮೆಟೊ ದರ ಭಾರೀ ಕುಸಿತದಿಂದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 25 ಕೆಜಿ ಟ್ರೇ…

The post ಟೊಮೆಟೊ ದರ ಏಕಾಏಕಿ ಕುಸಿತ ; ಗದಗ ರೈತರು ಕಂಗಾಲು…. appeared first on Good News 24x7.

]]>

ರೈತರ ಗೋಳು ಕೇಳುವವರು ಯಾರು ಎಂಬ ಪರಿಸ್ಥಿತಿಗೆ ತಲುಪಿದೆ ಕರ್ನಾಟಕದ ರೈತರ ಪರಿಸ್ಥಿತಿ. ಅದಕ್ಕೆ ನಿದರ್ಶನದಂತೆ ಕರ್ನಾಟಕದಲ್ಲಿ ಟಮೋಟ ದರವು ಏಕಾಏಕಿ ಕುಸಿತವಾಗಿದೆ. : ಗದಗದ ಎಪಿಎಂಸಿಯಲ್ಲಿ ಟೊಮೆಟೊ ದರ ಭಾರೀ ಕುಸಿತದಿಂದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 25 ಕೆಜಿ ಟ್ರೇ ಕೇವಲ 50 ರೂ.ಗೆ ಮಾರಾಟವಾಗುತ್ತಿದೆ. ಬೆಳೆಗೆ ಹೆಚ್ಚಿನ ವೆಚ್ಚವಾಗಿದ್ದರೂ, ಕಡಿಮೆ ದರದಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಬದನೆಕಾಯಿ ಮತ್ತು ನುಗ್ಗೆಕಾಯಿ ದರಗಳೂ ಕುಸಿದಿವೆ. ಸರ್ಕಾರದ ವಿರುದ್ಧ ರೈತರು ಕಿಡಿಕಾರಿದ್ದಾರೆ. ಏಕಾಏಕಿ ಟೊಮೆಟೊ ದರ ಪಾತಾಳಕ್ಕೆ ಕುಸಿದಿದ್ದು ರೈತರು ಕಂಗಾಲಾಗಿದ್ದಾರೆ. ದರ ಕುಸಿತಕ್ಕೆ ಗದಗ ಎಪಿಎಂಸಿಯಲ್ಲಿ ಅನ್ನದಾತರು ಆಕ್ರೋಶ ಹೊರಹಾಕಿದ್ದಾರೆ. ಅಗತ್ಯ ವಸ್ತುಗಳ ದರಗಳು ಏರಿಕೆಯಾದರೂ ರೈತರು ಬೆಳೆದ ಬೆಳೆಗಳ ದರ ಏಕೆ ಏರಿಕೆಯಾಗುತ್ತಿಲ್ಲ ಅಂತ ಕಿಡಿಕಾರಿದ್ದಾರೆ. ಅಷ್ಟಕ್ಕೂ ಅನ್ನ ನೀಡುವ ಅನ್ನದಾತನಿಗೆ ಸರಿಯಾದ ಬೆಲೆ ಸಿಗಲಿಲ್ಲವಾದರೆ ದೇಶ ಅಭಿವೃದ್ಧಿಯಾಗುವುದು ಖಂಡಿತವಾಗಿಯೂ ಕಷ್ಟವಾಗಿದೆ.

