Gajapayana Archives - Good News 24x7 https://www.goodnews24x7.com/tag/gajapayana/ Kannada Wed, 06 Aug 2025 05:45:47 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Gajapayana Archives - Good News 24x7 https://www.goodnews24x7.com/tag/gajapayana/ 32 32 ದಸರಾ ಗಜಪಡೆ, ಮಾವುತರಿಗೆ 2.04 ಕೋಟಿ ರೂ. ಮೊತ್ತದ ವಿಮೆ! ಅರಣ್ಯ ಇಲಾಖೆ ಸೌಲಭ್ಯ. https://www.goodnews24x7.com/dasara-gajapade-mahoutari-get-rs-2-04-crore-insurance-forest-department-provides-facility/ Wed, 06 Aug 2025 05:45:47 +0000 https://www.goodnews24x7.com/?p=5400 ಮೈಸೂರು ದಸರಾ 2025ರ ಗಜಪಡೆ, ಮಾವುತರು ಮತ್ತು ಸಿಬ್ಬಂದಿಗೆ ಒಟ್ಟು 2.04 ಕೋಟಿ ರೂ ವಿಮಾ ಸೌಲಭ್ಯ ಒದಗಿಸಲಾಗಿದೆ. ಆನೆಗಳಿಗೆ 68 ಲಕ್ಷ ರೂ, ಸಿಬ್ಬಂದಿಗೆ 86 ಲಕ್ಷ ರೂ ಮತ್ತು ಸಾರ್ವಜನಿಕ ಹಾನಿಗೆ 50 ಲಕ್ಷ ರೂ ವಿಮೆ ಒಳಗೊಂಡಿದೆ.…

The post ದಸರಾ ಗಜಪಡೆ, ಮಾವುತರಿಗೆ 2.04 ಕೋಟಿ ರೂ. ಮೊತ್ತದ ವಿಮೆ! ಅರಣ್ಯ ಇಲಾಖೆ ಸೌಲಭ್ಯ. appeared first on Good News 24x7.

]]>

ಮೈಸೂರು ದಸರಾ 2025ರ ಗಜಪಡೆ, ಮಾವುತರು ಮತ್ತು ಸಿಬ್ಬಂದಿಗೆ ಒಟ್ಟು 2.04 ಕೋಟಿ ರೂ ವಿಮಾ ಸೌಲಭ್ಯ ಒದಗಿಸಲಾಗಿದೆ. ಆನೆಗಳಿಗೆ 68 ಲಕ್ಷ ರೂ, ಸಿಬ್ಬಂದಿಗೆ 86 ಲಕ್ಷ ರೂ ಮತ್ತು ಸಾರ್ವಜನಿಕ ಹಾನಿಗೆ 50 ಲಕ್ಷ ರೂ ವಿಮೆ ಒಳಗೊಂಡಿದೆ. ಈ ವಿಮಾ ಪಾಲಿಸಿಯು ಆಗಸ್ಟ್ 4 ರಿಂದ ಅಕ್ಟೋಬರ್ 5 ರವರೆಗೆ ಜಾರಿಯಿರಲಿದೆ. ಮೈಸೂರು ದಸರಾ ಗಜಪಡೆ, ಮಾವುತರಿಗೆ 2.04 ಕೋಟಿ ರೂ. ಮೊತ್ತದ ವಿಮೆ ಸೌಲಭ್ಯ ನೀಡಿದ ಅರಣ್ಯ ಇಲಾಖೆ

ಮೈಸೂರು, ಆಗಸ್ಟ್​ 06: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗಜಪಡೆ ಕಲರವ ಜೋರಾಗಿದೆ. ನಾಡಹಬ್ಬ ದಸರಾ (Mysuru Dasara) ಮಹೋತ್ಸವಕ್ಕೆ ಮೈಸೂರಿಗೆ ಬಂದ ಕ್ಯಾಪ್ಟನ್ ಅಭಿಮನ್ಯು ಆ್ಯಂಡ್​ ತಂಡ ರಿಲ್ಯಾಕ್ಸ್ ಮೂಡ್‌ನಲ್ಲಿವೆ. ಗಜಪಡೆ ಅರಣ್ಯ ಭವನದಲ್ಲಿ ವಿಶ್ರಾಂತಿ ಪಡೆಯುತ್ತಿವೆ‌. ಈ ಗಜಪಡೆ ಮೈಸೂರಿನಲ್ಲಿರುವಾಗ ಏನಾದರೂ ಹಾನಿ ಸಂಭವಿಸಿದರೆ ಅದರ ನಷ್ಟ ಪರಿಹರಿಸಲು ಅರಣ್ಯ ಇಲಾಖೆಯಿಂದ ಮಾವುತರು, ಕಾವಾಡಿಗಳು ಮತ್ತು ಉಸ್ತುವಾರಿ ಸಿಬ್ಬಂದಿಗೆ 2.04 ಕೋಟಿ ರೂ. ಮೊತ್ತದ ವಿಮೆ (Insurance) ಸೌಲಭ್ಯ ಒದಗಿಸಲಾಗಿದೆ.

2.04 ಕೋಟಿ ರೂ. ಮೊತ್ತದ ವಿಮೆ
ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ದಿನಗಣನೆ ಶುರುವಾಗಿದೆ. ಇತ್ತ ಗಜಪಡೆ ಕೂಡ ಮೈಸೂರಿಗೆ ಬಂದಿದೆ. ಈ ಗಜಪಡೆ ಮೈಸೂರಲ್ಲಿರುವಾಗ ಏನಾದರೂ ಹಾನಿ ಸಂಭವಿಸಿದರೆ ಅದರ ನಷ್ಟ ಪರಿಹರಿಸಲು ಅರಣ್ಯ ಇಲಾಖೆಯಿಂದ ವಿಮಾ ಸೌಲಭ್ಯದ ಮೊರೆ ಹೋಗಲಾಗಿದೆ. ಆಗಸ್ಟ್​ 4ರಿಂದ ಅಕ್ಟೋಬರ್​​ 5ರವರೆಗೆ ಈ ಸುರಕ್ಷತೆ ಚಾಲ್ತಿಯಲ್ಲಿರಲಿದೆ. ಟೆಂಡರ್‌ ಮೂಲಕ ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್​ ಕಂಪನಿ ಲಿಮಿಟೆಡ್ ವಿಮೆ ಸೌಲಭ್ಯ ಮಾಡಿಸಲಾಗಿದೆ.

ಬೆಳಗಿನ ಜಾವದಿಂದಲೇ ದೇವಿದರ್ಶನಕ್ಕಾಗಿ ಸಾಲುಗಟ್ಟಿರುವ ಭಕ್ತರು
ದಸರಾ ಗಜಪಡೆಯ 14 ಆನೆಗಳ ಪೈಕಿ ಈ ಬಾರಿ 10 ಗಂಡಾನೆಗಳಿವೆ. ಈ ಗಂಡಾನೆಗಳಿಗೆ ತಲಾ 5 ಲಕ್ಷ ರೂ, 4 ಹೆಣ್ಣಾನೆಗಳಿಗೆ ತಲಾ 4.5 ಲಕ್ಷ ರೂ. 14 ಆನೆಗಳಿಗೆ ಒಟ್ಟು 68 ಲಕ್ಷ ರೂ. ಮೊತ್ತದ ವಿಮೆ ಮಾಡಿಸಲಾಗಿದೆ. 14 ಮಾವುತರು, 14 ಕಾವಾಡಿಗಳು, ಡಿಸಿಎಫ್, ಇಬ್ಬರು ಆರ್‌ಎಫ್‌ಓ, ಪಶುವೈದ್ಯಾಧಿಕಾರಿ, ಓರ್ವ ಸಹಾಯಕರು, 10 ಮಂದಿ ವಿಶೇಷ ಮಾವುತರು ಸೇರಿ ಒಟ್ಟು 43 ಮಂದಿಗೆ ತಲಾ 2 ಲಕ್ಷ ರೂ.ನಂತೆ 86 ಲಕ್ಷ ರೂ. ಮೊತ್ತದ ವಿಮೆ ಸೌಲಭ್ಯ ನೀಡಲಾಗಿದೆ.