ಮಾರುಕಟ್ಟೆಗೆ ಹೆಚ್ಚು ಫಸಲು ಬಂದಿದ್ದರಿಂದ ಟೊಮೆಟೊ ದರ ಪಾತಾಳಕ್ಕೆ ಕುಸಿದಿದೆ. 25 ಕೆಜಿ ಟ್ರೇ ಕೇವಲ 50 ರೂ. ಮಾರಾಟವಾಗುತ್ತಿದೆ. ಮಾರುಕಟ್ಟೆಯಲ್ಲಿ 20-30 ರೂ. ಕೆಜಿ ಟೊಮೆಟೊ ಮಾರಾಟವಾಗುತ್ತಿದ್ದರು, ರೈತರಿಗೆ ಕೆಜಿ ಕೇವಲ 2 ರೂ. ಸಿಗುತ್ತಿದೆ. ರೈತರಿಗಾಗುತ್ತಿರುವ ಈ ಅನ್ಯಾಯ ತಿಳಿದಿದ್ದರೂ ಎಪಿಎಂಸಿ ಅಧಿಕಾರಿಗಳು ಮೌನವಾಗಿದ್ದಾರೆ. ಬದನೆಕಾಯಿ, ನುಗ್ಗೆಕಾಯಿ ಬೆಲೆಯೂ ಕುಸಿತವಾಗಿದೆ. ಒಂದು ಟ್ರೇ ಬದನೆಕಾಯಿಗೆ 50 ರಿಂದ 80 ರೂ ಬೆಲೆ ಇದೆ. ನುಗ್ಗೆಕಾಯಿ ಒಂದು ಕೆಜಿಗೆ 10 ರೂ ಮಾರಾಟವಾಗುತ್ತಿದೆ. ಇನ್ನು ಒಂದು ಟ್ರೇ ಟೊಮೆಟೊ ಮಾರುಕಟ್ಟೆಯಲ್ಲಿ 50 ರೂ. ಮಾರಾಟವಾಗುತ್ತಿದೆ. ರೈತರು ಎಕರೆಗೆ 30-50 ಸಾವಿರ ರೂ ಮಾಡಿರುವ ಖರ್ಚು ಕೂಡ ವಾಪಸ್ ಬರಿತ್ತಿಲ್ಲ. ಸಾಮಾನ್ಯ ಮಾರುಕಟ್ಟೆಯಲ್ಲಿ ಸಿಗುವ ಬೆಲೆಯೂ ಕಷ್ಟಪಟ್ಟು ಬೆಳೆದ ರೈತನಿಗೆ ಸಿಗುತ್ತಿಲ್ಲ. ಬದಲಾಗಿ ಇದು ಮಧ್ಯವರ್ತಿಗಳಿಗೆ ಸೇರುತ್ತಿದೆ. ಕೃಷಿ ಅವರಂಬಿಕ ದೇಶವಾದ ಭಾರತದಲ್ಲಿ, ರೈತರಿಗೆ ಹೆಚ್ಚಿನ ಮನ್ನಣೆ ನೀಡುವಂತಾಗಲಿ ಎಂಬುದು ಎಲ್ಲರ ಮನವಿಯಾದರೂ ಸಹ, ಅಧಿಕಾರಿಗಳು ಇದರ ಬಗ್ಗೆ ಮೌನದಿಂದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಒಂದು ಟ್ರೇ ನಲ್ಲಿ ಸುಮಾರು 20-25 ಕೆಜಿ ಟೊಮೆಟೊ ಇರುತ್ತೆ. 2 ರೂ ಕೆಜಿಯಂತೆ ಟೊಮೆಟೊ ಮಾರಾಟವಾಗುತ್ತಿದ್ದು, ಸರ್ಕಾರ ಹಾಗೂ ಎಪಿಎಂಸಿ ವರ್ತಕರ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾರುಕಟ್ಟೆಗೆ ಕ್ವಿಂಟಾಲ್ಗಟ್ಟಲೇ ಟೊಮೆಟೊ ತಂದರೂ ರೈತರ ಕೈ ಖಾಲಿ ಖಾಲಿ ಆಗಿದೆ.ಟೊಮೆಟೊ ಕಟಾವು ಮಾಡುವ ಕಾರ್ಮಿಕರಿಗೆ 300 ರೂ ದಿನ ಕೂಲಿ ಕೊಡಬೇಕು. ಮಾರುಕಟ್ಟೆಗೆ ಒಂದು ಟ್ರೇ ಹೇರಿಕೊಂಡು ಬಂದರೆ 30 ರೂ. ವಾಹನ ಬಾಡಿಗೆ ಇದೆ. ಜೊತೆಗೆ ದಲ್ಲಾಳಿಗೆ 10 ರೂ. ಕೊಡಬೇಕು. ಹಾಗಾಗಿ ಒಂದು ಟ್ರೇ ಗೆ ರೈತರಿಗೆ 10 ರೂ ಮಾತ್ರ ಸಿಗುತ್ತದೆ ಎಂದು ಕಿಡಿಕಾರಿದ್ದಾರೆ. ಆ 10 ರೂ ಟೀ, ತಿಂಡಿ ಮಾಡಿದರೆ ಖಾಲಿ ಕೈಯಲ್ಲಿ ಮನೆಗೆ ಹೋಗಬೇಕಾಗುತ್ತೆ ಎಂದು ಗೋಳಾಡಿದರು.