ಮೈಸೂರಿನಲ್ಲಿ ದಸರಾ ಆನೆಗಳಿಂದ ಸಾರ್ವಜನಿಕ ಆಸ್ತಿ-ಪಾಸ್ತಿ ನಾಶ ಅಥವಾ ಸಾರ್ವಜನಿಕರಿಗೆ ತೊಂದರೆಯಾದರೆ ನಷ್ಟ ಭರಿಸಲು 50 ಲಕ್ಷ ರೂ. ಒಟ್ಟು 2.04 ಕೋಟಿ ರೂ. ಮೊತ್ತದ ವಿಮೆ ಮಾಡಿಸಿದ್ದು, ಇದಕ್ಕೆ ಅರಣ್ಯ ಇಲಾಖೆಯಿಂದ 67 ಸಾವಿರ ರೂ ಪ್ರಿಮಿಯಂ ಮೊತ್ತ ಪಾವತಿ ಮಾಡಲಾಗುವುದು.

ಅಭಿಮನ್ಯು ನೇತೃತ್ವದ 9 ಆನೆಗಳ ಮೊದಲ ತಂಡ ಮೈಸೂರಿಗೆ ಬರ್ತಿದ್ದಂತೆಯೇ, ರಕ್ತ ಪರೀಕ್ಷೆ ಮಾಡಲಾಗಿದ್ದು, ಎಲ್ಲಾ ಆನೆಗಳು ಆರೋಗ್ಯವಾಗಿವೆ. ಆಗಸ್ಟ್​ 10ರಂದು ದಸರಾ ಗಜಪಡೆ ಮೈಸೂರು ಅರಮನೆಗೆ ಎಂಟ್ರಿ ಕೊಡಲಿವೆ. ಇದೇ ಮೂದಲ ಬಾರಿಗೆ ಸಂಜೆ ವೇಳೆ ಗಜಪಡೆಯನ್ನ ಅರಮನೆಗೆ ಸ್ವಾಗತಿಸಲಾಗುತ್ತಿದೆ.

The post ದಸರಾ ಗಜಪಡೆ, ಮಾವುತರಿಗೆ 2.04 ಕೋಟಿ ರೂ. ಮೊತ್ತದ ವಿಮೆ! ಅರಣ್ಯ ಇಲಾಖೆ ಸೌಲಭ್ಯ. appeared first on Good News 24x7.

]]>
ಇಂದು ಮಧ್ಯಾಹ್ನ ಸಲ್ಲುವ ಶುಭ ಲಗ್ನದಲ್ಲಿ ಪೂಜೆ ಸಲ್ಲಿಸಿ ಗಜಪಯಣಕ್ಕೆ ವಿಧ್ಯುಕ್ತ ಚಾಲನೆ. https://www.goodnews24x7.com/gajapayana-to-be-formally-inaugurated-by-offering-puja-at-the-auspicious-ascendant-this-afternoon/ Mon, 04 Aug 2025 05:30:15 +0000 https://www.goodnews24x7.com/?p=5291 ಮೈಸೂರು : – ದಸರಾ ಮಹೋತ್ಸವ ಪ್ರಮುಖ ಆಕರ್ಷಣೆ ಆಂಬಾರಿ ಆನೆ ಅಭಿಮನ್ಯು ನೇತೃತ್ವದಲ್ಲಿ ತಂಡದಲ್ಲಿ 9 ಆನೆಗಳಿಗೆ ಇಂದು ಮಧ್ಯಾಹ್ನ 12.34ರಿಂದ 12.59 ರವರೆಗೆ ಸಲ್ಲುವ ಶುಭ. ತುಲಾ (ಅಭಿಜಿನ್) ಲಗ್ನದಲ್ಲಿ ಪೂಜೆ ಸಲ್ಲಿಸುವ ಮೂಲಕ ಗಜಪಯಣಕ್ಕೆ ವಿಧ್ಯುಕ್ತ ಚಾಲನೆ…

The post ಇಂದು ಮಧ್ಯಾಹ್ನ ಸಲ್ಲುವ ಶುಭ ಲಗ್ನದಲ್ಲಿ ಪೂಜೆ ಸಲ್ಲಿಸಿ ಗಜಪಯಣಕ್ಕೆ ವಿಧ್ಯುಕ್ತ ಚಾಲನೆ. appeared first on Good News 24x7.