ಹಗಲು ರಾತ್ರಿ ಕಷ್ಟ ಪಟ್ಟು ಟೊಮೆಟೊ ಬೆಳೆದಿದ್ದೇವೆ. ಮಾರುಕಟ್ಟೆಗೆ ತಂದರೆ ಸೂಕ್ತ ದರ ಸಿಗುತ್ತಿಲ್ಲ ಹೀಗಾದರೆ ಕುಟುಂಬ ನಿರ್ವಹಣೆಗೆ ತುಂಬಾನೆ ತೊಂದರೆ ಆಗುತ್ತದೆ. ಸರ್ಕಾರ ಟೊಮೆಟೊ ಬೆಳೆದ ರೈತರ ನೆರವಿಗೆ ಬರಬೇಕು. ಸೂಕ್ತದ ದರ ನಿಗದಿ ಮಾಡಬೇಕೆಂದು ಒತ್ತಾಯಿಸಲಾಗಿದೆ. ಬೆಳೆದ ಬೆಳೆಗೆ ಸರಿಯಾದ ಫಲ ಸಿಗಲಿಲ್ಲವಾದರೆ ರೈತರು ಸಾಲದ ಮಡುವಿನಲ್ಲಿ ಬೀಳುತ್ತಾರೆ. ನಂತರ ತಮ್ಮ ಜೀವನದಲ್ಲಿ ಏರುಪೇರು ಆದಾಗ ಅವರು ಆತ್ಮಹತ್ಯೆಗೆ ಶರಣಾಗುತ್ತಾರೆ. ಈ ರೀತಿ ಆಗಬಾರದೆಂದರೆ ಸರ್ಕಾರ ಹಾಗೂ ಎಪಿಎಂಸಿ ವರ್ತಕರು ಈ ವಿಷಯದ ಬಗ್ಗೆ ಕೂಡಲೇ ಗಮನಹರಿಸಬೇಕಾದದು ಪ್ರಮುಖವಾಗಿದೆ.

The post ಟೊಮೆಟೊ ದರ ಏಕಾಏಕಿ ಕುಸಿತ ; ಗದಗ ರೈತರು ಕಂಗಾಲು…. appeared first on Good News 24x7.

]]>
ಗದಗಿನ ಮೆಡಿಕಲ್ ಕಾಲೇಜಿಗೆ ಕೆ.ಎಚ್ ಪಾಟೀಲ್ ಹೆಸರಿಡಲು ನಿರ್ಧಾರ. https://www.goodnews24x7.com/%e0%b2%97%e0%b2%a6%e0%b2%97%e0%b2%bf%e0%b2%a8-%e0%b2%ae%e0%b3%86%e0%b2%a1%e0%b2%bf%e0%b2%95%e0%b2%b2%e0%b3%8d-%e0%b2%95%e0%b2%be%e0%b2%b2%e0%b3%87%e0%b2%9c%e0%b2%bf%e0%b2%97%e0%b3%86-%e0%b2%95/ Thu, 27 Mar 2025 11:10:13 +0000 https://www.goodnews24x7.com/?p=2912 ಬೆಂಗಳೂರು :- ಗದಗಿನ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಹೆಸರನ್ನು ಸಹಕಾರಿ ರಂಗದ ಭೀಷ್ಮ ಕೆ.ಎಚ್. ಪಾಟೀಲ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಎಂದು ಹೆಸರಿಸಲು ಸಂಪುಟ ನಿರ್ಧರಿಸಿದೆ. ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಯ ನಂತರ ಮಾತನಾಡಿದ ವೈದ್ಯಕೀಯ ಶಿಕ್ಷಣ…

The post ಗದಗಿನ ಮೆಡಿಕಲ್ ಕಾಲೇಜಿಗೆ ಕೆ.ಎಚ್ ಪಾಟೀಲ್ ಹೆಸರಿಡಲು ನಿರ್ಧಾರ. appeared first on Good News 24x7.

]]>

ಬೆಂಗಳೂರು :- ಗದಗಿನ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಹೆಸರನ್ನು ಸಹಕಾರಿ ರಂಗದ ಭೀಷ್ಮ ಕೆ.ಎಚ್. ಪಾಟೀಲ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಎಂದು ಹೆಸರಿಸಲು ಸಂಪುಟ ನಿರ್ಧರಿಸಿದೆ.
ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಯ ನಂತರ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್ ಅವರು ಈ ವಿಷಯವನ್ನು ತಿಳಿಸಿದರು.ಸಹಕಾರಿ ರಂಗದಲ್ಲಿ ಅನುಪಮ ಸೇವೆ ಸಲ್ಲಿಸಿದ ಕೆ.ಎಚ್. ಪಾಟೀಲರು ರಾಜ್ಯದಲ್ಲಿ ಸಚಿವರಾಗಿ, ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ.

 

 

 

 

 

ಇಂತಹ ಮಹಾನ ನಾಯಕನ ಹೆಸರನ್ನು ಸಾರ್ವಜನಿಕ ಸೇವೆ ಮಾಡುತ್ತಿರುವ ಗದಗ ಮೆಡಿಕಲ್ ಕಾಲೇಜಿಗೆ ನಾಮಕರಣ ಮಾಡುವ ಮೂಲಕ ಅವರ ಸೇವೆಯನ್ನು ಗೌರವಿಸುವ ಕ್ರಮಕ್ಕೆ ಸರ್ಕಾರ ಮುಂದಾಗಿದೆ ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ವಿವರಿಸಿದರು.

The post ಗದಗಿನ ಮೆಡಿಕಲ್ ಕಾಲೇಜಿಗೆ ಕೆ.ಎಚ್ ಪಾಟೀಲ್ ಹೆಸರಿಡಲು ನಿರ್ಧಾರ. appeared first on Good News 24x7.

]]>
ನಿರ್ಮಿತಿ ಕೇಂದ್ರದ ಇಂಜಿನಿಯರ್ ಲಾಡ್ಜ್ನಲ್ಲಿ ಆ*ಹತ್ಯೆ, ಸಾ*ನ ಬಗ್ಗೆ ಸಾಕಷ್ಟು ಅನುಮಾನ. https://www.goodnews24x7.com/%e0%b2%a8%e0%b2%bf%e0%b2%b0%e0%b3%8d%e0%b2%ae%e0%b2%bf%e0%b2%a4%e0%b2%bf-%e0%b2%95%e0%b3%87%e0%b2%82%e0%b2%a6%e0%b3%8d%e0%b2%b0%e0%b2%a6-%e0%b2%87%e0%b2%82%e0%b2%9c%e0%b2%bf%e0%b2%a8%e0%b2%bf%e0%b2%af/ Fri, 03 Jan 2025 11:57:05 +0000 https://www.goodnews24x7.com/?p=1493 ಗದಗ : ನಿರ್ಮಿತಿ ಕೇಂದ್ರದ ಇಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗನ ಪಲ್ಲವಿ ಲಾಡ್ಜ್ನಲ್ಲಿ ನಡೆದಿದೆ. ಗದಗ ನಗರದ ನಿವಾಸಿಯಾಗಿರುವ ಶಂಕರಗೌಡ ಪಾಟೀಲ್ (54) ಆತ್ಮಹತ್ಯೆ ಮಾಡಿಕೊಂಡಿರುವ ಇಂಜಿನಿಯರ್. ಇಂದು (ಡಿಸೆಂ 03) ಬೆಳಗ್ಗೆ 7.30ಕ್ಕೆ ಮನೆಯಿಂದ ಹೊರಬಂದಿದ್ದ ಶಂಕರಗೌಡ ಪಾಟೀಲ್…

The post ನಿರ್ಮಿತಿ ಕೇಂದ್ರದ ಇಂಜಿನಿಯರ್ ಲಾಡ್ಜ್ನಲ್ಲಿ ಆ*ಹತ್ಯೆ, ಸಾ*ನ ಬಗ್ಗೆ ಸಾಕಷ್ಟು ಅನುಮಾನ. appeared first on Good News 24x7.