]]>

ಮೈಸೂರು : – ದಸರಾ ಮಹೋತ್ಸವ ಪ್ರಮುಖ ಆಕರ್ಷಣೆ ಆಂಬಾರಿ ಆನೆ ಅಭಿಮನ್ಯು ನೇತೃತ್ವದಲ್ಲಿ ತಂಡದಲ್ಲಿ 9 ಆನೆಗಳಿಗೆ ಇಂದು ಮಧ್ಯಾಹ್ನ 12.34ರಿಂದ 12.59 ರವರೆಗೆ ಸಲ್ಲುವ ಶುಭ. ತುಲಾ (ಅಭಿಜಿನ್) ಲಗ್ನದಲ್ಲಿ ಪೂಜೆ ಸಲ್ಲಿಸುವ ಮೂಲಕ ಗಜಪಯಣಕ್ಕೆ ವಿಧ್ಯುಕ್ತ ಚಾಲನೆ ದೊರೆಯಲಿದೆ.
ಪ್ರಸಕ್ತ ಸಾಲಿನ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಈ ಬಾರಿ ಅಂಬಾರಿ ಆನೆ ಅಭಿಮನ್ಯು ನೇತೃತ್ವದಲ್ಲಿ 14 ಆನೆಗಳನ್ನು ಆಯ್ಕೆ ಮಾಡಲು ಅರಣ್ಯ ಇಲಾಖೆ ನಿರ್ಧರಿ, ಸಿದ್ದು, ಈಗಾಗಲೇ ಮೊದಲ ಮತ್ತು ಎರ ಡನೇ ತಂಡದ ಆನೆಗಳ ಪಟ್ಟಿ ಸಿದ್ಧಪಡಿಸಿದೆ. ಜಂಬೂಸವಾರಿಗೂ 55 ದಿನ ಮುನ್ನವೇ ಮೊದಲ ತಂಡದ ಆನೆಗಳಿಗೆ ತಾಲೀಮು ಆರಂಭಿಸಿ, ವಿಶೇಷ ಆರೈಕೆ ಮಾಡಬೇಕಾದ ಹಿನ್ನೆಲೆಯಲ್ಲಿ ಅಂಬಾರಿ ಆನೆ, ಪರ್ಯಾಯ’ ಅಂಬಾರಿ ಆನೆ ಹಾಗೂ ಕುಮ್ಮಿ ಆನೆ ಜವಾಬ್ದಾರಿ ನಿಭಾಯಿಸುವ ಆನೆಗಳನ್ನು ಮೊದಲ ತಂಡದಲ್ಲಿ ಕರೆತರುವ ವಾಡಿಕೆ ಯಿದ್ದು, ಅದರಂತೆ ಇಂದು ಮಧ್ಯಾಹ್ನ ವಿವಿಧ ಕ್ಯಾಂಪ್ಗಳ 9 ಆನೆಗಳು ಸಾಂಸ್ಕೃತಿಕ ನಗರಿ ಮೈಸೂರಿನತ್ತ ಪ್ರಯಾಣ ಬೆಳೆಸಲಿವೆ.

ಗಜಪಯಣ: ಹುಣಸೂರು ತಾಲೂಕಿನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವೀರನಹೊಸಳ್ಳಿ ಗೇಟ್ ಬಳಿ ನಾಳೆ ಮಧ್ಯಾಹ್ನ 9 ಆನೆಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸ ಲಾಗುತ್ತದೆ. ಈಗಾಗಲೇ ವೀರನಹೊಸಳ್ಳಿ ಗೇಟ್ನಲ್ಲಿ ಗಜಪಯಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮತ್ತಿಗೋಡು, ಬಳ್ಳೆ, ದುಬಾರೆ ಕ್ಯಾಂಪ್ಗಳಿಂದ ಮೊದಲ ತಂಡದ 9 ಆನೆಗಳು ಭಾನುವಾರ ಸಂಜೆ ವೇಳೆಗೆ ವೀರನ ಹೊಸಳ್ಳಿ ಗೇಟ್ ಬಳಿ ಸುರಕ್ಷಿತವಾಗಿ ಬಂದಿವೆ.