]]>

ಗದಗ : ನಿರ್ಮಿತಿ ಕೇಂದ್ರದ ಇಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗನ ಪಲ್ಲವಿ ಲಾಡ್ಜ್ನಲ್ಲಿ ನಡೆದಿದೆ. ಗದಗ ನಗರದ ನಿವಾಸಿಯಾಗಿರುವ ಶಂಕರಗೌಡ ಪಾಟೀಲ್ (54) ಆತ್ಮಹತ್ಯೆ ಮಾಡಿಕೊಂಡಿರುವ ಇಂಜಿನಿಯರ್. ಇಂದು (ಡಿಸೆಂ 03) ಬೆಳಗ್ಗೆ 7.30ಕ್ಕೆ ಮನೆಯಿಂದ ಹೊರಬಂದಿದ್ದ ಶಂಕರಗೌಡ ಪಾಟೀಲ್ ನಗರದ ಪಲ್ಲವಿ ಲಾಡ್ಜ್ನ ರೂಮ್ ನಂಬರ್ 513ರಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕರ್ನಾಟಕದಲ್ಲಿ ದಿನೇ ದಿನೇ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅದರಲ್ಲೂ ಸರ್ಕಾರಿ ಅಧಿಕಾರಿಗಳು ಒಳಗೊಂಡಿದ್ದಾರೆ. ಅದರಂತೆ ಗದಗನಲ್ಲಿ ನಿರ್ಮಿತಿ ಕೇಂದ್ರದ ಇಂಜಿನಿಯರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಾಡ್ಜ್ನಲ್ಲೇ ನೇಣುಬಿಗಿದುಕೊಂಡು ಸಾವಿಗೆ ಶರಣಾಗಿದ್ದು, ಇದೊಂದು ಕೊಲೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ, ಈ ಸಾವು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಇನ್ನು ಈ ಸಂಬಂಧ ಮೃತ ಸಹೋದರ ಕೃಷ್ಣಗೌಡ ಪ್ರತಿಕ್ರಿಯಿಸಿದ್ದು, ನೇಣು ಹಾಕಿ ಕೊಲೆ ಮಾಡಿದ್ದಾರೆ. ಸಾಲ ಇಲ್ಲ. ಸಾಕಷ್ಟು ಆಸ್ತಿ ಇದೆ. ಸಾಲಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವನಲ್ಲ. ಸಾಲಕ್ಕೆ ಜಾಮೀನು ಆಗಿದ್ದ ಆ ವಿಷಯಕ್ಕಾದ್ರೂ ಆಗಿರಬಹುದು. ಜಿಲ್ಲಾಧಿಕಾರಿಗಳ ಅಡಿಯಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿ ಪ್ರಮೋಶನಕ್ಕೆನಾದ್ರೂ ವ್ಯತ್ಯಾಸ ಆಗಿದೆಯೋ ಗೊತ್ತಿಲ್ಲ. ಈ ಮೂರು ವಿಷಯಕ್ಕೆ ಸಾವು ಅಂತ ಅನುಮಾನ ಇದೆ ಎಂದಿದ್ದಾರೆ.
ಸಾಲಕ್ಕೆ ಹೆದರುವ ಮನುಷ್ಯ ಅವನಲ್ಲ. ನೇಣು ಹಾಕಿಕೊಂಡ ಹಗ್ಗ ಹೊಸದು ಇದೆ. ಹೀಗಾಗಿ ಯಾರಾದರೈ ಊರಲು ಹಾಕಿದ್ದಾರೆ ಎಂದು ಆರೋಪಿಸಿರುವ ಕೃಷ್ಣಗೌಡ, ನಿರ್ಮಿತಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ. ನನಗೆ ಆತ್ಮಹತ್ಯೆ ಮಾಡಿಕೊಂಡ ರೂಂಗೆ ಪೊಲೀಸರು ಬಿಡಲಿಲ್ಲ. ಹೀಗಾಗಿ ಸಾವಿನ ಬಗ್ಗೆ ಸಾಕಷ್ಟು ಅನುಮಾನ ಇದೆ ಎಂದು ತಿಳಿಸಿದ್ದಾರೆ.
ಬೀದರ್ನಲ್ಲಿ ಯುವ ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಸಚಿವ ಪ್ರಿಯಾಂಕ್ ಖರ್ಗೆ ಆಪ್ತನ ಹೆಸರು ಬರೆದಿಟ್ಟು ಗುತ್ತಿಗೆದಾರ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದು, ಇದೀಗ ವಿರೋಧ ಪಕ್ಷಗಳು ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡುವಂತೆ ಆಗ್ರಹಿಸುತ್ತಿವೆ. ಈ ಬಗ್ಗೆ ರಾಜಕೀಯವಾಗಿ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ.
ಇದೆಲ್ಲದರ ಮಧ್ಯ ಇದೀಗ ನಿರ್ಮಿತಿ ಕೇಂದ್ರದ ಇಂಜಿಯನರ್ ಆತ್ಮಹತ್ಯೆ ಪ್ರಕರಣ ಬೆಳಗೆ ಬಂದಿದ್ದು, ಈ ಪ್ರಕರಣ ಮುಂದೆ ಸ್ವರೂಪ ಪಡೆದುಕೊಳ್ಳಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

The post ನಿರ್ಮಿತಿ ಕೇಂದ್ರದ ಇಂಜಿನಿಯರ್ ಲಾಡ್ಜ್ನಲ್ಲಿ ಆ*ಹತ್ಯೆ, ಸಾ*ನ ಬಗ್ಗೆ ಸಾಕಷ್ಟು ಅನುಮಾನ. appeared first on Good News 24x7.

]]>