https://youtu.be/PcQMR0MEW7c?si=5hHOn5m1LJ-lrFhiಟ್ರೇಡಿಂಗ್ ಹೆಸರಲ್ಲಿ ರಾಜಕುಮಾರನನ್ನು ಬಲೆಗೆ ಕೆಡವಿದ ಸುಂದರಿ… ಸುಂದರಿ‌ ನಂಬಿ ಹಣ ಕೊಟ್ಟ ಉದ್ಯಮಿಗಳಿಗೆ ಪಂಗನಾಮ

ಮಧ್ಯಾಹ್ನ 12 ಗಂಟೆಗೆ ಅರ್ಚಕ ಎಸ್.ವಿ. ಪ್ರಹ್ಲಾದರಾವ್ ಅವರು ದ್ವಾರ ಪೂಜೆ ಮಾಡಿ, ಎಲ್ಲಾ ಆನೆಗಳ ಪಾದ ತೊಳೆದು ಅರಿಶಿನ, ಕ್ಯಾಪ್ಟನ್ ಅಭಿಮನ್ಯು ಸೇರಿ ಮೊದಲ ತಂಡದ 9 ಆನೆಗಳು ಮೈಸೂರಿಗೆ ಪಯಣ 7 ಗಂಡಾನೆ, 2 ಹೆಣ್ಣಾನೆ ಆಗಮನ ರಿಂದ 12.59 ರವರೆಗೆ ಸಲ್ಲುವ ಶುಭ ತುಲಾ ಲಗ್ನದಲ್ಲಿ ಪೂಜೆ ಕುಂಕುಮ, ಶ್ರೀಗಂಧ ಹಚ್ಚಿ, ಸೊಂಡಿಲ ಮೇಲೆ ಓಂಕಾರ ಬರೆದ ನಂತರ ಅಡವಿದೇವಿ ಪೂಜೆ, ಚಾಮುಂಡಿಪೂಜೆ, ಗಣಪತಿ ಪೂಜೆ ನೆರವೇರಿಸಲಿದ್ದಾರೆ. ನಂತರ ಮಧ್ಯಾಹ್ನ 12.34ರಿಂದ 12.59ರವರೆಗೆ ಸಲ್ಲುವ ಶುಭತುಲಾ(ಅಭಿಜಿನ್) ಲಗ್ನದಲ್ಲಿ ಜಿಲ್ಲಾ ಉಸ್ತು ವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಆನೆಗಳಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡ ಲಿದ್ದಾರೆ. ಬಳಿಕ ಆನೆಗಳಿಗೆ ಪಂಚಫಲ, ಕಬ್ಬು, ಬೆಲ್ಲ ಸೇರಿದಂತೆ ವಿವಿಧ ತಿನಿಸು ನೀಡಿದ ನಂತರ ದೃಷ್ಟಿ ತೆಗೆಯಲಾಗುತ್ತದೆ. ನಂತರ ವಿವಿಧ ಜಾನಪದ ಕಲಾತಂಡಗಳೊಂದಿಗೆ ಮೊದಲ ತಂಡದ ಆನೆಗಳನ್ನು ವೀರನಹೊಸಳ್ಳಿ ಗೇಟ್ನಿಂದ 1.5 ಕಿ.ಮೀ ದೂರದ ನಾಗಾಪುರ ಹಾಡಿ ಸಮೀಪದ ಮೈದಾನದಲ್ಲಿ ನಡೆಯುವ ವೇದಿಕೆ” ಕಾರ್ಯಕ್ರಮದವರೆಗೂ ಮೆರವಣಿಗೆ ಯಲ್ಲಿ ಕರೆತರಲಾಗುತ್ತದೆ.

ವೇದಿಕೆ ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ಈಶ್ವರ್ ಬಿ.ಖಂಡ್ರೆ ದಸರಾ ಆನೆಗಳ ಪಟ್ಟಿ ಹಾಗೂ ಕಿರು ಹೊತ್ತಿಗೆ ಬಿಡುಗಡೆ ಮಾಡಲಿದ್ದಾರೆ. ಶಾಸಕ ಜಿ.ಡಿ.ಹರೀಶ್ ಗೌಡ ಅಧ್ಯಕ್ಷತೆ ವಹಿಸುವ ಕಾರ್ಯಕ್ರಮ ದಲ್ಲಿ ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ಶಾಸಕ ರಾದ ಜಿ.ಟಿ.ದೇವೇಗೌಡ, ತಸ್ವೀರ್ಸೇರ್, ಡಿ.ರವಿಶಂಕರ್, ಟಿ.ಎಸ್.ಶ್ರೀವತ್ಸ, ಕೆ.ಹರೀಶ್ ಗೌಡ, ದರ್ಶನ್ ದ್ರುವನಾರಾಯಣ್, ಅನಿಲ್ ಚಿಕ್ಕಮಾದು, ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸುನೀಲ್ ಭೋಸ್, ವಿಧಾನ ಪರಿಷತ್ ಸದಸ್ಯರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ವಿವೇಕಾನಂದ ಸೇರಿದಂತೆ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು ಪಾಲ್ಗೊಳ್ಳಲಿದ್ದಾರೆ.

ಐದು ಸಾವಿರ ಜನರಿಗೆ ಊಟ: ನಾಗರಹೊಳೆ ಅಭಯಾರಣ್ಯದ ವೀರನ ಹೊಸಳ್ಳಿ ಗೇಟ್ ಬಳಿ ಚಾಲನೆ ದೊರೆತ ಬಳಿಕ ನಾಗಾಪುರ ಹಾಡಿ ಸಮೀಪ ನಡೆಯುವ ಸಭಾ ಕಾರ್ಯಕ್ರಮ ವೀರನಹೊಸಳ್ಳಿ, ನಾಗಾಪುರ ಹಾಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಆಗಮಿಸುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ 5 ಸಾವಿರ ಜನರಿಗೆ ಊಟ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ವೇದಿಕೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲಿಸ ಲಾಗಿದ್ದು, ವೀರನಹೊಸಳ್ಳಿ ಗೇಟ್ನಿಂದ ಸಭಾ ಕಾರ್ಯಕ್ರಮ ನಡೆಯುವ ಸ್ಥಳದವರೆಗೂ ರಸ್ತೆಯಲ್ಲಿ ತಳಿರು ತೋರಣದಿಂದ ಶೃಂಗರಿಸಲಾಗಿದೆ. ಸಭಾ ಕಾರ್ಯಕ್ರಮದಲ್ಲಿ ಆದಿವಾಸಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಟಿಬೆಟಿಯನ್ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ಕ್ರಮ ಕೈಗೊಳ್ಳಲಾಗಿದೆ.

ಮೊದಲ ತಂಡದ ಆನೆಗಳಿವು ಗಜಪಡೆ ನಾಯಕ ಅಭಿಮನ್ಯು(59) ವಿನೊಂದಿಗೆ ಮತ್ತಿಗೋಡು ಶಿಬಿರದ ಭೀಮ (25), ದುಬಾರೆ ಶಿಬಿರದ ಕಂಜನ್ (24), ಧನಂಜಯ (44) ಮತ್ತು ಪ್ರಶಾಂತ್ (53), ಬಳ್ಳೆ ಶಿಬಿರದ ಮಹೇಂದ್ರ (42), ದೊಡ್ಡಹರವೆ ಶಿಬಿರದ ಏಕಲವ್ಯ (40) ಸೇರಿದಂತೆ 7 ಗಂಡಾನೆ ಹಾಗೂ ದುಬಾರೆ ಶಿಬಿರದ ಕಾವೇರಿ (45) ಹಾಗೂ ಬಳ್ಳೆಯ (ದೊಡ್ಡಹರವೆ) ಲಕ್ಷ್ಮೀ(53) ಹೆಣ್ಣಾನೆಗಳು ಮೊದಲ ತಂಡದಲ್ಲಿ ಮೈಸೂರಿಗೆ ಆಗಮಿಸಲಿವೆ.

The post ಇಂದು ಮಧ್ಯಾಹ್ನ ಸಲ್ಲುವ ಶುಭ ಲಗ್ನದಲ್ಲಿ ಪೂಜೆ ಸಲ್ಲಿಸಿ ಗಜಪಯಣಕ್ಕೆ ವಿಧ್ಯುಕ್ತ ಚಾಲನೆ. appeared first on Good News 24x7.

]]>